kan-7
kan-7
View options
Tags:
Javascript seems to be turned off, or there was a communication error. Turn on Javascript for more display options.
ಅದ್ಯಾಕೆ ಕೆಲವು ಪ್ರತಿಕ್ರಿಯೆ ಕನ್ನಡದಲ್ಲಿ , ಕೆಲವು ಇಂಗ್ಲಿಷ್ ಅಲ್ಲಿ ಬರೀತೀರ ? ಎಲ್ಲಾ ಕನ್ನಡದಲ್ಲೇ ಬರೆಯಿರಿ ? ನೀವು ಇದನ್ನೂ ಮೊಬೈಲ್ ಉಪಯೋಗಿಸಿ ಬರೆದ್ರೋ ಹೇಗೆ ? ; ) ಏನಾದ್ರೂ ತೊಂದರೆ ಇದ್ದರೆ ಸರಿಪಡಿಸಿಕೊಳ್ಳಿ : )
ರಹಮತ್ ತರೀಕೆರೆಯವರು " ಕೆಂಡಸಂಪಿಗೆ " ಯಲ್ಲಿ ಬರೆಯುತ್ತಿರುವ " ನಾಯಿಪುರಾಣ " ಮತ್ತೆ ಹಳೆಯ ನೆನಪುಗಳನ್ನು ಎಬ್ಬಿಸುತ್ತಿದೆ . ಈ ವಾರ ನಾಯಿಪುರಾಣದ ಎರಡನೆಯ ಕಂತು ಪ್ರಕಟವಾಗಿದೆ . ಕೆಲವು ಬರಹಗಳನ್ನು ಓದಿದಾಕ್ಷಣ ಮನಸ್ಸು ಅದೆಂತಹುದೊ ಪ್ರಶಾಂತತೆಗೆ ತಲುಪಿಬಿಡುತ್ತದೆ . ಇಂದೂ ಸಹ ಹಾಗೆಯೆ ಆಯಿತು . ನಾಯಿಪುರಾಣದ ಮೊದಲ ಕಂತು ಪೆಜತ್ತಾಯರ ಪುಸ್ತಕದ ಪ್ರಸ್ತಾಪದೊಂದಿಗೆ ಆರಂಭವಾಗುತ್ತದೆ . ಆ ಪುಸ್ತಕವನ್ನು ರಹಮತ್ " ನನಗೆ ತಿಳಿದಂತೆ ನಾಯಿಯ ಬಗ್ಗೆ ಕನ್ನಡದಲ್ಲಿ ಬಂದಿರುವ ಮೊದಲ ಜೀವನ ಚರಿತ್ರೆ " ಎನ್ನುತ್ತಾರೆ . ಅದರ ಹೆಸರು " ನಮ್ಮ ರಕ್ಷಕ ರಕ್ಷಾ " . ಆ ಪುಸ್ತಕಕ್ಕೆ ಮುನ್ನುಡಿ ಬರೆಯುವ ಅವಕಾಶವನ್ನು ಪೆಜತ್ತಾಯರು ನನಗೆ ಕೊಟ್ಟಿದ್ದರು . ನಾಯಿಪುರಾಣದ ಓದಿನಿಂದಾಗಿ ಮತ್ತೊಮ್ಮೆ ನೆನಪಾದ ' ರಕ್ಷಾ ' ನನ್ನು ನೆನೆಯುತ್ತ ಆ ಮುನ್ನುಡಿಯನ್ನು ಇಲ್ಲಿ ಕೊಡುತ್ತಿದ್ದೇನೆ .
ಉಪಪ್ಲಾವ್ಯಕ್ಕೆ ಹೊರಡಲು ಸ್ವಲ್ಪ ಮುಂಚೆ , ಕೃಷ್ಣನು ಸಾತ್ಯಕಿಯೊಂದಿಗೆ ರಾಧೇಯನನ್ನೂ ರಥದಲ್ಲಿ ಕೂರಿಸಿಕೊಂಡು ನಿರ್ಜನವಾದ ಒಂದು ಏಕಾಂತ ಸ್ಥಳಕ್ಕೆ ಕರೆದೊಯ್ದನು . ಸಾತ್ಯಕಿಯನ್ನು ರಥದಲ್ಲಿಯೇ ಬಿಟ್ಟು , ರಾಧೇಯನ ಕೈ ಹಿಡಿದುಕೊಂಡು ನಡೆಯತೊಡಗಿದನು . ಸಲ್ಪದೂರ ಹೋದಮೇಲೆ ಕೃಷ್ಣನು ` ` ರಾಧೇಯ , ನೀನು ಒಳ್ಳೆಯವನು , ವೇದವೇದಾಂಗಗಳನ್ನೂ ಧರ್ಮ ಸೂಕ್ಷ್ಮಗಳನ್ನೂ ತಿಳಿದವನು . ಆದರೂ ಈ ದುರ್ಯೋಧನನನ್ನು ಬೆಂಬಲಿಸುವ ಪಾಪ ಕಾರ್ಯವನ್ನೇಕೆ ಮಾಡುತ್ತೀಯೆ ? " ಎಂದನು . ರಾಧೇಯನು ನಕ್ಕು ` ` ದೇವ , ನೀನು ಹೇಳುವುದು ಸರಿ . ಧರ್ಮಿಷ್ಠನಾದವನು ಪಾಪಿಯನ್ನು ಬೆಂಬಲಿಸಬಾರದು . ಆದರೆ ದುರ್ಯೋಧನನು ನನ್ನ ಗೆಳೆಯ . ಅವನನ್ನು ನಾನು ಪ್ರೀತಿಸುತ್ತೇನೆ . ನಾನು ಸೂತಪುತ್ರನಾದ್ದರಿಂದ ಲೋಕವು ನನ್ನನ್ನು ತಿರಸ್ಕಾರದಿಂದ ನೋಡುವುದು . ದುರ್ಯೋಧನ ಮಾತ್ರ ಹಾಗೆಂದೂ ಮಾಡುವುದಿಲ್ಲ . ಕೃಷ್ಣ , ನಿನಗೆ ಗೊತ್ತಿದೆಯೋ ಇಲ್ಲವೋ , ನಾನರಿಯೆ . ವರ್ಷಗಳ ಹಿಂದೆ , ಜೀವನವನ್ನರಸಿ ನಾನು ಹಸ್ತಿನಾಪುರಕ್ಕೆ ಬಂದೆ . ದ್ರೋಣನ ಬಳಿಆಗತಾನೇ ಶಿಷ್ಯವೃತ್ತಿ ಮುಗಿಸಿದ ರಾಜಕುಮಾರರುಗಳ ಸ್ಪರ್ಧೆ ನಡೆಯುತ್ತಿತ್ತು . ಈ ದ್ರೋಣನು ನಾನು ಸೂತಪುತ್ರನೆಂದು ನನ್ನನ್ನು ತಿರಸ್ಕರಿಸಿದ್ದರಿಂದ ವಿದ್ಯೆಗಾಗಿ ಭಾರ್ಗವನ ಬಳಿ ಹೋದೆ . ಅವನೂ ಅದೇ ಕಾರಣಕ್ಕೆ ನನ್ನನ್ನು ಶಪಿಸಿದ . ಇರಲಿ . ನಾನು ಸ್ಪರ್ಧೆಯನ್ನು ನೋಡುತ್ತಿದ್ದೆ . ಅರ್ಜುನನ ವೀರಾವೇಶ ನನ್ನನ್ನು ಬಡಿದೆಬ್ಬಿಸಿತು ; ನಾನು ಕಣಕ್ಕಿಳಿದೆ . ಎಲ್ಲರೂ ಸೂತಪುತ್ರನೆಂದು ನನ್ನನ್ನು ತಿರಸ್ಕರಿಸಿದರು . ಸ್ಪರ್ಧೆಗೆ ಸೇರಿಸಲಿಲ್ಲ . ಆಗ ದುರ್ಯೋಧನ ನನ್ನ ನೆರವಿಗೆ ಬಂದ . ಅಂಗರಾಜ್ಯಾಭಿಷೇಕ ಮಾಡಿದ . ನಾವಿಬ್ಬರೂ ಅಂದಿನಿಂದ ಗೆಳೆಯರಾದೆವು . ಇದಾಗಿ ಎಷ್ಟೋ ವರ್ಷಗಳು ಕಳೆದುಹೋಗಿದ್ದರೂ , ನನ್ನ ಹೃದಯದಲ್ಲಿನ ಸ್ನೇಹ ಮಾಸಿಲ್ಲ . ನನ್ನನ್ನು ಪ್ರೀತಿಸಿದವರು ಇಬ್ಬರೇ : ನನ್ನ ತಾಯಿ ರಾಧೆ ಮತ್ತು ಈ ದುರ್ಯೋಧನ . ಇವರಿಬ್ಬರಿಗಾಗಿ ಮಾತ್ರವೇ ನನ್ನ ಬಾಳು " ಎಂದನು . ಕೃಷ್ಣನು ನಕ್ಕು ಸ್ವಲ್ಪ ಹೊತ್ತು ಸುಮ್ಮನಿದ್ದನು . ಏನನ್ನೋ ಯೋಚಿಸಿಕೊಂಡ ಅವನ ಕಣ್ಣುಗಳು ಒದ್ದೆಯಾದವು . ರಾಧೇಯನನ್ನು ಪ್ರೀತಿ ಕರುಣೆಗಳಿಂದ ನೋಡುತ್ತ , ` ` ರಾಧೇಯ , ನಿನ್ನ ತಾಯಿ ಉತ್ತಮಕುಲದ ಕ್ಷತ್ರಿಯಕನ್ಯೆ . ರಾಜಕುಮಾರಿಯಾಗಿದ್ದ ಅವಳು ಲೋಕಾಪವಾದಕ್ಕೆ ಹೆದರಿ ನೀನು ಹುಟ್ಟಿದೊಡನೆ ನಿನ್ನನ್ನು ತ್ಯಜಿಸಬೇಕಾಯಿತು . ಈಗ ಅವಳಿಗೆ ಅನೇಕ ಮಕ್ಕಳಿದ್ದರೂ ಅವಳ ಹೃದಯ ಬರಿದೋ ಬರಿದು . ಅವಳಿಗೆ ಕವಚಕುಂಡಲಗಳೊಡನೆ ಹುಟ್ಟಿದ್ದ ನಿನ್ನದೇ ಚಿಂತೆ ! " ಎನ್ನಲು ರಾಧೇಯನಿಗೆ ಅಚ್ಚರಿ . ` ` ಎಂದರೆ ನಾನು ಸೂತಪುತ್ರನಲ್ಲ ! ನಾನು ಕ್ಷತ್ರಿಯ ! ಇದು ನಿಜವೆ ! ಕೃಷ್ಣಾ , ನಿನಗೆ ನನ್ನ ತಾಯಿ ಗೊತ್ತಿರುವಳೆ ? ಅವಳಿನ್ನೂ ಬದುಕಿರುವಳೆ ? ನಾನು ಅವಳನ್ನು ನೋಡಬಹುದೆ ? ಹೇಳು ಕೃಷ್ಣಾ , ಎಲ್ಲವನ್ನೂ ಹೇಳಿಬಿಡು . ಕೇಳಲು ನಾನು ಕಾತರನಾಗಿರುವೆ " ಎಂದನು . ಭಾವೋದ್ವೇಗದಿಂದ ಅವನೆದೆ ಕಂಪಿಸುತ್ತಿತ್ತು . ಕೃಷ್ಣನು ರಾಧೇಯನನ್ನು ಕೈ ಹಿಡಿದು ಕೂರಿಸಿ ` ` ರಾಧೇಯ , ಸತ್ಯವನ್ನು ಕೇಳಲು ಸಿದ್ಧನಾಗು . ನೀನು ಕುಂತಿಯ ಮಗ ; ಪಾಂಡವರ ಹಿರಿಯಣ್ಣ . ಪಾಂಡುವಿನೊಡನೆ ಕುಂತಿ ಮದುವೆಯಾಗುವ ಮೊದಲೇ ಹುಟ್ಟಿದವನು ! " ಎನ್ನಲು ರಾಧೇಯನಿಗೆ ಉಸಿರು ಕಟ್ಟಿದಂತಾಯಿತು . ` ` ಹಾಗಾದರೆ ನನ್ನ ತಂದೆ ! ಅವನಾರು ? " ಅದನ್ನೂ ಹೇಳಿಬಿಡು " ಎಂದನು . ಕೃಷ್ಣನು ನಕ್ಕು , ` ` ಇಷ್ಟದೇವತೆಯಾಗಿ ಸ್ವೀಕರಿಸಿ ನೀನು ನಿತ್ಯವೂ ಪೂಜಿಸುವೆಯಲ್ಲ , ಆ ಸೂರ್ಯದೇನೇ ನಿನ್ನ ತಂದೆ " ಎಂದನು . ರಾಧೇಯನಿಗೆ ಬವಳಿ ಬರುವಂತಾಯಿತು . ಸ್ವಲ್ಪಹೊತ್ತಿನಲ್ಲಿ ಚೇತರಿಸಿಕೊಂಡು , ` ` ಹಾಗಿದ್ದರೆ ನನ್ನಷ್ಟು ದುರದೃಷ್ಟವಂತ ಈ ಪ್ರಪಂಚದಲ್ಲಿ ಇನ್ನಾರು ಇಲ್ಲ . ಸೂರ್ಯ ನನ್ನ ತಂದೆ , ಕುಂತಿ ನನ್ನ ತಾಯಿ , ಮಹಾವೀರರಾದ ಪಾಂಡವರು ನನ್ನ ತಮ್ಮಂದಿರು ; ಆದರೂ ಇಷ್ಟು ವರ್ಷ ಸೂತಪುತ್ರನೆಂದು ಲೋಕದಲ್ಲಿ ತಿರಸ್ಕರಿಸಲ್ಪಟ್ಟೆ . ಭಾರ್ಗವನಿಗೆ ದಿವ್ಯದೃಷ್ಟಿಯಿಂದ ಗೊತ್ತಾಗಿರಬೇಕು ; ಅದಕ್ಕೇ ನನ್ನನ್ನು ಅವನು ಶಪಿಸಿದ . ಅಯ್ಯೋ ದೇವರೆ , ಪಾಂಡವರು ನನ್ನ ಸೋದರರೆಂಬುದನ್ನು ಹೇಗೆತಾನೆ ನಾನು ನಂಬಲಿ ! " ಎನ್ನುತ್ತ ಅಳತೊಡಗಿದನು . ಅವನನ್ನು ಕೃಷ್ಣನೂ ಸಮಾಧಾನಪಡಿಸಲಾಗದೆ ಸುಮ್ಮನೆ ಕುಳಿತನು . ಸ್ವಲ್ಪಹೊತ್ತು ಕಳೆಯಿತು . ಇದ್ದಕ್ಕಿದಂತೆ ರಾಧೇಯನು ಕಣ್ಣೊರೆಸಿಕೊಂಡು , ` ` ಕೃಷ್ಣ , ಈ ವಿಚಾರ ನಿನಗೆ ಮೊದಲಿನಿಂದಲೂ ಗೊತ್ತಿತ್ತಲ್ಲವೆ ? ಆದರೂ ನನಗೇಕೆ ಹೇಳಲಿಲ್ಲ ? ಈಗೇಕೆ ಹೇಳುತ್ತಿದ್ದೀ ? ಇಲ್ಲಿಯವರೆಗೆ ನಾನು ಅಜ್ಞಾನದ ಆನಂದದಲ್ಲಿದ್ದೆ . ಪಾಂಡವರ ದ್ವೇಷದ ಉನ್ಮಾದದಲ್ಲಿದ್ದೆ . ಈಗ ನೀನು ಬಂದು ನನ್ನ ಮನಸ್ಸಿನ ಸ್ವಾಸ್ಥ್ಯವನ್ನು ಕೆಡಿಸಿದೆಯಲ್ಲ ಏಕೆ ? ಹೇಳು , ಏಕೆ ? " ಎಂದನು . ಕೃಷ್ಣನ ಕಣ್ಣುಗಳು ಸಹಾನುಭೂತಿಯಿಂದ ತುಂಬಿಬಂದವು . ` ` ರಾಧೇಯ , ನಿನ್ನನ್ನು ಸಾವಿನಿಂದ ತಪ್ಪಿಸಬೇಕೆಂದು ನಾನು ಬಯಸಿದೆ . ನೀನು ಬದುಕಬೇಕು . ನೀನು ಧರ್ಮವನ್ನು ತಿಳಿದವನು . ಕನ್ಯೆಯಾಗಿದ್ದಾಗ ಹುಟ್ಟಿದ ಮಗನು , ಅವಳು ಮದುವೆಯಾದ ಗಂಡನ ಮಗನೇ ಆಗುವನಲ್ಲವೇ ? ಆದ್ದರಿಂದ ನೀನು ಪಾಂಡವರಲ್ಲಿ ಹಿರಿಯವನು . ತಂದೆಯ ಕಡೆಯಿಂದ ಪಾಂಡವನಾದಂತೆಯೆ ತಾಯಿಯ ಕಡೆಯಿಂದ ನೀನು ವೃಷ್ಣಿ , ನನ್ನ ಸಂಬಂಧಿ . ಈಗ ನನ್ನ ಜೊತೆಗೆ ಬಾ . ನಾನು ಯುಧಿಷ್ಠಿರನ ಬಳಿಗೆ ಹೋಗುತ್ತಿದ್ದೇನೆ . ನಿನ್ನ ಸೋದರರು ಭಕ್ತಿಯಿಂದ ನಿನ್ನ ಕಾಲಿಗೆರಗುತ್ತಾರೆ . ಅವರ ಕಡೆಯ ರಾಜರೆಲ್ಲ ಜ್ಯೇಷ್ಠಪಾಂಡವನೆಂದು ಸನ್ಮಾನಿಸುತ್ತಾರೆ . ನೀನು ರಾಜನಾಗುತ್ತಿ ; ಯುಧಿಷ್ಠಿರನು ಯುವರಾಜನಾಗುತ್ತಾನೆ . ದ್ರೌಪದಿಯು ನಿನ್ನವಳಾಗುತ್ತಾಳೆ . ರಾಧೇಯ , ಋಜುತ್ವದಲ್ಲಿ ನೀನು ಯುಧಿಷ್ಠಿರನಂತೆ ; ಪ್ರೀತಿಸುವ ಹೃದಯದಲ್ಲಿ ಭೀಮನಂತೆ ; ಧನುರ್ವಿದ್ಯೆಯಲ್ಲಿ ಅರ್ಜುನನಂತೆ ; ಯುದ್ಧಕುಶಲತೆಯ ಸೌಂದರ್ಯದಲ್ಲಿ ನಕುಲನಂತೆ ; ವಿವೇಕದಲ್ಲಿ ಸಹದೇವನಂತೆ . ಇಷ್ಟು ದಿನ ನೀನು ಮೂಲೆಗುಂಪಾಗಿದ್ದುದು ಸಾಕು . ನಿನ್ನ ಕಷ್ಟದ ದಿನಗಳು ಕಳೆದುವು . ನನ್ನ ಜೊತೆಗೆ ಬಾ , ರಾಧೇಯ . ನೀನು ಚಕ್ರವರ್ತಿಯಾಗುತ್ತಿ . ಐದು ಜನ ಸೋದರರೂ , ನಿನ್ನ ತಾಯಿಯೂ ನಿನ್ನವರಾಗುತ್ತಾರೆ ; ಬಾ ! " ಎಂದನು . ರಾಧೇಯನು ಒಂದೇ ಸಮನೆ ಕೃಷ್ಣನನ್ನು ನೋಡಿದನು . ` ` ನನ್ನ ಮೇಲಿನ ಪ್ರೀತಿಯಿಂದ ಇದನ್ನೆಲ್ಲವನ್ನೂ ಹೇಳಿದೆಯಲ್ಲವೆ ? ಹೌದು , ಧರ್ಮದ ಪ್ರಕಾರವೇ ನಾನು ಪಾಂಡವ ; ಕುಂತಿಯು ನನ್ನನ್ನು ಹೆತ್ತವಳು . ಅದು ನಿಜ . ಆದರೆ ಅವಳು ನನ್ನನ್ನು ಇಷ್ಟಪಡದೆ ಎಸೆದುಬಿಟ್ಟಳ್ಳಲ್ಲ ! ಗಂಗೆಯಲ್ಲಿ ತೇಲುತ್ತಿ ನನ್ನನ್ನು ಅಧಿರಥ ನೋಡಿ ತನ್ನ ಹೆಂಡತಿ ರಾಧೆಗೆ ತಂದುಕೊಟ್ಟ . ಅವಳು ನನ್ನನ್ನು ಪ್ರೀತಿಯಿಂದ ಮಡಿಲಿಗೆ ತುಂಬಿಕೊಂಡಳು . ಅವಳ ಸ್ತನಗಳಿಂದ ನನ್ನನ್ನು ಕಂಡೊಡನೆ ಹಾಲು ಚಿಲ್ಲನೆ ಚಿಮ್ಮಿತು . ಆ ಕ್ಷಣವೇ ಅವಳು ನನಗೆ ತಾಯಿಯಾದಳು . ಅವಳೇ ನನ್ನ ತಾಯಿಯೇ ಹೊರತು ಕುಂತಿಯಲ್ಲ . ತಂದೆಯಲ್ಲದಿದ್ದರೂ ತಂದೆಯ ಪ್ರೀತಿಯನ್ನು ಧಾರೆಯೆರೆದ ಅಧಿರಥನೇ ನನ್ನ ತಂದೆ . ಅವರಿಬ್ಬರೊಡನೆ ನನ್ನ ಹೃದಯವು ಬೆಸೆದುಕೊಂಡಿದೆ . ಆ ಬಾಂಧವ್ಯವನ್ನು ನಾನು ಹರಿದೊಗೆಯಲಾರೆ . ಈ ಲೋಕದ ಯಾವ ಸಿರಿಸಂತೋಷಗಳಾಗಲಿ ಯಾವ ಭಯವಾಗಲಿ ನನ್ನನ್ನು ಸತ್ಯಪಥದಿಂದ ತಪ್ಪಿಸಲಾರವು . ನನಗೆ ನಾನೇ ದ್ರೋಹಿಯಾಗಲಾರೆ ; ದುರ್ಯೋಧನನ ನಿಷ್ಕಳಂಕ ಸ್ನೇಹಕ್ಕೂ ದ್ರೋಹ ಮಾಡಲಾರೆ . ಇದುವರೆಗೆ ನಡೆದುಬಂದ ನನ್ನ ಜೀವನ ಚಕ್ರವನ್ನು ರಾಜ್ಯಲೋಭಕ್ಕಾಗಿ ಬದಲಿಸಲಾರೆ . ಯುದ್ಧದಲ್ಲಿ ಅರ್ಜುನನನ್ನು ಕೊಲ್ಲುವೆನೆಂಬ ಪ್ರತಿಜ್ಞೆ ಮಾಡಿದ್ದೇನೆ ; ಅದನ್ನು ಮುರಿಯಲಾರೆ . ಕೃಷ್ಣ , ನೀನು ನನ್ನನ್ನು ಹೆಸರಿನ , ಕೀರ್ತಿಯ , ಪಾಂಡವರ ಪ್ರೀತಿಯ ಆಸೆ ತೋರಿಸಿ ಕದಲಿಸಲಾರೆ . ನಾನೀಗ ನಿನ್ನ ಜೊತೆಗೆ ಬಂದರೆ ನನ್ನ ಈವರೆಗಿನ ಕೀರ್ತಿಯ ಪಾಡೇನು ? ನಿನ್ನ ರಕ್ಷಣೆ ಇರುವ ಪಾಂಡವರಿಗೆ ಸೋಲಿಲ್ಲ , ನನಗೆ ಗೊತ್ತು . ದುರ್ಯೋಧನನ ಜೊತೆಗಿದ್ದು ಸಾಯುವುದೇ ನನಗೆ ಶೋಭೆ . ಕೃಷ್ಣ , ನಾನು ಮೊದಲಿನಿಂದಲೂ ವಿಧಿಯ ಕೈಗೊಂಬೆ . ಅರ್ಜುನನೊಡನೆ ಯುದ್ಧವೆಂಬ ಮಹದಾಸೆ ಇಟ್ಟುಕೊಂಡಿದ್ದೆ . ನೀನು ನಿನ್ನ ಅರ್ಜುನನ ಮೇಲಿನ ಪ್ರೀತಿಯಿಂದ ಇದನ್ನೆಲ್ಲಾ ಹೇಳಿ ನನ್ನ ಮನಸ್ಸನ್ನೇ ಮುರಿದೆ . ತಮ್ಮನೆಂದು ತಿಳಿದೂ ತಿಳಿದೂ ಹೇಗೆ ಅವನೊಡನೆ ನಾನು ಹೋರಾಡಲಿ ? ಆದರೆ ನಾನು ಸ್ನೇಹಿತನನ್ನು ಬಿಟ್ಟುಕೊಡುವುದಿಲ್ಲ ; ಯುದ್ಧಮಾಡಿಯೇ ಮಾಡುತ್ತೇನೆ . ನಿನಗೆ ನನ್ನ ಮೇಲೆ ನಿಜವಾಗಿಯೂ ಪ್ರೀತಿಯಿದ್ದರೆ , ಒಂದು ಉಪಕಾರ ಮಾಡುತ್ತೀಯ ? ನನ್ನ ಕೋರಿಕೆಯನ್ನು ನಡೆಸಿಕೊಡುತ್ತೀಯಾ ? " ಎಂದನು . ದೃಷ್ಟಿಯನ್ನು ತಗ್ಗಿಸಿ ಕೇಳುತ್ತಿದ್ದ ಕೃಷ್ಣನು ಅದೇನು ಎನ್ನುವಂತೆ ತಲೆಯೆತ್ತಿದನು . ರಾಧೇಯನು ಅವನ ಬಲಗೈಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು , ` ` ನಾನು ಸಾಯುವವರೆಗೆ ಇದನ್ನು ರಹಸ್ಯವಾಗಿಡುತ್ತೇನೆಂದು ನನಗೆ ಮಾತುಕೊಡು . ಮೃದು ಹೃದಯನೂ ಋಜುಬುದ್ಧಿಯವನೂ ಆದ ಯುಧಿಷ್ಠಿರನು ನಾನು ಅವನ ಅಣ್ಣನೆಂಬುದನ್ನು ತಿಳಿದರೆ , ಯುದ್ಧದಲ್ಲಿ ಗೆದ್ದರೂ ಸಹ ರಾಜನಾಗಲು ಒಪ್ಪಲಾರ . ಸಜ್ಜನನಾದ ಅವನು ಚಕ್ರವರ್ತಿಯಾಗಬೇಕು . ಅವನಿಗೆ ಜೀವನದುದ್ದಕ್ಕೂ ಮುನ್ನಡೆಸುವುದಕ್ಕೆ ನೀನಿದ್ದೀಯೆ ; ಯುದ್ಧಮಾಡುವುದಕ್ಕೆ ಅರ್ಜುನನಿದ್ದಾನೆ ; ಸೇನಾಪತಿ ಭೀಮನಿದ್ದಾನೆ ; ನಕುಲಸಹದೇವರಿದ್ದಾರೆ ; ಅವನು ಗೆದ್ದೇ ಗೆಲ್ಲುತ್ತಾನೆ . ` ` ನಮ್ಮ ಸೋಲು ಖಂಡಿತ , ಆದರೆ , ಕೃಷ್ಣ , ಅಯಶಸ್ವೀ ಬದುಕಿಗೂ ಏಕಮುಖ ಪ್ರೇಮದ ಹಾಗೆ , ಅದರದ್ದೇ ಆದ ಕಾಮನಬಿಲ್ಲು ಇರುತ್ತದೆ . ಬದುಕಿನ ಇಂದ್ರಚಾಪಕ್ಕೆ ಮುಳುಗುವ ಸೂರ್ಯನ ಕಿರಣಗಳನ್ನು ಚದುರಿಸುವ ಕಣ್ಣೀರ ಬಿಂದುಗಳೇ ಬೇಕು . ನನ್ನದು ಅಂತಹುದೇ ಬದುಕು . ನನ್ನ ಕೊನೆಯ ದಿನಗಳನ್ನಾದರೂ ಈ ಕಾಮನಬಿಲ್ಲು ಬೇಳಗಿ ಸಾವಿನ ಹಾದಿಯನ್ನು ಸುಗಮಗೊಳಿಸಲಿ ಎಂದು ನನ್ನ ಆಸೆ . ಕೃಷ್ಣ , ಈಗ ನೀನು ಈ ಹೊಸ ಸಂಬಂಧಗಳನ್ನು ತಿಳಿಸಿ ನನ್ನ ಮನಸ್ಸಿನ ಮೇಲೆ ಮೋಡ ಮುಸುಕುವಂತೆ ಮಾಡುತ್ತಿರುವೆ . ಆದರೆ ನನ್ನ ದಾರಿ ನಿಚ್ಚಳವಾಗಿದೆ . ಕೃಷ್ಣ , ಬಹುಶಃ ನಾವು ಗೆಳೆಯರಂತೆ ಭೇಟಿಯಾಗುತ್ತಿರುವುದು ಇದೇ ಕೊನೆಯ ಬಾರಿ . ಯುದ್ಧಭೂಮಿಯಲ್ಲಿ ನಾವು ಭೇಟಿಯಾಗಬಹುದು . ಅದರಲ್ಲಿ ನಾನು ಸಾಯುವುದು ಖಂಡಿತ . ಅಂತೆಯೇ ಪಾಂಡವರು ಗೆಲ್ಲುವುದೂ ಖಂಡಿತ " ಎಂದನು . ಕೃಷ್ಣನು , ` ` ಅಷ್ಟು ಖಚಿತವಾಗಿ ಹೇಗೆ ಹೇಳುತ್ತೀ ? " ಎನ್ನಲು ರಾಧೇಯನ್ನು , ` ` ನನಗೆ ಗೊತ್ತು . ಕುರುಕ್ಷೇತ್ರದಲ್ಲಿ ನಡೆಯುವ ಯುದ್ಧ ಒಂದು ಯಜ್ಞ . ನೀನು ಅದರ ಅಧ್ವರ್ಯ ; ಅರ್ಜುನನೇ ಕರ್ತೃ . ಉಳಿದ ಪಾಂಡವರು ನಿನ್ನ ಕೈಗೊಂಬೆಗಳು . ಇದರ ಕೊನೆಯು ನನಗೆ ಸ್ಪಷ್ಟವಾಗಿದೆ . ಭೀಷ್ಮ , ದ್ರೋಣ , ನಾನು , ಧಾರ್ತರಾಷ್ಟ್ರರು , ಇನ್ನುಳಿದ ಸಮಸ್ತ ರಾಜರುಗಳು ಎಲ್ಲರೂ ರಣರಂಗದಲ್ಲಿ ಸತ್ತು ವೀರಸ್ವರ್ಗವನ್ನು ಪಡೆಯುವೆವು . ಅರ್ಜುನನಿಂದ ನೀನು ನನ್ನನ್ನು ಕೊಲ್ಲಿಸಿದಾಗ ಈ ಯಜ್ಞ ಕೊನೆಯ ಹಂತಕ್ಕೆ ಬರುವುದು . ಭೀಮನು ದುರ್ಯೋಧನನ ತೊಡೆ ಮುರಿದಾಗ ಅದು ಕೊನೆಗೊಳ್ಳುವುದು . ಎಲ್ಲವೂ ನನ್ನ ಮನಸ್ಸಿನ ಪರದೆಯ ಮೇಲೆ ನಿಚ್ಚಳವಾಗಿ ಕಾಣುತ್ತಿದೆ . ಅದಕ್ಕಾಗಿಯೇ ಕಾಯುತ್ತಿದ್ದೇನೆ . ಕೃಷ್ಣ , ಈ ಜೀವನ ನನಗೆ ಸಾಕಾಗಿ ಹೋಗಿದೆ . ನಾವಿನ್ನು ಸ್ವರ್ಗದಲ್ಲಿ ಭೇಟಿಯಾಗೋಣ . ಅಲ್ಲಿ ನಾನು ನನ್ನ ತಂದೆತಾಯಿಗಳನ್ನೂ ಸೋದರರನ್ನೂ ಕಾಣುವೆನು . ಈಗ ಇನ್ನು ಹೊರಡೋಣ " ಎಂದನು . ಕೃಷ್ಣನು ರಾಧೇಯನನ್ನು ಬಿಗಿದಪ್ಪಿದನು . ಪ್ರೀತಿಯಿಂದ ಕೈ ಹಿಸುಕಿದನು . ರಾಧೇಯನು ಕಣ್ಣೊರೆಸಿಕೊಂಡು ನೋವಿನ ನಗುವನ್ನು ಬಲಾತ್ಕಾರವಾಗಿ ನಕ್ಕನು . ಇಬ್ಬರೂ ರಥವನ್ನೇರಿದರು .
ಚಲನೆಯ ಭ್ರಮೆಯನ್ನು ಉಂಟುಮಾಡಲು ಪ್ರತಿಯೊಂದೂ ಚಿತ್ರ ಬರಹವು ತನ್ನ ಹಿಂದಿನ ಫ್ರೇಮ್‌ಗಿಂತ ಸ್ವಲ್ಪ ಭಿನ್ನವಾಗಿರುತ್ತವೆ . ಅನಿಮೇಟರ್‌ಗಳು ಬಿಡಿಸಿದ ಚಿತ್ರಗಳನ್ನು ಸೆಲ್ ಎಂದು ಕರೆಯುವ ಪಾರದರ್ಶಕ ಅಸಿಟೇಟ್ ಹಾಳೆಗಳ ಮೇಲೆ ನೆರಳಚ್ಚು ( ಝರಾಕ್ಸ್ ) ಪ್ರತಿ ತೆಗೆಯಲಾಗುತ್ತದೆ . ನಂತರ ಚಿತ್ರಿಸಲಾದ ರೇಖೆಗಳ ಒಳಗೆ ಈಗಾಗಲೇ ನಿರ್ಧರಿಸಿರುವ ಬಣ್ಣ ಅಥವಾ ಧ್ವನಿ ತುಂಬಲಾಗುತ್ತದೆ .
ಇದೇ ನಮ್ಮ ದೇಶದ ದೊಡ್ಡ ದುರ೦ತ ಎ೦ದು ನಿಮಗೇಕೆ ಅನ್ನಿಸುವುದಿಲ್ಲ . . .
ಶುಂಠಿ , ಏಲಕ್ಕಿ , ಕಾಳುಮೆಣಸು ಕೃಷಿ ವ್ಯಾಪಕವಾಗಿರುವ ಸಕಲೇಶಪುರ , ಚಿಕ್ಕಮಗಳೂರು ತೋಟಗಳಲ್ಲಿ ಎಂಡೋಸಲ್ಫಾನ್‌ನಂತಹ ಕೀಟನಾಶಕಗಳು ವ್ಯಾಪಕವಾಗಿ ಬಳಕೆಯಾಗುತ್ತಿವೆ . ' ಗುತ್ತಿಗೆ ಕೃಷಿ ' ಕೃಷಿ ಕರ್ನಾಟಕಕ್ಕೆ ಕಾಲಿಟ್ಟ ಮೇಲೆ ಭತ್ತದ ಗದ್ದೆಗಳೆಲ್ಲ ' ವಿಷದ ತೊಟ್ಟಿಲು ' - ' ವಿಷಕನ್ಯೆ ' ಎನ್ನಲು ಅಡ್ಡಿಯಿಲ್ಲ . ಏಕೆಂದರೆ , ಅಲ್ಲೆಗ ಏನು ಬೆಳೆಯಬೇಕಾದರೂ ' ವಿಷ ' ದ ನೆರವು
ತೊಂದರೆ ಕಾಣುತ್ತಿಲ್ಲ ಡಾಕ್ಟರರಿಗೆ ಅವರ ದೊಡ್ಡ ದೊಡ್ಡ ಯಂತ್ರಗಳಿಗೆ ನೂರಾರು ಸಾವಿರದ ಟೇಸ್ಟುಗಳಿಗೆ , ಮತ ಎಣಿಕೆಯ ಹಾಗೆ ಎನಿಸಿದ್ದು ಆಯಿತು , ಅವನ ಗಂಡುಸುತನದ ಗುರುತುಗಳನ್ನು , ಸುಳಿವೇ ಇಲ್ಲ
ರಾಜಕೀಯ ಅಂದ್ರೇನೇ ರಾಡಿ ಅಂತ ಎಷ್ಟೇ ಸಮಾಧಾವ ಪಟ್ಕೊಂಡ್ರೂ ತೀರಾ ಇಷ್ಟು ಕೊಳೆತು ನಾರುವುದನ್ನ ಸಹಿಸೋದು ಅಂದ್ರೆ ಒಂಥರಾ ಕಸಿವಿಸಿ ಅಲ್ವಾ . . . ದೇವೇಗೌಡರು ಒಂಥರಾ ರಾಜಕೀಯಕ್ಕೆ ನಾಂದಿ ಹಾಡಿದರೆ ಈ ಬಿಜೆಪಿಯವರದು ಅವರನ್ನೂ ಮೀರಿದ ತಂತ್ರ ಅಂತ ಅನ್ಸುತ್ತೆ . ಪ್ರಜಾಪ್ರಭುತ್ವದ ರಕ್ಷಣೆಯ ಹೆಸರಿನಲ್ಲಿ ಏನೇನೆಲ್ಲಾ ಕಾನೂನು ಮಾಡಿದರೂ ಅದರ ಅಡಿಯಲ್ಲಿ ನುಸುಳುವ ಮಾರ್ಗವನ್ನು ರಾಜಕಾರಣಿಗಳು ಕಂಡುಕೊಳ್ಳುತ್ತಾರೆ ಎಂಬುದಕ್ಕೆ ನಮ್ಮ ರಾಜ್ಯದ ಬಿಜೆಪಿ ಮಾದರಿಯಾಗಿದೆ . ಪಕ್ಷಾಂತರಕ್ಕೆ ಹೊಚ್ಚ ಹೊಸತೊಂದು ಭಾಷ್ಯ ಬರೆದಿದೆ . ಇದರ ಪರಿಣಾಮ ಮುಂದಿನ ದಿನಗಳಲ್ಲಿ ಯಾವ ಯಾವ ಕುರೂಪ ಪಡೆದುಕೊಳ್ಳಬಹುದು . . . ಪ್ರಜಾಪ್ರಭುತ್ವದ ಮೂಲ ತಳಪಾಯಕ್ಕೇ ಸಿಡಿಮದ್ದಿಟ್ಟು ಉಡಾಯಿಸಬಹುದು ಎಂಬುದನ್ನ ನೆನೆಸಿಕೊಂಡರೆ ಹೃದಯ ಕಂಪಿಸುತ್ತದೆ ಅಲ್ವಾ . .
' ಕಾ ಯಕ ಸಂಸ್ಕೃತಿಯ ಉಳಿವು ಈ ಪುಸ್ತಕದ ಪ್ರಧಾನ ಆಶಯವಾಗಿದೆ . ಆದರೆ ದುಡಿಯುವ ವರ್ಗಗಳಿಗೆ ಅನುಮಾನಗಳಿವೆ ; ಜಾತಿ ಪದ್ಧತಿ , ಪಾಳೆಯಗಾರಿ ಪದ್ಧತಿ ಹಾಗೂ ಒಟ್ಟಾರೆಯಾಗಿ ಗ್ರಾಮ ಜೀವನದ ಬಗ್ಗೆಯೇ ಬಡವರಿಗೆ ಅನುಮಾನಗಳಿವೆ . ಯಂತ್ರ ನಾಗರಿಕತೆ ಹಾಗೂ ನಗರ ಸಂಸ್ಕೃತಿಯು ನಮ್ಮೆಲ್ಲ ಪರಂಪರೆಗಳಿಗಿಂತಲೂ ಹೆಚ್ಚು ಪ್ರಜಾಸತ್ತಾತ್ಮಕವಾದುದೆಂದು ಬಡವರು ನಂಬುತ್ತಾರೆ . ಈ ಪುಸ್ತಕವು ಬಡವರ ಆತಂಕವನ್ನು ಒಪ್ಪುತ್ತದೆ . ಯಂತ್ರ ನಾಗರಿಕತೆಯು ಒಳತಂದ ವೈಚಾರಿಕ ಕ್ರಾಂತಿಯನ್ನು ತಿರಸ್ಕರಿಸದೆ , ತಂತ್ರಜ್ಞಾನದ ಕಸ ಹಾಗೂ ಅನೈತಿಕತೆಗಳನ್ನು ತಿರಸ್ಕರಿಸಬಯಸುತ್ತದೆ . . . ಯಂತ್ರ ನಾಗರಿಕತೆಯನ್ನು ಸರಕು ಸಂಸ್ಕೃತಿ , ಕೊಳ್ಳುಬಾಕ ಸಂಸ್ಕೃತಿ , ಆಧುನಿಕ ಸಂಸ್ಕೃತಿ , ಪಾಶ್ಚಿಮಾತ್ಯ ಸಂಸ್ಕೃತಿ ಇತ್ಯಾದಿ ಹೆಸರುಗಳಿಂದಲೂ ಕರೆಯುತ್ತೇವೆ . ನಾನು ಈ ಪುಸ್ತಕದಲ್ಲಿ ಯಂತ್ರ ನಾಗರಿಕತೆ ಎಂಬ ಹೆಸರನ್ನೇ ಪ್ರಧಾನವಾಗಿ ಬಳಸಲು ಇಷ್ಟಪಡುತ್ತೇನೆ . ಕಾರಣವಿಷ್ಟೆ : ಮೇಲೆ ಪಟ್ಟಿ ಮಾಡಿದ ಇತರ ಹೆಸರುಗಳು , ಯಂತ್ರ ನಾಗರಿಕತೆಯ ಯಾವುದೋ ಒಂದು ಆಯಾಮದತ್ತ ಬೊಟ್ಟು ಮಾಡಿ ತೋರಿಸುತ್ತವೆ . ಉದಾಹರಣೆಗೆ ಪಾಶ್ಚಿಮಾತ್ಯ ಸಂಸ್ಕೃತಿ ಎಂಬುದು ಯಂತ್ರ ನಾಗರಿಕತೆ ಪಶ್ಚಿಮದ ದೇಶಗಳಲ್ಲಿ ಹುಟ್ಟಿತು ಎಂಬ ಸಂಗತಿಯತ್ತ ಮಾತ್ರ ಬೊಟ್ಟು ಮಾಡುತ್ತದೆ . ಆದರೆ ಯಂತ್ರ ನಾಗರಿಕತೆ ಎಂಬ ಹೆಸರು ಸಮಗ್ರವಾದ ಪರಿಕಲ್ಪನೆಯನ್ನು ನೀಡುತ್ತದೆ ಎಂದು ನನ್ನ ನಂಬಿಕೆ . ' ' ದೇಸಿ ಜೀವನ ಪದ್ಧತಿ ' ಪುಸ್ತಕದ ಮೂಲಕ ಬರವಣಿಗೆಯ ಜಾಡಿಗೆ ಬಂದ ರಂಗಕರ್ಮಿ ಪ್ರಸನ್ನ , ' ನಟನೆಯ ಪಾಠಗಳು ' ಮೂಲಕವೂ ಗಮನ ಸೆಳೆದರು . ಆದರೆ ನಂತರದ ಕಾದಂಬರಿ ' ಬಾಲಗೋಪಾಲ ' ಯಾಕೋ ಓದುಗರನ್ನು ಆಕರ್ಷಿಸಲೇ ಇಲ್ಲ . ' ಚರಕ - ದೇಸಿ ' ಗಳ ರೂವಾರಿಯಾದ ಇವರ ಹೊಸ ಪುಸ್ತಕ ' ಯಂತ್ರಗಳನ್ನು ಕಳಚೋಣ ಬನ್ನಿ ' . ಕಳೆದೆರಡು ದಶಕಗಳ ಯಂತ್ರ ನಾಗರಿಕತೆಯ ಸಾಂಸ್ಕೃತಿಕ ಆಯಾಮವನ್ನು ವಿಶ್ಲೇಷಿಸುವುದು ಇದರಲ್ಲಿನ ಮುಖ್ಯ ಉದ್ದೇಶವಂತೆ . ಯಂತ್ರ - ಗ್ರಾಮ ಸ್ವರಾಜ್ಯ - ಧರ್ಮ ಸಂಕಟ ಎಂಬ ಮೂರು ಭಾಗಗಳಲ್ಲಿರುವ ೨೩೫ ಪುಟಗಳ ಪುಸ್ತಕವಿದು . ಬೆಲೆ ರೂ . ೧೪೦ . ತಮ್ಮ ಪುಸ್ತಕಗಳ ಮುಖಪುಟವನ್ನು ತಾವೇ ವಿನ್ಯಾಸ ಮಾಡಬಲ್ಲ ಕೆ . ವಿ . ಅಕ್ಷರ , ನಾಗರಾಜ ವಸ್ತಾರೆಯವರಂತೆ , ಪ್ರಸನ್ನ ಕೂಡಾ ಆ ಕೆಲಸ ಮಾಡುತ್ತಿದ್ದಾರೆ . ಎಲ್ಲೆಲ್ಲೂ ಯಂತ್ರಗಳ ಬಳಕೆಯಿರುವ ಈ ದಿನಗಳಲ್ಲಿ ಅವುಗಳನ್ನು ಕಳಚುವುದೊ , ಅವುಗಳಿಂದ ಕಳಚಿಕೊಳ್ಳುವುದೋ ಸುಲಭವಲ್ಲ . ಆದರೆ ' ಹೊಡಿಬಡಿ ' ಗಿಂತ ಭಿನ್ನವಾಗಿ , ಸರಳ - ಉದ್ವೇಗರಹಿತ ಶೈಲಿಯಲ್ಲಿ ವಿಚಾರಗಳನ್ನು ಮಂಡಿಸುವ ಇವರ ದಾರಿಗೆ , ಯಂತ್ರಗಳನ್ನು ಕಳಚುವ ಶಕ್ತಿ ಬಂದರೆ ಆಚ್ಚರಿಯಿಲ್ಲ . ' ಈಗ ವಿಜ್ಞಾನವನ್ನು ಯಂತ್ರಗಳ ಕಪಿಮುಷ್ಠಿಯಿಂದ ಬಿಡಿಸಬೇಕಾಗಿದೆ ' , ' ಊನವಿಲ್ಲದಿರುವುದೇ ಯಂತ್ರಗಳ ಊನ ' ಎನ್ನುವ ಲೇಖಕರ ಈ ಪುಸ್ತಕ , ಕನ್ನಡದ ಎಲ್ಲ ಗದ್ಯ ರೂಪಕ್ಕಿಂತ ಅನನ್ಯವಾಗಿದೆ . ` ಹಣ ಮಾಡುವುದು ಹೇಗೆ ? , ಉದ್ಯಮ ಕಟ್ಟುವುದು ಹೇಗೆ ? ' ಇತ್ಯಾದಿ ಪುಸ್ತಕಗಳೇ ಬರುತ್ತಿರುವ ಕಾಲ ಇದು . ಮಾನವನನ್ನೇ ಯಂತ್ರ ಮುಖೇನ ಸೃಷ್ಟಿಸಲು ಹೊರಟಿರುವ ಆಧುನಿಕೋತ್ತರ ಸಮಯ ಇದು . ಇಂತಹ ಇಕ್ಕಟ್ಟಿನಲ್ಲಿ , ಕತೆ - ಕಾವ್ಯ - ಕಾದಂಬರಿ - ವಿಮರ್ಶೆ - ವೈಚಾರಿಕ ಲೇಖನ ಮೊದಲಾದ ಪ್ರಕಾರಗಳ ಶೈಲಿ ತೊರೆದು ರೂಪಿತವಾಗಿರುವ ಈ ಪುಸ್ತಕ , ಕನ್ನಡಿಗರೆಲ್ಲ ಓದಬಹುದಾದಂಥದ್ದು . ಸಂಪರ್ಕಕ್ಕೆ desiprasanna @ gmail . com . ಪುಸ್ತಕ ಓದಿ , ಚಾರ್ಲಿ ಚಾಪ್ಲಿನ್‌ನ ' ಮಾಡರ್ನ್ ಟೈಮ್ಸ್ ' ಸಿನಿಮಾ ಇನ್ನೊಮ್ಮೆ ನೋಡಿ !
ಕಳೆದ ವಾರಾಂತ್ಯದಲ್ಲಿ ಮಂಗಳೂರಿನಲ್ಲಿದ್ದೆ . ಧರ್ಮಸ್ಥಳ ಗಲಬೆಯಲ್ಲಿ ನನ್ನದೇನೂ ಕೈವಾಡವಿಲ್ಲ ಸ್ವಾಮಿ , ನಾನು ಹೋಗಿದ್ದು ಗೆಳೆಯನ ಮದುವೆಗೆ ! ಮಂಗಳೂರಿನಲ್ಲಿದ್ದಷ್ಟೂ ದಿನ ನನಗೆ ಬಹಳಷ್ಟು ಖುಷಿ ಕೊಡೋದು ಅಲ್ಲಿನ ಬಸ್ ಪ್ರಯಾಣ ! ಯಾರಾದ್ರೂ ' ಎಷ್ಟು ಘಂಟೆಗೆ ಸಿಗುತ್ತೀರಾ ? ' ಅನ್ನೋ ಪ್ರಶ್ನೆ ಕೇಳಿದ್ರೆ ಇಂತಿಷ್ಟೇ ಘಂಟೆಗೆ ಅಲ್ಲಿರುತ್ತೇನೆ ಅಂತ ಖಚಿತವಾಗಿ ಹೇಳಲು ಸಾಧ್ಯವಾಗೋದು ಬಹುಷಃ ಮಂಗಳೂರಿನಲ್ಲಿ ಮಾತ್ರ . ಬಸ್ ಸ್ಟ್ಯಾಂಡ್ ನಲ್ಲಿ ನಿಂತಿರೋ ವ್ಯಕ್ತಿಯ ಬಳಿ ಸುಮ್ಮನೆ ' ಸುರತ್ಕಲ್ ಗೆ ಬಸ್ ಎಷ್ಟು ಘಂಟೆಗೆ ? ' ಅಂತ ಕೇಳಿ ನೋಡೀದ್ರೆ ' 8 . 35 ಕ್ಕೆ ಗಣೇಶ್ ಪ್ರಸಾದ್ 8 . 45 ಕ್ಕೆ ದುರ್ಗಾಂಬಾ , 8 . 58 ಕ್ಕೆ ನವದುರ್ಗಾ ಹೀಗೆ ನೀವು ನಿಲ್ಲಿಸಿ ಅನ್ನೋ ತನಕ ಅವನ ಲಿಸ್ಟು ಮುಂದುವರೆಯುತ್ತದೆ . ಆ ಬಸ್ಸುಗಳೂ ಹರಕೆ ಹೊತ್ತವರ ಹಾಗೆ ಅದೇ ಸಮಯಕ್ಕೆ ಬಂದೂ ಬಿಡುತ್ತವೆ . ಈಗಂತೂ ಪ್ರತಿ ಬಸ್ ಸ್ಟ್ಯಾಂಡ್ ನಲ್ಲಿ ಟೈಂ ಕೀಪರ್ ಗಳ ಹಾವಳಿ ಬೇರೆ . ಹಿಂದೆ ಒಂದು ಬಸ್ ಏನಾದ್ರೂ ಒಂದೆರಡು ನಿಮಿಷ ಹೆಚ್ಚಿನ ಕಾಲ ಬಸ್ ಸ್ಟ್ಯಾಂಡ್ ನಲ್ಲಿ ನಿಂತು ಪ್ರಯಾಣಿಕರನ್ನು ಸೆಳೆಯಲು ಪ್ರಯತ್ನ ಮಾಡ್ತಾ ಇದ್ರೆ ಹಿಂದಿನಿಂದ ಬರುವ ಮತ್ತೊಂದು ಬಸ್ಸಿನವ ಮೊದಲ ಬಸ್ಸಿನವನ ಕೊರಳ ಪಟ್ಟಿ ಹಿಡಿದು ಜಗಳಕ್ಕೇ ನಿಲ್ಲುತ್ತಿದ್ದ . ಇದನ್ನು ತಪ್ಪಿಸಲೆಂದೇ ಈಗ ಟೈಂ ಕೀಪರ್ ಗಳನ್ನು ಇರಿಸಲಾಗಿದೆ . ಮಂಗಳೂರಿನ ಬಸ್ಸುಗಳೀಗ ವಿಡೀಯೋ ಕೋಚ್ ಗಳಾಗಿವೆ . ಬಸ್ ಹತ್ತಿ ಒಂದೆರಡು ಸೀನ್ ನೋಡುವಷ್ಟರಲ್ಲೇ ನಮ್ಮ ಸ್ಟಾಪ್ ಬಂದಿರುತ್ತೆ ಅಲ್ಲಿ ಅದ್ಯಾವ ಮನರಂಜನೆಗೆ ವಿಡಿಯೋ ಹಾಕುತ್ತಾರೋ ದೇವರಿಗೇ ಗೊತ್ತು . ಮೂಲ್ಕಿಯಿಂದ ಉಡುಪಿಗೆ ಅರ್ಧ ಗಂಟೆಯ ಪ್ರಯಾಣ . ಅಂಥ ಸಮಯದಲ್ಲಿ ವಿಡಿಯೋ ಸ್ವಲ್ಪ ಮನರಂಜನೆ ಕೊಡುತ್ತೆ ಅಂತ ಅಂದುಕೊಂಡ್ರೆ ಅದು ನಿಮ್ಮ ತಪ್ಪು ! ಮೊನ್ನೆ ಹಾಗೇ ಆಯ್ತು . ' ದಾಸ ' ಸಿನೆಮಾ ಹಾಕಿದ್ದರು ಬಸ್ ನಲ್ಲಿ , ಒಳ್ಳೆ ಇಂಟರೆಸ್ಟಿಂಗ್ ಸೀನ್ ಬರುವಾಗಲೇ ನನ್ನ ಸ್ಟಾಪ್ ಬರೋದಾ ! ಆಗಿದ್ದಾಗಲಿ ಅಂದುಕೊಂಡು ಸೀನ್ ಮುಗಿದ ಮೇಲೇನೆ ನಾನು ಮುಂದಿನ ಸ್ಟಾಪ್ ನಲ್ಲಿ ಇಳಿದದ್ದು . ಸಧ್ಯ ಕಂಡಕ್ಟರ್ ಗೆ ಗೊತ್ತಾಗಲಿಲ್ಲ , ಇಲ್ಲಾಂದ್ರೆ ಮಂಗಳಾರತಿ ಗ್ಯಾರಂಟಿ . ಶಾಲೆಗೆ ಹೋಗುತ್ತಿದ್ದಾಗ ಐದು ನಿಮಿಷಕ್ಕೊಂದು ಬಸ್ ಇದ್ದರೂ ದಿನಾ ಒಂದೇ ಬಸ್ ನಲ್ಲಿ ಹೋಗುತ್ತಿದ್ದೆ ನಾನು . ಬಹುತೇಕ ಮಂಗಳೂರಿನ ಎಲ್ಲರೂ ಹೀಗೆ ' ಏಕ ಬಸ್ ವೃತರು ' . ಶಾಲೆಗೆ , ಕೆಲಸಕ್ಕೆ ಹೋಗುವ ಎಲ್ಲರೂ ಯಾವುದಾದರೂ ಒಂದೇ ಬಸ್ ನಲ್ಲಿ ಹೋಗುವ ಅಭ್ಯಾಸ ಮಾಡಿಕೊಂಡಿರುತ್ತಾರೆ . ನನ್ನ ಬಸ್ ಬೆಳಿಗ್ಗೆ 8 . 35ಕ್ಕೆ . ಮನೆಯಿಂದ ಕಾಲು ಹೊರಕ್ಕಿಟ್ಟರೆ ಅಲ್ಲೇ ಬಸ್ ಸ್ಟಾಪ್ . ಆದರೂ ನಾನು ಮಾತ್ರ ಎಂಟು ಘಂಟೆಗೇ ಹೋಗಿ ಬಸ್ ಸ್ಟಾಪ್ ನಲ್ಲಿ ಕೂರುತ್ತಿದ್ದೆ . ಎಂಟು ಘಂಟೆಯಿಂದ 8 . 35 ರ ತನಕ ಬರುವ ಎಲ್ಲಾ ಬಸ್ ನಲ್ಲಿ , ಕಿಟಕಿಯ ಪಕ್ಕ ಕುಳಿತುಕೊಳ್ಳುವ ಹುಡುಗಿಯರು ಅಕಸ್ಮಾತ್ ಆಗಿ ತಲೆ ಹೊರ ಹಾಕಿ ನಕ್ಕರೆ ಅದು ' ನನ್ನನ್ನೇ ನೋಡಿ ನಕ್ಕಿದ್ದು ' ಅಂತ ಸುಳ್ಳು ಸುಳ್ಳೇ ಸಂಭ್ರಮಿಸುತ್ತಿದ್ದೆ ! ಕಾಲೇಜು ದಿನಗಳಲ್ಲಂತೂ ಶಿಲ್ಪಾ ಸಿಗುತ್ತಾಳೆ ಅನ್ನೋ ಒಂದೇ ಒಂದು ಕಾರಣಕ್ಕೆ ಮೂರು ವರ್ಷ ಒಂದೇ ಬಸ್ ನಲ್ಲಿ ಪ್ರಯಾಣಿಸಿದ್ದೆ . ಆ ಶಿಲ್ಪಾ ಈಗ ಯಾವ ಮನೆಯ ಅಂದವನ್ನು ಹೆಚ್ಚಿಸಿದ್ದಾಳೋ ದೇವರಿಗೇ ಗೊತ್ತು ! ಕಾಲೇಜಿನಲ್ಲಿರುವಾಗ ಕೂರಲು ಸೀಟ್ ಇದ್ದರೂ ಫುಟ್ ಬೋರ್ಡ್ ನಲ್ಲಿ ನೇತಾಡಿಕೊಂಡು ಹೋಗೋದು ನಮ್ಮೆಲ್ಲರ ಹವ್ಯಾಸ . ಹೀಗೇ ಹೋದರೇನೆ ಹುಡುಗಿಯರ ಮುಂದೆ ನಾವೆಲ್ಲಾ ಮ್ಯಾಚೋಮ್ಯಾನ್ ಗಳಾಗಿ ಕಾಣಿಸೋದು ಅನ್ನೊ ಭಾವನೆ ಇತ್ತು ನಮಗೆ . ಅವತ್ತಿಗೆ AXN TV ಇರಲಿಲ್ಲ ಇದ್ದಿದ್ದರೆ ನಮ್ಮ ಸಾಹಸ ಪುಟಗೋಸಿ ಅನ್ನೋದು ಆವಾಗಲೇ ತಿಳಿಯುತ್ತಿತ್ತು ಬಹುಷ ! ಚಿಕ್ಕಂದಿನಲ್ಲಿ ನಮ್ಮನ್ನೆಲ್ಲಾ ಬೆರಗು ಮೂಡಿಸುತ್ತಿದ್ದ ವಿಷಯ ಅಂದ್ರೆ ಹತ್ತಾರು ಊರುಗಳ ಹೆಸರನ್ನು ಕಂಡಕ್ಟರ್ ಸಹಸ್ರನಾಮದ ಹಾಗೆ ಹೇಳುತ್ತಿದ್ದದ್ದು ! ಕಾಪು , ಎರ್ಮಾಳ್ , ಉಚ್ಚಿಲ , ಪಡುಬಿದ್ರಿ , ಹೆಜಮಾಡಿ , ಮುಲ್ಕಿ , ಕಾರ್ನಾಡ್ , ಕೊಲ್ನಾಡ್ , ಮುಕ್ಕ , ಹಳೆಯಂಗಡಿ , ಸುರತ್ಕಲ್ ಹೀಗೆ ಉದ್ದಕ್ಕೆ ನಾನ್ ಸ್ಟಾಪ್ ಆಗಿ ಊರಿನ ಹೆಸರು ಹೇಳಿ ಜನರೆಲ್ಲ ಹತ್ತಿದ ಮೇಲೆ ಬಾಯಿಗೆ ಒಂದೇ ಒಂದು ಬೆರಳು ತೂರಿಸಿ ಸೀಟಿ ಊದಿ ರೈಟ್ ಪೋಯಿ ಅನ್ನೋದನ್ನು ಬಲು ಮಜ ಕೊಡುತ್ತಿತ್ತು . ಬಾಲ್ಯದಲ್ಲಂತೂ ಯಾವ ಹುಡುಗನನ್ನೂ ' ನೀನು ದೊಡ್ಡವನಾದ ಮೆಲೆ ಏನಾಗ್ತೀಯ ? ' ಅಂತ ಕೇಳಿದ್ರೆ ' ಡ್ರೈವರ್ ' ಅನ್ನೋ ಉತ್ತರ ಸಿಗುತ್ತಿತ್ತು . ' ಯಮಲೋಕದ ದರ್ಶನವನ್ನೇ ಮಾಡಿಸುತ್ತಾರೆ ' ಅನ್ನೋ ಆರೋಪ ಒಂದು ಬಿಟ್ಟರೆ ಮಂಗಳೂರಿನ ಬಸ್ಸುಗಳಲ್ಲಿ ಪ್ರಯಾಣಿಸೋದೆ ಒಂದು ಮಜಾ .
' ಬೆಂಗಳೂರು . . . . . . . ' ಇದು ಇಂದು ಬಹಳಷ್ಟು ಚರ್ಚೆಗೆ ಒಳಗಾಗುತ್ತಿರುವ ನಗರ . ಅತಿ ವೇಗವಾಗಿ ಬೆಳೆಯುತ್ತಾ ವಿಶ್ವವಿಖ್ಯಾತವಾಗುತ್ತಿರುವ , ಜೊತೆಗೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ನಗರ . ಬೆಂಗಳೂರಿನ ಸಮಸ್ಯೆಗಳು ಕೆಲವಾದರೆ , ಬೆಂಗಳೂರಿಗರ ಸಮಸ್ಯೆಗಳು ಹಲವು . ಈ ಹಲವು ಸಮಸ್ಯೆಗಳಲ್ಲಿ ' ನಮ್ಮ ಬೆಂಗಳೂರು ಹಾಳಾಗುತ್ತಿದೆ ಯಲ್ಲ ! ' ಎಂಬ ನೋವೂ ಒಂದು . ಹೀಗೆ ಕೊರಗುವ ಕೆಲವು ಬೆಂಗಳೂರಿಗರಲ್ಲಿ ನಾನೂ ಒಬ್ಬಳು . ಕೆಲವೇ ದಿನಗಳ ಹಿಂದೆ ಮುಂಬಾಗಿಲ ಬಳಿ ಗುಬ್ಬಚ್ಚಿಯಾಂದನ್ನು ಕಂಡಾಗ ನಾನು ಹಿರಿಹಿರಿ ಹಿಗ್ಗಿದ್ದೆ . ( ರವಿ ಬೆಳಗೆರೆಯವರ , ' ಗುಬ್ಬಚ್ಚಿಯೇ ಇಲ್ಲದ ಬೆಂಗಳೂರಿನಂತಾದರೆ ಬದುಕು ? ' ಲೇಖನ ನೆನಪಾಗಿತ್ತು . ) ' ಕಾಲ ಹಿಂದಕ್ಕೆ ಓಡಿತೇ ? ! ' ಎಂದು ಒಂದು ಕ್ಷಣ ಖುಷಿಯೂ ಆಗಿತ್ತು . ಇದೇ ರೀತಿಯ ಆನಂದ ಕಳೆದ ಮಳೆಗಾಲದಲ್ಲಿ ಬೆಂಗಳೂರಿನ ಕೆರೆಗಳು ತುಂಬಿದಾಗಲೂ ಆಗಿತ್ತು . ನಾನು ಮೂಲತಃ ಬೆಂಗಳೂರಿನವಳೇನೂ ಅಲ್ಲ . ನನ್ನ ಹಿರಿಯರು ಇಲ್ಲಿಗೆ ಬೇರೆ ಊರಿನಿಂದ ಉದ್ಯೋಗಾನ್ವೇಷಣೆಗಾಗಿ ಬಂದವರೇ . ಬೆಂಗಳೂರು ಅವರಿಗೆ ತಂದುಕೊಟ್ಟ ಯಶಸ್ಸು ಮತ್ತು ನಾನು ಇಲ್ಲೇ ಹುಟ್ಟಿ , ಬೆಳೆದ ಕಾರಣಗಳು ಈ ಊರಿನ ಬಗ್ಗೆ ನಾನು ಅಕ್ಕರೆ ಬೆಳೆಸಿಕೊಳ್ಳುವಂತೆ , ಭಾವನಾತ್ಮಕವಾಗಿ ಯೋಚಿಸುವಂತೆ ಮಾಡಿಬಿಟ್ಟಿವೆ . ಬೆಂಗಳೂರಿನಲ್ಲಿ ಗುಬ್ಬಿಗಳು ಇಲ್ಲದಾಗುತ್ತಿರುವುದು ನಿಜಕ್ಕೂ ದುಃಖಕರ . ಇದೇ ರೀತಿ ಹಿಂದಿದ್ದ ಕೆರೆಗಳೂ ಈಗ ಮಾಯವಾಗುತ್ತಿವೆ . ಉದ್ಯಾನಗಳು ಕಾಣದಾಗುತ್ತಿವೆ . ಕೆಲವೇ ದಿನಗಳ ಹಿಂದೆ ಪತ್ರಿಕೆಯಾಂದರಲ್ಲಿ ಓದುಗರೊಬ್ಬರು , ' ಗಾರ್ಡನ್ ಮತ್ತು ಪಾರ್ಕ್ ' ಎಂಬ ಹೆಸರುಗಳಿರುವ ಆದರೆ ಯಾವುದೇ ಉದ್ಯಾನಗಳು ಉಳಿದಿಲ್ಲದ ಸ್ಥಳಗಳನ್ನು ಹೆಸರಿಸಿದ್ದರು ) ನಾವಾಡುತ್ತಿದ್ದ ಕುಂಟೆಬಿಲ್ಲೆ , ಗೋಲಿಯಾಟ , ಕಂಬದಾಟಗಳ ಸ್ಥಾನಕ್ಕೆ ಈಗ ಮನೆಯಲ್ಲೇ ಕುಳಿತು ಆಡಬಹುದಾದ ' ವಿಡಿಯೋ ಗೇಮ್ ' ಗಳು ಬಂದಿವೆ . ಇವೆಲ್ಲಾ ಹಳ್ಳಿಯ ಮಕ್ಕಳ ಸ್ವತ್ತೇನೋ ಎಂಬಂತೆ ಮಾತಾಡುವ ಹಲವರನ್ನು ನಾನು ನೋಡಿದ್ದೇನೆ . ಆದರೆ ಇವು ಬೆಂಗಳೂರಿನಲ್ಲೂ ಇತ್ತು . . . ಬಾಲ್ಯದ ದಿನಗಳಲ್ಲಿ ಗಣಪತಿ ಹಬ್ಬದ ದಿನ ಪಂದ್ಯ ಕಟ್ಟಿ , ಐವತ್ತು , ನೂರು ಗಣಪತಿಗಳನ್ನು ನೋಡಿ ಬರುತ್ತಿದ್ದ ನೆನಪು ಇನ್ನೂ ಹಚ್ಚಹಸುರಾಗಿದೆ . . . ಆದರೆ ಈಗ ಹಬ್ಬಹರಿದಿನಗಳಂದು ' ನಮ್ಮ ಮನೆಗೆ ಯಾರಾದರೂ ಬರುವರೇನೋ ? ' ಎಂದು ಕಾದು ಕಾದು ಕೊನೆಗೆ ನಾನೇ ನನ್ನೆರಡು ಮಕ್ಕಳೊಂದಿಗೆ ಎಲ್ಲಿಗಾದರೂ ಹೋಗುತ್ತೇನೆ . ಈಗ ದಸರಾ ಹಬ್ಬಕ್ಕೆ ಗೊಂಬೆಗಳಿಡುವವರು , ದೀಪಾವಳಿಗೆ ಪಟಾಕಿ ಹೊಡೆಯುವವರು , ಸಂಕ್ರಾಂತಿಗೆ ಎಳ್ಳು ಬೀರುವವರು ಬಹಳ ಕಡಿಮೆ . ಮನೆಯಲ್ಲಿ ಹಾಡು , ರಂಗೋಲಿಗಳ ಸಂಭ್ರಮವಂತೂ ಇಲ್ಲವೇ ಇಲ್ಲ . ಇವಕ್ಕೆ ಹೆಚ್ಚಿನ ಮಹತ್ವವೂ ಇಲ್ಲ . ಆಗೆಲ್ಲ ಇಂದಿನಂತೆ ಎಮ್ ಟಿ ಆರ್ , ಬಟರ್ ಸ್ಪಾಂಜ್ ಗಳಿರಲಿಲ್ಲ . ಪೀಡ್ಜಾ , ಕಾಫಿ ಡೇ ಗಳಿರಲಿಲ್ಲ . ನಾವು ' ಆ . ಯಿ . . . ಸ್ ( ಐಸ್ ಕ್ರೀಮ್ ) ಎನ್ನುತ್ತಾ , ' ಬ್ರೆ . . . . ಡ್ . . . ' ಎನ್ನುತ್ತಾ ಬರುತ್ತಿದ್ದ ಐಸ್‌ಗಾಡಿಗಾಗಿ , ಬೇಕರಿಯವನಿಗಾಗಿ ಮನೆ ಎದುರು ಕಾಯುತ್ತಿದ್ದೆವು . ಆ ಕಾಯುವಿಕೆಯಲ್ಲೂ ಒಂದು ಸಂಭ್ರಮ ! ಈಗಿನಂತೆ ಸ್ಕೂಲಿಗೆ ಹೋಗಲು ಆಗೆಲ್ಲ ಆಟೋ , ವ್ಯಾನ್‌ಗಳ ವ್ಯವಸ್ಥೆಯ ಕ್ರಮವಿರಲಿಲ್ಲ . ಕೆಲವೊಮ್ಮೆ ನಾವು ಮೂರ್ನಾಕು ಕಿ . ಮೀ , ಕೆರೆ ದಂಡೆಯ ಮೇಲೆ , ತೋಟಗಳೊಳಗೆ ನಡೆದುಕೊಂಡು ಸ್ಕೂಲಿಗೆ ಹೋದ ಸಂದರ್ಭಗಳೂ ಇವೆ . ಇದೇ ಬಹುಶಃ ನನ್ನಲ್ಲಿ ಕೆರೆಗಳ ಬಗ್ಗೆ ಪ್ರೀತಿ ಹುಟ್ಟಿಸಿದ್ದು . ಆ ದಿನಗಳ ಬಗ್ಗೆ ನನಗೆ ಈಗಲೂ ಹೆಮ್ಮೆ ಎನ್ನಿಸುತ್ತದೆ . ಏಕೆಂದರೆ ಇಂಥ ಅನುಭವ ಎಷ್ಟೋ ಹಳ್ಳಿಯ ಮಕ್ಕಳಿಗೂ ಆಗಿರಲಿಕ್ಕಿಲ್ಲ . ಇದೆಲ್ಲಾ ನಡೆದದ್ದು ಬಹಳ ಹಿಂದೇನೂ ಅಲ್ಲ . ಕೇವಲ 20 - 25 ವರ್ಷಗಳ ಕೆಳಗೆ ಅಷ್ಟೆ , ಅದೂ ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲೇ ! ಜಾಗತೀಕರಣ ಹಳ್ಳಿಗಳಿಂದ ಯುವಜನತೆಯನ್ನು ನಗರಗಳೆಡೆ ಸೆಳೆಯುತ್ತಿದೆ . ನಗರಗಳಲ್ಲಿ ಜೀವನ ದುರ್ಬರವಾಗುತ್ತಿದೆ . ಬೆಂಗಳೂರಿನ ಮಟ್ಟಿಗೆ ಹೇಳುವುದಾದರೆ , ' ಇದು ಬಹಳ ದುರದೃಷ್ಟಕರ , ಅನಪೇಕ್ಷಿತ ' . ಇಲ್ಲಿಗೆ ವಲಸೆ ಬಂದವರ ಬಾಯಲ್ಲಿ ನಾನು , ' ಬೆಂಗಳೂರು ಭಾರೀ ಗಲೀಜು , ಇಲ್ಲಿಯವರದ್ದು ಕಂಗ್ಲೀಷ್ , ಇಲ್ಲಿನ ನೀರು ಸರಿಯಿಲ್ಲ , ಹವೆ ಸರಿಯಿಲ್ಲ , ಪ್ರತಿಯಾಂದಕ್ಕೂ ದುಡ್ಡು ಕೊಡಬೇಕು ' ಎಂಬ ಉದ್ಗಾರಗಳನ್ನು ಬಹಳಷ್ಟು ಕೇಳಿದ್ದೇನೆ . . ಇಷ್ಟಾದರೂ ಬೆಂಗಳೂರಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯೇನೂ ಆಗಿಲ್ಲ . ಸಮೀಕ್ಷೆಯಾಂದರ ಪ್ರಕಾರ ಇಲ್ಲಿ ಕನ್ನಡಿಗರ ಸಂಖ್ಯೆ ಶೇ . 37 ( ಇನ್ನೆಲ್ಲಿ ಕೇಳಬೇಕು ಕನ್ನಡ ? ಬರೀ ಕಂಗ್ಲೀಷೇ ! ) ಇನ್ನುಳಿದ ಶೇ67ರಷ್ಟು ಅನ್ಯಭಾಷೆಯ ಜನರಿದ್ದಾರೆ . ಅವರಿಗೆಲ್ಲಾ ನೀರು - ನೆರಳು ಒದಗಿಸುವಷ್ಟರಲ್ಲಿ ಕಾವೇರಿ ಖಾಲಿಯಾಗುತ್ತಿದೆ , ಭೂಮಿ ಕಾಣದಾಗುತ್ತಿದೆ . ಉದ್ಯಾನ ನಗರಿ , ಹವಾನಿಯಂತ್ರಿತ ನಗರ ಎಂದೆಲ್ಲ ಪ್ರಸಿದ್ಧವಾಗಿದ್ದ ಬೆಂಗಳೂರು ಈಗ ವಾಯು ಮಾಲಿನ್ಯದಿಂದ ಜರ್ಜರಿತವಾಗುತ್ತಿದೆ . ಪತ್ರಿಕೆಯಾಂದರಲ್ಲಿ ಕೆಲವು ವಾರಗಳ ಹಿಂದೆ ಮಸುಕು ಮಸುಕಾಗಿ ಕಾಣುತ್ತಿದ್ದ ಬೆಂಗಳೂರಿನ ಚಿತ್ರ ಪ್ರಕಟವಾಗಿತ್ತು . ಕೆಳಗೆ ಶೀರ್ಷಿಕೆಯ ಒಂದು ಸಾಲು ಹೀಗಿತ್ತು : ' ಇದು ಚಳಿಗಾಲದ ಮಂಜಿನ ಫೋಟೊ ಅಲ್ಲ , ವಾಹನಗಳ ಹೊಗೆಯಿಂದ ಆವೃತ್ತವಾದ ಬೆಂಗಳೂರಿನ ಫೋಟೊ ' . ಇದೇ ಮಾಲಿನ್ಯ ಕೆಲವು ದಿನಗಳ ಹಿಂದೆ ಅಲಸೂರಿನ ಕೆರೆಯ ಮೀನುಗಳನ್ನು ಬಲಿ ತೆಗೆದುಕೊಂಡಿತು . ಇಲ್ಲಿನ ವಾಹನ ದಟ್ಟಣೆ , ಬಹುಮಹಡಿ ಕಟ್ಟಡಗಳು ಇನ್ನೂ ಹತ್ತಾರು ಸಮಸ್ಯೆಗಳ ಬಗ್ಗೆ ಪ್ರತಿದಿನ ಪತ್ರಿಕೆಗಳಲ್ಲಿ , ಸುದ್ದಿ ಸಮಾಚಾರಗಳಲ್ಲಿ ಕೇಳುತ್ತಲೇ ಇರುತ್ತೇವೆ . ಇಲ್ಲಿ ನಡೆಯುವ ಕ್ರೈಂ ಗಳಂತೂ ದಿನ ನಿತ್ಯದ ಸುದ್ದಿಗಳಾಗಿ , ಜನ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನೇ ಬಿಟ್ಟಿದ್ದಾರೆ . ಅಂತೂ ಹಳ್ಳಿಗಳಲ್ಲಿ ಜನರಿಲ್ಲ . ನಗರಗಳಲ್ಲಿ ಜಾಗವಿಲ್ಲ . ಈ ಅಸಮತೋಲನಕ್ಕೆ ಪರಿಹಾರ ಕಂಡುಹಿಡಿಯಬೇಕಾದ ಸರ್ಕಾರಗಳು ತಂತಮ್ಮ ಗೊಂದಲಗಳಲ್ಲೇ ಮುಳುಗಿರುತ್ತವೆ . ಈ ಸಮಸ್ಯೆಗಳಿಗೆ ಎಂದಾದರೂ ಪರಿಹಾರ ಸಿಕ್ಕೀತೇ ? ಅಥವಾ ಹಿಂದಿರುಗಲಾಗದ ಕಾಲದಂತೆ ಪರಿಹಾರಗಳೆಲ್ಲ ಕನಸಾಗೇ ಉಳಿದೀತೇ ? ನನಸಾಗಲಿ ಎಂದು ಹಾರೈಸೋಣ . . . ಮುಖಪುಟ / ಸಾಹಿತ್ಯ - ಸಂಸ್ಕೃತಿ
ದೇಸಾಯರೇ ಅದೆಷ್ಟು ಬ್ಲಾಗುಗಳನ್ನು ನಿಭಾಯಿಸ್ತೀರಿ ಮಾರಾಯರೇ . ಮೊದಲ ಬಾರಿಗೆ ನಿಮ್ಮ ಈ ತಾಣಕ್ಕೆ ಬಂದೆ , ಚೆನ್ನಾಗಿದೆ , ಹೊಸತರಹದ ಯತ್ನ . ಪಾಶ್ಚಾತ್ಯ ಕೃತಿಗಳನ್ನು ಪರಿಚಯಿಸುವ ಕಾಯಕ . ಮುಂದುವರಿಸಿ .
ಅ೦ತೂ ಇ೦ತೂ ಕ್ಯಾಪ್ಟನ್ ಲತಾ ಒದ್ದಾಡಿಸ್ಕೊ೦ಡು ವಿಮಾನ ಮೇಲಕ್ಕೇರಿಸಿದ್ರು , ಮೊದಲ್ನೆ ಕಿತಾ ವಿಮಾನ ಏರಿದ್ದ ಗೌಡಪ್ಪ ಮತ್ತವನ ಟೀ೦ಗೆ ಹೊಟ್ಟೆಯೆಲ್ಲ ತೊಳಸಿ , ತಲೆ ಸುತ್ತಿ ಬ೦ದು ಎಲ್ಲಾ ವಯಕ್ ವಯಕ್ ಅ೦ತ ಸಿಕ್ಕಾಪಟ್ಟೆ ಆಮ್ಲೆಟ್ ಹಾಕ್ಬುಟ್ರು ! ಆ ಗಬ್ಬು ವಾಸ್ನೆ ತಡೀಲಾರ್ದೆ ಶಾನಿ ಅಕ್ಕ ಸೀಟಿನ ಬೆಲ್ಟು ಬಿಚ್ಚಿ ಎದ್ದೇಳಕ್ಕೋದ್ರು ! ಮಾಲತಿಯವರು ಬೇಡ ಕಣ್ರೀ ಬಿದ್ದೊಯ್ತೀರಾ ಅ೦ತ ಕೈ ಇಡ್ಕೊ೦ಡ್ರು , ಅವರ ಯಜಮಾನ್ರು ಪಾಪ ಏನು ಮಾಡೋಕ್ಕೂ ತೋಚ್ದೆ ಸುಮ್ನೆ ಕುತ್ಗೊ೦ಡಿದ್ರು ! & nb
ಆದರೆ ಮಿಥುನ್ ಅದೃಷ್ಟ ಹೆಚ್ಚು ದಿನ ಓಡಲಿಲ್ಲ . ೨೦೦೨ - ೦೩ ಋತುವಿನಲ್ಲಿ ಅವರು ಆಯ್ಕೆಯಾಗಲಿಲ್ಲ . ನಂತರವೂ ಇದುವರೆಗೆ ಅವರು ಕರ್ನಾಟಕಕ್ಕಾಗಿ ಆಯ್ಕೆಯಾಗಿಲ್ಲ . ರಘುನಾಥ್ ಬೀರಾಲ ಎಲ್ಲಾ ಪ್ರಯತ್ನವನ್ನೂ ಮಾಡಿದರು ಮತ್ತು ಛಲ ಬಿಡದೆ ಇನ್ನೂ ಮಾಡುತ್ತಾ ಇದ್ದಾರೆ ಆದರೆ ಸತತ ವೈಫಲ್ಯವನ್ನು ಅನುಭವಿಸುತ್ತಿದ್ದ ಆಟಗಾರರು ಯಾರೂ ಇರಲಿಲ್ಲವಲ್ಲ !
ಇನ್ನು ಮುಂದೆ ಕರ್ನಾಟಕದವರಿಗೆ ( ಅಂದರೆ ಮಂಗಳೂರಿನಿಂದ ) ಕೇವಲ ೬೦ ಸೀಟುಗಳು ಮಾತ್ರ ಲಭ್ಯವಾಗಲಿದೆ , ಉಳಿದ ೪೦೦ ಸೀಟುಗಳು ಕಣ್ಣೂರು , ಕಾಸರಗೋಡಿಗೆ ಹಂಚಿ ಹೋಗುತ್ತದೆ . ಇದಷ್ಟೇ ಅಲ್ಲ ಇನ್ನು ಈ ರೈಲು ಮಂಗಳೂರು ಸೆಂಟ್ರಲ್ ಸ್ಟೇಷನ್ ಬದಲಾಗಿ ಊರಿಂದ ೧೦ ಕಿಲೋಮೀಟರ್ ದೂರವಿರುವ " ಮಂಗಳೂರು ಜಂಕ್ಷನ್ " ಗೆ ಹೋಗುತ್ತದೆ . ಅಲ್ಲಿಗೆ ಸರಿಯಾಗಿ ಬಸ್ ಸೌಕರ್ಯವೂ ಇಲ್ಲದಿರುವುದರಿಂದ ಇಲ್ಲಿಯ ಜನತೆಗೆ ಎಲ್ಲಾ ರೀತಿಯಿಂದಲೂ ತೊಂದರೆಯಾಗುತ್ತದೆ . ಈ ಮೊದಲು " ನೇತ್ರಾವತಿ ಎಕ್ಸಪ್ರೆಸ್ " ಮತ್ತು " ಮಂಗಳಾ ಎಕ್ಸಪ್ರೆಸ್ " ಮಂಗಳೂರಿನಿಂದಲೇ ಹೊರಡುತ್ತಿತ್ತು , ಆದರೆ ಅದೀಗ ಕೇರಳದ ಪಾಲಾಗಿದೆ , ಅದು ಮಂಗಳೂರಿಗೆ ತಲುಪುವಾಗ ಮಧ್ಯರಾತ್ರಿಯಾಗಿರುತ್ತದೆ , ಅದರಿಂದ ಯಾವುದೇ ಪ್ರಯೋಜನವಿಲ್ಲ . ಅದೇ ಸಾಲಿಗೆ ಈ " ಮಂಗಳೂರು - ಯೆಶವಂತಪುರ " ರೈಲು ಸೇರುವುದು ಖಚಿತ . ಯಾವಾಗ ಮಂಗಳೂರು ಸ್ಟೇಷನ್ ಕರ್ನಾಟಕ್ಕೆ ಸೇರುತ್ತೋ ಆವಾಗಲೇ ಇಂಥಾ ಅವಾಂತರಗಳನ್ನು ತಪ್ಪಿಸಲು ಸಾಧ್ಯ , ಆದರೆ " ಬೆಕ್ಕಿಗೆ ಗಂಟೆ ಕಟ್ಟುವವರಾರು ? "
ಚಿಂತನೆಗೆ ಹಚ್ಚುವಂಥ ಲೇಖನ . ವಿಚಿತ್ರ ಎಂದರೆ ಒಮ್ಮೊಮ್ಮೆ ಬೆಳೆದು ದೊಡ್ಡವರಾದ ಮೇಲೂ ಮೂಡದಂಥಾ logical ಪ್ರಶ್ನೆಗಳು , ತೀರಾ ಎಳೆ ವಯಸ್ಸಿನಲ್ಲೇ ಕೇಳುವ೦ತಾಗುವುದು ವಿಸ್ಮಯಕರ .
ಯುರೋಪಿಯನ್ ಆರೋಗ್ಯ ವಿಮೆ ಕಾರ್ಡ್ ಹೊಂದಿರುವ ಯಾವುದೇ ವ್ಯಕ್ತಿ ಆರೋಗ್ಯ ಸೇವಾ ಶಾಖೆ ಮತ್ತು ಸ್ವಯಂಸೇವಾ ಶುಶ್ರೂಷಾ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಮತ್ತು ನಿರ್ವಹಣೆಗೆ ಅರ್ಹರಾಗಿರುತ್ತಾರೆ . ಹೊರರೋಗಿ ಚಿಕಿತ್ಸಾ ಸೇವೆಗಳು ಉಚಿತವಾಗಿ ಲಭ್ಯ . ಆದರೆ , ಮಧ್ಯಮ ಮಟ್ಟದ ವೇತನ ಅಥವಾ ಅದಕ್ಕಿಂತ ಹೆಚ್ಚಿರುವ ರೋಗಿಗಳು ರಿಯಾಯಿತಿ ದರದಲ್ಲಿ ಆಸ್ಪತ್ರೆಯ ವೆಚ್ಚಗಳನ್ನು ನೀಡಬೇಕಾಗುತ್ತದೆ . ಖಾಸಗಿ ಆರೋಗ್ಯ ವಿಮೆ ಸೌಲಭ್ಯ ಪಡೆಯಲಿಚ್ಛಿಸುವ ಜನರಿಗೆ ಲಭ್ಯವಿದೆ . ಸರ್ಕಾರ ಸ್ವಾಮ್ಯದಲ್ಲಿರುವ Vhi ಹೆಲ್ತ್‌ಕೇರ್ , ಕ್ವಿನ್ ಹೆಲ್ತ್‌ಕೇರ್ ಹಾಗೂ ಅವಿವಾ ಇತರೆ ಸೇವೆಗಳೊಂದಿಗೆ ಆರೋಗ್ಯ ವಿಮೆ ಸಹ ಒದಗಿಸುತ್ತವೆ .
ಭಾರತ ರತ್ನ ದಿ . ಪಂಡಿತ್ ಭೀಮಸೇನ್ ಜೋಷಿಯವರ ಸಂಸ್ಮರಣ ಕಾರ್ಯಕ್ರಮದಂಗವಾಗಿ ಭೀಮ್ ಸೇನ್ ಜೋಷಿಯವರ ಧ್ವನಿ ಮುದ್ರಿತ ಹಾಡುಗಳಿಗೆ ನೃತ್ಯ ನಿಕೇತನ ಕೊಡವೂರು ತಂಡದ ಕಲಾವಿದರು ಬೆಂಗಳೂರಿನ ರಾಜ್ಯ ಭವನದಲ್ಲಿ . . .
sidewing wrote 7 months ago : ಚಿತ್ರಗಳು : ನಿರಂತರ ಮೈಸೂರು ಮೈಸೂರಿನ ರಂಗಾಯಣದ ವನರಂಗದಲ್ಲಿ ನಿರಂತರ ರಂಗ ಉತ್ಸವ ನಡೆಯುತ್ತಿದೆ . ಈ ಉತ್ಸವದ ಉಧ್ಘಾಟನಾ … more →
ರಾಜ್ಯ ಸಂವಿಧಾನದ ಶೀರ್ಷಿಕೆಯು " ದ ಕಾನ್ಸ್‌ಟಿಟ್ಯೂಷನ್ ಆಫ್ ದ ಸ್ಟೇಟ್ ಆಫ್ ಹವಾಯಿ " ಆಗಿದೆ . XVನೇ ವಿಧಿಯಲ್ಲಿನ 1ನೇ ಪರಿಚ್ಛೇದವು " ದ ಸ್ಟೇಟ್ ಆಫ್ ಹವಾಯಿ " ಎಂದು ಬಳಸಿದೆ , 2ನೇ ಪರಿಚ್ಛೇದವು " ದ ಐಲ್ಯಾಂಡ್ ಆಫ್ ಒಹು " ಎಂದು , 3ನೇ ಪರಿಚ್ಛೇದವು " ದ ಹವಾಯಿಯನ್ ಫ್ಲಾಗ್ " ಎಂದು ಬಳಸಿವೆ , ಮತ್ತು 5ನೇ ಪರಿಚ್ಛೇದವು ರಾಜ್ಯದ ಆದರ್ಶ ವಾಕ್ಯವನ್ನು " Ua mau ke ea o ka aina i ka pono " ಎಂದು ಸ್ಪಷ್ಟಪಡಿಸುತ್ತದೆ . ಆದ್ದರಿಂದ ಈ ದಾಖಲೆಗಳು ಹವಾಯಿಯನ್ ಕಾಗುಣಿತದಲ್ಲಿನ [ [ ಒಕಿನಾ | ಟೆಂಪ್ಲೇಟು : Okinaಒಕಿನಾ ] ] ಮತ್ತು ಕಹಕೊದ ಆಧುನಿಕ ಬಳಕೆಯನ್ನು ನಿಗದಿಯಾದ ದಿನಾಂಕಕ್ಕಿಂತ ಮೊದಲ ದಿನಾಂಕಕ್ಕೆ ನಮೂದಿಸುತ್ತವೆ , ಇಲ್ಲಿ ಭೇದ ಸೂಚಕಗಳನ್ನು ಬಳಸಲಾಗಿಲ್ಲ .
ಕೃಷ್ಣನಿಗೆ ತುಂಬಾ ಸಂತೋಷವಾಗಿ ' ಬಾರ್ಬರಿಕ , ಇಡಿ ಲೋಕವು ನಿನ್ನಂಥ ವೀರ ಪರಾಕ್ರಮಿಯನ್ನು ಇದುವರೆಗೆ ನೋಡಿಲ್ಲ ' ಎಂದು ಹೋಗಳಿ , ಅವನು ಯುದ್ದದಲ್ಲಿ ಯಾರ ಕಡೆ ಸೇರಬಯಸುತ್ತಾನೆ ? ಎಂದು ಕೇಳಿದಾಗ , ಬಾರ್ಬರಿಕನು ತನಗೆ ತನ್ನ ತಾತ ಭೀಮನ ಕಡೆ ಸೇರಿ ಯುದ್ದ ಮಾಡಲು ಇಚ್ಛೆ ಇದ್ದರು , ತಾನು ಯುದ್ದ ನೋಡಲು ತನ್ನ ತಾಯೀಯ ಬಳಿ ಅನುಮತಿ ಕೇಳಿ ಹೊರಡುವ ವೇಳೆಯಲ್ಲಿ ತಾನು ಯುದ್ದದಲ್ಲಿ ಭಾಗವಹಿಸುವುದಾದರೆ ಅದು ಯಾರೋ ಯುದ್ದದಲ್ಲಿ ಸೋಲುತ್ತಿರುತ್ತಾರೋ ಅಂಥವರ ಕಡೆ ಸೇರುತ್ತೇನೆ ಎಂದುಮಾತು ಕೊಟ್ಟಿರುವುದಾಗಿ ತಿಳಿಸಿದನು . ಕೃಷ್ಣನು ಈ ಮಾತು ಕೇಳಿ ಈ ಬಾರ್ಬರಿಕನ್ನು ತನ್ನ ನಿರ್ಧಾರದಂತೆ ನೆಡೆದು ಯುದ್ದದಲ್ಲಿ ಭಾಗವಹಿಸಿದರೆ ಪಾಂಡವರಿಗೆ ಹಾಗು ಧರ್ಮಕ್ಕೆ ಉಳಿಗಾಲವಿಲ್ಲ ಎಂದು ಯೋಚಿಸಿ , ಹಾಗೆ ಇದಲ್ಲದೆ ಇವನು ಯುದದಲ್ಲಿ ಭಾಗವಹಿಸಿದರೆ ಒಂದು ಸಲ ಪಾಂಡವರು ಸೂಲಬಹುದು , ಒಂದು ಸಲ ಕೌರವರು ಸೂಲಬಹುದು , ಹಾಗೆ ಈ ಬಾರ್ಬರಿಕನು ಎರಡು ಕಡೆ ಯುದ್ದ ಮಾಡುವಂತಾಗಿ ಎಲ್ಲರೂ ಸತ್ತು ಅವನೊಬ್ಬನೆ ಉಳಿಯೂ ಸಾಧ್ಯತೆ ಕೂಡ ಹೆಚ್ಚು ಎಂದು ಕೊಂಡು , ಇದಕ್ಕೆ ತಡೆ ಹಾಕಬೇಕು ಅಂತ ನಿರ್ಧರಿಸಿ ಕೃಷ್ಣನು ಬಾರ್ಬರಿಕನಿಗೆ ನಿನ್ನ ಗುರು ಯಾರು ? ಎಂದು ಕೇಳಲು , ಬಾರ್ಬರಿಕನು ತಾನು ಈ ಎಲ್ಲ ವಿದ್ಯೆಯನ್ನು ಅಭ್ಯಾಸ ಮಾಡುವಾಗ ಕೃಷ್ಣನನ್ನೇ ಮನಸ್ಸಿನಲ್ಲಿ ಧ್ಯಾನಿಸುತ್ತಿದ್ದರಿಂದ , ನೀನೆ ನನ್ನ ಗುರು ಎಂದು ತಿಳಿಸಿದನು . ಕೃಷ್ಣನು ಇದೇ ಮಾತನ್ನು ನಿರಿಕ್ಷಿಸುತಿದ್ದವನಂತೆ , ಹಾಗಾದರೆ ನನ್ನ ಗುರುದಕ್ಷಿಣೆ ನೀಡುವುದಿಲ್ಲವೆ ? ಎಂದು ಕೇಳಿದನು . ಬಾರ್ಬರಿಕನು ಏನು ಬೇಕು ? ಅಪ್ಪಣೆಯಾಗಲಿ … ಎಂದಾಗ ಕೃಷ್ಣನು ' ಗುರುದಕ್ಷಿಣೆಯಾಗಿ ನಿನ್ನ ತಲೆಯನ್ನು ನನಗೆ ನೀಡು ' ಎಂದನು . ಬಾರ್ಬರಿಕನು ಎರಡನೇ ಯೋಚನೆ ಮಾಡದೇ ತನ್ನ ತಲೆಯನ್ನು ತನ್ನ ಬಾಣದಿಂದ ಕತ್ತರಿಸಿ ಕೃಷ್ಣನಿಗೆ ಅರ್ಪಿಸಿದನು . ಕೃಷ್ಣನು ಅವನ ತ್ಯಾಗವನ್ನು ಮೆಚ್ಚಿ ನಿನ್ನನ್ನು ಕಲಿಯುಗದಲ್ಲಿ ' ಶ್ಯಾಮ ' ಎಂಬ ಹೆಸರಿನಲ್ಲಿ ಜನ ಪೂಜಿಸಲಿ ಎಂಬ ವರ ಕೊಟ್ಟನು . ಬಾರ್ಬರಿಕನು ಕೃಷ್ಣನಲ್ಲಿ ಈ ಮಹಾಭಾರಥದ ಯುದ್ದವನ್ನು ನೋಡಬೇಕೆಂದು ಬಹು ಆಸೆ ಇಟ್ಟು ಕೊಂಡಿದ್ದು , ಹಾಗಾಗಿ ಈ ಯುದ್ದ ಮುಗಿಯುವವರೆಗೂ ತನ್ನ ತಲೆಯನ್ನು ಜೀವಂತವಾಗಿ ಇಟ್ಟು ಯುದ್ದ ನೋಡಲು ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿಕೊಂಡನು . ಕೃಷ್ಣನು ಅದರಂತೆ ಯುದ್ದ ನಡೆಯುವ ಸಮೀಪದ ಬೆಟ್ಟದಲ್ಲಿ ( ಎತ್ತರವಾದ ಸ್ಥಳದಲ್ಲಿ ) ಅವನ ತಲೆಯನ್ನು ಎರಡು ಬೂಂಬಿಗೆ ಸಿಕ್ಕಿಸಿ ಯುದ್ದ ನೋಡುವಂತೆ ಅನುಕೂಲ ಮಾಡಿಕೊಟ್ಟ ಎಂಬುದು ಕಥೆ .
ಒಂದೊಂದು ಕಾರ್ಯಕ್ರಮಗಳು ಎಷ್ಟೊಂದು ಬೋರ್ ಒಡೆಸೂತ್ತವೇ ಎಂದರೇ . . ಆ ವೇದಿಕೆಯ ಮೇಲೆ ಕುಳಿತಿರುವ ಬಹು ದೊಡ್ಡ ಕ್ಯೂ ನೋಡಿದರೇ ಸಭೀಕರುಗಳು ಹೆದರಿಕೊಳ್ಳುವಂತಾಗುತ್ತದೆ . ಆ ರೀತಿಯಲ್ಲಿ ಯಾಕಾದರೂ ಸಂಘಟಕರುಗಳು ಈ ರೀತಿಯ ಕಾರ್ಯಕ್ರಮಗಳನ್ನು ಯಾವ ಭರವಸೆಯ ಮೇಲೆ ಸೇರಿಸಿರುತ್ತಾರೋ . . ಇವೇ ಗೋಷ್ಠಿಗಳು ಇರಬೇಕು . . ಇಷ್ಟು ಜನರುಗಳು ಬೇಕೆ ಬೇಕು ಎಂಬಂತೆ ಈ ಕಾರ್ಯಕ್ರಮಗಳು ಇರಬಾರದು .
ಆದರೂ , ಸ್ವರಾಜ್ಯ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಜನಸಾಮಾನ್ಯರವರೆಗೆ ಕೊಂಡೊಯ್ದ ತಿಲಕರನ್ನು ಸ್ವಾತಂತ್ರ್ಯ ಚಳುವಳಿಯ ಜನಕ ಎಂದು ಪರಿಗಣಿಸಲಾಗಿದೆ . ಭಾರತೀಯ ಸಂಸ್ಕೃತಿ , ಇತಿಹಾಸ ಹಾಗೂ ಧರ್ಮದ ಬಗ್ಯೆ ಲೇಖನಗಳಿಂದ ಲಕ್ಷಾಂತರ ಭಾರತೀಯರಿಗೆ ತಮ್ಮ ಭವ್ಯ ಪರಂಪರೆಯ ಹಾಗೂ ನಾಗರೀಕತೆಗಳ ಅರಿವು ಮಾಡಿಕೊಟ್ಟು , ಅವರ ಪ್ರಜ್ಙೆಯಲ್ಲಿ ತಮ್ಮ ನಾಡಿನ ಬಗ್ಯೆ ಅಭಿಮಾನವನ್ನು ಮೂಡಿಸಿದರು .
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ ( ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ )
ಋಷಿಗಳನ್ನು ನಾನು ಅವಮಾನಿಸುತ್ತಿಲ್ಲ ಮತ್ತು ಅನುಮಾನಿಸುತ್ತಿಲ್ಲ . ವೈದ್ಯಕೀಯ ಸಂಶೋಧನೆಗಳ ಹಿಂದೆ ದೊಡ್ಡ ದೊಡ್ಡ ಕಂಪೆನಿಗಳ ಬಂಡವಾಳ ಇರುತ್ತದೆ . ಹಾಕಿದ ಬಂಡವಾಳವನ್ನು ವಾಪಸು ಪಡೆಯಲು ಈ ಕಂಪನಿಗಳು ಪ್ರಯತ್ನಿಸದೆ ಇರುವುದಿಲ್ಲ . ಪೋಲಿಯೋ ಕಂಡು ಹಿಡಿದ ಡಾ . ಸಾಕ್ ರ ಹೇಳಿಕೆಯನ್ನೇ ನಾನು ಉಲ್ಲೇಖಿಸಿದ್ದೇನೆ . ದಯವಿಟ್ಟು ಇನ್ನೊಮ್ಮೆ ಕಣ್ಣಾಡಿಸಿ .
ಬಿಸಿಬಿಸಿ ನೀರಿನ ಮೊದಲ ತಂಬಿಗೆಯನ್ನು ಮೈಮೇಲೆ ಸುರಿದುಕೊಂಡೆ . ಅಷ್ಟರಲ್ಲಿ ನೆನಪಾಯ್ತು . ಬಾತ್ ರೂಮ್ ಬಾಗಿಲು ಹಾಕಿಲ್ಲ ಅಂತ . ನಗು ಬಂತು .
ಜುಲೈ 2010 : ತಲೆಮರೆಸಿಕೊಂಡಿದ್ದ ಗುಜರಾತಿನ ಗೃಹ ರಾಜ್ಯ ಮಂತ್ರಿ ಅಮಿತ್ ಶಹಾ ಮೇಲೆ ಸಿಬಿಐ ಚಾರ್ಜ್ - ಶೀಟ್ : ` ಈತ ಈ ಸಮಸ್ತ ಪಿತೂರಿಯ ಸೂತ್ರಧಾರ . ಒಬ್ಬ ಸಾಮಾನ್ಯ ಕ್ರಿಮಿನಲ್ . ಗುಜರಾತಿನ ಮಾಜಿ ಡಿಐಜಿ ಡಿ . ಜಿ . ವಂಜಾರ , ಡಿಎಸ್ಪಿ ಅಭಯ್ ಚುದಾಸ್ಮರೊಂದಿಗೆ ಪ್ರಮುಖ ಆರೋಪಿ . ವ್ಯಾಪಾರಸ್ಥರಿಂದ ಹಫ್ತಾ ವಸೂಲಿ ಮಾಡುತ್ತಿದ್ದ ಸೊಹ್ರಾಬುದೀನ್ ಶೇಕ್ನನ್ನು ಮುಗಿಸುವಲ್ಲಿ ` ರಾಜಕೀಯ ಕೋನ ' ವೂ ಇತ್ತು . ಆತನ ಪತ್ನಿ ಕೌಸರ್ ಬೀಯ ಹತ್ಯೆಯ ಯೋಜನೆಯಿರಲಿಲ್ಲ , ಅದು ಸಾಂದರ್ಭಿಕವಾಗಿ ನಡೆಯಿತು . ಒಂದು ವರ್ಷದ ನಂತರ ತುಲಸಿ ಪ್ರಜಾಪತಿ ಎಂಬಾತನ ಎನ್ಕೌಂಟರ್ ಸಾವಿಗೆ ಕೂಡ ಸೊಹ್ರಬುದ್ದೀನ್ ಮತ್ತು ಆತನ ಪತ್ನಿಯ ಕೊಲೆಗಳೊಂದಿಗೆ ಸಂಬಂಧವಿದೆ . ಸೊಹ್ರಾಬುದ್ದೀನ್ ತನ್ನ ಪತ್ನಿಯೊಂದಿಗೆ ಹೈದರಾಬಾದಿನಿಂದ ಸಾಂಗ್ಲಿಗೆ ಪ್ರಯಾಣಿಸುತ್ತಿದ್ದಾಗ ಆತನೊಂದಿಗೆ ಇದ್ದ ಮೂರನೇ ವ್ಯಕ್ತಿ ಈ ತುಲಸಿ ಪ್ರಜಾಪತಿ , ರಾಜ್ಯ ಸಿಐಡಿ ಭಾವಿಸಿದಂತೆ ಸೊಹ್ರಾಬುದ್ಧೀನ್ ಗೆಳೆಯ ಕಲಿಮುದ್ದೀನ್ ಅಲ್ಲ . ಅಮಿತ್ ಶಹಾನಿಗೆ ಈ ಎಲ್ಲ ಘಟನೆಗಳ ಅರಿವಿತ್ತಷ್ಟೇ ಅಲ್ಲ , ಇವಕ್ಕೆಲ್ಲ ಆತನೇ ಸೂತ್ರಧಾರ . ಪೋಲೀಸ್ ವರಿಷ್ಟ ಅಧಿಕಾರಿಗಳಾದ ವಂಜಾರ ಮತ್ತು ಚುದಾಸ್ಮರಿಗೆ ಸೊಹ್ರಬುದ್ದೀನ್ನನ್ನು ಮುಗಿಸಿ ಬಿಡಲು ನಿರ್ದೇಶನ ಕೊಡುತ್ತಿದ್ದದ್ದು ಈತನೇ . ರಾಜಸ್ತಾನದಲ್ಲಿ ಕೆಲವು ಶ್ರೀಮಂತ ಮತ್ತು ಪ್ರಭಾವಿ ಅಮೃತಶಿಲೆ ವ್ಯಾಪಾರಸ್ಥರಿಂದ ಹಣ ಕೀಳುತ್ತಿದ್ದ ಆತನನ್ನು ಮುಗಿಸಿಬಿಡಬೇಕೆಂಬ ರಾಜಸ್ತಾನದ ಬಿಜೆಪಿ ಮುಖಂಡರ ಕೇಳಿಕೆಯ ಮೇರೆಗೆ ಈ ಮಂತ್ರಿ ಈ ನಿರ್ದೇಶನ ಕೊಟ್ಟಿದ್ದ . ಸೊಹ್ರಬುದ್ದೀನ್ನೊಂದಿಗೆ ಸಂಪರ್ಕ ಹೊಂದಿದ್ದ ಪೋಲೀಸ್ ಅಧಿಕಾರಿ ಚುದಾಸ್ಮ ಶಹಾನ ಆದೇಶದಂತೆ ಅಹಮದಾಬಾದಿನ ಇಬ್ಬರು ಬಿಲ್ಡರ್ ಸೋದರರಿಂದ ಹಣ ಕೀಳುವ ಕೆಲಸವನ್ನು ಸೊಹ್ರಬುದ್ದೀನ್ಗೆ ವಹಿಸಿದ . ಇದರಲ್ಲಿ ಸ್ವಲ್ಪ ಹಣವನ್ನೂ ಸಂಗ್ರಹಿಸುವ ಮತ್ತು ಸೊಹ್ರಬುದ್ದೀನ್ ಮೇಲೆ ಮೊಕದ್ದಮೆ ಹಾಕಿ , ನಂತರ ಆತನನ್ನು ಮುಗಿಸಿ ಬಿಡುವ ಯೋಜನೆಯಿತ್ತು . ಈ ಪೋಲೀಸ್ ಅಧಿಕಾರಿಗೆ ಸೊಹ್ರಬುದ್ದೀನ್ನ ಪ್ರಯಾಣ ಯೋಜನೆಯ ಬಗ್ಗೆ ತಿಳಿದದ್ದು ತುಲಸಿ ಪ್ರಜಾಪತಿಯಿಂದ . ರಾಜಸ್ತಾನದಲ್ಲಿ ಸೊಹ್ರಬುದ್ದೀನ್ಗೆ ರಾಜಕೀಯ ಗಾಳಿ ತಿರುಗಿ ಬಿದ್ದಿದೆ , ಅಲ್ಲಿ ಆತ ಬಹಳ ದಿನ ಬದುಕುಳಿಯಲಾರ , ಆದ್ದರಿಂದ ಆತನಿಗೆ ` ರಕ್ಷಣೆ ' ಕೊಡಲು ಆತನನ್ನು ಕೆಲವು ತಿಂಗಳ ಕಾಲ ಜೈಲಿನಲ್ಲಿಡಬೇಕಾಗಿದೆ ಎಂದು ಪ್ರಜಾಪತಿಗೆ ಹೇಳಲಾಯಿತು . ಗುಜರಾತ್ ಪೋಲೀಸರು ಹೈದರಾಬಾದಿನಿಂದ ಬಸ್ಸಿನಲ್ಲಿ ಬರುತ್ತಿದ್ದ ಪ್ರಜಾಪತಿಯನ್ನು ಮತ್ತು ಸೊಹ್ರಾಬುದ್ದೀನ್ನನ್ನು ಬಂಧಿಸಿದಾಗ , ಪತ್ನಿ ಕೌಸರ್ ಬೀ ತಾನೂ ಗಂಡನೊಂದಿಗೆ ಬರುವುದಾಗಿ ಹಠ ಹಿಡಿದಳು . ಆಕೆಯನ್ನು ಗಂಡನೊಂದಿಗೆ ಗಾಂಧಿನಗರದ ಒಂದು ಫಾಮರ್್ಹೌಸಿಗೆ ತರಲಾಯಿತು . ಪ್ರಜಾಪತಿಯನ್ನು ಒಂದು ಕಾರಿನಲ್ಲಿ ಉದಯಪುರಕ್ಕೆ ಕಳಿಸಲಾಯಿತು . ಸೊಹ್ರಾಬುದ್ದೀನನ ನಕಲಿ ಎನ್ಕೌಂಟರ್ ನಂತರ , ಮಂತ್ರಿ ಶಹಾನ ನಿರ್ದೇಶನದಂತೆ ಕೌಸರ್ ಬೀಯನ್ನು ಇನ್ನೊಂದು ಫಾರ್ಮ ಹೌಸಿನಲ್ಲಿ ಕೊಲ್ಲಲಾಯಿತು , ಆಕೆಯ ಹೆಣವನ್ನು ಪೋಲೀಸ್ ವರಿಷ್ಟಾಧಿಕಾರಿ ವಂಜಾರನ ಸ್ವಗ್ರಾಮಕ್ಕೆ ಒಯ್ದು ಅಲ್ಲಿ ಸುಡಲಾಯಿತು , ಅಸ್ಥಿಯನ್ನು ಬರೋಚ್ ಸಮೀಪ ನರ್ಮದ ನದಿಗೆ ಹಾಕಲಾಯಿತು , ಸಾಕ್ಷಿ ಇರಬಾರದು ಎಂದು . ಸೊಹ್ರಾಬುದ್ಧಿನ್ ನಕಲಿ ಎನ್ಕೌಂಟರಿನ ಇನ್ನೊಬ್ಬ ಸಾಕ್ಷಿ ಪ್ರಜಾಪತಿಯನ್ನು ಗುಜರಾತ್ - ರಾಜಸ್ತಾನ ಗಡಿಯಲ್ಲಿರುವ ಅಂಬಾಜಿಯಲ್ಲಿ ಇನ್ನೊಂದು ನಕಲಿ ಎನ್ಕೌಂಟರಿನಲ್ಲಿ ಮುಗಿಸಲಾಯಿತು . ಈತನಿಗೆ ಕೌಸರ್ ಬೀ ಕೊಲೆಯ ಬಗ್ಗೆಯೂ ತಿಳಿದಿತ್ತು ಎಂಬುದು ಆತನ ಕೊಲೆಗೆ ಇನ್ನೊಂದು ಕಾರಣ . ಇದು ಕೂಡ ಮಂತ್ರಿ ಶಹಾನ ಆದೇಶದಂತೆ ನಡೆಯಿತು . ?
ಇದ್ಯಾವುದೂ ಬೇಡ . ಸರಸದ ಮಾತೇ ಸರಿ ಎಂದು ತೀರ್ಮಾನ ಮಾಡಿ " ನೀ ಸಿಟ್ಟು ಮಾಡಿಕೊಂಡಾಗ ಕೆಂಪು ಕೆಂಪಾಗಿ ಕಾಣೋದು ನೋಡಿ ಮನೆಯಲ್ಲಿ ಟೊಮ್ಯಾಟೋ ಮುಗಿದಿರೋದು ನೆನಪಾಯ್ತು ನೋಡು " ಅಂದೇ ಬಿಟ್ಟೆ . ಸದ್ಯ , ' ನಿಮ್ಮ ಹೊಟ್ಟೆ ನೋಡಿದಾಗಲೆಲ್ಲ ಕುಂಬಳಕಾಯಿ ಹುಳಿ ತಿನ್ನಬೇಕು ಅನ್ನಿಸುತ್ತೆ ' ಅಂತ ಅವಳು ಹೇಳಲಿಲ್ಲ . ನನ್ನ ಆ ಮಾತಿಗೆ ಅವಳು ಇನ್ನೂ ಕೆಂಪಾದಳು . ನಾಚಿಕೆಯಿಂದಲೋ ಅಥವಾ ಹೆಚ್ಚಿನ ಸಿಟ್ಟಿನಿಂದಲೋ ತಿಳಿಯದಾಯಿತು . ಮುಂದುವರೆಸಿದೆ " ಇದನ್ನೇ ಹೇಳೋದು . . . ಕೆಂಪೇ ಕೆಂಪೋತ್ಪತ್ತಿ : ಅಂತ " . ಆಗ ನಿಜಕ್ಕೂ ನಾಚಿಕೆಯ ಕೆಂಪೇರಿ ನಗು ಅಳು ಎರಡೂ ಒಟ್ಟಿಗೆ ಬಂದೇ ಬಿಟ್ಟಿತು .
ಹೆಚ್ಚಿನ ಸಮಾಜದಲ್ಲಿ ತಂದೆಯ ತಂದೆಗೆ ಹೆಚ್ಚಿನ ಸ್ಥಾನಮಾನ . ಹಾಗಾದರೆ ರಾಜೀವ್ ಅಜ್ಜನ ಹೆಸರೇನು ಎಂಬುದಾಗಿ ಕೆ . ಎನ್ . ರಾವ್ ನೆಹರು ವಂಶ ಪುಸ್ತಕದ ಲೇಖನದಲ್ಲಿ ಪ್ರಶ್ನಿಸುತ್ತಾರೆ . ನಿಜಕ್ಕೂ ರಾಜೀವ್ ಗಾಂಧಿ ಮತ್ತೊಬ್ಬ ಅಜ್ಜ ( ತಂದೆಯ ತಂದೆ ) ಮುಸ್ಲಿಂ , ಆತ ಗುಜರಾತ್ ಜುನಾಗಢ್ ಪ್ರದೇಶದ ' ಜಂಟಲ್‌ಮೆನ್ " ಆಗಿದ್ದರು . ಅವರ ಹೆಸರು ನವಾಬ್ ಖಾನ್ ಅವರು ಮದುವೆ ಯಾಗಿದ್ದು ಪಾರ್ಸಿ ಮಹಿಳೆಯನ್ನ , ವಿವಾಹದ ನಂತರ ಆಕೆಯನ್ನು ಇಸ್ಲಾಂಗೆ ಮತಾಂತರಿಸಲಾಯಿತು .
ನನಗೆ ಆ ಮುಕ್ಕಾಲು ಗಂಟೆ ಸಾಕಪ್ಪಾ ಎನಿಸಿಬಿಟ್ಟಿತ್ತು . ಇಷ್ಟು ದಿನ ಆಗ್ರಾಣಿಸಿದ ಸುಗಂಧವೆಲ್ಲದರ ಕುರುಹು ನಾಸಿಕ ಮರೆತುಹೋಗಿ , ಆ ದುರ್ಗಂಧಕ್ಕೆ ಮೂಗು ಒಗ್ಗಿ ಹೋಗಿತ್ತು . ಪಕ್ಕದ ಸೀಟಿನಲ್ಲಿ ಕುಳಿತಿದ್ದ ಬುರ್ಖಾಕ್ಕೆ ಸಲಾಮು ಹೊಡೆದ " ಕೊಂಚ ಮಾಡ್ರನ್ " ಮಹಿಳೆ ಆ ಹಳೆ ಸೆಂಟಿನ " ಘಮ " ವನ್ನು ಮಾತ್ರ ಬಿಟ್ಟಿರಲಿಲ್ಲ . ಕಂಕಳಲ್ಲಿ ನಾಲ್ಕೈದು ತಿಂಗಳ ಕೂಸು , ಪಕ್ಕೆಗೊಂದು ಒಂದೂವರೆ ವರ್ಷದ ಮಗು , ಎಡಗೈಗೆ ಬಲಗೈಗೆ ಒಟ್ಟು ಮೂರು ಹೆಜ್ಜೆ ಇಡಲು ಕಲಿತ ಮಕ್ಕಳೂ ಎಲ್ಲರೂ ಬಸ್ ಏರಿದ್ದೇ ನನ್ನ ಪಕ್ಕದಲ್ಲಿ ಇದ್ದ ಒಂದೇ ಒಂದು ಖಾಲಿ ಸೀಟಿಗೆ ಬಂದು ಕುಳಿತರು . ಒಬ್ಬ ತಾಯಿ , ಐದು ಕಂದಮ್ಮಗಳು ಪ್ಲಸ್ ನಾನು ಮತ್ತು ನನ್ನ ಐದು ಕೆ . ಜಿ ತೂಕದ ಬ್ಯಾಗು ಎಲ್ಲವೂ ಕೆ . ಎಸ್ . ಆರ್ . ಟಿ . ಸಿ ಬಸ್ಸಿನ 35 ಮತ್ತು 36 ನೇ ಸೀಟಿನಲ್ಲಿ " ಇಕ್ಕಟ್ಟಿಗೆ ಸಿಲುಕಿದ್ದೆವು " .
ಆನ೦ದ ರಾಮ ಶಾಸ್ತ್ರಿ ಗಳೆ , ನಿಮ್ಮ ವಿಡ೦ಬನೆ ಇ೦ದ ನಮ್ಮ ಮಲ್ಯನವರು ಮತಿಗೆಟ್ಟು , ಧೃತಿಗೆಟ್ಟು , . . . ( ಕುಲಗೆಟ್ಟು ಅನ್ನೊದು ಬೇಡ ಬಿಡಿ , ಅದು ಯಾವಾಗಲೊ ಆಗಿದೆ ) ತಮ್ಮ ಕಾರ್ಕಾನೆಯನ್ನು ಮುಚ್ಚಿ , ಬೀರನ್ನು ಬಿಟ್ಟು , ಕ್ಯಾಲೆ೦ಡರ್ ನ ನಿಲ್ಲಿಸಿ . . . ಜೀವನದಲ್ಲಿ ಬೇಸತ್ತು , ಜಿಗುಪ್ಸೆ ಬ೦ದು ಮೌ೦ಟ್ ಅಬು ಗೆ ತಪಸ್ಸು ಮಾಡಲು ಹೊದರೆ . . . . ಹೋದರೆ . . . . ಇಗಾಗಲೆ ಸರ್ಕಾರಿ ಸಾರಾಯಿಯಿ೦ದ ವ೦ಚಿತರಾಗಿ , ಅತೀವ ದುಖದಲ್ಲಿ ಇರುವ ನಾಡ ಬ೦ದುಗಳು ನಿಮ್ಮ ಮೇಲೆ ದ೦ಡೆತ್ತಿ ಬರುವ ಸಾಧ್ಯತೆಗಳನ್ನು ತಳ್ಳಿಹಾಕುವ೦ತಿಲ್ಲ .
ನಾನು P . U . C ನಲ್ಲಿರ್ಬೇಕಾದ್ರೆ ಒಬ್ಳು ಗೆಳತಿ ಇದ್ಲು . ಪತ್ರ ಮಿತ್ರೆ ! ಆಗ ಮಂಗಳ ಪತ್ರಿಕೆಯಲ್ಲಿ ' ಸ್ನೇಹ ಸೇತು ' ಅನ್ನೋ ಒಂದು ಅಂಕಣ ಬರ್ತಾ ಇತ್ತು . ಅದರಲ್ಲಿ ಒಬ್ಬಳ ಹೆಸರು , ವಿಳಾಸ ಸಿಕ್ಕಿ ಅವಳಿಗೆ ಪತ್ರ ಬರೆದಿದ್ದೆ .
ಸಂತೋಷ್ , ಬಿಡಿ ಅದೆಲ್ಲ . ವೆಂಕಟ ಇನ್ ಸಂಕಟ ನೋಡಿ ಮಸ್ತ್ ಮಜಾ ಮಾಡಿ .
ಹಾಗಲ್ಲ , ವಾಸ್ತವವಾಗಿ ಸರ್ಣವಲ್ಲೀ ಶ್ರೀಗಳು ವಿಶಾಲ ಹೃದಯಿಗಳೆ . ಆದರೆ ಉಳಿದ ಮಠಗಳಂತೆ ಅಲ್ಲಿ ಶ್ರೀಗಳು ಹೇಳಿದಂತೆ ಮಠದ ಕಂಬಗಳಾ ಘನ ಶಿಷ್ಯರು ಕೇಳುವುದಿಲ್ಲ . ಆ ಮಠದ ಆಢ್ಯರು ಹೇಳಿದತಂತೆ ಶ್ರೀಗಳು ನಡೆಯಬೇಕಾಗಿದೆ . ಗಟ್ಟಿ ಹೆಗಡೆಗಳು ಶ್ರೀಮಠವನ್ನು ಆಡಿಸುತ್ತಾರೆ . ಆ ದಿಶೆಯಲ್ಲಿ ಶ್ರೀಗಳು ಹಾಗೆಲ್ಲ ರಂಪಾಟ ಮಾಡಿದಂತೆ ಕಂಡಿದ್ದು .
ವಿಸ್ಮಯ ನಗರಿಯ ಆರ್ಥಿಕ ಬೆಂಬಲಕ್ಕೆ ಜಾಹೀರಾತಿನ ಸಹಾಯ ಪಡೆಯುವ ವಿಚಾರ ಸಹ ಇದೆ . ಆಗ ಉತ್ತಮ ಸರ್ವರ್ ಗೆ ವಿಸ್ಮಯವನ್ನು ಸ್ಥಳಾಂತರಿಸಲು ಸಾಧ್ಯವಾಗುತ್ತದೆ .
ಪುಟ್ಟಿ ಮಾಡಿದ ಸಣ್ಣ ತಪ್ಪಿಗೆ , ಅವರಮ್ಮ ಕೋಪಾ ಮಾಡಿಕೊಂಡು , ಪುಟ್ಟಿಗೆ " ನಿನ್ನ ರೂಮಿನಲ್ಲಿರುವ ಕುರ್ಚಿಯಲ್ಲಿ ನಾನು ಹೇಳುವವರೆಗೂ ಕೂತಿರಬೇಕು , ಗೊತ್ತಾಯ್ತಾ " ಎಂದು ಅಪ್ಪಣೆ ಹೊರಡಿಸಿದರು , ಪುಟ್ಟಿ , ಮುಖ ಉಮ್ ಮಾಡಿ " ಗೊತ್ತಾಯ್ತು " ಎಂದು ರೂಮಿನೆಡೆಗೆ ನಡೆದಳು . ಸ್ವಲ್ಪ ಹೊತ್ತು ಕಳೆದ ನಂತರ , ಪುಟ್ಟಿಯ ರೂಮಿಂದ " ಅಮ್ಮಾ ಈಗ ಹೊರಗೆ ಬರ್ಲಾ ? " ಪುಟ್ಟಿಯ ದ್ವನಿ ಹೊರಗೆ ಬಂತು . ಇನ್ನು ಕೋಪದಲ್ಲಿದ್ದ ಅಮ್ಮ , " ಇನ್ನು ಬೇಡ , ಅಲ್ಲೇ ಇರು " ಎಂದು ಉತ್ತರಿಸಿದರು . ಅದಕ್ಕೆ ಪುಟ್ಟಿ ಜವಾಬು , " ಸರಿ ಅಮ್ಮ , [ . . . ]
ಗೆಳೆಯರೆ , ಕನ್ನಡಿಗರ ಮದುವೆ ಹೀಗಾದರೆ , ಕನ್ನಡಿಗರ ಊಟ ಹೇಗಿರತ್ತೆ ? ತಿಳಿಯಲು ಓದಿ ಕೂರ್ ಬೇಕೇ ಕೂರಿನ ೩ನೆ ಭಾಗ - ಕನ್ನಡಿಗರ ಊಟ
ಬೆಳಿಗ್ಗೆ ೭ ಗಂಟೆಗೆ ಹೊರಡಬೇಕಿದ್ದವರು ಜೇಷ್ಠಾದೇವಿ ಮಂದಿರದಿಂದ ಹೊರಟಾಗ ೮ . ೩೦ . ನೇರವಾಗಿ ಆದಿ ಶಂಕರರಿಂದ ಪೂಜಿಸಲ್ಪಟ್ಟ ಶಿವ ದೇವಸ್ಥಾನದ ಕಡೆಗೆ ನಮ್ಮ ಪ್ರಯಾಣ . ಶ್ರೀನಗರದ ಸಂಪೂರ್ಣ ಪಕ್ಷಿನೋಟ ಇಲ್ಲಿಂದ ಲಭ್ಯ . ೩ ಕಡೆಯಿಂದಲೂ ಬೆಟ್ಟಗಳಿಂದ ಸುತ್ತುವರೆದ ಮಧ್ಯೆ ಸರೋವರನ್ನೊಳಗೊಂಡ ಅತ್ಯಂತ ಸುಂದರ ನಗರ ಶ್ರೀನಗರ . ಪ್ರಸಾದಿಯಂತೂ ಕಸಗುಡಿಸುವ ಹೆಣ್ಣನ್ನೂ ಸಹ ಅವಳಿರುವ ಬಣ್ಣಕ್ಕೆ ಬೆರಗುಗಣ್ಣಿನಿಂದ ನೋಡುತ್ತಿದ್ದ . ಚಿವುಟಿದರೆ ರಕ್ತ ಚಿಮ್ಮುವ ವರ್ಣದ ಕಾಶ್ಮೀರ ಹೆಣ್ಣುಗಳು ಮನಮೋಹಕರೆಂಬುದರಲ್ಲಿ ಸಂಶವೇ ಇಲ್ಲ . ದಾರಿಯುದ್ದಕ್ಕೂ ಸಾಲಾಗಿ ಬರುತ್ತಿದ್ದ ಪುಟ್ಟ ಶಾಲಾ ಮಕ್ಕಳ ಛಾಯಾಚಿತ್ರ ತೆಗೆಯುವುದರಲ್ಲಿ ಪ್ರಸಾದಿ ಮತ್ತು ನಾನು ನಿರತರಾಗಿದ್ದೆವು .
( ಈ ಪ್ರಶ್ನೆಯನ್ನೀಗ ತಾನೇ ಗಮನಿಸಿದೆ - ಶ್ಯಾಮಲಾ ಅವರ ಪ್ರತಿಕ್ರಿಯೆ ನೋಡಿದಾಗ ) * ಅಶೋಕ್
ಬಂದಾಗಿಂದ , ಮನ್ಸು ವೀಲಿ ವೀಲಿ ಒದ್ದಾಡ್ತಾ ಇದೆ . . ಇದಕ್ಕಾಗೇನಾ ನಾನು , ಇಷ್ಟೊಂದ್ ಕಷ್ಟ ಪಟ್ಟು ಬೆಂಗಳೂರಿಗೆ ಬಂದಿದ್ದು ಅಂತ
' ಗಾಂಧಿ ಜರ್ನಲಿಸಂ ' ಖದರ್ರೇ ಬೇರೆ ಇತ್ತು . ಗಾಂಧಿ ಎಲ್ಲಿರ್ತಾರೋ ಅದೇ ಪೇಪರ್ ಆಫೀಸ್ ಕೂಡಾ ಆಗ್ತಿತ್ತು . ಜೊತೆಯಲ್ಲಿದ್ದವರೇ ಜರ್ನಲಿಸ್ಟ್ ಗಳು . ಗಾಂಧಿ ಜೊತೆ ಇರೋದಿಕ್ಕೆ , ನೋಡೋದಿಕ್ಕೆ ಬಂದವರು , ಅವರೆಲ್ಲಾ ಇರ್ಲಿ , ಕಸ್ತೂರಬಾ ಗಾಂಧೀನೆ ಎಷ್ಟೋ ಸಲಾ ಪ್ರಿಂಟಿಂಗ್ ಕೆಲಸಕ್ಕೂ ಕೈ ಹಾಕಬೇಕಾಗಿ ಬರ್ತಿತ್ತು . ಗಾಂಧಿ ಪ್ರವಾಸ ಹೊರಟರು ಅಂದ್ರೆ ಟ್ರೇನ್ ನಲ್ಲಿ ಅವರು ಮಾತ್ರ ಅಲ್ಲ ಅವರ ಮೇಕೆಗಳು , ಪ್ರಿಂಟಿಂಗ್ ಸಾಮಾನುಗಳೂ ಡಬ್ಬಿ ಏರ್ತಿದ್ದವು . ಪತ್ರಿಕೆಗೆ ಒಂದು ಎಥಿಕ್ಸ್ ಇರ್ಬೇಕು ಅನ್ನೋದು ಗಾಂಧಿಯವರಿಗೆ ಗೊತ್ತಾಗಿತ್ತು . ಜಾಹೀರಾತಿಲ್ಲದೆ ಪತ್ರಿಕೆ ನಡೆಸೋದಕ್ಕಾಗಲ್ಲ ಅಂತ ಸುಳ್ಳು ಹೇಳೋ ಜಾಹೀರಾತೆಲ್ಲಾ ಹಾಕೋದಿಕ್ಕೆ ಆಗುತ್ತಾ . ಒಂದಿಷ್ಟು ನೀತಿ ನಿಯಮ ಇರ್ಬೇಕು , ಪತ್ರಕರ್ತರ ಸಂಘಗಳು ನಿಬಂಧನೆ ಮಾಡ್ಬೇಕು ಅಂತಿದ್ರು . ಗುಲ್ವಾಡಿ ಅವರ ಪುಸ್ತಕ ತೆಗೆದು ನೋಡಿ . ಗಾಂಧಿ ಹೇಳಿದರಂತೆ - ' ಪತ್ರಕರ್ತರು ನಡೆದಾಡೋ ಪ್ಲೇಗ್ ನಂತ ಮಹಾರೋಗಿಗಳು . ಪತ್ರಿಕೆಗಳು ಬೈಬಲ್ , ಕುರಾನ್ , ಗೀತೆ ಎಲ್ಲವನ್ನೂ ಒಂದರಲ್ಲೇ ಅಳವಡಿಸೋ ಕೃತಿಗಳಾಗಿವೆ . ಇಷ್ಟರಲ್ಲೇ ರಾಜಕೀಯ ದೊಂಬಿಯಾಗಲಿದೆ ಅಂತ ಪತ್ರಿಕೆಗಳಲ್ಲಿ ಪ್ರಕಟವಾದರೆ ದೆಹಲಿಯಲ್ಲಿರುವ ಎಲ್ಲಾ ಕತ್ತಿ , ಬಾರುಕೋಲುಗಳು ಕ್ಷಣ ಮಾತ್ರದೊಳಗೆ ಮಾರಾಟವಾಗುತ್ತವೆ . ಜನರು ಧೈರ್ಯಶಾಲಿಗಳಾಗಬೇಕೆಂದು ಪತ್ರಿಕೆಗಳು ಕಲಿಸಿಕೊಡಬೇಕೇ ಹೊರತುಅವರಲ್ಲಿ ಭಯವನ್ನು ಹುಟ್ಟಿಸುವುದಲ್ಲ ' .
ಸಿನಿಮಾ ನಟಿಯಂತಿರುವ , ಹಾಗೇ ಮೇಕಪ್ ಕೂಡಾ ಹಾಕಿರುವ ಸಂಚಾರಿ ಪೇದೆಯೊಬ್ಬಳು ಕಾರೊಂದನ್ನು ನಿಲ್ಲಿಸಿ , ಚಾಲಕ ಕುಡಿದಿದ್ದಾನೋ ಎಂದು ಪರೀಕ್ಷಿಸುವ ಯಂತ್ರವನ್ನು ಅವನ ಬಾಯಿಗಿಟ್ಟು ಉಸಿರು ಬಿಡಲು ಹೇಳುತ್ತಾಳೆ . ದನಿಯಲ್ಲಿ ದರ್ಪ . ಚಾಲಕನಿಗೆ ದಿಗಿಲು . ಹೇಳಿಕೇಳಿ ಅದು ಹಾಡಹಗಲು . ಆಗ ಕುಡಿಯುವಂಥದ್ದು ಏನಾದರೂ ಇದ್ದರೆ ಅದು ವಾತಾವರಣ ತುಂಬಿಕೊಂಡಿರುವ ಕೆಟ್ಟ ಗಾಳಿಯನ್ನು ಮಾತ್ರ . ಅದು ಒತ್ತಟ್ಟಿಗಿರಲಿ , ಉಸಿರು ಬಿಡಲು ಕೇಳುತ್ತಿರುವುದು ಹೆಣ್ಣು . ಹೆಣ್ಣಿನ ಸಮ್ಮುಖದಲ್ಲಿ ಉಸಿರಾಡುವ ಅವಕಾಶ ಎಲ್ಲರಿಗೂ ಸಿಕ್ಕೀತೆ ? ಆತನಿಗೆ ನಂಬಲೇ ಕಷ್ಟ . ಆದರೂ ಪಾಪ , ಗಲಿಬಿಯಿಂದಲೇ ಆತ ಉಸಿರು ಬಿಡುತ್ತಾನೆ .
ನಿಮ್ಮ ಕೆಲಸದ ಒತ್ತಡದಲ್ಲೂ ನಮ್ಮನ್ನು ನಗಿಸುತ್ತಲಿದ್ದೀರಲ್ಲ ಧನ್ಯವಾದಗಳು ಬಾರಿ ಚೆನ್ನಾಗಿದೆ ಒಳ್ಳೆ ಸ್ನೇಹದ ಗುಂಪು ಇತ್ತು ಅನ್ನಿ ಆಗ , ಚೆನ್ನಾಗಿ ಎಂಜಾಯ್ ಮಾಡಿದ್ದೀರಿ ಕಾಲೇಜ್ ಜೀವನ . . . . ಮುಂದೇನಾಯಿತು ತಿಳಿಸಿ . ಮತ್ತೆ ಈಗಿನ ಹುಡುಗರಿಗೆ ತರಬೇತಿ ನೀಡುತ್ತಲಿದ್ದೀರಾ ಲೈನ್ ಹೊಡೆಯೋದು ಹೇಗೆ ಎಂದು ಹಹಹ ಚೆನ್ನಾಗಿದೆ ಮುಂದುವರಿಸಿ . ವಂದನೆಗಳು
ವಿಶಾಖಪಟ್ಟಣದಲ್ಲಿ ಎಪ್ರಿಲ್ ೩ರಿಂದ ೮ರವರೆಗೆ ನಡೆದ ದಕ್ಷಿಣ ವಲಯ ಲೀಗ್ ಪಂದ್ಯಗಳ ಕರ್ನಾಟಕ ಆಡಿದ ಪಂದ್ಯಗಳ ಸ್ಕೋರು ಪಟ್ಟಿಯನ್ನು ಈ ಕೆಳಗೆ ಕಾಣಬಹುದು .
ನಾನೂ ಒಬ್ಬ ಡಿಂಕು ಅಭಿಮಾನಿ . ಇಂದುಶ್ರೀ ನಡೆಸುವ ಹಾಸ್ಯಕ್ಕೆ ಒಂದು ಇತಿಮಿತಿಯಿರುತ್ತದೆ . ಅದಕ್ಕೆ ಬಹಳ ಇಷ್ಟವಾಗುತ್ತದೆ . ಅವರ ಬಗ್ಗೆ ಪರಿಚಯಿಸದ್ದಕ್ಕೆ ಧನ್ಯವಾದಗಳು .
ತೇಜಸ್ವಿಯವರು ಇಲ್ಲದಿರುವಾಗ ಅವರು ಆಡಿದ ಮಾತನ್ನು ಉಲ್ಲೇಖಿಸಿ ಗಣಕ ಪರಿಷತ್ತಿನ ಮೇಲೆ ಆಪಾದನೆ ಹೊರಿಸುವುದು ಕಂಬಾರರಂಥವರಿಗೆ ಶೋಭಿಸುವುದಿಲ್ಲ . ' ಸರಕಾರದ ಕಾರ್ಯದರ್ಶಿಯವರು , ಹೆಚ್ಚು ಹಣವನ್ನು ಸರಕಾರದಿಂದ ಕೇಳಿ ಎಂದು ಗಣಕ ಪರಿಷತ್ತಿಗೆ ಪತ್ರ ಬರೆದಿದ್ದರು ' ಎಂಬ ಆಪಾದನೆಯನ್ನು ತೇಜಸ್ವಿಯವರು ಮಾಡಿದಾಗ , ಸಂಬಂಧಪಟ್ಟ ಮಾಹಿತಿಯ ವಿವರಗಳನ್ನು ತಿಳಿಸಬೇಕೆಂದೂ ಇಲ್ಲದಿದ್ದಲ್ಲಿ ಸುಳ್ಳು ಹೇಳಿದ್ದಕ್ಕಾಗಿ ಸಾರ್ವಜನಿಕರ ಕ್ಷಮೆಕೋರಬೇಕೆಂದೂ ತೇಜಸ್ವಿಯವರನ್ನು ಕೋರಿದ್ದೆ . ತೇಜಸ್ವಿಯವರು ಯಾವುದನ್ನೂ ಮಾಡಲಿಲ್ಲ ! ಮುಂದೊಂದು ದಿನ ಸಿಕ್ಕಿದ್ದಾಗ ' ಮಾತು ಬರುತ್ತೆ , ಹೋಗುತ್ತೆ , ಕಣ್ರಿ ' ಎಂದಿದ್ದರು ! ವಿಧಾನಪರಿಷತ್ತಿನ ಸದಸ್ಯರಾಗಿರುವ ಕಂಬಾರರಾದರೂ ತೇಜಸ್ವಿಯವರು ಮಾಡಿದ್ದ ' ಆಪಾದನೆ ' ಗಳ ಬಗ್ಗೆ ಆಧಾರಗಳನ್ನು ನೀಡಲಿ .
ದೇವರ ನಿದ್ದೆ ಚೆಂದ , ಮಧುರ ಹೂಗಳು ನನಗಿಲ್ಲಿ ಭಾರವಾಗಿ ಕಾಡುತ್ತಿವೆ ಹೂ ಮಾರುವವನ ಕರ್ಕಶ ದನಿಗೆ ಹಾಲುಗಲ್ಲದ ಕಂದ ಬೆಚ್ಚಿ ಅಳುವಾಗ ಇಂಡಿಯಾದ ವಿಜಯವೂ ನನಗೆ ಅಪ್ರಸ್ತುತ ಅಬ್ಬರದ ದೇಶಪ್ರೇಮಕ್ಕೆ , ಮಧ್ಯರಾತ್ರಿಯ ಹರುಷಕ್ಕೆ ತತ್ತರಿಸುವ ಹಸುಳೆಯ ನಿದ್ದೆಗಣ್ಣಿನ ಆಕ್ರಂದನ ನನ್ನೆದೆಯಲ್ಲಿ ಕೂಸಿಗೆ ನೆಮ್ಮದಿಯ ನಿದ್ದೆ ನೀಡಲೂ ನನ್ನಿಂದ ಸಾಧ್ಯವಿಲ್ಲವೆಂಬ ಹತಾಶೆ ಕಾಡುವಾಗ ನಶೆಯೇರಿದ ನಗರಕ್ಕೆ ಹಿಡಿಶಾಪ ಹಾಕುತ್ತೇನೆ ಬಯಲೇ ಸಿಗದ ಯಾನಕ್ಕೂ ಲಯವೇ ಇಲ್ಲದ ಬದುಕಿಗೂ ಸಂಬಂಧ ಕಲ್ಪಿಸಿ ನರಳುತ್ತೇನೆ ರಾತ್ರಿ ರಾತ್ರಿ
ಆಸ್ತಮಾವನ್ನು ಸೋಲಿಸಿದ ನೈಜ ಜನರ ಕಥೆಗಳನ್ನು ಆಲಿಸಿ . ಅವರು ಅಧಿಕಾರಿಗಳು , ಕ್ರೀಡೆಯ ಚಾಂಪಿಯನ್ನರು ಮತ್ತು ಶಾಲೆಗೆ ಹೋಗುವ ಮಕ್ಕಳು ಆದರೂ ಒಂದು ವಿಷಯದಲ್ಲಿ ಸಮನಾಗಿದ್ದಾರೆ . ಅವರು ಅವರ ಆಸ್ತಮಾವನ್ನು ನಿಯಂತ್ರಿಸಿಕೊಂಡರು ಮತ್ತು ಅವರ ಬದುಕನ್ನು ಸಹ ನಿಯಂತ್ರಣದಲ್ಲಿರಿಸಿಕೊಂಡರು . ನೀವು ಅವರ ಕಥೆಗಳನ್ನು ಕೇಳಿದ ನಂತರ , ಅವರಂತೆ ನೀವು ನಿಮ್ಮ ಆಸ್ತಮಾವನ್ನು ನಿಯಂತ್ರಿಸಿ ಮತ್ತು ನಿಮ್ಮ ಬದುಕನ್ನು ಆನಂದಿಸಬಹುದು .
ಮಯಿಲಾಡುತುರೈ ಎಕ್ಸ್‍ಪ್ರೆಸ್ ಸಂಜೆ ಐದೂವರೆಗೆ ಕುಂಭಕೋಣಮ್‍ಗೆ ಬರುತ್ತದೆ . ಮರುದಿನ ಬೆಳಿಗ್ಗೆ ಆರೂವರೆಗೆ ಬೆಂಗಳೂರಿನಲ್ಲಿರಬಹುದು . ಒಂದು ದಿನದ ರಜೆಯಲ್ಲಿ ತ್ಯಾಗರಾಜರ ಆರಾಧನೆ , ತಂಜಾವೂರು , ಕುಂಭಕೋಣಂ ದರ್ಶನ ಮುಗಿಸಬಹುದು . ಸಂಗೀತದಲ್ಲಿ ಆಸಕ್ತಿ ಇಲ್ಲದವರೂ ಒಮ್ಮೆ ತ್ಯಾಗರಾಜರ ಆರಾಧನೆಯಲ್ಲಿ ಪಾಲ್ಗೊಂಡು ಸಹಸ್ರಾರು ಜನ ಒಮ್ಮೆಲೆ ಗಾಯನದಲ್ಲಿ ತೊಡಗುವ ವೈಭವವನ್ನು ಆಸ್ವಾದಿಸಬಹುದು .
ಕರ್ನಾಟಕ ದ ಜನತೆಗೆ ಆಡಳಿತ ಸರಕಾರ ದಲ್ಲಿ ನಡೆಯುವ ಗೊಂದಲ ತುಂಬಾ ತಲೆ ನೋವು ತಂದಿದೆ ಮಾತ್ರವಲ್ಲದೆ ಅಭಿವ್ರದ್ಧಿ ಕುಂಟಿತ ವಾಗಿದೆ . ವಿರೋಧ ಪಕ್ಷಗಳು ಕಾದು ನೋಡು ತಂತ್ರ ಅನುಸರಿಸುತ್ತಿದ್ದಾರೆ . ಪರಿಸ್ತಿತಿ ಲಾಭ ಪಡೆಯಲು ಕಾಯುವರು . ಕೇಂದ್ರ ಮುಖಂಡರ ಸಲಹೆ ಒಪ್ಪೂವನ್ತಾದ್ದೆ . ಭವಿಷ್ಯ ಹೇಳುವುದು ಕಷ್ಟ . ರಾಜ್ಯದ ಜನತೆ ಇನ್ನೋಂದು ಚುನಾವಣೆ ಬಯಸುವುದಿಲ್ಲ . ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ರಾಷ್ಟ್ರಕವಿ ಕುವೆಂಪು ಭಾರತ ದೇಶದ ಬಗೆಗೆ ವರ್ಣಿಸುತ್ತಾ ಭಾರತ ಎಂಬುವುದು ಒಂದು ಉದ್ಯಾನವನ . ಇಲ್ಲಿರುವ ವಿವಿಧ ಧರ್ಮಗಳು ಮತ್ತು ಜನರು ಈ ತೋಟದ ಹೂವುಗಳು ಎಂದು ಆಗಾಗ ಕಾರ್ಯಕ್ರಮಗಳಲ್ಲಿ ಹೇಳುತ್ತಿದ್ದರು . ನಿಜ ಕುವೆಂಪು ತಮ್ಮ ಕನಸಿನಲ್ಲಿ ಕಂಡ ಮತ್ತು ಮನಸ್ಸಿನಲ್ಲಿ ಬಯಸಿದ ಭಾರತ ಅದಾಗಿತ್ತು . ಆದರೆ ಇಂದು ಭಾರತ ದಿನೇ ದಿನೇ ಜಾತಿ , ಧರ್ಮ ಮತ್ತು ಭಾಷೆಯ ಹೆಸರಿನಲ್ಲಿ ವಿಭಜನೆಗೊಳ್ಳುತ್ತಿದೆ . ಕೇವಲ ಓಟ್ ಬ್ಯಾಂಕಿನ ಆಸೆಗೋಸ್ಕರ ಒಂದು ಸಮುದಾಯವನ್ನು ಓಲೈಸುವುದರ ಮೂಲಕ ಇಲ್ಲವೇ ಒಂದು ಸಮುದಾಯವನ್ನು ಹಿಯಾಳಿಸುವುದರ ಮೂಲಕ ಜನರ ಮನಸ್ಸಿನಲ್ಲಿ ಪರಸ್ಪರ ವಿಷದ ಬೀಜವನ್ನು ಬಿತ್ತುತ್ತಾ ರಾಜಕಾರಣಿಗಳು ದೇಶವನ್ನು ತಮ್ಮ ಸ್ವಾರ್ಥಕ್ಕೋಸ್ಕರ ವಿಭಜಿಸುತ್ತಾ ತಮ್ಮ ಬೇಳೆಬೇಯಿಸಿಕೊಳ್ಳುತ್ತಿದ್ದಾರೆ .
ತಮ್ಮ ' ತೆರೆದ ಮನ ' ಪುಸ್ತಕದಿಂದಾಯ್ದ ಕೆಲವು ಲೇಖನಗಳನ್ನು ವಿಚಾರಮಂಟಪದಲ್ಲಿ ಪ್ರಕಟಿಸಲು ಒಪ್ಪಿಗೆಯಿತ್ತ ಡಾ | | ಎಚ್ . ನರಸಿಂಹಯ್ಯನವರಿಗೆ ವಿಚಾರಮಂಟಪ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ .
ಸೇನ್ ಮೂರು ಬಾರಿ ವಿವಾಹವಾಗಿದ್ದಾರೆ . ಅವರ ಮೊದಲ ಮದುವೆ , ಸಂಜಯ್ ಸೇನ್ ರೊಂದಿಗೆ , ಅವರು ಇನ್ನೂ ಬಹಳ ಚಿಕ್ಕವರಾಗಿದ್ದಾಗಲೇ ಜರುಗಿತು . ಅವರ ಎರಡನೆಯ ಪತಿ ವೈಜ್ಞಾನಿಕ ಲೇಖಕ ಹಾಗೂ ಪತ್ರಕರ್ತರಾದ ಮುಕುಲ್ ಶರ್ಮ . ಅವರು ನಂತರ ಪರಸ್ಪರ ಒಪ್ಪಿ ವಿಚ್ಛೇದಿತರಾದರು . ಸೇನ್ ನ ಮೂರನೆಯ ಹಾಗೂ ಪ್ರಸ್ತುತ ಪತಿಯಾದ ಕಲ್ಯಾಣ್ ರೇ ಒಬ್ಬ ಲೇಖಕ ಮತ್ತು ಪ್ರಾಧ್ಯಾಪಕರಾಗಿದ್ದು ಇಂಗ್ಲಿಷ್ ಭಾಷೆಯನ್ನು ಯುನೈಟೆಡ್ ಸ್ಟೇಟ್ಸ್ ನ ನ್ಯೂ ಜರ್ಸಿಯ ರಾಂಡಾಲ್ಫ್ ನಲ್ಲಿನ ಕಂಟ್ರಿ ಕಾಲೇಜ್ ಆಫ್ ಮಾರಿಸ್ ನಲ್ಲಿ ಉದ್ಯೋಗಿಯಾಗಿದ್ದಾರೆ . ಅವರಿಗೆ ಎರಡು ಹೆಣ್ಣು ಮಕ್ಕಳು , ಕಮಲಿನಿ ಮತ್ತು ಕೊಂಕೊಣ - ಅವರೂ ಸಹ ಅಭಿನೇತ್ರಿಯೇ - ಮತ್ತು ಇಬ್ಬರು ಮೊಮ್ಮಕಳಿದ್ದಾರೆ .
ಉಪಯುಕ್ತ ಮಾಹಿತಿ ಅಶೋಕ್ . ಸ್ಟಿಲ್ ಕ್ಯಾಮರಾ ಎಂದರೆ ಪೆನ್ ಇದ್ದಂತೆ . ವಿಡಿಯೋದ ಸೌಲಭ್ಯಗಳೇನೇ ಇರಲಿ , ಸ್ಥಿರ ಚಿತ್ರಗಳು ಕಾಲವನ್ನೇ ಸೆರೆ ಹಿಡಿಯುತ್ತವೆ . ನೀವು ಮಾಹಿತಿ ನೀಡಿದ ಕ್ಯಾಮರಾ ಕಂಡು ಹಲವಾರು ಸಾಧ್ಯತೆಗಳನ್ನು ನೆನೆದು ಮನಸ್ಸು ಹರ್ಷಿಸಿತು . ಥ್ಯಾಂಕ್ಸ್ .
ಹೊರಡುವ ಹೊತ್ತಿಗೆ ಬಾಗಿಲ ಮರೆಯಲ್ಲಿ ನಿಂತು ಬರಸೆಳೆದೆ ನೀನು ಕೊಡುವ ಮುತ್ತು , ಅದೇ ನನಗೆ ಸಂಜೆ ಕಾಲೇಜು ಮುಗಿಯುವವರೆಗಿನ ಮುತ್ತು ಬುತ್ತಿ . ಕಾಳೇಜಿನ ಬಳಿ ಬೈಕು ನಿಲ್ಲಿಸಿ ಇಳಿಸಿ ಹೋಗುವ ನಿನ್ನನ್ನು , ತಿರುವಿನಲ್ಲಿ ಮರೆಯಾಗುವ ತನಕ ನೋಡುತ್ತಾ ನಿಲ್ಲುತ್ತೇನೆ . ಗೆಳತಿಯರು ಛೇಡಿಸುತ್ತಾರೆ . ಮೊದಲ ಪಿರಿಯಡ್‌ನಲ್ಲಿ ನಾನೆಲ್ಲೋ , ಮನಸೆಲ್ಲೋ , ಪಾಠವೆಲ್ಲೋ . . ? ಮದ್ಯಾಹ್ನ ಗೆಳತಿಯರೊಂದಿಗೆ ಕೂತು ಊಟ ಮಾಡುವಾಗ ನಿನು ಆಫೀಸಿನಲ್ಲಿ ಏನು ತರಿಸಿಕೊಂಡಿರುತ್ತೀಯೋ ಅಂತ ಯೋಚನೆ . ನೋಡ ನೋಡುತ್ತಾ ಸಂಜೆಯಾಗಿಬಿಡುತ್ತದೆ . ಇಳಿಸಿ ಹೋದ ಜಾಗದಲ್ಲೇ ನೀನು , ನಿನ್ನ ಬೈಕು .
ಮೈಸೂರು ನಗರದಿಂದ 13 ಕಿ . ಮೀ ದೂರದಲ್ಲಿರುವ ಮರಟಿಕ್ಯಾತನಹಳ್ಳಿಗೆ ಸಮೀಪದ ಹೆಮ್ಮನಹಳ್ಳಿಯ ಜಮೀನಿನಲ್ಲಿ ಈ ದೇವಾಲಯ ಪತ್ತೆಗೊಂಡಿದೆ . ಪಾಚ್ಯವಸ್ತು ಸಂಶೋಧನಾಲಯ ಇಲಾಖೆ ಅಧಿಕಾರಿಗಳು ಈ ದೇವಾಲಯದ ಸ್ಥಳ ಪರಿಶೀಲನೆ ನಡೆಸಿದಾಗ , ಇಲ್ಲಿ ಶಿಲಾ ಶಾಸನ ಸಹ ಪತ್ತೆಯಾಗಿದೆ . ಇದರ ಆಧಾರದ ಮೇಲೆ ಈ ದೇವಾಲಯ 800 ವರ್ಷಗಳಷ್ಟು ಹಳೆಯದು ಎಂಬ ಅಂಶ ಬಹಿರಂಗಗೊಂಡಿದೆ ಎಂದು ಪ್ರಾಚ್ಯವಸ್ತು ಇಲಾಖೆ ಉಪನಿದರ್ೇಶಕ ಡಾ . ಆರ್ . ಗೋಪಾಲ್ ಸ್ಪಷ್ಟಪಡಿಸಿದರು . ಹೊಯ್ಸಳ ದೊರೆ ಎರಡನೇ ಬಲ್ಲಾಳ ಈ ಜಮೀನನ್ನು ದಾನವಾಗಿ ನೀಡಿರುವ ಬಗ್ಗೆ ಶಿಲಾ ಶಾಸನದಲ್ಲಿ ಉಲ್ಲೇಖಿಸಲಾಗಿದೆ . ಈ ಹೆಮ್ಮನಹಳ್ಳಿ ಪ್ರದೇಶದಲ್ಲಿ ಎಣ್ಣೆ ತಯಾರಿಸುವ ಸಲುವಾಗಿ ಗಾಣ ಬೀಸಲಾಗುತ್ತಿತ್ತು . ಈ ಸ್ಥಳದಲ್ಲಿಯೇ ಗಾಣ ಬೀಸುವವರಿಗೆ ದೇವಾಲಯ ಕಟ್ಟಲು ಹೊಯ್ಸಳ ದೊರೆ ನೀಡಿದ್ದ ಸೂಚನೆ ಮೇರೆಗೆ ಹೆಗ್ಡೆ ಮಹಾದೇವ ಜಿಮೀನು ದಾನ ನೀಡಿದ್ದ ಬಗೆಗೆ ವಿವರವಿದೆ . ಶಿಲಾ ಶಾಸನದ ಈ ಎಲ್ಲಾ ವಿವರಗಳನ್ನು ಈಗ ಎಪಿಗ್ರಫಿ ಆಫ್ ಕರ್ನಾಟಕದಲ್ಲಿ ದಾಖಲಿಸಲಾಗಿದೆ . ಹೊಯ್ಸಳ ದೊರೆ ದಾನ ನೀಡಿದ ಈ ಜಮೀನಿನಲ್ಲಿ ಶಿವನ ದೇವಾಲಯ ನಿರ್ಮಿಸಲಾಗಿತ್ತು . ಒಂದು ಶಿವನ ಲಿಂಗ ದೇವಾಲಯದಲ್ಲಿ ಪತ್ತೆಯಾದರೆ , ದೇವಾಲಯ ಆವರಣದ ಬಲ ಭಾಗದಲ್ಲಿ ಮತ್ತೊಂದು ಸಣ್ಣ ದೇವಾಲಯ ಸಹ ಇತ್ತು . ಅಮ್ಮನವರ ದೇವಾಲಯ ಎಂದು ಕರೆಯುವ ಈ ದೇವಸ್ಥಾನದಲ್ಲಿ ಪಾರ್ವತಿ ವಿಗ್ರಹ ಪತ್ತೆಯಾಗಿದೆ . ಈ ಎರಡು ದೇವಾಲಯಗಳನ್ನು ಅಂದಾಜು 50 ಲಕ್ಷ ರೂ . ವೆಚ್ಚದಲ್ಲಿ ಸಂರಕ್ಷಿಸಿ ಪುನರ್ ನಿರ್ಮಿಸಲಾಗುತ್ತಿದೆ .
ಅವೆಲ್ಲಕ್ಕಿಂತ ಹೆಚ್ಚಾಗಿ ಫಯರ್ ಬ್ರ್ಯಾಂಡ್ ಎಂದೇ ಬಿರುದಾಂಕಿತರಾಗಿರುವ ಎಂಡಿಎಂಕೆಯ ಮುಖ್ಯಸ್ಥ ವೈಕೋ , ಬಹಿರಂಗಸಭೆಯಲ್ಲಿ ಮಾತನಾಡುತ್ತ , ಎಲ್‌ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್‌ಗೆ ಏನೇ ಅಪಾಯವಾದರು ಕೂಡ ತಮಿಳುನಾಡು ಹೊತ್ತಿ ಉರಿಯುತ್ತೆ ಎಂದು ಎಚ್ಚರಿಕೆ ನೀಡಿದ್ದರು . ಅದಕ್ಕೆ ತಮಿಳುರಾಷ್ಟ್ರೀಯ ಚಳವಳಿ ಹೋರಾಟಗಾರ ಪಿ . ನೆಡುಮಾರನ್ ಕೂಡ ಸಾಥ್ ನೀಡಿದ್ದರು .
ನಾನು ಕೇರಳದ ಮುನಾರ್ಗೆ ಹೋಗಿ ಬಂದು ಆಗಲೇ ಏಳು ತಿಂಗಳಾಯಿತು . ಮನಸಲ್ಲಿ ಮಾತ್ರ ಮುನಾರ್ ಸ್ವಲ್ಪವೂ ಮಸುಕಾಗಿಲ್ಲ . ಅಷ್ಟರಲ್ಲೇ ಮತ್ತೊಮ್ಮೆ ಮುನಾರ್‌ಗೆ ಹೋಗುವ ಆಸೆ ಮನಸಲ್ಲಿ . ಮುನಾರ್ ನಿಜಕ್ಕೂ ಕಣ್ಣು - ಮನಸ್ಸುಗಳಿಗೆ ಹಬ್ಬ ! ನನ್ನ ಗೆಳೆಯ ಮಂಜು ( ಮಿಸ್ಟ್ ಅಲ್ಲ ) ಮುನಾರಿನ ಮಂಜಿನ ನಡುವೆ ತೆಗೆದ ಚಿತ್ರಗಳು ಆಗಾಗ ಮುನಾರ್ ನೆನಪನ್ನು ಹಸಿರಾಗಿಸಿ , ಮನಸನ್ನು ಹಸಿ ಮಾಡುತ್ತಲೇ ಇರುತ್ತವೆ .
೧೯೯೮ರಲ್ಲಿ ಅಧಿಕಾರಕ್ಕೆ ಬಂದ ನಂತರ ಸಮ್ಮಿಶ್ರ ಸರ್ಕಾರದ ನಿಯಮಗಳಿಗೆ ಕಟ್ಟುಬಿದ್ದು ತನ್ನ ಪ್ರಮುಖ ಧ್ಯೇಯಗಳನ್ನು ಬದಿಗಿರಿಸಿದ್ದ ಭಾಜಪಕ್ಕೆ ನವ ಉದಾರವಾದಿ ನೀತಿಗಳೇ ಶ್ರೀರಕ್ಷೆ ಎಂದು ಭಾವಿಸಲಾಗಿತ್ತು . ಆದರೆ ಪರೋಕ್ಷವಾಗಿ ಈ ಅವಧಿಯಲ್ಲಿ ದೇಶದ ಮೂಲೆ ಮೂಲೆಗಳಲ್ಲೂ ಮತೀಯವಾದಕ್ಕೆ ಹೆಚ್ಚು ಮನ್ನಣೆ ದೊರೆತಿದ್ದು ಅಚ್ಚರಿಯ ಅಂಶವೇನಲ್ಲ . ಆಡಳಿತ ಯಂತ್ರದಲ್ಲಿ ಸಂಘಪರಿವಾರದ ಹಿಂಬಾಲಕರನ್ನು ವ್ಯವಸ್ಥಿತವಾಗಿ ಸೇರಿಸಿದ್ದು ೨೦೦೨ರ ಗುಜರಾತ್ ಗಲಭೆಗಳಲ್ಲಿ ಸ್ಪಷ್ಟವಾಗಿತ್ತು . ಹಿಂದುತ್ವದ ಅಲೆಯನ್ನೇರಿ , ನವ ಉದಾರವಾದಿ ನೀತಿಯನ್ನು ಅನುಸರಿಸಿ , ಭಾರತೀಯ ಸಾಮಾಜಿಕ ಹಾಗು ಆರ್ಥಿಕ ವ್ಯವಸ್ಥೆಯನ್ನು ಆಕ್ರಮಿಸಿಕೊಳ್ಳುವ ಭಾಜಪದ ಚಾಣಕ್ಯ ನೀತಿಗೆ ೨೦೦೪ರ ಚುನಾವಣೆಗಳು ನಿರ್ಣಾಯಕವಾಗಿದ್ದವು . ಅಟಲ್ ಬಿಹಾರಿ ವಾಜಪೇಯಿಯವರ ನಾಯಕತ್ವ ಹಿಂದುತ್ವ ರಾಜಕಾರಣಕ್ಕೆ ಮಂಜಿನ ಪರದೆಯಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಭ್ರಮೆ ನುಚ್ಚು ನೂರಾಗಿತ್ತು . ವಾಜಪೇಯಿ ಸರ್ಕಾರದ ನವ ಉದಾರವಾದಿ ನೀತಿಗಳು ಮತ್ತು ಸಂಘಪರಿವಾರದ ಕೋಮುವಾದಿ ರಾಜಕೀಯ ಭಾಜಪಕ್ಕೆ ಮುಳುವಾಗಿತ್ತು .
ಹಾಗೆಂದು ಉತ್ತರ ಪ್ರದೇಶದ ಮುಸ್ಲಿಂ ಸಂಘಟನೆ ' ಜಮಾತೆ ಉಲೆಮಾ ಇ ಹಿಂದ್ ' ನವೆಂಬರ್ ೩ರಂದು ನಿರ್ಣಯವೊಂದನ್ನು ಮಂಡಿಸಿ , ಅಂಗೀಕರಿಸಿದೆ ! ಆ ಮೂಲಕ ತನ್ನ ವಿದ್ರೋಹಿ ಮನಸ್ಥಿತಿಯನ್ನು ಮತ್ತೆ ಹೊರಹಾಕಿದೆ . ಇದಕ್ಕೆ ಎಸ್ . ಕ್ಯು . ಆರ್ . ಇಲ್ಯಾಸಿ , ಝಫರ್ಯಾಬ್ ಜಿಲಾನಿ ಮುಂತಾದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯರೂ ಕೂಡ ಸಹಮತ ವ್ಯಕ್ತಪಡಿಸಿರುವುದನ್ನು ನೋಡಿದರಂತೂ ಮನಸಿಗೆ ಕಸಿವಿಸಿಯಾಗುತ್ತದೆ . ಈ ದೇಶದಲ್ಲಿ ಜೈನರಿದ್ದಾರೆ , ಬೌದ್ಧರಿದ್ದಾರೆ , ಕ್ರೈಸ್ತರಿದ್ದಾರೆ . ಇವರ್‍ಯಾರಿಗೂ ಚುಚ್ಚದ ವಂದೇ ಮಾತರಂ ಮುಸ್ಲಿಮರಿಗೇ ಏಕೆ ನೋವು ತರುತ್ತದೆ ? ತಾಯಿ ಭಾರತಿಯನ್ನು ಭಜಿಸುವ ಗೀತೆಯನ್ನೇ ಹಾಡದವರು ದೇಶಕ್ಕಾಗಿ ಪ್ರಾಣ ತೆತ್ತಾರೆ ? ಇದೆಂತಹ ಕೃತಘ್ನ ಮನಃಸ್ಥಿತಿ ? ಮಾತೃಭೂಮಿಗೆ ನಮಿಸುವುದಿಲ್ಲ ಎಂದರೆ ಇನ್ನಾರಿಗೆ ನಮಸ್ಕರಿಸುತ್ತಾರೆ ? ಭಾರತ ಮಾತೆಗೆ ನಮಿಸಲು ಧರ್ಮವೇಕೆ ಅಡ್ಡ ಬರಬೇಕು ? ಅನ್ನ , ನೆಲೆ ನೀಡಿದ ಭೂಮಿಗೇ ನಮಸ್ಕರಿಸದವರು ಒಂದು ವೇಳೆ ಪಾಕಿಸ್ತಾನ ಅಥವಾ ಬಾಂಗ್ಲಾದೇಶವೇನಾದರೂ ನಮ್ಮ ಮೇಲೆ ದಾಳಿ ಮಾಡಿದರೆ ದೇಶರಕ್ಷಣೆಗೆ ಮುಂದಾಗುತ್ತಾರೆ ಎಂದು ಹೇಗೆತಾನೇ ನಿರೀಕ್ಷಿಸುವುದು ? ದೇಶಕ್ಕಿಂತ ಧರ್ಮವೇ ಮೇಲು ಎಂದಾದರೆ ಸ್ವಧರ್ಮೀಯರಾದ ಪಾಕಿಸ್ತಾನಿಯರ ಜತೆ ಕೈಜೋಡಿಸುವುದಿಲ್ಲ ಎಂಬುದಕ್ಕೆ ಯಾವ ಗ್ಯಾರಂಟಿ ? ಎಲ್ಲ ಮುಸ್ಲಿಮರೂ ಜಮಾತೆ ಉಲೇಮಾ ಮಾತು ಕೇಳುತ್ತಾರೆ , ದೇಶಕ್ಕೆ ವಂದಿಸಲು ನಕಾರ ವ್ಯಕ್ತಪಡಿಸುತ್ತಾರೆ ಅಂತ ಹೇಳುತ್ತಿಲ್ಲ . ಮುಸ್ಲಿಂ ಸಮುದಾಯದಲ್ಲಿ ಸಾಕಷ್ಟು ದೇಶಪ್ರೇಮಿಗಳಿದ್ದಾರೆ , ಈ ದೇಶದ ಅಭಿವೃದ್ಧಿಯಲ್ಲಿ ಮುಸ್ಲಿಮರ ಕೊಡುಗೆಯೂ ಸಾಕಷ್ಟಿದೆ . ಆದರೆ ವಂದೇ ಮಾತರಂ ಅನ್ನೇ ವಿವಾದದ ವಸ್ತುವನ್ನಾಗಿಸಿಕೊಂಡು , ಆ ಮೂಲಕ ಧರ್ಮದ ಆಧಾರದ ಮೇಲೆ ದೇಶ ಒಡೆದು ಪ್ರತ್ಯೇಕ ರಾಷ್ಟ್ರವನ್ನು ಪಡೆದುಕೊಂಡ ನಂತರವೂ ಜಮಾತೆ ಉಲೇಮಾದಂತಹ ಸಂಘಟನೆಗಳು ಸ್ವಾತಂತ್ರ್ಯ ಪೂರ್ವದಲ್ಲಿದ್ದ ವಿದ್ರೋಹಿ ಮನಸ್ಥಿತಿಯನ್ನು ಏಕೆ ಇಂದಿಗೂ ಮುಂದುವರಿಸಿಕೊಂಡು ಬರುತ್ತಿವೆ ? ಏಕೆ ಧರ್ಮವನ್ನು ಬದಿಗಿಟ್ಟು ನಾವೆಲ್ಲರೂ ಒಂದೇ ಎಂಬಂತೆ ವರ್ತಿಸುವುದಿಲ್ಲ ? ಏಕೆ ರಾಷ್ಟ್ರೀಯ ಮುಖ್ಯವಾಹಿನಿಯಿಂದ ದೂರ ಹಾಗೂ ಪ್ರತ್ಯೇಕವಾಗಿರಲು ಪ್ರಯತ್ನಿಸುತ್ತಿವೆ ? ಮುಸ್ಲಿಮರೇ ಆದ ಖ್ಯಾತ ಸಂಗೀತಗಾರ ಎ . ಆರ್ . ರೆಹಮಾನ್‌ಗೆ , ಖ್ಯಾತ ಸಿನಿಮಾ ಸಾಹಿತ್ಯ ರಚನೆಕಾರ ಜಾವೆದ್ ಅಖ್ತರ್‌ಗೆ ಹಾಡಲು ಅವಮಾನವೆನಿಸದ ವಂದೇ ಮಾತರಂ ಉಳಿದ ಮುಸ್ಲಿಮರಿಗೇಕೆ ಅದೇ ದೊಡ್ಡ ಅಡಚಣೆಯಾಗುತ್ತದೆ ? ಅಷ್ಟಕ್ಕೂ ವಂದೇ ಮಾತರಂನಲ್ಲಿ ಮುಸ್ಲಿಮರಿಗೆ ನೋವುಂಟಾಗುವಂಥದ್ದೇನಿದೆ ?
ಕನ್ನಡದ ಪ್ರಸಿದ್ಧ ಪುಣ್ಯಕೋಟಿ ಕಥೆಯ ಸಾರಾಂಶ ವಾದ ಕೊಟ್ಟ ಮಾತಿಗೆ ತಪ್ಪಲಾರೆನು ಮೆಚ್ಚನಾ ಆ ಜಗದೀಶನು ಎಂಬ ಸದ್ಬುದ್ದಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಬರಲಿ ಸದಾ ಚುನಾವಣೆ ಹತ್ತಿರ ಬಂದಂತೆ ತಮ್ಮ ರಾಜಕೀಯ ಲಾಭಕ್ಕಾಗಿ ಆಶ್ವಾಸನೆಗಳ ಸುರಿಮಳೆ . ತಾವು ಗೆದ್ದು ಆಡಳಿತಕ್ಕೆ ಬಂದ ಮೇಲೆ ಪರಿಣಾಮ ಶೂನ್ಯ . ಇದನ್ನು ತಿಳಿದ ಅನುಭವಿ ನಾಗರಿಕ ವೋಟನ್ನು ಸರಿಯಾದ ಉಮೆದ್ವಾರನಿಗೆ ಹಾಕುವನು . ದಯೆಯೇ ಧರ್ಮದ ಮೂಲ ಆಶೆಯೇ ದುಃಖದ ಮೂಲವೈಯ್ಯ ದೇಶದ ಸುರಕ್ಷತೆ ಗಾಗಿ ತಮ್ಮ ಪ್ರಾಣವನ್ನೇ ಕೊಟ್ಟ ಯೋಧರ ಸಲುವಾಗಿ ಕೊಟ್ಟ ಮಾತನ್ನು ಉಳಿಸಿ ಅವರ ಕುಟುಂಬ ಕ್ಕೆ ಸಹಾಯ ಮಾಡಬೇಕು . ಮಾತನ್ನು ಉಳಿಸಿಕೊಂಡರೆ ಇವರು ಪೂರ್ತಿ ೫ ವರ್ಷ ಆಡಳಿತ ಮಾಡಿ ಜನರ ಮನಸ್ಸನ್ನು ಗೆಲ್ಲುವುದರಲಿ ನಿಸ್ಸಂದೇಹ . ಈಗ ಚುನಾವಣೆಯ ಸಮಯ ಇದನ್ನು . ಪ್ರತಿಯೊಬ್ಬ ಉಮೆದ್ವಾರನು ಗಮನಿಸಿ ಪ್ರಾಚಾರ ಮಾಡಲಿ . ಸರ್ವೇ ಜನ ; ಸುಕಿನೋ ಭವಂತು : ನಾಗೇಶ್ ಪೈ ಜೈ ಕರ್ನಾಟಕ ನಮ್ಮ ಸುಂದರ ಮೈಸೂರು ಆರ್ಕುಟ್ ಸಮುದಾಯ [ ಕಮ್ಯುನಿಟಿ ] ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ಆತ್ಮೀಯ ಓದುಗ ಮಿತ್ರರೇ , ನಮ್ಮ ಸಾಫ್ಟ್ವೇರ್ ಸಹವರ್ತಿ ಗೆಳೆಯನೊಬ್ಬ ಬದುಕಿನ ಬಹು ದೊಡ್ಡ ಹೋರಾಟದಲ್ಲಿ ನಮ್ಮೆಲ್ಲರ ಆರ್ಥಿಕ ಸಹಾಯ ಅಪೇಕ್ಷಿಸುತ್ತಿದ್ದಾನೆ . ನನ್ನ ಕೈಲಾದ ಕರ್ತವ್ಯ ಮಾಡಿ , ಗೆಳೆಯನ ನೆಮ್ಮದಿಯ ನಾಳೆಗೋಸ್ಕರ ನಿಮ್ಮೆಲ್ಲರ ಸಹಾಯ ಕೋರುತ್ತಿದ್ದೇನೆ . ಅಂತರ್ಜಾಲದ ಕೊಂಡಿ - " http : / / helpchandru . com / " .
ಈಗ ನೀವು ನಮ್ಮ ಮನೆಗೆ ಬಂದು ನಮ್ಮ ಸೊಸೆಯಂದಿರ ಆರ್ಭಟ ನೋಡಬೇಕು . ಅವರ ಅತ್ತೆಯನ್ನೂ ಮೀರಿಸಿ ನಮ್ಮ ಸಂಪ್ರದಾಯ ಆಚಾರ ವಿಚಾರಗಳ ಸಾಂಗತ್ಯ ಪೂರೈಸುತ್ತಾ ನನ್ನ ತಲೆ ಚಿಟ್ಟು ಹಿಡಿಸುತ್ತಾ ಇದ್ದಾರೆ ! ಅಮ್ಮಾ … ನನಗೆ ಇದರಲ್ಲೆಲ್ಲಾ ಇಂಟರಿಷ್ಟಿಲ್ಲಾಮ್ಮಾ ಅಂದರೂ ಅವರು ಕೇಳುತ್ತಾರೆಯೇ ? ಕಳೆದ ಗಣೇಶ ಚತುರ್ಥಿಯಲ್ಲಿ ಹಣೆಯ ಮೇಲೆ ನಾಮ ಇದ್ದ ಗಣೇಶನನ್ನು ತಂದಾಗ ನಾಕೂ ಜನ ಸೊಸೆಯರು ಸೇರಿ ನನ್ನ ಗ್ರಹಚಾರ ಬಿಡಿಸಿ ಮತ್ತೆ ಮಾರ್ಕೆಟ್ಟಿಗೆ ಗದುಮಿ ಹಣೆಯ ಮೇಲೆ ವಿಭೂತಿ ಪಟ್ಟೆ ಗುರುತಿದ್ದ ಗಣೇಶನನ್ನು ತರಿಸಿಕೊಂಡು ಕೃತಕೃತ್ಯರಾದರು !
ಈ ಮಾತುಗಳನ್ನು ಕೇಳಿದ ನನಗೆ ಹೊಳೆದಿದ್ದಿಷ್ಟು . ಮೇ ೧೪ ವಲಸೆ ಪಕ್ಷಿಗಳ ಅಂತಾರಾಷ್ಟ್ರೀಯ ದಿನಾಚರಣೆ . ಧಾರವಾಡದ ನವಿಲೂರು ಹಾಗೂ ಕೆಲಗೇರಿ ಕೆರೆಗಳಿಗೆ ಕಳೆದ ಮೇ ಹಾಗೂ ಜೂನ್ ತಿಂಗಳಲ್ಲಿ ಬಣ್ಣದ ಕೊಕ್ಕರೆಗಳು ( ಪೇಂಟೆಡ್ ಸ್ಟಾರ್ಕ್ ) ಬಂದಿಳಿದಿದ್ದವು . ಸುಮಾರು ೧೦ ಜೋಡಿಗಳಿದ್ದವು . ಪುಟ್ಟ ಹಾಗೂ ದೊಡ್ಡ ನೀರ್ಕಾಗೆಗಳು ( Little and Large Cormorant ) , ಬಿಳಿ ಐಬೀಸ್ ( White Ibis ) , ತೆರೆದ ಕೊಕ್ಕಿನ ಕೊಕ್ಕರೆ ( Open Billed Stork ) ಚಮಚೆ ಕೊಕ್ಕು ( Spoon Bill ) , ಕೊಳದ ಬಕ ( Pond Heron ) , ರಾತ್ರಿ ಬಕ ( Night Heron ) , ಹಾವಕ್ಕಿ ( Darter ) ಹಾಗೂ ಸಣ್ಣ , ಮಧ್ಯಮ ಮತ್ತು ದೊಡ್ಡ ಬೆಳ್ಳಕ್ಕಿಗಳು ( Little , Medium and Large Egrets ) ಆದರೆ ಈ ಬಾರಿ ನಮ್ಮ ಭೌತಿಕ ಅಭಿವೃದ್ಧಿ ಕೆಲಸಗಳು ಇಲ್ಲಿ ಭರದಲ್ಲಿ ಸಾಗಿದ್ದರಿಂದ ಅವರು ಯಾರೂ ಇತ್ತ ತಲೆ ಹಾಕಿಲ್ಲ !
ಡ್ಯಾನಿಶ್ ಡಿಫೆನ್ಸ್ ಸಧ್ಯಕ್ಕೆ ( 9 ಏಪ್ರಿಲ್ 2008ಕ್ಕೆ ) ಸುಮಾರು 1 , 400 ಜನ ಸಿಬ್ಬಂದಿಯನ್ನು ಅಂತರರಾಷ್ಟ್ರೀಯ ಮಿಶನ್‌ಗಳಲ್ಲಿ ಹೊಂದಿದೆ . [ ೯೯ ] ಇದರಲ್ಲಿ NATO SNMCMG1ಗೆ ಖಾಯಂ ಆಗಿ ಕೊಟ್ಟ ನೆರವನ್ನು ಹೊರತುಪಡಿಸಿದೆ .
ಬೈಜಿಕ ವಿದಳನ ಕ್ರಿಯೆಯನ್ನು ನಿಯಂತ್ರಿಸುವ ಸಂಕೀರ್ಣ ವ್ಯವಸ್ಥೆ ಸ್ಥಾವರದಲ್ಲಿರುತ್ತದೆ . ಸರಣಿ ವಿದಳನ ಕ್ರಿಯೆಯನ್ನು ಪ್ರೇರಿಸಿ , ಕ್ರಿಯೆಯನ್ನು ಯಶಸ್ವಿಯಾಗಿ ನಿಯಂತ್ರಿಸುವ ಮೂಲಕ ಪರಮಾಣು ಸ್ಥಾವರವೊಂದು ಆರಂಭವಾದದ್ದು ೧೯೪೨ರಲ್ಲಿ . ಅದರ ನೇತೃತ್ವವನ್ನು ವಹಿಸಿದವರು ನೊಬೆಲ್ ಪ್ರಶಸ್ತಿ ಪುರಸ್ಕೃತ ಭೌತ ವಿಜ್ಞಾನಿ ಎನ್ರಿಕೋ ಫರ್ಮಿ . ಫರ್ಮಿ ನಿರ್ಮಿಸಿದ ಸ್ಥಾವರ ತುಂಬ ಚಿಕ್ಕದು - ಬ್ಯಾಡ್ಮಿಂಟನ್ ಅಂಗಣದಷ್ಟೇ ಇತ್ತು . ೧೯೪೫ , ಜುಲೈ ೧೬ರಂದು ಅಮೇರಿಕ ಮತ್ತು ಮಿತ್ರರಾಷ್ಟ್ರಗಳು ಪ್ರಪ್ರಥಮ ಪರಮಾಣು ಬಾಂಬಿನ ಯಶಸ್ವೀ ಸ್ಫೋಟದ ಪರೀಕ್ಷೆ ನಡೆಸಿತು . ೧೯೪೫ ಅಗೋಸ್ಟ್ ೬ ಮತ್ತು ೯ರಂದು ಅನುಕ್ರಮವಾಗಿ ಹಿರೋಶಿಮಾ ಮತ್ತು ನಾಗಸಾಕಿಗಳ ಮೇಲೆ ಪರಮಾಣು ಬಾಂಬಿನ ತಾಡನೆಯೊಂದಿಗೆ ಪರಮಾಣು ಗರ್ಭದಲ್ಲಿರುವ ದೈತ್ಯ ಶಕ್ತಿಯ ಅನಾವರಣವಾಯಿತು . ಹೀಗಿರುತ್ತದೆ ಸಾಮಾನ್ಯವಾಗಿ ರಿಯಾಕ್ಟರುಗಳಲ್ಲಿ ಯುರೇನಿಯಮ್ , ಪ್ಲುಟೋನಿಯಮ್ ಅಥವಾ ಇವೆರಡರ ಮಿಶ್ರಣವನ್ನು ಬೈಜಿಕ ವಿದಳನ ಇಂಧನವಾಗಿ ಬಳಸುತ್ತಾರೆ . ನೈಸರ್ಗಿಕವಾಗಿ ದೊರೆವ ಯುರೇನಿಯಮ್ಮಿನಲ್ಲಿ ಯುರೇನಿಯಮ್ - ೨೩೩ , ಯುರೇನಿಯಮ್ - ೨೩೫ ಮತ್ತು ಯುರೇನಿಯಮ್ - ೨೩೮ ಎಂಬ ಮೂರು ಬಗೆಯ ಐಸೋಟೋಪುಗಳಿವೆ .
ರೂಢಿಯಲ್ಲಿ , ಧ್ರುವೀಕರಣದಲ್ಲಿ ಕೆಲವು ಬೆಳಕು ಕಾಣೆಯಾಗುತ್ತವೆ ಮತ್ತು ಅಧ್ರುವೀಕೃತ ಬೆಳಕಿನ ವಾಸ್ತವಿಕ ಪ್ರಸರಣವು ಇದಕ್ಕಿ೦ತ ಸ್ವಲ್ಪದರಲ್ಲಿ ಕಮ್ಮಿಯಾಗಿರುತ್ತದೆ , ಧ್ರುವೀಕಾರಕ - ವಿಧದ ಧ್ರುವೀಕರಣಗಳಲ್ಲಿ ಸುಮಾರಾಗಿ 38 % ಇರುತ್ತದೆ ಆದರೆ ಕೆಲವು ಜೋಡಿವಕ್ರೀಕರಣ ವರ್ಣಪಲ್ಲಟ ಕೊಳವೆಯಲ್ಲಿ ಗಣನೀಯವಾಗಿ ಹೆಚ್ಚಾ ( > 49 . 9 % ) ಗಿರುತ್ತವೆ . [ ೪೦ ]
ಅದಾದ ಕೆಲವು ದಿನಗಳ ನಂತರ ಯಾರದೊ ಮೂಲಕ ತಿಳಿಯಿತು , " ಮರಿನಾ ಬೀಚ್ ಇರುವುದು ಪೂರ್ವ ತೀರದಲ್ಲಿ , ಅಲ್ಲಿ ಸೂರ್ಯೋದಯವಾಗುತ್ತೆ ಹೊರತು ಸೂರ್ಯಸ್ತಮವಲ್ಲವೆಂದು . . . " . ಮತ್ತಷ್ಟು ಓದಿ
< < ಇಷ್ಟಕ್ಕೂ ವಿಷಯಗಳನ್ನು ತಿಳಿಯುವುದರಿಂದ ಆಗುವ ಪ್ರಯೋಜನವೇನು ? ನನಗೆ ಗೊತ್ತಿರೋ ತರ ಏನು ಇಲ್ಲ . ಆದರೆ ರ್‍ಊಪಕ್ಕ ಅವರು ಹೇಳಿರುವತರ ನೀವು ಜನಗಳ ಜೊತೆ ಇದ್ದಾಗ ಅರ್ಥಗರ್ಭಿತವಾಗಿ ಮಾತಾದಲು ಸಹಯವಾಗುತ್ತದೆ .
ಈ ಸಂಸ್ಥೆಯ ಸ್ಥಾಪನೆಯಿಂದ ವಿಶ್ವದ ಹತ್ತಿತಳಿಗಳಲ್ಲಿ ಸುಧಾರಣೆ ಮತ್ತು ಗಮನಾರ್ಹ ಪ್ರಗತಿಯುಂಟಾಯಿತು . ಈ ಸಂಘವನ್ನು ಸ್ಥಾಪಿಸಿದವರು ಸರ್ ಆಲ್ಫ್ರೆಡ್ ಜೋನ್ಸ್ ಮತ್ತು ಜೆ . ಆರ್ಥರ್ ಹಟನ್ . ಇದರ ಜೊತೆಯ " ಶರ್ಲಿ ಇನ್ಸ್ಟಿಟ್ಯೂಟ್ ಈಗ ( BTTG ) , ಭಾರತವೂ ಸೇರಿದಂತೆ , ಪ್ರಪಂಚದ ಹತ್ತಿ ಸುಧಾರಿಸುವ ಕೇಂದ್ರಗಳಿಗೆಲ್ಲಾ ತಕನಿಕಿ ಮತ್ತು ವೈಜ್ಞಾನಿಕ ಸಲಹೆ , ಮತ್ತು ತಾಂತ್ರಿಕ ಸಹಾಯ ಒದಗಿಸಿತು . ಹತ್ತಿ ಗುಣವಿಶೇಷಣೆ ಮತ್ತು ಅದರ ಎಲ್ಲಾ ಮಾಹಿತಿಗಳಿಗೂ ವಿಶ್ವದ ಹತ್ತಿ ಸಂಶೋಧಕರು ಉತ್ಸುಕತೆಯಿಂದ ಇಂದಿಗೂ ಎದುರುನೋಡುತ್ತಾರೆ . ಬಿಸಿಜಿಯ ಕಾರ್ಯವ್ಯಾಪ್ತಿ , ಯುಗಾಂಡ , ಕಿನ್ಯಾ , ದಕ್ಷಿಣ ಆಫ್ರಿಕ , ಟ್ಯಾಂಗನಿಕ , ರೊಢೀಶಿಯ , ಸೂಡಾನ್ , ಈಜಿಪ್ಟ್ ಮತ್ತು ಭಾರತಗಳಲ್ಲಾಯಿತು .
ಭಯೋತ್ಪಾದಕರ ನೆರಳು ಈಗ ಪಾಕ್ ನೆಲದಲ್ಲಿ ಕಂಡು ಬಂದಿದೆ . ನಿನ್ನೆ ಬೆಳಿಗ್ಗೆ ನಡೆದ ಉಗ್ರರ ಸಿಂಹಳಿಯರ ಕ್ರಿಕೆಟ್ ತಂಡದ ಸದಸ್ಯರ ಮೇಲೆ ನಡೆದ ಧಾಳಿ ಜಾಗತಿಕ ಶಾಂತಿ ಕೆದಡಿದೆ . ವಿಶ್ವದ ಎಲ್ಲಾ ರಾಷ್ಟ್ರ ಗಳು [ ಭಾರತವೂ ಸೇರಿ ] ಇದನ್ನು ಖಂಡಿಸಿವೆ . ಮತ್ತು ಭಯೋತ್ಪಾದಕರ ಸಂಪೂರ್ಣ ನಾಶಕ್ಕೆ ಶಿಗ್ರ ಕ್ರಮ ಕೈ ಗೊಳ್ಳುವಂತೆ ವಿಶ್ವ ಸಮುದಾಯ ವನ್ನು ಮನವಿ ಮಾಡಿದೆ . ಈಗ ಪುನಃ ಪಾಕ್ ಸರಕಾರವೂ ಭಾರತದ ಮೇಲೆ ಗೂಭೆ ಕೂರಿಸುವ ಪ್ರಯತ್ನ ಮಾಡಿದೆ . ಭಯೋತ್ಪಾದನೆ ಅಳಿಸಿ ವಿಶ್ವ ವನ್ನು ಉಳಿಸಿ ಅಭಿಯಾನ ಘೋಷಣೆ ಮಾಡಿದ ನಮ್ಮ ಭಾರತ ದೇಶವು ವಿಶ್ವ ಶಾಂತಿ ಗಾಗಿ ಸ್ವಾಮಿ ವಿವೇಕಾನಂದ , ಮಹಾತ್ಮ ಗಾಂಧೀಜಿ ಯವರ ಸಿದ್ಧಾಂತ ವನ್ನು ಇಡೀ ಜಗತ್ತಿಗೆ ಸಾರುತ್ತಲೇ ಬಂದಿರುವಾಗ ಪಾಕ್ ತನ್ನ ಹಳೇ ಚಾಳಿ ಬಿಡದೇ ಭಯೋತ್ಪಾದನೆ ಯನ್ನು ಪ್ರಚೋದನೆ ನೀಡುವುದು ದುರದ್ರಸ್ಟಕರ ಸಂಗತಿ . ಇದನ್ನು ವಿಶ್ವದ ಎಲ್ಲಾ ರಾಷ್ಟ್ರಗಳು ಮನವರಿಕೆ ಮಾಡಿ ಕೊಂಡಿವೆ . ವಿಶ್ವ ದಲ್ಲಿ ಅತೀ ಹೆಚ್ಚು ಮಾನ್ಯತೆ ಹೊಂದೀರುವ ಟೀಂ ಇಂಡಿಯಾ ದ ರಕ್ಷಣೆ ನಮ್ಮೆಲರ ಅಧ್ಯ ಕರ್ತವ್ಯ . ನಮ್ಮ ಕೇಂದ್ರ ಸರಕಾರ ಮತ್ತು ಕ್ರಿಕೆಟ್ ಮಂಡಳಿಗಳು ಇದರ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ತೆಗೆದು ಕೊಳ್ಳ ಬೇಕೆಂದು ಪ್ರಾರ್ಥಿಸುವ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು . ನಾಗೇಶ್ ಪೈ . ಜೈ ಹಿಂದ್ .
ಮಾಧ್ಯಮಕ್ಕೆ ಹೇಳಿಕೆ ಎಂದು ನೀಡುವಾಗ ಜಗದೀಶ - ಜೊತೆಗಿದ್ದವರು - ಪೊಲೀಸರು ಆಕೆಯನ್ನು ಬಂಧಿಸಿಟ್ಟಿದ್ದರು - ಆಕೆಯನ್ನು ದೈಹಿಕವಾಗಿ ಬಳಸಿಕೊಂಡರು - ಅತ್ಯಾಚಾರದಿಂದಾಗಿ ಹುಟ್ಟಿದ ಮಗು - ಕಡೆಗೆ ಆಕೆಯನ್ನು ಗುಂಡಿಟ್ಟು ಕೊಂದು ಕಾಡಿನಲ್ಲಿ ಬಿಸಾಕಿದರು ಎನ್ನುವನು . ಪ್ರತೀಕಾರ ತೀರಿಸಿಕೊಳ್ಳುತ್ತದೆ ತಮ್ಮ ತಂಡ ಎನ್ನುವರು
ಸರ್ಪಮಲೆ ಮಾವ - ಅತ್ತೆಗೆ ತುರ್ತು ಇದ್ದು ಹೇಳಿ ಈ ಕಾರ್ಯಕ್ರಮ ಬಿಟ್ಟಿಕ್ಕಿ ಹೋಪದು ಹೇಂಗೆ ಹೇಳ್ತ ಚಿಂತೆ
ಪ್ರಕಾಶಣ್ಣ ನನ್ ಹತ್ರಾನೂ ರಾಶಿ ಕಿವಿಯೋಲೆ ಇದ್ದು . ಯಾವಾಗ ಫೋಟೋ ತೆಗೀತೆ ? ಎಲ್ಲ ಒಂದಕಿಂತ ಒಂದು ಚಂದ ಫೋಟೋ ಹಾಗೂ ಸಾಲುಗಳು : )
ನೂಪುರ ದ ಮೂರನೇ ಸಂಪುಟದ ಆರನೇ ಸಂಚಿಕೆ - ಹೇಮಂತ ಋತು ಗಾನ ( ನವೆಂಬರ್ - ಡಿಸೆಂಬರ್ ೨೦೦೯ ತಿಂಗಳಿನ ) ಡೌನ್ ಲೋಡ್ ಮಾಡಲುಇಲ್ಲಿ ಕ್ಲಿಕ್ಕಿಸಿ . inside page
ಸರಕಾರ ಚುನಾವಣೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುತ್ತಿದ್ದು ಮುಂದಿನ 3 ವರ್ಷಗಳ ಅವಧಿಯಲ್ಲಿ ರಾಜ್ಯವನ್ನು ಅಭಿವೃದ್ದಿಪಡಿಸಿ ಮಾದರಿ ರಾಜ್ಯವನ್ನಾಗಿ ಮಾಡುವ ಗುರಿ ಈಡೇರಿಸುವದಾಗಿ ನುಡಿದ ಯಡಿಯೂರಪ್ಪ ಅಭಿವೃದ್ದಿ ಖಾರ್ಯಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕೆಂದರು . ಮುಂದಿನ ಅವಧಿಯಲ್ಲಿ ಜನರ ವಿಶ್ವಾಸ ಮೂಡಿಸಲು ಆಡಳಿತ ಸುಧಾರಣೆ , ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ರಾಜ್ಯದಲ್ಲಿ ನೆಮ್ಮದಿ ವಾತಾವರಣ ಮೂಡಿಸುವದಾಗಿ ಹೇಳಿದರು .
ಠಾಣೆಯಲ್ಲಿ ಸೌಲಭ್ಯ ಇಲ್ಲದಿದ್ದರೂ ಪರವಾಗಿಲ್ಲ ಅಧಿಕಾರಿಗಳ ಚೇಂಬರ್ ಜಗಜಗಿಸಬೇಕು ಎಂಬುದು ಪೊಲೀಸ್ ಇಲಾಖೆಯ ಅಲಿಖಿತ ನಿಯಮ . ಅಧಿಕಾರಿಗಳು ಬದಲಾದಂತೆ ಅವರ ಚೇಂಬರ್‌ನ ಸ್ಥಿತಿ - ಗತಿ ಕೂಡ ಬದಲಾಗುತ್ತದೆ . ಒಬ್ಬ ಇನ್‌ಸ್ಪೆಕ್ಟರ್ ಅವರು ಆಸೆಪಟ್ಟ ಠಾಣೆಗೆ ವರ್ಗವಾಗಿ ಬರುತ್ತಿದ್ದಂತೆ ಅಲ್ಲಿರುವ ಟೇಬಲ್ , ಕುರ್ಚಿ ಯಾವುದೂ ಸರಿಯಿಲ್ಲ ಅನ್ನಿಸಿತು . ಸರಿ ಅವರ ಅಂತಸ್ತಿಗೆ ತಕ್ಕಂತೆ ಚೇಂಬರ್‌ನಲ್ಲಿರುವ ಫರ್ನೀಚರ್ ಬದಲಾಯಿಸಲು ಮನಸು ಮಾಡಿದರು . ಅವರ ಗೆಳೆಯರ ಸಹಾಯದಿಂದ ಚೇಂಬರ್‌ಗೊಂದು ಹೊಸ ಪೊಗದಸ್ತಾದ ಕುರ್ಚಿ , ಟೇಬಲ್ , ಅದಕ್ಕೊಂದು ಗ್ಲಾಸು ಎಲ್ಲ ಸಿದ್ಧವಾಯಿತು . ಅದರ ಒಟ್ಟೂ ವೆಚ್ಚ ೨೫ - ೩೦ ಸಾವಿರ ರೂ . ಅಂತ ಕೇಳಿದರೆ ನಮಗೆ ಅಚ್ಚರಿಯಾಗುತ್ತದೆ . ಹೀಗೆ ಇನ್‌ಸ್ಪೆಕ್ಟರ್ ಅವರು ಹೊಸ ಕುರ್ಚಿಯಲ್ಲಿ ಹಾಯಾಗಿ ಕಳಿತು ಖುಶಿಯಿಂದ ಕಾಲ ಕಳೆಯುತ್ತಿರಬೇಕಾದರೆ ಒಂದು ದಿನ ಐಜಿ ಎಚ್ . ಎನ್ . ಸತ್ಯನಾರಾಯಣ ರಾವ್ ಅವರು ಇನ್‌ಸ್ಪೆಕ್ಷನ್‌ಗೆ ಬರುತ್ತಾರೆಂದಾಯಿತು . ಇನ್‌ಸ್ಪೆಕ್ಟರ್‌ಗೆ ಟೆನ್ಶನ್ ಶುರುವಾಯಿತು . ಸತ್ಯನಾರಾಯಣ ರಾವ್ ಅವರಿಗೆ ಕೆಲಸದ ಬಗ್ಗೆ ಆಸಕ್ತಿ ಇರುವವರ ಬಗ್ಗೆ ಪ್ರೀತಿ ಇರುತ್ತೆ ಹೊರತು , ಚೇಂಬರ್ ಪಾಶ್ ಇರಿಸಿಕೊಂಡವರ ಬಗ್ಗೆ ಅಲ್ಲ ಎಂಬುದು ಆ ಇನ್‌ಸ್ಪೆಕ್ಟರ್‌ಗೂ ಗೊತ್ತು . ಈಗೇನು ಮಾಡುವುದು ? ಯೋಚನೆ ಮಾಡಿದ ಇನ್‌ಸ್ಪೆಕ್ಟರ್ , ಐಜಿ ಇನ್‌ಸ್ಪೆಕ್ಷನ್‌ಗೆ ಆಗಮಿಸುವ ಒಂದು ದಿನ ಮೊದಲೇ ತಮ್ಮ ಚೇಂಬರ್‌ನಿಂದ ಹೊಸ ಫರ್ನೀಚರ್‌ಗಳೆನ್ನೆಲ್ಲ ಎತ್ತಂಗಡಿ ಮಾಡಿದರು . ಹಳೆ ಫರ್ನೀಚರ್‌ಗಳು ಮತ್ತೆ ಚೇಂಬರ್‌ನಲ್ಲಿ ಪ್ರತಿಷ್ಠಾಪನೆಗೊಂಡವು ! ಹಳೇ ಫನೀಚರ್ ನೋಡಿದ ಐಜಿ , ಪಾಪ ಇನ್‌ಸ್ಪೆಕ್ಟರ್ ತುಂಬ ಸಾಚಾ ಮನುಷ್ಯ ಎಂದುಕೊಳ್ಳಲಿ ಎಂಬುದು ಅವರ ಪ್ಲಾನ್ ಆಗಿತ್ತು . ಐಜಿ ಸತ್ಯನಾರಾಯಣ ರಾವ್ ಅವರು ಇನ್‌ಸ್ಪೆಕ್ಷನ್‌ನಲ್ಲಿ ಇನ್‌ಸ್ಪೆಕ್ಟರನ್ನು ಸರಿಯಾಗಿ ತೊಳೆದರು ಎಂಬುದು ಠಾಣೆಯ ಒಳಗಿನವರೆ ಹೇಳುತ್ತಾರೆ . ಅದೇನೇ ಇರಲಿ ಐಜಿ ಇನ್‌ಸ್ಪೆಕ್ಷನ್ ಮುಗಿಯುತ್ತಿದ್ದಂತೆ ಹೊಸ ಫರ್ನೀಚರ್‌ಗಳು ಮತ್ತೆಇನ್‌ಸ್ಪೆಕ್ಟರ್ ಚೇಂಬರನ್ನು ಅಲಂಕರಿಸಿದೆ . ಐಜಿ ಒಮ್ಮೆ ಅನಿರೀಕ್ಷಿತವಾಗಿ ರಾತ್ರಿ ಗಸ್ತಿಗೆ ಆಗಮಿಸಿದ್ದು ನಿಮಗೆ ಗೊತ್ತೇ ಇದೆ . ಅವತ್ತು ಇದೇ ಇನ್‌ಸ್ಪೆಕ್ಟರ್‌ಗೆ ಐಜಿ ಸರಿಯಾಗಿ ಬೈದಿದ್ದರು . ಈ ಇನ್‌ಸ್ಪೆಕ್ಟರ್‌ರ ಕಚೇರಿಯಿಂದ ಕಾಣಿಸುವಂತಿರುವ ಬಾರ್ ಒಂದು ತಡ ರಾತ್ರಿಯೂ ತೆರೆದಿತ್ತು . ಇದರಿಂದ ಕುಪಿತರಾದ ಐಜಿಯವರು ಇನ್‌ಸ್ಪೆಕ್ಟರ್‌ಗೆ ವಯರ್‌ಲೆಸ್‌ನಲ್ಲಿ ಮಾತನಾಡಿ , ನಿಮ್ಮ ಠಾಣೆ ಮುಚ್ಚುವಂತೆ ಸಕಾರಕ್ಕೆ ಮನವಿ ಸಲ್ಲಿಸಿ . ನಿಮ್ಮ ಠಾಣೆಯೆದುರೇ ಬಾರ್ ತೆರೆದಿದೆ . ಇನ್ನು ಬೇರೆ ಕಡೆ ನೀವೇನು ಬಂದ್ ಮಾಡುತ್ತೀರಿ ? ಸರಕಾರದ ಅನ್ನ ತಿನ್ನುವ ಬಗ್ಗೆ ಗೌರವ ಇದ್ದರೆ ನಿಯತ್ತಿನಿಂದ ಕಲಸ ಮಾಡಿ ಎಂದು ದಬಾಯಿಸಿದ್ದರು . ಇತ್ತ ಕೊಲೆ ಪ್ರಕರಣದ ಆರೋಪಿಯೊಬ್ಬ ಸಿಗಲಿಲ್ಲ ಎಂಬ ಕಾರಣಕ್ಕೆ ಎಸ್ಪಿ ಕೂಡ ಆಗಾಗ ಈ ಇನ್‌ಸ್ಪೆಕ್ಟರನ್ನು ಸರಿಯಾಗಿ ವಿಚಾರಿಸಿಕೊಳ್ಳುತ್ತಿದ್ದಾರೆ . ಬುಲ್ ಶಾಟ್ : ಒಳ್ಳೆ ಮೆತ್ತಗಿನ ಕುರ್ಚಿಯಿದೆ , ಚೆಂದದ ಟೇಬಲ್ ಇದೆ . ಚೇಂಬರ್ ಸುಂದರವಾಗಿದೆ . ಆದರೇನು ಮಾಡೋದು , ಅದರಲ್ಲಿ ಹಾಯಾಗಿ ಕುಳಿತು ಖುಶಿಪಡುವುದು ಇನ್‌ಸ್ಪೆಕ್ಟರ್ ಹಣೆಯಲ್ಲಿ ಬರೆದಿಲ್ಲ . ಎಲ್ಲ ಅವರವರ ನಸೀಬು !
ವಿದ್ಯುತ್ , ಕೈಗಾರಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಿರಿಯಾ ಕರೆ
ನಮ್ಮ ಟ್ರೆಕ್ ಶುರುವಾದಾಗ ವಸುಮತಿಯವರು ಗುಂಪಿನಲ್ಲಿ ತುಂಬಾ ಶಿಸ್ತನ್ನು ಕಾಪಾಡಿದ್ದರು . ನಮ್ಮ ಸಾಲಿನಲ್ಲಿ , ಮುಂದೆ ವಸುಮತಿಯವರು , ಅವರ ಹಿಂದೆ ತುಂಬಾ ನಿಧಾನವಾಗಿ ಬರುವವರು , ನಂತರ ಸ್ವಲ್ಪ ಅಭ್ಯಾಸ ಇರುವವರು , ಕೊನೆಯಲ್ಲಿ ನಿಪುಣರು . ಬಹುಪಾಲು ಹುಡುಗಿಯರೆಲ್ಲ ಸಾಲಿನ ಮುಂದೇ ಇದ್ದರು . ನಂತರ ಜ್ಞಾನಿ , ಲಖನ್ , ಸಂದೀಪ್ ಮತ್ತಿತರು . ಕೊನೆಯಲ್ಲಿ ಉಳಿದೆಲ್ಲ ತಾಕತ್ತಿದ್ದ ಹುಡುಗರು ಮತ್ತು ಸ್ಮಿತಾ . ನಾವು ಕೆಲವರು ಒಂದೊಂದು ಸ್ಕಿ ಕೋಲು ಹಿಡಿತಕ್ಕಾಗಿ ಹಿಡಿದು ನಡೆಯುತ್ತಿದ್ದೆವು . ಇವುಗಳು ನಮಗೆ ಕೊನೆಯವರೆಗೂ ಸಾಹಾಯಕ್ಕೆ ಬಂದವು . ನ ದಾರಿ ದೂದ್ ಕೋಸಿ ನದಿ ಪಕ್ಕದಲ್ಲೇ ಹೋಗುತ್ತಿತ್ತು . ಇದು ನೋಡಲು ಬಿಳಿ ಬಿಳಿಯಾಗಿ ನೊರೆನೊರೆಯಾಗಿದ್ದ ಒಂದು ದೊಡ್ಡ ಹಳ್ಳ , ಕೆಲವು ಕಡೆ ಸಣ್ಣ ನದಿ ಎಂದು ಹೇಳಬಹುದು . ಕೊನೆಯವರೆಗೂ ನಾವು ದೂದ್ ಕೋಸಿಯೊಡನೆಯೇ ನಡೆಯುತ್ತಿದ್ದೆವು . ಅದು ಪರ್ವತಗಳ ಮಧ್ಯೆ ಸುತ್ತಿ , ತಿರುಗಿ , ಬಳಸಿ ಮುಂದೆ ಹೋಗುವಂತೆ ನಾವೂ ಹೋಗುತ್ತಿದ್ದೆವು .
ಪ್ರತಿ ವರುಷ ಯುಗಾದಿ ಹಬ್ಬದ ದಿನ ರೇಡಿಯೋ ಮತ್ತು ಟಿವಿಗಳಲ್ಲಿ ಈ ಹಾಡು ಪ್ರಸಾರವಾಗುತ್ತದೆ . ಎಷ್ಟೇ ಬಾರಿ ಕೇಳಿದರೂ ತೃಪ್ತಿಯಾಗದೇ ಮತ್ತೆ ಮತ್ತೆ ಕೇಳಬೇಕೆನಿಸುವ ಸಾಹಿತ್ಯ . ದ . ರಾ . ಬೇಂದ್ರೆಯವರು ಬರೆದ ಈ ಗೀತೆಯನ್ನು ಕುಲವಧು ಚಲನಚಿತ್ರಕ್ಕೆ ಅಳವಡಿಸಿಕೊಂಡಿದ್ದಾರೆ . ಹಾಡಿರುವವರು ಎಸ್ . ಜಾನಕಿ .
ಸ್ಪೆಲ್ಲಿಂಗ್ ಮಿಸ್ತಕೆ ಅಲ್ಲ ಅನಿಸುತ್ತೆ . ಬಸ್ ನೋಡಿದರೆ ಲೋಕಲ್ ಬಸ್ ಅನಿಸುತ್ತೆ . ಹುಬ್ಬಳ್ಳಿಯ ಸಮೀಪದ ಊರು ಇರಬಹುದು
" ಟ್ರೈನಿಂಗ್ ಕೊಟ್ಟವರು ಗಂಡಸ ಅಥವಾ ಹುಡುಗೀನಾ ? " ಎಂದು ಕೇಳಿದ ಪತ್ನಿಗೆ ತಡಬಡಿಸಿ ಉತ್ತರಿಸಿದ್ದೂ , ಹಲ್ಲಿ ಲೊಚಗುಟ್ಟಿದ್ದೂ ಕಾಕತಾಳಿಯವೂ ಅಲ್ಲವೂ ಆ ಪರಮಾತ್ಮನೇ ಬಲ್ಲ ಬಿಡಿ : - ) ಪ್ರಭು
ದಲಿತ ಗರ್ಭಿಣಿ ಮಹಿಳೆ ಆಸ್ಪತ್ರೆಯಲ್ಲಿ ವೈದ್ಯರ ನಿರಾಕರಣೆಯಿಂದ ರಸ್ತೆಯಲ್ಲಿ ಮಗುವಿಗೆ ಜನ್ಮ ನೀಡಿದಳು . ಈಗ ಯಾವ ಮುಖ ಇಟ್ಟುಕೊಂಡು ನಮ್ಮ ಸಂಸ್ಕೃತಿಯ ಬಗ್ಗೆ ಪಾಶ್ಚಾತ್ಯರಿಗೆ ಪಾಠ ಹೇಳುವುದೋ ಏನೋ ?
ಉಪ್ಪಿಟ್ಟು ಮಾಡೋಕೂ ಪುಸ್ತಕ ಬೇಕು ನೋಡಿ ಫಿಸಿಕ್ಸ್ ನವರಿಗೆ . ನಮ್ಮ ಫಿಸಿಕ್ಸ್ ಮೇಷ್ಟ್ರೊಬ್ಬರು ಇದ್ದರು . ತರಗತಿಯಿಂದ ಪ್ರವಾಸ ಪ್ಲಾನ್ ಮಾಡ್ತಿದ್ದಾಗ , ಮೊಸರು ತರ್ಬೇಕು ಅಂತ ಇದ್ದಾಗ , ಅದಕ್ಕೇನಂತೆ , ಈಗ ಇರೋ ಒಂದು ಲೀಟರ್ ಮೊಸರಿಗೆ ಒಂದು ಚಮಚ ಹಾಲು ಹಾಕ್ದ್ರೆ ಸಾಕು ! ನಾಳೆ ಮೊಸರು ರೆಡಿ . . ಹೆಪ್ಪಾಕೋದು ಅಂದ್ರೆ , ಲ್ಯಾಬಲ್ಲಿ ವರ್ನಿಯರ್ ಕ್ಯಾಲಿಪರ್ಸ್ ಹಿಡ್ಕೊಂಡ್ ಹಾಗಲ್ಲ . . ಅಂತ ಇನ್ನೊಬ್ಬ ಲೇಡಿ ಟೀಚರು ಬೈದರು !
ಅಮಿತ ಭಾಈ ಆಪನೇ ತೋ ಹುಡಕ ಜಗಾ ದೀ । ಅಬ ಕ್ಯಾ ಕರೇಂ । ಔರ ಊಪರ ಸೇ ಆಪ ಕಹ ರಹೇ ಹೈಂ । ಬಂಗಲೋರ ಜಾಏ ತೋ ಯಹಾಂ ಜರುರ ಜಾಏಂ | ಅಜೀ ಹಮೇಂ ತೋ ಆಪ ಘುಮಾಐಗೇ । ಆಪನೇ ವಾದಾ ಕಿಯಾ ಥಾ । ಲಗತಾ ಹೈ ಭೂಲ ಗಏ । ಖೈರ ಕುಛ ಭೀ ಹೋ ಇಸ ಪುಲ ಸೇ ಜರುರ ಗುಜರನಾ ಹೈ । ತಾಊ ಜೀ ಕೋ ಸಾಥ ಲೇ ಲೇಂಗೇ । ಉನಕೀ ಭೀ ಇಚ್ಛಾ ಹೈಂ ।
ಈ ಮಹಾಕಾವ್ಯದ ಉದ್ದೇಶವೂ ಅದೇ . ಪ್ರೇಮವನ್ನೂ ಏಕತೆಯನ್ನು ಅನುಭವಿಸುವುದೇ ಜೀವನ ಎಂಬ ಪರಮ ಸತ್ಯವನ್ನು ಜಗತ್ತಿಗೆ ತಿಳಿಸುವುದು . ಈ ಕಾವ್ಯದ ಯಾವ ಅಂಶವೂ ಮನೋಮಯ ಸ್ತರದಿಂದ ಹೊರಬಂದಿಲ್ಲ . ಈ ಕಾವ್ಯದಲ್ಲಿನ ಪ್ರತಿಯೊಂದು ಶಬ್ದವೂ , ಛಂದ , ತಾಳ , ಕಲ್ಪನೆ ಎಲ್ಲವೂ ಕವಿಯ ಆ ಉಚ್ಚಪ್ರಜ್ಞೆಯ ಪ್ರತೀಕವೆಂಬಂತೆಯೇ ಇವೆ . ಶ್ರೀ ಅರಬಿಂದೋ ಅವರೇ ಉದ್ದರಿಸಿರುವಂತೆ " ಭಗವತ್ ಸ್ಪರ್ಶವೊಂದಿದ್ದರೆ ಸಕಲವನ್ನೂ ಮಾಡಲು ಸಾಧ್ಯ " ಎಂಬ ಮಾತು ಈ ಸುಂದರ ಅನುಭಾವ ಕಾವ್ಯದ ಮೂಲಮಂತ್ರ .
ಆ ಕಾಲವೊಂದಿತ್ತು . ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ಹರಟುತ್ತ ಒಂದೊಂದೇ ಖಾದ್ಯವನ್ನು ಸವಿಯುತ್ತ ವಿಮರ್ಶಿಸುತ್ತ ನಿಧಾನವಾಗಿ ಸರಕು ಒಳಗಿಳಿಸುತ್ತಿದ್ದ ಭವ್ಯ ಭೋಜನದ ದಿವ್ಯ ಕಾಲ ಅದಾಗಿತ್ತು . ಈಗ ಗಡಿಬಿಡಿಯಲ್ಲಿ ' ಟೂ ಮಿನಿಟ್ಸ್ ನೂಡಲ್ಸ್ ' ನುಂಗಿ ಎದ್ದೇಳುವ ಕಾಲ ಬಂದಿದೆ . ಇನ್ನೂ ಅರ್ಜೆಂಟ್ ಇರುವವರು ಬ್ರೆಡ್ಡಿನ ತುಣುಕುಗಳನ್ನು ಬಸ್ಸಿನಲ್ಲೋ ತಮ್ಮ ಕಾರಿನಲ್ಲೋ ತಿಂದು ಮುಗಿಸಿ ಡ್ಯೂಟಿಗೆ ಹಾಜರಾಗುತ್ತಾರೆ . ಮಧ್ಯಾಹ್ನ ಕಚೇರಿಯ ಬಿಡುವಿನ ವೇಳೆಯಲ್ಲಿ ಕ್ಯಾರಿಯರ್ ತಂಗಳನ್ನು ಗಬಗಬನೆ ಮುಕ್ಕಿ ನೀರು ಕುಡಿಯುತ್ತಾರೆ . ಊಟ ಚುಟುಕಾಗಿದೆ . ಎರಡು ಹೊತ್ತಿನ ಊಟಕ್ಕಾಗಿ ಜೀವನವಿಡೀ ಕಷ್ಟಪಡುವ ನಾವು ಆ ಊಟವನ್ನು ಆನಂದಿಸುವಷ್ಟು ಸಮಯ ಹೊಂದಿಲ್ಲ ! ಹಿಂದೆಲ್ಲ ಗಂಡಸರು ಮನೆ ಜಗಲಿಯ ಮೇಲೋ ಊರ ಅರಳಿಕಟ್ಟೆಯ ಮೇಲೋ ಕುಳಿತು ಗಂಟೆಗಟ್ಟಲೆ ಹರಟುತ್ತಿದ್ದರು . ಹೆಂಗಸರು ದೇವಸ್ಥಾನದಲ್ಲೋ ತಂತಮ್ಮ ಮನೆಗಳ ತುಳಸಿಕಟ್ಟೆಗಳೆದುರೋ ಮುಖಾಮುಖಿಯಾಗಿ ಕೇರಿ ಸುದ್ದಿಯೆಲ್ಲ ಸುದೀರ್ಘವಾಗಿ ಮಾತಾಡುತ್ತಿದ್ದರು . ಈಗೇನಿದ್ದರೂ ' ಹಾಯ್ , ಬಾಯ್ , ಆರಾಮಾ ? , ಹ್ಞೂಂ , ಕೆಲ್ಸ ಆಯ್ತಾ , ಇನ್ನೂ ಇಲ್ಲ ' , ಇಷ್ಟೆ . ಹೆಚ್ಚೆಂದರೆ ದೂರವಾಣಿಯಲ್ಲಿ - ಅವರು ಹತ್ತಿರದಲ್ಲೇ ಇದ್ದರೂ - ಒಂದೆರಡು ಮಾತು , ಫಿನಿಷ್ . ಕೆಲವರಿಗೆ ಅದಕ್ಕೂ ಸಮಯವಿಲ್ಲ ಅಥವಾ ಮನಸ್ಸಿಲ್ಲ , ಅವರದು ಬರೀ ಎಸ್‌ಎಂಎಸ್ ! ಮಾತು ಚುಟುಕಾಗಿದೆ . ಪಶುಪಕ್ಷಿಗಳಿಗಿಂತ ನಾವು ಭಿನ್ನವಾಗಿರುವುದೇ ನಮ್ಮ ನಡೆ ' ನುಡಿ ' ಯಿಂದಾಗಿ ಎಂಬ ಅರಿವಿದ್ದೂ ಸುಸೂತ್ರ ನಾಲ್ಕು ಮಾತಾಡುವಷ್ಟು ನಮಗಿಂದು ವ್ಯವಧಾನವಿಲ್ಲ ಅಥವಾ ಮನಸ್ಸಿಲ್ಲ ! ಚುಟುಕು - ಜೋಕು - - - - - - - - - - - - - - - - ಕಾಳಿದಾಸನ ಮಹಾಕಾವ್ಯಗಳು ನಮಗೆ ಗೊತ್ತು . ಗೊತ್ತು ಅಂದರೆ , ಕನಿಷ್ಠ ಅವುಗಳ ಹೆಸರಾದರೂ ಗೊತ್ತು . ಅದೂ ಗೊತ್ತಿಲ್ಲದ ವಿದ್ಯಾವಂತರಿಗೆ ಕೊನೇಪಕ್ಷ ಕಾಳಿದಾಸ ಎಂಬ ಹೆಸರಾದರೂ ಗೊತ್ತು . ಇದೇರೀತಿ ಬಾಣನ ಬೃಹತ್ ' ಕಾದಂಬರಿ ' ನಮಗೆ ಗೊತ್ತು . ಪಂಪನ ಮಹಾಭಾರತದಿಂದ ಮೊದಲ್ಗೊಂಡು ಕುವೆಂಪುರವರ ' ಶ್ರೀ ರಾಮಾಯಣ ದರ್ಶನಂ ' ವರೆಗೆ ಅನೇಕಾನೇಕ ಮಹಮಹಾ ಮಹಾಕಾವ್ಯಗಳನ್ನು ನಮ್ಮ ಹಿರಿಯರು ಓದಿದ್ದಾರೆ , ನಾವು ಹೆಸರು ಕೇಳಿದ್ದೇವೆ . ಆದರೆ ಇಂದು ಕಥೆ , ಕಾವ್ಯ ಎಲ್ಲ ಚುಟುಕಾಗಿದೆ . ಕಾರ್ಡಿನಲ್ಲಿ ಕಥೆ , ಒಂದೇ ವಾಕ್ಯದ ಕಥೆ , ಅರ್ಧ ವಾಕ್ಯದ ಕಥೆ , ಇಂಥವು ಜನಪ್ರಿಯವಾಗತೊಡಗಿವೆ . ಪೂರ್ಣ ಪ್ರಮಾಣದ ಕವಿತೆಗಳಿಗಿಂತ ಚುಟುಕಗಳೇ ಮೆರೆಯತೊಡಗಿವೆ . ' ಚುಟುಕ ಕವಿ ' ಗೋಷ್ಠಿಗಳಲ್ಲಿ ಚುಟುಕು ಕವಿಗಳು ಚುಟುಕಾಗಿ ಕುಟುಕುವುದು ಜನರಿಗೆ ಇಷ್ಟವಾಗತೊಡಗಿದೆ . ಅಂಥ ಕವಿಗಳಿಗೆ ' ಚುಟುಕ ಶ್ರೀ ' , ' ಚುಟುಕ ವೀರ ' , ಮೊದಲಾದ ಬಿರುದುಬಾವಲಿಗಳು ಸಲ್ಲುತ್ತಿವೆ . ಸುದೀರ್ಘ ಲಲಿತ ಪ್ರಬಂಧವನ್ನಾಗಲೀ ಹಾಸ್ಯಬರಹವನ್ನಾಗಲೀ ಓದಲು ಯಾರಿಗೆ ಈಗ ಸಮಯವಿದೆ ? ಸಮಯವಿದ್ದರೂ ಅಂಥ ಓದು ಯಾರಿಗೆ ಬೇಕಾಗಿದೆ ? ನಗೆಹನಿಗಳನ್ನು ಓದಿ ನಕ್ಕು - ಬಿಡೋಣ , ಸಾಕು , ಹೀಗಾಗಿದೆ ನಮ್ಮ ಇಂದಿನ ಮನೋಭಾವ . ಅಂದು ನಾಡಿಗೇರ ಕೃಷ್ಣರಾಯರಾಗಲೀ ಬೀಚಿಯವರಾಗಲೀ ಮಾಡುತ್ತಿದ್ದಂಥ ಸುದೀರ್ಘ ಲಘುಭಾಷಣಗಳು ಇಂದು ನಮಗೆ ಬೇಕಿಲ್ಲ . ಅಭಿನವ ಬೀ ' ಛಿ ' ಗಳ ಚುಟುಕು - ಜೋಕುಗಳಿಗೆ ಬಿದ್ದುಬಿದ್ದು ನಕ್ಕು ಎದ್ದುನಡೆಯುವ ಜೋಕುಮಾರರು ನಾವಾಗಿದ್ದೇವೆ . ಕಿರಿ - ಕಿರಿ ಜೋಕು ನಮಗೆ ಸಾಕು . ' ಔರೇಕ್ ಜೋಕ್ ಮಾರೋ ಸಾಮೀ ' , ಎನ್ನುತ್ತೇವೆ , ಅವರು ಜೋಕು ಮಾರುತ್ತಾರೆ . ನಾವು ( ಕೇಳಿದ್ದನ್ನೇ ಕೇಳಿ ) ಕೊಂಡು - ನಗಾಡಿಕೊಂಡು - ಎದ್ದು ನಡೆಯುತ್ತೇವೆ . ಸಾಹಿತ್ಯವೂ ಚುಟುಕು - - - - - - - - - - - - - - - - - - - ಜೋಕಿನ ವಿಷಯ ಬಿಡಿ . ಆಧ್ಯಾತ್ಮ , ಮನೋವಿಕಾಸ , ಜೀವನವಿಧಾನ , ಇಂಥ ಗಂಭೀರ ವಿಷಯಗಳೂ ನಮಗಿಂದು ಚುಟುಕಾಗಿಯೇ ತಿಳಿಸಲ್ಪಡಬೇಕು . ಮೂರುಮೂರು ಗಂಟೆಯ ಹರಿಕಥೆ , ಪ್ರವಚನ , ಉಪನ್ಯಾಸಗಳನ್ನು ಕೇಳಲು ನಮಗಿಂದು ವ್ಯವಧಾನವಿಲ್ಲ . ( ' ಎಲ್ಲೀ ಹರಿಕಥೆ ಹಚ್ಚಿದಿ , ಷಾರ್ಟಾಗಿ ಒದರು ' , ಅನ್ನುತ್ತೇವೆ . ) ಮೂರು ನಿಮಿಷದಲ್ಲಿ ರೇಡಿಯೋದಲ್ಲಿ ' ಚಿಂತನ ' ಮುಗಿದುಬಿಡಬೇಕು , ಐದು ನಿಮಿಷದಲ್ಲಿ ಟಿವಿಯಲ್ಲಿ ಉಪನ್ಯಾಸ ಶುಭಂ ಆಗಬೇಕು . ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲೂ ಗಹನಪ್ರಬಂಧವೊಂದು ಆರೇಳು ನಿಮಿಷಗಳೊಳಗೆ ಮಂಡನೆಯಾಗಿಬಿಡಬೇಕು . ಇಲ್ಲದಿದ್ದಲ್ಲಿ ಆರೇಳು ಮಂದಿಯನ್ನುಳಿದು ಇತರರೆಲ್ಲ , ' ಯಾರಿಗೆ ಬೇಕು ಈ ಬೈರಿಗೆ ' , ಎಂದು ಗೊಣಗುತ್ತ ಎದ್ದು ನಡೆದುಬಿಡುವರೆಂದು ( ವೃಥಾ ) ಭಯ ಸಂಘಟಕರಿಗೆ ! ಒಟ್ಟಾರೆ , ಸಾಹಿತ್ಯವೂ ಇಂದು ಚುಟುಕಾಗಿರಬೇಕು . ಕ್ಷಣಹೊತ್ತಿನೊಳಗೇ ಆಣಿಮುತ್ತು ಉದುರಿಬಿಡಬೇಕು ! ಸಾಹಿತ್ಯ ಮಾತ್ರವಲ್ಲ , ಸಂಗೀತ , ನಾಟಕ , ಎಲ್ಲ ಅಷ್ಟೇ . ಅಹೋರಾತ್ರಿ ಶಾಸ್ತ್ರೀಯ ಸಂಗೀತ , ಬೆಳತನಕ ಯಕ್ಷಗಾನ - ಬಯಲಾಟ , ಅಂಥ ಕಾಲ ಹೋಯಿತು . ಈಗ - ಟಿವಿಯಲ್ಲಿ ನೋಡುವುದಿಲ್ಲವೆ , ಆ ರೀತಿ - ಅರ್ಧ , ಹೆಚ್ಚೆಂದರೆ ಒಂದು ಗಂಟೆಯೊಳಗೆ ಸಂಗೀತ , ಯಕ್ಷಗಾನ ಮುಗಿದುಬಿಡಬೇಕು . ಟಿವಿಯಲ್ಲಂತೂ ಒಮ್ಮೊಮ್ಮೆ ಮೂರೇ ನಿಮಿಷದಲ್ಲಿ ಒಂದು ಶಾಸ್ತ್ರೀಯ ಗಾಯನ ಪೂರೈಸಿಬಿಡಬೇಕು . ಝಲಕ್ ಆದರೂ ಸರಿಯೇ . ( ಅಶಾಸ್ತ್ರೀಯವಾದರೂ ಚಿಂತೆಯಿಲ್ಲ ! ) ಚುಟುಕಾಗಿ ಮುಗಿದುಬಿಡುವುದು ಮುಖ್ಯ . ' ಟಿವಿ ಧಾರಾವಾಹಿ ಮಾತ್ರ ಚುಟುಕಾಗಿಲ್ಲ , ಅದೆಂದಿದ್ದರೂ ಮೆಗಾ ಮಗಾ ' , ಅನ್ನುವಿರಾ ? ಇಲ್ಲೇ ನೀವು ಎಡವಿದ್ದು . ಮೇಲ್ನೋಟಕ್ಕೇನೋ ಅದು ಮೆಗಾ ಅನ್ನಿಸುತ್ತದೆ , ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಟಿವಿ ಧಾರಾವಾಹಿಗಿಂತ ಚುಟುಕು ಇನ್ನೊಂದಿಲ್ಲ ಎಂಬ ಸತ್ಯದ ಅರಿವಾಗುತ್ತದೆ ! ಪ್ರತಿ ಎಪಿಸೋಡೂ ಕೇವಲ ಅರ್ಧಗಂಟೆ ; ಅದರಲ್ಲಿ ಜಾಹಿರಾತು ಕಳೆದರೆ ಉಳಿಯುವುದು ಹದಿನೈದೇ ನಿಮಿಷ ; ಅದರಲ್ಲಿ ಐದು ನಿಮಿಷ ಟೈಟಲ್ , ಶೀರ್ಷಿಕೆ ಗೀತೆ , ಇದುವರೆಗಿನ ಕಥೆ , ಇತ್ಯಾದಿ ; ಉಳಿದ ಹತ್ತು ನಿಮಿಷದಲ್ಲಿ ಅರ್ಧಪಾಲು ಅವಧಿ ಮಾತಿಲ್ಲದ ಕ್ಲೋಸಪ್ ಷಾಟುಗಳು ; ಇದೆಲ್ಲ ಜಾತಾ , ಕಥೆಗೆ ಮೀಸಲಾದ ಸಮಯ ( ವಾರದಲ್ಲಿ ) ಕೇವಲ ಐದೇ ನಿಮಿಷ ! ಇದು ಚುಟುಕಲ್ಲದೆ ಮತ್ತೇನು ? ಇಷ್ಟಾಗಿ , ಒಂದು ವರ್ಷವಿಡೀ ಓಡಿದ ( ಕುಂಟಿದ ) ಧಾರಾವಾಹಿಯ ಕಥೆಯನ್ನು ಚುಟುಕಾಗಿ ಒಂದೇ ವಾಕ್ಯದಲ್ಲಿ ಹೇಳಿಬಿಡಬಹುದಲ್ಲವೆ ? ಪಾಠ - ಆಟ - - - - - - - - - - ಶಾಲಾ ಕಾಲೇಜುಗಳ ಪರೀಕ್ಷಾ ಉತ್ತರಗಳೂ ಚುಟುಕಾಗತೊಡಗಿವೆ . ನಾವು ಚಿಕ್ಕವರಿದ್ದಾಗ ಅಡಿಷನಲ್ ಷೀಟುಗಟ್ಟಲೆ ಬರೆಬರೆದು ಲಗತ್ತಿಸುತ್ತಿದ್ದೆವು . ಇದೀಗ ನ್ಯೂ ಟೈಪ್ . ಪ್ರಶ್ನೆಪತ್ರಿಕೆಯಲ್ಲೇ ಉತ್ತರ ಟಿಕ್ ಮಾಡಿ ವಾಪಸ್ ಕೊಟ್ಟರಾಯಿತು . ಏಕ್‌ದಂ ಚುಟುಕು . ಕಾಲೇಜು ವಿದ್ಯಾರ್ಥಿಗಳಿಗಂತೂ ಪುಸ್ತಕಗಳೂ ಚುಟುಕು . ತೆಳುವಾದ ಒಂದು ನೋಟ್‌ಬುಕ್ಕನ್ನು ಕೈಯಲ್ಲಿ ತೂಗಾಡಿಸಿಕೊಂಡು ಹೋದರೆ ಸಾಕು , ಇಡೀ ದಿನದ ಕಾಲೇಜು ಪಾಠ ಅಟೆಂಡ್ ಮಾಡಬಹುದು . ಅಂಥ ಎರಡು ನೋಟ್‌ಬುಕ್ ಇದ್ದರೆ ಸಾಕು , ಇಡೀ ವರ್ಷ ತಳ್ಳಬಹುದು ! ಪ್ರೈಮರಿ ಶಾಲೆಗಳ ಪುಸ್ತಕಗಳ ಹೊರೆಯನ್ನೂ ಚುಟುಕುಗೊಳಿಸುವ ಚಿಂತನೆ ತೀವ್ರವಾಗಿ ನಡೆದಿದೆ . ಪಾಠವಷ್ಟೇ ಅಲ್ಲ , ಆಟವೂ ಚುಟುಕಾಗಿದೆ . ಐದು ದಿನಗಳ ಕ್ರಿಕೆಟ್ ಪಂದ್ಯ ಇತ್ತು . ಮೂರು ದಿನಕ್ಕಿಳಿಯಿತು . ಒಂದು ದಿನದ ಪಂದ್ಯ ಶುರುವಾಯಿತು . ಇದೀಗ ಟ್ವೆಂಟಿ೨೦ ಭರಾಟೆ . ಮೂರೇ ಗಂಟೆಯಲ್ಲಿ ಪಂದ್ಯ ಖಲಾಸ್ ! ಮುಂದೆ , ಟೆನ್೧೦ , ಫೈವ್೫ , ಕೊನೆಗೆ ' ಏಕಾ ಏಕಿ ' ಪಂದ್ಯ ಬಂದರೂ ಆಶ್ಚರ್ಯವಿಲ್ಲ . ಕಚೇರಿ ಕೆಲಸದ ಮಧ್ಯೆ ಎದ್ದುಹೋಗಿ ಸಿಗರೇಟ್ ಸೇದಿಬರುವಂತೆ ಒನ್೧ ಪಂದ್ಯ ನೋಡಿಬಿಟ್ಟು ಬರಬಹುದು ! ಚುಟುಕಿನ ಪರಾಕಾಷ್ಠೆಯಲ್ಲವೆ ಇದು ? ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಚುಟುಕು , ' ಮುಂದುವರಿದ ' ವರ ಮನೆಗಳಲ್ಲಿ - ಆಮಂತ್ರಣ ಪತ್ರಿಕೆ ಸಹಿತ - ಮದುವೆ ಮುಂಜಿ ಚುಟುಕು , ಶ್ರಾದ್ಧವಂತೂ ' ಸಂಕಲ್ಪ ಶ್ರಾದ್ಧ ' ವೆಂಬ ಹೆಸರಿನಲ್ಲಿ ಚುಟುಕೋ ಚುಟುಕು , ವಿದ್ಯೆ ಹೆಚ್ಚಾದಂತೆಲ್ಲ ಜನರ ನಡುವಿನ ಸಂಭಾಷಣೆ ಚುಟುಕು , ಪತ್ರ ವ್ಯವಹಾರ ಚುಟುಕು , ಪತ್ರಿಕೆಗಳಲ್ಲಿ ಸ್ಥಳಾಭಾವದಿಂದ ಲೇಖನಗಳೂ ಚುಟುಕು , ರಾಜ್ , ಜಯ್ , ವಿಷ್ , ವಿನು , ಅನು , ಹೀಗೆ ಹೆಸರುಗಳೂ ಚುಟುಕು , ಇವರ ಉಡುಪುಗಳೂ ಚುಟುಕು . . . . . . . ಎಲ್ಲಾ ಚುಟುಕವೋ , ಪ್ರಭುವೇ , ಎಲ್ಲಾ ಚುಟುಕವೋ ! ಚುಟುಕು ಅನಾದಿ - - - - - - - - - - - - - - - - ಹಾಗಂತ , ಈ ಚುಟುಕೆಂಬುದು ಇಂದಿನ ಧಾವಂತದಿಂದಾಗಿ ಹುಟ್ಟಿರುವ ಕೂಸೆಂದು ವಿಶ್ಲೇಷಿಸುವುದೂ ತಪ್ಪಾಗುತ್ತದೆ . ಮಹಾಭಾರತವನ್ನು ರಚಿಸಿದ ವ್ಯಾಸಮಹರ್ಷಿಗಳೇ , ' ಪರೋಪಕಾರಂ ಪುಣ್ಯಾಯ , ಪಾಪಾಯ ಪರಪೀಡನಂ ' , ಎಂದು ಮಹಾಭಾರತದ ಸಾರವನ್ನು ಚುಟುಕಾಗಿ ಎರಡೇ ಮಾತಿನಲ್ಲಿ ಹೇಳಿಬಿಟ್ಟಿದ್ದಾರೆ . ' ಈ ಎರಡು ಮಾತುಗಳೇ ಹದಿನೆಂಟೂ ಪುರಾಣಗಳ ಸಾರಾಂಶ ( ಅಷ್ಟಾದಶ ಪುರಾಣೇಷು ವ್ಯಾಸಸ್ಯ ವಚನದ್ವಯಂ ) ' , ಎಂದು ತೀರ್ಮಾನಿಸುವ ಮೂಲಕ ನಮ್ಮ ಹಿರಿಯರು ಅಷ್ಟಾದಶ ಪುರಾಣಗಳಿಗೂ ಚುಟುಕು ರೂಪವನ್ನು ಬಲು ಹಿಂದೆಯೇ ಕೊಟ್ಟುಬಿಟ್ಟಿದ್ದಾರೆ . ರಾಮಾಯಣದಂಥ ರಾಮಾಯಣವನ್ನು ಕೂಡ ನಮ್ಮ ಹಿರಿಯರು ಚುಟುಕಾಗಿ , ' ಪೂರ್ವಂ ರಾಮ ತಪೋವನಾತ್ ಗಮನಂ , ಹತ್ವಾ ಮೃಗಂ ಕಾಂಚನಂ . ವೈದೇಹಿ ಹರಣಂ . ಜಟಾಯು ಮರಣಂ , ಸುಗ್ರೀವ ಸಂಭಾಷಣಂ , ವಾಲೀ ನಿಗ್ರಹಂ , ಸಮುದ್ರ ತರಣಂ , ಲಂಕಾಪುರೀ ದಹನಂ , ಪಶ್ಚಾತ್ ರಾವಣ ಕುಂಭಕರ್ಣ ಹನನಂ , ಏತತ್ ಹಿ ರಾಮಾಯಣಂ ' , ಎಂದು ಸಾರಿಬಿಟ್ಟಿದ್ದಾರೆ . ಇನ್ನೂ ಅಗ್ದಿ ಚುಟುಕುಪ್ರಿಯರು ಇದನ್ನು , ' ಶ್ರೀರಾಮ ಜನನಂ , ಸೀತಾಪಹರಣಂ , ರಾವಣ ಹನನಂ , ಏತತ್ ರಾಮಾಯಣಂ ' , ಎಂದು ಇನ್ನಷ್ಟು ಮೊಟಕುಗೊಳಿಸಿದ್ದಾರೆ ! ' ಶ್ಲೋಕಾರ್ಧೇನ ಪ್ರವಕ್ಷ್ಯಾಮಿ ಯದುಕ್ತಂ ಗ್ರಂಥಕೋಟಿಭಿಃ , ಬ್ರಹ್ಮಂ ಸತ್ಯಂ ಜಗನ್ಮಿಥ್ಯಂ ಜೀವೋ ಬ್ರಹ್ಮಸ್ಯ ನಾಪರಃ ' , ಎಂದು ಸಾರುವ ಮೂಲಕ ಆದಿಶಂಕರರು ಕೋಟಿ ಗ್ರಂಥಗಳ ಸಾರವನ್ನು ಚುಟುಕಾಗಿ ಕೇವಲ ಅರ್ಧ ಶ್ಲೋಕದಲ್ಲಿ ಹೇಳಲು ಯತ್ನಿಸಿದ್ದಾರೆ . ಇದನ್ನೆಲ್ಲ ಗಮನಿಸಿ ನಾನೀಗ ಚುಟುಕಾಗಿ ಹೇಳುವುದಿಷ್ಟೆ : ' ಚುಟುಕು - ಚುಟುಕ ಇದು ಅನಾದಿ ಸಂಗತಿ ; ಸನಾತನವಾದದ್ದು ; ಇಂದು ಇದಕ್ಕೆ ಡಿಮಾಂಡ್ ಅತಿ ; ಅಷ್ಟೆ ' . ಈ ಬ್ರಹ್ಮಾಂಡದಲ್ಲಿ ನಾವೆಲ್ಲ ಒಂದು ತಟಕು . ಅನಂತ ಕಾಲದೆದುರು ನಮ್ಮ ಜೀವಿತಾವಧಿಯೇ ಒಂದು ಚುಟುಕು . ಆದ್ದರಿಂದ , ಚುಟುಕಿಗೆ ಜೈ ! ಕ್ಷಮಿಸಿ . ಚು . ಜೈ !
ಅಂಜಲಿ ಪುಟ ಎಂಬ ನಾಟ್ಯ ಮುದ್ರೆ ಕೈ ಮುಗಿಯುವ ಭಂಗಿಯಲ್ಲಿರುವ ಒಂದು ಕರ ವಿನ್ಯಾಸ . ಇದು ಮೇಲ್ನೋಟಕ್ಕೆ ಕೈ ಮುಗಿಯುವ ಭಂಗಿಯಂತೆ ಕಾಣಿಸಿದರೂ , ಇದರ ಮೂಲ ವಿನ್ಯಾಸ ಹೂವಿನ ಮೊಗ್ಗನ್ನು ಹೋಲುತ್ತದೆ . ( ಚಿತ್ರ ನೋಡಿ )
ಡಾಕ್ಟರೇಟ್‌ಗಳು - ಪ್ರಶಸ್ತಿಗಳು ನಾಚಿಕೆಗೇಡಿನ ವಸ್ತುಗಳಾಗಿರುವುದು ಈಗ ಮಾಮೂಲಿ ಸಂಗತಿ . ಅವುಗಳ ಜತೆಗೆ ಸಭಾ ಕಾರ್ಯಕ್ರಮಗಳೂ ಸೇರಿಕೊಳ್ಳುತ್ತಿರುವುದು ಮತ್ತೊಂದು ಬೇಸರದ ವಿಷಯ . ಕೇವಲ ಕಾಟಾಚಾರಕ್ಕಾಗಿ ( ಕ್ಲೀಷೆಯಾದರೂ ಎಷ್ಟೊಳ್ಳೆಯ ಪದ - ಆಚಾರದ ಕಾಟ ! ) ನಡೆಯುವ ಈ ಸಭಾ ಕಾರ್ಯಕ್ರಮಗಳು ಪ್ರಚಾರದ ಮಾಧ್ಯಮ ವರದಿಗಾಗಿ , ಪ್ರಾಯೋಜಕರ ಸಂತೃಪ್ತಿಗಾಗಿ , ಅತಿಥಿಗಳ ಸಂತೋಷಕ್ಕಾಗಿ ಅತ್ಯಗತ್ಯ ಎನಿಸಿವೆ . ಆದರೆ ಅಂತಹ ಕಾರ್ಯದಲ್ಲೂ ಕನಿಷ್ಠ ಪ್ರಾಮಾಣಿಕತೆ ಕಾಣಿಸಬೇಕಲ್ಲ . ಕಾರ್ಯಕ್ರಮವನ್ನು ಸಂಘಟಿಸಿದ ಸಂಸ್ಥೆಯ ಅಧ್ಯಕ್ಷರು , ವೇದಿಕೆಯಲ್ಲಿರುವ ಗಣ್ಯರ ಜತೆ ಕೊನೆಯ ಕುರ್ಚಿಯಲ್ಲಿ ಕೂರುವುದನ್ನಷ್ಟೇ ನಮ್ಮೂರಿನಲ್ಲಿ ನೋಡಿದ್ದವನು ನಾನು . ಕಳೆದ ಶುಕ್ರವಾರ ( ಏ . ೩ ) ಕಲಾಕ್ಷೇತ್ರದಲ್ಲಿ , ಸಂಸ್ಥೆಯ ಅಧ್ಯಕ್ಷರು ಅತಿಥಿಗಳ ಮಧ್ಯೆ ಕುಳಿತಿದ್ದರು . ಕಾರಣ ಇಷ್ಟೆ , ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ , ಎದುರಿರುವ ನೂರಾರು ಜನರ ಕಣ್ಣು ತಪ್ಪಿಸಿದವರಂತೆ ಕಾರ್ಯದರ್ಶಿಗಳೂ , ಮತ್ತೊಬ್ಬ ಪದಾಧಿಕಾರಿಯೂ ಬಂದು ಕೊನೆಯ ಆಸನಗಳಲ್ಲಿ ವಿರಾಜಮಾನರಾದರು ! ಪ್ರಾಸ್ತಾವಿಕ ಭಾಷಣ ಆರಂಭ . ಅದ್ಭುತ , ಮಹತ್ವದ , ಅತ್ಯುತ್ತಮ , ಅಪ್ರತಿಮ ಎಂಬ ಪದಗಳೆಲ್ಲ ಟೊಳ್ಳು ಎನ್ನುವುದನ್ನು ಸಾಬೀತುಪಡಿಸುವಂತೆ , ಅವನ್ನೆಲ್ಲ ಲೀಲಾಜಾಲವಾಗಿ ಎತ್ತಿ ಒಗೆಯುತ್ತಿದ್ದ ಪರಿ ನೋಡಿದರೆ ಕನ್ನಡಿಗರು ದಂಗಾಗಬೇಕು . ಆಗ ರಂಗಭೂಮಿಯ ಹಿರಿಯ ಕಲಾವಿದೆ ಪ್ರಮೀಳಾ ಗುಡೂರರಿಗೆ ಸನ್ಮಾನ . ( ಅವರೀಗ ' ಮುತ್ತಿನ ತೋರಣ ' ಟಿವಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ ) ' ಈ ಅಪ್ರತಿಮ ಕಲಾವಿದೆಗೆ ನಾವು ಕೇವಲ ಬೊಕ್ಕೆ , ಹಣ್ಣು ಕೊಟ್ಟು ಕಳುಹಿಸುತ್ತಿಲ್ಲ . ನಮ್ಮ ಉದ್ಯಮಿಗಳೂ ಸಮಾಜಸೇವಕರೂ ಆದ ರೆಡ್ಡಿಯವರು ಹತ್ತು ಸಹಸ್ರ ( ಸಹಸ್ರ - ಸಾವಿರಗಳ ಮಧ್ಯೆ ಕನ್‌ಫ್ಯೂಸಾಗಿ , ತಡವರಿಸಿ ! ) , ಹತ್ತು ಸಾವಿರ ರೂ ಹಾಗೂ ರೇಷ್ಮೆ ಸೀರೆಯನ್ನು ಕಾಣಿಕೆಯಾಗಿ ನೀಡುತ್ತಿದ್ದಾರೆ ' ಅಂತ ಘೋಷಣೆಯಾಯಿತು . ಆ ಕಲಾವಿದೆಯ ಮೊಮ್ಮಗನಂತಿರುವ ಸಮಾಜಸೇವಕರೂ ವೇದಿಕೆಯಲ್ಲೇ ಕುಳಿತಿದ್ದರಲ್ಲ , ಅವರೆದ್ದು ಬಂದು ಆಕೆಯನ್ನು ಸನ್ಮಾನಿಸಿದ್ದೂ ಆಯಿತು . ನಂತರ ಭಾಷಣಗಳು ಶುರುವಾದವು . ಮಧ್ಯೆ ಕುಳಿತ ಕರಿಬಸವಯ್ಯನವರಂತೂ ತೆರೆಯ ಹಿಂದಿದ್ದವರಿಗೆ - ದೂರದಲ್ಲಿ ಲೈಟಿಂಗ್ ಮಾಡುತ್ತಿದ್ದವರಿಗೆ - ಸಭೆಯ ಮಧ್ಯದಲ್ಲಿದ್ದ ಯಾರೋ ಪರಿಚಿತರಿಗೆ - ವೇದಿಕೆಯಲ್ಲಿ ನಿರೂಪಣೆ ಮಾಡುತ್ತಿದ್ದವರಿಗೆ , ಹೀಗೆ ಎಲ್ಲೆಂದರಲ್ಲಿ ಕೈಸನ್ನೆ ಮಾಡುವುದೂ , ಪಿಸುಗುಟ್ಟುವುದೂ ಕ್ಷಣಕ್ಷಣಕ್ಕೂ ಹೆಚ್ಚುತ್ತಿತ್ತು . ಜತೆಗೆ ಭಾಷಣ ಮಾಡುತ್ತಿರುವವರ ಕಡೆ ನೋಡಿ ಸಮಯಪ್ರಜ್ಞೆಯಿಂದ ಅಹುದಹುದೆಂದು ತಲೆಯಾಡಿಸುತ್ತಲೂ ಇದ್ದರು ! ಇನ್ನು , ಭಾಷಣಕಾರರ ಒಂದು ವಾಕ್ಯ ಬಿಟ್ಟು ಇನ್ನೊಂದು ವಾಕ್ಯಕ್ಕೆ ಎಲ್ಲಿ , ಹೇಗೆ ಸಭಿಕರು ಚಪ್ಪಾಳೆ ಹೊಡೆಯಬೇಕೆಂದು , ತಾವೇ ಮುಂದಾಗಿ ಹೊಡೆದು ತೋರಿಸುತ್ತಿದ್ದವರು ಕರಿಬಸವಯ್ಯ ಮತ್ತು ಅತಿಥಿಯಾಗಿದ್ದ ನಟ ನಾಗರಾಜಮೂರ್ತಿಗಳು . ( ಅಶ್ವತ್ಥರ ಗಾಯನ ಕಾರ್ಯಕ್ರಮದಲ್ಲಿ ತಾಳ ಹೊಂದಿಸಲು ಇಬ್ಬರು ಸಭಿಕರಿಗೆ ಬೆನ್ನು ಹಾಕಿ ಕೈಯಾಡಿಸುತ್ತಾ ನಿಂತಿರುವುದನ್ನು ನೋಡಿರುತ್ತೀರಲ್ಲ ಹಾಗೆ ! ) ತಾನು ಬೆಂಗಳೂರನ್ನು ಮೊದಲು ನೋಡಿದ್ದೇ ಬಹಳ ಇತ್ತೀಚೆಗೆ ಎಂಬ ಗುಡೂರರ ಮುಗ್ಧ ಮಾತಿಗೂ ಇವರು ಮೊದಲಾಗಿ ಕೈ ತಟ್ಟಿ , ಎಲ್ಲರೂ ಚಪ್ಪಾಳೆ ಹೊಡೆಯಲು ಸೂಚಿಸಿದರು ! ಇನ್ನು ಅತಿಥಿಗಳಿಗೆ ಹಾರ ಹಾಕಿ ಸ್ಮರಣಿಕೆ ಕೊಟ್ಟಾಗಲಂತೂ ಕರಿಬಸವಯ್ಯರು ಕಣ್ಣಗಲಿಸಿಕೊಂಡು ಫೋಸು ನೀಡುತ್ತಿದ್ದರಾದರೂ , ಅಲ್ಲಿ ಯಾವ ಫೋಟೊಗ್ರಾಫರೂ ಇಲ್ಲದ್ದು ಒಂದೆರಡು ಕ್ಷಣಗಳಲ್ಲಿ ಅರಿವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದರು ! ಸಭಾ ಕಾರ್ಯಕ್ರಮದ ಕೊನೆಗೆ , ಹೆಸರು ಘೋಷಿಸಲು ಇಚ್ಛಿಸದ ವ್ಯಕ್ತಿಯೊಬ್ಬರು , ಕಲಾವಿದೆ ಗುಡೂರರಿಗೆ ಹತ್ತು ಸಾವಿರ ರೂ . ಕೊಡಲಿದ್ದಾರೆಂದು ಪ್ರಕಟಿಸಲಾಯಿತು . ವೇದಿಕೆಯಲ್ಲಿದ್ದ ಸಮಾಜಸೇವಕರಿಗೆ ಇದಕ್ಕಿಂತ ದೊಡ್ಡ ಮಂಗಳಾರತಿ ಬೇರೆ ಬೇಕಾ ? ! ಅಂತೂ ಏಳೂ ಮುಕ್ಕಾಲರ ಹೊತ್ತಿಗೆ , ಶಿವರಾಮ ಕಾರಂತರ ' ಮೈಮನಗಳ ಸುಳಿಯಲ್ಲಿ ' ಕಾದಂಬರಿ ನಾಟಕವಾಗಿ ರಂಗಕ್ಕೆ ಬಂತು . ೨೦ನೇ ವರ್ಷಕ್ಕೆ ಕಾಲಿಟ್ಟಿರುವ ಸಂಸ್ಥೆಯ ನಾಟಕಕ್ಕೆ , ನಿರ್ದೇಶಕರಾದ ಕೆ . ಎಸ್ . ಡಿ . ಎಲ್ . ಚಂದ್ರುರವರು ರೆಕಾರ್ಡೆಡ್ ಸಂಗೀತ ಬಳಸಿದ್ದರು ಅಂದರೆ ನೀವು ನಂಬಬೇಕು . ಅದೂ ದೃಶ್ಯದ ಕೊನೆಗೆ ಒಂಚೂರು . ಎರಡು ಪಾತ್ರಗಳ ಸಂಭಾಷಣೆ . ಅದು ನಿಂತಾಗಲಂತೂ ಅಸಹನೀಯ ಮೌನ . ನಾನಂತೂ ಆ ಕಾದಂಬರಿ ಓದದವನು . ಅದನ್ನು ಓದಿ ನಾಟಕ ನೋಡಹೋದವರನ್ನಂತೂ ಆ ಕಾರಂತರೇ ಕಾಪಾಡಬೇಕು . ಮಧ್ಯೆ ಎಲ್ಲೋ ಕ್ಯಾಸೆಟ್ ಜಂಗ್‌ಜಂಗ್ ಎಂದು ಸದ್ದು ಮಾಡಿ ನಿಲ್ಲುವುದು , ಕತ್ತಲಾಗಿ ಬೆಳಕು ಚೆಲ್ಲಿದ ಮೇಲೂ ನಟರಿಗೆ ಗ್ರೀನ್‌ರೂಂ ದಾರಿ ತಿಳಿಯದಿರುವುದು , ದಡಬಡ ಸದ್ದಾಗುವುದು . . . ಹೀಗೆ ನಿರಂತರ ಆಭಾಸ . ಈ ಎಲ್ಲದರ ಮಧ್ಯೆ ಕಲಾಕ್ಷೇತ್ರದಲ್ಲಿ ತುಂಬಿದ್ದ ಜನರನ್ನು ಕೊಂಚವಾದರೂ ಮುದಗೊಳಿಸಿದ್ದು , ಕಾರಂತರ ಕಾದಂಬರಿಯ ಸಾಲುಗಳು ಮಾತ್ರ . ಪುಕ್ಕಟೆ ನಾಟಕಕ್ಕೆ ಹೋಗಿ , ಈ ಪರಿ ರೂಪಾಂತರದ ಅವಾಂತರಗಳನ್ನು ನೋಡಿದ್ದು ಇದೇ ಮೊದಲು . ಹಿಂದಿನ ದಿನ ನಡೆದ ' ಬಡೇಸಾಬು ಪುರಾಣ ' ನಾಟಕ ಪರವಾಗಿಲ್ಲ , ಚೆನ್ನಾಗಿತ್ತು - ಎಂಬ ಸ್ನೇಹಿತರ ಮಾತು ಕೇಳಿ ನನ್ನಂಥವರು ಹೋದರೆ ಹೀಗೂ ಆಗೋದಾ ? ಅಂತೂ ಸಭಾ ಕಾರ್ಯಕ್ರಮ - ನಾಟಕದ ಎಲ್ಲ ಅಪಸವ್ಯಗಳ ನಡುವೆ , ಕರಿಬಸವಯ್ಯರ ಹೃದಯದಿಂದ ಬಂದ ಒಂದೇಒಂದು ಸತ್ಯವಾದ ಮಾತು - ' ನೀವು ಬೇಗ ಬೇಗ ಚಪ್ಪಾಳೆ ತಟ್ಟಿದ್ರೆ ಸಭಾ ಕಾರ್ಯಕ್ರಮ ಬೇಗ ಮುಗೀತದೆ ! '
ಭೂಗರ್ಭ ಶಾಸ್ತ್ರದ ಪ್ರಕಾರ ಭಾರತ ಮತ್ತು ಶ್ರೀಲಂಕೆಗಳು ಒಂದಾಗಿದ್ದುವೆಂದೂ , ಇವೆರಡರ ಮಧ್ಯೆ ಸಮುದ್ರವಿರಲಿಲ್ಲವೆಂದೂ ಶ್ರೀಲಂಕೆಯ ತಲೈಮನ್ನಾರ್‌ನಿಂದ ರಾಮೇಶ್ವರದವರೆಗೆ ಕಲ್ಲುಗಳು ಇದ್ದು ( ಆಡಂಬ್ರಿಜ್ ) ಇಲ್ಲಿ ಭೂಮಿ ಇದೆಯೆಂಬ ಕುರುಹು ಇದೆ . ಮತ್ತು ತಮಿಳುನಾಡಿನ ರಾಮೇಶ್ವರದಲ್ಲಿ ಸಯ್ಯಿದುನಾ ಆದಂ ( ಅ . ಸ ) ರ ಮಕ್ಕಳಾದ ಹಝ್ರತ್ ಹಾಬೀಲ್ ( ರ . ಅ . ) ಮತ್ತು ಹಝ್ರತ್ ಖಾಬೀಲ್ ( ರ . ಅ . ) ಮಕ್‌ಬರವಿರುತ್ತದೆ . ಪ್ರವಾದಿ ಹಝ್ರತ್ ನೂಹ್ ( ಅ . ಸ . ) ರವರ ಕಾಲದಲ್ಲಿ ( ಕ್ರಿ . ಪೂ . ೩೭೮೦ ) ಬಂದ ಭೀಕರ ಜಲಪ್ರಳಯದಿಂದಾಗಿ ಶ್ರೀಲಂಕೆ , ಭಾರತ ಭೂಖಂಡ ದಿಂದ ಬೇರ್ಪಟ್ಟಿತೆಂದೂ ಭೂಗರ್ಭ ಶಾಸ್ತಜ್ಞರು ಹೇಳಿರುತ್ತಾರೆ . ಹಾಗಾದರೆ ಹಿಂದಿನ ಕಾಲದಲ್ಲಿ ಶ್ರೀಲಂಕೆ ಭಾರತದ ಒಂದು ಭಾಗವಾಗಿತ್ತೆಂದು ಸ್ಪಷ್ಟವಾಗಿ ತಿಳಿಯುತ್ತದೆ . ಪ್ರವಾದಿ ಆದಂ ( . ಅ . ಸ ) ರವರ ಪಾದಕಮಲಗಳು ಪ್ರಥಮವಾಗಿ ಸ್ಪರ್ಶಿಸಲ್ಪಟ್ಟ ಸ್ಥಳ ಅಂದೂ , ಇಂದೂ ' ಆದಂಮಲೆ ' ಎಂದು ಕರೆಯಲ್ಪಡುವ ಶ್ರೀಲಂಕೆಯ ಆದಂ ಪರ್ವತದಲ್ಲಿ ಎಂದು ಚರಿತ್ರೆ ಉಲ್ಲೇಖಿಸುತ್ತದೆ . ಆ ಪುಣ್ಯ ಮಲೆ ಇಂದು ಜಗತ್ತಿನ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ . ಹಝ್ರತ್ ಆದಂ ( ಅ . ಸ . ) ರವರು ಆದಂಮಲೆಯ ಮೇಲಿನಿಂದ ಇಳಿದು ಬಂದು ಅದರ ಸುತ್ತಮುತ್ತಲ ಪರಿಸರಗಳಲ್ಲಿ ಸಂಚರಿಸಿದ್ದರು . ಆ ಬಳಿಕ ಅಲ್ಲಾಹನ ಆದೇಶದಂತೆ ಹಝ್ರ್ರತ್ ಆದಮ್ ( ಅ . ಸ . ) ಭಾರತದ ಮೂಲಕ ಕಾಲ್ನಡಿಗೆಯಲ್ಲೇ ಪವಿತ್ರ ಮಕ್ಕಾದ ಕಡೆಗೆ ಹೊರಟರು . ಮಕ್ಕಾ ತಲುಪಿದ ಅವರು ಮಾನವ ಪಾಪ ( ದೋಷ ) ಪರಿಹಾರಕ್ಕೆ ಮಲಾಯಿಕರು ( ದೇವದೂತ ) ಅಂತರೀಕ್ಷದಲ್ಲಿರುವ ಬೈತುಲ್ ಮಅಮೂರ್ ಮಸೀದಿಯ ನೇರಕ್ಕೆ ಭೂಮಿಯಲ್ಲಿ ನಿರ್ಮಿಸಿದ ಕಅಬಾ - ಶರೀಫಿಗೆ ತೆರಳಿ ಅಲ್ಲಾಹನ ಸ್ತುತಿಗೈದು , ತನ್ನ ಪತ್ನಿ ಹವ್ವಾ ( ರ . ಅ . ) ರನ್ನು ಅರಫಾ ಮೈದಾನದಲ್ಲಿ ಸಂಧಿಸಿದರು . ಅಲ್ಲಿಂದ ಅವರೀರ್ವರೂ ಭಾರತಕ್ಕೆ ಹಿಂತಿರುಗಿ ಇಲ್ಲೇ ವಾಸಿಸತೊಡಗಿದರು .
೨೦೦೪ ರ ಅಕ್ಟೋಬರ್ - ನವಂಬರ್ ತಿಂಗಳು ಕನ್ನಡ ಚಿತ್ರರಂಗದ ಇತಿಹಾಸದಲ್ಲೊಂದು ಮಹತ್ತರವಾದ ತಿರುವು . ಅದು ಕನ್ನಡೇತರ ಚಿತ್ರಗಳು ಆಯಾ ರಾಜ್ಯಗಳಲ್ಲಿ ಬಿಡುಗಡೆಯಾದ ೭ ವಾರಗಳ ನಂತರ ಕರ್ನಾಟಕದಲ್ಲಿ ಬಿಡುಗಡೆಯಾಗಬೇಕೆಂಬ ಪ್ರಯೋಗ . ಇದರಿಂದ ಕನ್ನಡ ಚಿತ್ರಗಳಿಗೆ ಉಪಯೋಗವಾಗುತ್ತದೆ ಎಂದು ಚಿತ್ರರಂಗದ ಹಿತೈಷಿಗಳು ಅಭಿಪ್ರಾಯಪಟ್ಟರು . ೭ ವಾರಗಳ ನಿರ್ಬಂಧದ ಜೊತೆಗೆ ಕರ್ನಾಟಕದಾದ್ಯಂತ ಪರಭಾಷೆ ಚಿತ್ರಗಳು ೬ ಕ್ಕಿಂತ ಹೆಚ್ಚು ಪ್ರಿಂಟ್ ಗಳನ್ನು ಹಾಕಬಾರದೆಂಬ ಒತ್ತಾಯವೂ ಇತ್ತು . ಇದರಿಂದ ಕನ್ನಡ ಚಿತ್ರಗಳಿಗೆ ಹೆಚ್ಚು ಚಿತ್ರಮಂದಿರಗಳು ದೊರಕುವ ಅನುಕೂಲವಿತ್ತು . ಈ ವಿಷಯವಾಗಿ ಕರ್ನಾಟಕ ರಕ್ಷಣಾ ವೇದಿಕೆ ತನ್ನ ಸಂಪೂರ್ಣ ಬೆಂಬಲವನ್ನು ಕನ್ನಡ ಚಿತ್ರೋದ್ಯಮಕ್ಕೆ ತೋರಿಸಿತು . ಒಟ್ಟಾರೆ ಕರ್ನಾಟಕ ರಕ್ಷಣಾ ವೇದಿಕೆ ತನ್ನನ್ನು ಈ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿತ್ತು . ಕರ್ನಾಟಕ ರಕ್ಷಣಾ ವೇದಿಕೆ ಈ ನಿಟ್ಟಿನಲ್ಲಿ ಮಾಡಿದ ಹೋರಾಟ ಹಾಗು ಅದರ ಫಲಶ್ರುತಿ : ೧ . ಬೆಂಗಳೂರಿನ " ಕಾವೇರಿ " ಚಿತ್ರಮಂದಿರದಲ್ಲಿ ಹಿಂದಿ ಚಿತ್ರ " ವೀರ್ ಜಾರ " ಬಿಡುಗಡೆ ಮಾಡುವುದಾಗಿ ಚಿತ್ರಮಂದಿರ ಸಿಬ್ಬಂದಿ ತೀರ್ಮಾನಿಸಿದರು . ಪರಭಾಷಾ ಚಿತ್ರಗಳ ವಿರುದ್ಧ ೭ ವಾರಗಳ ನಿರ್ಬಂಧವಿದ್ದರೂ ಚಿತ್ರ ಬಿಡುಗಡೆ ಮಾಡುತ್ತಿರುವುದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಿಡಿದೆದ್ದರು . ಚಿತ್ರಮಂದಿರದ ಮುಂದೆ ಕನ್ನಡಾಭಿಮಾನಿಗಳ ಸರಪಳಿ ಮಾಡಿ ಚಿತ್ರಮಂದಿರಕ್ಕೆ ಹೋಗದಂತೆ ಜನರನ್ನು ತಡೆಯಲು ಪ್ರಯತ್ನಿಸಿದರು . ಇವೆಲ್ಲದರ ನಡುವೆ ಕರ್ನಾಟಕ ರಕ್ಷಣಾ ವೇದಿಕೆಯ ಕೆಚ್ಚೆದೆಯ ಕನ್ನಡಿಗನೊಬ್ಬ ಚಿತ್ರಮಂದಿರದ ಧೋರಣೆ ವಿರೋಧಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದನು . ಕನ್ನಡಕ್ಕಾಗಿ , ಕನ್ನಡದ ಉಳಿವಿಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸುವುದಿಲ್ಲವೆಂಬ ಅಂಶವನ್ನು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಿರೂಪಿಸಿದರು . ೨ . ಇದೇ ಹಿಂದಿ ಚಿತ್ರ " " ವೀರ್ ಜಾರ " ವನ್ನು ಬೆಂಗಳೂರಿನ " ಅಭಿನಯ " ಚಿತ್ರಮಂದಿರದಲ್ಲೂ ಪ್ರದರ್ಶಿಸುತ್ತಿದ್ದರು . ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಚಿತ್ರಮಂದಿರದೊಳಗೆ ನುಗ್ಗಿ ಪರದೆಯನ್ನು ಹರಿದು ಹಾಕಿ ಚಿತ್ರಮಂದಿರದ ಸಿಬ್ಬಂದಿಯನ್ನು ಎಚ್ಚರಿಸಿ ಬಂದರು . ೩ . ಅಕ್ಟೋಬರ್ ೧೨ ರಂದು ಬೆಂಗಳೂರಿನ " ವೈಭವ್ " ಚಿತ್ರಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ " ವೀರ್ ಜಾರ " ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಲಿಲ್ಲ . ೪ . ಕನ್ನಡಿಗರು ಪರಭಾಷಾ ಚಿತ್ರಗಳಿಗೆ ನಿರ್ಬಂಧ ಹಾಕಿರುವ ಕಾರಣ ಬಳ್ಳಾರಿಯಲ್ಲಿ ತೆಲುಗರು ಕನ್ನಡದ " ಕಲಾಸಿಪಾಳ್ಯ " ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡಲಿಲ್ಲ . ಹಾಗೆಯೇ ತೆಲುಗು ನಟ ಚಿರಂಜೀವಿ ಅಭಿನಯದ ಒಂದು ತೆಲುಗು ಚಿತ್ರ ಬಿಡುಗಡೆ ಮಾಡಲು ಯತ್ನಿಸಿದರು . ಈ ವಿಷಯವಾಗಿ ಕರ್ನಾಟಕ ರಕ್ಷಣಾ ವೇದಿಕೆ ಬೃಹತ್ ಪ್ರತಿಭಟನೆ ಮಾಡಿ ಕಲಾಸಿಪಾಳ್ಯ ಚಿತ್ರ ತೆರೆ ಕಾಣುವಂತೆ ಮಾಡಿತು . ೫ . ಬೆಂಗಳೂರಿನ " ಮೂವೀಲ್ಯಾಂಡ್ " ಚಿತ್ರಮಂದಿರದಲ್ಲಿ ತೆಲುಗು ಚಿತ್ರ ಬಿಡುಗಡೆ ಮಾಡಲು ಹೊರಟಾಗ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅದನ್ನು ವಿರೋಧಿಸಿ ಚಿತ್ರ ಬಿಡುಗಡೆಯಾಗದಂತೆ ನೋಡಿಕೊಂಡರು . ೬ . ಈ ವಿಷಯವಾಗಿ ಅಕ್ಟೋಬರ್ ೯ ರಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಗಳೂರಿನ " ಇನ್ನೊವೇಟಿವ್ ಮಲ್ಟಿಪ್ಲೆಕ್ಸ್ " ಚಿತ್ರಮಂದಿರದ ವಿರುದ್ಧ ಪ್ರತಿಭಟಿಸಿ ಚಿತ್ರಮಂದಿರಕ್ಕೆ ಲಗ್ಗೆ ಹಾಕಿದರು .
ಕೋಲಾರ : ಇನ್ನು ಅರ್ಚಕರಿಗೂ ಬಂತು ಸೈಕಲ್ ತುಳಿಯುವ ಭಾಗ್ಯ : ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳ ಅರ್ಚಕರಿಗೆ ಸೈಕಲ್ ವಿತರಣೆ
ಇಂಥಹ ಕ್ಲಿಷ್ಟಕರ ಪದ್ಯ ಮುಂದಿಟ್ಟ ನಿಮ್ಮ ಮೇಲೆ ಕೋಪದೊಂದಿಗೆ , ಖುಷಿಯಾಗುತ್ತಿದೆ .
ಜ್ಯೋತಿ ಬಸು 25 ವರ್ಷ ಪಶ್ಚಿಮ ಬಂಗಾಳವನ್ನಾಳಿದರು . ಕರುಣಾನಿಧಿ ಇದುವರೆಗೂ 18 ವರ್ಷ ತಮಿಳು ನಾಡನ್ನಾಳಿದ್ದಾರೆ . ನವೀನ್ ಪಟ್ನಾಯಕ್ ಕಳೆದ 10 ವರ್ಷಗಳಿಂದ ಒರಿಸ್ಸಾವನ್ನಾಳುತ್ತಿದ್ದಾರೆ . ಇವರ ಹೆಸರು ಹೇಳಿದಾಕ್ಷಣ , ಕೇಳಿದಾಕ್ಷಣ ನಿಮಗೆ ಒಂದಾದರೂ ಸಾಧನೆ ನೆನಪಾಗುತ್ತದೆಯೇ ? ಅಳಿದ ಮೇಲೂ ನೆನಪಿಸಿ ಕೊಳ್ಳುವಂತಹ ಒಂದಾದರೂ ಸಾಧನೆ ಮಾಡಿದ್ದಾರೆಯೇ ? ಮಾಡುವ ಲಕ್ಷ್ಮಣವಾದರೂ ಇದೆಯೇ ? ಆದರೆ … ಮೈಸೂರು ಒಡೆಯರು ಹಾಗೂ ಬ್ರಿಟಿಷರ ಅಂಕುಶದಡಿ 1912ರಿಂದ 1918ರವರೆಗೂ ಆಡಳಿತ ನಡೆಸಿದ ಸರ್ . ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಆಳಿದ್ದು ಕೇವಲ 6 ವರ್ಷಗಳಾದರೂ , ಮಾಡಿದ್ದು ಎಂತಹ [ . . . ]
" ಕನ್ನಡಿಗರಿಗೆ ಕನ್ನಡವೇ ಆಗಬೇಕೆಂದೇನಿಲ್ಲ " ಅಂತ ಅವರಿಗೆ ಅನಿಸಿರಬಹುದು ಎಂದು ಹೇಳುವುದರಲ್ಲಿ ಹೊಸತೇನಿಲ್ಲ . ಅದನ್ನ ಹೇಳೊಕ್ಕೆ ನೀವೇ ಆಗಬೇಕೇನಿಲ್ಲ . ಆದರೆ ಕನ್ನಡದಲ್ಲೇ ಎಲ್ಲವೂ ( ಮಾಹಿತಿ / ಸುದ್ಧಿ ) ಸಿಗುವ ಹಾಗೆ ಆಗಬೇಕು ಅನ್ನುವುದು ಒಂದು ಛಲದ ವಿಷಯ . ಕನ್ನಡಿಗರ ಮೇಲೆ ಅದರ ಸತ್ಪರಿಣಾಮ ಹಲವಾರು . ಅದನ್ನು ಸಾಧಿಸಲು ಮುಂದಿನ ಹೆಜ್ಜೆಯಿಡಲು ಈ ರೀತಿ ನಕ್ಕು ಕೈಬಿಟ್ಟರೆ ಸಾಲದು ಎಂಬುದನ್ನು ನೀವು ಅರ್ಥ ಮಾಡಿಕೊಳ್ಳುವುದು ಲೇಸು .
ನಮ್ಮ ಕನ್ನಡ ಸಿನಿಮಾ ಮಂದೀನೂ ಹೀಗೇ ಬ್ಲಾಗ್ ಮಾಡಿದರೆ ಚೆಂದ ಇರುತ್ತೆ , ಅಲ್ವ ? ಹೀಗೆ ಕನ್ನಡದಲ್ಲಿ ಕನ್ನಡ ಸಿನಿಮಾದವರು ಯಾರು ಮೊದಲು ಬ್ಲಾಗ್ ಮಾಡಬಹುದು ? ನಿಮಗೇನನ್ನಿಸುತ್ತೆ ? : - )
ಜೆಡಿಎಸ್ ಕೆಲ ಪ್ರದೇಶಗಳಿಗೆ ಸೀಮಿತವಾಗಿದೆ . ಎಡ ಪ್ರಜಾಪ್ರಭುತ್ವ ಶಕ್ತಿಗಳು ತಮ್ಮ ಅಸ್ತಿತ್ವವನ್ನು ಮಾತ್ರ ತೋರಿಸಿಕೊಂಡಿವೆ . ಈ ಪರಿಸ್ಥಿತಿ ಬಿಜೆಪಿಗೆ ಪೂರಕವಾಗಿದೆ . ಆದರೆ ಸರಕಾರದ ದುರಾಡಳಿತದಿಂದ ರೋಸಿ ಹೋಗಿರುವ ಜನರೇ ನಿಜವಾದ ಪರ್ಯಾಯವನ್ನು ಕಂಡುಕೊಳ್ಳಬೇಕಾಗಿದೆ .
( ಈ ಲೇಖನವನ್ನು ಬರೆಯಲು ಗೆಳೆಯ ಲೋಹಿತ್ ಬೆಳೆಸಿದ " ಲೋಹಿತಂತ್ರಾಂಶ " ಬಳಸಿದ್ದೇನೆ ) ವಿದ್ಯಾರ್ಥಿ ಭವನದಲ್ಲಿ ದೋಸೆ ತಿನ್ನುವ ಕಾರ್ಯಕ್ರಮ . ಒಬ್ಪೊಬ್ಪರದು ಒಂದೊಂದು ಬೇಡಿಕೆ . ನಾನು ವಡೆ ತಿನ್ನುವುದಿಲ್ಲ , ಇನ್ನೊಬ್ಬರಿಗೆ ಕೇಸರಿ ಬಾತ್ ಆಗದು , ನಾಲ್ಕು ದೋಸೆ , ಮೂರು ವಡೆ , ಎರಡು ಕೇಸರಿ ಬಾತ್ . ಈ ರೀತಿ ಪ್ರತೀ ಮೇಜಿನಲ್ಲೂ ಬೇರೆ ಬೇರೆ ಬೇಡಿಕೆಗಳು . ಬೇರೆ ಮೇಜಿನ ಬೇಡಿಕೆಗಳನ್ನು ಕೇಳಿ ಬರುತ್ತಿದ್ದಂತೆ . ನಮ್ಮ ಮೆನು ಬದಲಾಗಿರುತ್ತದೆ ! ವಡೆ ಮೂರರ ಬದಲು ಎರಡು ಕೊಡಿ , ಕೇಸರಿ ಬಾತ್ ಮೂರು ಇರಲಿ . ಯಾವ ಯಾವ ಮೇಜಿನಿಂದ ಯಾರು ಯಾವುದನ್ನು ಆರ್ಡರ್ ಮಾಡಿದ್ದಾರೆ , ಎಷ್ಟು ಆರ್ಡರ್ ಮಾಡಿದ್ದಾರೆ , ಮತ್ತೆ ಎಲ್ಲೆಲ್ಲಿ ಬದಲಾವಣೆ ಮಾಡಿದ್ದಾರೆ ಎಲ್ಲವನ್ನೂ ನೆನಪಿಟ್ಟುಕೊಂಡು ಹೋಟೆಲ್ ' ತಮ್ಮ ' ತಂದು ಕೊಡಬೇಕು . ಅಲ್ಲದೇ ಸರಿಯಾಗಿ ಅದಕ್ಕೆ ತಕ್ಕಂತೆ ಬಿಲ್ ಮಾಡಬೇಕು ! ಬಿಲ್ಲಿನಲ್ಲಿ ಕೊಂಚ ಏರುಪೇರಾದರೂ ಮಾಲಿಕನ ಬಳಿ ಇಲ್ಲವೇ ಗಿರಾಕಿಯ ಬಳಿ ಬೈಸಿಕೊಳ್ಳಬೇಕು . ಆದರೆ ಈ ಹುಡುಗರು ಸರಿಯಾಗಿ ತಂದು ಕೊಡುತ್ತಾರೆ , ಸರಿಯಾಗಿ ಬಿಲ್ಲಿಂಗ್ ಮಾಡುತ್ತಾರೆ . ತಪ್ಪುವುದು ತೀರಾ ಕಮ್ಮಿ ! ಹತ್ತನೆಯ ತರಗತಿಯನ್ನೂ ಪಾಸು ಮಾಡಲಾಗದ ಆ ಹುಡುಗರು ಅಷ್ಟು ನಿಖರವಾಗಿ ಹೇಗೆ ಕೆಲಸ ಮಾಡುತ್ತಾರೆ ? ಎಲ್ಲವನ್ನೂ ಹೇಗೆ ನೆನಪಿಟ್ಟುಕೊಳ್ಳುತ್ತಾರೆ ? ಬಟ್ಟೆ ಇಸ್ತ್ರಿ ಮಾಡುವವನು ಅಥವಾ ತೊಳೆಯುವವನ ಉದಾಹರಣೆ ಎಲ್ಲರಿಗೂ ಚಿರಪರಿಚಿತ . ಯಾರ ಮನೆಯಿಂದ ಯಾರ ಬಟ್ಟೆ , ಯಾರು ಎಷ್ಟು ಕೊಟ್ಟಿದ್ದಾರೆ , ಯಾವಾಗ ವಾಪಸು ಕೊಡಬೇಕು ಎಲ್ಲವನ್ನೂ ಆ ಗಮಾರ ( ? ) ನೆನಪಿಟ್ಟುಕೊಂಡು ತಂದು ಕೊಡುತ್ತಾನಲ್ಲ . ಅನೇಕ ಅಗಸರು ತಿಂಗಳ ಕಡೆಯಲ್ಲಿ ಅಥವಾ ವಾರದ ಕಡೆಯಲ್ಲಿ ಹಣ ಪಡೆಯುತ್ತಾರೆ . ಆಗಲೂ ಅವರಿಗೆ ವಾರ ಪೂರ್ತಿಯ ಯಾರ ಯಾರ ಮನೆಯ ಎಷ್ಟೆಷ್ಟು ಬಟ್ಟೆ , ಒಬ್ಬೊಬ್ಬರದು ಎಷ್ಟೆಷ್ಟು ಬಾಕಿ ಹಣ ಎಲ್ಲವನ್ನೂ ನೆನಪಿಟ್ಟುಕೊಂಡಿರುತ್ತಾರೆ . ಕಿಂಚಿತ್ ತಪ್ಪೂ ಆಗುವುದಿಲ್ಲ . ಒಂದು ಬಾರಿಯೂ ಒಬ್ಬರ ಮನೆಯ ಬಟ್ಟೇ ಇನ್ನೊಬ್ಬರ ಮನೆಗೆ ಹೋಗುವುದಿಲ್ಲ ! ಯಾವ ವ್ಯವಸ್ಥೆ ಇವರನ್ನು ಇಷ್ಟು " ಅಕ್ಯುರೇಟ್ " ಆಗಿಸುತ್ತದೆ ? ಪೇಪರ್ ಹಾಕುವ ಹುಡುಗ . ನೂರಾರು ಇಂಗ್ಲಿಶ್ , ಕನ್ನಡ ಪತ್ರಿಕೆಗಳ ನಡುವೆ ಯಾವುದು ಯಾರ ಮನೆಗೆ ಹೋಗಬೇಕು ಎಂದು ನೆನಪಿಟ್ಟುಕೊಳ್ಳುತ್ತಾನೆ . ಕೆಲ ತಿಕ್ಕಲು ಓದುಗರು ಹೇಗಿರುತ್ತಾರೆ ಎಂದರೆ ಭಾನುವಾರ ಪ್ರಜಾವಾಣಿ ಮಾತ್ರ ಹಾಕು , ಬುಧವಾರ ವಿತ್ತಪ್ರಭ ಮಾತ್ರ ಹಾಕು , ಟೈಮ್ಸ್ ಆಫ್ ಇಂಡಿಯಾ ಶುಕ್ರವಾರ ಮಾತ್ರ ಸಾಕು ಎಂದೆಲ್ಲಾ ಕಂಡಿಶನ್ನುಗಳನ್ನು ಇಟ್ಟಿರುತ್ತಾರೆ . ಇದನ್ನೆಲ್ಲ ಪ್ರತಿಯೊಂದು ಮನೆಯ ಮಟ್ಟಿಗೂ ನೆನಪಿಡಬೇಕು . ಸರಿಯಾಗಿ ಆಯಾ ಪತ್ರಿಕೆಯನ್ನು ಬೆಳಗಿನ ಚಹಾ ಸಮಯದೊಳಗೆ ತಲುಪಿಸಬೇಕು . ಇಲ್ಲದಿದ್ದರೆ ಬೈಗುಳ ಗ್ಯಾರಂಟಿ ! ಸಾಲದೆಂಬಂತೆ ಈ ತಿಂಗಳಲ್ಲಿ ಯಾವ ಪತ್ರಿಕೆಯದು ಎಷ್ಟು ರಜೆಗಳು ಬಂದಿವೆ , ಯಾವ ದಿನ ಗಿರಾಕಿಗಳು ಊರಿಗೆ ಹೋಗಿದ್ದರಿಂದ ಪೇಪರ್ ಹಾಕಲಾಗಿಲ್ಲ ಎಂದು ನೆನಪಿಟ್ಟು ಬಿಲ್ಲಿಂಗ್ ಮಾಡಬೇಕು . ಪೇಪರ್ ಹಾಕುವ ಹುಡುಗನ ಕೆಲಸ ಎಂದರೆ ಸಾಮಾನ್ಯ ವಿಷಯವೇ ? ಮುಂಬಯಿ ಡಬ್ಬಾವಾಲಾಗಳ ಕೆಲಸದ ನಿಖರತೆಗೆ ದೇಶವಿದೇಶದ ಮ್ಯಾನೇಜ್ ಮೆಂಟ್ ಕಾಲೇಜುಗಳು ಮಾರು ಹೋಗಿವೆ . ರಾಜಕುಮಾರ ಚಾರ್ಲ್ಸ್ ಸ್ವತಃ ಬಂದು ಅಭಿನಂದಿಸಿದ್ದಾನೆ ! ಮುಂಬಯಿ ಡಬ್ಬಾವಾಲಾಗಳ ಬಳಿ ಊಟದ ಡಬ್ಬಿ ಬದಲಾಗುವುದು ಕೋಟಿಗೊಮ್ಮೆ ಮಾತ್ರ ! ಡಬ್ಬಾವಾಲಾಗಳು ಯಾವುದೇ ಮ್ಯಾನೇಜ್ ಮೆಂಟ್ ಕೋರ್ಸ್ ಮಾಡಿದವರಲ್ಲ , ಹೋಗಲಿ ಯಾವ ಡಿಗ್ರಿಯನ್ನೂ ಪಡೆದವರಲ್ಲ ! ಸಿಕ್ಸ್ ಸಿಗ್ಮಾ ಎಂಬ ಪದವಿದೆ . ತಾಂತ್ರಿಕ ಮತ್ತು ಮ್ಯಾನೇಜ್ ಮೆಂಟ್ ಕ್ಷೇತ್ರದಲ್ಲಿರುವವರಿಗೆ ಇದು ಪರಿಚಿತ ಹೆಸರು . ಇದು ಸೇವಾ ಕ್ಷೇತ್ರದಲ್ಲಿನ ದಕ್ಷತೆಯ ಅಳತೆಗೋಲು . ಸಿಕ್ಸ್ ಸಿಗ್ಮಾ ಎಂದರೆ ಸೇವೆ ನೀಡುವ ಹತ್ತು ಲಕ್ಷ ( ಒಂದು ಮಿಲಿಯನ್ ) ಯುನಿಟ್ ಗಳಲ್ಲಿ ಒಂದು ಬಾರಿ ಮಾತ್ರ ದೋಷ ಬರಬಹುದು ! ಅಂದರೆ ನೀವು ವಾಚಿನ ತಯಾರಕರಾಗಿದ್ದರೆ ಹತ್ತು ಲಕ್ಷ ವಾಚುಗಳ ಪೈಕಿ ಒಂದು ವಾಚು ಮಾತ್ರ ದೋಶಪೂರಿತವಾಗಿರಬಹುದು . ಆಗ ಮಾತ್ರ ನಿಮಗೆ ಸಿಕ್ಸ್ ಸಿಗ್ಮಾ ಛಾಪು ಸಿಗುತ್ತದೆ . ಸಾಫ್ಟ್ ವೇರ್ ನ ಹತ್ತು ಲಕ್ಷ ಸಾಲಿನ ' ಕೋಡ್ ' ನಲ್ಲಿ ಹೆಚ್ಚೆಂದರೆ ಒಂದು ಸಾಲು ಮಾತ್ರ ದೋಷದಿಂದ ಕೂಡಿರಬಹುದು ! ಅಗಸರವನು ಹತ್ತು ಲಕ್ಷ ಬಟ್ಟೆಗಳ ಪೈಕಿ ಒಂದು ಬಟ್ಟೇಯನ್ನು ಮಾತ್ರ ಕಳೆದು ಹಾಕಬಹುದು . ನಮ್ಮ ಡಬ್ಬಾವಾಲಾಗಳ ಡಬ್ಬಿ ಕೋಟಿಗೆ ಒಂದು ಬಾರಿ ಮಾತ್ರ ವ್ಯತ್ಯಾಸ ಬರುತ್ತದೆ . ಅವರ ಸೇವೆಯ ದಕ್ಷತೆಯ ಮುಂದೆ ಸಿಕ್ಸ್ ಸಿಗ್ಮಾ ಅಳತೆಗೋಲೇ ಚಿಕ್ಕದಾಗಿ ಹೋಯಿತು ! ನಮ್ಮ ಹೋಟೆಲ್ ಮಾಣಿಗಳು , ಅಗಸರವನು ಯಾವ ಸಿಕ್ಸ್ ಸಿಗ್ಮಾಕ್ಕೂ ಕಡಿಮೆಯಿಲ್ಲ ! ದೊಡ್ಡ ದೊಡ್ಡ ಸಾಫ್ಟ್ ವೇರ್ ಕಂಪನಿಗಳು ಸಿಕ್ಸ್ ಸಿಗ್ಮಾ ಪಡೆಯಲು ಹೆಣಗುತ್ತವೆ . ಈ ಕಂಪನಿಗಳಲ್ಲಿ ಕೆಲಸ ಮಾಡುವವರು ಅತ್ಯಂತ ಬುದ್ಧಿವಂತರಾದ ' ಕ್ವಾಲಿಫೈಡ್ ' ಇಂಜಿನಿಯರುಗಳು , ಮ್ಯಾನೇಜ್ ಮೆಂಟ್ ಕುಳಗಳು ! ಆದರೂ ನಮ್ಮ ದೇಶದಲ್ಲಿ ಸಿಕ್ಸ್ ಸಿಗ್ಮಾ ಪಡೆದ ಕಂಪನಿಗಳು ಕೆಲವೇ ಕೆಲವು ಅದೂ ಕೆಲವು ಪ್ರಾಜೆಕ್ಟ್ ಗಳಿಗೆ ಮಾತ್ರ ! ನಮ್ಮ ಹೋಟೆಲ್ ತಮ್ಮಂದಿರು , ಅಗಸರು , ಡಬ್ಬವಾಲಾಗಳು , ಪೇಪರ್ ಹುಡುಗರು ಸಾಧಿಸಿರುವ ದಕ್ಷತೆಯನ್ನು ಸಾಧಿಸಲು ನಮ್ಮ ಮಹಾಬುದ್ಧಿವಂತ ಐ ಎ ಎಸ್ ಆಫೀಸರುಗಳು ಎಷ್ಟು ಸಮಯ ತೆಗೆದುಕೊಳ್ಳುತ್ತಾರೋ !
ಧರಿತ್ರಿ , ' ಮತ ನೀಡಿ ' , ' ಆಶೀರ್ವಾದ ಮಾಡಿ ' , ' ನಮ್ಮ ಚಿಹ್ನೆಯ ಮೇಲೆಯೇ ನಿಮ್ಮ ಠಸ್ಸೆ ಒತ್ತಿ ' , ಹೀಗೆ ಏನು ಹೇಳಿದರೂ ಮತದಾರ ಮಾತ್ರ ತನಗೆ " ಇಷ್ಟವಾದ " ಅಭ್ಯರ್ಥಿಗೇ ಮತ ಹಾಕುತ್ತಾನೆ . ಚುನಾವಣೆಯ ಪೂರ್ವದಲ್ಲಿ ಏನೇನೋ ಆಗಬಹುದು , ಆದರೆ ಕೊನೆಯಲ್ಲಿ 60 ಪ್ರತಿಶತ ಜನರಿಂದ ತಿರಸ್ಕೃತ ಅಯೋಗ್ಯನೊಬ್ಬ ಜನಪ್ರತಿನಿಧಿಯಾಗಿ ಆರಿಸಿ ಬರುವುದು ಪ್ರಜಾಪ್ರಭುತ್ವದ ದುರಂತವೇ ಅಲ್ಲವೇ . ಪ್ರತಿಕ್ರಿಯೆಗೆ ಧನ್ಯವಾದಗಳು .
' ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಂಗೀತ ನಿರ್ದೇಶಕ ಹಂಸಲೇಖ ಅವರು ಜಾನಪದ ಕಲಾವಿದರನ್ನು ನಿಂದಿಸಿದ್ದಾರೆ ಹಾಗೂ ಅವರನ್ನು ನಿಂದಿಸಲು ಸವಿತಾ ಸಮಾಜದ ಹೆಸರನ್ನು ಬಳಸಿದ್ದಾರೆ ' ಎಂದು ಆರೋಪಿಸಿ ಕ್ಷೌರಿಕ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು . ಬೆಂಗಳೂರಿನ ರಾಜಾಜಿ ನಗರದ ಮೋದಿ ರಸ್ತೆಯ ಶಂಕರಪುರ ಉದ್ಯಾನವನದ ಬಳಿ ಇರುವ ಹಂಸಲೇಖ ಅವರ ಮನೆ ಮುಂಭಾಗ ಸೇರಿದ್ದ ನೂರಾರು ಮಂದಿ ಕಾರ್ಯಕರ್ತರು ' ಹಂಸಲೇಖ ಅವರು ವಿಶ್ವ ಕನ್ನಡ ಸಮ್ಮೇಳನದಲ್ಲಿ ಸವಿತಾ [ . . . ]
ಇಲ್ಲಿನ ಛಾಪ್ರಿ ಗ್ರಾಮದಲ್ಲಿ 2006ರಲ್ಲಿ ಗುಜರಾತ್ ಪೊಲೀಸರಿಂದ ನಡೆದಿದೆ ಎನ್ನಲಾದ ತುಳಸಿ ಪ್ರಜಾಪತಿ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತಂಡ ಮತ್ತು ವಿಧಿ ವಿಜ್ಞಾನ ತಜ್ಞರು ಮರು ಅಭಿನಯ ನಡೆಸಿದ್ದಾರೆ .
ನಾವು ವನ್ಯಮೃಗಗಳಾದ ಸಿಂಹ , ಹುಲಿ ಮುಂತಾದ ಪ್ರಾಣಿಗಳು ಇತರ ಪ್ರಾಣಿಗಳನ್ನು ಬೇಟೆಯಾಡಿ ಕೊಂದು ಆಹಾರವಾಗಿಸಿಕೊೞುತ್ತವೆ . ಇದು ಅವುಗಳ ಸ್ವಧರ್ಮ ಅಂದರೆ ಅವುಗಳ ಪ್ರಕೃತಿಸಹಜವಾದ ಗುಣ . ಅವುಗಳಿಗೆ ವಿವೇಕ ಇಲ್ಲದ ಕಾರಣ ಅದರ ಬಗ್ಗೆ ಯೋಚಿಸಿ ತಮ್ಮ ಸ್ವಭಾವವನ್ನು ಬದಲಿಸಿಕೊೞುವ ಪ್ರಶ್ನೆಯೇ ಇಲ್ಲ . ಅವುಗಳಿಗೆ ಆ ಶಕ್ತಿ ಇಲ್ಲದ ಕಾರಣ ಇತರ ಪ್ರಾಣಿಗಳನ್ನು ತಮ್ಮ ಆಹಾರಕ್ಕಾಗಿ ಕೊಂದರೆ ಅದು ನಿಷಿದ್ಧ ಕರ್ಮ ಆಗುವುದಿಲ್ಲ . ಆದರೆ ಮನುಷ್ಯರ ವಿಷಯದಲ್ಲಿ ಹಾಗಲ್ಲ . ಮನುಷ್ಯನಿಗೆ ವಿವೇಚನಾ ಶಕ್ತಿಯಿದೆ . ಒಳಿತು ಕೆಡಕುಗಳ ಪ್ರಜ್ಞೆಯಿದೆ . ಯಾವುದೇ ಕಾರ್ಯವನ್ನೇ ಆಗಲಿ ಯೋಚಿಸಿ ಮಾಡುವ ಸಾಮರ್ಥ್ಯವಿದೆ . ಆದ್ದರಿಂದ ನಾವೇ ಯೋಚಿಸಿ ನಿರ್ಧರಿಸಬೇಕಾಗಿದೆ . ನಮಗೆ ಜೀವ ತುಂಬುವ ಶಕ್ತಿ ಇಲ್ಲ . ಆದ್ದರಿಂದ ಜೀವ ತಗೆಯುವ ಹಕ್ಕೂ ಇಲ್ಲ ಎನ್ನುವುದು ಒಂದು ವಾದ . ಈ ವಾದದ ಪ್ರಕಾರ ನಮ್ಮ ಆಹಾರಕ್ಕಾಗಿಯಾದರೂ ಪ್ರಾಣಿಗಳನ್ನು ಕೊಲ್ಲುವುದು ನಿಷಿದ್ಧಕರ್ಮವಾಗುತ್ತದೆ . ಆದರೆ ತಿನ್ನಲು ಬೇರೇ ಏನೂ ಸಿಗದಂತಹ ಪ್ರದೇಶಗಳೂ ಈ ಭೂಮಿಯ ಮೇಲಿವೆ . ಅಂತಹ ಪ್ರದೇಶಗಳಲ್ಲಿ ಕೇವಲ ತನ್ನ ಉಳಿವಿಗೋಸ್ಕರ ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದು ( ಹುಲಿ , ಸಿಂಹಗಳಂತೆ ) ನಿಷಿದ್ಧಕರ್ಮವಲ್ಲ ಎನ್ನುವುದು ನನ್ನ ಭಾವನೆ .
@ ಮಾಲಾ , ಬೀರಟ್ ನಗರವನ್ನು ನಾನಂತೂ ನೋಡಿಲ್ಲ . ಆದರೆ ಗಿಬ್ರಾನ್ ನನ್ನ ತಲೆಯಲ್ಲಿ ಆ ಊರಿನ ಚಿತ್ರಣ ಯಾವ ಪರಿ ತುಂಬಿದ್ದಾನೆಂದರೆ , ನಾನು ಬೀರಟ್ ನೋಡಿರಲಿಲ್ಲ ಎಂದು ಎನಿಸಿಯೇ ಇಲ್ಲ . ನಿಜವಾಗ್ಲೂ ಬೀರಟ್ ಅಷ್ಟೊಂದು ಸುಂದರ ನಗರವೇ ? ಅದೃಷ್ಟವಂತೆ ನೀವು . " ಮುಂದಿನ ಕಂತಿಗಾಗಿ ಕಾಯುವೆ " ಎಂಬ ನಿಮ್ಮ ಸಾಲು ನನ್ನಲ್ಲಿದ್ದ ನನ್ನ ಬಗ್ಗೆಯ ಅಪನಂಬಿಕೆಯನ್ನು ತೆಗೆದು ಹಾಕಿದೆ . ನನಗೆ ಗಿಬ್ರಾನ್ ನ ಬರವಣಿಗೆಯನ್ನು ನಾನು ಸ್ವಲ್ಪವಾದರೂ ನ್ಯಾಯ ಸಲ್ಲುವಂತೆ ತರ್ಜುಮೆಗೊಳಿಸಬೇಕು , ಇಲ್ಲವಾದರೆ ಅವನನ್ನು ಓದಿರದ ಜನ ನನ್ನ ತರ್ಜುಮೆ ಓದಿ ' ಓ ಗಿಬ್ರಾನ್ ಎಂದರೆ ಏನೇನೋ ಅಂತಾರೆ , ಇಷ್ಟೇನೋ ' ಎನ್ನುವಂತಾಗಬಾರದು ಎಂಬ ಅಳುಕು ನನ್ನಲ್ಲಿ . ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು . - ಎಮ್ . ಡಿ
[ ಅರಸರು ಪ್ರಜೆಗಳೊಂದಿಗೆ ನಡೆದುಕೊಳ್ಳುತ್ತಿದ್ದ ಕ್ರೂರ - ದರ್ಪದ ಪ್ರತೀಕದಂತೆ ಹೊರಟಿತು ಈ ಆಜ್ಞೆ ! ಮಾಡದ ಅಪರಾಧಕ್ಕೆ ಆಯಿ ಗುರಿಯಾದಳು . - ಡಾ . ತಮಿಳು ಸೆಲ್ವಿ ]
ನಿಮ್ಮ ಒಡನಾಟದಿಂದ ಚಿಂತೆಗೆ ಬೇಸರವಾಗುವುದನ್ನು ತೃಪ್ತಿ ಎನ್ನಬಹುದು - - ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು - - - ೫೯
ಹಚ್ಚೇವು ಕನ್ನಡದ ದೀಪ , ಕರುನಾಡ ದೀಪ ಸಿರಿ ನುಡಿಯ ದೀಪ , ಒಲವೆತ್ತಿ ತೋರುವ ದೀಪ .
ಇಂದು ಮಾನಸಿಕ ಆರೋಗ್ಯ ಸ್ಥಿತಿಗತಿಗಳನ್ನು ವರ್ಗೀಕರಿಸಲು ಮೂರು ಪ್ರಮುಖ ರೋಗನಿದಾನದ ಕೈಪಿಡಿಗಳನ್ನು ಬಳಸಲಾಗುತ್ತದೆ . ವಿಶ್ವ ಆರೋಗ್ಯ ಸಂಸ್ಥೆಯು ಸಿದ್ಧಪಡಿಸಿ , ಪ್ರಕಟಿಸುವ ICD - 10 ಕೈಪಿಡಿಯು ಮನೋವೈದ್ಯಶಾಸ್ತ್ರದ ಸ್ಥಿತಿಗತಿ ಕುರಿತ ವಿಭಾಗಗಳನ್ನು ಒಳಗೊಂಡಿರುತ್ತದೆ ಮತ್ತು ವಿಶ್ವಾದ್ಯಂತ ಬಳಕೆಯಾಗುತ್ತದೆ . [ ೯೫ ] ಅಮೆರಿಕದ ಮನೋವೈದ್ಯಶಾಸ್ತ್ರ ಸಂಘ ( ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಶನ್ ) ಪ್ರಕಟಿಸುವ ಮಾನಸಿಕ ಅಸ್ವಸ್ಥತೆಗಳ ರೋಗನಿದಾನ ಮತ್ತು ಅಂಕಿಸಂಖ್ಯಾತ್ಮಕ ಕೈಪಿಡಿಯು , ಮುಖ್ಯವಾಗಿ ಮಾನಸಿಕ ಆರೋಗ್ಯದ ಸ್ಥಿತಿಗತಿಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಪ್ರಮುಖ ವರ್ಗೀಕರಣದ ಸಾಧನವಾಗಿದೆ . [ ೯೬ ] ಪ್ರಸ್ತುತ ಅದರ ನಾಲ್ಕನೇ ಪರಿಷ್ಕೃತ ಆವೃತ್ತಿಯು ಸಿದ್ಧವಾಗುತ್ತಿದ್ದು , ಇದನ್ನೂ ವಿಶ್ವಾದ್ಯಂತ ಬಳಸಲಾಗುತ್ತದೆ . [ ೯೬ ] ಚೀನಾ ಮನೋವೈದ್ಯಶಾಸ್ತ್ರ ಸಂಘವು ಮಾನಸಿಕ ಅಸ್ವಸ್ಥತೆಗಳ ಚೀನೀ ವರ್ಗೀಕರಣ ( ಚೀನೀಸ್ ಕ್ಲಾಸಿಫಿಕೇಶನ್ ಆಫ್ ಮೆಂಟಲ್ ಡಿಸ್‌ಆರ್ಡರ್ ) ಎಂಬ ಒಂದು ರೋಗಿದಾನದ ಕೈಪಿಡಿಯನ್ನು ಸಿದ್ಧಗೊಳಿಸಿದೆ . [ ೯೭ ]
2006 ರಲ್ಲಿ ಆಟೋ ದಟ್ಟಣೆ ಜಾಸ್ತಿಯಾದ ಕಾರಣ , ಪರ್ಮಿಟ್ ನೀಡುವುದನ್ನು ನಿಲ್ಲಿಸಲಾಗಿತ್ತು , ಆದರೆ ಬಿ . ಆರ್ . ಅಂಬೇಡ್ಕರ್ ಕಾರ್ಪೊರೇಷನ್ ಹಾಗು ಸಣ್ಣ ಉದ್ಯೋಗ ಅಭಿವೃದ್ಧಿ ನಿಗಮದಿಂದ ಅನುಮತಿ ಪಡೆಯುತ್ತಾರೋ ಅವರಿಗೆ ಮಾತ್ರಾ ಪರ್ಮಿಟ್ ಕೊಡಲಾಗುತ್ತಿತ್ತು . ಸುದ್ಧಿ ಬಂದ ಪ್ರಕಾರ , ಬಿಬಿಎಂಪಿ ಚುನಾವಣೆ ಹತ್ತಿರ ಬರುತ್ತಿರುವ ಕಾರಣ , ಸಾರಿಗೆ ಸಚಿವ ಆರ್ . ಅಶೋಕ್ ಈ ನಿರ್ಧಾರಕ್ಕೆ ಬಂದಿದ್ದಾರೆ . ಸರ್ಕಾರವು ಈ ರೀತಿಯ ಅನುಮತಿ ಅಂಗೀಕರಿಸಿ , ಆದೇಶಿಸುವ ಮುನ್ನ ಪಕ್ಷಕ್ಕೆ ಸಿಗುವ ಬೆಂಬಲಕ್ಕಿಂತ , ಜನಪರ ಕಾಳಜಿಯುಕ್ತ ಯೋಚನೆ ಮಾಡಿದರೆ ಕ್ಷೇಮ .
ಮೇಲೆ ಬರೆದ ಕಿರು ಕಾಗದದಲ್ಲಿ ನುಸುಳಿರುವ ಬರಹದ ದೋಷಗಳಿಗೆ ಕ್ಷಮೆ ಇರಲಿ . ದೋಷಗಳು ಜಾಸ್ತಿಯೇ ಆಗಿವೆ .
೧ ] ಎಷ್ಟು ಜನ ನಿಮ್ಮ ತಾಣಕ್ಕೆ ಬರುವರು ೨ ] ಎಲ್ಲಿಂದ ಬರುವರು ( ಭೂಪಟ ಸಮೇತ ) ೩ ] ನಿಮ್ಮ ತಾಣದ ಯಾವ ಪುಟಕ್ಕೆ ಹೋಗುವರು ಮತ್ತು ಎಷ್ಟು ಸಮಯ ಅಲ್ಲಿ ಇರುವರು ೪ ] ನೇರವಾಗಿ ( Direct visitors ) ಅಥವಾ ಬೇರೆ ಜಾಲತಾಣದ ( Referral site ) ಮುಖಾಂತರ ಬರುವರಾ
ಪೊಲೀಸರು ತಮ್ಮ ಕರ್ತವ್ಯದ ಜೊತೆಗೆ ಮಾನ ವೀಯ ಗುಣಗಳನ್ನು ಹೊಂದಿ ರುತ್ತಾರೆ . ಸಾರ್ವಜನಿಕರ ಜೊತೆ ಉತ್ತಮ ಬಾಂಧವ್ಯವನ್ನು ಬೆಳೆಸುವದಕ್ಕಾಗಿ ತುಕ್ಕಾರ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಯನ್ನು ಹಮ್ಮಿಕೊಳ್ಳಲಾಗಿದೆ . ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಅನುಕೂಲ ವಾಗುವ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗುವುದೆಂದು ಹೇಳಿ ದರು . ಡಾ . ಎಂ . ಎಲ್ . ತುಕ್ಕಾರ ಮಾತನಾಡಿ , ಗ್ರಾಮೀಣ ಪ್ರದೇಶದ ಜನರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ . ಸಮರ್ಪ ಕವಾದ ಆರೋಗ್ಯ ಸೌಲ ಭ್ಯಗಳಿಲ್ಲದ ಕಾರಣ ಗ್ರಾಮೀಣ ಜನರ ಬದುಕು ಸಂಕಷ್ಟದ ಲ್ಲಿದ್ದು , ಸರಕಾರೇತರ ಸಂಸ್ಥೆ ಗಳು ಗ್ರಾಮೀಣ ಭಾಗದ ಬಡ ಕುಟುಂಬಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು . ವೈದ್ಯ ಸಮುದಾಯ ತಮ್ಮ ಸೇವೆಯನ್ನು ಹಳ್ಳಿಗಳತ್ತ ವಿಸ್ತರಿಸಬೇಕೆಂದು ಹೇಳಿದರು .
ಬಾಲು ಅವರಿಗೆ ನಿಮ್ಮ ಬ್ಲಾಗನಲ್ಲಿ ಟೈಮ ಪಾಸ್ ಸಾಕಷ್ಟು ಐಡಿಯಾಗಳಿವೆ . . . ಆದರೆ ಲೇಖನದಲ್ಲಿ ಹೇಳಿದ್ದು ಟೈಮ ಪಾಸ್ ಮಾಡದೇ ರಚನಾತ್ಮಕ ಕೆಲಸಗಳಲ್ಲಿ ನಮ್ಮನ್ನು ನಾವು ಯಾಕೆ ತೊಡಗಿಸಿಕೊಳ್ಳಬಾರದು ಅಂತ . ಮೊಬೈಲು ಹತ್ತು ತಾಸು ಮಾತಾಡಲು ಫ್ರೀ ( ಮಾತಾಡಲು ಸಮಯವಿರುವುದಿಲ್ಲ ಆ ಮಾತು ಬೇರೆ ) , ಕಾರ್ಪೋರೇಟ ಕನೆಕ್ಷನ್ ! ! ! ಅಲ್ಲದೇ ಆಫೀಸಿನ ಫೋನು ಪರಸನಲ್ ಕೆಲ್ಸಕ್ಕೆ ಬಳಸುವುದರ ಬಗ್ಗೆ ನನಗೆ ಒಳ್ಳೆ ಅಭಿಪ್ರಾಯ ಇಲ್ಲ . . . ಪಕ್ಕದ ಕ್ಯಾಬಿನ ಎಲ್ಲ ಬೇಡ ಸರ್ , ಪಕ್ಕದ ಕಂಪನಿವರೆಗೆ ಕಾರ್ಯಕ್ಷೇತ್ರ ಬೆಳೆಸಿರಬೇಕಾದರೆ ! roopa ಅವರಿಗೆ ಬೆಂಚಿನಲ್ಲಿ ತಳಮಳ ಆತಂಕ ಇದ್ದೇ ಇರುತ್ತದೆ , ಆದರೆ ಬಹಳ ದಿನಗಳು ನಿರಂತರ ಕೆಲಸದ ನಂತರ ಹೀಗೆ ಸ್ವಲ್ಪ ಪ್ರೀ ಟೈಮ್ ಸಿಕ್ಕಿರುವುದು ಇದೇ ಮೊದಲು . ಬರಹದ ಥೀಮ್ ಟೈಮ್ ಪಾಸ ಮಾಡದೇ ಸಿಕ್ಕ ಸಮಯ ರಚನಾತ್ಮಕ ಕೆಲಸದಲ್ಲಿ ಯಾಕೆ ತೊಡಗಿಸಿಕೊಳ್ಳಬಾರದು ಅಂತ . ಈ ಗೂಗಲ್ ಟಾಕ್ ಬಗ್ಗೆ ಹೇಳುವಾಗ , ಬರೀ ಅಲ್ಲಿನ ಸ್ಥಿತಿ ಬಗ್ಗೆ ಹೇಳಿದ್ದು , ಎಲ್ರೂ ಗೆಳೆಯರು ಮೆಸೇಜ ಮಾಡಿದಾಗ ಮಾತಾಡುತ್ತ ಕೂರಲೇಬೇಕಿಲ್ಲ , ಕೆಲಸವಿದ್ದರೆ ಮೊದಲು ಕೆಲಸ , ಖಾಲಿ ಇದ್ದರೆ ಸರಿ ಇಲ್ಲದಿದ್ದರೆ , ಇಲ್ಲ , ( ನಾನು ಎಷ್ಟೊ ಸಾರಿ ಬೀಜಿ ಅಂತ ಗೆಳೆಯರಿಗೆ ಹೇಳುತ್ತೇನೆ , ಅವರು ಅರ್ಥ ಮಾಡಿಕೊಳ್ಳಬೇಕು ಅಷ್ಟೆ . ) ರಾಜಕಾರಣಿ ಭರವಸೆ ಅಂತ ಗೊತ್ತಾಯಿತು ಬಿಡಿ , ಅಲ್ಲೇ ಎರಡು ಸ್ಮೈಲೀ ಹಾಕಿದ್ದೀರಿ : ) ರೂಪ ಅವರಿಗೆ ಒಹ್ ಅಷ್ಟೊಂದು ನಕ್ಕುಬಿಟ್ರಾ ! . . . ಎನೋ ಸ್ವಲ್ಪ ಹಾಸ್ಯ ಬರೆದೆ , ಪಕ್ಕದ ಕ್ಯಾಬಿನ್ನಿಗೂ ಬ್ಲಾಗ ಲಿಂಕ್ ಕಳಿಸಿಬಿಡಿ ಅವರೂ ಇನ್ನಷ್ಟು ನಗಲಿ : ) ಟೈಮ ಪಾಸ ಮಾಡಿದ್ದು ಹೇಳಿದ್ದೇನೆ ಹೊರತು , ಮಾಡಿ ಅಂತ ಅಲ್ಲ , ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ ಅಂತಲೇ ಹೇಳುವ ಉದ್ದೇಶ . ಕೊನೇ ಪ್ಯಾರಾದ ಹಿಂದಿನದರಲ್ಲಿ ಅದನ್ನೇ ಬರೆದದ್ದು . ರಾಜೀವ ಅವರಿಗೆ ನಿಜ ಕೆಲಸ ಇದ್ದರೇ ಮೇಲು , ಇಲ್ಲದಿದ್ದರೆ ಏನು ಮಾಡಲೂ ತಿಳಿಯುವುದಿಲ್ಲ , ಸಧ್ಯ ಕೆಲವು ಟ್ರೇನಿಂಗ್ ಮತ್ತು ಮೀಟಿಂಗಗಳು ಇವೆ ಅಲ್ಲದೆ ಹೊಸದನ್ನೇನೊ ಕಲಿಯುತ್ತಿದ್ದೇನೆ , ನಾ ಖಾಲಿ ಕೂರಲು ಆಗಲ್ಲ ಬಿಡಿ . ಸಮಯ ಸಿಕ್ಕಾಗ ಮಾತ್ರ ಓದಿ ಅಂತಲೇ ನನ್ನ ಸಲಹೆ , ಡೆಡಲೈನ ಮೀರಿದರೆ ನನ್ನ ಹೊಣೆ ಮಾಡಬೇಡಿ . ಅವರಿಗೆ ಇದರಿಂದ ನಿಮ್ಮ ಕೆಲಸವಾಗುತ್ತಿಲ್ಲ ಅಂತ ಗೊತ್ತಾದರೆ ನನ್ನ ಸೈಟ್ ಬ್ಲಾಕ್ ಮಾಡಿಬಿಟ್ಟಾರು ! ! !
ಬೆಳಗೆರೆ ಕೃಷ್ಣಶಾಸ್ತ್ರಿಗಳು ವೇದಿಕೆಯಲ್ಲಿದ್ದರು . ರವಿ ಬಗ್ಗೆ ಬರಹಗಾರ್ತಿ ಹೇಮಾ ಪಟ್ಟಣಶೆಟ್ಟಿ ಒಂದು ಕವನವನ್ನೂ ಓದಿದರು . ಆಸಿಡ್ ದಾಳಿಗೆ ಒಳಗಾಗಿ ವಿಕಾರ ಸ್ವರೂಪಿಯಾಗಿ , ಬೆಳಗೆರೆಯವರ ಆರೈಕೆ ಪಡೆದುಕೊಂಡಿರುವ ಹಸೀನಾ ಪ್ರೇಕ್ಷಕರ ಜತೆ ಇದ್ದರು . ರವಿ - ಲಲಿತಾ ಬೆಳಗೆರೆಯವರಿಗೆ ಭಾರೀ ಗಾತ್ರದ ಹಾರಾರ್ಪಣೆಯಾಗಿ ಸನ್ಮಾನವಾಯಿತು .
ಮತ್ತೊಮ್ಮೆ ನಮಸ್ಕಾರ ರವಿಯವರೇ , ಚುನಾವಣೆ ಬಗ್ಗೆ ಬರೀತಾ ರವಿಕೃಷ್ಣಾ ರೆಡ್ಡಿ , ಲೋಕ ಪರಿತ್ರಾಣ ಇತ್ಯಾದಿಗಳ ಬಗ್ಗೆ , ಮಹಿಮಾ ಪಟೇಲ್ , ಗೆಳೆಯ ಚಂದ್ರಶೇಖರ್ ಬಗ್ಗೆ ಎಲ್ಲಾ ಬರೆದಿದ್ದೀರಿ . ಜೊತೆಯಲ್ಲಿ ಅತೀವವಾದ ಹತಾಶೆ ತೋರಿಸಿದ್ದೀರಾ ! ಮಿತ್ರರೇ , ಚಿಂತಕನೆನಿಸಿಕೊಳ್ಳುವವನಿಂದ ಹತಾಶೆ ದೂರವಿರಬೇಕು ಅನ್ನೋದು ನಿಮಗೆ ನನ್ನ ಕಿವಿಮಾತು . ಚುನಾವಣೆ ಬಗ್ಗೆ ಬರೀತ ಪ್ರಾಮಾಣಿಕತೆ ಎನ್ನೋದು ಎಲ್ಲೋ ಚಿಕ್ಕ ಊರುಗಳಲ್ಲಿವೆ , ಬೆಂಗಳೂರಿನಲ್ಲಿಲ್ಲ ಅನ್ನುತ್ತೀರಲ್ಲಾ , ಸರೀನಾ ? ಇಡೀ ವಿಧಾನ ಸಭೆಯ 224 ಸ್ಥಾನಗಳಲ್ಲಿ ನೀವು ಹೇಳಿದಂತೆ ಪ್ರಾಮಾಣಿಕತೆ ತುಂಬಿ ತುಳುಕುತ್ತಿರುವ ಕ್ಷೇತ್ರಗಳ ಸಂಖ್ಯೆ ಬೆಂಗಳೂರು , ಮತ್ತು ಬೆಂಗಳೂರಿನಂತಹ ಕೆಟ್ಟುಹೋದ ಊರುಗಳಿಗಿಂತ ಹೆಚ್ಚಿಲ್ಲವೇ ? ರವಿಕೃಷ್ಣಾ ರೆಡ್ಡಿಯವರ ಪ್ರಯತ್ನಗಳನ್ನು ಪ್ರಾಮಾಣಿಕ ಅನ್ನುವ ತಮಗೆ ವಿಕ್ರಾಂತ ಕರ್ನಾಟಕದ ಅನೇಕ ಬರಹಗಳು ಪಕ್ಷಪಾತ , ಜಾತಿವಾದಗಳನ್ನು , ವೈಯುಕ್ತಿಕ ನಿಂದನೆಗಳನ್ನು ಹೊಂದಿರುವುದು ಕಂಡಿಲ್ಲವೇ ? ಎದಪಂಥೀಯ ನಿಲುವಿನ ರವಿರೆಡ್ಡಿಯವರ ಬಗ್ಗೆ ಗೌರವ ಇಟ್ಟುಕೊಂಡೇ ಹೇಳಬೇಕಾದ ಮಾತಿದೆ . ಬಂಡವಾಳಶಾಹಿ , ಊಳಿಗ ಮಾನ ವ್ಯವಸ್ಥೆ , ಸಮಾನತೆ ಅದೂ ಇದೂ ಅಂತ ಮಾತಾಡ್ತಾ ಅಮೇರಿಕಾದ ಆಶ್ರಯದಲ್ಲಿ ತಾವು ಸುಖ ಸವಲತ್ತು ಅನುಭವಿಸೋ ಜನರನ್ನು ಹ್ಯಾಗೆ ಜನತೆ ಬೆಂಬಲುಸ್ತಾರೆ . ಇಷ್ಟಕ್ಕೂ ಬುಡಮಟ್ಟದ ಸಂಘಟನೆಯಿಲ್ಲದೆ , ಕ್ಷೇತ್ರದ ಜನರಿಗೆ ಪರಿಚಿತರಾಗದೆ , ಚುನಾವಣೆಗೆ ನಿಂತರೆ ಹ್ಯಾಗೆ ಗೆಲ್ತಾರೆ ಅಂತ ಸ್ವಲ್ಪ ಯೋಚಿಸಿ . ಇದನ್ನು ಬಿಟ್ಟು ಜನತೆಗೆ ಪ್ರಾಮಾಣಿಕತೆ ಇಲ್ಲ , ಮೌಲ್ಯಗಳಿಗೆ ಬೆಲೆಯಿಲ್ಲ ಅನ್ನೋದು ಬರೀ ಬದಬಡಿಕೆ ಆಗುತ್ತದೆ . ಇದು " ಚಿಂತಕ " ರಿಗೆ ಶೋಭಿಸುವುದಿಲ್ಲ . ಹೋರಾಟಗಾರರು ಹೋರಾಡಬೇಕಿರುವುದು ಕೃಷ್ಣ ಸರ್ಕಾರದ ವಿರುದ್ಧ , ರಾಜಕಾರಣಿಗಳ ವಿರುದ್ಧ ಎನ್ನುವುದು ಸರಿಯಾದ ಅಭಿಪ್ರಾಯವೆ ಆಗಿದ್ದರೂ ಸಂಬಂಧಿಸಿದ ಸಂಸ್ಥೆಗಳ ಮೇಲೆ , ಸರ್ಕಾರದ ಮೇಲೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಡಬಾರದು ಅನ್ನುವಂತೆ ಇದು ಧ್ವನಿಸುತ್ತಿರುವುದು ಸರಿಯಾಗಿಲ್ಲ . ಇನ್ನೆಲ್ಲೋ ಕಾಂಗ್ರೆಸ್ , ಜೆಡಿಎಸ್ ಪಕ್ಷಗಳನ್ನು ನೇರವಾಗಿ ಜರಿಯೋ ನೀವು ಅಂಗೈ ಹುಣ್ಣಿನಂತೆ ಕಾಣುತ್ತಿರುವ ರೆಡ್ಡಿ ಸೋದರರ ಬಿಜೆಪಿ ಮೇಲಿನ ಹಿಡಿತವನ್ನು ಕಾಣದವರಂತೆ , ಎಲ್ಲೋ ಕೇಳಿದ ವದಂತಿಯಂತೆ ಬರೆಯೋದು " ನಿಷ್ಪಕ್ಷಪಾತ ನಿಲುವು " ತಮಗಿಲ್ಲ ಅನ್ನೋದನ್ನು ತೋರಿಸುತ್ತಿದೆ . ಅಣಕದಲ್ಲಿ ಕೆಂಪೇಗೌಡರ ಮೂಲ , ಅವರ ಮಾತೃಭಾಷೆ ಬಗ್ಗೆ ಸಂಶೋಧನೆ ಮಾಡಿ ಬರ್ದಿದೀರಾ , ಅದು ಅಪ್ರಸ್ತುತ ಅಲ್ಲವೇ ? ಬೆಂಗಳೂರು ನಗರವನ್ನು ಕಟ್ಟಿದವರು ಅನ್ನುವ ಕಾರಣದಿಂದ ಅವರಿಗೆ ಮನ್ನಣೆಯಿದೆ ಅನೋದನ್ನು ಮಾತ್ರಾ ಅರ್ಥ ಮಾಡಿಕೊಳ್ಳಿ . ವಿಶ್ವಾಸಿ ತಿಮ್ಮಯ್ಯ
ಮಾದರಿ : ಕನ್ನಡದ ಬಗೆ : ಇದು ವರ್ಣಿಸಕ್ಕೇ ಆಗದ ವಿಶಯ . ( ಆಡುಮಾತಲ್ಲಿ ಹೀಗೆ ಇರೋದು ) ಸಂಸ್ಕ್ರುತದ ಬಗೆ : ಇದು ಅವರ್ಣನೀಯ ವಿಶಯ .
ಒಂದು ಕಾಲದಲ್ಲಿ ಜಾಗತಿಕ ಯುದ್ದದ ಸಂದರ್ಭದಲ್ಲಿ ಅಮೇರಿಕಾದ ಅಣು ಬಾಂಬ್ ದಾಳಿಯಿಂದಾಗಿ ತತ್ತರಿಸಿ ಹೋಗಿದ್ದ ಜಪಾನಿನ ಹಿರೋಶಿಮ ಮತ್ತು ನಾಗಸಾಕಿ ನಗರಗಳು ಇಂದಿಗೂ ಚೇತರಿಸಿ ಕೊಳ್ಳುತ್ತಿವೆ . ಅಣು ಬಾಂಬ್ ದಾಳಿ ನಂತರ ಜಪಾನ್ ಬೆಳೆದು ಬಂದ ವೇಗ ಎಂತಹ ಬಲಿಷ್ಟ ರಾಷ್ಟ್ರಗಳಿಗೂ ತಾನು ಏನೂ ಕಡಿಮೆ ಇಲ್ಲ ಎನ್ನುವಂತಿತ್ತು . ಅದರ ಅಭಿವೃದ್ಧಿಯ ವೇಗವನ್ನು ಕಂಡು ಇಡೀ ಜಗತ್ತೇ ನಿಬ್ಬೆರಗಾಗಿತ್ತು . ಇನ್ನು ಕೆಲವು ದಶಕಗಳು ಕಳೆದಿದ್ದರೆ ಪ್ರಪಂಚದ ಅತ್ಯಂತ ಬಲಿಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಜಪಾನ್ ಪ್ರಮುಖ ಸ್ಥಾನದಲ್ಲಿರುತ್ತಿತ್ತು . ಅತ್ಯಂತ ಅತ್ಯಾಧುನಿಕ [ . . . ]
ಆದರೆ ಆ ಫಲದ ನಿರೀಕ್ಷೆಯಲ್ಲಿ ಮಾಡಿದ ಸೇವೆ , ನಿಸ್ವಾರ್ಥ ಸೇವೆಯಾಗಿ ಉಳಿಯುವುದಿಲ್ಲ . : - )
ದಿನನಕ : ೧೬ - ಮಾರ್ಚ್ ಅವನು : ಕಳೆದ ಕೆಲವು ದಿನಗಳಿಂದ ಅವ್ಳು ನನಗಾಗಿ ಬೆಳೆಗ್ಗೆ ಮತ್ತು ಸಾಯಂಕಾಲ ತನ್ನ ಪಕ್ಕದಲ್ಲಿ ಜಾಗ ಹಿಡಿತಿದಾಳೆ . ನಮ್ಮಿಬ್ಬರಿಗೂ ಪರಸ್ಪರರ ಸಂಗ ಹಿತವೆನ್ನಿಸುತ್ತಿದೆ . ಇವತ್ತು ಧೈರ್ಯ ಮಾಡಿ ಒಂದು ಹೆಜ್ಜೆ ಮುಂದಿಟ್ಟೆ . ಅವಳನ್ನ ಇವತ್ತು ಮಧ್ಯಾನ ಕಾಫೀಗೆ ಕರೆದೆ . ನನಗೆ ಅವಳು ಏನು ಹೇಳ್ತಾಳೋ ಅನ್ನೋ ಘಾಭರಿ ಮನಸಿನ್ನಲ್ಲಿ ತುಂಬಿತ್ತು ಆದ್ರೆ ಅವ್ಳು ಒಂದು ಕ್ಷಣ ಕೂಡ ಯೋಚನೆ ಮಾಡದೆ ಸಮ್ಮತಿ ಸೂಚಿಸಿದಳು . ಅವಳ ಮುಖಭಾವ ಹೇಗಿತ್ತೆಂದರೆ ಅವಳು ನನ್ನಿಂದ ಇಂತಹ ಒಂದು ನಡೆಯನ್ನ ಅಪೇಕ್ಷಿಸುತ್ತಿದ್ದಳು ಅನ್ನೋ ತರಹ ಇತ್ತು . ಸಾಯಂಕಾಲ ೪ ಘಂಟೆಗೆ ನಮ್ಮ ಕ್ಯಾಂಪಸ್ನಲ್ಲಿರುವ ಕೆಫೆ ನಲ್ಲಿ ಸಿಗುವುದು ಅಂತ ನಿಶ್ಚಯವಾಯಿತು .
ಭರತರೆ , ' ಕೃತಕ ಆಡುನುಡಿ ' ಎಂದು ಕರೆದವರು ಪಿ . ಲಂಕೇಶರು . ಇದು ಮೈಸೂರು , ಬೆಂಗಳೂರಿನ ಆಡುನುಡಿ ಅಲ್ಲ ಎಂದು ಅವರೇ ಟೀಕಿಸಿದ್ದಾರೆ . ಲಂಕೇಶರ ಪ್ರಮಾಣದ ಮೇಲೆ ಅದು ಕೃತಕ ಆಡುನುಡಿ ಎಂದು ನಾನು ಗ್ರಹಿಸಿದ್ದೇನೆ . ನನ್ನ ಲೇಖನದಲ್ಲಿ ಕಾಣಬರುವ ಸಂಸ್ಕೃತಭೂಯಿಷ್ಠತೆ ನಾನು ಉದಾಹರಿಸಿದ ಕವನಗಳಲ್ಲಿ ( ಉದಾಹರಣೆಗೆ ಕುವೆಂಪುರವರ ಕವನಗಳಲ್ಲಿ ) ಇದೆ . ನೀವು ಕುವೆಂಪುರವರ ಭಾಷೆಗೆ ಕೃತಕಭಾಷೆ ಎಂದು ಕರೆಯುವದಾದರೆ ಅದು ನಿಮ್ಮ ಅಭಿರುಚಿಗೆ ತಕ್ಕ ವ್ಯಾಖ್ಯಾನ .
ಆಗ ಬಿತ್ತು ನೋಡಿ ಅವನಿಗೆ ಕೆನ್ನೆಗೆ ! ಇದುವರೆಗೂ ಹೊಗಳಿದ್ದೆಲ್ಲಾ ಒಂದು ಸುಂದರ ಸುಳ್ಳು ಅಂತ ತನ್ನೆದುರೇ ಅಷ್ಟು ಧೈರ್ಯವಾಗಿ ಹೇಳುವುದಕ್ಕೆ ಅವನಿಗೆಷ್ಟು ಧಿಮಾಕು . ಅಷ್ಟು ಸಿಂಪಲ್ ವಿಷಯ ಅರ್ಥವಾಗುವುದಕ್ಕೆ ಅವಳೇನು ಕನ್ನಡ ಟೀಚರ್ರೇ ಆಗಿರಬೇಕೆ ?
ಭಾಸನ ಬಾಲ ಚರಿತಂ ಒಂದು ನೆವ ಅಷ್ಟೆ . ಇದು ಜೋಶಿಯವರು ತೆವಳುತ್ತಿರುವ ತುಳು ಸಾಹಿತ್ಯರಂಗಕ್ಕೊಂದು ಉತ್ಸಾಹ ತುಂಬಲು ಹೂಡಿದ ಸಂಚು ಎಂದೇ ಕೆಲವೊಮ್ಮೆ ನನಗನಿಸುವುದುಂಟು . ಒಮ್ಮೆ ತುಳುವರು ಧ್ಯಾನಿಸಿ ಇದನ್ನು ಓದಿದರೆ ಬಳಿಕ ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ .
ಪದೆಪದೇ ನೆನಪಾದೆ ಪದೆಪದೇ ನೆನೆದೆ ಪದೆಪದೇ ಮರೆಯಾದೆ ಪದೆಪದೇ ಕರೆದೆ
ಈ ನಾಯಕರ ಆತ್ಮ ವಿಶ್ವಾಸ , ಧೃಡ ಚಿತ್ತ , ಗುರಿ ಸಾಧಿಸುವೆಡೆಗಿನ ಏಕಾಗ್ರತೆ , ಜನಗಳ ಬಗ್ಗೆ , ಅವರಿಗೆ ಸಿಗಬೇಕಾದ ಮೂಲಭೂತ ಸೌಲಭ್ಯಗಳ ಬಗ್ಗೆ ಇರುವ ಕಾಳಜಿ , ತನ್ನ ದೇಶದ ಹೆಸರು ಅಜರಾಮರವಾಗಿರಬೇಕೆಂಬ ಹೆಬ್ಬಯಕೆ , ನಿಜವಾಗಿಯೂ ಇತರರಿಗೆ ಮಾರ್ಗದರ್ಶಿ ಹಾಗು ಅನುಕರಣೀಯ . ನಮ್ಮಲ್ಲಿರುವ ಮಣ್ಣಿನ ಮಗನೆ೦ದು , ರೈತರ ಉದ್ಧಾರಕ್ಕೆ ಹುಟ್ಟಿ ಬ೦ದವರೆ೦ದೂ ಹೇಳಿಕೊ೦ಡು , ಟೋಪಿ ಹಾಕುವ ರಾಜಕಾರಣಿಗಳಿಗೆ ಇವರಲ್ಲಿರುವ ಕಿ೦ಚಿತ್ ಕಾಳಜಿ ಮೂಡಿದಲ್ಲಿ ಅದೆಷ್ಟೋ ಅಭಿವೃದ್ಧಿ ಕಾಣಬಹುದು .
ಒಬ್ಬಾಕೆ . ತನ್ನ ಮೃತ ಪತಿಯ ಬೆನ್ಜ್ ಕಾರನ್ನು ಕೇವಲ 1 ರುಪಾಯಿಗೆ ಮಾರಾಟ ಮಾಡುವುದಾಗಿ ಪತ್ರಿಕೆಯಲ್ಲಿ ಜಾಹೀರಾತು ನೀಡಿದಳು . ಇದನ್ನು ನೋಡಿದ ಹಿತೈಷಿಗಳು ಕೇಳಿದರು . ಅಲ್ಲಾ ಮೇಡಂ ಈ ಕಾರನ್ನು ಕಳ್ಳನಿಗೆ ಕೊಟ್ಟರೂ ಲಕ್ಷಾಂತರ ರುಪಾಯಿ ಕೊಡ್ತಾನೆ . ಅಂತಹುದರಲ್ಲಿ ಬರಿ 1 ರುಪಾಯಿಗೆ ಏಕೆ ಮಾರುತ್ತಾ ಇದ್ದೀರಿ ? ಆಕೆ ಉತ್ತರಿಸಿದಳು : ಏನು ಮಾಡ್ಲೀ ಹೇಳಿ . ನನ್ನ ಗಂಡ ವಿಲ್‌ನಲ್ಲಿ ಈ ಕಾರನ್ನು ಮಾರಿ , ಬರುವ ಹಣವನ್ನು ಅವರ ಲೇಡಿ ಸೆಕ್ರೇಟರಿಗೆ ಕೊಡಲು ಹೇಳಿದ್ದಾರೆ .
ದಿನ ನಿತ್ಯ ವಿದೇಶದೊಡನೆ , ವಿದೇಶಿ ಮುದ್ರೆಗಳೊಂದಿಗಿನ ವ್ಯಾಪಾರ - ವ್ಯವಹಾರ , ಉದ್ಯಮ ಹೊಂದಿದವರಿಗೆ , ಬಿಸಿನೆಸ್ ಟೂರ್ , ಬಿಸಿನೆಸ್ ಮೀಟಿಂಗ್ ಎಂದು ಸತತವಾಗಿ ವಿದೇಶಕ್ಕೆ ಪ್ರಯಾಣಿಸುತ್ತಾ ಇರುವವರಿಗೆ . ವಿದೇಶಿ ಮುದ್ರೆಗಳ ಕೊಡು - ಕೊಳ್ಳುವ ವ್ಯವಹಾರಸ್ಥರಿಗೆ , ಅಮೇರಿಕನ್ ಡಾಲರನ್ನು ಯೂರೋಗೂ , ಇಂಡಿಯನ್ ರೂಪಾಯಿಯನ್ನು - ಡಾಲರಿಗೂ ಮತ್ತೊಂದು , ಮಗದೊಂದಕ್ಕೂ ಪರಿವರ್ತಿಸಬೇಕಾಗಿದೆಯೇ ? ಇಲ್ಲಿದೆ ತಾಣ , ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲು . . . its an ideal site for currency converter , Foreign exchange services . http : / / www . oanda . com /
ಎಂಪೈರ್ ಸ್ಟೇಟ್ ಬಿಲ್ದಿಂಗ್ ನ ಎತ್ತರ ನೆಲದಿಂದ ಮೊದಲನೆ ಮಾಳಿಗೆವರೆಗೆ ೧೨೫೦ ಅಡಿ . ಅದರ ಮೇಲೆ ನಮಿಂಚು ಸೆಳೆಕ ಹಾಗೂ ಇನ್ನಿತರವುಗಳನ್ನು ಅಳವಡಿಸಿದಾಗ ಒಟ್ಟು ಎತ್ತರ ೧೪೫೪ ಅಡಿ . ಇದರ ಬೇರು ಭೂಮಿಯೊಳಗೆ ಐವತ್ತು ಅಡಿ ಆಳಕ್ಕೆ ಇಳಿದಿದೆ . ಅಂದರೆ ಇದರ ಅಡಿಪಾಯದ ಆಳ ಮೂವತ್ತು ಅಡಿ . ಇದರ ವಿನ್ಯಾಸ ತುಂಬ ಪರಿಪೂರ್ಣವಾಗಿದೆ . ಗಂಟೆಗೆ ೧೦೦ಮೈಲಿ ವೇಗದಲ್ಲಿ ಗಾಳಿ ಬೀಸಿದರೂ ಅದರ ಆಚೆ ಈಚಿನ ಅಲುಗಾಟ ಅರ್ಧ ಅಂಗುಲಕ್ಕೂ ಕಡಿಮೆ . ಇದರ ನಿರ್ಮಾಣದ ವೇಗ ಅಚ್ಚರಿ ಮೂಡಿಸುವುದು , ಇದರ ೧೦೨ ಮಹಡಿಗಳು ದಾಖಲೆ ವೇಗದಲ್ಲಿ ಪೂರ್ಣಗೊಂಡಿವೆ . ಹದಿನೈದು ದಿನಕ್ಕೆ ೯ ಮಹಡಿ ಮುಗಿದಿವೆ . ಅಂದರೆ ೧೪೫೪ ಅಡಿ ಎತ್ತರದ ಈ ಗಗನಚುಂಬಿ ಮುಗಿಯಲು ಬೇಕಾದ ಸಮಯ ಕೇವಲ ೪೧೦ ದಿನಗಳು ಮಾತ್ರ .
ಲೀಡ್ಸ್ ಸಿಟಿ ಸೆಂಟರ್ ಇದು ಲೀಡ್ಸ್ ಒಳ ವರ್ತುಲ ರಸ್ತೆಯನ್ನು ( ಇನ್ನರ್ ರಿಂಗ್ ರೋಡ್ ) ಕೂಡ ಒಳಗೊಂಡಿದ್ದು , ಇದು A58 ರಸ್ತೆ , A61 ರಸ್ತೆ , A64 ರಸ್ತೆ , A643 ರಸ್ತೆ ಮತ್ತು M621 ಎಂಬ ಈ ಭಾಗಗಳ ವಾಹನ ಮಾರ್ಗಗಳನ್ನು ಒಳಗೊಂಡಿದೆ . ಬ್ರಿಗ್ಗೇಟ್ ಪ್ರಮುಖ ಉತ್ತರ ದಕ್ಷಿಣ ವ್ಯಾಪಾರಿ ಕೇಂದ್ರವು ಪಾದಾಚಾರಿ ರಸ್ತೆಯಾಯಿತಲ್ಲದೇ , ವಿಕ್ಟೋರಿಯಾ ಕ್ವಾರ್ಟರ್ನ ಕ್ವೀನ್ ವಿಕ್ಟೋರಿಯಾ ರಸ್ತೆಯು ಗ್ಲಾಸ್ ರೂಫ್ನಿಂದ ಆವರಿಸಲ್ಪಟ್ಟಿತು . ಮಿಲೇನಿಯಮ್ ಸ್ಕ್ವೇರ್ ಇದೊಂದು ನಗರದ ಪ್ರಮುಖ ಆಕರ್ಷಕ ಬಿಂದುವಾಗಿದೆ . ಲೀಡ್ಸ್ ಪೋಸ್ಟ್ ಕೋಡ್ ಪ್ರದೇಶವು ಲೀಡ್ಸ್ ನಗರದ [ ೪೮ ] ಹೆಚ್ಚಿನ ಭಾಗವನ್ನು ವ್ಯಾಪಿಸುತ್ತದೆಯಲ್ಲದೇ , ಅದು ಹೆಚ್ಚು ಕಡಿಮೆ ಸಂಪೂರ್ಣವಾಗಿ ಲೀಡ್ಸ್ ಪೋಸ್ಟ್ ಟೌನ್ನಿಂದ ನಿರ್ಮಿಸಲ್ಪಟ್ಟಿತು . [ ೪೯ ] ಓಟ್ಲೇ , ವೆದರ್ಬೈ , ಟ್ಯಾಡ್ಕಾಸ್ಟರ್ , ಪುಡ್ಸೇ ಮತ್ತು ಇಲ್ಕ್ಲೈ ಇವುಗಳು ಪೋಸ್ಟ್ ಕೋಡ್ ಪ್ರದೇಶದಲ್ಲಿಯೇ ಒಳಗೊಂಡಿರುವ ಪ್ರತ್ಯೇಕ ಪೋಸ್ಟ್ ಟೌನ್ಗಳಾಗಿವೆ . [ ೪೯ ] ಲೀಡ್ಸ್ ನಗರದ ನಿರ್ಮಾಣ ಸ್ಥಳದ ಪಕ್ಕದಲ್ಲಿಯೇ , ಅನೇಕ ಉಪನಗರಗಳು ಮತ್ತು ಹೊರನಗರಗಳು ಕೂಡ ಅದೇ ನಗರದಲ್ಲಿ ಲಭ್ಯವಿದೆ .
ವೈಜ್ಞಾನಿಕ ಕಲ್ಪನೆಗಳ ಮೇಲೆ ವರ್ಣಭೇದ ನೀತಿಯ ಸಿದ್ಧಾಂತಗಳನ್ನು ಹೇರಿ ಅವನ್ನು ಸಾಮಾಜಿಕ ಅಭಿವೃದ್ಧಿಯ ನೇರವಲ್ಲದ ಬೆಳವಣಿಗೆ ಸಿದ್ಧಾಂತದೊಂದಿಗೆ ಸೇರಿಸಿದಾಗ ಅದು ಜಗತ್ತಿನಲ್ಲಿ ಯೂರೋಪಿನ ನಾಗರೀಕತೆಯ ಹಿರಿಮೆಯನ್ನು ಹೆಚ್ಚಿಸಿತು . ಇದಲ್ಲದೆ , 1864ರಲ್ಲಿ ಹರ್ಬರ್ಟ್ ಸ್ಪೆನ್ಸರ್ " ಸರ್ವೈವಲ್ ಆಫ್ ದಿ ಫಿಟ್ಟೆಸ್ಟ್ " ಎಂಬ ಪದವನ್ನು ಉಪಯೋಗಿಸಿದ . ಅದರಲ್ಲಿ ಸ್ಪರ್ಧೆ ಎಂಬ ಕಲ್ಪನೆ ಇದ್ದು , 1940ರ ಸುಮಾರಿಗೆ ಸೋಷಿಯಲ್ ಡಾರ್ವಿನಿಸಮ್ ಎಂದು ಹೆಸರಿಡಲಾಯಿತು . ಚಾರ್ಲ್ಸ್ ಡಾರ್ವಿನ್ ಸ್ವತಃ ತನ್ನ ದಿ ಡೀಸೆಂಟ್ ಮ್ಯಾನ್ ( 1871 ) ಕೃತಿಯಲ್ಲಿ ವಿರೋಧಿಸಿದ್ದಾನೆ ಹಾಗೂ ಮಾನವರು ಜಾತಿ ಮತ್ತು ಕುಲದವರು ಎಂದು ವಾದಿಸಿದ್ದಾನೆ . ಆತ ಮಾನವರ ಗುಣಲಕ್ಷಣಗಳಲ್ಲಿ ಜನಾಂಗಗಳನ್ನು ಗುರುತಿಸಿದೆ ಮತ್ತು ಎಲ್ಲಾ ಜನಾಂಗದ ಜನರ ಮಾನಸಿಕ ಸ್ಥಿತಿ , ರುಚಿ ಮತ್ತು ಹವ್ಯಾಸಗಳಲ್ಲಿ ಸಮಾನತೆ ಇರುವುದನ್ನು ಸ್ಪಷ್ಟಪಡಿಸಿದ . ಯುರೋಪಿನ ನಾಗರೀಕತೆಯೊಂದಿಗೆ ತಿಕ್ಕಾಟದಲ್ಲಿರುವ ' ಕೆಳಹಂತದ ಅನಾಗರೀಕತೆ ' ಯ ಪರಿಕಲ್ಪನೆಯು ಮುಂದುವರೆದಿದೆ . [ ೩೨ ] [ ೩೩ ]
ಮದುವೆ ಗಡಿಬಿಡಿ ಎಲ್ಲಾ ಮುಗಿದುಹೋಯ್ತು . ಎಲ್ಲವೂ ಚೆನ್ನಾಗೇ ನಡೆಯಿತು . ಹಳೆಯ ಬದುಕು ಏನೋ ಹೊಸ ರೂಪ ಪಡೆದಂತೆ . ಮನೆಯವರ ಜವಾಬ್ದಾರಿನೂ ಮುಗಿದುಹೋಯ್ತು . ಈಗ ಮಾಮೂಲಿ ಆಫೀಸ್ . ಮತ್ತೆ ಕೆಲಸ , ಅದೇ ಪತ್ರಿಕೆ , ಅದೇ ಆಫೀಸು , ಅದೇ ಜನರು , ಅದೇ ಓಡಾಟ , ಮನಸ್ಸು ಎಲ್ಲದಕ್ಕೂ ಮತ್ತೆ ಹೊಂದಿಕೊಳ್ಳಬೇಕನಿಸುತ್ತೆ . ಆದರೂ ಏನೋ ಖುಷಿಯ ಗುಂಗು . ಮದುವೆಗೆ ಮೊದಲು ದೇವರನ್ನು ನೀನೆಕೆ ಕಲ್ಲಾಗಿಬಿಟ್ಟೆ ಅಂತ ಬೈದಿದ್ದೆ . ತವರು ಬಿಡಬೇಕೆ ? ಎಂದು ನೂರಾರು ಪ್ರಶ್ನೆಗಳ ಮಳೆ ಸುರಿದಿದ್ದೆ . ಆದರೆ , ದೇವರೇ ನಿನಗೆ ಬೈದುಬಿಟ್ಟೆ ಅಲ್ವ ? ಅಂತ ಸಾರಿ ಅಂತ ಕೇಳ್ತಾ ಇದ್ದೀನಿ .
ಅದು ಮಂಗಳೂರಲ್ಲಿ ನಡೆದ ಭೂಗತ ಲೋಕದ ದೊಡ್ಡ ವ್ಯಕ್ತಿಯ ಮೊದಲ ಕೊಲೆ ! ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಚರ್ಚೆಗೊಳಗಾದ ಕೊಲೆ . ಜನರನ್ನು ಒಮ್ಮೆ ಬೆಚ್ಚಿ ಬೀಳಿಸಿದ ಕೊಲೆ . ಅದು ಭೂಗತ ಲೋಕದ ಸಂಪರ್ಕ ಹೊಂದಿದ್ದ ಉದ್ಯಮಿ ಅಮರ್ ಆಳ್ವ ಕೊಲೆ . ೧೬ ವರ್ಷಗಳ ಹಿಂದೆ ನಡೆದ ಈ ಕೊಲೆ ಇಂದಿಗೂ ಜನರ ಮನದಲ್ಲಿದೆ . ಅಮರ್ ಆಳ್ವ ಆಗಾಗ ಮಿಲಾಗ್ರಿಸ್‌ನಲ್ಲಿದ್ದ ಸೂಪರ್ ಮಾರ್ಕೆಟ್‌ಗೆ ಬರುತ್ತಿದ್ದ . ಅದನ್ನು ಹಂತಕರು ಗಮನಿಸಿದ್ದರು . ೧೯೯೨ರ ಜುಲೈ ೧೪ರಂದು ಸಂಜೆ ಅಮರ್ ಆಳ್ವ ಕೆಲವೇ ಹೊತ್ತಿನಲ್ಲಿ ತಾನು ಹಂತಕರ ಗುಂಡಿಗೆ ಗುರಿಯಾಗಲಿದ್ದೇನೆ ಎಂಬ ಅರಿವಿಲ್ಲದೇ ಗೆಳೆಯರೊಂದಿಗೆ ಹರಟುತ್ತಿದ್ದ . ಆಗ ಸಿಡಿಯಿತು ಗುಂಡು . . . ! ನಾಲ್ಕು ಜನರಿದ್ದ ಹಂತಕ ಪಡೆ ಯದ್ವಾತದ್ವಾ ಗುಂಡು ಹಾರಿಸಿತು . ಅಮರ್ ಆಳ್ವರ ಅವರ ಕಡೆಯವರೂ ಗುಂಡು ಸಿಡಿಸಿದರು . ಗುಂಡು ತಾಗಿ ಗಾಯಗೊಂಡ ಅಮರ್ ಆಳ್ವ ಫಳ್ನೀರ್ ಕಡೆ ಓಡಿದ . ಹಂತಕರು ಅಟ್ಟಿಸಿಕೊಂಡು ಹೋದರು . ರಸ್ತೆ ಮದ್ಯದಲ್ಲಿ ಬಿದ್ದ ಅಮರ್ ಆಳ್ವನಿಗೆ ಕಡಿದರು . ಇನ್ನು ಆತ ಬದುಕಲಾರ ಎಂಬುದು ಗ್ಯಾರಂಟಿಯಾದಾಗ ಹಂತಕ ಪಡೆ ರಿಕ್ಷಾ ಹತ್ತಿ ಪರಾರಿಯಾಯಿತು . ಅಮರ್ ಆಳ್ವನನ್ನು ಆಸ್ಪತ್ರೆಗೆ ಸೇರಿದರೂ ಪ್ರಯೋಜನವಾಗಲಿಲ್ಲ . ಅವರ ತಲೆಗೆ ಗುಂಡು ತಾಗಿದ್ದರೆ , ಕುತ್ತಿಗೆ , ಕೈ ಮೇಲೆಲ್ಲ ಕಡಿದ ಗಾಯಗಳಿದ್ದವು . ಈ ಘಟನೆಯಲ್ಲಿ ಮಂಜುನಾಥ ಶೆಟ್ಟಿ , ಜಗನ್ನಾಥ್ ಶೆಟ್ಟಿ , ವಿಜಯ ನಾಯ್ಕ್ , ರಮೇಶ್ ಭಟ್ , ಕೇದಾರನಾಥ್ , ಸುದರ್ಶನ್ , ಬಾಲಕೃಷ್ಣ ರಾವ್ ಗಾಯಗೊಂಡಿದ್ದರು . ಕೆಲವರು ಅಮರ್ ಆಳ್ವನೊಟ್ಟಿಗೆ ಸಂಬಂಧ ಇಲ್ಲದವರೂ ಇದ್ದರು . ಇಷ್ಟೆಲ್ಲ ನಡೆದದ್ದು ಸಂಜೆ ೭ . ೪೫ಕ್ಕೆ . ಕೊಲೆ ಸುದ್ದಿ ಹಬ್ಬುತ್ತಿದ್ದಂತೆ ಅಮರ್ ಆಳ್ವ ಅವರ ಶವ ಇರಿಸಿದ್ದ ಸಿಟಿ ಆಸ್ಪತ್ರೆ ಎದುರು ಅಪಾರ ಸಂಖ್ಯೆಯ ಜನ ಸೇರಿದ್ದರು . ಮಂಗಳೂರು ಭಾಗಶಃ ಬಂದ್ ಆಗಿತ್ತು . ಮೆರವಣಿಗೆಯಲ್ಲಿಯೆ ಅಮರ್ ಆಳ್ವ ಶವ ಮನೆಗೆ ತೆಗೆದುಕೊಂಡು ಹೋಗಿ , ಅವತ್ತೇ ಅಂತ್ಯ ಸಂಸ್ಕಾರ ಮಾಡಲಾಯಿತು . ಮಂಗಳೂರು ಮಟ್ಟಿಗೆ ದೊಡ್ಡ ಹೆಸರು ಮಾಡಿದ್ದ ಅಮರ್ ಆಳ್ವ ಕತೆ ಮುಗಿದೇಹೋಗಿತ್ತು . ಕೊಲೆ ನಡೆದ ಸ್ಥಳದಲ್ಲಿ ಎರಡು ಜೀವಂತ ಹಾಗೂ ಐದು ಖಾಲಿ ಗುಂಡುಗಳು ದೊರಕಿದ್ದವು . ಸಿಕ್ಕಿಬಿದ್ದ ಆರೋಪಿ : ಅಮರ್ ಆಳ್ವನ ಕಡೆರಯವರು ಹಾರಿಸಿದ ಗುಂಡಿನಿಂದ ಹಂತಕ ಪಡೆಯ ಒಬ್ಬ ಗಾಯಗೊಂಡಿದ್ದ . ಹಾಗೆ ಪೊಲೀಸರು ಆಸ್ಪತ್ರೆಗಳ ಮೇಲೆ ಕಣ್ಣಿಟ್ಟರು . ಪರಾರಿಯಾಗುವ ದಾರಿಯಲ್ಲಿ ಗಾಯಗೊಂಡ ಆರೋಪಿ ಕಿನ್ನಿಗೋಳಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ . ಸ್ಥಿತಿ ಗಂಭೀರವಾಗಿದ್ದರಿಂದ ಆತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು . ಆತನ ಹೆಸರು ಯತೀಶ ಶೆಟ್ಟಿ . ಸುಳ್ಳು ಹೆಸರು , ವಿಳಾಸ ನೀಡಿ ಈತನನ್ನು ಆಸ್ಪತ್ರೆಯಲ್ಲಿ ಇಡಲಾಗಿತ್ತಾದರೂ ಪೊಲೀಸರಿಗೆ ಗೊತ್ತಾಗಿಬಿಟ್ಟಿತ್ತು . ಎರಡು ದಿನ ಬಿಟ್ಟು ಆತನನ್ನು ಪೊಲೀಸರು ವಿಚಾರಣೆಗೆ ಗುರುಪಡಿಸಿದರು . ಆಗ ಇತರ ಆರೋಪಿಗಳಾದ ಮುರಳಿ ಯಾನೆ ಮುರಳೀಧರ , ಶ್ರೀಕರ , ಬಾಲಕೃಷ್ಣ ಶೆಟ್ಟಿ ಯಾನೆ ಬಾಲೇಶ ಎಂಬವರೊಂದಿಗೆ ಸೇರಿ ಅಮರ್ ಆಳ್ವನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ . ಕಾರಣ : ೧೯೯೧ರ ಡಿಸೆಂಬರ್ ೩೧ರಂದು ಉಡುಪಿಯ ಎಂಜಿಎಂ ಕಾಲೇಜು ಬಳಿ ಬಶೀರ್ ಎಂಬವರು ತೆಗೆದುಕೊಂಡು ಹೋಗುತ್ತಿದ್ದ ೬ ಲಕ್ಷ ರೂ . ಗಳನ್ನು ಯಾರೋ ಅಪಹರಿಸಿದ್ದರು . ಆರೋಪಿಗಳನ್ನು ಪತ್ತೆ ಹಚ್ಚಿ ಹಣ ವಾಪಸ್ ಕೊಡಿಸುವಂತೆ ಬಶೀರ್ ಪುರುಷೋತ್ತಮ ಶೆಟ್ಟಿ ಎಂಬವರ ಬಳಿ ಕೇಳಿಕೊಂಡಿದ್ದ . ಯತೀಶ್ , ಮುರುಳಿ ಹಾಗೂ ಇತರರೆ ಆ ಹಣ ಅಪಹರಿಸಿದ್ದು ಎಂಬುದನ್ನು ಪತ್ತೆ ಮಾಡಿದ ಪುರುಷೋತ್ತಮ ಶೆಟ್ಟಿ , ಅವರಿಂದ ಹಣ ವಾಪಸ್ ಕೊಡಿಸುವಂತೆ ಅಮರ್ ಆಳ್ವನಿಗೆ ವಿನಂತಿಸಿದ್ದ . ಅವನ ವಿನಂತಿಯಂತೆ ಅಮರ್ ಆಳ್ವನ ಸಹಚರರು ಯತೀಶನಿಗೆ ಹಣ ಕೊಡುವಂತೆ ಬೆದರಿಸಿದ್ದರು . ಒಮ್ಮೆ ಯತೀಶ ಇಲ್ಲದಾಗ ಆತನ ಮನೆಗೆ ಹೊದ ಕೆಲವರು ಬಂದೂಕು ತೋರಿಸಿ ಹೆದರಿಸಿ ಬಂದಿದ್ದರು . ಇದರಿಂದ ಹೆದರಿದ ಯತೀಶ ಹಾಗೂ ಸಂಗಡಿಗರು ಮುಂಬಯಿ , ಗೋವಾಕ್ಕೆ ಹೋಗಿ ಅಡಗಿಕೊಂಡರು . ಅಲ್ಲೂ ಅಮರ್ ಆಳ್ವ ಅನುಚರರು ಅವರನ್ನು ಬೆಂಬತ್ತಿದರು . ಯತೀಶನಿಗೆ ದಿನ ಕಳೆದಂತೆ ಅಭದ್ರತೆ ಕಾಡತೊಡಗಿತ್ತು . ತಾನು ಎಷ್ಟೊತ್ತಿಗೆ ಅಮರ್ ಆಳ್ವ ಸಂಗಡಿಗರಿಂದ ಕೊಲೆಯಾಗಿ ಬಿಡತ್ತೇನೊ ಎಂಬ ಆತಂಕ . ಈ ಆತಂಕದಿಂದಾಗಿಯೇ ಆತನ ತಲೆಯಲ್ಲಿ ಅಮರ್ ಆಳ್ವನನ್ನು ಮುಗಿಸದೆ ತಾನು ಸಮಾಧಾನದಿಂದಿರುವುದು ಸಾಧ್ಯವೇ ಇಲ್ಲ ಎಂಬ ಅರಿವು ಮೂಡಿತು . ತಕ್ಷಣ ಆತ ಮುಂಬಯಿಯ ಕೆಲವು ಭೂಗತ ಲೋಕದ ವ್ಯಕ್ತಿಗಳನ್ನು ಸಂಪರ್ಕಿಸಿದ . ಅವರಲ್ಲಿ ಬಲ್ಲಾಳ್‌ಭಾಗ್ ರಘು ಎಂಬವನ ಮೂಲಕ ಮೂಲಕ ದುಬೈನಲ್ಲಿರುವ ಅಮರ್ ಆಳ್ವನ ವಿರೋಧಿ ಅಶೋಕ್ ಶೆಟ್ಟಿಯ ಸಂಪರ್ಕ ಸಿಕ್ಕಿತು . ಅಮರ್ ಆಳ್ವನ ಕೊಲೆ ಮಾಡುವ ಯತೀಶ ಐಡಿಯಾಕ್ಕೆ ಅಶೋಕ್ ಶೆಟ್ಟಿ ಹಣ ಒದಗಿಸಿ ನೀರೆರೆದ . ಅಮರ್ ಕೊಲೆ ಸ್ಕೆಚ್ ರೆಡಿಯಾಯ್ತು . ಯೋಜನೆಯಂತೆ ೧೯೯೨ರ ಜೂ . ೧೧ರಂದು ಅಂದರೆ ಅಮರ್ ಆಳ್ವನ ಕೊಲೆಯಾಗುವ ೩೩ ದಿನ ಮೊದಲು ಯತೀಶ ಹಾಗೂ ಸಂಗಡಿಗರು ಬಂದೂಕುಗಳೊಂದಿಗೆ ಮಂಗಳೂರಿನಲ್ಲೊಂದು ಬಾಡಿಗೆ ಮನೆ ಪಡೆದು ಠಿಕಾಣಿ ಹೂಡಿದರು . ಅವರಲ್ಲಿ ಇಬ್ಬರು ಹಂಪನಕಟ್ಟೆಯಲ್ಲಿರುವ ಹೋಟೆಲ್ ಒಂದರಲ್ಲಿ ರೂಂ ಮಾಡಿ ಅಮರ್ ಆಳ್ವನ ಚಲನವಲನ ವೀಕ್ಷಿಸುತ್ತಿದ್ದರು . ಅಮರ್ ಆಳ್ವ ಆಗಾಗ ಮಿಲಾಗ್ರಿಸ್‌ನ ಸೂಪರ್ ಮಾರ್ಕೆಟ್‌ಗೆ ಬರುತ್ತಿರುವುದು ಅವರ ಕಣ್ಣಿಗೆ ಬಿದ್ದಿತ್ತು . ಒಮ್ಮೆ ಅಮರ್ ಆಳ್ವ ಕೊಲೆ ಮಾಡಲು ಹಂತಕರು ನಿರ್ಧರಿಸಿದ್ದರಾದರೂ ಹೆಂಡತಿ - ಮಕ್ಕಳು ಜತೆಯಲ್ಲಿದ್ದರು . ಅವತ್ತು ಅಮರ್ ಆಳ್ವ ಬದುಕಿದ್ದ . ಆದರೆ ಜು . ೧೪ರಂದು ಹಂತಕರು ಯಾವುದೇ ದಾಕ್ಷಿಣ್ಯ ತೋರಲಿಲ್ಲ . ಗುಂಡು ಹಾರಿಸಿಯೇ ಬಿಟ್ಟರು . ಪೊಲೀಸರು ಅಮರ್ ಆಳ್ವ ಪ್ರಕರಣದಲ್ಲಿ ಒಟ್ಟು ೭ ಮಂದಿ ಆರೋಪಿಗಳನ್ನು ಗುರುತಿಸಿದರು . ಅವರಲ್ಲಿ ಯತೀಶ , ಮುರಳಿ , ಶ್ರೀಕರ ಹಾಗೂ ಬಾಲಕೃಷ್ಣನನ್ನು ಬಂಧಿಸಿದರು . ಉಳಿದವರು ನಾಪತ್ತೆಯಾಗಿಯೇ ಉಳಿದರು . ದುಬೈನಲ್ಲಿರುವ ಅಶೋಕ ಶೆಟ್ಟಿ ಗಡಿಪಾರಿಗೆ ದಾಖಲೆಗಳನ್ನು ಕಳುಹಿಸಿದರು . ಅದಕ್ಕೆ ಇವತಿನವರೆಗೂ ಉತ್ತರ ಬಂದಿಲ್ಲ . ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಅಮರ್ ಆಳ್ವ ಕೊಲೆಯ ಬಂಧಿತ ನಾಲ್ಕು ಮಂದಿ ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿತು . ಹಂಪನಕಟ್ಟೆಯಂಥ ಸಾರ್ವಜನಿಕ ಸ್ಥಳದಲ್ಲಿ ಹಲವಾರು ಕಣ್ಣುಗಳ ಎದುರೇ ಕೊಲೆ ನಡೆದರೂ ಸರಿಯಾದ ಸಾಕ್ಷಿ ಯಾರೂ ಇರಲಿಲ್ಲ . ಇದ್ದರೂ ಹೇಳಲಿಲ್ಲ . ಭೂಗತ ಲೋಕದ ಮಂದಿಗೆ ಹೆದರಿದ ಜನ ಸಾಕ್ಷಿ ಹೇಳಲು ಹೆದರುತ್ತಾರೆ . ಅಮರ್ ಆಳ್ವ ಪ್ರಕರಣದಲ್ಲಿ ಆದದ್ದೂ ಅದೇ . ಭುಹುಶಃ ಸುಬ್ಬರಾವ್ ಪ್ರಕರಣದಲ್ಲೂ ಆಗುವುದು ಅದೇ .
ನಾನು ಜಾಕೆಟ್ಟು ಬಿದ್ದಿರದ ಕುರ್ಚಿಯನ್ನು ಸುಮ್ಮ ಸುಮ್ಮನೇ ಓರಣವಾಗಿಡುತ್ತೇನೆ , ಬೆಳಿಗ್ಗೆ ಎದ್ದ ಕೂಡಲೇ ಕಣ್ಣು ಅವನ ರೂಮಿನ ಸೊಳ್ಳೆಪರದೆಯೊಳಗೆ ಹೋಗುತ್ತದೆ . ಅದು ಖಾಲಿ ಹಾಸಿಗೆ . ಬದುಕಲೇನು ಬೇಕು ಮೇಲೊಂದು ಆಕಾಶ , ಕೆಳಗೊಂದು ಭೂಮಿ . . ಆದ್ರೇನು ಮಾಡುವುದು ಭೂಮಿ ತಿರುಗುತ್ತದೆ . ಇದ್ದ ಜಾಗ ಬದಲಾಗುತ್ತದೆ !
ಬೆಂಗಳೂರಿನಿಂದ ಶಿವಮೊಗ್ಗೆಗೆ ವಾಪಸ್ಸು ಬರುವಷ್ಟರಲ್ಲಿ , ಮೈಸೂರಿನ ಬಯೋಟೆಕ್ನಾಲಜಿ ಸಂಸ್ಥೆಯಿಂದ ಮಿಲಿಂದನಿಗೆ ನೇಮಕಾತಿ ಪತ್ರ ಬಂದಿತ್ತು . ಕೆಲಸಕ್ಕೆ ಸೇರಲು ಕೇವಲ ನಾಲ್ಕು ದಿನಗಳ ಅವಧಿ ಕೊಟ್ಟಿದ್ದರು . ಹೀಗಾಗಿ , ಕೆಲಸಕ್ಕೆ ಹಾಜರಾಗಲು ಸಿದ್ಧತೆ ಮಾಡಿಕೊಳ್ಳುವ ಸಡಗರದಲ್ಲಿ , ಮೂರ್ತಿಯವರ ಸಿ . ಡಿ ಗಳಲ್ಲಿನ ದಾಖಲೆಗಳನ್ನು ಅಧ್ಯಯನ ಮಾಡಲಾಗಿರಲಿಲ್ಲ . ಕೇವಲ ಕುತೂಹಲಕ್ಕಾಗಿ , ಯಾವ ತತ್ವದ ಆಧಾರದ ಮೇಲೆ ಅವರು ತಮ್ಮ ಸಂಶೋಧನೆಯನ್ನು ನಡೆಸಿರಬಹುದು ಎಂದು ತಿಳಿದುಕೊಳ್ಳಲು ಒಮ್ಮೆ ಅವುಗಳ ಮೇಲೆ ಕಣ್ಣಾಡಿಸಿದ್ದ . ಮೂರ್ತಿಯವರ ನಿಧನದನಂತರ " ಚರಮದಿನ " ಕುರಿತಾಗಿ ಪ್ರಕಟವಾದ ಅಭಿಪ್ರಾಯಗಳ ಮೇಲೆ ಸದಾ ಒಂದು ಕಣ್ಣಿಟ್ಟಿದ್ದ . ಇದುವರೆಗೂ ಅದಕ್ಕೆ ಹೆಚ್ಚಾಗಿ ವಿರೋಧವೇ ವ್ಯಕ್ತವಾಗಿತ್ತು . ಮೈಸೂರಿನಲ್ಲಿ ಕೆಲಸಕ್ಕೆ ಸೇರಿದ ಮೇಲೆ , ತನಗೊಪ್ಪಿಸಿದ ಪ್ರಾಜೆಕ್ಟ್ ನಲ್ಲಿ ವ್ಯಸ್ತನಾಗಿ ಆ ಸಿ . ಡಿ ಗಳ ವಿಷಯವನ್ನು ಮರೆತೇ ಬಿಟ್ಟಿದ್ದ .
ವಾರ್ತೆ : ಪರಿವರ್ತನೆಯ ಹಾದಿ ಹಿಡಿದ ಆಕ್ರಂದನದ ಬದುಕು ! very good coverage
ಕ್ಷಮಿಸಿ ಸ್ನೇಹಿತರೇ , ನನ್ನ ಉದ್ದೇಶವೂ ಭಾಗಗಳನ್ನಾಗಿ ಎಪಿಸೋಡ್ ಮಾಡಿಕೊಡುವುದಾಗಿರಲಿಲ್ಲ . ಹಾಗೂ ನನ್ನ ಹಿಂದಿನ ಯಾವುದೇ ಲೇಖನವೂ ಈ ರೀತಿ ಇರಲಿಲ್ಲ . ಪೂರ್ಣ ಬರೆಯಲೆಂದೇ ಕುಳಿತೆ . , ವಿದ್ಯುತ್ ಕಡಿತವಾಗಿ ಕೊನೆ ಘಳಿಗೆಯಲ್ಲಿ ಬೇರೆ ದಾರಿ ಕಾಣದೇ , ಭಾಗ - 1 ಎಂದು ಕೊಟ್ಟು ಕಳುಹಿಸಿದೆ . ಮುಂದಿನ ಭಾಗದಲ್ಲಿ ಪೂರ್ಣಗೊಳಿಸುವ ಭರವಸೆಯನ್ನು ನೀಡುತ್ತೇನೆ ಭಾಗ 3 ಆಗುವುದಿಲ್ಲ . ನಿಮ್ಮ ಪ್ರತಿಕ್ರಿಯೆಗಳಿಗೆ ವಂದನೆಗಳು .
ಜೂನ್ 25 ಶುಕ್ರವಾರದ೦ದು ರಿಯಾದ್ ಮಲಾಜ್‌ನ ' ಭಾರತ್ ರೆಸ್ಟೋರೆ೦ಟ್ ಹಾಲ್ ' ನಲ್ಲಿ ಕೆ . ಡಬ್ಲ್ಯೂಎಆರ್ ( Karavali Welfare Association Riyadh ) ನ ಎರಡನೆ ವಾರ್ಷಿಕ ಸಾಮಾನ್ಯ ಸಭೆಯು ಜರುಗಿತು .
ಸದ್ಯ ಗ್ರಾ . ಪಂ . ಗಳಿಗೆ ಚುನಾವಣೆ ನಡೆದು ನೂತನ ಸಮಿತಿ ಆಸ್ತಿತ್ವಕ್ಕೆ ಬಂದಿರುವುದು ಮಾತ್ರವಲ್ಲದೇ , ಗ್ರಾ . ಪಂ . ಗಳಿಗೆ ನೂತನವಾಗಿ ಪಂಚಾಯಿತಿ ಅಭಿವೃದ್ಡಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ . ಈ ಸಂದರ್ಭದಲ್ಲಿ ಪಂಚತಂತ್ರ ಆನ್ ಲೈನ್ ತಂತ್ರಾಂಶದಿಂದ ಗ್ರಾ . ಪಂ . ಗಳ ಶೇ . ೧೦೦ಕ್ಕೆ ೧೦೦ರಷ್ಟು ಪಾರದರ್ಶಕ ಆಡಳಿತವನ್ನು ತಳಮಟ್ಟದಲ್ಲಿ ನೀಡುತ್ತದೆ ಎಂಬುದು ಸರ್ಕಾರದ ಉದ್ದೇಶವಾಗಿದೆ .
ತಾಜ್ ರಕ್ಷಣೆಗೆ ನುಗ್ಗಿದ ಎನ್ . ಎಸ್ . ಜಿ . ಕಮಾಂಡೋಗಳ ಬಳಿ ತಾಜ್ ಹೋಟೇಲಿನ ಪ್ಲಾನ್ ಕೂಡ ಇರಲಿಲ್ಲ . ಪರಿಸ್ಥಿತಿಯನ್ನ ಅರ್ಥ ಮಾಡಿಕೊಳ್ಳಲೇ ತಮಗೆ ಒಂದು ಗಂಟೆ ಬೇಕಾಯಿತು ಅನ್ನುತ್ತಾರೆ ಎನ್ . ಎಸ್ . ಜಿ . ಕಮಾಂಡೋ ದೇವೇಂದ್ರ . ಪ್ರತಿ ಫ್ಲೋರಿಗೂ ನುಗ್ಗಿ - ಎಲ್ಲ ರೂಮುಗಳನ್ನೂ ಹುಡುಕಿ - ಭಯೋತ್ಪಾದಕರ ನಾಶ ಮಾಡುವಷ್ಟರಲ್ಲಿ 60 ತಾಸು ಕಳೆದಿತ್ತು . ಭಯೋತ್ಪಾದಕರು ಎಲ್ಲ ವ್ಯವಸ್ಥೆಗಳನ್ನು ಬಲ್ಲವರಾಗಿದ್ದು , ರೂಮಿಂದ ರೂಮಿಗೆ ಒಂದು ಮಹಡಿಯಿಂದ ಮತ್ತೊಂದಕ್ಕೆ ಆರಾಮಾಗಿ ಓಡಾಡುತ್ತಿದ್ದರು . ಎಲ್ಲೋ ಕತ್ತಲಿಂದ ಕಾಲ ಬುಡಕ್ಕೇ ಗ್ರೆನೇಡ್ ಬಂದು ಬೀಳುತ್ತಿತ್ತು . ಇಂತಹ ಸಂದರ್ಭದಲ್ಲೇ ಮೇಜರ್ ಉನ್ನಿಕೃಷ್ಣನ್ ಹುತಾತ್ಮರಾಗಿದ್ದು . ದೇವೇಂದ್ರ ಹೇಳುತ್ತಾರೆ , " ಅದೆಷ್ಟೋ ಗಂಟೆಗಳ ನಂತರವೂ ತಾಜ್ ಒಳಗೇ ಇದ್ದ ನನಗೆ , ಹಗಲೋ ರಾತ್ರಿಯೋ ತಿಳಿಯದಂತಹ ಪರಿಸ್ಥಿತಿ ಇತ್ತು , ಆರನೇ ಫ್ಲೋರಿನ ರೂಮುಗಳಲ್ಲಿ ಸೊಂಟದವರೆಗೆ ನೀರು ತುಂಬಿಕೊಂಡಿತ್ತು , ಆ ನೀರಲ್ಲೆ ಹೆಣಗಳು ತೇಲುತ್ತಿದ್ದವು " . ಉಗ್ರರು ಸುಸ್ತು ಹೊಡೆದು ಹೋಗಿದ್ದಾರೆ ಎನ್ನುವುದು ಗೊತ್ತಾದ ಕೂಡಲೇ ಎನ್ . ಎಸ್ . ಜಿ ಕಮಾಂಡೋಗಳು ಒಂದೇ ಸಮನೆ ಗುಂಡಿನ ದಾಳಿ ಆರಂಭಿಸಿದರಂತೆ . ಗುಂಡಿನ ಮೊರೆತ ಕೇಳಲಾಗದೇ ಒಬ್ಬ ಉಗ್ರ ಕಿರುಚಿದನಂತೆ " ರಬ್ಬಾ ರೆಹಮ್ ಕರ್ " ಅಂತ ! ಇದೊಂದು ಅತ್ಯಂತ " ಡೆಡ್ಲೀ ಬೆಕ್ಕು ಇಲಿ ಆಟ " ಆಗಿತ್ತು ಎನ್ನುತ್ತಾರೆ ದೇವೇಂದ್ರ . * * *
ಪೀಪಲ್ ಎನ್ ಎಸ್ಪಾನಲ್ ಪತ್ರಿಕೆಯವರು 2006ರಲ್ಲಿ " 50 ಅತ್ಯಂತ ಸುಂದರವಾದವರು " ಮತ್ತು ಫೆಬ್ರವರಿ 2007ರಂದು " 100 ಅತ್ಯಂತ ಪ್ರಭಾವಿತ ಹಿಸ್ಪಾನಿಕ್ಸ್ " ಎಂದು ವಿಶೇಷ ಸಂಚಿಕೆ ಪ್ರಕಟಿಸಿದಾಗ ಅವೆರಡಕ್ಕೂ ಲೋಪೆಜ಼ಳನ್ನು ಆಯ್ಕೆ ಮಾಡಿದ್ದರು .
೪ . ಇದರ ಬಗ್ಗೆ ನಾನು ನನ್ನ ಅನೇಕ ( ೨೦೦೫ ) ವಿಮರ್ಶಾ ಸಂಕಲನದ ಐದು ಪ್ರತಿಕ್ರಿಯೆಗಳು ಶೀರ್ಷಿಕೆಯ ಲೇಖನದಲ್ಲ್ಲಿ ವಿವರವಾಗಿಯೇ ಬರೆದಿದ್ದೇನೆ .
ಗುಜರಾತಿಗಳು ವ್ಯಾಪಾರದಲ್ಲಿ ಬಹಳ ನಿಪುಣರು . ಆಧುನಿಕ ಅಭಿವೃದ್ಧಿಯನ್ನು ತಮಗೆ ಬೇಕಿರುವಂತೆ ಬಳಸಿಕೊಳ್ಳಲು ಅವರಿಗೆ ತಿಳಿದಿದೆ . ಮೋದಿ ಇದನ್ನು ಅರಿತೇ ` ಅಭಿವೃದ್ಧಿಗೆ ' ಗಮನಹರಿಸಿದಂತೆ ಇದೆ . ಅಭಿವೃದ್ಧಿಯ ಜತೆಗೇ ಮೋದಿ ಪ್ರತಿಪಾದಿಸುವ ಸಿದ್ಧಾಂತವನ್ನೂ ಒಪ್ಪಿಕೊಳ್ಳುತ್ತಿರುವುದು ಹಿಟ್ಲರ್ ಕಾಲದ ಜರ್ಮನಿಯನ್ನು ನೆನಪಿಸುತ್ತದೆ .
ಗಿಳಿಯ ಮಾತಿನಿಂದ ದೇವೇಂದ್ರನಿಗೆ ಮತ್ತಷ್ಟು ಅಚ್ಚರಿಯಾಯಿತು . ಅವನು ಮತ್ತೆ ತಿಳಿಹೇಳಿದ , " ಖಗೋತ್ತಮ , ನೀನು ಜ್ಞಾನಿಯೂ ಮೇಧಾವಿಯೂ ಆಗಿರುವೆ . ಆದರೂ ಹೇಳುತ್ತಿದ್ದೇನೆ ಕೇಳು : ಈ ವನಸ್ಪತಿಯು ತನ್ನ ಸ್ವಧರ್ಮವನ್ನು ( ಹೂ - ಹಣ್ಣುಗಳನ್ನು ನೀಡದೆ ಇರುವ ಮೂಲಕ ) ಬಿಟ್ಟುಕೊಟ್ಟಿದೆ . ಆದರೂ ನೀನು ನಿನ್ನ ಸ್ವಭಾವವನ್ನು ಅನುಸರಿಸುವುದರಲ್ಲಿ ಅರ್ಥವಿಲ್ಲ . ಆದ್ದರಿಂದ ನೀನು ಈ ನಿರ್ಜೀವ ಕಲ್ಪ ವೃಕ್ಷದ ಬದಲು ಯಾವುದಾದರೂ ಫಲ ವೃಕ್ಷವನ್ನು ಆಶ್ರಯಿಸುವುದೇ ಸೂಕ್ತವೆನಿಸುತ್ತದೆ "
ಅಧಿಕೃತವಾಗಿ ಮ್ಯಾಂಚೆಸ್ಟರ್ ಹೆಸರು ಕೇವಲ ಗ್ರೇಟರ್ ಮ್ಯಾಂಚೆಸ್ಟರ್‌ನ ಪ್ರಧಾನನಗರ ಜಿಲ್ಲೆಗೆ ಅನ್ವಯಿಸಿದ್ದರೂ ಸಹ , ಇತರೆ ವಿಶಾಲ ವಿಭಾಗಗಳಿಗೂ ಸಹ , ಅದರಲ್ಲೂ ವಿಶೇಷವಾಗಿ ಗ್ರೇಟರ್ ಮ್ಯಾಂಚೆಸ್ಟರ್ ಕೌಂಟಿಯ ಬಹಳಷ್ಟು ವಿಸ್ತೀರ್ಣದ ಪ್ರದೇಶ ಮತ್ತು ನಗರಪ್ರದೇಶಕ್ಕೆ ಅನ್ವಯಿಸಲಾಗಿದೆ . ' ಮ್ಯಾಂಚೆಸ್ಟರ್ ನಗರ ವಲಯ ' , ' ಮ್ಯಾಂಚೆಸ್ಟರ್ ಅಂಚೆ ಪಟ್ಟಣ ' ಮತ್ತು ' ಮ್ಯಾಂಚೆಸ್ಟರ್ ಕಂಜೆಷನ್ ಚಾರ್ಜ್ ' ಇವೆಲ್ಲವೂ ಇದರ ಉದಾಹರಣೆಗಳಾಗಿವೆ . ಗೃಹ - ವಸತಿ ಮಾರುಕಟ್ಟೆಗಳು , ವಾಣಿಕ್ಯ ಸಂಪರ್ಕ - ಕೊಂಡಿಗಳು , ದಿನದ ಕೆಲಸಕ್ಕಾಗಿ ಪ್ರಯಾಣದ ಮಾದರಿಗಳು , ಆಡಳಿತಾತ್ಮಕ ಸ್ಥಳಗಳು ಇತ್ಯಾದಿಯನ್ನು ವ್ಯಾಖ್ಯಾನಿಸಲು , ಮ್ಯಾಂಚೆಸ್ಟರ್ ನಗರ ವಲಯದ ಆರ್ಥಿಕ ಭೂಗೋಳವನ್ನು ಬಳಸಲಾಗಿದೆ . [ ೬೧ ] ದಿ ನಾರ್ದರ್ನ್ ವೇ ಆರ್ಥಿಕ ಅಭಿವೃದ್ಧಿ ನಿಯೋಗವು ವ್ಯಾಖ್ಯಾನಿಸಿದಂತೆ , ನಗರ ವಲಯ ಪ್ರದೇಶವು ಸ್ವಾಭಾವಿಕ ಆರ್ಥಿಕತೆಯ ಉದ್ಯೋಗಕ್ಕಾಗಿ ಪ್ರಯಾಣ ವಲಯದ ಬಹಳಷ್ಟು ಭಾಗವನ್ನು ಒಳಗೊಂಡಿದೆ . ಇದು ಮ್ಯಾಂಚೆಸ್ಟರ್ ಮತ್ತು ಸ್ಯಾಲ್ಫರ್ಡ್ ನಗರಗಳ ಜೊತೆಗೆ , ಪಕ್ಕದಲ್ಲಿರುವ ಪ್ರಧಾನನಗರ ವಿಭಾಗಗಳಾದ ಸ್ಟಾಕ್ಪೋರ್ಟ್ , ಟೇಂಸೈಡ್ , ಟ್ರ್ಯಾಫರ್ಡ್ , ಬೊಲ್ಟನ್ , ಬರಿ , ಓಲ್ಡ್‌ಹ್ಯಾಮ್ , ರಾಕ್ಡೇಲ್ ಹಾಗೂ ವಿಗ್ಯಾನ್ , ಜೊತೆಗೆ ವಾಯುವ್ಯ ಇಂಗ್ಲೆಂಡ್ ಆಚೆಯಿರುವ ಹೈ ಪೀಕ್ , ಚೆಷೈರ್ ಪೂರ್ವ , ಚೆಷೈರ್ ಪಶ್ಚಿಮ ಮತ್ತು ಚೆಸ್ಟರ್ ಹಾಗೂ ವಾರಿಂಗ್ಟನ್ ಸ್ಥಳಗಳನ್ನೂ ಸಹ ಒಳಗೊಂಡಿದೆ . [ ೬೨ ]
ನೆಟ್‌ಸ್ಕೇಪ್ ನ್ಯಾವಿಗೇಟರ್ ಹಾಗು ನೆಟ್‌ಸ್ಕೇಪ್ ಎಂಬುದು ೧೯೯೦ರ ದಶಕದಲ್ಲಿ ಜನಪ್ರಿಯವಾಗಿದ್ದ ಖಾಸಗಿ ಸ್ವಾಮ್ಯದ ವೆಬ್ ಬ್ರೌಸರ್‌ನ ಹೆಸರುಗಳು . ಇದು ನೆಟ್‌ಸ್ಕೇಪ್ ಕಮ್ಯೂನಿಕೇಷನ್ಸ್ ಕಾರ್ಪೋರೇಶನ್ ನ ಒಂದು ಪ್ರಮುಖ ತಾಂತ್ರಿಕ ಉತ್ಪನ್ನವಾಗಿದೆ . ಜೊತೆಗೆ ಬಳಕೆಯ ಹಂಚಿಕೆಗೆ ಸಂಬಂಧಿಸಿದಂತೆ ಇದೊಂದು ಪ್ರಮುಖ ವೆಬ್ ಬ್ರೌಸರ್ ಆಗಿದೆ , ಆದಾಗ್ಯೂ ೨೦೦೨ರ ಸುಮಾರಿಗೆ ಇದರ ಬಳಕೆಯು ಬಹುತೇಕವಾಗಿ ಕಣ್ಮರೆಯಾಯಿತು . ಇದಕ್ಕೆ ಆಂಶಿಕವಾಗಿ ಮೈಕ್ರೋಸಾಫ್ಟ್‌ನ ಇಂಟರ್ನೆಟ್ ಎಕ್ಸ್‌ಪ್ಲೋರರ್ ಅಂತರ್ಜಾಲ ವೀಕ್ಷಕ ಸಾಫ್ಟ್‌ವೇರ್ ಹಾಗು ಇತರ ಅಂತರ್ಜಾಲ ವೀಕ್ಷಕಗಳ ಹೆಚ್ಚಿದ ಬಳಕೆಯು ಕಾರಣವಾದರೆ , ಆಂಶಿಕವಾಗಿ ನೆಟ್‌ಸ್ಕೇಪ್ ಕಾರ್ಪೋರೇಶನ್ ( ನಂತರ ಸಂಸ್ಥೆಯನ್ನು AOL ಖರೀದಿಸಿತು ) ೧೯೯೦ರ ದಶಕದ ದ್ವಿತೀಯಾರ್ಧದ ನಂತರ ನೆಟ್‌ಸ್ಕೇಪ್ ನ್ಯಾವಿಗೇಟರ್‌ನ ತಾಂತ್ರಿಕ ಆವಿಷ್ಕಾರವನ್ನು ಸಮರ್ಥವಾಗಿ ನಿರ್ವಹಿಸದಿರುವುದೂ ಕಾರಣವಾಗಿತ್ತು . [ ೧ ]
ಜಗದ ಎಲ್ಲ ಮಾತೆಯರಿಗೂ ವಂದಿಸುತ್ತಾ " ವಿಶ್ವ ಅಮ್ಮಂದಿರ ದಿನ " ಕ್ಕಾಗಿ ಈ ಲೇಖನ . " ಅಮ್ಮಾ ಎಂಬ ಆ ನುಡಿಯು ಎನಿತು ಮಧುರವಮ್ಮಾ " ಎಂಬ ಮಧುರ ಗೀತೆಯ ನೆನೆಯುತ್ತ ಮುಂದುವರಿಸುವೆ . ಎಲ್ಲೆಡೆ ಇರಲಾಗದ ದೇವರು ತನ್ನ ಇರುವಿಕೆಯನ್ನು ಎಲ್ಲರಿಗೂ ಸಾರಲೆಂದೇ ಅಮ್ಮನನ್ನು ಸೃಷ್ಟಿಸಿದನಂತೆ . ಹೆಣ್ಣು , ಗಂಡಿನ ಜೊತೆಯಾಗಿ ಸೃಷ್ಟಿ ಚಕ್ರವ ಮುಂದುವರೆಸುತ್ತಾ , ನವ ತಾರುಣ್ಯದ ತರುಣಿ , ಗರ್ಭವತಿಯಾಗಿ ನವಮಾಸ ತನ್ನ ಗರ್ಭದಲ್ಲಿ ಹೊಸದೊಂದು ಜೀವವನ್ನು ಹೊತ್ತು ಅದರ ಮುಲುಕಾಟಗಳಿಗೆ ಸ್ಪಂದಿಸಿ ಅಪಾರ ನೋವಿನೊಡನೆ ಜಗಕಿಳಿದು ಬಂದ ಕಂದನನ್ನು ತನ್ನ ಮೊಲೆ ಹಾಲುಣಿಸಿ , ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ , ತಿದ್ದಿ ತೀಡಿ ಬೆಳೆಸುವಳು ಅಮ್ಮ . ಆ ಮುದ್ದು ಕಂದನ ತೊದಲ್ನುಡಿಯಲ್ಲಿ ತನ್ನೆಲ್ಲ ನೋವನ್ನು ಮರೆಯುವವಳು , ತೆವಳುವ ಕಂದ ತಪ್ಪು ಹೆಜ್ಜೆಯಿಡುತ್ತಾ , ಜೋಲಿ ಹೊಡೆಯುತ್ತಾ , ನಡೆವುದ ಕಲಿತಾಗ ಜಗವ ಗೆದ್ದಂತೆ ಸಂಭ್ರಮಿಸುವವಳು ಅಮ್ಮ . ಮಕ್ಕಳ ಏಳ್ಗೆಯನ್ನು ನೋಡಿ , ಅವರ ನಲಿವಿನಲ್ಲಿ ತನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವವಳು ಅಮ್ಮ . ನನ್ನ ಅಮ್ಮ ಮೈಸೂರಿನ ಸಾಮಾನ್ಯ ಕುಟುಂಬದವರು , ಸುಸಂಸ್ಕೃತ ಭಾಷೆ , ಹಿತ ಮಿತವಾದ ಮಾತು , ಪೂಜೆ ಪುನಸ್ಕಾರಗಳಲ್ಲಿ ಎಂದೂ ಮುಂದೆ . ತಾವು ಪೂಜೆ ಮಾಡುವುದರ ಜೊತೆಗೆ ನಾವು ನಾಲ್ಕು ಮಕ್ಕಳೂ ಅವರ ಜೊತೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳುತ್ತಿದ್ದರು . ಕೇವಲ ಮೂರನೆಯ ತರಗತಿ ಓದಿದ್ದ ಅಪ್ಪ , ತಮ್ಮ ಅಡುಗೆ ಕೆಲಸದ ಜೊತೆಗೆ ಅಮ್ಮನನ್ನು ಓದಿಸಿ ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ದಾದಿಯ ತರಬೇತಿಗೆ ಸೇರಿಸಿದರಂತೆ , ಕೇವಲ ಒಂದೂವರೆ ವರ್ಷದವನಾಗಿದ್ದ ನಾನು ಅನಿವಾರ್ಯವಾಗಿ ಅಮ್ಮನಿಂದ ಅಗಲಬೇಕಾಯಿತು . ತರಬೇತಿ ಮುಗಿಯುವವರೆಗೂ ವಾರಕ್ಕೊಮ್ಮೆ ಅಪ್ಪ ನನ್ನನ್ನು ಕರೆದೊಯ್ದು ಅಮ್ಮನ ಭೇಟಿ ಮಾಡಿಸುತ್ತಿದ್ದರಂತೆ . ತರಬೇತಿ ಮುಗಿದು ಅಮ್ಮನಿಗೆ ಕೆಲಸ ಸಿಕ್ಕಿದಾಗ ಮೈಸೂರಿನ ಸದ್ವಿದ್ಯಾ ಪಾಠಶಾಲೆಯಲ್ಲಿ ಒಂದನೆ ತರಗತಿಯಲ್ಲಿ ಓದುತ್ತಿದ್ದ ನನ್ನನ್ನು ಅನಾಮತ್ತಾಗಿ ಎತ್ತಿಕೊಂಡು ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಡಿಕಲ್ಲಿಗೆ ಬಂದಿದ್ದರು . ಅಲ್ಲಿ ದಾದಿಯ ಕೆಲಸದಲ್ಲಿದ್ದಾಗಲೇ ನನ್ನ ತಮ್ಮ ಜನಿಸಿದ . ತಮ್ಮ ಕೆಲಸದ ನಂತರ ಅಮ್ಮ ನಮಗಾಗಿ ಸಾಕಷ್ಟು ಸಮಯ ವ್ಯಯಿಸುತ್ತಿದ್ದರು . ನಾಲ್ಕು ವರ್ಷ ಮಂಡಿಕಲ್ಲಿನ ವಾಸದ ನಂತರ ಅಮ್ಮನಿಗೆ ತುಮಕೂರು ಜಿಲ್ಲೆಯ ಕೊರಟಗೆರೆಗೆ ವರ್ಗಾವಣೆಯಾದಾಗ ನಮ್ಮ ಪಯಣ ಅಲ್ಲಿಗೆ . ಅಪ್ಪನ ಹೋಟೆಲ್ಲಿನ ಆದಾಯ ಅವರ ಖರ್ಚಿಗೆ ಸರಿ ಹೋಗುತ್ತಿತ್ತು , ನಮ್ಮೆಲ್ಲರ ವಿದ್ಯಾಭ್ಯಾಸ ಮತ್ತು ಮನೆಯ ಜವಾಬ್ಧಾರಿ ಅಮ್ಮನ ಸಂಬಳದ ಮೇಲೆ ಅವಲಂಬಿತವಾಗಿತ್ತು . ಅಮ್ಮನಿಗೆ ಸಂಬಳ ಬಂದ ದಿನ ಮನೆಯಲ್ಲಿ ಎಲ್ಲರಿಗೂ ಖುಷಿಯೋ ಖುಷಿ . ನಾನು ನನ್ನ ಅಕ್ಕ ಇಬ್ಬರೂ ಅಮ್ಮನ ಜೊತೆ ರೇಷನ್ ಅಂಗಡಿಗೆ ಹೋಗಿ ಮಾರುದ್ಧದ ಚೀಟಿಯಲ್ಲಿ ಅಮ್ಮ ಬರೆದಿದ್ದ ಎಲ್ಲ ಸಾಮಾನುಗಳನ್ನೂ ಕಟ್ಟಿಸಿ ಮನೆಗೆ ತರುತ್ತಿದ್ದೆವು . ಆಗೆಲ್ಲಾ ನಮಗೆ ಬೇಕಾದ ಬಿಸ್ಕಟ್ , ಚಾಕಲೇಟ್ಗಳನ್ನು ನಾವಿಬ್ಬರೂ ಸಾಕಷ್ಟು ಖರೀದಿಸಬಹುದಾಗಿತ್ತು . ಆ ಖುಷಿಯ ದಿನಗಳನ್ನು ನೆನೆದರೆ ಈಗಲೂ ಮನಸ್ಸು ಪುಳಕಿತಗೊಳ್ಳುತ್ತದೆ . ಮತ್ತೆ ಅಮ್ಮನಿಗೆ ಕೊರಟಗೆರೆಯಿಂದ ತಿಪಟೂರಿಗೆ ವರ್ಗಾವಣೆಯಾದಾಗ ನಮ್ಮ ಕುಟುಂಬದ ಪ್ರಯಾಣ , ಹೊಸ ಜಾಗ , ಹೊಸ ಮನೆ , ಹೊಸ ವಾತಾವರಣ . ಅಲ್ಲಿಯೇ ಸುಮಾರು ೧೫ ವರ್ಷ ಸೇವೆ ಸಲ್ಲಿಸಿದ ಅಮ್ಮ , ನಾವು ವಾಸವಿದ್ದ ಇಡೀ ಗಾಂಧಿನಗರ ಮತ್ತದರ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ " ನರ್ಸಮ್ಮ " ನಾಗಿ ಜನಪ್ರಿಯವಾಗಿದ್ದರು . ಅದೆಷ್ಟು ನೂರು ಹೆರಿಗೆಗಳನ್ನು ಮಾಡಿಸಿದರೋ , ಅದೆಷ್ಟು ಸಾವಿರ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿದರೋ ಲೆಕ್ಕವೇ ಇಲ್ಲ . ಸರಿ ರಾತ್ರಿಯಲ್ಲಿಯೂ ಜನರು ಬಂದು ನಮ್ಮ ಮನೆಯ ಬಾಗಿಲು ತಟ್ಟುತ್ತಿದ್ದರು , ಅವರ ಮನೆಯ ಹೆಣ್ಣು ಮಕ್ಕಳ ಹೆರಿಗೆಗಾಗಿ ಸಹಾಯ ಯಾಚಿಸುತ್ತಿದ್ದರು . ಎಂದೂ ಅಮ್ಮ ಯಾರ ಮೇಲೂ ಕೋಪಿಸಿಕೊಳ್ಳುತ್ತಿರಲಿಲ್ಲ , ಯಾರಿಂದಲೂ ಅಮ್ಮ ಹಣ ಕೇಳುತ್ತಿರಲಿಲ್ಲ . ಅಮ್ಮನ ಜೊತೆ ಅಪ್ಪ ಅಥವಾ ನಾನು ಬೆಂಗಾವಲಾಗಿ ಹೋಗುತ್ತಿದ್ದೆವು . ಸುಸೂತ್ರವಾಗಿ ಹೆರಿಗೆ ಮಾಡಿಸಿದ ಅಮ್ಮ ನಗು ಮುಖದಿಂದ ಆ " ನವಮಾತೆ " ಯನ್ನು ಹರಸುತ್ತಿದ್ದರು . ಮನೆಗೆ ಬಂದ ನಂತರ ಸರಿ ರಾತ್ರಿಯಲ್ಲಿಯೂ ತಪ್ಪದೆ ಸ್ನಾನ ಮಾಡಿಯೇ ಮಲಗುತ್ತಿದ್ದರು . ಒಮ್ಮೆ ತಿಪಟೂರಿನ ಪಕ್ಕದ ಗೊರಗೊಂಡನಹಳ್ಳಿಯಲ್ಲಿ ಒಂದು ಹೆರಿಗೆಯ ಸಮಯದಲ್ಲಿ ಮಗು ಅಡ್ಡವಾಗಿ ನಿಂತು ಹೆರಿಗೆಗೆ ತೊಂದರೆಯಾದಾಗ ಎತ್ತಿನ ಗಾಡಿಯಲ್ಲಿ ಸರ್ಕಾರಿ ಆಸ್ಪತ್ರೆಗೆ ತಂದು ಶಸ್ತ್ರಚಿಕಿತ್ಸೆ ಮಾಡಿಸುವಷ್ಟರಲ್ಲಿ ತಾಯಿಯ ಪ್ರಾಣ ಹಾರಿ ಹೋಗಿತ್ತು , ಆದರೆ ಮಗು ಬದುಕಿ ಉಳಿದಿತ್ತು . ಆಗ ಅಮ್ಮ ತಮ್ಮ ಮಗಳೇ ಸತ್ತಂತೆ ಕಂಬನಿ ಸುರಿಸಿ ಗೋಳಾಡಿದ್ದರು . ಪದ್ಮಶ್ರೀ ಡಾ . ಎಂ . ಸಿ . ಮೋದಿಯವರ ನೇತೃತ್ವದಲ್ಲಿ " ಅಂಧತ್ವ ನಿವಾರಣಾ ಶಿಬಿರಗಳು " ನಡೆದಾಗ ತಮಗೆ ಗೊತ್ತಿದ್ದ ಎಲ್ಲಾ ವಯಸ್ಕರನ್ನೂ ಅಲ್ಲಿಗೆ ಬರುವಂತೆ ಮಾಡಿ ನೂರಾರು ಜನರಿಗೆ ದೃಷ್ಟಿ ಸಿಗುವಂತೆ ಶ್ರಮಿಸಿದ್ದರು . ಹೀಗೆ ಅತ್ಯಂತ ಕರುಣಾಮಯಿಯಾಗಿದ್ದರು ಅಮ್ಮ . ಸಿಡುಕು ಬುದ್ಧಿಯ ಅಪ್ಪ ನನ್ನನ್ನು ನನ್ನ ತುಂಟಾಟಗಳಿಗಾಗಿ ಹಿಡಿದು ತದುಕಿದಾಗಲೆಲ್ಲಾ ನನ್ನನ್ನು ಸಮಾಧಾನಿಸಿ , ರಾಯರ ಮಠಕ್ಕೋ ಇಲ್ಲ ಮಾರಮ್ಮನ ದೇವಸ್ಥಾನಕ್ಕೋ ಕರೆದುಕೊಂಡುಹೋಗುತ್ತಿದ್ದರು . ತಿಪಟೂರಿನ ಕೋಟೆ ಪ್ರದೇಶದಲ್ಲಿದ್ದ ಗುರುರಾಯರ ಮಠದಲ್ಲಿ ಪ್ರತಿ ಗುರುವಾರ ಅಮ್ಮ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು . ಅಲ್ಲಿ ಸುಶ್ರಾವ್ಯವಾಗಿ ರಾಯರ ಭಕ್ತಿಗೀತೆಗಳನ್ನು ಹಾಡುತ್ತಿದ್ದರು , ನನ್ನಿಂದಲೂ ಹಾಡಿಸುತ್ತಿದ್ದರು . ಸುಮಾರು ೪ ವರ್ಷಗಳ ಕಾಲ ಇದು ಅನೂಚಾನವಾಗಿ ನಡೆದು ಬಂತು . ನನ್ನ ತುಂಟಾಟಗಳು ಹೆಚ್ಚಾದಾಗ ಗಾಂಧಿನಗರದಲ್ಲಿದ್ದ ಮಾರಮ್ಮನ ಗುಡಿಯಲ್ಲಿ ಶುಕ್ರವಾರ ಪೂಜೆ ಮಾಡಿಸಿ , ಮಂತ್ರ ಹಾಕಿಸಿ ಒಂದು ತಾಯಿತವನ್ನೂ ಕಟ್ಟಿಸುತ್ತಿದ್ದರು ! ಆದರೆ ಅದು ಮೂರುದಿನವೂ ನನ್ನ ಮೈ ಮೇಲೆ ಇರುತ್ತಿರಲಿಲ್ಲ ! ! ನಾನು ಪದವಿ ತರಗತಿಗೆ ಸೇರಿದಾಗ ಎನ್ . ಸಿ . ಸಿ . ತರಬೇತಿ ಶಿಬಿರಗಳಿಗೆ , ಯೂತ್ ಹಾಸ್ಟೆಲ್ ವತಿಯಿಂದ ನಾನು ಭಾಗವಹಿಸಿದ ಸೈಕಲ್ ಪ್ರವಾಸಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು . ನಾನು ತಂಡದ ನಾಯಕನಾಗಿ ನಿಯುಕ್ತನಾಗಿ ಯಶಸ್ವಿಯಾಗಿ " ದೆಹಲಿ ಸೈಕಲ್ ಪ್ರವಾಸ " ಮುಗಿಸಿ ಬಂದಾಗ , ಅಂದಿನ ಶಾಸಕರಾಗಿದ್ದ ಟಿ . ಎಂ . ಮಂಜುನಾಥ ಮತ್ತು ಸಚಿವರಾಗಿದ್ದ ಲಕ್ಷ್ಮೀನರಸಿಂಹಯ್ಯನವರು ನಮ್ಮನ್ನು ಸನ್ಮಾನಿಸಿದ ಸಮಾರಂಭದಲ್ಲಿ ಮೊದಲ ಸಾಲಿನಲ್ಲಿ ಕುಳಿತು ಭಾವುಕರಾಗಿ ಆನಂದಬಾಷ್ಪಗರೆಯುತ್ತಾ ಅಪ್ಪ ಬರದಿದ್ದ ಕೊರತೆಯನ್ನು ತುಂಬಿದ್ದರು . ನಾ ಕಾಣದ ಅಪ್ಪನ ಪ್ರೀತಿಯ ಕೊರತೆಯನ್ನು ತುಂಬಿಸಲು ಅಮ್ಮ ಅಹರ್ನಿಶಿ ಯತ್ನಿಸುತ್ತಿದ್ದರು . ಅಮ್ಮ , ಅಪ್ಪನನ್ನು ತುಂಬಾ ಪ್ರೀತಿಸುತ್ತಿದ್ದರು , ತಮ್ಮ ಮೈಸೂರು ಸಂಸ್ಕೃತಿಯ " ಏನೂಂದ್ರೇ " ಅನ್ನದೆ ಎಂದೂ ಮಾತು ಆರಂಭಿಸುತ್ತಿರಲಿಲ್ಲ , ತಮ್ಮ ಲಾಟರಿ ಚಟದಿಂದ ಅಪ್ಪ ಸಾಕಷ್ಟು ನಷ್ಟ ಮಾಡಿದರೂ ಸಹ ಅಪ್ಪನನ್ನು ಎಂದೂ ಬಿಟ್ಟು ಕೊಡುತ್ತಿರಲಿಲ್ಲ . ಅಪ್ಪನ ಕೈಲಿ ಒದೆ ತಿಂದು ಸಾಕಾಗಿ ನಾನು ಸೆಡ್ಡು ಹೊಡೆದು ತಿರುಗಿ ಬಿದ್ದಾಗ ನನ್ನನ್ನು ಆದಷ್ಟು ಸಮಾಧಾನಿಸಲು ಯತ್ನಿಸುತ್ತಿದ್ದರು . " ತಂದೆ - ಮಗ " ಇಬ್ಬರಲ್ಲಿ ಯಾರ ಪರವಾಗಿ ನಿಲ್ಲಬೇಕೆನ್ನುವ ಸಂದಿಗ್ಧದಲ್ಲಿ ಸಾಕಷ್ಟು ಹೊಯ್ದಾಡುತ್ತಿದ್ದರು . ಅಮ್ಮ ಎಷ್ಟೇ ಪ್ರಯತ್ನಿಸಿದರೂ ಅಪ್ಪನ ಸಿಡುಕುತನ , ಮುಂಗೋಪಗಳಿಂದ ನಮ್ಮಿಬ್ಬರ ನಡುವೆ ಅಗಾಧವಾಗಿ ಮೂಡಿದ್ದ ಕಂದಕವನ್ನು ಮುಚ್ಚುವಲ್ಲಿ ಸೋತಿದ್ದರು . ಪದವೀಧರನಾಗಿ ನಾನು ಬೆಂಗಳೂರಿಗೆ ಬಂದು ಕೆಲಸಕ್ಕೆ ನಿಂತ ನಂತರ ನನ್ನ ತಮ್ಮನನ್ನೂ ಬೆಂಗಳೂರಿಗೆ ಎಳೆ ತಂದು ಕೆಲಸಕ್ಕೆ ಸೇರಿಸಿದೆ . ಆಗ ಅಮ್ಮ ಬೆಂಗಳೂರಿಗೇ ವರ್ಗಾವಣೆ ಮಾಡಿಸಿಕೊಂಡು ಬಂದರು , ನಾನಿರುವಲ್ಲಿಯೇ ದೊಡ್ಡ ಮನೆ ಮಾಡಿ ಎಲ್ಲರೂ ಒಟ್ಟಿಗೆ ಇರೋಣವೆಂದ ನನ್ನ ಮಾತಿಗೆ ಅಪ್ಪ ಸುತರಾಂ ಒಪ್ಪದಿದ್ದಾಗ ವಿಧಿಯಿಲ್ಲದೆ ವೈಟ್ ಫೀಲ್ಡಿನಲ್ಲಿ ಮನೆ ಮಾಡಿದ್ದರು . ಅದುವರೆಗೂ ನನ್ನ ಜೊತೆಯಿದ್ದ ತಮ್ಮನನ್ನು ಅಮ್ಮನ ಜೊತೆಗೆ ಕಳುಹಿಸಿದ್ದೆ . ನನ್ನ ಕೆಲಸದಲ್ಲಿನ ಸಂಬಳ ಸಾಕಾಗದೆ ನಾನು ಹಲಸೂರಿನ ಸೋಮೇಶ್ವರ ದೇವಾಲಯದ ಮುಂದಿದ್ದ " ಬೆರಳಚ್ಚು ಕೇಂದ್ರ " ದಲ್ಲಿ ಬಿಡುವಿನ ವೇಳೆಯಲ್ಲಿ ಸಾವಿರಾರು ಬಾಡಿಗೆ , ಮಾರಾಟದ ಕರಾರು ಪತ್ರಗಳನ್ನು ಬೆರಳಚ್ಚಿಸುತ್ತಿದ್ದೆ . ಮನೆಯಲ್ಲಿ ಅಪ್ಪ ಜಗಳವಾಡೆದಾಗೆಲ್ಲ ಅಮ್ಮ ಸೀದಾ ಅಲ್ಲಿಗೆ ಬಂದು ಬಿಡುತ್ತಿದ್ದರು , ಆಗೆಲ್ಲಾ ನಾನು ಹೋಗಿ ಅಪ್ಪನಿಗೆ ಬುದ್ಧಿ ಹೇಳಿ ಬರಬೇಕಿತ್ತು . ಆದರೆ ಅಪ್ಪ ಎಂದೂ ನನ್ನ ಮನೆಗೆ ಬರುತ್ತಿರಲಿಲ್ಲ . ಹೀಗಿದ್ದ ಅಮ್ಮ ಕೊನೆಗೊಂದು ದಿನ ನಿವೃತ್ತರಾದರು , ತಮಗೆ ಸಾಕಷ್ಟು ಹಣ ಬಂದಾಗ ಒಂದು ಸೈಟು ಖರೀದಿಸಿ ಸ್ವಂತ ಮನೆ ಕಟ್ಟಬೇಕೆನ್ನುವ ಆಸೆಯಿತ್ತು ಅಮ್ಮನಿಗೆ , ನಾನಿದ್ದ ಲಗ್ಗೆರೆಯಲ್ಲಿ ಒಂದು ದೊಡ್ಡ ಸೈಟು ಕೇವಲ ೨ ಲಕ್ಷಕ್ಕೆ ಮಾರಾಟಕ್ಕಿತ್ತು , ಅಮ್ಮನಿಗೆ ಮನಸ್ಸಿತ್ತು , ಆದರೆ ಅಪ್ಪ ಅಲ್ಲಿಗೆ ಬರಲು ಮತ್ತೆ ಒಪ್ಪಲಿಲ್ಲ , ಸೈಟು ತೆಗೆದರೆ ವೈಟ್ ಫೀಲ್ಡಿನಲ್ಲೇ ತೆಗೆಯಬೇಕೆಂದು ಹಠ ಹಿಡಿದರಂತೆ . ಮತ್ತೊಮ್ಮೆ ಮಗನೋ ಗಂಡನೋ ಎಂಬ ಸಂದಿಗ್ಧದಲ್ಲಿ ಸಿಕ್ಕಿ ನರಳಿದರು ಅಮ್ಮ . ಕೊನೆಗೆ ' ನಾನು ದೂರವೇ ಇರುತ್ತೇನೆ , ನೀವೆಲ್ಲ ಚೆನ್ನಾಗಿರಿ , ಅಲ್ಲೇ ಸೈಟು ತೆಗೆದು ಮನೆ ಕಟ್ಟಿಸಿ , ನನಗೇನೂ ಬೇಜಾರಿಲ್ಲ ' ಎಂದು ಸಮಾಧಾನ ಮಾಡಿ ಕಳುಹಿಸಿದೆ . ಕೊನೆಗೂ ಅಲ್ಲಿ ಸೈಟು ಖರೀದಿಸಿ ಮನೆ ಕಟ್ಟಿಸಿದರು . ತಮ್ಮ ಸ್ವಂತ ಮನೆಯಲ್ಲಿ ಪ್ರಶಾಂತವಾದ ನಿವೃತ್ತ ಜೀವನದ ಕನಸು ಕಂಡಿದ್ದರು ಅಮ್ಮ , ಆದರೆ ವಿಧಿ ಬಿಡಬೇಕಲ್ಲ ! ಮನೆ ಕಟ್ಟಿ ಗೃಹ ಪ್ರವೇಶವಾಗುವ ಹೊತ್ತಿಗೆ ಸರಿಯಾಗಿ ನನ್ನ ತಮ್ಮನಿಗೆ ದುಬೈನಲ್ಲಿ ಕೆಲಸಕ್ಕೆ ಆದೇಶ ಬಂತು , ಅವನು ಹೊರಟು ನಿಂತ , ನಂತರ ಕೆಲದಿನಗಳಲ್ಲೇ ಹೆಂಡತಿ ಮಗನನ್ನೂ ಅಲ್ಲಿಗೇ ಕರೆಸಿಕೊಂಡ . ತಮ್ಮನ ಸಂಸಾರದ ಜೊತೆ ಹೊಂದಿಕೊಂಡು ನೆಮ್ಮದಿಯಿಂದಿದ್ದ ಅಮ್ಮ ಈಗ ಒಂಟಿಯಾಗಿದ್ದರು . ಅಪ್ಪ ಯಥಾ ಪ್ರಕಾರ ತಮ್ಮ ದುಡುಕು ಬುದ್ಧಿ , ಸಿಡುಕುತನವನ್ನು ಮುಂದುವರೆಸಿ ಅಮ್ಮನ ನೆಮ್ಮದಿ ಕೆಡಿಸುತ್ತಿದ್ದರು . ತುಂಬಾ ಬೇಜಾರಾದಾಗ ಸೀದಾ ನಮ್ಮ ಮನೆಗೆ ಬಂದು ವಾರಗಟ್ಟಲೆ ಉಳಿದುಬಿಡುತ್ತಿದ್ದರು . ನನ್ನ ಹೆಂಡತಿಯ ಕೈಯಲ್ಲಿನ ರಾಗಿ ಮುದ್ದೆ , ಮಾಂಸದ ಸಾರು ಅಮ್ಮನಿಗೆ ತುಂಬಾ ಪ್ರಿಯವಾಗಿತ್ತು . ೩೦ ವರ್ಷ ದುಡಿದು ನಿವೃತ್ತರಾಗಿದ್ದ ಅಮ್ಮನಿಗೆ ಅಧಿಕ ರಕ್ತದೊತ್ತಡ , ಸಕ್ಕರೆ ಖಾಯಿಲೆಗಳು ಬಿಡದ ನೆಂಟರಂತೆ ಅಂಟಿಕೊಂಡಿದ್ದವು . ಪ್ರತಿದಿನದ ಮಾತ್ರೆ ಔಷಧಿಗಳ ಬಗ್ಗೆ ತಾತ್ಸಾರ ತೋರಿದ್ದರಿಂದ ಅಮ್ಮನ ಆರೋಗ್ಯ ಕೈಕೊಟ್ಟು , ಅವರ ಮೂತ್ರಪಿಂಡಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿತು . ಪರಿಚಿತರಾಗಿದ್ದ ವಿಕ್ಟೋರಿಯಾ ಆಸ್ಪತ್ರೆಯ ಡಾ . ಕೃಷ್ಣಮೂರ್ತಿಯವರಲ್ಲಿ ತೋರಿಸಿದಾಗ ಅಮ್ಮನ ಎರಡೂ ಮೂತ್ರಪಿಂಡಗಳು ಹಾಳಾಗಿರುವುದು ಸ್ಪಷ್ಟವಾಯಿತು , ನನ್ನದೂ ಅಮ್ಮನದೂ ಒಂದೇ ರಕ್ತದ ಗುಂಪಾಗಿದ್ದುದರಿಂದ ನಾನು ನನ್ನ ಒಂದು ಮೂತ್ರಪಿಂಡವನ್ನು ಅಮ್ಮನಿಗೆ ಕೊಡಲು ಸಿದ್ಧನಾದೆ . ಆದರೆ " ಸಕ್ಕರೆ ಖಾಯಿಲೆ ಅಧಿಕ ಮಟ್ಟದಲ್ಲಿರುವುದರಿಂದ ಶಸ್ತ್ರಚಿಕಿತ್ಸೆ ಮಾಡಿ ಮೂತ್ರಪಿಂಡ ಕಸಿ ಮಾಡುವುದು ಪ್ರಯೋಜನವಿಲ್ಲ , ಇದ್ದರೆ ಇನ್ನಾರು ತಿಂಗಳು ಇದ್ದಾರು , ಇರುವವರೆಗೂ ಚೆನ್ನಾಗಿ ನೋಡಿಕೊಳ್ಳಿ " ಎಂದು ನಿರ್ಭಾವುಕರಾಗಿ ಎದ್ದು ಹೋಗಿದ್ದರು . ಅಂದಿನಿಂದ ವಿಕ್ಟೋರಿಯಾ ಆಸ್ಪತ್ರೆ ಅಮ್ಮನ ಮನೆಯಾಯಿತು , ನಾನು ನನ್ನ ಕೆಲಸದ ಜೊತೆಗೆ ಪ್ರತಿದಿನ ಆಸ್ಪತ್ರೆಗೆ ಹೋಗುವುದು , ಅಲ್ಲಿನ ಆಯಾ , ದಾದಿಯರಿಗೆಲ್ಲ ಸಾಕಷ್ಟು ಕಾಣಿಕೆ ಕೊಡುತ್ತಾ ಅಮ್ಮನಿಗೆ ಏನೂ ತೊಂದರೆಯಾಗದಂತೆ ನೊಡಿಕೊಳ್ಳುವಂತೆ ವ್ಯವಸ್ಥೆ ಮಾಡಿದ್ದೆ . ಮನೆಯಿಂದ ಪ್ರತಿದಿನ ಸಮಯಕ್ಕೆ ಸರಿಯಾಗಿ ಊಟದ ವ್ಯವಸ್ಥೆಯಾಗದ ಕಾರಣ ಕಲಾಸಿ ಪಾಳ್ಯದ ನಾಯ್ಡು ಹೋಟೆಲಿನ ರಾಗಿಮುದ್ದೆ , ಮಟನ್ ಕೈಮಾ ಅಮ್ಮನಿಗೆ ಪ್ರತಿ ದಿನದ ಊಟವಾಯ್ತು . ಹಣ ನೀರಿನಂತೆ ಖರ್ಚಾಗುತ್ತಿತ್ತು , ಸಿಕ್ಕ ಸಿಕ್ಕಲ್ಲಿ ಸಾಲ ಮಾಡಿ ಹೇಗಾದರೂ ಅಮ್ಮನನ್ನು ಉಳಿಸಿಕೊಳ್ಳಬೇಕೆಂದು ಹೆಣಗಾಡುತ್ತಿದ್ದೆ . ದುಬೈಗೆ ಹೋದ ತಮ್ಮ ಒಮ್ಮೆ ಹೆಂಡತಿ ಮಗನೊಡನೆ ಬಂದು ಅಮ್ಮನನ್ನು ನೋಡಿಕೊಂಡು ಹೋದವನು ಹತ್ತು ಸಾವಿರ ಕೈಯಲ್ಲಿಟ್ಟು ದುಬೈಗೆ ಹೋದ ನಂತರ ಮತ್ತಷ್ಟು ಕಳಿಸುತ್ತೇನೆಂದು ಹೇಳಿ ಹೋಗಿದ್ದ , ಆದರೆ ಮತ್ತೆ ಇತ್ತ ತಲೆ ಹಾಕಿರಲಿಲ್ಲ ! ಸುಮಾರು ಎಂಟು ತಿಂಗಳು ನರಳಿದ ಅಮ್ಮ ಕೊನೆಗೊಂದು ದಿನ ಆಸ್ಪತ್ರೆಯಲ್ಲಿ ಸಿಡುಕುತ್ತಲೇ ಇದ್ದ ಅಪ್ಪನನ್ನು ಬಳಿ ಕರೆದು ತನ್ನನ್ನು ಎತ್ತಿ ತನ್ನ ಭುಜಕ್ಕಾನಿಸಿಕೊಂಡು ಕೂರಿಸಿಕೊಳ್ಳಲು ಹೇಳಿ , ಅವರ ಭುಜದ ಮೇಲೆಯೇ ಕೊನೆಯುಸಿರೆಳೆದಿದ್ದರು . ನನ್ನ ದೈನಂದಿನ ಕೆಲಸಗಳನ್ನು ಮುಗಿಸಿ ದಣಿದು ಮನೆಗೆ ಬಂದು ಹೆಂಡತಿ ಪ್ರೀತಿಯಿಂದ ಬಡಿಸಿದ ರಾಗಿಮುದ್ದೆಯ ತುತ್ತನ್ನು ಮುರಿದು ಸೊಪ್ಪಿನ ಸಾರಿನಲ್ಲಿ ಅದ್ದಿ ಬಾಯಿಗಿಡುವ ಹೊತ್ತಿಗೆ ದೊಡ್ಡ ಮೋಟರಾಲ ಮೊಬೈಲ್ ರಿಂಗಣಿಸಿತ್ತು . ಅತ್ತಲಿಂದ ಅಪ್ಪನ ಕ್ಷೀಣ ಧ್ವನಿ , " ಮಂಜು , ನಿಮ್ಮಮ್ಮ ಹೋಗ್ಬಿಟ್ಳು ಕಣೋ , ಬೇಗ ಬಾರೋ " ಅಂದಿದ್ದಷ್ಟೆ , ದುಃಖದ ಕಟ್ಟೆಯೊಡೆದಿತ್ತು , ಖಾಲಿಯಾಗಿದ್ದ ಜೇಬನ್ನೊಮ್ಮೆ ಮುಟ್ಟಿ ನೋಡಿಕೊಂಡು , ಮೇಲಿನ ಮನೆಯ ಸುರೇಶನಲ್ಲಿ ಸ್ವಲ್ಪ ಹಣ ಪಡೆದು ಹೆಂಡತಿ ಮಕ್ಕಳೊಡನೆ ಆಸ್ಪತ್ರೆಗೆ ದೌಡಾಯಿಸಿದೆ . ನಮಗಾಗಿ ಏನೆಲ್ಲ ಕಷ್ಟಪಟ್ಟಿದ್ದ ನನ್ನಮ್ಮ ನಮ್ಮನ್ನೆಲ್ಲ ಬಿಟ್ಟು ದೂರ ಹೋಗಿದ್ದರು , ಜೀವನವೆಲ್ಲ ಅಪ್ಪನ ಸಿಡುಕುತನವನ್ನು ಸಹಿಸಿ ಅವರನ್ನು ಅಪಾರವಾಗಿ ಪ್ರೀತಿಸಿ , ಕೊನೆಗೆ ಅವರ ಭುಜದ ಮೇಲೆಯೇ ಕಣ್ಮುಚ್ಚಿದ್ದರು . ಅಮ್ಮನ ಕಳೇಬರವನ್ನು ವೈಟ್ ಫೀಲ್ಡಿನ ಮನೆಗೆ ತಂದು ತಮ್ಮ ಹಾಗೂ ಎಲ್ಲ ಸಂಬಂಧಿಕರಿಗೂ ಫೋನ್ ಮಾಡಿ ವಿಷಯ ತಿಳಿಸಿದೆ , ನಾನು ಬರಲಾಗುವುದಿಲ್ಲ , ಎಲ್ಲ ಕಾರ್ಯ ನೀನೇ ಮಾಡು ಅಂದ ತಮ್ಮನ ಮಾತು ಕೇಳಿ ಮನಕ್ಕೆ ನೋವಾದರೂ ಅಲ್ಲಿ ಅವನ ಪರಿಸ್ಥಿತಿ ಏನಿದೆಯೋ ಎಂದನ್ನಿಸಿ ಅಮ್ಮನ ಅಂತ್ಯಕ್ರಿಯೆಗಳನ್ನು ಮುಗಿಸಿದೆ . ಅಂತ್ಯಕ್ರಿಯೆಗಳು ಮುಗಿದ ನಂತರ ಅಪ್ಪ , ಅಮ್ಮನ ಒಡವೆಗಳ ವಿಚಾರವಾಗಿ ನನ್ನ ಪತ್ನಿಯೊಡನೆ ಜಗಳವಾಡಿ ಯಾವುದೇ ಕಾರಣಕ್ಕೂ ಯಾರೂ ಅಮ್ಮನ ಒಡವೆಗಳನ್ನು ಮುಟ್ಟಬಾರದೆಂದು ತಾಕೀತು ಮಾಡಿದ್ದರಂತೆ . ಅಪ್ಪನಿಗೊಮ್ಮೆ ಕೈ ಮುಗಿದು ನಮಗೆ ಯಾವ ಒಡವೆಗಳೂ ಬೇಕಿಲ್ಲವೆಂದು ಸ್ಪಷ್ಟೀಕರಿಸಿ ಖಾಲಿಯಾದ ಮನದೊಂದಿಗೆ ಲಗ್ಗೆರೆಗೆ ಮರಳಿ ಬಂದಿದ್ದೆ . ಅದೆಷ್ಟೋ ಸಲ ಅಮ್ಮನ ಮಡಿಲಲ್ಲಿ ತಲೆಯಿಟ್ಟು ನನ್ನ ಕಷ್ಟ ಸುಖಗಳನ್ನು ಹೇಳಿಕೊಂಡಿದ್ದೆ , ತಲೆ ನೇವರಿಸಿ ಅಮ್ಮ ಸಮಾಧಾನ ಮಾಡುತ್ತಿದ್ದರು . ಇಂದು , ಕಷ್ಟದ ದಿನಗಳು ಮುಗಿದು , ದುಬೈನಲ್ಲಿ ಕೆಲಸ ಮಾಡುತ್ತಿದ್ದೇನೆ , ಅಮ್ಮನೊಡನೆ ಹೇಳಿಕೊಳ್ಳಲು ನೂರಾರು ಮಾತುಗಳಿವೆ , ಆದರೆ ಕೇಳಲು ಆ " ಅಮ್ಮ " ಇಲ್ಲ . ವಿಶ್ವ ಅಮ್ಮಂದಿರ ದಿನದಂದು ಅಗಲಿದ ನನ್ನ ಅಮ್ಮನಿಗೆ ಇದು ನನ್ನ ಅಶೃ ತರ್ಪಣ . ಅವರ ಆತ್ಮಕ್ಕೆ ಶಾಂತಿ ಸಿಗಲಿ . " ದೇವರಿಗೊಂದು ಕಾಗದ ಬರೆದು ಭೂಮಿಗೆ ಕರೀಬೇಕು , ದೇವರು ಓದೋ ಭಾಷೆಯ ಕಲಿಸೋ ತಾಯಿಯ ಪಡೀಬೇಕು "
ಪೂರ್ಣವದು ಪೂರ್ಣವಿದು ಪೂರ್ಣದಿಂ ಪೂರ್ಣ ಪುಟ್ಟುವುದು ! ಪೂರ್ಣಕೆ ಪೂರ್ಣವಂ ತರಲ್ ಪೂರ್ಣ ತಾನುಳಿಯುವುದು !
ಮಂಗಳೂರು ಸೆಝ್ನ 2ನೇ ಹಂತದ 2035 ಎಕ್ರೆ ಜಮೀನು ಡಿನೋಟಿಫೈ ಮಾಡಲು ಮತ್ತು ಯುಪಿಸಿಎಲ್ ಸಾಧಕ , ಬಾಧಕ ಗಳನ್ನು ಪರಿಶೀಲಿಸಲು ನೇಮಿಸ ಬೇಕಾಗಿರುವ ತಜ್ಞರ ಸಮಿತಿಯಲ್ಲಿ ತಾವು ಹೇಳುವ ಇಬ್ಬರನ್ನೂ ಸೇರಿಸಬೇಕು . ಈ ಸಮಿತಿ ಯೋಜನೆಯಿಂದಾಗುತ್ತಿರುವ ಹಾನಿ ಪರಿಶೀಲಿಸಬೇಕು ಎಂದು ಆಗ್ರಹಿಸಲಾಗಿತ್ತು . ಆದರೆ , ರಾಜ್ಯ ಸರಕಾರ ಸಮಿತಿ ನೇಮಕ ಮಾಡದೇ ಇರುವುದರಿಂದ ಶ್ರೀಪಾದರು ತಮ್ಮ ನಿಲುವಿನಿಂದ ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದು ಮಠದ ವಕ್ತಾರ ಸುಬ್ರಹ್ಮಣ್ಯ ಪೆರಂಪಳ್ಳಿ ತಿಳಿಸಿದ್ದಾರೆ .
ಒಂದು ವೇಳೆ ನೀವು ಉನ್ನತ ಪ್ರಶ್ನಾವಳಿ ರೀತಿಯನ್ನು ಆರಿಸಿದ್ದಲ್ಲಿ ( ಪ್ರಾಧಾನ್ಯತೆಯಲ್ಲಿ ) ಅವಾಗ ನಿಮಗೆ ಸ್ವಲ್ಪ ಬೇರೆ ರೀತಿಯಲ್ಲಿ ಶೋಧಕ ಐಚ್ಛಿಕಗಳು ಸಿಗುವುದು .
ಒ೦ದು ಗ೦ಟೆ ಮೊದಲು ಸ೦ದೇಶ ತಲುಪಿದೆ ಅ೦ದಿರಿ ಆ ನ೦ತರ ಭೇಷ್ ಅ೦ದಿರಿ , ಇದಕ್ಕೇನರ್ಥ ಅ೦ತೀರಿ !
ಅಷ್ಟಕ್ಕೂ ಮಿಸ್ಟರ್ . ಬಾಲಚಂದ್ರ ಅವರೇ ನೀವ್ ಅಲ್ಲಿ ನಾಥೂರಾಮ್ ಗೋಡ್ಸೆ ಅಂಡ್ ಕಂಪನೀ ನ ಪ್ರೀತಿ ಇಂದ ಆದರಿಸಿದೋರು ನಿಮ್ ಮಾತಿಗೆ ಬೆಲೆ ಕೊಟ್ಟು ಅಥವಾ ನಂಬಿ ನಂ ನಾವ್ ನಂ ದಾರಿ ಬದಲಾಯ್ಸೋಕೆ ಆಗಾತ್ತಾ ?
ಮಾರ್ಕ್ಸ್‌ನ ನಿರುದ್ಯೋಗದ ಸಿದ್ಧಾಂತದ ಅನುಸಾರ , ವಿಶೇಷ ಆಸಕ್ತಿಗಳು ಕೂಡ ಲಾಭಗಳಿಸಬಹುದು ; ಕೆಲವು ಉದ್ಯೋಗದಾತರು ಉದ್ಯೋಗ ಕಳೆದುಕೊಳ್ಳುವ ಭಯವಿಲ್ಲದ ಕಾರ್ಮಿಕರು ಪ್ರಯಾಸಪಟ್ಟು ಕೆಲಸ ಮಾಡುವುದಿಲ್ಲ , ಅಥವಾ ಹೆಚ್ಚು ವೇತನ ಹಾಗೂ ಲಾಭಗಳನ್ನು ಕೋರಬಹುದು ಎಂದು ನಿರೀಕ್ಷಿಸಬಹುದು . ಈ ಸಿದ್ಧಾಂತದ ಅನುಸಾರ , ಉದ್ಯೋಗದಾತನ ಶಕ್ತಿ ಹಾಗೂ ಲಾಭಗಳಂತಹ ಮೊನೊಪ್ಸೋನಿಯನ್ನು ( ಕೊಳ್ಳುವವನು ಒಬ್ಬ , ಮಾರುವವರು ಹಲವರು ) ಹೆಚ್ಚಿಸುವುದರಿಂದ ನಿರುದ್ಯೋಗ ಸಾಮಾನ್ಯ ಕಾರ್ಮಿಕ ಉತ್ಪಾದನಾ ಸಾಧ್ಯತೆಯನ್ನು ಹಾಗೂ ಲಾಭ ಸಾಮರ್ಥತೆಯನ್ನು ಪ್ರಚಲಿಸಬಹುದು .
ರಾಜ್ಯವು $ 2000ಗಳನ್ನು , ನವೀಕರಿಸಲ್ಪಡುವ ಪ್ರತಿಭೆಯಾಧಾರಿತ ಸ್ಕಾಲರ್ ಷಿಪ್ ಆಗಿ ಬ್ರೈಟ್ ಫ್ಲೈಟ್ ಎಂಬ ಯೋಜನೆಯಡಿಯಲ್ಲಿ ಇದೇ ರಾಜ್ಯದಲ್ಲಿ ವಿಶ್ವವಿದ್ಯಾಲಯವನ್ನು ಸೇರುವ ಮಿಸೌರಿ ಪ್ರೌಢಶಾಲೆಯ ಪದವಿ ಪಡೆದ ಮೊದಲ 3 % ವಿದ್ಯಾರ್ಥಿಗಳಿಗೆ ನೀಡುತ್ತಿದೆ .
ಬರೆಯಲು ಸಾಕಷ್ಟು ಟಾಪಿಕ್ ಗಳಿದ್ದರೂ ಒಂದು ಕಡೆ ಅಂಡನ್ನು ಆಳವಾಗಿ ಊರಿ ಬರೆಯಲು ಸೋಮಾರಿತನ , lethargy . ಈ lethargy ಗೆ ಸಂಗಾತಿಯಾಗಿ procrastination ಸಿಕ್ಕಿದರಂತೂ ಕೇಳೋದೇ ಬೇಡ ಅನ್ನಿ . ಈ procrastinate ಅನ್ನೋ ಖಾಯಿಲೆಯನ್ನ ನೊಬೆಲ್ ಪ್ರಶಸ್ತಿ ವಿಜೇತರೂ ಅಂಟಿಸಿ ಕೊಂಡಿದ್ದಾರಂತೆ . ದಾರ್ಶನಿಕ ಸಾಮ್ಯುಎಲ್ ಜಾನ್ಸನ್ ಸಹ ಈ ಪಿಡುಗಿಗೆ ಬಲಿಯಾಗಿರಬೇಕಾದರೆ ನೀವೇ ಊಹಿಸಿ . ಖ್ಯಾತ ಸಾಹಿತಿ ವಿಕ್ಟರ್ ಹ್ಯೂಗೋ ತಾನುಟ್ಟ ಬಟ್ಟೆ ಬಿಚ್ಚಿ , ಸೇವಕನಿಗೆ ಒಪ್ಪಿಸಿ , ಅಡಗಿಸಿಡಲು ಹೇಳಿ ನಗ್ನನಾಗಿ ಕೂತು ಬರೆಯುತ್ತಿದ್ದನಂತೆ ತಾನು ಬರೆಯುವುದನ್ನು ನಿಲ್ಲಿಸಿ ಹೊರಕ್ಕೆ ಹೋಗಬಾರದು ಎಂದು . ನೋಡಿದಿರಾ ತನ್ನ ಮೇಲೆ ತಾನೇ ಯಾವ ರೀತಿಯ " ನಗ್ನ " ನಿರ್ಬಂಧವನ್ನು ಹೇರಿಕೊಂಡ ಈ ಪ್ರತಿಭಾವಂತ ಸಾಹಿತಿ procrastination ಎನ್ನುವ ಪೆಡಂಭೂತಕ್ಕೆ ಹೆದರಿ ? procrastination ಪದ ಲ್ಯಾಟಿನ್ ಮೂಲದ್ದು ಮತ್ತು ಆಂಗ್ಲ ಭಾಷೆಗೆ ಆಮದಾಗಿದ್ದು ಸುಮಾರು ೧೬ ನೆ ಶತಮಾನದಲ್ಲಿ .
ಇಂಡಿಯ ಅಮೆರಿಕದಂತೆ ಇರದಿರಬೋದು . . . ಆದರೆ ಸ್ವಾತಂತ್ರ್‍ಯ ಕೊಡವ ದೇಶಗಳಲ್ಲಿ ಒಂದು ಒಳ್ಳೇ ದೇಶ . . .
ಒಳ್ಳೆಯ ಲೇಖನ ರಾಜೀವ್ . . . ನಾವು ನಮ್ಮ ಧರ್ಮವನ್ನು ಯಾರ ಮೇಲೂ ಬಲವಂತವಾಗಿ ಹೇರುವುದಿಲ್ಲವಲ್ಲ . . . ಯಾವ ಧರ್ಮದ ದೇವರುಗಳನ್ನೂ ಅವಮಾನ ಪಡಿಸುವುದಿಲ್ಲವಲ್ಲ . . . ಆದರೂ ಏಕೆ ನಮ್ಮ ಮೇಲೆ ಈ ರೀತಿಯ ದೈಹಿಕ , ಮಾನಸಿಕ , ದಾಳಿಗಳನ್ನು ಇತರ ಧರ್ಮದವರು ಮಾಡುತ್ತಾರೆ ? ಅವರಿಗೆ ಎಲ್ಲಕ್ಕಿಂತ ಮೊದಲು ದೇಶ ಎನ್ನುವುದನ್ನು ಹೇಗೆ ಕಲಿಸಬೇಕೋ ? ಶ್ಯಾಮಲ
ಲೇಖನ ಚೆನ್ನಾಗಿದೆ . ನಿಮ್ಮ ಬ್ಲಾಗಿನ ಹೆಸರೂ ತುಂಬಾ ಚೆನ್ನಾಗಿದೆ ~ ಅಪಾರ
ಕಫ್ ಪೆರೇಡ್ ರಸ್ತೆಯಲ್ಲಿ ನಡೆದು ಹೋಗುತ್ತಿರುವೆ . ಎದುರಿಗೆ ಯಾರೋ ಮೀನುಗಳ ಬುಟ್ಟಿ ಹೊತ್ತ ಮನುಷ್ಯನೊಬ್ಬ ಬರುತ್ತಿದ್ದಾನೆ . ಅವನು ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಾನೆ . ನಾನು ಶೂನ್ಯವನ್ನರಸುತ್ತಿರುವೆ . ಇದ್ದಕ್ಕಿದ್ದಂತೆಯೇ ಏನೋ ನೆನಪಾಗಿ ತೋರು ಬೆರಳಿನ ಉಗುರನ್ನು ಆಚೆಗೆ ತೆಗೆದು ಹಿಂದೆ ಮುಂದೆ ತಿರುಗಿಸಿ ನೋಡಿ ( ಕೈ ಉಂಗುರ ನೋಡಿದಂತೆ ) ಮತ್ತೆ ಅದನ್ನು ಯಥಾಸ್ಥಾನದಲ್ಲಿರಿಸುತ್ತೇನೆ . ಸುತ್ತುಮುತ್ತಲಿನವರೆಲ್ಲರೂ ಬೆಕ್ಕಸ ಬೆರಗಾಗಿ ನೋಡುತ್ತಿದ್ದರಂತೆ . ನನ್ನ ಕಿವಿಯಲ್ಲಿ ನನ್ನ ಸ್ನೇಹಿತ ಹಸಬ್ನೀಸ್ ಈ ವಿಷಯವನ್ನು ಉಸುರಿದ್ದ . ನನ್ನ ಕಣ್ಣಿಗೆ ಅದೇನೂ ಕಾಣಿಸುತ್ತಿರಲಿಲ್ಲ . ಕಾಣಿಸಿದವ ಮೀನಿನ ಬುಟ್ಟಿ ಹೊತ್ತ ಆ ಮನುಷ್ಯ - ಅದೂ ಕೆಲವೇ ಕ್ಷಣಗಳು ಮಾತ್ರ ಮತ್ತು ಜೊತೆಗೆ ನಡೆಯುತ್ತಿರುವ ಹಸಬ್ನೀಸ್ . ನನ್ನ ದೃಷ್ಟಿ ಎಲ್ಲವೂ ನನ್ನ ಬೆರಳಿನ ಉಗುರಿನ ಕಡೆ ಮತ್ತು ಶೂನ್ಯದತ್ತ ಮಾತ್ರ . ನನ್ನಲ್ಲಿ ಯಾವುದೋ ಅತೀತ ಶಕ್ತಿ ಆವಾಹನೆಯಾದಂತಿದೆ .
ಅಮಾನತ್ ಬ್ಯಾಂಕಿನ ವ್ಯವಸ್ಥಿತ ಲೂಟಿಯಲ್ಲಿ ಮುಖ್ಯ ಪಾತ್ರಧಾರಿಗಳು - ರಾಜ್ಯಸಭೆಯ ಡೆಪ್ಯುಟಿ ಚೇರ್ಮನ್ ಆದ ಕೆ . ರೆಹಮಾನ್ ಖಾನ್ , ಪ್ರೆಸ್ಟೀಜ್ ಗ್ರೂಪ್ ನ ಮಾಲಕ ಇರ್ಫಾನ್ ರಜಾಕ್ ಮುಂತಾದ ಘಟಾನುಘಟಿಗಳು . ಅಂದ ಹಾಗೆ ಅಮಾನತ್ ಅಂದರೆ ಟ್ರಸ್ಟ್ ಅಥವಾ ನಂಬಿಕೆ . ಎಂಥ ಕ್ರೂರ ವ್ಯಂಗ್ಯ ನೋಡಿ .
ಕಾನೂನಿನ ಮೂಲಕ ಬಾಲ ಕಾರ್ಮಿಕ ದುಡಿಮೆಯನ್ನು ಹದ್ದುಬಸ್ತಿಗೆ ತರಲು ರಾಜಕಾರಣಿಗಳು ಮತ್ತು ಸರ್ಕಾರ ಪ್ರಯತ್ನಿಸಿತು . ಆದರೆ ಕಾರ್ಖಾನೆ ಮಾಲೀಕರು ಪ್ರತಿಭಟಿಸಿದರು ; ಹಸಿವು ತಪ್ಪಿಸಲು ಆಹಾರ ಖರೀದಿಗಾಗಿ ಮಕ್ಕಳಿಗೆ ಹಣ ನೀಡುವ ಮೂಲಕ ಬಡವರಿಗೆ ನೆರವಾಗುತ್ತಿರುವುದಾಗಿ ಕೆಲವರು ಭಾವಿಸಿದರು ಮತ್ತು ಇತರರು ಕೇವಲ ಬಾಲಕರ ಅಗ್ಗದ ದುಡಿಮೆಯನ್ನು ಸ್ವಾಗತಿಸಿದರು . ಬಾಲ ಕಾರ್ಮಿಕ ದುಡಿಮೆಯ ವಿರುದ್ದ ಪ್ರಥಮ ಸಾಮಾನ್ಯ ಕಾನೂನುಗಳಾದ ಫ್ಯಾಕ್ಟರಿ ಕಾಯ್ದೆಗಳನ್ನು ಇಂಗ್ಲೆಂಡ್‌ನಲ್ಲಿ ಅನುಮೋದಿಸಲಾಯಿತು : ಒಂಭತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ದುಡಿಯಲು ಅವಕಾಶವಿರಲಿಲ್ಲ , ರಾತ್ರಿಪಾಳಿಯಲ್ಲಿ ಮಕ್ಕಳ ಕೆಲಸಕ್ಕೆ ಅನುಮತಿ ನಿಷೇಧ ಮತ್ತು ೧೮ರ ವಯೋಮಿತಿ ಕೆಳಗಿನ ಯುವಕರ ಕೆಲಸದ ಅವಧಿಯನ್ನು ೧೨ ಗಂಟೆಗಳಿಗೆ ಸೀಮಿತಗೊಳಿಸಲಾಯಿತು . ಕಾನೂನಿನ ಸೂಕ್ತ ಜಾರಿಯ ಬಗ್ಗೆ ಕಾರ್ಖಾನೆ ತಪಾಸಕರು ಮೇಲ್ವಿಚಾರಣೆ ವಹಿಸಿದರು . ಸುಮಾರು ಹತ್ತು ವರ್ಷಗಳು ಕಳೆದ ಬಳಿಕ , ಗಣಿಗಾರಿಕೆಯಲ್ಲಿ ಮಕ್ಕಳು ಮತ್ತು ಮಹಿಳೆಯರಿಗೆ ಉದ್ಯೋಗವನ್ನು ನಿಷೇಧಿಸಲಾಯಿತು . ಈ ಕಾನೂನುಗಳಿಂದ ಬಾಲ ಕಾರ್ಮಿಕರ ಸಂಖ್ಯೆಯನ್ನು ತಗ್ಗಿಸಿತು ; ಆದಾಗ್ಯೂ , ಬಾಲ ಕಾರ್ಮಿಕ ದುಡಿಮೆಯು ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ೨೦ನೇ ಶತಮಾನದವರೆಗೆ ಉಳಿದಿತ್ತು . [ ೪೭ ] ಅಮೆರಿಕದ ಕೈಗಾರಿಕೆಗಳಲ್ಲಿ ೧೯೦೦ರಲ್ಲಿ ಹದಿನೈದು ವರ್ಷ ವಯೋಮಾನಕ್ಕಿಂತ ಕೆಳಗಿನ ೧ . ೭ದಶಲಕ್ಷ ಬಾಲಕಾರ್ಮಿಕರಿದ್ದಾರೆಂದು ವರದಿಯಾಗಿತ್ತು . [ ೪೮ ]
ಸುಮಾರು ೧೬೦೦ ಇಸವಿಯ ನಂತರ , ಹತ್ತಿಯನ್ನು ಗಮನಾರ್ಹ ಪ್ರಮಾಣದಲ್ಲಿ , ಮೊದಲಿಗೆ ನಾರಿನ / ಹತ್ತಿಯ ದಪ್ಪ ಹತ್ತಿ ಬಟ್ಟೆಗಳಲ್ಲಿ ಬಳಸಲಾಯಿತು . ಆದರೆ , ಸುಮಾರು ೧೭೫೦ ಇಸವಿಯಲ್ಲಿ , ಶುದ್ಧ ಹತ್ತಿಯ ಜವಳಿಗಳನ್ನು ಉತ್ಪಾದಿಸಲಾಯಿತು ಮ್ತತು ಹತ್ತಿಯು ಉಣ್ಣೆಗಿಂತಲೂ ಹೆಚ್ಚು ಪ್ರಾಮುಖ್ಯತೆ ಗಳಿಸಿತು . [ ೧೮ ] ಸುಮಾರು ೧೭೩೬ ಇಸವಿಯಲ್ಲಿ ಇರ್ವೆಲ್ ಮತ್ತು ಮರ್ಸಿ ನದಿಗಳನ್ನು ನೌಕಾ ಸಂಚಾರಯೋಗ್ಯವಾಗಿ ಮಾಡಲಾಯಿತು . ಮ್ಯಾಂಚೆಸ್ಟರ್‌ನಿಂದ ಮರ್ಸಿಯ ಸಮುದ್ರಧಕ್ಕೆಗೆ ಮಾರ್ಗವನ್ನು ತೆರೆಯಲಾಯಿತು . ಬ್ರಿಟನ್‌ನ ಮೊದಲ ಪೂರ್ಣ ಮಾನವನಿರ್ಮಿತ ಜಲಮಾರ್ಗವಾದ ಬ್ರಿಡ್ಜ್‌ವಾಟರ್ ಕಾಲುವೆಯನ್ನು ೧೭೬೧ರಲ್ಲಿ ತೆರೆಯಲಾಯಿತು . ವೊರ್ಸ್ಲಿಯ ಗಣಿಗಳಿಂದ ಕಲ್ಲಿದ್ದಲನ್ನು ಮಧ್ಯ ಮ್ಯಾಂಚೆಸ್ಟರ್‌ಗೆ ಈ ಕಾಲುವೆಯ ಮೂಲಕ ಸಾಗಿಸಲಾಯಿತು . ಇಸವಿ ೧೭೭೬ರಲ್ಲಿ ಈ ಕಾಲುವೆಯನ್ನು ರನ್ಕಾರ್ನ್‌ನಲ್ಲಿ ಮರ್ಸಿ ನದಿಯ ತನಕ ವಿಸ್ತರಿಸಲಾಯಿತು . ಪೈಪೋಟಿ ಮತ್ತು ಸುಧಾರಿತ ದಕ್ಷತೆಯ ಸಂಯೋಗದಿಂದ ಕಲ್ಲಿದ್ದಿಲಿನ ಬೆಲೆಯನ್ನು ಅರ್ಧಮಟ್ಟಕ್ಕಿಳಿಸಲಾಯಿತು ಹಾಗೂ ಕಚ್ಚಾ ಹತ್ತಿಯ ಸಾರಿಗೆ ವೆಚ್ಚವನ್ನು ಸಹ ಅರ್ಧಕ್ಕೆ ಇಳಿಸಲಾಯಿತು . [ ೧೮ ] [ ೨೧ ] ಸುತ್ತಮುತ್ತಲಿನ ಪಟ್ಟಣಗಳಲ್ಲಿ ಉತ್ಪಾದನೆಯಾದ ಜವಳಿಗಳಿಗಾಗಿ ಮ್ಯಾಂಚೆಸ್ಟರ್ ಪ್ರಮುಖ ಮಾರುಕಟ್ಟೆಯ ಸ್ಥಳವಾಯಿತು . [ ೧೮ ] ಇಸವಿ ೧೭೨೯ರಲ್ಲಿ ಆರಂಭಿಸಲಾದ ಸರಕು ವಿನಿಮಯ ಕೇಂದ್ರ [ ೧೯ ] ಹಾಗೂ ಹಲವು ದೊಡ್ಡ ಗೋದಾಮುಗಳು , ವಾಣಿಜ್ಯ ಚಟುವಟಿಕೆಗೆ ನೆರವಾದವು .
ಸಾರ್ಥಕವಾಯ್ತು , ಪ್ರಭಾಕರ್ . ಸುಧಾಕರ ಶರ್ಮರ ನಿಷ್ಠುರ ಮಾತುಗಳು ದೇಶದ ಮೂಲೆ ಮೂಲೆಗೂ ತಲುಪಬೇಕು . ಇಂತಹ ಜ್ಞಾನಿಗಳನ್ನು ಸಂದರ್ಶಿಸಿ ಲೇಖನವನ್ನು ಪ್ರಕಟಿಸಿದ ನಿಮಗೆ ಧನ್ಯವಾದಗಳು .
ಪ್ರತಿಪಕ್ಷಗಳು ಎಂದಿನಂತೆಯೇ ಹುಯಿಲೆಬ್ಬಿಸಿದವು ಬಿಡಿ . ಅವತ್ತು ಬಿಜೆಪಿ ಸರಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮೋದಿ ಬಂದಿದ್ದಾಗಲೇ ' ರಾಜ್ಯವನ್ನು ಬಿಜೆಪಿಯವರು ಇನ್ನೊಂದು ಗುಜರಾತ್ ಮಾಡಲು ಹೊರಟಿದ್ದಾರೆ ' ಎಂದು ಅಲವತ್ತುಕೊಂಡವರು ಇವತ್ತು ಸುಮ್ಮನಿದ್ದಾರೆಯೇ ? ಅವರು ಯಾವ ಅರ್ಥದಲ್ಲಿ ಕರ್ನಾಟಕ ಇನ್ನೊಂದು ಗುಜರಾತ್ ಆಗುತ್ತದೆ ಎನ್ನುತ್ತಿದ್ದಾರೋ ಗೊತ್ತಿಲ್ಲ . ಆದರೆ ಒಂದೊಮ್ಮೆ ನಮ್ಮ ಸರಕಾರ ರಾಜ್ಯವನ್ನು ಇನ್ನೊಂದು ಗುಜರಾತ್ ಮಾಡಿದರೆ ಯಡಿಯೂರಪ್ಪ ಅವರು ಕನಿಷ್ಠ ಇನ್ನೂ ಮೂರು ಅವ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಆ ದೇವರಿಂದಲೂ ಸಾಧ್ಯವಿಲ್ಲ .
ಇಲ್ಲಿ ನಾನು ಪ್ರತಿದಿನ ನೋಡುವ ಟಿ . ವಿ ಕಾರ್ಯಕ್ರಮದಲ್ಲಿ ಮನೆಯಬಗ್ಗೆಯೇ ಹಲವಾರು ಚಾನಲ್ ಗಳು ದಿನವಿಡೀ ಪ್ರಸಾರಮಾಡುತ್ತವೆ . ಅವರು ತೋರಿಸುವ ಮನೆಗಳು ಅತಿ - ನವೀನ ಅಥವಾ ವಿಂಟೇಜ್ ಹೌಸ್ ಗಳನ್ನು ಸರಿಯಾಗಿ ಈಗಿನಕಾಲಕ್ಕೆ ಸರಿಪಡಿಸಿರುವ ವಿವರಗಳು . ಸುಮಾರು ೫ ಲಕ್ಷ ಡಾಲರ್ ನೊಳಗೆ ಉತ್ತಮಮನೆಗಳು ಕೊಲಂಬಿಯದಂತಹ ಪ್ರದೇಶಗಳಲ್ಲಿ ದೊರೆಯುತ್ತವೆ ಎಂದು ಕೇಳಿಬಂತು . ನಾವು ತಿಳಿಸುವ ಅಥವಾ ಒಬ್ಬ ಅಮೆರಿಕನ್ ಮಹಿಳೆ ಕೇಳುವ ಸವಲತ್ತುಗಳಲ್ಲಿ ಅಗಾಧ ವ್ಯತ್ಯಾಸವಿದೆ . ನನ್ನಮಗ , ಕ್ಯಾಲಿಫೋರ್ನಿಯದಲ್ಲಿ ೧ , ೭೦೦ ಡಾಲರ್ ಬಾಡಿಗೆಕೊಡುತ್ತಿದ್ದಾನೆ . ( ಸುಮಾರು ೭೫೦ ಚ . ಅಡಿ ಜಾಗ ) ಕ್ಕೆ . ನನಗೆ ಇದರ ಬಗ್ಗೆ ಹೆಚ್ಚುತಿಳಿದಿಲ್ಲ . ಒಟ್ಟಿನಲ್ಲಿ ಡಾಲರ್ ಗೆ ಅತಿ ಮಹತ್ವ ಹೆಚ್ಚು . ೧ ದ್ಡಾಲರ್ ಗೆ ಹೊಟ್ಟೆತುಂಬಾ ತಿನ್ನಲು ಸಿಗುತ್ತದೆ . ಆದರೆ ೧ ರೂಪಾಯಿಗೆ ಏನೂ ಸಿಗುವುದಿಲ್ಲ ಅಲ್ಲವೇ ?
ಹೇಳಿ ಕೇಳಿ ನಾನೂ ಕ್ರಿಕೆಟ್ ಪ್ರಿಯ . ಬಾಲ್ಯದಿಂದಲೇ ಕ್ರಿಕೆಟ್ ಹುಚ್ಚು ಅಂಟಿಕೊಂಡಿತು . ನಡೆಯುತ್ತಿದ್ದಾಗಲೆಲ್ಲ ಬಲದ ಕೈಯ ಮಣಿಗಂಟನ್ನು ತಿರುಗಿಸುತ್ತ ಹೋಗುತ್ತಿದ್ದ ನನ್ನನ್ನು ತಮಾಷೆ ಮಾಡುತ್ತಿದ್ದುದುಂಟು ಮನೆ ಮಂದಿ - " ಅಗೋ ಅಲ್ಲಿ ಚಂದ್ರಶೇಖರ್ ಬಂದ " . ಆ ಕಾಲದಲ್ಲಿ ಚಂದ್ರಶೇಖರ್ ಬಲು ದೊಡ್ಡ ಲೆಗ್ ಸ್ಪಿನ್ನರ್ , ಚಾಣಕ್ಷ್ಯ ಗೂಗ್ಲೀ ಬೌಲರ್ .
ರೋಗಗಳಿಗೆ ಚಿಕಿತ್ಸೆ ನೀಡುವ ಒಂದು ಪ್ರಾಯೋಗಿಕ ಯತ್ನವಾಗಿ ಜೀನ್ ಚಿಕಿತ್ಸೆಯು ಹೊರಹೊಮ್ಮುವ ಮುನ್ನ ಹಲವು ಅಡೆತಡೆಗಳನ್ನು ಎದುರಿಸಬೇಕಿದೆ . [ ೧೩ ] ಸದರಿ ಅಡೆತಡೆಗಳಲ್ಲಿ ಕನಿಷ್ಠ ಪಕ್ಷ ನಾಲ್ಕು ಕೆಳಕಂಡಂತಿವೆ :
ಸಂಸ್ಕೃತದಲ್ಲಿಯೂ ಎಂದರೆ ಲಿಪಿಕ ಬರೆಯಲು ಬಲ್ಲವನು ಮತ್ತು ಎಣ್ಣೆ ಮೊದಲಾದವನ್ನು ಲೇಪಿಸಬಲ್ಲವನು ಎಂಬ ಎರಡೂ ಅರ್ಥಗಳಿವೆ . ರಾಮನಗರ , ಕನಕಪುರ ಪ್ರದೇಶದ ಕೆಲವು ಜನ ಹಂಚಿನ ಮೇಲೆ ತೆಳ್ಳನೆಯ ಅಕ್ಕಿಯ ಹಿಟ್ಟನ್ನು ನೇರವಾಗಿ ಸವರಿ ಮಾಡುವ ರೊಟ್ಟಿಗೂ ಬರೆಯುವ ರೊಟ್ಟಿ ಎಂದೇ ಕರೆಯುತ್ತಾರೆ . ಕೆಲವರು ಬಳಿಯುವ ರೊಟ್ಟಿ ಅನ್ನುವುದೂ ಉಂಟು .
ಸುನಾಥರೆ , " ಗಮ ಗಮಾ ಗಮಾಡಸ್ತಾವ ಮಲ್ಲಿಗಿ . . . " ಈ ಕವನದ ಹೆಸರನ್ನಷ್ಟೆ ಕೊಟ್ಟಿರುವುರಿ . ಈ ಕವನದ ಪೂರ್ಣ ವಿವರಣೆ ಬರೆದಿದ್ದರೆ ಚೆನ್ನಾಗಿರುತ್ತಿತ್ತು . ಇದು ನನಗೆ ತುಂಬಾ ಇಷ್ಟವಾದ ಕವನ . ನನ್ನ ಮಗಳು ಈ ಕವನವನ್ನು ಚೆನ್ನಾಗಿ ಹಾಡುತ್ತಾಳೆ .
ತಂಪಾದ ಏ . ಸಿ ರೂಮಲ್ಲೂ ದೇಹದ ಸುತ್ತ ಬಿಸಿಯಾದ ಗಾಳಿ ಆವರಿಸಿದ ಹಾಗಾಯ್ತು ಸಂಜೀವಂಗೆ . ಎರ್ಡು ದಿವ್ಸದಿಂದ್ಲೂ ಕಣ್ಣು ಅದುರ್ತಾ ಇತ್ತು . ಎಡಗಣ್ಣೋ ಬಲಗಣ್ಣೋ ಜ್ನಾಪಕಕ್ಕೆ ಬರ್ಲಿಲ್ಲ . ಹುಡ್ಗರಿಗೆ ಬಲಗಣ್ಣು ಅದುರಿದ್ರೆ ಒಳ್ಳೇದಂತೆ ಅಥವಾ ಹುಡ್ಗೀರ್ಗಾ ? ಯಾಕೋ ತಲೆ ಖಾಲಿ ಖಾಲಿ ಬುದ್ಧಿ ಓಡ್ತಾ ಇಲ್ಲ ಅನ್ನಿಸ್ತು . ಶಿವ ಯಾವ ವಿಷಯ ಹೇಳಕ್ಕೆ ಇಷ್ಟೆಲ್ಲಾ ಪೀಠಿಕೆ ಹಾಕ್ತಾ ಇದ್ದಾನೆ ಅಂತ ಸುಳಿವು ಸಿಕ್ಕಿತು ಸಂಜೀವಂಗೆ .
ಬಹಳ ಚೆನ್ನಾಗಿದೆ . . . . ನನ್ನ ಬಾಲ್ಯದಲ್ಲಿ ಯಾವುದೇ ಈ ಥರ ತಂಟೆಗಳನ್ನು ಮಾಡಲಿಲ್ಲವಲ್ಲಾ ಎಂದು ಅನಿಸುತ್ತದೆ . . . ಇಂಗ್ಲೀಷ್ ನಲ್ಲಿ ಕುಷ್ಟ್ ಆಗಿದ್ದನೇ ? ? ?
ಮಾಡಿದೆ . ಈಗ ನೇಮಕಗೊಂಡ ಕಾರ‍್ಯದರ್ಶಿಗೆ ಬೆದರಿಕೆ ಕರೆಗಳು ಬರುತ್ತಿದೆಯೆಂದು ತಿಳಿದುಬಂದಿದೆ . ವಂಚನೆ ಬಗ್ಗೆ ಪೊಲೀಸರಿಗೆ ದೂರು ನೀಡಲು ಮಂಡಳಿ ನಿರ್ಧರಿಸಿದೆ .
ಒಟ್ಟು 380 ಲೀಟರ್ ನೀಲಿ ಸೀಮೆ ಎಣ್ಣೆ ಅಂದಾಜು ಬೆಲೆ ರೂ 13 . 500 / -
ದಿನಾಂಕ 11 . 01 . 2011ರ ದಿನಪತ್ರಿಕೆಗಳಲ್ಲಿ ರಾಜ್ಯ ಹೈಕೋರ್ಟ್ , ಕರ್ನಾಟಕದ ಕೇಂದ್ರೀಯ ಪಠ್ಯಕ್ರಮದ ಶಾಲೆಗಳು ಕರ್ನಾಟಕ ರಾಜ್ಯಸರ್ಕಾರದ " ಕರ್ನಾಟಕ ಶಿಕ್ಷಣ ಕಾಯ್ದೆ " ಯ ವ್ಯಾಪ್ತಿಯಲ್ಲಿ ಬರುತ್ತವೆ ಅನ್ನೋ ತೀರ್ಪನ್ನು ಕೊಟ್ಟ ಸುದ್ದಿ ಪ್ರಕಟವಾಗಿದೆ . ಇದು ತುಂಬಾ ಒಳ್ಳೇ ತೀರ್ಪಾಗಿದ್ದು ನಮ್ಮ ಸರ್ಕಾರ ಇದನ್ನು ಹೇಗೆ ಬಳಸುತ್ತೆ ನೋಡೋಣ .
ಖೈರಾಳ ಜೀವನದಲ್ಲಿ ಮೂರು ವ್ಯಕ್ತಿಗಳು ಬಹುಮುಖ್ಯರಾಗಿದ್ದರು . ಅಪ್ಪ ಅಬ್ದುಲ್ಲಾ ಆಕಿಫ್ . ಆತನೆಂದರೆ ಆಕೆಗೆ ಅತೀವ ಪ್ರೀತಿ - ಗೌರವ . ಆತ 2003ರಲ್ಲಿ ತೀರಿಕೊಂಡಿದ್ದ . ಮತ್ತೊಬ್ಬಳು ಸ್ನೇಹಿತೆ ಲೈಲಾ ತೇಜ್ . ಇನ್ನೊಬ್ಬಳು ಸಹೋದ್ಯೋಗಿ . ಆಕೆ ಖೈರಾಳಿದ್ದ ಕಚೇರಿಯಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು . ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ಖೈರಾಳನ್ನು ನೋಡಲು ಆಕೆ ಆಗಾಗ್ಗೆ ಆಗಮಿಸುತ್ತಿದ್ದಳು . ಮಾನಸಿಕವಾಗಿ ಚೇತರಿಸಿಕೊಳ್ಳಲೆಂದು ಆಫೀಸ್ ಗಾಸಿಪ್‌ಗಳನ್ನು ಹೇಳುತ್ತಿದ್ದಳು . ದಿನ ಕಳೆದಂತೆ ಸ್ವಲ್ಪ ಸ್ವಲ್ಪ ಚೇತರಿಕೆ ಕಾಣತೊಡಗಿತು . ಹಕ್ಕಿಗಳ ಚಿಲಿಪಿಲಿ ಧ್ವನಿ ಕೇಳಿಸತೊಡಗಿತು , ಹಳೆಯ ನೆನಪುಗಳು ಮತ್ತೆ ಕಣ್ಣಮುಂದೆ ಬಂದು ನಿಲ್ಲಲಾರಂಭಿಸಿದವು , ಬಾಲ್ಯದಲ್ಲಿ ಅಪ್ಪ ಹೇಳುತ್ತಿದ್ದ ಕಥೆಗಳು , ಸ್ಪ್ಯಾನಿಶ್ ಕವಿತೆಗಳು ನೆನಪಾಗತೊಡಗಿದವು , ಅವುಗಳ ಅರ್ಥ ತಿಳಿಯದಾದರೂ ಭಾಷೆಯ ಮಧುರ ಲಯ ಜೋಗುಳ ದಂತೆ ಭಾಸವಾಗತೊಡಗಿತು .
ಗುರು ವಿದ್ಯಾರಣ್ಯರು ರಾಜ್ಯ ಸ್ಥಾಪನೆಗೆ ಸುವರ್ಣನಾಣ್ಯಗಳ ಮಳೆ ಸುರಿಸಿದರೆಂಬ ಪ್ರತೀತಿ ಇದೆ . ಅದನ್ನು ದೃಶ್ಯರೂಪಕದಲ್ಲಿ ನೀರೂಪಿಸುವ ಬಗೆ ಹೀಗೆ , ಅಂಗಳವೊಂದರಲ್ಲಿ ಈ ಸನ್ನಿವೇಶ ನಿರ್ಮಿಸಿ ಕೃತಕ ಮಳೆ ಸುರಿಸಲಾಗುವುದು . ಭ್ರಾಮಕ ವಾತಾವರಣ ( ಇಲ್ಯೂಷನ್ ತಂತ್ರಜ್ಞಾನ ಬಳಸಿ ) ಸೃಷ್ಟಿಯಲ್ಲಿ ಸುವರ್ಣ ನಾಣ್ಯ ( ಕೃತಕ ಸ್ವರ್ಣಲೋಹ ) ಬಳಸಿಕೊಳ್ಳಲಾಗುವುದು . ವೀಕ್ಷಕರ ಮೇಲೆ ಕೆಲವೊಂದು ನಾಣ್ಯಗಳು ಬೀಳಲಿದ್ದು , ಅವರು ತಮ್ಮೊಂದಿಗೆ ನೆನಪಿಗೆ ಕೊಂಡೊಯ್ಯಲೂಬಹುದು . ಇದು ಪ್ರಚಾರಕ್ಕೆ ನೆರವಾಗುತ್ತದೆ ಮತ್ತು ನಾಣ್ಯ ದೊರೆಯದ ಸಂದರ್ಶಕರು ಮತ್ತೊಮ್ಮೆ ಈ ಕಾರಣಕ್ಕಾಗಿ ಬರುವ ಸಾಧ್ಯತೆಯೂ ಉಂಟು . ಇಂತಹ ಹತ್ತು ಹಲವು ಆಕರ್ಷಣೆಗಳನ್ನು ವಿಜಯನಗರಕ್ಕೆ ಸಂಬಂಧಿಸದಂತೆ ಮಾತ್ರವಲ್ಲದೆ ಭಾರತೀಯ ಪರಂಪರೆ , ಸಂಸ್ಕೃತಿ , ಜೀವನ ಸಿದ್ಧಾಂತಗಳ ನಿರೂಪಣೆಯಾಗಿ ಸೃಷ್ಟಿಸಬಹುದು .
ಕನ್ನಡದಲ್ಲಿ ಇಂಥಾ ಪದಗಳ ಹೇಗೆ ಬಳಸುತ್ತಾರೆ ಅಂತ ನೋಡೋಣ ಉದಾ : ಹೆಣ್ಣಿದ್ದ ಮನೆಗೆ ಎಡತ್ಹಾಕಿದ ಸಂನ್ಯಾಸಿ ಮಣ್ಣಾಗಿ ಹೋದ . ( = ಹೆಣ್ಣಿದ್ದ ಮನೆಗೆ ಪದೇ ಪದೇ ಹೋಗಿ ಸನ್ಯಾಸಿ ಕೆಟ್ಟ ) = ಎಡತ್ಹಾಕು = ಮೇಲಿಂದಮೇಲೆ ಹೋಗಿ . ಪದೇ ಪದೇ ಹೋಗಿ .
ನನಗೇ ನಗು ತಡ್ಯಕ್ಕೆ ಆಗ್ತಾ ಇಲ್ಲ , ಅದೇನಪ್ಪಾ ಅಂದ್ರೆ ನಮ್ಮ ಮನೆಯ ಬಳಿ ಮೂರು ಕೂಡು ರಸ್ತೆಯಿದೆ . ನೆನ್ನೆ ನಮ್ಮ ರಸ್ತೆ ಬಿಟ್ಟು ಬೇರೆ ಎರಡೂ ರಸ್ತೆಯಲ್ಲಿ ಆರ್ಕೇಸ್ಟ್ರಾ . ಒಂದು ಆರ್ಕೇಸ್ಟ್ರಾ ಕೇಳೋದೇ ದೊಡ್ಡ ಸಾಹಸವಾಗಿರುವಾಗ , ಎರಡೆರೆಡು ಕೇಳೋಕ್ಕೆ . . .
" ಇಲ್ಲಾ ಮಗಳೆ ಇವತ್ತು ಸಾಕು ನಾಳೆ ಹೇಳ್ತೀನಿ " ಅಂದ ಅಜ್ಜಿಯ ಮುಖ ಯಾಕೋ ಮಂಕಾಗಿರುವಂತೆ ಭಾಸವಾಯಿತು . ಅಜ್ಜಿ ಏನೋ ಚಿಂತೆಯಲ್ಲಿದ್ದು ಅದನ್ನು ನನ್ನಿಂದ ಮರೆಮಾಚುತ್ತಿದ್ದಂತೆ ಮನಸ್ಸಿಗೆ ಅನ್ನಿಸಿತು .
ಮೈಕಲ್ ಡಿಬೇಕ್ ಬಗ್ಗೆ ಲೇಖನ ಬರೆಯಲು ಮಾಹಿತಿಗಾಗಿ ಅವನ ಜೀವನದ ಪುಟ ಸರಿಸುತ್ತಾ ಸಾಗಿದಾಗ ಮಹದಾಶ್ಚರ್ಯವಾಗಿತ್ತು . ಏಕೆಂದರೆ ಅವನು ವೈದ್ಯನಾಗುವುದಕ್ಕೇ ಹುಟ್ಟಿದವನಿರಬೇಕು ಎನ್ನಿಸುವ ಹಾಗೆ ವೈದ್ಯನಾಗಿ ದುಡಿದವನು . ವೈದ್ಯ ವೃತ್ತಿ ಬಿಟ್ಟು ಬೇರೆ ಬದುಕೇ ಇಲ್ಲವೆಂಬಂತೆ ಬದುಕಿದವನು . ಡಿಬೇಕ್ ಗೆ ಈ ವೃತ್ತಿಯ ಬಗ್ಗೆ ಎಷ್ಟು ಪ್ರೀತಿಯೆಂದರೆ , ಆತ ತನ್ನ ವೈದ್ಯ ವೃತ್ತಿಯನ್ನೇ ಸರ್ವಸ್ವವೆಂದು ಬದುಕಿದ , ಸಾವಿರಾರು ಹೃದಯಗಳ ಜತೆ ಮಾತನಾಡಿದ , ವೈದ್ಯವಿಜ್ನಾನದಲ್ಲಿನ ಆವಿಷ್ಕಾರಗಳಿಗಾಗಿಯೇ ತನ್ನ ಸಮಯವನ್ನು ಮೀಸಲಿಟ್ಟ . ನೂರಾರು ಹೃದಯ ಶಸ್ತ್ರ ಚಿಕಿತ್ಸಕರನ್ನು ತಯಾರುಮಾಡಿದ , ಹೃದಯದ ಕಾರ್ಯವಿಧಾನವನ್ನೇ ಅಣುಕಿಸಬಲ್ಲ ಕೃತಕ ಪಂಪುಗಳನ್ನು ತಯಾರಿಸಲು ಮುಂದಾದ , ಹೃದಯ ಶಸ್ತ್ರ ಚಿಕಿತ್ಸೆಯಲ್ಲಿ ಆದ ಕ್ಷಿಪ್ರ ಪ್ರಗತಿಗೆ ಮುನ್ನುಡಿ ಬರೆದ , ತೊಂಬತ್ತೊಂಬತ್ತು ವರ್ಷಗಳ ಸಾರ್ಥಕ ಜೀವನವನ್ನು ಮುಗಿಸಿ ಜಗತ್ತಿಗೆ ವಿಧಾಯ ಹೇಳಿದ .
ಅವರಲ್ಲಿ ಧರ್ಮದ ಬಗ್ಗೆ ಚರ್ಚೆ ನಡೆಸುವ ಮಾತು ಹಾಗಿರಲಿ , ಕೆಲವು ದಾರಿ ತಪ್ಪಿದ ಧರ್ಮಾಂಧರ ನಡವಳಿಕೆಗಳನ್ನು ಪ್ರಶ್ನಿಸುವುದಕ್ಕೂ ಅಂಜಬೇಕಿತ್ತು . ಆದರೆ ಮೊನ್ನೆ ನವೆಂಬರ್ ೨೬ರಂದು ಮುಂಬಯಿಯನಲ್ಲಿ ಏನು ನಡೆಯಿತೋ ಅದು ಅತ್ಯಂತ ದುರದೃಷ್ಟಕರ ಘಟನೆಯಾಗಿದ್ದರೂ ಆ ಘಟನೆಯ ನಂತರ ನಾವೆಲ್ಲ ಖುಷಿಪಟ್ಟುಕೊಳ್ಳಬಹುದಾದ ಒಂದು ಮಹತ್ವದ " ಬದಲಾವಣೆ " ಕಂಡುಬರುತ್ತಿದೆ ! ಮುಂಬಯಿ ಮೇಲೆ ಆಕ್ರಮಣ ಮಾಡಿದ ಪಾಕಿ ಸ್ತಾನದ ೯ ಭಯೋತ್ಪಾದಕರ ಶವಗಳಿಗೆ ಅಂತ್ಯಸಂಸ್ಕಾರ ಮಾಡಲು ನಿರಾಕರಿಸಿರುವ ಮುಂಬಯಿ ಜಾಮಾ ಮಸೀದಿ ಟ್ರಸ್ಟ್ , ' ಹೆಣಗಳನ್ನು ಸಮುದ್ರಕ್ಕೆ ಬೇಕಾದರೆ ಎಸೆಯಿರಿ . ನಾವು ಅಂತ್ಯಸಂಸ್ಕಾರ ಮಾಡುವುದಿಲ್ಲ ' ಎಂದಿದೆ .
ಇದೀಗ ತಾನೆ ಮಿತ್ರ ಮಂಜುನಾಥ ( ksmanjunatha . blogspot . com ) ಮೆಸೇಜ್ ಮಾಡಿದ್ದರು . ಹೊಸ ಬ್ಲಾಗ್ ಯಾವಾಗ ಬರೆಯುತ್ತೀರಿ ? ಕೊಡವಿದರೆ ಎಲ್ಲಿ ಬಿದ್ದು ಹೋಗುತ್ತದೆಯೋ ಎನ್ನುವ ಹಾಗೆ ತಲೆಯಲ್ಲಿ ಯಾವಾಗಲೂ ಚಿಂತೆಗಳ ಸೆಮಿನಾರ್ ನಡೆಯುತ್ತಿರುತ್ತದೆ . ಈವತ್ತು ಆರಂಭವಾದ ಸೆಮಿನಾರ್ ಸೈಬರ್ ಸಂವಹನದ ಬಗ್ಗೆ . ಬೆಳಗ್ಗೆ ನಿತ್ಯಕರ್ಮವಾಗಿ ದಿನಪತ್ರಿಕೆ ಓದುವಾಗ , ಮುಂಬಯಿಯ ಐಐಟಿಯಲ್ಲಿ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್ ಸೌಲಭ್ಯವನ್ನು ನಿಯಂತ್ರಿಸಿದ ಬಗ್ಗೆ ಓದಿದ್ದೆ . ನಮ್ಮ ದೇಶದ ' ಅತಿ ಬುದ್ಧಿವಂತ ' ( ಪನ್ ಬಳಸಿದ್ದೇನೆ ) ವಿದ್ಯಾರ್ಥಿಗಳು ಹಗಲೂ ರಾತ್ರಿ ಇಂಟರ್‌ನೆಟ್‌ನಲ್ಲೇ ಈಜಾಡುತ್ತ ( ಸರ್ಫ್ ಮಾಡುತ್ತ ) ಮಾನವ ಸಂಬಂಧಗಳ ಬಗ್ಗೆ ಮರೆತೇ ಬಿಟ್ಟಿದ್ದಾರೆ ಎನ್ನುವುದು ಅವರ ಶಿಕ್ಷಕರ ದೂರು . ಹೀಗಾಗಿ ಈಗ ಕಂಪ್ಯೂಟರ್ ಬಳಕೆಗೆ ಕೆಲವು ಕಾಲ ಕರ್ಫ್ಯೂ ವಿಧಿಸಲಾಗಿದೆಯಂತೆ . ಹೌದೇ . ಯಂತ್ರ ಬಂದ ಕೂಡಲೆ ಮಾನವ ಸಂಬಂಧಗಳು ಕಳಚಿಕೊಳ್ಳುತ್ತವೆಯೇ ? ಒಂದು ವಿಧದಲ್ಲಿ ಐಐಟಿಯ ಶಿಕ್ಷಕರ ವಾದದಲ್ಲಿ ಹುರುಳಿದೆ ಎನ್ನಬೇಕು . ಎಷ್ಟಿದ್ದರೂ ಅವರು ರಾಷ್ಟ್ರದ ಅತಿ ಮೇಧಾವಿ ವಿದ್ಯಾರ್ಥಿಗಳನ್ನು ತಿದ್ದುವವರು . ಇಂಟರ್‌ನೆಟ್ ಚಟವಾಗಿ ಬೆಳೆದಿದೆ ಎಂದು ನಾನು ಈ ಬ್ಲಾಗ್‌ನಲ್ಲಿ ಬರೆಯುವುದು ವಿಪರ್ಯಾಸವಷ್ಟೆ ಅಲ್ಲ , ವಿಡಂಬನೆಯ ವಿಷಯವೂ ಹೌದು . ಆದರೆ ಇದರಿಂದ ಸಂಬಂಧಗಳು ಮುರಿದಿವೆಯೇ ? ಬೆಳೆದಿವೆಯೇ ? ಬಹುಶಃ ಇದಮಿತ್ಥಂ ಎಂದು ಹೇಳುವ ಸಂಶೋಧನೆ ಇನ್ನು ಆಗಬೇಕಷ್ಟೆ . ನನ್ನ ವಿಷಯವನ್ನೇ ತೆಗೆದುಕೊಳ್ಳಿ . ಕಂಪ್ಯೂಟರ್ ಬಳಸಲು ಆರಂಭಿಸಿ ಕೆಲವು ವರುಷಗಳಷ್ಟೆ ಆಗಿವೆ . ಈ ವಯಸ್ಸಿನಲ್ಲಿ ( ನನ್ನ ತಲೆಗೂದಲು ನರೆಯುತ್ತಿದೆ ಎಂದು ಮಡದಿಯ ದೂರು ಕೇಳಿ ಈ ಮಾತು ಹೇಳುತ್ತಿದ್ದೇನೆ . ಇಲ್ಲದಿದ್ದರೆ ನಾನೂ ಹಸಿ ಯುವಕನೇ ! : ) ) ಕಂಪ್ಯೂಟರ್ ಬಳಕೆ , ಅದರ ಸಾಮರ್ಥ್ಯ ಹಾಗೂ ಅನುಕೂಲತೆಗಳ ಸದುಪಯೋಗ ಪಡೆಯುವುದೆನ್ನುವುದು ಸುಲಭದ ಮಾತಲ್ಲ . ನಮ್ಮ ಮನೆಗೆ ಕಂಪ್ಯೂಟರ್ ಬಂದಾಗ ಇಂಟರ್‌ನೆಟ್ ಕೈಗೆಟುಕುವಷ್ಟು ಅಗ್ಗವಾಗಿರಲಿಲ್ಲ . ಆದರೂ , ಐಐಟಿಯ ಶಿಕ್ಷಕರು ಈಗ ಹೇಳುತ್ತಿರುವ ದೂರನ್ನು ಮಡದಿಯೂ ಹೇಳುತ್ತಿದ್ದಳು . ' ಕಂಪ್ಯೂಟರು ಮುಂದೆ ಕುಳಿತರೆ ನಿಮಗೆ ಹೊತ್ತು ಹೋಗುವುದೇ ಗೊತ್ತಾಗುವುದಿಲ್ಲ . ಮನೆಯಲ್ಲಿ ಬೇರೆ ಮನುಷ್ಯರೂ ಇದ್ದಾರೆ ಎನ್ನುವುದೂ ಮರೆತಂತೆ ಕಾಣುತ್ತದೆ ' ಎನ್ನುತ್ತಿದ್ದಳು . ಟೀವಿ ಹೋಯಿತು , ಕಂಪ್ಯೂಟರ್ ಬಂತು , ಡುಂ . ಡುಂ . ಡುಂ . ಎನ್ನುತ್ತಿದ್ದೆ . ಗಂಡಸರ ಬುದ್ಧಿ ಸುಲಭವಾಗಿ ತಿದ್ದಲಾಗುವುದಿಲ್ಲವಂತೆ . ಇದೂ ನನ್ನವಳ ಹೇಳಿಕೆ . ಬಹುಶಃ ನಿಜವಿರಬಹುದು . ನಾನು ಇನ್ನೂ ಕಂಪ್ಯೂಟರ್ , ಇಂಟರ್‌ನೆಟ್ ಸಹವಾಸ ಬಿಟ್ಟಿಲ್ಲ . ಮಂಜುನಾಥ್‌ರವರ ಬಗ್ಗೆ ಹೇಳಿದೆನಲ್ಲವೇ ? ಈ ಸನ್ಮಿತ್ರರನ್ನು ನಾನು ಭೇಟಿಯಾಗಿಯೇ ಇಲ್ಲ . ಆದರೆ ಹಳೆಯ ಮಿತ್ರರಂತೆ ಚಾಟ್‌ನಲ್ಲಿ ಜೋಕ್ ಮಾಡುತ್ತೇವೆ . ಬೆದರಿಸುತ್ತೇವೆ . ನಾವು ಎದಿರು ಬದಿರಾದಾಗ ಇದೇ ಸಲುಗೆಯಿಂದ ಸಂವಾದ ನಡೆಸುವೆವೇ ? ಗೊತ್ತಿಲ್ಲ . ನನ್ನ ಮತ್ತು ಮಂಜುನಾಥ್‌ರವರ ನಡುವಿನ ಸಂಬಂಧದ ಕೊಂಡಿಗಳಲ್ಲಿ , ತವರೂರು ಒಂದು ಮತ್ತೊಂದು ಈ ಕಂಪ್ಯೂಟರ್ ( ಅರ್ಥಾತ್ ಇಂಟರ್‌ನೆಟ್ ) . ಬಹುಶಃ , ಆರ್ಕುಟ್ ಇಲ್ಲದಿದ್ದಲ್ಲಿ ನನ್ನದೆ ತವರೂರಿನ ಮತ್ತೊಂದು ಪೀಳಿಗೆಯ ಸಂವೇದನಶೀಲ ವ್ಯಕ್ತಿ ಮಂಜುನಾಥ್ ಜೊತೆ ಭೇಟಿಯಾಗುತ್ತಿರಲಿಲ್ಲ . ಇಂಟರ್ನೆಟ್ ನ ಸಂಬಂಧಗಳೇ ಹೀಗೆ . ನೇರ ಸಂಬಂಧಗಳ ಹಾಗೆ ಇವುಗಳಲ್ಲಿನ ವೈರುಧ್ಯ ಅಥವಾ ನಾಟಕೀಯತೆ ಎದ್ದು ಕಾಣುವುದಿಲ್ಲ . ಬಹುಶಃ ಅದೇ ಕಾರಣಕ್ಕೇ ನಾವು ಇಂಟರ್‌ನೆಟ್ ಸಂಬಂಧಗಳಿಗೆ ಹೆಚ್ಚು ಮಹತ್ವ ಕೊಡುತ್ತೇವೇನೋ ಎನ್ನಿಸಿಬಿಟ್ಟಿದೆ . ಉದಾಹರಣೆಗೆ , ನನ್ನ ಮಗಳ ಜೊತೆಗೆ ನಾನು ನಡೆಸುವ ಚಾಟ್ . ಚಾಟ್‌ನಲ್ಲಿ ಹಾಸ್ಯ , ಕೋಪ , ಇವೆಲ್ಲ ಇರುತ್ತದೆ . ಮುಕ್ತವಾಗಿ ವಿವಿಧ ವಿಚಾರಗಳ ಬಗ್ಗೆ ಮಾತನಾಡುತ್ತೇವೆ . ಆದರೆ ಇದೇ ಸಲುಗೆ ಬಹುಶಃ ನಾವು ಎದುರಾದಾಗ ಇರುವುದಿಲ್ಲವೇನೋ ? ಕೆಲವು ವಿಷಯಗಳನ್ನು ಮಗಳು ಎನ್ನುವ ಕಾರಣಕ್ಕಾಗಿಯೇ ಮುಚ್ಚಿಡಬೇಕಾಗುತ್ತದೆ . ಆಕೆಯೂ ತಂದೆ ಎನ್ನುವ ಗೌರವದಿಂದ ಬಹುಶಃ ನೇರವಾಗಿ ಹೇಳುವುದಿಲ್ಲ . ವ್ಯಕ್ತಿ ಎದುರಿಗಿದ್ದಾರಲ್ಲಾ ? ಚಾಟ್‌ನಲ್ಲಿಯಾದರೆ ಅದೊಂದು ಯಂತ್ರ . ಏನು ಹೇಳಿದರೂ ನಡೆಯುತ್ತದೆ . ಅದು ಮುಖ ಸಿಂಡರಿಸುವುದಿಲ್ಲ . ಸ್ವರ ಬದಲಿಸುವುದಿಲ್ಲ . ಸಂಭಾಷಣೆಯ ಜೊತೆಗೆ ತಳುಕಿಸುವ ಸ್ಮೈಲಿಗಳೂ ಆಷಾಢಭೂತಿಗಳೇ . ಕಪಟ ಚಿಹ್ನೆಗಳೇ ಎನ್ನಿಸುತ್ತದೆ . ಐಐಟಿಯ ಪ್ರಭೃತಿಗಳು ಕಂಪ್ಯೂಟರ್ ಮುಂದೆ ಕುಳಿತು ಇಡೀ ಜಗತ್ತನ್ನು , ಅದರಲ್ಲಿನ ಸಂಸ್ಕೃತಿ , ಮಾನವತೆ , ಕಲೆ , ಸಾಹಿತ್ಯ ಎಲ್ಲವನ್ನೂ ಮರೆತಿದ್ದಾರೆ ಎನ್ನುತ್ತಾರೆ ಅವರ ಶಿಕ್ಷಕರು . ಆದರೆ ಇದುವೇ ಒಂದು ಸಂಸ್ಕೃತಿ ಅಲ್ಲವೇ ? ಇಲ್ಲಿ ಮಂಜುನಾಥರ ಕವನ ಓದಲು ಸಿಗುತ್ತದೆ . ಎಲ್ಲೋ , ಯಾರೋ ಬರೆದ ಸಂಗೀತ ಕೇಳಲು ದೊರೆಯುತ್ತದೆ . ಎಲ್ಲ ಚಾಟ್‌ಗಳೂ ಸಲುಗೆಯವೇ ? ಪುಟ್ಟ ಮಗುವಾಗಿದ್ದಾಗ ನೋಡಿದ್ದ ಪಲ್ಲವಿ ಧುತ್ತೆಂದು ಆರ್ಕುಟ್‌ನಲ್ಲಿ ಅಂಕಲ್ ಎನ್ನುತ್ತಾಳೆ . ನೆನಪಿನ ಮೂಲೆಯಲ್ಲಿ ಎಲ್ಲೋ ಕೊಳೆತುಹೋಗಿದ್ದ ಯಾವುದೋ ಒಂದು ಸಂಬಂಧ ಇದ್ದಕ್ಕಿದ್ದ ಹಾಗೆ ಅಮೆರಿಕೆಯ ನ್ಯೂಯಾರ್ಕ್‌ನ ಒಂದು ವೆಬ್ ತಾಣದಲ್ಲಿ ಎದುರಾಗುತ್ತದೆ . ವಿಶ್ವ ಎಷ್ಟುಕಿರಿದು ಎನ್ನಿಸುತ್ತದೆ . ಈಗ ನೀವೇ ಹೇಳಿ . ಈ ಸೈಬರ್ ಸಮಸ್ಯೆಗೆ ಬೇರೆ ದಾರಿ ಇದೆಯೇ ?
ಇದೇ ನಮ್ಮ ದೇಶದ ದೊಡ್ಡ ಸಮಸ್ಯೆ , ಎಲ್ಲರಿಗೂ ಮಣೆಹಾಕಲು ಹೋಗುವುದು . ಮುಖ್ಯ ವಾಹಿನಿಯಲ್ಲಿ ಎಲ್ಲರೂ ಒಂದಾದರೆ ಎಂದೋ ಒಗ್ಗಟ್ಟು ಬರುತ್ತಿತ್ತು . ಎರಡೂ ಒಂದಾದೂ ರಂಗ , ಎರಡು ಒಂದಾಗದೂ ಎಂದೆಂದಿಗೂ . . ಎಂದು ದಾಸರು ಹೇಳಿದಂತೆ ಒಂದು ಇದ್ದರೆ ಮಾತ್ರ ಅದು ಒಗ್ಗಟ್ಟು ಅದ್ವೈತ . ಕನ್ನಡಿಯ ಹೋಳುಗಳನ್ನು ಯಾವುದೇ ಅಂಟು ಜೋಡಿಸಿದರೂ ಬಿಂಬ ಒಂದಾಗಿ ತೋರದು . ಒಂದರಲ್ಲೆ ಎಲ್ಲರೂ ಸೇರುವುದನ್ನು , ಒಂದನ್ನೇ ಎಲ್ಲರೂ ಒಪ್ಪುವಂತೆ ಮಾಡುವುದೇ ಏಕತೆ , ಐಕ್ಯ , ಒಗ್ಗಟ್ಟು , ಸಮಾನತೆ . ಅದು ಅರ್ಥವಾಗುವ ತನಕ " ಸೌಹಾರ್ದ " ( ಸೌಹಾರ್ದತೆ ತಪ್ಪು ಪ್ರಯೋಗ ) ಅರ್ಧಂಬರ್ಧವೇ
ರಾಜಕೀಯದಲ್ಲಿ ಶಾಶ್ವತ ಮಿತ್ರರಾಗಲೀ ಶತ್ರುಗಳಾಗಲೀ ಇರುವುದಿಲ್ಲ . ಇದು ಸಾರ್ವಕಾಲಿಕ , ಸರ್ವವ್ಯಾಪ್ತಿ ಹೊಂದಿರುವ ಜಾಗತಿಕ ಲಕ್ಷಣ . ಪ್ರಜಾತಂತ್ರ ವ್ಯವಸ್ಥೆಯಾಗಲೀ , ನಿರಂಕುಶ ಪ್ರಭುತ್ವವಾಗಲೀ , ಸವರ್ಾಧಿಕಾರಿಯಾಗಲೀ ಇದೇ ಧೋರಣೆ ಅನುಸರಿಸುವುದು ಅಧಿಕಾರ ರಾಜಕಾರಣದ ಅನಿವಾರ್ಯತೆ . ಎಷ್ಟೇ ಮೌಲ್ಯ , ಸಿದ್ಧಾಂತ ಮತ್ತು ನೈತಿಕತೆಗಳ ಪ್ರತಿಪಾದನೆ ಮಾಡಿದರೂ ಆಳುವ ಚಪಲ ಮತ್ತು ಅಧಿಕಾರ ದಾಹ ಈ ಉದಾತ್ತತೆಗಳನ್ನು ಹಿಮ್ಮೆಟ್ಟಿ ನಿಲ್ಲುತ್ತವೆ . ಭಾರತದ ರಾಜಕಾರಣದಲ್ಲಂತೂ ಇದು ದಿನನಿತ್ಯ ಕಾಣುವ ಸತ್ಯ . ಜಾಗತಿಕ ರಾಜಕಾರಣದಲ್ಲಿ ಈ ನಿಯಮವನ್ನು ಶಿಷ್ಟಾಚಾರದಿಂದ , ವ್ಯವಸ್ಥಿತವಾಗಿ ಪಾಲಿಸಿಕೊಂಡು ಬಂದಿರುವ ಏಕೈಕ ರಾಷ್ಟ್ರವೆಂದರೆ ಸಾಮ್ರಾಜ್ಯಶಾಹಿ ಸಮೂಹದ ನೇತಾರ ಅಮೆರಿಕ . ಬದಲಾವಣೆಗಳ ಹರಿಕಾರ ಎಂದು ಹೆಸರು ಪಡೆದಿದ್ದರೂ ತನ್ನ ವಿದೇಶಾಂಗ ನೀತಿಯಲ್ಲಿ ಮತ್ತು ಸಾಮ್ರಾಜ್ಯಶಾಹಿ ವಿಸ್ತರಣಾ ಧೋರಣೆಯಲ್ಲಿ ಎಂದೂ ಬದಲಾಗದ ದೇಶ ಅಮೆರಿಕ .
ಇದೇ ಹೊತ್ತಿನಲ್ಲಿ ಬಂಟ್ವಾಳದ ರಮ್ಯಾ ಶೆಟ್ಟಿ - ಮಹಮ್ಮದ್ ಪ್ರೇಮ ಪ್ರಕರಣದಲ್ಲಿ ಮುಸ್ಲಿಂ ಹುಡುಗನನ್ನು ವಿವಾಹವಾಗಿದ್ದ ಯುವತಿಯು ಹೈಕೋರ್ಟಿನಲ್ಲಿ ಸ್ವಇಚ್ಛೆಯಿಂದಲೇ ಮದುವೆಯಾಗಿರುವುದಾಗಿ ಹೇಳಿಕೆ ನೀಡಿರುವುದು ಬಜರಂಗಿಗಳಿಗೆ ಕಪಾಳಮೋಕ್ಷ ಮಾಡಿದೆ .
ಕೃಷಿಕನಾಗುವೆ ನಗರದ ದಟ್ಟಣೆಯಿಂದ ಹೊರಹೋಗಲು ಪ್ರಕೃತಿಯ ರಮ್ಯತೆಯ ಸವಿಯಲು ಹೋಗಿ ಸೇರಿದೆ ಮಲೆನಾಡ ಮಡಿಲಿಗೆ , ಗುಡ್ಡಗಳ ನಡುವೆ ಒಂಟಿ ತೋಟದ ಮನೆ , ಮನೆಯೇ ಹಿಂದೆಯೇ ನಲಿಯುತ್ತಿತ್ತು ಹಸಿರು ತೆನೆ ವರುಷಗಳ ನಂತರ ಸಿಕ್ಕ ಅವಕಾಶಕೆ ನಾ ನಡೆದೆ ತೋಟದ ಒಳಗೆ , ಹಿಂದೆಯೇ ಇದ್ದ ಹಸಿರು ಗದ್ದೆಯು ಮೈದುಂಬಿ ನಿಂತಿತ್ತು , ತನ್ನ ಬಳಿ ಇದ್ದ ಜಲ ಸಂಪತ್ತ ತೋರುತ , ತನ್ನ ಶ್ರೀಮಂತಿಕೆಯ ಜೊತೆ ಬೀಗುತ ಹಾಗೆಯೇ ಕಾಲ ಸವೆಸುತ ಸ್ವಲ್ಪ ಮುನ್ನಡೆದರೆ ಕಂಡಿತೆನಗೆ ಘಮ ಘಮಿಸುವ ಏಲಕ್ಕಿಯ ಗಿಡಗಳು ಸುತ್ತಲೂ ಇದ್ದ ಎತ್ತರದ ಅಡಕೆಯ ಮರಗಳ ಮಧ್ಯೆ ತಾನು ಕಾಣದೆ ಮೆಣಸಿನ ಹಿಂದೆ ಬಚ್ಚಿಟ್ಟು ಕೊಂಡಿತ್ತು ತೋಟದ ಪಕ್ಕದಲ್ಲೇ ಇದ್ದ ಕೊಡಗಿನ ಕಿತ್ತಳೆ ಹಣ್ಣು ನನ್ನ ಕೃಷಿಯ ತಿಳುವಳಿಕೆಗೆ ಪುಟ್ಟ ಸವಾಲಾಯಿತು ಪಕ್ಕದಲ್ಲೇ ಗುಡ್ಡದ ಮೇಲೆ ಇದ್ದ ಕಾಫಿ ಬೆಳೆ , ಒಂದೇ ಕಡೆ ಕಂಡ ವೈವಿಧ್ಯ ಬೆಳೆ ನನ್ನನ್ನು ಬೆರಗುಗೊಳಿಸಿತು ಸುಂದರ ಪ್ರಕೃತಿಯ ನಡುವೆ ಕಂಡ ಹತ್ತು ಹಲವು ಬಗೆಯ ಕೃಷಿ ತಂದುಕೊಟ್ಟಿತು ಎಲ್ಲರಿಗೂ ಉತ್ಸಾಹ ನಾವೂ ಮುಂದೆ ನಗರವ ತೊರೆದು , ಪ್ರಕೃತಿ ಸಹಜ ಕೃಷಿಯಲಿ ತೊಡಗಿ ವ್ಯವಸಾಯ ಮಾಡುವ ಪ್ರೋತ್ಸಾಹ - ತೇಜಸ್ವಿ . ಎ . ಸಿ
ರಾಮಾಯಣದ ಭರತನ ಬಗ್ಗೆ ಯೋಚಿಸೋಣ . ಎಂಥ ಮಹಾತ್ಮ ಅವನು ! ಅಣ್ಣ ಬಿಟ್ಟುಕೊಟ್ಟರೂ ಗದ್ದುಗೆ ತನಗೆ ಬೇಡ ಅನ್ನುವವನು ಅವನು . ಗದ್ದುಗೆಯಮೇಲೆ ಅಣ್ಣನ ಪಾದುಕೆಗಳನ್ನು ಇಟ್ಟು ಪೂಜಿಸಿದವನು . ಇದು ಆದಿಪುರಾಣದ ಬಾಹುಬಲಿಯ ನಿಲುವಿಗಿಂತ ಭಿನ್ನವಾದುದು ! ನನಗೆ ಗದ್ದುಗೆ ಬೇಡ , ಪ್ರಜಾಪರಿಪಾಲನೆಗೆ ಗದ್ದುಗೆಯ ಅಗತ್ಯವಿಲ್ಲ ಎನ್ನುತ್ತಾನೆ ಭರತ ! ತನ್ನ ತಾಯಿ ಸಿಂಹಾಸನ ತನಗೆ ದೊರಕಿಸಲು ಮಾಡಿದ ಎಲ್ಲ ಯತ್ನಗಳಿಗೂ ಭರತನೇ ಪ್ರಥಮ ವಿರೋಧಿ ! ಆಧುನಿಕ ಭಾರತದಲ್ಲಿ ಅಪರೂಪ ಅಲ್ಲವೇ ಇಂಥ ದೃಶ್ಯ ? ತಾಯಿ ತಂದೆ ಮಕ್ಕಳಿಗೆ ಅಧಿಕಾರದ ಹಸ್ತಾಂತರವನ್ನು ಮಾಡಲಿಕ್ಕೆ ಎಂತೆಂಥಾ ರಾಜಕೀಯ ಚದುರಂಗದಾಟದಲ್ಲಿ ತೊಡಗುವುದಿಲ್ಲ ಈವತ್ತು ? ಅಧಿಕಾರವನ್ನು ಧಿಕ್ಕರಿಸಿ ಹೊರಡುವ ರಾಮ , ಗದ್ದುಗೆ ಕೈನಿಲುಕಿನಲ್ಲಿದ್ದರೂ ಅದರ ಕಡೆ ಕಡೆಗಣ್ಣೂ ಹಾಯಿಸದ ಭರತ ಬಹಳ ದೊಡ್ಡ ಮೌಲ್ಯಗಳನ್ನು ಪ್ರತಿನಿಧಿಸುವಂತಿದ್ದಾರೆ !
೨೦೦೨ ರ ಇಸವಿಯಲ್ಲಿ " ಹಿಂದು " ಎಂಬ ಉಪೇಂದ್ರ ನಟನೆಯ ಕನ್ನಡ ಚಿತ್ರ ಮೂಡುವುದೆಂದು ಅದರ ಮುಹೂರ್ತಕ್ಕೆ ಬಾಳಾ ಠಾಕ್ರೆ ಬರುವರೆಂದು ಸುದ್ದಿ ಇತ್ತು . ಶ್ರೀರಾಮ ಬಿಲ್ಲನ್ನು ಹಿಡಿದು ನಿಂತಂತಿರುವ ಇದರ ಜಾಹೀರಾತುಗಳು ಹಲವು ಪತ್ರಿಕೆಗಳಲ್ಲಿ ನೋಡಿದ ನೆನಪು . ಆದರೆ ಅದು ಬೆಳಕು ಕಾಣಲಿಲ್ಲ . ಇತ್ತೀಚೆಗೆ ರಾಮ ಸೇತು ಒಡೆದು ಹೊಸ ಸೇತುವೆ ನಿರ್ಮಾಣ ಮಾಡಲು ಸರಕಾರಗಳ ಹೊರಟಿವೆ . ಹೊಸ ಸೇತುವೆ ನಿರ್ಮಾಣವಾಗಿ ಅದು ಸದಾ ಅವಘಡಕ್ಕೊಳಗಾಗಿ ಅದು ಕೊನೆಗೆ ಮುಚ್ಚಲ್ಪಡುವ ಒಂದು ಕಾಲ್ಪನಿಕ ಚಿತ್ರ ಮೂಡಿಬಂದರೆ ಈ ಸಮಯಕ್ಕೆ ಹೆಚ್ಚು ಪ್ರಶಸ್ತವೆನಿಸಬಹುದೇನೋ ?
ಜಿ . ಪಂ . ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಸ್ಪಷ್ಟನೆ ನೀಡಲು ನಿರಾಕರಿಸಿ , ಇದನ್ನು ಚರ್ಚಿಸಲು ರಾಜಕೀಯ ವೇದಿಕೆ ಮಾದ್ಯಮಗಳು ಹಾಗೂ ಚುನಾವಣಾ ಆಯೋಗ ಇದೆ ಎಂದು ತಿಳಿಸಿ ವಿಷಯಕ್ಕೆ ತೆರೆ ಎಳೆದರು .
ಮೊರನೇ ದಿನ ಸ್ವಲ್ಪ ಸಿನುಕು ಹಾಕಿತ್ತಿದ್ದರಿ೦ದ ದೃಶ್ಯಕಲಾವಿದರು ಹರ್ಮಿಟಾಜ್ ಮೈದಾನದಿ೦ದ ' ಸಿ೦ಕ್ ' ಆಗಿ , ಮಾಯವಾಗಿದ್ದರು .
ಆಗ ಬೆಂ . ಮಿತ್ರರು " ಅಲ್ಲೆಲ್ಲಾ ನಿಮ್ಮ ಮದುವೆ ಯಾವಾಗ ? ನಮಗೆ ಊಟ ಯಾವಾಗ ಹಾಕುತ್ತೀರಿ / ಹಾಕಿಸುತ್ತೀರಿ ? ' ' ಎಂದೇ ಕೇಳುತ್ತಾರೆ . ಹಾಗಾದರೆ ಅವರುಗಳೆಲ್ಲಾ ಅವರವರನ್ನು ನಾಯಿಗಳು ಎಂದು ಭಾವಿಸಿಕೊಂಡೇ ಹಾಗೆ ಕೇಳುತ್ತಾರೇನು ? ನೀವು ಹೇಳುತ್ತಿರುವುದು ನೋಡಿದರೆ ಹಾಗೇ ಇದೆಯಲ್ಲಾ ? ಅಷ್ಟೇ ಏಕೆ ನಾನು ನನ್ನ ತಾಯಿಯ ಬಳಿ " ಅಮ್ಮಾ , ನನಗೆ ಊಟ ಹಾಕು " ಎಂದೇ ಹೇಳುವುದು . ಹಾಗಿರುವಾಗ ನೀವು ಸುಮ್ಮ ಸುಮ್ಮನೆ ಹೇಗೆ ಹೇಗೋ ಏನೇನೋ ಅರ್ಥ ಮಾಡಿಕೊಂಡಿದ್ದೀರಿ . ಅಷ್ಟೊಂದು ಸಂಶಯ ನಿಮಗಿದ್ದರೆ ಬೆಂಗಳೂರಿಗೆ ಬಂದು ಯಾರನ್ನು ಬೇಕಾದರೂ ಕೇಳಿ ನೋಡಿ " ಎಂದರು ತುಸು ಗಂಭೀರವಾಗಿ . ಅದಕ್ಕೆ ಮೇಸ್ತ್ರಿಯ ಕಡೆಯವರು " ಹೌದೌದು . ಆ ಒಂದು ಶಬ್ದದ ಅರ್ಥವನ್ನು ತಿಳಿದುಕೊಳ್ಳಲು ನಾವೆಲ್ಲಾ ನಮ್ಮ ಕೆಲಸ ಕಾರ್ಯಗಳನ್ನೆಲ್ಲಾ ಬಿಟ್ಟು ೮ - ೧೦ ಘಂಟೆಗಳ ಕಾಲ ಪ್ರ್‍ಅಯಾಣಿಸಿ ದಣಿಯುವುದೂ ಅಲ್ಲದೆ ನೂರಾರು ರೂಪಾಯಿಗಳನ್ನು ಪ್ರಯಾಣಕ್ಕೆ ಬೇರೆ ದಂಡ ಮಾಡುತ್ತೇವೆ . ( ಮಾಡಲಾಗುವುದಿಲ್ಲ ಎಂಬರ್ಥದಲ್ಲಿ ) " ಊಟವನ್ನು ಬಡಿಸುತ್ತೇವೆ " ಎಂದು ನೀವೇ ತಿದ್ದಿಕೊಂಡು ಹೇಳಿಬಿಡಿ " ಎನ್ನಬೇಕೆ ? ! ! ! ! ! . . . . . . . .
ಇದಕ್ಕೂ ಮೊದಲು ಗುತ್ತಿಗೆಗೆ ಪಡೆದಿದ್ದ ಹೊಲಕ್ಕೆ ನೀರು ಹಾಯಿಸಿಕೊಳ್ಳುವುದೇ ಅಪ್ಪ - ಮಗನಿಗೆ ಒಂದು ಸವಾಲಾಗಿತ್ತು . ವಿತರಣಾ ಕಾಲುವೆಯಿಂದ ನೀರು ಪಡೆಯೋಣವೆಂದರೆ ಅವರ ಹೊಲವಿದ್ದುದು ಎಲ್ಲರ ಜಮೀನಿನ ನೆತ್ತಿಯ ಮೇಲಕ್ಕೆ . ಕೆಳಗಿನವರು ಬಳಸಿ ನೀರು ಮಿಗುವುದೂ ಇಲ್ಲ , ಮಿಕ್ಕರೂ ಅಲ್ಲಿಯವರೆಗೆ ಹತ್ತುವುದಿಲ್ಲ . ಮೋಟಾರು ಜೋಡಿಸಿಕೊಂಡು ತರೋಣವೆಂದರೆ ವೆಚ್ಚ ಭರಿಸುವ ಶಕ್ತಿಯಿಲ್ಲ . ಜತೆಗೆ ವಿದ್ಯುತ್‌ಅನ್ನು ನಂಬಿಕೊಳ್ಳುವಂತಿಲ್ಲ . ಹಾಗೆಂದು ಸುಮ್ಮನೆ ಕೂರುವ ಜಾಯಮಾನಕ್ಕೆ ಬಿದ್ದವರಲ್ಲ ಹುಸೇನ್‌ಸಾಬ್ . ಸರಕಾರಿ ನೌಕರಿಯಿಂದ ನಿವೃತ್ತರಾದ ಬಳಿಕವೂ ಏನಾದರೊಂದು ಮಾಡುತ್ತಲೇ ಇರಬೇಕೆಂಬ ಪುಟಿಯುವ ಯುವ ಮನಸ್ಸದು . ಅದಕ್ಕಾಗಿ ಕೃಷಿಯನ್ನು ಆಯ್ಕೆ ಮಾಡಿಕೊಂಡರು . ಈ ವಯಸ್ಸಲ್ಲಿ ಎಂಥಾ ದುಡಿಮೆ ಎನ್ನುವ ಆಲಸ್ಯ ಅವರ ಬಳಿ ಸುಳಿಯಲಿಲ್ಲ . ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ಅವರಿಗೆ ನಿವೃತ್ತಿಯ ಬಳಿಕವೂ ಸ್ವಂತ ಜಮೀನು ಖರೀದಿಸುವಷ್ಟು ಸಾಮರ್ಥ್ಯ ಇರಲಿಲ್ಲ . ಯಾರಿಗೂ ಬೇಡವಾದ , ಗುಡ್ಡದಂಚಿನ ಬಂಜರು ಭೂಮಿಯನ್ನೇ ಆಯ್ಕೆ ಮಾಡಿಕೊಂಡರು . ವಿಶೇಷವೆಂದರೆ ಅದು ಒಂದು ಕಾಲದಲ್ಲಿ ' ಬಂಗಾರದ ತೇರು ಬೀದಿ ' ಯಾಗಿ ಇತಿಹಾಸ ಪ್ರಸಿದ್ಧವಾಗಿದ್ದ ಜಾಗ . ಅಲ್ಲಿ ಹೊಸ ಪ್ರಯೋಗಗಳ ಮೂಲಕ ಬಂಗಾರದ ಬೆಳೆ ತೆಗೆಯಲು ಹೊರಟಿದ್ದರು ಹುಸೇನ್ ಸಾಬ್ . ೩ . ೩ ಎಕರೆ ಭೂಮಿಯ ಬೆನ್ನಿಗೇ ಬೃಹದಾಕಾರದ ಬಂಡೆಗಳ ರಾಶಿಯಿದ್ದ ಗುಡ್ಡವಿತ್ತು . ಅಲ್ಲಿ ಬೀಳುವ ಮಳೆ ನೀರು ಇಂಗಿ , ಎಲ್ಲಾದರೊಂದು ಕಡೆ ಬಸಿದು ಬರಲೇಬೇಕೆಂಬುದನ್ನು ಮೊದಲ ನೋಟದಲ್ಲೇ ಗ್ರಹಿಸಿದರು ಹುಸೇನ್‌ಜಿ . ತುಸು ಹುಡುಕಾಟ ನಡೆಸುವಷ್ಟರಲ್ಲಿ ಅವರ ಊಹೆ ಹುಸಿಯಲ್ಲವೆಂಬದು ಖಚಿತವಾಯಿತು . ಅವರು ಆಯ್ದುಕೊಂಡಿದ್ದ ಜಮೀನಿನ ನೇರಕ್ಕೇ ಬೆಟ್ಟದ ನಟ್ಟನಡುವೆ ಊಟೆಯೊಂದು ಉಕ್ಕುತ್ತಿತ್ತು . ಅಲ್ಲಿಂದ ನೇರಕ್ಕೆ ಬಂಡೆಗಳ ನಡುವೆಯೇ ನೀರು ಬಸಿದು ಬರುತ್ತಿತ್ತು . ಊಟೆಯಿದ್ದ ಪ್ರದೇಶ , ಅಲ್ಲಿದ್ದ ಇಳಿಜಾರು ಗಮನಿಸಿದ ಹುಸೇನ್ ಸಾಬ್‌ರಿಗೆ ಮೊದಲ ನೋಟದಲ್ಲೇ ಆ ನೀರಿನ ಹರಿವಿಗೆ ಇರಬಹುದಾಗಿದ್ದ ಸಾಮರ್ಥ್ಯ ಅರಿವಿಗೆ ದಕ್ಕಿತ್ತು . ಯಾವ ಯಂತ್ರಗಳ ಸಹಾಯವಿಲ್ಲದೇ ಹೊಲಕ್ಕೆ ನೀರು ಚಿಮ್ಮಿಸಬಹುದೆಂದು ಲೆಕ್ಕ ಹಾಕಿದ್ದೇ ಆಯಕಟ್ಟಿನ ತಾಣವೊಂದರಲ್ಲಿ ಮರಳು ಚೀಲಗಳನ್ನು ಹಾಕಿ ಒಡ್ಡು ನಿರ್ಮಿಸಿದರು . ಅದರ ಬಾಯಿಗೆ ಪೈಪು ಜೋಡಿಸಿಕೊಂಡು ಬಂದು ತುಂತುರು ನೀರಾವರಿಯ ಉಪಕರಣಗಳನ್ನು ಜೋಡಿಸಿದರು . ಅವರ ಸಾಹಸ ಫಲ ನೀಡಿತ್ತು . ಎಲ್ಲವೂ ಒಂದು ಹಂತಕ್ಕೆ ಬಂದು ನಿಂತಾಗ ಒಂದಲ್ಲ ಎರಡಲ್ಲ . . . ಬರೋಬ್ಬರಿ ಒಂಬತ್ತು ಕಡೆಗಳಲ್ಲಿ ನೀರು ಸಿಂಚನಗೈಯ್ಯತೊಡಗಿತ್ತು .
ಗೋಪಾಲ್ , ಅದಿನ್ನೆ೦ಥಾ ಹೊಟ್ಟೆ ನಿಮ್ದು ! ನಕ್ಕು ನಕ್ಕು ನನ್ನ ಹೊಟ್ಟೆಯಲ್ಲಿ ಏನೇನೋ ಸವು೦ಡ್ ಬರ್ತಾ ಇದೆ ! ! : ) : ) : )
ಪರಿಷತ್ತಿನ ಅಧ್ಯಕ್ಷ ಪದವಿಗೆ ಚುನಾವಣೆಗೆ ನಿಲ್ಲುವವರು ಇನ್ನು ಮುಂದೆ ರಾಜಕೀಯ ಚುನಾವಣೆಗೆ ಖರ್ಚು ಮಾಡುವಂತೆ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ . ಸಾಹಿತ್ಯದ ಕ್ಷೇತ್ರದಲ್ಲಿ ಇಂಥವರಾರೂ ಇಲ್ಲವೆಂದು ನನ್ನ ಭಾವನೆ . ಆದ್ದರಿಂದ ಇಂಗ್ಲಿಷಿನಲ್ಲಿ Electoral collegeಎಂದು ಕರೆಯುವ ಪದ್ಧತಿ ಇದೆ . ಸಂಸ್ಥೆಗಳಿಗೆ ಈ ಬಗೆಯ ಏರ್ಪಾಟು ಮಾದರಿ . ಅದರ ಪ್ರಕಾರ ಎಲ್ಲ ಸದಸ್ಯರು ಎಷ್ಟೇ ಜನರಿರಲಿ ಚುನಾವಣೆಗೆ ನಿಲ್ಲುವ ಮತ್ತು ಮತವನ್ನು ಚಲಾಯಿಸುವ ಒಂದು ಸದಸ್ಯ ವರ್ಗವನ್ನು ರೂಪಿಸಿಕೊಳ್ಳುತ್ತಾರೆ . ಹಾಗೆ ನಮ್ಮಲ್ಲಿ ಸಾಹಿತಿಗಳಾಗಿರುವ ಸದಸ್ಯರನ್ನೆಲ್ಲ ಕೂಡಿಸಿ ಒಂದು ಮತ ಚಲಾಯಿಸುವ ವರ್ಗವನ್ನು ನಿರ್ಮಿಸುವುದು ಸಾಧ್ಯವೇ ಎಂದು ಪರಿಶೀಲನೆ ಮಾಡಬೇಕೆಂದು ಸೂಚಿಸುತ್ತೇನೆ . ಹೀಗೆ ಮಾಡಿದರೆ ಪರಿಷತ್ತಿನ ಸಾಹಿತ್ಯ ಕಾರ್ಯಕ್ಕೆ ಬೆಂಬಲ ಹೆಚ್ಚುತ್ತದೆ . ಈಗಿನಂತೆ ಅಧ್ಯಕ್ಷತೆಗೆ ಅರ್ಹರನ್ನು ಆರಿಸಬಹುದು . ಇಲ್ಲದಿದ್ದರೆ ಮುಂದೆ ಪರಿಷತ್ತು ರಾಜಕೀಯ ಸಂಸ್ಥೆಯಾಗಿಬಿಡುತ್ತದೆ . ಸಾಹಿತ್ಯಕ್ಕೆ ಇದು ಅಪಾಯ .
ನೀವ್ ಕುಂದಾಪ್ರದ ಜೆನ ಎಂಥಕ್ಕೆ ಮಕ್ಳ ಮರಿಗೆ ನಿಂ ಕುಂದಗನ್ನಡ ಕಲಸೂದಿಲ್ಲ ?
" ಜೀವನ ಪೂರ್ತಿ ನಿನ್ನ ಜೊತೆ ಇರೋಕೆ ಇಷ್ಟ ಪಡ್ತೀನಿ ಕಣೋ " ಅನ್ನೋ ಮಾತಿಗೆ ಅರ್ಥವೇ ಇಲ್ಲದಂತಾಗಿದೆ . ನಾನ್ಯಾಕೆ ನಿನ್ನ ಹತ್ರ ಮಾತಾಡ್ಬೇಕು ? ಅನ್ನೋ ತನಕ ನನ್ನ ಮನಸು ಬದಲಾಗಿದೆ . ನನಗೂ ನನ್ನದೇ ಆದ ಸ್ವಾಭಿಮಾನ ಇದೆ . ಯಾವತ್ತೂ ಅದನ್ನ ನಿನ್ನ ಮುಂದೆ ತೋರಿಸಿಕೊಳ್ಳದೆ ಹೋದರೂ ಇಂದೇಕೋ ನನ್ನ ಮನಸ್ಸು ಕಲ್ಲಾಗಿ ಹೋಗಿದೆ . ಇದಕ್ಕೆಲ್ಲಾ ಕಾರಣ ಯಾರು ಅನ್ನೋ ತರ್ಕವನ್ನೂ ಮಾಡದೆ , ಏನೂ ತೋಚದೆ ನಾನು ಸುಮ್ಮನಾಗಿಬಿಟ್ಟಿದ್ದೀನಿ ಕಣೋ . ನೀನಾಗಿ ಬಂದು ಮಾತನಾಡಿಸಿದರೂ ( ಅದು ಅಸಾಧ್ಯ ) ಮನಸುತುಂಬಿ ನಿನ್ನ ಹತ್ತಿರ ಮಾತನಾಡಬಲ್ಲೆ ಅಂತ ಹೇಳೋಕೆ ಸಾಧ್ಯವಿಲ್ಲ .
yogish bhat ಖಂಡಿತ ಮುಂದಿನ ಬೇಗ ಬರುತ್ತದೆ ಕಾಯಿಸಿದ್ದಕ್ಕೆ ಕ್ಷಮಾ ಇರಲಿ ಹೀಗೆಯೇ ಬರುತ್ತಿರಿ
ನನ್ನ ಫೋಟೊ ಡೆವೆಲಪ್ ಮಾಡುವಾಗಲೇ ಟೇಲರ್ ಬರ್ಡ್ ನ ಗೂಡಿನ ಒಂದೆರಡು ಫೋಟೊಗಳನ್ನು ಮಾಮ ಡೆವೆಲಪ್ ಮಾಡುತ್ತಿದ್ದುದನ್ನು ನೋಡಿ ನಾನು ' ಮಾಮ ಇದು ಎಲ್ಲೀ ಫೋಟೊ ? ' ಎಂದೆ . ಮಾಮ ಆ ಸಂದರ್ಭದಲ್ಲಿ ಟೇಲರ್ ಬರ್ಡ್ ನ ಚಿತ್ರ ತೆಗೆಯುವ ಸಲುವಾಗಿ ಒಂದು ಹೈಡ್ ಔಟನ್ನು ತಯಾರಿಮಾಡಕೊಂಡು ಫೋಟೊ ತೆಗೆಯಲು ಪ್ರಾರಂಭಿಸಿಕೊಂಡಿದ್ದ ಸುದ್ದಿ ಹೇಳಿದರು . ಅವರು ಹೇಳಿದ ಈ ' ಹೈಡ್ ಔಟ್ ' ಸುದ್ದಿ ಏನೆಂದು ತಿಳಿಯದಿದ್ದರೂ ಬಹಳ ಕುತೂಹಲಕಾರಿಯಾಗಿತ್ತು . ಆದರೂ ಯಾರನ್ನೇ ಆಗಲಿ ' ನಾನೂ ಮಾಡಲಾ ' ' ನಾನೂ ಬರ್ಲಾ ' ಎಂದು ಕೇಳಿ ಗೊತ್ತೇ ಇರದ ನಾನು ಮಾಮ ಹೇಳಿದ್ದನ್ನು ಸುಮ್ಮನೆ ಕೇಳಿಸಿಕೊಂಡೆ . ಅನಂತರ ಮಾಮನೆ ' ನಾಳೆ ಬೆಳಗ್ಗೆ ನಾನು ಆ ಜಾಗಕ್ಕೆ ಹೋಗುವಾಗ ನಿನ್ನನ್ನು ಕರಕೊಂಡು ಹೋಗ್ತೀನಿ , ಆದರೆ ಈ ವಿಷಯ ಸುಸ್ಮ , ಈಶಂಗೆ ಹೇಳ್ಬೇಡ ' ಎಂದರು . ನನಗೆ ಇದೇನೊ ದೊಡ್ಡ ' ಸೀಕ್ರೆಟ್ ಮಿಷನ್ ' ತರಹ ಅನ್ನಿಸಿತು . ಮಾರನೇ ದಿನ ಬೆಳಗ್ಗೆ ಮಾಮನ ಜೊತೆ ಸುಸ್ಮ , ಈಶ ಏಳುವ ಮೊದಲೇ ಆ ಜಾಗಕ್ಕೆ ಹೋಗಿ ನೋಡ್ತೀನಿ , ಒಂದು ತಾಳೆ ಚಾಪೆಯನ್ನು ಗೋಲಕ್ಕೆ ಸಿಲಿಂಡರಿನಾಕಾರದಲ್ಲಿ ನಿಲ್ಲಿಸಿತ್ತು . ಅದರೊಳಗೆ ಒಬ್ಬರೇ ನುಸುಳಬಹುದಿತ್ತು . ಮೆಲ್ಲಗೆ ಶಬ್ದ ಮಾಡದೇ ಮಾಮ ನುಸುಳಿದರು . ಅವೆ ಹಿಂದೆ ನಾನು ಮುದುರಿಕೊಂಡು ನಿಂತೆ . ಆ ಚಾಪೆಯ ಮಧ್ಯೆ ಕ್ಯಾಮೆರಾಲೆನ್ಸ್ ಹೋಗುವಷ್ಟು ಜಾಗವನ್ನು ಚೌಕಾಕಾರವಾಗಿ ಕತ್ತರಿಸಲಾಗಿತ್ತು . ಕ್ಯಾಮೆರಾವನ್ನು ಆ ಚೌಕದಲ್ಲಿ ತೂರಿಸಿ ಮಾಮ ಸ್ವಲ್ಪ ಹೊತ್ತು ಮಾತುಕತೆ ಇಲ್ಲದೆ ಲೆನ್ಸಿನ ಮೂಲಕ ನೋಡಿದರು . ನನಗೋ ಜೋರಾಗಿ ಉಸಿರಾಡಲೂ ಭಯ . ಸುಸ್ಮ ಈಶರನ್ನು ಇಲ್ಲಿಗೆ ಏಕೆ ಕರೆದುಕೊಂಡು ಬರಲಿಲ್ಲ ಎಂಬುದು ಈಗ ಅರ್ಥವಾಯಿತು .
ಹಾಗೆ ನೋಡಿದ್ರೆ ಎಲ್ಲಾ ಸಂಬಂಧಗಳೂ ತುಂಬಾ ಕ್ಲಿಷ್ಟಕರ . Handle with care ಅಂತ ಎಲ್ಲಾ ಸಂಬಂಧಗಳೂ ಟ್ಯಾಗ್ ಹಾಕಿಕೊಂಡೇ ಇರುತ್ತವೆ , ನಾವು ಸರಿಯಾಗಿ ಗಮನಿಸಿರುದಿಲ್ಲ ಅಷ್ಟೆ !
ಯಾತ್ರೆಯ ಪಶ್ಚಿಮ ಮತ್ತು ಮಧ್ಯ ಭಾರತದ ಸಂಯೋಜಕರಾದ ಶ್ರೀ ರಾಮಚಂದ್ರ ಸಹಸ್ರಭೋಜನಿ ವಿಸ್ತಾರವಾಗಿ ಯಾತ್ರೆಯ ಬಗ್ಗೆ ಹಾಗೂ ನಮ್ಮ ಸಂಸ್ಕೃತಿಯ ಬಗ್ಗೆ ವಿವರಿಸಿದರು .
ಗುರು , ನಿನ್ನೆ ಟಿ , ವಿಯಲ್ಲಿ ಕಾರ್ಯಕ್ರಮ ನೋಡ್ತಾ ಇದ್ದೆ . ನಮ್ಮ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರ ಹತ್ಯೆಗೈದ LTTE ಪ್ರಭಾಕರನ್ ಅವರ ಪೋಟೊ ಹಿದಿದುಕೊಂಡು , ಅವರಿಗೆ ಜೈ ಕಾರ ಹಾಕುತ್ತಿದ್ದ ಸಾಕಷ್ಟು ತಮಿಳರನ್ನು ನೋಡಿದೆ . ಇದಕ್ಕಿಂತ ನಾಚಿಕೆಗೇಡಿನ ವಿಷಯ ಇದೆಯಾ ? ಸಾರ್ವಭೌಮ ದೇಶದ ಹಿರಿಯ ನಾಯಕನನ್ನು ಬಲಿ ತೆಗೆದುಕೊಂಡ ಉಗ್ರಗಾಮಿ ಸಂಘಟನೆಯೊಂದರ ನಾಯಕನ ಫೋಟೊ ಹಿಡಿದುಕೊಂಡು ಬರೋ ವಿದ್ರೋಹಿ ಮನಸ್ಸಿನ ತಮಿಳರನ್ನು ಎರಡು ಕೈಯಿಂದ ನಮ್ಮ ಸರ್ಕಾರ ಅಪ್ಪಿಕೊಳ್ಳುತ್ತೆ , ಆದ್ರೆ ಕನ್ನಡಿಗರಿಗೆ ಸಮಾನ ಗೌರವಕ್ಕೆ ಆಗ್ರಹಿಸೋ ಕರವೇ ಕಾರ್ಯಕರ್ತರನ್ನು ದೇಶದ್ರೋಹಿಗಳು , ಭಯೋತ್ಪಾದಕರು ಅನ್ನೋ ರೀತಿಯಲ್ಲಿ ನಡೆಸಿಕೊಳ್ಳುತ್ತೆ . ನೀನು ಹೇಳಿದ್ದು ಸರಿ ಗುರು , ಹುಸಿ ರಾಷ್ಟ್ರೀಯತೆಯ ಅನ್ವಯ ದೇಶದಲ್ಲಿ ಒಗ್ಗಟ್ಟು ಬರಲು ಕನ್ನಡಿಗ ತನ್ನ ಮನೆ , ಮಾರು , ನೆಲ , ಜಲ , ಹೆಂಡ್ತಿ , ಮಕ್ಕಳು ಹೀಗೆ ಎಲ್ಲರನ್ನೂ ಪರಭಾರೆ ಮಾಡಿ , ಕಾವೇರಿಗೋ , ಕೃಷ್ಣಾಗೋ ಹಾರಿ ಲೋಕ ತ್ಯಾಗ ಮಾಡಿ ದೊಡ್ಡ ಮನಸ್ಸಿನವನು ಅನ್ನಿಸಿಕೊಳ್ಳೋದು ನಿಜಕ್ಕೂ ಉತ್ತಮ .
ರಾಜಕುಮಾರರು ನಿಧನರಾಗಿ , ಅವರ ಮೃತದೇಹವನ್ನು ಎತ್ತೆತ್ತಲೋ ಒಯ್ಯುವುದನ್ನು ಕಂಡು ಜನ ಕುಪಿತರಾದಾಗ ಭಾರತದ ಅಹೋದಿನರಾತ್ರಿಯ ಸುದ್ದಿ ಚಾನೆಲ್ಲುಗಳನ್ನು ಬಾಧಿಸಿದ್ದು ಬೆಂಗಳೂರಿನಲ್ಲಿ ಇನ್ನು ಮುಂದೆ ವ್ಯಾಪಾರಕ್ಕೆಂದು ಠಿಕಾಣಿ ಹೂಡುವುದು ಕ್ಷೇಮವೆ ಎಂಬುದು . ಇಂತಹ ಜನ ಸಮುದಾಯದ ಹಂಬಲಗಳನ್ನು ವಿಕಾರಗೊಳಿಸುವ ಕರ್ನಾಟಕದ ಮೇಲಿನ ಧನದಾಹೀ ಆಕ್ರಮಣವನ್ನು ಮಾಡುತ್ತಿರುವುದು ಭಾರತದ ಇತರೆ ಭಾಷೆಗಳಾದ ತಮಿಳು , ತೆಲುಗು , ಹಿಂದಿಗಳಲ್ಲ . ಅವೂ ಆಕ್ರಮಣಕ್ಕೆ ಒಳಗಾಗಿವೆ . ಅಮೇರಿಕಾದ ಹಗಲಿಗೆ ನಮ್ಮ ರಾತ್ರೆಗಳನ್ನು ಕಾಲೊನೈಸ್ ಮಾಡಲೆಂದು ಇರುವ ಇಂಗ್ಲಿಷ್ ಭಾಷೆಯನ್ನು ಮಾತ್ರ ಬಲ್ಲವರಾದ , ಕನ್ನಡದಲ್ಲಿ ಅನಕ್ಷರಸ್ಥರಾದ ಫರಂಗಿ ಮೋಹದ ದೂತ ಪಡೆಯೊಂದರಿಂದ ಇದು ನಡೆಯುತ್ತಿದೆ .
ಸುನಾಥ್ ಸರ್ ನಾದಲೀಲೆಯ ಪರಿಚಯಕ್ಕೆ ಥ್ಯಾಂಕ್ಸ್ ನಿಮ್ಮ ಬರಹ ಯಾವಾಗಲೂ ಸಂಗ್ರಹ ಯೋಗ್ಯ
" ನಾನು ನಿನ್ನ ಹತ್ರ ಸ್ವಲ್ಪ ಮಾತಾಡ ಬೇಕಿತ್ತು " ಅಂದೆ
ರೈಲುಗಾಡಿ ವೇಗವನ್ನು ಪಡೆಯುತ್ತಿದ್ದಂತೆಯೇ ಅವರ ಮಾತಿನ ತಿಕ್ಕಾಟವೂ ತೀವ್ರ ರೂಪವನ್ನು ಪಡೆಯತೊಡಗಿತ್ತು . ಓರ್ವ ವೃದ್ದ ಮತ್ತು ಇನ್ನೊಬ್ಬ ಮಧ್ಯಮ ವಯಸ್ಸಿನ ಸಣಕಲ ಕುಳಿತುಕೊಳ್ಳುವ ಆಸನದ ವಿಷಯದಲ್ಲಿ ಕಿತ್ತಾಡಿಕೊಳ್ಳುತ್ತಿದ್ದರು . ಅದು ಫಸ್ಟ್‌ಕ್ಲಾಸ್ ಬೋಗಿ . ಯಾವುದೋ ತಾಂತ್ರಿಕ ಸಮಸ್ಯೆಯಿಂದ ಅವರಿಬ್ಬರ ಆಸನ ಅದಲು ಬದಲಾಗಿತ್ತು . ವೃದ್ಧರಿಗೆ ಸಿಕ್ಕಿದ ಆಸನದ ಒಂದು ಭಾಗ ಹರಿದು ಹೋಗಿದ್ದು ಆತ , ಎದುರಿನ ಆಸನದ ಮಧ್ಯವಯಸ್ಕನೊಂದಿಗೆ ಜಗಳಕ್ಕೆ ನಿಂತಿದ್ದರು . ' ' ಅದು ನನ್ನ ಜಾಗ . ತಕ್ಷಣ ಅದರಿಂದ ಎದ್ದೇಳಬೇಕು ' ' ಏದುಸಿರು ಬಿಡುತ್ತಾ ಜೋರಾಗಿ ಒದರಿದರು .
ಸಂತೋಷಕ್ಕೆ . . ಹಾಡೂ ಸಂತೋಷಕ್ಕೆ . . ಗುನುಗುನಿಸುತ್ತಾ ತನ್ನ ಕ್ಯೂಬಿಕಲ್‌ಗೆ ಬಂದ ಸಂಜೀವ . ಈ ಹಾಡು ಈಗ್ಯಾಕೆ ಅವನ ನೆನಪಿಗೆ ಬಂತು ? ಕಂಪನಿ ಕೊಡದೇ ಇದ್ದರೂ ಚಿದಂಬರಂ ತೆರಿಗೆ ಬದಲಾವಣೆಗಳಿಂದ ಸಿಕ್ಕ ಮದ್ಯಂತರ ಸಂಬಳ ಏರಿಕೆಯಿಂದಲಾ ಅಂತ ಯೋಚನೆ ಮಾಡಿದಾಗ ಸಿಕ್ತು ಲಿಂಕ್ . ಆವತ್ತು ಭಾನುವಾರ ರಾತ್ರಿ ಪಲ್ಲವಿ ಝ್ಹೀ ಟೀವಿಯಲ್ಲಿ ಲಿಟ್ಲ್ ಚಾಂಪಿಯನ್ ಕಾರ್ಯಕ್ರಮದಲ್ಲಿ ಸ್ಪರ್ದೆಯಿಂದ ಹೊರಬಿದ್ದ ಪುಟಾಣಿಯೊಬ್ಬನನ್ನು ಹಾಡೂ ಹಾಡೂ ಅಂತ ಬಲವಂತ ಮಾಡಿದಾಗ ಆ ಪುಟ್ಟ ಹುಡುಗ ಗದ್ಗದಿತನಾಗಿ ಕಣ್ಣು ತುಂಬಿಕೊಂಡು ಹಾಡಿದ ಹಾಡು ಅದು .
ಅ ದು ಮೊದಲ ಮಹಾಯುದ್ಧದ ನಂತರ ಕಾಲ . ಮಿತ್ರ ಸೇನೆಯ ಎದುರು ಹೀನಾಯವಾಗಿ ಸೋತ ಜರ್ಮನಿ ತನ್ನ ಭೂಭಾಗಗಳನ್ನು ಕಳೆದುಕೊಂಡಿದ್ದಲ್ಲದೆ , ಯುದ್ಧ ನಷ್ಟವೆಂದು ಅಪಾರವಾದ ವೆಚ್ಚವನ್ನು ಭರಿಸಬೇಕಾಯಿತು . ಜರ್ಮನಿಯಲ್ಲೊಂದು ನೀರಸ ಹಗಲು ಆಕಳಿಸಿ ಮೈಮುರಿಯುತ್ತಿದ್ದ ವೇಳೆ . ಮಹಿಳೆಯೋರ್ವಳು ತನಗೆ ಸಂಬಳವಾಗಿ ಬಂದ ದೊಡ್ಡ ಮೊತ್ತದ ನೋಟುಗಳನ್ನು ಚರ್ಮದ ಬ್ಯಾಗಿನಲ್ಲಿ ತುಂಬಿಕೊಂಡು ಒಯ್ಯುತ್ತಿದ್ದಳು . ಮೊದಲೇ ಕಳ್ಳಕಾಕರ ಕಾಟ ವಿಪರೀತವಾಗಿದ್ದ ದಿನಗಳವು . ಮಂಜು ಮುಸುಕಿದ ಹಗಲು . ಇಡೀ ಬೀದಿ ನಿರ್ಮಾನುಷ್ಯವಾಗಿತ್ತು . ಆದರೆ ಈ ಮಹಿಳೆಗೆ ಅದ್ಯಾವುದರ ಭಯ ಇರಲಿಲ್ಲ . ಇರುವ ಹಣದಲ್ಲೇನೇನು ಕೊಳ್ಳಬಹುದು ಎಂಬ ಲೆಕ್ಕಾಚಾರದ ಅನ್ಯಮನಸ್ಕತೆ . ಶೌಚಕ್ಕೆ ಹೋಗಬೇಕೆನಿಸಿ ದಾರಿ ಪಕ್ಕದ ಶೌಚಾಲಯದತ್ತ ನಡೆದಳು . ಅಲ್ಲೇ ಟಾಯಿಲೆಟ್ಟಿನ ಹೊರಗೆ ಬೆಂಚಿನ ಮೇಲೆ ಬ್ಯಾಗ್ ಬಿಸಾಡಿದವಳೇ ಒಳಗೆ ನುಗ್ಗಿದಳು . ಅವಳು ಹೊರಗೆ ಬಂದಾಗ ಆಕೆಯ ಬ್ಯಾಗ್ ಕಳುವಾಗಿತ್ತು . ಆದ್ರೆ ಕಳ್ಳರು ಬ್ಯಾಗನ್ನು ಮಾತ್ರ ತಗೊಂಡು ಹಣವನ್ನು ಅಲ್ಲೇ ಬೆಂಚಿನ ಮೇಲೆ ಸುರಿದು ಹೋಗಿದ್ದರು . ಕಳ್ಳರಿಗೆ ಆ ಚರ್ಮದ ಬ್ಯಾಗು ಅಷ್ಟೊಂದು ಬೆಲೆಬಾಳುವಂತದ್ದಾಗಿತ್ತು . ಕರೆನ್ಸಿ ಅವರ ದೃಷ್ಟಿಯಲ್ಲಿ ಕಸಕ್ಕೆ ಸಮನಾಗಿತ್ತು .
ಇನ್ನು ಈ ಬೀರ್‌ಮ್ಯಾನ್ ಬಗ್ಗೆ ತಿಳಿದುಬಂದ ಒಂದೆರಡು ಅಂಶಗಳನ್ನು ತಿಳಿಸಲಿಚ್ಛಿಸುವೆ . ಸ್ವಲ್ಪ ಧೈರ್ಯ ತೋರಿಸಿ , ತನಗಾಗುವ ಘಾಸಿಯ ಕಡೆಗೆ ಗಮನ ಕೊಡದೇ ಮುನ್ನುಗ್ಗಿದರೆ , ಯಾರೂ ಎದುರು ನಿಲ್ಲುವುದಿಲ್ಲ . ಎಷ್ಟೋ ಬಾರಿ ಸಣ್ಣಗಿದ್ದು , ಮೈನಲ್ಲಿ ಸರಿಯಾಗಿ ಶಕ್ತಿ ಇಲ್ಲದವರು ಹೆಚ್ಚಿನ ಶಕ್ತಿಯುತರನ್ನು ಹೆದರಿಸಿರುವ ಸಂದರ್ಭವನ್ನು ಎಲ್ಲರೂ ನೋಡಿರುವುದೇ ತಾನೆ ! ಈ ಮನುಷ್ಯನ ( ಬೀರ್‌ಮ್ಯಾನ್ ) , ಹೆಸರು ಕೆಲವೊಮ್ಮೆ ರವೀಂದ್ರ ಆದರೆ , ಇನ್ನು ಕೆಲವೊಮ್ಮೆ ರಹೀಮ್ . ಈತ ತನ್ನ ಕುಟುಂಬದೊಂದಿಗೆ ಮರೀನ್ ಲೈನ್ಸ್ ಹತ್ತಿರದ ರಸ್ತೆ ಬದಿಯಲ್ಲಿ ವಾಸವಾಗಿದ್ದನಂತೆ . ಪೊಲೀಸರ ಕೈಗೆ ಸಿಕ್ಕಿ ಬಿದ್ದ ಮೇಲೆ ಈತನ ಕುಟುಂಬ ಈಗಲೂ ರಸ್ತೆ ಬದಿಯಲ್ಲಿಯೆ ವಾಸ ಇದೆಯಂತೆ . ಪೊಲೀಸರು ಮಂಪರು ಪರೀಕ್ಷೆಗೆ ಗುರಿಪಡಿಸಿ , ಸತ್ಯಾಂಶ ಹೊರಹಾಕಿಸಿದಾಗ ತಿಳಿದ ಸುದ್ಧಿಯಂತೆ , ವಸ್ತುತಃ ಈತ ಮುಸ್ಲಿಮನಾಗಿದ್ದು , ಮುಸ್ಲಿಮರಲ್ಲಿ ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದವರ ಮೇಲೆ ಎರಗುತ್ತಿದ್ದನಂತೆ . ಅದಲ್ಲದೇ ಇವನನ್ನು ಹಿಡಿದಿರುವ ಪೊಲೀಸರು ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆಂದೂ , ತಾನು ಮುಕ್ತನಾಗಿ ಹೊರಗೆ ಬಂದ ಕೂಡಲೇ ಅವರ ಮೇಲೆ ಎರಗುವುದು ಖಂಡಿತವೆಂದೂ ತಿಳಿಸಿದ್ದಾನಂತೆ . ಇದರಿಂದ ಪೊಲೀಸರ ಬೆನ್ನು ಹುರಿಯಲ್ಲಿ ಛಳಿ ಕಾಣಿಸಿಕೊಂಡಿದೆಯಂತೆ . ಇಂತಹ ಸಮಾಜ ಘಾತುಕರನ್ನು ನ್ಯಾಯಾಲಯ ಸರಿಯಾಗಿ ಶಿಕ್ಷಿಸುವುದಿಲ್ಲವೆಂದು ಆತನೂ ಅರಿತಿರುವನು . ಇಲ್ಲದಿದ್ದರೆ ಹೀಗೆ ಹೇಳುತ್ತಿದ್ದನೇ ? ಇಂತಹವರನ್ನು ಹೆಚ್ಚು ಹೆಚ್ಚಾಗಿ ಈ ಸಮಾಜದಲ್ಲಿ ಕಾಣದಿರುವಂತೆ ಮಾಡಲು ಏನು ಮಾಡಬೇಕು ? ನನ್ನ ಮನಸ್ಸಿನಲ್ಲಿ ಬರುವ ಚಿಂತನೆಯಂತೆ , ಮೊದಲು ನ್ಯಾಯಾಲಯ ಕಡಿಮೆ ಕಾಲಾವಧಿಯಲ್ಲಿ ವಿಚಾರಣೆ ಮಾಡಿ ಸೂಕ್ತ ಶಿಕ್ಷೆಯನ್ನು ಕೊಟ್ಟು , ಮತ್ತೆ ಸಮಾಜದಲ್ಲಿ ಇತರರು ಇಂತಹ ಕೃತ್ಯಗಳನ್ನು ಎಸಗಲು ಧೈರ್ಯ ತೋರದಂತೆ ನೋಡಿಕೊಳ್ಳಬೇಕು . ಎರಡನೆಯದಾಗಿ , ರಸ್ತೆ ಬದಿಯಲ್ಲಿರುವ ಮಕ್ಕಳಿಗೆ ಸೂಕ್ತವಾದ ಪುಕ್ಕಟೆ ಓದು ಬರಹಾನ್ನು ಕೊಟ್ಟು ಸಮಾಜವನ್ನು ಉದ್ಧರಿಸುವಂತೆ ಮಾಡಬೇಕು . ಈ ಕೆಲಸವನ್ನು ನಾವು ನೀವು ಮಾಡಬೇಕಲ್ಲವೇ ? ಅದಕ್ಕೆ ಸೂಕ್ತವಾದ ಸರ್ಕಾರವನ್ನೂ ತಯಾರು ಮಾಡಬೇಕಲ್ಲವೇ ?
ಗಾಂಧಿಯವರ ಒಂದು ಮಾತು ನೆನಪಾಗುತ್ತದೆ " Be the change you wish to see in the World " . ನಮ್ಮ ದೃಷ್ಟಿಯಲ್ಲಿ ನಾವು ಮೊದಲು ಎದ್ದು ನಿಲ್ಲಬೇಕು . ಎಲ್ಲರೊಳೊಂದಾಗಬೇಕು . ನನ್ನಲ್ಲೇನೋ ಊನವಿದ್ದರೂ ನಾನು ಎಲ್ಲರಂತಿದ್ದೇನೆ , ಅದಕ್ಕಾಗಿ ನನ್ನನ್ನು ಪರಿಗಣಿಸಿ ಎಂಬ ಭಾವನೆಗಿಂತ , ನನ್ನನ್ನು ನಾನಾಗಿರಲು ಬಿಡಿ , ನಾನಿರುವುದೇ ಹೀಗೆ ಎಂಬ ಧೋರಣೆಯಿಂದ ಎದುರಿಸಬೇಕಾಗಿದೆ . ನ್ಯೂನ್ಯತೆಯನ್ನು ನಮ್ಮ ದೃಷ್ಟಿಯಿಂದ ಮೊದಲು ಹೊಡೆದೋಡಿಸಬೇಕಿದೆ . ಇಂದು ಎಲ್ಲ ಅಂಗಾಂಗಗಳು ಸ್ವಸ್ಥಾನದಲ್ಲಿದ್ದು , ಸ್ವಕಾರ್ಯಗಳನ್ನ ಸ್ವಂತವಾಗಿ ನೆರವೇರಿಸಿಕೊಂಡು ಹೋಗುತ್ತಿರುವ ಜನರಲ್ಲಿ , ಅವುಗಳು ಇಲ್ಲದಿದ್ದರೆ ? ಎಂಬ ಕಲ್ಪನೆಯೇ ಅಸಾಧ್ಯವಾಗಿರುವಾಗ , ಒಮ್ಮೆಗೆ ಕೈಯಿಲ್ಲದವಳು ಕಾಲಲ್ಲಿ ಬರೆಯುತ್ತಾಳೆಂದರೆ ಅದು ಮೊದಲಿಗೆ ಪವಾಡವಾಗೇ ಕಾಣುವುದು . ಆದರದು ಸ್ವಪ್ರಯತ್ನ , ಛಲ , ಸಾಧನೆ ಎಂದು ತೋಚಲವರಿಗೆ ತಿಳುವಳಿಕೆಯಿರಬೇಕು . ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ಎನ್ನುವಂತೆ , ಎಲ್ಲ ಸರಿಯಿರುವವನಿಗೆ , ಇಲ್ಲದುದರ ಮೌಲ್ಯ ಹೇಗೆ ತಾನೆ ತಿಳಿದೀತು ? ವಸ್ತುವೊಂದನ್ನು ಕಳೆದುಕೊಂಡಾಗಲೇ ತಿಳಿಯುವುದದರ ಬೆಲೆ . ಅದೇ ದುರಂತ ! ! !
ವೃತ್ತಿಯಲ್ಲಿ ಪತ್ರಕರ್ತ . ಜಾಗತೀಕರಣ - ಮಾಹಿತಿ ತಂತ್ರಜ್ಞಾನದ ಪರಿಣಾಮ , ದುಷ್ಪರಿಣಾಮಗಳೆರಡೂ ಕಳೆದ ಕೆಲವು ವರ್ಷಗಳಿಂದ ನನ್ನ ಮನಸ್ಸು - ಮೆದುಳನ್ನು ಆಕ್ರಮಿಸಿರುವ ವಿಷಯಗಳು . ಮೂಡಿ ಬರುವ ಭಾವ - ಚಿಂತನೆಗನುಗುಣವಾಗಿ ನನ್ನ ಇತಿ ಮಿತಿಯಲ್ಲಿ ಕಾರ್ಯಶೀಲನಾಗಿದ್ದೇನೆ . ಕನ್ನಡಸಾಹಿತ್ಯ . ಕಾಂ , ಸಂವಾದ . ಕಾಂ ಹಾಗು ಇವುಗಳ ಸುತ್ತಲೂ ಇರುವ ಅಪಾರವಾದ ಬೆಂಬಲಿಗರ ಬಳಗ ನನ್ನ ಆಸ್ತಿ .
ಚಿಕ್ಕಮಗಳೂರು ರಿಜಿಸ್ಟ್ರೇಶನ್ ಹೊಂದಿರುವ ಬೈಕ್ ರಾಷ್ಟ್ರೀಯ ಹೆದ್ದಾರಿಯ ತಿರುವೊಂದರಲ್ಲಿ ಮೋರಿಗೆ ಡಿಕ್ಕಿ ಹೊಡೆದಿದ್ದು , ಸವಾರನ ಮೃತದೇಹ ಮೋರಿ ಕೆಳಗಡೆ ಬಿದ್ದುಕೊಂಡಿತ್ತು . ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದು , ಮೃತದೇಹದ ಗುರುತು ಪತ್ತೆಯಾಗಿಲ್ಲ .
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಈ ಜ್ವರ ಪ್ಯಾಂಡೆಮಿಕ್ ಸ್ವರೂಪದ ೬ನೇ ಹಂತವನ್ನು ತಲುಪಿದ್ದರೂ ಅಪಾಯದ ಸಾಧ್ಯತೆ ಮಾತ್ರ ' ಮಾಡರೇಟ್ ' ( ಸಾಧಾರಣ ) ಅಂತೆ ! ಏಕೆಂದರೆ ವಿಶ್ವದಲ್ಲಿ ಈವರೆಗೆ ೩೫೦೦೦ ಜನರಿಗೆ ಸೋಂಕು ತಗುಲಿದ್ದರೂ ಸತ್ತಿರುವವರು ಕೇವಲ ೧೬೩ ಜನರಂತೆ . ಹೀಗಾಗಿ ಈ ವ್ಯಾಧಿ ೧೯೧೮ರ ರೀತಿ ಮಾರಣಾಂತಿಕವೇನಲ್ಲವಂತೆ ! ಆದರೆ ವಿಶ್ವಸಂಸ್ಥೆಯ ಈ ಅಂಕಿಅಂಶ ನಿಜವನ್ನು ಹೇಳುತ್ತಿದೆಯೇ ? ಈವರೆಗೆ ಜಗತ್ತಿನಾದ್ಯಂತ ಸೋಂಕು ತಗುಲಿರುವ ೩೫೦೦೦ ಜನರಲ್ಲಿ ೧೭೮೫೫ ಜನ ಅಮೆರಿಕನ್ನರು . ಅವರಲ್ಲಿ ೪೫ ಜನ ಮಾತ್ರ ಸತ್ತಿದ್ದಾರೆ . ಅಮೆರಿಕದ ಮಟ್ಟಿಗೆ ಇದು ಅಂತ ಆತಂಕಕಾರಿ ಸನ್ನಿವೇಶವೇನಲ್ಲ . ಅದೇ ರೀತಿ ಕೆನಡಾದಲ್ಲಿ ೨೯೭೮ ಜನರಲ್ಲಿ ನಾಲ್ವರು ಸತ್ತಿದ್ದರೆ ಆಸ್ಟ್ರೇಲಿಯಾದಲ್ಲಿ ಈವರೆಗೆ ೧೮೨೩ ಜನರಿಗೆ ಸೋಂಕು ತಗುಲಿದ್ದರೂ ಒಂದು ಸಾವೂ ಸಂಭವಿಸಿಲ್ಲ . ಇಂಗ್ಲೆಂಡಿನಲ್ಲಿ ಸೋಂಕು ತಗುಲಿದ ೧೨೮೯ ಜನರಲ್ಲಿ ಯಾರೂ ಸತ್ತಿಲ್ಲ . ಹೀಗಾಗಿ ರೋಗ ಹರಡುತ್ತಿದ್ದರೂ ಸಾವಿನ ಪ್ರಮಾಣ ಕಡಿಮೆ ಇರುವುದರಿಂದ ಇದು ಮಾಡರೇಟ್ ಪ್ಯಾಂಡೆಮಿಕ್ ಎಂಬುದು ಅವರ ವಾದ .
Download XML • Download text