Text view
kan-28
View options
Tags:
Javascript seems to be turned off, or there was a communication error. Turn on Javascript for more display options.
" ಕಣ್ಣರಳು " ಇದು " ನಾಕು ತಂತಿ " ಕವನಸಂಗ್ರಹದಲ್ಲಿಯ ಒಂದು ಗೀತೆ . ಬೇಂದ್ರೆಯವರು ಈ ಗೀತೆಯನ್ನು ಬೀಸುವ ಕಲ್ಲಿನ ಹಾಡಿನ ಧಾಟಿಯಲ್ಲಿ ಬರೆದಿದ್ದಾರೆ . ಕವನ ಇಲ್ಲಿದೆ : ೧ ಕಲ್ಲರಳಿ ಹೂವಾಗಿ | ಕೆಮ್ಮಣ್ಣ ಮನೆ ತೊಳಗಿ ನಮ್ಮ ನಿಮ್ಮನ್ನ ಬರಮಾಡಿ | ಮನಮನ ಕಮ್ಮಗಿರಿಸ್ಯಾವ , ಕಲ್ಲರಳಿ | | ೨ ಮಣ್ಣರಳಿ ಹೂವಾಗಿ | ನೂಲ ಬಟ್ಟೆಯಾಗಿ ಮೈಮೈಗೆ ಧಾರದಾಧಾರಾ | ಗುಡಿಗುಡಿಗೆ ಹೂಬತ್ತಿ , ಹೊತ್ತಿ , ಮಣ್ಣರಳಿ | | ೩ ನೀರರಳಿ ತಾವರಿ | ಮಿನ ಮಿನ ಮೀನಕ್ಕ ಬೆಳಕುಂಡು ಬಾಳಿರೆನತಾವ | ಹಗಲಿರುಳು ಬೆಳಕನುಣಸ್ಯಾವ ನೀರರಳಿ | | ೪ ದಿಕ್ಕರಳಿ ಬೆಳಕಾಗಿ | ನೆರಳರಳಿ ಇರುಳಾಗಿ ನಿದ್ದಿ ಎಚ್ಚರಕು ತಿರುಳಾಗಿ | ಶ್ರೀಶೈಲಾ ತಿರುಮಲೆಗೂ ಪಂಜು , ಬಾನರಳಿ | | ೫ ಗಾಳಿಗಾಳಿಗು ಮಥನ | ಆ ಗಾನ ಈ ತಾನ ಮನವರಳಿ ಮರಳು ಆಗ್ಯಾವ | ತದ್ಧ್ಯಾನಾ ಸದ್ಧ್ಯಾನ , ಮುಕ್ತಿ ಮನವರಳಿ | | ೬ ಜೀವರಳಿ ಜೀವಾಳ | ನಾವರಳಿ ನಮ್ಮ್ಯಾಳಾ ನಾಚಿಕಿ ಅರಳಿ ನಗತಾವ | ತೊಟ್ಟಿಲಾ ಕುಲಕ್ಯಾವ ಕೈಕೈ , ಜೀವರಳಿ | | ೭ ಬೀಸಿದರ ಕಾಳರಳಿ | ಕಾಸಿದರ ಅನ್ನರಳಿ ನುರಿಸಿ ನುರಿಸಿದರ ಕವಳರಳಿ | ಎದಿಯರಳಿ ಹಾಲು ತೊರೆದಾವ , ಮಗುವರಳಿ | | ೮ ಗರ್ಭಗುಡಿಯ ದೈವ | ದೀಪಕ್ಕ ಕಣ್ಣರಳಿ ಹೊರಳಿ ನೋಡ್ಯಾವ ಒಳಗರಳಿ | ಕತ್ತಲೆಗು ಹೌದೇನೋ , ಕಲ್ಲಿಗು ಕಣ್ಣು ಇರತಾವ | | ೯ ಶುದ್ಧಬ್ರಹ್ಮವು ಅರಳಿ | ಶಬಲಬ್ರಹ್ಮದ ಸರಣಿ ಸರಿಗಮಪಧನಿ ಅಂದಾವ , ಧನಿಯರಳಿ ಅಂತರಂಗವೆ ಅರಳ್ಯಾವ , ಅರುಳರಳಿ | | ಕವನ ಓದಿದ ತಕ್ಷಣ ತಮ್ಮ ಸುತ್ತಲಿನ ಪ್ರಕೃತಿಯೊಡನೆ ಪ್ರೀತಿಯಿಂದ ಬೆರೆತ ಕವಿಯ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ . ಈ ಕವನ ಪ್ರಾರಂಭವಾಗುವದು ಸರ್ವಜ್ಞನ ತ್ರಿಪದಿಯೊಂದರ ಸಾಲುಗಳನ್ನು ಬಳಸಿಕೊಂಡು . ಸರ್ವಜ್ಞನ ತ್ರಿಪದಿ ಹೀಗಿದೆ : " ಕಲ್ಲರಳಿ ಹೂವಾಗಿ , ಎಲ್ಲರಿಗು ಬೇಕಾಗಿ , ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ , ಬಲ್ಲವರು ಹೇಳಿ ಸರ್ವಜ್ಞ | | ಸರ್ವಜ್ಞನ ಈ ಜನಪ್ರಿಯ ಒಗಟಿನ ಅರ್ಥ ಸುಣ್ಣದ ಕಲ್ಲು . ಸುಣ್ಣದ ಕಲ್ಲನ್ನು ನೀರಿನಲ್ಲಿ ಕಲಸಿದಾಗ ಅದು ಹೂವಿನಂತೆ ಅರಳಿ ಸುಣ್ಣವಾಗುತ್ತದೆ . ಈ ಸುಣ್ಣವನ್ನು ತಾಂಬೂಲದ ಜೊತೆಗೆ ಎಲ್ಲರೂ ಉಪಯೋಗಿಸುತ್ತಾರೆ . ದೇವರ ಗುಡಿಗೆ ಸುಣ್ಣವನ್ನು ( Of course , ಮನೆಗಳಿಗೂ ಸಹ ) ಗೋಡೆಗಳಿಗೆ ಹಚ್ಚಲು ಬಳಸುತ್ತಾರೆ . ಬೇಂದ್ರೆಯವರು ತಮ್ಮ ತ್ರಿಪದಿಯಲ್ಲಿ ಈ ರೀತಿ ಬರೆಯುತ್ತಾರೆ : " ಕಲ್ಲರಳಿ ಹೂವಾಗಿ | ಕೆಮ್ಮಣ್ಣ ಮನೆ ತೊಳಗಿ ನಮ್ಮ ನಿಮ್ಮನ್ನ ಬರಮಾಡಿ | ಮನಮನ ಕಮ್ಮಗಿರಿಸ್ಯಾವ , ಕಲ್ಲರಳಿ | | " ಬೇಂದ್ರೆಯವರ ಕೆಮ್ಮಣ್ಣು ಹಾಗು ಸುಣ್ಣ , ಮನೆಯನ್ನು ಸ್ವಚ್ಛ ಮಾಡುವದಕ್ಕಷ್ಟೇ ಅಲ್ಲ , ಅದು ಅತಿಥಿಗಳನ್ನು ಸ್ವಾಗತಿಸಲಿಕ್ಕೂ ಹೌದು . ( ಬೇಂದ್ರೆಯವರಿಗೆ ಸದಾಕಾಲವೂ ಜನ ಬೇಕು . ಅವರ " ಬಾರೊ ಸಾಧನಕೇರಿಗೆ " ಕವನದಲ್ಲಿ " ಬೇಲಿಗೂ ಹೂಬೆರಳಿದೆ " ಎಂದು ಹಾಡಿದ್ದಾರೆ . ) ಬರಿ ಮನೆ ಸ್ವಚ್ಛವಾದರೆ ಸಾಕೆ ? ಈ ಸ್ವಚ್ಛತೆ ಮನಸ್ಸನ್ನೂ ತುಂಬಬೇಕು , ನಮ್ಮೆಲ್ಲರನ್ನೂ ಕಮ್ಮಗೆ ( = ಸುಖವಾಗಿ ) ಇರಿಸಬೇಕು . " ಸರ್ವೇ ಸಂತು ನಿರಾಮಯಾ : " ಇದು ಮೊದಲ ನುಡಿಯ ಆಶಯ . ಕಲ್ಲು ಅರಳುವ ಪರಿ ಇದು . ಎರಡನೆಯ ನುಡಿ ಇಂತಿದೆ : " ಮಣ್ಣರಳಿ ಹೂವಾಗಿ | ನೂಲ ಬಟ್ಟೆಯಾಗಿ ಮೈಮೈಗೆ ಧಾರದಾಧಾರಾ | ಗುಡಿಗುಡಿಗೆ ಹೂಬತ್ತಿ , ಹೊತ್ತಿ , ಮಣ್ಣರಳಿ | | " ಮಣ್ಣಿನಲ್ಲಿ ಬಿತ್ತಿದ ಹತ್ತಿಯ ಬೀಜ , ಹತ್ತಿ ಹೂವಾಗಿ , ನೂಲ ಬಟ್ಟೆಯಾಗಿ , ಜನರಿಗೆಲ್ಲರಿಗೂ ಧಾರದ ( = of yarn ) ಧಾರೆಯಾಗಿ ಉಪಯುಕ್ತವಾದರೆ , ಗುಡಿಯಲ್ಲಿ ದೇವರೆದುರಿಗೆ ದೀಪದ ಹೂಬತ್ತಿಯಾಗುವದು . ( ಬೇಂದ್ರೆಯವರ ಮತ್ತೊಂದು ಕವನದಲ್ಲಿಯ ಸುಂದರವಾದ ಸಾಲೊಂದು ಇಲ್ಲಿ ನೆನಪಾಗುವದು . " ತಾ ಹೊತ್ತಲೆಂದು ಬಂದಂಥ ಬತ್ತಿ ದೀಪಕ್ಕೆ ಬಾಗುವಂತೆ " . ) ಮಣ್ಣು ಅರಳಿದ ಪರಿಯಿದು . ಅರಳುವ ಅಂದರೆ evolve ಆಗುವ ಪರಿ ಎನ್ನುವ ಆಶಯವನ್ನು ಇಲ್ಲಿ ಕಾಣುತ್ತೇವೆ . ಮಣ್ಣು ಎಂದರೆ ಪೃಥ್ವಿ . ಇದು ಪಂಚಮಹಾಭೂತಗಳಲ್ಲಿ ಮೊದಲನೆಯದು . ಮೂರನೆಯ ನುಡಿಯಲ್ಲಿ ಪಂಚಮಹಾಭೂತಗಳಲ್ಲಿ ಎರಡನೆಯದಾದ ನೀರು ( ಅಪ್ ) ಅರಳುವದನ್ನು ಕಾಣುತ್ತೇವೆ . " ನೀರರಳಿ ತಾವರಿ | ಮಿನ ಮಿನ ಮೀನಕ್ಕ ಬೆಳಕುಂಡು ಬಾಳಿರೆನತಾವ | ಹಗಲಿರುಳು ಬೆಳಕನುಣಸ್ಯಾವ ನೀರರಳಿ | | " ನೀರು ಅರಳಿ ಬೆಳ್ತಾವರೆಯಾಗಿ ( ! ) , ಮೀನುಗಳಿಗೆ ಹಗಲಿರಳು ಮಿಣ ಮಿಣ ಬೆಳಕು ನೀಡುತ್ತವೆ ಎನ್ನುವದು ಕವಿಸಮಯ . ಉತ್ಕ್ರಾಂತಿಯ ಪಥದಲ್ಲಿ ನೀರು ( = ಅಪ್ ) ಎನ್ನುವ ಮಹಾಭೂತ ಅರಳಬೇಕಾದ ಪರಿಯನ್ನು ಬೇಂದ್ರೆ ಇಲ್ಲಿ ನೆನೆಯುತ್ತಾರೆ . ತೇಜಸ್ಸು ಪಂಚಮಹಾಭೂತಗಳಲ್ಲಿ ಮೂರನೆಯದು . ಜಗತ್ತಿಗೆ ತೇಜಸ್ಸು ದೊರೆಯುವದು ಸೂರ್ಯನಿಂದ . ಇದರ ವರ್ಣನೆ ನಾಲ್ಕನೆಯ ನುಡಿಯಲ್ಲಿದೆ : " ದಿಕ್ಕರಳಿ ಬೆಳಕಾಗಿ | ನೆರಳರಳಿ ಇರುಳಾಗಿ ನಿದ್ದಿ ಎಚ್ಚರಕು ತಿರುಳಾಗಿ | ಶ್ರೀಶೈಲಾ ತಿರುಮಲೆಗೂ ಪಂಜು , ಬಾನರಳಿ | | " ಬೇಂದ್ರೆಯವರಿಗೆ ಕಲ್ಪನೆ ಅತ್ಯಂತ ನಿರಾಯಾಸವಾದ ಸಿದ್ಧಿ . ಸೂರ್ಯೋದಯವನ್ನು ಅವರು ದಿಕ್ಕು ಅರಳುವದು ಎಂದು ಬಣ್ಣಿಸುತ್ತಾರೆ . ಅದರಂತೆ ನೆರಳೆ ( = ಕತ್ತಲೆ ) ಅರಳಿ ಇರುಳಾಗುತ್ತದೆ ಎಂದೂ ಹೇಳುತ್ತಾರೆ . ಶ್ರೀಶೈಲದಲ್ಲಿ ಇರುವವನು ಶಿವ ; ತಿರುಮಲೆಯಲ್ಲಿ ಇರುವವನು ವೆಂಕಟೇಶ . ಆದರೆ ಶ್ರೀಶೈಲ ಹಾಗು ತಿರುಮಲೆ ಇವೆರಡರ ಅರ್ಥ ಒಂದೇ = The Holy Hill . ಈ ಎರಡೂ ಬೆಟ್ಟಗಳಿಗೆ ಪಂಜಿನ ಬೆಳಕು ಸಿಗುವದು ಬಾನು ಅರಳುವದರಿಂದ , ಅಂದರೆ ಚಂದ್ರ ಹಾಗು ತಾರೆಗಳ ಉದಯದಿಂದ . ( ಯಾಕೆಂದರೆ , ಪಂಜನ್ನು ಉರಿಸುವದು ರಾತ್ರಿಯಲ್ಲಿ ) . ಈ ರೀತಿಯಾಗಿ ತೇಜಸ್ ಎನ್ನುವ ಮೂರನೆಯ ಮಹಾಭೂತದ ಜೊತೆಗೆ ನಾಲ್ಕನೆಯ ಮಹಾಭೂತವಾದ ಆಕಾಶವನ್ನು ಸಹ ಬೇಂದ್ರೆ ಬಣ್ಣಿಸಿದ್ದಾರೆ . ಐದನೆಯ ನುಡಿ ಈ ರೀತಿಯಾಗಿದೆ : ಗಾಳಿಗಾಳಿಗು ಮಥನ | ಆ ಗಾನ ಈ ತಾನ ಮನವರಳಿ ಮರಳು ಆಗ್ಯಾವ | ತದ್ಧ್ಯಾನಾ ಸದ್ಧ್ಯಾನ , ಮುಕ್ತಿ ಮನವರಳಿ | | ಈ ನುಡಿಯಲ್ಲಿ ಐದನೆಯ ಮಹಾಭೂತವಾದ ವಾಯುವಿನ ವರ್ಣನೆ ಇದೆ . ಶಬ್ದ ಅಥವಾ ನಾದ ಹುಟ್ಟುವದು ವಾಯು ಅನ್ನುವ ಮಾಧ್ಯಮದಲ್ಲಿ ತಾನೆ . ಆದುದರಿಂದ ಗಾಳಿಯ ಮಥನದಿಂದ ಹುಟ್ಟಿದ ಆ ಗಾನದಿಂದ ( ಆ ನಾದದಿಂದ ) ಮನಸ್ಸು ಅರಳಿ , ಮರಳಾಗಿದೆ . ಇದು " ತತ್ " ಹಾಗು " ಸತ್ " ಧ್ಯಾನದಲ್ಲಿ ಮನಸ್ಸನ್ನು ಮುಳುಗಿಸಿ , ಮುಕ್ತಿಯ ಕಡೆಗೆ ಕರೆದೊಯ್ಯುತ್ತದೆ . ಈ ರೀತಿ ಪಂಚಮಹಾಭೂತಗಳಿಂದ ಜನ್ಮ ಪಡೆದ ಈ ಜೀವ , ತಾನೂ ಸಹ ಉತ್ಕ್ರಾಂತಿ ಪಥದಲ್ಲಿ ನಡೆಯುತ್ತದೆ . ಆದರೆ ಏಕಾಕಿಯಾಗಿ ಅಲ್ಲ ; ಸಂಸಾರವನ್ನು ನಡೆಯಿಸುತ್ತ . ನಾವು ಅರಳುವದರಿಂದ ನಮ್ಮ ಮ್ಯಾಳ ( = ಗುಂಪು , team , ಜನಮದ ಜಾತ್ರಿ ) ಅರಳುತ್ತದೆ . ತೊಟ್ಟಿಲದಲ್ಲಿ ಕೈಕೈ ಕುಲುಕುವ ಕೂಸು ಅರಳುತ್ತದೆ . ಈ ಸಂಸಾರದ sustenance ಅನ್ನು ಬೇಂದ್ರೆ ಮುಂದಿನ ನುಡಿಯಲ್ಲಿ ನೀಡಿದ್ದಾರೆ . ಬೀಸಿದರ ಕಾಳರಳಿ | ಕಾಸಿದರ ಅನ್ನರಳಿ ನುರುಸಿ ನುರಿಸಿದರ ಕವಳರಳಿ | ಎದಿಯರಳಿ ಹಾಲು ತೊರೆದಾವ , ಮಗುವರಳಿ | | ಆದರೆ sustenanceಗೆ ಬೇಕಾಗಿರುವದು conflict ಅಲ್ಲ , harmony . ಬೀಸಿದಾಗ ಕಾಳು ಕೊರಗುವದಿಲ್ಲ , ಅರಳುತ್ತದೆ ; ಕಾಸಿದಾಗ ಅನ್ನವಾಗುತ್ತದೆ . ಈ processನಲ್ಲಿ ಇರುವದು ಉತ್ಕ್ರಾಂತಿಯೇ ಹೊರತು ಹಿಂಸೆ ಅಲ್ಲ . ಈ ರೀತಿಯಾಗಿ ತಯಾರಾದ ಅನ್ನವನ್ನು ನುರಿಸಿದರೆ ಅದು ಅರಳಿ ಕವಳ ( = ತಾಂಬೂಲ ಅಥವಾ ಅನ್ನ ) ವಾಗುತ್ತದೆ . ಈ ಅರಳಿದ ಕವಳವು ಮಗುವಿಗೆ ಹಾಲಾಗಿ ಬರುತ್ತದೆ . ಮುಂದಿನ ನುಡಿಯಲ್ಲಿ ಈ ಜೀವವು ಪಡೆಯಬೇಕಾದ ದೈವಶ್ರದ್ಧೆಯ ವರ್ಣನೆ ಇದೆ : " ಗರ್ಭಗುಡಿಯ ದೈವ | ದೀಪಕ್ಕ ಕಣ್ಣರಳಿ ಹೊರಳಿ ನೋಡ್ಯಾವ ಒಳಗರಳಿ | ಕತ್ತಲೆಗು ಹೌದೇನೋ , ಕಲ್ಲಿಗು ಕಣ್ಣು ಇರತಾವ | | " ಈ ಕಲ್ಲು ದೇವತಾಮೂರ್ತಿಯೂ ಹೌದು , ಭಕ್ತನೂ ಹೌದು . ಭಕ್ತನಲ್ಲಿ ಶ್ರದ್ಧೆ ಅರಳಿದರೆ , ದೇವತೆಯಲ್ಲಿ ಅನುಗ್ರಹ ಅರಳುತ್ತದೆ . ಕೊನೆಯ ನುಡಿಯಲ್ಲಿ ಈ ದೈವತವು ಅಂತರಂಗದಲ್ಲಿ ಅರಳುವದನ್ನು ಹಾಡಲಾಗಿದೆ : " ಶುದ್ಧಬ್ರಹ್ಮವು ಅರಳಿ | ಶಬಲಬ್ರಹ್ಮದ ಸರಣಿ ಸರಿಗಮಪಧನಿ ಅಂದಾವ , ಧನಿಯರಳಿ ಅಂತರಂಗವೆ ಅರಳ್ಯಾವ , ಅರುಳರಳಿ | | " ಈ ಕೊನೆಯ ನುಡಿಯನ್ನು ಅರ್ಥೈಸಿಕೊಳ್ಳುವ ಮೊದಲು , ಬೇಂದ್ರೆಯವರು ಎರಡನೆಯ ನುಡಿಯಿಂದ ಐದನೆಯ ನುಡಿಯವರೆಗೆ ಮಾಡಿದ ವರ್ಣನೆಗಳ ಎರಡನೆಯ ಅರ್ಥವನ್ನು ಗಮನಿಸಬೇಕಾಗುತ್ತದೆ . ಮನುಷ್ಯನ ಸೂಕ್ಷ್ಮ ಶರಿರದಲ್ಲಿರುವ ಆರು ಚಕ್ರಗಳು ಹಾಗು ಅವು ಪ್ರತಿನಿಧಿಸುವ ಪಂಚಮಹಾಭೂತಗಳು ಈ ರೀತಿಯಾಗಿವೆ : ೧ ) . ಮೂಲಾಧಾರ … ಪೃಥ್ವಿ ೨ ) . ಸ್ವಾಧಿಷ್ಠಾನ … . ಅಗ್ನಿ ( ತೇಜಸ್ ) ೩ ) . ಮಣಿಪೂರ … … . ಅಪ್ ೪ ) . ಅನಾಹತ … … … ವಾಯು ೫ ) . ವಿಶುದ್ಧಿ … … … ಆಕಾಶ ೬ ) . ಆಜ್ಞಾ … … … … ಮನಸ್ ( ಇದು ಪಂಚಮಹಾಭೂತಗಳಿಂದ ಆದ ಜೀವದ ಮನಸ್ಸು ! ) ಯೋಗಸಾಧಕನು ಮೂಲಾಧಾರದಲ್ಲಿರುವ ಕುಂಡಲಿನಿ ಚೈತನ್ಯವನ್ನು ಅರಳಿಸಿ , ಉತ್ಕ್ರಾಂತಿ ಪಥದಲ್ಲಿ ಮೇಲೊಯ್ದು , ಆಜ್ಞಾಚಕ್ರಕ್ಕೂ ಮೇಲಿರುವ ಸಹಸ್ರದಲ ಪದ್ಮದಲ್ಲಿ ಸ್ಥಾಪಿಸುತ್ತಾನೆ . ಅಲ್ಲಿರುವ ದೇವಿಯು ' ಸರ್ವವರ್ಣೋಪಶೋಭಿತಾ ' ! ಅಂದರೆ ಅವಳು ' ಶಬಲ ( = ಅನೇಕ ವರ್ಣಗಳ ) ಬ್ರಹ್ಮ ' ಳು . ಇವಳು ನಾದಬ್ರಹ್ಮಳೂ ಹೌದು . ಅದಕ್ಕಾಗಿಯೇ , ಬೇಂದ್ರೆ ಇಲ್ಲಿ ಸಪ್ತಸ್ವರಗಳನ್ನು ( ಸರಿಗಮಪಧನಿ ) ಕೇಳುತ್ತಿದ್ದಾರೆ . ಆದರೆ ಇದಕ್ಕೂ ಮೇಲಿರುವದು ' ನಾದಬಿಂದುಕಲಾತೀತ ' ವಾದ ಶುದ್ಧಬ್ರಹ್ಮ ! ( ಇದು ಅಲ್ಲಮಪ್ರಭು ಹೇಳುವ ನಿರ್ಬಯಲು ! ) ಇದು ಸಾಧಕನು ಪರಬ್ರಹ್ಮದಲ್ಲಿ ಲೀನವಾಗುವ ಪರಿ . ಈ ರೀತಿಯಾಗಿ ಬೇಂದ್ರೆಯವರು ಬ್ರಹ್ಮಾಂಡದ ಹಾಗು ಪಿಂಡಾಂಡದ ಉತ್ಕ್ರಾಂತಿಯನ್ನೂ , ಸಾಮರಸ್ಯವನ್ನೂ ಕವನಿಸಿದ್ದಾರೆ . ಬೇಂದ್ರೆಯವರ ಕಲ್ಪನಾ ಸಾಮರ್ಥ್ಯ ಅಪಾರವಾದದ್ದು ; ಅವರ ಪದಕೋಶ ಅನಂತವಾದದ್ದು . ಎಂತಹ ಸರಳ ಕವನದಲ್ಲಿ ಎಂತಹ ಮಹತ್ತತ್ವವನ್ನು ಅವರು ಬರೆಯಬಲ್ಲರು ಎನ್ನುವದನ್ನು ತಿಳಿದಾಗ , ನಮ್ಮಿಂದ ಹೊಮ್ಮುವ ಭಾವ ಇದೊಂದೇ : " ನಮೋ ನಮೋ ವರಕವಿಯೆ , ನಮೋ ನಮೋ ! "
ಅನಿಲ . . . ಸಾರ್ಥಕ ಬದುಕು ಅಂದರೆ ಇದು . . . ನಮ್ಮ ಹಳ್ಳಿಗಳಲ್ಲಿ ಪ್ರತಿ ಮನೆಗಳಲ್ಲಿ ಇಂದಿಗೂ ಇಂಥಹ ಅಜ್ಜ , ಅಜ್ಜಿಯರಿದ್ದಾರೆ . . ಅವರ ಅನುಭವವೇ . . ಅಮೃತ . . ಅವರೊಡನೆಯ ಮಾತುಕತೆ ಒಂದು ಒಳ್ಳೆಯ ಪುಸ್ತಕ ಓದಿದಹಾಗೆ . . ನಿಮ್ಮ ಅಜ್ಜಿಯವರಿಗೆ ನಮಸ್ಕಾರಗಳನ್ನು ತಿಳಿಸಿ . . . ಈ ಲೇಖನದ ಮೂಲಕ ನಮ್ಮ ಹಿರಿಯರನ್ನೂ ನೆನಪಿಸಿದ್ದಕ್ಕೆ ಧನ್ಯವಾದಗಳು . .
ಮಧ್ಯಾಹ್ನ ಸುಮಾರು ೧ . ೩೦ ರ ಹೊತ್ತಿಗೆ ನೆಲಕ್ಕೆ ವಸ್ತುವೊಂದು ಬಿದ್ದ ಶಬ್ದ ಕೇಳಿದ ಫ್ಲಾಟಿನ ವಾಚ್ ಮ್ಯಾನ್ ಸ್ಥಳಕ್ಕೆ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದ ಮಹಿಳೆಯ ಮೃತದೇಹ ಕಂಡುಬಂತು . ಕೂಡಲೇ ಆತ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾನೆ . ಆತ್ಮಹತ್ಯೆ ನಡೆದ ಸಂಧರ್ಭದಲ್ಲಿ ಈಕೆಯ ಪತಿ ಕೆಲಸದಲ್ಲಿದ್ದು ಮಕ್ಕಳು ಶಾಲೆಗೆ ಹೋಗಿದ್ದರು . ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು ಪೊಲೀಸರು ಪತಿ ಮತ್ತು ಮನೆಯ ಅಕ್ಕಪಕ್ಕದವರ ಹಾಗೂ ಈಕೆಯ ಸಂಬಂಧಿಕರ ವಿಚಾರಣೆ ನಡೆಸಿದ್ದಾರೆ .
ತಮ್ಮ ಅಧ್ಯಾಪಕ ವೃತ್ತಿಯನ್ನು ಪ್ರಾರಂಭಿಸಿದ ಸ್ವಾರಸ್ಯಕರ ಸನ್ನಿವೇಶವನ್ನು ಶ್ರೋತೃಗಳ ಜೊತೆ ಹಂಚಿಕೊಂಡರು . ತಾವು ಅಧ್ಯಾಪಕ ವೃತ್ತಿಯನ್ನು ಪ್ರಾಂಭಿಸಿದಾಗ ಆದಿಪುರಾಣವನ್ನು ಭೋದಿಸುವ ಪ್ರಸಂಗ ಒದಗಿ ಬಂತಂತೆ . ತಾವು ಪಾಠ ಹೇಳಬೇಕಿದ್ದ ವಿದ್ಯಾರ್ಥಿಗಳು , ತಾವು ವಿದ್ಯಾರ್ಥಿಯಾಗಿದ್ದಾಗ ತಮ್ಮ ಕಿರಿಯ ವಿದ್ಯಾರ್ಥಿಗಳಂತೆ . ಅವರ ಜೊತೆ ತಮಾಷೆಯಿಂದ ಕಾಲ ಕಳೆಯುತ್ತಿದ್ದವರಿಗೆ , ಈಗ ಆದಿ ಪುರಾಣದ ವೈರಾಗ್ಯದ ಪಾಠ ಹೇಳುವ ಪ್ರಸಂಗ ಒದಗಿದಾಗ ಆ ತರುಣ ವಿದ್ಯಾರ್ಥಿ , ವಿದ್ಯಾರ್ಥಿನಿಯರೆಲ್ಲಾ ಮುಸಿ ಮುಸಿ ನಗುತ್ತಿದ್ದರಂತೆ !
ಬಾಂಕೋವ್ಸ್ ಕಿ ಮತ್ತು ಮೆಹ್ತಾ [ ೪೦ ] ರ ಅಧ್ಯಯನವು ಒಂದೇ ಸೂಜಿಯನ್ನು ಒಬ್ಬರಿಗಿಂತ ಹೆಚ್ಚು ಜನ ಉಪಯೋಗಿಸಿ ಚುಚ್ಚುಮದ್ದು ಪಡೆದಾಗ ಆಗುವಂತೆಯೇ ಕೊಕೇನ್ ಸೆಳೆದುಕೊಳ್ಳಲು ಒಂದೇ ಸೆಳೆಕೊಳವೆಯನ್ನು ಹಲವಾರು ಜನ ಉಪಯೋಗಿಸುವುದರಿಂದ ಹೆಪಟೈಟಿಸ್ C [ ೪೧ ] ನಂತಹ ರಕ್ತ ಸಂಬಂಧಿತ ರೋಗಗಳು ಉಂಟಾಗುತ್ತವೆ ಎನ್ನುತ್ತದೆ .
ವ್ಯಾಕರಣ ದೃಷ್ಟಿಯಿಂದ ನೋಡಿದರೆ ತುಳುಭಾಷೆಯು ಗ್ರಾಂಥಿಕ ಮಟ್ಟದಿಂದ ಗ್ರಾಮೀಣ ಮಟ್ಟಕ್ಕೆ ಇಳಿದಿರುವುದನ್ನು ಕಾಣಬಹುದು . ಬ್ರಾಹ್ಮಣ ತುಳುವಿಗಿಂತ ಸಾಮಾನ್ಯ ತುಳು ಮೇಲ್ಮಟ್ಟದಿಂದ ಕೆಳಮಟ್ಟಕ್ಕೆ ಇಳಿದಿದೆ ಎಂದು ನಿಸ್ಸಂಕೋಚವಾಗಿ ಹೇಳಬಹುದು . ಆಕಾರಯುಕ್ತ , ಣಕಾರಯುಕ್ತ ಪದಗಳು ಲಕಾರಯುಕ್ತ , ನಕಾರಯುಕ್ತಗಳಾಗಿ ಬದಲಾಗಿವೆ . ಈ ಅಕ್ಷರ ಪಲ್ಲಟವು ಕೆಲವು ಸಲ ಅರ್ಥ ವ್ಯತ್ಯಾಸವನ್ನುಂಟು ಮಾಡುತ್ತವೆ . ಉದಾಹರಣೆಗೆ : ಪಲ್ಲಿ ( ಹಲ್ಲಿ ) , ಪಳ್ಳಿ ( ಮಸೀದಿ ) ಪಾಲೆ ( ಹಾಲೆ ) ಪಾಳೆ ( ತೆಂಗಿನ ಹಾಳೆ ) ಪನೆ ( ಏತ ) , ಪಣಿ ( ಕಲ್ಲಿನ ಕ್ವಾರಿ ) ಪನೋಲಿ ( ಮರ ) ಪಣೋಳಿ ( ಹೇಳಬಹುದು ) , ಕಲಿ ( ಯುಗ ) ಕಳಿ ( ಹೆಂಡ ) , ಕಾಲ ( ಸಮಯ ) , ಕಾಳ ( ಕಪ್ಪಗಿನ ) , ಆನಿ ( ಅಂದು ) , ಆಣಿ ( ಮೊಳೆ ) , ಆನೆ ( ಗಜ ) , ಆಣೆ ( ರೂಪಾ ಯಿಯ ಹದಿನಾರಣೆಯ ಒಂದು ಭಾಗ ) , ಕೂಲಿ ( ಕೆಲಸ ) , ಕೂಳಿ ( ಹಲ್ಲು ) ಇತ್ಯಾದಿ ಸಾಮನ್ಯ ತುಳುವಿನ ಕ್ರಿಯಾಪದದಲ್ಲೂ ಳಕಾರ , ಣಕಾರಗಳು , ಲಕಾರ , ನಕಾರಗಳಾಗಿ ಮಾರ್ಪಟ್ಟಿರುವುದನ್ನು ಕಾಣಬಹುದು . ಉದಾಹರಣೆ : ಮಾಳ್ಪುನು ( ಮಾಡುವುದು ) ಎಂಬ ಕ್ರಿಯಾಪದವು ಮಲ್ಪುನು ಎಂದಾಗಿದೆ . ಪಣ್ಪುನು ( ಹೇಳುವುದು ) ಪಣ್‌ಡಿನಿ ( ಹೇಳಿದ್ದು ) ಪನ್ಪುನು , ಪಂಡಿನಿ ಎಂದಾಗಿದೆ . ಮಾಳ್ತ್‌ಕೊಣ್ಪುನು ( ಮಾಡಿಕೊಳ್ಳುವುದು ) ಮಾಳ್ತ್ ಕೋಣ್ಡ್‌ದ್ ( ಮಾಡಿಕೊಂಡು ) ಎಂಬ ಕ್ರಿಯಾರೂಪಗಳು ಮಲ್ತೋನುನು , ಮಲ್ತೊಂದು ಎಂದಾಗಿವೆ . ಕೈಕೊಣ್ಪುನು , ಕೈಕೊಣ್ಡ್‌ದ್ , ಎದುಕೊಣ್ಪುನು , ಎದುಕೊಣ್ಡ್‌ದ್ ಎಂಬ ಪ್ರಯೋಗಗಳು ಕೈಕೊನುನು ಕೈಕೊಂದು , ಎದ್ಕೊನುನು , ಎದ್ಕೊಂದು ಎಂದು ಮಾರ್ಪಟ್ಟಿದೆ . ಕೊಣ್ದು ಪೋಪುನು , ಕೊಣ್ದು ಬರ‍್ಪುನು ಎಂಬ ಕ್ರಿಯಾಪದಗಳು ಕೊನೊಪ್ಪುನು , ಕನಪ್ಪುನು ಎಂದಾಗಿವೆ .
ಮುರಿದ ಮಂಟಪ ಕಮರಿದ ಕನಸು ಹೊಸತನ್ನು ಕಟ್ಟುತ್ತೇನೆಂದು ತನ್ನೊಡಲನು ಭಗ್ನಗೊಳಿಸಿ ಹೊಸತು ಮತ್ತು ಹಳೆಯದರ ಮಧ್ಯೆ ಕಳೆದು ಹೋದ ತ್ರಿಶಂಕು ಮನದ ಅಪರಿಮಿತ ನೋವಿಗೆ ಕವನವೊಂದೇ ಸಾಟಿ ಎಂದು ಪಾಳು ದೇಗುಲದ ನಡುವೆ ಮನೆ ಮಾಡಿ . . .
' ಸ್ವಾಮಿ ಇದೊಂದು ತಿಳಿ ನೀರಿನ ಬುಗ್ಗೆ ಎನ್ನುತ್ತೀರಿ ನೀವು ' ' ಹೌದು ' ' ಆದರೆ ನೀರೆಲ್ಲ ಬಗ್ಗಡ ? ' ' ಸರಿಯಾಗಿ ನೋಡು ಅದು ತಿಳಿನೀರು ' ' ಇಲ್ಲ ಬಗ್ಗಡ ' ' ಇಲ್ಲ ತಿಳಿ ' ಚರ್ಚೆ ಗಂಟೆಗಳವರೆಗೆ ನಡೆಯಿತು . ಜನ ಸೇರಿದರು . ನೀರು ಕದಡಿದೆ ಎಂದೇ ವಾದಿಸಿದರು .
ಎಲ್ಲ ಪತ್ರಿಕೆಗಳಿಗೂ ಒಂದು ಘೋಷವಾಕ್ಯವಿರುತ್ತದೆ ತಾನೆ ? ಉದಾಹರಣೆಗೆ ನಮ್ಮ ಪತ್ರಿಕೆಯ ಘೋಷವಾಕ್ಯ - ' ಸಮಸ್ತ ಕನ್ನಡಿಗರ ಹೆಮ್ಮೆ ' . ದಿ ಟೈಮ್ಸ್ ಆಫ್ ಇಂಡಿಯಾದ್ದು truth prevail . ಎಲ್ಲ ಪತ್ರಿಕೆಗಳಿಗೂ ಇಂಥದ್ದೊಂದು ಇರಲೇಬೇಕು ಎಂಬ ನಿಯಮ ಇಲ್ಲದಿದ್ದರೂ ಇದು ಇರುತ್ತದೆ .
ಮೊದಲ ದಾಳಿಗಳಾದ ಐದು ಗಂಟೆಗಳ ನಂತರ , ಸದ್ದಾಂ ಹುಸೇನ್‌ನದೆಂದು ಗುರುತಿಸಲಾದ ಧ್ವನಿಯೊಂದನ್ನು ಇರಾಕ್‌ನ ಸರ್ಕಾರಿ ರೇಡಿಯೋ ಪ್ರಸಾರಮಾಡಿತು ; ಆ ಧ್ವನಿಯು ಘೋಷಿಸಿದ್ದು ಹೀಗಿತ್ತು : " ಎಲ್ಲಾ ಕದನಗಳ ತಾಯಿಯಾದ ಮಹಾನ್ ಘರ್ಷಣೆಯು ಪ್ರಾರಂಭವಾಗಿದೆ . ಈ ಮಹಾನ್ ನಿರ್ಣಾಯಕ ಹೋರಾಟವು ಶುರುವಾಗುತ್ತಿದ್ದಂತೆ , ವಿಜಯದ ಆರಂಭವು ಸಮೀಪಿಸುತ್ತದೆ . " ಮರುದಿನ , ಎಂಟು ಇರಾಕಿನಿಂದ ಮಾರ್ಪಡಿಸಲ್ಪಟ್ಟ ಸ್ಕಡ್ ಕ್ಷಿಪಣಿಗಳನ್ನು ಇಸ್ರೇಲ್‌ನೊಳಗೆ ಉಡಾಯಿಸುವ ಮೂಲಕ ಇರಾಕ್ ಪ್ರತಿಕ್ರಿಯಿಸಿತು . ಇಸ್ರೇಲ್ ಮೇಲಿನ ಈ ಕ್ಷಿಪಣಿ ದಾಳಿಗಳು ಯುದ್ಧದ ಆರು ವಾರಗಳ ಉದ್ದಕ್ಕೂ ಮುಂದುವರಿಯುವುದಿತ್ತು .
ಡಾನ್ ಬಾಯ್ಲೆ ಅತ್ಯುತ್ತಮ ನಿರ್ದೇಶಕ ಅತ್ಯುತ್ತಮ ಚಿತ್ರ ಪ್ರಶಸ್ತಿ ರಹ್ಮಾನ್ ಅತ್ಯುತ್ತಮ ಸಂಗೀತ , ಹಾಡು ಅತ್ಯುತ್ತಮ ಸಿನೆಮಾಟೋಗ್ರಫಿ , ಚಿತ್ರ ಕತೆ ರಸೂಲ್ ಪೊಕುಟ್ಟಿಗೆ ಧ್ವನಿಗ್ರಹಣ ಅತ್ಯುತ್ತಮ ಚಿತ್ರ ಸಂಕಲನ
@ ಸುಪ್ತದೀಪ್ತಿ . . ಎಷ್ಟು ಜೋರಾಗಿ ಕಾಲು ಎಳಿತಾ ಇದ್ದೀರಿ ? ಒಂದು ಸಲ ಕೆಳಗೆ ಬಿದ್ದೆ . . ಈಗ ಎದ್ದು ಉತ್ತರ ಬರೀತ ಇದ್ದೇನೆ . 1 . ಚಿತ್ರ ನಮ್ಮ ಕಾರ್ಕಳದ ಗೊಮ್ಮಟಬೆಟ್ಟದೆ . 30 ವರ್ಷದ ಹಿಂದೆ ಬೆಟ್ಟದ ಹಿಂಬಾಗ ಹೀಗೆ ಇತ್ತು 2 . ಹಾವ್ದು . . ಹಾರುವ ತಟ್ಟೆ ಹತ್ತಿರ ಬರುವಾಗಲೇ ನನ್ನ ಕೈಯಲ್ಲಿ ಕ್ಯಾಮೆರಾ ರೆಡಿಯಾಗಿತು . 3 . ಕ್ಯಾಮೆರಾದಲ್ಲಿ ಒಂದೇ ರೀಳು ಇತ್ತು ! ! ! 4 . ಆದ್ರೆ ನಾನು ಈಗ ಇದೆ ಗ್ರಹದಲ್ಲಿ ಇದ್ದೇನೆ . . ಹಾಗಾಗಿ ಹಾರುವ ತಟ್ಟೆಯ ಅವಶ್ಯಕತೆ ಇಲ್ಲ . .
ಈ ಇಬ್ಬರ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಈಗಾಗಲೇ ಕಲೆ ಹಾಕಲಾ ಗಿದೆ . ಇವರು ವಂಚನಾ ಜಾಲದೊಂದಿಗೆ ತಮ್ಮ ಅರಿವಿನೊಂದಿಗೆಯೇ ಬಿದ್ದರೇ ಎಂಬುದನ್ನು ತನಿಖೆಗೊಳಪಡಿಸಲಾಗುವುದು . ಇದೇ ರೀತಿ ಏನಾದರೂ ನಕಲಿ ವೀಸಾ ಮೂಲಕ ದಕ್ಷಿಣ ಆಫ್ರಿಕಾಕ್ಕೆ ತಲುಪಿ ಅಲ್ಲಿ ಬಂಧಿಸಲ್ಪಟ್ಟು ಕಾನೂನು ಕ್ರಮ ಎದುರಿಸುತ್ತಿ ದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲಾಗುವುದು .
ಕ್ರಿಕೆಟ್ ಹುಚ್ಚು ಹೆಚ್ಚಾಗುತ್ತ ನಮ್ಮ ಆದಿತ್ಯವಾರದ ಸರ್ಕೀಟು ನಿಧಾನವಾಗಿ ವಿಸ್ತಾರವಾಗುತ್ತ ಬಂದ ಒಂದು ಆದಿತ್ಯವಾರ ಅಪ್ಪ ಕೇಳಿಯೇ ಬಿಟ್ಟರು " ಎಲ್ಲಿಗೆ ಸವಾರಿ ? " ನಾನು ಉಸುರಿದೆ " ಇಲ್ಲೆ ಮಾವಿನಕಟ್ಟೆಗೆ " . ಅಪ್ಪ ಅಪರೂಪಕ್ಕೆಂಬಂತೆ ಗುಡುಗಿದರು " ಸಾಕು ಕ್ರಿಕೆಟ್ , ನೀನೇನೂ ಗವಾಸ್ಕರ್ ಆಗುವುದು ಬೇಡ . ಇಂದೇ ಕೊನೆಯಾಗಬೇಕು " . ಅಪ್ಪನ ಮಾತು ಮೀರದ ಮಗ ನಾನಾಗಿದ್ದೆ . ಮತ್ತೆ ಮುಂದುವರಿಸಲಿಲ್ಲ - ಅಲ್ಲಿಗೆ ಗವಾಸ್ಕರ್ ಒಬ್ಬ ಪ್ರತಿಸ್ಪರ್ಧಿಯನ್ನು ಕಳೆದುಕೊಂಡ ! .
ಕಣ್ಣೊಳಗೆ ರಕ್ತ ಬರಿಸುವ ನೋವುಗಳಿದ್ದರು ಒಳಗೊಳಗೆ ಅಳುತ್ತಾ ಅಳುತ್ತಾ ಇಷ್ಟಗಲ ನಗುನಗುತ್ತಿದ್ದ , ಮಿನುಗುತ್ತಿದ್ದ ಭೂಮಿ ತೂಕದ ಅಮ್ಮಾ . . ನೀನು ಸುಳ್ಳಿಯಲ್ಲವೆ ?
ಕೊನೆಯಲ್ಲಿ ವಂದಾನಾರ್ಪಣೆ ನಡೆದು ಒಂದು ಸುಂದರ ಕಾರ್ಯಕ್ರಮಕ್ಕೆ ಯು . ಎ . ಇ . ಬಂಟರ ಮಿಲನ ಸಾಕ್ಷಿಯಾಯಿತು
ಕಳೆದ ವರ್ಷ ಪ್ರೇಮಕ್ಕ ಮಂಗಳೂರಿನಿಂದ ನಮ್ಮಲ್ಲಿಗೆ ಬಂದಾಗ ಇವಳ ಹತ್ತಿರ " ರಾತ್ರೆ ಬೆಳ್ಗಾತ ಹೊತ್ತಿಗೆ ಗುಡ್ಡೆನೇ ಇಲ್ಲ ಮಾಡಿಬಿಡ್ತ್ರ್ಯ . ಬೆಳ್ಗಾತ ಕಂಡ್ರೆ ಜಾಗೆದು ಗುರ್ತೇ ಸಿಕ್ತಿಲ್ಲೆ , ಹಂಗಾಗಿರ್ತ್ " ಅಂದಿದ್ದರು . ಜೆಸಿಬಿಗೆ ಗುಡ್ಡ , ಕಣಿವೆಗಳನ್ನು ಕಂಡರಾಗುವುದಿಲ್ಲ . ಸಾವಿರಾರು ಜೆಸಿಬಿಗಳು ದಕ್ಷಿಣ ಕನ್ನಡವನ್ನು ಬಯಲು ಸೀಮೆ ಮಾಡಲು ಹಗಲೂ ರಾತ್ರಿ ಶ್ರಮಿಸುತ್ತಿವೆ . ಗುಡ್ಡೆ ತಟ್ಟು ಮಾಡುವುದು ಸೈಟು ಮಾಡಿ ಮಾರುವುದು , ಸೈಟು ಕೊಂಡವರು ನೀರಿಗೆಂದು ಬೋರು ಹಾಕುವುದು . ದಕ್ಷಿಣ ಕನ್ನಡದ ಜೀವ ಇರುವುದೇ ಇಲ್ಲಿನ ಗುಡ್ಡಬೆಟ್ಟಗಳಲ್ಲಿ , ಸುಂದರವಾದ ಕಣಿವೆಗಳಲ್ಲಿ , ಇದನ್ನು ಯಾವ ವಿವೇಚನೆಯೂ ಇಲ್ಲದೆ ತಟ್ಟು ಮಾಡುತ್ತಾ ಹೋಗುತ್ತಿದ್ದೇವೆ ನಾವು . ನಮ್ಮ ಬಿ . ಸಿ . ರೋಡಿನ ಸುತ್ತಮುತ್ತ ಗುಡ್ಡ ಬೆಟ್ಟಗಳು ಧಾರಾಳ . ನಮ್ಮ ಮನೆಯ ಹಿಂದೆಯೇ ಇರುವ ಬೆದ್ರಗುಡ್ಡೆ ನಮ್ಮಿಬ್ಬರ ಸಂಜೆ ತಿರುಗಾಟದ ಅತ್ಯಂತ ನೆಚ್ಚಿನ ಸ್ಥಳ . ಕೇಪಳ ಮಾತ್ರ ಅಲ್ಲ , ನೇರಳೆ , ಕಾಡುಮಾವು , ಅಬ್ಬಳಕ , ಜೀರ್ಕ ಹೀಗೆ ಹಲವು ಹಣ್ಣುಗಳು . ಉಪ್ಪಿನ ಕಾಯಿಗೆ ಕರಂಡೆ . ಅರಮಾರಲು . ಕೊಡಿಕಟ್ಟಕ್ಕೆ ಇಪ್ಪತ್ತೆಂಟು ಬಗೆಯ ಚಿಗುರು . ಯಾವುದೂ ಬೇಡವೆಂದರೆ ಉಸಿರಾಡಲು ವಾಸನೆ ಗೀಸನೆ ಇಲ್ಲದ ಧಾರಾಳ ಶುದ್ಧ ಗಾಳಿ . ಈಗ ನಾಲ್ಕೈದು ವರ್ಷದ ಹಿಂದಿನವರೆಗೂ ಗುಡ್ಡೆಯ ಕೆಳಭಾಗದಲ್ಲಿ ಅದರ ಪಕ್ಕದಲ್ಲೇ ಒಂದು ಕಾಲುದಾರಿ ಇತ್ತು . ಈಗೀಗ ಅದರ ಗುರುತು ಮಸಕಾಗುತ್ತಿದೆ . ಜನ ಕಾಲ್ನಡಿಗೆಯಲ್ಲಿ ಓಡಾಡುವುದು ಕಡಿಮೆಯಾಗುತ್ತಿದೆ . ನನಗೆ ಇನ್ನೂ ಆಶ್ಚರ್ಯವೆಂದರೆ ಮಳೆಗಾಲ ಕಳೆದಾಗ ಈ ಗುಡ್ಡೆಯಲ್ಲಿ ಧಾರಾಳವಾಗಿ ಬೆಳೆದು ನಿಲ್ಲುವ ಹಸಿರು ಹುಲ್ಲು . ಡಿಸೆಂಬರ್ ಜನವರಿ ಹೊತ್ತಿಗೆ ಒಣಗಿ ನಿಂತ ಈ ಹುಲ್ಲಿಗೆ ಬೆಂಕಿ ಹೊತ್ತಿ ಉರಿಯುತ್ತದೆ . ಯಾರು ಯಾಕೆ ಕೊಡುತ್ತಾರೋ ? ನನ್ನ ಮೂಲ ಊರು ಕೊಪ್ಪವೂ ಗುಡ್ಡ ಬೆಟ್ಟಗಳ ಊರೇ . ಆದರೆ ಅಲ್ಲಿನ ಗುಡ್ಡಗಳಲ್ಲಿ ಮೊಣಕಾಲೆತ್ತರಕ್ಕೆ ಹಸಿ ಹುಲ್ಲು ಬೆಳೆಯುವುದಿಲ್ಲ . ನೆಲದಿಂದ ಹುಲ್ಲು ತಲೆ ಎತ್ತಲು ಪುರುಸೊತ್ತಿಲ್ಲ , ಯಾವುದೋ ದನವೋ ಎಮ್ಮೆಯೋ ಬಂದು ಅದನ್ನು ಮೆಂದಾಯಿತು . ಈಗ ದನಗಳನ್ನು ಗುಡ್ಡೆಗೆ ಎಬ್ಬುವ ಪದ್ಧತಿಯೂ ಕಡಿಮೆಯಾಗುತ್ತಿದೆ . ಏನಿದ್ದರೂ ಮನೆಯಲ್ಲಿ ಕಟ್ಟಿ , ಹಿಂಡಿ ಗಿಂಡಿ ಹಾಕಿ ಸಾಕುವುದು . ಅವುಗಳ ಸೆಗಣಿಗೆ ಹೇಲಿನ ವಾಸನೆ . ಬೆದ್ರಗುಡ್ಡೆಯ ನವಿಲುಗಳ ಸಂಗೀತ ದಿನನಿತ್ಯ ನಮ್ಮ ಮನೆಗೆ ಕೇಳುತ್ತದೆ . ತಿರುಗಾಡಲು ಸಂಜೆ ಹೋದರೆ ನವಿಲುಗಳು ನೋಡಲು ಸಿಗುತ್ತವೆ . ಒಂದಿಷ್ಟು ಗರಿ ಆರಿಸಿ ತಂದು ಮನೆಯಲ್ಲೂ ಇಟ್ಟುಕೊಂಡಿದ್ದೆವು . ಬೆಳಗ್ಗೆ ನಮ್ಮ ಮನೆಯ ಸ್ಲಾಬಿನ ಮೇಲೆ ಹೋಗಿ ನಿಂತು ದುರ್ಬೀನಿನಲ್ಲಿ ನೋಡಿದರೆ ಗುಡ್ಡದ ಚಿಕ್ಕ ಒಂದು ಮರದಲ್ಲಿ ಒಂದು ನವಿಲು ಊದ್ದಕ್ಕೆ ಗರಿ ಇಳಿಬಿಟ್ಟುಕೊಂಡು ಕೂತಿರುವುದು ಚಿತ್ರ ಬರೆದಂತೆ ಕಾಣುತ್ತಿತ್ತು . ಅದು ಆ ನವಿಲಿನ ಮೆಚ್ಚಿನ ಜಾಗ ಇರಬೇಕು . ನನಗೆ ನಿತ್ಯವೂ ಅದನ್ನು ನೋಡುವುದೇ ಒಂದು ಕೆಲಸವಾಗಿತ್ತು . ಮೊನ್ನೆ ಮೊನ್ನೆ ಹೋದಾಗ ಕಾಡುಕೋಳಿಯೊಂದು ತನ್ನ ಎರಡು ಮರಿಗಳೊಂದಿಗೆ ಮೇಯುತ್ತಿದ್ದುದನ್ನು ಕಂಡೆ . ಕಳೆದ ವರ್ಷ ಪೊದೆಯಿಂದ ಒಂದು ಮೊಲ ಓಡಿದ್ದನ್ನು ನೋಡಿದ ನೆನಪಿದೆ . ಇನ್ನೂ ಒಂದು ಆಶ್ಚರ್ಯವೆಂದರೆ ಇಷ್ಟು ಚೆಂದದ ಈ ಗುಡ್ಡೆ ಊರಿಗೆ ಇಷ್ಟು ಹತ್ತಿರವೇ ಇದ್ದರೂ ಅಲ್ಲಿಗೆ ತಿರುಗಾಡಲು ಬರುವವರು ಯಾರೂ ಇಲ್ಲ . ಗುಡ್ಡದ ಬೆನ್ನು ಮಲಗಿದ ಬಸವನ ಬೆನ್ನಿನಂತಿದೆ . ಅದರ ಬಾಲದ ಬದಿಯ ತುದಿಯಲ್ಲಿ ಬಂಡೆಗಳಿವೆ . ಆ ಬಂಡೆಯ ಮೇಲೆ ಆದಿತ್ಯವಾರದಂದು ಯಾರಾದರೂ ಹುಡುಗರು ಬಂದು ಕೂರುವುದಿದೆ . ಅವರು ಬಾಟ್ಲಿ ತಂದು ಅಲ್ಲಿ ಕೂರುವುದು ಎಂದು ಇವಳಿಗೆ ಅನುಮಾನ . ಅಲ್ಲಿಂದ ಮುಂದೆ ಅಡ್ಡ ಸಿಗುವ ಒಂದು ಮಣ್ಣಿನ ರಸ್ತೆ ದಾಟಿ ಸ್ವಲ್ಪ ಮುಂದೆ ಹೋದರೆ ಸಣ್ಣ ಸಣ್ಣ ಮರಗಳ ಒಂದು ಗಂಧರ್ವವನವೇ ಇದೆ . ಈ ಸ್ಥಳ ಲಕ್ಷ್ಮೀನಾರಾಯಣ ಆಳ್ವರಿಗೆ ಸೇರಿದ್ದಂತೆ . ಅದಂತೂ ನನ್ನ ಪಾಲಿಗೆ ಯಾವ ಲಾಲ್ ಬಾಗಿಗೂ ಕಡಿಮೆಯಲ್ಲ . ಈ ಸ್ಥಳದ ಸಮೀಪ ಎರಡು ವರ್ಷದಿಂದ ಕಪ್ಪುಕಲ್ಲು ತೆಗೆಯುತ್ತಿದ್ದಾರೆ . ಯಾರೋ ಹೇಳಿದರು ಹತ್ತು ವರ್ಷಕ್ಕೆ ಗುತ್ತಿಗೆ ಆಗಿದೆ ಅಂತ . . . . . . . ಕಳೆದ ವರ್ಷ ನಮ್ಮ ಈ ಬೆದ್ರಗುಡ್ಡೆಯಲ್ಲಿ ಎ ಎಂ ಆರ್ ಕಂಪೆನಿ ಟವರ್ ಗಳನ್ನು ನಿರ್ಮಿಸಿ ಪವರ್ ಲೈನ್ ಎಳೆದಿದೆ . ಅಡ್ಡ ಬಂದ ಮರಗಳು ನೆಲಕ್ಕುರುಳಿವೆ . ಈಗ ನಮ್ಮ ಮನೆಯ ಸ್ಲಾಬಿನ ಮೇಲೆ ನಿಂತರೆ ಗುಡ್ಡಕ್ಕಿಂತ ಪ್ರಮುಖವಾಗಿ ಎರಡು ಟವರ್ ಗಳೇ ಕಾಣುತ್ತವೆ . ಅಥವಾ ನೋಡುವ ನನ್ನ ದೃಷ್ಟಿಯಲ್ಲೇ ಏನಾದರೂ ಐಬು ಇದೆಯೋ ? . ಬೆದ್ರಗುಡ್ಡೆಯಲ್ಲೂ ಕಪ್ಪು ಕಲ್ಲು ಇದೆ . ಇಡೀ ಗುಡ್ಡ ಖಾಸಗಿ ಒಡೆತನದ್ದು . ಊರಿಗೆ ಹತ್ತಿರದಲ್ಲಿದೆ . ಜೆಸಿಬಿಗಳು ಅಲ್ಲೇ ಸುತ್ತ ಓಡಾಡುತ್ತಿವೆ . . ವಾಹನಗಳು ಓಡಾಡುವ ಪೊಳಲಿ ರಸ್ತೆಯ ಬದಿಯಲ್ಲಿ ಜೆಸಿಬಿ ಬೋಣಿ ಮಾಡಿಯಾಗಿದೆ . . . . ಕೋಟಿ ಕೋಟಿ ವರ್ಷಗಳಿಂದ ಇಲ್ಲಿ ನಿಂತಿರಬಹುದಾದ ಈ ಗುಡ್ಡದ ಆಯಸ್ಸು ಇನ್ನೆಷ್ಟು ತಿಂಗಳು ಅಥವಾ ಇನ್ನೆಷ್ಟು ವರ್ಷ ? * * * * * * * ಅಯ್ಯೋ ದೇವರೆ , ನಾನು ಹೇಳಲು ಹೊರಟ ವಿಷಯವೇ ಒಂದು , ಹೇಳಿದ್ದೇ ಒಂದು ಆಗಿಹೋಯಿತು . ಜೆಸಿಬಿಯ ಈ ರಾಪಾಟಿಕೆಯನ್ನು ಬಹಳ ದಿನದಿಂದಲೂ ವಿಷಾದದಿಂದ ನೋಡುತ್ತಲೇ ಇದ್ದೇನೆ . ಈ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯೇ ಇಲ್ಲವೋ ಎಂಬ ರೀತಿಯಲ್ಲಿ ಜೆಸಿಬಿಯಿಂದ ಗುದ್ದಿಸಿ ಮರಗಳನ್ನು ಉರುಳಿಸುವುದು ; ಹಾಗೆ ಬಿದ್ದ ಮರಗಳನ್ನು ಎಷ್ಟು ದಿನ ಬೇಕಾದರೂ ಯಾರ ಹೆದರಿಕೆಯೂ ಇಲ್ಲದೆ ಅಲ್ಲಿಯೇ ಬಿಟ್ಟುಬಿಡುವುದು ಕಂಡು ನನಗೆ ಭಾರೀ ಆಶ್ಚರ್ಯ . ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನನ್ನೊಬ್ಬರು ಆತ್ಮೀಯರನ್ನು ವಿಚಾರಿಸಿದರೆ " ಕರ್ನಾಟಕದಲ್ಲಿ ಒಂದೇ ಒಂದು ಮರವನ್ನೂ ಕಡಿಯುವಂತಿಲ್ಲ . ಕಾನೂನು ತುಂಬಾ ಬಿಗಿಯಾಗಿದೆ " ಎನ್ನುತ್ತಾರೆ . ಇಲ್ಲಿ ನೋಡಿದರೆ ಪ್ರತಿನಿತ್ಯವೂ ಜೆಸಿಬಿ ಮರಗಳನ್ನು ಯಾವ ಎಗ್ಗೂ ಇಲ್ಲದೆ ದೂಡಿ ಬೀಳಿಸಿ ಮುಂದುವರಿಯುತ್ತಿದೆ ! ( ಕಳಲೆ ( ಕಣಿಲೆ ) ಯ ವಿಷಯವೂ ಹೀಗೆಯೇ . ನನಗೆ ತಿಳಿದ ಮಟ್ಟಿಗೆ ಕಳಲೆ / ಬಿದಿರು ಕಡಿಯುವುದು ದೊಡ್ಡ ಅಪರಾಧ . ಬಿದಿರು ಕಡಿದರೆಂಬ ಕಾರಣಕ್ಕೆ ಜೈಲಿಗೆ ಹೋದವರನ್ನೂ ನಾನು ಕಂಡಿದ್ದೇನೆ . ಆದರೆ ನಮ್ಮ ಬಿ . ಸಿ . ರೋಡಿನಲ್ಲಿ ನೋಡಿದರೆ ಜೂನ್ ಜುಲೈ ತಿಂಗಳುಗಳಲ್ಲಿ ಕಳಲೆಯನ್ನು ಹಾಡು ಹಗಲೇ ಅಂಗಡಿಗಳಲ್ಲಿ ಮಾರುತ್ತಿರುತ್ತಾರೆ ! ) ಬಹುಶಃ ಹೀಗಿರಬೇಕು : ಕಾನೂನು ಮರಗಳನ್ನು " ಕಡಿಯುವುದನ್ನು " ನಿಷೇಧಿಸುತ್ತದೆ ಆದರೆ ಜೆಸಿಬಿ ಮರಗಳನ್ನು ಬುಡ ಸಮೇತ ಉರುಳಿಸುವುದು ತಾನೆ , ಹಾಗಾಗಿ ಕಾನೂನು ಅದಕ್ಕೆ ಅನ್ವಯವಾಗುವುದಿಲ್ಲ . ನನ್ನ ಮಿತಿಯಲ್ಲೇ ಆದರೂ , ಏನು ಮದ್ದು ಮಾಡುವುದು ಇದಕ್ಕೆ ? ಎಂಬ ಪ್ರಶ್ನೆ ಕಾಡುತ್ತಲೇ ಇತ್ತು . ಸಾಮಾನ್ಯವಾಗಿ ಹೀಗೆ ಗುಡ್ಡ ಮಟ್ಟ ಮಾಡಿಸುವವರು ಖಾಸಗಿಯವರು . ಅಲ್ಲಿ ಮಧ್ಯೆ ಮೂಗು ತೂರಿಸುವಂತಿಲ್ಲ . ಯಾಕೆಂದರೆ ಇವರ ಪೈಕಿ ಒಬ್ಬ ನನ್ನ ಅಜ್ಜ , ಮತ್ತೊಬ್ಬ ವಿದ್ಯಾಗುರು , ಇನ್ನೊಬ್ಬ ಸೋದರಮಾವ , ಮತ್ತೊಬ್ಬ ಭಾವ . ನನ್ನ ಉದ್ದೇಶ ಎಷ್ಟೇ ಉದಾತ್ತವಾದರೂ , ಹೋರಾಟಕ್ಕಿಳಿಯುವುದು ವ್ಯಾವಹಾರಿಕ ಅಲ್ಲ . ಓ ಮೊನ್ನೆಯೊಂದು ದಿನ ನೋಡುತ್ತೇನೆ , ಉದಯವಾಣಿಯ ಪುರವಣಿಯೊಂದರಲ್ಲಿ ಸುಬ್ರಮಣ್ಯದಲ್ಲಿ ಜ್ಯೋತಿಷ ಸಮ್ಮೇಳನ ನಡೆಯಲಿದೆಯೆಂದೂ ಅದಕ್ಕಾಗಿ ಆರು ಎಕ್ರೆ ವಿಸ್ತಾರದ ಗುಡ್ಡೆಯನ್ನು ಸಪಾಟು ಮಾಡುವ ಕೆಲಸವನ್ನು ಅದೆಷ್ಟೋ ಸಂಖ್ಯೆಯ ಜೆಸಿಬಿಗಳು ಹಗಲಿರುಳೂ ಮಾಡುತ್ತಿವೆಯೆಂದೂ ವರದಿಯಾಗಿತ್ತು . ಈ ವರದಿಯ ಜೊತೆಗೆ ಜೆಸಿಬಿಯೊಂದು ತನ್ನ ಸೊಂಡಿಲಿನಿಂದ ಮರಗಳನ್ನು ದೂಡಿ ನೆಲಕ್ಕುರುಳಿಸುತ್ತಿರುವ ಫೋಟೋ ಮತ್ತು ಇತರ ಫೋಟೋಗಳೂ ಇದ್ದವು . ಕೂಡಲೇ ಸುಬ್ರಮಣ್ಯದ ಅರಣ್ಯ ವಲಯಾಧಿಕಾರಿಗಳಿಗೆ - ಮಾಹಿತಿ ಹಕ್ಕಿನ ಆಡಿಯಲ್ಲಿ - ಪತ್ರಿಕೆಯಲ್ಲಿ ಪ್ರಕಟವಾದ ಫೋಟೋಗಳ ಜೆರಾಕ್ಸ್ ಪ್ರತಿಗಳನ್ನೂ ಇಟ್ಟು , " ದೊಡ್ಡ ಸಂಖ್ಯೆಯಲ್ಲಿ ಮರಗಳು ನಾಶವಾದಂತೆ ಕಾಣುತ್ತಿದೆ . ಈ ಬಗ್ಗೆ ನೀವು ಅನುಮತಿ ಕೊಟ್ಟಿದ್ದೀರಾ , ಕೊಟ್ಟಿದ್ದರೆ ಅದರ ಒಂದು ಪ್ರತಿಯನ್ನು ಕಳಿಸಿಕೊಡಿ " ಎಂದು ಬರೆದೆ . ಅಧಿಕಾರಿ ಕೂಡಲೇ , ನಾನು ಕಳಿಸಿದ್ದ ಪೋಸ್ಟಲ್ ಆರ್ಡರನ್ನು ಹಿಂದೆ ಕಳಿಸಿ , ಉತ್ತರಿಸಿದರು : " ನೀವು ಈ ಮಾಹಿತಿಯನ್ನು ಸುಳ್ಯದಲ್ಲಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು " . ನಾನು ಮರು ಟಪಾಲು ಪುನಃ ನೋಂದಾಯಿತ ಅಂಚೆಯಲ್ಲಿಯೇ ಕಳಿಸಿ ಕಾನೂನು ಏನಿದೆಯೆಂದು ತಿಳಿಸಿದೆ . ಆ ಅಧಿಕಾರಿ ನೊಂದಾಯಿತ ಅಂಚೆಯಲ್ಲಿ ನಾನು ಕಳಿಸಿದ ಪತ್ರವನ್ನು ಸ್ವೀಕರಿಸಿದೆ ತಿರಸ್ಕರಿಸಿಬಿಟ್ಟರು ! ನಾನು ಕೂಡಲೇ ಎಲ್ಲಾ ದಾಖಲೆಗಳನ್ನೂ ಇಟ್ಟು , ಕರ್ನಾಟಕ ಮಾಹಿತಿ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದೆ . ಈ ದೂರಿನಲ್ಲಿ , ನನಗೆ ಖರ್ಚಾಗಿರುವ ಹಣವನ್ನು ಸದ್ರಿ ಅಧಿಕಾರಿಯಿಂದ ಕೊಡಿಸಿಕೊಡಬೇಕೆಂದು ಮನವಿ ಮಾಡಿದ್ದೇನೆ . ಜೊತೆಗೆ ಕಾನೂನನ್ನು ಕಲಿಸಿಕೊಟ್ಟಿರುವುದಕ್ಕಾಗಿ ನನಗೆ ಸೂಕ್ತ ಶುಲ್ಕವನ್ನೂ ಈ ಅಧಿಕಾರಿಯಿಂದ ಕೊಡಿಸಬೇಕೆಂದು ಕೇಳಿಕೊಂಡಿದ್ದೇನೆ . ನೋಡೋಣ ಪ್ರಕರಣ ಏನಾಗುತ್ತದೆ ಎಂದು . ಮಾಹಿತಿ ಹಕ್ಕು ಆಯೋಗಕ್ಕೆ ಸಲ್ಲಿಸಿದ ನನ್ನ ಅಹವಾಲು ಮತ್ತು ದಾಖಲೆಗಳ ಯಥಾಪ್ರತಿಗಳನ್ನು ಸುಬ್ರಮಣ್ಯದ ವಲಯ ಅರಣ್ಯಾಧಿಕಾರಿಗೆ ಸಾಮಾನ್ಯ ಅಂಚೆಯಲ್ಲಿ ಕಳಿಸಿಕೊಟ್ಟಿದ್ದೆ . ಕೂಡಲೇ ಪ್ರತಿಕ್ರಿಯೆ ಬಂದಿದೆ : ಮಾಹಿತಿ ಕೇಳಿ ನಾನು ಸಲ್ಲಿಸಿದ ಅರ್ಜಿಯನ್ನು ಅವರೇ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಕಳಿಸಿಕೊಟ್ಟಿದ್ದಾರಂತೆ . ಪೋಸ್ಟಲ್ ಆರ್ಡರ್ ಗೆ ಏನು ವ್ಯವಸ್ಥೆ ಮಾಡಿದರೋ ತಿಳಿಯಲಿಲ್ಲ . ಅರಣ್ಯ ಇಲಾಖೆ ಮರಗಳನ್ನು ಉರುಳಿಸಲು ಅನುಮತಿ ಕೊಟ್ಟಿದೆಯೆ ಎಂಬುದು ಈ ಪ್ರಕರಣದ ಜೀವಾಳವಷ್ಟೆ . ಹಾಗಾಗಿ ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಮಾಹಿತಿ ಹಕ್ಕಿನಡಿಯಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದೇನೆ . ಪತ್ರ ಅವರಿಗೆ ಮುಟ್ಟಿದೆ . ಉತ್ತರ ಬಂದ ಕೂಡಲೇ ತಿಳಿಸುತ್ತೇನೆ . ಅಶೋಕವರ್ಧನರ ಪ್ರತಿಕ್ರಿಯೆ : ನಿಮ್ಮ ಹಿತ್ತಿಲ ಮದ್ದನ್ನು ಮುದ್ದಾಗಿ ತೋರುತ್ತಾ ಸುಬ್ರಹ್ಮಣ್ಯದಲ್ಲಿ ಜೋಯಿಸರುಗಳು ಪರಿಸರ ಭವಿಷ್ಯವನ್ನು ಹಾಳುಗೆಡಹುವ ಸಮಸ್ಯೆಯ ಸುಳಿಯೊಳಗೆ ಓದುಗರನ್ನು ಅನೌಪಚಾರಿಕವಾಗಿಯೇ ಆದರೆ ಖಚಿತವಾಗಿ ಸಿಕ್ಕಿಸಿದ್ದೀರಿ . ರಾಕ್ಷಸ ಸಾಮರ್ಥ್ಯಕ್ಕೂ ರಕ್ಕಸ ಕ್ರಿಯೆಗೂ ಮಧ್ಯೆ ಕಳೆದುಹೋದ ವಿವೇಚನೆಯನ್ನು ಭೂತಗನ್ನಡಿ ಇಟ್ಟು ತೋರಿದ್ದೀರಿ . ಕೆಲವು ದಿನಗಳ ಹಿಂದೆ ಸುಬ್ರಹ್ಮಣ್ಯದ ಅನಾಮಧೇಯ ದೂರವಾಣಿ ಕರೆಯೊಂದು ಇದೇ ಸಮಸ್ಯೆಯ ಕುರಿತು ನನ್ನಲ್ಲಿನ ಪರಿಸರ ಪ್ರೇಮಿಯನ್ನು ಕ್ರಿಯಾಶೀಲವಾಗಿಸಲು ಪ್ರಯತ್ನಿಸಿತ್ತು . ನನಗಾ ಸ್ಥಳೀಯ ಬೇಜವಾಬ್ದಾರೀ ಶ್ರೀಸಾಮಾನ್ಯನ ಮಟ್ಟದಲ್ಲಿ ನಿಂತದ್ದಕ್ಕೆ ಅಸಮಾಧಾನವಿತ್ತು , ಊರಿನೆಲ್ಲಾ ದುಃಖಕ್ಕೆ ಪರಿಹಾರ ಹುಡುಕುವ ತಾಕತ್ತಿನವ ನಾನಲ್ಲ ಎನ್ನುವ ಬಗ್ಗೆ ಅರಿವೂ ಬೇಸರವೂ ಇತ್ತು . ನಿಮ್ಮ ಬರಹಕ್ಕೆ ಭೇಷ್ , ಭಲೇ ಎನ್ನುವುದರೊಡನೆ ನಿಮ್ಮ ಕ್ರಿಯೆಯ ಭವಿಷ್ಯವೇನು ಎಂಬ ಕುತೂಹಲದಲ್ಲಿರುತ್ತೇನೆ . ಅಶೋಕವರ್ಧನ
ವಕ್ರತುಂಡ ಮಹಾಕಾಯ ಸುರ್ಯಕೋಟಿ ಸಮಪ್ರಭ , ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವಾದಾ
ಗಂಗೂಲಿಯಿನ್ನೂ ಟೀಮಿನ ಒಳಗೇ ಇದ್ದಾಗೊಮ್ಮೆ ಸುರೇಶ್ ಮೇನನ್ , ತಮ್ಮ ಲೇಖನವೊಂದರಲ್ಲಿ ಒಂದು ಕುತೂಹಲಕರ ಅಂಶದ ಕಡೆ ಗಮನ ಸೆಳೆದಿದ್ದರು . ಯಾರಿಗಿಂತ ಯಾರು ಚೆನ್ನಾಗಿ ಆಡುತ್ತಾರೆಂಬ ಅಂಶವನ್ನು ಬದಿಗಿರಿಸಿದರೂ ಗಂಗೂಲಿಗಿಂತಲೂ ದ್ರಾವಿಡ್ ಎಲ್ಲರಿಗೂ ಇಷ್ಟವಾಗುವ ಆಟಗಾರ . ( " ಬೆಂಗಾಲಿಗಳನ್ನು ಹೊರತುಪಡಿಸಿ " ಎಂದೇನು ಮೇನನ್ ಲೇವಡಿ ಮಾಡಿರಲಿಲ್ಲ . ಐ . ಪಿ . ಎಲ್ ಆರಂಭಗೊಳ್ಳುವ ಮುನ್ನ ಪ್ರಕಟವಾದ ಲೇಖನವಿದು ) . ವೈಯಕ್ತಿಕ ರೆಕಾರ್ಡ್ಗಳನ್ನು ಹೊರತುಪಡಿಸಿಯೂ ಜನಪ್ರಿಯ ವ್ಯಕ್ತಿಗಳು ಒಬ್ಬರಿಗಿಂತ ಒಬ್ಬರು ಹೇಗೆ ಹೆಚ್ಚು ಇಷ್ಟವಾಗುತ್ತಾರೆ ಎಂಬ ಸೂಕ್ಷ್ಮ ಪ್ರಶ್ನೆಯೊಂದಿಗೆ ಮೇನನ್ ಲೇಖನ ಮುಗಿಸಿದ್ದರು . ರಾಜ್ ತಮ್ಮ ಸುತ್ತಮುತ್ತಲಿದ್ದ ನಟರನ್ನು , ಕಲಾವಿದರನ್ನು ಮೀರಿ ಆಲ್ರೌಂಡರ್ ಪಟ್ಟ ದಕ್ಕಿಸಿಕೊಂಡದ್ದು ಹೀಗೆ . ಮಿಕ್ಕೆಲ್ಲ ಘಟಾನುಘಟಿಗಳೆಲ್ಲ ಇಷ್ಟದ ಪಟ್ಟಿಯಿಂದ ಕಳಚಿಕೊಂಡರೂ ರಾಜ್ ಮಾತ್ರ ಕೊನೆಯವರೆಗೂ ಇಷ್ಟವಾಗಿಯೇ ಉಳಿದುಕೊಂಡದ್ದಕ್ಕೆ ನಿರ್ದಿಷ್ಟ ಕಾರಣಗಳಿವೆಃ ಸುದ್ದಿಪತ್ರಿಕೆಗಳಿಂದ ಒಂದು ಮರ್ಯಾದೆಯ - ದೂರ ಉಳಿಸಿಕೊಂಡಿದ್ದಾಗಲೂ ರಾಜ್ ನಟನೆಂಬ ವ್ಯಕ್ತಿತ್ವವನ್ನು ಮೀರಿ ಈ ` ಇಷ್ಟವಾಗುವ ' ವ್ಯಕ್ತಿತ್ವ ಪಡೆದುಕೊಂಡದ್ದು ಅವರ ಪ್ರಮುಖ ಸಾಧನೆಗಳಲ್ಲಿ ಒಂದು .
ತಿಕ್ತ ( ಕಹಿ ) ರಸದಲ್ಲಿ ಆಕಾಶ ಮತ್ತು ವಾಯು ತತ್ವಗಳಿವೆ . ಹೊಟ್ಟೆಯಲ್ಲಿ ಜಂತುಹುಳ ನಿವಾರಿಸುತ್ತದೆ . ತಲೆಸುತ್ತು ನಿವಾರಿಸುತ್ತದೆ . ಚರ್ಮವ್ಯಾಧಿಗೆ ಇದು ಉತ್ತಮ . ಅಧಿಕ ಸೇವನೆಯಿಂದ ದೇಹಬಲ ಕಡಿಮೆ , ತೂಕ ಕಡಿಮೆ , ಮಾನಸಿಕ ಅಸಂತೋಲನ ಉಂಟಾಗುತ್ತದೆ . ( ಹಾಗಲಕಾಯಿ ) .
1906ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪಿಸಲ್ಪಟ್ಟ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟ್ , ' ಮುಂಬೈನ ಜೆ . ಜೆ . ಸ್ಕೂಲ್ ಆಫ್ ಆಟ್ಸರ್್ ಮಾದರಿಯಲ್ಲಿ ಈ ಸಂಸ್ಥೆ ಇರಬೇಕು ' ಎಂಬ ಖ್ಯಾತ ರಷ್ಯನ್ ಕಲಾವಿದ ಸ್ವೆಟಸ್ಲಾವ್ ರೋರಿಕ್ ಅವರ ಸಲಹೆಯಂತೆ ಪರಿಷ್ಕರಿಸಲ್ಪಟ್ಟು , 1981 ರಲ್ಲಿ ಚಾಮರಾಜೇಂದ್ರ ದೃಶ್ಯಕಲಾ ಮಹಾವಿದ್ಯಾಲಯವಾಗಿ ಮರುನಾಮಕರಣಗೊಂಡಿತು . 2004ರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ , ಮೈಸೂರು ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡಿರುವ ಕಾವಾದಲ್ಲಿ ಚಿತ್ರಕಲೆ , ಶಿಲ್ಪಕಲೆ , ಗ್ರಾಫಿಕ್ಸ್ , ಅಪ್ಲೈಡ್ ಆರ್ಟ್ಸ್ ಮತ್ತು ಕಲಾ ಇತಿಹಾಸ , ಫೋಟೋಗ್ರಫಿ , ಫೋಟೋ - ಜರ್ನಲಿಸಂ ವಿಭಾಗಗಳಿದ್ದು , ಬ್ಯಾಚುಲರ್ ಮತ್ತು ಮಾಸ್ಟರ್ ಆಫ್ ವಿಜéುಅಲ್ ಆಟ್ಸರ್್ , ಸ್ನಾತಕೋತ್ತರ ಡಿಪ್ಲೊಮ ಕೋಸರ್ುಗಳನ್ನು ನಡೆಸಲಾಗುತ್ತಿದೆ . ಅತ್ಯಂತ ಬೇಡಿಕೆಯುಳ್ಳ ಈ ತರಬೇತಿಗೆ ರಾಜ್ಯದ ಎಲ್ಲೆಡೆಯಿಂದ ಕಲಾ ವಿದ್ಯಾರ್ಥಿಗಳು ಮುಗಿಬೀಳುತ್ತಿದ್ದಾರೆ .
ಹೊಸ ಚಿತ್ರ ಸೇರಿಸುವಾಗ 1 . ಯಾವುದೆ ತಪ್ಪು ಇದ್ದಲ್ಲಿ ಹೊಸ ಚಿತ್ರ ಸೇರಿಸದೆ ತಪ್ಪನ್ನು ತೊರಿಸಿ . 2 . ನಿಮ್ಮ ಸರ್ವರ್ ನಲ್ಲಿ ಜಾಗ ಇದ್ದರ ಪ್ರತಿ ಚಿತ್ರಕ್ಕೆ 2ಎಮ್ . ಬಿ . ಜಾಗ ದೊರಕಿಸಿ . ವಿಸ್ಮಯ ನಗರಿಯ ತಲೆಬರಹ / ಹೆಡರ್ ಇನ್ನೊಂದಿಷ್ಟು ಉತ್ತಮ ಪಡಿಸಬಹುದು .
ಎಲ್ಲರಿಗು ಶರಣು , ನಾ ನೋಡಿಧಾಂಗ ಕರ್ನಾಟಕದಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಬೇಕು ಅನ್ನೋದು ನಮ್ಮ ಎಲ್ಲರಿಗು ಗೊತ್ತಿರೋ ವಿಷ್ಯ . ಅದ್ರ ಇಲ್ಲಿ ನೋಡ್ರಿ ಬ್ಯಾರೆ ರಾಜ್ಯದಿಂದ ಬಾರೋ ಮಂದಿ ನಮ್ಮ ಅನ್ನ ತಿಂದು , ನಮ್ಮ ರಾಜ್ಯದಾಗ ನೆಲಸಿ ನಮ್ಮ ಮಂದಿಮ್ಯಾಗ ದಬ್ಬಾಳಿಕೆ ಮಾಡ್ತಾರಂದ್ರ ಯಾವ ಮನಷ್ಯಾಗ ಇದು . . .
< < ತಿರುಪತಿಯಲ್ಲಿಯೇ ಮದುವೆಯಾಗುವವರು , ಮದುವೆಯಾದ ನಂತರ ತಿಮ್ಮಪ್ಪನ ದರ್ಶನ ಮಾಡದೇ ಕೆಳಗಿಳಿಯುತ್ತಾರೆಯೇ ? > > ನನಗೂ ಇದೇ ಪ್ರಶ್ನೆ ಮೂಡಿ ಕೇಳಿದ್ದಕ್ಕೆ ಅದೆಲ್ಲ ತಲೆಹರಟೆ ಮಾಡಬೇಡ ಎಂದು ಉಪದೇಶಿಸಿದರು . : - )
ಅನುವಾದ ಚೆನ್ನಾಗಿದೆ . . . ಆ ಕವಿತೆ ಬರೆದವರ ಬಗ್ಗೆ ಮಾಹಿತಿ ಮತ್ತು ಮೂಲ ಕವಿತೆಯನ್ನು ಸಾಧ್ಯವಾದರೆ ನೀಡಿ ಹನಿಯವರೆ . . .
ನ್ಯೂಟನ್‌ರು ಬೆಳಕು , ಅಂಶಗಳು ಅಥವಾ ಕಣಗಳಿಂದಾಗಿದ್ದು ಸಾಂದ್ರ ಮಾಧ್ಯಮದ ಮೂಲಕ ರಭಸದಿಂದ ಹಾಯಿಸಿದರೆ ವಕ್ರೀಭವಗೊಳ್ಳುತ್ತವೆ ಎಂಬ ವಾದ ಮಂಡಿಸಿದ್ದರು . ಅವರು ಪ್ರತಿಫಲನದ ಪುನರಾವರ್ತಿತ ನಮೂನೆ / ಮಾದರಿಯನ್ನು ಮತ್ತು ತೆಳು ಪದರ / ಫಿಲ್ಮ್ ( ಆಪ್ಟಿಕ್ಸ್ Bk . II , Props . 12 ) , ಗಳ ಮೂಲಕ ಪ್ರಸರಿತಗೊಳ್ಳುವುದನ್ನು ವಿವರಿಸಲು ಶಬ್ದ ಮಾದರಿಯ ತರಂಗಗಳನ್ನು ಬಳಸುವ ಯೋಚನೆಯ ಅಂಚಿನಲ್ಲಿದ್ದರು , ಆದರೂ ಪ್ರೇರಿತ ಕಣಗಳನ್ನು ಪ್ರತಿಫಲಿಸುವಂತೆ ಅಥವಾ ಪಸರಿಸುವಂತೆ ( Props . 13 ) ಮಾಡುವ ತಮ್ಮ ' ಫಿಟ್ಸ್ ' ಸಿದ್ಧಾಂತವನ್ನು ಉಳಿಸಿಕೊಂಡರು . ನಂತರ ಭೌತವಿಜ್ಞಾನಿಗಳು ಬೆಳಕಿನ ಸಂಪೂರ್ಣವಾಗಿ ತರಂಗಮಾದರಿಯ ವಿವರಣೆಯ ವ್ಯತಿಕರಣ ನಮೂನೆಗಳನ್ನು ಹಾಗೂ ಸಾಮಾನ್ಯ ವಿವರ್ತನೆಯ ಸಂಗತಿಯನ್ನು ವಿವರಿಸಲು ಆದ್ಯತೆ ನೀಡಿದರು . ಇಂದಿನ ಕ್ವಾಂಟಂ ಯಂತ್ರಶಾಸ್ತ್ರದಲ್ಲಿ , ಫೋಟಾನ್‌ಗಳು ಮತ್ತು ತರಂಗ ಕಣದ ಉಭಯತ್ವಗಳು ನ್ಯೂಟನ್‌ರ ಬೆಳಕಿನ ಅರ್ಥೈಸುವಿಕೆಗೆ ಕೇವಲ ಅಲ್ಪ ಪ್ರಮಾಣದ ಹೋಲಿಕೆ ಹೊಂದಿವೆ .
ಗ್ರಾಮ ಪಂಚಾಯ್ತಿಗಳು ಪಕ್ಷ ರಹಿತವಾಗಿರಬೇಕು ಎಂಬ ನಿಯಮ ವಿದೆಯಾದರು ಈಗಾಗಲೆ ಇಲ್ಲಿ ರಾಜಕೀಯ ಹಾಸುಹೊಕ್ಕಾಗಿದೆ . ಗ್ರಾಮ ಪಂಚಾಯ್ತಿ ಚುನಾವಣೆಗಳನ್ನು ಎಲ್ಲ ಪಕ್ಷಗಳು ಪ್ರತಿಷ್ಟೆಯನ್ನಾಗಿ ಸ್ವಿಕರಿಸಿದ್ದರಿಂದ ನೂತನವಾಗಿ ಆಯ್ಕೆಯಾಗಿರುವ ಸದಸ್ಯರ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ . ಅಂತಿಮವಾಗಿ ಯಾವ ಪಕ್ಷ ಎಷ್ಟು ಗ್ರಾಮ ಪಂಚಾಯ್ತಿಗಳನ್ನು ತಮ್ಮ ತಕ್ಕೆಗೆ ಹಾಕಿಕೊಳ್ಳುವುದೋ ಬಹುಶಃ ಇನ್ನೊಂದು ವಾರದಲ್ಲಿ ತಿಳಿಯಲಿದೆ .
2006ರ ಸುಮಾರಿನಲ್ಲಿ ಡಲ್ಲಾಸ್ ಮೆವರಿಕ್ಸ್ ನ ಒಡೆಯ ಮಾರ್ಕ್ ಕ್ಯೂಬನ್ , NBA ಅಧಿಕಾರಿಗಳನ್ನು ನ್ಯಾಯಾಲಯದಲ್ಲಿ ಹಾಗೂ ತಮ್ಮ ಬ್ಲಾಗಿನಲ್ಲಿ ಟೀಕಿಸಿದ್ದಕ್ಕಾಗಿ NBA ಗೆ ದಂಡಕಟ್ಟಬೇಕಾಗಿ ಬಂದಿತ್ತು . [ ೪೧ ]
ನೆಯ ಹಿರಿಯ ಮಗ , ಕಾಲುವೆ ಕೊನೆಯ ರೈತ - ಇಬ್ಬರೂ ಒಂದು ರೀತಿಯಲ್ಲಿ ಸಮಾನ ದುಃಖಿಗಳು . ಹೌದು , ಹಿರಿಯ ಮಗ , ಕೊನೆಯ ರೈತ ಇಬ್ಬರಿಗೂ ಉಳಿದದ್ದನ್ನು ಹಂಚಿಕೊಳ್ಳುವ ಅನಿವಾರ್ಯತೆ . ಒಂದೊಮ್ಮೆ ಉಳಿಯಲಿಲ್ಲವೆಂದರೂ ಸಹಿಸಿಕೊಳ್ಳಬೇಕು . ಕಾಲುವೆಯಲ್ಲಿ ಉದ್ದಕ್ಕೂ ಹರಿದು ಬರುವ ನೀರನ್ನು ಆರಂಭದ ಪ್ರದೇಶದಲ್ಲಿ ಇರುವ ರೈತರು ಹಂಚಿಕೊಂಡು ಬಿಡುತ್ತಾರೆ . ಜತೆಗೆ ಸೋರಿಕೆ , ಕಳ್ಳತನ . ಒಟ್ಟಾರೆ ಅದು ಕೊನೆ ಮುಟ್ಟುವ ವೇಳೆಗೆ ಪಾಲಿಗೆ ಬಂದದ್ದೇ ಪಂಚಾಮೃತ ಎನ್ನುವ ಸ್ಥಿತಿ . ಎಷ್ಟೋ ವೇಳೆ ನೀರು ಕೊನೆ ತಲುಪುವುದೇ ಇಲ್ಲ . ನೀರಿಗೇನು ಭೇದ ; ಅದು ಅನುವಾದೆಡೆಗೆ ಆತುರ ತೋರಿ ನುಗ್ಗುತ್ತದೆ . ಒಂದು ರೀತಿಯಲ್ಲಿ ಬೆಂಗಳೂರಿನ ಸಿಗ್ನಲ್‌ಗಳಲ್ಲಿ ವಾಹನಗಳು ನುಗ್ಗಿದಂತೆ . ಹಸಿರು ದೀಪ ಬೀಳುವುದೇ ತಡ ಹಿಂದೆ ಮುಂದೆ ನೋಡದೇ ಮುನ್ನುಗ್ಗಿ ಹೋಗಿ ಬಿಡುತ್ತಾರೆ ವಾಹನ ಸವಾರರು . ಒಂದೊಮ್ಮೆ ಮುಂದೆಲ್ಲೋ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದರೆ . . . ? ಒಂದೆರಡು ಸೆಕೆಂಡ್ ನಿಂತು ನೋಡುತ್ತಾರೆ . ಇನ್ನು ಮುಂದೆ ಹೋಗುವುದು ಸಾಧ್ಯವಿಲ್ಲ ಎಂದರೆ ಕಾಯುವ ತಾಳ್ಮೆ ಯಾರಲ್ಲೂ ಇರುವುದಿಲ್ಲ . ಅಕ್ಕ - ಪಕ್ಕ , ಚಿಕ್ಕಪುಟ್ಟ ರಸ್ತೆಗಳಲ್ಲಿ ಡೀವಿಯೇಶನ್ ತೆಗೆದುಕೊಳ್ಳುತ್ತಾರೆ . ಅದೂ ಇಲ್ಲ ಎಂದರೆ ಓಣಿ , ಫುಟ್‌ಪಾತ್ ಎಲ್ಲೆಂದರಲ್ಲಿ ವಾಹನ ನುಗ್ಗಿಸಿಕೊಂಡು ಹೊರಟುಬಿಡುವುದೇ . ಒಟ್ಟಾರೆ ಹೋಗುತ್ತಿರಬೇಕು . ಒಂಚೂರೂ ವ್ಯತ್ಯಾಸವಿಲ್ಲ , ಕಾಲುವೆ ನೀರೂ ಹಾಗೆಯೇ ಹರಿಯುತ್ತ ಹೋಗುವಾಗ ಎದುರಿಂದ ಸ್ಪಲ್ಪ ತಡೆ ಹಾಕಿದರೂ ಸಾಕು , ಪಕ್ಕಕ್ಕೆ ನುಗ್ಗುತ್ತದೆ . ಗಮ್ಯ ಹೀಗೆಯೇ , ಇಲ್ಲಿಯೇ ಇರಬೇಕೆಂದೇನೂ ಇಲ್ಲ . ನೀರಿನ ಇಂಥ ಗುಣವನ್ನು ರೈತರೂ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ . ಕಾಲುವೆಗೆ ನೀರು ಬಿಟ್ಟರೆಂದರೆ ಸಾಕು . ಎಲ್ಲಿಗೆ ಬೇಕೆಂದರಲ್ಲಿಗೆ ತಿರುಗಿಸಿಕೊಂಡು ಹೋಗುತ್ತಾರೆ . ಅದು ಅಗತ್ಯವಿದೆಯೋ , ಇಲ್ಲವೋ ಎಂಬುದು ನಂತರದ ಪ್ರಶ್ನೆ . ಮುಂದಿನವರಿಗೂ ಉಳಿಯಲಿ , ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಲಿ ಎಂಬ ಸಮಾಜವಾದ ಇಲ್ಲೆಲ್ಲ ಕೆಲಸಕ್ಕೆ ಬರುವುದಿಲ್ಲ . ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ದಮ್ಮೂರು ರೈತರಿಗೂ ಆದದ್ದು ಇದೇ . ಊರಿನಲ್ಲಿ ಇರುವುದು ಒಂದೇ ಕೆರೆ . ಅದರ ಅಚ್ಚುಕಟ್ಟು ಪ್ರದೇಶ ಒಟ್ಟು ೮೧ ಎಕರೆಗಳು . ಕೆರೆಯಿಂದ ಕಾಲುವೆಗೆ ಬಿಟ್ಟ ನೀರು ಅರ್ಧ ದಾರಿಗೆ ಬರುವಷ್ಟರಲ್ಲೇ ಅರ್ಧ ಹರಿವನ್ನು ಕಳೆದುಕೊಂಡು ಬಿಡುತ್ತಿತ್ತು . ಪುಕ್ಕಟೆ ಸಿಕ್ಕರೆ ನನಗೊಂದು , ನಮ್ಮಪ್ಪನಿಗೊಂದು ಎನ್ನುವ ಹಾಗೆ ಕಾಲುವೆ ಮೇಲ್ಭಾಗದ ರೈತರು ಮನಸ್ಸಿಗೆ ತೋಚಿದಂತೆ ನೀರನ್ನು ಬಳಸುವುದು ಸಾಮಾನ್ಯವಾಗಿತ್ತು . ಅಲ್ಲಿಂದ ಮುಂದೆ ಒಂದಷ್ಟು ಸೋರಿ , ಇನ್ನಷ್ಟು ಆರಿ . . . . ಒಟ್ಟಾರೆ ಕೊನೆಯ ಭಾಗ ತಲುಪುವಷ್ಟರಲ್ಲಿ ರೈತನ ಗಂಟಲು ನೆನೆಸಿಕೊಳ್ಳಲು ನೀರುಳಿದರೆ ಅದು ಪುಣ್ಯ . ಆಡುವಂತಿಲ್ಲ ಅನುಭವಿಸುವಂತಿಲ್ಲ . ದಿನಕ್ಕೊಂದು ಜಗಳ , ವಾರಕ್ಕೊಂದು ಪಂಚಾಯಿತಿ . ಬೀದಿಗೊಂದು ಪಂಗಡ , ಬಜಾರಿಗೊಂದು ಬಡಿದಾಟ . ಊರಿಗೆ ತಂಪೆರೆಯಬೇಕಿದ್ದ ನೀರು ಕೊನೆ ಕೊನೆಗೆ ದ್ವೇಷದ ದಳ್ಳುರಿಯನ್ನು ಹಬ್ಬಿಸಿಬಿಡುತ್ತದೆ . ನಂಬಬೇಕು ನೀವು ; ಎಲ್ಲಕ್ಕೂ ಕಾರಣ ನೀರು . ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಕಾದದ್ದಾಯಿತು , ಕಾಲುವೆ ಕಟ್ಟಿದ್ದಾಯಿತು . ಕೆರೆಯ ಕೊಳೆ ತೆಗೆದದ್ದಾಯಿತು . . . . ಯಾವುದರಿಂದಲೂ ಪ್ರಯೋಜನವಿಲ್ಲ . ಅಂತೂ ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ , ಕಾಲುವೆ ಕೊನೆಗೆ ನೀರು ಬರುವುದಿಲ್ಲ . ಎಷ್ಟು ದಿನ ಅಂತ ಹೀಗೆ ಕಳೆದಾರು ? ಮೇಲಿನ ರೈತರು ಕಣ್ಣೆದುರೇ ಎರಡು ಮೂರು ಬೆಳೆ ತೆಗೆದುಕೊಳ್ಳುತ್ತಿರುವಾಗ ತಮಗೆ ಒಂದನ್ನೂ ದಕ್ಕಿಸಿಕೊಳ್ಳಲಾಗುವುದಿಲ್ಲ ಎಂಬುದು ಜುಗುಪ್ಸೆ ಹುಟ್ಟಿಸದಿದ್ದೀತೆ ? ಹಾಗೆ ಇರುವಾಗಲೇ ಮೂಡಿ ಬಂದದ್ದು ಸಮುದಾಯ ಆಧಾರಿತ ನೀರಾವರಿ ಅಲಿಯಾಸ್ ಬೇಡಿಕೆ ಆಧಾರಿತ ನೀರಾವರಿ ಪದ್ಧತಿ . ಹೆಸರು ಕೇಳಿ ಇದೇನೋ ಭಾರೀ ಯೋಜನೆ ಇರಬೇಕೆಂದು ಭಾವಿಸಬೇಕಿಲ್ಲ . ತುಂಬ ಎಂದರೆ ತುಂಬ ಸರಳ , ಎಲ್ಲರಿಗೂ ಎಲ್ಲ ಕಾಲಕ್ಕೂ ಅಗತ್ಯಕ್ಕನುಗುಣ , ನೀರು ಒದಗಿಸಲು ಎಲ್ಲರೂ ಯೋಚಿಸುವುದೇ ಯೋಜನೆಯ ಹೂರಣ . ಇಲ್ಲಿ ನೀರಿನ ಮೂಲವನ್ನು ಸ್ವಚ್ಛಗೊಳಿಸುವ ಜತೆಗೆ ಕಟ್ಟ ಕಡೆಯ ರೈತನಿಗೂ ಸಮರ್ಥ ಹರಿವನ್ನು ಕಟ್ಟಿಕೊಡುವುದು ಮುಖ್ಯ ಉದ್ದೇಶ . ಜಲಗಾಂವ್‌ನ ಜೈನ್ ಇರಿಗೇಶನ್‌ನ ಮೂಲ ಕಲ್ಪನೆಯ ಯೋಜನೆಯಲ್ಲಿ ಪ್ರಮುಖವಾಗಿ ನಾಲ್ಕು ಅಂಶವನ್ನು ಪರಿಗಣನೆಗೆ ತೆಗೆದುಕೊಳ್ಳಲಾಯಿತು . ಮೊದಲನೆಯದು ನೀರಿನ ಲಭ್ಯತೆಯನ್ನು ಹೆಚ್ಚಿಸುವುದು . ನಂತರ ಅಚ್ಚುಕಟ್ಟಿನ ಎಲ್ಲ ರೈತರಿಗೆ ಸಮ ಪ್ರಮಾಣದ ಅಥವಾ ಅಗತ್ಯಕ್ಕನುಗುಣ ನೀರಿನ ಹಂಚಿಕೆ ಮಾಡುವುದು . ಸಮರ್ಥ ಬಳಕೆಯನ್ನು ಕಾಪಾಡುವುದು . ಕೊನೆಯದಾಗಿ , ಅತ್ಯಂತ ಮುಖ್ಯವಾಗಿ ಸುಸ್ಥಿರತೆಯ ಜತೆಗೆ ವೆಚ್ಚ ಕಡಿಮೆ ಮಾಡುವುದು . ಇದಕ್ಕಾಗಿ ಮೊದಲು ಇಡೀ ಜಲಾನಯನ ಪ್ರದೇಶದ ಸಮೀಕ್ಷೆ ಮಾಡಲಾಯಿತು . ನಂತರ ಆ ಪ್ರದೇಶಕ್ಕೆ ಸರಿ ಹೊಂದುವ ಯೋಜನೆ ರೂಪುಗೊಂಡಿತು . ಸನ್ನಿವೇಶಕ್ಕನುಗುಣವಾಗಿ ತಕ್ಕ ಪಂಪಿಂಗ್ ಮತ್ತು ಗುರುತ್ವಾಕರ್ಷಣೆ ಆಧಾರಿತ ನೀರು ಪೂರೈಕೆ ವ್ಯವಸ್ಥೆಯ ಅನುಷ್ಠಾನಕ್ಕೆ ಮುಂದಾಗಲಾಯಿತು . ದಮ್ಮೂರಿನ ಜಮೀನಿಗೆ ಒಂದಷ್ಟು ದಮ್ಮು ಬಂದದ್ದೇ ಆಗ . ಹರಿ ನೀರಾವರಿ , ಹನಿ ನೀರಾವರಿ ತುಂತುರು ನೀರಾವರಿ ಎಂಬು ಮೂರು ವಿಂಗಡಣೆಯನ್ನು ಮಾಡಿ ಅದಕ್ಕೆ ತಕ್ಕ ಪೈಪ್ ಜೋಡಣೆ ಕಾರ್ಯ ಆರಂಭವಾದಾಗಲೇ ರೈತರಲ್ಲಿ ವಿಶ್ವಾಸ ಮೂಡ ತೊಡಗಿತ್ತು . ಎಲ್ಲಕ್ಕಿಂತ ಹೆಚ್ಚಾಗಿ ಕಾಲುವೆಯಲ್ಲಿ ಆಗುತ್ತಿದ್ದ ನೀರಿನ ಸೋರಿಕೆ ಮತ್ತು ಆವಿಯಾಗುವ ಪ್ರಮಾಣ ಪೈಪ್ ಜಾಲದಲ್ಲಿ ತಕ್ಷಣಕ್ಕೆ ನಿಯಂತ್ರಣಕ್ಕೆ ಬಂತು . ಇದರಿಂದ ಹರಿನೀರಾವರಿಯಲ್ಲಿ ಶೇ ೪೦ರಷ್ಟು ನಷ್ಟ ತಂತಾನೇ ಕಡಿಮೆಯಾಯಿತು . ಅದೇ ರೀತಿ ತುಂತುರು ನೀರಾವರಿಯಲ್ಲಿ ಶೇ . ೩೫ ಹಾಗೂ ಹನಿ ನೀರಾವರಿಯಲ್ಲಿ ಶೇ . ೭೫ರಷ್ಟು ನೀರಿನ ನಷ್ಟವನ್ನು ಕಡಿತಗೊಳಿಸಲು ಸಾಧ್ಯವಾದದ್ದು ಕಡಿಮೆ ಸಾಧನೆಯಲ್ಲ . ಇಷ್ಟಾದದ್ದೇ ಸಹಜವಾಗಿ ನೀರು ಕೊನೆ ಮುಟ್ಟ ತೊಡಗಿತ್ತು . ಈ ಹಂತದಲ್ಲಿ ಊರಿನ ಎಲ್ಲ ರೈತರನ್ನು ಒಗ್ಗೂಡಿಸಿ ನೀರು ಲಭ್ಯತೆ ಹಾಗೂ ಅಗತ್ಯದ ಲೆಕ್ಕ ತೆಗೆಯಲಾಯಿತು . ಜಲದ ಲೆಕ್ಕಪರಿಶೋಧನೆ ಮುಗಿಯುತ್ತಿದ್ದಂತೆಯೇ ಮುಂದಿನ ಬಜೆಟ್ ಸಿದ್ಧವಾಯಿತು . ಒಟ್ಟು ೮೧ ಎಕರೆಯಲ್ಲಿ ೫೫ ಎಕರೆಗೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಲಾಯಿತು . ಉಳಿದ ಜಮೀನಿನಲ್ಲಿ ಬಹುತೇಕ ತುಂತುರು ನೀರಾವರಿಯನ್ನು ಆಯ್ದುಕೊಳ್ಳಲಾಗಿತ್ತು . ಬೆರಳೆಣಿಕೆಯಷ್ಟು ಜಮೀನಿನಲ್ಲಿ ಹರಿ ನೀರಾವರಿಯೂ ಇತ್ತು . ಸಮುದಾಯ ನೀರಾವರಿಯ ಚೊಚ್ಚಲ ಯೋಜನೆ ದಮ್ಮೂರಿನಲ್ಲಿ ಅನುಷ್ಠಾನ ಆಗಿ ಇದೀಗ ನಾಲ್ಕು ವರ್ಷ ಕಳೆದಿದೆ . ಒಂದು ಕ್ಯೂಸೆಕ್ ಸಾಮರ್ಥ್ಯದ ಊರಿನ ಕೆರೆ ಇತ್ತೀಚಿನ ಮೂವತ್ತು ವರ್ಷಗಳಲ್ಲಿ ಎರಡು ಬಾರಿ ಬಿಟ್ಟು ಉಳಿದೆಲ್ಲ ವರ್ಷ ಕೋಡಿ ಬಿದ್ದಿದೆ . ಇಷ್ಟಾಗಿಯೂ ಸಮುದಾಯ ಆಧಾರಿತ ನೀರಾವರಿ ಪರಿಚಯ ಆಗುವ ಮೊದಲು ೪೫ ಎಕರೆಯಷ್ಟು ಮಾತ್ರ ನೀರಾವರಿಗೆ ಒಳಪಟ್ಟಿತ್ತು . ಹೇಗೆ ಮಾಡಿದರೂ ಒಂದಕ್ಕಿಂತ ಹೆಚ್ಚು ಬೆಳೆಯನ್ನು ಪಡೆಯಲು ಆಗುತ್ತಿರಲಿಲ್ಲ . ಕೆಲವು ರೈತರು ಇದಕ್ಕೂ ಪರದಾಡಿದ ಉದಾಹರಣೆಗಳಿತ್ತು . ಇದೀಗ ಅದೇ ಕೆರೆಯಿಂದ ೩ ನೀರಾವರಿ ಆಗುತ್ತಿದೆ . ರೈತರು ಯಾವುದೇ ಗೊಂದಲವಿಲ್ಲದೇ ಮೂರು ಬೆಳೆಯನ್ನು ಪಡೆಯುತ್ತಿದ್ದಾರೆ ಎನ್ನುತ್ತಾರೆ ಜೈನ್ ಇರಿಗೇಶನ್‌ನ ನಿರ್ದೇಶಕರಲ್ಲೊಬ್ಬರಾದ ಅಜಿತ್ ಜೈನ್ . ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅನುಷ್ಠಾನಗೊಂಡ ಯೋಜನೆಗೆ ಒಟ್ಟು ೩೬ ಲಕ್ಷ ರೂ . ಗಳನ್ನು ಆರಂಭಿಕ ವೆಚ್ಚವಾಗಿ ವ್ಯಯಿಸಲಾಗಿದೆ . ಪ್ರಾಯೋಗಿಕ ಮಾದರಿ ಎಂಬ ಕಾರಣಕ್ಕೆ ಎಲ್ಲವನ್ನೂ ಸರಕಾರವೇ ಭರಿಸಿದೆ . ಕೆರೆಯಿಂದ ನೀರು ಪೂರೈಕೆಗೆ ತಲಾ ೨೫ ಎಚ್‌ಪಿಗಳ ಎರಡು ಮೋಟಾರ್‌ಗಳನ್ನು ಅಳವಡಿಸಲಾಗಿದೆ . ಎಲ್ಲಕ್ಕಿಂತ ವಿಶೇಷವೆಂದರೆ ದಮ್ಮೂರಿನಲ್ಲಿ ಅಳವಡಿಸಿರುವ ಕೇಂದ್ರೀಕೃತ ನೀರು ನಿರ್ವಹಣೆ ಪದ್ಧತಿಯದ್ದು . ವೇರಿಯೇಬಲ್ ಫ್ಲೋ ಡಿಸ್‌ಚಾರ್ಜ್ ಸಿಸ್ಟ್‌ಮ್ ( ವಿಎಫ್‌ಡಿ ) ಎಂದು ಗುರುತಿಸಲಾಗುವ ಈ ಹೊಸ ಅನ್ವೇಷಣೆಯಲ್ಲಿ ಪೈಪ್ ಲೈನ್‌ನಲ್ಲಿ ನಿರಂತರ ಹರಿವಿದ್ದಾಗ್ಯೂ ಪ್ರತೀ ರೈತನ ಅಗತ್ಯಕ್ಕೆ ಅನುಗುಣವಾಗಿ ಅಷ್ಟಷ್ಟೇ ನೀರೊದಗಿಸಲು ಸಾಧ್ಯವಾಗುವಂತೆ ವಿಶೇಷ ತಂತ್ರಜ್ಞಾನವನ್ನು ಅಳವಡಿಸಲಾಗಿದೆ . ಕೆರೆಯಿಂದ ಹೊರಬಿಡುವ ನೀರಿನ ಸಮತೋಲನವನ್ನು ಎಲ್ಲ ಕಾಲದಲ್ಲೂ ಕಾಪಾಡುವುದು ಈ ತಂತ್ರಜ್ಞಾನದ ಹೆಗ್ಗಳಿಕೆ . ಪೈಪ್ ಜಾಲಕ್ಕೂ ಕೆರೆಯ ತೂಬಿಗೂ ನಡುವೆ ಒಂದು ವಾಲ್ವ್ ಅಳವಡಿಸಲಾಗಿದ್ದು , ಪ್ರತಿ ಸೆಕೆಂಡಿಗೆ ೩೦ ಲೀಟರ್ ನೀರಿನ ಹೊರ ಹರಿವು ಇರುವಂತೆ ಇದು ನೋಡಿಕೊಳ್ಳುತ್ತದೆ . ನೀರನ್ನು ಹೊರಬಿಟ್ಟಾಗ ಇಷ್ಟು ಹರಿವು ಪೈಪ್ ಜಾಲದಲ್ಲಿ ನಿರಂತರವಾಗಿದ್ದರೂ ಆಯಾ ರೈತನಿಗೆ ಅಗತ್ಯವಿದ್ದಷ್ಟು ನೀರು ಮಾತ್ರ ಹಂಚಿಕೆಯಾಗುವುದು ಗಮನಾರ್ಹ ಸಂಗತಿ . ಸಮುದಾಯ ಆಧಾರಿತ ನೀರು ಪೂರೈಕೆ ಯೋಜನೆಯಲ್ಲಿ ನೀರಿನ ನಷ್ಟ ಕಡಿತ , ಹೆಚ್ಚುವರಿ ಲಭ್ಯತೆ ಹಾಗೂ ಹೆಚ್ಚು ಉತ್ಪನ್ನದಿಂದಾಗಿ ಮೊದಲು ಐದು ವರ್ಷಗಳಲ್ಲೇ ಹೂಡಿಕೆಯ ಎಲ್ಲ ಮೊತ್ತವನ್ನು ಮರಳಿ ಗಳಿಸಲು ಸಾಧ್ಯ ಎಂಬ ವಿಶ್ವಾಸ ವ್ಯಕ್ತಪಡಿಸುವ ಅಜಿತ್ ಜೈನ್ , ಈ ನಿಟ್ಟಿನಲ್ಲಿ ಶೇ . ೯೦ರಷ್ಟು ಸಾಧನೆ ಈಗಾಗಲೇ ಸಾಧ್ಯವಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ . ನಿಜ ಸಮುದಾಯದ ಕಲ್ಪನೆ ಭಾರತೀಯ ಸನ್ನಿವೇಶಕ್ಕೆ ಹೊಸತೇನಲ್ಲ . ಮರೆತು ಹೋಗಿದ್ದ ಸಾಂಪ್ರದಾಯಿಕ ಪದ್ಧತಿಯೊಂದನ್ನು ಜೈನ್ ಸಮೂಹ ಮತ್ತೆ ಹೊಸ ಸ್ವರೂಪದಲ್ಲಿ ನೆನಪು ಮಾಡಿಕೊಟ್ಟಿದೆ . ಕವಿದ ವಿಸ್ಮೃತಿಯನ್ನು ಕಳೆದಿದೆ . ಅದು ಮುಂದುವರಿಯಬೇಕಷ್ಟೆ . ಮೋರ್ ಕ್ರಾಪ್ ಪರ್ ಡ್ರಾಪ್ - ಹನಿ ನೀರಿಗೆ ಹೊರೆ ತೆನೆ . . . ಕೃಷಿಯಲ್ಲಿ ನೀರಿನ ಸಮರ್ಥ ಬಳಕೆಗೊಂದು ಸುಂದರ ಅನ್ವಯಿಕ ವಾಕ್ಯ .
೧೯೯೬ರಲ್ಲೇ ಅನುಮಾನಕ್ಕೆಡೆಯಾಗಿದ್ದ ' ಸಿಮಿ ' ಯನ್ನು ನಿಷೇಧ ಮಾಡಿದ ನಂತರ ವಿವಿಧ ರೂಪಗಳಲ್ಲಿ ತಲೆಯೆತ್ತು ತ್ತಿರುವ ಭಯೋತ್ಪಾದಕ ಸಂಘಟನೆಗಳ ಇತ್ತೀಚಿನ ಅವತಾ ರವೇ ' ಇಂಡಿಯನ್ ಮುಜಾಹಿದೀನ್ ' . ಇದರ ಒಂದು ವೈಶಿಷ್ಟ್ಯವೆಂದರೆ ಇದುವರೆಗೂ ದೇಶದ್ರೋಹಿಗಳು ಬಾಂಬ್ ಸ್ಫೋಟಿಸಿ ಪರಾರಿಯಾಗುತ್ತಿದ್ದರು , ಇಲ್ಲವೇ ತಲೆಮರೆಸಿಕೊಳ್ಳುತ್ತಿದ್ದರು . ಸ್ಫೋಟಕ್ಕೆ ಕಾರಣ ಯಾರು ಎಂಬುದರ ಸುಳಿವೇ ಸಿಗುತ್ತಿರಲಿಲ್ಲ . ಹಾಗಾಗಿ ನಮ್ಮ ಪೊಲೀಸರು ಹಾಗೂ ಗೃಹ ಇಲಾಖೆ ಸಿದ್ಧಸೂತ್ರವೊಂದನ್ನು ಇಟ್ಟುಕೊಂಡಿತ್ತು . ' ಲಷ್ಕರೆ , ಜೈಶೆ ' ಎಂದು ಬಾಯಿಗೆ ಬಂದ ಒಂದು ಹೆಸರು ಹೇಳಿ ಆರೋಪ ಹೊರಿಸಿ ಬಿಡುತ್ತಿತ್ತು . ಅದನ್ನು ಕಾಲಾಂತರದಲ್ಲಿ ಜನರೂ ಮರೆಯುತ್ತಿದ್ದರು , ತನಿಖೆಯಿಂದಲೂ ಏನೂ ಸಾಬೀತಾಗುತ್ತಿರಲಿಲ್ಲ . ಮತ್ತೆ ಬಾಂಬ್ ಸ್ಫೋಟವಾದ ಕೂಡಲೇ ಅದೇ ಹೆಸರು , ಅದೇ ಆರೋಪಗಳನ್ನು ಪುನರುಚ್ಚರಿಸಲಾಗುತ್ತಿತ್ತು . ಆದರೆ ಇತ್ತೀಚೆಗೆ ತಲೆಯೆತ್ತಿರುವ ' ಇಂಡಿಯನ್ ಮುಜಾಹಿದೀನ್ ' ಮಾತ್ರ ತೀರಾ ಭಿನ್ನ ಕಾರ್ಯತಂತ್ರ ಅನುಸರಿಸುತ್ತಿದೆ . ಅದಕ್ಕೆ ಪ್ರಚಾರದ ಗೀಳು ಅಂಟಿಕೊಂಡಿದೆ . ಜನರನ್ನು ಭಯಭೀತಗೊಳಿಸುವ ಉದ್ದೇಶವನ್ನೂ ಹೊಂದಿದೆ . ಹಾಗಾಗಿ ಸ್ಫೋಟ ನಡೆಯುವುದಕ್ಕಿಂತ ಕೆಲವೇ ನಿಮಿಷ , ಸೆಕೆಂಡ್‌ಗಳ ಮೊದಲು ಇ - ಮೇಲ್ ಕಳುಹಿಸಿ ಎಲ್ಲಿ ಬಾಂಬ್ ಸ್ಫೋಟಿಸಲಿದೆ ಎಂಬುದರ ಸುಳಿವು ನೀಡುತ್ತಿತ್ತು . ಸ್ಫೋಟದ ನಂತರ ತಾನೇ ಜವಾಬ್ದಾರ ಎಂದು ಹೇಳಿಕೊಳ್ಳುತ್ತಿತ್ತು . ಹೀಗೆ ಪ್ರಚಾರದ ಹಿಂದೆ ಬಿದ್ದಿರುವ , ಆ ಮೂಲಕ ಜಗತ್ತಿನ ಗಮನ ಸೆಳೆಯಲು ಯತ್ನಿಸುತ್ತಿರುವ ಇಂಡಿಯನ್ ಮುಜಾಹಿದೀನ್ ತನ್ನದೇ ಆದ ಮಾಧ್ಯಮ ಕೇಂದ್ರವನ್ನು ಹೊಂದಿದೆ . ಜುಲೈ ೨೬ರಂದು ನಡೆದ ಅಹಮದಾಬಾದ್ ಸ್ಫೋಟಕ್ಕೆ ಸ್ವಲ್ಪ ಮೊದಲು ಅಂದರೆ ಸಾಯಂಕಾಲ ೬ . ೪೦ಕ್ಕೆ ಇ - ಮೇಲ್ ಕಳುಹಿಸಿದ್ದು ಈ ಮಾಧ್ಯಮ ಕೇಂದ್ರವೇ . ಅಂದು ' alarbi_gujarat @ yahoo . com ' ಎಂಬ ಐಡಿಯಿಂದ ಇ - ಮೇಲನ್ನು ಕಳುಹಿಸಲಾಗಿತ್ತು . ಅದರ ಐಪಿ ಅಡ್ರೆಸ್ " ೨೧೦ . ೨೧೧ . ೧೩೩ . ೨೦೦ " ಅನ್ನು ಬೆನ್ನುಹತ್ತಿ ಹೋದ ಪೊಲೀಸರು ತಲುಪಿದ್ದು ಮುಂಬೈನ ಕೆನೆತ್ ಹೇವುಡ್‌ನ ನಿವಾಸವನ್ನು . ಆದರೆ ಕೆನೆತ್ ಹೇವುಡ್ ಭಯೋತ್ಪಾದಕನೇನೂ ಆಗಿರಲಿಲ್ಲ . ಆತನ ಅಸುರಕ್ಷಿತ " Wi - Fi " ವ್ಯವಸ್ಥೆಯನ್ನು ಬಳಸಿಕೊಂಡು ಭಯೋತ್ಪಾದಕರು ಮೇಲ್ ಕಳುಹಿಸಿದ್ದರು . ಹಾಗಾಗಿ ಪೊಲೀಸರು ಚಳ್ಳೆಹಣ್ಣು ತಿನ್ನಬೇಕಾಯಿತು . ೨೦೦೮ , ಜುಲೈ ೩೧ರಂದು " alarbi_gujarat @ yahoo . com " ಎಂಬ ಐಡಿಯಿಂದ ಮತ್ತೆ ಟೆರರ್ ಇ - ಮೇಲ್ ಬಂತು . ಅದರ ಐಪಿ ಅಡ್ರೆಸ್ಸನ್ನು ಬೆನ್ನತ್ತಿ ಹೋದಾಗ ಬರೋಡಾ ಮೆಡಿಕಲ್ ಕಾಲೇಜಿಗೆ ಬಂದು ತಲುಪಬೇಕಾಯಿತು . ೨೦೦೮ , ಆಗಸ್ಟ್ ೨೩ರಂದು " alarbi . alhindi @ gmail . com " ನಿಂದ ಬಂದ ಮತ್ತೊಂದು ಇ - ಮೇಲ್‌ನ ಐಪಿ ಅಡ್ರೆಸ್ ಹುಡುಕಿಕೊಂಡು ಹೋದಾಗ ಮುಂಬೈನ ಖಾಲ್ಸಾ ಕಾಲೇಜು ಸಿಕ್ಕಿತು . ಅಂದರೆ ಭಯೋತ್ಪಾದಕರು ಯಾರದ್ದೋ " Wi - Fi " ವ್ಯವಸ್ಥೆಯ ಮೂಲಕ ಕದ್ದುಮುಚ್ಚಿ ಇ - ಮೇಲ್ ಮಾಡುತ್ತಿದ್ದರು . ಅದನ್ನು ಪತ್ತೆಹಚ್ಚಲು ಹೆಣಗುತ್ತಿದ್ದ ಗುಜರಾತ್ ಪೊಲೀ ಸರು ಮುಖ ಮಾಡಿದ್ದು ಸನ್ನಿ ವಾಘೇಲಾನತ್ತ . ಅಷ್ಟಕ್ಕೂ ಸಾಫ್ಟ್‌ವೇರ್ ಎಂಜಿನಿಯರ್‌ಗಳಂತಹ ಪ್ರತಿಭಾನ್ವಿತರ ಬುದ್ಧಿಶಕ್ತಿಯನ್ನು ಬಳಸಿಕೊಳ್ಳುತ್ತಿರುವ ಉಗ್ರರನ್ನು ಪತ್ತೆ ಹಚ್ಚುವುದು ಸುಲಭದ ಮಾತಾಗಿರಲಿಲ್ಲ . ಇಂತಹ ಜವಾಬ್ದಾರಿಯನ್ನು ಸವಾಲಾಗಿ ಸ್ವೀಕರಿಸಿದ ಸನ್ನಿ ವಾಘೇಲಾ , ತನ್ನೆಲ್ಲಾ ಜಾಣ್ಮೆಯನ್ನು ಪಣಕ್ಕಿಟ್ಟು ಶೋಧನೆ ಆರಂಭಿಸಿದ . ಭಯೋತ್ಪಾದಕರು ಯಾರದ್ದೋ " Wi - Fi " ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ದಾರಿ ತಪ್ಪಿಸುತ್ತಿದ್ದರೂ Media Access Control ಮೂಲಕ ಅವರು ಇ - ಮೇಲ್ ಕಳುಹಿಸುತ್ತಿದ್ದ ಕಂಪ್ಯೂಟರ್‌ಗಳನ್ನು ಪತ್ತೆಹಚ್ಚುವಲ್ಲಿ ಸನ್ನಿ ಸಫಲನಾದ . ಹಾಗೆ ಆತ ಕಲೆಹಾಕಿದ ಮಾಹಿತಿಯಿಂದಾಗಿಯೇ ಮೊನ್ನೆ ಅಕ್ಟೋಬರ್ ೬ರಂದು ಆಸಿಫ್ ಬಶೀರ್ ಶೇಕ್ , ಮೊಹಮದ್ ಮನ್ಸೂರ್ ಅಸ್ಗರ್ ಪೀರ್‌ಭಾಯ್ , ಮುಬಿನ್ ಖಾದರ್ ಶೇಕ್ , ಮೊಹಮದ್ ಆತಿಕ್ ಮೊಹಮದ್ ಇಕ್ಬಾಲ್ , ದಸ್ತಗಿರ್ ಫಿರೋಝ್ ಮುಜಾವರ್ , ಮೊಹಮದ್ ಅಕ್ಬರ್ ಇಸ್ಮಾಯಿಲ್ , ಅಹಮದ್ ಬಾವಾ ಅಬೂಬಕರ್ ಮುಂತಾದ ೧೫ ಜನರನ್ನು ನಮ್ಮ ಮಂಗಳೂರು , ಬಾಂಬೆ ಹಾಗೂ ಇತರೆಡೆಗಳಲ್ಲಿ ಪೊಲೀಸರು ಬಂಧಿಸಲು ಸಾಧ್ಯವಾಗಿದ್ದು . ಅದರಲ್ಲೂ ಇಂಡಿಯನ್ ಮುಜಾಹಿದೀನ್‌ನ ಮಾಧ್ಯಮ ಕೇಂದ್ರವನ್ನು ನೋಡಿಕೊಳ್ಳುತ್ತಿದ್ದ ಪುಣೆಯ ಮೊಹಮದ್ ಪೀರ್‌ಭಾಯ್ ಹಾಗೂ ಮುಬಿನ್ ಖಾದರ್ ಶೇಕ್‌ನನ್ನು ಬಂಧಿಸಿದ್ದಂತೂ ದೊಡ್ಡ ಸಾಧನೆಯೇ ಸರಿ . ಅದರ ಹೆಗ್ಗಳಿಕೆ ಸನ್ನಿಗೆ ಸಲ್ಲಬೇಕು .
ಬೆ೦ಗಳೂರು : ಗಿರೀಶ್ ಕಾಸರವಳ್ಳಿ ಅವರ 60ನೇ ಹುಟ್ಟುಹಬ್ಬದ ಸ೦ಭ್ರಮ : ಸುಚಿತ್ರಾ ಫಿಲಂ ಸೊಸೈಟಿಯ ರಂಗಮಂದಿರಕ್ಕೆ 1ಕೋಟಿ ಅನುದಾನ : ಕಾಸರವಳ್ಳಿ ಸನ್ಮಾನ ಸಮಾರಂಭದಲ್ಲಿ ಯಡಿಯೂರಪ್ಪ ಘೋಷಣೆ
ಪುತ್ತೂರು : ವಿವಾಹವಾಗಿ ಎರಡು ಮಕ್ಕಳಿರುವ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಕಾರಿನಲ್ಲಿ ಸಾರ್ವಜನಿಕರ ಸಿಕ್ಕಿ ಬಿದ್ದ ಘಟನೆ ಇಲ್ಲಿಗೆ ಸಮೀಪದ ಗೋಳ್ತಮಜಲು ಎಂಬಲ್ಲಿ ನಡೆದಿದೆ . ಪುತ್ತೂರು ತಾಲೂಕಿನ ಸಂಪ್ಯ ನಿವಾಸಿ ವಿವಾಹಿತ ಅಬ್ದುಲ್ ಅಝೀಝ್ ಹಾಗೂ ಕಂಬಳಬೆಟ್ಟು ದರ್ಗಾ ಸಮೀಪದ ನಿವಾಸಿ ವಿವಾಹಿತೆ ಆರಿಫಾ ಎಂಬವರೇ ಸಾರ್ವಜನಿಕರಿಗೆ ಸಿಕ್ಕಿಬಿದ್ದ ಜೋಡಿ .
ಪ್ರೀತಿ - ಪ್ರೇಮ ಅಂತ ಮೋಹದ ಬೆನ್ನತ್ತಿ ಹೊರಡುವ ಕೆಲವರು ಎಲ್ಲರಿಗಿಂತಲೂ ಹೆಚ್ಚಾಗಿ ನಮ್ಮನ್ನು ಪ್ರೀತಿಸುತ್ತಿರುವ ತಾಯಿಯೊಬ್ಬಳು ಇರುತ್ತಾಳೆ ಎನ್ನುವುದನ್ನು ಮರೆತು ಬಿಡುತ್ತಾರೆ . ಜೀವನದಲ್ಲಿ ಜಿಗುಪ್ಸೆಗೊಂಡು ಕೆಲವರು ಕಾಲದಲ್ಲಿ - ಕಾಲವಾಗಿಬಿಡುತ್ತಾರೆ . ಎಲ್ಲಾ ವ್ಯಾಮೋಹಗಳಿಂದ ದೂರ ಬಂದು , ಕೆಲವನ್ನು ಮಾತ್ರ ಆಯ್ದುಕೊಂಡು ಎಷ್ಟು ಬೇಕೊ ಅಷ್ಟು ಅನುಭವಿಸಿ ಇತಿ - ಮಿತಿಯ ಜೀವನ ನಿಜಕ್ಕೂ ಪಾವನ !
ಶನಿವಾರದಂದು ಬೆಳಿಗ್ಗೆ ಎಂದಿನಂತೆ ರಜೆ , ಹೋರಗೆ ಹೋಗಲಾರದ ನನ್ನ ಆಲಸಿತನವನ್ನು ಊರಿಂದ ಕೊಂಡೊಯ್ದ ಕನ್ನಡ ಪುಸ್ತಕಗಳ ನಡುವೆ ಕಳೆಯುವ ನನ್ನ ವೀಕೆಂಡ್ ಶುರುವಾಗಿದ್ದು ಎಚ್ ನಾಗವೇಣಿ ಬರೆದ ' ಗಾಂಧಿ ಬಂದ ' ಪುಸ್ತಕದೊಂದಿಗೆ . ಸ್ವಾತಂತ್ರ್ಯಪೂರ್ವ ಸಮಯದ ದಕ್ಷಿಣ ಕನ್ನಡದ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವ ಕಥೆ , ಆ ಪ್ರದೇಶದ ಜಾತಿಪದ್ಧತಿ , ಆಚಾರ - ವಿಚಾರಗಳ ಹಾಗೂ ವ್ಯಕ್ತಿ - ವಿಚಾರಗಳನ್ನೊಳಗೊಂಡ ಕಥೆ , ಕಥೆಗೆ ಹೋಸ … Continue reading →
[ ಬದಲಾವಣೆ : ಸ್ವಲ್ಪ ' ಅಂತರ್ಜಾಲ ವಿಹಾರ ' ಮಾಡಿದ ನಂತರ ಗೊತ್ತಾಗಿದ್ದು ' ಸಚಿನ್ ' ತ್ರಿವರ್ಣ ಧ್ವಜದ ಕೇಕ್ ಕತ್ತರಿಸಿದ್ದು ಮಾರ್ಚ್ ಹತ್ತು 2007ರಂದು , ಜಮೈಕಾದಲ್ಲಿ . . . [ ಇಲ್ಲಿದೆ ನೋಡಿ ಕೊಂಡಿ ] ]
ಸುನಿಲ್ ಬೈಂದೂರು ಕಳಿಸಿದ ಒಂದು ಮೆಸೇಜು . 2050ರಲ್ಲಿ ಶೆಲ್ ಅಥವಾ ಇಂಡಿಯನ್ ಆಯಿಲ್ ಕಂಪನಿ ಪೆಟ್ರೋಲ್ ಬಗ್ಗೆ ಯಾವ ರೀತಿ ಜಾಹೀರಾತಿನಿಂದ ಗ್ರಾಹಕರನ್ನು ಸೆಳೆಯಬಹುದು ? - ಹತ್ತು ಲೀಟರ್ ಪೆಟ್ರೋಲ್ ತುಂಬಿಸಿಕೊಂಡರೆ ಟಾಟಾ ನ್ಯಾನೋ ಕಾರು ಉಚಿತವಾಗಿ ಪಡೆಯಬಹುದು !
ಅವರೇಳಿದಂತಿವರಾಗಿ , ಇವರೇಳಿದಂತವರಾಗಿ , ಅವರು ಇವರೊಳಗಾಗದೆ , ಕಳೆದು ಹೋಗುವ ಮುನ್ನ ನಾನು ನಾನಾಗಿರಲೇ ? !
ಇದು ಕನ್ನಡಿಗರ ದುರಾದೃಷ್ಟ . ಕಳೆದ ಕೆಲವು ವರುಶಗಳಿಂದ ವಿವಿಧ ಪ್ರಹಸನಗಳಿಗೆ ಸಾಕ್ಷಿಯಾದ ಕರ್ನಾಟಕದ ಜನತೆ ಇನ್ನು ಯಾವುದಕ್ಕೆಲ್ಲಾ ಸಾಕ್ಷಿ ಆಗಬೇಕೋ ಎಂಬುದು ಊಹಿಸಲಸಾಧ್ಯ . ತಮ್ಮ ಮೇಲೆ ಬಂದಂತಹ ಆರೋಪದ ತನಿಖೆಗೆ ಒತ್ತಾಯಿಸಿ ಉಪವಾಸ ಕೂರುವಂತಹ ಪರಿಸ್ಥಿತಿ . ಏನೋ ಮುಖ್ಯಮಂತ್ರಿಗಳ ಸಮಯ ನೆಟ್ಟಗಿಲ್ಲ ಅನ್ಸುತೆ . ತಮ್ಮ ತಂತ್ರಗಾರಿಕೆ ತಮಗೆ ಮುಳುವಾಗುತ್ತಿರುವುದರಿಂದ ಪೇಚಿಗೆ ಸಿಲುಕಿದ್ದಾರೆ . ತನ್ನ ವಿರುಧ್ಧ ಬಂದ ಆರೋಪಗಳಿಗೆ ಪ್ರತಿ ಆರೋಪವನ್ನಸ್ತೆ ಮಾಡಿ ಜನರ ಗಮನ ಬೇರೆಡೆಗೆ ಸೆಳೆಯುವ ಯತ್ನ ಮಾಡುತ್ತಿದ್ದರು . ಆದರೆ ಇತ್ತೀಚಿಗೆ ಎಲ್ಲವು ತಿರುಗುಬಾಣವಾಗಿ ಪರಿಣಮಿಸಿದೆ . ಆಣೆ ಪ್ರಮಾಣದ ಆಹ್ವಾನ , ಅಕ್ರಮ ಸಂಪತ್ತಿನ ಆರೋಪದ ತನಿಖೆ ಆದೇಶಿಸಲು ಹಿಂದೇಟು ಹಾಕುವಂಥಹ ಹೀನಾಯ ಪರಿಸ್ಥಿಥಿ . ಹೀಗಿದ್ದರೂ ಇದನ್ನೆಲ್ಲಾ ನೋಡುತ್ತ ಕೈಕಟ್ಟಿ ಕೂರಬೇಕಾದ ಪರಿಸ್ಥಿತಿ ಇನ್ಯಾರಿಗೂ ಬರದಿರಲಿ ಎಂದು ಪ್ರಾರ್ಥಿಸುವ .
ಅಂದ ಹಾಗೇ ಯಾರಾದ್ರೂ ಆ ಲೇಖನದ ಲಿಂಕ್ ಪೊಸ್ಟ್ ಮಾಡಿ .
ಮನೆ ಒಳಗಡೆ ಕಾಲು ಇಡುತ್ತಿದ್ದಂತೆ ಎದೆ ಬಡಿತ ಯಾಕೋ ಹೆಚ್ಚಾಗಿತ್ತು ಕೈ ಕಾಲು ನಡುಗುತ್ತಿತ್ತು . ಇನ್ನು ನಡೆಯಲು ಆಗದು ಅನ್ನೋ ಮನಸ್ಥಿತಿ ಅಲ್ಲೇ ಕುಳಿತು ಬಿಡಲೇನೋ ಅನ್ನೋ ಅನಿಸಿಕೆ .
ಅಶ್ವಿನಿಯವರೇ , ನಮಸ್ಕಾರ . > > ನನಗೆ ತುಂಬಾ ಆಶ್ಚರ್ಯ , ನಮ್ಮ ಕಡೆ ಹುಡಗನನ್ನ ನೋಡಬೇಕಾದ್ರೆ ಮೊದ್ಲು ವಿಚಾರ್ಸೋದು , ಆತನ ಗುಣ , ನಡುವಳಿಕೆ , ಓದು , ಹಿರಿಯರಿಗೆ ಕೊಡೊ ಗೌರವ , ಮನೆತನ ಇತ್ಯಾದಿ < < ನಿಮ್ಮ ಪ್ರಶ್ನೆ ಸರಿ . ಹಾಗೇಯೇ ನಾನೊ೦ದು ಪ್ರಶ್ನೆ ಕೇಳುತ್ತೇನೆ ! ಉತ್ತರಿಸುವಿರಾ ? ಎಲ್ಲಾ ಸರಿ , ನೀವು ಹೇಳಿದ ಹಾಗೆಯೇ ಮದುವೆಯಾಗಿ ನ೦ತರ ಅವನು ನಿಮ್ಮನ್ನೇ ಪ್ರೀತಿಸದಿದ್ದರೆ ? ಏಕೆ೦ದರೆ ಮೇಲೆ ಹೇಳಿರುವ ಯಾವ ಗುಣಗಳೊ೦ದಿಗೂ ಪ್ರೀತಿಗೆ ಸ೦ಬ೦ಧವೇ ಇಲ್ಲವಲ್ಲ ? ಒಳ್ಳೆಯ ಗುಣ , ನಡುವಳಿಕೆ , ಓದು , ಹಿರಿಯರಿಗೆ ಕೊಡೊ ಗೌರವ , ಮನೆತನ ಇರುವ ಒಬ್ಬ ಗ೦ಡು ಒಳ್ಳೆಯ ಪ್ರೇಮಿಯೂ ಆಗಿರುತ್ತಾನೆ ಎ೦ದು೦ಟೆ ?
ಅವರ ಆಣಿಮುತ್ತುಗಳು ಬಹಳ ಪ್ರಸಿದ್ಧ . ಕೆಲವನ್ನು ನಾವೂ ಕಾಕುವಿನಲ್ಲಿ ಪ್ರಕಟಿಸಿದ್ದೇವೆ . ಮುಂದಿನ ವರ್ಷ ಅವರು ಭಾರತಕ್ಕೆ ಬರುತ್ತಾನಂತೆ . ಆಗ ನಮ್ಮಲ್ಲಿ ಯಾವ ಯಾವ ಶೇರುಗಳ ಭಾಗ್ಯದ ಬಾಗಿಲು ತೆರೆಯಲಿರುವುದೋ ಯಾರು ಬಲ್ಲ ?
ಟಿಮ್ ಜೋನ್ ಪಾಪಣ್ಣ , ಯುವಕ : ಒಬಾಮ ನಮಗೆಲ್ಲಾ ಸ್ಪೂರ್ತಿ . ನಲವತ್ತೇಳು ವರ್ಷದ ವ್ಯಕ್ತಿ ಅಮೇರಿಕಾದಂತಹ ದೇಶದ ಅಧ್ಯಕ್ಷನಾಗಬಹುದಾದರೆ ಇಪ್ಪತ್ನಾಲ್ಕು ವರ್ಷದ ನಾನು ಕನಿಷ್ಟ ಪಕ್ಷ ಕಾರ್ಪೋರೇಷನ್ ಮೇಯರ್ ಆಗುವುದಕ್ಕೆ ಸಾಧ್ಯವಿಲ್ಲವೇ ? ನಮ್ಮ ದೇಶದಲ್ಲಿ ರಾಜಕೀಯ ವ್ಯವಸ್ಥ ಸಂಪೂರ್ಣ ಸರಿಯಾಗಬೇಕು . ಯುವಕರು ದೊಡ್ಡ ದೊಡ್ಡ ರಾಜಕೀಯ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು . ಇಲ್ಲವಾದರೆ ನನ್ನಂತಹ ಎಷ್ಟೋ ಮಂದಿ ಶಕ್ತಿವಂತ , ಕ್ರಾಂತಿಕಾರಿ ಚಿಂತನೆಗಳ , ಬಿಸಿ ರಕ್ತದ , ಅಪ್ರತಿಮ ಬುದ್ಧಿಮತ್ತೆಯ ಯುವಕರು ಕಾಲೇಜು ಯೂನಿಯನ್ನಿನ ಕಾರ್ಯದರ್ಶಿ , ಕ್ರಿಕೆಟ್ ಟೀಮ್ ಮ್ಯಾನೇಜರು ಸ್ಥಾನದ ಚುನಾವಣೆ ಮುಂತಾದವುಗಳಲ್ಲೇ ನಮ್ಮ ಪ್ರತಿಭೆಯನ್ನು ಪೋಲು ಮಾಡಿಕೊಂದುಬಿಡುತ್ತೇವೆ .
ಯಾವುದು ಉತ್ತಮವೆಂದು ನಿರ್ಧರಿಸಿ , ಕೊಂಡಿ ಕಳುಹಿಸಿ . ಎಸ್ . ಎಲ್ ಭೈರಪ್ಪನವರ ಮಾತುಗಳು ೧೫೨ ಎಂ . ಬಿ ಇದೆ . ಗಣೇಶ್ ಮಾತುಗಳು ೬೫ . ೪ ಎಂ . ಬಿ ಇದೆ . ಕೊಂಡಿಯನ್ನು ನನ್ನ ಖಾತೆಗೆ ನೇರವಾಗಿಯೂ ಕಳುಹಿಸಿ .
ಬದುಕೆಂದರೇ ಹೀಗೆಯೇ ಕತ್ತಲೆಯ ಪಯಣ , ಸ್ವಲ್ಪ ಕಾದರೇ ಗೋಚರಿಸಬಹುದು ಬೆಳಕಿನ ಕಿಡಿ .
ಬೆಂಗಳೂರು : ಬೆಂಗಳೂರು - ಮಂಗಳೂರು ಸಂಪರ್ಕ ರಸ್ತೆಯಾಗಿರುವ ಶಿರಾಡಿ ಘಾಟ್ನಲ್ಲಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು , ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ ಎನ್ನುವ ರೀತಿಯಲ್ಲಿ ವಾಹನಿಗರು ಹಿಡಿ ಶಾಪ ಹಾಕುತ್ತಿದ್ದಾರೆ . ಸುಮಾರು 30 ಕಿ . ಮೀ . ಉದ್ದದಲ್ಲಿ ರಸ್ತೆಯನ್ನು ದುರಸ್ತಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸುಮಾರು ರೂ . 115 . 40 ಕೋಟಿ ಅನುದಾನ ನೀಡಿದೆ . ಘಾಟ್ ಪ್ರದೇಶಗಳಲ್ಲಿ ಸುಮಾರು 26 ಕಿ . ಮೀ . ಅಂತರದ ರಸ್ತೆ ಸಂಪೂರ್ಣವಾಗಿ ಕೆಟ್ಟಿರುವುದರಿಂದ ಹೆಚ್ಚಿನ ವಾಹನಿಗರು ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಮತ್ತು ಮಡಿಕೇರಿಯಿಂದ ಮುಂದಕ್ಕೆ ಚಲಿಸಿ ಮಂಗಳೂರು ತಲುಪುತ್ತಿದ್ದಾರೆ . ಬಂದರು , ಸಾರಿಗೆ ಪ್ರಾಧಿಕಾರ ಮತ್ತು ಹೆದ್ದಾರಿ ಪ್ರಾಧಿಕಾರ ಸಚಿವಾಲಯ ಈಗಾಗಲೇ ಕೆಲಸಕ್ಕೆ ತಾಂತ್ರಿಕ ಚಾಲನೆಯನ್ನು ನೀಡಿದೆ .
ನಾ ದಿನದ ಕೆಲಸ ಮುಗಿಸಿ ಆಸ್ಪತ್ರೆ ಮುಟ್ಟಿದೆ . . ಆಗ ಸುಮಾರು ೮ . ೦೦ ಗಂಟೆಯಾಗಿತ್ತು . ಆಸ್ಪತ್ರೆ ಬಾಗಿಲಲ್ಲೆ ಕುಮಾರನ ಅಣ್ಣ ವಿನ್ನು ( ವಿನೋದ್ ) ಸಿಕ್ಕಿದ . . ಅವನಿಂದ ವಿಷಯ ತಿಳಿಯಿತು , ಕುಮಾರ ಪ್ರೀತಿಸುತ್ತಿದ್ದ ಹುಡುಗಿಯ ಮನೆಯಲ್ಲಿ , ಅವನ ಪ್ರೀತಿಯ ವಿಷಯ ಗೊತ್ತಾಯಿತು ಅದಕ್ಕೆ ಇವ ವಿಷ ತಕೊಂಡಿದ್ದಾನೆ ಅಂತ . . " ವಿನ್ನು ಈಗ ಕುಮಾರ ಹೇಗಿದ್ದಾನೆ " ಅಂತ ಕೇಳಿದೆ , " ಇಗ ಒಕೆ , ಅದರೇ ಐ ಸಿ ಯ ನಲ್ಲಿ ಇದ್ದಾನೆ , ನೋಡಲು ಬಿಡುವುದಿಲ್ಲ . "
ಎರಡು ದೋಣಿಮೇಲೆ ಕಾಲಿಟ್ಟಂತೆ ಆಚೆಗೊಂದು ಈಚೆಗೊಂದು ಕಾಲಿಟ್ಟ ಅನುಭವ ಈಗ ನನಗೆ . . ಒಂದುರೀತಿ ನಿರ್ವಾತದಲಿ ಉಸಿರಾಡುವ ಹಾಗೆ . ಹಗಲು - ಇರುಳು ಕಣ್ಣಿಗೆ ನೆಸೆನೆಸೆದು ಉರುಳುತಿವೆ ;
" ಬ್ರಿಟಿಷರ ಆತ್ಮ - ರತಿ ಗುಣದಿಂದಾಗಿ ಅರವನ್ನು ಅವರೇ ನೋಡಿಕೊಂಡಂತೆ ಅವರ ಹೊರಗಿನದನ್ನು ನೋಡಲಾರರು , " ಎಂದಿದ್ದ ಹೋಮ್ಸ್ ಮತ್ತೊಮ್ಮೆ . ಅವರು ನೋಡದೇ ಹೋದಾಗ ಹೊರಗಿನವರೆಲ್ಲ ಅಲ್ಲಿ ಬಂದು ನೆಲೆನಿಂತಿದ್ದು , ಆ ಮಹಿಳಾ ಭಯೋತ್ಪಾದಕಿ ಸಿಸಿಟಿವಿಯ ಕಣ್ತಪ್ಪಿಸಿ ಒಳಬಂದಂತೆ . ಅವರಿನ್ನೂ ಅನ್ಯವನ್ನು ನೋಡಲು ಕಲಿಯದೇ ಇರುವುದರಿಂದಲೇ ಲಂಡನ್ ಕೇಂದ್ರ ಭಾಗಕ್ಕೆ ಹತ್ತು ಕಿಲೊಮೀಟರ್ ಹತ್ತಿರದಲ್ಲಿರುವ ಟೂಟಿಂಗ್ ಬ್ರಾಡ್‌ವೇಯ ಮೂರ್ನಾಲ್ಕು ದಿನಸಿ ಅಂಗಡಿಗಲಲ್ಲಿ ಒಂದೂ ಇಂಗ್ಲೀಷ್ ಅಕ್ಷರವನ್ನೋಳಗೊಳ್ಳದ ಶುದ್ಧ ತಮಿಳು ಬೋರ್ಡ್‌ಗಳು ರಾರಾಜಿಸುತ್ತಿರುವುದು !
ಮುಂದೆ - ಒಳ್ಳೆಯ ಕನ್ನಡಿಗ ಕಲಾವಿದನನ್ನು ಆರಿಸಲು ಅವನಿಗೆ ಹಿಂದಿಯಲ್ಲಿ ಚೆನ್ನಾಗಿ ಹಾಡಲು ಪರೀಕ್ಷೆ ಮಾಡುವುದು ಕಲೆಯ ಕೊಲೆಯೇ ಸರಿ . ಗಣಿತದಲ್ಲಿ ನಿಮಗೆ ಯೋಗ್ಯತೆ ಇದೆಯಾ ಪರೀಕ್ಷಿಸಲು ಸಮಾಜದ ಪರೀಕ್ಷೆ ತೊಗೊಳಲು ಹೇಳುವ ಸಮಾನ ಆಯಿತು ಸಾರ್ ನಿಮ್ಮ ಮಾತು ! ಏಕೆಂದರೆ ಒಂದು ಭಾಷೆಯಲ್ಲಿ ಹಾಡು ಹಾಡಲು ಹಾಡುಗನಿಗೆ ಆ ಭಾಷೆಯ ಮೇಲೆ ಇರಬೇಕಾದ ಭಿಗಿ ಹಿಡಿತ ಎಷ್ಟು ಎಂದು ನಿಮಗೆ ತಿಳಿಯದೇ ?
೨ . ನಿನ್ ಗೆಂಡಿ ಗಟ್ಟಿ ಇತ್ತಂದೇಳಿ ಒರ್ಲುದ್ ಬ್ಯಾಡ , ನಿಧಾನ ಮಾತಾಡ್ , ಇಲ್ಯಾರೂ ಕ್ಯೆಪ್ರ್ ಇಲ್ಲ
ಸ್ವತಂತ್ರ ಆಪರೇಟಿಂಗ್ ಸಿಸ್ಟಮ್ನಲ್ಲಿ ಇರುವ ದೊಡ್ಡಕೊರತೆ ಎಂದರೆ ಅದು ತಂತ್ರಾಂಶದಲ್ಲಿ ಇಲ್ಲ , ಅದು ನಮ್ಮ ವ್ಯವಸ್ಥೆಗಳಲ್ಲಿ ಸೇರಿಸಬಹುದಾದ ಉತ್ತಮ ಗುಣಮಟ್ಟದ ಸ್ವತಂತ್ರ ಕೈಪಿಡಿಗಳು ಆಭಾವವೇ ದೊಡ್ಡ ಕೊರತೆಯಾಗಿದೆ . ದಾಖಲೆ ಸಂಗ್ರಹಣವು ತಂತ್ರಾಂಶ ಕಂತೆಗಳ ಅತ್ಯವಶ್ಯಕ ಭಾಗ : ಒಂದು ಸ್ವತಂತ್ರ ತಂತ್ರಾಂಶ ಕಂತೆಯು [ ಮುಖ್ಯವಾದ ] ಉತ್ತಮ ಗುಣಮಟ್ಟದ ಕೈಪಿಡಿಯೆಂದಿಗೆ ಬರದಿದ್ದರೆ ಅದೊಂದು ದೊಡ್ಡ ಅಂತರವಾಗುತ್ತದೆ . ಎಂದು ನಮ್ಮಲ್ಲಿ ಅಂತಹ ಅಂತಗಳು ಸಾಕಷ್ಟು ಇವೆ .
ಸುರೇಶ್ ಹೆಗಡೆ ಮತ್ತು ಶರ್ಮಾರವರ ಹಣ ತಲುಪಿದೆ . ನಿಮ್ಮ ಕಳಕಳಿಗೆ ಧನ್ಯವಾದಗಳು . ಸ್ಥಳೀಯವಾಗಿ ಕೂಡ ಹಲವರು ಆರ್ಥಿಕ ಸಹಾಯಕ್ಕೆ ಮುಂದಾಗಿದ್ದಾರೆ . ಎಲ್ಲದನ್ನೂ ಸೇರಿಸಿ ಆತನ ಹೆಸರಿನಲ್ಲಿ ಅಕೌಂಟ್ ಮಾಡಿ . ಶಿಕ್ಷಣಕ್ಕೆ ಮಾತ್ರ ಬಳಕೆಯಾಗಬೇಕು ಎನ್ನುವ ರೀತಿಯಲ್ಲಿ ಗೆಳೆಯರೆಲ್ಲಾ ಚಿಂತಿಸುತ್ತಿದ್ದೇವೆ . ಧನ್ಯವಾದಗಳು
< < ಒಂದು ಕಾಲಕ್ಕೆ ( ಸುಮಾರು ೨೫೦೦ - ೧೮೦೦ ವರ್ಷಗಳ ಹಿಂದೆ ) ಆಯುರ್ವೇದವೂ ಆಧುನಿಕ ವೈದ್ಯಶಾಸ್ತ್ರವೇ ಆಗಿತ್ತು > > ಪ್ಯಾರಾ ಬಗ್ಗೆ : ಆ ಕಾಲಕ್ಕೇ ಆಯುರ್ವೇದ ಬೆಳವಣಿಗೆ ನಿಂತಿದ್ದಾಗಿರಬಹುದು . ಯಾಕೆಂದರೆ ಅದೇ ಸಮಯಕ್ಕೆ ಹೊರಗಿನಿಂದ ಬಂದ ಧಾಳಿಕೋರರು ಭಾರತದಾದ್ಯಂತ ತಮ್ಮ ಆಡಳಿತ ಸ್ಥಾಪಿಸಿ ತಮ್ಮ ಮತಗಳ ಹೊರತಾಗಿ ಬೇರೆ ಮತ ಮತ್ತು ಅದರ ಜೊತೆಗಿನ ಎಲ್ಲಾ ಜ್ನಾನವನ್ನು ನಾಶಪಡಿಸಿ , ಪಂಡಿತರುಗಳನ್ನು ಕೊಂದು ರಾಜರುಗಳನ್ನು ಪದಚ್ಯುತಗೊಳಿಸಿ ರಾಣಿಯರನ್ನು ಹೊತ್ತೊಯ್ದು . . ಏನೆಲ್ಲಾ ಮಾಡಿದ್ದರು , ಅವೆಲ್ಲಾ ಇಲ್ಲಿ ಅಪ್ರಸ್ತುತ . ಅನಿವಾರ್ಯ ಕಾರಣಗಳಿಂದ ನಿಂತಿದ್ದುದು ಹೌದಾದರೂ ಅದರಿಂದ ಅಲ್ಲಿವರೆಗಿನ ಸಂಶೋಧನೆಗಳೆಲ್ಲವೂ ತಪ್ಪು ಎಂದು ಸಾಬೀತಾಗುವುದಿಲ್ಲ . ಉದಾ ಕ್ಲಾಸಿಕಲ್ ಮೆಕಾನಿಕ್ಸ್ ನ ನಂತರ ಬಂದದ್ದು ಕ್ವಾಂಟಮ್ ಮೆಕಾನಿಕ್ಸ್ . ಹಾಗಂತ ಕ್ಲಾಸಿಕಲ್ ಮೆಕ್ಯಾನಿಕ್ಸ್ ಎಲ್ಲ ಸುಳ್ಲೇನಲ್ಲ . ಹಾಗಂತ ಮೊದಲಿನದ್ದು ಸರಿ ಎಂದೂ ಸಾಬೀತಾಗಬೇಕಿಲ್ಲ ( ಉದಾ ಭೂಮಿ ದುಂಡಗಿದೆ ಎಂದು ಗೊತ್ತಾದಾಗ ಮೊದಲಿನ ನಂಬಿಕೆ ತಪ್ಪು ಎಂದು ಸಾಬೀತಾಯಿತು ) . ಹಾಗೆಯೇ ಕಬ್ಬಿಣವನ್ನು ಸಾವಿರಾರು ವರ್ಷಗಳ ಹಿಂದೆಯೇ ಕಂಡು ಹಿಡಿದರೂ ಕಬ್ಬಿಣ ಇನ್ನೂ ಕಬ್ಬಿಣವಾಗಿಯೇ ಉಳಿದಿದೆ , ಏಕೆ ಎಂದು ಕೇಳಿದರೆ ಏನು ಹೇಳುವುದು .
ಸ್ಟೆಫನ್ ಆಲಿವರ್ ಫಾಟ್ ಮತ್ತು ಜಾನ್ ಎಫ್ . ಗಿಲ್ಮಾರ್ಟಿನ್ ಜೂ . ಅವರ ಎನ್ ಸೈಕ್ಲೊಪಿಡಿಯಾ ಬ್ರಿಟಾನಿಕಾ ( ೨೦೦೮ ) ರಲ್ಲಿ : " ಮೈಸೂರಿನ ರಾಜ ಹೈದರ ಅಲಿಯು ಯುದ್ದಗಳಿಗಾಗಿಯೇ ರಾಕೆಟ್ ಗಳನ್ನು ಮಹತ್ವಪೂರ್ಣ ಬದಲಾವಣೆಯಂತಹ ಅಭಿವೃದ್ದಿಗೊಳಪಡಿಸಿದ್ದ ; ಇದರಲ್ಲಿ ಬಳಸಿದ ಸಿಲಿಂಡರ್ ಕಬ್ಬಿಣದ ಕವಚದೊಂದಿಗೆ ದಹಿಸುವಪುಡಿಯನ್ನೂ ಬಳಸಿದ್ದ . ಆದರೂ ಕುಟ್ಟಿ ಸಣ್ಣಗೊಳಿಸಿದ ಕಬ್ಬಿಣದ ಕಚ್ಚಾ ಪುಡಿ ಬಳಸಲಾಗಿತ್ತು , ಇದರಲ್ಲಿ ಸ್ಪೋಟಗೊಳ್ಳುವ ಅಗಾಧ ಶಕ್ತಿ ಇತ್ತು , ಅದಲ್ಲದೇ ಕಪ್ಪು ಪುಡಿಯು ಈ ಮೊದಲಿನ ಕಾಗದ ಕಚ್ಚಾ ಸಾಮಾಗ್ರಿಗಳಿಗಿಂತ ಶಕ್ತಿಯುತವಾಗಿತ್ತು . ಹೀಗಾಗಿ ಒಳಭಾಗದಲ್ಲಿ ಹೆಚ್ಚಿನ ಶಕ್ತಿ ತುಂಬಿರುತಿತ್ತು . ಯಾಕೆದರೆ ಜೆಟ್ ನಂತೆ ತಿರುಗಣಿ ಮೂಲಕ ಸಿಡಿಯುವ ಇದು ಅತ್ಯಧಿಕ ಸಾಮರ್ಥ್ಯ ತೋರಿತು . ರಾಕೆಟ್‌ನ ಹೊರಭಾಗವನ್ನು ಚರ್ಮದ ಕಟ್ಟುಗಳಿಂದ ಬಿದಿರಿನ ತುಂಡಿಗೆ ಜೋಡಿಸಲಾಗಿತ್ತು . ಇದರ ಸಿಡಿಯುವ ಸಾಮರ್ಥ್ಯವು ಮೈಲೊಂದರ ಮೂರ್ನಾಲ್ಕಾಂಶದಷ್ಟಿತ್ತು . ( ಅಂದರೆ ಸುಮಾರು ಒಂದು ಕಿ . ಮೀಗಿಂತ ಹೆಚ್ಚು ) ಆದರೆ ಒಂದೊಂದೇ ಘಟಕವಾಗಿ ಈ ರಾಕೆಟ್ ಗಳು ನಿಖರವಾಗಿರಲಿಲ್ಲ , ಆದರೆ ಬಹಳಷ್ಟ ಪ್ರಮಾಣದಲ್ಲಿ ಇವುಗಳನ್ನು ಸಿಡಿಸಿದಾಗ ಕೆಲವು ಚದರುವ ದೋಷಗಳೂ ಕಂಡುಬಂದರೂ ಅವುಗಳನ್ನು ಅಷ್ಟಾಗಿ ಪರಿಗಣಿಸಿರಲಿಲ್ಲ . ಇವುಗಳು ಅಶ್ವಸೈನ್ಯದ ಮೇಲೆ ಪ್ರಯೋಗಿಸಲು ಅನುಕೂಲಕರವಾಗಿದ್ದವು . ಒಣನೆಲದಿಂದ ಇವುಗಳನ್ನು ಹೊತ್ತಿಸಿ ಗಾಳಿಯಲ್ಲಿ ಹಾರಿಸಬಹುದಿತ್ತು . ಹೈದರ್ ಅಲಿಯ ಪುತ್ರ ಟಿಪ್ಪು ಸುಲ್ತಾನ ರಾಕೆಟ್ ಆಯುಧಗಳ ಬಳಕೆಯನ್ನು ಇನ್ನಷ್ಟು ಅಭಿವೃದ್ದಿಪಡಿಸಿದ . ಅದಕ್ಕೆ ಪೂರಕವಾಗಿ ರಾಕೆಟ್ ಪಡೆಯನ್ನು ೧ , ೨೦೦ ರಿಂದ ೫ , ೦೦೦ ದ ವರೆಗೆ ಹೆಚ್ಚಿಸಿದ . ಶ್ರೀರಂಗಪಟ್ಟಣದಲ್ಲಿ ೧೭೯೨ ಮತ್ತು ೧೭೯೯ ರಲ್ಲಿ ನಡೆದ ಯುದ್ದದಲ್ಲಿ ಬ್ರಿಟಿಶ್ ರ ವಿರುದ್ದ ಇವುಗಳನ್ನು ಪರಿಣಾಮಕಾರಿಯಾಗಿ [ ೨೦ ] ಬಳಸಲಾಗಿತ್ತು .
೨ . ಯಾವುದೇ ನಾಡಿನಲ್ಲಿ , ಕಲೆ ಮತ್ತು ಸಂಸ್ಕೃತಿಗಳು ಯಾವ ಒತ್ತಡಗಳಿಂದ ರೂಪಿತವಾಗುತ್ತವೆ ಮತ್ತು ನಿರ್ದೇಶಿತವಾಗುತ್ತವೆ ಎಂಬುದು ಮುಖ್ಯವಾದ ಪ್ರಶ್ನೆ . ವ್ಯಕ್ತಿಗಳ ಸಾಧನೆಯ ಮೂರ್ತ ನೆಲೆಗಳ ಹಿಂದೆ , ಸಾಮಾಜಿಕ ಚಲನವಲನಗಳ ಅಮೂರ್ತ ನೆಲೆಯು ಸದಾ ಜಾಗೃತವಾಗಿರುತ್ತದೆ . ಸಂಸ್ಕೃತಿಯ ಸೃಷ್ಟಿ , ವಿತರಣೆ ಮತ್ತು ಮೌಲ್ಯಮಾಪನಗಳನ್ನು ಯಾವ ವರ್ಗಗಳು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿವೆ ಎನ್ನುವುದು ಬಹಳ ಮುಖ್ಯವಾದ ಸಂಗತಿ . ನಮಗೆ ಕಲಾವಿದರು ಮುಖ್ಯವಾಗಿ , ಕಲೆಯನ್ನು ನಿಯಂತ್ರಿಸುವ ಸಂಗತಿಗಳು ಗೌಣವಾಗಿಬಿಟ್ಟಾಗ , ಮಠಾಧೀಶರುಗಳು , ವಿಜಯಮಲ್ಯರಂತಹವರು , ಜ್ಞ್ಞಾನಪೀಠ ಪ್ರಶಸ್ತಿವಿಜೇತರು , ನಟರ ಬದಲಾಗಿ ವಿಜೃಂಭಿಸುವ ` ` ತಾರೆಯರು " ಇವೆರೆಲ್ಲರ ಸಹಜೀವನವನ್ನು ರೋಮಾಂಚಿತರಾಗಿ ಒಪ್ಪಿಕೊಳ್ಳುತ್ತೇವೆ . ` ಜನಪ್ರಿಯತೆ ' ಯೆಂಬ ಮೃಗಜಲಕ್ಕೂ ಜನಪರತೆಯೆಂಬ ಜೀವಜಲಕ್ಕೂ ಇರುವ ಅಂತರಗಳೇ ಅಳಿಸಿಹೋಗುವ ಸ್ಥಿತಿಯು ಬಹಳ ಅಪಾಯಕಾರಿಯಾದುದು . ಈ ಹಿನ್ನಲೆಯಲ್ಲಿ ನೋಡಿದಾಗ , ಈಗ ಕರ್ನಾಟಕದ ಸಂಸ್ಕೃತಿ ಮತ್ತು ಕಲೆಗಳ ಹೆಸರಿನಲ್ಲಿ , ಕನ್ನಡದ ಹೆಸರಿನಲ್ಲಿ ಇಡೀ ಕರ್ನಾಟಕಕ್ಕೆ ಉಣಬಡಿಸುತ್ತಿರುವ ಸರಕುಗಳ ಉಪಯುಕ್ತತೆ ಮತ್ತು ಗುಣದ ಬಗ್ಗೆ ಯೋಚನೆ ಮಾಡುವ ಸಾಧ್ಯತೆಗಳಾದರೂ ಇವೆಯೇ ? ಹಾಗೆಯೇ ಜಾನಪದ ಕಲೆಗಳ ಬಗಗೆ ಯೋಚನೆ ಮಾಡುವಾಗ , ಕೇವಲ ಗತಕಾಲದ ಪಳೆಯುಳಿಕೆಗಳನ್ನು ಪ್ರದರ್ಶನಕ್ಕೆ ಇಟ್ಟು , ಇಂದು ನಮ್ಮ ನಡುವೆ ದಲಿತಶಿಬಿರಗಳಲ್ಲಿ , ಹೋರಾಟದ ಹಾಡುಗಳಲ್ಲಿ , ರಾಜಕಾರಣದ ವಿರುದ್ಧವಾದ ಭ್ರಮನಿರಸನದಲ್ಲಿ ಮೂಡಿಬರುತ್ತಿರುವ ಜನಪರ ಕಲೆಗಳ ಬಗ್ಗೆ ನಿರ್ಲಕ್ಷ್ಯ ತೋರುವುದೇಕೆ ? ಜಾನಪದವೆನ್ನುವುದು ವರ್ತಮಾನದ ಬದುಕಿನಲ್ಲಿ ಜೀವಂತವಾಗಿರಬೇಕಾದ ಚಲನಶೀಲ ಸಂಗತಿಯಲ್ಲವೇ ? ಇವೆಲ್ಲದರ ಬಗ್ಗೆ ಯೋಚನೆ ಮಾಡುವ ಹೊಣೆಹೊತ್ತ ಜನರೂ ಈ ಜಾಲದ ಭಾಗವೇ ಆಗಿಬಿಟ್ಟರೆ ಮಾಡುವುದೇನು ? ಸನ್ನಿವೇಶದ ಬಗ್ಗೆ ಗಂಭೀರವಾದ ನಿಲುವುಗಳನ್ನು ತೆಗೆದುಕೊಳ್ಳಬಹುದಾದ ಮಾಧ್ಯಮಗಳೂ ಎಲ್ಲವನ್ನೂ ಮನರಂಜನೆಯ ಗರಂ ಮಸಾಲಾ ಆಗಿ ಬದಲಿಸಿಲ್ಲವೇ ? ಸಾಹಿತ್ಯ ಸಮ್ಮೇಳನದ , ವಿವಾದಗಳನ್ನು ಬದಿಗಿರಿಸಿ ನೋಡಿದಾಗಲೂ ಅದು ಜನದ ಹಣದ ದುರ್ವ್ಯಯವಲ್ಲವೇ ? ಲೈಮ್‌ಲೈಟ್ ಕೆಳಗೆ ಬರುವ ಪ್ರತಿಯೊಬ್ಬರನ್ನೂ ಅವಿಮರ್ಶಕವಾಗಿ ವೈಭವೀಕರಿಸುವುದರ ಹಿಂದೆ ಇರುವ ಹುನ್ನಾರಗಳೇನು ? ನಾನು ಕೇವಲ ನೈತಿಕವಾದ , ಭ್ರಷ್ಟಾಚಾರ ವಿರೋಧಿಯಾದ ಮಡಿನೆಲೆಯಲ್ಲಿ ನಿಂತು ಮಾತನಾಡುತ್ತಿಲ್ಲ . ಬದಲಾಗಿ , ನಾಡಿನ ನಿಜವಾದ ಹಿತಾಸಕ್ತಿಗಳಿಗೂ ಆಸಕ್ತಹಿತಗಳಿಂದ ಘೋಷಿತವಾದ ಹಿತಾಸಕ್ತಿಗಳಿಗೂ ಇರುವ ವ್ಯತ್ಯಾಸದ ಬಗ್ಗೆ ನನ್ನ ಕಾಳಜಿ ಇದೆ . ಭಾಷಿಕವೆಂದು ಹೇಳಲಾದ ಪ್ರಗತಿಗೂ ಸಾಮುದಾಯಿಕವಾದ ಪ್ರಗತಿಗೂ ಕಂದರಗಳು ಏರ್ಪಟ್ಟಾಗ ನಾವು ಕಟ್ಟೆಚ್ಚರವನ್ನು ತಳೆಯಬೇಕಾಗುತ್ತದೆ . ಇಂತಹ ಸನ್ನಿವೇಶದಲ್ಲಿ ಒಂದು ಬಗೆಯ ಭಾಷೆಯ ಮೇಲೆ ಪ್ರಭುತ್ವ ಪಡೆದುಕೊಂಡ ಸಾಹಿತಿಗಳು , ಉಳಿದವರೆಲ್ಲರ ಪರವಾಗಿ , ಅಂತೆಯೇ ಸೂರ್ಯನ ಕೆಳಗಿರುವ ಎಲ್ಲ ವಿಷಯಗಳ ಬಗ್ಗೆ , ಮಾತನಾಡಲು ಹಕ್ಕುಪತ್ರ ಪಡೆದವರಂತೆ ವರ್ತಿಸುವುದು ಬಹಳ ಅಪಾಯಕಾರಿಯೆಂದೇ ನನ್ನ ತಿಳಿವಳಿಕೆ . ಹೀಗೆ ಆಗಲು , ಭಾಷೆಯ ಸ್ವರೂಪ ಮತ್ತು ಕಲಾತ್ಮಕತೆಗಳ ಬಗ್ಗೆ ಇರುವ ವೈಭವೀಕೃತವಾದ ನಿಲುವುಗಳೇ ಕಾರಣ .
೧ . ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಹಾಗೂ ರಾಜ್ಯದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಂದ ಜನವರಿ ೨೦ ರಂದು ಸಂಜೆ ೪ . ೦೦ ಗಂಟೆಗೆ ನಗರದ ಕೋರಮಂಗಲದ ಕೆ . ಎಸ್ . ಆರ್ . ಪಿ . ಕ್ರೀಡಾಂಗಣದಲ್ಲಿ ನಡೆಯಲಿರುವ ೨೦೦೯ನೇ ಸಾಲಿನ ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾ ಕೂಟದ ಸಮಾರೋಪ ಸಮಾರಂಭದಲ್ಲಿ ಗೃಹ ಮತ್ತು ಮುಜರಾಯಿ ಸಚಿವ ಡಾ ವಿ . ಎಸ್ . ಆಚಾರ್ಯ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ . ಶ್ರೀಮತಿ ಶಾಂತ ವಿ . ಎಸ್ . ಆಚಾರ್ಯ ಅವರು ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ .
ಮೇ ತಿಂಗಳ ಮೊದಲ ವಾರದಲ್ಲಿ ವಿಶ್ವದ ಕುಖ್ಯಾತ ಭಯೋತ್ಪಾದಕ ಎಂದು ಕರೆಯಲ್ಪಡುವ ಬಿನ್ ಲಾದೆನ್ ನನ್ನು ಅಮೇರಿಕಾ ಪಾಕಿಸ್ತಾನದ ಸೇನಾ ನಗರ ( garrison town ) ಅಬೊಟ್ಟಬಾದ್ ನಲ್ಲಿ ವಧಿಸಿ ಆತನ ಶವವನ್ನು ಅರಬ್ಬೀ ಸಮುದ್ರಕ್ಕೆ ಎಸೆದು ತನ್ನ ತಂಟೆಗೆ ಬಂದವರು ಪ್ರಪಂಚದ ಯಾವುದೇ ಮೂಲೆಯಲ್ಲಿ ಅಡಗಿದ್ದರೂ ಬಲಿ ಹಾಕುವೆವು ಎನ್ನುವ ಸ್ಪಷ್ಟ ಸಂದೇಶವನ್ನು ವಿಶ್ವಕ್ಕೆ ರವಾನಿಸಿತು . ಈ ವಧೆಯೊಂದಿಗೆ ಅಮೆರಿಕನ್ನರು ನಿರಾಳ ಭಾವ ( sense of closure ) ಅನುಭವಿಸಿ ಖುಷಿ ಪಟ್ಟರು . ಬಿನ್ ಲಾದೆನ್ ನನ್ನು ಬಲಿ ಹಾಕುವ ಕಾರ್ಯಾಚರಣೆಯ ಉಸ್ತುವಾರಿಯನ್ನು ಅಲ್ಲಿನ ಅಧ್ಯಕ್ಷ ಬ್ಯಾರಕ್ ಒಬಾಮಾ ಖುದ್ದು ವಹಿಸಿದ್ದರು ಅವರೇ ಖುದ್ದಾಗಿ ಹೇಳಿದ್ದರು . ಅವರ ವೈಯಕ್ತಿಕ ನಿರ್ದೇಶನದ ಮೇಲೆ ನಾವಿಕ ಸೇನೆಯ ವಿಶೇಷ ಪಡೆಯ ' ಸೀಲ್ - ೬ ' ಕಮಾಂಡೋಗಳು ಈ ಸಾಹಸೀ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ತಿ ಗೊಳಿಸಿದರು . ನೀರವ ರಾತ್ರಿಯಲ್ಲಿ ಸುಮಾರು ನಾಲ್ಕು ಘಂಟೆಗಳ ಕಾಲ ನಡೆದ ಕಾರ್ಯಾಚರಣೆ ಯನ್ನು ಅಮೆರಿಕೆಯ ಅಧ್ಯಕ್ಷ , ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಮತ್ತು ಮೂರ್ನಾಲ್ಕು ಇತರೆ ಹಿರಿಯ ಅಧಿಕಾರಿಗಳು ಶ್ವೇತ ಭವನದ situation room ( ಪರಿಸ್ಥಿತಿ ಕೋಣೆ ? ) ನಿಂದ ವೀಕ್ಷಿಸಿದರು . ಈ ಕೋಣೆಯನ್ನು ಅತ್ಯಂತ ಗಂಭೀರ , ದೇಶದ ಭದ್ರತಾ ಸಂದರ್ಭಗಳಲ್ಲಿ ಉಪಯೋಗಿಸುತ್ತಾರೆ . ೧೯೬೧ ರಲ್ಲಿ ಜಾನ್ ಎಫ್ ಕೆನಡಿ ಕಾಲದಲ್ಲಿ ಈ ಕೋಣೆಯನ್ನು ನಿರ್ಮಿಸಲಾಯಿತು .
ಕನ್ನಡ ಕನ್ನಡ ಎಂದು ಬೊಬ್ಬೆ ಹೊಡೆಯುವ ನಾವು ಅವರಿಗೆ ಕನ್ನಡವನ್ನು ಮಾರಾಟ ಮಾಡುತ್ತಿದ್ದೇವೆ . ಇವತ್ತು ಕನ್ನಡವನ್ನು ಅಭಿವೃದ್ಧಿಪಡಿಸುವ ಹಲವು ಇಲಾಖೆಗಳಿವೆ . ಕನ್ನಡ ಅಭಿವೃದ್ಧಿ ಪ್ರಾಧಿಕಾರ , ಕನ್ನಡ ಸಂಸ್ಕೃತಿ ಇಲಾಖೆ , ಕನ್ನಡ ಸಾಹಿತ್ಯ ಪರಿಷತ್ತು . . ಹೀಗೆ ಇನ್ನೂ ಹಲವಾರು . ಇವುಗಳು ಕೇವಲ ಪುಸ್ತಕ ಪ್ರಕಟಣೆಗೆ ಅಥವಾ ವೇದಿಕೆಯ ಕಾರ್ಯಕ್ರಮ ನಡೆಸಲು ಮಾತ್ರ ಸೀಮೀತವಾಗಿವೆ .
ಇವ್ರಂಗ್ ಪಕ್ಸ ಗಿಕ್ಸ ಬದ್ಲಾಯಸಕಿಲ್ಲ ನಮ್ಗೆಲ್ಲ ಒಬ್ಬನೆ ಲೀಡ್ರು ಅವ್ನೆ ಮುನಿಯ ಗೌಡಪಟೇಲ ಮಠದ್ಸ್ವಾಮಿ ನೋಟಿನೊಡೆಯ ಇವ್ರಲೀಡ್ರುಗಳ್ ಲಿಸ್ಟ ಮುಗಿಯಾಕಿಲ್ಲ
ಸುಮಾರು 16 , 500 ವರ್ಷಗಳ ಹಿಂದೆ ಬೆರಿಂಜಿಯಾ ( ಪೂರ್ವ ಅಲಸ್ಕಾ ) ಕ್ಕೆ ವಲಸೆ ಹೋದ ಶಿಲಾಯುಗದ ಭಾರತೀಯರ ಸಂಖ್ಯೆ 40 , 000 ಪ್ರಮಾಣದಲ್ಲಿ ಇದ್ದಿರಬಹುದು ಎಂಬುದು ಪುರಾತನ ವಸ್ತು ಶಾಸ್ತ್ರಜ್ನರ ತರ್ಕ . [ ೧೧ ] [ ೧೨ ] [ ೧೩ ] ವಲಸೆಯ ಕಾಲದ ಬಗ್ಗೆ ಸುದೀರ್ಘ ಚರ್ಚೆಗಳು ನಡೆಯುತ್ತಿದ್ದು , ಇದರ ಬಗ್ಗೆ ನಿಖರ ಮಾಹಿತಿ ಹೊರಬೀಳಲು ಹಲವು ವರ್ಷಗಳೇ ಬೇಕಾಗಬಹುದು . ಸೆಂಟ್ರಲ್ ಏಷ್ಯಾದ ಹುಟ್ಟು ಅಥವಾ ವಿಕಾಸ ಮತ್ತು ಕೊನೆಯ ಹಿಮಯುಗದ ಅಂತ್ಯಭಾಗದ ಅವಧಿಯಲ್ಲಿ ಅಮೆರಿಕದ ವ್ಯಾಪಕ ನೆಲೆಯ ಕಾಲಮಾನ ಕುರಿತು ಕೆಲವು ನಿರ್ಣಯಗಳನ್ನು ಅಂಗೀಕರಿಸಲಾಗಿದೆ . ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ , ಸುಮಾರು 16 , 000 - 13 , 000 ವರ್ಷಗಳ ಅವಧಿಗೆ ತಡ ಗರಿಷ್ಟ ಹಿಮಯುಗ ಎಂದು ಉಲ್ಲೇಖಿಸಲಾಗಿದೆ . [ ೧೩ ] [ ೧೪ ]
ಸುಮಾರು 1955 ರಿಂದ 1985 ರ ಅವಧಿಯಲ್ಲಿ , ಅಪಾರವಾದ ಸಾಮಾಜಿಕ ಕಳಕಳಿಯುಳ್ಳ ನಿರ್ದೇಶಕರು ತಮ್ಮ ಚಿತ್ರಗಳಿಂದ , ಚಿತ್ರಗಳಲ್ಲಿನ ಹಾಡು - ಸಂಭಾಷಣೆಗಳಿಂದ ಕನ್ನಡ ಚಲನಚಿತ್ರರಂಗವನ್ನು ಶ್ರೀಮಂತಗೊಳಿಸಿದರು . ಪಂತುಲು , ಪುಟ್ಟಣ್ಣ ಕಣಗಾಲ್ , ಹುಣಸೂರು ಕೃಷ್ಣಮೂರ್ತಿ ಇವರಂತಹ ನಿರ್ದೇಶಕರು ( ಹೆಸರುಗಳ ಪಟ್ಟಿ ಪೂರ್ಣವೇನಲ್ಲ ) ಮನರಂಜನಾತ್ಮಕ ಚಿತ್ರಗಳನ್ನೇ ಸದಭಿರುಚಿಯ ಮೂಸೆಯಲ್ಲಿ ಕರಗಿಸಿ , ಹೊಸ ಆಯಾಮವನ್ನೀಯಲು ಶ್ರಮಿಸಿದರು . ಇಂತಹ ನಿರ್ದೇಶಕರಿಗೆ ತಕ್ಕಂತೆ ವಿಜಯನಾರಸಿಂಹ , ಕಣಗಾಲ್ ಪ್ರಭಾಕರ ಶಾಸ್ತ್ರಿ , ಆರ್ . ಎನ್ . ಜಯಗೋಪಾಲ್ , ಚಿ . ಉದಯಶಂಕರ್ ಮುಂತಾದ ಗೀತರಚನೆಕಾರರು ಆರೋಗ್ಯಕರ ಪೈಪೋಟಿಯೇನೋ ಎಂಬಂತೆ ಒಬ್ಬರಿಗಿಂತ ಒಬ್ಬರು ಉತ್ತಮ ಚಿತ್ರಗೀತೆಗಳನ್ನು ಬರೆದು , ಚಲನಚಿತ್ರಗೀತೆಗಳ ಸಾಹಿತ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು . ಚಿತ್ರವೊಂದರ ಪ್ರತಿ ವಿಭಾಗದಲ್ಲೂ - ಸಂಭಾಷಣೆಯಾಗಲಿ , ಚಿತ್ರಗೀತೆಗಳಾಗಲೀ , ಪ್ರತಿಯೊಂದರಲ್ಲೂ - ಕಲೆಯನ್ನು ಅನಾವರಣಗೊಳಿಸಲು ನಿರ್ದೇಶಕರು ತಮ್ಮ ತಂಡಗಳೊಡಗೂಡಿ ಪ್ರಯತ್ನಿಸಿದರು . ಅದರಲ್ಲಿಯೂ ಗೀತಸಾಹಿತ್ಯವೆನ್ನುವುದು , ಅಂದಿನ ಪ್ರಮುಖ ನಿರ್ದೇಶಕರಿಗೆ , ತಮ್ಮ ಸಂದೇಶಗಳನ್ನು ಸಾರುವ ಒಂದು ಮಾಧ್ಯಮವಾಗಿತ್ತು . ಉದಾಹರಣೆಗೆ : " ಹಿಂದೂಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು . . . " ಮತ್ತು " ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು . . . " ಹಾಡುಗಳನ್ನು ತೆಗೆದುಕೊಳ್ಳಿ . ಇವು ಮೂಡಿಸಿದ ದೇಶಪ್ರೇಮದ , ನಾಡು - ನುಡಿಯ ಕಿಚ್ಚು ಈ ಹಾಡುಗಳಿಗೆ ಜನಮಾನಸದಲ್ಲಿ ಯಾವ ದೇಶಭಕ್ತಿಗೀತೆಗಳಿಗೂ ಕಡಿಮೆಯಿಲ್ಲದಂತಹ ಸ್ಥಾನವನ್ನು ದೊರಕಿಸಿಕೊಟ್ಟಿದೆ . ಇದು ಕೇವಲ ಒಂದು ಸಣ್ಣ ಉದಾಹರಣೆಯಷ್ಟೇ . ಹಳೆಯ ಹಾಡುಗಳ " ನಾಸ್ಟಾಲ್ಜಿಯಾ " ಇದ್ದವರನ್ನೊಮ್ಮೆ ಕೇಳಿ ನೋಡಿ ; ನಾಲಗೆಯ ತುದಿಯಲ್ಲೆ ಇಂತಹ ನೂರಾರು ಹಾಡುಗಳ ಭಂಡಾರ ಸಿದ್ಧವಾಗಿರುತ್ತದೆ . ಎಷ್ಟೋ ಬಾರಿ ಇಂತಹ ಹಾಡುಗಳನ್ನು ಕೇಳಿ " ಇವು ಬರಿಯ ಚಿತ್ರಗೀತೆಗಳಲ್ಲ , ಖಂಡಿತ ಯಾರಾದರೊಬ್ಬ ಕವಿಯ ಸಾಹಿತ್ಯಿಕ ರಚನೆಯಿರಬೇಕು " ಎಂದು ಭ್ರಮಿಸಿ ಮೋಸಹೋದ ಸಂದರ್ಭಗಳೂ ಉಂಟು !
ಪ್ರಾಮಾಣಿಕವಾಗಿ ಹೇಳುತ್ತೇನೆ ; ಹತ್ತು ವರುಷಗಳ ಹಿಂದೆ ನನಗೆ ದಂತವೈದ್ಯ ವೃತ್ತಿಯ ಬಗ್ಗೆ ಉತ್ತಮ ಅಭಿಪ್ರಾಯವೇನೂ ಇರಲಿಲ್ಲ . ಭಗವಂತ ದಯಪಾಲಿಸಿದ ಹಲ್ಲುಗಳು ಇನ್ನೂ ಹೊಸದಾಗಿದ್ದವು . ದೂರದರ್ಶನದಲ್ಲಿ " ರಾಮಾಯಣ " ಧಾರಾವಾಹಿಯ ಮೊದಲು ಬರುತ್ತಿದ್ದ ಜಾಹೀರಾತಿನ ಸಲಹೆಯಂತೆ ಡಾಬರ್ ಕೆಂಪು ಹಲ್ಲುಪುಡಿ ಬಳಸಿ ನನ್ನ ಹಲ್ಲುಗಳನ್ನು ಬೆಳ್ಳಗೆ ಇರಿಸಿದ್ದೆ . ದಂತವೈದ್ಯರೆಂದರೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎಂ ಬಿ ಬಿ ಎಸ್ ಸೀಟು ಸಿಗದ ನಿರಾಶಿಗಳು ಇಲ್ಲವೇ ಪಿತ್ರಾರ್ಜಿತವಾಗಿ ಬಂದಂಥ ದಂತವೈದ್ಯಾಲಯವಿದ್ದು ಅದರ ಮೂಲಕ ಉದರಂಭರಣಂ ಮಾಡುವ ಉದ್ದೇಶದಿಂದ ದಂತವೈದ್ಯ ವೃತ್ತಿಯನ್ನು ಪರಿಗಣಿಸಿದವರು ಎಂದು ನನ್ನ ದೃಢ ನಂಬಿಗೆಯಾಗಿತ್ತು . ಅಲ್ಲದೇ ನಾನು ಭೇಟಿ ನೀಡಿದ ಕೆಲ ದಂತ ವೈದ್ಯರ ಸಲಹೆ ಕೂಡಾ ನನಗೆ ರುಚಿಸಿರಲಿಲ್ಲ . ಸುಮ್ಮನೇ , ಹಲ್ಲಿನ ಜೊತೆಗೆ ಹಣವನ್ನೂ ಕೀಳುವ ವ್ಯವಸ್ಥೆ ಇವರದು ಎಂದು ಭಾವಿಸಿದ್ದೆ . ಆನುವಂಶಿಕವಾಗಿ ನನ್ನದು ದಂತರೋಗಿಗಳ ಕುಟುಂಬ ; ಅಪ್ಪನ ಒರಿಜಿನಲ್ ಹಲ್ಲುಗಳನ್ನೇ ನೋಡಿರದ ನಾನು ಅಮ್ಮನ ಹುಳುಕು ಉಬ್ಬುಹಲ್ಲುಗಳನ್ನು ನೋಡಿದ್ದೆ . ಹುಳುಕು ಹಲ್ಲಿನ ನೋವಿನಿಂದ ತಾವು ಪಟ್ಟ ಬವಣೆ , ನೋವು ಮಕ್ಕಳಿಗೆ ಬೇಡ ಎಂಬ ಸದುದ್ದೇಶದಿಂದ ನಮ್ಮನ್ನು ಮೊದಲಿನಿಂದಲೇ ಸರಿಯಾಗಿ ಹಲ್ಲುಜ್ಜುವ ಶಿಸ್ತಿಗೆ ಗುರಿಪಡಿಸಿದ್ದ ನನ್ನ ಹಿರಿಯರು ಆರೋಗ್ಯಕರ ದಂತ ಜೀವನಕ್ಕೆ ನಾಂದಿ ಹಾಡಿದ್ದರು . ಹೀಗಾಗಿ ವಾರ್ಷಿಕ ದಂತವೈದ್ಯರ ಭೇಟಿ ನಮ್ಮ ಅಭ್ಯಾಸವಾಗಿತ್ತು . ಹೀಗೇ ಒಂದು ವಾರ್ಷಿಕ ಭೇಟಿಯ ಸಂದರ್ಭದಲ್ಲಿ ದವಡೆಯ ಕೊನೆಯ ಹಲ್ಲನ್ನು ನೋಡಿದ ವೈದ್ಯರು " ಇದೇನು ಕೆಂಡದಂತೆ ಕಪ್ಪಾಗಿದೆಯಲ್ಲ ? ನೋವಿದೆಯಾ ? " ಎಂದು ಕೇಳಿದಾಗ ಬಾಯಲ್ಲಿ ಉತ್ತರಿಸಲಾಗದೇ ಇಲ್ಲವೆಂಬಂತೆ ತಲೆ ಅಲ್ಲಾಡಿಸಿದ್ದೆ . ಅದನ್ನು ಅವರು ನಂಬಲಿಲ್ಲ ; ದಂತವೈದ್ಯಾಯುಧಗಳಲ್ಲೊಂದಾದ ಸಣ್ಣ ಸುತ್ತಿಗೆಯಂಥ ವಸ್ತುವಿನಲ್ಲಿ ಎರಡು ಬಾರಿ ಆ ಹಲ್ಲನ್ನು ಮೊಟಕಿ " ಈಗ ? " ಎಂದು ಪುನ : ಕೇಳಿದರು . " ಇನ್ನೇನು ? ಸುತ್ತಿಗೆಯಲ್ಲಿ ಮೊಟಕಿದರೆ ಎಂಥಾ ಹಲ್ಲೂ ನೋಯುತ್ತದೆ " ಎಂದು ಉತ್ತರಿಸುವ ಮನಸ್ಸಾದರೂ ವಾಸ್ತವದಲ್ಲಿ ನನಗೆ ನೋವಿರದಿದ್ದರಿಂದ " ನೋವೇನೂ ಇಲ್ಲ " ಎಂದು ತೆರೆದ ಬಾಯಲ್ಲೇ ಹಸನ್ಮುಖಿಯಾಗಿ ಸಂಜ್ಞೆ ನೀಡಿದ್ದೆ . ಇದರಿಂದ ತುಸು ನಿರಾಶೆಗೊಂಡಂತೆ ತೋರಿದರೂ , ವೃತ್ತಿ ಧರ್ಮದಂತೆ " ತೊಂದರೆಯೇನೂ ಇರದಿದ್ದರೆ ಹಾಗೇ ಇರಲಿ ಬಿಡಿ " ಎಂದು ಸಲಹೆ ನೀಡಿ " ಉಳಿದಂತೆ ಎಲ್ಲಾ ಚೆನ್ನಾಗಿದೆ , ಆದರೆ ಉಜ್ಜುವ ಕ್ರ್‍ಅಮ ಸ್ವಲ್ಪ ಬದಲಾದರೆ ಒಳ್ಳೆಯದು " ಎಂದು ಹದಿನೈದು ನಿಮಿಷ ಕೊರೆದಿದ್ದರು . ಈ ಘಟನೆ ದಂತವೈದ್ಯರ ಬಗೆಗಿನ ನನ್ನ ಅಭಿಪ್ರಾಯವನ್ನೇನೂ ಬದಲಿಸದಿದ್ದರೂ ತುಸು ಉತ್ತಮಗೊಳಿಸಿತ್ತು . ಮುಂದಿನ ಎರಡು ವರುಷಗಳು ಯೋಚನೆಯಿಲ್ಲದೇ ಸಾಗಿದವು . ಮೂರನೇ ವರುಷದ ಭೇಟಿಯ ಸಂದರ್ಭದಲ್ಲಿ ನನ್ನ ಜ್ಞಾನದಂತ ತುಸು ತೊಂದರೆ ನೀಡುತ್ತಿತ್ತು . ಅದೇ ತಾನೆ ಚರ್ಮ ಸೀಳಿ ಹೊರಬರುವ ಪ್ರಯತ್ನದಲ್ಲಿದ್ದ ಜ್ಞಾನದಂತ ಭಾರೀ ನೋವನ್ನೇ ನೀಡಿತ್ತು . " ದಂತವೈದ್ಯ ಕಾಲೇಜಿಗೇ ಭೇಟಿ ನೀಡು , ಒಳ್ಳೇ ಟೈಮ್ ಪಾಸ್ " ಎಂದು ಸಲಹೆ ನೀಡಿದ್ದ ಸ್ನೇಹಿತರನ್ನು ಧಿಕ್ಕರಿಸಿ ವೃತ್ತಿಪರ ವೈದ್ಯರ ಅಂಗಡಿಗೆ ದೌಡಾಯಿಸಿದ್ದೆ . ಎಲ್ಲಾ ದಂತವೈದ್ಯರಂತೆ ಇವರ ಹಲ್ಲೂ ಬೆಳ್ಳಗಿತ್ತು . ಪ್ರತೀ ವೃತ್ತಿಗೂ ಒಂದು ಕೊರತೆ ಇದ್ದೇ ಇರುತ್ತದಲ್ಲವೇ ? ಗಿರಾಕಿಗಳಿಗೆ ಕೊಲ್ಗೇಟ್ ನಗೆ ಬೀರುವ ಅನಿವಾರ್ಯತೆಯಿಂದ ಪಾನ್ ಮಸಾಲಾ , ಗುಟ್ಕಾದಂತ ರುಚಿಕರ ವಸ್ತುಗಳನ್ನು ಅಗಿಯುವ ಬಯಕೆಯನ್ನು ಅವರು ಅದುಮಿಟ್ಟುಕೊಳ್ಳಬೇಕಾಗುತ್ತದಲ್ಲ , ಎಂದು ನನಗೆ ಕನಿಕರವೆನಿಸಿತು . " ಜ್ಞಾನದಂತದಿಂದ ಪ್ರಯೋಜನವೇನೂ ಇಲ್ಲ , ಅದನ್ನು ಕೀಳೋಣ " ಎಂದ ಅವರ ಸಲಹೆ ನನಗೆ ರುಚಿಸಲಿಲ್ಲ . ಅದೇ ತಾನೇ ಕಾಲೇಜು ಮುಗಿಸಿದ್ದ ಅವರು ಇನ್ನೂ ಎಳಸು ಎಂದು ಅಭಿಪ್ರಾಯಿಸಿ " ಆಯಿತು ಅತೀ ಶೀಘ್ರ್‍ಅ ಭೇಟಿ ಗೊತ್ತುಪಡಿಸುತ್ತೇನೆ " ಎಂದು ಸುಳ್ಳು ಹೇಳಿ ಅಲ್ಲಿಂದ ಕಾಲ್ಕಿತ್ತೆ . ಅದೇ ನನ್ನ ಕೊನೆಯ ಭೇಟಿಯಾಯಿತು . ಕೆಲ ವರುಷಗಳ ಹಿಂದೆ ವೃತ್ತಿ ಅರಸುತ್ತ ಬೆಂಗಳೂರಿಗೆ ವರ್ಗಾವಣೆಯಾಗಿದ್ದ ನಾನು ಮೊದಲು ಮಾಡಿದ ಕೆಲಸಗಳಲ್ಲೊಂದು , ದಂತ ವೈದ್ಯರನ್ನು ಹುಡುಕಿದ್ದು . ಅವರ ಬಗ್ಗೆ ಉತ್ತಮ ಅಭಿಪ್ರಾಯಗಳನ್ನು ಕೇಳಿದ್ದ ನಾನು ಶೀಘ್ರದಲ್ಲೇ ಒಂದು ಭೇಟಿಯನ್ನು ಗೊತ್ತುಪಡಿಸಿದೆ . ಅವರ ಶೈಕ್ಷಣಿಕ ಸಾಧನೆಯ ಬಗ್ಗೆ ಕುತೂಹಲಿಯಾಗಿದ್ದ ನಾನು , ಸರ್ಕಾರಿ ದಂತವೈದ್ಯ ಕಾಲೇಜು , ಬೆಂಗಳೂರಿನ ಸ್ವರ್‍ಣ ಪದಕ ವಿಜೇತ ವೈದ್ಯರು ಎಂದು ತಿಳಿದಾಗ ಪರವಾಗಿಲ್ಲ ಎಂ ಬಿ ಬಿ ಎಸ್ ಸೀಟು ಮಿಸ್ ಆದವರಲ್ಲಿ ಉನ್ನತ ಶ್ರ್‍ಏಣಿಯ ವಿದ್ಯಾರ್ಥಿ ಎಂದು ಕಟಕಿಯಾಡಿದ್ದೆ . ಆದರೆ ಭೇಟಿಯ ಸಂದರ್ಭದಲ್ಲಿ ನನಗೊಂದು ಆಘಾತ ಕಾದಿತ್ತು . ಬಲಭಾಗದ ಮೇಲ್ಪಂಕ್ತಿಯ ಸಾಲಿನ ಮೂರನೇ ಹಲ್ಲು ಹುಳುಕು ಹಿಡಿಯುವ ಹಾದಿಯಲ್ಲಿದೆ ಎಂದು ವೈದ್ಯರು ಬಹಿರಂಗ ಪಡಿಸಿದರು . " ಅದನ್ನು ಸ್ವಚ್ಛಪಡಿಸಿ ಟೋಪಿ ತೊಡಿಸುವ " ಎಂದು ಸಲಹೆ ನೀಡಿದರು . ಹಲ್ಲಿನ ಟೋಪಿಯದೂ ಕಾಸಿಗೆ ತಕ್ಕ ಕಜ್ಜಾಯದ ವ್ಯವಹಾರ . ಉಳ್ಳವರು ಬಂಗಾರದ ಟೋಪಿ ತೊಡಿಸುವರು ಮುರುಕು ಹಲ್ಲಿಗೆ , ನಾನೇನ ಮಾಡಲಿ ಬಡವನಯ್ಯ | | ಎಂದು ಯೋಚಿಸಿದರೂ , ಬಾಳಿಕೆಯ ದೃಷ್ಟಿಯಿಂದ ಬೆಳ್ಳಿಯ ಟೋಪಿಯನ್ನೇ ಆಯ್ಕೆ ಮಾಡಿದೆ . ಇನ್ನು ಟೋಪಿ ತೊಡಿಸುವ ಕಾರ್ಯವಾದರೂ ಅತಿ ಸುಲಭವೇನಲ್ಲ . ಸರಿಯಾದ ಅಳತೆ ನೀಡಿ , ವಾರವೊಂದರ ನಂತರದ ದಿನವೊಂದನ್ನು ಗೊತ್ತುಪಡಿಸಿದರು . ಈ ಬಾಯಿಯೂ ಒಂದು ವಿಚಿತ್ರ ಅಂಗ . ದಂತವೈದ್ಯಾಲಯದಲ್ಲಿ ಕುರ್ಚಿಯ ಮೇಲೆ ಪವಡಿಸಿ , ಬಾಯಿ ಅಗಲಿಸುವ ಯಂತ್ರ ಧರಿಸಿದೊಡನೇ ಜೊಲ್ಲು ಹರಿಯಲು ಶುರುವಾಗುತ್ತದೆ . ವೈದ್ಯರ ಸಲಕರಣೆಗಳ ಪರಿಣಾಮವೋ ಅಥವಾ ಸಹಾಯಕ ನರ್ಸ್ ಕಾರಣವೋ ನಿರ್ಧರಿಸುವುದು ಕಷ್ಟ . ಸ್ವಚ್ಛಗೊಳಿಸುವ ನಳಿಕೆ , ಸಕಲ ಸಲಕರಣೆಗಳೊಂದಿಗೆ ಸನ್ನದ್ಧರಾದ ವೈದ್ಯರು ಹಲ್ಲಿಗೆ ಟೋಪಿ ಅಳವಡಿಸಿದರು . ಅದರ ಮುಂದಿನ ಹಂತ ದಂತಟೋಪಿಯನ್ನು ಅದರ ಸ್ಥಾನದಲ್ಲಿ ಪಲ್ಲಟಗೊಳ್ಳದಂತೆ ಕೂರಿಸುವುದು . ಇನ್ನೇನು ಸುತ್ತಿಗೆಯಲ್ಲಿ ಬಡಿಯಬಹುದು ಎಂದುಕೊಂಡಿದ್ದ ನನಗೆ ವೈದ್ಯರು ಮರದ ಆಯತಾಕಾರದ ಚೂರೊಂದನ್ನು ತಂದಾಗ ಆಶ್ಚರ್ಯ . ಅದನ್ನು ಬಾಯಲ್ಲಿರಿಸಿ " ಗಟ್ಟಿಯಾಗಿ ಅಗಿಯಿರಿ " ಎಂದರು . ಅಂದು ಅಳವಡಿಸಿದ ದಂತಟೋಪಿ ಐದು ವರುಷಗಳ ನಂತರವೂ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದೆ . ವಿದೇಶೀ ಸಲಕರಣೆಗಳೊಂದಿಗೆ ದೇಶೀ ಮರದ ಚೂರನ್ನು ದಂತವೈದ್ಯಾಯುಧ ಬತ್ತಳಿಕೆಯಲ್ಲಿರಿಸಿಕೊಂಡ ವೈದ್ಯರು ನನ್ನ ಅಭಿಪ್ರಾಯವನ್ನು ಗಣನೀಯವಾಗಿ ಬದಲಿಸಿದ್ದರು . ವೃತ್ತಿಸಂಬಂಧ ಅಮೇರಿಕಾಕ್ಕೆ ಬಂದ ಮೇಲೂ ದಂತವೈದ್ಯರ ಭೇಟಿಯನ್ನು ಮುಂದುವರೆಸಿದ್ದೆ . ಕಳೆದ ತಿಂಗಳು ಬಲಭಾಗದ ಜ್ಞಾನದಂತ ನೋವಲು ಆರಂಭಿಸಿತು . ಮೇಲಿನ ಪಂಕ್ತಿಯೋ , ಕೆಳಗಿನ ಪಂಕ್ತಿಯೋ ಎಂದು ನಿರ್ಧರಿಸಲಾಗದಷ್ಟು ನೋವು . ಈ ಬಾರಿ ಬಿಳಿಹಲ್ಲಿನ ಬಿಳಿವೈದ್ಯರು ನನ್ನ ದಂತ ಪರೀಕ್ಷೆ ಮಾಡಿ " ನೋಡಿ , ಈ ಜ್ಞಾನದಂತದಿಂದ ಪ್ರಯೋಜನವೇನೂ ಇಲ್ಲ , ಅದನ್ನ ಕೀಳುವ " ಎಂದು ಅಭಿಪ್ರಾಯಪಟ್ಟರು . ಇದೇ ಅಭಿಪ್ರಾಯವನ್ನು ಹಿಂದೆ ಧಿಕ್ಕರಿಸಿದ್ದರೂ ಇಂದಿನ ಪರಿಸ್ಥಿತಿ ಭಿನ್ನವಾಗಿತ್ತು . ಜೀವ ಕೀಳುವ ನೋವಿನಿಂದ ದಂತವೈದ್ಯೋ ನಾರಾಯಣೋ ಹರಿ : ಎಂದು ನಮಿಸಿದೆ . - ಕನ್ನಡಿಗ
ಇಲ್ಲಿ ಗಮನಿಸಬೇಕಾದ ಮತ್ತೊಂದು ಬಹುಮುಖ್ಯ ಅಂಶವೆಂದರೆ ೩೦ - ೩೫ ವರ್ಷ ಸೇವೆ ಸಲ್ಲಿಸಿರುವ ಹಿರಿಯ ಅಧಿಕಾರಿಗಳು , ಉದ್ಯೋಗಿಗಳು ವ್ಯವಸ್ಥೆಗೆ ಒಗ್ಗಿಹೋಗಿ ರುತ್ತಾರೆ . ವಿಳಂಬ ಮಾಡುವುದು , ಅಲೆದಾಡಿಸುವುದು , ಕಡತಗಳನ್ನು ಕೊಳೆಯಲು ಬಿಡುವುದು ಇವು ನಮ್ಮ ಹಾಲಿ ವ್ಯವಸ್ಥೆಯ ಮುಖ್ಯ ಗುಣಲಕ್ಷಣಗಳಾಗಿವೆ . ಇಂತಹ ವ್ಯವಸ್ಥೆಯನ್ನು ಬದಲಾಯಿಸಲು ಅವರು ಖಂಡಿತ ಮುಂದಾಗುವುದಿಲ್ಲ . ಖಠಿZಠ್ಠಿo ಕ್ಠಿಟಜಿoಞ ಅಥವಾ ಯಥಾಸ್ಥಿತಿಯನ್ನೇ ಮುಂದುವರಿಸುತ್ತಾರೆ , ರಾಜೀ ಮಾಡಿಕೊಳ್ಳುತ್ತಾರೆ , ಹೊಸ ಬದಲಾವಣೆಯನ್ನು ತರುವುದಿಲ್ಲ . ನಿಮಗೆ ಉಷಾ ಗಣೇಶನ್ ಎಂಬ ಹಿರಿಯ ಅಧಿಕಾರಿ ನೆನಪಿರಬಹುದು . ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗಲೇ ಸರಕಾರ ' ರಕ್ಷಾ ಕವಚ ' ಎಂಬ ಯೋಜನೆಯನ್ನು ಜಾರಿಗೆ ತರಲು ಮುಂದಾಗಿತ್ತು . ಅಂದರೆ ರಾಜ್ಯದ ಯಾವುದೇ ಸ್ಥಳದಲ್ಲಿ ಅಪಘಾತವಾದರೂ ೧೫ ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಸೇವೆ ಒದಗಿಸುವುದು ಯೋಜನೆಯ ಉದ್ದೇಶವಾಗಿತ್ತು . ಅದಕ್ಕಾಗಿ ಸಂಪರ್ಕ ವ್ಯವಸ್ಥೆಯನ್ನು ಸುಸಜ್ಜಿತಗೊಳಿಸಲು ' ಸತ್ಯಂ ' ಸಂಸ್ಥೆ ಸಾಫ್ಟ್‌ವೇರ್ ಸಹಾಯ ನೀಡಲೂ ಮುಂದಾಗಿತ್ತು . ಆದರೆ ಪೃಷ್ಠದಡಿ ಫೈಲ್ ಇಟ್ಟುಕೊಂಡು ಕುಳಿತ ಉಷಾ ಗಣೇಶನ್ , ನಿವೃತ್ತಿಯಾಗುವವರೆಗೂ ಯೋಜನೆ ಕಡತದಿಂದಲೇ ಹೊರಬರಲಿಲ್ಲ . ಒಂದು ವರ್ಷದ ಹಿಂದೆ ಜಾರಿಗೆ ಬರಬೇಕಾಗಿದ್ದ ' ರಕ್ಷಾ ಕವಚ ' ಯೋಜನೆಯನ್ನು ಈಗ ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ !
ಸ್ನೇಹಿತರೆ , ನನ್ನ 5 ನೇ ಪುಸ್ತಕ ಶ್ರೀಕೃಷ್ಣದೇವರಾಯ ಬಿಡುಗಡೆಗೆ ಸಿದ್ಧವಾಗಿದೆ . ಪುಸ್ತಕದ ಬಿಡುಗಡೆ ಸಮಾರಂಭದ ಆಹ್ವಾನ ಪತ್ರಿಕೆ ಮತ್ತು ಮುಖಪುಟಗಳು ಇಲ್ಲಿವೆ . ಬಿಡುವು ಮಾಡಿಕೊಂಡು ಬನ್ನಿ .
ಕಿಸ್ ಸೋಲೋ ಆಲ್ಬಂಗಳು 18 ಸೆಪ್ಟೆಂಬರ್ 1978ರಲ್ಲಿ ಬಿಡುಗಡೆಯಾದವು . ಈ ಆಲ್ಬಂಗಳ ಮಾರಾಟ ಮಾಡಲು ಮಾಡಿದ ಪ್ರಚಾರದ ಭರಾಟೆ ಆಭೂತಪೂರ್ವವಾಗಿತ್ತು . ಕಾಸಾಬ್ಲಾಂಕಾ ಈ ಆಲ್ಬಂಗಳ ಐದು ದಶಲಕ್ಷ ಪ್ರತಿಗಳನ್ನು ತಯಾರಿಸುತ್ತಿರುವುದಾಗಿ ಹೇಳಿತು ( ತಕ್ಷಣವೆ ಪ್ಲಾಟಿನಂ ಪ್ರಮಾಣವು ಖಚಿತವಾಯಿತು ) . ಅವರು ಅದನ್ನು ಮಾರಾಟ ಮಾಡುವ ಸಲುವಾಗಿ ಸುಮಾರು US $ 2 . 5 ದಶಲಕ್ಷ ಖರ್ಚುಮಾಡಿದರು . [ ೩೫ ] ಎಲ್ಲಾ ನಾಲ್ಕು ಸೋಲೋ ಆಲ್ಬಂಗಳು ಬಿಲ್ ಬೋರ್ಡ್ ಆಲ್ಬಂ ಚಾರ್ಟಿನ ಮೊದಲ 50ರ ಪಟ್ಟಿಗೆ ಸೇರ್ಪಡೆಯಾದವು . ಈ ಆಲ್ಬಂಗಳನ್ನು ಬಿಡುಗಡೆ ಆಗುವುದಕ್ಕೂ ಮುನ್ನವೆ ಈ ಆಲ್ಬಂಗಳನ್ನು ಮುಂಗಡವಾಗಿ ಕೋರಿಕೆಸಲ್ಲಿಸಿಲಾಗಿತ್ತು , ಆದರೆ ಈ ಆಲ್ಬಂ ಬಿಡುಗಡೆಯಾದಾಗ ಇದನ್ನು ವಾಪಸ್ಸು ರೆಕಾರ್ಡ್ ಕಂಪನಿಗೆ ಕಳುಹಿಸುವ ಪ್ರಯತ್ನ ಮಾಡಲಾಯಿತು , ಆಗ ಈ ಆಲ್ಬಂಗಳ ಮೇಲೆ ಭಾರಿ ರಿಯಾಯತಿಯನ್ನು ಘೋಷಿಸಲಾಯಿತು , ನಂತರ ಅಲ್ಬಂಗಳ ಮಾರಾಟ ( ಬಹಳ ಬೇಗನೆ ) ಜಾಸ್ತಿಯಾಯಿತು . " ಬಾರ್ಗಿನ್ ಬಿನ್ " ನೋಡಿದ ಕಿಸ್ ಆಲ್ಬಂಗಳಲ್ಲಿ ಈ ಆಲ್ಬಂಗಳೆ ಮೊದಲುನೆವು . ( ಬಾರ್ಗಿನ್ ಬಿನ್ : ಮುಖ್ಯವಾಗಿ ಸಿಡಿ , ತಂತ್ರಾಂಶ , ಮತ್ತು ಇತರ ಯಂತ್ರೊಪಕರಣಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದು ) .
ಬಹು ಸಾಲುಗಳನ್ನು ಬರೆಯಿರಿ ಸಂಬಂಧಿಸಿದ ಸಾಲುಗಳ ಅನುಕ್ರಮವನ್ನು ತ್ವರಿತವಾಗಿ ಬರೆಯುವುದು ಇದೀಗ ಸುಲಭವಾಗಿದೆ . ಸಾಲು , ಬಾಣದ ಗುರುತು , ಅಥವಾ ಗೀಚುವುದನ್ನು ಇದೀಗ ನೀವು ಮುಕ್ತಾಯಗೊಳಿಸಿದಾಗ , ಸಾಲು ಬರೆಯುವ ಮೋಡ್‌ನಲ್ಲಿ ಉಳಿದುಕೊಳ್ಳುತ್ತೀರಿ ಈ ಮೂಲಕ ನೀವು ಹೊಸ ಸಾಲನ್ನು ತಕ್ಷಣವೇ ಪ್ರಾರಂಭಿಸಬಹುದಾಗಿದೆ . ಇನ್ನಷ್ಟು ತಿಳಿಯಿರಿ
[ ವಿವಾದಗಳ ಕುರಿತು ಪ್ರತಿಕ್ರಿಯಿಸುವುದೇ ಒಂದು ಅಭ್ಯಾಸವಾಗಿಬಿಡಬಾರದೆಂದು ನಾನು ಇಂತಹ ಬರಹಗಳು ಸ್ವಲ್ಪ ದಿವಸ ಬೇಡ ಎನ್ನುವ ನಿಲುವು ತಳೆದಿದ್ದೆ . ಆದರೆ , ಈ ಟೀಪುವಿನ ಕುರಿತಾದ ವಿವಾದ ನಿದ್ದೆಗೆಡಿಸಿದೆ . ಪ್ರತಿಕ್ರಿಯಿಸದೇ ಇರುವುದು ಸಾಧ್ಯವಿಲ್ಲ ಎನ್ನುವ ಒಂದು ಕಾರಣ ನನ್ನ ಬಳಿಯಿದೆ . ಲೇಖನ - ತ್ರಯಗಳನ್ನು ಓದುತ್ತಾ ಹೋದಹಾಗೆ ತಿಳಿಯುತ್ತದೆ . ಮೊದಲನೇಯ ಲೇಖನ ಈ ವಿವಾದದ ಕುರಿತು ಮಾತನಾಡಿರುವ ಮಹನೀಯರು , ಸಂಘಸಂಸ್ಥೆಗಳ ಹೇಳಿಕೆಗಳನ್ನು , ನಿಲುವುಗಳನ್ನು ಸಂಗ್ರಹವಾಗಿ ಒಂದೆಡೆ ಒದಗಿಸುವ ಪ್ರಯತ್ನ ಮಾಡುತ್ತದೆ . ನನ್ನ ಅಭಿಪ್ರಾಯಗಳನ್ನು ಓದುವವರಿಗೆ ಈ ಪೂರಕ ಓದಿನ ಅವಶ್ಯಕತೆಯಿದೆ . ಎರಡನೇಯ ಲೇಖನ , ಅಲ್ಲಿನ ಕೆಲ ಅಭಿಪ್ರಾಯಗಳಿಗೆ ನನ್ನ ಪ್ರತಿಸ್ಪಂದನೆಗಳು ಹಾಗೂ ನನ್ನ ಸ್ವಂತ ಅಭಿಪ್ರಾಯವನ್ನು ಹೇಳುತ್ತದೆ . ಮೂರನೇಯ ಲೇಖನ ಇಂತಹ ವಿವಾದಗಳನ್ನು ನಿರ್ವಹಿಸಬಹುದಾದ ರೀತಿಯ ಕುರಿತು ಚಿಂತಿಸುತ್ತದೆ . ಈ ಲೇಖನ - ತ್ರಯಗಳನ್ನು ಅಪಾರ ವಿಷಾದದಿಂದ ಬರೆಯುತ್ತಿದ್ದೇನೆ ಎನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲವೆಂದೆನ್ನಿಸುತ್ತದೆ . ] ಲೇಖನದ ಮೊದಲ ಭಾಗ ಇಲ್ಲಿದೆ . ಈ ಲೇಖನವನ್ನು ಇಷ್ಟು ದಿನಗಳ ನಂತರ , ವಿವಾದ ತಣ್ಣಗಾಗಿದೆ ಎಂದೆನ್ನಿಸುವ ನಂತರ , ಏಕೆ ಬರೆಯುತ್ತಿದ್ದೇನೆ ಎನ್ನುವುದನ್ನು ಸ್ಪಷ್ಟಪಡಿಸುತ್ತಿದ್ದೇನೆ . ಈ ವಿವಾದ ಒಂದು ವಿರಾಟ್ - ಪ್ರಕ್ರಿಯೆಯ ಚಿಕ್ಕ ಬೈ - ಪ್ರಾಡಕ್ಟ್ ಅಷ್ಟೆ . ಇದು ಆಗಾಗ ಬೇರೆ ಬೇರೆ ಸ್ವರೂಪಗಳನ್ನು ಪಡೆಯುವುದು ಖಂಡಿತ , ಒಂದು . ಇದನ್ನು ನಿರ್ವಹಿಸುತ್ತಿರುವ ರೀತಿಯಲ್ಲಿ ಕೆಲ ಮೂಲಭೂತವಾದ ಅಂಶಗಳತ್ತ ಓದುಗರ ಗಮನ ಸೆಳೆಯುವುದು ಮತ್ತೊಂದು . ಮಾಲಿಕೆಯ ಈ ಎರಡನೇಯ ಲೇಖನದಲ್ಲಿ ವಿವಾದದ ಕೆಲ ಅಂಶಗಳನ್ನು ಕೇಂದ್ರದಲ್ಲಿಟ್ಟು ಒಟ್ಟು ವಿವಾದವನ್ನು ನನ್ನ ರೀತಿಯಲ್ಲಿ ಗ್ರಹಿಸಿ ನನ್ನ ಅಭಿಪ್ರಾಯಗಳನ್ನು ಮಂಡಿಸಿದ್ದೇನೆ . ಟೀಪುವಿನ್ನು ಟೀಕಿಸಿ ಶಂಕರಮೂರ್ತಿಗಳು ಶಾಲಾ ಮಕ್ಕಳ ವೇದಿಕೆಯಲ್ಲಿ ತಾವಾಡಿದಂತಹ ಮಾತುಗಳನ್ನಾಡಬೇಕು ಎಂದು ತಯಾರಿ ನಡೆಸಿದ್ದರೋ ಇಲ್ಲವೋ ಹೇಳಲಾಗದು . ನಡೆಸಿದ್ದರೆ ಆಶ್ಚರ್ಯವಿಲ್ಲ , ಅಲ್ಲದೇ ಅವರ ಹಿನ್ನೆಲೆ ಮತ್ತು ಸದ್ಯಗಳು ಅವರನ್ನು ಈ ಕುರಿತು ಸದಾ ತಯಾರಾಗಿರುವಂತೆ ರೂಪಿಸಿದೆ . ಆದರೆ ಅವರಿಗೆ ನಿರ್ದಿಷ್ಟವಾದ ಗುರಿಯಿತ್ತೆಂದೆನ್ನಿಸುವುದಿಲ್ಲ . ಮಕ್ಕಳಿಗೆ ಅವರ ಮಾತುಗಳು ಅರ್ಥವಾಗಿತ್ತೋ ಇಲ್ಲವೋ . ಪತ್ರಿಕೆಗಳಲ್ಲಿ ಬರದೇ ಹೋಗಿದ್ದರೆ ಯಾವುದೂ ಏನೂ ಆಗುತ್ತಿರುಲಿಲ್ಲವೇನೋ . ಕತ್ತಲಲ್ಲೊಂದು ಬಾಣ ಬಿಟ್ಟಿದ್ದರು ಎಲ್ಲಿಗಾದರೂ ತಾಗಲಿ ಎಂದು . ನಮ್ಮ ಜನ ಮೌನವಾಗಿ ಇದನ್ನು ನಿರ್ಲಕ್ಷಿಸಿ ಯಥಾಪ್ರಕಾರ ಟೀಪುವನ್ನು ಎದೆಯಲ್ಲಿಟ್ಟುಕೊಂಡೆ ಇರುತ್ತಿದ್ದರೇ ? ಆದರೆ ಮೇಲಿನ ನಿಲುವಿಗೂ ಸುಲಭವಾಗಿ ಬರಲಾಗದು . ನಮ್ಮ ಕಾಲದಲ್ಲಿ ಮೌನಕ್ಕೆ ಬೆಲೆಯಿದೆ ಎನ್ನುವುದರ ಬಗ್ಗೆಯೇ ಕೆಲವೊಮ್ಮೆ ನಂಬಿಕೆ ಹೋಗಿಬಿಟ್ಟಿರುವಂತಿದೆ . ಹೀಗಾಗಿ ಇಂತಹ ಹೇಳಿಕೆಗಳಿಗೆ ಪ್ರತಿಕ್ರಿಯಿಸದೇ ಇರುವುದು ಕೂಡಾ ಸಂದಿಗ್ಧದ ವಿಷಯವೇ ಸರಿ . ಅಂತೆಯೇ ನನ್ನ ಹಿಂದಿನ ಲೇಖನದಲ್ಲಿ ಪಟ್ಟಿ ಮಾಡಿರುವ ಬಹುತೇಕ ಪ್ರತಿಕ್ರಿಯೆಗಳನ್ನು , ಅದರ ಸ್ವರೂಪವನ್ನು ನಾನು ನಿರೀಕ್ಷಿಸಿದ್ದೆ . ಆದರೆ ಕಾರ್ನಾಡ್ , ಮರುಳಸಿದ್ದಪ್ಪ ಮುಂತಾದ ಹಿರಿಯರ ಪ್ರತಿಕ್ರಿಯೆಯನ್ನು ಗಮನಿಸಿದ ಮೇಲೆ ನನಗೆ ಇವರು - ಎತ್ತಲೋ ಬಿಟ್ಟು , ಎತ್ತಲೋ ಹೋಗಿ ಬೀಳುತ್ತಿದ್ದ ಬಾಣವನ್ನು ವೀರಾವೇಶದಿಂದ ಅಟ್ಟಿಸಿಕೊಂಡು ಹೋಗಿ ಎದೆಯೊಡ್ಡಿದ್ದಲ್ಲದೇ ಜನರನ್ನೂ ಎದೆಯೊಡ್ಡಿ ಎಂದು ಪ್ರಚೋದಿಸುತ್ತಿದ್ದಾರೆ - ಎಂದೆನ್ನಿಸಿತು . ಇಷ್ಟೆಲ್ಲ ಜನರ ಮಧ್ಯೆ ಕಾರ್ನಾಡರ ಹೇಳಿಕೆಯನ್ನೇ ಆಯ್ದು ತೆಗೆದುಕೊಂಡಿರುವುದಕ್ಕೆ ಕಾರಣವಿದೆ . ಸಾರ್ವಜನಿಕವಾಗಿ ಹೆಚ್ಚು ಮಾತನಾಡದೆಯೂ ಅವರಿಗಿರುವಷ್ಟು ಸಾರ್ವಜನಿಕತೆ ಅನೇಕ ಹಿರಿಯರಿಗಿಲ್ಲ . ಅವರ ಮಾತಿಗೆ ದೇಶಾದ್ಯಂತ ಒಂದು ಬೆಲೆಯಿದೆ . ಕನ್ನಡ / ಇಂಗ್ಲೀಷ್ ಪತ್ರಿಕೆಗಳಾದಿಯಾಗಿ ಅವರು ಹೇಳಿದ್ದನ್ನು ಯಥಾವತ್ತಾಗಿ ಪ್ರಕಟಿಸಿಬಿಡುತ್ತವೆ . ಈ ಕಾರಣಕ್ಕೆ , ಅವರಾಡುವ ಮಾತುಗಳ ಪರಿಣಾಮ ತೀವ್ರಸ್ವರೂಪದ್ದಾಗಿರುತ್ತದೆ . ಈ ಜವಾಬ್ದಾರಿಯನ್ನು ಅವರು ಹೊರದೇ ಗತ್ಯಂತರವಿಲ್ಲ . ನನ್ನಿಡೀ ಲೇಖನದಲ್ಲಿ ' ಕೋಮುವಾದದ ವಿರುದ್ಧದ ಒಂದು ಬಗೆಯ ಪ್ರತಿಭಟನೆ ' - ಗೆ ಕಾರ್ನಾಡರನ್ನು ಪ್ರತಿನಿಧಿಯಾಗಿಸಿ ಬರೆಯುತ್ತಿದ್ದೇನೆ . ಸಾಮಾನ್ಯವಾಗಿ ಕಾರ್ನಾಡರು ಕೋಮುವಾದದ ವಿಷಯವೊಂದನ್ನು ಹೊರತುಪಡಿಸಿ ಮಿಕ್ಕವಕ್ಕೆ ಪ್ರತಿಕ್ರಿಯಿಸುವುದಿಲ್ಲ . ( ಶಂಕರಮೂರ್ತಿಗಳು ಟೀಪೂವನ್ನು ಕನ್ನಡವಿರೋಧಿ ಎಂದಿದ್ದರೇ ಹೊರತು ಮತಾಂಧನೆಂದು ಹೇಳಿರಲಿಲ್ಲ , ಪ್ರಾಯಶಃ ಹೆಚ್ಚು ಎಚ್ಚರಿಕೆ ವಹಿಸಿದ್ದರು ಅನ್ನಿಸುತ್ತೆ . ) ಆದರೆ , ಈ ಹಿಂದೆ ಕಾರ್ನಾಡರು ಸಾರ್ವಜನಿಕವಾಗಿ ತಮ್ಮ ಟೀಪೂ ಪ್ರೇಮ ಮೆರೆದಿದ್ದಿದ್ದರಿಂದ ಕಣಕ್ಕಿಳಿಯುವುದು ಅನಿವಾರ್ಯವಾಯಿತು . ಟೀಪೂವನ್ನು ಕಾರ್ನಾಡರು ' ಕರ್ನಾಟಕದ ಅತ್ಯಂತ ಶ್ರೇಷ್ಠ ಪುತ್ರ , ಮಹಾರಾಷ್ಟ್ರದಲ್ಲಿ ಟಿಳಕರಿಗೆ ಸಮಾನವಾಗಿ ಕರ್ನಾಟಕದಲ್ಲಿ ಅವನ ಸ್ಥಾನ ' ಇತ್ಯಾದಿಯಾಗಿ ಹಿಂದೆ ಹೊಗಳಿದ್ದರು . ಲೇಖಕಿ ಶಶಿ ದೇಶಪಾಂಡೆಯವರಂತೂ ಪುಳಕಿತರಾಗಿ ' ಕಾರ್ನಾಡರು ಏಕಕಾಲದಲ್ಲಿ ಕನ್ನಡ ರಾಷ್ಟ್ರೀಯತೆ ಹೋರಾಟಗಾರರನ್ನೂ , ಮತೀಯವಾದಿಗಳನ್ನೂ ಎದುರುಹಾಕಿಕೊಂಡಿದ್ದಾರೆ ' ಎಂದು ಸಂಭ್ರಮಿಸಿದ್ದರು . ನನಗೆ ಏಕಕಾಲಕ್ಕೆ ತಮಾಷೆ ಮತ್ತು ದುಃಖವೆನ್ನಿಸಿದ್ದು ಕಾರ್ನಾಡರು ತಮ್ಮ ಟೀಪು ನಾಟಕದ ಗ್ರಂಥಸೂಚಿಯಲ್ಲಿ ಹಯವದನರಾಯರ ಪುಸ್ತಕವನ್ನೂ ಆಧರಿಸಿದ್ದನ್ನು ಹೆಸರಿಸಿ , ಅದರ ಜೊತೆಯಲ್ಲೇ ಬ್ರಿಟಿಷರ ಮೂಗಿನ ನೇರಕ್ಕೆ ಬರೆದ ಇತಿಹಾಸ ಎಂದು ಗಮನಿಸಿರುವುದು . ಕಾರ್ನಾಡರಂತಹ ಧೀಮಂತರಿಗೂ ಹಾಗೆ ವಿವರಿಸಬೇಕಾದ ಅಗತ್ಯ ಕಂಡಿತೇ ! ಇರಲಿ . ಈ ಹಿಂದೆ ಚಿಮೂಗಳು ಟೀಪೂ ಕುರಿತು ಏನೋ ಹೇಳಿಕೆ ನೀಡಿದ್ದಾಗ , ಎಚ್ಚರದಿಂದ ಕಾರ್ನಾಡರು ಪ್ರಜಾವಾಣಿ ವಾಚಕರ ವಾಣಿಗೆ ಒಂದು ಪತ್ರ ಬರೆದಿದ್ದರು . ಇದರಿಂದ ಚರ್ಚೆ ಬೀದಿಗೆ ಬಂದಿರಲಿಲ್ಲ . ಈಗಲೂ ಅದೇ ಆಗಿದ್ದಿದ್ದರೆ ಚೆನ್ನಿತ್ತು . ಆದರೆ ಸಮರದ ಮನಸ್ಥಿತಿಯಲ್ಲಿದ್ದ ಕಾರ್ನಾಡರು , ಮರುಳಸಿದ್ದಪ್ಪನವರು ಪ್ರೆಸ್ ಕಾನ್ಫರೆನ್ಸ್ - ಗಿಳಿದರು . ಹತ್ತು ಪತ್ರಿಕೆಗಳಲ್ಲಿ ಹತ್ತು ರೀತಿಯಲ್ಲಿ ಪ್ರಕಟವಾಯಿತು . ಅತಿರೇಕದ ಮಾತುಗಳೆಲ್ಲವೂ ಆದವು . ಎಚ್ಚರದ ಮನಸ್ಥಿತಿ ಜಾರಿ ಮುಂದೆ ತಹಬದಿಗೆ ಬರುವುದಕ್ಕೆ ಸಾಧ್ಯವೇ ಆಗದೆ ವಿವಾದ ರಾಡಿಯಾಯಿತು . ಆ ನಂತರದ ಪತ್ರಿಕಾ ವರದಿಗಳನ್ನು ಸಂಗ್ರಹಿಸಿ ಕೊಟ್ಟಿದ್ದೇನೆ . ಅವುಗಳಲ್ಲಿ ಈ ವಿಷಯಕ್ಕೇ ನೇರವಾಗಿ ಸಂಬಂಧಿಸಿರದೇ ಇದ್ದರೂ ಮುಖ್ಯವಾದ್ದೊಂದಿದೆ . ಪ್ರಜಾವಾಣಿ ಮತ್ತು ವಿಜಯಕರ್ನಾಟಕಗಳಲ್ಲಿ ಚಿ . ಮೂ . ಹೇಳಿಕೆಯ ಎರಡು ಆವೃತ್ತಿಗಳು ಪ್ರಕಟವಾಗಿವೆ . ಪ್ರಜಾವಾಣಿಯಲ್ಲಿ ಟೀಪುವನ್ನು ಕನ್ನಡವಿರೋಧಿ ಎಂದು ಕರೆಯಲಾಗದು , ಅವನ ಕಾಲದಲ್ಲಿ ಕನ್ನಡದ ಅಭಿವೃದ್ಧಿಯಾಗಲಿಲ್ಲ ಎನ್ನುವುದು ನಿಜ ಎಂದಿದೆ . ಆದರೆ ವಿಜಯಕರ್ನಾಟಕದಲ್ಲಿ ಇದು ತೀವ್ರವಾಗಿ ಪ್ರಕಟವಾಗಿವೆ . ಆ ನಂತರದ ಅವರ ನಿಲುವುಗಳು ವಿಜಯಕರ್ನಾಟಕದ ಮೊದಲ ಹೇಳಿಕೆಗಳಿಗೆ ಹೆಚ್ಚು ಹತ್ತಿರವಾಗಿದೆ . ವಿವಾದದಲ್ಲಿ ನನ್ನನ್ನು ಅಧೀರನಾಗಿಸಿದ ಮತ್ತೊಂದು ಸಂಗತಿ ಇದೇ - ಹೀಗೆ ಪತ್ರಿಕಾಹೇಳಿಕೆಗಳಲ್ಲಿರುವ ವ್ಯತ್ಯಾಸ , ಅದನ್ನು ಪ್ರತಿಭಟಿಸಲಾಗದಿರುವ ನಮ್ಮ ಪರಿಸ್ಥಿತಿ , ಇದರಿಂದುಂಟಾಗಬಹುದಾದ ಪ್ರಮಾದಗಳು . ಭೈರಪ್ಪನವರ ಪ್ರವೇಶವಾದನಂತರ ಎರಡು ಮುಖ್ಯವಾದ ಪರಸ್ಪರ ವೈರುಧ್ಯದ ಪರಿಣಾಮಗಳಾದವು . ಅವರು ತಾತ್ವಿಕವಾಗಿ ಬಹುಮುಖ್ಯವಾದ ಪ್ರಶ್ನೆಯೆಂದನ್ನೆತ್ತಿದರು . ಅದೇ ಸಮಯಕ್ಕೆ ಚರ್ಚೆ ವೈಯಕ್ತಿಕವಾಗಿಬಿಟ್ಟಿತು . ಎರಡಕ್ಕೂ ಅವರೇ ಕಾರಣವೆನ್ನಬಹುದು . ಭೈರಪ್ಪನವರು ತಮ್ಮ ಲೇಖನದಲ್ಲಿ ತುಘಲಕ್ - ನನ್ನು ಎಳೆದು ತರಬಾರದಿತ್ತು ಎಂದು ನನಗೆ ಮೊದಲು ಅನ್ನಿಸಿದ್ದು ನಿಜ . ವಿವಾದ ಟೀಪುವಿನ ಕುರಿತಾಗಿದ್ದಿದ್ದರಿಂದ ಅದೇ ಆವರಣದಲ್ಲೇ ತಮ್ಮ ವಾದವನ್ನು ಮಂಡಿಸಬಹುದಿತ್ತು . ಹೋಗಲಿ , ಅವರು ಕಾರ್ನಾಡರನ್ನು ವಿಶೇಷವಾಗಿ ಚರ್ಚೆಗೆ ಆಹ್ವಾನಿಸಿದ್ದರಿಂದ ತಮ್ಮ ವಿಷಯಮಂಡನೆಯ ಹೆಚ್ಚಿನ ಸಮರ್ಥನೆಗೆ ತುಘಲಕ್ - ನನ್ನು ಮಧ್ಯಕ್ಕೆಳೆತಂದರು ಎನ್ನೋಣವೆಂದರೆ , ಕಾರ್ನಾಡರಿಗೆ ಚರ್ಚೆಯನ್ನು ಬೇರೆಯೆಡೆಗೆ ತಿರುಗಿಸಲು ಇದು ಸಾಕಾದದ್ದೊಂದು ದುರಂತ . ತಾತ್ವಿಕವಾದ ಚರ್ಚೆಯೊಂದನ್ನು ನಡೆಸಿ ವಿವಾದವನ್ನು ಕ್ಷುದ್ರತ್ವದಿಂದ ಮುಕ್ತಗೊಳಿಸುವುದಕ್ಕೆ ಸಿಕ್ಕ ಅವಕಾಶವನ್ನು ಕಾರ್ನಾಡರು ಬಳಸಿಕೊಳ್ಳಲಿಲ್ಲ . ಅದಕ್ಕೆ ಪ್ರತಿಯಾಗಿ ಕಾರ್ನಾಡರು ತುಘಲಕ್ ನಾಟಕದ ಅನೈತಿಹಾಸಿಕತೆಯನ್ನು ಜೋರು ಧ್ವನಿಯಲ್ಲಿ ಪ್ರತಿಪಾದಿಸಿತ್ತಾ , ಸ್ವಲ್ಪ ಟಿಟ್ ಫಾರ್ ಟ್ಯಾಟ್ ಎನ್ನುವಂತೆ ವಂಶವೃಕ್ಷ , ತಬ್ಬಲಿಯು ನೀನಾದೆ ಮಗನೆಗಳನ್ನು ಉಲ್ಲೇಖಿಸಿ ಭೈರಪ್ಪನವರನ್ನು ಜರೆಯಲು ಪ್ರಯತ್ನಿಸಿದ್ದು ಮಾತ್ರ ನಾಚಿಕೆಗೇಡಿನ ವಿಷಯ . ಕನಿಷ್ಠ ಭೈರಪ್ಪನವರಿಗೆ ತುಘಲಕ್ , ಟೀಪುಗಳನ್ನು ಈ ಪ್ರಸ್ತುತ ವಿವಾದದ ವಿವರಣೆಗೆ ದುಡಿಸಿಕೊಳ್ಳುವುದು ಮುಖ್ಯವಾಗಿತ್ತು . ಆದರೆ ಕಾರ್ನಾಡರಿಗೆ ಭೈರಪ್ಪನವರ ವೈಯಕ್ತಿಕ ನಿಲುವುಗಳನ್ನು ಮೀರಿ ಅವರ ಕಾದಂಬರಿಗಳನ್ನು ಗ್ರಹಿಸಲಾಗದೇ ಹೋದದ್ದು , ತೀರಾ ಕಳಪೆಮಟ್ಟದಲ್ಲಿ ಅವುಗಳನ್ನು ಭೈರಪ್ಪನವರನ್ನು ಜರೆಯಲು ಉಪಯೋಗಿಸಿಕೊಂಡದ್ದು ಮಾತ್ರ ಶೋಚನೀಯ , ದುರಂತ ಎನ್ನದೇ ವಿಧಿಯಿಲ್ಲ . ಬಲಪಂಥೀಯರೆಂದೆನ್ನಿಸಿರುವ ಭೈರಪ್ಪನವರ ಸಂಯಮದ ಪತ್ರಕ್ಕೆ ಉದಾರವಾದಿ ಎಡಪಂಥೀಯರೆಂದೆನ್ನಿಸಿರುವ ಕಾರ್ನಾಡರ ಅಸಹನೆ , ಅಸಹ್ಯದ ಉತ್ತರಗಳು ನನ್ನನ್ನು ದಿಗ್ಭ್ರಾಂತನನ್ನಾಗಿಸಿತು . ಸಾಮಾನ್ಯವಾಗಿ , ನಾವು ಇದಕ್ಕೆ ತದ್ವಿರುದ್ಧವಾದ್ದನ್ನು ನಿರೀಕ್ಷಿಸಿರುತ್ತೇವೆ . ಬಹುತೇಕ ಎಚ್ಚರದ ಮನುಷ್ಯರಾದ ಕಾರ್ನಾಡರು ಪತ್ರಿಕಾಗೋಷ್ಠಿಯ ಅವಿವೇಕತನದಿಂದ ಕಂಗೆಟ್ಟು ಮತ್ತೊಂದು ತಪ್ಪನ್ನೆಸಗಿದರು . ಜಾರಿಬಿದ್ದ ಜಾಣರಾದರು . ತಮ್ಮ ಕಾದಂಬರಿಗಳ ಚಲನಚಿತ್ರಾವೃತ್ತಿಗಳಲ್ಲಿ ತಮ್ಮ ವಿಚಾರಧಾರೆಗೆ ಭಿನ್ನವಾದ ವ್ಯಾಖ್ಯಾನಗಳನ್ನು ಒಪ್ಪುವ ಭೈರಪ್ಪನವರು ಪ್ರಜಾಪ್ರಭುತ್ವದಲ್ಲಿ ಹೆಚ್ಚು ಮುಖ್ಯರೋ , ತಮ್ಮ ಕೃತಿಗಳ ಒಂದು ಎಳೆಯನ್ನು ಎಳೆದದ್ದಕ್ಕೇ ಅತ್ತು , ಚೀರಾಡಿ , ರಂಪ ಮಾಡುತ್ತಿರುವ ಕಾರ್ನಾಡರು ಪ್ರಜಾಪ್ರಭುತ್ವದಲ್ಲಿ ಮಾದರಿಯೋ - ಎಂದು ಗಾಬರಿಯಾಗುತ್ತದೆ . ಈಗಲೂ ಇದನ್ನೇ ಮುಂದುವರೆಸಿರುವ ಭೈರಪ್ಪನವರು , ತಮ್ಮ ಕೃತಿಗಳ ಬೇರೆಯದೇ ತೆರನಾದ ವ್ಯಾಖ್ಯಾನಗಳಿಗೆ ಕಾಸರವಳ್ಳಿಯವರಿಗೆ ಅವಕಾಶವಿತ್ತಿದ್ದಾರೆ . ಹೀಗೆ ವ್ಯಾಖ್ಯಾನಿಸುವುದನ್ನು ಮುಂದುವರೆಸಿರುವ ಕಾಸರವಳ್ಳಿಯವರೂ ಅಭಿನಂದನಾರ್ಹರು . ಅವರಾದರೂ ಮುಂದೆ ತಮ್ಮ ಕೃತಿಗಳನ್ನು ಈ ಕಾರಣಕ್ಕೆ ನಿರಾಕರಿಸದಿರಲಿ . ನನ್ನ ಹಿಂದಿನ ಒಂದು ಲೇಖನದಲ್ಲಿ ನಮ್ಮ ಪ್ರತಿಕ್ರಿಯೆಗಳ ಸಂಕೀರ್ಣತೆಯನ್ನು ಶೋಧಿಸಿಕೊಳ್ಳುತ್ತಾ ವಸ್ತು - ವಿಷಯಕ್ಕಿಂತ ವ್ಯಕ್ತಿಯ ಮೇಲೇ ಅವು ಹೆಚ್ಚು ಅವಲಂಬಿತವಾಗಿರುವುದಕ್ಕೆ ತಲ್ಲಣಿಸಿದ್ದೆ . ಇಲ್ಲಿ ಅಂತಹುದೇ ಮತ್ತೊಂದು ನಿದರ್ಶನವಿದೆ . ಕೆಲ ತಿಂಗಳುಗಳ ಹಿಂದೆ ಕಾರ್ನಾಡರ ಟೀಪು ನಾಟಕದ ಕುರಿತು ಮಾತನಾಡುತ್ತಾ ಸಿ . ಎನ್ . ರಾಮಚಂದ್ರನ್ - ರವರು ಕಾರ್ನಾಡರ ಟೀಪು ಧೀರೋದಾತ್ತನಂತೆ ಕಂಡುಬರುತ್ತಾನಾದರೂ ನಿಜದಲ್ಲಿ ಅವನು ಮತಾಂಧನಾಗಿದ್ದಿರಬಹುದಾದ ಸಾಧ್ಯತೆಯತ್ತ ಗಮನಸೆಳೆದಿದ್ದರು ( ಪತ್ರಿಕೆಗಳಲ್ಲಿ ಪ್ರಕಟವಾದಂತೆ - ರಂಗಶಂಕರದಲ್ಲಿ ಕಾರ್ನಾಡರ ನಾಟಕಗಳ ಕುರಿತಾದ ಸಂವಾದದ ಸಂದರ್ಭ ) . ಆಗ ವಿವಾದವೇನೂ ಉಂಟಾಗಿರಲಿಲ್ಲ . ಸ್ವತಃ ಕಾರ್ನಾಡರು ಪ್ರತಿಭಟಿಸಿರಲಿಲ್ಲ , ಮರುಳಸಿದ್ದಪ್ಪರು , ಗೋವಿಂದರಾಯರ ಕಿವಿಗೆ ಬಿದ್ದಿರಲಿಲ್ಲವೇನೋ . ಆದರೆ ಶಂಕರಮೂರ್ತಿಗಳು , ಚಿಮೂಗಳು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿವೆ . ಮೇಲ್ನೋಟಕ್ಕೆ ಇದೇ ಸರಿ ಅಥವಾ ತಪ್ಪೇನೂ ಇಲ್ಲವೆಂದೆನ್ನಿಸಿದರೂ , ಇದು ಅಷ್ಟೊಂದು ಆರೋಗ್ಯಕರ ವಿಷಯವಲ್ಲ . ಒಂದು ವಿಷಯದ ಕುರಿತಾದ ವಿವಾದ ಯಾರು ಹೇಳಿದರು ಎನ್ನುವ ಕಾರಣಕ್ಕಾದರೆ ಅದು ಪ್ರಜಾಪ್ರಭುತ್ವದ ಪರಿಸರಕ್ಕೆ ಒಳ್ಳೆಯದಲ್ಲ . ಇದೇ ಸಮಯದಲ್ಲಿ ಶಂಕರಮೂರ್ತಿಗಳು ಭಗತ್ ಸಿಂಘ್ ಇತ್ಯಾದಿಗಳನ್ನು ಇತಿಹಾಸದಲ್ಲಿ ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ ಎನ್ನುವುದನ್ನು ಪ್ರತಿಭಟಿಸಿ ಹೇಳಿಕೆ ಕೊಟ್ಟಿದ್ದರು . ಟೀಪೂ ಹೇಳಿಕೆಗೆ ಪ್ರತಿಕ್ರಿಯಿಸಿದ ಎಲ್ಲ ಸಾರ್ವಜನಿಕ ಹೋರಾಟಗಾರರು ಇದಕ್ಕೆ ಪ್ರತಿಕ್ರಿಯಿಸಿಬೇಕಾದ ತುರ್ತನ್ನು ಗ್ರಹಿಸಲಿಲ್ಲವೇಕೆ ? ತನ್ನ ಆವರಣದಲ್ಲೇ ಬದುಕುವ ಸಾಮ್ಸಾರಿಕನಿಗೆ ಈ ಏಕರೂಪತೆ ತಟ್ಟುತ್ತದೆ , ತನ್ನ ಆವರಣದಲ್ಲೇ ಅಸ್ಥಿರಭಾವವೊಂದರ ಅನುಭವವಾಗುತ್ತದೆ . ಆ ಅಸ್ಥಿರಭಾವವನ್ನು ಗುರುತಿಸುವ ಇನ್ಯಾವುದೇ ಪ್ರಕ್ರಿಯೆಯಲ್ಲಿ ತಾತ್ಕಾಲಿಕವಾಗಿಯಾದರೂ ಪಾಲ್ಗೊಳ್ಳುತ್ತಾನೆ . ಆ ಪ್ರಕ್ರಿಯೆಯ ತೀವ್ರಸ್ವರೂಪ ಎಷ್ಟೋ ವರ್ಷಗಳ ನಂತರವಷ್ಟೇ ಅನಾವರಣವಾಗುತ್ತದೆ . ಪ್ರಗತಿಪರ ಹೋರಾಟಗಾರರಿಗೆ ಇದೇಕೆ ಅರ್ಥವಾಗುವುದಿಲ್ಲ ? ಈ ಪ್ರಶ್ನೆಯೇ ಹಿಂದಿನ ಕಳಕಳಿ ಈ ಸರಣಿಯ ಮುಖ್ಯ ಕಾಳಜಿಯಾಗಿದೆ . ಭೈರಪ್ಪನವರ ಪತ್ರಕ್ಕೆ ಕಾರ್ನಾಡರ ಉತ್ತರದಲ್ಲಿ ಈ ಅಸಹನೆಯನ್ನು ಕಡೆಗಣಿಸಿಯೂ ಒಂದು ದುರದೃಷ್ಟಕರವಾದ ಅಂಶವಿದೆ . ತುಘಲಕ್ ಒಂದು ಮನರಂಜಾನಾತ್ಮಕ ನಾಟಕವಾಗಿದ್ದು , ತುಘಲಕನ ಐತಿಹಾಸಿಕತೆಯಲ್ಲಿ ತಮಗೆ ಯಾವುದೇ ಆಸಕ್ತಿಯಿಲ್ಲ ಎಂದಿದ್ದಾರೆ . ಆದರೆ ಇದು ಹೀಗೆ ಸಾರಾಸಗಟಾಗಿ ತಿರಸ್ಕರಿಸಬಹುದಾದ ಪ್ರಶ್ನೆಯಲ್ಲವೆಂದೆನ್ನಿಸುತ್ತದೆ . ಭೈರಪ್ಪನವರು ತಾತ್ವಿಕವಾದ ಪ್ರಶ್ನೆಯೊಂದನ್ನೆತ್ತಿದ್ದಾರೆ . ಇತಿಹಾಸದಿಂದ ದ್ರವ್ಯಗಳನ್ನು ಬಳಸಿಕೊಳ್ಳುವಾಗ , ಕಲಾವಿದನಿಗೆ ಇತಿಹಾಸದ ಕುರಿತು ಯಾವ ನಿಷ್ಠೆಯಿರಬೇಕು ? - ಎನ್ನುವುದೇ ಆ ಪ್ರಶ್ನೆ . ಇದೊಂದು ಸಂದಿಗ್ಧತೆಯ ಪ್ರಶ್ನೆ . ಎತ್ತಿರುವವರು ಸಮರ್ಥ ಕಾದಂಬರಿಕಾರರು . ಅದಕ್ಕೊಂದು ತಾತ್ವಿಕವಾದ ಉತ್ತರದ ಅವಶ್ಯಕತೆಯಿದೆ . ಅಂತಹ ಪ್ರಶ್ನೆಯೊಂದನ್ನು ಸಮರ್ಥವಾಗಿ ಎದುರಿಸುವ ಅಪೂರ್ವ ಅವಕಾಶವನ್ನು ಕಾರ್ನಾಡರು ಕಳೆದಿದ್ದಾರೆ . ಇತಿಹಾಸದ ಕುರಿತು ಹಂಗಿಲ್ಲದೇ ಬರೆಯುವುದು ಕಲಾವಿದನ ಸ್ವಾತಂತ್ರ್ಯವಾದರೆ ಅದು ಯಾವ ಕಾರಣಕ್ಕೆ ಲಭಿಸುತ್ತದೆ , ಅದರ ಇತಿ - ಮಿತಿಗಳೇನು , ಸಾಧಕ - ಬಾಧಕಗಳೇನು , ಜವಾಬ್ದಾರಿಗಳೇನು - ಎನ್ನುವ ಪ್ರಶ್ನೆಗಳನ್ನೆಲ್ಲಾ ಕಾರ್ನಾಡಾರು ಎತ್ತಿಕೊಂಡು ವಿವರಿಸಬಹುದಿತ್ತು . ( ಅವರ ಅಕ್ಯಾಡಮಿಕ್ ಎನ್ನಿಸಬಹುದಾದ ಕಾಕನಕೋಟೆ ವಿಮರ್ಶೆಯನ್ನು ಓದಿರುವ ನನಗೆ ಇಂತಹ ಸವಾಲಿಗೆ ತಮ್ಮನ್ನೊಡ್ಡಿಕೊಳ್ಳುತ್ತಾರೆ ಎಂದೆನ್ನಿಸಿತ್ತು ) . ದುರಾದೃಷ್ಟವಶಾತ್ ಎಲ್ . ಕೆ . ಜಿ . ಮಕ್ಕಳು ' ನೀನು ಮಾತ್ರ ಹಾಗೆ ಮಾಡಬಹುದಾ ? ' ಎಂದು ಕ್ಯಾತೆ ತೆಗೆಯುವ ರೀತಿಯಲ್ಲಿ , ಅಳುಮುಂಜಿಯಂತೆ ವರ್ತಿಸಿ ನಿರಾಸೆಗೊಳಿಸಿದರು . ಮತ್ತೆ ಭೈರಪ್ಪನವರ ಪತ್ರದ ದಾಳಿಗೆ ಸಿಕ್ಕು ಧೂಳೀಪಟವಾದರು . ಇತಿಹಾಸವನ್ನು ಬಳಸಿಕೊಳ್ಳುವಾಗ ಅದರಿಂದ ಇತಿಹಾಸದ ಮೇಲಾಗುವ ಪರಿಣಾಮಗಳಿಂದ ಬಿಡಿಸಿಕೊಳ್ಳಲು ಸಾಧ್ಯವಿಲ್ಲ , ಕಲಾವಿದ ಅದನ್ನೆದುರಿಸಿಯೇ ತೀರಬೇಕು , ಅದಕ್ಕೆ ಜವಾಬ್ದಾರನಾಗಲೇಬೇಕು . ಆ ಹಂಗೇ ಇಲ್ಲದಿರಬೇಕಾದರೆ ಐತಿಹಾಸಿಕ ತುಘಲಕ್ - ನಿಂದ ದ್ರವ್ಯಗಳನ್ನು ತೆಗೆದುಕೊಂಡು , ನಾಟಕದ ಎಲ್ಲಾ ಪಾತ್ರಗಳಿಗೆ ಇತಿಹಾಸಪುರುಷರ ಹೆಸರುಗಳನ್ನಿಡದೇ ಬೇರೆಯ ಹೆಸರಿಟ್ಟುಕೊಳ್ಳಬಹುದಿತ್ತು - ಎನ್ನುವ ಮಾತನ್ನು ವಾದಕ್ಕಾದರೂ ಪರಿಗಣಿಸಬೇಕಾಗುತ್ತದೆ . ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ - ಇತಿಹಾಸವನ್ನು ಬಳಸಿ ಉತ್ಕೃಷ್ಟವಾದ ಕಲಾಕೃತಿಯೊಂದು ಮೂಡಿದಾಗ ಸಮಾಜ ಸಹೃದಯತೆಯಿಂದ ಕಲಾವಿದನಿಗೆ ಆ ಕ್ಷಣಕ್ಕೆ ಕೊಡುವ ಮಾರ್ಜಿನ್ - ಇಷ್ಟನ್ನು ನಿರೀಕ್ಷಿಸಬಹುದು . ಅಭಿವ್ಯಕ್ತಿ ಸ್ವಾತಂತ್ರ್ಯದ ಹಿಂದೆ ಸದಾ ಬಚ್ಚಿಟ್ಟುಕೊಳ್ಳುವುದು ಕಲಾವಿದನಿಗೆ ಶೋಭಿಸುವುದಿಲ್ಲ . ಆ ಸ್ವಾತಂತ್ರ್ಯವನ್ನು ಸಮಾಜದಿಂದ ಸದಾ ಕೋರುತ್ತಾ , ಜವಾಬ್ದಾರಿಯನ್ನು ಮೆರೆಯಬೇಕಾಗುತ್ತದೆ . ತುಘಲಕ್ ನಾಟಕದಲ್ಲಿ ಕಾರ್ನಾಡರು ಅದನ್ನು ಮೆರೆದಿದ್ದಾರೆ , ಅವರ ಟೀಪು ನಾಟಕದ ಬಗ್ಗೆ ಈ ಮಾತನ್ನು ಹೇಳುವುದಕ್ಕೆ ಸಾಧ್ಯವೇ - ಅದನ್ನಿನ್ನೂ ಶೋಧಿಸುತ್ತಿದ್ದೇನೆ . ಆದರೆ ಇದ್ಯಾವುದೂ , ತಾತ್ವಿಕವಾದ ಪ್ರಶ್ನೆಯನ್ನು ಎದುರಿಸದಿರುವುದಕ್ಕೆ ನೆಪವಾಗಬಾರದು . ಮುಂದುವರೆಯುವುದು . . .
ಶನಿವಾರ ಬೆಳಗ್ಗೆ ಸುಮಾರು ಹತ್ತು ಘಂಟೆ ಸಮಯ ಇದ್ದಿರ ಬಹುದು . ನನ್ನ ಪುಟಾಣಿ ಕಿಟ್ಟ ಓಡ್ಕೊಂಡು ಬಂದು , ನನ್ನ ಕೈ ಹಿಡಿದು , ಹೊರಗೆ ಎಳ್ಕೊಂಡು ಹೋದ . ಪಾಂಡವರ ಮನೇಲಿ ಘಟೋದ್ಗಜ ಹುಟ್ಟ್ಕೊಂಡ ಹಾಗೆ ಹುಟ್ಟಿದಾನೆ ನಮ್ಮ ಮನೇಲಿ ಇವನು . ಕೈಗೆ ಸಿಕ್ಕಿದನ್ನ ಕ್ಷಣಾರ್ಧದಲ್ಲಿ ಧ್ವಂಸ ಮಾಡೋ ಕಿರಾತಕ ನನ್ನ ಕಿಟ್ಟ . ರಜಾ ದಿನ ಆಟಾಡ್ಕೊಳೊ ಅಂತ ಹೊರಗೆ ಬಿಟ್ರೆ , ಹೋಗಿ ಆ ಪಕ್ಕದ್ಮನೆ ಖನ್ನಾ ಮನೆ ಬಾಗಿಲನ್ನ ಬ್ಲೇಡ್ ತೊಗೊಂಡು ಗೀಚಿ ಹಾಕಿದಾನೆ ಈ ಮುಂಡೆಮಗ . ಏನ್ ಅಂತಾ ತಲೆ ಹೋಗೊ ಅಷ್ಟು ಘನಂಧಾರೀ ಡ್ಯಾಮೇಜ್ ಆಗದೆ ಇದ್ರೂನೂವೇ , ಬಾಗಿಲ ಮೇಲೆ ವಿಚಿತ್ರ ವಿಚಿತ್ರವಾಗಿ ಕೆತ್ತ್ ಹಾಕಿದಾನೆ . ಲಕ್ಷಣವಾಗಿ ಅಲ್ಲಾದ್ರೂ ' ಅ ಆ ಇ ಈ . . ' ಗೀಚಿದಾನೇನೋ ಅಂದ್ರೆ , ಒಳ್ಳೆ ಆದಿಮಾನವ ಗುಹಾಂತರ ದೇವಾಲಯದಲ್ಲಿ , ಬೇಕಾಬಿಟ್ಟಿ ರೇಖಾಚಿತ್ರ ಗೀಚಿದ ಥರ ಗೀಚಿದಾನೆ . ಯಾರಿಗೂ ಕಾಣ್ಸೋ ಅಷ್ಟು - ಗೊತ್ತಾಗೋ ಅಷ್ಟು ಆಳವಾಗಿ ಕೆತ್ತಿರ್ಲಿಲ್ಲ ಬಿಡಿ . ಸುತ್ತಾ ಮುತ್ತಾ ಬೇರೆ ಯಾರೂ ಇರ್ಲಿಲ್ಲ ನೋಡಿ , ಚುಪ್ ಚಾಪ್ ಅಲ್ಲಿಂದ ಮಗನ ಜೊತೆ ಕಳ್ಚ್ಕೊಲೋಣ ಅಂತ ಅನ್ಕೊಂಡೆ ಮೊದಲು . ಅಲ್ಲ ಮಾತಿಗೆ ಹೇಳ್ತೀನಿ , ಯಾರಿಗಿರಲ್ಲ ಇಂತ ವೀಕ್ ಮೊಮೆಂಟು ಹೇಳಿ ನೋಡೋಣ ; ನಾನು ಈ ವಿಷಯವನ್ನು ನಿಸ್ಸಂಕೋಚವಾಗಿ ಹೇಳ್ಕೋತಾ ಇದೀನಿ ಅಷ್ಟೆ , ಎಲ್ಲರಿಗೂ ಪರಾರಿ ಆಗೋಣಾ ಅಂತ್ಲೇ ಅನ್ಸೋದು ಮೊದಲು . ಆದರೆ ಪಕ್ಕದಮನೆಗೆ ಬಾಗಿಲಿಗೆ ನನ್ನ ಜೇಬಿನಿಂದ ಖರ್ಚು ವೆಚ್ಚ ಆಗಿ , ಹಾಕಿಸ ಬೇಕಾದ ಬಣ್ಣ ಅಷ್ಟೇನೂ ದುಬಾರಿ ಆಗಲ್ಲ ಅಂತ ಊಹೆ ಮಾಡಿದ ಮೇಲೆ , ಸತ್ಯಕ್ಕೂ ಒಂದು ' ಸ್ಮಾಲ್ ಚಾನ್ಚೆ ' ಕೊಡೋಣ ಅಂತ ಧೈರ್ಯಮಾಡಿ ಬಾಗಿಲು ತಟ್ಟೇ ಬಿಟ್ಟೆ . ಒಳಗಡೆ ಇಂದ ಸುಮಾರು ಆರೂವರೆ ಅಡಿ ದೇಹ ಬಾಗಿಲು ತೆಗೀತು . ಭೀಮಕಾಯನಾದ್ರೂ ನಗ್ನಗ್ತಾ ಬರಮಾಡಿಕೊಂಡ್ರು ಖನ್ನ ಅಂಕಲ್ಲು . ನಮ್ಮ ವಠಾರಕ್ಕೆ ಹೊಸದಾಗಿ ಬಂದಿದ್ದ ಅವರು , ತಮ್ಮನ್ನ ತಾವೇ ಪರಿಚಯ ಮಾಡ್ಕೊಂಡ್ರು . ನಾನು ಮುಜ್ಮುಜುಗರವಾಗಿ : ' ನೋಡಿ ಸ್ವಾಮಿ , ನಮ್ಮ ತುಂಟ ಕಿಟ್ಟ , ಹೀಗೆ ನಿಮ್ಮ ಮನೆ ಬಾಗಿಲಿಗೆ ಗಾಯಮಾಡಿದಾನೆ ' ಅಂತ ಹೇಳ್ತಾ , ಹ್ಯಾಪ್ಮುಖ ಹಾಕೊಂಡು , ರೇಖಾಚಿತ್ರಕ್ಕೆ ಬೆರಳು ಮಾಡಿ ತೋರಿಸಿದೆ . ಅದಕ್ಕೆ ಅವರು " ಎಲ್ಲಿ ಎಲ್ಲಿ , ಯಾವುದರ ಬಗ್ಗೆ ನೀವು ಹೇಳ್ಥಾ ಇರೋದು ತೋರ್ಸಿ ? " ಅಂತ ಕಣ್ಣ್ಣಿಗೆ ಕಾಣ್ಸೋದೆ ಇಲ್ವೇನೋ ಅನ್ನೋಷ್ತು ; ಗೀಚಿರೋದು ಲೆಕ್ಕವೇ ಇಲ್ಲವೇನೋ ಅನ್ಸೋಷ್ಟು , ತಾತ್ಸಾರವಾಗಿ ಅದರ ಕಡೆ ನೋಡಿದರು . ಜೋರಾಗಿ ನಗುತ್ತಾ ನನ್ನ ಬೆನ್ನ ಮೇಲೆ ಒಂದು ಏಟುಹಾಕಿ " ಹಾ ! ಹ್ಹಾ ! ಹ್ಹಾ ! ! ! , ಏನು ಸ್ವಾಮಿ ನೀವು , ಇಷ್ಟಕೆಲ್ಲ ಹೀಗೆ ಪ್ಫಾರ್ಮಲ್ಲಗಿ ಬಿಟ್ರೆ ಹೇಗೆ ಹೇಳಿ . ಮಕ್ಕಳು ತೀಟೆ ಮಾಡದೆ ನಾವು - ನೀವು ತೀಟೆ ಮಾಡಕ್ಕೆ ಆಗುತ್ಯೇ ? " ಅಂತ ಹೇಳೋದೆ ? ! ಮತ್ತೊಂದು ಧರ್ಮದೇಟು ಬೆನ್ನ ಮೇಲೆ ಹಾಕಿ , ಕೈ ಕುಲುಕುತ್ತಾ ಜೋರ್ ಜೋರಾಗಿ ನಾಗಡ್ಕೊಂಡು ಬೀಳ್ಕೊಟ್ಟರು . ಈ ದಿನಗಳಲ್ಲಿ ಸಹಾ ಇಂತಾ ಕೂಲ್ ಜನಾನೂ ಸಿಗ್ತಾರಾ ಅಂತ ನಾನು ಮನದಲ್ಲೆ ಅನ್ಕೊಂಡು ವಾಪಸ್ ಮನೆಗೆ ಬಂದೆ . ಅಲ್ಲಿ ವರೆಗು ಕಿಟಕಿನಲ್ಲೇ ಎಗರಿ ಎಗರಿ ಹೊರ ಜಗತ್ತಿನೆಲ್ಲಾ ನೋಡುತ್ತಿದ ನಮ್ಮನೆಯಾಕೆ , " ಏಷ್ಟು ಕೇಳಿದ್ರು ರೊಕ್ಕ ? " ಅಂತ ಮುದ್ದು ಮಗನ ತಲೆ ಸವರುತ್ತ ನನ್ನ ಕಡೆ ಮುಖ ಮಾಡಿ ಕೇಳಿದಳು . ತಾರಮಯ್ಯ ಅಂತ ಹೀಗೇ - ಹೀಗೇ ಕೈ ಅಲ್ಲಾಡಿಸಿ " ಏನೂ ಕೇಳಲಿಲ್ಲ ಕಣೆ " ಅನ್ಕೊಂಡು ನೀರು ಕುಡಿಯಕ್ಕೆ ಅಂತ ಅಡುಗೆಮನೆ ಒಳಗಡೆ ನಡೆದೆ . ದುಡ್ಡು ಕೇಳಲಿಲ್ಲ ಅಂತ ನಂಬೋದಕ್ಕೆ ಆಗದೆ ನಿಂತ ಅವನ ತಾಯಿಯ ಕೈಗೆ ಕಿಟ್ಟಿ ಒಂದು ಸಣ್ಣ ಪ್ಯಾಕೇಟ್ ಕೊಟ್ಟು , ಮತ್ತೆ ಹೊರಗೆ ಆಟಾ ಆಡೋಕೆ ಅನ್ನೋ ನೆಪದಲ್ಲಿ ಇನ್ನೇನೋ ಮನೆಹಾಳು ಕೆಲಸ ಮಾಡೊದಕ್ಕೆ ಓಡಿ ಹೋದ . ಪ್ಯಾಕೇಟ್ ನಲ್ಲಿ ಏನಪ್ಪ ಇದೆ ಅಂತ ನೋಡಿದ್ರೆ , ಒಂದು ಉದ್ದದ ಚಾಕ್ಲೇಟ್ ಕವರ್ . ಮೇಲೆ ಒಂದು ಕಾಗದದ ಮೇಲೆ ಈ ಸಾಲುಗಳು ಇದ್ವು : " ಮುದ್ದು ಕಿಟ್ಟನ ತಂದೆ ಶ್ರೀ ನಂದಗೋಪಾಲ ಸ್ವಾಮಿ ಮತ್ತು ಯಶೋದಮ್ಮನವರಿಗೆ , ವಿನಾ ಕಾರಣ ನಮ್ಮ ಮನೆ ಬಾಗಿಲ ಬಗ್ಗೆ ನಿಮಗಾಗಿರ ಬಹುದಾದ ಮಾನಸಿಕ ತುಮುಲ ಶಮಿಸಲೆಂದು ಹಾರೈಸಿ , ಶುಭ ಕೋರುವ , ನಿಮ್ಮವರೇ ಆದ , ವಿಂಗ್ ಕಮಾಂಡರ್ . ಖನ್ನಾ " . ಕೆಟ್ಟ ಮಾತು ಆಡಿ ದುಡ್ಡು ವಸೂಲಿ ಮಾಡೋದಿರ್ಲಿ ಇಷ್ಟು ಸೌಜನ್ಯವಾಗಿ ಮಾತ್ನಾಡಿ ಉಡುಗೊರೆ ಬೇರೆ ಕಳ್ಸಿಯಾರೆ . . ಅಬ್ಬಾ ! ಇಂತ ನೆರೆ ಹೊರೆ ಪಡೆದ ನಾವೇ ಧನ್ಯರು ಅಂತ ಅನ್ಕೊಂಡ್ವಿ . * * * ೨ * * * ಯಶೋದಮ್ಮ ಇದ್ದ್ಕೊಂಡು " ರೀ , ಎಂಥಾ ಒಳ್ಳೆ ಜನ ಇವರು . ನಮ್ಮ ಮನೆಗೆ ಹೇಳ್ದೆ - ಕೇಳ್ದೆ ಚಾಕ್ಲೇಟ್ ಪಾಕೆಟ್ ಕಳ್ಸಿದ್ದಾರೆ , ನಾವು ಅವರಿಗೆ ಏನೂ ಕಳ್ಸ್ದೆ ಹೋದ್ರೆ ಚೆನ್ನಾಗಿರಲ್ಲ ಅಲ್ವೇ ? " ಅಂತ ಹೇಳಿ , ಕಿಟ್ಟನಿಗೆ ಅಂತ ತೆಗ್ದಿಟ್ಟಿದ್ದ ಮಗ್ಗಿ ಪುಸ್ತಕಕ್ಕೆ ಬಣ್ಣದ ಕವರ್ ಹಾಕಿ , ಅವರ ಧಾಟಿಯಲ್ಲಿಯೇ ಒಂದು ಗೀಚುವಿಕೆ ಗೀಚಿದಳು : " ಮುದ್ದಿನ ಖನ್ನಾ ಗುಂಡನಿಗೆ , ಕಿಟ್ಟುವಿನಿಂದ ಮಗ್ಗಿ ಪುಸ್ತಕ ! " ಅಂತ ಬರೆದು , ಜೂನಿಯರ್ ಖನ್ನಾಗೆ ಉಡುಗೊರೆಯಾಗಿ ಕಳ್ಸಿದ್ಲು . ಹೇಳಿದ ಕೆಲಸಾನ , ಒಂದೇ ಬಾರಿ ಹೇಳ್ಸ್ಕೊಂಡು ಯಾವತ್ತೂ ಮಾಡದೆ ಇದ್ದ ಕಿಟ್ಟ , ಅದೇನೋ ಇವತ್ತು ಮಹದಾಶ್ಚರ್ಯ , ಸರಕ್ಕಂತ ಓಡಿ ಹೋಗಿ , ಬ್ಲೇಡ್ ನಲ್ಲಿ ಬಾಗಿಲು ಕೆರೆದ ಮನೆಗೆ ಮಗ್ಗಿಪುಸ್ಥಕದ ಗಿಫ್ಟು ಕೊಟ್ಟು ಬಂದ . ಮುಯ್ಯಿಗೆ ಮುಯ್ಯಿ ಕೊಟ್ಟಿದೂ ಆಯಿತು , ಎರಡು ಮನೆಯವರಿಗೂ ಸಂತೋಷವೂ ಆಯಿತು ಅನ್ಕೊಂಡು , ಇನ್ನು ಶನಿವಾರದ ಮಿಕ್ಕ ಕೆಲ್ಸ ನೋಡೋಣ ಅಂತ , ನ್ಯೂಸ್ ಪೇಪರ್ ಹಿಡಿದು ಕುಳಿತೆ . ಇನ್ನೂ ಒಂದು ಪುಟ ಸಹಾ ಓದಿಲ್ಲ ನೆಮ್ಮದಿಯಾಗಿ , ಅಷ್ಟು ಹೊತ್ತಿಗೆ ಯಾರೋ ನಕ್ಷತ್ರಿಕ ಬಂದು " ಟ್ರಿನ್ ! ಟ್ರಿನ್ ! " ಅಂತ ಕರೆಘಂಟೆ ಬಾರಿಸಿದ . ಯಾರಪ್ಪ ಇದು . . . ಥೂ ! ಅಂತ ಬೈಕೊಂಡು , ಬಾಗಿಲ ಬಳಿ ಹೋಗಿ ಕದ ತೆಗೆದ್ರೇ : ಒಂದು ಮನುಷ್ಯನಿಗಿಂತ ದೊಡ್ಡ ಹೂಕುಂಡ ಹಿಡ್ಕೊಂದು , ಕುಂಡದಲ್ಲಿ ಇರೋ ರೋಜಾ ಹೂಗಳ ಹಿಂದೆ ಅವಿತಿದ್ದ ಮನುಷ್ಯ ದನಿ " ಶುಭದಿನ ! ವಿಂಗ್ ಕಮಾಂಡರ್ ಖನ್ನ ಅವರ ಕಡೆ ಇಂದ ನಿಮ್ಮ ವಿಳಾಸಕ್ಕೆ ಗುಲ್ದಸ್ತಾ ತಂದೀವ್ನಿ ಸಾಬ್ ಅಂದ . ಹೂಗಳನ್ನ ಒಳಗಿರಿಸಿ ಕೊಂಡು , ಹೂತಂದವನಿಗೆ ಬಕ್ಷೀಸು ಕೊಟ್ಟು ಕಳಿಸಿದೆ . ಏರಡೂ ಕೈಗಳಲ್ಲಿ ವಾರಗಟ್ಲೆ ಸಾಮನುಗಳನ್ನ ಖರೀದಿ ಮಾಡ್ಕೊಂಡು , ಹೊರಲಾರದೆ ಹೊತ್ತು ಕೊಂಡು ಬಂದ ಯಶೋದಮ್ಮ , ಬಂದವಳೆ ಹೂಗುಚ್ಛ ನೋಡಿ ತುಂಬಾ ಮೆಚ್ಕೊಂಡ್ರು . ಖನ್ನಾ ಕಳ್ಸಿದ್ದು ಅಂತ ತಿಳೀತಿದ್ದ ಹಾಗೆ " ಇವತ್ತು ಅವರನ್ನ ಚಹಾಗೆ ನಮ್ಮ ಮನೆಗೆ ಕರ್ಯೋಣ ! " ಅಂತ ಘೋಷಣೆ ಮಾಡಿ ಬಿಟ್ಲು . " ಇವ್ವತ್ತೇನಾಆಅ ! ! ! " ಅಂತ ನಾನು ಬಾಯಿ ಬಿಡೋಷ್ಟರಲ್ಲಿ ಅಡುಗೆ ಮನೆನಲ್ಲಿ ಪಕೋಡ ಕರಿಯೋಕೆ ಹೋಗೆ ಬಿಟ್ಲು . ಇಲ್ಲಿ ಕಿಟ್ಟ ಗುಂಡನನ್ನ ಕರಿಯೋಕೆ ಹೋಗೆ ಬಿಟ್ಟ . ಮಧ್ಯದಲ್ಲಿ ನಾನು ಅರೆ ಬರೆ ಓದಿ ಮಧ್ಯದಲ್ಲೇ ಬಿಟ್ಟ ನ್ಯೂಸ್ ಪೇಪರ್ ಹಿಡಿದು ನಿಂತಿದ್ದೆ . * * * ೩ * * * ಸಂಜೆ ನಾಲ್ಕು ಘಂಟೆ ಆಯಿತು . ಟೀ ಪಾರ್ಟೀಗೆ ಬರೋದು ಬಂದ್ರು , ಬರಿಗೈ ನಲ್ಲಿ ಬರಬಾರ್ದಾ ನಮ್ಮ ಅಥಿತಿಗಳು ? ಕೈನಲ್ಲಿ ಐದು ವಿಧವಾದ ಹಣ್ಣಿನ ಬುಟ್ಟಿಗಳು ; ಬೋಂಡಾ - ಬಜ್ಜಿ ಮಾಡಕ್ಕೆ ಹಾಗಲ್ಕಾಯಿ , ಹೀರೆಕಾಯಿ , ಪಡವಲ್ಕಾಯಿ , ಗೆಡ್ಡೆ ಗೆಣೆಸು ಇನ್ನೂ ಏನೇನೋ ಹೊತ್ತ್ಕೊಂಡು ಅರ್ಧ ಸಿಟಿ ಮಾರ್ಕೆಟ್ನೆ ನಮ್ಮ ಮನೆಗೆ ತರೋಹಾಗೆ ತಂದಿದ್ದ ಆ ವಿಂಗ್ ಕಮಾಂಡರ್ . ಮದುವೆ ಮನೆಗೆ ಕಾಂಟ್ರಾಕ್ಟ್ ತೊಗೊಂಡವ್ರು ಸಹ ಹೀಗೆ ಸಾಮಾನು ತರಲ್ಲ ಬಿಡಿ . ವರ್ಷಕ್ಕೆ ಆಗೋ ಅಷ್ಟು ಸರಕು ತಂದು ನಮ್ಮ ಮನೆ ತುಂಬ್ಸಿದ್ರು , ಅವನ ಈ ಅತಿರೇಕ ನೋಡಿ ನನಗೆ ಮೈ ಎಲ್ಲಾ ಉರಿದು ಹೋಯ್ತು . ಇತ್ತ ಖನ್ನಾ ಹೆಂಡತಿ ಚಿನ್ನಾದೇವಿ , ಯಶೋದಮ್ಮ ಇಬ್ಬರೂ ಹರಟೆ ಹೊಡೆದೂ ಹೊಡೆದೂ ನನ್ನ ಕಿವಿ ತೂತು ಮಾಡಿದ್ರೆ , ಈವಯ್ಯ ಚಾವಣಿ ಕಿತ್ತು ಹೋಗೋ ಹಾಗೆ ಸುಮ್ಸುಮ್ನೆ ಸಡನ್ನಾಗಿ ನಗೋದು . ಕಿಟ್ಟಾ , ಗುಂಡಾ ಒಡ್ಕೊಂಡು , ಚೀರ್ಕೊಂಡು , " ಆಡ್ಕೊಂಡು " ಎಂದಿನಂತೆ ರಂಪ ರಾಮಾಯಣ ಮಾಡ್ತಾ ಇದ್ರು . ನೆಮ್ಮದಿಯಾಗಿ ಇರೋಣ ಅನ್ಕೊಂಡಿದ್ದ ಒಂದು ಶನಿವಾರವೂ ವ್ಯರ್ಥವಾಯಿತು ಅಂತ ನಾನಿದ್ರೆ , " ರೀ , ಎಂಥಾ ಒಳ್ಳೆ ಜನ ಇವರು . ನಮ್ಮ ಮನೆಗೆ ಹೇಳ್ದೆ - ಕೇಳ್ದೆ ಇಷ್ಟೆಲ್ಲ ತಂದಿದ್ದಾರೆ , ಇವರನ್ನ ಊಟಕ್ಕೆ ಕರೀದೆ ಇದ್ರೆ ಚೆನ್ನಾಗಿರಲ್ಲ " ಅಂತ ಯಶೋದಮ್ಮ ರಾತ್ರಿ ಊಟಮಾಡ್ಕೊಂಡು ಹೋಗಿ ಅಂದೇ ಬಿಟ್ಲು , ಅವರೂ ಸಹಾ ಕೇಕೆ ಹಾಕ್ಕೊಂಡು ನಗ್ತಾ ' ಹೂಂ ! ಸರಿ ' ಅಂದೇ ಬಿಟ್ರು . ಮತ್ತೆ ಸೆಕೆಂಡ್ ಇನ್ನಿಂಗ್ಸ್ ಹರಟೆ , ಪುರಾಣ ಶುರುವಾಯ್ತು . ಮಧ್ಯರಾತ್ರಿ ಕಳೆದು ಏರಡು ಘಂಟೆ ಕಳೆದರೂ ಇನ್ನೂ * * * ೪ * * * ಭಾನುವಾರ ಬೆಳ್ಳಂಬೆಳಗ್ಗೆ , ಇನ್ನೂ ಸರಿಯಾಗಿ ಬೆಳಕು ಹರಿದು ಆರು ಘಂಟೆ ಸಹಾ ಆಗಿಲ್ಲ , ಅಷ್ಟು ಬೇಗ ಅವನ ದುಬಾರಿ ಕಾರಿನಲ್ಲಿ , ಖನ್ನಾ ಅವನ ರಿಸಾರ್ಟ್ ರೀತಿ ಇರೋ ತೋಟದ ಮನೆಗೆ ಕರೆದುಕೊಂಡು ಹೋಗಲು ಬಂದ . ಇನ್ನೂ ಗುರುತು ಪರಿಚಯ ಆಗಿ ಎರಡು ದಿನಾ ಸಹಾ ಆಗಿಲ್ಲ , ಅತಿ ಸಲಿಗೆ , ಸಾಮಾನ್ಯಕ್ಕಿಂತ ಹೆಚ್ಚು ಅನ್ನಿಸುವಷ್ಟು ಸ್ನೇಹ ತೋರಿಸ್ತಿದ್ದ ಅನ್ನೋ ಮುಜುಗರ ಒಂದು ಕಡೆ ಆದ್ರೆ , ಇವನು ಆಡೋ ಆಟಕ್ಕೆ ಸರಿ ತೂಗೋ ಹಾಗೆ ನಾವೂ ಸೂಕ್ತ ರೀತಿ ಅವನಿಗೆ ಶಾಂತಿ ಮಾಡಿಸಬೇಕಲ್ಲ ಅಂತ ಪೀಕಲಾಟ ಇನ್ನೊಂದು ಕಡೆ . ಕಡೆಯೇ ಇಲ್ಲವೇನೋ ಅನ್ನಿಸುವಷ್ಟು ಬೆಳಕೊಂಡ ಅವನ ಹೊಲ - ಗದ್ದೆ ಹತ್ರ , ಬಂಗಲೇ ಅಂತಲೇ ಅನ್ನ ಬಹುದಾದಂತ ತೋಟದ ಮನೆ ಬೇರೆ . ಯಾರ ಮನೆ ಕನ್ನ ಹಾಕಿ ಕೋಟ್ಯಾಧೀಶ್ವರ ಆದ್ನೋ ಈ ಖನ್ನಾ . ನಮ್ಮನ್ನ ಒಳಗೆ ಬರಮಾಡಿಕೊಂಡು ರಜೋಪಚರಾನೋ ರಾಜೋಪಚಾರ . ಏನ್ ಅಥಿತಿ ಸತ್ಕಾರ ! ಏನ್ ಅತಿಥಿ ಸತ್ ಕಾರ ! ಒಂದು ಬಾಯಿ ನಲ್ಲಿ ಹೇಳೋದಕ್ಕೆ ಆಗೋದಿಲ್ಲ . ನಿನ್ನೆ ರಾತ್ರಿ ಕಂಠಪೂರ್ತಿ ಮೆಕ್ಕಿದ್ದೇ ಅರಗದೆ ಇನ್ನೂ ಹಳೇ ತೇಗು ಬರ್ತಾ ಇದೇ ಅಂದ್ರೆ , ಬೇಡ ಬೇಡ ಅಂದ್ರೂ ಕೇಳದೆ , ಹತ್ತು ರೀತಿ ಸಿಹಿ ತಿನಿಸುಗಳ್ಳೆಲ್ಲಾ ಮಾಡಿಸಿ ಸಿಹಿ ಊಟದಲ್ಲೇ ಸಾಯಿಸ್ಬಿಟ್ಟ . ಅದೂ ಸಾಲ್ದು ಅಂತ ನಮ್ಮಿಬರಿಗೂ ವೀಳ್ಯಕ್ಕೆ ಅಂತ ಭಾರಿ ಆಗಿರೋ ಕಾಂಚೀಪುರಂ ಝರತಾರಿ ಸೀರೆ ಮತ್ತೆ ರೇಶ್ಮೆ ಶಲ್ಯ ಬೇರೆ ಉಡುಗೋರೆ ತಾಂಬೂಲ ಕೊಟ್ಟ . ಇವರ ಅಬ್ಬರಕ್ಕೆ ಸರಿ ತೂಗುವಷ್ಟು ಅಲ್ಲದೆ ಆದ್ರೂ ನನ್ನ ಆದಾಯಕ್ಕೆ ಸರಿ ಹೊಂದೋ ಹಾಗೆ , ತಕ್ಕ ಮಟ್ಟಿಗೆ ಮುಯ್ಯಿಮಾಡ್ಲೇ ಬೇಕಲ್ಲ ಅನ್ನೋ ಭಾವನೇ ಇಂದ ಬೆವೆತು ಕೊಟ್ಟ ರೇಶ್ಮೇ ಶಲ್ಯಾನಲ್ಲೆ ಬೆವರು ಒರ್ಸ್ಕೋತಾ ಓರೆಗಣ್ಣಿನಲ್ಲಿ ಇವಳ ಮುಖ ನೋಡಿದ್ರೆ , ನೀ ಯಾರಿಗಾದೆಯೋ ಎಲೆಮಾನವ ' ಅನ್ನೋ ದೃಶ್ಟಿನಲ್ಲಿ ನನ್ನ ಕೆಕ್ಕರಿಸಿಕೊಂಡು ನೋಡ್ತಾ ಇದಾಳೆ ನಮ್ಮಾಕೆ . ಮೊಣಕೈ ನಲ್ಲಿ ನನ್ನ ಹೊಟ್ಟೆ ತಿವಿದು , ' ದಂಪತಿಗಳಿಗಾದರೂ ಏನೂ ತರ್ಲಿಲ್ಲ , ಮಗುವಿಗಾದ್ರೂ ಏನಾದ್ರು ಕೋಡ್ಸಿ ಬನ್ನಿ ' ಅಂತ ಸನ್ನೆ ಮಾಡಿದ್ಲು . ಕಿಟ್ಟ ಗುಂಡಾ ಇಬ್ಬರ್ನೂ ಪೇಟೆ ಬೀದಿಗೆ ಕರ್ಕೊಂಡು ಹೋದೆ , ಬೆಂಡು ಬತ್ತಾಸು ಕೋಡ್ಸೋಣ ಅಂತ . ಗುಂಡ ಖನ್ನ ಕುದುರೆ ಕೊಡಿಸಿ ಅಂಕಲ್ ಅಂದ . ಆಟದ ಕುದುರೆ ಕೇಳ್ತಾನೇನೊ ಅನ್ಕೊಂಡ್ರೆ ಜೀವಂತವಾಗಿರೋ ರೇಸ್ ಕುದುರೆ ಕೇಳ್ತಾ ಇದ್ದ ಆ ಮಗು . ಅಪ್ಪನ ಹಾಗೆ ಮಗನಿಗೂ ಅಬ್ಬರ ಆರ್ಭಟ ಜಾಸ್ತಿ . ನನಗೆಲ್ಲಿ ಬರಬೇಕು ನಿಜವಾದ ಕುದುರೆ ಕೊಡಿಸೋ ಅಷ್ಟು ಹಣ ಅಂತ ಸುಮ್ಮನಾದೆ . ಅಷ್ಟರಲ್ಲಿ ಅವನಪ್ಪ ಬಂದು ಆ ಕುದುರೆನ ಹಣ ಕೊಟ್ಟು ಖರೀದಿಸಿಯೇ ಬಿಟ್ಟ . * * * To be con . . . . . .
ನಿಮ್ಮಲ್ಲಿರುವ ಪ್ರಸಕ್ತ ದತ್ತಾಂಶವನ್ನು ಮತ್ತು ವಿಭಾಗಗಳನ್ನು ಹಾಗೆಯೆ ಇರಿಸಿಕೊಂಡು ಶೇಖರಣಾ ಸಾಧನದಲ್ಲಿ ಬಾಕಿ ಉಳಿದ ಸ್ಥಳದಲ್ಲಿ Red Hat Enterprise Linux ಅನ್ನು ಅನುಸ್ಥಾಪಿಸಲು ಈ ಆಯ್ಕೆಯನ್ನು ಆರಿಸಿ . ಈ ಆಯ್ಕೆಯನ್ನು ಆರಿಸುವ ಮೊದಲು ಶೇಖರಣಾ ಸಾಧನದಲ್ಲಿ ಸಾಕಷ್ಟು ಸ್ಥಳವು ಲಭ್ಯವಿದೆ ಎಂದು ಖಚಿತಪಡಿಸಿಕೊಳ್ಳಿ - ವಿಭಾಗ 18 . 1 , " ಅನುಸ್ಥಾಪನ ಪೂರ್ವ " ಅನ್ನು ನೋಡಿ .
ಕಡ್ಡಾಯ ಆಧಾರದ ಮೇಲೆ : ಪ್ರಕಟಿಸಿದ ಬೆಳೆ ಹಾಕಿರುವ ಮತ್ತು ಹಣಕಾಸು ಸಂಸ್ಥೆಗಳಿಂದ ಕೃಷಿ : ಚಟುವಟುಕೆಗಾಗಿ ಸಾಲ ಪಡೆದಿರುವ ಎಲ್ಲ ರೈತರು , ಅಂದರೆ ಸಾಲಗಾರ ರೈತರು
ಒಪ್ಪಣ್ಣ ಅಂತೂ ಈ ಬ್ಲಾಗಿನ ವರೆಗೂ ತಂದು ಬಿಟ್ಟಿದ . ಊರಿಲಿಪ್ಪ ನಾಲ್ಕು ಜನಂಗೊಕ್ಕೆ ಹೇಳಿ ಶಿಫಾರಸ್ಸು ಬೇರೆ ಮಾಡ್ಸಿದ್ದ . ಅವ್ವೂದೇ ಆಚಕರೆ ಮಾಣಿ ಈಗ ಬರೆಗು , ಮತ್ತೆ ಬರೆಗು ಹೇಳಿ ತುದಿಕ್ಕಾಲಿಲಿ ಕೂದುಗೊಂಡು ಕಾಯ್ತಾ ಇದ್ದವಿದ . ಆನೂದೇ ಒಂದು ಹುಂಬತನಲ್ಲಿ ಒಪ್ಪಣ್ಣನ ಒತ್ತಾಯಕ್ಕೆ ಬರವಲೆ ಕೂದದ್ದೂ ಅಪ್ಪು . ಆದರೆ ಕೂದವಂಗೆ ಬರವಲೆ ಎಂತರ ಹೇಳಿಯೇ ಅರಡಿತ್ತಿಲ್ಲೆ ಹೇಳಿ ! ಎಂತರ ಮಾಡುದು ? ಹಾಂಗಾಗಿಯೇ ಆಚಕರೆ ಮಾಣಿ ಹೆರಟ್ಟದ್ದರ ಬಗ್ಗೆ ಈ ಎರಡನೇ ಪ್ರಸ್ತಾವನೆ . . ! ಎಲಾ ಇವನ . . ಬ್ಲೋಗು ಸ್ಟಾರ್ಟ್ ಮಾಡಿ ಬರವಲೆ ಎಡಿತ್ತಿಲ್ಲೆ ಹೇಳಿದರೆ ಎಂತ ಇದು ಸಮ ಇಪ್ಪದು ಆಪಾ ಹೇಳಿ ಕೇಳ್ತಿರಾ ? ಒಂಚೂರು ಉದಾಸನ ಇದಾ . . ಎಷ್ಟೂ ಹೇಳಿರೆ , ಒಪ್ಪಣ್ಣನ ಬತ್ತಿಗೊಕ್ಕೆ ಇತ್ಲಾಗೆ ಪಟಾಕಿ ಮಡುಗುವ ಹೇಳಿದರೂ ಬಿಡದ್ದಷ್ಟು . ಪುರುಸೊತ್ತೂ ಇಲ್ಲೆ ಬಿಡಿ . . ( ಫಿಲ್ಮ್ ನೋಡಿಗೊಂಡು ಕೂದರೂ , ಟಯರ್ ಬೆಳೆದರೂ . . ) . ಅದರಲ್ಲೂ ಪುಟ್ಟಕ್ಕ ಅಂತೂ ಬರೆಯದ್ದಕ್ಕೆ ಕ್ಲಾಸು ತೆಕ್ಕೊತ್ತಾ ಇದ್ದು . . ' ಬರೆ ಬರೆ ' ಹೇಳಿ , ಞಂಕ್ಕು ಞ . . ಛೇ ಎಂತಕ್ಕಾರೂ ' ಬರೆತ್ತೆ ' ಹೇಳಿ ಹೆರಟನೋ . ಆನೋ ವಿಷಯಕ್ಕೆ ಒದ್ದಾಡ್ತಾ ಇದ್ದೆ . . ಅವಕ್ಕೆ ಆಟ . . ಎನಗೋ ಪ್ರಾಣ ಸಂಕಟ . . ಬರವದು ಹೇಳಿರೆ ಅದೆಂತಾ ಕಾಪಿ ಗೀಚಿದ ಹಾಂಗ ? ಬರೆ ಆದರೆ ನಾಲ್ಕು ಎಳೆದಿಕ್ಕುಲಕ್ಕು . . ಅಥವಾ ಬರೆ ಕಡುದಿಕ್ಕುಲಕ್ಕು . . ಆದರೆ ಈ ಬರವದು ಇದ್ದಲ್ದಾ . . ! ಕಷ್ಟ . . ಕಷ್ಟ . ಆದರೆ ಬರವಲೆ ಕೂದಪ್ಪಗ ಎಲ್ಲ ಒಂದೊಂದಾಗಿ ನೆಂಪಾವ್ತು . ಶಾಲೆ , ಕಾಲೇಜು ದಿನಂಗೊ , ನಂತರದ ಓಡಾಟಂಗೊ , ಒದ್ದಾಟಂಗೊ , ಮಾಣಿಗೆ ಅಯಾಚಿತವಾಗಿ ಉದ್ಯೋಗ ಸಿಕ್ಕಿದ್ದು , ಮದಲಾಣ ಹೆದರಿಕೆಗೊ ಎಲ್ಲಾ ಮಾಯ ಆಗಿ ಜೀವನಲ್ಲಿ ಒಂದು ರಜ್ಜ ಧೈರ್ಯ ಬಂದದು , ಹೀಂಗೆ . . . ಹೇಳುಲೆ ಹೋದರೆ ಪುರಾಣ ಬರವ ಮಟ್ಟಿಂಗೂ . . ಈಗ ಎಲ್ಲಾ ಬ್ಲೋಗಿಲೂ ಹಾಂಗೆಯೇ ಅಲ್ದಾ ? ಉದಿಯಪ್ಪಾಗ ಹೇತದ್ದರಿಂದ ಹಿಡಿದು ಇರುಳು ಉಚ್ಚೆ ಹೊಯ್ದು ಮನುಗುವ ವರೆಗೂ , ಕೆಲವೊಂದರಿ ಮನುಗಿದ ನಂತ್ರದ ಕನಸು , ಗೊರಕ್ಕೆಗೂ ಬ್ಲೋಗು ಹೇಳುದು ಒಂದು ಸ್ಟೇಷನ್ ಇದಾ . . ! ಆದರೂ ಎನಗೆ ಬರವಲೆ ವಿಷಯ ಸಿಕ್ಕುತ್ತಿಲ್ಲೆ ಹೇಳುದು ಮಾತ್ರ ನಿಂಗೊ ನಂಬೆಕ್ಕಾದ ಲೊಟ್ಟೆ ಅಲ್ಲದ ಲೊಟ್ಟೆ . . ಬಿ . ಎಸ್ಸಿ , ಎಮ್ . ಎಸ್ಸಿ ಮುಗಿವವರೆಗೂ ಪೋಲಿ , ಪಟಿಂಗ , ಯಾವದಕ್ಕೂ ಆಗದ್ದವ ಹೇಳಿ ಒಂದು ಇಮೇಜ್ ಇತ್ತಿದ್ದ ಮಾಣಿ , ಫಕ್ಕನೆ ಛೇಂಜ್ ಆದದ್ದರ ಬಗ್ಗೆ ಸ್ವತಃ ಮಾಣಿಗೇ ಆಶ್ಚರ್ಯ ! ಸಂಬಂಧಿಕರೆಲ್ಲಾ ಒಬ್ಬೊಬ್ಬರಾಗಿ ಹೀಂಗೊಬ್ಬ ಮಾಣಿ ಇದ್ದ ಆಚಕರೆಲಿ ಹೇಳಿ ಗುರ್ತ ಹಿಡಿವ ಮಟ್ಟಿಂಗೆ ಬೆಳದ್ದು ಹೇಳಿರೆ ಅದೊಂದು ಪವಾಡವೇ ಅಪ್ಪು ! ಒಪ್ಪಣ್ಣ , ಒಪ್ಪಕ್ಕ , ಪುಟ್ಟಕ್ಕ , ಮಾಣಿಪ್ಪಾಡಿ ಅಪ್ಪಚ್ಚಿ , ಪಾಲಾರು ಅಪ್ಪಚ್ಚಿ , ಕುಂಞ ಮಾಂವ , ತಮ್ಮಣ್ಣಪ್ಪಚ್ಚಿ ಎಲ್ಲೋರೂ ಮಾಣಿಯ ಜೀವನಲ್ಲಿ ಒಂದಲ್ಲದ್ದರೊಂದು ರೀತಿಲಿ ಪ್ರಭಾವ ಬೀರಿದ್ದವು , ಮಾಣಿ ಉದ್ಧಾರ ಅಪ್ಪಲೆ ಕಾರಣ ಆಯಿದವು . ಹಾಂಗಾಗಿ ಮಾಣಿಗೆ ಸ್ವಂತ ಸಂಬಂಧಿಕರಿಂದಲೂ , ಫ್ರೆಂಡುಗಳೆ ಹೆಚ್ಚು ಹತ್ತರೆ . ಹಾಂಗಾಗಿ ಎನ್ನ ಹಾಂಗೇ ಎನ್ನ ಬ್ಲೋಗೂ ಒಂಚೂರು ನಿಧಾನವೆ ಸರಿ ! ಆದರೂ ಪ್ರಧಾನ . ಹಾಂಗೆ ಹೇಳಿ , ಒಂಚೂರು ಸಮಾಧಾನ ಮಾಡಿಕ್ಕೊಂಡು ಹೋಯೆಕ್ಕದ . ಹೆಜ್ಜೆಲಿ ಬಿದ್ದ ನೆಣವಿನ ಹಾಂಗೆ ಹೇಳಿ ಹೇಳದ್ದೆ ಸಮಾಧಾನಲ್ಲಿ ತೆಕ್ಕೊಂಡು ಹೋಯೆಕ್ಕು , ಹಾಂಗೇಯೇ ನಿಧಾನ ಆದರೂ ಚೆಂದಲ್ಲಿ ಬರೆವ ಹುಮ್ಮಸ್ಸಿಲಿಪ್ಪ ಮಾಣಿಯ ಪ್ರೋತ್ಸಾಹಿಸೆಕ್ಕು ಹೇಳಿ ಈ ಮೂಲಕ ಕೇಳಿಕೊಂಬದಿದ . . . ಓಹೋಯ್ . . ಕಾಂಬ ಹಾಂಗಾದ್ರೆ . .
rj , ನನಗೆ ಹೆಚ್ಚಿಗೆ ಗೊತ್ತಿದೆ ಎನ್ನುವದು ಸರಿಯಲ್ಲ . ಆದರೆ , ಇನ್ನು ಶರೀಫರ ಪದಗಳನ್ನೂ ಸಹ ಗಮನಿಸೋಣ .
ಸಕತ್ತಾಗಿ ಬರ್ದಿದೀರಾ ನಮ್ಮೂರ ಬಗ್ಗೆ . M - 80 ಗಾಡಿ ನಿಜ್ವಾಗ್ಲೂ ಅಲ್ಲಿನ ಜೀವನಕ್ಕೆ ಹೇಳಿ ಮಾಡಿಸಿದಂತಿದೆ . ದೊಡ್ಡ ಊರುಗಳನ್ನು ಬಿಟ್ಟು ಹೆಚ್ಚು ಕಮ್ಮಿ ಎಲ್ಲಾ ಊರುಗಳಲ್ಲೂ ಜನ ರಸ್ತೆ ಮೇಲೆ ಓಡಾಡೋದು ಬಿಡಿ . ಯಾಕಂದ್ರೆ ಅವ್ರಿಗೆ ಅಲ್ಲಿ ಫುಟ್ ಪಾತ್ ಇರೋಲ್ವಲ್ಲಾ .
ಸಾವರ್ಕರರ ಅಧ್ಯಕ್ಷತೆಯಲ್ಲಿ ಮಹಾಸಭಾ , 1942 ರ ಭಾರತ ಬಿಟ್ಟು ತೊಲಗಿ ಅಂದೋಲನವನ್ನು ಬೆಂಬಲಿಸಲಿಲ್ಲ . ಕಮ್ಯೂನಿಸ್ಟ್ ಪಾರ್ಟಿ ಹಾಗೂ ಮುಸ್ಲಿಮ್ ಲೀಗ್ ಕೂಡಾ ಈ ಅಂದೋಲನವನ್ನು ಸಮರ್ಥಿಸಲಿಲ್ಲ .
ಸಿಧ್ಧಾಂತವಲ್ಲ . ನನಗೆ ತಿಳಿದಂತೆ ಇಷ್ಟು ಕರಾರುವಾಕ್ಕಾಗಿ ಹೆಜ್ಜೆಹೆಜ್ಜೆಗೂ ಹೀಗೆ ಮಾಡಿದರೆ ಹೀಗಾಗುತ್ತದೆ ಎಂಬ ಆತ್ಮದ ಬಗ್ಗೆ ವಿವರೆಣೆಯುಳ್ಳ
ದೊಡ್ಡವಳಾದ ಮೇಲಂತೂ ನನ್ನನ್ನು ಒಂದು ಹೇಸಿಗೆ ಅನ್ನೋ ಹಂಗೇ ನೋಡ್ತಿದ್ದರು ಅಪ್ಪ . ಅದರಲ್ಲೂ ತಿಂಗಳ ಮೂರು ದಿನ ಯಾವುದೋ ಪಿಶಾಚಿ ಮನೆಯಲ್ಲಿದೆಯೇನೋ ಅನ್ನುವಂತೆ ವರ್ತಿಸುತ್ತಿದ್ದರು . ಅದಾದ ಮೇಲೆ ಒಂದು ವಿನಾಕಾರಣದ ಪ್ರೀತಿ ಹುಟ್ಟಿಕೊಂಡ ಮೇಲೆ ನಾನು ಬದಲಾಗುತ್ತ ಹೋದೆ . ವಡ್ಡರ ಹುಡುಗ ರವಿರಾಜ ನನ್ನನ್ನು ಆಕರ್ಷಿಸಿದ್ದು ಹೇಗೆ ಎಂಬುದು ನನಗೆ ಇನ್ನೂ ದೊಡ್ಡ ವಿಸ್ಮಯ . ನಾನು ಅವನ ವಿಶಾಲವಾದ ತೋಳುಗಳಿಗೆ ಮರುಳಾದೆನೆ ? ಅಪ್ಪ , ಚಿಕ್ಕಪ್ಪಗಳ ಪೀಚಲು ದೇಹಗಳನ್ನಷ್ಟೆ ನೋಡಿದ್ದ ನಾನು ರವಿರಾಜನ ಸದೃಢವಾದ ಮೈಕಟ್ಟನ್ನು ನೋಡಿ ಆಕರ್ಷಿತಳಾದೆನೆ ? ಗೊತ್ತಿಲ್ಲ .
1980ರ ದಶಕದ ಕೊನೆಯಲ್ಲಿ ಸ್ಥಳೀಯ ಪೌರ ಸಮಿತಿಯನ್ನು ಮರುಸಂಘಟಿಸಿದ ನಂತರ , ಇವುಗಳು ಉಪನಗರಗಳಾಗಿವೆ , ಆದರೆ ಸಾಧಾರಣವಾಗಿ ಇವುಗಳನ್ನು ಹಾಗೆ ಪರಿಗಣಿಸಲಾಗುವುದಿಲ್ಲ .
ರಾಷ್ಟ್ರದಲ್ಲಿ ಮೂರು ಪ್ರಮುಖ ಆಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ ( ಡಬ್ಲಿನ್ , ಷ್ಯಾನನ್ , ಕಾರ್ಕ್ ಸ್ಥಳಗಳಿಂದ ವಿವಿಧ ರೀತಿಯ ಯುರೋಪಿಯನ್ ಮತ್ತು ಅಂತರ - ಖಂಡೀಯ ಮಾರ್ಗಗಳಲ್ಲಿ ನಿಗದಿತ ಹಾಗೂ ಒಪ್ಪಂದದ ಮೇರೆಗೆ ಗುತ್ತಿಗೆ ವಿಮಾನ ಯಾನ ಸೇವೆಗಳನ್ನು ನೀಡುತ್ತವೆ . ಏರ್ ಲಿಂಗಸ್ ರಾಷ್ಟ್ರೀಯ ವಿಮಾನಯಾನ ಸೇವಾ ಸಂಸ್ಥೆ , ಆದರೂ , ಕಡಿಮೆ ವೆಚ್ಚಕ್ಕೆ ವಿಮಾನಯಾನ ಸೇವೆ ಒದಗಿಸುವ ರಯಾನ್‌ಏರ್ ಅತಿದೊಡ್ಡ ವಿಮಾನಯಾನ ಸೇವಾ ಸಂಸ್ಥೆಯಾಗಿದೆ . ಲಂಡನ್ ಮತ್ತು ಡಬ್ಲಿನ್ ನಡುವಿನ ಮಾರ್ಗವು ಯುರೋಪ್‌ನಲ್ಲೇ ಅತಿ ದಟ್ಟಣೆಯ ಅಂತಾರಾಷ್ಟ್ರೀಯ ಮಾರ್ಗವಾಗಿದೆ . 2006ರಲ್ಲಿ ಇವೆರಡೂ ನಗರಗಳ ನಡುವೆ 4 . 5 ದಶಲಕ್ಷ ಜನರು ಪ್ರಯಾಣಿಸಿದ್ದರು . [ ೭೭ ] [ ೭೮ ]
1919 ರ ಸಮಯ . ದೂರದ ಅಮೆರಿಕಾದ ಬೋಸ್ಟನ್ ಪಟ್ಟಣದಲ್ಲಿ ಚಾರ್ಲ್ಸ್ ಪೊಂಜ್ಹೀ ( 1882 - 1949 ) ಎಂಬ ಇಟಾಲಿಯನ್ ಮೂಲದ ಒಬ್ಬ ಚೋರನಿದ್ದನು . ಅವನು ಅಂತಿಂತಹ ಚೋರನಲ್ಲ . ಅವನೊಬ್ಬ ಸೂಟ್ ಬೂಟ್ ಧರಿಸಿ , ಬಿಸಿನೆಸ್ ನಡೆಸಿ ಒಂದು ಅತ್ಯಾಕರ್ಷಕ ' ಇನ್ವೆಸ್ಟ್ಮೆಂಟ್ ಸ್ಕೀಂ ' ಮುಖಾಂತರ ಲಕ್ಷಾಂತರ ಜನರ ಕೋಟ್ಯಾಂತರ ' ಗುಳುಂ ' ಮಾಡಿದ ಕುಖ್ಯಾತ ಚೋರ - ವಿತ್ತ ಜಗತ್ತಿನ ವೀರಪ್ಪನ್ !
ಐತಾಳ್ರೇ ! ದೇವ್ರು ಏನ್ ಮಾಡಿದ್ರೂ ನಡೆಯುತ್ತೇ ಸ್ವಾಮಿ ಎನ್ನುವ ನಿಮ್ಮ ಅಭಿಪ್ರಾಯವೇನೂ ತಪ್ಪಲ್ಲ ಬಿಡಿ , ಯಾಕಂದ್ರೆ " ಏನು ಮಾಡಿದರೂ ನಡೆಯುವಂತಹ ಕೃತಿಗಳನ್ನೇ " ತಾನೆ ಅವನು ಮಾಡೋದು ? ಹೀಗಾಗಿಯೇ ಅವನಿಗೊಂದು ವಿಶೇಷಣ " ಮರ್ಯಾದಾಪುರುಷೋತ್ತಮ " ಎಂದು .
ಚೆನ್ನಾದ ಬರಹ ಶೈಲಿ . ತಾರಸಿ ಅಂದ್ರೆ ಜೀಟಾಕೆ ಅಲ್ವಾ ? ಸಿಂಧು ಹೇಳಿದ್ದು ಸರಿ ಅಲ್ವಾ ?
ಮುಸ್ಲಿಮರು ಬಹುಸಂಖ್ಯಾತರಾಗಿರುವ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರು ಹಿಂದುಗಳು ಮತ್ತು ಸಿಕ್ಖರ ನರಮೇಧ ನಡೆಸಿ ಹಾಗೆಯೇ ಪಾರಾಗುತ್ತಿದ್ದಾರೆ . ಕೇಂದ್ರ ಸರಕಾರ
ಹಂಪಿ ವಿಶ್ವವಿದ್ಯಾಲಯದೋರು ೨೦೦೫ರಲ್ಲಿ ಡಾ . ವಿವೇಕ್ ರೈ ಅವರ ಸಂಪಾದಕತ್ವದಲ್ಲಿ " ಪ್ರವಾಸಿ ಕಂಡ ವಿಜಯನಗರ " ಅನ್ನೋ ಹೆಸರಿನ ಪುಸ್ತಕ ಹೊರತಂದಿದಾರೆ . ಕನ್ನಡದೋರೆಲ್ಲಾ ಒಮ್ಮೆ ಆ ಪುಸ್ತಕ ಓದಲೇ ಬೇಕು ಗುರು ! ಅದರಲ್ಲಿ ಬಲು ಸೊಗಸಾಗಿ ನಮ್ಮ ನಾಡಿನ ಬಗ್ಗೆ ಮೈ ಝುಂ ಅನ್ಸೋ ಹಾಗೆ ಬರೆದಿದಾರೆ . ಕರ್ನಾಟಕ ಸಾಮ್ರಾಜ್ಯವನ್ನು ಭೇಟಿ ಮಾಡಿದ ಪರದೇಶಿಯರಲ್ಲಿ ಪ್ರಮುಖರೆಂದರೆ . ಇಬ್ - ನೆ - ಬತೂತ , ನಿಕೊಲೋ - ದೆ - ಕೊಂತಿ , ದುಆರ್ತೆ ಬಾರ್ಬೋಸಾ , ಡೊಮಿಂಗೋ ಪ್ಯಾಸ್ ಮೊದಲಾದವರು . ಪರ್ಷಿಯಾ ದೇಶದವನಾದ ಅಬ್ದುಲ್ ರಜಾಕ್‌ನ ಮಾತುಗಳಲ್ಲಿ ಕೆಲವನ್ನು ನೋಡಿ : ಹೀಗೆ ವಿಜಯನಗರದ ಪ್ರತಿ ವಿವರವೂ ಇಲ್ಲಿ ದಾಖಲಾಗಿದೆ . ಅಂದಿನ ಸಾಮಾಜಿಕ ಜೀವನ , ಸಾಹಸ , ವೈಭವ , ಇತಿಹಾಸ , ಕ್ರೌರ್ಯ , ಮೌಢ್ಯ ಎಲ್ಲವನ್ನೂ ಓದ್ತಾ ಇದ್ರೆ ಮೈಮೇಲೆ ಮುಳ್ಳೇಳುತ್ತೆ ಗುರು ! ಈ ಪುಸ್ತಕಾನ ಮುಂದಿನ ಸಲ ಹಂಪೆಗೆ ಹೋದಾಗ ಖಂಡಿತಾ ಕೊಳ್ಳಿ . ಇದು ನಿಮ್ಮ ಹತ್ತಿರದ ಪುಸ್ತಕದ ಅಂಗಡಿಯಲ್ಲಿಯೂ ಸಿಗಬಹುದು . " ಪ್ರವಾಸಿ ಕಂಡ ವಿಜಯನಗರ " ಹೊತ್ತಿಗೆ ಮನೆಗೊಂದು ಶೋಭೆ .
ಮಂಗಳೂರು , ಜುಲೈ , 06 : ಜಲಾನಯನ ಅಭಿವೃದ್ಧಿ ಇಲಾಖೆ ಜಿಲ್ಲಾ ಯೋಜನಾ ವ್ಯಾಪ್ತಿಯೊಳಗಿನ ರೈತರ ಶ್ರೇಯೋಭಿವೃದ್ಧಿಗಾಗಿ 2009 - 10ನೇ ಸಾಲಿನಲ್ಲಿ ರೂ . 573 . 10 ಲಕ್ಷ ರೂ . ವೆಚ್ಚದಲ್ಲಿ 138 ಕಿಂಡಿ ಮತ್ತು ತಡೆ ಅಣೆಕಟ್ಟುಗಳನ್ನು ನಿರ್ಮಿಸಿದೆ ಎಂದು ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಬಿ . ತಿಳಿಸಿದ್ದಾರೆ . ಈ ನಿರ್ಮಾಣ ಗಳಿಂದ ಜಿಲ್ಲೆಯಲ್ಲಿ ಅಂತರ್ಜಲ ಅಭಿವೃದ್ಧಿ ಯೊಂದಿಗೆ ಸುಮಾರು 1200 ಹೆಕ್ಟೇರ್ ಪ್ರದೇಶದಲ್ಲಿ ಎರಡನೇ ಬೆಳೆ ಬೆಳೆಯಲು ಮತ್ತು ತೋಟಗಾರಿಕೆ ಬೆಳೆಗಳಿಗೆ ಬೇಸಿಗೆಯಲ್ಲಿ ನೀರಾವರಿ ಸೌಲಭ್ಯವನ್ನು ಒದಗಿಸಲು ಅನುಕೂಲ ವಾಗಿದೆ . ಜಿಲ್ಲೆಯ ಗ್ರಾಮೀಣ ಭಾಗ ಇಂದಿಗೂ ಕೃಷಿ ಪ್ರಧಾನ ವಾಗಿದ್ದು , ಭತ್ತ , ತೆಂಗು , ಅಡಿಕೆ , ಸಾಂಬಾರು , ರಬ್ಬರ್ ಮುಂತಾದ ಬೆಳೆಗಳನ್ನು ಬೆಳೆಯ ಲಾಗುತ್ತಿದೆ . ವಾರ್ಷಿಕ 4000 ಮಿ . ಮೀ ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮುಂಗಾರಿನಲ್ಲಿ ಮಳೆಯಾದರೂ ಡಿಸೆಂಬರ್ ನಿಂದ ಮೇ ವರೆಗೆ ನೀರೊದಗಿಸಲು ಜಲಾನಯನ ಇಲಾಖೆ ಜಿಲ್ಲೆಯಲ್ಲಿ ಸಮಗ್ರ ಬಂಜರು ಭೂಮಿ ಅಭಿವೃದ್ಧಿ , ಜಲಾನಯನ ಅಭಿವೃದ್ಧಿ , ಪಶ್ಚಿಮ ಘಟ್ಟ ಅಭಿವೃದ್ಧಿ , ಸಮಗ್ರ ಜಲಾನ ಯನ ನಿರ್ವಹಣೆ , ಮಳೆ ನೀರು ಕೊಯ್ಲು ವಿನ್ಯಾಸಗಳ ರಚನೆ ಯೋಜನೆಗಳಡಿ 2008 - 09ನೇ ಸಾಲಿನಲ್ಲಿ 482 . 84 ಲಕ್ಷ ರೂ . ವೆಚ್ಚದಲ್ಲಿ 93 ಕಿಂಡಿ ಅಣೆಕಟ್ಟು , 7 ತಡೆಅಣೆಕಟ್ಟು , 140 ನಾಲಾ ತಡೆಗೋಡೆ ಕಾಮಗಾರಿ ಗಳನ್ನು ಕೈಗೊಂಡಿದೆ .
ಇಂದು ಹಾಲುಮಾರುವವನ , Corporation ಕಸ ಗುಡಿಸುವವನ , ಮನೆಕೆಲಸ ಮಾಡುವವಳ ಮಕ್ಕಳೂ ಕೂಡ ನಿಷ್ಟೆಯಿಂದ ಓದಿ , ಆ ನಿಮ್ಮ ' Welfare Oriented ' ಸರ್ಕಾರದ ಖಜಾಂಜಿಗಳ Personal ಬೊಕ್ಕಸಕ್ಕೆ ಹಣ ಸುರಿಯದೆ , ವಿದ್ಯೆ , ಯೋಗ್ಯತೆಯ ಆಧಾರದ ಮೇಲೆ ದೊರೆಯುವ ಐಟಿ ಕೆಲಸಗಳಿಂದ ಸ್ವಂತ ಕಾಲುಗಳ ಮೇಲೆ ನಿಂತಿದ್ದಾರೆ . ಇವರಿಗಿಂತಲೂ ಹಣದ ಬೆಲೆಯನ್ನು ಅರಿತವರು ಬೇಕಿಲ್ಲ . ಇಂದು ಐಟಿ ಕ್ಷೇತ್ರ ಮಾತ್ರವಲ್ಲ , ಎಲ್ಲವೂ ನಡೆಯುತ್ತಿರುವುದಲ್ಲ , ಓಡುತ್ತಿರುವುದು ಆ ಕುರುಡು ಕಾಂಚಾಣದೊಂದಿಗೇ . ಅದರ ' ಮೌಲ್ಯ ' ವೇ ಕಳೆದು ಹೋಗಿದೆ .
ನಾವು ಸದುದ್ದೇಶದಿಂದ ಉಚಿತವಾಗಿ ಬಿಡುಗಡೆ ಮಾಡಿದ ಈ ತಂತ್ರಾಂಶವನ್ನು ಅಂತರ್ಜಾಲದಿಂದ ಡೌನ್ ಲೋಡ್ ಮಾಡಿಕೊಂಡು ಸಿಡಿಯಲ್ಲಿ ಕಾಪಿ ಮಾಡಿ , ಅವುಗಳನ್ನು ಶಾಲೆಗಳಿಗೆ ಹಂಚಿ , ಕೆಲವು ಮಧ್ಯವರ್ತಿಗಳು ಮುಖ್ಯೋಪಾಧ್ಯಾಯರಿಂದ ಹಣ ವಸೂಲಿ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ . ಈ ರೀತಿ ಆಗಬಾರದೆಂದು ಶಾಲತಂತ್ರದ ಎರಡು ರೀತಿಯ ಆವೃತ್ತಿಗಳನ್ನು ಬಿಡುಗಡೆಮಾಡಲಾಗಿದೆ .
ಈ ಬದುಕೇ ಹಾಗೇ ಸದಾ ಜೀವನ ಸಾತರ್ಕ್ಯ ಹುಡುಕುತ್ತಾ , ಹಲವು ಗಮ್ಯಗಳನ್ನು ಶೋದಿಸುತ್ತಾ , ಹೊಸ ದಿಗಂತದತ್ತ ಹಾರುವ ಇದು ಹಲವು ನೆನಪುಗಳನ್ನು ತನ್ನೊಳಗೆ ಅಡಗಿಸಿಕೊಳ್ಳುತ್ತಾ ನಡೆದು ಬಿಡುತ್ತದೆ .
ಕೊಡವ ತಕ್ಕ್‌ನಲ್ಲಿ ಮೊತ್ತ ಮೊದಲಿಗೆ ಸಾಹಿತ್ಯ ಸೃಷ್ಟಿಯಾದದ್ದು ಜಾನಪದ ಹಾಡುಗಳಲ್ಲಿ . ಕಾವೇರಿ , ಇಗ್ಗುತಪ್ಪ , ಮೊದಲಾದ ದೇವಿ - ದೇವತೆಯರನ್ನು ಸ್ತುತಿಸುವ ಹಾಡುಗಳಲ್ಲದೆ , ಕೊಡಗಿನ ಭೂಸ್ವರೂಪ ಮತ್ತು ಎಲ್ಲೆಕಟ್ಟುಗಳನ್ನು ವರ್ಣಿಸುವ ' ದೇಶಕಟ್ಟ್ ಪಾಟ್ಟ್ ' ಗಳಿವೆ . ಕೊಡವ ಸಂಪ್ರದಾಯದ ಎಲ್ಲಾ ಆಚರಣೆಗಳಿಗೆ ಸಂಬಂಧಿಸಿದ ಹಾಡುಗಳಿವೆ . ಇವು ಉದಾಹರಣೆಗಾಗಿ , ಪುತ್ತರಿ ಪಾಟ್ಟ್ , ಮಂಗಲ ಪಾಟ್ಟ್ ( ಮದುವೆ ಹಾಡು ) , ಚಾವು ಪಾಟ್ಟ್ ( ಮರಣದ ಸಂದರ್ಭದಲ್ಲಿನ ಹಾಡು ) , ಇತ್ಯಾದಿ . ಕೋಲಾಟದ ಹಾಡುಗಳೂ , ನಾಡೆ ಕರೆಯುವ ಸಂಭಾಷಣೆಗಳೂ ಇವೆ .
ವಿಚಾರವೆಂಬುದು ಸಂದೇಹಕ್ಕೊಳಗು ನೋಡಾ ವಿಚಾರಿಸುವನ್ನಕ್ಕರ ನೀ ನಾನೆಂಬುದನೆತ್ತ ಬಲ್ಲೆ ಮರುಳೆ ವಜ್ಞ್ಮನೋತೀತವಾದ ಘನವು ವಿಚಾರಕ್ಕೆ ನಿಲುಕುವುದೇ ಗೊಹೇಶ್ವರಲಿಂಗವು ತನ್ನ ತಿಳಿದು ನೋಡಿಹೆನೆಂಬವರ ವಿಚಾರದ ಬಲೆಯಲ್ಲಿ ಕೆಡಹಿದನು
> > ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಹಮಾಸ್ ಹಾಗೂ ಇಸ್ರೇಲ್ ನಡುವಿನ ತಿಕ್ಕಾಟದ ಬಗ್ಗೆ ನಮಗೆ ಪತ್ರಿಕೆಗಳಲ್ಲಿ ಅಷ್ಟಾಗಿ ಮಾಹಿತಿ ದೊರೆಯುತ್ತಿಲ್ಲ . ಉದವಾಣಿಯಲ್ಲಿ ನಿರಂಜನ ವಾನಳ್ಳಿಯವರ ಅಂಕಣ ಬರಹ ಒಂದು ಕಾಣಿಸಿತು . - ಗಾಜಾ - ಮಕ್ಕಳು , ಮಹಿಳೆಯರ ಜೀವ ಎಣ್ಣೆಗಿಂತಲೂ ಅಗ್ಗವಾದ ತಾಜಾ ದುರಂತ
ಬಹುಶಃ ಈ ಅಂಕಣವನ್ನು ನೀವು ಓದುವ ಹೊತ್ತಿಗೆ ನಮ್ಮ ಹೊಸ ರಾಷ್ಟ್ರಪತಿ ಯಾರೆಂದು ಗೊತ್ತಾಗಿರುತ್ತದೆ . ಪ್ರತಿಭಾ ಪಾಟೀಲ್ ಗೆಲ್ಲುವ ಅಭ್ಯರ್ಥಿಯೆಂದು ಸಮೂಹ ಮಾಧ್ಯಮಗಳು ಈಗಾಗಲೇ ಮತಗಳ ಲೆಕ್ಕಾಚಾರ ಹಾಕಿ ಘೋಷಿಸಿವೆ . ಮಾಯಾವತಿಯ ವಿರುದ್ಧ ತಾಜ್ ಹಗರಣದ ಮೊಕದ್ದಮೆ ವಿಚಾರಣೆಗೆ ರಾಜ್ಯಪಾಲರು ಅನುಮತಿ ನಿರಾಕರಿಸುವಂತೆ ನೋಡಿಕೊಳ್ಳುವ ಮೂಲಕ ಬಿ . ಎಸ್ . ಪಿ . ಬೆಂಬಲವನ್ನೂ ಕಾಂಗ್ರೆಸ್ ಈಗಾಗಲೇ ಖಚಿತಪಡಿಸಿಕೊಂಡಿರುವುದರಿಂದ ಮತ್ತು ತೃತೀಯ ರಂಗದ ಪಕ್ಷಗಳು ಈ ಚುನಾವಣೆಯಲ್ಲಿ ಮತ ಚಲಾಯಿಸದೇ ಇರುವ ತೀರ್ಮಾನವನ್ನು ಕೈಗೊಂಡಿರುವುದರಿಂದ , ಕಾಂಗ್ರೆಸ್ ಅಭ್ಯರ್ಥಿ ಪ್ರತಿಭಾ ಪಾಟೀಲ್ ಗೆಲವು ಇನ್ನಷ್ಟು ನಿಚ್ಚಳವಾಗಿರುವಂತೆ ತೋರುತ್ತಿದೆ . ಆದರೆ , ಜಾತಿ ಲೆಕ್ಕಾಚಾರವೂ ಈ ಬಾರಿಯ ಚುನಾವಣೆಯಲ್ಲಿ ಚಾಲನೆಗೊಂಡಿರುವುದರಿಂದ , ಅಮರ್ ಸಿಂಗ್‌ರಂತಹ ಪ್ರಳಯಾಂತಕ ರಾಜಕೀಯ ದಲ್ಲಾಳಿಗಳು ನಟವರ್ ಸಿಂಗ್‌ರಂತಹ ಅತಂತ್ರ ರಾಜಕಾರಣಗಳ ಮೂಲಕ ತೆರೆಮರೆಯಲ್ಲಿ ಶೆಖಾವತ್ ಪರ ಕ್ಷತ್ರಿಯ ರಾಜಕಾರಣ ಮಾಡುತ್ತಿರುವ ಸೂಚನೆಗಳು ದೊರಕಿದ್ದು ; ಅಂತಿಮ ಫಲಿತಾಂಶ ಏನೇ ಆದರೂ , ಈವರೆಗೆ ತನ್ನ ಪಾವಿತ್ರ್ಯ ಉಳಿಸಿಕೊಂಡು ಬಂದಿದ್ದ ರಾಷ್ಟ್ರಪತಿ ಚುನಾವಣೆಯೂ ಈ ಬಾರಿ ಮಲಿನಗೊಳ್ಳುವ ಸಾಧ್ಯತೆಯನ್ನು ತೆರೆದಿಟ್ಟಿದೆ . ಜೊತೆಗೆ , ಹಾಲಿ ರಾಷ್ಟ್ರಪತಿ ಕಲಾಂ ಅವರು ಮೊದಲು ತಾವು ಎರಡನೇ ಅವಧಿಗೆ ಅಭ್ಯರ್ಥಿಯಲ್ಲ ಎಂದು ಘೋಷಿಸಿ , ನಂತರ ಗೆಲುವು ಖಚಿತವಾದರೆ ಸ್ಪರ್ಧಿಸಲು ಸಿದ್ಧ ಎಂಬ ಸಮಯ ಸಾಧಕ ಹೇಳಿಕೆ ನೀಡಿ , ವಾತಾವರಣವನ್ನು ಹದಗೆಡಿಸುವಲ್ಲಿ ತಮ್ಮ ಪಾತ್ರವನ್ನೂ ಸಮರ್ಥವಾಗಿ ನಿರ್ವಹಿಸಿದ್ದಾರೆ ! ಹಾಗೆ ನೋಡಿದರೆ , ರಾಷ್ಟ್ರಪತಿ ಸ್ಥಾನಕ್ಕೆ ಈ ಚುನಾವಣೆಗಿಂತ ತುರುಸಿನ ಸ್ಪರ್ಧೆ ಈ ಹಿಂದೆ ನಡೆದಿದೆಯಾದರೂ - 1967ರಲ್ಲಿ ಝಕೀರ್ ಹುಸೇನರ ವಿರುದ್ಧ ಸುಬ್ಬರಾವ್ ಹಾಗೂ 1969ರಲ್ಲಿ ಸಂಜೀವ ರೆಡ್ಡಿಯವರ ವಿರುದ್ಧ ವಿ . ವಿ . ಗಿರಿ - ಈ ಬಾರಿಯಷ್ಟು ಜಿಗುಪ್ಸೆಕರ ಪ್ರಚಾರ ಎಂದೂ ನಡೆದಿರಲಿಲ್ಲ . ಆಡಳಿತ ಅದಕ್ಷತೆ , ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದಿಂದ ಹಿಡಿದು ವ್ಯಭಿಚಾರದವರೆಗೆ ಅನೇಕ ರೀತಿಯ ಆಪಾದನೆಗಳು ಈ ಪ್ರಚಾರದಲ್ಲಿ ಸೇರಿಕೊಂಡು ; ಯಾರೇ ರಾಷ್ಟ್ರಪತಿಯಾಗಿ ಆಯ್ಕೆಯಾಗಲಿ , ಅವರನ್ನು ರಾಷ್ಟ್ರ ಅನುಮಾನದಿಂದ ನೋಡುವ ಪರಿಸ್ಥಿತಿಯನ್ನು ನಮ್ಮ ರಾಜಕೀಯ ಪಕ್ಷಗಳು ಸೃಷ್ಟಿಸಿವೆ .
ಅಶ್ವತ್ಥಾಮನು ಇಷ್ಟೊಂದು ಭಯಂಕರನಾದದ್ದನ್ನು ಪಾಂಡವರು ನೋಡಿದ್ದು ಇದೇ ಮೊದಲು . ಶಂಕರನಂತೆ ನಿಂತ ಅವನ ಬಾಣಗಳನ್ನು ಘಟೋತ್ಕಚನ ಹೊರತು ಇನ್ನಾರೂ ತಡೆಯಲಾರದೆ ಹೋದರು . ಘಟೋತ್ಕಚನೂ ಪಾಂಚಾಲ ರಾಜಕುಮಾರರೂ ಚೆನ್ನಾಗಿಯೇ ಯುದ್ಧಮಾಡಿದರೂ , ಅಶ್ವತ್ಥಾಮನು ಪಾಂಚಾಲ ರಾಜಕುಮಾರರನ್ನು ಕೊಂದಲ್ಲದೆ ಘಟೋತ್ಕಚನನ್ನೂ ನೋಯಿಸಿದನು . ಮೂರ್ಛೆಹೋದ ಅವನನ್ನು ರಣರಂಗದಿಂದ ಕೆಲಕಾಲ ಹೊರಗೊಯ್ಯಲಾಯಿತು . ರಾಕ್ಷಸಸೇನೆ ಅಶ್ವತ್ಥಾಮನಿಂದ ಬಹುವಾಗಿ ಘಾಸಿಗೊಳಗಾಯಿತು . ಮಕ್ಕಳನ್ನು ಕಳೆದುಕೊಂಡ ದ್ರುಪದ ಘೋರವಾಗಿ ಯುದ್ದಮಾಡಿದನು . ಸೋಮದತ್ತನ ತಂದೆ ಬಾಹ್ಲೀಕ ಮತ್ತು ಭೀಮನ ನಡುವೆ ದ್ವಂದ್ವವೇರ್ಪಟ್ಟಿತು . ರಣರಂಗದಲ್ಲಿ ಅವನು ಯಾವ ಯುವಕನಿಗೂ ಕಡಿಮೆಯಿಲ್ಲದಂತೆ ಹೋರಾಡುತ್ತಿದ್ದನು . ಭೀಮನು ಅವನನ್ನು ಬಲವಾದ ಒಂದು ಗದಾಪ್ರಹಾರದಿಂದ ಕೊಂದುಹಾಕಿದನು . ಕುರುವಂಶದ ಹಿರಿಯನೊಬ್ಬನು ಬಿದ್ದನೆಂದು ಹಾಹಾಕಾರವುಂಟಾಯಿತು . ಭೀಷ್ಮನೂ ಸಹ ಅವನಿಗಿಂತ ಚಿಕ್ಕವನು . ಇದನ್ನು ನೋಡಿದ ಧಾರ್ತರಾಷ್ಟ್ರರು ಅವನ ಮೇಲೇರಿಬಂದರು . ಅವರಲ್ಲಿ ಹತ್ತು ಜನರನ್ನು ಕೊಂದದ್ದಲ್ಲದೆ , ತನ್ನ ಸೈನ್ಯದೊಂದಿಗೆ ಬಂದಿದ್ದ ಶಕುನಿಯು ಸಹೋದರರನ್ನು ಭಿಮನು ಕೊಂದು ಹಾಕಿದನು . ದ್ರೋಣನು ಯುಧಿಷ್ಥಿರನ ಮೇಲೆ ತನ್ನಲ್ಲಿದ್ದ ಅಸತ್ರಗಳನ್ನೆಲ್ಲ ಪ್ರಯೊಗಿಸಿದನು . ಅವೆಲ್ಲವೂ ನಿಷ್ಫಲವಾಗಲು , ಬ್ರಹ್ಮಾಸ್ತ್ರವನ್ನೇ ಅಭಿಮಂತ್ರಿಸಿದನು . ಯುಧಿಷ್ಠಿರನು ಅದನ್ನು ಬ್ರಹ್ಮಾಸ್ತ್ರದಿಂದಲೇ ನಿವಾರಿಸಿದನು . ದ್ರೋಣನು ಕೊನೆಗೆ ಹಿಂತೆಗೆದು ತನ್ನ ಗಮನವನ್ನು ಬೇರೆಡೆಗೆ ಹರಿಸಿದನು . ಭಿಮಾರ್ಜುನರಿಬ್ಬರೂ ಮುಂದೆ ಬಂದು ಎರಡು ಕಡೆಗಳಿಂದ ದ್ರೋಣನನ್ನೆದುರಿಸಿದರು . ಕೌರವ ಸೈನ್ಯವು ಈಗ ಕರಗತೊಡಗಿತು . ಸಹೋದರರಿಬ್ಬರೂ ದ್ರೋಣನ ಮೇಲೆ ಬಾಣಗಳ ಮಳೆಯನ್ನೇ ಸುರಿಸಿದರು . ಮೃತ್ಯುವಿನ ಈ ರುದ್ರತಾಂಡವದಿಂದ ದು : ಖಿತನಾದ ರಾಜನನ್ನು ರಾಧೇಯನು ಸಮಾಧಾನಪಡಿಸಿ , ತನ್ನ ಪ್ರತಾಪವನ್ನು ಹೇಳಿಕೊಂಡು , ತಾನೇ ಅರ್ಜುನನನ್ನು ಎದುರಿಸಿ ಶಕ್ತ್ಯಾಯುಧದಿಂದ ಅವನನ್ನು ಕೊಲ್ಲುತ್ತೇನೆಂದು ಹೊರಟನು . ಈ ಮಾತನ್ನು ಕೇಳುತ್ತಿದ್ದ ಕೃಪನು , ` ` ಆಹಾ ! ಏನು ಶೌರ್ಯ ರಾಧೇಯನದು ! ಎಲ್ಲವೂ ಮಾತಿನಲ್ಲೇ ! ಕೆಲವೇ ತಿಂಗಳ ಹಿಂದೆ ವಿರಾಟನ ಗೋವುಗಳನ್ನು ಹಿಡಿಯುವಾಗ ನೋಡಲಿಲ್ಲವೆ ಇವನ ಸೌರ್ಯವನ್ನು ! ಮಾತು ಶೋಭಿಸುವುದು ಬ್ರಾಹ್ಮಣನಿಗೆ ಮಾತ್ರ . ಕ್ಷತ್ರಿಯನಾದವನು ಕಾರ್ಯ ಮಾಡಿ ತೋರಿಸಬೇಕು . ಸುಮ್ಮನೆ ಮಾಗಿಯ ಮೇಘದಂತೆ ವ್ಯರ್ಥವಾಗಿ ಬಡಬಡಿಸಿದರೆ ಏನು ಪ್ರಯೋಜನ ? " ಎಂದು ಛೇಡಿಸಿದನು . ರಾಧೇಯನು , ` ` ಯುಧಿಷ್ಠಿರನು ಧರ್ಮವನ್ನು ಬಿಟ್ಟುಹೋಗುವವನಲ್ಲ ; ಅರ್ಜುನ ವೀರರಲ್ಲಿ ವೀರ ; ಅವರಿಗೆ ಕೃಷ್ಣನ ಸಹಾಯವಿದೆ ; ಇದೆಲ್ಲವೂ ಸರಿಯೇ . ಆದರೆ ಅರ್ಜುನನನ್ನು ನಾನು ಅವರಪ್ಪನೇ ಕೊಟ್ಟಿರುವ ಶಕ್ತ್ಯಾಯುಧದಿಂದ ಗೆದ್ದು ನನ್ನ ಏಕೈಕ ಮಿತ್ರನಾದ ದುರ್ಯೋಧನನನ್ನು ಸಂತೋಷಪಡಿಸುತ್ತೇನೆ . ವಿಜಯಶ್ರೀ ಕೊನೆಗೆ ಯಾರಿಗೆ ಮಾಲೆ ಹಾಕುವಳೋ ಯಾರಿಗೆ ಗೊತ್ತು ? ಈವರೆಗೇನೋ ಅವಳು ಪಾಂಡವರ ಪರವಾಗಿದ್ದಾಳೆ . ಪಾಂಡವರು ಹೆಚ್ಚು ಬಲಶಾಲಿಗಳೆಂದು ನಾನೊಪ್ಪುವುದಿಲ್ಲ . ಈವರೆಗೆ ಅದೃಷ್ಟ ಅವರ ಕಡೆಗಿದೆ . ನನ್ನಿಂದ ಸಾಧ್ಯವಾದಷ್ಟೂ ಹೋರಾಡುವೆನು ; ಫಲವು ವಿಧಿಯ ಕೈಯಲ್ಲಿರುವಂಥದು . ವಿಧಿಯೇ ಹೆಚ್ಚಿನದು , ಅರ್ಜುನನಲ್ಲ . ಕೃಪ , ನೀನು ಪಾಂಡವರ ಪಕ್ಷಪಾತಿ . ನಿನ್ನ ಮಾತು ಯಾವಾಗಲೂ ಅವರ ಕಡೆಗೇ . ಎಂದೇ ಈಗ ನಿನ್ನ ನಾಲಿಗೆಯನ್ನು ಸೀಳುವೆನು " ಎನ್ನುತ್ತ ಕತ್ತಿಯನ್ನು ಹಿರಿದನು . ಅಶ್ವತ್ಥಾಮನು ಸಮಯಕ್ಕೆ ಸರಿಯಾಗಿ ಬಂದು ಅವನನ್ನು ತಡೆದು , ` ` ನನ್ನ ಸೋದರಮಾವನ ಮೇಲೆ ಏರಿಹೋಗುವೆಯಾ ನಿನ್ನನ್ನು ಕೊಲ್ಲುತ್ತೇನೆ " ಎಂದು ನುಗ್ಗಿದನು . ದುರ್ಯೋಧನನು ಬಂದು ಅವನನ್ನು ತಡೆದನು . " ಅಶ್ವತ್ಥಾಮ , ಸಾಕು ನಿಲ್ಲಿಸು . ವ್ಯೆಯಕ್ತಿಕ ಜಗಳಗಳಿಗೆ ಇದು ಸಮಯವಲ್ಲ . ಯುದ್ದವನ್ನು ಗೆಲ್ಲಲು ನಾನು ನಿಮ್ಮೆಲ್ಲರನ್ನು ಅವಲಂಬಿಸಿರುವೆನು . ಪಾಂಡವಸೇನೆಯು ಈಗಲೂ ನಮ್ಮ ಮೇಲೆ ನುಗ್ಗಿ ಬರುತ್ತಿರುವುದು . ನೀನೀಗ ರಾಧೇಯನ ಮೇಲಿನ ಕೋಪನನ್ನು ಬಿಡು " ಎಂದನು . ಅಶ್ವತ್ಥಾಮನು ದುರ್ಯೋಧನನ ಮಾತನ್ನು ತೆಗೆದುಹಾಕಲಾರದೆ ಮನಸ್ಸನ್ನು ಸಮಾಧಾನಮಾಡಿಕೊಂಡನು . ರಾಧೇಯನು ಬಿಲ್ಲನ್ನು ತೆಗೆದುಕೊಂಡು ಪಾಂಡವಸೈನ್ಯದ ಕಡೆಗೆ ಹೊರಟನು .
ಪೆಸಿಫಿಕ್ ವಾಯವ್ಯ ಪ್ರದೇಶಗಳಲ್ಲಿ ನೀಲಗಿರಿ ಮರಗಳು ಅಸಾಧಾರಣವಾದ ರೀತಿಯಲ್ಲಿ ತಮ್ಮ ಕಾರ್ಯಕ್ಷಮತೆಯನ್ನು ಮೆರೆಯುತ್ತವೆ . ವಾಷಿಂಗ್ಟನ್ , ಓರೆಗಾಂವ್ ಮತ್ತು ಬ್ರಿಟಿಷ್ ಕೊಲಂಬಿಯಾದ ಭಾಗಗಳು ಇದಕ್ಕೆ ನಿರ್ದಶನಗಳಾಗಿವೆ .
ಇದನ್ನು ಸಹ ಶೋಧಿಸು : ವಾಯ್ನೆ ರೂನಿ , ಮ್ಯಾಂಚೆಸ್ಟರ್ ಯುನೈಟೆಡ್ , ಅಲೆಕ್ಸ್ ಫರ್ಗುಸನ್
ತಲಾದಾಯವು ಸುಮಾರು 30 ಸಾವಿರ ಡಾಲರ್ ಗಳಿರುವ ಅಮೇರಿಕಾದಂಥಹ ರಾಷ್ಟ್ರಗಳಲ್ಲಿ ಅದನ್ನು ಪಡೆದುಕೊಳ್ಳಲು ಸಾಧ್ಯವಿರುವುದಷ್ಟೆ . ಆದ್ದರಿಂದ ಭಾರತಕ್ಕೆ ಬೇಕಾಗಿರುವುದು ರೂಪಾಯಿಗಳಲ್ಲಿರುವ ಸಾಫ್ಟ್ವೇರ್ ಹೊರತು ಡಾಲರ್ ಗಳಲ್ಲಿರುವುದಲ್ಲ ಮತ್ತು ಉಚಿತವಾಗಿ ಲಭ್ಯವಿರುವುದರಿಂದ ಗ್ನೂ / ಲಿನಕ್ಸ್ ಆ ಅವಶ್ಯಕತೆಯನ್ನು ಪೂರೈಸುತ್ತದೆ .
ಸಾಂಪ್ರದಾಯಿಕ ಕ್ಲಬ್ ತಂಡಗಳನ್ನು , 2003ರಲ್ಲಿ ಪ್ರಮುಖ ಸ್ಪರ್ಧೆಗಳಲ್ಲಿ ನಾಲ್ಕು ಪ್ರಾದೇಶಿಕ ತಂಡಗಳು ಬದಲಾವಣೆ ಮಾಡಿದವು . ಇದನ್ನು ನಂತರ ನಾಲ್ಕು ವೃತ್ತಿಪರ ಪ್ರದೇಶದ ತಂಡಗಳಾದ ಸ್ಕಾರ್ಲೆಟ್ಸ್ , ಕಾರ್ಡಿಫ್ ಬ್ಲೂಸ್ , ನ್ಯೂಪೋರ್ಟ್ ಗ್ವೆಂಟ್ ಡ್ರ್ಯಾಗನ್ಸ್ ಹಾಗು ಓಸ್ಪ್ರೆಯ್ಸ್ 2004ರಲ್ಲಿ ಬದಲಾವಣೆ ಮಾಡಿದವು . ಮಾಜಿ ಕ್ಲಬ್ ತಂಡಗಳು ಈಗ ಅರೆ - ವೃತ್ತಿಪರ ಕ್ಲಬ್ ಗಳಾಗಿ ತಮ್ಮ ಸ್ವಂತ ಲೀಗ್‌ನ್ನು ನಿರ್ವಹಿಸುವುದರ ಜೊತೆಗೆ ನಾಲ್ಕು ಪ್ರಾದೇಶಿಕ ತಂಡಗಳ ಜೊತೆ ಸಂಬಂಧವನ್ನು ಹೊಂದಿದೆ . ಅಂತರಾಷ್ಟ್ರೀಯ ಹಾಲ್ ಆಫ್ ಫೇಮ್ ನಲ್ಲಿ ವೇಲ್ಸ್ ನ ಹತ್ತು ಮಂದಿ ಸದಸ್ಯರಿದ್ದಾರೆ . ಇದರಲ್ಲಿ ಗಾರೆಥ್ ಎಡ್ವರ್ಡ್ಸ್ , J . P . R . ವಿಲ್ಲಿಯಮ್ಸ್ ಹಾಗು ಗೆರಾಲ್ಡ್ ಡೇವಿಸ್ ಇವರಲ್ಲಿ ಸೇರಿದ್ದಾರೆ . ನ್ಯೂಪೋರ್ಟ್ ರಗ್ಬಿ ಕ್ಲಬ್ 1963ರ ' ಅಜೇಯ ' ನ್ಯೂಜಿಲ್ಯಾಂಡ್ ರಗ್ಬಿ ತಂಡವನ್ನು ಸೋಲಿಸುವುದರೊಂದಿಗೆ ಒಂದು ಐತಿಹಾಸಿಕ ಗೆಲುವನ್ನು ಸಾಧಿಸಿತು . ಈ ನಡುವೆ ಲನೆಲ್ಲಿ ರಗ್ಬಿ ಕ್ಲಬ್ ಆಲ್ ಬ್ಲಾಕ್ಸ್ ತಂಡದ ವಿರುದ್ಧ ಅಕ್ಟೋಬರ್ 1972ರಲ್ಲಿ ಭರ್ಜರಿ ಜಯ ದಾಖಲಿಸಿತು .
ತನ್ನ ಐದು ಮಂದಿ ಗೆಳೆಯರೊಂದಿಗೆ ಬುಧವಾರ ಈಜಾಡಲು ಹೋಗಿ ನದಿಯಲ್ಲಿ ಮುಳುಗಿದ್ದ ರೋಶನ್ ( 20 ) ಎಂಬಾತನ ಶವ ನಿನ್ನೆ ಸಂಜೆ ನಾಲ್ಕು ಗಂಟೆಗೆ ಹೆರ್ಗ ಸಮೀಪದ ಗೋಳಿಕಟ್ಟೆ ಹೊಳೆ ಬಾಗಿಲು ಎಂಬಲ್ಲಿ ಪತ್ತೆಯಾಗಿದೆ . ಯುವಕನ ಮನೆಯವರು ಇದೊಂದು ಕೊಲೆ ಎಂದು ಆರೋಪಿಸಿ ರೋಶನ್ ಸ್ನೇಹಿತರಾದ ಪರ್ಕಳ ಹೆರ್ಗದ ವಿಕ್ರಂ ಕುಲಾಲ್ , ಮಹೇಶ್ , ಕೃಷ್ಣಮೂರ್ತಿ , ಗಿರೀಶ್ ಪೈ , ಶರತ್ ಕುಮಾರ್ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ .
1965ರಲ್ಲಿ , ಕುಂದೆರನ್ ರೈಲ್ವೇಸ್ ಕಲಸ ತ್ಯಜಿಸಿ , ಮೈಸೂರು ಮತ್ತು ದಕ್ಷಿಣ ವಲಯವನ್ನು ಪ್ರತಿನಿಧಿಸತೊಡಗಿದರು . ಇದರಿಂದ ಅವರಿಗೆ ಚಂದ್ರಶೇಖರ್ , ಪ್ರಸನ್ನ ಮತ್ತು ವೆಂಕಟರಾಘವನ್ ರಂತಹ ಸ್ಪಿನ್ನರುಗಳಿಗೆ ವಿಕೆಟ್ ಕೀಪಿಂಗ್ ಮಾಡುವ ಅವಕಾಶ ದೊರಕಿತು . 1966 - 67ರ ವೆಸ್ಟ್ ಇಂಡೀಸ್ ಸರಣಿಯಲ್ಲಿ ಮತ್ತೆ ಸ್ಥಾನ ಗಿಟ್ಟಿಸಿದ ಕುಂದೆರನ್ ಮುಂಬಯಿ ಪಂದ್ಯದಲ್ಲಿ 92 ನಿಮಿಷದಲ್ಲಿ 79 ರನ್ ಹೊಡೆದರು .
ನಗೆ ಸಾಮ್ರಾಜ್ಯದಲ್ಲಿ ಎಮರ್ಜನ್ಸಿ ಘೋಷಣೆಯಾಗಿದೆ . ಸಾಮ್ರಾಜ್ಯದಲ್ಲಿ ಬಹಳಾ ಕಾಲದಿಂದ ಸುಪ್ತವಾಗಿ ನಡೆಯುತ್ತಿದ್ದ ಆಂತರಿಕ ಕಲಹ ಕಳೆದ ಕೆಲವು ದಿನಗಳಲ್ಲಿ ತಾರಕಕ್ಕೇರಿದೆ . ಇಡೀ ಸಾಮ್ರಾಜ್ಯವೇ ಎರಡು ಗುಂಪಾಗಿ ಒಡೆದು ಹೋಳಾಗಿ ಪರಸ್ಪರ ಭೀಕರವಾಗಿ ಹೋರಾಡುತ್ತಿವೆ . ಇದರಿಂದ ಸಾಮ್ರಾಟರ ನೆಮ್ಮದಿ ಭಗ್ನವಾಗಿದೆ . ಸಾಮ್ರಾಜ್ಯದೆಲ್ಲೆಡೆ ಅರಾಜಕತೆ ಸ್ಥಾಪಿತವಾಗಿದೆ .
ಇದು ಮಾದ್ಯಮ ವ್ಯಭಿಚಾರವಲ್ಲವೆ ? ಮಾದ್ಯಮ ಸ್ವಾತಂತ್ರದ ಬಗ್ಗೆ ಪುಟಗಟ್ಟಲೆ ಬರೆದುಕೊಳ್ಳುವ ಪತ್ರಿಕೆ ನಡೆಸುತ್ತಿರುವ ಈ ವ್ಯಭಿಚಾರಕ್ಕೆ ಕೊನೆಯೇ ಇಲ್ಲವೆ ?
ಸೂರ್ಯನು ಎಲ್ಲೋ ತಾವರೆ ಎಲ್ಲೋ ಕಾಣಲು ಕಾತರ ಕಾರಣವೇನೋ ಚಂದಿರನೆಲ್ಲೋ ನೈದಿಲೆ ಎಲ್ಲೋ ನೋಡಲು ಅರಳುವ ಸಡಗರವೇನೋ ಎಲ್ಲೇ ಇರಲೀ ಹೇಗೇ ಇರಲೀ ಕಾಣುವ ಆಸೆ ಏತಕೋ ಏನೋ . . . . ಮಾಮರವೆಲ್ಲೋ ಕೋಗಿಲೆ ಎಲ್ಲೋ ಏನೀ ಸ್ನೇಹ ಸಂಬಂಧ ಎಲ್ಲಿಯದೋ ಈ ಅನುಬಂಧ . . ಏಷ್ಟು ಅದ್ಬುತವಾದ ಸಾಹಿತ್ಯ ಅಲ್ವಾ ? ಇನ್ನು ಇನ್ನು ಕೇಳೋಣ ಅಂತ ಅನ್ನಿಸತ್ತೆ . ಬಹುಶಃ ಚಿತ್ರಗೀತೆಗಳಿಗೇನಾದರೂ ಜ್ಙಾನಪೀಠ ಕೊಡೋದಿದ್ರೆ ಚಿ . ಉದಯಶಂಕರ ಅವರಿಗೆ ಸಲ್ಲಬೇಕಾಗಿತ್ತು . ಇತ್ತೀಚಿನ ದಿನಗಳಲ್ಲಿ ಈ ರೀತಿ ಸಾಹಿತ್ಯ ಮರೆಯಾಗಿ ಹೋಗಿದೆ ಅಂತ ಅನ್ನಿಸ್ತಾಯಿದೆ . ಏಲ್ಲೋ ಅಪರೂಪಕ್ಕೆ ಓಂದೆರಡು ಕಾಣಸಿಗುತ್ತವೆ . ಅದೇನಾದ್ರು ಹಿಟ್ ಆದ್ರೆ ಅದರ ಹಾಗೆ ಸಾಹಿತ್ಯಗಳಿರುವ ಮತ್ತೊಂದಿಷ್ಟು ಹಾಡುಗಳು ಬರತ್ವೆ . " ಸರ್ವಂ ಕಾಪಿಮಯ "
ಅದೇನೇ ಆಗ್ಲಿ ಸ೦ಸ್ಕೃತ ವಿ . ವಿ ಬ೦ದುಬಿಡಬೇಕು ! ಅನ್ನೋರ್ಗೆ ತಲೆ ಇಲ್ಲ . ಸ೦ಸ್ಕೃತದಲ್ಲಿರುವ ಅಮೋಘ ಜ್ಞಾನ ಭ೦ಡಾರವನ್ನು ಅರ್ಥ ಮಾಡುಕೊಳ್ಳೋದರಲ್ಲಿ ಆಸಕ್ತಿ ಇಲ್ಲ ಇವರಿಗೆ . ಸ೦ಸಕೃತದಲ್ಲಿರೋ ಮಹಾಪ್ರಾಣಗಳನ್ನು ಉಛ್ಚರಿಸಿದರೆ ಸಾಕು ಭಗವ೦ತನೇ ಪ್ರತ್ಯಕ್ಷವಾಗಿ ಮೋಕ್ಷ ಕೊಟ್ಟುಬಿಡುತ್ತಾನೆ . ಈ ನ೦ಬಿಕೆ ಇನ್ನು ೧೦೦ ವರ್ಷಗಳ ಕಾಲ ಜನರ ಮನಸ್ಸಿನಿ೦ದ ಹೋಗೋ ಹಾಗೆ ಕಾಣೆ .
ಇದು ನಮ್ಮದೇ ಕಾಫಿ ಕ್ಲಬ್ಬು . ಒಂದೆರಡು ಕಪ್ ಕಾಫಿ ಹೀರಿ , ದುಡ್ಡು ಕೇಳಿದ್ರೆ ನಮ್ ಹೆಸರು ಹೇಳ್ರಿ . ಓಶೋ ಎಂಬ ಹಕ್ಕಿ
ಬಿಸಿಲಿಗೂ ಬದುಕಿಗೂ ಒಂದು ರೀತಿಯ ಗಾಢ ಸಂಬಂಧವಿದೆ . ಜೀವ ಸಂಕುಲಕ್ಕೆಲ್ಲ ಬಿಸಿಲು ಬೇಕು . ಬಿಸಿಲಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ ? ಬಿಸಿಲಿನ ತಾಪದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ ಸಾಕು ಬದುಕು ಬರ್ಭರವಾಗುತ್ತದೆ . ಬಿಸಿಲಿಗೆ ರಣಬಿಸಿಲಾಗಿ ಸುಡುವ ಶಕ್ತಿಯೂ ಇದೆ , ಹೊಂಬಿಸಿಲಾಗಿ ಜೀವತುಂಬುವ ಚೈತನ್ಯವೂ ಇದೆ . ಮನುಷ್ಯ ಕೂಡ ಬಿಸಿಲಿನಂತೆ ಒಮ್ಮೊಮ್ಮೆ ರಣಬಿಸಿಲಾಗಿ ಉರಿಯುತ್ತಾನೆ . ಒಮ್ಮೊಮ್ಮೆ ಹೊಂಬಿಸಿಲಾಗಿ ಹೂನೆರಳನ್ನು ನೀಡುತ್ತಾನೆ . ಇವೆರಡರ ನಡುವಿನ ಬದುಕು ಚೆಂದವಾಗಿ ಇರಬೇಕಾದರೆ ಬಿಸಿಲು ಹನಿ ಹನಿಯಾಗಿ ಸುರಿಯಬೇಕು . ನೆನಪಿರಲಿ , ಬಿಸಿಲು ಕೊನೆಯಾದರೆ ಭೂಮಿ ಕೊನೆ . ಭೂಮಿ ಕೊನೆಯಾದರೆ ಮಾನವ ಕೊನೆ .
ಕೆಲವೇ ದಿನಗಳ ನಂತರ ಆ ಕಂಪನಿಯನ್ನು ಟರ್ನರ್ ಮಾರಾಟ ಮಾಡಿದರೂ , MGMನ ಬಳಿಯಿದ್ದ 1986ಕ್ಕೂ ಮುಂಚಿನ ಚಲನಚಿತ್ರ ಭಂಡಾರವನ್ನು ತನ್ನಲ್ಲಿಯೇ ಉಳಿಸಿಕೊಂಡ . ಹೀಗಾಗಿ ಟಾಮ್ ಅಂಡ್ ಜೆರ್ರಿ ವ್ಯಂಗ್ಯಚಿತ್ರ ಮಾಲಿಕೆಗಳು ಟರ್ನರ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಸ್ವತ್ತಾಗಿಯೇ ಉಳಿದವು ( ಆದರೆ ಹಕ್ಕುಗಳು ಮಾತ್ರ ಇಂದಿಗೂ ವಾರ್ನರ್ ಬ್ರದರ್ಸ್ ಸಂಸ್ಥೆಯ ಮೂಲಕವೇ ಇವೆ ) ಮತ್ತು ನಂತರದ ವರ್ಷಗಳಲ್ಲಿ ಟರ್ನರ್‌ನಿಂದ ನಡೆಸಲ್ಪಟ್ಟ ಕೇಂದ್ರಗಳಾದ , TBS , TNT , ಕಾರ್ಟೂನ್ ನೆಟ್‌ವರ್ಕ್ , ಬೂಮರಾಂಗ್ ಮತ್ತು ಟರ್ನರ್ ಕ್ಲಾಸಿಕ್ ಮೂವೀಸ್ ವಾಹಿನಿಗಳಲ್ಲಿ ಪ್ರಸಾರವಾದವು .
ಅಭಿನಂದನೆಗಳು ಚಿತ್ರಾರವರೆ , ನೀವು ತಿಳಿದಂತೆ ಎಲ್ಲ ಹೆಣ್ಣು ಮಕ್ಕಳಿಗೂ ಬರುವ ಒಂದು ಘಟ್ಟ ಇದು . ಈ ಹಂತದಲ್ಲಿ ಹಾಗೆ ಅನಿಸುವದು ಸಹಜ . ಆದರೆ ಇದೇ ಮಾತು ನಿಮಗೆ ಹಲವು ವರ್ಷದ ನಂತರ ಇರುವದಿಲ್ಲ . ಕೇಲವು ವಿಷಯಗಳಲ್ಲಿ ಹೆಣ್ಣು ಮಕ್ಕಳಿಗೆ ಇರುವ ಭಾಗ್ಯ ಸಿಗೋದಿಲ್ಲ ಹುಡುಗರಿಗೆ ಇರೊಲ್ಲ . ಮದುವೆಗೆ ಕರೆಯಲು ಮರಿಬೇಡಿ ಲಕ್ಷ್ಮಣ
ಹುಂಬ - ಬಿಂಬ ಲೋಕದಲ್ಲೇ ಮುಳುಗಿ ಯಾಕೊ ಕನ್ನಡಿಗಳ ಹಿಂದೆ ಉರಿವ ನಿಜವು ಮೊಲಕೆ ಮರತೆ ಹೋಯಿತು . ನಗುತ ನಗುತ ಬೆನ್ನು ಸವರಿ ಹಿಡಿವ ಹುಂಬ ಜಾಲದೊಳಗೆ ಬಿದ್ದು ಮೊಲದ ಎದೆಯ ಬೆಳಕು ಕರಗ ಹತ್ತಿತು . ಅದನು ಬಿಟ್ಟೆ , ಇದನು ಹಿಡಿಯೆ , ಕಾಲು ಅಲ್ಲಿ , ಇಲ್ಲಿ ಹೆಜ್ಜೆ - ಗುರುತು ಮಾಸಿ ನೋವ ನೆರಳು ಕಣ್ಣ ಕೊಳದಲೂ . ಕನ್ನಡಿಗಳ ಹಿಂದಿನಿಂದ ಕದ್ದು ಬರುವ ಕೈಗಳಿಂದ ಪಾರಾಗುವ ದಾರಿ ಎಲ್ಲಿ , ಎದೆಯ ಬಿಗಿದು ಹುಡುಕು ಬೇಗ ! ಚಂಗನೆ ಜಿಗಿದೋಡಿ ಓಡಿ , ದಾರಿ ದಿಕ್ಕು ಎರಡು ತಪ್ಪಿ , ಹೊರಟಲ್ಲಿಗೆ ಮತ್ತೆ ಬಂದು ಬಿದ್ದು ಬಿಟ್ಟೆಯ ? ಹಿಂದೆ ತಿರುಗಿ ನೋಡು , ನೋಡು ! ಕನ್ನಡಿಗಳ ಬಿರುಕಿನಲ್ಲಿ ಒಡೆದ ಮುಖ ಛಿದ್ರ ಬಿಂಬ . ಬಿಂಬ ಇರಲಿ , ಬಿರುಕ ನೋಡು , ಬಿರುಕೆ ಇನ್ನು ದಾರಿಗಂಬ ; ದಾರಿ ತಪ್ಪಿದವರಿಗೆಲ್ಲ . . .
ಈಗಿನ ಮಕ್ಕಳದಂತೂ ವಯಸ್ಸಿಗೆ ಮೀರಿದ ಮಾತು , ವರ್ತನೆ . ನಮ್ಮ ಅಪ್ಪ ಅಮ್ಮಂದಿರಿಗೆ ಹೀಗೆಲ್ಲ ಅನ್ನಿಸಿದ್ದು ನನಗೆ ಅನುಮಾನ . ಅವರ ಗ್ರಹಿಕಾ ಸಾಮರ್ಥ್ಯ ಕೂಡಾ ಜಾಸ್ತಿ . ಟೀವಿಯಲ್ಲಿ ಬರೋ ಕಾರ್ಯಕ್ರಮಗಳನ್ನು ನೋಡಿದ್ರೆ ಗೊತ್ತಾಗಲ್ವೆ ? ಎಷ್ಟು ಬೇಗ ಹೇಳಿ ಕೊಟ್ಟಿದ್ದನೆಲ್ಲ ಕಲಿತುಬಿಡ್ತಾರೆ ? ನಾಲ್ಕು ಜನರ ಎದುರು ನಿಂತು ಮಾತನಾಡುವುದಕ್ಕೂ , ಹಾಡುವುದಕ್ಕೂ ಒಂಚೂರು ಭಯವಿಲ್ಲ ! . ಐದನೇತ್ತಿಯಲ್ಲಿದ್ದಾಗ ಅಪ್ಪ ಹೇಳಿಕೊಟ್ಟಿದ್ದ " ಸಾರೇ ಜಹಾಂಸೆ ಅಚ್ಛಾ " ವನ್ನು ಹಾಡನ್ನು ಯಾವುದೋ ಸ್ಪರ್ಧೆಯಲ್ಲಿ ಹಾಡಿ ಮುಗಿಸೋವಷ್ಟರಲ್ಲಿ ನಾನು ಬೆವೆತುಹೋಗಿದ್ದೆ . ಅದೂ ಕೊನೆ ಸಾಲನ್ನು ಮರೆತು ಹೇಗೋ ತಪ್ಪು ತಪ್ಪು ಹಾಡಿ ಅಪ್ಪನ ಹತ್ತಿರ ಬೈಸಿಕೊಂಡಿದ್ದೆ . ಈಗಿನ ಮಕ್ಕಳಿಗೆ ಸಿಗುತ್ತಿರುವ ಸವಲತ್ತು , ಅವಕಾಶ , ಅಪ್ಪ ಅಮ್ಮಂದಿರ ಪ್ರೋತ್ಸಾಹ ಎಲ್ಲ ಕಾರಣವಿರಬಹುದು , ಆದರೆ ಅವರ ಸಾಮರ್ಥ್ಯವನ್ನಂತೂ ಕಡೆಗಣಿಸುವ ಮಾತೇ ಇಲ್ಲ . ಬಹುಷಃ ಇದೂ ನನ್ನ ಆತಂಕಕ್ಕೂ ಒಂದು ಕಾರಣವಿರಬೇಕು . ಅವರ ಬೌದ್ಧಿಕ ಸಾಮರ್ಥ್ಯವನ್ನು ನಾವು ಸರಿಯಾದ ದಾರಿಯಲ್ಲಿ ತೊಡಗಿಸಿ ಮಾರ್ಗದರ್ಶನ ನೀಡುತ್ತಿದ್ದೇವೆಯಾ ಅನ್ನುವುದು . ಆ ಕೆಲಸವನ್ನು ಅಪ್ಪ ಎಷ್ಟು ಚೆನ್ನಾಗಿ ನಿರ್ವಹಿಸಿದ್ದರು ಅನ್ನುವುದನ್ನು ಈಗ ಯೋಚಿಸಿದರೆ ಅವರ ಬಗ್ಗೆ ಹೆಮ್ಮೆಯನಿಸುತ್ತದೆ . ಆದರೂ ಎಷ್ಟೋ ಸಲ ನಾವು ಅವರನ್ನು ನಿರಾಸೆಗೊಳಿಸಿದ್ದುಂಟು . " ತಬಲಾ ಸಾಥ್ ಕೊಡುವಷ್ಟಾದರೂ ತಬಲಾ ಕಲಿ " ಅಂದು ಅವರು ಎಷ್ಟು ಸಲ ಹೇಳಿದ್ದರೋ ಏನೋ ? ಆವಾಗ ಅದು ತಲೆಯೊಳಗೆ ಇಳಿಯಲೇ ಇಲ್ಲ . ಈಗ ಅದರ ಬಗ್ಗೆ ಪಶ್ಚಾತಾಪವಿದೆ . " ನಾನು ಸರಿಯಾಗಿ ಸಾಧಿಸಲಾಗದಿದ್ದನ್ನು ಮಕ್ಕಳು ಕಲಿತು ಸಾಧಿಸಲಿ " ಅನ್ನುವ ಆಸೆ ಎಲ್ಲ ಪಾಲಕರಿಗೂ ಇರುತ್ತದೆಯಲ್ಲವೆ ? ನಾಲ್ಕು ಜನರ ಮುಂದೆ ಅದರ ಬಗ್ಗೆ ಹೇಳಿಕೊಳ್ಳುವಾಗ ಅವರ ಕಣ್ಣಲ್ಲಿದ್ದ ಬೇಸರ , ಹತಾಶೆ ಆಗ ಗೊತ್ತಾಗುತ್ತಿರಲಿಲ್ಲ . ಈಗ ಅದರ ಅರಿವಾಗುತ್ತಿದೆ . " ಇವನ ಹತ್ತಿರ ಈಗ ಮೂರು ದಿನ ಕೇಳುವಷ್ಟು ಸಂಗೀತದ ಕಲೆಕ್ಷನ್ ಇದೆ " ಎಂದು ಈಗ ಅಪ್ಪ ಹೆಮ್ಮೆಯಿಂದ ಬೀಗುವಾಗ ಅವರ ಕಣ್ಣಲ್ಲಿನ ಹೊಳಪು ಖುಶಿ ಕೊಡುತ್ತದೆ . ಯಾವುದೋ ಅತೀ ಕ್ಲಿಷ್ಟವಾದ ರಾಗವನ್ನು ಅಪ್ಪನಿಗೆ ಕೇಳಿಸಿ , ಇದು ಹೀಗೆ ಎಂದು ವಿವರಿಸುವಾಗ ಅಪ್ಪನಿಗಾಗುವ ಸಂತೋಷ ಅವನು ಮಾತನಾಡದೆಯೂ ಗೊತ್ತಾಗುತ್ತದೆ . ಮಕ್ಕಳು ನಮ್ಮ ಆಸೆಗೆ ತಕ್ಕುದಾಗಿ ವಿಶಿಷ್ಟವಾದುದನ್ನು ಸಾಧಿಸಿದಾಗ ಆಗುವ ಸಂತಸದ ಮಹತ್ವ ಈಗ ನನಗೆ ಯಾರೂ ಹೇಳಿಕೊಡದೇ ಅರ್ಥವಾಗುತ್ತದೆ .
ಈ ಮುಂಚೆ ಬ್ಯಾಟಿಂಗ್ ನಡೆಸಿದ್ದ ರಾಜಸ್ಥಾನ್ ಪೌನಿಕರ್ ( ೯ ) ವಿಕೆಟ್ ಬೇಗನೇ ಕಳೆದುಕೊಂಡಿತು . ಆದರೆ ನಂತರ ಬಂದ ಮನೇರಿಯಾ ಆರಂಭಿಕ ದ್ರಾವಿಡ್ ಜೊತೆಗೂಡಿ ಅರ್ಧಶತಕದ ಜೊತೆಯಾಟ ನಡೆಸಿಕೊಟ್ಟರು . ರನ್ ಗಳಿಸುವ ಆತುರದಲ್ಲಿ ಉತ್ತಮವಾಗಿ ಆಡುತ್ತಿದ್ದ ದ್ರಾವಿಡ್ ಹಾಗೂ ಮನೇರಿ ಯಾ ( ೨೭ ) ತನ್ನ ವಿಕೆಟ್ ಕಳೆದು ಕೊಂಡಾಗ ತಂಡ ಆಘಾತ ಕಂಡಿತು . ನಂತರ ಜೊತೆಗೂಡಿದ ಸ್ಫೋಟಕ ಆಟ ಗಾರರಾದ ವಾಟ್ಸನ್ ಹಾಗೂ ಟೇಲರ್ ಜೋಡಿ ನಾಲ್ಕನೇ ವಿಕೆಟ್‌ಗೆ ೪ . ೫ ಓವರ್‌ಗಳಲ್ಲಿ ೪೫ ರನ್ ಕಲೆಹಾಕಿದರು . ಆದರೆ ೧೩ ಎಸೆತಗಳಲ್ಲಿ ಎರಡು ಸಿಕ್ಸ್‌ಗಳ ನೆರವಿನಿಂದ ೨೨ ರನ್ ದಾಖಲಿಸಿದ್ದ ವಾಟ್ಸನ್ ನಿರ್ಗಮಿಸಿದರು . ಅಂತಿಮ ಹಂತದಲ್ಲಿ ಐದನೇ ವಿಕೆಟ್‌ಗೆ ಬೋಥಾ ( ೧೨ ) ಹಾಗೂ ಟೇಲರ್ ಅಜೇಯ ೩೫ ರನ್ ಸೇರಿಸಿ ಮೊತ್ತವನ್ನು ೧೬೦ರ ಸನಿಹಕ್ಕೆ ತಂದರು .
ನೈಸ್ ರಸ್ತೆ ಈ ಭಾಗದ ರೈತರ ಹಾಗೂ ಜನರ ಬದುಕಿನಲ್ಲಿ ಎಷ್ಟೋ ಅವಾಂತರಗಳನ್ನು ಸೃಷ್ಟಿಸಿದೆ . ರಸ್ತೆಯ ಎರಡೂ ಬದಿಯಲ್ಲಿ ಎತ್ತರದ ತಡೆಗೋಡೆ ನಿರ್ಮಿಸಿರುವ ` ನೈಸ್ ' ಬೇಲಿಯಿಂದಾಗಿ ಎಷ್ಟೋ ಕಡೆ ಊರುಗಳೇ ಎರಡು ಭಾಗವಾದಂತಿವೆ . ಮನೆ ಒಂದು ಕಡೆ ಜಮೀನು ಒಂದೆ ಕಡೆ ಹೀಗೆ . ಸಂಪರ್ಕ ಸುಲಭವಲ್ಲ . ಎಲ್ಲೋ ದೂರದ ಸೇತುವೆ ಹುಡುಕಿಕೊಂಡು ಕಿಲೋಮೀಟರುಗಟ್ಟಲೆ ಸುತ್ತಿಕೊಂಡು ಅಲೆಯಬೇಕು . ಸಾಕಷ್ಟು ಮೇಲ್ಸೇತುವೆ ಇಲ್ಲ . ಪಾದಚಾರಿಗಳ ಸುರಂಗ ಮಾರ್ಗವಂತೂ ಇಲ್ಲವೇ ಇಲ್ಲ . ಇನ್ನೂ ನೈಸ್ ರಸ್ತೆಯ ಎರಡೂ ಬದಿಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸಿಕೊಡಬೇಕಾದ ಅನಿವಾರ್ಯತೆ ಜನರಿಗೆ ಮನದಟ್ಟಾಗುತ್ತಿದೆ . ಕನಿಷ್ಟ ನೈಸ್ ಮೇಲೆ ಅಥವಾ ಕೆಳಗೆ ಕನಿಷ್ಟ 500 ಮೀಟರ್ ಗೆ ಒಂದರಂತೆ ಸೇತುವೆ ನಿರ್ಮಿಸಿ ಜನರ ಓಡಾಟ ಸುಗಮಗೊಳಿಸಬೇಕಾಗಿದೆ .
ತರುಣನಾಗಿರುವಾಗಲೇ ಲಂಕೇಶರ ಸಹವಾಸಕ್ಕೆ ಸಿಕ್ಕಿದ್ದ ಬಸವರಾಜು ಈಗ ವಿಕ್ರಾಂತ ಕರ್ಣಾಟಕ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರು . ನಾರಿಯರ ಕುರಿತ ತಮ್ಮ ಗುರುಗಳ ರೋಮಾಂಚನ ಮತ್ತು ಸಂಕೋಚಗಳನ್ನು ಇಲ್ಲಿ ಬರೆದಿದ್ದಾರೆ .
ಹಾಗೆಂದು ಈ ಪುಸ್ತಕ ವಡ್ಡರ್ಸೆಯವರ ಬಗ್ಗೆ ಸಮಗ್ರ ಚಿತ್ರಣವನ್ನೇನೂ ನೀಡುವುದಿಲ್ಲ . ಇಡೀ ಪುಸ್ತಕದುದ್ದಕ್ಕೂ ವಡ್ಡರ್ಸೆಯವರ ವೃತ್ತಿ ನಡೆಗಳ ಬಗ್ಗೆ ದಾಖಲಿಸುತ್ತಲೇ ಬೈಕಂಪಾಡಿ ತಾವು ಪತ್ರಕರ್ತರಾಗಿ ರೂಪುಗೊಂಡುದನ್ನು ಕೂಡಾ ದಾಖಲಿಸಿದ್ದಾರೆ . ಅನುಭವಿ ಪತ್ರಕರ್ತರೊಬ್ಬರ ಒಡನಾಟದಲ್ಲಿ ಉದಯೋನ್ಮುಖ ಪತ್ರಕರ್ತನೊಬ್ಬ ಹಲವು ಏರಿಳಿತಗಳ ಅನುಭವಗಳ ನಡುವೆ ಬೆಳೆದ ಬಗೆಯ ಅರಿವು ಕೂಡಾ ನಮಗಾಗುತ್ತದೆ . ಅಷ್ಟರ ಮಟ್ಟಿಗೆ , ಇಲ್ಲಿ ಸಿಗುವುದು ವಡ್ಡರ್ಸೆಯವರ ವ್ಯಕ್ತಿತ್ವದ ಸ್ಥೂಲ ರೂಪ ಅನ್ನಿಸಿದರೂ ವಡ್ಡರ್ಸೆಯವರಂತಹ ಹಿರಿಯ ಪತ್ರಕರ್ತರ ಬಗ್ಗೆ ತಿಳಿಯಲೇಬೇಕೆಂಬ ಒತ್ತಾಸೆಯನ್ನುಂಟು ಮಾಡುತ್ತದೆ .
ಕ್ರಿಕೆಟ್ ವಿಶ್ವಕಪ್ ಫೈನಲ್‌ಗೆ ಇದುವರೆಗೆ ಭಾರತ ಎಷ್ಟು ಬಾರಿ ಪ್ರವೇಶ ಪಡೆದಿದೆ ?
( ಈ ಲೇಖನವನ್ನು ಬರೆಯಲು ಗೆಳೆಯ ಲೋಹಿತ್ ಬೆಳೆಸಿದ " ಲೋಹಿತಂತ್ರಾಂಶ " ಬಳಸಿದ್ದೇನೆ ) ವಿದ್ಯಾರ್ಥಿ ಭವನದಲ್ಲಿ ದೋಸೆ ತಿನ್ನುವ ಕಾರ್ಯಕ್ರಮ . ಒಬ್ಪೊಬ್ಪರದು ಒಂದೊಂದು ಬೇಡಿಕೆ . ನಾನು ವಡೆ ತಿನ್ನುವುದಿಲ್ಲ , ಇನ್ನೊಬ್ಬರಿಗೆ ಕೇಸರಿ ಬಾತ್ ಆಗದು , ನಾಲ್ಕು ದೋಸೆ , ಮೂರು ವಡೆ , ಎರಡು ಕೇಸರಿ ಬಾತ್ . ಈ ರೀತಿ ಪ್ರತೀ ಮೇಜಿನಲ್ಲೂ ಬೇರೆ ಬೇರೆ ಬೇಡಿಕೆಗಳು . ಬೇರೆ ಮೇಜಿನ ಬೇಡಿಕೆಗಳನ್ನು ಕೇಳಿ ಬರುತ್ತಿದ್ದಂತೆ . ನಮ್ಮ ಮೆನು ಬದಲಾಗಿರುತ್ತದೆ ! ವಡೆ ಮೂರರ ಬದಲು ಎರಡು ಕೊಡಿ , ಕೇಸರಿ ಬಾತ್ ಮೂರು ಇರಲಿ . ಯಾವ ಯಾವ ಮೇಜಿನಿಂದ ಯಾರು ಯಾವುದನ್ನು ಆರ್ಡರ್ ಮಾಡಿದ್ದಾರೆ , ಎಷ್ಟು ಆರ್ಡರ್ ಮಾಡಿದ್ದಾರೆ , ಮತ್ತೆ ಎಲ್ಲೆಲ್ಲಿ ಬದಲಾವಣೆ ಮಾಡಿದ್ದಾರೆ ಎಲ್ಲವನ್ನೂ ನೆನಪಿಟ್ಟುಕೊಂಡು ಹೋಟೆಲ್ ' ತಮ್ಮ ' ತಂದು ಕೊಡಬೇಕು . ಅಲ್ಲದೇ ಸರಿಯಾಗಿ ಅದಕ್ಕೆ ತಕ್ಕಂತೆ ಬಿಲ್ ಮಾಡಬೇಕು ! ಬಿಲ್ಲಿನಲ್ಲಿ ಕೊಂಚ ಏರುಪೇರಾದರೂ ಮಾಲಿಕನ ಬಳಿ ಇಲ್ಲವೇ ಗಿರಾಕಿಯ ಬಳಿ ಬೈಸಿಕೊಳ್ಳಬೇಕು . ಆದರೆ ಈ ಹುಡುಗರು ಸರಿಯಾಗಿ ತಂದು ಕೊಡುತ್ತಾರೆ , ಸರಿಯಾಗಿ ಬಿಲ್ಲಿಂಗ್ ಮಾಡುತ್ತಾರೆ . ತಪ್ಪುವುದು ತೀರಾ ಕಮ್ಮಿ ! ಹತ್ತನೆಯ ತರಗತಿಯನ್ನೂ ಪಾಸು ಮಾಡಲಾಗದ ಆ ಹುಡುಗರು ಅಷ್ಟು ನಿಖರವಾಗಿ ಹೇಗೆ ಕೆಲಸ ಮಾಡುತ್ತಾರೆ ? ಎಲ್ಲವನ್ನೂ ಹೇಗೆ ನೆನಪಿಟ್ಟುಕೊಳ್ಳುತ್ತಾರೆ ? ಬಟ್ಟೆ ಇಸ್ತ್ರಿ ಮಾಡುವವನು ಅಥವಾ ತೊಳೆಯುವವನ ಉದಾಹರಣೆ ಎಲ್ಲರಿಗೂ ಚಿರಪರಿಚಿತ . ಯಾರ ಮನೆಯಿಂದ ಯಾರ ಬಟ್ಟೆ , ಯಾರು ಎಷ್ಟು ಕೊಟ್ಟಿದ್ದಾರೆ , ಯಾವಾಗ ವಾಪಸು ಕೊಡಬೇಕು ಎಲ್ಲವನ್ನೂ ಆ ಗಮಾರ ( ? ) ನೆನಪಿಟ್ಟುಕೊಂಡು ತಂದು ಕೊಡುತ್ತಾನಲ್ಲ . ಅನೇಕ ಅಗಸರು ತಿಂಗಳ ಕಡೆಯಲ್ಲಿ ಅಥವಾ ವಾರದ ಕಡೆಯಲ್ಲಿ ಹಣ ಪಡೆಯುತ್ತಾರೆ . ಆಗಲೂ ಅವರಿಗೆ ವಾರ ಪೂರ್ತಿಯ ಯಾರ ಯಾರ ಮನೆಯ ಎಷ್ಟೆಷ್ಟು ಬಟ್ಟೆ , ಒಬ್ಬೊಬ್ಬರದು ಎಷ್ಟೆಷ್ಟು ಬಾಕಿ ಹಣ ಎಲ್ಲವನ್ನೂ ನೆನಪಿಟ್ಟುಕೊಂಡಿರುತ್ತಾರೆ . ಕಿಂಚಿತ್ ತಪ್ಪೂ ಆಗುವುದಿಲ್ಲ . ಒಂದು ಬಾರಿಯೂ ಒಬ್ಬರ ಮನೆಯ ಬಟ್ಟೇ ಇನ್ನೊಬ್ಬರ ಮನೆಗೆ ಹೋಗುವುದಿಲ್ಲ ! ಯಾವ ವ್ಯವಸ್ಥೆ ಇವರನ್ನು ಇಷ್ಟು " ಅಕ್ಯುರೇಟ್ " ಆಗಿಸುತ್ತದೆ ? ಪೇಪರ್ ಹಾಕುವ ಹುಡುಗ . ನೂರಾರು ಇಂಗ್ಲಿಶ್ , ಕನ್ನಡ ಪತ್ರಿಕೆಗಳ ನಡುವೆ ಯಾವುದು ಯಾರ ಮನೆಗೆ ಹೋಗಬೇಕು ಎಂದು ನೆನಪಿಟ್ಟುಕೊಳ್ಳುತ್ತಾನೆ . ಕೆಲ ತಿಕ್ಕಲು ಓದುಗರು ಹೇಗಿರುತ್ತಾರೆ ಎಂದರೆ ಭಾನುವಾರ ಪ್ರಜಾವಾಣಿ ಮಾತ್ರ ಹಾಕು , ಬುಧವಾರ ವಿತ್ತಪ್ರಭ ಮಾತ್ರ ಹಾಕು , ಟೈಮ್ಸ್ ಆಫ್ ಇಂಡಿಯಾ ಶುಕ್ರವಾರ ಮಾತ್ರ ಸಾಕು ಎಂದೆಲ್ಲಾ ಕಂಡಿಶನ್ನುಗಳನ್ನು ಇಟ್ಟಿರುತ್ತಾರೆ . ಇದನ್ನೆಲ್ಲ ಪ್ರತಿಯೊಂದು ಮನೆಯ ಮಟ್ಟಿಗೂ ನೆನಪಿಡಬೇಕು . ಸರಿಯಾಗಿ ಆಯಾ ಪತ್ರಿಕೆಯನ್ನು ಬೆಳಗಿನ ಚಹಾ ಸಮಯದೊಳಗೆ ತಲುಪಿಸಬೇಕು . ಇಲ್ಲದಿದ್ದರೆ ಬೈಗುಳ ಗ್ಯಾರಂಟಿ ! ಸಾಲದೆಂಬಂತೆ ಈ ತಿಂಗಳಲ್ಲಿ ಯಾವ ಪತ್ರಿಕೆಯದು ಎಷ್ಟು ರಜೆಗಳು ಬಂದಿವೆ , ಯಾವ ದಿನ ಗಿರಾಕಿಗಳು ಊರಿಗೆ ಹೋಗಿದ್ದರಿಂದ ಪೇಪರ್ ಹಾಕಲಾಗಿಲ್ಲ ಎಂದು ನೆನಪಿಟ್ಟು ಬಿಲ್ಲಿಂಗ್ ಮಾಡಬೇಕು . ಪೇಪರ್ ಹಾಕುವ ಹುಡುಗನ ಕೆಲಸ ಎಂದರೆ ಸಾಮಾನ್ಯ ವಿಷಯವೇ ? ಮುಂಬಯಿ ಡಬ್ಬಾವಾಲಾಗಳ ಕೆಲಸದ ನಿಖರತೆಗೆ ದೇಶವಿದೇಶದ ಮ್ಯಾನೇಜ್ ಮೆಂಟ್ ಕಾಲೇಜುಗಳು ಮಾರು ಹೋಗಿವೆ . ರಾಜಕುಮಾರ ಚಾರ್ಲ್ಸ್ ಸ್ವತಃ ಬಂದು ಅಭಿನಂದಿಸಿದ್ದಾನೆ ! ಮುಂಬಯಿ ಡಬ್ಬಾವಾಲಾಗಳ ಬಳಿ ಊಟದ ಡಬ್ಬಿ ಬದಲಾಗುವುದು ಕೋಟಿಗೊಮ್ಮೆ ಮಾತ್ರ ! ಡಬ್ಬಾವಾಲಾಗಳು ಯಾವುದೇ ಮ್ಯಾನೇಜ್ ಮೆಂಟ್ ಕೋರ್ಸ್ ಮಾಡಿದವರಲ್ಲ , ಹೋಗಲಿ ಯಾವ ಡಿಗ್ರಿಯನ್ನೂ ಪಡೆದವರಲ್ಲ ! ಸಿಕ್ಸ್ ಸಿಗ್ಮಾ ಎಂಬ ಪದವಿದೆ . ತಾಂತ್ರಿಕ ಮತ್ತು ಮ್ಯಾನೇಜ್ ಮೆಂಟ್ ಕ್ಷೇತ್ರದಲ್ಲಿರುವವರಿಗೆ ಇದು ಪರಿಚಿತ ಹೆಸರು . ಇದು ಸೇವಾ ಕ್ಷೇತ್ರದಲ್ಲಿನ ದಕ್ಷತೆಯ ಅಳತೆಗೋಲು . ಸಿಕ್ಸ್ ಸಿಗ್ಮಾ ಎಂದರೆ ಸೇವೆ ನೀಡುವ ಹತ್ತು ಲಕ್ಷ ( ಒಂದು ಮಿಲಿಯನ್ ) ಯುನಿಟ್ ಗಳಲ್ಲಿ ಒಂದು ಬಾರಿ ಮಾತ್ರ ದೋಷ ಬರಬಹುದು ! ಅಂದರೆ ನೀವು ವಾಚಿನ ತಯಾರಕರಾಗಿದ್ದರೆ ಹತ್ತು ಲಕ್ಷ ವಾಚುಗಳ ಪೈಕಿ ಒಂದು ವಾಚು ಮಾತ್ರ ದೋಶಪೂರಿತವಾಗಿರಬಹುದು . ಆಗ ಮಾತ್ರ ನಿಮಗೆ ಸಿಕ್ಸ್ ಸಿಗ್ಮಾ ಛಾಪು ಸಿಗುತ್ತದೆ . ಸಾಫ್ಟ್ ವೇರ್ ನ ಹತ್ತು ಲಕ್ಷ ಸಾಲಿನ ' ಕೋಡ್ ' ನಲ್ಲಿ ಹೆಚ್ಚೆಂದರೆ ಒಂದು ಸಾಲು ಮಾತ್ರ ದೋಷದಿಂದ ಕೂಡಿರಬಹುದು ! ಅಗಸರವನು ಹತ್ತು ಲಕ್ಷ ಬಟ್ಟೆಗಳ ಪೈಕಿ ಒಂದು ಬಟ್ಟೇಯನ್ನು ಮಾತ್ರ ಕಳೆದು ಹಾಕಬಹುದು . ನಮ್ಮ ಡಬ್ಬಾವಾಲಾಗಳ ಡಬ್ಬಿ ಕೋಟಿಗೆ ಒಂದು ಬಾರಿ ಮಾತ್ರ ವ್ಯತ್ಯಾಸ ಬರುತ್ತದೆ . ಅವರ ಸೇವೆಯ ದಕ್ಷತೆಯ ಮುಂದೆ ಸಿಕ್ಸ್ ಸಿಗ್ಮಾ ಅಳತೆಗೋಲೇ ಚಿಕ್ಕದಾಗಿ ಹೋಯಿತು ! ನಮ್ಮ ಹೋಟೆಲ್ ಮಾಣಿಗಳು , ಅಗಸರವನು ಯಾವ ಸಿಕ್ಸ್ ಸಿಗ್ಮಾಕ್ಕೂ ಕಡಿಮೆಯಿಲ್ಲ ! ದೊಡ್ಡ ದೊಡ್ಡ ಸಾಫ್ಟ್ ವೇರ್ ಕಂಪನಿಗಳು ಸಿಕ್ಸ್ ಸಿಗ್ಮಾ ಪಡೆಯಲು ಹೆಣಗುತ್ತವೆ . ಈ ಕಂಪನಿಗಳಲ್ಲಿ ಕೆಲಸ ಮಾಡುವವರು ಅತ್ಯಂತ ಬುದ್ಧಿವಂತರಾದ ' ಕ್ವಾಲಿಫೈಡ್ ' ಇಂಜಿನಿಯರುಗಳು , ಮ್ಯಾನೇಜ್ ಮೆಂಟ್ ಕುಳಗಳು ! ಆದರೂ ನಮ್ಮ ದೇಶದಲ್ಲಿ ಸಿಕ್ಸ್ ಸಿಗ್ಮಾ ಪಡೆದ ಕಂಪನಿಗಳು ಕೆಲವೇ ಕೆಲವು ಅದೂ ಕೆಲವು ಪ್ರಾಜೆಕ್ಟ್ ಗಳಿಗೆ ಮಾತ್ರ ! ನಮ್ಮ ಹೋಟೆಲ್ ತಮ್ಮಂದಿರು , ಅಗಸರು , ಡಬ್ಬವಾಲಾಗಳು , ಪೇಪರ್ ಹುಡುಗರು ಸಾಧಿಸಿರುವ ದಕ್ಷತೆಯನ್ನು ಸಾಧಿಸಲು ನಮ್ಮ ಮಹಾಬುದ್ಧಿವಂತ ಐ ಎ ಎಸ್ ಆಫೀಸರುಗಳು ಎಷ್ಟು ಸಮಯ ತೆಗೆದುಕೊಳ್ಳುತ್ತಾರೋ !
ಥಾಯ್‌ಲೆಂಡ್ ಪ್ರವಾಸ ಎಂದರೆ ಮೋಜಿನ ಪ್ರವಾಸ ಎಂಬ ಭಾವನೆ ಜನರಲ್ಲಿ ಮನೆ ಮಾಡಿದೆ . ಆದರೆ ಲಕ್ಷ್ಮಿಪತಿಯವರು ಅಲ್ಲಿ ಮೋಜು ಮಾಡಲು ಹೋಗದೆ ಅಲ್ಲಿನ ಲೈಂಗಿಕ ಪ್ರವಾಸ ಉದ್ಯಮ ವನ್ನು ಒಬ್ಬ ಮಾನವಶಾಸ್ತ್ರಜ್ಞನಾಗಿ ಮತ್ತು ಸಮಾಜಶಾಸ್ತ್ರಜ್ಞನಾಗಿ ಅಧ್ಯಯನ ಮಾಡುವ ಮತ್ತು ಅದನ್ನು ಅಕ್ಷರರೂಪಕ್ಕೆ ಇಳಿಸುವ ಉದ್ದೇಶದಿಂದ ಹೋಗಿದ್ದು , ಅದನ್ನು ಈ ಪುಸ್ತಕದ ಮೂಲಕ ನಿಜವಾಗಿಸಿದ್ದಾರೆ ಎಂದು ಅವರು ಶ್ಲಾಘಿಸಿದರು .
ಆಂಟಿಗುವಾ , ಜೂ . 13 : ಆಲ್‌ರೌಂಡರ್ ಕಿರೋನ್ ಪೊಲಾರ್ಡ್ ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಲೆಂಡಲ್ ಸಿಮ್ಮನ್ಸ್ ಜೊತೆಯಾಟ ಮುರಿಯದೆ ಟೀಂ ಇಂಡಿಯಾ ತಪ್ಪು ಮಾಡಿತು . ನಾಲ್ಕನೆ ಏಕದಿನ ಪಂದ್ಯದ ಗೆಲುವಿಗೆ 250 ರನ್ ಗಳ ಗುರಿ ಪಡೆದ ಭಾರತ ಬ್ಯಾಟ್ಸ್ ಮನ್ ಗಳು ಮಾರ್ಟಿನ್ ಮಾಯಾಜಾಲಕೆಕ್ ಸಿಲುಕಿ ತತ್ತರಿಸಿದರು . ಪರಿಣಾಮ , ಕ್ಲೀನ್ ಸ್ವೀಪ್ ಮಾಡಬಯಸಿದ್ದ ರೈನಾಗೆ ನಿರಾಶೆ , ವಿಂಡೀಸ್ ಗೆ
ಮ್ಯುಚುವಲ್ ಫಂಡ್ ನಲ್ಲಿ ಇನ್ವೆಸ್ಟ್ ಮಾಡುವದು ಈಗ ಅಷ್ಟು ಸುರಕ್ಷಿತವಲ್ಲ . ಅದರ ಬದಲು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಫಿಕ್ಸಡ್ ಡಿಪಾಸಿಟ್ , ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಇತ್ಯಾದಿಗಳಲ್ಲಿ ಇನ್ವೆಸ್ಟ್ ಮಾಡಬಹುದು . ಎನ್ . ಎಸ್ . ಸಿ ಕೂಡಾ ಸುರಕ್ಷಿತ ಇನ್ವೆಸ್ಟ್ ಮೆಂಟ್ ಅನ್ನಬಹುದು .
ಕನ್ನಡ ಸಾಹಿತ್ಯ ಸಾರ್ವಭೌಮ , ಕಾದಂಬರಿ ಸಾಮ್ರಾಟ ಡಾ | | ಅ . ನ . ಕೃಷ್ಣರಾಯರ ಪರಿಚಯ ಕನ್ನಡಿಗರೆಲ್ಲರಿಗೆ ಇದೆ . ಅವರು ಕನ್ನಡ ಸಾಹಿತ್ಯದ ಬೆಳವಣಿಗೆಗೆ , ನಾಡಿನ ಏಕೀಕರಣಕ್ಕೆ , ಕನ್ನಡಿಗರಲ್ಲಿ ಕನ್ನಡತನವನ್ನು ಮೂಡಿಸುವ ಜಾಗೃತಿಗಾಗಿ , ಮಾನವೀಯತೆಯ ಪ್ರವಾದಿಯಾಗಿ ಬಾಳಿನುದ್ದಕ್ಕೂ ದುಡಿದರು . ನಾಡಸೇವೆಗಾಗಿ ತಮ್ಮ ಜೀವನವನ್ನೇ ಧಾರೆಯೆರೆದರು . ಅಂತಹ ಪುಣ್ಯಪುರುಷರ ಹೆಸರಿನಲ್ಲಿ ಅವರ ನೆನಪಿಗಾಗಿ ಪ್ರಾರಂಭಿಸಿರುವ ಈ ಯೋಜನೆ ಒಂದು ಸಾರ್ಥಕ ಹೆಜ್ಜೆ ಎಂದು ತಿಳಿದಿದ್ದೇವೆ .
ಇಡಿಯ ಆವರಣದಲ್ಲಿ ಅನಾವರಣವಾಗದ ವ್ಯಕ್ತಿತ್ವ ಎಂದರೆ ಅಕ್ಬರ್ , ಭೈರಪ್ಪನವರು ಮುಲ್ಲಾನ ಕೈಲಿ ಅಕ್ಬರನನ್ನು ತೆಗಳುವ ಮೂಲಕ ಅವನು ಶ್ರೇಷ್ಠನಾಗಿದ್ದ ಎಂಬ ಕಲ್ಪನೆ ಕಟ್ಟಿಕೊಡುವ ಪ್ರಯತ್ನ ಮಾಡಿಬಿಟ್ಟಿದ್ದಾರೆನಿಸುತ್ತದೆ . ತನ್ನ ಹದಿನಾಲ್ಕನೆಯ ವಯಸ್ಸಿಗೆ ಕಾಫಿರನನ್ನು ಕೊಂದು ಶಸ್ತ್ರಾಭ್ಯಾಸಕ್ಕೆ ವೇಗ ಪಡೆದುಕೊಂಡವನು ಅವನು . ಜೆಸಿಯಾ ತಲೆಗಂದಾಯ ಹೇರಿ ಹಿಂದೂಗಳನ್ನು ಹೊಸಕಿ ಹಾಕುವ ಪ್ರಯತ್ನ ಅವನದಿತ್ತು . ಬಹುಶಃ ಈಗಿನ ಸೆಕ್ಯುಲರ್ ಬುದ್ಧಿ ಜೀವಿಗಳಿದ್ದಾರಲ್ಲ , ಅವರೆಲ್ಲರ ನಾಯಕನಾಗಿ ಅವನನ್ನು ಕಾಣಬಹುದೇನೋ ? ನವರತ್ನ ರಾಜಾರಾಂರ ಕೃತಿಗಳಲ್ಲಿ ಕಂಡು ಬರುವ ಅಕ್ಬರ್ ಆವರಣದಲ್ಲಿ ಮಾಯವಾಗಿರುವುದು ಅಚ್ಚರಿ .
ಹೌದು ಇದರ ಬಗ್ಗೆ ಶಾಲೆಯ ಪುಸ್ತಕಗಳಲ್ಲಿ ಇರೋದಿಲ್ಲ . ತಂದೆ - ತಾಯಿಯರಾದ ನಾವು ಈ ಕಟು ಸತ್ಯವನ್ನು ನಮ್ಮ ಮಕ್ಕಳಿಗೆ ತಿಳಿಸಬೇಕು . ಏನಂತೀರ ರಾಕೇಶ್ ? ?
ಸಧ್ಯಕ್ಕೆ ಪೂರ್ತಿ ತಾಣ ಅಂಗ್ಲಮಯವಾಗಿದೆ . ಶೀಘ್ರದಲ್ಲಿ ಕನ್ನಡ ಅವತರಣಿಕೆಯೂ ಬರಲಿ ಎಂದು ಹಾರೈಸೋಣ .
ಚನಾಗ್ ಬರದೀರ್ರೀ ಪಾಟೀಲ್ರೇ ! ನಂಗೂ ನಮ್ಮೂರ್ ಬಸ್‍ಸ್ಟ್ಯಾಂಡ್ ನೆನಪಾಯ್ತು . ನಮ್ಮೂರ್ ಬಸ್‍ಸ್ಟ್ಯಾಂಡ್‍ನಲ್ಲೂ ಈ ಪೋಲಿ ಹುಡುಗರ ಪಾಂಡಿತ್ಯ ಪ್ರದರ್ಶನ ಅವ್ಯಾಹತವಾಗಿ ನಡೆಯುತ್ತಿತ್ತು . ಪ್ರತೀ ವರ್ಷ ಪೇಯಿಂಟ್ ಮಾಡಿಸ್ದೇ ಇದ್ರೆ ಊರಿಗೇ ಅವಮಾನ ಆಗೋಷ್ಟು ಕೆಟ್ಟದಾಗಿರ್ತಿತ್ತು ಬಸ್‍ಸ್ಟ್ಯಾಂಡ್ ಬರಹಗಳು . ಇದನ್ನ ನೋಡಲಾಗದೇ ನಮ್ಮೂರ್ ಜನ ಒಂದು ಪ್ಲಾನ್ ಮಾಡಿದ್ರು . ಮುಂದಿನ ವರ್ಷ ಪೇಯಿಂಟ್ ಮಾಡ್ಸಿ ಆದ್ಮೇಲೆ , ' ಈ ಕಟ್ಟಡಕ್ಕೆ ಸಿಗಂದೂರು ಶ್ರೀದೇವಿಯಕಾವಲಿದೆ , ಎಚ್ಚರಿಕೆ ! ! ' ಎಂದು ಒಂದು ಕೆಂಪು ಬೋರ್ಡು ಬರೆಸಿ ಹಾಕಿದ್ದರು . ಆದ್ರೆ ಊರ ಹುಡುಗ್ರು ಅದೆಷ್ಟು ಪೋಲಿ ಮತ್ತು ಬುದ್ವಂತ್ರು ಅಂದ್ರೆ ಅವರು ಮೊದಲಿಗೆ ಒಂದು ಗಣಪತಿಯ ಚಿತ್ರ ಬಿಡಿಸಿ , ಕೆಳಗೆ ' ಓಂ ಗಣೇಶಾಯ ನಮಃ ' ಎಂದು ಬರೆದು ಆ ನಂತರತಮ್ಮ ಬರವಣಿಗೆ ಮುಂದುವರೆಸಿದ್ದರು ! : ) ನಿಮ್ಮ ಬರಹ ಓದಿ ಇನ್ನೂ ಏನೇನೋ ನೆನಪಾಯ್ತು . : - )
ಸಾಮಾನ್ಯವಾಗಿ ಸಿನಿಮಾ ನೋಡಿ ನಾನು ಅಳುವುದಿಲ್ಲ . ಸಿನಿಮಾವನ್ನು ಕೇವಲ ಸಿನಿಮಾ ಎಂದು ನೋಡಿದವನು ನಾನು . ಅದರಲ್ಲೂ ಒಬ್ಬ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ , ಸಿನಿಮಾ ನೋಡುವುದು ಹೇಗೆ ಎಂಬುದನ್ನು ಮೇಸ್ಟ್ರರಿಂದ ಹೇಳಿಸಿಕೊಂಡವನಾಗಿ ಸಿನಿಮಾದೊಳಗೆ ಭಾವನಾತ್ಮಕವಾಗಿ ಸೇರಿ ಹೋಗುವುದು ಬಹಳ ಕಡಿಮೆ . ಆದರೆ ತಾರೆ ಜಮೀನ್ ಪರ್ ನೋಡುವಾಗ ಮಾತ್ರ ಅದು ಸಾಧ್ಯವೇ ಆಗಲಿಲ್ಲ .
ಕಾಲ್ನಡಿಗೆಯಲ್ಲಿ ಚಾಮುಂಡಿ ಬೆಟ್ಟವನ್ನು ಹತ್ತಲಿದ್ದೇನೆ ಎಂಬ ಮಾತನ್ನು ಹುಸಿಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ
ಇನ್ನು ತಡವಾಗಿ ಇಳಿದರೆ ಆಡಲು ಓವರ್ ಸಿಗುವುದಿಲ್ಲ ಎಂದು ಖಾತ್ರಿ ಪಡಿಸಿಕೊಂಡ ರೈ , ಕೊನೆಗೂ ಮಾತಿಗಿಳಿದರು . ಆಡಿದ್ದು ಕಡಿಮೆ ಮಾತು . ಆದ್ರೂ ತುಂಬಾ ಸೊಗಸಾಗಿತ್ತು . ' ರೈ ' ಅವರಿಗೆ ಕನ್ನಡ ಮರೆತಿಲ್ಲ ಎಂಬುದು ಪ್ರೇಕ್ಷಕನಿಗೆ ಖಾತ್ರಿಯಾಗುವ ಹೊತ್ತಿಗೆ ಮಾತು ನಿಲ್ಲಿಸಿಬಿಟ್ಟಿದ್ದರು !
ಬಳ್ಳಾರಿಯನ್ನು ಲೂಟಿ ಮಾಡುತ್ತಿರುವುದು ಯಾರು ? ಯಾರ ಆಡಳಿತದಲ್ಲಿ ಇದೆಲ್ಲಾ ನಡೆಯುತ್ತಿದೆ ? ನರಸಿಂಹ ರಾವ್ ಸರಕಾರ ತೀನ್‌ಬೀಘಾ ಎಂಬ ಗ್ರಾಮವನ್ನು ಬಾಂಗ್ಲಾದೇಶಕ್ಕೆ ಭೋಗ್ಯಕ್ಕೆ ಕೊಟ್ಟಾಗ ' ಭಾರತಾಂಬೆಯನ್ನೇ ಅಡವಿಟ್ಟ ಸರಕಾರ ' ಎಂದು ಬೊಬ್ಬೆ ಹಾಕಿ ರಾಷ್ಟ್ರೀಯ ವಿವಾದವನ್ನಾಗಿ ಪರಿಣಮಿಸಿದ್ದ ಬಿಜೆಪಿ ಈಗ ಮಾಡುತ್ತಿರುವುದೇನು ? ಬಳ್ಳಾರಿಯಲ್ಲಿ ನಡೆಯುತ್ತಿರುವುದೂ ಭಾರತ ಮಾತೆಯ ಲೂಟಿಯೇ ಅಲ್ಲವೆ ? ಲೂಟಿ ಮಾಡುತ್ತಿರುವವರು ಬಿಜೆಪಿ ಸರಕಾರದಲ್ಲೇ ಇರುವ ಘನತೆವೆತ್ತ ಮೂವರು ಮಂತ್ರಿವರ್ಯರೇ ಅಲ್ಲವಾ ? ಸಂತೋಷ್ ಹೆಗ್ಡೆಯವರು ಬಳ್ಳಾರಿಯನ್ನು ಸುತ್ತಾಡಿ ೧೬೦೦ ಪುಟಗಳ ಸುದೀರ್ಘ ವರದಿ ಹಾಗೂ Action - to - be - taken ರಿಪೋರ್ಟ್ ( ತೆಗೆದುಕೊಳ್ಳಬೇಕಾದ ಕ್ರಮಗಳ ಪಟ್ಟಿ ) ಕೊಟ್ಟಿದ್ದು 2008 , ಡಿಸೆಂಬರ್ 18ರಂದು . ಆದರೆ ಯಡಿಯೂರಪ್ಪನವರ ಸರಕಾರ ಮಾಡಿದ್ದೇನು ? ವರದಿ ಕೊಟ್ಟು ವರ್ಷ ಕಳೆದರೂ ಯಾವ ಕ್ರಮವನ್ನೂ ಕೈಗೊಂಡಿಲ್ಲವೇಕೆ ? ಅಂತಹ ಅಧಿಕಾರ , ಆತ್ಮಸ್ಥೆರ್ಯ ಆಳುವ ದೊರೆ ಯಡಿಯೂರಪ್ಪನವರಿಗಿಲ್ಲವೆ ? ಅದಿರಲಿ , ಪ್ರಜಾಪ್ರಭುತ್ವಕ್ಕೆ ' ಮಾಫಿಯಾ ' ವನ್ನು ಮಟ್ಟಹಾಕುವ ತಾಕತ್ತೇ ಇಲ್ಲವೆ ?
ಮಂಗಳೂರಿನಲ್ಲಿ ಪಬ್ ಒಂದರ ಮೇಲೆ ನಡೆದ ದಾಳಿ ಮಾಧ್ಯಮಗಳ ದಯೆಯಿಂದ ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದು ದೃಶ್ಯ ಮಾಧ್ಯಮಗಳಲ್ಲಿ ಗಂಭೀರವಾದ ಚರ್ಚೆಗೊಳಗಾಗಿದೆ . ಈ ಪ್ರಕರಣದಲ್ಲಿ ಅಪರಾಧಿಗಳ ಹಿಂಡನ್ನೇ ಗುರುತಿಸಬಹುದು . ಪಬ್‌ಗಳನ್ನು ನಡೆಸುವ ನೆಪದಲ್ಲಿ ಯುವಜನಾಂಗವನ್ನು ತಪ್ಪುದಾರಿಗೆ ಎಳೆಯುವ ಮದ್ಯದ ದೊರೆಗಳು , ತಮ್ಮ ವಿಲಾಸೀ ಭೋಗ ಜೀವನದಲ್ಲಿ ಮೈಮರೆತು ಸುತ್ತಲಿನ ಸಾಮಾಜಿಕ ಸ್ಥಿತ್ಯಂತರಗಳನ್ನು ಲೆಕ್ಕಿಸದ ಮೇಲ್ ಮಧ್ಯಮವರ್ಗದ ಜನತೆ , ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಗ್ರಹಿಸದೆಯೇ ಅಂಧರಂತೆ ಮುನ್ನಡೆಯುವ ಯುವಜನತೆ , ಸಾರಾಯಿ ನಿಷೇದ ಮಾಡಿದರೂ ಸರ್ಕಾರದ ಆದಾಯದ ದೃಷ್ಟಿಯಿಂದ ಸಂಪೂರ್ಣ ಪಾನನಿಷೇಧ ಜಾರಿಗೆ ತರದ ಆಳುವ ವರ್ಗಗಳು , ಇವರೆಲ್ಲರೂ ಮೂಲಭೂತವಾಗಿ ತಪ್ಪಿತಸ್ಥರಾಗುತ್ತಾರೆ .
ಹೆಂಗಳೆಯರು ಮಳೆಗಾಲದ ಚಳಿ ನಡುಕಕ್ಕೆ ಪೂರಕವಾಗಿ ದೇಹ ಮತ್ತು ಮನಸ್ಸನ್ನು ಉಲ್ಲಸಿತಗೊಳಿಸುವ ಖಾದ್ಯ ಪದಾರ್ಥಗಳ ಒಟ್ಟು ಮಾಡತೊಡಗುತ್ತಾರೆ . ಅವರ ಆಣತಿಯ ಮೇಲೆ ಜಾರು ಸೇರುವ , ಅಟ್ಟ ಏರುವ ಸರದಿಯಲ್ಲಿ ಹಪ್ಪಳ - ಸಂಡಿಗೆ , ಉಪ್ಪಿನಕಾಯಿ , ಹುಳಿ , ವಿವಿಧ ಕಾಳು - ಬೇಳೆಗಳು ಇರುತ್ತವೆ . ಜತೆಗೆ ಅಮ್ಮಂದಿರ ಕಾಳಜಿಯ ಇಷ್ಟಿಷ್ಟು ಕೂಡ . ಅಂತಹ ಚಿಕ್ಕಪುಟ್ಟ ಜತನದ ಮೂಲಕ ಹೆಂಗಳೆಯರು ಕಾಪಿಡುವುದು ಬರಿ ತಿನಿಸು - ಖಾದ್ಯಗಳನ್ನಷ್ಟೇ ಅಲ್ಲ , ಕುಟುಂಬವನ್ನು ಪೊರೆಯುವ ಪ್ರೀತಿ , ಮಮತೆಯನ್ನೂ . ಹಾಗಾಗಿ ಹಾಗೆ ಕೂಡಿಟ್ಟ ಎಲ್ಲವೂ ತಿಂಗಳ - ಕೆಲವೊಮ್ಮೆ ವರುಷ - ಬಳಿಕವೂ ನಳನಳಿಸುವ ಪ್ರೀತಿಯಂತೆಯೇ ತಾಜಾ ಆಗಿರುತ್ತವೆ !
ಇನ್ನೊಂದು ಘಟನೆಯಲ್ಲಿ , ಕೇರಳ MLAಯ ಮಗಳನ್ನು ಮತ್ತು ಅವರ ಜೊತೆ ಇದ್ದ ಒಬ್ಬ ಮುಸ್ಲಿಂ ಹುಡುಗನ ಮೇಲೆ ಒಂದು ಗುಂಪು ದಾಳಿಮಾಡಿತು . ತಕ್ಷಣ ಎಲ್ಲಾ ಮಾಧ್ಯಮದವರು ಈ ಘಟನೆಯ ಹಿಂದೆ ಹಿಂದು ಸಂಘಟನೆಯ ಕೈವಾಡವಿದೆ ಎಂದು ಬರೆದರು . ಪೋಲಿಸ್ ವಿಚಾರಣೆ ನಂತರ ತಿಳಿದುಬಂದ ವಿಷಯವೇನೆಂದರೆ , ಈ ಘಟನೆಯ ಹಿಂದೆ CPI - Mafioso ಪಕ್ಷದ ಕಾರ್ಯಕರ್ತರ ಕೈವಾಡವಿದೆ ಎಂದು . ನಿಜ ಗೊತ್ತಾದಮೇಲೆ ಮಾಧ್ಯಮದವರು ಈ ವಿಚಾರವನ್ನು ಕೈ ಬಿಟ್ಟರು . ಯಾರೂ ಈ CPI - Mafioso ಪಕ್ಷವನ್ನು ವಜಾ ಮಾಡಿ ಎಂದು ಕೇಳಲಿಲ್ಲ !
ವ್ಯಾಪಕ ಸಂಸ್ಕೃತಿಯಲ್ಲಿ ಬ್ಲೇಕ್‌ನ ಕಾವ್ಯವು ಜನಪ್ರಿಯ ಸಂಯೋಜಕರಿಂದ ಸಂಗೀತ ಸಂಯೋಜನೆಗೆ ಒಳಗಾಗಿದೆ . ಅದರಲ್ಲೂ ವಿಶೇಷವಾಗಿ 1960ರ ದಶಕದ ನಂತರ ಬಂದ ಸಂಗೀತಗಾರರೊಂದಿಗೆ ಇದು ಜನಪ್ರಿಯವಾಗಿದೆ . ಬ್ಲೇಕ್‌ನ ಪಡಿಯಚ್ಚು ಕೆತ್ತನೆಗಳು ಆಧುನಿಕ ವರ್ಣಚಿತ್ರದ ಕಾದಂಬರಿಯ ಮೇಲೆ ಗಮನಾರ್ಹವಾದ ಪ್ರಭಾವವನ್ನು ಹೊಂದಿದ್ದವು .
ಅದಕ್ಕ ಹಿಂಗ ಗುಡಿಗ ಹೋಗಿದೆಲ್ಲಾನೇ ಈ ಕಾಲದ ತಪಸ್ಸು ಅಂತ ಅನಸ್ತದ . ಆ ಲೆಕ್ಕದಾಗ ನಾ ಅಂತ್ರು ಋಷಿ ಆಗುದು ಭಾಳ ದೂರದ .
ಎಸ್ಸೆಸ್ಸೆಲ್ಸಿಯಲ್ಲಿ ಬಂಪರ್ ಬೆಳೆ ಬಂದರೂ , ಪಿಯುಸಿಯಲ್ಲಿ ಶೇ . ೪೯ . ೩೬ ಶೇ . ವಿದಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ . ಅಂದರೆ ೨ , ೨೫ , ೬೭೩ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ . ಇಷ್ಟು ದೊಡ್ಡ ಮೊತ್ತದ ವಿದ್ಯಾರ್ಥಿಗಳ ಮನಸ್ಥಿತಿ ಹೇಗಿರಬಹುದು ಎಂಬುದನ್ನು ವಿಚಾರ ಮಾಡಿದರೆ ಮನಸ್ಸು ಕಲ್ಲವಿಲವಾಗುತ್ತದೆ . ಅವರ ಬದುಕಿನ ಬಗ್ಗೆ ಮನಸ ತುಂಬ ಆತಂಕ . ಪಿಯುಸಿ ಫಲಿತಾಂಶ ಬಂದ ಎರಡೇ ದಿನದಲ್ಲಿ ರಾಜ್ಯದಲ್ಲಿ ಆರು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮೂಲಕ ಜೀವನ ಅಂತ್ಯಗೊಳಿಸಿದ್ದಾರೆ . ಪರೀಕ್ಷೆಯಲ್ಲಿ ವಿಫಲವಾದ ವಿದ್ಯಾರ್ಥಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾನೆ . ಮನೆಯವರ ಮುಖ ನೋಡಲು , ಪಕ್ಕದ ಮನೆಯವರೊಡನೆ ಮಾತಾಡಲು , ಗೆಳೆಯರೊಂದಿಗೆ ಮಾತಾಡಲೂ ಆಗದ ಸ್ಥಿತಿ ತಲುಪಿಬಿಡುತ್ತಾರೆ . ಮನೆಯವರ ಕೆಂಗಣ್ಣು , ಪಕ್ಕದ ಮನೆಯವರ ಕೀಟಲೆ ಮಿಶ್ರಿತ ಓರೆಗಣ್ಣ ನೋಟ , ಸಂಬಂಧಿಕರ ಚಚ್ಚುಮಾತು , ಫೇಲಾದ್ದರಿಂದ ಮನಸ್ಸಿನಲ್ಲಿ ಉಂಟಾದ ಸೋಲಿನ ಭಾವನೆ , ಪಾಸಾಗುವ ಮೂಲಕ ಗೆದ್ದ ಗೆಳೆಯ ಇವೆಲ್ಲ ವಿದ್ಯಾರ್ಥಿ ಮನಸ್ಸಿನ ಮೇಲೆ ನಿಯಂತ್ರಿಸಲಾಗದ ಪರಿಣಾಮ ಬೀರುತ್ತವೆ . ಇದಕ್ಕೆಲ್ಲ ಪರೀಕ್ಷೆಯನ್ನು ನಾವು ನೋಡುವ , ಅದರಲ್ಲಿ ಅನುತ್ತೀರ್ಣರಾದರೆ ಜೀವನೇ ಮುಗಿದು ಹೋಯಿತು ಎಂಬಂತೆ ವರ್ತಿಸುವ ನಮ್ಮ ವರ್ತನೆಗಳೇ ಕಾರಣ . ಪಾಲಕರಿಗೆ ಮಕ್ಕಳ ಮೇಲೆ ಹೆಚ್ಚಿದ ನಿರೀಕ್ಷೆ , ಮಕ್ಕಳು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನೇ ಪಾಲಕರು ಪ್ರತಿಷ್ಠೆಯ , ಅಂತಸ್ತಿನ ಪ್ರಶ್ನೆಯಾಗಿಸಿಕೊಂಡಿರುವುದು , ಹೆಚ್ಚಿದ ಸ್ಪರ್ಧೆ ಮಕ್ಕಳನ್ನು ಪರೀಕ್ಷೆಯಲ್ಲಿ ಹಾಗೂ ಫಲಿತಾಂಶದ ಸಮಯದಲ್ಲಿ ಅಪಾರ ಒತ್ತಡಕ್ಕೆ ಸಿಲುಕಿಸುತ್ತಿದೆ . ಆ ಗೊಂದಲ , ಒತ್ತಡದಲ್ಲಿ ಈ ಎಲ್ಗ ಕಷ್ಟಕ್ಕೂ ಪರಿಹಾರದ ಸುಲಭ ಮಾರ್ಗವಾಗಿ ಅವರಿಗೆ ಕಾಣಿಸುವುದು ಆತ್ಮಹತ್ಯೆ ಮಾತ್ರ . ತಾನು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರಿಂದ ತಂದೆ - ತಾಯಿ ಗೌರವ ಹಾಳಾಗಿದೆ . ಇದ್ದು ಅವರಿಗೆ ಇನ್ನಷ್ಟು ಅವಮಾನ ಕೊಡುವುದಕ್ಕಿಂತ ಸಾಯುವುದೇ ಮೇಲು ಅಂತ ಅವರ ಸಣ್ಣ ಮನಸ್ಸು ದೊಡ್ಡ ತೀರ್ಮಾನ ತೆಗೆದುಕೊಂಡು ಬಿಡುತ್ತದೆ . ಹೆದರಿದವನಿಗೆ ಹೂವೂ ಹಾವಾಗುವಂತೆ ಆತ್ಮಹತ್ಯೆಯತ್ತ ಮುಖ ಮಡಿದವರಿಗೆ ಶಾಲೂ ನೇಣಾಗುತ್ತದೆ . ಈ ವಿಷಯದಲ್ಲಿ ಮಕ್ಕಳಿಗಿಂತ ಪಾಲಕರಿಗೆ ಹೆಚ್ಚು ತಿಳವಳಿಕೆ ಇರಬೇಕಾದ್ದು ಅಗತ್ಯ . ಯಾಕೆಂದರೆ ಪಾಲಕರು ಹಿರಿಯರು . ಜೀವನ ಅರಿತವರು . ಮಕ್ಕಳು ಪರೀಕ್ಗಷೆಯಲ್ಲಿ ಫೇಲಾಗಿರುವುದನ್ನೇ ದೊಡ್ಡ ರಂಪ ಮಾಡಬಾರದು . ಫಲಿತಾಂಶ ಬಂದಾಗಿದೆ . ರಂಪ ಮಾಡಿ ಪ್ರಯೋಜನವೇನೂ ಇಲ್ಲ ಎಂಬುದನ್ನು ಅರಿಯಬೇಕು . ನಿಮಗಿಂತ ಕೆಟ್ಟ ಮನಸ್ಥಿತಿಯಲ್ಲಿ ಮಕ್ಕಳಿರುತ್ತಾರೆ ಎಂದು ಅರ್ಥ ಮಾಡಿಕೊಳ್ಳಬೇಕು . ಇದನ್ನು ಅರಿಯದೆ ಪಾಲಕರು ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಕ್ಕಳನ್ನು ಹಿಗ್ಗಾಮುಗ್ಗಾ ಬಯ್ಯುತ್ತಾರೆ . ಇಷ್ಟೆಲ್ಲ ವ್ಯವಸ್ಥೆ ಮಾಡಿಕೊಟ್ಟೂ ನೀನು ಇಷ್ಟೇ ಮಾಡಿದ್ದು , ಆಚೆ ಮನಯೆ ಹುಡುಗಿ ಅಥವಾ ಹುಡುಗನ್ನು ನೋಡು ಎಂದು ಹೋಳಿಕೆ ಮಾಡಿ ಜರೆಯುತ್ತಾರೆ . ಈತ ಬದುಕಿರುವುದೇ ವೇಸ್ಟು ಎಂಭರ್ಥದಲ್ಲಿ ಬಯ್ಯುತ್ತಾರೆ . ಇದು ಮಕ್ಕಳ ಮೇಲೆ ಎಂಥ ಪರಿಣಾಮ ಬೀರಬಹುದು ಎಂಬುದನ್ನು ಆ ಕ್ಷಣಕ್ಕೆ ಅವರು ಗಮನಿಸುವುದಿಲ್ಲ . ನಂತರ ಮಕ್ಕಳು ಆತ್ಮಹತ್ಯೆ ಮಾಡಿಕೊಂಡರೆ , ಮನೆ ಬಿಟ್ಟು ಹೋದರೆ ಆಗ ಗೋಳೋ ಎಂದು ಕಣ್ಣೀರಿಡುತ್ತ ಪರಿತಪಿಸುತ್ತಾರೆ . ತಮ್ಮ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಬಹುದೆಂದು ಯಾರೂ ಎಣಿಸಿರುವುದಿಲ್ಲ . ಆದರೆ ಮಕ್ಕಳು ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಹದಿನೈದು ದಿನದ ಮಟ್ಟಿಗಾದರೂ ಅವರನ್ನು ಏಕಾಂಗಿಯಾಗಿ ಬಿಡದಿರುವುದು ಒಳ್ಳೆಯದು . ಏಕಾಂಗಿಯಾದರೆ ಮಕ್ಕಳಿಗೆ ಆತ್ಮಹತ್ಯೆ ಮಾಡುವ ಅವಕಾಶ ದೊರೆತಂತಾಗುತ್ತದೆ . ಏಕಾಂಗಿಯಾಗಿರುವಾಗ ಇಲ್ಲದ ಆಲೋಚನೆಗಳೂ ಮಕ್ಕಳ ತಲೆಯಲ್ಲಿ ಬಂದು ಅವರು ಆತ್ಮಹತ್ಯೆ ನಿರ್ಧಾರದತ್ತ ನಡೆದು ಹೋಗುವಂತೆ ಮಾಡುತ್ತದೆ . ಅದರ ಬದಲು ಯಾರಾದರೂ ಸದಾ ಅವರ ಜತೆ ಇದ್ದರೆ ಮನಸ್ಸಿಗೂ ಸ್ವಲ್ಪ ಸಮಾದಾನ . ಆತ್ಮಹತ್ಯೆ ಅವಕಾಶಗಳೂ ದೊರೆಯುವುದಿಲ್ಲ . ಇದೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪಾಲಕರು ಮಕ್ಕಳನ್ನು ಇಂತಹ ಸನ್ನಿವೇಶಕ್ಕೆ ಸಿದ್ಧಗೊಳಿಸುವುದನ್ನು , ಸ್ವತಃ ತಾವು ಸಿದ್ಧಗೊಳ್ಳುವುದನ್ನು ಕಲಿಯಬೇಕಿದೆ . ಯಾರೂ ತಮ್ಮ ಮಕ್ಕಳು ಫೇಲಾಗಲೆಂದು ಬಯಸುವುದಿಲ್ಲ . ಆದರೆ ಒಂದೊಮ್ಮೆ ಫೇಲಾದರೆ ಎಂಬುದನ್ನೂ ಚಿಂತಿಸಿಟ್ಟುಕೊಂಡರೆ ಅಷ್ಟು ಸಮಸ್ಯೆಯಾಗಲಾರದು . ಪ್ರತಿ ಪಾಲಕರು ಪರೀಕ್ಷೆಗೆ , ಫಲಿತಾಂಶ ನೋಡಲು ಹೋಗುವ ಮಕ್ಕಳನ್ನು ಕೂರಿಸಿ ಒಂದೈದು ನಿಮಿಷ ಮಾತಾಡಬೇಕು . ' ಪರೀಕ್ಷೆ ಫಲಿತಾಂಶವೊಂದೇ ಮುಖ್ಯವಲ್ಲ . ಪರೀಕ್ಷೆಯಲ್ಲಿ ಫೇಲಾದ ಎಷ್ಟೋ ಜನ ಜೀವನದ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ . ಪರೀಕ್ಷೆಯಲ್ಲಿ ಅತ್ಯಂತ ಕಡಿಮೆ ಅಂಕ ತೆಗೆದುಕೊಂಡವರು ಜೀವನ ಪರೀಕ್ಷೆಯಲ್ಲಿ ಫಸ್ಟ್ ರೆಂಕ್ ಪಡೆದಿದ್ದಾರೆ . ಎಂಬಿಎ ಕಲಿಯದ ವಿಜಯ ಸಂಕೇಶ್ವರ ಅಷ್ಟು ದೊಡ್ಡ ವಿಆರ್‌ಎಲ್ ಸಂಸ್ಥೆ ಸ್ಥಾಪಿಸಿದ್ದಾರೆ . ಕಾಲೇಜಿಗೂ ಹೋಗದ ಆರ್ . ಎನ್ . ಶೆಟ್ಟಿ ಯಶಸ್ವೀ ಉದ್ಯಮಿಯಾಗಿದ್ದಾರೆ . ಇವುಗಳನ್ನು ಮಕ್ಕಳಿಗೆ ಹೇಳಬೇಕು . ' ಪರೀಕ್ಷೆ ಫಲಿತಾಂಶ ಜೀವನದ ಒಂದು ಭಾಗ . ಪರೀಕ್ಷೆ ಮುಂದಿನ ವರ್ಷವೂ ಬರುತ್ತದೆ ಎಂಬುದನ್ನೂ ಅವರಿಗೆ ಅರುಹಬೇಕು . ಆಗ ಫಲಿತಾಂಶ ನೋಡಲು ಹೋಗುವ ಮಕ್ಕಳ ಮನಸ್ಸು ಸ್ವಲ್ಪ ತಿಳಿಯಾದೀತು . ಇನ್ನಾದರೂ ಪಾಲಕರು ತಮ್ಮ ಮಕ್ಕಳ ಬಗೆಗಿರುವ ಅತೀ ಆಸೆ ಬಿಡಬೇಕು . ಮಕ್ಕಳು ಎಂಜಿನಿಯರ್ ಆಗಬೇಕು , ವೈದ್ಯನಾಗಬೇಕು . ಆ ಮೂಲಕ ತಾನು ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಿಸಕೊಳ್ಳಬೇಕು ಎಂಬ ಆಸೆ ಮನಸ್ಸಿನಲ್ಲಿದ್ದರೆ , ನೀವೇ ಇಟ್ಟುಕೊಳ್ಳಿ . ಅದನ್ನು ಮಕ್ಕಳ ಮೇಲೆ ಹೇರಲು ಹೋಗಬೇಡಿ . ಎಂಜಿನಿರಿಂಗ್ , ವೈದ್ಯ , ಸಾಫ್ಟ್‌ವೇರ್ ಅಲ್ಲದೇ ಪ್ರಪಂಚದಲ್ಲಿ ಸಾಕಷ್ಟು ವೃತ್ತಿಗಳಿವೆ ಮತ್ತು ಆ ವೃತ್ತಿ ಮಾಡುವ ಜನರು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ ಎಂಬುದನ್ನು ಪಾಲಕರು ಅರ್ಥ ಮಾಡಿಕೊಂಡು , ಅದನ್ನು ಮಕ್ಕಳಿಗೂ ಅರ್ಥ ಮಾಡಿಸಬೇಕು . ಇದನ್ನೆಲ್ಲ ಪಾಲಕರು ಅರ್ಥ ಮಾಡಿಕೊಂಡರೆ ಮಾತ್ರ ಫಲಿತಾಂಶದ ನಂತರ ಮಕ್ಕಳನ್ನು ಆವರಿಸುವ ಆತಂಕ , ಆತ್ಮಹತ್ಯೆಯ ಸನ್ನಿ ನಿವಾರಣೆಯಾದೀತು . ಒಂದಷ್ಟು ಎಳೆ ಜೀವಗಳು ಉಳಿದೀತು .
@ ರಾಜ್ ನಾನು ಬೇಕಂತಲೇ ಆ technique ಬಳಸಿಕೊಂಡಿದೀನಿ ಒಂದು ಪ್ಯಾರಾ past tense ನಲ್ಲಿದ್ದರೆ ಇನ್ನೊಂದು near presentದು . ಧನ್ಯವಾದಗಳು
ಎಂ . ಎಫ್ . ಹುಸೇನ್್ರ ಪೇಟಿಂಗ್್ಗಳು ಮಿಲಿಯನೇರ್ , ಬಿಲಿಯನೇರ್್ಗಳ ಡ್ರಾಯಿಂಗ್ ರೂಮ್್ಗಳ ಗೋಡೆಯನ್ನು ಆಕ್ರಮಿಸಿದ ಮಾತ್ರಕ್ಕೆ ಅವರು ದೊಡ್ಡ ಕಲಾವಿದ , ಕಲಾಕ್ಷೇತ್ರದ ಯುಗ ಪುರುಷನಾಗುವುದಿಲ್ಲ . ಇಷ್ಟಕ್ಕೂ ಮಾಡರ್ನ್ ಆರ್ಟ್ ಎಂದು ಬಾಯಿ ಚಪ್ಪರಿಸುವವರು ಎಲೀಟ್ ವರ್ಗ ಮಾತ್ರ . ಅವು ಶ್ರೀಮಂತರ ಖಯಾಲಿಗಳಷ್ಟೇ . ಹಾಗಿರುವಾಗ ಹುಸೇನ್ ಅಂತ್ಯದೊಂದಿಗೆ ಎಲ್ಲಾ ಮುಗಿದು ಹೋಯಿತೆಂಬಂತೆ ಅಲವತ್ತುಕೊಳ್ಳುತ್ತಿರುವುದರಲ್ಲಿ , ಉತ್ಪ್ರೇಕ್ಷೆಯಿಂದ ಮಾತನಾಡುವುದರಲ್ಲಿ ಅರ್ಥವಿಲ್ಲ . ಕಲೆಯೇನೂ ಎಂ . ಎಫ್ . ಜತೆ ಸಾಯುವುದಿಲ್ಲ . ಏಕೆಂದರೆ ಅದೇನು ಅವರ ಜತೆ ಹುಟ್ಟಿದ್ದಲ್ಲ . ಕಲೆಯ ಮೂಲವಿರುವುದು ಹುಸೇನ್್ರಲ್ಲಲ್ಲ . ಇವತ್ತಿಗೂ ಯಾವುದೋ ಒಂದು ಕುಗ್ರಾಮದ ಮನೆಯೊಂದರ ಗೋಡೆಯನ್ನು ಅಲಂಕರಿಸಿರುವುದು ರಾಜಾ ರವಿವರ್ಮನ ಲಕ್ಷ್ಮಿ , ಶಾರದೆಯೇ ಹೊರತು ಎಂ . ಎಫ್ . ಹುಸೇನರ ದುಬಾರಿ ಕುದುರೆ ಚಿತ್ರಗಳಲ್ಲ . ಜತಗೆ ಅವನೀಂದ್ರನಾಥ್ ಟಾಗೋರ್ , ಜಾಮಿನಿ ರಾಯ್ , ನಂದಲಾಲ್ ಬೋಸ್್ರಂತಹ ಅಪ್ರತಿಮ ಕಲಾವಿದರು ಭರತ ಖಂಡದಲ್ಲಿ ಜನ್ಮವೆತ್ತಿ ಹೋಗಿದ್ದಾರೆ .
ಭೌತ ಶಾಸ್ತ್ರದಲ್ಲಿ ಒಂದು ವಿವರಣೆ ಇದೆ - " Forces when equal in magnitude but opposite in direction cancel each other " ಅಂತ . ಇವೆರಡು ನಾಯಿಗಳನ್ನು ನೋಡಿದಾಗ ನನಗೆ ಅದೇ ನೆನಪಾಗಿದ್ದು ! ಮಂಗಳೂರಿನ ಬಿಜೈ ಮ್ಯೂಸಿಯಂ ಗೆ ಹೋದಾಗ ಕಂಡ ದೃಶ್ಯವಿದು . ಫೋಟೋ : ಲಕ್ಷ್ಮೀ
ಇದನ್ನು ಯಾಕೆ ಹೇಳುತ್ತೇನೆ ಅಂದರೆ , ಗಾಂಧಿ ಮನುಷ್ಯಮಾತ್ರನಾಗಿ ಉಳಿದು ಯಾವುದೇ ವಿಶೇಷ ಶಕ್ತಿ ತನ್ನಲ್ಲಿಲ್ಲ ಅಂತ ತಿಳಿದು ಆದರೆ ತಾಂತ್ರಿಕರಿಗೆ ಇರುವುದಕ್ಕಿಂತ ಹೆಚ್ಚಿನ ಶಕ್ತಿ ಪಡೆದರು . ನನಗೆ ರಾಮಚಂದ್ರ ಗಾಂಧಿ ಹೇಳುತ್ತಿರುತ್ತಾರೆ . - ತಾಂತ್ರಿಕರ ಗುರಿ ಅಸಾಧ್ಯವಾದದ್ದನ್ನು ಸಾಧ್ಯವಾಗಿಸುವುದು . ಅದು ತಂತ್ರದ ಅಜೆಂಡಾ . ಗಾಂಧಿಗೆ ಒಂದು ತಾಂತ್ರಿಕನ ಗುಣ ಇತ್ತು . ಇಲ್ಲದಿದ್ದರೆ ಒಂದು ಹಿಡಿ ಉಪ್ಪನ್ನು ಅವರು ಎತ್ತಿ ಹಿಡಿದ ಕ್ಷಣವೇ ಇಡೀ ಬ್ರಿಟಿಷ್ ಸಾಮ್ರಾಜ್ಯ ಕುಸಿಯುವಂತೆ ಆಯಿತು . ಆಶೀಶ್ ನಂದಿ ಹೇಳಿದಂತೆ ನೆನಪು - ಇಂಡಿಯಾ ಸ್ವಾತಂತ್ರ ಪಡೆದದ್ದು ಆಗಸ್ಟ್ ಹದಿನೈದರಂದು ಮಾತ್ರವಲ್ಲ ; ಗಾಂಧಿ ಒಂದು ಹಿಡಿ ಉಪ್ಪನ್ನು ಸಮುದ್ರದ ದಂಡಮೇಲೆ ನಿಂತು ಹಿಡಿದು ಎತ್ತಿದಾಗ . ಲಕ್ಷಾಂತರ ಜನರನ್ನು ಜೈಲಿಗೆ ಹಾಕಬೇಕಾಯಿತು . ಅವರು ಯಾರೂ ಪ್ರತೀಕಾರದ ಹಿಂಸೆಗೆ ಇಳಿಯಲಿಲ್ಲ . ಬ್ರಿಟಿಷರಿಗೆ ನಾರಾಯಣಮೂರ್ತಿ ಉಪಯೋಗಿಸಿದ ಶಬ್ದ ಇದೆಯಲ್ಲ - embarrass - ಅದು ಆಯಿತು .
ಮಿನುಗು : ಚಂದಿರನಿಲ್ಲದ ರಾತ್ರಿಗೆ ಕತ್ತಲ ಆಗಸದಂಗಳದಲ್ಲಿ ಭಯದಿಂದ ನಡುತಿದೆ ನಕ್ಷತ್ರಗಳು .
ಬ ದರೀನಾರಾಯಣದ ದರ್ಶನದ ನಂತರ ನಾವು ಅಲ್ಲೇ ಒಂದು ಹೋಟೆಲ್ ನಲ್ಲಿ ತಿಂಡಿ ತಿನ್ನಲು ಹೋದೆವು . ಇಡ್ಲಿ , ದೋಸೆ , ಉಪ್ಪಿಟ್ಟು ಎಲ್ಲಾ ಇದೆ ಅಂದಾಗ , ಖುಷಿಯಾಗೋಯ್ತು . ಮೊದಲು ಉಪ್ಪಿಟ್ಟು ತಿಂದೆವು , ತುಂಬಾ ಚೆನ್ನಾಗಿತ್ತು ( ಆದರೆ ೫ ಜನರಿಗೆ ೩ ತಟ್ಟೆ ಸಿಕ್ತು ಅಷ್ಟೆ ) . ಇಡ್ಲಿ , ದೋಸೆಯೆಲ್ಲಾ ನಮ್ಮ ಕರ್ನಾಟಕದ ರುಚಿ ಇರಲಿಲ್ಲ . ಇವರುಗಳು ಬಹುಶ : ಹೆಸರುಬೇಳೆ ನೆನೆಸಿ ತಿರುವಿ ಮಾಡುತ್ತಾರೆಂದು ಕಾಣತ್ತೆ . . . ರುಚೀನೇ ಇರೋಲ್ಲ . ಸಾಂಬಾರ್ ಅಂತೂ ಒಳ್ಳೆ ಗಟ್ಟಿಯಾಗಿ ಕೇಕ್ ಇದ್ದಹಾಗಿತ್ತು . ಅದನ್ನೇ ಸ್ವಲ್ಪ ತಿನ್ನಲೇಬೇಕಾದ ಅನಿವಾರ್ಯ ನಮಗೆ . . . . ಏನೂ ಮಾಡೋಕಾಗೊಲ್ಲ . . . ನಮಗೆ ಊರಿಗೆ ಬಂದು , ನಮ್ಮ ಅನ್ನ ತಿಳಿಸಾರು ತಿಂದರೆ ಸಾಕು ಎನ್ನುವಂತಾಗಿತ್ತು .
ನಮ್ಮದು ಕನ್ನಡಪರ ಸರ್ಕಾರ ಅಂತಾ ಗಂಟೆಗೊಮ್ಮೆ , ಗಳಿಗೆಗೊಮ್ಮೆ ಬಡ್ಕೊಳ್ಳೋ ಘನ ಕರ್ನಾಟಕ ರಾಜ್ಯಸರ್ಕಾರವೇ ಮಾಡಿರೋ ಈ ಕೆಲಸವನ್ನು ನೋಡಿ . ನಿನ್ನೆಯ ( 10 . 11 . 2010ರ ) ವಿಜಯಕರ್ನಾಟಕದಲ್ಲಿ ಇಂಥದ್ದೊಂದು ಜಾಹೀರಾತನ್ನು ಹಾಕಲಾಗಿದೆ . ಇದರಲ್ಲಿ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲು ನಾಡಿನ ಯುವಕರಿಗೆ ಕರೆಕೊಡಲಾಗಿದೆ . ಆದರೆ ಈ ಯುವಜನೋತ್ಸವದಲ್ಲಿ ಭಾಷಣ ಸ್ಪರ್ಧೆ ಮತ್ತು ಏಕಾಂಕ ನಾಟಕ ಸ್ಪರ್ಧೆಗಳು ಹಿಂದಿ / ಇಂಗ್ಲೀಷಿನಲ್ಲಿರಬೇಕಂತೆ ! ಇಲ್ಲಿ ಬೇರೆಬೇರೆ ಹಂತಗಳಲ್ಲಿ ಗೆದ್ದು ಮುಂದೆ ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಿ , ಅಲ್ಲೂ ಬಹುಮಾನ ಗೆಲ್ಲಿ , ಹೊರದೇಶದಲ್ಲಿ ನಿಮ್ಮ ಪ್ರತಿಭೆ ತೋರಿಸೋ ಅವಕಾಶ ಗಿಟ್ಟುಸಿಕೊಳ್ಳಿ ಅಂತಾ ನಮ್ಮ ಹಳ್ಳಿಹಳ್ಳಿಯಲ್ಲಿ ಕರೆಕೊಟ್ಟಿದ್ದುನ್ನ ನೋಡಿ ನಮ್ ಜನರೇನಾದ್ರೂ ಹಿಗ್ಗುದ್ರೆ ಬಾಯಿಗೆ ಮಣ್ಣಾಕ್ಕೊಂಡಂಗೇನೆ ! ಏಕಂದ್ರೆ ನೀವು ನಾಟಕ ಮಾಡಬೇಕಾದ್ದು ಹಿಂದೀ / ಇಂಗ್ಲಿಷಲ್ಲಿ ಅಂತಿದೆ ಈ ಜಾಹೀರಾತು . ಇದುನ್ ಹೊರಡ್ಸಿರೋದು ನಮ್ಮ ಕನ್ನಡನಾಡಿನ , ಕನ್ನಡಿಗರನ್ನು ಮುನ್ನಡೆಸುವ , ಜಗತ್ತಿನ ಕೆಡುಕುಗಳಿಂದ ಕನ್ನಡಿಗರನ್ನು ಕಾಯಬೇಕಾದ ಘನ ಕರ್ನಾಟಕ ರಾಜ್ಯಸರ್ಕಾರ !
' ಎ ' ಯು ' ಬಿ ' ಯ ಮನೆಗೆ ಬಂದಾಗ ' ಬಿ ' ಯು ಮೊಬೈಲ್ ನಲ್ಲಿ ಮಾತಾಡುತ್ತ , ಕಾಲಮೇಲೆ ಕಾಲುಹಾಕಿಕೊಂಡು ಕುಳಿತು , ಕವಳ ಮೆಲ್ಲುತ್ತ , ಟಿವಿ ನೋಡುತ್ತ ಕುಳಿತಿದ್ದ . ' ಎ ' ಯನ್ನು ನೋಡಿದ ಕೂಡಲೇ ' ಬಿ ' ಜೋರಾಗಿಯೇ ಹೇಳಿದ .
ಕನ್ನಡ ಪದ್ಯ ಬಾಯಿಪಾಠ ಮಾಡಿಕೊಂಡು ಬರದ್ದಕ್ಕೆ ಮೇಷ್ಟ್ರು ಮಹೇಶನಿಗೆ ಕುಂಡೆಗೆ ಬಾಸುಂಡೆ ಬರೋ ಹಾಗೆ ಹೊಡೆದಿದ್ದರು . ಮಹೇಶ ಮನೆ ಬಿಟ್ಟು ಓಡಿ ಪೆರ್ಡೂರು ಯಕ್ಷಗಾನ ಮೇಳ ಸೇರಿದ . ಈಗ ಮಹೇಶನಿಗೆ ಇಡೀ ಕೃಷ್ಣಾರ್ಜುನ ಕಾಳಗ ಪ್ರಸಂಗ ಬಾಯಿಪಾಠ ಬರುತ್ತೆ . . . . .
ನೀವು ಉಲ್ಲೇಖಿಸಿದ ಲೇಖನ ಓದಿದೆ ! ಸೂಪರ್ ನೋವಾ ಸಂಭವಿಸಿದರೆ ` ನೋವಾ ' ಗದಂತೆ ಸೂಪರ್ ಆಗಿಯೇ ಎಲ್ಲರಂತೆ ನಾವೂ ಸಹ ` ಹರಹರ ' ಎಂದುಬಿಡೋಣ ಬಿಡಿ !
ಒಹ್ ಅದ್ಭುತ ಸರ್ . . . ನಿಜಕ್ಕೋ ತುಂಬಾ valuable information . ಕಥೆ ಹೀಗಿತ್ತು ಅಂತ ನಿಜಕ್ಕೋ ತಿಳಿದಿರಲಿಲ್ಲ ಸರ್ . . ನನಗೇನು ಅನ್ಸುತ್ತೆ ನಮ್ಮ ಪೀಳಿಗೆಯ ಎಷ್ಟೊಂದು ಜನಕ್ಕೆ ತಿಳ್ದೆ ಇಲ್ಲ ಅಂತ . . ' ಎ ಫರ್ಗಾಟನ್ ಎಂಪೈರ್ ' ಪುಸ್ತಕದ ಬಗ್ಗೆ ಭೈರಪ್ಪನವರ ಆವರಣದಲ್ಲಿ ಓದಿದ್ದೆ . ಈಗ ತಿಳಿತು . . ಅದೊಂದು ಒಳ್ದಲೇ ಬೇಕಾದ ಪುಸ್ತಕ ಅಂತ . . ಸ್ವಪ್ನ ಬುಕ್ ಸ್ಟಾಲಿಗೆ ಓಗ್ತಾ ಇದ್ದೆನಿ . . ಪುಸ್ತಕ ಓದಿ ನಂತರ ನಿಮಗೆ Comments ಬರಿತೆ . ನಿಮ್ಮ ಅವೀನ್
೧೧ . ನಾಡಿನುದ್ದ ಕಬ್ಬು ಎದೆ ಉದ್ದ ಸಲ ( ಮಂಡ್ಯ ಗಾಧೆ ) . ೧೨ . ಹಾಡಿ ಹಾಡಿ ರಾಗ ಉಗುಳಿ ಉಗುಳಿ ರೋಗ . ೧೩ . ಬೆಂಕಿ ಬಿದ್ದ ಮೇಲೆ ಬಾವಿ ತೋಡಿದ್ರಂತೆ . ೧೪ . ಕುಣಿಯಲು ಬರದವಗೆ ಅಂಗಳ ಡೊಂಕು . ೧೫ . ಮಳ್ಳಿ ಮಳ್ಳಿ ಮಂಚಕ್ ಎಷ್ಟು ಕಾಲು ಅಂದರೆ ಮೂರು ಮತ್ತೊಂದು ಅಂದಳಂತೆ . ೧೬ . ಸಂಕಟ ಬಂದಾಗ ವೆಂಕಟರಮಣ
ಕರ್ನಾಟಕಕ್ಕೆ ಯಾವಾಗ ಬರ್ತಿರಾ ಅಂತ ಕೇಳೊದ್ರ ಮೂಲಕ ಪರೋಕ್ಷವಾಗಿ , ನಮ್ಮ ನಾಡು , ನಾಡಿಗರಿಗೆ ಯಾವ ಸಂಬಂಧವೂ ಇಲ್ಲದ , ಎಲ್ಲಿಯದೋ ಒಂದು ಪಕ್ಷವನ್ನು , ಪಕ್ಷದವರನ್ನು " ಬನ್ನಿ , ಕರ್ನಾಟಕ ಅನ್ನೋದು ತೋಟದಪ್ಪನ ಛತ್ರ , ಇಲ್ಲಿ ಯಾರು ಬೇಕಾದ್ರೂ ಬಂದು ತಮ್ಮ ಬೇಳೆ ಬೇಯಿಸಿಕೊಬೌದು " ಅಂತಾ ಆಹ್ವಾನ ಕೊಟ್ಟಂಗಲ್ವಾ ? ತೆಲುಗು - ತೆಲುಗರಿಗಾಗಿಯೇ ಹುಟ್ಟಿದ ಪಕ್ಷವೊಂದು ಕರ್ನಾಟಕಕ್ಕೆ ಕಾಲಿಟ್ಟರೆ , ಅದು ಎಂದಿಗಾದರೂ ಕನ್ನಡ - ಕನ್ನಡಿಗನ ಪರವಾಗಿ ನಿಲುವು ತೆಗೆದುಕೊಂಡೀತಾ ? ಇಂತದೊಂದು ಮಾತಿನ ಮೂಲಕ ಕನ್ನಡಿಗರು ತಮ್ಮನ್ನು ತಾವು ಆಳಿಕೊಳ್ಳಲು ಆಗದವರು , ಅವರನ್ನ ಉದ್ಧಾರ ಮಾಡೋಕೆ ಅಲ್ಲೆಲ್ಲಿಂದ್ಲೋ ಒಂದು ಪಕ್ಷ ಬರಬೇಕು ಅನ್ನೊದು ಇವರ ನಿಲುವು ಅಂತಾ ತೋರುಸ್ತಿದಾರಾ ? ಮಾಧ್ಯಮದವರ ಇಂತಾ ಬರವಣಿಗೆ ಇಡೀ ನಾಡಿನ ಮೇಲಾಗೋ ಪರಿಣಾಮದ ಬಗ್ಗೆ ಅರಿವಿರದೆ ಬೇಜವಾಬ್ದಾರಿಯಿಂದ ಆಡ್ತಿರೋ ಅಕ್ಷರ ಹುಚ್ಚಾಟ ಅಲ್ದೆ ಇನ್ನೇನು ಗುರು ?
ಇಲ್ಲಿ ವಾದ ಗೆಲ್ಲುವ ಸೋಲುವ ಪ್ರಶ್ನೆ ಅಲ್ಲ . . . . ಕೇಳಿದ್ದಕ್ಕೆ ಉತ್ತರಿಸಿದೆ , ಅಲ್ಲಿದೆ ಇಲ್ಲಿದೆ ಅನ್ನುವುದು , ಇಲ್ಲ ನಾನು ನೀವು ಎಂದು ಬರೆಯುವುದು confusing mOde ಅಲ್ಲದೆ ಇನ್ನೇನು ? ಅದಕ್ಕೆ ಬರೆದಿದ್ದು ಗೊತ್ತಾಯಿತು ಬಿಡಿ ನೀವು ಉತ್ತರಿಸಲಾಗದೆ confuse ಮಾಡಲು ಹೊರಟ ಬುದ್ದಿಜೀವಿ ಎಂದು .
ಈ ಪ್ರಣಾಳಿಕೆಯಲ್ಲಿ ಪಟ್ಟಿಮಾಡಿರುವ ' ೩೬೫ ಯೋಜನೆ ' ಗಳಲ್ಲಿ ಹಲವಾರು ಯೋಜನೆಗಳ ಅನುಷ್ಟಾನಕ್ಕೆ ನಗರದ , ಜಿಲ್ಲೆಯ ಹಾಗೂ ಅಕ್ಕ ಪಕ್ಕದ ಜಿಲ್ಲೆಯ ಹಲವಾರು ಸಂಘಟನೆಗಳು , ವಿವಿಧ ವರ್ಗದ ವ್ಯಕ್ತಿಗಳು ಅವಿರತವಾಗಿ ಶ್ರಮಿಸುತ್ತಿವೆ . ಅಂತಹ ಸಂಘಟನೆ ಮತ್ತು ವ್ಯಕ್ತಿಗಳೆಲ್ಲರನ್ನೂ ಒಂದೆಡೆಯಲ್ಲಿ ತರುವಂತಹ , ಅವರೆಲ್ಲರ ಸಾಧನೆಗಳನ್ನು ಎಲ್ಲರಿಗೂ ಪರಿಚಯಿಸುವಂತಹ ಕಾರ್ಯವನ್ನು ಫೋರಂ ಕೈಗೊಳ್ಳಲು ಚಿಂತಿಸಿದೆ .
ಒಂದಲ್ಲ ಎರಡಲ್ಲ 22 ಸಾವಿರ ಹೆಕ್ಟೇರ್ ಚಹಾ ತೋಟ ! ಕಣ್ಣೋಟದುದ್ದಕ್ಕೂ ಸಮತಟ್ಟಾದ ಹಸಿರು ! ಹದವಾಗಿ ಸುರಿಯುವ ಮಂಜು . ಅದರಿಂದುಂಟಾದ ಮಸುಕು ವಾತಾವರಣ . ಹತ್ತಿಯುಂಡೆಗಳಂತೆ ಕೈಗೆಟಕುವಷ್ಟು ದೂರದಲ್ಲಿ ಕಾಣುವ ಮೋಡಗಳು . ಸಿನಿಮಾಗಳಲ್ಲಿ ಹೊಗೆ ಹಾಕಿ ತೋರಿಸುವ ದೇವಲೋಕದ ಚಿತ್ರ ನೆನಪಾಗುತ್ತದೆ .
ಉದ್ಘಾಟನಾ ಸಮಾರಂಭದಲ್ಲಿ ಅರಬ್ ಉಡುಪಿ ಗ್ರೂಫ಼್ ನ ನಿರ್ದೇಶಕ ಶೇಖರ್ ಬಿ . ಶೆಟ್ಟಿ , ಚಿಲ್ಲಿ ವಿಲ್ಲಿ ಗ್ರೂಫ಼್ ನ ನಿರ್ದೇಶಕ ಸತೀಶ್ ವೆಂಕಟರಮಣ , ರೀಲೈಬೆಲ್ ಪ್ಯಾಬ್ರೀಕೆಟರ್ ನ ನಿರ್ದೇಶಕ ಜೇಮ್ಸ್ ಮೆಂಡೋನ್ಸಾ , ಪೋರ್ಚುನ್ ಗ್ರೂಫ಼್ ಅಫ಼್ ಹೋಟೆಲ್ ನ ಮಾಲಿಕರಾದ ರವೀಶ್ ಗೌಡ ಹಾಗೂ ಪ್ರವೀಣ್ ಶೆಟ್ಟಿ , ಉಪಸ್ಥಿತರಿದ್ದರು . ಯು . ಇ . ಎ . ಎಕ್ಸ್ ಚೆಂಜ್ ನ ಸಂಸ್ಥಾಪಕ ಸುಧಿರ್ ಶೆಟ್ಟಿ , ಸ್ವಿಸ್ಸ್ ಅರಭಿಯನ್ ನ ಶಿವಾನಾಂದ ಹೆಬ್ಬಾರ್ ಕಾರ್ಯಕ್ರಮಕ್ಕೆ ಶುಭ ಕೊರಿದರು .
ಬಾದಾಮಿಕಾಯಿ ಬೀಜ ಎಂದು ತಿಳಿದು ಮರಳೆಕಾಯಿ ಬೀಜಗಳನ್ನು ತಿಂದು 9 ಬಾಲಕರು ಅಸ್ವಸ್ಥ
ಊರು ಮನೆಯಿಂದ ಹೊರಗೆ ಹಾಕಿಸ್ಕಳದಕ್ಕಿಂತ ವೋಟು ಹಾಕದೆ ಇರೋದೆ ಒಳ್ಳೆದು ಎಂದು ನಾವೆಲ್ಲರೂ ಭಾವಿಸಿದೆವು . ಆಕೆಯು ಹಾಗೆಂದುಕೊಂಡೆ ಸಮಾಧಾನ ಮಾಡಿಕೊಂಡಳು . ಮುಂದೆ ನಮ್ಮಲ್ಲಿ ಚುನಾವಣೆ ಬಗ್ಗೆ ಅಂಥ ಕುತೂಹಲ ಇರಲಿಲ್ಲ . ಆದರೆ ಮತದಾನದ ಮರುದಿನ ಆಕೆ ಏಯ್ ವೋಟ್ ಹಾಕಿಬಂದೆ ನೋಡ್ರೆ ಅಂತ ಇಂಕಿನ ಕಲೆ ಹಾಗೆ ಉಳಿದಿದ್ದ ಬೆರಳು ಮುಂದೆ ಮಾಡಿದಾಗಲೇ ಮತ್ತೆ ನಮ್ಮ ಕುತೂಹಲ ಕೆರಳಿದ್ದು . ಮತ್ತೆ ಯಾರೂ ವೋಟ್ ಮಾಡೋ ಹಾಗಿಲ್ಲ ಅಂತ ಹೇಳಿದಾರೆ ಅಂತಿದ್ದೆ ಎಂದು ನಾವೆಲ್ಲ ರಾಗ ಎಳೆದರೆ . ಆಕೆ ಅಯ್ಯೋ ಅದೇನಾಯ್ತು ಗೊತ್ತೇನ್ರೆ ನಮ್ಮೂರಿನ ಮರಗೆಲಸದ ವೆಂಕಟ ಮತ್ತು ಅವನ ಜೊತೆ ಇರೋ ಮೂರು ಜನ ಕೆಲಸಗಾರರು ಬೇರೆ ಊರಿಗೆ ಕೆಲಸಕ್ಕೆ ಅಂತ ಹದಿನೈದು ದಿನದ ಹಿಂದೆ ಹೋದವರು ನಿನ್ನ ಬೆಳೆಗ್ಗೆ ಊರಿಗೆ ಬಂದಿದಾರೆ . ಅವರಿಗೆ ವಿಷಯ ಗೊತ್ತಿಲ್ಲ . ಪೇಟೆಯಲ್ಲಿ ಬಸ್ ಇಳಿದು ಊರಿಗೆ ನಡ್ಕೊಬರಬೇಕು .
ಕಾರ್ಯಕ್ರಮಕ್ಕೆ ಕಳೆಕಟ್ಟುವಂತೆ , ಡಾ . ಸುನಿತಾಶೆಟ್ಟಿಯವರು ಉಪಸ್ತಿತರಿದ್ದು , ತಮ್ಮ ಹೆಸರಿನಲ್ಲಿ ಒಂದು ದತ್ತಿದೇಣಿಗೆಯನ್ನು ನೀಡಿ , ಅದು ಪ್ರಸಕ್ತ ವರ್ಷದ , ಕನ್ನಡದ ಅತ್ಯಂತ ಪ್ರತಿಭಾನ್ವಿತ ಲೇಖಕ , ಅಥವ ಕವಿಗೆ ಪ್ರಶಸ್ತಿಪೂರ್ವಕವಾಗಿ ಸಂದಾಯವಾಗಬೇಕೆಂದು ಕಳಕಳಿಯಿಂದ ಸಭೆಯಲ್ಲಿ ಮನವಿ ಮಾಡಿಕೊಂಡರು . ' ಸಾಹಿತ್ಯಸಿರಿ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ' ಯ ಹಣವನ್ನು ಹಾಗೆಯೇ ಜೋಪಾನವಾಗಿ ಇರಿಸಿದ್ದು , ಆ ಹಣವನ್ನು ಕರ್ನಾಟಕಸಂಘಕ್ಕೆ ದತ್ತಿನಿಧಿ ರೂಪದಲ್ಲಿ ನೀಡಿದ್ದಾರೆ . ೭೬ ರ ಹರೆಯದ ಡಾ . ಸುನೀತಾಶೆಟ್ಟಿಯವರು , ಮಾಡಿದ ನಿರ್ಣಯ , ಕರ್ನಾಟಕ ಸಂಘದ ೭೫ ನೇ ವರ್ಷದಂದು ! " ಇದೊಂದು ನನ್ನ ಸುಯೋಗ , ಮತ್ತು ಯೋಗಾಯೋಗೆವೇ ಸರಿ , " ಯೆಂದು ನಗಾಡಿದರು . ಪ್ರಶಸ್ತಿವಿತರಣೆಯ ರೂಪುರೇಷೆಗಳು ಮತ್ತು ನಿಯಮಗಳನ್ನು , ರೂಪಿಸಬೇಕು . ಒಟ್ಟಿನಲ್ಲಿ ಹಣ ಸದುಪಯೋಗವಾಗುವುದು ತಮ್ಮ ಮುಖ್ಯೋದ್ದೇಶ್ಯಗಳಲ್ಲೊಂದೆಂದು ಡಾ . ಸುನೀತಾಶೆಟ್ಟಿಯವರು ನುಡಿದರು .
ನ್ಯೂಯಾರ್ಕ್ , ಅ . 17 : ಮುಂಬೈಯಲ್ಲಿ ನಡೆದ 26 / 11ರ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಮೂರು ವರ್ಷಗಳಿಗೆ ಮುನ್ನವೇ ಪಾಕಿಸ್ತಾನ ಮೂಲದ ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯ ಪತ್ನಿ ಫೆಡರಲ್ ಬ್ಯೂರೊ ಆಫ್ ಇನ್‌ವೆಸ್ಟಿಗೇಶನ್ ( ಎಫ್‌ಬಿಐ ) ಗೆ ಎಚ್ಚರಿಕೆ ನೀಡಿದ್ದಳು ಎಂದು ತನಿಖಾ ವರದಿಯೊಂದು ತಿಳಿಸಿದೆ . ಡೇವಿಡ್ ಹೆಡ್ಲಿಯು ಲಶ್ಕರೆ ತಯ್ಯಿಬಾದ ಸಂಪರ್ಕ ಹೊಂದಿದ್ದ ಬಗ್ಗೆ ಆಕೆ ತಾನು ನೀಡಿದ್ದ ಎಚ್ಚರಿಕೆಯಲ್ಲಿ ತಿಳಿಸಿದ್ದಳು ಎಂದು ವರದಿ ಹೇಳಿದೆ . ' ' ಅಮೆರಿಕದ ಉದ್ಯಮಿಯೋರ್ವನು ಪಾಕಿಸ್ತಾನದಲ್ಲಿ ತರಬೇತಿ ಪಡೆಯುತ್ತಿದ್ದನು ಎಂಬುದರ ಬಗ್ಗೆ 2008ರಲ್ಲಿ ಭಯೋತ್ಪಾದಕರು ನಡೆಸಿದ ಮುಂಬೈ ದಾಳಿಗೆ ಮೂರು ವರ್ಷಗಳ ಮುಂಚೆಯೇ ಫೆಡರಲ್ ಪ್ರತಿನಿಧಿಗಳು ಖಚಿತ ಸುಳಿವೊಂದನ್ನು ಹೊಂದಿದ್ದರು ' ' ಎಂದು ಸಾರ್ವಜನಿಕ ಹಿತಾಸಕ್ತಿಯಿಂದ ನಡೆಸಲ್ಪಡುವ ತನಿಖಾ ಪತ್ರಿಕೋದ್ಯಮದ ' ಪ್ರೊಪಬ್ಲಿಕಾ ' ದಲ್ಲಿ ಪ್ರಕಟವಾಗಿರುವ ವರದಿ ಹೇಳಿದೆ . ' ' 166 ಜನರನ್ನು ಬಲಿತೆಗೆದುಕೊಂಡಿರುವ ಮುಂಬೈ ದಾಳಿಯ ಪ್ರಮುಖ ರೂವಾರಿಯೆನ್ನ ಲಾಗಿರುವ ಡೇವಿಡ್ ಕೋಲ್ಮನ್ ಹೆಡ್ಲಿಯ ವಿರುದ್ಧದ ಆರೋಪಗಳು ದಾಳಿಗೆ ಮೂರು ವರ್ಷಗಳ ಮುಂಚಿತವಾಗಿ 2005ರಲ್ಲಿ ಕೌಟುಂಬಿಕ ಕಲಹವೊಂದರಲ್ಲಿ ಆತ ಬಂಧನ ಕ್ಕೊಳಪಟ್ಟ ಬಳಿಕ ಆತನ ಪತ್ನಿಯಿಂದ ಬಹಿರಂಗ ಗೊಂಡಿದ್ದವು ' ' ಎಂದು ವರದಿ ವಿವರಿಸಿದೆ . ' ' ಹೆಡ್ಲಿಯು ಲಶ್ಕರೆ ತಯ್ಯಿಬಾದಲ್ಲಿರುವ ಓರ್ವ ಸಕ್ರಿಯ ಭಯೋತ್ಪಾದಕ ಎಂಬುದಾಗಿ ಫೆಡರಲ್ ಅಧಿಕಾರಿಗಳೊಂದಿಗೆ ಮೂರು ಬಾರಿ ನಡೆದ ಸಂದರ್ಶನಗಳಲ್ಲಿ ಆತನ ಪತ್ನಿ ದೂರಿದ್ದಳು . ಪಾಕಿಸ್ತಾನದ ಶಿಬಿರಗಳಲ್ಲಿ ಆತ ಭಾರೀ ತರಬೇತಿ ಪಡೆದಿದ್ದನು ಹಾಗೂ ಇರುಳು ಕನ್ನಡಕಗಳನ್ನು ಖರೀದಿಸಿದ್ದನು ಎಂಬ ಮಾಹಿತಿಯನ್ನೂ ಫೆಡರಲ್ ಅಧಿಕಾರಿಗಳು ತನಿಖೆಯ ವೇಳೆ ಪಡೆದಿದ್ದಾರೆ ' ' ಎಂದು ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ನಿಕಟ ಮೂಲಗಳನ್ನು ಉಲ್ಲೇಖಿಸಿ ವರದಿ ವಿವರಿಸಿದೆ . ವರದಿಯ ಅಧಿಕೃತತೆಯ ಬಗ್ಗೆ ಎಫ್‌ಬಿಐ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ . ' ತೊಲಗುವಂತೆ ಅಮೆರಿಕದ ಅಧಿಕಾರಿಗಳಿಂದ ಆಜ್ಞೆ ' ತನ್ನ ಪತಿಯು ಲಶ್ಕರೆ ತಯ್ಯಿಬಾದ ನೆರವಿನೊಂದಿಗೆ ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಸಂಚು ರೂಪಿಸಿರುವ ಬಗ್ಗೆ 2005ರಲ್ಲೇ ಮಾಹಿತಿ ನೀಡಲು ಮುಂದಾಗಿದ್ದ 26 / 11ರ ಮುಂಬೈ ದಾಳಿ ಪ್ರಕರಣದ ಪ್ರಮುಖ ಆರೋಪಿಯ ಪತ್ನಿಗೆ ಇಸ್ಲಾಮಾಬಾದ್‌ನಲ್ಲಿದ್ದ ಅಮೆರಿಕದ ಅಧಿಕಾರಿಗಳು ಹೊರ ನಡೆಯುವಂತೆ ಆದೇಶಿಸಿದ್ದರು ಎಂದು ವರದಿಯೊಂದು ಹೇಳಿದೆ . 26 / 11ರ ದಾಳಿಗೆ ಒಂದು ವರ್ಷ ಮುಂಚೆಯೇ ಇಸ್ಲಾಮಾಬಾದ್‌ನಲ್ಲಿ ಅಮೆರಿಕದ ಅಧಿಕಾರಿಗಳನ್ನು ಭೇಟಿ ಮಾಡಿದ್ದ ಹೆಡ್ಲಿಯ ಮೂವರು ಪತ್ನಿಯಲ್ಲೋರ್ವಳಾದ ಫೈಝಾ ಔತಲ್ಲಾ , ತನ್ನ ಪತಿಗೆ ಲಶ್ಕರೆ ತಯ್ಯಿಬಾದಲ್ಲಿ ಸ್ನೇಹಿತರಿದ್ದಾರೆ ಎಂಬ ಅಂಶವನ್ನು ಬಹಿರಂಗಪಡಿಸಿದ್ದಳು ಎಂದು ' ದಿ ನ್ಯೂಯಾರ್ಕ್ ಟೈಮ್ಸ್ ' ತಿಳಿಸಿದೆ . ' ' ನಾನು ಅವರಿಗೆ ಹೇಳಿದ್ದೆನು . ಆತ ಓರ್ವ ಭಯೋತ್ಪಾದಕ ಅಥವಾ ನಿಮ್ಮ ಪರವಾಗಿ ದುಡಿಯುತ್ತಿರುವವನಾಗಿದ್ದಾನೆ ' ' ಎಂದು ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕದ ಅಧಿಕಾರಿಗಳಿಗೆ ಹೇಳಿಕೊಂಡಿರುವುದನ್ನು ಆತನ ಪತ್ನಿ ನೆನಪಿಸಿಕೊಂಡಿದ್ದಾಳೆ . ' ' ಅಧಿಕಾರಿಗಳು ಪರೋಕ್ಷವಾಗಿ ನನಗೆ ತೊಲಗುವಂತೆ ಸೂಚಿಸಿದ್ದರು ' ' ಎಂದೂ ಆಕೆ ತಿಳಿಸಿರುವುದಾಗಿ ವರದಿ ಹೇಳಿದೆ .
ಪುಟ್ಟಿ , ಹಾಳಾದ ಈ ಬ್ಲಾಗಿಗೆ ಬರೆಯೋದನ್ನ ಶುರುಹಚ್ಚಿಕೊಂಡ ಮೇಲೆ ನಿನಗೆ ಲೇಟರ್ ಬರೆಯೋದೇ ಮರೆತುಹೋಗಿತ್ತು ನೋಡು . ನಂಗೊತ್ತು ನೀನು ಚೂಪು ಮೂತಿ ಮಾಡಿಕೊಂಡು , ಮುಖ ಕೆಂಪೇರಿಸಿಕೊಂಡು , ನನ್ನ ಮೇಲೆ ಹರಿಹಾಯ್ತ ಕುತಿರುತ್ತೀಯಾ ಅಂತಾ . ಎಷ್ಟಂದ್ರೂ ನೀನು ಜೋಯ್ಸರ ಮಗಳಲ್ವಾ ? ಹಾಗಾಗಿ ಮೂಗಿನ ತುದಿಗೆ ಸಿಟ್ಟು ನಿಂಗೆ ! ಏ ನೀನು ನಂಗೆ ಮೊದಲನೇ ಸಾರಿ ನೋಡ್ಲಿಕ್ಕೆ ಸಿಕ್ಕಿದ್ದು ಭಿಮನಕಟ್ಟೆಯ ದೋಣಿಯಲ್ಲಿ ಅಲ್ವಾ ? ಅದೇ ಕಣೆ ನಾನು ದೋಣಿಯಲ್ಲಿ ಕೂತಿದ್ದೆ . ಅಷ್ಟೊತ್ತಿಗೆ ನೀನು ಗಯ್ಯಾಳಿ ತರ ಎಂಟ್ರಿ ಕೊಟ್ಟೆ . ದೋಣಿಯ [ . . . ]
ಇದಲ್ಲದೆ , ತೆವರು ಪದವನ್ನು ಕ್ರಿಯಾಪದವನ್ನಾಗಿಯೂ ಬಳಸುತ್ತಾರೆ ಎನ್ನುವುದು ಪ್ರೊ . ಜಿ . ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ - ಕನ್ನಡ ( ಕ್ಲಿಷ್ಟಪದ ) ನಿಘಂಟುವಿನಿಂದ ತಿಳಿದು ಬರುತ್ತದೆ , ಅವರ ಪ್ರಕಾರ ಅಟ್ಟು , ಓಡಿಸು , ಹೆದರು , ಹಿಮ್ಮೆಟ್ಟು , ಹೀಯಾಳಿಸು , ತಿರಸ್ಕರಿಸು ಎಂಬ ಅರ್ಥಗಳೂ ಸಹ ಇವೆ .
@ ಪಾಪಣ್ಣ , ನನಗೆ ನೀವು ಹೇಳಿದ ರೀತಿಯ difference ಏನೂ ಜಾಸ್ತಿ ಕಾಣ್ತಾ ಇಲ್ಲ . ಏಕೆಂದರೆ . . . ತುಪ್ಪ ತಿಂದ ಖುಷಿ ಇರೋ ಹಾಗೇನೇ ಓಲೆ ಹೋದರೂ ಕೂಡ ಓಲೆ ಹಾಕಿಕೊಂಡಿದ್ದ ಖುಷಿ ಇರತ್ತೆ ಅಲ್ವ ? Thanks : )
ಎಲ್ಲಾ ಸೆಲೆಬ್ರಿಟಿಗಳಂತೆ ಧೋನಿಯೂ ಗಾಸಿಪ್‌ಗಳಿಂದ ಹೊರತಾಗಿರಲಿಲ್ಲ . ಅದರಲ್ಲಿ ಇತ್ತೀಚಿನದ್ದು ಲಕ್ಷ್ಮಿ ರೈ . ಅದಕ್ಕೂ ಮೊದಲು ದೀಪಿಕಾ ಪಡುಕೋಣೆ , ಸಾನಿಯಾ ಮಿರ್ಜಾ ಜತೆಗೂ ಟೀಮ್ ಇಂಡಿಯಾ ಕೂಲ್ ಕ್ಯಾಪ್ಟನ್ ಹೆಸರು ಕೇಳಿ ಬಂದಿತ್ತು .
ಹೀಗೆ ಹೈಸ್ಕೂಲಿನಲ್ಲಿ ನಡೆದ ಸೃಜನಾತ್ಮಕ ಬರವಣಿಗೆಯ ಸ್ಪರ್ಧೆಯಲ್ಲಿ ಒಂದು ವಿಷಯವನ್ನು ಕೊಟ್ಟು ಅರ್ಧ ಗಂಟೆಯಲ್ಲಿ ಕವನ ಬರೆದು ಅದನ್ನು ವೇದಿಕೆಯ ಮೇಲೆ ವಾಚಿಸಬೇಕು ಎಂದರು . ಎಂಥದ್ದೋ ಪ್ರಾಸ ಪದಗಳುಳ್ಳ ಐದಾರು ಸಾಲು ಗೀಚಿದ್ದೆ . ಆದರೆ ವೇದಿಕೆಯ ಮೇಲೆ ನಿಂತು ಹತ್ತಾರು ಮಂದಿಯ ಎದುರು ಅದನ್ನು ವಾಚಿಸುವಾಗ ಎದೆಯ ಬಡಿತದ ಸದ್ದು ನೂರ್ಮಡಿಯಾಗಿ ಕಿವಿಯಲ್ಲಿ ಢವಗುಟ್ಟುತ್ತಿತ್ತು . ಕವನ ವಾಚನ ಮುಗಿದ ನಂತರ ತೀರ್ಪುಗಾರರು ನಮ್ಮನ್ನು ಒಬ್ಬೊಬ್ಬರನ್ನಾಗಿ ಕರೆದು ಸಾಹಿತ್ಯಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದರು . ನನಗೆ ಕೇಳಿದ ಕೆಲವು ಪ್ರಶ್ನೆಗಳಲ್ಲಿ ಒಂದು ಪ್ರಶ್ನೆ ಮಾತ್ರ ಬಹುದಿನಗಳವರೆಗೆ ಕಾಡುತ್ತಿತ್ತು . ' ಕಥೆಗಳೆಂದರೆ ಏನು ? ಅವು ಯಾಕೆ ಬೇಕು ? ಲೇಖನದಲ್ಲೇ ಅದು ಹೇಳಬಯಸುವುದನ್ನು ಹೇಳಿಬಿಡಬಹುದಲ್ಲವೇ ? ' ನನಗೆ ಪ್ರಶ್ನೆಯ ತಲೆಬುಡವೂ ತಿಳಿಯಲಿಲ್ಲ . ಕಥೆಗಳನ್ನು ಓದಿದ್ದೇನೆ , ಲೇಖನಗಳನ್ನೂ ಓದಿದ್ದೇನೆ ಎರಡೂ ಬೇರೆ ತರಹ ಅಂತಲೂ ಗೊತ್ತು ಆದರೆ ಕಥೆಯೇ ಏಕೆ ಬೇಕು ? ಏನೋ ಒಂದು ಸಮಜಾಯಿಷಿಯನ್ನು ಹೇಳಿದ್ದೆ .
ಸುಖ ನೀಡದ ದುಬೈ ಗಂಡನ ಮೇಲೆ ಪತ್ನಿ ದಬ್ಬಾಳಿಕೆ : RSS Feed
ಇದರ ಪರಿಣಾಮ ಶಾಲಭಂಜಿಕೆ ಪುಸ್ತಕ ಕಪಾಟಿನಲ್ಲಿ ಇತರ ಪುಸ್ತಕಗಳ ನಡುವೆ ಕಣ್ಣಾಮುಚ್ಚಾಲೆ ಆಡುವವರಂತೆ ಅಡಗಿ ಕುಳಿತಿತ್ತು . ಸಾಕಷ್ಟು ಹೊಸ ಪುಸ್ತಕಗಳನ್ನು ತರುತ್ತಿದ್ದೆನಾದ್ದರಿಂದ ಹಳೆಯ ಪುಸ್ತಕಗಳು ನೆನಪಿನಾಳದಲ್ಲಿ ಹೂತುಹೋಗುತ್ತಿದ್ದವು . ಅದನ್ನು ಎಂದೂ ಕೆದಕುತ್ತಿರಲಿಲ್ಲ .
ಕರ್ನಾಟಕದಲ್ಲಿ ಮಲ್ಲ ಹೆಸರನ್ನು ಸೂಚಿಸುವ ೩೮೦ ಗ್ರಾಮಗಳಿವೆ . ಕೆಲವು ಉದಾಹರಣೆಗಳು : ಮಲಂದೂರು , ಮಲಂಬಾ , ಮಲಗಾಳಿ , ಮಲಗೆರೆ , ಮಲಗೋಣ , ಮಲಘಾಣ , ಮಲ್ಲಸಂದ್ರ , ಮಲ್ಲೇಶ್ವರಮ್ , ಮಲ್ಲಹಳ್ಳಿ , ಮಲ್ಲಾಪುರ , ಮಲ್ಲೂರು ಇತ್ಯಾದಿ . ' ಮಲಪ್ರಭಾ ' ಎಂದು ಕರೆಯಲಾಗುವ ನದಿಯು ವಾಸ್ತವಿಕವಾಗಿ ' ಮಲ್ಲಪ್ರಭಾ ' ನದಿಯೇ ಸೈ . ಮಲ್ಲ ಜನಾಂಗವು ಈ ನದಿಯ ಆಸುಪಾಸಿನಲ್ಲಿ ನೆಲೆಸಿದ್ದರಿಂದಲೇ ಈ ನದಿಗೆ ಮಲ್ಲಪ್ರಭಾ ಎನ್ನುವ ಹೆಸರು ಬಂದಿರಬೇಕು . ಕರ್ನಾಟಕದಲ್ಲಿ ಮಲ್ಲ ಈ ಪದದ ಅರ್ಥ ಶೂರ , ಜಟ್ಟಿ ಎಂದಾಗುತ್ತದೆ . ಮಲ್ಲಪ್ಪ , ಮಲ್ಲವ್ವ ಇವು ಕರ್ನಾಟಕದಲ್ಲಿ ಜನಪ್ರಿಯ ಹೆಸರುಗಳು . ಮಲ್ಲಯ್ಯನೆನ್ನುವದು ಶಿವನ ಹೆಸರೂ ಹೌದು . ಅಡಗೂಲಜ್ಜಿಯ ಕತೆಗಳಲ್ಲಿ ' ಮಲಪೂರಿ ' ಎನ್ನುವ ಯಕ್ಷಿಣಿ ಬರುತ್ತಾಳೆ . ಸ್ಕಂದಪುರಾಣದಲ್ಲಿ , ಮಾರ್ಕಂಡೇಯ ಮುನಿಯು ಮಾರ್ತಾಂಡಭೈರವನಿಗೆ , " ಸ್ವಾಮಿನ್ , ಮಲ್ಲನಿಷೂದನ ! " ಎಂದೇ ಸಂಬೋಧಿಸುತ್ತಾನೆ . ಈ ಮಾರ್ತಾಂಡಭೈರವ ಪದವಿಯನ್ನು ಮಲ್ಲರ ವೈರಿಯಾದ ' ಖಂಡೋಬಾ ' ನಿಗೆ ಕೊಡಲಾಗಿದೆ . ಈತನೇ ' ಮಲ್ಲಾರಿ ಮಾರ್ತಾಂಡ ' . ಈ ಖಂಡೋಬಾ ಅಥವಾ ಖಂಡೇರಾಯನ ಭಕ್ತರು ಮಹಾರಾಷ್ಟ್ರ ಹಾಗು ಕರ್ನಾಟಕಗಳಲ್ಲಿ ವ್ಯಾಪಿಸಿದ್ದಾರೆ . ಮಲ್ಲ ಪದವು ಸಮುದಾಯಸೂಚಕವಾಗಿದ್ದಂತೆಯೆ , ' ಖಂಡ ' ಪದವೂ ಸಹ ಸಮುದಾಯಸೂಚಕವಾಗಿದೆ . ಮಹಾಭಾರತದಲ್ಲಿ ಅರ್ಜುನನು ಕೃಷ್ಣನ ಸಹಾಯದಿಂದ ' ಖಾಂಡವ ವನ ' ದಲ್ಲಿ ಸರ್ಪದಹನ ಮಾಡಿದ್ದನ್ನು ಗಮನಿಸಿರಿ . ' ಖಾಂಡವ ' ಪದವು ' ಖಂಡು ' ಪದದಿಂದ ಉತ್ಪತ್ತಿಯಾಗಿದೆ . ( ಉದಾ : ಪಾಂಡುವಿನಿಂದ ಪಾಂಡವರು ಬಂದಂತೆ ) . ಕ್ಷತ್ರಿಯರನ್ನೆಲ್ಲ ನಿರ್ನಾಮ ಮಾಡಲು ಹೊರಟ ಪರಶುರಾಮನು ಹಿಡಿದ ಆಯುಧವು ' ಖಂಡ ಪರಶು ' . ಇಲ್ಲಿ ಖಂಡ ಇದಕ್ಕೆ ತುಂಡು ಎನ್ನುವ ಅರ್ಥ ಮಾಡಬಹುದಾದರೂ , ಖಂಡ ಸಮುದಾಯದ specific weapon ಎಂದೂ ಅರ್ಥೈಸಬಹುದು . ಪರಶುರಾಮನ ಜನ್ಮಸ್ಥಳವೂ ಈಗಿನ ಕರ್ನಾಟಕವೇ . ಈತನ ತಾಯಿ ರೇಣುಕೆಯ ದೇವಸ್ಥಾನವಿರುವದು ಮಲಪ್ರಭಾ ( = ಮಲ್ಲಪ್ರಭಾ ) ನದಿಯ ಬದಿಯಲ್ಲಿರುವ ಸವದತ್ತಿಯಲ್ಲಿ . ಈ ರೀತಿಯಾಗಿ ಈ ಎರಡು ಸಮುದಾಯಗಳು , ( ಮಲ್ಲರು ಹಾಗು ಖಂಡರು ) ' ಬೃಹತ್ ಕಂನಾಡಿನ ' ನಿವಾಸಿಗಳು , ಹೋರಾಡುತ್ತಲೇ ಬದುಕಿದ ದಾಯಾದಿಗಳಾಗಿರಬಹುದು . ಮಹಾಭಾರತದಲ್ಲಿ ಅಂಗ , ವಂಗ ಹಾಗು ಕಳಿಂಗರ ಜೊತೆಗೆ ಮಲ್ಲರ ಬಗೆಗೂ ಸಹ ದಾಖಲಿಸಲಾಗಿದೆ . . ಭೀಮಸೇನ ಹಾಗು ಅರ್ಜುನರು ಉತ್ತರಮಲ್ಲರನ್ನು ಹಾಗು ದಕ್ಷಿಣಮಲ್ಲರನ್ನು ಯುದ್ಧದಲ್ಲಿ ಸೋಲಿಸಿದ ವರ್ಣನೆಯಿದೆ . ಮನುಸ್ಮೃತಿಯಲ್ಲಿ ಮಲ್ಲರನ್ನು ವ್ರಾತ್ಯ ( heterodox ) ಕ್ಷತ್ರಿಯರೆಂದು ಕರೆಯಲಾಗಿದೆ . ಕ್ರಿ . ಪೂ . ೬ನೆಯ ಶತಮಾನದಿಂದ ಕ್ರಿ . ಪೂ . ೪ನೆಯ ಶತಮಾನದವರೆಗೆ , ' ಪಾವಾ ' ಮತ್ತು ' ಕುಶೀನಗರ ' ಗಳಲ್ಲಿ ಮಲ್ಲರ ಗಣರಾಜ್ಯಗಳು ಇದ್ದ ಬಗೆಗೆ ಉಲ್ಲೇಖಗಳಿವೆ . ೧೨ನೆಯ ಶತಮಾನದಲ್ಲಿ ಖಾಸಮಲ್ಲರು ನೇಪಾಳದಲ್ಲಿ ರಾಜರಾಗಿದ್ದರು . ಈ ಖಾಸ ಎನ್ನುವವರು ಕೃಷ್ಣನ ಅನುಯಾಯಿಗಳಾಗಿದ್ದರೆಂದು ಭಾಗವತದಲ್ಲಿ ಹೇಳಲಾಗಿದೆ . ( ಕೃಷ್ಣನು ' ಕನ್ಹೈಯಾ ' ಅಂದರೆ ' ಕನ್ನಯ್ಯ ' ( = ಕನ್ನ ಜನಾಂಗದವ ) ಹಾಗು ಗೋಕುಲದಲ್ಲಿದ್ದ ' ಹಟ್ಟಿಕಾರ ' ಸಮುದಾಯದಲ್ಲಿ ಬೆಳೆದವ ಎನ್ನುದನ್ನು ಗಮನಿಸಬೇಕು ) . ಮನುಸ್ಮೃತಿಯಲ್ಲಿ ಖಾಸರ ಉಲ್ಲೇಖವಿದೆ . ಇವರು ವ್ರಾತ್ಯ ಕ್ಷತ್ರಿಯರೆಂದು ಅಲ್ಲಿ ಹೇಳಲಾಗಿದೆ . ೧೭ನೆಯ ಹಾಗು ೧೮ನೆಯ ಶತಮಾನದಲ್ಲಿ ಬಂಗಾಲದ ಭಾಗವನ್ನು ಆಳಿದ ಮಲ್ಲರಾಜರ ರಾಜಧಾನಿಯಾದ ವಿಷ್ಣುಪುರವು ಬಂಕೂರು ಎನ್ನುವ ಜಿಲ್ಲೆಯಲ್ಲಿದೆ . ( ಕೋಲಕತ್ತಾದಿಂದ ೧೩೨ ಕಿ . ಮಿ . ದೂರದಲ್ಲಿದೆ ) . ಅಲ್ಲಿ ಮಲ್ಲೇಶ್ವರವೆನ್ನುವ ಗುಡಿ ಸಹ ಇದೆ . ( ಬಂಕೂರು ಇದು ಕನ್ನಡ ಪದ ) . ಉತ್ತರ ಪ್ರದೇಶದಲ್ಲಿ ಇರುವ ಮಲ್ಲರು ಶೂದ್ರರ ಗುಂಪಿಗೆ ಸೇರಿದವರು . ಇವರನ್ನು ಅಲ್ಲಿ ಜಲಗಾರರು ( = ಮೀನುಗಾರರು , ಅಂಬಿಗರು ) ಎಂದೂ ಕರೆಯುತ್ತಾರೆ . ಡಕಾಯತರ ರಾಣಿ ಫೂಲನ್ ದೇವಿ ಮಲ್ಲ ಸಮುದಾಯಕ್ಕೆ ಸೇರಿದವಳು . ದಾರ್ಜೀಲಿಂಗದ ಹತ್ತಿರವಿರುವ ಗುಡ್ಡಗಾಡಿನಲ್ಲಿ ಖಾಸೀ ಜನಾಂಗವಿದೆ . ಇವೆಲ್ಲ ದಾಖಲೆಗಳು ಮಲ್ಲ ಜನಾಂಗದ ಪ್ರಾಚೀನತೆಯನ್ನು ತೋರಿಸುತ್ತವೆ . ರಾಜಕೀಯ ಪ್ರಾಬಲ್ಯವಿದ್ದಾಗ ಕ್ಷತ್ರಿಯರಾಗುತ್ತಿದ್ದ ಈ ಸಮುದಾಯವು , ರಾಜಕೀಯವಾಗಿ ನಿರ್ಬಲರಾದಾಗ ಶೂದ್ರರ ಗುಂಪಿಗೆ ಜಮೆಯಾಗುತ್ತಿತ್ತು . ಹಿಮಾಲಯದ ಅಡಿಭಾಗದಲ್ಲಿ ಹಾಗು ಬಂಗಾಲದಲ್ಲಿ ರಾಜ್ಯವಾಳಿದ ಈ ಸಮುದಾಯವು , ಅಲ್ಲಿ ರಾಜಕೀಯ ವೈರವನ್ನೆದುರಿಸಲಾಗದೆ , ದಕ್ಷಿಣಕ್ಕೆ ಬಂದಿತೆ ? ಹಾಗು ಕರ್ನಾಟಕದಲ್ಲಿ ನೆಲೆ ನಿಂದಿತೆ ? ಉತ್ತರ ಭಾರತದಲ್ಲಿಯೇ ಉಳಿದುಕೊಂಡ ಕನ್ನಡ ಜನಾಂಗಗಳು ಕಾಲಕ್ರಮೇಣ ಕನ್ನಡವನ್ನು ಬಿಟ್ಟುಬಿಟ್ಟು , ಆರ್ಯಭಾಷೆಯನ್ನು ಅಂಗೀಕರಿಸಿದಂತೆಯೆ , ಅಲ್ಲಿಯ ಮಲ್ಲರೂ ಸಹ ಕನ್ನಡವನ್ನು ಬಿಟ್ಟಿದ್ದಾರೆ . ಕರ್ನಾಟಕದಲ್ಲಿ ನೆಲೆಸಿದ ಮಲ್ಲರು ಮಾತ್ರ ಕನ್ನಡವನ್ನು ಇಟ್ಟುಕೊಂಡಿರಬೇಕು . ' ಖಂಡ ' ಅಥವಾ ಕಂದ ಪದವನ್ನು ಸೂಚಿಸುವ ೫೪ ಗ್ರಾಮಗಳು ಕರ್ನಾಟಕದಲ್ಲಿವೆ . ಕೆಲವು ಉದಾಹರಣೆಗಳು : ಕಂದಕೂರು , ಕಂದಗಲ್ , ಕಂದಗೋಳ , ಕಂದಾವರ , ಕಂದೂರು , ಕಂದ್ರಾಜಿ , ಖಂಡಾಲಾ , ಖಂದೋಡಿ , ಖಂಡೇರಾಯನಪಳ್ಳಿ ಇತ್ಯಾದಿ . ಇದಕ್ಕಿಂತ ಮುಖ್ಯವಾಗಿ , ಕರ್ನಾಟಕದ ಹೊರಗೂ ಇಂತಹ ಅನೇಕ ಸ್ಥಳಗಳಿವೆ . ಅಫಘಾನಿಸ್ತಾನದಲ್ಲಿರುವ ' ಕಂದಹಾರ ' ವಂತೂ ಜಗತ್ಪ್ರಸಿದ್ಧವಿದೆ . ಈ ಪದವು ಕಂದ ಹಾಗು ಹಾರ ಎನ್ನುವ ಎರಡು ಪದಗಳಿಂದ ಕೂಡಿದ ಸಂಯುಕ್ತ ಪದವಾಗಿದ್ದು , ಹಾರ ( = ಹಳ್ಳಿ ) ಇದು ಕನ್ನಡ ಪದ ಎನ್ನುವದನ್ನು ಲಕ್ಷಿಸಬೇಕು . ಕಂದಹಾರವೆನ್ನುವ ಒಂದು ಪಟ್ಟಣವೂ ಸಹ ಈಗಿನ ಮಹಾರಾಷ್ಟ್ರ ರಾಜ್ಯದಲ್ಲಿದೆ . ಮುಂಬಯಿ ನಗರದ ಭಾಗವಾದ ' ಕಾಂದೀವ್ಲಿ ' ಇದು ' ಕಂದವಳ್ಳಿ ' ಯ ಹಾಗು ' ಖಂಡಾಲಾ ' ಇದು ' ಖಂಡಹಾಳ ' ದ ಮರಾಠೀಕರಣವೆನ್ನುವದು ಸ್ಪಷ್ಟವಿದೆ . ಈ ರೀತಿಯಾಗಿ ಅಫಘಾನಿಸ್ತಾನ ಹಾಗು ಮಧ್ಯಭಾರತದಲ್ಲಿ ನೆಲೆಸಿದ್ದ ಈ ಸಮುದಾಯವು , ಆರ್ಯರ ಆಕ್ರಮಣದಿಂದಾಗಿ , ಗುಳೆ ಹೊರಟು ಮಹಾರಾಷ್ಟ್ರ ಹಾಗು ಕರ್ನಾಟಕಗಳಲ್ಲಿ ನೆಲೆಸಿದರು . ಅಲ್ಲಿಯೂ ಸಹ ಕಂದರಿಗೆ ಹಾಗು ಮಲ್ಲರಿಗೆ ಪರಸ್ಪರ ಹೊಡೆದಾಟಗಳು ನಡದೇ ಇದ್ದವು . ಈ ಕಂದರ ದೇವತೆಯು ' ಕಂದಸ್ವಾಮಿ ' . ಈತನು ಕಾಲಾಂತರದಲ್ಲಿ ಸಂಸ್ಕೃತೀಕರಣದಿಂದ ' ಸ್ಕಂದ ' ನಾಗಿರಬಹುದು . ಈತನ ವಾಹನ ನವಿಲು , ಅಂದರೆ ಹಾವಿನ ವೈರಿ . ಖಾಂಡವ ವನವನ್ನು ಅರ್ಜುನನು ಸುಟ್ಟಾಗ ಸತ್ತವರೆಲ್ಲರೂ ನಾಗರು . ( = ಸರ್ಪಗಳು ) . ಅಂದರೆ , ಕಂದರ ನೆಲೆಯಾದ ಖಾಂಡವವನವನ್ನು ಅತಿಕ್ರಮಿಸಿದ ನಾಗರನ್ನು ಹೊರದೂಡಲಿಕ್ಕಾಗಿ , ಖಂಡರು ಅರ್ಜುನನ ಸಹಾಯವನ್ನು ಕೋರಿರಬಹುದು . ಕಂದ ಎನ್ನುವ ಹೆಸರನ್ನು ಹೊಂದಿದ ಆದಿವಾಸಿ ಸಮುದಾಯವು ಈಗ ಕೇವಲ ಆಂಧ್ರಪ್ರದೇಶ ಹಾಗು ಓಡಿಸಾ ರಾಜ್ಯಗಳಲ್ಲಿ ಮಾತ್ರ ಸಿಗುತ್ತದೆ . ಈ ಕಂದರ ಭಾಷೆ ತೆಲಗು ಹಾಗು ಗೊಂಡಿ ಭಾಷೆಯನ್ನು ಹೋಲುತ್ತದೆ . ಇದಿಷ್ಟು ಮಲ್ಲ ಹಾಗು ಕಂದ ಸಮುದಾಯಗಳ ಕತೆ . ಪೂರ್ವ - ದ್ರವಿಡ ಭಾಷೆಯನ್ನಾಡುತ್ತಿದ್ದ ಈ ಸಮುದಾಯಗಳು , ಕಾಲಕ್ರಮದಲ್ಲಿ ಹಿಮಾಲಯದ ಅಡಿಭಾಗದಿಂದ ದಕ್ಷಿಣಕ್ಕೆ ಸರಿಯುತ್ತ , ಕರ್ನಾಟಕದಲ್ಲಿ ಅಂತಿಮವಾಗಿ ತಳವೂರಿದ ಕತೆ . ಭಾರತೀಯ ಪುರಾಣಗಳು ವಾಸ್ತವದಲ್ಲಿ ಇಲ್ಲಿಯ ಮೂಲ ಜನಾಂಗಗಳ ಇತಿಹಾಸವೇ ಆಗಿವೆ . ಪುರಾಣ ಈ ಪದದ ಅರ್ಥವೇ ಹಳೆಯ ಎಂದಾಗುತ್ತದೆ . ಈ ಪುರಾಣಗಳನ್ನು ಸೋಸಿದಾಗ ಐತಿಹಾಸಿಕ ಸತ್ಯದ ಹೊಳಹು ಗೋಚರಿಸುತ್ತದೆ .
ಮುಂದಿನ ಭಾಗದಲ್ಲಿ , ಆಗ್ನೇಯ , ಈಶಾನ್ಯ , ನೈರುತ್ಯ ಮತ್ತು ವಾಯುವ್ಯ ದಿಕ್ಕುಗಳನ್ನು ಹೇಳಿ ಕೊಡಿ ಸಾರ್ ! ಚೆನ್ನಾಗಿತ್ತು . ಮಕ್ಕಳಿಗೇ ಏನು ? ನಂಗೂ ಒಮ್ಮೊಮ್ಮೆ ಯಾವ ದಿಕ್ಕಿನಲ್ಲಿ ಇದೀನಿ ಅಂತ ಗೊತ್ತಾಗಲ್ಲ : (
[ 7 ] ಪ್ರೀತಿಸುವುದೆಂದರೆ ಬರೀ ಪೋಷಿಸಿ ರಕ್ಷಿಸುವುದಲ್ಲ . ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಆತ್ಮಸ್ಥೈರ್ಯದಿಂದ ಆತ್ಮಾಭಿಮಾನವನ್ನು ಕಳೆದುಕೊಳ್ಳದೆ ಎದುರಿಸುವಂತೆ ಕಲಿಸುವುದೂ ಹೌದು . - - ಎಲ್ಲೋ ಓದಿದ ನೆನಪು . ಅವರು ಹುಟ್ಟಿದ್ದು ಬೆಳೆದದ್ದು ಒಂದು ಕುಗ್ರಾಮದಲ್ಲಿ . 3 ಕಿಲೋ ಮೀಟರ್ ಸುತ್ತಳತೆಯಲ್ಲಿ ಅಜ್ಜನ ಅಣ್ಣನ ಮನೆಯೊಂದು ಬಿಟ್ಟರೆ ಇನ್ಯಾವುದೂ ಮನೆಗಳಿರಲಿಲ್ಲ . ಅಜ್ಜನ 6 ಮಕ್ಕಳಲ್ಲಿ ಇವರು 2 ನೆಯವರು . ಹಿರಿಯ ಮಗ . ಅಜ್ಜನಿಗೆ ಸಾಕಷ್ಟು ಗದ್ದೆ ತೋಟಗಳು ಇದ್ದವು . ಕೊಟ್ಟಿಗೆ ತುಂಬಾ ದನ ಕರುಗಳು . ಎಮ್ಮೆಗಳು . ಊಳಲು 2 ದೊಡ್ಡ ಜೋಡೆತ್ತುಗಳು . ಕೆಲಸಗಾರರ ಕೊರತೆ ಇದ್ದಿದ್ದರಿಂದ ಅಪ್ಪ ಚಿಕ್ಕಪ್ಪ ತಮ್ಮ ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾಯಿತಂತೆ . ಹಾಗಾಗಿ ವ್ಯವಸಾಯವೇ ಉದ್ಯೋಗವಾಯಿತು . ಬೆಳಿಗ್ಗೆ ಎದ್ದು ಸ್ನಾನ ಮಾಡಿ ಕೆಲಸಕ್ಕೆಂದು ಇಟ್ಟ ದೊಗಲೆ ಅಂಗಿ ಚಡ್ಡಿಗಳನ್ನು ಧರಿಸಿ , ತಲೆಗೊಂದು ರುಮಾಲು ಸುತ್ತಿ ಹೊರಟರೆ , ವಾಪಸು ಬರುತ್ತಿದ್ದುದು ಸಂಜೆಯೇ . ಸಂಜೆ ಬಂದು ಪುನಃ ಸ್ನಾನ ಮಾಡಿ ತಲೆ ಬಾಚಿ ರಾತ್ರಿಯ ಊಟಕ್ಕೆ ಬರಲು ತಯಾರಾಗುವಾಗ ಅವರ ಜೊತೆ ನಾನಿರುತ್ತಿದ್ದೆ . ಊಟದ ಮನೆಯಲ್ಲಿ ಮೊದಲು ಅಜ್ಜ , ಅವರ ಪಕ್ಕದಲ್ಲಿ ಅಪ್ಪ . ಆಮೇಲೆ ದೊಡ್ಡ ಚಿಕ್ಕಪ್ಪ . ನಂತರ ಚಿಕ್ಕ ಚಿಕ್ಕಪ್ಪ . ಅವರಿಗೆ ಎದುರು ಇನ್ನೊಂದು ಪಂಕ್ತಿಯಲ್ಲಿ ಹೆಂಗಸರು . ರಾತ್ರಿ ಊಟವಾದಮೇಲೆ ಮನೆಯ ಹಜಾರದಲ್ಲಿ ಅಜ್ಜನ ಜೊತೆ ಕುಳಿತು ಎಲ್ಲರ ಸಮಾಲೋಚನೆ . ಮುಳುಗಡೆ ಆಗುತ್ತಂತೆ ಎಂಬ ವಂದಂತಿ ನಿಜವಾಗಲು ಕೇವಲ 5 ವರ್ಷ ಸಾಕಾಯಿತು . ವಾರಾಹಿ ವಿದ್ಯುತ್ಛಕ್ತಿ ಉತ್ಪಾದನ ಘಟಕಕ್ಕಾಗಿ ಹಾಕಿದ ಆನೆಕಟ್ಟಿನಿಂದ ನಮ್ಮ ಜಮೀನು ಮನೆ ನೀರು ಪಾಲಾಗಿ , ಎಲ್ಲರೂ ಪೇಟೆಗೆ ಬಂದು ನೆಲೆಯೂರಿದರು . ಮುಂದೇನು ಮಾಡುವುದು ಎಂಬುದು ಎಲ್ಲರ ಮುಂದಿದ್ದ ಪ್ರಶ್ನೆ . ಅಪ್ಪ ಒಂದು ಅಂಗಡಿ ಹಾಕುವ ನಿರ್ಧಾರ ಮಾಡಿದರು . ಮನೆಯ ಹತ್ತಿರದಲ್ಲೇ ಒಂದು ಸ್ಟೇಷನರಿ ಅಂಗಡಿ ಹಾಕಿ ನಿರ್ವಹಿಸಲು ಶುರುಮಾಡಿ ಮೂರು ತಿಂಗಳಾಗಿತ್ತು ಅಷ್ಟೇ . ಜ್ವರ ಶುರುವಾಯಿತು . ೧೫ ದಿನವಾದರೂ ಕಡಿಮೆಯಾಗಲಿಲ್ಲ . ನಾವಿದ್ದ ಊರಿನಲ್ಲಿದ್ದ ಡಾಕ್ಟರು ಪರವೂರಿನಲ್ಲಿದ್ದ ದೊಡ್ಡ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಲು ಹೇಳಿದರು . ಹತ್ತಿರದ ಸಂಬಂಧಿ ಹುಡುಗನೊಬ್ಬನನ್ನು ಜೊತೆಗೆ ಕರೆದುಕೊಂಡು ಹೋಗಿ ದೊಡ್ಡ ಆಸ್ಪತ್ರೆಗೆ ಅಡ್ಮಿಟ್ ಆದರು . ಒಂದಾದ ಮೇಲೊಂದು ಪರೀಕ್ಷೆಗಳ ಸುರಿಮಳೆ ಶುರುವಾಯಿತು . ವ್ಹೊಲ್ ಬಾಡಿ ಸ್ಕಾನ್ನಿಂಗ್ ಮುಂತಾದ ದೊಡ್ಡ , ಹೆಚ್ಚು ಹಣ ಬೇಕಾಗುವ ಪರೀಕ್ಷೆಗಳೆಲ್ಲ ಮಾಡಿ ಮುಗಿದಿತ್ತಂತೆ . ಆರೋಗ್ಯದಲ್ಲಿ ಏನೂ ತೊಂದರೆ ಇರಲಿಲ್ಲವಂತೆ . 6 ನೇ ದಿನ ಬಂದ ಡಾಕ್ಟರ್ ಒಬ್ಬರು ನಾಳೆ ಒಂದು ಚಿಕ್ಕ ಪರೀಕ್ಷೆ ಇದೆ . ಮುಗಿಸಿಕೊಂಡು ಡಿಸ್ಚಾರ್ಜ್ ಆಗಬಹುದು ಎಂದು ಹೇಳಿದರಂತೆ . ಒಂದು ದಿನದಲ್ಲಿ ಇನ್ನೇನು , ಅದೂ ದೊಡ್ಡದೆಲ್ಲ ಮುಗಿದಿದೆ ಎಂದು ನಿಶ್ಚಿಂತೆಯಿಂದ ಇದ್ದರಂತೆ ಅಪ್ಪ . ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಪರೀಕ್ಷಾ ಕೊಟಡಿಗೆ ಬರಲು ತಿಳಿಸಿದ್ದರಂತೆ . ಅಪ್ಪ ಹೋಗಿ ಕಾಯುತ್ತಿದ್ದಾರೆ , 9 . 30 ಆದರೂ ಯಾರೂ ಅಲ್ಲಿ ಇರಲಿಲ್ಲವಂತೆ . 9 . 45 ಸುಮಾರಿಗೆ ನರ್ಸ್ ಒಬ್ಬರು , ಇಬ್ಬರು ತರಬೇತಿಯಲ್ಲಿದ್ದ ಮ್ . ಎಸ್ . ಮಾಡುತ್ತಿದ್ದ ಲೇಡಿ ಡಾಕ್ಟರ್ ಗಳು ಬಂದು ಅಪ್ಪನ ಬಳಿ ಒಂದು ಫಾರ್ಮಿಗೆ ಸೈನ್ ಮಾಡಿಸಿಕೊಂಡು ಪರೀಕ್ಷೆಗೆ ತಯಾರು ಮಾಡಿದರಂತೆ . ಅಷ್ಟರಲ್ಲಿ ಬಂದ ಅವರ ಚೀಫ್ ಡಾಕ್ಟರ್ ಇನ್ನೂ ತಯಾರಿ ಆಗಿಲ್ಲವ ಎಂದು ಸಿಡುಕತೊಡಗಿದರ೦ತೆ . ಅಪ್ಪನನ್ನು ಪರೀಕ್ಷಾ ಟೇಬಲ್ ಮೇಲೆ ಮಲಗಿಸಿ ಪರೀಕ್ಷೆ ಶುರು ಮಾಡಿದರಂತೆ . ಲೇಡಿ ಡಾಕ್ಟರ್ ಚೀಫ್ ಡಾಕ್ಟರ್ ನ ಸೂಚನೆಯಂತೆ , ಅಪ್ಪನ ತೊಡೆಯ ಜಾಗದಿಂದ ತಲೆಕೂದಲಿನಂತಹ ಒಂದು ತೆಳು ವಯರನ್ನು ದೇಹದೊಳಗೆ ನುಗ್ಗಿಸಿ ರಕ್ತನಾಳಗಳಲ್ಲಿ ಅದನ್ನು ಹೃದಯದ ಕಡೆಗೆ ಚಲಿಸುವಂತೆ ಮಾಡುವುದು ಅಪ್ಪನಿಗೆ ಪಕ್ಕದಲ್ಲಿದ್ದ ಟಿವಿಯಂತಹ ಸ್ಕ್ರೀನ್ ನಲ್ಲಿ ಕಾಣುತ್ತಿತ್ತಂತೆ . ಅಪ್ಪನಿಗೆ ಯಾರೋ ತಮ್ಮನ್ನು ಕಾಲ ಬದಿಯಿಂದ ಮತ್ತು ತಲೆಯ ಕಡೆಯಿಂದ ಎರಡು ಭಾಗ ಮಾಡಲು ಎಳೆಯುತ್ತಿದ್ದಂತೆ ಎನ್ನಿಸಿತಂತೆ . ಕೂಗಿದರಂತೆ . ಅಷ್ಟರಲ್ಲಿ ಆ ಚೀಫ್ ಡಾಕ್ಟರ್ " ರಿಮೊವ್ ಆಲ್ " ಎಂದು ಜೋರಾಗಿ ಹೇಳಿದನಂತೆ . ಆ ತರಬೇತಿಯಲ್ಲಿದ್ದ ಲೇಡಿ ಡಾಕ್ಟರ್ ಕೈಲಿದ್ದ ವಯರನ್ನು ವಾಪಸು ಎಳೆದರಂತೆ . ಅಪ್ಪನಿಗೆ ಕಾಲು ಮರಗಟ್ಟಲು ಶುರುವಾದಂತೆ ಎನ್ನಿಸಿತಂತೆ . ಅವರನ್ನು ಪುನಃ ವಾರ್ಡಿಗೆ ಕಳಿಸಿದರಂತೆ . ಮರುದಿನ ಬಂದು ಪರೀಕ್ಷೆ ಮಾಡಿದ ನರವೈದ್ಯ ತಜ್ಞರು ಅಪ್ಪನಿಗೆ ಪ್ಯಾರಪ್ಲೀಜಿಯ ಆಗಿದೆಯೆಂದು ತಿಳಿಸಿದರಂತೆ . ಅವತ್ತು ನಾನು ಆಸ್ಪತ್ರೆಗೆ ಅಪ್ಪನನ್ನು ನೋಡಲು ಹೋಗಿದ್ದೆ . ಎಲ್ಲರೂ ಹೇಳುವುದು ನನಪಾಗುತ್ತೆ . " ಕಾಲು ಒಂದು ದಿನದಲ್ಲೂ ಬರಬಹುದಂತೆ . ಒಂದು ವರ್ಷವೂ ಆಗಬಹುದಂತೆ " . . . ಜಮೀನು ಮನೆ ಕೆಲಸಗಳಲ್ಲಿ ಸಮಯ ಸಿಗುವುದು ಕಷ್ಟಸಾಧ್ಯವಾದ್ದರಿಂದ ಅಪ್ಪ ನಮ್ಮನ್ನು ಎಲ್ಲಿಗೂ ಕರೆದುಕೊಂಡು ಹೋಗುತ್ತಿರಲಿಲ್ಲ . ಅವರ ತಂಗಿಯೊಬ್ಬರು ಮದ್ರಾಸಿನಲ್ಲಿ ಇದ್ದರು . ಅವರ ಮನೆಗೆ 10 ದಿನಗಳಿಗಾಗಿ ಹೋಗುವುದೆಂದು ನಿರ್ಧಾರವಾಗಿತ್ತು . ಹೋಗುವ ಮೊದಲು ಪರೀಕ್ಷೆಗಳನ್ನು ಮುಗಿಸಿಕೊಂಡು ಹೋಗುವುದು ಒಳ್ಳೆಯದೆಂದು ಅಪ್ಪ ನಿರ್ಧರಿಸಿದ್ದರಿಂದ , ಅಪ್ಪ ಆಸ್ಪತ್ರೆ ಸೇರಿದ್ದರು . ನನಗೆ ನನ್ನ ತಮ್ಮನಿಗೆ " ಛೆ ನಮ್ಮ ಮದ್ರಾಸ್ ಟ್ರಿಪ್ ಮುಂದೆಹೊಯಿತಲ್ಲ . ಇನ್ನೆಷ್ಟು ದಿನ ಕಾಯಬೇಕೋ ? ಅಪ್ಪನಿಗೆ ಕಾಲು ಬಂದ ಕೂಡಲೇ ಹೊರಡುತ್ತಾರೋ ಇಲ್ಲವೋ " ಎಂಬ ಯೋಚನೆಗಳ ಹೊರತು ಬೇರೇನೂ ತಿಳಿಯುವ ವಯಸ್ಸಾಗಿರಲಿಲ್ಲ . ಅಪ್ಪ ಅಮ್ಮ ದೊಡ್ಡ ಆಸ್ಪತ್ರೆಯಲ್ಲಿ ಉಳಿದರು . ಅಲ್ಲಿಂದ 2 . 30 ಗಂಟೆಯ ದಾರಿ ನಮ್ಮ ಮನೆ . ನಾವು ಅಜ್ಜ ದೊಡ್ಡಮ್ಮ ಚಿಕ್ಕಪ್ಪ ಚಿಕ್ಕಮ್ಮರ ಆಶ್ರಯಕ್ಕೆ ಸೇರಿದೆವು . ಅಮ್ಮ ಅಪ್ಪನೊಂದಿಗೆ ಆಸ್ಪತ್ರೆಯಲ್ಲೇ ಉಳಿದರು . ಪ್ರತಿದಿನ ಬೆಳಿಗ್ಗೆ ಊಟವನ್ನು ಒಂದು ಬಸ್ಸಿನ ಡ್ರೈವರ್ ಹತ್ತಿರ ಕೊಟ್ಟು 5 ರೂಪಾಯಿ ಕೊಡುತ್ತಿದ್ದೆವು . ಅಮ್ಮ ಅಲ್ಲಿ ಬುತ್ತಿಯನ್ನು ತೆಗೆದುಕೊಂಡು ಸಂಜೆ ಕಾಲಿ ಡಬ್ಬಿಯನ್ನು ಪುನಃ ಅದೇ ಬಸ್ಸಿನಲ್ಲಿ ವಾಪಸು ಕಳಿಸುತ್ತಿದ್ದಳು . ತಿಂಗಳಿಗೊಮ್ಮೆ ಆಸ್ಪತ್ರೆಗೆ ಹೋಗಿ ನೋಡಿಬರುವ ಅನುಕೂಲ ಅಜ್ಜ ನಮಗೆ ಕಲ್ಪಿಸಿದ್ದರು . ಅಜ್ಜ ದೊಡ್ಡಮ್ಮನ ಜೊತೆಯಲ್ಲಿದ್ದ ಕಾರಣ ಅಮ್ಮ ಅಪ್ಪ ಇಲ್ಲವೆಂಬ ಭಾವನೆ ಕಾಡಿದ್ದು ವಿರಳ . 6 ತಿಂಗಳು ಕಳೆದರೂ ಅಪ್ಪನ ಕಾಲು ಬರಲಿಲ್ಲ . ಆಸ್ಪತ್ರೆಯ ಚಾರ್ಜು ಮಾತ್ರ ದೊಡ್ಡದಾಗುತ್ತ ಹೋಯಿತು . ಕೊನೆಗೆ ಇಲ್ಲಿದ್ದು ಪ್ರಯೋಜನವಿಲ್ಲವೆಂದು ಅರಿತ ಅಪ್ಪ , ವಾಪಸು ಬರುವ ನಿರ್ಧಾರ ಮಾಡಿದರು . ಆಸ್ಪತ್ರೆಯವರು ಒಂದು ವ್ಹೀಲ್ ಚೇರ್ ಕೊಟ್ಟು , ಮುಂದೆ ಚಿಕಿತ್ಸೆಗೆ ಬಂದರೆ ಫೀಜಿಲ್ಲದೆ ಚಿಕಿತ್ಸೆ ಕೊಡುತ್ತೇವೆ ಎಂಬ ಆಶ್ವಾಸನೆ ಕೊಟ್ಟು ಅಪ್ಪನನ್ನು ಮನೆಗೆ ಕಳಿಸಿದರು . ಅಪ್ಪ ಹಾಕಿದ್ದ ಅಂಗಡಿಯನ್ನು ಚಿಕ್ಕಪ್ಪ , ಅಮ್ಮ ಮತ್ತು ನಾನು ನೋಡಿಕೊಳ್ಳುತ್ತಿದ್ದೆವು . ಸಂಜೆ ಆಟವಾಡುವ ಸಮಯ ಅಂಗಡಿಯಲ್ಲಿ ಕೂರಲು ಬೇಸರವಾಗುತ್ತಿದ್ದುದು ಸಹಜ . ಅಮ್ಮ , ಅಪ್ಪನ ಮಲ ಮೂತ್ರ ತೆಗೆಯುವುದು , ಸ್ನಾನ ಮಾಡಿಸುವುದು ಮುಂತಾದ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದಳು . ಸಮಯ ಹೋದುದೇ ತಿಳಿಯಲಿಲ್ಲ . ಅಜ್ಜ ಮನೆ ಕಟ್ಟಲು ಶುರುಮಾಡಿ , ಮುಗಿಯುವ ಮೊದಲೇ ಕೊನೆಯುಸಿರೆಳೆದರು . ಅಜ್ಜ ಬದುಕಿದ್ದರೆ ಎಲ್ಲರೂ ಒಟ್ಟಿಗೆ ಇರುತ್ತಿದ್ದೆವೇನೋ , ಆದರೆ ಅವರ ಕಾಲಾನಂತರ ಪಾಲಾಗಿ , ಅಜ್ಜ ಕಟ್ಟಿದ ಮನೆ ಚಿಕ್ಕಪ್ಪನದಾಯಿತು . ನಾವಿದ್ದ ಊರಿಗೆ 25km ದೂರದಲ್ಲಿದ್ದ ಒ೦ದು ಎಕರೆಗೆ ಸ್ವಲ್ಪ ಕಡಿಮೆಯಿದ್ದ ತೋಟ ಅಪ್ಪನ ಆಸೆಯ೦ತೆ ನಮ್ಮದಾಯಿತು . ಅಪ್ಪ ಸಾಲ ಮಾಡಿ ನಮಗಾಗಿ ನಾವಿದ್ದ ಊರಿನಲ್ಲಿ ಒಂದು ಸೂರು ಕಟ್ಟುವ ನಿರ್ಧಾರ ಮಾಡಿದರು . ಮನೆಯ ನೆಲಕ್ಕೆ ಹಾಕುವ ಕಲ್ಲುಗಳನ್ನು ಆರಿಸಲು ಚಿಕ್ಕಪ್ಪನೊಂದಿಗೆ ನಾನು ಹೋಗುವುದೆಂದು ತಿಳಿಸಿದಾಗ ನನಗೆ ಕುಶಿ . ಬೇರೆಯವರ ಮನೆಯಲ್ಲಿ ನೋಡಿದ್ದ , ಹೊಳೆಯುತ್ತಿದ್ದ ಸೆರಾಮಿಕ್ ಕಲ್ಲುಗಳು ನನ್ನ ಆಯ್ಕೆ . ಅಪ್ಪ ನನ್ನನ್ನು ಕೂರಿಸಿಕೊಂಡು , " ನೋಡು . . ಈ ಸೆರಾಮಿಕ್ ಕಲ್ಲುಗಳು ನನ್ನ ವ್ಹೀಲ್ ಚೀರ್ ಓಡಾಟ ಸಹಿಸಲಾರವು . ನಾಲ್ಕು ದಿನಕ್ಕೆ ಅಲ್ಲಲ್ಲಿ ಗಾಯವಾದರೆ ನೋಡಲು ಚೆನ್ನಾಗಿರುವುದಿಲ್ಲ . ಚೆಂದಕ್ಕಿಂತ ಉಪಯೋಗ ಮುಖ್ಯ . ಇರುವುದರಲ್ಲಿ ಕಡಪ ಕಲ್ಲು ಗಟ್ಟಿಯಂತೆ . ಬಹಳ ಕಾಲ ಬಾಳಿಕೆ ಬರುತ್ತಂತೆ . " ಎಂದೆಲ್ಲ ಹೇಳಿ ನಾನು ಕಡಪ ಕಲ್ಲು ಆಯ್ಕೆ ಮಾಡುವಂತೆ ಮನವೊಲಿಸಿದರು . ಅಪ್ಪನ ಅನಾರೋಗ್ಯ , ಬಡತನ ಅಥವಾ ಸಾಲದ ಕಾರಣ ಅವರ ಬಾಯಲ್ಲಿ ಬರಲಿಲ್ಲ . ಆದ್ದರಿಂದ ನನಗೂ ದುಡ್ಡಿನ ಕೊರತೆಯಿಂದ ಅಪ್ಪ ನನ್ನ ಆಸೆಯನ್ನು ಚಿವುಟಿದರು ಎಂದೂ ಅರಿವಾಗಲಿಲ್ಲ . ನಾನು ತಿಳಿದ ಹಾಗೆ ಇಂತಹ ಎಲ್ಲ ಚಿಕ್ಕ ಚಿಕ್ಕ ವಿಷಯಗಳಲ್ಲಿ , ಅಪ್ಪ ಸಹ ತಮ್ಮ ಪರಿಸ್ಥಿತಿಯಿಂದ ತಾವು ತಮ್ಮ ಆಸೆಗಳನ್ನು ತಡೆಹಿಡಿದದ್ದೆಂದು ಭಾವಿಸಿದ್ದೇ ಇಲ್ಲ . ಇದ್ದಿದ್ದರಲ್ಲಿ ಜಾಣತನದ ಆಯ್ಕೆ ಮಾಡಿದೆ ಎಂದೇ ತಮ್ಮನ್ನು ತಾವೂ ನಂಬಿಸಿಕೊಂಡು ನಡೆಯುತ್ತಿದ್ದರು . ಬೇರೆಯವರೊಡನೆ ತಮ್ಮನ್ನು ಹೋಲಿಸಿ ನೋಡಿದ್ದು ಕಡಿಮೆ . ನಮಗಿಂತ ಕಷ್ಟದಲ್ಲಿದ್ದವರನ್ನು ನೋಡಿ ನಾವೇ ಅದೃಷ್ಟವಂತರು ಎಂದು ಹೇಳುತ್ತಿದ್ದಿದ್ದು೦ಟು . ಪ್ರತಿ ಶನಿವಾರ ದಾನ ಕೇಳಲು ಬರುತ್ತಿದ್ದ ಗಂಟೆ ಹಿಡಿದ ದಾಸಯ್ಯನಿಗೆ ಮನೆಯ ಗೇಟಿನ ಹೊರಗೆ ನಿಲ್ಲಿಸಿ ಹಣ ಕೊಡಬಾರದು . ಗೇಟು ತೆಗೆದು ಒಳಕರೆದು ಒಂದು ಮುಷ್ಟಿಯಾದರೂ ಅಕ್ಕಿಯೊಂದಿಗೆ ಚಿಕ್ಕ ನಾಣ್ಯವೊಂದನ್ನು ಕೊಡಬೇಕೆಂದು ನಮಗೆ ಕಲಿಸಿದ್ದುಂಟು . ಹಾಗಾಗಿ ನನಗಾಗಲಿ ನನ್ನ ತಮ್ಮನಿಗಾಗಲಿ , ಎಂದೂ ನಮ್ಮ ಅಪ್ಪ ಬೇರೆಯವರಂತಿಲ್ಲ ಎಂದಾಗಲೀ , ನಾವು ಏನೋ ಕಳೆದುಕೊಂಡಿದ್ದೇವೆ ಅಥವಾ ಕಳೆದುಕೊಳ್ಳುತ್ತಿದ್ದೇವೆ ಎಂದಾಗಲೀ ಆ ಸಮಯಗಳಲ್ಲಿ ಎ೦ದೂ ಎನಿಸಲಿಲ್ಲ . - - ಭಾಗ ೩ http : / / vismayanagari . com / node / 7439 [ 8 ]
ಕನ್ನಡನಾಡಿನ ಒಂದು ತಲೆಮಾರಿನ ಪತ್ರಕರ್ತ ಸಮುದಾಯಕ್ಕೆ ಗುರಿಕಾರನಂತಿದ್ದ ವಡ್ಡರ್ಸೆ ರಘುರಾಮಶೆಟ್ಟರ ಕುರಿತು ಅವರ ಶಿಷ್ಯ ಚಿದಂಬರ ಬೈಕಂಪಾಡಿ ಬರೆಯುವ ಈ ಸರಣಿಯ ಕೊನೆಯ ಲೇಖನ .
ಇಲ್ಲಾ , ನನ್ನ ಅಮ್ಮ ಅಪ್ಪ ತೋರಿಸಿದ ಗಂಡನ್ನು ಮದುವೆಯಾಗಿ ಆತನ ಮನೆಗೆ ತೆರಳಲೇ ನಾನು … ?
ಈ ರೀತಿ ವಾರಾಂತ್ಯ ಮಹಿಳೆಯರಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ . ತಮ್ಮ ಅಭಿರುಚಿಗಳನ್ನು ಬೆಳೆಸಿಕೊಳ್ಳಲು , ತಮ್ಮ ನೈಪುಣ್ಯತೆಯನ್ನು ಮೆರೆಯಲು , ಅಸ್ತಿತ್ವವನ್ನು ಉಳಿಸಿಕೊಳ್ಳಲು , ಮಹಿಳೆ ವಾರಾಂತ್ಯದಲ್ಲಿ ಒಂದೆರಡು ಗಂಟೆಗಳನ್ನಾದರೂ ತನಗಾಗಿ ಮೀಸಲಿಡಲು ಯತ್ನಿಸಿದರೆ ಏನೋ ತೃಪ್ತಿ , ನೆಮ್ಮದಿ ಆಕೆಗೂ ಮೂಡುವುದು . ಆದರೆ ಇಂದಿನ ಯುಗದಲ್ಲಿ ಆ ಸಮಯವನ್ನು ಪಡೆಯುವುದೂ ಬಹು ಕಷ್ಟವೇ ಸರಿ . ಎಲ್ಲಾ ಕಷ್ಟಗಳ ನಡುವೆಯೂ ಒಂದು ಪರಿಹಾರದ ದಾರಿ ಇದ್ದೇ ಇರುತ್ತದೆಯಂತೆ . ಆ ದಾರಿಯನ್ನು ಹುಡುಕುವ ಜಾಣ್ಮೆ ಹಾಗೂ ಕೊಂಚ ಸಹನೆ ನಮ್ಮೊಳಗಿದ್ದರೆ ಸಾಕು . ಕಷ್ಟವೂ ಸುಲಭವಾಗುತ್ತದೆ . ವಾರಾಂತ್ಯವೆಂದರೆ ಸಿಕ್ಕಾಪಟ್ಟೆ ತಿನ್ನುವುದು , ಹುಚ್ಚಾಪಟ್ಟೆ ತಿರುಗುವುದು , ಚಲನಚಿತ್ರಗಳನ್ನು ನೋಡುತ್ತಾ ಸಮಯವನ್ನು ಕೊಲ್ಲುವುದು ಅಲ್ಲವೇ ಅಲ್ಲಾ .
ಹೆಗ್ಗರುಳಿನ ಕ್ಯಾನ್ಸರ್ ( ಕೊಲೋನ್ ಕ್ಯಾನ್ಸರ್ ) , ಮೂಲವ್ಯಾಧಿ , ಸಕ್ಕರೆ ಕಾಯಿಲೆ , ಮಲಬದ್ಧತೆ , ಜಠರದ ಹುಣ್ಣು , ಅಧಿಕ ರಕ್ತದೊತ್ತಡ , ಅಪೆಂಡಿಸೈಟಿಸ್ , ಅಧಿಕ ಕೊಲೆಸ್ಟ್ರಾಲ್ , ಪಿತ್ತಕೋಶದಲ್ಲಿ ಕಲ್ಲು , ಬೊಜ್ಜು , ಹೃದಯಾಘಾತ - ಏನು ಇಷ್ಟೊಂದು ದೊಡ್ಡ ಕಾಯಿಗಳ ಪಟ್ಟಿ ? ಏಕೆ ಈ ಪಟ್ಟಿ ? - ಇವೆಲ್ಲಕ್ಕೂ ಒಂದೇ ಕಾರಣ , ರೋಗಿಯ ಆಹಾರದಲ್ಲಿ ನಾರು - ಬೇರುಗಳ ಅಂಶ ಕಡಿಮೆ .
ಪ್ರಕಾಶಣ್ಣ ; ಮತ್ತೆ ಸಸ್ಪೆನ್ಸ ? ನಿಮ್ದೊಳ್ಳೆ ಸಸ್ಪೆನ್ಸ್ ಸೀರಿಯಲ್ ಆಯ್ತಲ್ಲಾ ! ಹೋಗ್ಲಿ ಬಿಡಿ ಭಗವಂತನ ಹಣೆಯಲ್ಲಿ ದೇವರು ಬರೆದ ಹಾಗೆ ಆಗತ್ತೆ ! ಆಲ್ವಾ ?
ಕೆಲವರು ಬದುಕುವದೆ ಇನ್ನೊಬ್ಬರ ಜಿವನ ವಿಮರ್ಶೆ ಮಾದಿ ಅದರ ಸತ್ವ ಸಾಯಿಸಿ ಬರೆದವನು ಬದುಕುವ ಬಾಟಮ ಐಟಮ ಈ ರವಿ ಬೆಳೆಗೆರೆ
ಬೆಂಗಳೂರು , ಮೇ . 18 : ಈ ಮಣ್ಣಿನ ಮಗ , ಈ ದೇಶದ ಮಾಜಿ ಪ್ರಧಾನಿ , ಈ ಹಾಸನದ ಕೊಂಪೆ ಹರದನಹಳ್ಳಿಯ ದೊಡ್ಡೇಗೌಡ ದೇವೇಗೌಡರಿಗೆ ಇಂದು 79ನೇ ಹುಟ್ಟಹಬ್ಬದ ಸಂಭ್ರಮ . ಮೆನಿ ಹ್ಯಾಪಿ ರಿಟರ್ನಸ್ ಆಫ್ ದಿ ಡೇ ಟು ಯು ಶ್ರೀ ದೇವೇಗೌಡ . ಆವತ್ತಿಗೂ ಇವತ್ತಿಗೂ ಅದೇ ಪಂಚೆ , ಜುಬ್ಬ , ಹಣೆಯ ಮೇಲೆ ಕುಂಕುಮ , ಊಟಕ್ಕೆ
ಈಗಿನಂತೆ 4 ಸದಸ್ಯರು ಮತ್ತು 75 ಅತಿಥಿಗಳು ಆನ್ಲೈನ್ ಇರುವರು .
ನಮ್ಮೊಳಗೆ ನಾನೂ ಒಬ್ಬ . ಇದು ನನ್ನೊಬ್ಬನಿಂದಾದ ಕೆಲಸವಲ್ಲ . ಆದರೆ ಇದು ನಾನೇ ಮಾಡಬೇಕಾದದ್ದು . ನಾನಲ್ಲದೇ ಇದನ್ನು ಮಾಡುವವರು ಬೇರಾರೂ ಇಲ್ಲ . ನಾನೇ ಇದನ್ನು ಆರಂಭಿಸಬೇಕು . ಆದರೆ ನನ್ನಿಂದಲೇ ಆಗುತ್ತದೆ ಎಂದೇನೂ ಇಲ್ಲ . ನಾನಿಲ್ಲದಿದ್ದರೂ ಇದು ಆಗುವುದರಲ್ಲಿ ಅನುಮಾನವಿಲ್ಲ . ಅದರಲ್ಲಿ ' ನಾನು ' ಎಂಬುದು ತೀರಾ ನಗಣ್ಯ . ಹೀಗಿದ್ದೂ ನಾನು ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗುವುದಿಲ್ಲ . ನಾವೆಲ್ಲರೂ ಸೇರಿಯೇ ಇದನ್ನು ತಲೆ ಕಾಣಿಸಬೇಕು . ನನ್ನೊಬ್ಬನಿಗಾಗಿ ಇದನ್ನು ಮಾಡುವುದಲ್ಲ . ನಮ್ಮೆಲ್ಲರಿಗಾಗಿ ನಾನು ಮಾಡಬೇಕಾದದ್ದನ್ನು ಬೇರೆಯವರು ಮಾಡಲಿ ಎಂದು ಬಯಸುವುದು ಎಷ್ಟು ಸರಿ . . . ಲಾಪೋಡಿಯಾದ ನೀರಸಾಧಕ ಲಕ್ಷ್ಮಣ್ ಸಿಂಗ್ ಹೇಳುತ್ತಾ ಹೋಗುತ್ತಿದ್ದರೆ ಅವರ ಕಣ್ಣುಗಳು ಹೊಳೆಯುತ್ತವೆ . ಅವರೊಳಗಿರಬಹುದಾದ ತತ್ತ್ವಜ್ಞಾನಿಯ ದರ್ಶನವಾಗುತ್ತದೆ . ಆತ ಬರೀ ಸಾಧಕನಲ್ಲ . ಮಹಾನ್ ತಪಸ್ವಿಯಾಗಿ ಗೋಚರಿಸುತ್ತಾರೆ . ಒಬ್ಬ ಯೋಗಿಯ ದೃಢತೆಗೆ ಪ್ರತೀಕವಾಗುತ್ತಾರೆ . ಶಾಂತಿಯ ಅವಧೂತನಂತೆ ಕಂಗೊಳಿಸುತ್ತಾರೆ . ಸತ್ಯ - ಅಹಿಂಸೆಗಳಿಗೆ ಮೂರ್ತ ಸ್ವರೂಪ ಕಟ್ಟಿಕೊಡುತ್ತಾರೆ . ಒಟ್ಟಾರೆ ಗಾಂ , ಬುದ್ಧ , ಪರಮಹಂಸ , ವಿವೇಕ ಇವೆಲ್ಲರ ತತ್ತ್ವಾಧಾರಿತ ಸಂಮಿಳಿತ ಸ್ವರೂಪದಲ್ಲಿ ಲಕ್ಷ್ಮಣ್ ನಿಲ್ಲುತ್ತಾರೆ . ಅವರನ್ನು ಭೇಟಿಯಾದರೆ , ಮಾತನಾಡಿಸಿದರೆ ಇದಾವುದೂ ಉತ್ಪ್ರೇಕ್ಷೆ ಅನ್ನಿಸುವ ಪ್ರಮೇಯವೇ ಇಲ್ಲ . ಅದು ಯಾವುದೇ ಅಭಿವೃದ್ಧಿ ಇರಬಹುದು , ಜನರಿಂದ , ಅವರ ಸಹಭಾಗಿತ್ವದಿಂದ ನಡೆದಾಗಲೇ ಅದಕ್ಕೊಂದು ಅರ್ಥ . ಅದೇ ನಿಜವಾದ ಯಶಸ್ಸು - ಲಕ್ಷ್ಮಣ್‌ರ ಯಶಸ್ಸಿನ ಗುಟ್ಟೇ ಇದು . ' ಜನರೂ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡಬೇಕು . ಜನರಲ್ಲಿ ಇದು ನಮ್ಮದೇ ಕೆಲಸ , ಇದು ನಮಗಾಗಿ ನಾವು ಮಾಡಿಕೊಳ್ಳುವುದು , ಇದರ ಸಂಪೂರ್ಣ ಯಶಸ್ಸು ನಮಗೇ ಸಿಗಬೇಕು ನಮ್ಮ ಸ್ವ ಪ್ರಯತ್ನದಿಂದ ನಮ್ಮ ಊರು ಅಭಿವೃದ್ಧಿ ಹೊಂದಬೇಕು ಎಂಬ ಮನೋಭಾವ ನೆಲೆಗೊಂಡಲ್ಲಿ ಮಾತ್ರ ಸುಸ್ಥಿರತೆಯನ್ನು ಸಾಸಲಾಗುತ್ತದೆ ಎಂಬ ನಂಬಿಕೆಯೇ ಲಾಪೋಡಿಯಾದ ದಿಕ್ಕನ್ನೇ ಬದಲಿಸಿತು ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಅವರು . ನಮಗಾಗಿ ನಮ್ಮಿಂದ - ಪ್ರತಿಯೊಬ್ಬರೂ ಇಂಥ ಮನೋಭಾವದಿಂದಲೇ ಕಣಕ್ಕಿಳಿದಾಗ ಮಾತ್ರವೇ ಯಾವುದೇ ಸಾಧನೆ ಸಾಧ್ಯವಾಗುತ್ತದೆ . ಅಂಥ ವಿನೀತ ಭಾವದಿಂದಲೇ ಲಾಪೋಡಿಯಾದ ಸ್ಥಿತಿಯನ್ನು ಬದಲಿಸುವ ನಿರ್ಧಾರಕ್ಕೆ ಅಡಿ ಇಟ್ಟದ್ದು . ಅಲ್ಲಿನ ಜನರಿಗೆ ಹೇಳಿದ್ದೂ ಇದನ್ನೇ . ಮುಖ್ಯವಾಗಿ ಯುವಜನರ ಸಂಘಟನೆ ಮಾಡಿದ್ದು ಇದೇ ತತ್ತ್ವದ ಆಧಾರದ ಮೇಲೆಯೇ . ಅದೇನೂ ಸಣ್ಣ ಮಾತಾಗಿರಲಿಲ್ಲ . ಸಂಪೂರ್ಣ ದಾರಿದ್ರ್ಯಕ್ಕೆ ಒಳಗಾಗಿದ್ದ ಹಳ್ಳಿಗರ ಮನಃಸ್ಥಿತಿಯನ್ನು ಬದಲಿಸುವುದು ತಾಲಾಬ್‌ಗಳ ಪುನಶ್ಚೇತನಕ್ಕಿಂತ ಹೆಚ್ಚಿನ ದುಃಸ್ಸಾಹಸವಾಗಿತ್ತು .
ತಾವುಗಳು ಬಂಡವಾಳ ಹೂಡಿಕೆಯಿಂದ ಕನ್ನಡಿಗರ ಬದುಕಿಗೆ ಒಳ್ಳೆಯದಾಗಬೇಕೆಂದು ಪತ್ರ ಬರೆರು ಆಗ್ರಹಿಸಿ . ಮತ್ತು ಹೀಗೆ ಮಾಡಲು ತಮ್ಮ ಸ್ನೇಹಿತರನ್ನು ಸಹ ಒತ್ತಾಯಿಸಿ .
` ಮಹಾರಾಣೀಸ್ ಕಾಲೇಜಲ್ಲಿ ನಮ್ಮ ಆರ್ಕೆಸ್ಟ್ರಾ , ಸರಿ ಸಿ . ವಿ . ರಾಮನ್ ಅವರು ಚೀಫ್ ಗೆಸ್ಟ್ . ನಾವು ೭ - ೮ ಜನ ಸೇರಿ ಅರ್ಧ ಗಂಟೆ ಕಾರ್ಯಕ್ರಮ ಕೊಟ್ವಿ . ನಾನೇ ಮೇನ್ ಪ್ಲೇಯರ್ . ಚೆನ್ನಾಗಿ ರಿಹರ್ಸ್ ಮಾಡಿಕೊಂಡಿದ್ವಿ . ಹಾಗಾಗಿ ಚೆನ್ನಾಗಿಯೇ ಆಯ್ತು .
ಚಿಕ್ಕ ಮಕ್ಕಳಿಗಾಗಿ ಕಾಲ್ಪನಿಕ ಕಥೆಗಳ ರೂಪಾಂತರವು ಸರಾಗವಾಗಿ ಮುಂದುವರಿಯುತ್ತದೆ . ವಾಲ್ಟ್ ಡಿಸ್ನಿ ಯ ಪ್ರಭಾವಶಾಲಿ ಕಥೆ , ಸ್ನೋ ವೈಟ್ ಅಂಡ್ ದಿ ಸೆವೆನ್ ದ್ವಾರ್ಫ್ಸ್ ಬಹುತೇಕ ( ಆದರೂ ಖಂಡಿತವಾಗಿ ಏಕಮಾತ್ರವಲ್ಲ ) ಮಕ್ಕಳ ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡು ರಚಿಸಲಾಗಿತ್ತು . [ ೬೪ ] ಮ್ಯಾಜಿಕಲ್ ಪ್ರಿನ್ಸೆಸ್ ಮಿಂಕಿ ಮೊಮೊ ಎಂಬ ಆನಮ್ ಮೊಮೊತಾರೋ ಎಂಬ ಕಾಲ್ಪನಿಕ ಕಥೆಯಿಂದ ಪ್ರೇರಿತವಾಗಿದೆ . [ ೬೫ ] ಜಾಕ್ ಜಿಪಿಸ್ ರು ತಮ್ಮ ಜೀವನದ ಅನೇಕ ವರ್ಷಗಳನ್ನು ಈ ಪ್ರಾಚೀನ ಕಥೆಗಳನ್ನು ಅಭ್ಯಾಸ ಮಾಡಲು ಮತ್ತು ಆಧುನಿಕ ಓದುಗರಿಗೆ ಮತ್ತು ಅವರ ಮಕ್ಕಳಿಗೆ ಓದಲು ದೊರೆಯುವಂತೆ ಮಾಡಲು ಮೀಸಲಿಟ್ಟಿದ್ದಾರೆ . [ ೬೬ ]
ಒಮ್ಮೆ ಮನೆಯ ಹಳೆಯ ಬೀಗಗಳನ್ನು ತ೦ದು ಮಗನ ಮು೦ದಿಟ್ಟು ಈ ಬೀಗದ ಕೈಗಳು ಎಲ್ಲಿ ? ? ಎ೦ದಾಗ ಇವನಿಗೆ ಉತ್ತರ ತೋಚದ೦ತಾಗುತ್ತದೆ . ತ೦ದೆಗೆ ಮಗ ತನ್ನ ಮನೆಯನ್ನು ಜವಬ್ದಾರಿ ವಹಿಸಿ ಸರಿಯಾಗಿ ನೋಡಿಕೊಳ್ಳುವುದಿಲ್ಲಾ ಎ೦ಬ ಭಯ . ಮಗ ಹಳೆಯ ಬೀಗಗಳನ್ನು ನೋಡಿಯೇ ಇರೋದಿಲ್ಲಾ . ಇದೇ ಕತೆ ನಮ್ಮ ಮನೆಯಲ್ಲಿ ಹಲವಾರು ಬಾರಿ ನಡೆದಿದೆ . ನಮ್ಮ ತ೦ದೆಯವರೂ ಕೂಡ ಬೀಗದ ಕೈ ಕಳೆದು ಹಾಕಿ ಪೇಚಾಡ್ತಾರೆ . ಇನ್ನು ' ಮೋಟರ್ ಮನೆ ' ಯ ಬಾಗಿಲ ಬೀಗದ ಕೈ ಸಿಕ್ಕಿಲ್ಲಾ . ಅದರಲ್ಲಿ ಪೈ೦ಟ್ ಮಾಡಿಲ್ಲಾ ಅ೦ತಾ ನಮ್ಮ ತ೦ದೆಗೆ ಬೇಸರ .
ಸುಲಭದಿ ಗೆಳೆಯರ ಮನ ಗೆಲುವ ಮೋಹನ ಎಷ್ಟೇ ಹೇಳಲೂ ಗೌಣವಾಗುವುದು ಇವರ ಕಥನ ಬೆಳಗಾಗಲು ಹಿರಿಯ ಕಿರಿಯರೆನ್ನದೇ ಇವರ ನಮನ ಎಂದೂ ತೋರ್ಗೊಡರು ಮನದಲಿರುವ ದುಗುಡ ದುಮ್ಮಾನ
ಇಂದು ಬನ್ನೇರುಘಟ್ಟ ರಸ್ತೆಯಲ್ಲಿ ಒಬ್ಬ ಲಾರಿ ಚಾಲಕನಿಗೆ ಸಂಚಾರಿ ಆರಕ್ಷಕ ಅಧಿಕಾರಿ ತನ್ನ ಶಿರಸ್ತ್ರಾಣದಿಂದ ಹೊಡೆಯುತ್ತಿದ್ದುದಕ್ಕೆ ಮೂಖ ಸಾಕ್ಷಿಯಾಗಿ ನಿಂತಿದ್ದೆ . ತನ್ನ ಷೂವನ್ನು ಬಿಚ್ಚಿ ಹೊಡೆಯಲು ಹೊರಟಿದ್ದ ಆ ಅಧಿಕಾರಿ . ಫ್ಲೈಓವರ್ ಗಳಿರುವುದರಿಂದ ಬೇಗ ಕೆಲಸ ತಲುಪಬಹುದೆಂಬ ಆಶಯದಿಂದ ಬನ್ನೇರುಘಟ್ಟ ರಸ್ತೆ ಮೂಲಕ ಪಯಣಿಸಿದ ನಾನು ಈ ಒಂದು ಘಟನೆ ಮನ ಕಲಕಿತು . ಲಾರಿ ಚಾಲಕ ತಪ್ಪೇ … ಇಲ್ಲ ಅನಿಸಿತು . ಆತ ಲಾರಿಯನ್ನು ಈ ರಸ್ತೆಗೆ ಕಲ್ಲುಗಳನ್ನು ಹೊತ್ತು ತಂದಿದ್ದ . ಈ ರಸ್ತೆಯಲ್ಲಿರುವ ಕಲ್ಲಿನಂಗಡಿಗಾಗಿ . ರಸ್ತೆ ಚಿಕ್ಕದಿದ್ದರಿಂದ ವಾಹನ ತಿರುಗಿಸಲು ಕಷ್ಟವಾಗಿತ್ತು . ಆತ ಶ್ರಮ ಪಟ್ಟು ತಿರುಗಿಸುವಷ್ಟರಲ್ಲಿ ಇತರೆ ವಾಹನಗಳು ತಾಳ್ಮೆ ಕಳೆದುಕೊಂಡು ಹಿಂದೆ ಮುಂದೆ ನುಗ್ಗಿ ಅವನಿಗೆ ಇನ್ನಷ್ಟು ತೊಂದರೆ ಕೊಟ್ಟಿದ್ದವು . ಲಾರಿ ತಿರುಗಿಸಲಾಗದೆ ಸಂಚಾರ ಅಸ್ತವ್ಯಸ್ತವಾಗಿತ್ತು . ಈ ಆರಕ್ಷಕರಿಗೆ ಕೈ ಬೆಚ್ಚಗೆ ಮಾಡಿದ್ದರೆ ಸುಮ್ಮನೆ ಇರುತ್ತಾರೆ . ಎಷ್ಟೋ ಸಲ ಜಯಚಾಮರಾಜೇಂದ್ರ ರಸ್ತೆಯಿಂದ ಪೂರ್ಣಿಮಾ ಚಿತ್ರಮಂದಿರದ ರಸ್ತೆಕಡೆಗೆ ಲಾರಿ ನಿಷಿದ್ಧ ಇದ್ದರೂ ಈ ಆರಕ್ಷಕರೆ ಮಾಮೂಲು ತೆಗೆದುಕೊಂಡು ಲಾರಿಗಳನ್ನು ಬಿಟ್ಟಿದ್ದಾರೆ . ಕೆಲ ದಿನಗಳ ಹಿಂದೆಯಷ್ಟೇ ರಸ್ತೆ ದಾಟುತ್ತಿದ್ದ ತರುಣಿ ಸುಮ್ಮನಿದ್ದವಳು ಇದ್ದಕ್ಕಿದಂತೆ ಚಲಿಸಿ ನನ್ನ ವಾಹನದ ಚಕ್ರಕ್ಕೆ ತನ್ನ ಅಂಗಾಲನ್ನು ಸಿಕ್ಕಿಸಿದ್ದಳು . ನನ್ನ ದುರಾದೃಷ್ಟಕ್ಕೆ ಅಲ್ಲೇ ಮುಂದೆ ಸಂಚಾರಿ ಆರಕ್ಷಕ ವಾಹನವನ್ನು ಅತೀರೇಕವಾಗಿ ಓಡಿಸುತ್ತಿದ್ದೇನೆಂದು , ಲೈಸ್ಸೆನ್ಸನ್ನು ಕಸಿದುಕೊಂಡರು . ಇದು ನನ್ನ ತಪ್ಪಲ್ಲವೆಂದು , ವಾಹನ ಅತೀ ನಿಧಾನವಾಗಿ ಚಲಿಸುತ್ತಿದ್ದೆನೆಂದು ಹೇಳಿದರೂ ಒಪ್ಪದೇ ಇದ್ದಾಗ ನೂರು ರೂಪಾಯಿಗಳನ್ನು ಅವರ ಛೇಲ ( ಮುಫ್ತಿಯಲ್ಲಿರುವ ಸಹದ್ಯೋಗಿಯೇ ? ) ನಿಗೆ ಕೊಟ್ಟು ಲೈಸ್ಸೆನ್ಸ ಬಿಡಿಸಿಕೊಂಡೆ .
ತಾನು ಸಿಹಿ ಹಣ್ಣು ಆದೆನೆಂಬ ಸಾರ್ಥಕತೆಗೆ ಹೂವು ಯಾರಿಗೆ ಋಣಿ
ಆಗ್ರಾ ವಿಭಜನೆ , ಅಲಿಘರ್ ವಿಭಜನೆ , ಅಲಹಾಬಾದ್ ವಿಭಜನೆ , ಆಜಂಘರ್ ವಿಭಜನೆ , ಬರೇಲಿ ವಿಭಜನೆ , ಬಸ್ತಿ ವಿಭಜನೆ , ಚಿತ್ರಕೂಟ್ ವಿಭಜನೆ , ದೇವಿಪಟನ್ ವಿಭಜನೆ , ಫೈಜಾಬಾದ್ ವಿಭಜನೆ , ಗೊರಖ್‌ಪುರ್ ವಿಭಜನೆ , ಝಾಂಸಿ ವಿಭಜನೆ , ಕಾನಪುರ್ ವಿಭಜನೆ , ಲಖನೌ ವಿಭಜನೆ , ಮೀರಟ್ ವಿಭಜನೆ , ಮಿರ್ಜಾಪುರ್ ವಿಭಜನೆ , ಮೊರಾದಬಾದ ವಿಭಜನೆ , ಸಹರಾನಪುರ್ ವಿಭಜನೆ ಮತ್ತು ವಾರಾಣಾಸಿ ವಿಭಜನೆ .
Download XML • Download text