kan-18
kan-18
View options
Tags:
Javascript seems to be turned off, or there was a communication error. Turn on Javascript for more display options.
ಬದಲಾದ ಈ ಕಾಲದಲ್ಲಿಯೇ ಹೊಸ ಸೋಗಿನಲ್ಲಿ ನಮ್ಮೆದುರು ಅತಿ ಬುದ್ಧಿವಂತರಾದ ಮಂದಿ ಮುಂದೆ ಬಂದಿದ್ದಾರೆ . ಹೊಸಮಾರ್ಗ ದರ್ಶನವೂ ಇದೆ . ಅವರು ತಿಳಿದುಕೊಂಡಿರುವುದು ಅಪಾರ ಹಾಗೂ ಸಮೃದ್ಧ ಎಂಬ ನಂಬಿಕೆ ಬಹಳ ಜನರದ್ದು ! ಇಂತಹ ಹೊಸಬರು ಆಗಾಗ ಬದಲಾಯಿಸುವ ಗುಣ ಭರತನಾಟ್ಯಕ್ಕೆ ಬಂದಿರುವುದನ್ನು ನೋಡಿದ್ದಾರೆ . ಅಲ್ಲಿ ನಡೆಯಬೇಕಾಗಿದ್ದ ವಿವಿಧ ರೀತಿಯ ಅಲೋಚನೆ , ಅದಕ್ಕೆ ಪೂರಕವಾಗಿ ಸಾಂಸ್ಕೃತಿಕ ಹೆಚ್ಚು ಕಡಿಮೆಗಳು ಹಾಗೂ ತಾವು ಕಂಡಂತೆ ಈಗಿನ ಬದಲಾವಣೆಗಳೆಲ್ಲಾ ಒಟ್ಟುಸೇರಿ ಭರತನಾಟ್ಯದ ಒಳಗಿನ ಭಾವನೆಗಳನ್ನು ಮೆಟ್ಟಿ ನಿಲ್ಲುತ್ತದೆ .
ಬೆಂಗಳೂರು : ಟೀಮ್ ಇಂಡಿಯಾ ಕೋಚ್ ಸ್ಥಾನ ತ್ಯಜಿಸಿ ತವರಿಗೆ ಮರಳುವ ಮುನ್ನ ಕೊನೆಯ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ಗ್ಯಾರಿ ಕರ್ಸ್ಟನ್ ಗುರುವಾರ ಅಭ್ಯಾಸದ ಸಂದರ್ಭದಲ್ಲಿ ಆಲ್‌ರೌಂಡರ್ ಯುಸುಫ್ ಪಠಾಣ್ ಹಾಗೂ ವೇಗದ ಬೌಲರ್ ಆಶಿಷ್ ನೆಹ್ರ ಬಗ್ಗೆ ಹೆಚ್ಚಿನ ಗಮನ ನೀಡಿದರು . ಬೆಂಗಳೂರಿನಲ್ಲಿ ನಡೆಯುತ್ತಿರುವ 4 ದಿನಗಳ ತರಬೇತಿ ಶಿಬಿರದ ಎರಡನೇ ದಿನವಾದ ಗುರುವಾರ ಕರ್ಸ್ಟನ್ ತಮ್ಮ ಸಹಾಯಕರಾದ ಬೌಲಿಂಗ್ ಕೋಚ್ ಎರಿಕ್ ಸಿಮನ್ಸ್ ಹಾಗೂ ಮಾನಸಿಕ ಪುನಶ್ಚೇತನ ಕೋಚ್ ಪ್ಯಾಡಿ ಅಪ್ಟನ್ ಜೊತೆ ಬಹುಬೇಗನೆ [ . . . ]
" ಧಿಷಣ " ಪದದ ವಿವರಣೆ ನೀಡಿದ್ದು ತುಂಬಾ ನೆರವಿಗೆ ಬಂತು . ಈ " ಆತ್ಮಧಿಷಣ " ~ = ' ಆತ್ಮವನ್ನು ಬೇರೆಯೆಂದು ವಿಚಾರಮಾಡುವ ಬುದ್ಧಿವಂತಿಕೆ ' ಎಂಬ ವಿಚಾರ ಮತ್ತು ವಿವರಣೆ ತುಂಬಾ ನೆಚ್ಚುಗೆಯಾಯಿತು . ಇದನ್ನು ಎಲ್ಲರಿಗೂ ತಿಳಿಸಿಕೊಟ್ಟದ್ದಕ್ಕಾಗಿ ತುಂಬಾ ನನ್ನಿ . ಹೀಗೆಯೇ ನಿಮ್ಮಲ್ಲಿರುವ ಜ್ಞಾನವನ್ನು ನಮ್ಮೆಲ್ಲರೊಡನೆ ಹಂಚಿಕೊಳ್ಳುತ್ತಿರಿ ಎಂದು ಕೇಳಿಕೊಳ್ಳುವೆ .
ಇವತ್ತು ವಿಶ್ವವಿದ್ಯಾಲಯಗಳು ಕೇವಲ ಪದವಿ ನೀಡುವ ಕಾರ್ಖಾನೆಗಳೇ ಹೊರತು ಜ್ಞಾನಕೇಂದ್ರವಾಗಿ ಉಳಿದಿಲ್ಲ . ಪ್ರಾಧ್ಯಾಪಕರ‍್ಯಾರೂ ತಮ್ಮ ಪ್ರಗತಿ ( ಶೈಕ್ಷಣಿಕವಾಗಿ ಅಲ್ಲ , ಲೌಕಿಕವಾಗಿ ) ಬಗ್ಗೆ ಗಮನಹರಿಸಿದ್ದಾರೆಯೇ ಹೊರತು ವಿದ್ಯಾರ್ಥಿಗಳ ಬಗ್ಗೆಯಂತೂ ಅಲ್ಲ . ಬಹಳಷ್ಟು ವಿವಿ ಗಳಲ್ಲಿ ವಿದ್ಯಾರ್ಥಿಗಳು ಬೋಧಕರನ್ನು ಪಾಠಕ್ಕಾಗಿ ಹುಡುಕಿಕೊಂಡು ಹೋಗುವ ಸ್ಥಿತಿಯಿದೆ . ವಾರಕ್ಕೆ ೧೬ ತರಗತಿಗಳು ತೆಗೆದುಕೊಳ್ಳಬೇಕಾದ ಉಪನ್ಯಾಸಕರು ಕೆಲವೆಡೆ ಮೂರರಿಂದ ನಾಲ್ಕು ತರಗತಿಗಳಿಗೆ ಸೋತು ಹೋಗುತ್ತಿದ್ದಾರೆ . ಇನ್ನು ಪ್ರಾಧ್ಯಾಕರ ಕಥೆ ಕೇಳಲೇಬೇಡಿ . ಸಂಬಂಧಪಟ್ಟ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಇಂಥವರ ವಿರುದ್ಧ ಕ್ರಮ ಕೈಗೊಳ್ಳಲು ಒಂದು ಥರದ ಮುಜುಗರ . ಕಾರಣ , ಅವರೂ ಅಂಥವರ ಮಧ್ಯೆಯೇ ಬೆಳೆದು ಬಂದಿರುತ್ತಾರೆ . ಯಾವುದೋ ಅದೃಷ್ಟದ ಬಾಗಿಲು ತೆರೆದು ಕುಲಪತಿಗಳಾಗಿರುತ್ತಾರೆ . ಹಾಗಾಗಿ ಅವರೂ ಏನೂ ಮಾಡಲಾಗದ ಸ್ಥಿತಿಯಲ್ಲಿರುತ್ತಾರೆ .
ಕೆಟ್ಟ ಕದಡಿದ ಮನಸ್ಸಿಂದ ಕೆಲಸ ಮಾಡಿದರೆ , ಅಥವಾ ಮಾತನ್ನಾಡಿದರೆ ಅವನನ್ನು ದುಃಖ ಹಿಂಬಾಲಿಸುವದು . ತಿಳಿಯಾದ ಒಳ್ಳೆಯ ಮನಸ್ಸಿನಿಂದ ಕೆಲಸ ಮಾಡಿದರೆ , ಅಥವಾ ಮಾತನ್ನಾಡಿದರೆ ಅವನನ್ನು ಸುಖ ಹಿಂಬಾಲಿಸುವದು ಎಂದಿಗೂ ಅಗಲದ ನೆರಳಿನ ಹಾಗೆ .
ಸಂಪದ ಇಲ್ಲದೆ ಒಂದು ಬೌದ್ಧಿಕ ಹರಿವಿನ ವಾಹಿನಿಯೇ ಕಡಿದುಹೋದಂತಾಗಿತ್ತು . ಈಗ ಮತ್ತೆ ಮನೆಗೆ ಮರಳಿದ ಭಾವ .
ನನ್ನದು ಅಲೇಮಾರಿ ಜೀವನ . ಶನಿವಾರ - ಭಾನುವಾರ ಬ೦ತೆ೦ದರೆ , ಸಕಲೇಶಪುರ , ಚಾರ್ಮಾಡಿ - ಶಿರಾಡಿ ಘಾಟು , ಬೆಟ್ಟ - ಗುಡ್ಡ , ಕಾಡು - ಮೇಡು ಅ೦ತೆಲ್ಲ ಸುತ್ತುತ್ತಾ ಇರುತ್ತೇನೆ . ಅಲ್ಲಿ ಹೋದಾಗಲೆಲ್ಲ ಆ ಕಾಡಿನ ಮೌನ , ನೀರಿನ ಜುಳು , ಬೆಟ್ಟಗಳ ಮೇಲೆ ಮುಸುಕಿರುವ ದಟ್ಟ ಮೋಡ - ಹೀಗೆ ನನ್ನನು ನಾನೆ ಮರೆಯುತ್ತೇನೆ . ಮು೦ದೆ೦ದಾರು ಪ್ರೀತಿ - ಪ್ರೇಮ ಅ೦ತ ಯೋಚಿಸಿದಾಗ , ನನ್ನವಳನ್ನು ಕರೆದುಕೊ೦ಡು ಇಲ್ಲಿ ಬರಬೇಕು . ಕೆಲಸದ ಜ೦ಜಡ , ಅಸ೦ಖ್ಯಾತ ಯೋಚನೆಗಳು , ಏನೊ ಧಾವ೦ತಗಳು - ಗಡಿಬಿಡಿಗಳು - ಇವೆಲ್ಲದರಿ೦ದ ದೂರ , ಈ ಕಗ್ಗಾಡಿನಲ್ಲಿ , ಗೊತ್ತು - ಗುರಿ ಇಲ್ಲದೆ , ಹೇಳುವವರು - ಕೇಳುವವರು ಇಲ್ಲದೆ , ಸುಮ್ಮನೆ ನಮ್ಮ ಪಾಡಿಗೆ ನಾವು ಇದ್ದುಬಿಡಬೇಕೆ೦ಬ ಆಸೆ .
ಮನೆಗೆ ಹೋದಮೇಲೆ ಹುಡುಗ ಅಪ್ಪನ ಹತ್ರ ನಡೆದಿದ್ದೆಲ್ಲಾ ಹೇಳ್ದ . ಅಪ್ಪ ನಕ್ಕ . ~ * ~ * ~ ಒಂದು ಹಳ್ಳಿ . ಅಲ್ಲೂ ಒಂದು ಶಾಲೆ . ಶಾಲೆ ಎಂದಮೇಲೆ ಬರೀ ಕಟ್ಟಡ ಅಷ್ಟೇ ಇರೊಕ್ಕಾಗುತ್ತಾ , ಮೇಷ್ಟ್ರು , ಮಕ್ಕಳು , ಅದು , ಇದು , ಅಂತ ಹೆಡ್ ಮಾಸ್ತರ್ ಇಂದ ಹಿಡಿದು ಬೋರ್ಡ್ ಅಳಿಸೋ ಡಸ್ಟರ್ ತನಕ ಎಲ್ಲವೂ ಇತ್ತು . ಸ್ಕೂಲ್ ಅಂದ ಮೇಲೆ ಮಾಡ್ಲಿಕ್ಕೆ ಇನ್ನೇನು ಕೆಲ್ಸ ಇರುತ್ತೆ , ಹೊತ್ತು ಕಳೀಲಿ ಅಂತ ಮೇಷ್ಟ್ರು ಪಾಠ ಮಾಡ್ತಿದ್ರು , ಮಕ್ಕಳೂ ಎದುರಿಗೆ ಕೂತಿದ್ರು , ಕೇಳಿಸ್ಕೊತಿದ್ರೋ ಇಲ್ವೋ ಅನ್ನೋದು ಬೇರೆ ವಿಷಯ . ಸರಿ ಇನ್ನೇನು ಹುಡುಗರು ನಿದ್ರಾಲೋಕಕ್ಕೆ ಹೊಗ್ತಿದ್ರೇನೋ ಅಷ್ಟರಲ್ಲೇ ಯಾವ್ದೋ ಊರಿಂದ ಸ್ಕೂಲ್ ಕಡೆ ಇನ್‍ಸ್ಪೆಕ್ಟರ್ ಸವಾರಿ ಬಂತು . ತಾವೂ ಎಚ್ಚರ ಆಗೋದಲ್ದೆ ಮೇಷ್ಟ್ರು ಹುಡುಗ್ರನ್ನೆಲ್ಲಾ ಎದ್ದೇಳಿಸಿದ್ರು . ಇನ್‍ಸ್ಪೆಕ್ಟರ್ ದು ಉಪಹಾರ , ಪಾನೀಯ , ವಿಶ್ರಾಂತಿ ಎಲ್ಲಾ ಮುಗಿತು . ಕ್ಲಾಸ್ ಕಡೆ ಬಂದ್ರು . ಆ ಸ್ಕೂಲಲ್ಲೇನು ಇನ್‍ಸ್ಪೆಕ್ಶನ್ ಇದ್ದಿಲ್ಲ , ಆದ್ರೆ ಗತ್ತು ತೋರಿಸುವುದಕ್ಕೆ , " ಮಕ್ಕಳೇ ನಿಮ್ಮ ತಿಳುವಳಿಕೆ ಎಷ್ಟಿದೆ ಅಂತ ಪರೀಕ್ಷೆ ಮಾಡ್ತಿನಿ . ನಾನು ಕೇಳೋ ಪ್ರಶ್ನೆಗೆ ಯಾರು ಒಳ್ಳೇ ಉತ್ತರ ಕೊಡ್ತಿರೋ ನೋಡೋಣ . " " ಮಾನವನ ಅತ್ಯದ್ಭುತ ಸೃಷ್ಟಿ ಯಾವುದು ? " ಅಂತ ಹುಡುಗ್ರನ್ನ ಪ್ರಶ್ನೆ ಕೇಳೋಕ್ಕೆ ಶುರು ಮಾಡಿದ್ರು . ಇವರು ಕೇಳೋದು ಇಂತಹ ಪ್ರಶ್ನೆನೇ , ಯಾಕಂದ್ರೆ ಅದಕ್ಕೆಲ್ಲಾ ನಿರ್ದಿಷ್ಟ ಉತ್ತರ ಇರೊಲ್ಲ . ಮಕ್ಕಳು ಹೇಳಿದ್ರಲ್ಲಿ ಒಂದು ಆರಿಸಿ ಕರೆಕ್ಟು ಅಂದ್ರೆ ಮುಗಿದ್ಹೋಯ್ತು . ಇಲ್ಲದ ತಲೆ ಓಡಿಸೋ ಪ್ರಮೇಯನೇ ಬರಲ್ಲ . ಎಷ್ಟೋಂದು ಹುಡುಗ್ರು ಕೈ ಎತ್ತಿದ್ರು . ಸರಿ ಇವ್ರೂ ಒಬ್ಬೊಬ್ರನ್ನೇ ಕೇಳ್ತಾ ಬಂದ್ರು . " ವಿಮಾನ ಸರ್ " ಅಂದ ಒಬ್ಬ . " ಸ್ಯಾಟಲೈಟ್ " ಅಂದ ಇನ್ನೊಂದ್ ಹುಡ್ಗ . ಉತ್ತರ ಹೇಳಿದವ್ರಿಗೆಲ್ಲಾ ' ಗುಡ್ ಗುಡ್ ' ಅಂತ ಹೇಳಿ ಕೂಡಿಸಿದ್ರು ಇನ್‍ಸ್ಪೆಕ್ಟರ್ರು . ಹಂಗೆ ಕಂಪ್ಯೂಟರ್ , ಮೊಬೈಲ್ , ರೋಬಟ್ , ಟೆಲಿಸ್ಕೋಪ್ , ಟಿವಿ ಅದು ಇದು ಅಂತ ಗೊತಿದ್ದೆಲ್ಲಾ ಹೇಳಿದ್ರು . ಇನ್‍ಸ್ಪೆಕ್ಟರ್ ಗುಡ್ ಅಂದ ತಕ್ಷಣ ಹುಡುಗ್ರಿಗೆ ಖುಶಿ . ಇವತ್ತು ಮನೆಗೆ ಹೋಗಿ ಹೇಳ್ಬೇಕಲ್ಲಾ , " ಇನ್‍ಸ್ಪೆಕ್ಟರ್ ಹತ್ರ ಶಹಭಾಸ್ ತೊಗೊಂಡೆ " ಅಂತ , ಅದಕ್ಕೆ . ಮೇಷ್ಟ್ರಿಗೂ ಒಳಒಳಗೆ ಸಂತೋಷ , ಹುಡುಗರ ಬುದ್ಧಿವಂತಿಕೆ ನೋಡಿ . ಇನ್‍ಸ್ಪೆಕ್ಟರ್ ಹಿಂಗೆ ಕಣ್ಣಾಡಿಸಿದ್ರು . ಉತ್ತರ ಹೇಳಿದವರೆಲ್ಲಾ ಇನ್ನೊಂದು ಸರ್ತೆ ಹೇಳೊಕ್ಕೆ ಕೈ ಎತ್ತಿದ್ದ್ರು . " ಸಾ ಸಾ , ನಾನು ಸಾ " ಅಂತ ಗಲಾಟೆ ಬೇರೆ . ಅಚಾನಕ್ಕಾಗಿ ಇವರ ಕಣ್ಣು ಕೊನೇ ಬೆಂಚಲ್ಲಿ ಕೂತಿದ್ದ ಹುಡುಗನ ಮೇಲೆ ಬಿತ್ತು . ಅವ್ನು ಎಲ್ಲರೂ ಹೇಳೋದನ್ನ ಗಮನ ಇಟ್ಟು ಕೇಳ್ತಿದ್ದ . ಆದ್ರೆ ಉತ್ತರ ಹೇಳೋಕೆ ಕೈ ಎತ್ತಿರ್ಲಿಲ್ಲ . ಇಂತಹ ಮಕೇಡಿಗಳನ್ನ ಕೇಳಿದ್ರೆ , ಕೊನೇಪಕ್ಷ ಮೇಷ್ಟ್ರನ್ನ ಬೈಯೊಕ್ಕೆ ಅವಕಾಶ ಸಿಗುತ್ತೆ ಅಂತ ಅನ್ಕೊಂಡು , " ಏ ಲಾಸ್ಟ್ ಬೆಂಚು , ನೀನೇ , ಎದ್ದೇಳು ಉತ್ತರ ಹೇಳು " ಅಂದ್ರು . ಆ ಹುಡುಗ ಧೈರ್ಯದಿಂದನೇ ಎದ್ದು ನಿಂತ . ಮುಖದಲ್ಲಿ ಒಂದು ಮಂದಹಾಸ ಇತ್ತು . ಸ್ವಲ್ಪ ಮೆಲ್ಲಗೇನೇ " ದೇವರು . . " ಅಂದ . ಇನ್‍ಸ್ಪೆಕ್ಟರ್‍ಗೆ ಸರಿಯಾಗಿ ಕೇಳ್ಲಿಲ್ಲ , " ಹಾ . . ? " ಅಂದ್ರು . ಈ ಸರ್ತಿ ಗಟ್ಟಿಯಾಗೇ ಆ ಹುಡ್ಗ " ದೇವ್ರು . . " ಅಂದ . ಇನ್‍ಸ್ಪೆಕ್ಟರ್‍ಗೆ ಸಿಟ್ಟು ಬಂತು . " ಖೋಡಿ , ನಿದ್ದಿ ಮಾಡ್ತಿದ್ದೇನು ? ನಾನು ಕೇಳಿದ್ದ್ ಪ್ರಶ್ನೆಗೆ ಉತ್ತರ ಕೊಡು " ಅಂದ್ರು . ಹುಡುಗ ಬೆಚ್ಚಿಬಿದ್ದ . ತೀರ ಸಣ್ಣ ಸ್ವರದಲ್ಲಿ , ಪಕ್ಕ ನಾಲ್ಕು ಬೆಂಚಿಗೆ ಕೇಳೋ ಹಾಗೆ , " ಸಾರ್ , ದೇವ್ರು . . " ಅಂದ . ಇನ್‍ಸ್ಪೆಕ್ಟರ್‍ಗಂತೂ ಸಿಟ್ಟು ನೆತ್ತಿಗೇರಿತು . ಏನೋ ಬೈಲಿಕ್ಕೆ ಬಾಯಿ ತೆರೆದಿದ್ದ್ರು ಅಷ್ಟ್ರಲ್ಲಿ ಆ ಹುಡ್ಗನ್ನ ಬಚಾವು ಮಾಡೋಣ ಅಂತ ಮೇಷ್ಟ್ರು ಮಧ್ಯ ಪ್ರವೇಶ ಮಾಡಿದ್ರು . " ಸರ್ , ನಮ್ಮ ಸ್ಕೂಲ್ ಜವಾನ ರಾಮಯ್ಯ , ಅದೇ ಅವಾಗ ತಿಂಡಿ ತಂದು ಕೊಟ್ನಲ್ಲಾ , ಅವ್ನ ಮಗ ಸರ್ ಇವ್ನು . ಓದ್ನಲ್ಲೆಲ್ಲಾ ಚೆನ್ನಾಗೇ ಇದಾನೆ . ಏನೋ ಪ್ರಶ್ನೆ ಕೇಳಿಸಿಲ್ಲ ಅನ್ಸುತ್ತೆ " ಅಂದು ಹುಡುಗನ ಕಡೆ ತಿರುಗಿದ್ರು . " ಅಲ್ಲಪ್ಪ , ಮಾನವನನ್ನ ಸೃಷ್ಟಿ ಮಾಡಿದ್ದು ಯಾರು ಅಂತ ಅಲ್ಲ ಇವ್ರು ಕೇಳಿದ್ದು , ಮಾನವನ ಅತ್ಯದ್ಭುತ ಸೃಷ್ಟಿ ಯಾವ್ದು ಅಂತ ಕೇಳಿದ್ದು " ಅಂದ್ರು . ಹುಡುಗ ಇದ್ದ ಬದ್ದ ಶಕ್ತಿ ಎಲ್ಲಾ ಸೇರಿಸಿ , " ಅದೇ ಸರ್ , ದೇವ್ರು . . ಹಂಗೇ ನಮ್ಮಪ್ಪ ಹೇಳ್ಕೊಟ್ಟಿರೋದು " ಅಂದ . ಕೈಗೆ ಸಿಕ್ಕ ಅವಕಾಶನಾ ಇನ್‍ಸ್ಪೆಕ್ಟರ್ ಬಿಡ್ತಾರಾ , ಮೇಷ್ಟ್ರನ್ನ ಸರಿಯಾಗಿ ದಬಾಯಿಸಿದ್ರು . ಮಕ್ಕಳಿಗೆ ಬರೇ ಪುಸ್ತಕದಲ್ಲಿರೋದನ್ನ ಹೇಳಿದ್ರೆ ಸಾಕಾಗಲ್ಲ . ಲೋಕ ಜ್ಞಾನನೂ ತಿಳಿಸ್ಬೇಕು . ನೀವು ಸರಿಯಾಗಿದ್ದಿದ್ರೆ , ಹುಡುಗ್ರು ಹಿಂಗೆಲ್ಲಾ ಅಸಂಬದ್ಡ ಉತ್ತರಗಳನ್ನೆಲ್ಲಾ ಕೊಡಲ್ಲ , ಹಾಗೆ , ಹೀಗೆ ಅಂತೆಲ್ಲಾ ಪ್ರವಚನ ಬಿಗಿದು , ಕರೆಕ್ಟಾಗಿ ಬಸ್ ಬರೋ ಟೈಮ್ ಆಗಿದ್ದು ನೋಡಿ ಎದ್ದು ಹೋದ್ರು . ಅವ್ರು ಹೋದಮೇಲೆ " ಏನು ತಿರುಗಾಮರುಗಾ ಅದನ್ನೇ ಹಿಡ್ಕೊಂಡಿದಿಯಾ ? ರೈಲೋ , ರಾಕೆಟ್ಟೋ ಏನೋ ಒಂದು ಬೊಗಳಿ ಕುತ್ಕೋಳಕ್ಕ ಬರ್ತಿದ್ದಿಲ್ಲೇನು . ನಿನ್ನಂತವರು ಒಬ್ರು ಸಾಕು , ನನ್ನ ಪ್ರಾಣ ತೆಗಿಯೋಕೆ " ಅಂತ ಮೇಷ್ಟ್ರು ಆ ಹುಡುಗನಿಗೆ ಮಹಾ ಮಂಗಳಾರತಿಯೇ ಮಾಡಿದ್ರು . ಜೊತೆಗೆ ಪ್ರಸಾದ ಬೇರೆ , ಬೆತ್ತದಿಂದ . ~ * ~ * ~ ಮನೆಗೆ ಹೋದಮೇಲೆ ಹುಡುಗ ಅಪ್ಪನ ಹತ್ರ ನಡೆದಿದ್ದೆಲ್ಲಾ ಹೇಳ್ದ . ಅಪ್ಪ ನಕ್ಕ .
ಮೊನ್ನೆ ' ಮುಕ್ತ ಮುಕ್ತ ' ಶೂಟಿಂಗ್ ನಲ್ಲಿ ಕಣ್ಣಿಗೆ ಎರಡು ಹನಿ ಗ್ಲಿಸರಿನ್
Winter is my favorite time of the year . ತುಂಬ ಅಪ್ತವಾಗಿದೆ ನಿಮ್ಮ ಬರಹ . ಮುಂಬೈನಿಂದ ಮದುವೆಯಾಗಿ direct ಕೊಪ್ಪಕ್ಕೆ ( ಶ್ರಿಂಗೇರಿ ಬಳಿ ) ಬಂದಾಗ ಹೀಗೆ ಚಳಿ . ಕಂಬಳಿ ಹೊದ್ದುಕೊಂಡು ಡಿಗ್ರೀ ಪರೀಕ್ಷೆಗೆ ಓದುತ್ತಿದ್ದ ನೆನಪು ಬಂತು . : - ) ಮಾಲತಿ ಎಸ್ .
ಚಂದ್ರ ಗೊತ್ತು , ಇಲ್ಲೂ ಒಬ್ಬನಿದ್ದಾನೆ ! ಉಳಿದಿದ್ದೆಲ್ಲಾ ಕರ್ಟ್ಲಿ ಆಂಬ್ರೋಸ್ ಬೌನ್ಸರ್ ಹಾಕಿದ ಹಾಗಿದೆ : - )
ನನ್ನ ಕನ್ನಡದ ಬರವಣಿಗೆಯೇನಿದ್ದರೂ ಬರೀ ಕವನಗಳಿಗಷ್ಟೇ ಅನ್ನುವ ಮನೋಭಾವವಿದ್ದ ನಾನು ಮೊದ ಮೊದಲು ಬರೆದು ಹಾಕಿದ ಬರಹಗಳನ್ನ ಸಂಪದಿಗರು ಓದಿ ಹಂಚಿಕೊಂಡ ಪ್ರತಿಕ್ರಿಯೆಗಳನ್ನ ನೋಡಿ " ಅರೆ ! ವಾವ್ ನಾ ಕೂಡಾ ಬರೆಯಬಹುದು " ಅನ್ನುವ " ಸಂತಸ , ಕುತೂಹಲ ಮತ್ತು ಕಾನ್ಫ಼ಿಡೆನ್ಸ್ " ಮೂಡಿಸಿದ್ದು ಸಂಪದ : )
ನಾಟಕಕಾರನೋ , ಕವಿಯೋ , ಪ್ರಬಂಧಕರ್ತೃವೋ , ಯಕ್ಷಗಾನ ಕಲಾವಿದನೋ , ಟೀಕಾಕಾರನೋ , ಚಲನಚಿತ್ರ ನಿರ್ದೇಶಕನೋ , ನಟನೋ , ನಟಿಯೋ , ವರ್ತಕನೋ , ರಾಜಕಾರಣಿಯೋ , ಅಥವಾ ಯಾವುದೇ ವಿಶೇಷಣವಿಲ್ಲದ ಸಾಮಾನ್ಯ ಪ್ರಜೆಯೋ , ಯಾರೇ ಇರಲಿ , ಬರಲಿ ಇಂತಹ ಸಂದರ್ಶನಗಳು ! ಎಲ್ಲರ ಅಭಿಪ್ರಾಯಗಳನ್ನು ಆಲಿಸೋಣ , ಅರಿಯೋಣ , ಅವರಿಂದ ಕಲಿಯಲು ಏನಾದರೂ ಇದ್ದರೆ ಕಲಿಯೋಣ ! ಇದರಿಂದ ನಮ್ಮ ಅರಿವು ಹೆಚ್ಚುವುದೇ ಹೊರತು ಕುಂದುವುದಿಲ್ಲ !
4ನೇ ಸುತ್ತಿಗೆ ಪ್ರವೇಶಿಸಿದ ಫೆಡರರ್ , ಶರಪೋವಾ 6 months ago ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಅಮೋಘ ಓಟ ಮುಂದುವರಿಸಿರುವ ಸ್ವಿಜರ್ಲೆಂಡ್ ರೋಜರ್ ಫೆಡರರ್ ಮತ್ತು ರಷ್ಯಾದ ಮರಿಯಾ ಶರಪೋವಾ ನಾಲ್ಕನೇ . . .
ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದಾಗ ಮಾಡಿದ ಮತ್ತೊಂದು ಸ್ತುತ್ಯಾರ್ಹ ಕೆಲಸವೆಂದರೆ ಭಾರತ ಸರ್ಕಾರದ ಪ್ರಕಟಣ ವಿಭಾಗ ಹೊರತಂದಿರುವ ಗಾಂಧೀಜಿಯವರ ಇಡೀ ಬರಹ , ಭಾಷಣಗಳನ್ನು ಒಳಗೊಂಡ ಕಲೆಕ್ಟ್ ವರ್ಕ್ಸ್ ಆಫ್ ಮಹಾತ್ಮಗಾಂಧಿ ಹೆಸರಿನ ನೂರು ಸಂಪುಟಗಳನ್ನು ಕನ್ನಡದಲ್ಲಿ ಅನುವಾದಿಸಿ ಪ್ರಕಟಿಸುವ ಭಾರತೀಯ ವಿದ್ಯಾಭವನದ ಯೋಜನೆಗೆ ಬೆಂಬಲ ನೀಡಿ ಧನಸಹಾಯ ಒದಗಿಸಿದುದಾಗಿದೆ . ಗಾಂಧೀಜಿ ಪ್ರತಿಪಾದಿಸಿದ ಮೌಲ್ಯಗಳನ್ನು ಬಿಂಬಿಸುವ ಈ ಕೃತಿಗಳು ಕನ್ನಡಿಗರಿಗೆ ದೊರೆಯುವಂತಾಯಿತು .
ಇಷ್ಟಕ್ಕೂ ಈ ' ಸ್ಲಂ ಡಾಗ್ ' ಕಾಲದಲ್ಲಿ ಹಳೆಯ ' ಶೌರ್ಯ ' ದ ಬಗ್ಗೆ ಬೊಗಳಿದ್ದಕ್ಕೆ ಕ್ಷಮೆ ಇರಲಿ .
ಇಲ್ಲಿ ಹೋದರೆ ಸಮಯ , ಮನೆ , ಕೆಲಸ , ಕೊನೆಗೆ ಪಕ್ಕದಲ್ಲಿರುವ ಹೆಂಡತಿ ಎಲ್ಲವೂ ಮರೆತೇ ಹೋಗುತ್ತದೆ . ಕೇರಳ ಸರಕಾರ ಅನುಮತಿ ಕೊಟ್ಟರೆ ಅಲ್ಲೇ ಸಣ್ಣದೊಂದು ಗುಡಿಸಲು ಕಟ್ಟಿಕೊಂಡು ಇದ್ದುಬಿಡೋಣ ಅನಿಸುವಷ್ಟು ಚೆಂದಗಿದೆ ಆ ಸ್ಥಳ .
ಮಾನುಷ ಪ್ರಕೃತಿಗೆ ಸಂಬಂಧಿಸಿದ ವಸ್ತು ಲೋಕದ ಹಲ ರೀತಿಯ ಕ್ರಮಗಳಿಗೆ ಸಂಬಂಧಿಸಿದುದು . ನಾಟ್ಯಶಾಸ್ತ್ರದಲ್ಲಿ ಇದನ್ನೇ ಹೇಳಿದೆ . ಅದರ ಕುರಿತು ಯೋಚನೆಗಳು ಬರುತ್ತಿರುತ್ತವೆ . ಯೋಗ್ಯ ಶಾಸ್ತ್ರ ಅಥವಾ ಯುದ್ಧೋನ್ಮುಖವಾದ ಹಲವು ಪರಿಚ್ಛೇದಗಳಿವೆ . ಇದರಲ್ಲಿರುವ ಕೆಲವು ವಿಷಯಗಳ ವಿವೇಚನೆಯಿಂದ ನಾಟ್ಯಕ್ಕೆ ಹೊಸ ರೂಪ ಕೊಡುವುದು ಸಾಧ್ಯವಿಲ್ಲವೇ ? ಈಗೀಗ ಕೆಲವು ನರ್ತಕರು ತಮ್ಮ ಯೋಚನೆಗಳನ್ನು ನಾಟ್ಯರಂಗದಲ್ಲಿ ತರಲು ಯೋಚಿಸಿದ್ದುಂಟು . ಇತರ ರೀತಿಯ ಕಲೆಗಳು ಬಾಂಧವ್ಯ ಪಡೆದು ಅದಕ್ಕೆ ಸರಿಯಾದ ಸಂಗೀತವನ್ನು ಪ್ರಯೋಗಿಸಿದದ್ದೂ ಇದೆ . ಈ ರೀತಿಯ ಬದಲಾವಣೆಗಳು ಈ ನಾಟ್ಯಕಲೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಬಲ್ಲುದು .
ನಮ್ಮ ಅಕ್ಕರೆಯ ಆಸರೆ ಬೇಕು : ಹಾಗಾಗಿ ಅವುಗಳ ಬದುಕಿಗೆ ನಮ್ಮ ಆಸರೆ ಅನಿವಾರ್ಯ . ಮನೆ ಅಂಗಳದಲ್ಲಿ ಗುಚ್ಛವಾಗಿ ಬೆಳೆಯುವ ನಾಲ್ಕಾರು ಹೂವಿನ ಗಿಡ ( ಉದಾಹರಣೆಗೆ ದಾಸವಾಳ ) ನೆಡಿ . ಕಾರ್ಬೋಹೈಡ್ರೇಟ್ ಹೆಚ್ಚಿರುವ ಗಿಡಗಳಿಗೆ ಇರುವೆ ಮುತ್ತುವುದು ಸಾಮಾನ್ಯ . ಹಾಗಾಗಿ , ಕರಿಬೇವು , ನಿಂಬೆಹಣ್ಣು , ಚೆರ್ರಿ ಗಿಡ ( ಲಾಭ ಎರಡು ! ) ಅಥವಾ ಗಿಡ ಬೇಲಿ ಮೊರೆ ಹೋಗುವುದೂ ಅಡ್ಡಿ ಇಲ್ಲ . ಆ ಗಿಡಗಳಲ್ಲಿ ಮಣ್ಣಿನ ಅಥವಾ ಬಿದಿರಿನ ಪಕ್ಷಿಯ ಊಟದ ತಟ್ಟೆ - ' ಬರ್ಡ್ ಫೀಡರ್ಸ್ ' ತೂಗುಬಿಟ್ಟು ಒಂದು ಹಿಡಿ ಕಾಳು ಹಾಕಿಡಿ . ಆ ಪದಾರ್ಥಗಳಿಗೆ ಇರುವೆ ಮುತ್ತದಂತೆ ಜಾಗ್ರತೆ ವಹಿಸಿ . ಗಿಡದ ಬುಡದಲ್ಲಿ ಅಥವಾ ಮನೆ ಅಂಗಳದಲ್ಲಿ ಬಾನಿ , ಹೊಂಡ ಅಥವಾ ಮನೆಯ ತಾರಸಿಯ ಮೇಲೆ ಅಗಲವಾದ ಬಾಯಿಯಿರುವ ಮಣ್ಣಿನ ಕುಡಿಕೆಗಳಲ್ಲಿ ನೀರು ತುಂಬಿಸಿ ಇಡಿ . ಬೇಸಿಗೆಯಲ್ಲಿ ಅವುಗಳಿಗೆ ಜೀವ ಬಂದಂತಾಗುತ್ತದೆ . ಮನೆಯ ಸುತ್ತಲೂ ಬಿದರಿನ ಬುಟ್ಟಿ , ಮಣ್ಣಿನ ಪಕ್ಷಿ ಮನೆಗಳನ್ನು ಅಥವಾ ತಗಡಿನ ಡಬ್ಬಿಗಳನ್ನು ಕಟಿ ತುಸು ಭತ್ತದ ಹುಲ್ಲು ಹಾಸಿಡಿ . ಹಾಗೆ ಮಾಡುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ .
ಕ್ರಿಕೆಟ್ ಮೈದಾನದ ಸಭ್ಯಸ್ಥನೊಬ್ಬ ಅಕ್ಷರಶಃ ಪುನಃ ಗರ್ಜಿಸಿದ್ದಾನೆ . ಮೊನ್ನೆ ತಾನೆ ಸಚಿನ್ ದಾಖಲಿಸಿದ ಅಪರೂಪದ ದ್ವಿಶತಕದ ಪರಿಗೆ ಉತ್ತಮವೆನ್ನಬಹುದಾದ ದಕ್ಷಿಣ ಆಫ್ರಿಕಾದ ಬೌಲಿಂಗ್ ನುಚ್ಚುನೂರಾಗಿದೆ . ಇದರೊಂದಿಗೆ ` class is always class ' ಎಂಬ ನುಡಿಗಟ್ಟು ಸಂಪೂರ್ಣ ಸತ್ಯ ಎಂಬುದಕ್ಕೆ ಪುನಃ ಪುರಾವೆ ದೊರಕಿದೆ ! . ಶತಕ ಗಳಿಸುವುದು ಈತನಿಗೆ ಯಾಂತ್ರಿಕ ಎನ್ನುವಷ್ಟು ಸುಲಭವಾದರೂ ಗ್ವಾಲಿಯರ್ ನಲ್ಲಿ ಸಚಿನ್ ಕಟ್ಟಿದ ಇನ್ನಿಂಗ್ಸ್ ನ ಸೌಂದರ್ಯವೇ ಮತ್ತೊಂದು ಲೋಕದ್ದಾಗಿತ್ತು . ಕಳೆದ ಕೆಲ ವರ್ಷಗಳಲ್ಲಿ ಸಚಿನ್ ಬ್ಯಾಟಿನಿಂದ ರನ್ ಮಳೆ ಹರಿಯುತ್ತಿದ್ದರೂ ಅವುಗಳಲ್ಲಿ ಕಾವ್ಯದ ಅಂಶ ಕಡಿಮೆಯಾಗಿ ಗದ್ಯದ ಅಂಶವೇ ಹೆಚ್ಚು ವಿಜೃಂಭಿಸತೊಡಗಿತ್ತು . ಹಿಂದಿನಂತೆ ಈತ ಅಧಿಕಾರಯುತವಾಗಿ ಬ್ಯಾಟ್ ಬೀಸಿ ತನ್ನ ಅಧಿಪತ್ಯ ಸ್ಥಾಪಿಸುವುದು ಕಡಿಮೆಯಾಗಿತ್ತು . ಈಗೇನಿದ್ದರೂ ನಿಧಾನವಾಗಿ , ಒಂದಾದ ಮೇಲೊಂದು ಇಟ್ಟಿಗೆ ಜೋಡಿಸಿದಂತೆ ಸಚಿನ್ ತನ್ನ ಇನ್ನಿಂಗ್ಸ್ ಕಟ್ಟತೊಡಗಿದ್ದ . ಈತನ ಬ್ಯಾಟಿಂಗ್ ಅಬ್ಬರದ ದಿನಗಳು ಮುಗಿದವು ಎಂಬುದು ಸೂಕ್ಷ್ಮ ವಿಶ್ಲೇಷಕರ ಅಭಿಪ್ರಾಯವೂ ಆಗಿತ್ತು . ಇದು ಸಹಜ ಕೂಡಾ . ಏಕೆಂದರೆ ಸತತವಾಗಿ ಇಪ್ಪತ್ತು ವರ್ಷಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ಯಾರಿಂದಲೂ ಒಂದೇ ದರ್ಜೆಯ , ಕಾವ್ಯಾತ್ಮಕ ಇನ್ನಿಂಗ್ಸ್ ಅನ್ನು ಬಯಸುವುದು ವೀಕ್ಷಕರ ತಪ್ಪು ಅಪೇಕ್ಷೆಯೇ ಸರಿ !
ಕೆಲಸ ನಡೆಯುತ್ತಲೇ ಇದ್ದರೂ ಅಮ್ಮನ ಬಗ್ಗೆ ಆರಂಭವಾದ ಯೋಚನೆ ಮಾತ್ರ ನಿಲ್ಲಲಿಲ್ಲ . ಇತ್ತೀಚೆಗೆ ಕರೆ ಮಾಡಿದಾಗ ಅಮ್ಮ ಸ್ವಲ್ಪ ಹಿಂಜರಿಕೆಯಿಂದಲೇ ' ನಿಂಗೇನೋ ಹೇಳ್ಬೇಕಿತ್ತು , ನೀನು ಕೋಪ ಮಾಡ್ಕೋಬಾರ್ದು ' ಅಂದಳು . ಮಗಳು ಏನಪ್ಪಾ ವಿಷಯ ಅಂದುಕೊಳ್ಳುತ್ತಲೇ " ಇಲ್ಲ , ಕೋಪ ಮಾಡ್ಕೊಳ್ಳುವುದಿಲ್ಲ , ಏನು ಹೇಳು " ಅಂದಳು . " ಅಪ್ಪ ನಿಂಗೆ ಅಂತ ಚಿನ್ನ ತೆಗೆದಿದ್ದಾರೆ , ನಿನ್ನ ಮದುವೆಯಲ್ಲಿ ಕೊಡಲಿಕ್ಕಾಯಿತು ಅಂತ . . . ನಲುವತ್ತು ಸಾವಿರ ಆಯ್ತು . . . "
ಕಾಸರಗೋಡು : ವೀಸಾ ಅವಧಿ ಮುಗಿದರೂ ಇಲ್ಲೇ ಇದ್ದ ವಿದೇಶಿಯನ ವಿರುದ್ಧ ಆರೋಪ
ಶೇ . ೧೦೦ರಷ್ಟು ಬ್ರೇಕ್ ಸರಿ ಇದ್ದರೆ ಮಾತ್ರ ರೈಲು ಬಿಡಬೇಕು . ಘಾಟಿ ಇಳಿಯುವಾಗ ೩ ಎಂಜಿನ್‌ಗಳನ್ನು ಮುಂದೆ ಇರಿಸಿದ್ದರೂ ರೈಲು ನಿಯಂತ್ರಣಕ್ಕೆ ಬಾರದಿದ್ದಲ್ಲಿ ನಿಲ್ಲಿಸಲೆಂದು ೨ ನಿಲ್ದಾಣಗಳಲ್ಲಿ ಕ್ಯಾಚ್ ಸ್ಲೈಡಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ . ಘಾಟಿಯಲ್ಲಿರುವ ಎಲ್ಲ ನಿಲ್ದಾಣಗಳನ್ನೂ ಇದನ್ನು ನಿರ್ಮಿಸಬೇಕಿದೆ . ಅಕಸ್ಮಾತ್ ರೈಲು ಬ್ರೇಕು ಸರಿಯಾಗಿ ಹಿಡಿಯದೇ ಇದ್ದಲ್ಲಿ ಕ್ಯಾಚ್ ಸ್ಲೈಡಿಂಗ್ ಹಳಿಯಲ್ಲಿ ಹೋಗಿ ಉಸುಕಿನಲ್ಲಿ ಹುಗಿಯುತ್ತದೆ . . ಇದರಿಂದ ಎಂಜಿನ್ ಮತ್ತು ಮೊದಲೆರಡು ಭೋಗಿಗೆ ಕೊಂಚ ಹಾನಿಯಾಗಬಹುದು . ಉಳಿದವುಗಳಿಗೆ ಏನೂ ಹಾನಿಯಿಲ್ಲ .
ಗ್ಲ್ಯಾನ್‌ಸ್ಲಾಮ್‌ಗಳೆಂದರೆ ಒಬ್ಬ ಆಟಗಾರ ತನಗಾಗಿ , ವೈಯಕ್ತಿಕ ಸಾಧನೆಗಾಗಿ ಆಡುವ ಟೂರ್ನಿ . ಅಲ್ಲಿರುವ ಹಣದ ಪ್ರಮಾಣ ಕೂಡ ಪ್ರಮುಖ ಪ್ರೇರಣೆಯಾಗಿರುತ್ತದೆ . ಪೀಟ್ ಸ್ಯಾಂಪ್ರಾಸ್ ಎಷ್ಟೇ ಒಳ್ಳೆಯ ಟೆನಿಸ್ ಆಟಗಾರನಾಗಿದ್ದರೂ ದೇಶಕ್ಕಾಗಿ ಆಡುವ ಡೇವಿಸ್ ಕಪ್ ಎಂದರೆ ದೂರ ಉಳಿಯುತ್ತಿದ್ದರು . ವೃತ್ತಿಪರ ಟೆನಿಸ್‌ನಲ್ಲಿ ಇಪ್ಪತ್ತೊಂದನೇ ವರ್ಷಕ್ಕೆ ಕಾಲಿಟ್ಟಿದ್ದರೂ ಏಕೆ ಡೇವಿಸ್ ಕಪ್ ಎಂದರೆ ಈಗಲೂ ಪ್ರಾಣವನ್ನೇ ಪಣಕ್ಕಿಟ್ಟಂತೆ ಆಡುತ್ತೀಯಾ ? ಎಂದು ಕಳೆದ ವಾರವಷ್ಟೇ ಕೇಳಿದಾಗ , " For me , nothing can beat the experience of representing the country . I ' d still choose an Olympic or Commonwealth Games medal over winning a few more Grand Slams . My responsibility to my captain and to a billion people is more than what it is to just me , when I play professionally on the Tour , " ಎಂದಿದ್ದಾರೆ ಪೇಸ್ . ಆತ ತನ್ನ ಸಾಮರ್ಥ್ಯ ಮೀರಿ ಪ್ರದರ್ಶನ ನೀಡಿರುವುದೆಲ್ಲ ಒಲಿಂಪಿಕ್ ಹಾಗೂ ಡೆವಿಸ್ ಕಪ್‌ನಲ್ಲೇ . ಗೊರಾನ್ ಇವಾನಿಸೆವಿಚ್ ಹಾಗೂ ದಕ್ಷಿಣ ಆಫ್ರಿಕಾದ ವೆಯ್ನ್ ಫೆರಿರಾ ಅವರನ್ನೂ ಮಣಿಸಿದ್ದಾರೆ . ೨೦೦೪ , ಫೆಬ್ರವರಿಯಲ್ಲೂ ಅಂತಹದ್ದೇ ಅತಿಮಾನುಷ ಪ್ರದರ್ಶನ ತೋರಿದ್ದರು . ನ್ಯೂಜಿಲ್ಯಾಂಡ್‌ನ ಇನ್ವರ್‌ಕಾರ್ಗಿಲ್‌ನಲ್ಲಿ ಕೊರೆಯುವ ಚಳಿ . ಭಾರತೀಯ ಆಟಗಾರರು ಮೈದಾನಕ್ಕಿಳಿಯುವುದೇ ಸಾಹಸವೆನಿಸತೊಡಗಿತ್ತು . ಅಲ್ಲಿದ್ದ ಪರಿಸ್ಥಿತಿ , ಇನ್ನೂ ಚೇತರಿಸಿಕೊಳ್ಳುತ್ತಿದ್ದ ಲಿಯಾಂಡರ್ ದೇಹಸ್ಥಿತಿಯನ್ನು ನೋಡಿದ್ದ ಎಂಥವರಿಗೂ ಭಾರತ ಡೇವಿಸ್ ಕಪ್‌ನಲ್ಲಿ 1 - 1 ಸಮಬಲ ಸಾಧಿಸಿದರು . ನಂತರ ಡಬಲ್ಸ್‌ನಲ್ಲಿ ಮಹೇಶ್ ಭೂಪತಿ ಜತೆಗೂಡಿ 2 - 1 ಮುನ್ನಡೆ ಸಾಧಿಸಿದರಾದರೂ ರಿವರ್ಸ್ ಸಿಂಗಲ್ಸ್‌ನಲ್ಲಿ ಭಾರತದ ವಿಶಾಲ್ ಪುನ್ನಾ ಅವರು ನೀಲ್ಸನ್‌ಗೆ ಮಣಿಯುವುದರೊಂದಿಗೆ ನ್ಯೂಜಿಲ್ಯಾಂಡ್ 2 - 2 ಸಮಗೌರವ ಪಡೆಯಿತು . ಎರಡನೇ ರಿವರ್ಸ್ ಸಿಂಗಲ್ಸ್‌ನಲ್ಲಿ ಗೆದ್ದರಷ್ಟೇ ಭಾರತ ವಿಶ್ವಗುಂಪಿಗೆ ತೇರ್ಗಡೆಯಾಗುವುದು ಎಂಬಂತಾಯಿತು . ಅಂತಹ ಸಂದಿಗ್ಧ ಸನ್ನಿವೇಶದಲ್ಲಿ ಪೇಸ್ ಮತ್ತೆ ಮೈದಾನಕ್ಕಿಳಿದರು ! ಸಿಮೋನ್ ರಿಯಾ ವಿರುದ್ಧದ ಆ ಪಂದ್ಯದಲ್ಲಿ 3 - 6ಅಂತರದಿಂದ ಪೇಸ್ ಮೊದಲ ಸೆಟ್ ಕಳೆದುಕೊಂಡರು . ಭಾರತದ ಆತಂಕ ಹೆಚ್ಚಾಗತೊಡಗಿತು . ಆದರೇನಂತೆ ಮುಂದಿನ ಮೂರು ಸೆಟ್‌ಗಳನ್ನು 7 - 5 , 6 - 3 . 6 - 3ರಿಂದ ಗೆದ್ದ ಪೇಸ್ ಭಾರತ ಮತ್ತೆ ವರ್ಲ್ಡ್ ಗ್ರೂಪ್‌ಗೆ ತೇರ್ಗಡೆಯಾಗುವಂತೆ ಮಾಡಿದರು . ನೀವೊಬ್ಬ ಟೆನಿಸ್ ಪ್ರೇಮಿಯಾಗಿದ್ದರೆ ಖಂಡಿತ ಆ ಪಂದ್ಯವನ್ನು ಮರೆತಿರುವುದಿಲ್ಲ . ಮತ್ತೊಬ್ಬ ಖ್ಯಾತ ಭಾರತೀಯ ಟೆನಿಸ್ ತಾರೆ ಮಹೇಶ್ ಭೂಪತಿ ಕೂಡ ೧೨ ಗ್ರ್ಯಾನ್ ಸ್ಲಾಮ್ ಗೆದ್ದಿದ್ದಾರೆ . ಆದರೆ ನಮ್ಮ ಮನಸ್ಸಿಗೆ ಹತ್ತಿರವಾಗುವುದು , ನಾವು ಭಾವುಕರಾಗುವುದು ಲಿಯಾಂಡರ್ ಪೇಸ್ ವಿಷಯದಲ್ಲಿ ಮಾತ್ರ .
ಊಳಿಗಮಾನ್ಯ ಕೃಷಿ ಸಂಸ್ಕೃತಿ ಈಗ ನಮ್ಮ ನಾಡಿನಿಂದ ಮಾಯವಾಗಿರಬಹುದು . ಆದರೆ ಅದಕ್ಕಿಂತ ಭಯಂಕರವಾದ ' ಹಣ ಸಂಸ್ಕೃತಿ ' ನಮ್ಮ ಸಮಾಜದ ಸತ್ವವನ್ನು ಹಿಂಡಿ ಹಾಕಿದೆ . ಈ ಸಂಸ್ಕೃತಿಯಲ್ಲಿ ಉಳ್ಳವರು ಅನೈತಿಕ ಬಕಾಸುರರಾಗಿದ್ದರೆ , ಇಲ್ಲದವರು faceless zombieಗಳಾಗಿದ್ದಾರೆ . ತಮ್ಮ ಕತೆಗಳ ಮೂಲಕ ಅಮರೇಶ ನುಗಡೋಣಿಯವರು ಈ ದುಷ್ಟ ಸಂಸ್ಕೃತಿಯ ಮುಖಕ್ಕೆ ಕನ್ನಡಿ ಹಿಡಿದಿದ್ದಾರೆ .
ಎಲ್ಲ ಓದುಗರಿಗೂ ಮತ್ತು ಅವರುಗಳ ಬಂಧು ಬಾಂಧವರಿಗೂ ದೀಪಾವಳಿಯ ಶುಭಾಶಯಗಳು .
ಆ ಅಲೆಯನ್ನು ಕಂಡ ಕಣ್ಣುಗಳು , ಅದರ ವಿರಾಠಸ್ವರೂಪವನ್ನು ಕಂಡು , ಬೆರಗಾಗಿ ಅದರ ವೈಶಾಲ್ಯತೆಗೆ , ಶಕ್ತಿಗೆ , ತಲೆದೂಗಲಿಲ್ಲ . ಏಕೆಂದರೆ ಅದನ್ನು ನೋಡುತ್ತಿದ್ದ ಕಣ್ಣುಗಳು , ಸಾಗಿಬರುತ್ತಿರುವ ಮೃತ್ಯುವನ್ನು ಕಾಣುತ್ತಿರುವ ಕಳಿಂಗ ಸೈನ್ಯದ ಕಣ್ಣುಗಳಾಗಿದ್ದವು . ಅಶೋಕನು ಕಳಿಂಗದ ಮೇಲೆ ದಂಡೆತ್ತಿ ಬಂದಿದ್ದ , ಮೌರ್ಯ ಸಮ್ರಾಜ್ಯ ಪಶ್ಚಿಮದ ಗಾಂಧಾರದ ಪರ್ವತಗಳಿಂದ , ಪೂರ್ವದ ಕರಾವಳಿಯವರೆಗೆ ಹಬ್ಬಿರಬೇಕೆಂಬ ಮಹತ್ವಾಕಾಂಕ್ಷೆ ಕೈಗೂಡುವುದರಲ್ಲಿತ್ತು .
ನಾನಾ ಭಾವೋಪ ಸಂಪನ್ನಂ ನಾನಾ ಅವಸ್ಥಾಂತರಾತ್ಮಕಂ ಲೋಕ ವೃತ್ತಾನು ಕರಣಂ ನಾಟ್ಯಮೇತನ್ಮಯಾಕೃತಂ ಕುತೋವಾ ನೂತನಂ ವಸ್ತು ಅಯಂ ಉತ್ಪ್ರೇಕ್ಷಿತಾಂಕ್ಷಮಾಃ ವಸ್ತ ವೈನ್ಯಾಸ ವೈಚಿತ್ರ್ಯಂ ಮಾತ್ರ ಮತ್ರ ವೈಚಾರ್ಯತಾಂ - - ಜಯಂತ ಭಟ್ಟ ಸರ್ವೇ ನವ ಇವಾ ಭಾಂತಿ ಮಧುಮಾಸ ಇವ ಧೃಮಾಃ - ಆನಂದವರ್ಧನ
ಚಿಕ್ಕಮಗಳೂರು ಜ್ಲಿಲೆ ಸಖರಾಯಪಟ್ಟಣ ಪ್ರದೇಶಕ್ಕೇ ಒಂದು ಅವಧೂತತನದ ಶಕ್ತಿ ಇದೆ . ಆಧ್ಯಾತ್ಮವನ್ನು ಗ್ರಾಮೀಣ ಭಾಷೆಯ್ಲಲಿ ವಿವರಿಸಿ ರೈತರ ಮನ ಗ್ದೆದ್ದಿದ ಮುಕುಂದೂರುಸ್ವಾಮಿಗಳು ಓಡಾಡಿದ ಇದೇ ಸ್ಥಳದ್ಲಲಿ ಕೆ . ವೆಂಕಟಾಚಲಯ್ಯ ( ೭೦ ) ಎಂಬ ಆಧ್ಯಾತ್ಮಜ್ಯೋತಿ ಹಲವು ವರ್ಷಗಳ ಕಾಲ ದೇದೀಪ್ಯಮಾನವಾಗಿ ಬೆಳಗಿತ್ತು . ಕಳೆದ ಶನಿವಾರ ( ಜುಲೈ ೩೧ ) ಅನಂತದ್ಲಲಿ ಲೀನವಾದ ವೆಂಕಟಾಚಲಯ್ಯ ಈ ಭಾಗದ ಎಲ ವರ್ಗ / ಜಾತಿಯ ಮನಗ್ದೆದ ಸಾಧಕರು . ಇವರ ಸಾಧನೆಯನ್ನು ಸ್ವತಃ ಶೃಂಗೇರಿ ಗುರುಗಳು ಮೆಚ್ಚಿ ಗೌರವಿಸ್ದಿದರು !
ನಿಜಕ್ಕೂ ಬ್ಲಾಗಿಂಗ್ - ನಲ್ಲಿ ಈಗ ಹೊಸ ಅಧ್ಯಾಯ ಪ್ರಾರಂಭ ಆಗಿದೆ , ಇನ್ನೂ ಏನೇನೋ ಆಗಬೇಕಿದೆ . ಶ್ಯಾಮಿ ಸರ್ ಹೇಳಿದ ಹಾಗೆ ಕ್ಯಾನ್ವಾಸಿನಲ್ಲಿ ಬಣ್ಣ ಚೆಲ್ಲಿದ ಹಾಗಿನ ಬರಹಗಳ ಜತೆಗೆ , ಬರಹಗಾರರಿಗಿರಬೇಕಾದ ಸೂಕ್ಷ್ಮತೆಯನ್ನು ರೂಢಿಸಿಕೊಂಡು ಉತ್ತಮವಾಗಿ ಬರೆಯುವ ಯತ್ನಗಳು ಕೂಡ ಹಲವಾರು . ಮಾಹಿತಿ ನೀಡುವ , ಚಿಂತನೆಗೆ ಹಚ್ಚುವ ಬರಹಗಳೂ ಹೆಚ್ಚುತ್ತಿವೆ . ಅದಕ್ಕೆ ಪ್ರತಿಕ್ರಿಯಿಸುವವರೂ ಹೆಚ್ಚುತ್ತಿದ್ದಾರೆ .
ಸೂಚನೆ : ಒಂದುವೇಳೆ ನೀವು ಸಾದಾರಣ query mode ಮೂಲಕ ಶೋಧಿಸಿದರೆ ಅ ಎಲ್ಲಾ ಕಾರ್ಯಗಳನ್ನು ಅಲಕ್ಷಿಸಲಾಗುವುದು
ಸಾವಯವ ಉತ್ಪನ್ನಗಳಿಗೆ ಎಲ್ಲಿದೆ ಮಾರುಕಟ್ಟೆ ? ಎಂದು ಪ್ರಶ್ನಿಸುವವರಿಗೆ ಈ ಮೇಳ ಸ್ಪಷ್ಟ ಉತ್ತರ ನೀಡಿತು . ಬೆಳೆಗಾರರ ಪ್ರಕಾರ ಎರಡನೇ ದಿನದ ಹೊತ್ತಿಗೆ 45 ಟನ್ ಪೈನಾಪಲ್ ಖಾಲಿ . ಅಂದು ಮಧ್ಯಾಹ್ನ ಮೇಳಕ್ಕೆ ಬಂದವರಿಗೆ ಕಿವಿ ಹಣ್ಣು ನೋಡಲೂ ಸಿಗಲಿಲ್ಲ . ಕೆ . ಜಿಗೆ ರೂ . 240ಇದ್ದರೂ 500 ಕೆ . ಜಿ ಹಣ್ಣು ಖರ್ಚಾಯಿತು . ಇದರ ಜೊತೆಗೆ 10 ಟನ್ ಶುಂಠಿ , 10 ಟನ್ ಅರಿಶಿಣ , 100 ಕೆ ಜಿ ನಾಗಾ ಚಿಲ್ಲಿ ( ಮೆಣಸಿನಕಾಯಿ ) - ಎಲ್ಲ ಖರ್ಚಾಯಿತು . ಈ ಟ್ರೆಂಡ್ ನೋಡಿದ ಬೆನ್ಜೋಂಗ್ , ' ಸಾವಯವ ಉತ್ಪನ್ನಗಳಿಗೆ ಬೆಂಗಳೂರಿನಲ್ಲಿ ಉತ್ತಮ ಮಾರ್ಕೆಟ್ ಇದೆ , ಅಲ್ವಾ ' ಅಂತ ಪ್ರಶ್ನೆ ಮಾಡಿದರು .
ಸಾಂಪ್ರದಾಯಿಕವಾಗಿ , ಒಂದು ಅನ್ವಯವು ವ್ಯವಸ್ಥೆಯೊಂದಿಗೆ ಹೇಗೆ ವರ್ತಿಸುತ್ತದೆ ಎನ್ನುವುದನ್ನು ವಿವರಿಸಲು ಹಾಗು ನಿಯಂತ್ರಿಸಲು SELinux ಅನ್ನು ಬಳಸಲಾಗುತ್ತಿತ್ತು . Red Hat Enterprise Linux 6 ರಲ್ಲಿನ SELinux ಅನ್ನು ಬಳಸಿಕೊಂಡು ವ್ಯವಸ್ಥೆ ನಿರ್ವಾಹಕರು ಯಾವ ನಿಶ್ಚಿತ ಬಳಕೆದಾರರು ವ್ಯವಸ್ಥೆಯನ್ನು ನಿಲುಕಿಸಿಕೊಳ್ಳಬಹುದು ಎನ್ನುವುದನ್ನು ನಿಯಂತ್ರಿಸಲು ಸಾಧ್ಯವಿರುತ್ತದೆ .
ವರ್ಣದ ರಾಷ್ಟ್ರಗಳು ಮತ್ತು ವರ್ಣಭೇದ ನೀತಿಯು ಜನಾಂಗೀಯ ಹೋರಾಟಗಲಲ್ಲಿ ಮುಖ್ಯ ಪಾತ್ರವಹಿಸಿತು . ಇತಿಹಾಸಿಕವಾಗಿ , ವರ್ಣದ ರಾಷ್ಟ್ರಗಳು ಅಥವಾ ಜನಾಂಗೀಯತೆಯ ಅಧಾರದ ವೈವಿಧ್ಯತೆಯನ್ನು " ಇತರೆ " ಎಂದು ಗುರುತಿಸಲಾಗುತ್ತದೆ ( ವಿಶೇಷವಾಗಿ " ಇತರೆ " ಎಂಬುದನ್ನು " ಕೆಳ ಮಟ್ಟಕ್ಕೆ " ಅನ್ವಯಿಸಲಾಗುತ್ತದೆ ) , " ಮೆಲ್ದರ್ಜೆ " ಎಂದು ಕರೆದುಕೊಳ್ಳುವ ಪಕ್ಷ ನಿರ್ಮಿಸಿರುವ ಗಡಿ , ಮಾನವ ಚರಾಸ್ತಿ , ಅಥವಾ ಸ್ಥಿರಾಸ್ಥಿಯು ಕೆಲವೊಮ್ಮೆ ಕಠೋರವಾಗಿರುತ್ತದೆ , ಹೆಚ್ಚು ಕ್ರೂರವಾಗಿರುತ್ತದೆ , ಮತ್ತು ಕಡಿಮೆ ಸದಾಚಾರ ಅಥವಾ ನೈತಿಕತೆಯ ಪರಿಗಣನೆಯನ್ನು ನಿರ್ಬಂಧಪಡಿಸುತ್ತದೆ ಇತಿಹಾಸಕಾರನಾದ ಡೇನಿಯಲ್ ರಿಚರ್‌ನ ಪ್ರಕಾರ ಪಾಂಟಿಯಾಕ್‌ನ ರೆಬೆಲಿಯನ್ ನಲ್ಲಿ ಎರಡು ಗುಂಪುಗಳನ್ನು ಸ್ಪಷ್ಟವಾಗಿ " ಎಲ್ಲಾ ಸ್ಥಳೀಯರನ್ನು " ಇಂಡಿಯನ್ " ಗಳೆಂದೂ ಮತ್ತು ಎಲ್ಲಾ ಯೂರೋ - ಅಮೇರಿಕನ್ ಜನರನ್ನು " ಬಿಳಿಯ " ರೆಂದು , ಮತ್ತು ಈ ಎರಡೂ ಗುಂಪಿನವರು ಮತ್ತೊಂದು ಗುಂಪನ್ನು ನಾಶಪಡಿಸಲು ಒಟ್ಟಾಗಬೇಕೆಂಬ ದ್ವಂದ್ವ ಪರಿಸ್ಥಿತಿಯನ್ನು " ಸೂಚಿಸಿತು . ( ರಿಚರ್ , ಫೇಸಿಂಗ್ ಈಸ್ಟ್ ಫ್ರಂ ಇಂಡಿಯನ್ ಕಂಟ್ರಿ , ಪು . 208 ) ಬಾಸಿಲ್ ಡೇವಿಡ್‌ಸನ್ ತನ್ನ ಡಾಕ್ಯುಮೆಂಟರಿಯಲ್ಲಿ ಹೇಳುವ ಪ್ರಕಾರ , [ 65 ] , ವರ್ಣಬೇಧ ನೀತಿಯು ಇತ್ತೀಚೆಗೆ - ಅಂದರೆ ಸುಮಾರು 1800ರಲ್ಲಿ , ಅದರಲ್ಲಿಯೂ ಅಮೇರಿಕಾದಲ್ಲಿ ಗುಲಾಮಗಿರಿಯನ್ನು ಸಮರ್ಥನೆ ಮಾಡಿಕೊಳ್ಳುವ ಕಾರಣದಿಂದಾಗಿ ಪ್ರಾರಂಭವಾಯಿತು .
ಇಸ್ಲಾಂ ಧರ್ಮದಲ್ಲಿ ಶೋಷಣೆಗೆ ಎಡೆ ಮಾಡುವ ಪುರೋಹಿತಶಾಹಿ ಇಲ್ಲ . ಹಾಗೂ ಫತ್ವ ಹೊರಡಿಸುವ ಅಧಿಕಾರ ಪ್ರತಿ ಮುಲ್ಲಾಗೂ ಇಲ್ಲ . ಪ್ರಪಂಚದ ಯಾವುದಾದರೂ ಮೂಲೆಯಲ್ಲಿ ಕೂತು ಯಾರಾದರೂ ತಮಗಿಷ್ಟ ಬಂದಂತೆ ಧರ್ಮದ ಬಗ್ಗೆ ಹೇಳಿಕೆ ನೀಡಿದ ಕೂಡಲೇ ಅದನ್ನು ವಿಶೇಷ ವರದಿಯನ್ನಾಗಿ ಪ್ರಕಟಿಸಿ ಬೊಬ್ಬೆ ಹೊಡೆಯುವ ಪತ್ರಿಕೆಗಳಿಗೆ ಮಾಡಲು ಬೇಕಷ್ಟು ಕೆಲಸಗಳಿವೆ . ಸಾಮಾಜಿಕ ಸಂಪರ್ಕ ಮಾಧ್ಯಮಗಳ ಸಂಕೀರ್ಣ ವ್ಯವಸ್ಥೆಗೆ ಬಳಿ ಬಿದ್ದು ತಮ್ಮ ವೈಯಕ್ತಿಕ ಜೀವನವನ್ನು ಹಾಳು ಮಾಡಿಕೊಂಡವರು ಹಲವರು . ವಿವಾಹಿತರಾಗಿಯೂ ಸಂಬಂಧಗಳನ್ನು ಹುಡುಕಿಕೊಂಡು ನಡೆಯುವ , ಸುಳ್ಳು ಪ್ರೊಫೈಲ್ ಗಳನ್ನು ನಂಬಿ ತಮ್ಮ ಬದುಕನ್ನು ಕೆಡಿಸಿ ಕೊಂಡವರೂ ಇದ್ದಾರೆ . ಟೀವೀ ಬಂದ ಹೊಸತರಲ್ಲೂ ಕೆಲವು ಧರ್ಮ ಗುರುಗಳು ಈ " ಶನಿ ಪೆಟ್ಟಿಗೆ " ಸಮಾಜವನ್ನು ಕಲುಷಿತಗೊಳಿಸಬಹುದು ಎಂದು ಎಚ್ಚರಿಸಿದ್ದರು . ಹಾಗೆ ಸಂಭವಿಸಿತೂ ಕೂಡಾ . ೮ - ೧೦ ವರ್ಷದ ಮಕ್ಕಳು ಅಶ್ಲೀಲ ಸೀರ್ಯಲ್ಲುಗಳನ್ನು , ಮೂವಿಗಳನ್ನು ನೋಡಿ ಪ್ರೇಮ ಪತ್ರ ಬರೆಯಲು ತೊಡಗಿದರು . ಹದಿಹರೆಯದ ಹೊತ್ತಿಗೆ ಎಲ್ಲ ರೀತಿಯ ಅನುಭವಗಳನ್ನು ಪಡೆಯಲು ತೊಡಗಿದರು . ಹಿಂಸಾಪ್ರಿಯರೂ ಆದರು .
ಎಂಥದ್ದೇ ಗಂಭೀರವಾದ , ಕ್ಲಿಷ್ಟಕರವಾದ , ದಬ್ಬಾಳಿಕೆಗೆ ಒಳಗಾದಾಗ , ಮಾನಸಿಕ ಕ್ಲೇಶ , ದೈಹಿಕ ನೋವು , ಅಗಲಿಕೆ ಬಂದಾಗಲೂ ಅರಬರು ಹೇಳುವುದು " ಅಲ್ಹಂದು ಲಿಲ್ಲಾಹ್ " , ಅಥವಾ " ನಿನ್ನಿಂದಲೇ ಬಂದೆವು , ನಿನ್ನಲ್ಲಿಗೇ ನಾವು ಮರಳುವೆವು , ( ಇನಾ ಲಿಲ್ಲಾಹಿ ವಯಿನ್ನಾ ಇಲೈಹಿ ರಾಜಿಊನ್ ) ಎನ್ನುವ ಮಾತನ್ನು ಹೇಳುತ್ತಾರೆ . ವಿಶೇಷವಾಗಿ ನಿಧನದ ವಾರ್ತೆ ಕೇಳಿದಾಗ ಈ ಮಾತನ್ನು ಹೇಳಲೇ ಬೇಕು . ಅಯ್ಯೋ ಪಾಪ , ಯಾವಾಗ ಸತ್ರು , ಪಾಪ , ಎಷ್ಟು ಚೆನ್ನಾಗಿದ್ರು , ಚಿಕ್ಕ ವಯಸ್ಸು , ಸ್ವಲ್ಪ ಮೊದಲು ತಾನೇ ಮಾತನಾಡಿಸಿದ್ದೆ … . ಎಂದೆಲ್ಲಾ ಬಡಬಡಿಸುವ ಗೋಜಿಗೆ ಅರಬರು ಹೋಗುವುದಿಲ್ಲ . ಏಕೆಂದರೆ ಎಲ್ಲವೂ ವಿಧಿಯ ಕೈಯ್ಯಲ್ಲಿ , ಆ ವಿಧಿಯನ್ನು ಕಾರ್ಯಗತ ಗೊಳಿಸುವವನೇ ಮೇಲೆ ಕೂತಿರುವ ಆ ಪರಮಾತ್ಮ . ಮತ್ತೊಂದು ಹದೀಸ್ ಸೂಕ್ತದಲ್ಲಿ " ಆದಮನ ( ಆದಿ ಮಾನವ ) ಮಗ ತಪ್ಪು ತಿಳಿದಿದ್ದಾನೆ . ಘಳಿಗೆಯನ್ನು ಅವನು ಶಪಿಸುತ್ತಾನೆ ಆದರೆ ನಾನೇ ಆಗಿದ್ದೇನೆ ಆ ಘಳಿಗೆ . ಒಳಿತು ಮತ್ತು ಎಲ್ಲವೂ ನನ್ನ ಕೈಗಳಿಂದಲೇ ಬರುತ್ತವೆ . ಮತ್ತು ಹಗಲನ್ನು ಹಿಂಬಾಲಿಸುವ ಇರುಳು ಸಹ ನನ್ನಿಂದಲೇ " ಎಂದು ದೇವರು ಹೇಳುತ್ತಾನೆ .
ಅಲ್ಲದೇ ಕೈಗಾರೀಕರಣ , ಆಧುನಿಕತೆ , ರಾಷ್ಟ್ರೀಯತೆ ಮುಂತಾದ ಬೃಹತ್ ಪ್ರಕ್ರಿಯೆ , ಭಿತ್ತಿಗಳನ್ನೆದುರಿಸುತ್ತಿರುವ ನಮ್ಮ ದೇಶ ಮತ್ತು ಸಂಸ್ಕೃತಿ ಅನೇಕ ರೀತಿಗಳಲ್ಲಿ ಬದಲಾಗುತ್ತಿದೆ . ಜಾಗತೀಕರಣ , ಮತೀಯತೆಗಳು ಒಂದು ಬಗೆ ತೀವ್ರವಾದವೆಂದೆನ್ನಿಸಿದರೆ , ಅನೇಕ ವೇಳೆ ಸೆಕ್ಯುಲರಿಸಂ ಕೂಡಾ ಒಂದು ತೀವ್ರವಾದವೇ ಎಂದು ನನಗೆ ಅನೇಕ ವೇಳೆ ಅನ್ನಿಸಿದೆ . ನಮ್ಮ ದೇಶದಲ್ಲಿ ಸೆಕ್ಯುಲರಿಸಂ ಕೂಡಾ ಮತೀಯವಾದದ ಸ್ವರೂಪದಲ್ಲೇ , ತೀವ್ರತೆಯಲ್ಲೇ , ಅಸಹನೆಯಲ್ಲೇ ಮುನ್ನಡೆಸಿಕೊಂಡು ಬರಲಾಗಿದೆ ಅನ್ನಿಸುತ್ತದೆ . ಈಗ ಭೈರಪ್ಪನವರ ವಿಜಯಕರ್ನಾಟಕದ ಪತ್ರಕ್ಕೆ ಕಾರ್ನಾಡರು ಬರೆದ ಪತ್ರವನ್ನೇ ನೋಡಿ . ಅಥವಾ ಎನ್ . ಎಸ್ . ಶಂಕರರ ಆವರಣ ಅನಾವರಣ ಪುಸ್ತಕದ ಧ್ವನಿಯನ್ನೇ ನೋಡಿ . ಅವುಗಳ ಹಿಂದಿರುವ ಅಸಹನೆ ಮಾನವೀಯ ಕಳಕಳಿ ಎಂದು ನನಗನ್ನಿಸುತ್ತಿಲ್ಲ . ಬದಲಾಗಿ ಸೆಕ್ಯುಲರಿಸಂ ಎನ್ನುವ ಮತದ ಅಸಹನೆ ಎಂದೆನ್ನಿಸುತ್ತಿದೆ . ಸೆಕ್ಯುಲರಿಸಂ - ನಲ್ಲೂ ಒಂದು ಬಗೆಯ ಮೇಲ್ಮೆಯ ಅಹಂಕಾರವೇ ನನಗೆ ಕಾಣುತ್ತಿದೆ . ರಾಷ್ಟ್ರೀಯತೆ , ಕೈಗಾರೀಕರಣದ ಕಾರಣಗಳಿಗೋಸ್ಕರವಾಗಿ ನಮ್ಮ ದೇಶದಲ್ಲಿ ಉಂಟಾಗಿರುವ ಅಸಹಜ ವ್ಯವಸ್ಥೆಗಳಲ್ಲಿ ಸೆಕ್ಯುಲರಿಸಂ ಕೂಡಾ ಒಂದಾಗಿರಬಹುದಲ್ಲವೇ ? ಯಾವುದನ್ನು ಸೆಕ್ಯುಲರಿಸಂ ವಿರೋಧಿಸುತ್ತದೆಯೂ ಅದರ ಗುಣ - ಸ್ವರೂಪಗಳನ್ನೂ ಅರಿಯದೇ ಆವಾಹಿಸಿಕೊಂಡುಬಿಟ್ಟಿದೆಯೇ ? ಇಷ್ಟೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ , ತಾತ್ವಿಕತೆಗಳಿಂದ ದೂರವಿರುವ ಸಾಮಾಜಿಕ - ಸಾಂಸಾರಿಕನನ್ನು ನಮ್ಮ ಸೆಕ್ಯುಲರಿಸ್ಟರು ತಲುಪಲಾಗಿಲ್ಲವಲ್ಲ . ಸೆಕ್ಯುಲರಿಸ್ಟರ ಪರಿಭಾಷೆ ' ಕಮ್ಯುನಲ್ ' - ಆದವರನ್ನು ಸಂವಾದದಲ್ಲಿ ತೊಡಗಿಸುವುದೇ ಇಲ್ಲ ಕೇವಲ ಕೆರಳಿಸುತ್ತದೆ . ' ಆವರಣ ' ತಲುಪಿದಷ್ಟು ಜನರನ್ನು ನಾವು ತಲುಪಲಾಗುತ್ತಿಲ್ಲವೆಂದರೆ ನಮ್ಮ ಸಂವಹನ ಕ್ರಮ ಮತ್ತು ಆಲೋಚಾನಾ ಕ್ರಮಗಳನ್ನು ನಾವು ಮರುವಿಮರ್ಶೆಪಡಿಸಿಕೊಳ್ಳಲೇಬೇಕಾಗಿದೆ . ಆ ಕಾರಣದಿಂದಲೇ ಒಂದೆಡೆ ' ಹಿಂದೂ ಧರ್ಮದ ಈ ಗುಣ ಭೈರಪ್ಪನವರಿಗೆ ತಿಳಿದಂತಿಲ್ಲ ' ಎನ್ನುವ ತಮ್ಮ ಟೀಕೆ ಹೆಚ್ಚು ಆಸ್ಥೆಯಿಂದ ಕೂಡಿರುವುದಾಗ ನನಗೆ ಕಂಡು , ಸಂತೋಷವೂ ಆಗಿದೆ .
1 . ಕಪ್ಪುಕುಳಿಯಲ್ಲಿ ಮಾಯವಾದ ವಸ್ತು ಇನ್ನೊದು ವಿಶ್ವಕ್ಕೆ ರವಾನೆಯಾಗುತ್ತದೆ ಅಥವಾ ನಮ್ಮ ವಿಶ್ವದಲ್ಲಿಹೆ ಬೇರೆಡೆಗೆ ರವಾನೆಯಾಗುತ್ತದೆ
ನಗರದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕಾರ್ಯಕ್ರಮಗಳು ಮತ್ತು ಯೋಜನೆಗಳ ಬಗ್ಗೆ ಫೋರಂ ಹಲವು ವರ್ಷಗಳಿಂದ ಕ್ರಮಬದ್ಧವಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ . ನಗರದ ಆನೇಕ ನಾಗರೀಕ ಸಂಘಟನೆಗಳು , ಪ್ರಜ್ಞಾವಂತ ನಾಗರೀಕರು ಫೋರಂನ ಹೋರಾಟಕ್ಕೆ ಧ್ವನಿಗೂಡಿಸಿದ್ದಾರೆ . ಇವೆಲ್ಲದರ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾಡಳಿತ ಅಭಿವೃದ್ಧಿ ಮಾಹಿತಿ ಸಂಚಿಕೆಯನ್ನು ಹೊರತರಲು ಸಿದ್ಧತೆ ನಡೆಸಿದೆ . ಇದು ನಗರದ ಅಭಿವೃದ್ಧಿ ದೃಷ್ಠಿಯಿಂದ ಆಶಾದಾಯಕ ಬೆಳವಣಿಗೆಯಾಗಿದೆ .
ಇತ್ತ ಜಪಾನಿನಲ್ಲಿ ಹೆಸರಿಗೆ ಕ್ರೈಸಾಂತಿಮಮ್ ( ಸೇವಂತಿಗೆ ) ವಂಶದ ರಾಜಸತ್ತೆಯಿದ್ದರೂ , ನಿಜವಾದ ಅಧಿಕಾರ ಸೇನಾ ವರಿಷ್ಠರ ಸಣ್ಣ ಗುಂಪೊಂದರ ಕೈಯಲ್ಲಿತ್ತು . ಅವರ ಮಹತ್ವಾಕಾಂಕ್ಷೆ ಜಪಾನನ್ನು ದೊಡ್ಡ ಸಾಮ್ರಾಜ್ಯವನ್ನು ಮಾಡುವದಾಗಿತ್ತು . ಈ ಗುಂಪಿನ ನೇತೃತ್ವದಲ್ಲಿ ಜಪಾನ್ ೧೯೩೧ರಲ್ಲಿ ಮಂಚೂರಿಯಾದ ಮೇಲೂ , ೧೯೩೭ರಲ್ಲಿ ಚೀನಾದ ಮೇಲೂ ಆಕ್ರಮಣ ಮಾಡಿತ್ತು . ಚೀನಾ ಮತ್ತು ಮಂಚೂರಿಯಾ ದ ನೈಸರ್ಗಿಕ ಸಂಪತ್ತನ್ನು ಕೈವಶ ಮಾಡಿಕೊಂಡು , ಅದರ ಮೂಲಕ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳುವುದು ಇದರ ಉದ್ದೇಶವಾಗಿತ್ತು . ಅಮೆರಿಕಾ ಅಥವಾ ಯುನೈಟೆಡ್ ಕಿಂಗ್ ಡಮ್ ನೇರವಾಗಿ ಈ ಯುದ್ಧದಲ್ಲಿ ಭಾಗವಹಿಸದಿದ್ದರೂ ಚೀನಾಕ್ಕೆ ಆರ್ಥಿಕ ಮತ್ತು ಸೈನಿಕ ನೆರವು ನೀಡಿದವು .
ಮನಸ್ಸಿನ ಪುಟಗಳನ್ನು ಯಾರೂ ಓದಲು ಆಗುವುದಿಲ್ಲ . ನೀವು ಒಬ್ಬ ಹುಡುಗನ ಬಗ್ಗೆ ಹೇಳಿದ ರೀತಿ ಹಾಗು ನಿಮ್ಮ ಮನದ ತೊಳಲಾಟವನ್ನು ವಿವರಿಸಿದ ಬಗ್ಗೆ , ನಿಜಕ್ಕು ಶ್ಲಾಗನೀಯ .
ಅಲ್ ಗೋರೆ : ನಿಮಗೆ ಅದರ ಬಗ್ಗೆ ಏನೂ ಗೊತ್ತಾಗಿರುವುದಿಲ್ಲ . ( ನಗು ) .
ಇದು ಮಹೇಶರು ಕಾಲಕಾಲಕ್ಕೆ ನಮಗೆ ತಿಳಿಸುತ್ತಿರುವ ವಿಷಯಗಳಿಗೆ ಬೆಂಬಲಿಸುವಂತಿದೆ .
ಈ ಯುದ್ಧದ ಕಾಲದಲ್ಲಿಯೇ ಜರ್ಮನಿಯಲ್ಲಿ ೬೦ , ೦೦ , ೦೦೦ ಯಹೂದಿಗಳನ್ನು ಸೆರೆವಾಸದಲ್ಲಿಟ್ಟು ಕೊಲ್ಲಲಾಯಿತು . ಇದನ್ನು ಹಾಲೋಕಾಸ್ಟ್ ಎಂಬ ಹೆಸರಿನಿಂದ ಕರೆಯಲಾಗಿದೆ .
ದೇಶಿ ಮತ್ತು ವಿದೇಶಿ ಮಾರುಕಟ್ಟೆ ಬಗ್ಗೆ ಮಾತನಾಡುವಕ್ಕಿಂತ ಮುಂಚೆ ನಮ್ಮ ನೆಲದಲ್ಲೇ ನಮ್ಮ ಭಾಷೆಯ ಚಿತ್ರಗಳಿಗೆ ಮಾರುಕಟ್ಟೆ ಇದೇಯಾ ಅಂತ ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು ಅಲ್ಲವೇ ? ಎಲ್ಲದಕ್ಕೂ ಪ್ರೇಕ್ಷಕನನ್ನೇ ಗುರಿ ಮಾಡುವುದು ವಾಸ್ತವದಿಂದ ದೂರ ಹೋಗುವುದೇ ಆಗಿದೆ . ಇವತ್ತು ಸಬ್ನಿಡಿಗೆ ಚಲನಚಿತ್ರ ಮಾಡುವರಿಗೆ ಮಾರುಕಟ್ಟೆ , ಪ್ರೇಕ್ಷಕ ಗಮನದಲ್ಲಿ ಇರುತ್ತಾನೆಯೆ ? . ಅಷ್ಟಕ್ಕೂ ಇವುಗಳು ಯಾವುದು ಮೂಲ ವಿಷಯ ಡಬ್ಬಿಂಗ್ ಬೇಡ ಅಂತ ಹೇಳೊಲ್ಲ . . ನಮ್ಮ ನೈತಿಕತೆ ಹಾಳಾಗುತ್ತದೆ , ನಮ್ಮ ಜನರಿಗೆ ಕೆಲ್ಸ ಸಿಕ್ಕುವದಿಲ್ಲ ಅನ್ನುವುದು ಬರಿ ಗುಮ್ಮ ತೋರಿಸುವುದೇ ಆಗಿದೆ ಅಲ್ಲ್ವ . . . . ಡಬ್ ಮಾಡಕ್ ಅವಕಾಶ ಸಿಕ್ತಿದ್ ಹಾಗೇ ಇಲ್ಲಿಗೆ ಸುನಾಮಿ ಹಾಗೆ ಅನೇಕ ಕೆಟ್ಟ ಕೊಳಕು , ಥಳಕು ಬಳುಕು , ಒಳ್ಳೇ ಸಿನಿಮಾಗಳು ನುಗ್ಗಬಹುದು . ಅದ್ಯಾವ್ದು ನಮ್ಮ ನೆಲದ ಸೊಗಡಿನ , ನಮ್ಮ ಆಚರಣೆ , ನಂಬಿಕೆಗಳನ್ನು ತೋರುಸ್ದಿದ್ರೆ ಹೆಚ್ಚು ಕಾಲ ಉಳಿಯಲಾರವು . ಹಾಗೆ ನಮ್ಮತನಾನ ಬೇರೆ ಸಂಸ್ಕೃತಿಯ ಚಿತ್ರಗಳು ತೋರ್ಸೋದು ಅಸಾಧ್ಯಾನೆ ಅನ್ನಿ . ಒಟ್ಟಿನಲ್ಲಿ ಸ್ಪರ್ಧೆ ಬೇಡ ಅಂತ ನಾವು ಎಷ್ಟು ದಿನ ಸಬ್ಸಿಡಿ ಅಂತ ಪಠಿಸುತ್ತ ಇರುತ್ತೆವೆಯೋ ಅಲ್ಲಿ ತನಕ ನಾವು ಅಲ್ಲೇ ಇರುತ್ತೆವೆ .
ಕಲ್ಯಾಣಿ ಭಾರತೀಯ ಮಧ್ಯಮವರ್ಗದ ಪ್ರತೀಕ . ಅವಳು ಹೆಚ್ಚು ಓದಲಾಗದೆ ಬಹುಬೇಗ ಮದುವೆಯಾದವಳು . ಆಕೆಯ ಗಂಡ ಸುಧೀಂದ್ರ ಆಧುನಿಕ ಬದುಕಿನ ಒತ್ತಡಗಳನ್ನು ಎದುರಿಸಲಾಗದೆ ಮನೆಬಿಟ್ಟು ಹೋಗಿ ಯಾವುದೋ ಮಠದಲ್ಲಿ ಸನ್ಯಾಸಿಯಾಗಿರುವವನು . ಕಲ್ಯಾಣಿಯು ಗಂಡನಿಲ್ಲದ ತನ್ನ ಸಂಸಾರದ ನಾವೆಯನ್ನು ನಡೆಸಲು ಗಾರ್ಮೆಂಟ್ ಕೆಲಸ ಆರಂಭಿಸಿ , ಸ್ವತಃ ತಾನೇ ಒಂದು ಫ್ಯಾಕ್ಟರಿ ನಡೆಸುವಷ್ಟು ಬೆಳೆಯುತ್ತಾಳೆ . ಈ ಕಾಲದಲ್ಲಿ ಅವಳ ಹುಟ್ಟಿಗೆ ಕಾರಣವಾದ ಅಪ್ಪ ಮತ್ತು ಅಮ್ಮ ಇಬ್ಬರೂ ಅವಳಿಗೆ ಸಿಗುತ್ತಾರೆ . ಅಪ್ಪನಾದ ಸುಬ್ಬರಾಮುವು ಕಲ್ಯಾಣಿಯ ಗಂಡ ಸುಧೀಂದ್ರ ಯಾವ ಮಠದಲ್ಲಿ ಕಿರಿಸ್ವಾಮಿಯಾಗಿದ್ದನೋ ಅದೇ ಮಠದಲ್ಲಿ ಹಿರಿಸ್ವಾಮಿಯಾಗಿರುವವನು . ಕಲ್ಯಾಣಿಯ ತಾಯಿ ಲಲಿತೆ ಬೀದಿಗೆ ಬಿದ್ದಿದ್ದವಳು . ಈ ಇಬ್ಬರೂ ಸಿಕ್ಕ ನಂತರ ಮದುವೆಯಾಗದೆ ತನ್ನನ್ನ ಹಡೆದಿದ್ದ ತಾಯಿ - ತಂದೆಯರಿಗೆ ತನ್ನ ತಂಗಿ ಮೇಘಾಳ ಸಹಾಯ ತೆಗೆದುಕೊಂಡು ಕಲ್ಯಾಣಿ ಮದುವೆ ಮಾಡಿಸುತ್ತಾಳೆ . ಆದರೆ ಅವಳ ಗಂಡ ಸುಧೀಂದ್ರನನ್ನ ಮಠದ ರಾಜಕೀಯ ಮತ್ತು ಆಸ್ತಿ ಸಂಪಾದನೆಯ ಗಲಾಟೆಯಿಂದ ಬಿಡಿಸಿಕೊಳ್ಳಲಾಗದೆ ಒದ್ದಾಡುತ್ತಾಳೆ . ಇಲ್ಲಿ ಬರುವ ವಿವರಗಳ ಮೂಲಕ ಸಮಕಾಲೀನ ರಾಜಕೀಯ ಶಕ್ತಿಗಳು ಹೇಗೆ ಮಠಗಳನ್ನು ಬಳಸಿಕೊಳ್ಳುತ್ತವೆ ಎಂಬ ವಿವರಗಳು ಸಹ ಬರುತ್ತವೆ . ಕಲ್ಯಾಣಿ ತನ್ನ ಗಂಡನನ್ನು ಉಳಿಸಲು ಮಾಡುವ ಯುದ್ಧದಲ್ಲಿ ಮಠದ ನಿಗೂಢಗಳನ್ನು ಬಗೆಯುತ್ತಾ , ತಂದೆ - ತಾಯಿಯನ್ನು ಕಾಪಾಡುವ ಪ್ರಯತ್ನ ಮಾಡುತ್ತಾಳೆ . ಈ ನಡುವೆ ಅವಳ ಮೈದುನ ಶಂಕರನು ಮುಸಲ್ಮಾನ ಹುಡುಗಿಯೊಬ್ಬಳನ್ನು ಪ್ರೀತಿಸುವ ಮತ್ತು ಮದುವೆಯಾಗುವ ವಿವರವೂ ಸೇರಿಕೊಂಡು ಕಲ್ಯಾಣಿಯ ಬದುಕು ಅನೇಕ ತಲ್ಲಣಗಳನ್ನು ಎದುರಿಸುತ್ತಾ ಸಾಗುತ್ತದೆ . ಇದು ಕಲ್ಯಾಣಿಯ ಕಥನ
1942ರಲ್ಲಿ ಸರಕಾರವು ಜರ್ಮನ್ ಲುಫ್ಟಪಾಫ್ಪೆಯ ವಾಯು ದಾಳಿ ಮತ್ತು ನಂತರದ ದಿನಗಳಲ್ಲಿ ಜಪಾನಿನ ವಾಯು ಪಡೆಯ ದಾಳಿಯನ್ನು ನಿರೀಕ್ಷಿಸಿ ಹಂಗಾಮಿ ಕಟ್ಟಡವನ್ನು ಸ್ಥಾಪಿಸಿತು . 1965 ಮತ್ತು 1971ರ ಭಾರತ - ಪಾಕಿಸ್ತಾನ ಯುದ್ಧಗಳ ಸಮಯದಲ್ಲಿ , ಯುದ್ದ ವಿಮಾನಗಳ ಚಾಲಕರನ್ನು ದಾರಿ ತಪ್ಪಿಸಲು ಮತ್ತೆ ಹಂಗಾಮಿ ಕಟ್ಟಡಗಳನ್ನು ಕಟ್ಟಲಾಗಿತ್ತು . [ ೩೫ ] ಭಾರತದ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನಗಳು ವಿರೋಧಿಸಿದಮಥುರಾ ತೈಲ ಸಂಸ್ಕರಣೆ ಕೇಂದ್ರದಿಂದ [ ೩೬ ] ಉಂಟಾಗುತ್ತಿರುವ ಅಮ್ಲ ಮಳೆ [ ೩೭ ] ಸೇರಿದಂತೆ ಯಮುನಾ ನದಿಯಲ್ಲಿ ಉಂಟಾಗುತ್ತಿರುವ ಪರಿಸರ ಮಾಲಿನ್ಯವು ತಾಜ್ ಮಹಲ್‌ಗಿರುವ ತೀರಾ ಇತ್ತೀಚಿನ ಅಪಾಯಗಳು . ಮಾಲಿನ್ಯವು ತಾಜ್ ಮಹಲ್‌ನ ಬಣ್ಣವನ್ನು ಹಳದಿಯಾಗಿಸಿದೆ . ಮಾಲಿನ್ಯವನ್ನು ನಿಯಂತ್ರಿಸಲು , ಸ್ಮಾರಕದ ಸುತ್ತಮುತ್ತ ಕಟ್ಟುನಿಟ್ಟಾದ ಮಾಲಿನ್ಯ ನಿಯಂತ್ರಣ ಮಾನಕವನ್ನು ಅಳವಡಿಸಿರುವ 10 , 400 ಘನ ಕಿಲೋಮೀಟರ್ ( 4 , 015 ಘನ ಮೈಲಿ ) ಪ್ರದೇಶದಲ್ಲಿ ಭಾರತ ಸರಕಾರವು ತಾಜ್ ವಿಷಮ ಚತುರ್ಭುಜ ವಲಯವನ್ನು ( TTZ ) ಸ್ಥಾಪಿಸಿದೆ . [ ೩೮ ] 1983ರಲ್ಲಿ ತಾಜ್ ಮಹಲ್‌ನ್ನು UNESCO ವಿಶ್ವ ಪಾರಂಪರಿಕ ತಾಣ ಎಂದು ಗುರುತಿಸಿ ಮಾನ್ಯ ಮಾಡಿತು . [ ೩೯ ]
ದೇಶದ ಅಗ್ರ ಶೇರು ಮಾರುಕಟ್ಟೆಯಾದ ಬಿ . ಎಸ್ . ಈ ಭಾರತದ ಹಲವು ಭಾಷೆಗಳಲ್ಲಿ ಶೇರು ವಹಿವಾಟು ನಡೆಸಲು ಅನುಕೂಲವಾಗುವಂತೆ ಅಂತರ್ಜಾಲದ ತಾಣಗಳನ್ನು ವಿನ್ಯಾಸಗೊಳಿಸುವುದಾಗಿ ಹೇಳಿರುವ ಸುದ್ಧಿ ಬಂದಿದೆ ಗುರು . ಶೇರು ಮಾರುಕಟ್ಟೆಯನ್ನು ಇನ್ನಷ್ಟು ಜನಪ್ರಿಯಗೊಳಿಸುವ , ಅದರಿಂದ ಸಿಗುವ ಲಾಭವನ್ನು ಇನ್ನಷ್ಟು ಜನರಿಗೆ ತಲುಪಿಸುವಲ್ಲಿ ಈ ನಡೆ ಖಂಡಿತ ಸಹಾಯ ಮಾಡಲಿದೆ . ಆದರೆ , " ಸಕಲ ಗುಣ ಸಂಪನ್ನ , ಏಕ ಗುಣ ಹೀನ " ಅನ್ನೋ ಸಂಸ್ಕೃತದ ಗಾದೆಯಂತೆ , ಈ ನಡೆಯಂತೆ ಶುರುವಾಗಲಿರುವ ತಾಣಗಳ ಪಟ್ಟಿಯಲ್ಲಿ ಕನ್ನಡಕ್ಕೆ ಸ್ಥಾನ ಕೊಟ್ಟಿಲ್ಲ ಗುರು ! ಕನ್ನಡದಲ್ಲಿ ತಾಣ ಹೆಚ್ಚಿಸುತ್ತೆ ವಹಿವಾಟು ! ಶೇರು ಮಾರುಕಟ್ಟೆಯನ್ನು ಮತ್ತು ಅದರಲ್ಲಿ ಹೂಡಿಕೆಯಿಂದ ಆಗೋ ಲಾಭವನ್ನು ಇನ್ನಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮರಾಠಿ , ತಮಿಳು , ತೆಲುಗು ಮತ್ತು ಪಂಜಾಬಿ ಭಾಷೆಯಲ್ಲಿ ಈ ತಾಣಗಳನ್ನು ರೂಪಿಸುವುದಾಗಿ BSE ತಿಳಿಸಿದೆ . ಕನ್ನಡವನ್ನು ಕಡೆಗಣಿಸಿರುವ ಇವರನ್ನು ಜಾಗೃತ ಕನ್ನಡದ ಗ್ರಾಹಕರು ಮಾತ್ರ ಎಚ್ಚರಿಸಬಲ್ಲರು ಗುರು . ಕನ್ನಡದಲ್ಲೂ ಈ ತಾಣ ರೂಪಿಸುವುದು ಕರ್ನಾಟಕದಲ್ಲಿ BSE ಶೇರು ವಹಿವಾಟನ್ನು ಇನ್ನಷ್ಟು ಜನಪ್ರಿಯಗೊಳಿಸುವುದಲ್ಲದೇ , ವಹಿವಾಟು ನಡೆಸುವ ಜನರಿಗೂ ಹಾಗೂ BSE ಗೂ ಹೆಚ್ಚಿನ ವಹಿವಾಟಿನ ಲಾಭ ತಂದು ಕೊಡಲಿದೆ ಎಂದು ಇವರಿಗೆ ತಿಳಿ ಹೇಳೊಣ , ಆ ಮೂಲಕ ಬದಲಾವಣೆಯೊಂದಕ್ಕೆ ಕಾರಣವಾಗೋಣ . ಏನಂತೀಯ ಗುರು ?
ಪಾರ್ಥರೇ ಅತ್ತ್ಯುತ್ತಮವಾದ ಕವನ . ನಿಮ್ಮ ಕವನಗಳು ದಿನಕಳೆದಂತೆ ಬಹಳ ಸುಂದರ ಹಾಗೂ ವಿಚಾರಭರಿತವಾಗಿ ಮೂಡಿ ಬರುತ್ತಿವೆ
" ಮಕ್ಕಳಿಗೆ ಧರ್ಮವನ್ನು ಬೋಧಿಸುವುದು ಚೈಲ್ಡ್ ಅಬ್ಯೂಸ್ ! " ಎಂದು ತುಂಬಿದ ರೈಲಿನಲ್ಲಿ ಒಬ್ಬ ತನ್ನೊಡನಿದ್ದವಳಿಗೆ ಜೋರಾಗಿ ಬೋಧಿಸಿದ . ಸುತ್ತಮುತ್ತಲಿದ್ದವರು ಸಣ್ಣಗೆ ಮಿಸುಕಾಡಿದರು . ಕೆಲವರು ಒಪ್ಪಿದವರಂತೆ ಕಂಡರೂ ಸಣ್ಣಗೆ ಗಂಟಲು ಸರಿಮಾಡಿಕೊಂಡು ಬೇರತ್ತ ತಿರುಗಿದರು . ಒಪ್ಪಿಗೆಯಾಗದವರು . . .
ತನ್ನ ಅಕ್ಷದ ಮೇಲೆ ಸುತ್ತಲು ಬೇಕಾದ ಅವಧಿ ೨೪೪ . ೩ ಭೂ ದಿನಗಳು
www . youtube . com ಹೆಸರಿನ ಆಯ್ಕೆಯಿಂದ ಕೆಲವು ಸಮಸ್ಯೆಗಳುಂಟಾದವು . ಏಕೆಂದರೆ , ಈ ಹೆಸರಿಗೆ ಹೋಲುವ ಇನ್ನೊಂದು ಜಾಲತಾಣ www . utube . com ಇದಕ್ಕೆ ಮುಂಚಿತವಾಗಿಯೇ ಇತ್ತು . ನಿಯಮಿತವಾಗಿ YouTube ನ್ನು ಹುಡುಕುತ್ತಾ utube ಗೆ ಬರುವ ಜನರ ಸಂಖ್ಯೆ ಹೆಚ್ಚಾಗತೊಡಗಿದಾಗ , Universal Tube & Rollform Equipment ಜಾಲತಾಣದ ಮಾಲಿಕರು , ಯೂಟ್ಯೂಬ್‌ನ ಮೇಲೆ ನವೆಂಬರ್ 2006ನಲ್ಲಿ ಮೊಕದ್ದಮೆ ಹೂಡಿದರು . ಯುನಿವರ್ಸಲ್ ಟ್ಯೂಬ್ ಆನಂತರ ತನ್ನ ಜಾಲತಾಣದ ಹೆಸರನ್ನು www . utubeonline . comಗೆ ಬದಲಾಯಿಸಿತು . [ ೨೦ ] [ ೨೧ ]
ಶ್ರೀನಿವಾಸ ಹಾವನೂರರು ಇಲ್ಲವಾಗಿದ್ದಾರೆ . ಈ ಸುದ್ದಿ ಕೇಳಿದ ತಕ್ಷಣವೇ ಹೃದಯ ಭಾರವೆನಿಸಿತು . ಇತ್ತೀಚೆಗೆ ( ಮೈಸೂರಿಗೆ ಬಂದ ಮೇಲೆ ) ಭೇಟಿ ಅವಕಾಶ ಇರಲಿಲ್ಲ . ಆದರೆ ಆರು ತಿಂಗಳ ಹಿಂದೆ ಹೀಗೇ ನೆನಪಿಸಿಕೊಂಡು ಫೋನ್ ಮಾಡಿದ್ದೆ . ' ಸಾರ್ , ನಾನು ನಾವಡ ಅಂತಾ ' ಎಂದಾಗ ' ನಾವಡ ಅಂತ್ಲೇ , ಯಾವೂರಿನಲ್ಲಿರುತ್ತೀರಿ ? ' ಎಂದು ಮರೆತು ಹೋದವರಂತೆ ಚಟಾಕಿ ಹಾರಿಸಿದ್ದರು . ನಂತರ ಸುಮಾರು ಹತ್ತು ನಿಮಿಷ ಮಾತನಾಡಿದವರೇ , ಏನಪ್ಪಾ … ಎಲ್ಲಾ ಸರಿ ಇದೇ ತಾನೆ ಎಂದು ವಿಚಾರಿಸಿದ್ದರು .
1946ರ ಜನವರಿ 4ನೇ ತಾರೀಖು - ಮುಂಜಾನೆ 8 ಗಂಟೆಗೇ ಚಾಮರಾಜಪೇಟೆ ಮೊದಲನೇ ರಸ್ತೆಯಲ್ಲಿದ್ದ ' ತಾಯಿನಾಡು ' ಕಚೇರಿಗೆ ಹೋದೆ . ಸಂಪಾದಕರಿನ್ನೂ ಬಂದಿರಲಿಲ್ಲ . ನನ್ನ ಗುರುಗಳು ಕೊಟ್ಟಿದ್ದ ಪತ್ರವನ್ನು ಸಂಪಾದಕರ ಸಹಾಯಕರಿಗೆ ಕೊಟ್ಟೆ . 9 ಗಂಟೆಗೆ ಸರಿಯಾಗಿ ಮೋಟಾರ್ ಸೈಕಲ್‍ನಲ್ಲಿ ದಟ್ಟಿ ಪಂಚೆ - ಕೋಟುಧಾರಿ ವ್ಯಕ್ತಿಯೊಬ್ಬರು ಬಂದಿಳಿದು ಸರಸರನೆ ಸಂಪಾದಕರ ಕೋಣೆಗೆ ಹೋದರು . ಮೇಜಿನ ಮೇಲಿದ್ದ ಕಾಗದ ನೋಡಿದ ತಕ್ಷಣ ನನ್ನನ್ನು ಒಳಗೆ ಕರೆಸಿದರು . ಅವರ ಸರಳ ವ್ಯಕ್ತಿತ್ವ ನೋಡಿ ನನಗೆ ಅಚ್ಚರಿಯಾಯಿತು . ಹಲವಾರು ಬಾರಿ ವಿದೇಶ ಪ್ರವಾಸ ಮಾಡಿ ಬಂದಿದ್ದ ಸಂಪಾದಕರಾದ ಶ್ರೀ ಪಿ . ಬಿ . ಶ್ರೀನಿವಾಸನ್‌ರೇ ಅವರು ! ನನ್ನ ಶಿಕ್ಷಣ , ಬರಹದ ಗೀಳೂ , ನನ್ನ ಕಾಲೇಜು ಲೇಖನ ಸಂಕಲನದ ಪ್ರತಿ ಇವೆಲ್ಲಾ ನೋಡಿ " ಅನುವಾದ ಮಾಡಲು ಬರುತ್ತದೆಯೆ ? ಸರಿಯಾಗಿ ಮಾಡಬೇಕು . ಕ್ರಮವಾಗಿ ಕಚೇರಿಗೆ ಬರಬೇಕು " ಇತ್ಯಾದಿ ಹೇಳಿ , " 35 ರೂ . ಮಾತ್ರ ಸಂಬಳ " ಎಂದರು . ( ನನ್ನ ಹಿಂದಿನ ಕಚೇರಿಯಲ್ಲಿ ಕೊಡುತ್ತಿದ್ದ ಸಂಬಳದ ಅರ್ಧದಷ್ಟು ! ) , ನನಗೆ ಏನು ಹೇಳಲೂ ತೋಚಲಿಲ್ಲ . ಬಿಟ್ಟರೆ ಪತ್ರಕರ್ತನಾಗಬೇಕೆಂಬ ಇಷ್ಟಾರ್ಥ ಈಡೇರದೇ ಹೋಗಬಹುದು . ಹೀಗೆ ಯೋಚಿಸುತ್ತಿದ್ದಂತೆ " ಪ್ರೊಪ್ರೈಟರ್ ಬರುತ್ತಾರೆ ; 11ಕ್ಕೆ ಬಂದು ನೋಡಿ " ಎಂದರು . ವಂದನೆ ಹೇಳಿ ಹೊರಗಡೆ ಸುತ್ತಾಡಿಕೊಂಡು ಹಿಂದಿರುಗಿದಾಗ ಶ್ರೀ ಪಿ . ಆರ್ . ರಾಮಯ್ಯನವರು ಬಂದಿದ್ದರು . ಗಾಂಧಿ ಟೋಪಿ ಧರಿಸಿದ್ದ , ಹಿರಿತನ ಸೂಸುವ , ಆಕರ್ಷಕ ವ್ಯಕ್ತಿ . ಕಿರುನಗೆ ಬೀರಿ ನನ್ನನ್ನು ಬರಮಾಡಿಕೊಂಡರು . ಶ್ರೀನಿವಾಸನ್ ಅಷ್ಟರೊಳಗಾಗಿ ಅವರಿಗೆ ನನ್ನ ವಿಷಯ ಹೇಳಿದ್ದರೆಂದು ಕಾಣತ್ತೆ . ನನ್ನ ವಿಚಾರವೆಲ್ಲಾ ಕೇಳಿ , ಚುರುಕಾಗಿ ಮುತುವರ್ಜಿಯಿಂದ ಕೆಲಸ ಮಾಡಬೇಕು . ಸಂಅರ್ಪಕವಾಗಿದ್ದರೆ ಒಂದು ತಿಂಗಳ ನಂತರ ಸಂಬಳ ನಿಗದಿ ಮಾಡುತ್ತೇವೆ . ಆದರೆ ಈ ತಿಂಗಳ ಸಂಬಳಕ್ಕೇನೂ ಯೋಚಿಸಬೇಕಾಗಿಲ್ಲ - ಕೊಡುತ್ತೇವೆ . ನೀವು ಬೇಕಾದರೆ ಜುಲೈ ಆದ ಮೇಲೆ ಕಾಲೇಜಿಗೆ ಸೇರಿಕೊಂಡು ವ್ಯಾಸಂಗ ಮುಂದುವರಿಸಬಹುದು ; ಅಭ್ಯಂತರವಿಲ್ಲ ಎಂದರು . " ನನಗೆ ಪತ್ರಿಕೋದ್ಯಮವೇ ಜೀವನದ ಪರಮಾಕಾಂಕ್ಷೆ . ಈ ಉದ್ಯೋಗ ದೊರಕಿದರೆ ನನಗೆ ಮತ್ತೆ ವ್ಯಾಸಂಗ ಬೇಕಾಗಿಲ್ಲ " ಎಂದೆ . " ಅದು ನಿಮ್ಮಿಷ್ಟ ; ಈಗ ಕೆಲಸ ಕಲಿತುಕೊಳ್ಳಿ " ಎಂದು ಹೇಳಿ , ಹಿರಿಯ ಉಪಸಂಪಾದಕರಾಗಿದ್ದ ಶ್ರೀ [ [ ಕೆ . ಅನಂತಸುಬ್ಬರಾವ್ ] ಅವರನ್ನು ಕರೆಸಿ , ನನಗೆ ಎಲ್ಲಾ ತಿಳಿಸುವಂತೆ ಹೇಳಿದರು . ಅವರೂ ತುಂಬಾ ಒಳ್ಳೆಯವರು . ಪತ್ರಿಕೋದ್ಯಮದ ' ಓ ನಾಮ ' ಅವರಿಂದ ಆಯಿತು . ಅವರು ಆತ್ಮೀಯತೆಯಿಂದ ವಿಚಾರಿಸಿ , ಯಾವುದಕ್ಕೂ ಚಿಂತಿಸದಂತೆ ಮತ್ತು ತಿಳಿಯದ್ದನ್ನು ಕೇಳುವಂತೆ ಧೈಯವಿತ್ತರು ; ಮಧ್ಯಾಃನ ಊಟ ಮಾಡಿ ಬರಲು ಕಳಿಸಿದರು . ಮತ್ತೆ 3 ಗಂಟೆಗೆ ಬರುವುದರೊಳಗಾಗಿ ಶ್ರೀ ರಾಮಯ್ಯನವರು ನನ್ನ ಕಾರ್ಯಾಸಕ್ತಿಯನ್ನು ಕುರಿತು ಅನಂತಸುಬ್ಬರಾಯರನ್ನು ವಿಚಾರಿಸಿ ತಿಳಿದುಕೊಂಡಿದ್ದರು . ಮಾರನೆಯ ದಿನದಿಂದ ಬೆಳಿಗ್ಗೆ 11ಕ್ಕೆ ಸರಿಯಾಗಿ ಕಚೇರಿಗೆ ಬರಬೇಕೆಂದು ಆದೇಶಿಸಿದರು . ಸಂಜೆಯೇ ನನ್ನ ಗುರುಗಳ ಬಳಿಗೆ ಹೋಗಿ ವಿಷಯ ತಿಳಿಸಿದೆ ; ಅವರು ಶುಭ ಹಾರೈಸಿದರು .
ಇಲ್ಲಿಗೆ ಸಮೀಪದ ಮುತ್ತುಗದ ಗದ್ದೆಯ ಜಡೇಗೌಡರ ಮನೆಯಲ್ಲಿ ಜೇನುತುಪ್ಪ ಸವಿದು . . .
ರಾಜ್ಯದ ರಾಜಕೀಯ ರೂಪುಗೊಂಡಿರುವುದು ಮೂರು ಹಂತಗಳಲ್ಲಿ . 1983 ರವರೆಗೆ ಏಕಪಕ್ಷ ಯುಗ , ನಂತರ 2004 ರವರೆಗೆ ದ್ವಿಪಕ್ಷ ಯುಗ , ನಂತರ ಸಮ್ಮಿಶ್ರ ಸರಕಾರಗಳ ಕಾರುಬಾರು . ಮೊದಲ ಹಂತದಲ್ಲಿ ಪರ್ಯಾಯ ಪಕ್ಷಗಳೇ ಇರಲಿಲ್ಲ . ಹಾಗಾಗಿ ಕಾಂಗ್ರೆಸ್‌ನದ್ದೇ ದರಬಾರು . 1983 ರಿಂದ ಕಾಂಗ್ರೆಸ್ಸೇತರ ಪಕ್ಷ ಪ್ರಜ್ವಲಮಾನಕ್ಕೆ ಬಂದಿತು . 1983 ರಲ್ಲಿ 18 ಶಾಸಕರನ್ನು ಹೊಂದಿದ್ದ ಬಿಜೆಪಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾಪಕ್ಷಕ್ಕೆ ಬಾಹ್ಯ ಬೆಂಬಲ ನೀಡಿದ ಪರಿಣಾಮ ಕಾಂಗ್ರೆಸ್ಸೇತರ ಪಕ್ಷ ಅಧಿಕಾರ ಹಿಡಿಯಿತು . 1985 ರ ಮಧ್ಯಂತರ ಚುನಾವಣೆಯಲ್ಲಿ ಜನತಾಪಕ್ಷವೇ ಸ್ವಾವಲಂಬಿಯಾಗಿ ಅಧಿಕಾರ ದಕ್ಕಿಸಿಕೊಂಡಿತು .
ಇವತ್ತು ನನ್ನ ಒಬ್ರು ಒಳ್ಳೇ ಗೆಳೆಯರೊಬ್ಬರ ಜೊತೆ ಮಾತಾಡ್ತಿದ್ದೆ . ಮುಂದೆ ಓದಿ »
ಸೆಕ್ಯುಲರ್ ಸುನಾಥರೇ ಬೈಬಲ್ಲು ಕುರಾನ್ಗಳಲ್ಲೂ ಸಂಸ್ಕೃತ ಇರಬೇಕು ನೋಡ್ರಿ . ನಿಮ್ ಸಂಸ್ಕೃತ ಇಲ್ಲದೇ ಇರೋ ಜಾಗವೇ ಇಲ್ಲ ಅಲ್ವೇ !
ಇವರಿಗೆ ಆಕೃತಿ ವತಿಯಿಂದ ತಲಾ ೨೫೦ ರೂಗಳ ಗಿಫ್ಟ್ ಕೂಪನ್‌ಗಳನ್ನು ಕೊರಿಯರ್ ಮೂಲಕ ಕಳುಹಿಸಲಾಗುತ್ತದೆ .
ಚಹಾಕ್ಕೆ ಹಾಲನ್ನು ಬೆರೆಸುವ ಅಭ್ಯಾಸವು ಮ್ಯಾಡಮ್ ಡಿ ಸೆವಿಗ್ನೆ ಎಂಬ ಪತ್ರವಾಚಕನಿಂದ 1680ರಲ್ಲಿ ಮೊಟ್ಟಮೊದಲಬಾರಿಗೆ ನಮೂದಿಸಲ್ಪಟ್ಟಿತು . [ ೫೪ ] ಅನೇಕ ಬಗೆಯ ಚಹಾಗಳನ್ನು ಪರಂಪರಾನುಗತವಾಗಿ ಹಾಲಿನೊಂದಿಗೆ ಸೇವಿಸುತ್ತಾ ಬರಲಾಗಿದೆ . ಭಾರತದ ಮಸಾಲಾ ಚಾಯ್ , ಮತ್ತು ಬ್ರಿಟಿಷ್ ಚಹಾದ ಹದವಾದ ಮಿಶ್ರಣಗಳು ಇವುಗಳಲ್ಲಿ ಸೇರಿವೆ . ಈ ಚಹಾಗಳು ಅತ್ಯಂತ ಸಮೃದ್ಧವಾದ ಪ್ರಭೇದಗಳಾಗಿದ್ದು ಹಾಲಿನೊಂದಿಗೆ ಬೆರೆಸಿ ಇವನ್ನು ಸೇವಿಸಬಹುದಾಗಿದೆ . ಅಸ್ಸಾಂ ಚಹಾಗಳು , ಅಥವಾ ಪೂರ್ವ ಫ್ರಿಸಿಯಾದ ಹದವಾದ ಮಿಶ್ರಣಗಳು ಈ ವರ್ಗಕ್ಕೆ ಸೇರುತ್ತವೆ . ಉಳಿದಿರುವ ಟ್ಯಾನಿನ್‌ಗಳನ್ನು ಹಾಲು ತಟಸ್ಥೀಕರಿಸುತ್ತದೆ ಮತ್ತು ಆಮ್ಲೀಯತೆಯನ್ನು ತಗ್ಗಿಸುತ್ತದೆ ಎಂಬುದೊಂದು ಅಭಿಪ್ರಾಯವೂ ಚಾಲ್ತಿಯಲ್ಲಿದೆ . [ ೫೫ ] [ ೫೬ ] ಚೀನಿಯರು ಚಹಾದೊಂದಿಗೆ ಹಾಲನ್ನು ಸಾಮಾನ್ಯವಾಗಿ ಬೆರೆಸುವುದಿಲ್ಲ ( ಅಥವಾ ಹಾಲನ್ನು ಬಳಸುವುದೇ ಇಲ್ಲ ) , ಆದರೆ ಮಂಚೂರಿಯಾದ ಜನರು ಬಳಸುತ್ತಾರೆ , ಮತ್ತು ಮಂಚು ರಾಜವಂಶದ ಗಣ್ಯರು ಈ ಅಭ್ಯಾಸವನ್ನು ಮುಂದುವರಿಸಿಕೊಂಡು ಬಂದಿದ್ದಾರೆ . ಹಾಂಗ್ ಕಾಂಗ್ - ಶೈಲಿಯ ಹಾಲು ಚಹಾವು ಬ್ರಿಟಿಷ್ ವಸಾಹತು ಶೈಲಿಯ ಅಭ್ಯಾಸಗಳನ್ನು ಆಧರಿಸಿದೆ .
ಬೆಟ್ಟ - ಗುಡ್ಡಗಳಿಂದ ಕೂಡಿದ ಒಂದು ಅರೆ - ಅರಣ್ಯ ಪ್ರದೇಶ . ಒಂದು ಪರ್ಣಕುಟಿಯ ಶಾಟ್‌ನಿಂದ ದೃಶ್ಯ ಆರಂಭ . ಪರ್ಣಕುಟಿಯ ಬಾಗಲಿನಿಂದ ಜೂಮ್‌ಔಟ್ ಆಗುತ್ತಾ ಸುತ್ತಲ ಬೆಟ್ಟಗುಡ್ಡಗಳೆಲ್ಲಾ ತೆರೆಯ ಮೇಲೆ ಕಾಣಿಸತೊಡಗುತ್ತವೆ . ಬೆಟ್ಟದ ಒಂದು ಭಾಗದತ್ತ ಕ್ಯಾಮೆರಾ ಪ್ಯಾನ್ ಆಗುತ್ತದೆ . ಅಲ್ಲಿ ನಾಲ್ಕೈದು ಮಂದಿ ಧಾಂಡಿಗರು ಕುಡಿಯುತ್ತಾ , ತಿನ್ನುತ್ತಾ ಮೋಜಿನಲ್ಲಿ ತೊಡಗಿರುತ್ತಾರೆ . ನಡುನಡುವೆ ಗುಂಪಿನಲ್ಲಿದ್ದವನೊಬ್ಬ ಬಂಡೆಯ ಮರೆಯಿಂದ ದೂರದ ಪರ್ಣಕುಟಿಯತ್ತ ನೋಡುವುದು , ಇತರರಿಗೆ ಸಂಜ್ಞೆ ಕೊಡುವುದು ಮಾಡುತ್ತಿರುತ್ತಾನೆ . ಮೋಜು - ಮಸ್ತಿ ಮುಂದುವರಿಯುತ್ತದೆ . ಇದ್ದಕ್ಕಿದ್ದಂತೆಯೇ ಒಂದು ಗಡಸು ದನಿ ಕೇಳಿ ಬರುತ್ತದೆ .
ಮಹಿಮೆಗಳು ನಡೆಯುತ್ತಿರುತ್ತವೆ . ಅದನ್ನು ಸರಿಯಾಗಿ ಅನುಸಂಧಾನ ಮಾಡಿಕೊಂಡಾಗ ಮಾತ್ರ ಅದರ ಬಗ್ಗೆ ಅರಿವು , ನಂಬಿಕೆ ಮೂಡುತ್ತದೆ .
ಈ ಯೋಜನೆ ನನ್ನ ಪಾಲಿಗೆ ಅತ್ಯಂತ ಮಹತ್ವಪೂರ್ಣವಾಗಿದ್ದು , ರಹೇಜಾ ವಾಟರ್‌ಫ್ರಂಟ್‌ನ ವಿಶೇಷ ಪ್ರತಿನಿಧಿಯಾಗಿ ತನ್ನ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುವ ಭರವಸೆ ನನಗಿದೆ . ಮಾತ್ರವಲ್ಲದೆ , ಈ ಯೋಜನೆ ಸುಂದರ ನಗರವಾದ ಮಂಗಳೂರಿನಲ್ಲಿ ಸುಸಜ್ಜಿತ ಬದುಕಿಗೆ ಹೊಸ ಪರಿಕಲ್ಪನೆಯನ್ನು ನೀಡಲಿದೆ ಎಂದು ಸುನಿಲ್ ಶೆಟ್ಟಿ ಅಭಿಪ್ರಾಯಿಸಿದರು .
ಇದು ನನ್ನ ಮೊದಲ ಮಾತು . ನನ್ನೂರು ಶಿವಮೊಗ್ಗ ಜಿಲ್ಲೆ , ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಒಂದು ಹಳ್ಳಿ . ದಟ್ಟ ಕಾಡಿನ ಕುಗ್ರಾಮ . ಈಗ ದಟ್ಟ ಮುಂದೆ ಕುರುಚಲು ಸೇರಿಕೊಂಡಿದೆ . ಇದೆಲ್ಲ ಆಗಿದ್ದು ಕಳೆದ ಒಂದು ಒಂದೂವರೆ ದಶಕದಲ್ಲಿ . ಯಾವಾಗ ಕೇರಳಿಗರು ಮನೆ ಮುರುಕ ಶುಂಠಿ ತಂದರೋ ಆಗ ಶುರುವಾಯಿತು ಮಲೆನಾಡಿನ ಕಾಡಿಗೆ ವಕ್ರದಸೆ . ಇದೊಂದು ನಿದರ್ಶನ ಅಷ್ಟೆ . ಇಂತಹ ಒಂದಲ್ಲ ನೂರಾರು ಬದಲಾವಣೆಗಳು ಮಲೆನಾಡು , ಅಲ್ಲಿನ ಪರಿಸರದ ಮೇಲಾಗಿವೆ . ಅಲ್ಲಿನ ಒಂದಿಷ್ಟು ಕಟು ವಾಸ್ತವಗಳನ್ನು ಪರಿಚಯಿಸುವುದಷ್ಟೆ ನನ್ನ ಉದ್ದೇಶ . ಅಲ್ಲದೇ ನಾನೊಬ್ಬ ಸಾಹಿತ್ಯದ ವಿದ್ಯಾರ್ಥಿ . ಕತೆ , ಕವನ ಇದ್ದೆ ಇರುತ್ತವೆ .
ಏಷ್ಯಾದಲ್ಲಿ , " ಸಮಕಾಲೀನ " ಎಂಬ ಪದವನ್ನು ವಿಶ್ವ ಯುದ್ಧ IIರ ಅಂತ್ಯದ ನಂತರದ ಇತಿಹಾಸಕ್ಕೆ ಅನ್ವಯಿಸಬಹುದಾಗಿದೆ . ವಿಶ್ವ ಯುದ್ಧ IIರ ಅಂತ್ಯದಲ್ಲಿ , ಸ್ವಾತಂತ್ರ್ಯಕ್ಕಾಗಿ ಯುದ್ಧಗಳು ಪ್ರಾರಂಭವಾದವು , ಹಲವು ಪ್ರದೇಶಗಳು ಸಾರ್ವಬೌಮ ಸ್ಥಾನಮಾನವನ್ನು ಗಳಿಸಿದವು . ಆದರೆ , ಏಷ್ಯಾದ ಈ ರಾಜ್ಯಗಳು ಶೀತಲ ಸಮರದ ಪರಿಣಾಮಗಳ ಅಡಿಯಲ್ಲಿ ಸ್ಥಾಪಿತವಾದವು . ಈಶಾನ್ಯ ಏಷ್ಯಾ ಹಾಗು ವಿಯೆಟ್ನಾಂ ಶೀತಲ ಸಮರದಲ್ಲಿ ಭಾಗಿಯಾಗಿದ್ದವು , ಕೊರಿಯಾ ಹಾಗು ವಿಯೆಟ್ನಾಂ ನ ವಿಭಜಿತ ರಾಜ್ಯಗಳು ಕಾಣಿಸಿಕೊಂಡವು . ಆಗ್ನೇಯ ಏಷ್ಯಾವನ್ನು ASEAN ಹೆಸರಿನಲ್ಲಿ ಜತೆಗೂಡಿಸಲಾಯಿತು ( ವಿಯೆಟ್ನಾಂ 1976ರಲ್ಲಿ ಪುನರೇಕೀಕೃತವಾಯಿತು ) , ಆದರೆ ASEAN ಈಶಾನ್ಯ ಏಷ್ಯಾವನ್ನು ಒಳಗೊಂಡಿರುವುದಿಲ್ಲ .
ಕೋಟೆಯ ಮುಂಬಾಗಿಲಿನಿಂದ ಇರುವ ಕೋಟೆಯ ಶಿಖರಕ್ಕೆ ಮೆಟ್ಟಿಲುಗಳು ಸಸ್ಯಗಳಿಂದ ಸುತ್ತುವರೆದು ಇದು ಚಳಿಗಾಲದ ಪಕ್ಷಿಗಳಾದ ಹಾಡು ಹಕ್ಕಿಗಳಿಗೆ ಹಾಗೂ ಕೋಗಿಲೆಗಳಿಗೆ ಉತ್ತಮ ವಾಸಸ್ಥಾನವಾಗಿದೆ .
ಸುರೇಶ್ ರವರಿಗೆ ಇದು ಅಬಿಮಾನ ನಿಜ ವ್ಯಾಮೋಹವು ಇರಬಹುದೇನೊ ಆದರೆ ಹೊಗಳಿಕೆಯ ಮುಜುಗರಕ್ಕೆ ನಿಮ್ಮನ್ನು ಸಿಲುಕಿಸಲು ಖಂಡೀತ ಹೇಳಿಲ್ಲ ನಿಮ್ಮ ಮಾತು ನಿಜ ಎಲ್ಲವೂ ರೂಡಿಯಾಗುತ್ತದೆ ನನ್ನ ೧೮ನೆ ವಯಸ್ಸಿನಲ್ಲಿ ತಂದೆ ದೂರವಾದರು ಇರುವುದು ಅಭ್ಯಾಸವಾಯಿತು ನಂತರ ತಾಯಿ ಹೋದರು ದುಖಃವೆ ಆದರೆ ಅವರಿಲ್ಲದ್ದು ಅಭ್ಯಾಸವಾಯಿತು ಈ ಭೂಮಿಯಲ್ಲಿ ಯಾವುದೂ ಅನೀವಾರ್ಯವಲ್ಲ ಕಡೆಗೆ ಈ ವಿಶಾಲ ವಿಶ್ವದಲ್ಲಿ ಈ ಭೂಮಿಯೂ ಅನಿವಾರ್ಯವಲ್ಲ ! ! ! ! ಈ ಭೂಮಿ ಇಲ್ಲದಿದ್ದರು ಎಲ್ಲವೂ ಇದ್ದೆ ಇರುತ್ತದೆ . ಹಾಗೆಂದು ನಾವು ಏನನ್ನು ಬಿಡಲಾಗದು , ಬದುಕಲು ಈ ವ್ಯಾಮೋಹ ಅವಶ್ಯಕ ಆಸಕ್ತಿ ಅವಶ್ಯಕ ಇಲ್ಲದಿದ್ದರೆ ಬದುಕೆ ನೀರಸ ಸಂಪದ ಅನಿವಾರ್ಯವಲ್ಲ ಆದರೆ ಸಂಪದದಲ್ಲಿದ್ದೇನೆ ಎಂಬ ಬಾವ ಸಂತಸ ಕೊಡುವದಲ್ಲವೆ ಬೇಡ ಬಿಡಿ ಬಹಳ ಕಾಲದ ನಂತರ ಬಂದ ನಿಮಗೆ ಮೊದಲ ದಿನವೆ ಚರ್ಚೆಯ ಕಿರಿಕಿರಿ ಮಾಡಿದ್ದರೆ ಬೇಸರ ಅನಿಸಬಹುದು ನಿಮ್ಮ ಪಾರ್ಥಸಾರಥಿ
ತ್ರಿವೇಣಿಯವರೆ , ತುಂಬಾ ಸುಂದರವಾದ ಕೀರ್ತನೆಯನ್ನು ಕೊಟ್ಟಿದ್ದಕ್ಕಾಗಿ ಧನ್ಯವಾದಗಳು . " ಗೋಪುರ ಶಿಲ ತೃಣಾಂಕುರವ ತೋರುವ ಚರಣ " ಎಂದರೆ ನನಗೂ ಅರ್ಥವಾಗಲಿಲ್ಲ . ಆದರೆ , " ಗೋಕುಲ ಶಿಲಾ ತೃಣಾಂಕುರವ ತೋರುವ ಚರಣ " ಎಂದರೆ , " ಗೋಕುಲದ ಶಿಲೆ , ಹುಲ್ಲು ( ಮೊದಲಾದ ) ಸ್ಥಳಗಳಲ್ಲಿ ಆಟವಾಡಿ , ಅವುಗಳನ್ನು ತನ್ನಲ್ಲಿ ತೋರುತ್ತಿರುವ ಚರಣಗಳು " ಎನ್ನುವ ಅರ್ಥ ಬರಬಹುದೇನೊ ?
ನಾನಲ್ಲಿ ಅರೆಘಳಿಗೆ ನಿಂತು ಮುಂದಡಿಯಿಟ್ಟೆ . ಮುಂದಿನೊಂದು ತಿರುವಿನಲ್ಲಿ ಎಷ್ಟೇ ತಡೆದರೂ ಕಣ್ಣಿನಿಂದ ಚಿಮ್ಮಿದ ಒರತೆಯನ್ನು ಅಳಿಸಲು ಕೈಯೆತ್ತಿದೆ . ತಡೆದ ಅವನು ಕರ್ಚೀಫು ಕೈಗಿಟ್ಟ . ಮಾತುಗಳು ಮೌನಕೋಟೆಯ ಸುತ್ತ ಗಸ್ತು ತಿರುಗಿ ಸುಸ್ತೆದ್ದು ಹೋಗಿ ತೆಪ್ಪಗಾದವು . ಆವತ್ತು ರಾತ್ರಿಯ ಪಯಣಕ್ಕೊಂದು ವಿರಾಮವಿತ್ತು ನೆಲಕ್ಕೊರಗಿದೆವು . ಆಕಾಶ ಚಾವಣಿಯ ಡೇರೆಗೆ ಚಂದಿರ ತಾರೆಗಳ ಶಾಂಡೆಲಿಯರ್ ಝಗ್ಗೆಂದಿತ್ತು . ನಡೆದ ಆಯಾಸವನ್ನೇ ಮರೆಸುವ ಗಾನದಿಂಪಿನ ಊಟವಿಟ್ಟಿದ್ದ ಅವನು ನನಗೆ . ಅವನ ದಣಿದ ಕಂಗಳಿಗೆ ನಾನು ತುಟಿಯೊತ್ತಿದೆ . ಈ ಅಪರಿಚಿತ ನನ್ನ ಪಯಣದ ಹಾದಿಯಲ್ಲಿ ಜೊತೆ ಜೊತೆಗೇ ಹೆಜ್ಜೆ ಹಾಕಿ ನನಗರಿವಿಲ್ಲದೆ ನನ್ನೊಳಮನೆಗೆ ನಡೆದುಹೋಗಿಬಿಟ್ಟಿದ್ದ . ಹೊರತರುವ ಬಗೆಯೆಂತೋ ಗೊತ್ತಿಲ್ಲ . ಹೊರತರಲು ನಂಗೆ ಇಷ್ಟವೂ ಇಲ್ಲ .
ಮೌನಕ್ಕೆ ಜಾರಿದ ಮಾತುಗಳಿಲ್ಲದ ಇರುಳ ಮೋಹಕತೆಗೆ . . . . . ಮನಸೋತ ಮನಸಿನಾಳದಲ್ಲಿ ನಿನ್ನೊಂದಿಗೆ ಆಡಿ ಮುಗಿಸಿರುವ ನುಡಿಗಳ ಮುತ್ತುಗಳೆ ತುಂಬಿವೆ , ನಿನ್ನೆದೆಯ ಋಣ ನನ್ನ ಮನಸೊಳಗೆ ಒಲವ ಕೃತಜ್ಞತೆಯನ್ನ ಉಕ್ಕಿ ಹರಿಸಿದೆ / ಇರುಳ ಮೋಹಕತೆಗೆ ಮನಸೋತ ಮನಸು ಹಣೆದಿದ್ದ ಕನಸುಗಳಲ್ಲೆಲ್ಲ ನಿನ್ನದೆ ಕಂಪನ್ನ ಗಾಳಿ ಬಳಿದಂತೆ ನನ್ನೆಲ್ಲ ಭಾವಗಳು ನಿನ್ನುಸಿರ ಮಳೆಯಲ್ಲಿ ತೊಯ್ದಂತೆ . . . ಭ್ರಮೆಯಲ್ಲಿ ತೇಲಿದೆ ನನ್ನೆದೆಯ ಭಾವಗಳು / / ದಾಸವಾಳದ ಹೂವ ಒಡಲು ಹೊಕ್ಕ ಜೇನುದುಂಬಿಯ ಹಾಗಾಗಿದೆ ನನಗೆ . . . ನಿನ್ನ ಎದೆಯಾಳದಲ್ಲಿ ಅದೆಷ್ಟು ಒಲವಿನ ಭಂಡಾರವಿತ್ತಲ್ಲ , ಮನಸ ತೆರೆದು ತೋರಲಾರೆ ಕನಸಿನಾಳಕ್ಕೆ ನಿನ್ನ ಕೈಹಿಡಿದು ಕರೆದೊಯ್ಯಲಾರೆ . . . . ನನ್ನೊಲವು ಎದೆಯೊಳಗೆ ಬೆಚ್ಚಗಿದೆ ವಿವರಣೆಗೆ ಪದಗಳಿಲ್ಲದ್ದಿದ್ದರೂನೂ / ಕಣ್ಣಕನ್ನಡಿಯಲ್ಲಿ ಪ್ರತಿ ಫಲಿಸುವ ನಿನ್ನ ಬಿಂಬಕ್ಕೆ ಒಂದು ಕನಸಿನ ಚೌಕಟ್ಟು ಹಾಕಲಾಗುವಂತಿದ್ದರೆ ! ನನ್ನೆದೆಯ ಒಳ ಮನೆಯಲ್ಲೆ ನಿನ್ನ ಚಿತ್ರವ ಕಾಪಿಡುತ್ತಿದ್ದೆ , ಸಂಭ್ರಮವನ್ನೆಲ್ಲ ಮಾರುವ ಸಂತೆಯೊಂದು ಇದ್ದಿದ್ದರೆ ಅಲ್ಲೆ ಮೂಲೆಯಲ್ಲಿ ಸಂಕಟಗಳನ್ನೂ ಕೊಳ್ಳುವ ರದ್ದಿ ಅಂಗಡಿಯ ಯಾರಾದರೂ ತೆರೆದಿದ್ದರೆ , ಯಥೇಚ್ಛವಾಗಿರುವ ನನ್ನೆಲ್ಲ ನೋವುಗಳನ್ನ ಅಲ್ಲಿ ಸಿಕ್ಕಷ್ಟು ಬೆಲೆಗೆ ಬಿಕರಿಗಿಡುತ್ತಿದ್ದೆ . . . ಅದೇ ದುಡ್ಡಲ್ಲಿ ಒಂದಿಷ್ಟು ಖುಷಿಗಳ ಕೊಂಡುತಂದು ನಿನ್ನೆದುರು ಸುರಿಯುತ್ತಿದ್ದೆ / / ಮನಸ ಅರಳಿಸೋ ಹಾದಿಯ ಮೌನ ಕರಗಿಸೊ ದಾರಿಯ . . . . ಕಳೆದುಕೊಂಡು ದಿಕ್ಕು ತಪ್ಪಿದ ನನಗೆ , ನಿನ್ನ ಜೊತೆ ಕಳಚಿ ಹೋದ ನಂತರ ರೆಕ್ಕೆ ಮುರಿದ ಹಕ್ಕಿಯಂತಾಗಿದ್ದೇನೆ / ಸಂಜೆಗಪ್ಪಿನ ಮತ್ತಲ್ಲಿ ಮನಸು ನಿನ್ನೆದೆಯ ಜಾಡಿಗೆ ಮತ್ತೆ ಹೊರಳಿದೆ . . . ನಾವಿಬ್ಬರೂ ಜೊತೆಯಾಗಿ ಕಳೆದಿದ್ದ ಕ್ಷಣಗಳ ಹಿತವಾದ ಕನವರಿಕೆಗೆ , ಮುದುಡಿದ್ದ ನನ್ನ ತುಟಿಗಳ ಅಂಚಲೂ ಮುಗುಳ್ನಗುವರಳಿಸಿದೆ / / ನೆನಪಿನ ಕಂಬಳಿ ಹೊದ್ದ ಬಣ್ಣದ ಕನಸುಗಳಿಗೆ ಇರುಳೆಲ್ಲ ಸವಿನಿದ್ದೆ . . . ಮನಸು ಕನಸ ಕಿವಿಯಲ್ಲಿ ಉಸುರಿದ ಗುಟ್ಟನ್ನೆಲ್ಲ , ಸನಿಹವೆ ಸುಳಿಯುತ್ತಿದ್ದ ತಣ್ಣನೆ ಗಾಳಿ ಕದ್ದು ಕೇಳಿಸಿಕೊಂಡಿತು . . ! / ಹಗಲು ಹುಟ್ಟಿದ ಕ್ಷಣ ಇರುಳು ಕಣ್ಮುಚ್ಚಿದ ಮುಂಬೆಳಕಲ್ಲಿ ಬೀಳುವ ಕನಸೆಲ್ಲ ಸಾಕಾರವಾಗುತ್ತವಂತೆ ನಿಜಾನ ? ಹಾಗಿದ್ದಲ್ಲಿ ನೀನು ಮರಳಿ ಬರಬೇಕಿತ್ತಲ್ಲ ? , ನನ್ನ ಮುಂಗುರುಳ ನೇವರಿಸಿ ಹಣೆಗೆ ಮುತ್ತಿಡಬೇಕಿತ್ತಲ್ಲ ? ನಾನು ಕನಸಲ್ಲಿ ಕಂಡದ್ದು ಇದನ್ನೆ ತಾನೇ / /
ಕೇಳುವುದೂ ಒಂದು ಕಲೆ . ಹೌದು , ಕೇಳುವ ಕಲೆ ಸುಲಭಸಾಧ್ಯವಾದುದಲ್ಲ . ಕೇಳಿಸಿಕೊಳ್ಳುವಾಗ ನಮ್ಮ ಮನಸ್ಸಿನಲ್ಲಿ ಆಗಲೇ ಮೂರ್ತಗೊಂಡ ಯಾವುದೋ ಕಲ್ಪನೆ , ಯಾವುದೋ ದೃಷ್ಟಿಕೋನ ಸಿದ್ಧವಾಗಿಯೇ ಇರುತ್ತದೆ , ಮತ್ತು ಅದಕ್ಕೆ ಅನುಗುಣವಾಗಿಯೇ ನಾವು ಕೇಳಿಸಿಕೊಳ್ಳುತ್ತಿರುತ್ತೇವೆ . ಆ ಬಿಂಬಗಳ ಮುಖಾಂತರ , ನಮ್ಮ ಆಸೆ ಆಕಾಂಕ್ಷೆಗಳ ಮುಖಾಂತರ , ಭಯ - ಕಳವಳಗಳ ಮುಖಾಂತರ ನಮಗೆ ಏನು ಕೇಳಲು ಆಸೆಯೋ ಅದನ್ನೇ ಕಿವಿ ಕೇಳುತ್ತದೆ , ಮನ ಗ್ರಹಿಸುತ್ತದೆ . ಕೆಲವು ಸಲ ಕೇವಲ ಹಾಡುಗಾರನ ಕಂಠ ಮಾತ್ರವೇ ಕೇಳಿಸಿದರೆ , ಇನ್ನೊಮ್ಮೆ ನಿಮ್ಮ ಮನ ಪ್ರಶಾಂತವಾಗಿದ್ದಲ್ಲಿ ಹಿಂಬದಿಯ ನವಿರಾದ ತಂಬುರದ ಮೀಂಟುವಿಕೆಯೂ ಸುಸ್ಪಷ್ಟವಾಗಬಲ್ಲುದು . ಇದು ಕೇವಲ ಕೇಳುವಿಕೆಗೇ ಸೀಮಿತವಾದದ್ದಲ್ಲ . ನೋಡುವಿಕೆ , ಕಲಿಯುವಿಕೆ ಇತ್ಯಾದಿಗಳಿಗೂ ಅನ್ವಯಿಸುತ್ತದೆ . ಗುರುಗಳ ಪಾಠ ಕೇಳುತ್ತಿರುವಾಗ ಎಲ್ಲವೂ ಸ್ಪಷ್ಟವಾದಂತೆನಿಸಿದ್ದು , ಮನೆಗೆ ಹೋಗಿ ವಿಚಾರಿಸಿದಾಗ ಏನೂ ಅರ್ಥವಾಗಿಯೇ ಇಲ್ಲ ಎನಿಸಬಹುದು , ಅಥವಾ ಇನ್ನಾವುದೋ ಸೂಕ್ಷ್ಮತೆಯನ್ನು ಗುರುಗಳು highlight ಮಾಡಿಯೇ ಇಲ್ಲ , ಅನ್ನಿಸಬಹುದು .
ಹೀಗೂ ಉಂಟೆ ? ಅನ್ನಿಸ್ತು . ಆಮೇಲೆ ನಾನು ಫೂಲ್ ಆದ್ರೂ ಪರವಾಗಿಲ್ಲ . ಆದರೆ ಇಂಥ ಸುದ್ದಿ ಕನಸಲ್ಲೂ ಬರಬಾರದಪ್ಪ . ಈಗ ಸ್ವಲ್ಪ ದಿನದಿಂದಷ್ಟೇ ಸಂಪದಕ್ಕೆ ಬಂದು ಅಂತರ್ಜಾಲದಲ್ಲಿ ಕನ್ನಡ ಓದ್ತಾ ಖುಷಿ ಪಡ್ತಾ ಇದೀನಿ . ಅದಕ್ಕಾಗಲೇ ಕತ್ರಿ ಬಿತ್ತಾ ಅನ್ನಿಸಿಬಿಟ್ಟಿತ್ತು . ನನ್ನಂತೆ ಮೂರ್ಖರಾದ ಎಲ್ಲರಿಗೂ ಮೂರ್ಖರ ದಿನದ ಶುಭಾಶಯಗಳು .
೧ . ಸುವ್ಯವಸ್ಥೆಯ ಹೆಸರಿನಲ್ಲಿ ದೇವ ಸ್ಥಾನಗಳ ಧಾರ್ಮಿಕ ವಿಧಿಗಳ ಮೇಲೆ ಬರಲಿವೆ ಕಟ್ಟುಪಾಡುಗಳು ! ೨ . ಸರಕಾರವು ದೇವಸ್ಥಾನಗಳ ಉತ್ಪನ್ನವನ್ನು ಇತರ ಪಂಥೀಯರಿಗೆ ಮತ್ತು ರಾಜಕೀಯ ಲಾಭಕ್ಕಾಗಿ ಬಳಸುವುದು ! ೩ . ದೇವಸ್ಥಾನಗಳ ವಿಶ್ವಸ್ತರು , ಆಡಳಿತ ಗಾರರು ಮತ್ತು ಸಿಬ್ಬಂದಿಗಳ ಹುದ್ದೆಗಾಗಿ ಅಹಿಂದೂಗಳನ್ನು ನೇಮಿಸಲಾಗುವುದು ! ೪ . ದೇವಸ್ಥಾನಗಳ ವ್ಯವಸ್ಥಾಪನೆಯು ಭಕ್ತರಲ್ಲ , ಭ್ರಷ್ಟ ಮತ್ತು ಧರ್ಮದ್ರೋಹಿ ಅಧಿಕಾರಿಗಳ ಕೈಗೆ ಹೋಗುವುದು ! ದೇವಸ್ಥಾನಗಳ ಸರಕಾರೀಕರಣದ ನಂತರ ದೈವನಿಧಿ ಲೂಟಿಯ ಉದಾಹರಣೆ ೧ . ತಿರುಪತಿ … Continue reading →
ಭೂಮಿ ಖರೀದಿದಾರನಿಗೆ ಇರಬೇಕಾದ ಎಚ್ಚರ - ಪಿ . ಟಿ . ಸಿ . ಎಲ್ ಕಾಯ್ದೆ ಒಂದು ಚಿಂತನೆ ಕಾನೂನು ಮಹತ್ತರ ಉದ್ದೇಶಗಳಿಗೆ ಜಾರಿಯಾಗುತ್ತದೆ . ಅದರ ಸದ್ಬಳಕೆಯು ನಡೆಯಬೇಕಾದ್ದು , ಸರ್ಕಾರದ ಮತ್ತು ಅಧಿಕಾರಿಗಳ ಪ್ರಾಮಾಣಿಕತೆಯಿಂದ ಎಂಬುದು ಪ್ರಬುದ್ದರ ಅನಿಸಿಕೆಯಾಗಿರುವುದರಲ್ಲಿ ಸಂದೇಹವಿಲ್ಲ . ಆದರೆ ಅಧಿಕಾರಿಗಳು ಕಾನೂನು ಜಾರಿ ಮಾಡದೆ ಇದ್ದರೆ ಏನಂತೆ ಅದರ ಸದುಪಯೋಗ ನಾವು ಪಡೆಯೋಣ ಎಂದು ಅನೇಕ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಪರವಾಗಿ ಖಾಸಗಿ ಕಾನೂನು ಸಮರ ನಡೆಯುತ್ತಿರುವುದರ ಹಿನ್ನೆಲೆಯಲ್ಲಿ ಕಾನೂನು ಜಾರಿಗೆ ಸರ್ಕಾರಗಳು ಏಕೆ ತಾವಾಗೆ ಮುಂದಾಗಲಿಲ್ಲ ಎಂಬ ಚಿಂತನೆ ಮೂಡುತ್ತದೆ . ಇದಕ್ಕೆ ಅಧಿಕಾರಿಗಳು ತೋರಿರುವ ಅಸಡ್ಡೆ ಕುರುಡುತನವೋ ಅಥವ ಜಾಣ ಕುರುಡುತನವೋ ತಿಳಿಯದಾಗಿದೆ . ಆದರೆ ಅಂತಹ ಕಾನೂನು ಯಾವುದು ? ನಮ್ಮಲ್ಲಿ ಅದರ ಬಗ್ಗೆ ಯಾವ ರೀತಿಯ ಪರಿಕಲ್ಪನೆ ಇದೆ ಎಂಬುದನ್ನು ಅರಿಯಲು ಮೊದಲಿಗೆ ಅದನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಿರುತ್ತದೆ . ವಿಮರ್ಶಾತ್ಮಕ ಅರಿವು ಮೂಡಿಸಿಕೊಳ್ಳುವುದು ಅವಶ್ಯವಿರುತ್ತದೆ . ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೆಲವು ಸ್ವತ್ತು ಪರಭಾರೆ ನಿಷೇದ ಕಾಯ್ದೆ ೧೯೭೮ ( ಪಿ . ಟಿ . ಸಿ . ಎಲ್ . ಕಾಯ್ದೆ ) ವಿಚಾರವಾಗಿ ಅನೇಕ ಕೇಸುಗಳು ರಾಜ್ಯದಾದ್ಯಂತ ನೊಂದಾವಣಿಯಾಗಿ ಅನೇಕರು ಜಮೀನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ . ಕೆಲವು ವಿಪರ್ಯಾಸವೇನೆಂದರೆ ಕೆಲವರು ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆದು ಕೊಂಡಿರುತ್ತಾರೆ . ಅಲ್ಲಿಯೂ ಪಜೀತಿಗಳಾಗಿವೆ , ಇವೆಲ್ಲವುದಕ್ಕೆ ಮೂಲ ಕಾರಣ ಅನೇಕರಲ್ಲಿ ಈಗಲೂ ದ್ವಂದ್ವಗಳು , ಗೊಂದಲಕಾರಿ ತಪ್ಪು ಕಲ್ಪನೆಗಳು ಮತ್ತು ತಪ್ಪು ಅಂಶಗಳು ಇರುವುದು , ಕಾನೂನನ್ನು ಸರಿಯಾಗಿ ಅರ್ಥೈಸದೆ ಎಡವಿರುವುದು ಮುಖ್ಯವಾಗಿರುತ್ತದೆ . ಸದರಿ ಪಿ . ಟಿ . ಸಿ . ಎಲ್ ವ್ಯಾಪ್ತಿಗೆ ಯಾವ ಜಮೀನು ಬರುವುದು ಎಂದು ನಿರ್ದರಿಸಬೇಕಾದರೆ , ಸದರಿ ಜಮೀನಿನ ಮೂಲ ಮಾಲೀಕರು ಯಾರು ಎಂದು ಪರಿಶೀಲಿಸಬೇಕಿರುತ್ತದೆ . ಮೂಲದಲ್ಲಿ ಸದರಿ ಜಮೀನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಭೂ ಮಂಜೂರು ಆಗಿರುವ ಜಮೀನು ಆಗಿರಬೇಕಿರುತ್ತದೆ . ಸರ್ಕಾರದಿಂದ ಮಂಜೂರಾತಿಯಾಗಿಲ್ಲದ ಜಮೀನು ಪಿ . ಟಿ . ಸಿ . ಎಲ್ ವ್ಯಾಪ್ತಿಗೆ ಬರುವುದಿಲ್ಲ . ಪರಿಶಿಷ್ಟರು ಇತರರಿಂದ ಗ್ರಾಂಟ್ ಅಲ್ಲದ ಜಮೀನನ್ನು ಕೊಂಡುಕೊಂಡು ಅನುಭವಿಸುತ್ತಿರುವ ಜಮೀನುಗಳಿಗೆ ಪಿ . ಟಿ . ಸಿ . ಎಲ್ ಕಾಯ್ದೆ ಅನ್ವಯಿಸುವುದಿಲ್ಲ . ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಮಂಜೂರಾತಿಯಾದ ಜಮೀನು ಪರಭಾರೆ ಮಾಡಲು ಸರ್ಕಾರದಿಂದ ೦೧ - ೦೧ - ೧೯೭೯ ರ ನಂತರದಲ್ಲಿ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ . ಅನುಮತಿ ಇಲ್ಲದೆ ಪರಭಾರೆ ಮಾಡಿದ್ದಲ್ಲಿ , ಅಂತಹ ಜಮೀನನ್ನು ಮತ್ತೆ ಮುಟ್ಟುಗೋಲು ಹಾಕಿಕೊಂಡು ಸದರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಮತ್ತೆ ವಾಪಸ್ ಕೊಡಿಸುವ ಪ್ರಕ್ರಿಯೆ ಪಿ . ಟಿ . ಸಿ . ಎಲ್ ಕಾಯ್ದೆಯ ಕೆಳಗೆ ಇರುತ್ತದೆ . ಮಂಜೂರಾತಿ ಪತ್ರದಲ್ಲಿ ಹದಿನೈದು ವರ್ಷ ಪರಭಾರೆ ಮಾಡಬಾರದು ಎಂದು ಇದ್ದರೂ ಕೂಡ ಸದರಿ ನಿಗದಿಯಾದ ೦೧ - ೦೧ - ೧೯೭೯ ರ ನಂತರ ನಡೆಯುವ ಎಲ್ಲಾ ಪರಭಾರೆಗಳು ಸರ್ಕಾರದ ಅನುಮತಿ ಪಡೆಯುವುದು ಕಲಂ ೪ ( ೨ ) ರ ರೀತ್ಯ ಕಡ್ಡಾಯವಾಗಿರುತ್ತದೆ . ಸದರಿ ಕಾಯ್ದೆಯನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಅನೇಕ ತೀರ್ಪುಗಳಲ್ಲಿ ಬಹಳ ಸ್ವಷ್ಟವಾಗಿ ಅರ್ಥೈಸಿರುತ್ತೆ . ೦೧ - ೦೧ - ೧೯೭೯ ಕ್ಕಿಂತ ಮುಂಚೆ ಪರಭಾರೆ ಮಾಡಿರುವ ಜಮೀನುಗಳಿಗೆ ಅನೇಕ ವ್ಯಾಕ್ಯಾನಗಳು ಮತ್ತು ಕಾನೂನು ಅರ್ಥೈಸುವಿಕೆಯಲ್ಲಿ ವಿಭಿನ್ನ ರೀತಿಯ ತೀರ್ಪುಗಳು ಲಭ್ಯವಿರುತ್ತದೆ . ಸಂಧರ್ಬೋಚಿತವಾಗಿ ಸದರಿ ಕಾನೂನು ಅರ್ಥೈಸುವಿಕೆ ಅಳವಡಿಸಿಕೊಳ್ಳಬೇಕಿರುತ್ತದೆ . ಮಾನ್ಯ ಉಚ್ಚ ನ್ಯಾಯಾಲಯದ ದ್ವಿಸದಸ್ಯತ್ವದ ಪೀಠದಿಂದ ಆದೇಶಿಸಲ್ಪಟ್ಟಿರುವ ( ೧೯೯೩ ರಲ್ಲಿ ಪ್ರಕಟವಾಗಿರುವ ) ತೀರ್ಪಿನ ಪ್ರಕಾರ ಕಾನೂನು ಜಾರಿಯಾದ ೩೦ ವರ್ಷದ ಹಿಂದೆ ಅಂದರೆ ೦೧ - ೦೧ - ೧೯೪೯ ಕ್ಕಿಂತ ಮುಂಚೆ ಪರಭಾರೆ ಆಗಿರುವ ಸದರಿ ಅಂತಹ ಜಮೀನುಗಳ ಬಗ್ಗೆ ಯಾವ ಕ್ರಮವು ಜರುಗಿಸಲಾಗದು ಎನ್ನುತ್ತದೆ . ಇಲ್ಲಿ ೧೮೮೮ ರಿಂದಲೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಜಮೀನು ಮಂಜೂರಾತಿಯಾಗುತ್ತಿತ್ತು ಎನ್ನುವುದು ವಾಸ್ತವಿಕ ಸಂಗತಿಯಾಗಿರುತ್ತದೆ . ಸದರಿ ಜಮೀನು ಮಾರುವವರಿಗೆ ಯಾವಾಗ ಪ್ರಾಪ್ತಿಯಾಯಿತು ? ಅವರು ಹೊಂದಿರುವ ಸ್ವಾಧೀನದ ವರ್ಷಗಳು ಎಷ್ಟು ? ಅವರ ಹಿಂದಿನ ಮಾರಾಟಗಾರರಿಗೆ ಹೇಗೆ ಪ್ರಾಪ್ತವಾಯಿತು ? ೧೮೮೮ ರಿಂದ ೦೧ - ೦೧ - ೧೯೪೯ ರವರೆಗೆ ಯಾರ ಸ್ವಾಧೀನದಲ್ಲಿ ಸದರಿ ಜಮೀನು ಇತ್ತು ? ಸದರಿ ಭೂ ಮಂಜೂರಾತಿ ನಿಬಂದನೆಗಳನ್ನು ಉಲ್ಲಂಘನೆ ಮಾಡಲಾಗಿದೆಯೇ ? ಗ್ರಾಂಟ್ ( ಮಂಜೂರಾತಿ ) ಆದ ತಾರೀಖಿನಲ್ಲಿ ಯಾವ ಕಾನೂನು ಜಾರಿಯಲ್ಲಿ ಇತ್ತು ? ಗ್ರಾಂಟ್ ಯಾವ ನಿಬಂದನೆಗಳನ್ನು ಒಡ್ಡಿ ನೀಡಾಲಾಗಿದೆ ? ಗ್ರಾಂಟ್ ಉಚಿತವಾಗಿ ನೀಡಲಾಗಿತ್ತೆ , ಅಪ್ಸೆಟ್ ಪ್ರೈಸ್ ಫಿಕ್ಸ್ ಮಾಡಲಾಗಿತ್ತೆ ? ಹರಾಜು ಮೂಲಕ ಮಂಜೂರಾತಿ ಆಗಿರುತ್ತದೆಯೇ ? ಎಷ್ಟು ವರ್ಷಗಳ ವರೆಗೆ ಪರಬಾರೆ ಮಾಡಬಾರದು ಎಂಬ ನಿರ್ಬಂದವಿರುತ್ತದೆ ? ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರವನ್ನು ಸದರಿ ಜಮೀನಿನ ಬಗ್ಗೆ ಇರುವ ದಾಖಲಾತಿಗಳನ್ನು ಪರಿಶೀಲಿಸಿ ನೋಡಿ ಕಂಡುಕೊಳ್ಳಬೇಕಿರುತ್ತದೆ . ಅಂತಹ ಮೂಲದಾಖಲಾತಿಗಳು ಲಭ್ಯವಿಲ್ಲದೆ ಹೋದಲ್ಲಿ ಆ ದಿನದ ಇತರೆ ದಾಖಲಾತಿಗಳನ್ನೂ ಪರಿಶೀಲಿಸಿ ನಿರ್ದರಿಸಬೇಕಿರುತ್ತದೆ . ಜಮೀನಿಗೆ ಸಾಮಾನ್ಯವಾಗಿ ಅತ್ಯವಶ್ಯವಾಗಿ ಈ ಬಗ್ಗೆ ಪರಿಶೀಲನೆಗೆ ನೋಡಬೇಕಾದ ದಾಖಲಾತಿಗಳು ಯಾವುದು ? ಕರ್ನಾಟಕದಲ್ಲಿ ೧೯೬೮ ರಿಂದ ಆರ್ . ಟಿ . ಸಿ ( ಗೇಣಿ ಮತ್ತು ಪಹಣಿ ಪತ್ರಿಕೆ ) ಹಾಲಿ ಇರುವ ರೂಪದಲ್ಲಿ ನಿರ್ವಹಿಸಲಾಗಿದೆ , ಇದರಲ್ಲಿ ೧೯೬೮ ರಿಂದ ೨೦೦೦ ನೇ ಇಸವಿಯವರೆಗೆ ಕೈ ಬರಹದ ಪಹಣಿ ಬರುತ್ತೆ , ೨೦೦೦ ದ ನಂತರ ಕಂಪ್ಯೂಟರ್ ಪಹಣಿ ಬರುತ್ತೆ . ಇದರಲ್ಲಿ ಯಾವ ರೀತಿಯಲ್ಲಿ ಹಾಲಿ ಮಾಲೀಕ ಮತ್ತು ಸ್ವಾಧೀನವಿರುವ ಉಳಿಮೆದಾರನು ಸ್ವಾಧೀನಕ್ಕೆ ಬಂದಿರುವನೆಂಬ ಮಾಹಿತಿ ಇರುತ್ತದೆ . ಅನೇಕ ಆರ್ . ಆರ್ . ನಂಬರ್ ಉಲ್ಲೇಖಗಳು , ಐ . ಸಿ . ಆರ್ ನಂಬರ್ ಉಲ್ಲೇಖಗಳು , ಎಂ . ಆರ್ . ಅಥವ ಎಂ . ಟಿ ಉಲ್ಲೇಖಗಳು ಪಹಣಿಯ ೧೦ ಮತ್ತು ೧೧ ನೇ ಕಾಲಂ ನಲ್ಲಿ ನಮೂದಿರುತ್ತದೆ . ಸದರಿ ಅಂತಹ ದಾಖಲೆಗಳನ್ನು ತೆಗೆಸಬೇಕಿರುತ್ತದೆ ಮತ್ತು ದಾಖಲೆಯಲ್ಲಿರುವ ಉಲ್ಲೇಖಿತ ವಿವರಗಳನ್ನು ಪರಿಶೀಲಿಸಬೇಕಿರುತ್ತದೆ . ಸದರಿ ಜಮೀನುಗಳ ಬಗ್ಗೆ ತಾಲೂಕು ಕಚೇರಿಯಲ್ಲಿ ದರಖಾಸ್ತು ರಿಜಿಸ್ಟರ್ ನಿರ್ವಹಿಸಲಾಗಿರುತ್ತದೆ , ಅಂತಹ ರಿಜಿಸ್ಟರ್ ಅನ್ನು ಪರಿಶೀಲಿಸಿ ಸದರಿ ಜಮೀನು ಪರಿಶಿಷ್ಟರಿಗೆ ಗ್ರಾಂಟ್ ಮಾಡಿರುವ ಹಿನ್ನೆಲೆ ಉಳ್ಳದ್ದೆ ಎಂದು ಪರಿಶೀಲಿಸಬಹುದಿರುತ್ತದೆ . ೧೯೬೮ ಕ್ಕಿಂತ ಮುಂಚೆ ಮತ್ತು ನಂತರದಲ್ಲಿ ಕರ್ನಾಟಕದ ವಿವಿದಕಡೆ ವಿವಿದ ರೀತಿಯಲ್ಲಿ ಕಂದಾಯ ದಾಖಲೆಗಳ ನಿರ್ವಹಣೆಯಾಗಿರುತ್ತದೆ . ಹಳೇ ಮೈಸೂರು ಪ್ರಾಂತ್ಯದಲ್ಲಿ ಪ್ರಚಲಿತ ಕೆಲವು ಕಂದಾಯ ದಾಖಲೆಗಳ ಹೆಸರು ' ಇಂಡೆಕ್ಸ್ ಆಫ್ ಲ್ಯಾಂಡ್ ರೆಕಾರ್ಡ್ ( ಐ . ಎಲ್ . ಆರ್ ) , ನಮೂನೆ - ೧ , ನಮೂನೆ - ೫ , ಖೇತುವಾರು ನಕಲು , ಖರಾಬು ಉತ್ತಾರು , ಅಕಾರ್ ಬಂದ್ , ಸರ್ವೆ ಟಿಪ್ಪಣಿ ನಕಲು , ಆರ್ . ಆರ್ ( ರೆಕಾರ್ಡ್ ಆಫ್ ರೈಟ್ಸ್ ) , ಐ . ಸಿ . ಆರ್ ( ಇನ್ ಹೆರಿಟೆನ್ಸ್ ಕೇಸ್ ರಿಜಿಸ್ಟರ್ ) ಎಂ . ಆರ್ . ( ಮ್ಯುಟೇಷನ್ ರಿಜಿಸ್ಟರ್ ) ಎಂ . ಟಿ ( ಮುಟೇಷನ್ ಟ್ರ್ಯಾನ್ಸ್ಯಾಕ್ಶನ್ ) . ಇವುಗಳ ಜೊತೆಯಲ್ಲಿ ೧೮೫೦ ರಿಂದಲೂ ಹಲವು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಾಖಲೆಗಳು ಲಭ್ಯವಿರುತ್ತವೆ . ಸದರಿ ಕಚೇರಿಯಲ್ಲಿ ಎನ್ಕಂಬರೆನ್ಸ್ ಪ್ರತಿಯನ್ನು ತೆಗೆಸಬೇಕು ಇದರಲ್ಲಿ ಗ್ರಾಂಟ್ ಆಗಿರುವ ಬಗ್ಗೆ ಉಲ್ಲೇಖವಿರುವುದಿಲ್ಲ , ಯಾವ ತಾರೀಖಿನಲ್ಲಿ ಮೂಲ ಕ್ರಯ ಆಗಿದೆ ಎಂಬ ಮಾಹಿತಿ ದೊರೆಯುತ್ತದೆ . ಸದರಿ ಕ್ರಯ ಪತ್ರಗಳಲ್ಲಿ ಕ್ರಯದಾರನಿಗೆ ಯಾವ ರೀತಿಯಲ್ಲಿ ಪ್ರಾಪ್ತವಾಗಿತ್ತು ಎಂಬ ಉಲ್ಲೇಖಗಳನ್ನು ಪರಿಶೀಲಿಸಬೇಕಿರುತ್ತದೆ . ಅಲ್ಲಿ ಲಭ್ಯವಿಲ್ಲದೆ ಹೋದರೆ ಕಂದಾಯ ದಾಖಲೆಗಳಲ್ಲಿನ ಉಲ್ಲೇಖಗಳನ್ನು ಪರಿಶೀಲಿಸಿ ನಿರ್ದಿಷ್ಟವಾದ ಅಭಿಪ್ರಾಯಕ್ಕೆ ಬರಬೇಕಿರುತ್ತದೆ . ಈ ಎಲ್ಲಾ ಅಭಿಪ್ರಾಯಕ್ಕೆ ಬರಲು ನುರಿತ ಸ್ಥಳೀಯ ವಕೀಲರಿಂದ ಮಾತ್ರ ಸಾಧ್ಯಾವಾದ ಕೆಲಸವಾಗಿದ್ದು . ಸದರಿ ಸ್ಥಳೀಯ ವಕೀಲರು ಮಾನ್ಯ ಉಚ್ಚ ನ್ಯಾಯಾಲಯದ ಹಲವಾರು ತೀರ್ಪಿನ ಅಂಶ ಏನು ಹೇಳುತ್ತದೆ , ಕಾಲಮಿತಿ ಕಾನೂನಿನ ಅನ್ವಯ ಅನುಕೂಲವುಂಟೆ , ಸ್ಥಳೀಯ ರೂಡಿಯಂತೆ ಇನ್ನು ಹೆಚ್ಚುವರಿ ದಾಖಲೆ ಎಲ್ಲಿ ಲಭ್ಯ ಮತ್ತು ಅವಶ್ಯ ಎಂಬ ಬಗ್ಗೆ ವಿಮರ್ಶೆ ಮಾಡಿ ಸಲಹೆ ನೀಡುತ್ತಾರೆ . ಕೇವಲ ರಿಯಲ್ ಎಸ್ಟೇಟ್ ಬ್ರೋಕರ್ ಗಳಿಂದ ಆಗಲೀ , ಸಬ್ ರಿಜಿಸ್ಟ್ರಾರ್ ಕಚೇರಿಯ ಮುಂದೆ ಕುಳಿತಿರುವ ಪತ್ರ ಬರಹಗಾರರಿಂದ ಆಗಲೀ ನಿಮ್ಮ ದಾಖಲೆಗಳ ಬಗ್ಗೆ ಪೂರ್ಣ ತನಿಖೆ ಸಾಧ್ಯವಲ್ಲದ ಪರಿಸ್ಥಿತಿ ಇರುತ್ತದೆ . ಈ ಬಗ್ಗೆ ಹಲವು ವಕೀಲರಲ್ಲದ ಪರಿಣಿತರು ಇರುತ್ತಾರೆ ಅಂತಹ ಅನುಭವ ಮಂಟಪವನ್ನು ಹುಡುಕಬೇಕಷ್ಟೆ . ಪಿ . ಟಿ . ಸಿ . ಎಲ್ ಕಾಯ್ದೆಯ ರೀತ್ಯ ಸಕ್ಷಮ ಪ್ರಾಧಿಕಾರಿಯಾದ ಉಪವಿಭಾಗಾದಿಕಾರಿಯು ತನ್ನ ವಿಚಾರಣೆಯಲ್ಲಿ ಸದರಿ ಜಮೀನಿನ ಮೂಲ ಮಾಲೀಕನು ( ಗ್ರಾಂಟಿದಾರನು ) ಪರಿಶಿಷ್ಟ ಜಾತಿ ಅಥವ ಪರಿಶಿಷ್ಟ ಪಂಗಡಕ್ಕೆ ಸೇರಿದವರೆ ಎಂದು ಪರಿಶೀಲಿಸಬೇಕಿರುತ್ತದೆ , ಮತ್ತು ದೃಡ ನಿರ್ದಾರಕ್ಕೆ ಬರಬೇಕಿರುತ್ತದೆ . ಸದರಿ ಮೂಲ ಗ್ರಾಂಟಿದಾರನು ಪರಿಶಿಷ್ಟನೆ ಇಲ್ಲವೆ ಎಂದು ತಿಳಿಸುವುದು ಹಾಲಿ ಬರೆಸಿಕೊಂಡು ಬಂದಿರುವ ವಂಶವೃಕ್ಷದಿಂದ ಆಗಲೀ ಅರ್ಜಿದಾರನು ತಾನು ಸದರಿ ಜಾತಿಯವನೆಂದು ತೋರಿ ಗ್ರಾಂಟಿಯ ವಂಶವೃಕ್ಷ ಹಾಜರು ಪಡಿಸಿದರೆ ಮಾತ್ರ ಸಾಲದು . ವಂಶವೃಕ್ಷವನ್ನು ಯಾವರೀತಿಯಲ್ಲಿ ಪರಿಗಣಿಸಬೇಕು ಎಂಬ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಸ್ಟೇಟ್ ಆಫ್ ಬಿಹಾರ್ ವರ್ಸಸ್ ರಾಧಕೃಷ್ಣಸಿಂಗ್ ಮತ್ತು ಇತರರು ( ಎ . ಐ . ಆರ್ . ೧೯೮೩ ಎಸ್ . ಸಿ . ೬೮೪ ) ಕೇಸಿನಲ್ಲಿ ವಂಶವೃಕ್ಷದ ರುಜುವಾತಿನ ಬಗ್ಗೆ ಮತ್ತು ಅದನ್ನು ಪರಿಗಣಿಸುವ ಬಗ್ಗೆ ಮಾರ್ಗದರ್ಶನವಿರುತ್ತದೆ . ಗ್ರಾಂಟಿಯು ಸದರಿ ಪರಿಶಿಷ್ಟನೆ ಎಂದು ತಿಳಿಸಲು ನೇರ ದಾಖಲಾತಿ ಇರಬೇಕು . ಕಂದಾಯ ದಾಖಲೆಗಳಲ್ಲಿ ಈ ಬಗ್ಗೆ ಹಿಂದೆಯೇ ಅಂತಹ ಜಾತಿ ವಿಚಾರವು ಮಂಜೂರಾತಿ ಅರ್ಜಿಯಲ್ಲಿ ಜಾತಿ ಪ್ರಮಾಣಪತ್ರದೊಂದಿಗೆ ಇರಬೇಕು ಮತ್ತು ದರಖಾಸ್ತು ರಿಜಿಸ್ಟರ್ ನಲ್ಲಿ ಉಲ್ಲೇಖವಿರಬೇಕು . ಸದರಿ ಜಮೀನು ಸರ್ಕಾರದಿಂದ ಮಂಜೂರು ಆಗಿರುವುದೆ ಎಂದು ಪರಿಶೀಲಿಸಬೇಕಿರುತ್ತದೆ . ೦೧ - ೦೧ - ೧೯೭೯ ರ ಹಿಂದೆ ಕ್ರಯ ಆಗಿರುವ ಜಮೀನುಗಳ ಬಗ್ಗೆ ಪರಿಶೀಲಿಸುವ ವೇಳೆಯಲ್ಲಿ ಸದರಿ ಗ್ರಾಂಟ್ ನಿಬಂದನೆ ಉಲ್ಲಂಘನೆ ಆಗಿದೆಯೇ ? ಉಚಿತವಾಗಿ ಗ್ರಾಂಟ್ ನೀಡಲಾಗಿತ್ತೆ ? ಅಪ್ಸೆಟ್ ಪ್ರೈಸ್ ಪಡೆಯಲಾಗಿತ್ತೆ ? ಕ್ರಯ ಆದ ದಿನದಿಂದ ೦೧ - ೦೧ - ೧೯೭೯ ರವೇಳೆಗೆ ಯಾವುದೇ ತೊಂದರೆ ಇಲ್ಲದೆ ಕ್ರಯದಾರನು ೩೦ ವರ್ಷಗಳ ವರೆಗೆ ಸ್ವಾಧೀನದಲ್ಲಿ ಇದ್ದನೆ ? ಎಂಬುದನ್ನು ಪರಿಶೀಲಿಸಬೇಕಿರುತ್ತದೆ . ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪೊಂದರಲ್ಲಿ ( ೨೦೦೯ ) ಎರೇಗೌಡರ ಕೇಸಿನಲ್ಲಿ ಮಾನ್ಯ ಜಸ್ಟೀಸ್ ರಾಮ ಮೋಹನ ರೆಡ್ಡಿ ರವರು ನೀಡಿರುವ ತೀರ್ಪಿನಂತೆ - ಗ್ರಾಂಟಿದಾರನು ಪರಿಶಿಷ್ಟನೆ , ಜಮೀನು ಆತನಿಗೆ ಗ್ರಾಂಟ್ ಆಗಿತ್ತೆ ಎಂಬ ಬಗ್ಗೆ ಯಾವುದೇ ನಿರ್ವಿವಾದವಿಲ್ಲದೆ ಹೋದಲ್ಲಿ ಪಿ . ಟಿ . ಸಿ . ಎಲ್ ವ್ಯಾಪ್ತಿಗೆ ಬರುವುದಿಲ್ಲ ಎಂಬ ಬೇರೆ ಅಂಶಗಳನ್ನು ಖರೀದಿಸಿರುವವನು ರುಜುವಾತುಪಡಿಸಲು ಬದ್ದನಾಗಿರುತ್ತಾನೆ ಎಂದು ಹೇಳಿರುತ್ತದೆ . ಭೂ ಮಂಜೂರಾತಿ ಪಡೆದವರು ಪರಿಶಿಷ್ಟರೆ ಅಲ್ಲವೆ ಎಂಬುದು ಪ್ರಮುಖ ವಿಚಾರವಾಗಿರುತ್ತದೆ . ಉದಾಹರಣೆಗೆ ' ಎ ' ಎಂಬ ಭೂ ಮಂಜೂರಾತಿದಾರನು ಮೇಲ್ಜಾತಿಯವನಾಗಿದ್ದು ಸರ್ಕಾರಕ್ಕೆ ತನ್ನ ಜಾತಿಯನ್ನು ಮಂಜೂರಾತಿಗಾಗಿ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿ ಅದಕ್ಕೆ ಪೂರಕವಾಗಿ ಜಾತಿ ಪ್ರಮಾಣ ಪತ್ರವನ್ನು ಲಗತ್ತಿಸಿರುತ್ತಾನೆ . ನಂತರ ಪರಿಶಿಷ್ಟ ಜಾತಿಯ ಮಹಿಳೆಯನ್ನು ಮದುವೆಯಾಗಿತ್ತಾನೆ ಎಂದು ಅಂದಾಜಿಸೋಣ . ಅವನಿಗೆ ಹುಟ್ಟುವ ಮಗನು ಹಿಂದು ಕಾನೂನಿನಂತೆ ಅವನ ಜಾತಿಗೆ ಸೇರುತ್ತಾನೆ . ಆದರೆ ಸದರಿ ಅಂತಹ ಮಗನು ತನ್ನ ತಾಯಿ ಜಾತಿ ಪ್ರಮಾಣ ಪತ್ರದ ಆಧಾರದಲ್ಲಿ ತನ್ನ ಜಾತಿಯನ್ನು ಪರಿಶಿಷ್ಟನು ಎಂದು ಪಡೆದು ತನ್ನ ತಂದೆಯ ಜಾತಿಯನ್ನು ಪರಿಶಿಷ್ಟನು ಎಂದು ತೋರಲು ಸಾಧ್ಯವೆ ? ಖಂಡಿತ ಆಗಲಾರದು . ಸದರಿ ಕಾರಣಕ್ಕೆ ಭೂ ಮಂಜೂರಿದಾರನ ಭೂ ಮಂಜೂರಾತಿ ದಿನದಲ್ಲಿ ಇದ್ದ ಜಾತಿ ಅಂದಿನ ದಾಖಲಾತಿ ಆಧಾರದಲ್ಲಿ ನಿರ್ದರಿಸಬೇಕಿರುತ್ತದೆ . ಅಂತಹ ಪ್ರಮುಖ ದಾಖಲಾತಿಗಳ ಪೈಕಿ , ಹಳೆಯ ರೇಷನ್ ಕಾರ್ಡ , ( ಜಾತಿ ಮತ್ತು ಸಂಬಂದ ಉಲ್ಲೇಖಗಳು ) ಹಳೆಯ ಜಾತಿ ಪ್ರಮಾಣ ಪತ್ರ , ಗ್ರಾಂಟ್ ಸರ್ಟಿಫಿಕೇಟಿನಲ್ಲಿ ಜಾತಿ ಉಲ್ಲೇಖ , ಅಥವ ಇತರೆ ಹಳೆ ದಾಖಲಾತಿಗಳಲ್ಲಿ ಜಾತಿ ಉಲ್ಲೇಖ ಇರುವುದನ್ನು ಅರ್ಜಿದಾರನು ಹಾಜರು ಪಡಿಸುವ ಅವಶ್ಯಕತೆ ಇರುತ್ತದೆ . ಇಲ್ಲವೆ ಅಂತಹ ಲಭ್ಯ ದಾಕಲಾತಿಯಿಂದ ಸಕ್ಷಮ ಪ್ರಾಧಿಕಾರಿಯು ಪರಿಶೀಲಿಸುವ ಅವಶ್ಯಕತೆ ಇರುತ್ತದೆ . ಈ ರೀತಿಯ ದಾಖಲಾತಿಗಳೇ ಇಲ್ಲದೆ ಮತ್ತು ಅಂತಹವು ಇದ್ದರೂ ಹಾಜರು ಪಡಿಸದೆ ವಿಷಯವನ್ನು ಮುಚ್ಚಿಟ್ಟಿರುವ ಅರ್ಜಿದಾರನಿಗೆ ಕೋರಿರುವ ಪರಿಹಾರವನ್ನು ನೀಡುವುದು ಕಾನೂನು ಭಾಹಿರವಾಗಿರುತ್ತದೆ . ಈ ಬಗ್ಗೆ ಕೆಲವು ಅರ್ಜಿದಾರರು ಕೆಲವು ದಾಖಲಾತಿಗಳನ್ನು ಬೇಕೆಂದೇ ನ್ಯಾಯಾಲಯದ ಮುಂದೆ ಮುಚ್ಚಿಟ್ಟಿರುವುದು ಕಾನೂನು ಭಾಹಿರವೆಂದು ತೋರಲು ಮಾನ್ಯ ಸುಪ್ರೀಂ ಕೋರ್ಟಿನ ತೀರ್ಪು ಇದೆ ( ೨೦೦೫ ( ೬ ) ಎಸ್ . ಸಿ . ಸಿ . ೧೪೯ ) . ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೇ ಅಂತಹ ಗ್ರಾಂಟ್ ಜಮೀನನ್ನು ಕೊಳ್ಳಬಾರಾದು ಎಂಬ ನಿರ್ಬಂದವೂ ಒಳಗೊಂಡಿದೆ , ಇಲ್ಲಿ ಗ್ರಾಂಟಿದಾರರ ಅಸಹಾಯಕತೆ ಮತ್ತು ಬಡತನದ ದುರುಪಯೋಗ ಆಗದಂತೆ ತಡೆಯಲು ರೂಪಿಸಿರುವ ಕಾನೂನು ಇದಾದ್ದರಿಂದ ಇದು ಜಾತಿ ದ್ವೇಶವನ್ನು ಬಿತ್ತುವ ಅಸ್ತ್ರವಲ್ಲ ಎಂಬುದು ತಿಳಿಯಬೇಕಿರುತ್ತದೆ . ಅನೇಕ ಕಡೆಗಳಲ್ಲಿ ಜಮೀನನ್ನು ಪರಭಾರೆ ಮಾಡಿ ಬಡತನದಲ್ಲಿ ಜಮೀನನ್ನು ಕಳೆದುಕೊಳ್ಳುತ್ತಿರುವವರ ಪರಿಸ್ಥಿತಿಯನ್ನು ತಡೆಗಟ್ಟಲು ಮಾಡಿದ ಕಾನೂನು ಇದಾಗಿರುತ್ತದೆ . ಪರಬಾರೆಯಲ್ಲಿ ಭೋಗ್ಯ ( ಸ್ವಾಧೀನ ಪಡೆಯಲಿ ಬಿಡಲಿ ) , ದಾನ , ಬದಲಿ ಮಾಡಿಕೊಳ್ಳುವಿಕೆ , ಕ್ರಯ , ಬಾಡಿಗೆ , ಸ್ವತ್ತು ಆಧಾರ ಮಾಡುವಿಕೆ , ಕ್ರಯಕ್ಕಾಗಿ ಕರಾರು ಮಾಡಿಕೊಳ್ಳುವಿಕೆ ಅಥವ ಇನ್ನಾವುದೇ ರೀತಿಯ ವ್ಯವಹಾರಗಳು ಮಾಡಲು ಬರುವುದಿಲ್ಲ . ಅಂತಹ ವ್ಯವಹಾರಗಳಿಗೆ ಪಿ . ಟಿ . ಸಿ . ಎಲ್ ಕಾಯ್ದೆ ಅನ್ವಯವಾಗುತ್ತೆ . ಆದರೆ ಕುಟುಂಬಸ್ಥರ ಮಧ್ಯೆ ವಿಭಾಗದ ಮುಖೇನ ಹಸ್ತಾಂತರ ಅಥವ ವಿಲ್ ಮುಖೇನ ಹಸ್ತಾಂತರ ಇದರಲ್ಲಿ ಬರುವುದಿಲ್ಲ . ಗ್ರಾಂಟ್ ಜಮೀನು ಅಂದರೆ ಯಾವುದು ಎಂದು ಉದ್ಬವವಾಗುವ ಪ್ರಶ್ನೆಗಳಿಗೆ ಅನೇಕ ವ್ಯಾಕ್ಯಾನಗಳು ಮಾಡಲಾಗುತ್ತದೆ . ಆದರೆ ಈ ವಿಚಾರದಲ್ಲಿ ಕಾಯ್ದೆಯಲ್ಲಿನ ಕಲಂ ೩ ( ೧ ) ( ಬಿ ) ಅಡಿಯಲ್ಲಿ ನೋಡಿದಾಗ ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ , ವಿವಿದ ಜಾರಿಯಲ್ಲಿದ್ದ ಕಾನೂನಿನ ಅಡಿಯಲ್ಲಿ ಮಂಜೂರಾತಿಯಾದ ಅಥವ ಅಲಾಟ್ ಮೆಂಟ್ ಆದ ಜಮೀನು ಗ್ರಾಂಟ್ ಜಮೀನು ಆಗಿರುತ್ತದೆ . ಸದರಿ ಜಾರಿಯಲಿದ್ದ ಕಾನೂನಿನ ಬಗ್ಗೆ ಹೇಳುವಾಗ್ಗೆ ವ್ಯವಸಾಯ ಕ್ಷೇತ್ರದ ಸುಧಾರಣೆ ( ಅಗ್ರೇರಿಯನ್ ರಿಫಾರ್ಮ್ಸ್ ) ಬಗ್ಗೆ ಇರುವ ಕಾನೂನು , ಲ್ಯಾಂಡ್ ಸೀಲಿಂಗ್ ನಲ್ಲಿ ಇರುವ ಕಾನೂನು , ಇನಾಂ ರದ್ದತಿ ಯಲ್ಲಿನ ಕಾನೂನು ಅಡಿಯಲ್ಲಿ ಪರಿಶಿಷ್ಟರಿಗೆ ಮಂಜೂರಾತಿ ಅಥವ ಅಲಾಟ್ ಮೆಂಟ್ ಆಗಿರುವ ಜಮೀನಿಗೆ ಪಿ . ಟಿ . ಸಿ . ಎಲ್ ಅನ್ವಯವಾಗುತ್ತದೆ . ಆದರೆ ಅಂತಹ ಕಾನೂನಿನ ಅಡಿಯಲ್ಲಿ ಅನುವಂಶೀಯ ಹಕ್ಕಿನಿಂದ ಗ್ರಾಂಟ್ ಆಗಿದ್ದಲ್ಲಿ ಇತರೆ ಹಕ್ಕುಗಳಿಂದ ಗ್ರಾಂಟ್ ಆಗಿದ್ದಲ್ಲಿ ಈ ಪಿ . ಟಿ . ಸಿ . ಎಲ್ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಸ್ವಷ್ಟತೆ ಇದೆ . ಕರ್ನಾಟಕದ ಉಚ್ಚ ನ್ಯಾಯಾಲಯದ ಪೂರ್ಣ ಪೀಠದ ಮುಂದೆ ಬಂದಂತಹ ಮೊಹಮದ್ ಜಾಫರ್ ಎಂಬ ಕೇಸಿನ ( ೨೦೦೨ ) ತೀರ್ಪಿನ ಅನುಸಾರ ಕರ್ನಾಟಕ ಭೂಸುದಾರಣೆ ಕಾನೂನಿನ ಅನ್ವಯ ಮಂಜೂರಾದ ಜಮೀನು ಪಿ . ಟಿ . ಸಿ . ಎಲ್ ವ್ಯಾಪ್ತಿಗೆ ಬರುವುದಿಲ್ಲ ಎಂದು ವ್ಯಾಖ್ಯಾನಿಸಿರುತ್ತೆ . ಇಲ್ಲಿ ಸರ್ಕಾರ ಸದರಿ ಅನುಭವದಲ್ಲಿ / ಸ್ವಾಧೀನದಲ್ಲಿ ಇರುವ ವ್ಯಕ್ತಿಗೆ ಮಾಲೀಕತ್ವವನ್ನು ಕೊಡುತ್ತದೆ , ಸದರಿ ಆ ರೀತಿಯ ಗ್ರಾಂಟ್ ಆಗುವುದು ಹಿಂದಿನ ಅನುಭವ ಮತ್ತು ಆತನ ಹಕ್ಕಿನಿಂದಲೇ ಹೊರತು ಸರ್ಕಾರ ಹೊಸದಾಗಿ ಗ್ರಾಂಟ್ ಮತ್ತು ಸ್ವಾಧೀನ ಹಸ್ತಾಂತರಿಸಿರುವುದಿಲ್ಲ ಎಂಬ ಸಿದ್ದಾಂತದೊಂದಿಗೆ ತೀರ್ಪನ್ನು ನೀಡಲಾಗಿದೆ . ಸದರಿ ವಿಚಾರದಂತೆಯೇ ಇನಾಂ ರದ್ದತಿ ಅನ್ವಯ ಗ್ರಾಂಟ್ ಆಗಿರುವ ಜಮೀನು ಸದರಿ ಪಿ . ಟಿ . ಸಿ . ಎಲ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಮುನಿಕೆಂಚಪ್ಪ ನವರ ( ೨೦೦೪ ) ಕೇಸಿನಲ್ಲಿ ಮಾನ್ಯ ಜಸ್ಟೀಸ್ ಡಿ . ವಿ . ಶೈಲೇಂದ್ರ ಕುಮಾರ್ ರವರು ತೀರ್ಪಿತ್ತಿದ್ದಾರೆ . ಗ್ರಾಂಟ್ ಕಂಡೀಷನ್ ಭೂಸುದಾರಣೆ ಕಾನೂನಿನ ಅಡಿಯಲ್ಲಿ ಉಲ್ಲಂಘನೆಯಾಗಿದ್ದಲ್ಲಿ ಅಂತಹ ಉಲ್ಲಂಘಿತರ ವಿರುದ್ದ ಪಿ . ಟಿ . ಸಿ . ಎಲ್ ಕಾಯ್ದೆಯಲ್ಲಿ ಕ್ರಮ ಜರುಗಿಸಲು ಬರುವುದಿಲ್ಲ ಎಂದು ಅಬ್ದುಲ್ ಹಕ್ ರವರ ಕೇಸಿನಲ್ಲಿ ( ೨೦೦೨ ) ಕರ್ನಾಟಕ ಉಚ್ಚ ನ್ಯಾಯಾಲಯ ತೀರ್ಪಿತ್ತಿದೆ . ಗ್ರಾಂಟ್ ಆಗಿರುವ ತಾರೀಖು ಮುಖ್ಯವಲ್ಲ ಸಾಗುವಳಿ ಪತ್ರ ನೀಡಿದ ತಾರೀಖು ಮುಖ್ಯವಾಗಿರುತ್ತದೆ ಎಂದು ಸದರಿ ಗ್ರಾಂಟ್ ನಿಬಂದನೆ ಉಲ್ಲಂಘನೆ ಆಗಿದೆಯೇ ಇಲ್ಲವೆ ಎಂದು ಪರಿಶೀಲಿಸಲು ಮುಖ್ಯವಾಗಿರುತ್ತದೆ ಎಂದು ೧೯೯೦ ರಲ್ಲಿ ಯೇ ಜಸ್ಟೀಸ್ ರಾಮಾಜೋಯಿಸ್ ಮತ್ತು ಜಸ್ಟೀಸ್ ಮಿರ್ದಾ ರವರ ದ್ವಿಸದಸ್ಯತ್ವ ಪೀಠ ತೀರ್ಪು ನೀಡಿದೆ . ಕಾಯ್ದೆಯ ಕಲಂ ೧೧ ಲ್ಲಿ ಹೇಳಿರುವಂತೆ ಬೇರೆ ಜಾರಿಯಲ್ಲಿರುವ ಕಾನೂನು , ಸಿವಿಲ್ ಕೋರ್ಟ್ ತೀರ್ಪು , ಕರಾರು , ನಡವಳಿಕೆ , ಸಂಸ್ಕಾರ ಮತ್ತು ಇತರೆ ಟ್ರೈಭ್ಯೂನಲ್ ಮತ್ತು ಪ್ರಾಧಿಕಾರದ ತೀರ್ಪುಗಳು ಏನೇ ಇದ್ದರೂ ಪಿ . ಟಿ . ಸಿ . ಎಲ್ ಕಾಯ್ದೆಯು ಅವುಗಳೆಲ್ಲವನ್ನೂ ಮೀರಿ ಅನ್ವಯವಾಗುತ್ತದೆ . ಇದನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಸದರಿ ಕಾಯ್ದೆಯ ಸಾರ್ವಭೌಮತೆಯನ್ನು ಒಪ್ಪಿದೆ . ಸದರಿ ಕಾಯ್ದೆಯ ಸಂವಿದಾನ ಬದ್ದತೆಯನ್ನೂ ಎತ್ತಿ ಹಿಡಿಯಲಾಗಿದೆ . ಹೀಗೆ ಕಾರ್ಯಾಂಗ ನಿದ್ದೆ ಹೋದರೂ ನ್ಯಾಯಾಂಗ ಈ ಕಾನೂನು ಜಾರಿಯಲ್ಲಿ ಮುಂಚೂಣಿಯಲ್ಲಿದೆ . ಕೆಲವು ಕೇಸಿನಲ್ಲಿ ಹೆಚ್ಚುವರಿ ಆಹಾರ ಬೆಳೆಯುವ ಉದ್ದೇಶದಿಂದ ( ಗ್ರೋ ಮೋರ್ ಫುಡ್ ಸ್ಕೀಂ ) ಅಡಿಯಲ್ಲಿ ಗ್ರಾಂಟ್ ಆಗಿರುವ ಜಮೀನು ಪಿ . ಟಿ . ಸಿ . ಎಲ್ ವ್ಯಾಪ್ತಿಗೆ ಬರುವುದಿಲ್ಲ ಎಂಬ ತೀರ್ಪು ಆಗಿದ್ದರೆ , ಇನ್ನೊಂದು ಕೇಸಿನಲ್ಲಿ ಪ್ರಾಜೆಕ್ಟ್ ಡಿಸ್ಪ್ಲೇಸ್ ಮೆಂಟ್ ಅರ್ಥಾತ್ ಯಾವುದಾದರೂ ಘಟಕ ಸ್ಥಾಪನೆಯಿಂದ ಉಂಟಾಗುವ ಜಮೀನು ಕಳೆದುಕೊಳ್ಳುವಿಕೆಯಲ್ಲಿ ಬೇರೆ ಜಮೀನು ಕೊಟ್ಟರೆ ಅದು ಪಿ . ಟಿ . ಸಿ . ಎಲ್ ವ್ಯಾಪ್ತಿಗೆ ಬರುವುದಿಲ್ಲ ಎಂದು ತೀರ್ಪು ನೀಡಿರುವ ಜಸ್ಟೀಸ್ ಎಸ್ . ಆರ್ . ಬಾನೂರ್ ಮಠ್ ರವರು ( ೨೦೦೨ ) ಮುಂದುವರಿದು ಸರ್ಕಾರದಿಂದ ಭೂಮಿಯನ್ನು ಮಂಜೂರು ಪಡೆದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗ್ರಾಂಟಿಯು ತಾನು ಪರಿಶಿಷ್ಟನು ಎಂಬ ಕಾರಣಕ್ಕೆ ಸದರಿ ಜಮೀನು ಮಂಜೂರಿಯಾಗಿದೆ ಎನ್ನುವುದು ಮುಖ್ಯವಾಗಿರುತ್ತದೆ ಎಂದು ಹೇಳುತ್ತಾರೆ . ಅಂತಹ ಜಮೀನು ಗ್ರಾಂಟ್ ಮಾತ್ರ ಪಿ . ಟಿ . ಸಿ . ಎಲ್ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿರುತ್ತಾರೆ . ಇತ್ತೀಚೆಗೆ ಮಾನ್ಯ ಜಸ್ಟೀಸ್ ಅಶೋಕ್ ಬಿ . ಹಿಂಚಗೇರಿ ರವರು ೨೦೧೦ ರಲ್ಲಿ ರಾಮಚಂದ್ರ ರವರ ಕೇಸಿನಲ್ಲಿ ಪಿ . ಟಿ . ಸಿ . ಎಲ್ ಕಾಯ್ದೆಯ ಅನುಷ್ಟಾನದಲ್ಲಿ ಸ್ವಾಧೀನತೆಯನ್ನು ಪಡೆಯುವ ರೀತಿಯ ಬಗ್ಗೆ ವಿವರಿಸಿ ಹೇಳಿರುತ್ತಾರೆ . ಆದೇಶವಾದ ಬಳಿಕ ಪಾರ್ಟಿಗಳಿಗೆ ಅಪೀಲು ಸಲ್ಲಿಸುವ ಕಾಲಾವದಿಯ ನಂತರವಷ್ಟೆ ನಿಯಮಾನುಸಾರ ನೋಟೀಸು ನೀಡಿ ಕಾಲಾವಕಾಶ ನೀಡಿ ಸ್ವಾಧೀನ ಪಡೆಯ ಬೇಕಿರುತ್ತದೆ , ಎಂಬುದನ್ನು ಅಧಿಕಾರಿ ವಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ . ಆದರೂ ಈ ಅಧಿಕಾರಿ ವಲಯದಲ್ಲಿ ಯಾವ ಅಹಂ ಇರುತ್ತದೆ ಎಂದರೆ ನೋಡ್ರೀ ಆಕೇಸಿನಲ್ಲಿ ನಾವೇನು ಪಾರ್ಟಿ ಅಲ್ಲವಲ್ಲ ನಮಗೆ ಅದು ಬರಲ್ರೀ ಅನ್ನುವ ಉಡಾಫೆ ಮಾತಿನವರೇ ಹೆಚ್ಚಿಗೆ ಇದ್ದಾರೆ . ಒಮ್ಮೆ ಕಾನೂನು ಸಿದ್ದಾಂತವನ್ನು ಮಾನ್ಯ ರಾಜ್ಯದ ಉಚ್ಚ ನ್ಯಾಯಾಲಯ ಮತ್ತು ಭಾರತದ ಶ್ರೇಷ್ಠ ನ್ಯಾಯಾಲಯ ಯಾವುದೇ ಕೇಸಿನಲ್ಲಿ ಉಲ್ಲೇಖಿಸಿರಲಿ ಅದು ಸರ್ವದಾ ಸರ್ವ ರೀತಿಯಲ್ಲಿಯೂ ಅಂತದ್ದೇ ಸಂಧರ್ಬಗಳಲ್ಲಿ ಎಲ್ಲರಿಗೂ ಅನ್ವಯವಾಗುತ್ತೆ ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿರುತ್ತದೆ . ಗ್ರಾಂಟ್ ಆದ ತಾರೀಖಿನಲ್ಲಿ ಯಾವ ಕಾನೂನು ಜಾರಿಯಲ್ಲಿ ಇತ್ತು ಎಂಬುದು ಬಹಳ ಹಿಂದಿನ ಗ್ರಾಂಟ್ ಗಳಲ್ಲಿ ಮುಖ್ಯವಾಗಿರುತ್ತದೆ . ಮರಿಯಪ್ಪ ( ೨೦೦೪ ) ನವರ ಕೇಸಿನಲ್ಲಿ ೧೯೨೯ ರಲ್ಲಿ ಇದ್ದ ಸರ್ಕಾರಿ ಆದೇಶವನ್ನು ಕಾನೂನು ಎಂದು ಪರಿಗಣಿಸಿರುವುದಿಲ್ಲ ಹಾಗಾಗಿ ಆ ಸರ್ಕಾರಿ ಆದೇಶದ ಅವದಿಯಲ್ಲಿ ನೋ ರೂಲ್ ಫೀರಿಯೆಡ್ ( ಕಾನೂನು ಇಲ್ಲದ ಅವದಿ ) ಬರುವುದರಿಂದ ಗ್ರಾಂಟ್ ಯಾವುದೇ ಕಂಡೀಷನ್ ಉಲ್ಲಂಘನೆ ಮಾಡಿರುವುದಿಲ್ಲ ಎಂದು ತೀರ್ಪು ನೀಡಲಾಗಿರುತ್ತೆ . ಸದರಿ ಅಂತದ್ದೇ ಗೋವಿಂದರಾಜು ರವರ ಕೇಸಿನಲ್ಲಿ ( ೨೦೧೦ ) ಜಸ್ಟೀಸ್ ಅನಂದ ಬೈರರೆಡ್ಡಿ ರವರು ನೀಡಿರುವ ತೀರ್ಪಿನಲ್ಲಿ ಈ ಅಂಶವನ್ನು ಎತ್ತಿ ತೋರಿದ್ದಾರೆ . ಇಲ್ಲಿ ಸದರಿ ಗ್ರಾಂಟ್ ಕಂಡೀಷನ್ ಉಲ್ಲಂಘನೆ ವಿಚಾರಕ್ಕೆ ಬಂದರೆ ೦೧ - ೦೧ - ೧೯೭೯ ರ ನಂತರ ಮಾಡುವ ಪರಭಾರೆಗಳಿಗೆ ಇದು ಮುಖ್ಯವಾಗಿರುವುದಿಲ್ಲ . ಇಲ್ಲಿ ಸರ್ಕಾರಿ ಪೂರ್ವಾನುಮತಿ ಪಡೆಯದೆ ಮಾಡುವ ವ್ಯವಹಾರವು ಅನೂರ್ಜಿತವಾಗುತ್ತದೆ . ಭಾರತೀಯ ಸರ್ವೋಚ್ಚ ನ್ಯಾಯಾಲಯದ ಮುಂದೆ ಬಂದಿದ್ದಂತಹ ಬಿ . ಕೆ ಮುನಿರಾಜು ಕೇಸಿನಲ್ಲಿ ( ೨೦೦೮ ) ಸಾರ್ವಜನಿಕ ಹರಾಜಿನಲ್ಲಿ ಕಿಮ್ಮತ್ತಿಗೆ ಕೊಂಡುಕೊಂಡಿರುವ ಜಮೀನು ಪಿ . ಟಿ . ಸಿ . ಎಲ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಮಹತ್ತರ ವಿಚಾರವನ್ನು ಎತ್ತಿ ಹಿಡಿಯಲಾಗಿದೆ . ಗ್ರಾಂಟ್ ಆದ ಜಮೀನಿನ ವಿಚಾರದಲ್ಲಿ ಸಾಗುವಳಿ ಪತ್ರದಲ್ಲಿನ ನಿಬಂದನೆಗಳು ಕಾನೂನು ಬದ್ದವಾಗಿ ವಿದಿಸಿಲ್ಲ ಎಂದು ಗ್ರಾಂಟಿದಾರನು ಸೂಕ್ತ ಸಮಯದಲ್ಲಿ ಪ್ರಶ್ನಿಸಬೇಕಿರುತ್ತದೆ ಹೊರತು ಗ್ರಾಂಟಿಯಿಂದ ಖರೀದಿಸಿದವರು ಸದರಿ ಗ್ರಾಂಟ್ ಕಂಡೀಷನ್ ನಿಯಮ ಭಾಹಿರವಾಗಿದೆ ಎಂದು ಪ್ರಶ್ನಿಸುವ ಹಕ್ಕು ಇಲ್ಲ ಎಂದು ಬದ್ರಪ್ಪನವರ ಕೇಸಿನಲ್ಲಿ ( ೨೦೦೮ ) ಮಾನ್ಯ ಶ್ರೇಷ್ಠ ನ್ಯಾಯಾಲಯ ಆದೇಶಿಸಿರುತ್ತದೆ . ಪಿ . ಟಿ . ಸಿ . ಎಲ್ ವ್ಯಾಪ್ತಿಗೆ ಬರುವ ಯಾವುದೇ ಜಮೀನಿನಲ್ಲಿ ಖರೀದಿದಾರನು ಹೂಡಿರುವ ಬಂಡವಾಳವನ್ನಾಗಲೀ ಮಾರಾಟಗಾರನಿಗೆ ನೀಡಿರುವ ಮಾರಾಟ ಮೌಲ್ಯವಾಗಲೀ , ಕ್ರಯ ಕರಾರಿಗೆ ನೀಡಿರುವ ಮುಂಗಡವಾಗಲೀ ವಾಪಸ್ ಪಡೆಯಲು ಬರುವುದಿಲ್ಲ . ಇದಕ್ಕೆ ಕಾನೂನು ರೀತ್ಯ ಪರಿಹಾರವೇ ಇಲ್ಲ . ಸದರಿ ಆ ರೀತಿಯ ವ್ಯವಹಾರವನ್ನು ಮತ್ತು ಕರಾರುಗಳನ್ನು ಕಾನೂನು ಭಾಹಿರವೆಂದು ಪಿ . ಟಿ . ಸಿ . ಎಲ್ ಕಾಯ್ದೆ ಹೇಳಿರುವಾಗ್ಗೆ ಕಾನೂನು ಭಾಹಿರ ಚಟುವಟಿಕೆಯಲ್ಲಿ ಹಣವನ್ನು ವಿನಿಯೋಗಿಸುವುದು ಕಾನೂನು ಭಾಹಿರವಾಗಿರುತ್ತದೆ . ಆದ ಕಾರಣ ಕಾನೂನು ರೀತಿಯಲ್ಲಿ ವಸೂಲಿಯೂ ಆಗುವುದಿಲ್ಲ , ಇದಕ್ಕೆ ಪರಿಹಾರವೂ ದೊರೆಯುವುದಿಲ್ಲ . ಆದ್ದರಿಂದಲೇ ಜಮೀನು ಕೊಂಡುಕೊಳ್ಳುವವನು ಜಾಗ್ರತೆ ವಹಿಸಬೇಕಿರುತ್ತದೆ . ಪಿ . ಟಿ . ಸಿ . ಎಲ್ ಕಾಯ್ದೆಯ ಕಲಂ ೫ ( ೩ ) ರಲ್ಲಿ ಹೇಳಿರುವಂತೆ ಯಾವ ಗ್ರಾಂಟ್ ಜಮೀನು ಗ್ರಾಂಟಿಯ ಸ್ವಾಧೀನದಲ್ಲಿ ಅಥವ ಅವನ ವಾರಸ್ಸುದಾರರ ಸ್ವಾಧೀನದಲ್ಲಿ ಇರುವುದಿಲ್ಲವೋ ಅಂತಹ ಪರಬಾರೆಯು ಬೇರೆ ಅನ್ಯತಾ ರುಜುವಾತು ಪಡಿಸುವವರೆಗೆ ಕಾನೂನು ಬಾಹಿರವೆಂದು ತಿಳಿಯುವುದು ಎಂದು ಹೇಳಿರುತ್ತದೆ . ಇಲ್ಲಿ ಗ್ರಾಂಟಿ ಜಮೀನು ಎಂದು ನಿರ್ದರಿಸುವಲ್ಲಿ ಇನಾಂ ರದ್ದತಿ , ಭೂಸುದಾರಣೆ ಟೆನೆನ್ಸಿ ರೀತ್ಯ , ಮತ್ತು ಇನ್ನಿತರೆ ರೀತ್ಯ ಬಂದಿರುವ ಜಮೀನುಗಳು ಯಾವುದಾದರೂ ಅನುವಂಶಿಕ ಹಕ್ಕಿನಿಂದ ಅಥವ ಇತರೆ ಹಕ್ಕಿನಿಂದ ಪ್ರಾಪ್ತವಾಗಿರುವುದೇ ಎಂದು ರುಜುವಾತು ಪಡಿಸುವ ಜವಾಬ್ದಾರಿ ಖರೀದಿದಾರನದ್ದಾಗಿರುತ್ತದೆ . ಈ ರೀತಿಯ ಪ್ರಿಸಮ್ಶನ್ ಕಾನೂನು ಇರುವುದಕ್ಕೇ ಇದೂ ಸ್ವಲ್ಪ ಕಠಿಣವಾದ ಕಾನೂನು ಆಗಿರುವುದು ಎಂದರೆ ತಪ್ಪಾಗಲಾರದು . ಕಾನೂನಿನ ಅರಿವು ಇಲ್ಲದ ಮತ್ತು ಕಾನೂನು ತಿಳುವಳಿಕೆ ಪಡೆಯಲೂ ಎಚ್ಚರವಿಲ್ಲದ ವ್ಯವಸಾಯ ಭೂಮಿ ಖರೀದಿದಾರ ಸಂಕಷ್ಟಕ್ಕೆ ಸಿಲುಕಿಯಾನು ಎಂಬುದು ಅಕ್ಷರ ಸಹ ಸತ್ಯವಾಗಿರುತ್ತದೆ . ಪಿ . ಟಿ . ಸಿ . ಎಲ್ ಕಾಯ್ದೆಯಲ್ಲಿ ಪರಬಾರೆಯೊಂದೇ ನಿರ್ಬಂದವಿದಿಸಿರುವುದಿಲ್ಲ . ಆ ರೀತಿಯ ಖರೀದಿದಾರನ ಕೃತ್ಯವನ್ನು ಕಲಂ ೮ ರಲ್ಲಿ ಕಾಗ್ನಿಸಿಬಲ್ ಅಪರಾಧವನ್ನಾಗಿಸಿದೆ ಆರು ತಿಂಗಳು ಶಿಕ್ಷೆ ಅಥವ ಎರಡುಸಾವಿರದವರೆಗೆ ಜುಲ್ಮಾನೆ ಅಥವ ಎರಡನ್ನೂ ವಿದಿಸಬಹುದಿರುತ್ತದೆ . ನೊಂದಾವಣಾಧಿಕಾರಿಗಳು ಸದರಿ ಪಿ . ಟಿ . ಸಿ . ಎಲ್ ವ್ಯಾಪ್ತಿಗೆ ಬರುವ ಜಮೀನುಗಳನ್ನು ನೊಂದಾಯಿಸಬಾರದು ಎಂದು ಕಲಂ ೭ ರಲ್ಲಿ ಹೇಳಿದೆ . ಬಹಳ ಹಿಂದಿನಿಂದಲೂ ಸರ್ಕಾರಿ ಸುತ್ತೋಲೆಗಳಲ್ಲಿ ಕಂದಾಯ ಇಲಾಖೆಗೆ ಅಂತಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ನೀಡಿರುವ ಮಂಜೂರಾದ ಜಮೀನಿನ ಬಗ್ಗೆ ಪಹಣಿಯಲ್ಲಿ ಉಲ್ಲೇಖಿಸುವಂತೆ ಮತ್ತು ನೊಂದಾವಣಿ ಕಚೇರಿಗೆ ಲಿಸ್ಟ್ ನೀಡುವಂತೆ ಆದೇಶಗಳು ಆಗುತ್ತಲೇ ಇವೆ ಆದರೆ ಅದು ಸಮರ್ಪಕವಾಗಿ ಜಾರಿಯಾಗಿಲ್ಲ . ಇತ್ತೀಚೆಗೆ ಬಂದಿರುವ ಆದೇಶದಲ್ಲಿ ಸದರಿ ಅಂತಹ ಜಮೀನುಗಳ ಪಹಣಿಯಲ್ಲಿ ಸೀಲನ್ನು ಹಾಕಲು ಆದೇಸವಾಗಿದೆ ವೆಂದು ತಿಳಿದು ಬರುತ್ತದೆ . ಸೀಲು ಏಕೆ ಬೇಕು ಶಾಶ್ವತವಾಗಿ ನಮೂದಿಸಲು ಇರುವ ಅಡಚಣೆ ಏನು ? ಎಷ್ಟೋ ಜನ ಘಟಭದ್ರರು ಇಂತಹ ಜಮೀನು ಕೊಂಡಿದ್ದಾರೆ ? ಅವರನ್ನು ಸರ್ಕಾರ ರಕ್ಷಿಸುತ್ತಿದೆಯೇ ? ಆಕಸ್ಮಿಕ ಸೀಲು ಹಾಕುವವರ ತಪ್ಪಿನಿಂದ ಉಂಟಾಗುವ ಪಜೀತಿಗೆ ಸರ್ಕಾರ ಹೊಣೆಯಾಗುವುದೆ ? ಭ್ರಷ್ಟತೆಯಲ್ಲಿ ಸೀಲು ಹಾಕುವುದು ತಪ್ಪಿದರೆ ಕಾನೂನು ಜಾರಿಯನ್ನು ಸರ್ಕಾರ ಮೊಟಕುಗೊಳಿಸುವುದೆ ? ಕಾನೂನು ಜಾರಿಯಾಗುವುದು ಮಹತ್ತರ ಉದ್ದೇಶಗಳಿಗೆ ಆದರೆ ಅದನ್ನು ನಿರ್ವಹಿಸುವ ಅಧಿಕಾರಸ್ಥರು ಅದರಿಂದ ನಮಗೇನು ಲಾಭ ಎಂದು ಎಂಬ ಆಲೋಚನಾ ನಿರತರಾದರೆ ಇಂತಹ ಕುರುಡು ಪದ್ದತಿಗಳು ಜಾರಿಯಾಗುತ್ತವೆ . ಬರೆದವರು ಎನ್ . ಶ್ರೀಧರಬಾಬು ವಕೀಲರು , ತುಮಕೂರು
ಪ್ರಿಯರೇ , ನನ್ನ ಲೇಖನಕ್ಕೆ ಇಂಥಾ ಒಂದು ಪ್ರತಿಕ್ರಿಯೆ ನಿರೀಕ್ಷಿಸಿದ್ದೆ . ಬಹಳ ಸಂತೋಶ , ನಿಮ್ಮ ಸಾಧನೆ ಹಾಗೂ ಉದ್ದೇಶ . ನಿಮ್ಮ ಈ ಯತ್ನ ಹಾಗೂ ಸಫಲತೆ ನಮಗೆಲ್ಲ ಉಳಿದೆಲ್ಲ ವಿಷ್ಯದಲ್ಲೂ ಮಾದರಿಯಾಗಲಿ .
ಭಾರತ - ಚೀನಾ ಬಾಂಧವ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದಾದ ಬೆಳವಣಿಗೆಯೊಂದರಲ್ಲಿ , ಬರ ಪರಿಸ್ಥಿತಿಯಿಂದ ಬಚಾವಾಗಲು ಚೀನಾ ದೇಶವು ಬ್ರಹ್ಮ ಪುತ್ರ ನದಿ ನೀರಿನ ಹರಿವು ತಿರುಗಿಸಲು ಯೋಜನೆ ರೂಪಿಸಿರುವುದು ಭಾರತದ ಆತಂಕಕ್ಕೆ ಕಾರಣವಾಗಿದೆ . ಚೀನಾ ದೇಶವು ಸುಮಾರು ಒಂದು ವರ್ಷದ ಹಿಂದೆ 120 ಕೋಟಿ ರೂ . ವೆಚ್ಚದಲ್ಲಿ ಬ್ರಹ್ಮಪುತ್ರ ( ಚೀನಾದಲ್ಲಿ ಯಾರ್ಲೂಂಗ್ ತ್ಸಾಂಗ್ ಪೋ ) ನದಿಗೆ ಅಡ್ಡಲಾಗಿ ಜಲ ವಿದ್ಯುತ್ ಸ್ಥಾವರ ನಿರ್ಮಾಣ ಆರಂಭಿಸಿರುವುದು ಭಾರತ ಮತ್ತು ಬಾಂಗ್ಲಾದೇಶದಲ್ಲಿ ಆತಂಕ್ಕೆ ಕಾರಣವಾಗಿತ್ತು . . . .
1989 ಐರಿಷ್ ಬಯೋಕಾನ್ ಅನ್ನು ಯುನಿಲಿವರ್ ಸ್ವಾಧೀನ ಪಡಿಸಿಕೊಂಡನು . 1990ರ ಮಧ್ಯದಲ್ಲಿ , ಕಿರಣ್ ಮಜುಮ್ದಾರ್ - ಶಾರವರು ಕಿಣ್ವಗಳಿಗಿಂತ ಜೈವಿಕ ಫಾರ್ಮಾಕ್ಯುಟಿಕಲ್‌ಗಳ ಕಡೆಗೆ ಹೆಚ್ಚು ಗಮನ ಹರಿಸಿದರು . ಆದರೆ , ಪ್ರಮುಖ ಪಾಲುದಾರರಾದ ಯುನಿಲಿವರ್ ಫಾರ್ಮಾಕ್ಯುಟಿಕಲ್ ವ್ಯಾಪಾರದಲ್ಲಿ ತೊಡಗಲು ಇಷ್ಟಪಡಲಿಲ್ಲ . ಇಂತಹ ಸಮಯದಲ್ಲಿ , 1998 ರಲ್ಲಿ ಕಿರಣ್ ಮಜುಮ್ದಾರ್ - ಶಾರವರನ್ನು ಮದುವೆಯಾದ ಸ್ಕಾಟ್ ಲ್ಯಾಂಡ್‌ನ ಜಾನ್ ಶಾ ತಮ್ಮ ಎಲ್ಲಾ ಉಳಿತಾಯದ ಮೂಲಕ ಇಡೀ ಬಯೋಕಾನ್‌ನ್ನು ಯಿನಿಲಿವರ್ ರವರಿಂದ ಕೊಂಡುಕೊಂಡರು . [ ref ೯ ]
ಚಲಿಸುವ ವಸ್ತುಗಳನ್ನು ಹೀಗೆ ತೆಗೆಯಲು ಒಂದು ಕ್ಯಾಮರಾ ಸಾಲುವುದಿಲ್ಲ . ಎರಡು ಕ್ಯಾಮರಾಗಳನ್ನು ಜೊತೆಗೆ ಇಟ್ಟು , ಒಂದೇ ಸಲಕ್ಕೆ ಕ್ಲಿಕ್ ಆಗಲು ವ್ಯವಸ್ಥೆ ಮಾಡಿದರೆ ಆಗ ಚಲಿಸುತ್ತಿರುವ ವಸ್ತುಗಳನ್ನೂ 3ಡಿ ರೂಪದಲ್ಲಿ ನೋಡಬಹುದು . ಹಾರುತ್ತಿರುವ ಹಕ್ಕಿಗಳು , ಓಡುತ್ತಿರುವ ಪ್ರಾಣಿಗಳು , ಮನುಷ್ಯರು , ಟ್ರಾಫಿಕ್ , ಹರಿಯುವ ನೀರು , ಜಲಪಾತ , ಸಮುದ್ರ , ಹೀಗೆ . . .
ನಮ್ಮ ಅಹಂ ಸಾಕಷ್ಟು ಬಾರಿ ನಮ್ಮನ್ನು ಹಲವಾರು ಕಾಣದ , ಕಂಡಿರುವ ಸಮಸ್ಯೆಗಳಿಗೆ ದೂಡಿಬಿಡುತ್ತದೆ . ಅದನ್ನು ತೊರೆದಾಗಲೇ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ . ನಿಮ್ಮ ಅತ್ಯಮೂಲ್ಯ ಸಲಹೆಗೆ ತುಂಬಾ ವಂದನೆಗಳು ಮಂಜುನಾಥ್ ಸರ್
ನಿಮಗೆಲ್ಲಾ ದೇವರ ಒಡವೆಗಳು ಕಳವಾಗುವ ಸುದ್ದಿ ಹೊಸದಾಗಿರಲಿಕ್ಕಿಲ್ಲ , ಆದ್ರೆ ಮೂಲ ವಿಗ್ರಹವನ್ನೇ ಕದ್ದುಕೊಂಡು ಹೋಗಿದ್ದನ್ನು ಕೇಳಿದ್ದೀರಾ ? ಅದು ಯಾವುದೇ ಆಭರಣಗಳನ್ನು ಮುಟ್ಟದೇ ! . ಹಿಂತಹ ಒಂದು ಕಳ್ಳತನ ನಮ್ಮೂರ ಪ್ರಸಿದ್ದ ಕಂಠಿ ಬಸವಣ್ಣನ ದೇವಸ್ಥಾನದಲ್ಲಿ ಸುಮಾರು ವರ್ಷಗಳ ಹಿಂದೆ ನಡಿದಿತ್ತು , ಆಗ ಪೂಜಾರಪ್ಪನನ್ನು ' ಎನೀದು ಹಕೀಕತ್ತು ? ದೇವರನ್ನೇ ಊರು ಬಿಡಿಸಿಬಿಟ್ರಲ್ಲ್ಲಾ " ಎಂದು ದೇಶಾವರಿಯಾಗಿ ಕೇಳಿದ್ರೆ ಆ ಯಪ್ಪಾ " ಬಸವಣ್ಣನಿಗೆ ನಮ್ಮೂರು ಬೇಜಾರಾಗಿತ್ತಂತೂ , ಹೀಗಾಗಿ ಆ ಕಳ್ಳನ ಕನಸಿನಲ್ಲಿ ಹೋಗಿ ನನ್ನನ ಈ ಊರು ಬಿಟ್ಟು ಕರ್ಕೋಂಡು ಹೋಗು ಅಂತಾ ಬಸವಣ್ಣ ಕೇಳಿದ್ನಂತೆ ; ದೇವರೆ ಬಂದು ಹೇಳೀದ ಮೇಲೆ ಆ ಕಳ್ಳ ನಮ್ಮ ಬಸವಣ್ಣನ ಎತ್ಕೊಂಡು ಹೋಗಿದ್ದಾನೆ " ಅಂತಾ ಕಥೆ ಕಟ್ಟಿ ಎಲ್ಲಾ ಭಕ್ತಾದಿಗಳಿಗೂ ಹೇಳತೊಡಗಿದರು . ನಮ್ಮೂರ ಹಿರಿಯರು ದೇವರನ್ನು ಹುಡುಕಲು ಎಲ್ಲಾ ರೀತಿಯ ಪ್ರಯತ್ನ ಪಟ್ಟರು , ಪ್ರತಿಫಲ ಮಾತ್ರ ಶೂನ್ಯವಾಯಿತು . . ನಮ್ಮ ಮನೆತನದಲ್ಲಂತೂ ಒಂಥರಾ ದಿಗಿಲು ; ಊರ ದೇವರೇ ಊರು ಬಿಟ್ರೆ ಹ್ಯಾಗೆ ಅನ್ನೊದರ ಜೊತೆಗೆ ಇನ್ನೊಂದು ಕಾರಣವೂ ಇದೆ . ಈ ಕಂಠಿ ಬಸವಣ್ಣ ಅಬ್ಬಿಗೇರಿಗೆ ಹೇಗೆ ಬಂದ ಅನ್ನೊದಕ್ಕೆ ನಮ್ಮ ಮನೆಯ ಹಳೆ ತಲೆಗಳು ಒಂದು ಕಥೆಯನ್ನೇ ಹೇಳುತ್ತವೆ . ಅದೆನಪ್ಪಾ ಅಂದ್ರೆ ನಮ್ಮ ಮನೆತನದ ಮೂಲಪುರುಷ ಹೊಲದಿಂದ ಮನೆಗೆ ಬರುವಾಗ ಒಂದು ಜಾಗದಲ್ಲಿ ಚಕ್ಕಡಿ ಮುಂದೆ ಹೋಗಲೇ ಇಲ್ಲವಂತ್ , ಅಲ್ಲೇ ನಿಂತು ಬಿಟ್ಟಿತಂತೆ . ಏನಿದು ವಿಚಿತ್ರ ? ಎಂದು ಆ ಮಾರಾಯ ನೋಡಿದ್ರೆ ಚಕ್ಕಡಿಯಲ್ಲಿ ಬಸವಣ್ಣನನ್ನು ಹೋಲುವ ಕಲ್ಲಿತ್ತಂತೆ , ಯುರೇಕಾ ಅಂದುಕೊಂದು ಅಲ್ಲೆ ಪಕ್ಕದಲ್ಲಿಯ ಕಂಠಿಯಲ್ಲಿ ಅದನ್ನು ಎಸೆದು ಮನೆಗೆ ಬಂದು ಮಲಗಿದರೆ , ರಾತ್ರಿ ಕನಸಿನಲ್ಲಿ ದೇವರು ಬಂದು " ನಾನು ನಿನ್ನ ಚಕ್ಕಡಿಯಲ್ಲಿ ಬಂದರೆ ನೀನು ನನ್ನ ಕಂಠಿಯಲ್ಲಿ ಎಸೆಯುತ್ತೀಯಾ ? " ಎಂದು ಆವಾಜ್ ಹಾಕಿದ್ನಂತೆ . ಮರುದಿನ ಬಂದು ಆ ಕಂಠಿ ಹುಡುಕಿ ಅಲ್ಲಿಯೇ ಗುಡಿ ಕಟ್ಟಿಸಿದರಂತೆ . ಹೀಗಾಗಿ ಕಂಠಿ ಬಸವಣ್ಣ ನಮ್ಮವನೆಂದೂ ನಮ್ಮ ಮನೆಯಲ್ಲಿ ಹಕ್ಕು ಸಾಧಿಸುತ್ತಾರೆ . [ ಕಾಕತಾಳಿಯವೆಂಬಂತೆ ಅದೇ ದಾರಿಯಲ್ಲಿ ನಮ್ಮ ಹೊಲವಿದೆ . ಅಲ್ಲದೇ ಶ್ರಾವಣದ ಮೊದಲ ಪೂಜೆ ಸಲ್ಲುವದೂ ಗೌಡರ ಮನೆಯಿಂದಲೇ , ತೇರಿನ ಕಳಸ , ಹಗ್ಗ ಬರುವುದು ಗೌಡರ ಮನೆಯಿಂದಲೇ ಮತ್ತು ನನ್ನ ತಾಯಿಯ ತವರುಮನೆಯ ಮನೆದೆವ್ರು ಸಹ ಈ ಕಂಠಿ ಬಸವಣ್ನನೇ ಮತ್ತು ಬಸವಣ್ಣನಿಗೆ ತೇರು ಮಾಡಿಸಿದ್ದು ಅವರೇ ] . ಇಷ್ಟೆಲ್ಲಾ ಇರಬೇಕಾದ್ರೆ ಚಿಂತೆ ಆಗದೇ ಇರುತ್ಯೆ ? . ಕೊನೆಗೂ ಹಲವಾರು ದಿನ ಹುಡುಕಾಡಿ ಎಲ್ಲಿಂದಲೋ ಅದೇ ವಿಗ್ರಹವನ್ನು ಹೋಲುವ ವಿಗ್ರಹವನ್ನು ತಂದು ಗುಡಿಯಲ್ಲಿ " ಇದೇ ನಮ್ಮ ಬಸವಣ್ಣ " ಅಂತ ಸಮಾಧಾನ ಮಾಡ್ಕೋಂಡ್ರು . ಅದ್ರೂ ಎಲ್ಲರ ಮನದಲ್ಲಿ ಇದು ನಿಜವಾದ ಬಸವಣ್ಣಾನಾ ಅಂಥಾ ಡೌಟ್ ಇವತ್ತೀಗೂ ಇದ್ದೇ ಇದೆ . . ಅದ್ರೆ ಮೇನ್ ಪಾಯಿಂಟ ಇದಲ್ಲ್ಲಾ . ಪ್ರತಿ ಯುಗಾದಿಗೆ ನಮ್ಮ ಬಸವಣ್ಣನ ಗುಡಿಯಲ್ಲಿ ಒಂದು ಪವಾಡ ( ? ) ನಡೆಯುತ್ತೆ . ಯುಗಾದಿಯ ಬೆಳಗ್ಗೆ ಸೂರ್ಯ ಹುಟ್ಟುವ ಮೊದಲೆ ಗುಡಿಯ ಮುಂದಿನ ಬಯಲಿನಲ್ಲ , ಕಲ್ಲು ಸಂಧಿಗಳಲ್ಲಿ ವಿವಿಧ ಧಾನ್ಯಗಳ ಸಸಿಗಳು ಏಕಾ ಎಕಿ ಉದ್ಬವವಾಗಿಬಿಟ್ಟುರುತ್ತವೆ . ಯಾವ ಧಾನ್ಯದ ಸಸಿ ಯಥೇಚ್ಚವಾಗಿ ಬೆಳೆಯುತ್ತೋ ಮುಂದಿನ ವರ್ಷ ಆ ಬೆಳೆ ಚೆನ್ನಾಗಿ ಬರುತ್ತಂತೆ . ಆದರೆ ಸೂರ್ಯನ ಬಿಸಿಲು ಬಿದ್ದ ಕೂಡಲೇ ಅವೆಲ್ಲಾ ಕರಗಿ ಬಿಡುತ್ತವಂತೆ ; ಹೀಗಾಗಿ ನಚ್ಚ ನಸುಕಿನಲ್ಲೇ ನಮ್ಮೂರ ಜನತೆ ಗುಡಿ ಬಯಲಿನಲ್ಲಿ ಬ್ಯಾಟರಿ ಹಿಡಿದು , ಲಾಟೀನು ಹಿಡಿದು ಸಂಧು ಗೊಂದುಗಳಲ್ಲಿ ಸಸಿಯನ್ನು ಹುಡುಕುತ್ತಿರುತ್ತಾರೆ ಮತ್ತು ಕಷ್ಟ ಪಟ್ಟು ಸಸಿಯನ್ನು ಗುರುತಿಸುವ ಕಾರ್ಯದಲ್ಲಿ ಮಗ್ನರಾಗಿರುತ್ತಾರೆ . ಚಿಕ್ಕವನಾಗಿದ್ದಾಗ ನಾನೂ ಈ ಹುಡುಕಾಟದ ಸಕ್ರಿಯ ಸದಸ್ಯನಾಗಿದ್ದೆ . ಮತ್ತು ಸಿಕ್ಕ ಸಸಿಯನ್ನು ಮನೆಗೆ ತಂದು ದೊಡ್ದ ಗಿಡ ಮಾಡುವ ಭರದಲ್ಲಿ ಹಿತ್ತಲಿನಲ್ಲಿ ನೆಟ್ಟರೆ ಬಿಸಿಲು ಬಿದ್ದ ಮೇಲೆ ಬಂದು ನೋಡಿದ್ರೆ ಸಸಿ ಮಂಗಮಾಯ . ವಿಚಿತ್ರ ಎಂದರೆ ಬಸವಣ್ಣನನ್ನು ಕದ್ದ ವರ್ಷವೂ , ಅಂದ್ರೆ ಗುಡಿಯಲ್ಲಿ ಬಸವಣ್ಣ ಇಲ್ಲದಾಗ್ಲೂ ಸಸಿ ಹುಟ್ಟಿದ್ದುವು ಮತ್ತು ಒರಿಜನಲ್ ಬಸವಣ್ಣ ಇಲ್ಲದಿದ್ರೂ ಹುಟ್ಟುತ್ತಿವೆ . ಹೀಗಾಗಿ ಈ ಸಸಿಯ ಮರ್ಮ ನನಗೂ ತಿಳೀತಿಲ್ಲಾ . [ ತಿಳಿದವರು ಹೇಳಿದರೆ ಮಹದುಪಕಾರವಾಗುತ್ತೇ ] ವೈಜ್ನಾನಿಕ ಕಾರಣಗಳೇನೆ ಇರಲಿ , ನಾನಂತೂ ಯುಗಾದಿಗೆ ಹೊರಟ್ಟಿದ್ದೇನೆ ಮತ್ತು ಅವತ್ತು ಸಸಿ ಹುಡುಕುವ ಕಾರ್ಯಕ್ರಮವೂ ಇದೆ . ಈ ತರದ ನಂಬಿಕೆಗಳಲ್ಲಿ , ಆಚರಣೆಗಳಲ್ಲಿ ಎನೋ ಒಂದು ಖುಷಿ . ಮುಂಚಿತವಾಗಿಯೇ ಸರ್ವರಿಗೂ ಯುಗಾದಿಯ ಶುಭಾಶಯಗಳು
ಶಿವು ಅವರೆ , ನಿಮ್ಮ ಪ್ರಾಮಾಣಿಕ ನಿವೇದನೆ ಒದಿ ತುಂಬಾ ಮೆಚ್ಚುಗೆಯಾಯಿತು . ಮದುವೆಯ ಮೊದಲು ಇಂತಹ ಘಟನೆಗಳು ಅದೆಷ್ಟೋ ವ್ಯಕ್ತಿಗಳ ನಡುವೆ ನಡೆದು ಹೋಗುತ್ತವೆ . ಪರಿಸ್ಥಿತಿಯ ಕೈಗೊಂಬೆಯಾಗಿಯೋ ಇಲ್ಲಾ ಯಾವುದೋ ಇಬ್ಬಗೆಗೆ ಸಿಲುಕಿಯೀ ಈರೀತಿಯ ಕಹಿ ಘಟನೆಗಳು ನಡೆಯುವುದು ಅಸಹಜವೇನೂ ಅಲ್ಲ . ಆದರೆ ಅದನ್ನು ಸಮರ್ಥವಾಗಿ ಎದುರಿಸಿ . ಆದ್ಯಾತ್ಮದ ಮೂಲಕ ಪರಿಹರಿಸಿಕೊಂಡು ಉತ್ತಮ ಬಾಳ್ವೆ ಆರಂಭಿಸಿದಿರಿ ನೀವು ಮತ್ತು ಆ ಹುಡುಗಿ . ನಿಜಕ್ಕೂ ಇದು ಶ್ಲಾಘನೀಯ . ಇಬ್ಬರಿಗೂ ಶುಭಹಾರೈಕೆಗಳು . ಇದ್ದುದನ್ನು ಇದ್ದಹಾಗೇ ಸ್ವೀಕರಿಸಿ , ಅದನ್ನು ಒಪ್ಪಿಕೊಂಡು ನಿಮ್ಮ ನೋವಿನಲ್ಲೂ ಸಹಭಾಗಿಯಾಗಿ ನಲಿವು ತುಂಬಿದ ನಿಮ್ಮ ಮನೆಯವರನ್ನೂ ಮೆಚ್ಚಲೇಬೇಕು . : ) ಬಿಡುವಿಲ್ಲದ ಕಾರ್ಯಗಳ ನಡುವೆಯೂ ಇಂತಹ ಒಂದು ಮಹಾನ್ ಸಾಧನೆ ಗೈದ ನಿಮಗೆ ಹಾಗೂ ಮಲ್ಲಿಕಾರ್ಜುನ ಅವರಿಗೆ ಮತ್ತೊಮ್ಮೆ ಅಭಿನಂದನೆಗಳು . ಅಂದಹಾಗೆ ಆ ಮುದ್ದು ಮುಖವನ್ನೇಕೆ ಪುಟ್ಟ ಕೈಗಳಿಂದ ಮುಚ್ಚಿರುವಿರಿ ? ತುಂಬಾ ಮುದ್ದಾಗಿದ್ದಾಳೆ ಪುಟ್ಟಿ . ಪೂರ್ತಿ ಚಿತ್ರವೂ ಸಿಕ್ಕಿದ್ದರೆ ನನ್ನ ಪುಟ್ಟಿಗೆ ತೋರಿಸಿ ಖುಶಿ ಪಡುತ್ತಿದ್ದೆ . : )
ಹೆದರಬೇಡಿ . ಮೊದಲೇ ಹೇಳಿಬಿಡುತ್ತೇವೆ , ನಮ್ಮ ದಿನಪತ್ರಿಕೆಗಳ ಘನಗಂಭೀರ ಸಂಪಾದಕರು ಮಾಡುವಂತೆ ನಾವು ವರ್ಷದ ಕೊನೆಯ ದಿನ ಕುಳಿತು ಚಾರ್ಟೆಡ್ ಅಕೌಂಟೆಂಟ್ ಥರ ಕಳೆದ ಮುನ್ನೂರ ಅರವತ್ನಾಲ್ಕು ದಿನಗಳು ಚಿಲ್ಲರೆ ಘಂಟೆಗಳಲ್ಲಿ ಮಾಡಿದ ಸಾಧನೆಗಳು , ಕಟ್ಟಿದ ಮಹಲುಗಳು , ಬೀಳಿಸಿದ ಮಳಿಗೆಗಳ ಲೆಕ್ಕ ಹಾಕುತ್ತಾ ಕೂರುವುದಿಲ್ಲ . ಇಲ್ಲವೇ ನಮ್ಮ ಹೈ ಫೈ ಟೈಮ್ಸಾಫಿಂಡಿಯಾದಂತೆ ನೀವು ಹೊಸ ವರ್ಷದ ರಾತ್ರಿಯನ್ನು ನಿಶೆಯಲ್ಲಿ ಕಳೆಯಲು ಬೆಂಗಳೂರಿನ ಯಾವ ಯಾವ ಮೂಲೆಯನ್ನು ಸೇರಬೇಕು ಎಂಬುದರ ವಿವರ ಕೊಡಲು ಹೋಗುವುದಿಲ್ಲ . ಬದುಕುವುದನ್ನು ಕಲಿಸುವುದಕ್ಕಾಗಿ ಬದುಕುತ್ತಿರುವ ಗುರುಗಳ ಹಾಗೆ ಹೊಸ ವರ್ಷದಲ್ಲಿ ನಿಮ್ಮ ವ್ಯಕ್ತಿತ್ವವನ್ನು ಯಾವ ಎತ್ತರಕ್ಕೆ ಕೊಂಡೊಯ್ದು ಕೆಳಕ್ಕೆ ನೂಕಬಹುದು ಎಂಬುದನ್ನು ಕೊರೆಯಲು ಹೋಗುವುದಿಲ್ಲ . ಇಲ್ಲವೇ ನಮ್ಮ ದೇಶದ ಫುಲ್ ಟೈಮ್ ದೇಶಭಕ್ತರು ಹಾಗೂ ನೈತಿಕ ಪೊಲೀಸರ ಹಾಗೆ ಈ ಹೊಸ ವರ್ಷಾಚರಣೆ ಎಂಬುದು ಪರದೇಶಿ ಸಂಸ್ಕೃತಿ . ಇದು ವಿಕೃತಿ . ಅಮಲು , ನಿಶೆ , ಅಬ್ಬರ , ಹಿಂಸೆಯಲ್ಲಿ ಸಂಭ್ರಮಾಚರಣೆ ಮಾಡುವುದು ಯಾವ ಸೀಮೆ ಸಂಸ್ಕಾರ ಎಂದೆಲ್ಲಾ ದೊಡ್ಡ ದೊಡ್ಡ ಪ್ರಶ್ನೆಗಳನ್ನು ಕೇಳಿ ಗದ್ದಲವೆಬ್ಬಿಸುವುದಿಲ್ಲ . ಅತಿ ಭಾವುಕ , ನಿರಾಶಾವಾದಿ ಬುದ್ಧಿವಂತ ಮೂರ್ಖರ ಹಾಗೆ ಹೊಸ ವರ್ಷ ಬಂದಿತು ಅಂತ ಕುಣಿಯಬೇಡಿ , ನಿಮ್ಮ ಜೀವನದಿಂದ ಒಂದು ವರ್ಷ ಕಳೆದುಹೋಯಿತಲ್ಲ ಎಂದು ಮರುಗಿ ಎಂದು ನಿಮ್ಮನ್ನು ಗಾಬರಿಗೊಳಿಸುವುದಿಲ್ಲ .
ಇದು ತೆಲುಗಿನ " ಸಿರಿವೆನ್ನೆಲ " ಚಿತ್ರದ್ದು . ಈ ಹಾಡಿನ ಸಂಪೂರ್ಣ ಸಾಹಿತ್ಯ ಓಂಕಾರದ ಮೇಲೆ ರಚಿತವಾಗಿದೆ . ನನ್ನ ತೆಲುಗು ರೂಂಮೇಟನ್ನು ಕಾಡಿ ಬೇಡಿ , ಸಾಹಿತ್ಯದ ಅರ್ಥ ತಿಳಿದುಕೊಂಡೆ . ಓಂಕಾರವನ್ನು ಎಷ್ಟು ಚೆನ್ನಾಗಿ ವರ್ಣಿಸಿದ್ದಾನೆ ಸಾಹಿತಿ ! . " ಸರಸ ಸ್ವರ ಸುರ ಝರೀ ಗಮನಂ ಸಾಮವೇದ ಸಾರಮಿದಿ " ಎಂಬಂತ ಸುಂದರ ಸಾಲುಗಳನ್ನು ಪೋಣಿಸಿ ರಚಿಸಿದ್ದಾರೆ ಸಾಹಿತಿ ಶ್ರೀ ಸೀತಾರಾಮ ಶಾಸ್ತ್ರಿ ಅವರು . ಅದಕ್ಕೆ ಒಳ್ಳೆಯ ಸಂಗೀತ ಬೇರೆ . ಈ ಹಾಡಿನಲ್ಲಿ ಕೊಳಲಿನ ಬಳಕೆ , ಹಾಡಿನ ಸೌಂದರ್ಯಕ್ಕೆ ಮೆರಗು ತಂದಿದೆ ಅಂದು ನನಗೆ ಅನ್ನಿಸುತ್ತೆ . ಈ ಹಾಡಿಗೆ ಪ್ರಸಿದ್ಧ ಕಲಾವಿದ ಹರಿಪ್ರಸಾದ್ ಚೌರಾಸಿಯಾ ಅವರು ಕೊಳಲಿನ ಹಿನ್ನೆಲೆ ಒದಗಿಸಿದ್ದಾರೆ . ಸಂಗೀತ ನಿರ್ದೇಶನ ಕೆ . ವಿ . ಮಹಾದೇವನ್ , ಹಾಡಿದವರು ಎಸ್ . ಪಿ . ಬಿ ಮತ್ತು ಪಿ . ಸುಶೀಲಾ . ಹ್ಮಾ . . ಮರೆತಿದ್ದೆ . ಈ ಚಿತ್ರದಲ್ಲಿ ನಾಯಕ ಕುರುಡ , ಆದರೆ ಚೆನ್ನಾಗಿ ಕೊಳಲು ಬಾರಿಸುತ್ತಾನೆ . ನಾಯಕಿ ಮೂಕಿ . ಮೂಕಿಯ ಪಾತ್ರದಲ್ಲಿ ಸುಹಾಸಿನಿಯವರು ಮನೋಹಕ ಅಭಿನಯ ನೀಡಿದ್ದಾರೆ .
ಮಾಧ್ಯಮಗಳ ಮತ್ತು ಮಾಧ್ಯಮದಲ್ಲಿರುವ ಕೆಲವರ ಅತ್ಯಾಸಕ್ತಿಯ ಪರಿಣಾಮ ಪ್ರಸಿದ್ಧ ವ್ಯಕ್ತಿಗಳ ಖಾಸಗಿ ಜೀವನ ಹಾಳಾಗಿದೆ . ಖಾಸಗಿ ಜೀವನ ಎಂಬ ಶಬ್ದವೇ ಅವರ ಮಟ್ಟಿಗೆ ಅರ್ಥ ಕಳೆದುಕೊಳ್ಳುತ್ತಿದೆ . ಸಿನಿಮಾ ನಟಿಯರು ಬಂದರೆ ಸಾಕು ಮಧ್ಯಮದವರು ಮುತ್ತುತ್ತಾರೆ . ಮಂಗಳೂರಿಗೆ ಐಶ್ವರ್ಯಾ ರೈ ಬಂದರೆ ಎಲ್ಲ ಮಾಧ್ಯಮ ಪ್ರತಿನಿಧಿಗಳು ಐಶ್ವರ್ಯಾ ರೈ ಇರುವ ಹೋಟೆಲ್ ಎದುರು ಒಂದಿಡೀ ದಿನ ಕಾದು ಕುಳಿತಿರುತ್ತಾರೆ . ( ಸಾಮಾನ್ಯರು ಪತ್ರಿಕಾಗೋಷ್ಠಿ ೫ ನಿಮಿಷ ತಡವಾದರೆ ಬೊಬ್ಬೆಹೊಡೆಯುತ್ತಾರೆ ! ) . ಆಕೆಯೋ ಪತ್ರಕರ್ತರನ್ನು ಬಳಿಯೂ ಬಿಟ್ಟುಕೊಳ್ಳುವುದಿಲ್ಲ . ಇದೆಂಥ ಕರ್ಮ ಪತ್ರಕರ್ತರದ್ದು !
ಸಿ . ಎಸ್ . ಎಲ್ . ಸಿ . ಯ ಈ ವರೆಗಿನ ಸಂಶೋಧನೆ ನನಗೆ ಅರಿವಾದಂತೆ ಅದರ ಸಾರ ಇಂತಿದೆ :
ಎಚ್ಚರಿಕೆ ! ! ಈ ಬ್ಲಾಗಿನ ಯಾವತ್ತೂ ಬರಹಗಳು ಕಳುವಾಗದಂತೆ ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯಲ್ಲಿ ಹರಕೆ ಹೊತ್ತುಕೊಳ್ಳಲಾಗಿದೆ ! ! !
ಹಾಗೆ ಮಾಡಿದರೆ ಏನು ಪ್ರಯೋಜನ ? ಈಗ ಕನ್ನಡ ಸಾಕಷ್ಟು ಸಂಸ್ಕೃತಮಯವಾಗಿದೆ . ವೈಜ್ಞಾನಿಕ ಯುಗದ ಹೊಸ ಶಬ್ದಗಳನ್ನು ಹುಟ್ಟು ಹಾಕಲು ಯಾವಾಗಲೂ ಸಂಸ್ಕೃತದ ಮೊರೆ ಹೋಗುವದು ಚಟವಾಗಿದೆ . ಹಾಗೆ ಹುಟ್ಟಿಸಿದ ಅಭಿಯಂತರ , ವಿದ್ಯುನ್ಮಾನ , ಕ್ಷಾರ , ಆಮ್ಲ , ಪತ್ರಹರಿತ್ತು , ಬೀಜೋಕ್ತಿ ಮುಂತಾದ ಪದಗಳು ಕನ್ನಡಕ್ಕೆ ಕನ್ನಡಿಗರಿಗೆ ಸಹಜವಾಗಿ ಒಗ್ಗುವದಿಲ್ಲ . ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಕಷ್ಟಪಟ್ಟು ಇವನ್ನು ಕಲಿತರೂ ಮುಂದೆ ಜೀವನದಲ್ಲಿ ಅವುಗಳನ್ನ ಅದೇ ಹೆಸರಿನಿಂದ ಕರೆಯುವದಿಲ್ಲ . ಇಂಗ್ಲೀಶ್ ಪದಗಳೇ ಸಹಜ ಎನಿಸಿಬಿಡುತ್ತವೆ . ಕನ್ನಡದ ಅಕ್ಷರಗಳನ್ನ ಕನ್ನಡಿಗರ ನಾಲಿಗೆ ಆಡುವಂತಷ್ಟೇ ಬರೆಯುವಂತೆ ಇಟ್ಟುಕೊಂಡಾಗ ಹೊರಗಿನಿಂದ ತಂದ ಪದಗಳನ್ನೂ ಕನ್ನಡಕ್ಕೆ ಒಗ್ಗಿಸಿಕೊಳ್ಳಬಹುದು . ಬರೀ ಅಕ್ಷರಗಳನ್ನ ಕೈ ಬಿಡುವದರಿಂದ ಇದಾಗುವದಿಲ್ಲ . ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣವೂ ಬೇಕು . ಅವೆರಡರ ಬಲದಿಂದ ಸಹಜ ಕನ್ನಡಕ್ಕೆ ಒಗ್ಗುವ ಹೊಸ ಪದಗಳನ್ನ ಹುಟ್ಟಿಸಿಕೊಳ್ಳಬಹುದು . ಆಗ ನನ್ನಂತಹವನು ಅತಿ ಸಂಸ್ಕೃತ ಬಳಸದೇ , ಸರಳ ಕನ್ನಡದಲ್ಲಿ ' ಶ್ರಾವಣದ ಒಂದು ಸುಂದರ ಸಂಡೇ ಹುಸಿ ಹೋಗಲು ಬಿಡದಂತೆ ಇಲ್ಲಿ ಸೇರಿದ ಚತುರ ಮಾತುಗಾರರಿಗೆಲ್ಲ ವಂದನೆಗಳನ್ನ ತಿಳಿಸುತ್ತ ' ನನ್ನ ಮಾತನ್ನ ಶುರು ಮಾಡಬಹುದು , ಅಥವ ಮುಗಿಸಬಹುದು . ನಮಸ್ಕಾರ .
ಕುಡಿತದ ಅಮಲಿನಲ್ಲಿ ಮಗನೇ ತಾಯಿಯನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಇಲ್ಲಿಗೆ ಸಮೀಪದ ನೆಲಜಿ ಬಲ್ಲಮಾವಟಿಯಲ್ಲಿ ನಿನ್ನೆ ಸಂಜೆ ನಡೆದಿದೆ .
" ಎಂದು ತಮತಮಗೆ ಬಲ್ಲವ ! ರೆಂದೊಡೆ ನಾನವರ ಬಯಕೆಯಂ ಸಲಿಸುವೆನಿ ! ! ನ್ನೆಂದಚ್ಚಗನ್ನಡಂ ಬಿಗಿ ! ವೊಂದಿರೆ ಕಬ್ಬಿಗರ ಕಾವನೊಲವಿಂದೊರೆದೆಂ ! !
ಈ ಸಲ ಊರಿಂದ ಬರುತ್ತಿದ್ದಂತೆ ನಟರಾಜ್ ಪುಸ್ತಕವೊಂದರಿಂದಲೇ ಸ್ವಾಗತಿಸಿದರು . . . ! ಆಶ್ಚರ್ಯ . . . ! ಏಕೆಂದರೆ ಸಮಯವಿದ್ದಾಗಲೆಲ್ಲಾ ದಿನಪತ್ರಿಕೆ . . ಬ್ಯುಸಿನೆಸ್ ಮ್ಯಾಗಜೀನ್ ಗಳಲ್ಲೇ ಮುಖ ಹುದುಗಿಸಿಕೊಳ್ಳುವ ಇವರು ಕಥೆ , ಕಾದಂಬರಿ ಇತ್ಯಾದಿಗಳನ್ನು ಮುಟ್ಟಿಯೂ ನೋಡುವುದಿಲ್ಲ . ಊಟ , ತಿಂಡಿ ಹೊತ್ತಿನಲ್ಲಿ , ಕೂತಲ್ಲಿ ನಿಂತಲ್ಲಿ ಇವರದ್ದು ಆ ಪುಸ್ತಕದ್ದೇ ಕಥೆ . . ಇವರ ಬೈರಿಗೆ ಮೆದುಳನ್ನು ಕೊರೆದು ಕೊರೆದು ಹಾಕಿತು . ಈ ಪುಸ್ತಕದಲ್ಲಿ ಬರುವ ಬೈರಿಗೆಯಂತೆ . . !
ಬರಹ ಬರಹಕ್ಕೆ ತಕ್ಕಂತಹ ಶೀರ್ಷಿಕೆಗಳೇ , ನಿಮ್ಮ ಬರಹದ ಹಿಡಿತವನ್ನು ತೋರಿಸುತ್ತದೆ . ಈ ಶೀರ್ಷಿಕೆಯನ್ನು ಓದಿದ ತಕ್ಷಣ ಹಿರಿಯರ ಬರಹವನ್ನು ನೆನಪಿಸಿಕೊಟ್ಟದ್ದೂ ಒಂದು ವಿಶೇಷ ಸಂಗತಿ .
ವಿಶ್ವದ ಆಯಸ್ಸಿನ ಮುಂದೆ ಭೂಮಿ , ನಕ್ಷತ್ರಗಳ ಆಯಸ್ಸು ಹುಲ್ಲುಕಡ್ಡಿಯಿದ್ದಂತೆ . ವಿಜ್ಞಾನಿಗಳ ಪ್ರಕಾರ ವಿಶ್ವ ಈಗ ಸಾವಿನ ಹತ್ತಿರ ಬಂದಿದೆ . ನಮಗೆ ಗೊತ್ತಿಲ್ಲದ ಆ ಶೇ . ೯೬ ಪ್ರದೇಶದ ಚಟುವಟಿಕೆಗಳು ಮತ್ತೊಂದು ಮಹಾಸ್ಫೋಟಕ್ಕೆ ಕಾರಣವಾಗುವ ಸೂಚನೆಗಳನ್ನು ನೀಡಿವೆ . ಆಗ ಮತ್ತೊಂದು ಹೊಸ ವಿಶ್ವದ ಉಗಮವಾಗಬಹುದು . ಹುಟ್ಟಿದೆಲ್ಲಾ ಸಾಯಲೇಬೇಕು ಎನ್ನುವುದು ಇದಕ್ಕಾಗಿಯೇ . ಹಾಗೆಂದು ನಾವು ಹೆದರಬೇಕಿಲ್ಲ . ಅದಕ್ಕೆ ಮತ್ತಷ್ಟು ಬಿಲಿಯನ್ ವರ್ಷಗಳು ಬೇಕಾದರೂ ಆಗಬಹದು . ಮನುಷ್ಯನ ಬುದ್ಧಿ ಶಕ್ತಿಗೆ , ಸಾಹಸ ಪ್ರವೃತ್ತಿಗೆ ಈ ಸಂಶೋಧನೆ ಒಂದು ದೊಡ್ಡ ಸವಾಲು . ಈ ಸಂಶೋಧನೆಯನ್ನು ಇಟ್ಟುಕೊಂಡು ನಾವು ಮತ್ತಷ್ಟು ವಿಷಯಗಳನ್ನು ಬೆಳಕಿಗೆ ತರಬೇಕಾಗಿದೆ . ನಮ್ಮ ಮುಂದಿನ ಪೀಳಿಗೆಗೆ ಈ ಸಂಶೋಧನೆ ಊರುಗೋಲಾಗಲಿದೆ .
೨೦೦೬ರಲ್ಲಿ ಆಶಾ ಪಾಕಿಸ್ತಾನಿ ಚಿತ್ರ ಮೆ ಏಕ್ ದಿನ್ ಲೌಟ್ ಕೇ ಆವೂಂಗಾ ಧ್ವನಿಸುರುಳಿಗಾಗಿ , ಪಾಕಿಸ್ತಾನದ ಪಾಪ್ ಗಾಯಕ ಜಾವೆದ್ ಅಹಮದ್ ಜೊತೆಯಲ್ಲಿ ದಿಲ್ ಕೆ ತಾರ್ ಬಜೆ ಹಾಡಿನ ಧ್ವನಿ ಮುದ್ರಣವನ್ನು ಮಾಡಿದ್ದರು . ಈ ಹಾಡನ್ನು ಚಲನಚಿತ್ರ ಪ್ರಚಾರ ಅಭಿಯಾನದ ಭಾಗವಾಗಿ ಪ್ರಸಾರಮಾಡಲಾಗಿತ್ತು ಮತ್ತು ಇದು ಟಾಪ್ ಮ್ಯೂಸಿಕ್ ಚಾರ್ಟ್ಸ್‌ನ ವೈಶಿಷ್ಟ್ಯತೆಯೊಂದಿಗೆ ಅತ್ಯಂತ ಜನಪ್ರಿಯಗೊಂಡಿತ್ತು .
- ಉನ್ನತ ಶಿಕ್ಷಣ ಬೇಡುವ ಕನ್ನಡ ಮಣ್ಣಿನ ಮಕ್ಕಳ ಕಥೆ ಗುರುವಾರ , ಜನವರಿ 1 , 1970 Hrs ( IST ) ನಮ್ಮ " ಸುದ್ದಿಸಾರಂಗಿಗೆ " ಚಂದಾದಾರರಾಗಿ ಸಿಟಿಜನ್ ಜರ್ನಲಿಸಂ
ಒಂದೆಡೆ ಸಂತೋಷ . ಇನ್ನೊಂದೆಡೆ ದುಗುಡ ! ಒಂದೊಳ್ಳೆ ಸಿನಿಮಾ ನೋಡಿದ ಸಂತೋಷ . ಕನ್ನಡದಲ್ಲಿ ಇಂತಹ ಸಿನಿಮಾಗಳು ಯಾಕೆ ಬರ್ತಾ ಇಲ್ಲ ಎಂಬ ಕೊರಗು ! ಹಿಂದಿಯ ರೇಸ್ ಸಿನಿಮಾ ನೋಡಿ ಹೆಂಡತಿಯ ಕೈ ಹಿಡಿದು ಹೊರಬರುತ್ತಿದ್ದರೆ ಮನಸ್ಸಿನಲ್ಲಿ ದ್ವಂದ್ವ ! ! ಅದೆಷ್ಟು ಚೆನ್ನಾಗಿದೆ ಚಿತ್ರ . ಕಥೆಯೇನು ಅಂತಹ ಮಹಾನ್ ಅಲ್ಲ . ಆದರೆ ಚಿತ್ರದ ತುಂಬ ಅದ್ಭುತ ತಿರುವುಗಳು , ಅನೂಹ್ಯ ಒಳಸುಳಿಗಳು , ಸಖತ್ ಸ್ಟಂಟ್‌ಗಳು , ಎಲ್ಲೂ ಅನಗತ್ಯ ಎನಿಸದ ದೃಶ್ಯಗಳು ಚಿತ್ರವನ್ನು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡಿವೆ . ರೇಸ್ ಸಿನಿಮಾ ಪೋಸ್ಟರ್‌ನಲ್ಲಿ ಬಿಪಾಶಾ ( ಪಿ ಏರಿಸಿ ಜೀವಕ್ಕೆ ಹಾಕುವವಳು ಎನ್ನಬಹುದೇ ? ) ಪೋಸ್ಟರ್ ನೋಡಿ ಸಿನಿಮಾಕ್ಕೆ ಹೋದರೂ , ಹೊರಬರುವಾಗ ಅದೊಂದು ಬಿಟ್ಟು ಉಳಿದೆಲ್ಲ ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ . ಸಿನಿಮಾ ನೋಡಿ ಹೊರಬಂದವರು ಅಬ್ಬಾಸ್ ಮಸ್ತಾನ್‌ಗೆ ಒಂದು ಶಬ್ಬಾಸ್ ಕೊಡ್ತಾರೆ . ಆರಂಭದಿಂದ ಅಂತ್ಯದವರೆಗೆ ಆಸಕ್ತಿ ಕೆರಳಿಸುವಂತೆ ಸಿನಿಮಾ ನಿರೂಪಿಸುತ್ತ ಹೋಗಿದ್ದಾನೆ ನಿರ್ದೇಶಕ . ಒಂದೆರಡು ಹಾಡುಗಳು ಮಾತ್ರ ಹೆಚ್ಚಿನಿಸುವಂತಿದ್ದವು . ಇದು ಖಂಡಿತ ಸಖತ್ ಸಿನಿಮಾ . ಸಮಯ ಸಿಕ್ಕರೆ ನೋಡಿ . ರೇಸ್ ಸಿನಿಮಾ ನೋಡಿದರೆ ಖಂಡಿತ ಆಗಲ್ಲ ಲಾಸ್ ! ಒಳ್ಳೆ ಸಿನಿಮಾ ನೋಡಿಯಾದ ಮೇಲೆ ನಿಂಗ್ಯಾಕಪ್ಪ ದುಗುಡ ಅಂತ ಕ್ಯಾತೆ ತೆಗಿಬೇಡಿ . ಇತ್ತೀಚೆಗೆ ರವಿ ಬೆಳೆಗೆರೆ ಅಭಿನಯದ ವಾರಸ್ದಾರ ನೋಡ್ದೆ . ನಾನು ಬೆಳೆಗೆರ ಅವರ ಅಭಿಮಾನಿ . ಅವರ ಎಲ್ಲ ಕಾದಂಬರಿ ಓದಿ ಮೆಚ್ಚಿದವನು . ತುಂಬ ಆಸೆಯಿಂದ ವಾರಸ್ದಾರಕ್ಕೆ ಹೋದರೆ , ಆದದ್ದು ನಿರಾಸೆ ! ನಿಜಕ್ಕೂ ಚಿತ್ರ ಚೆನ್ನಾಗಿಲ್ಲ . ಬೆಳೆಗೆರೆ ಅವರ ಮೇಲಿನ ಪ್ರೀತಿಯಿಂದಲೋ ಏನೋ ಮಾಧ್ಯಮಗಳು ಚಿತ್ರವನ್ನು ತೆಗಳಿಲ್ಲ . ಆದರೆ ಹೊಗಳಲೂ ಇಲ್ಲ ! ಇಲ್ಲಿ ಬೆಳೆಗೆರೆಯ ತಪ್ಪಿಲ್ಲ . ಅವರ ನಟನೆ ಗುಡ್ . ಆದರೆ ನಿರ್ದೇಶಕ ಗುರುದೇಶಪಾಂಡೆ ಎಡವಿದ್ದಾರೆ . ಅಷ್ಟೇ ಅಲ್ಲ ಎಡವಿ ಮುಗ್ಗರಿಸಿ ಬಿದ್ದಿದ್ದಾರೆ ! ವಾರಸ್ದಾರ ಹಿಂದಿಯ ಸರ್ಕಾರ್ ಸಿನಿಮಾ ಹೋಲುತ್ತದೆ . ಸರ್ಕಾರ್ ಸಿನಿಮಾಕ್ಕೆ ಹೋಲಿಸದೇ ಇದ್ದರೂ ವಾರಸ್ದಾರ ಚೆನ್ನಾಗಿಲ್ಲ . ಇನ್ನು ಸರ್ಕಾರ್ ನೋಡಿ ಹೋದರಂತೂ ಕತೆ ಮುಗಿದಂತೆಯೇ . ಸರ್ಕಾರ್ ಸಿನಿಮಾದಲ್ಲಿ ಅಮಿತಾಬ್ ನಟನೆ , ಉಂಟೋ ಇಲ್ಲವೋ ಎಂಬಷ್ಟೇ ಮಾತು , ಕೇವಲ ಕೈ , ಬಾಯಿ , ಕಣ್ಣು ಇಷ್ಟನ್ನೇ ತೋರಿಸುವ ಕ್ಯಾಮರಾ ವರ್ಕ್ , ಭೂಗತ ಜಗತ್ತಿನ ಒಳಸುಳಿಗಳು ಚೆನ್ನಾಗಿ ಬಿಂಬಿತವಾಗಿವೆ . ರವಿ ಬೆಳೆಗಯಂತಹ ಒಬ್ಬ ಭೂಗತ ಲೋಕದ ಪರಿಚಯ ಇದ್ದವರಾಗಿ , ಭೂಗತ ಲೋಕದಲ್ಲಿ ಗೆಳೆಯರನ್ನು ಹೊಂದಿದವರಾಗಿ ವಾರಸ್ದಾರ ಚಿತ್ರವನ್ನು ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು . ಆದರೆ ಬೆಳೆಗೆರೆ ಅಷ್ಟಾಗಿ ಅತ್ತ ತಲೆ ಹಾಕದಿರುವುದು ಇದಕ್ಕೆ ಕಾರಣವೂ ಇರಬಹುದು . ಅದಕ್ಕೇ ಹೇಳಿದ್ದು ನಿರ್ದೇಶಕ ಎಡವಿದ್ದಾನೆ ಎಂದು . ಚಿತ್ರ ನೋಡಿ ನಿಜಕ್ಕೂ ಬೇಜಾರಾಯಿತು . ಗುರು ದೇಶಪಾಂಡೆ ಇನ್ನು ಮುಂದಾದರೂ ಸುಧಾರಿಸಿಕೊಳ್ಳಲಿ . ಒಳ್ಳೆ ಚಿತ್ರ ನೀಡಲಿ . ಅದನ್ನು ಕನ್ನಡದ ಜನ ನೋಡಲಿ .
ಟ್ಟ ಗಿಡ ಕೊನೆಗೂ ಹೂ ಬಿಟ್ಟಿದೆ . ಇನ್ನೇನು ಹೀಚಾಗಿ , ಕಾಯಾಗಿ , ಫಲ ದೊರೆಯಬಹುದು . ಅದನ್ನು ಸವಿಯಲು ವಿಜಾಪುರದ ಜನತೆ ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಾರೆ . ಜಿಲ್ಲೆಯ ಮಂದಿಗೆ ಸ್ವರ್ಗ ಮೂರೇ ಗೇಣು ಎಂಬಂತಾಗಿದೆ . ಯಾರಿಗೆ ತಾನೆ ಸಂತಸ ಆಗದಿದ್ದೀತು ? ಸತತ ನಾಲ್ಕು ವರ್ಷಗಳ ಕಾಲ ಯಾವುದಕ್ಕಾಗಿ ಹಗಲಿರುಳೂ ಹೋರಾಡಿದ್ದರೋ , ಯಾವ ಕನಸಿನ ಮೂಟೆ ಹೊತ್ತು ಉರಿ ಬಿಸಿಲಲ್ಲೂ ಶ್ರಮಿಸಿದ್ದರೋ ಅದು ಕೈಗೂಡುವ ಸಮಯ ಬಂದಿದೆ . ಹೌದು , ರಾಷ್ಟ್ರದಲ್ಲೇ ಮಾದರಿಯಾಗಬಲ್ಲ ' ಸಮಗ್ರ ಕೆರೆ ತುಂಬುವ ಯೋಜನೆ ' ಯ ಕಾಮಗಾರಿಗೆ ನಾಡಿದ್ದು ಭಾನುವಾರವೇ ( ಡಿ . ೭ರಂದು ) ಚಾಲನೆ ಸಿಗಲಿದೆ . ಇದರೊಂದಿಗೆ ಮೊದಲ ಹಂತದಲ್ಲಿ ವಿಜಾಪುರ ಹಾಗೂ ಬಾಗಲಕೋಟ ಜಿಲ್ಲೆಯ ೨೩ ಕೆರೆಗಳು ಹಾಗೂ ೫ ಬಾಂದಾರಗಳು ತುಂಬಲಿವೆ . ಈ ಕ್ಷಣಕ್ಕಾಗಿ ಅಲ್ಲಿನ ರೈತರು ಅಕ್ಷರಶಃ ತಪಸ್ಸು ನಡೆಸಿದ್ದರು . ಮೂರು ತಿಂಗಳು ಎಡೆಬಿಡದೇ ಹೋರಾಟ ನಡೆಸಿದ್ದರು . ಜಿಲ್ಲೆಯ ಜನರ ಅದೃಷ್ಟ , ಅಪರೂಪಕ್ಕೆಂಬಂತೆ ನಮ್ಮ ರಾಜಕಾರಣಿಗಳು ಸಹ ಪಕ್ಷಭೇದ ಮರೆತು ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು . ಅಕಾರಿಗಳೂ ಸಹಕರಿಸಲು ಸಿದ್ಧರಾಗಿದ್ದರು . ಆದರೂ ಅಂದುಕೊಂಡದ್ದು ಆಗಲು ಇಷ್ಟು ವರ್ಷ ಬೇಕಾಯಿತು . ಇದೇ ಇರಬಹುದೇ ವ್ಯವಸ್ಥೆ ಅಂದರೆ ? ಹೋಗಲಿ ಬಿಡಿ , ಅಂತೂ ವಿಜಾಪುರದ ಕೆರೆ ತುಂಬಲು ಮುಹೂರ್ತ ಕೂಡಿ ಬಂತಲ್ಲ ಎಂಬುದೇ ಸಮಾಧಾನ . ಈ ಸಮಾಧಾನದ ಹಿಂದೆ ಪತ್ರಿಕೆಯದ್ದೊಂದು ಪಾಲೂ ಇದೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳಲೇಬೇಕು . ಕೆರೆತುಂಬುವ ಹೋರಾಟಕ್ಕೆ ಪೂರಕವಾಗಿ ' ವಿಕ ' ಪುಟ್ಟದೊಂದು ಅಕ್ಷರ ಅಭಿಯಾನವನ್ನೇ ನಡೆಸಿತ್ತು . ತಿಂಗಳುಗಳ ಕಾಲ ಹೋರಾಟದ ಪ್ರತಿ ಹೆಜ್ಜೆ ಹೆಜ್ಜೆಗಳನ್ನೂ ದಾಖಲಿಸಿತ್ತು . ಯೋಜನೆಯ ಮೇಲೊಂದು ' ಅವಲೋಕನ ' ವನ್ನೇ ಮಾಡಿ ವಿವರ ಕಟ್ಟಿಕೊಡಲಾಗಿತ್ತು . ಹೀಗೆ ಜನರ ದನಿಯಾಗಿ ದುಡಿದದ್ದೂ ಸಾರ್ಥಕವೆನಿಸುತ್ತಿದೆ . ಈ ಹಂತದಲ್ಲಿ ಮತ್ತೊಮ್ಮೆ ಜಿಲ್ಲೆಯ ಸ್ಥಿತಿ , ಯೋಜನೆಯ ರೂಪುರೇಷೆ , ಅದರ ಅಗತ್ಯ ಇತ್ಯಾದಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸುತ್ತಿದೆ . ಸತತ ಬರಗಾಲಕ್ಕೆ ತುತ್ತಾಗುವ ಬಾಗಲಕೋಟ , ವಿಜಾಪುರ ಅವಳಿ ಜಿಲ್ಲೆಯಲ್ಲಿ ಕೃಷ್ಣಾ , ಭೀಮೆ , ಡೋಣಿ , ಮಲಪ್ರಭಾ ಹಾಗೂ ಘಟಪ್ರಭಾ - ಹೀಗೆ ಪಂಚ ನದಿಗಳು ಹರಿಯುತ್ತವೆ . ಹಾಗಾದರೆ ಇಲ್ಲಿಗೆ ನೀರಿನ ಬರವೆಂಬುದೇ ಇರಲಿಕ್ಕಿಲ್ಲ ಎಂದುಕೊಂಡರೆ ತಪ್ಪಾದೀತು . ಏಕೆಂದರೆ ಬೇಸಿಗೆ ಬಂತೆಂದರೆ ಇಲ್ಲಿ ಕುಡಿಯುವ ಹನಿ ನೀರಿಗೂ ಹಾಹಾಕಾರ ಸೃಷ್ಟಿಯಾಗುತ್ತದೆ . ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಅವಳಿ ಜಿಲ್ಲೆಯ ಜನ ಭೂಮಿ ತ್ಯಾಗ ಮಾಡಿದರೂ ನೀರಿನ ಸಮಸ್ಯೆ ತಪ್ಪಿಲ್ಲ . ಇನ್ನೂ ವಿಚಿತ್ರವೆಂದರೆ ಪಕ್ಕದ ಮಹಾರಾಷ್ಟ್ರದಲ್ಲಿ ಗುಡುಗಲಾರಂಭಿಸಿದರೆ ವಿಜಾಪುರದ ಮಂದಿಯ ಎದೆ ನಡುಗಲಾರಂಭಿಸುತ್ತದೆ . ಅಲ್ಲಿ ಮಳೆ ಸುರಿದರಂತೂ ಮುಗಿದೇ ಹೋಯಿತು . ಪ್ರವಾಹದಿಂದ ಉಕ್ಕೇರುವ ಡೋಣಿ , ಭೀಮೆಯರು ಖುಲ್ಲಂಖುಲ್ಲಾ ಇಡೀ ಜಿಲ್ಲೆಯ ಬದುಕನ್ನೇ ಮುಳುಗಿಸಿ ಬಿಡುತ್ತಾರೆ . ಅಲ್ಲಿನ ಪ್ರವಾಹದ ನೀರು ಜಿಲ್ಲೆಯೊಳಗೆ ನುಗ್ಗಿ ನಾಚಾರ ಎಬ್ಬಿಸಿ ಬಿಡುತ್ತದೆ . ಇನ್ನು ನಮ್ಮದೇ ಕೃಷ್ಣಾ ನದಿಯಿಂದ ಪ್ರತಿ ವರ್ಷ ೬೦೦ ಟಿಎಂಸಿ ನೀರು ವ್ಯರ್ಥವಾಗಿ ಹರಿದುಹೋಗುತ್ತದೆ . ಇಷ್ಟಾದರೂ ವಿಜಾಪುರದಲ್ಲಿ ಗಂಟಲು ನೆನೆಸಲೂ ನೀರಿರುವುದಿಲ್ಲ . ಇಂಥ ವಿಚಿತ್ರ ಸನ್ನಿವೇಶದಲ್ಲಿ ಹುಟ್ಟಿಕೊಂಡಿದ್ದೇ ಕೆರೆ ತುಂಬಿಸುವ ಯೋಜನೆ . ವ್ಯರ್ಥವಾಗಿ ಸಮುದ್ರ ಸೇರುವ , ಹೊತ್ತಲ್ಲದ ಹೊತ್ತಲ್ಲಿ ಬಂದು ಜನಜೀವನವನ್ನೇ ತೊಳೆದುಕೊಂಡು ಹೋಗಿ ಬಿಡುವ ಪ್ರವಾಹದ ನೀರನ್ನೇ ಬಳಸಿಕೊಳ್ಳಬಾರದೇಕೆ ಎಂಬ ಯೋಚನೆ ಹುಟ್ಟಿಕೊಂಡದ್ದು ಆಗಿನ ತಿಕೋಟಾ ( ಈಗ ಬಬಲೇಶ್ವರ ) ಶಾಸಕ ಎಂ . ಬಿ . ಪಾಟೀಲರಿಗೆ . ತಜ್ಞರಾಗಿ ಅಧ್ಯಯನ ಕೈಗೊಂಡು ಅದಕ್ಕೊಂದು ಸ್ಪಷ್ಟ ನೀಲ ನಕ್ಷೆ ರೂಪಿಸಿಕೊಟ್ಟವರು ಬಿಎಲ್‌ಡಿಇ ಸಂಸ್ಥೆಯ ಪ್ರೊ . ಹುಗ್ಗಿ . ಎರಡೂ ನದಿಗಳ ಪ್ರವಾಹದ ನೀರಿನಲ್ಲಿ ೨ . ೫ ಟಿಎಂಸಿಯಷ್ಟನ್ನು ಎತ್ತಿ ವಿಜಾಪುರ ಬಾಗಲಕೋಟ ಅವಳಿ ಜಿಲ್ಲೆಗಳ ಎಲ್ಲ ಕೆರೆಗಳಲ್ಲಿ ತುಂಬಿಸುವ , ಆ ಮೂಲಕ ಇಡೀ ವರ್ಷ ಸಮೃದ್ಧ ನೀರನ್ನು ಕಾಣುವ , ರಾಷ್ಟ್ರದಲ್ಲೇ ಮಾದರಿ ಯೋಜನೆಯೊಂದು ರೂಪುಗೊಂಡಿತು . ಯೋಜನೆ ಕಾರ್ಯಸಾಧ್ಯವೆಂಬುದನ್ನು ಅರಿತ ಜಿಲ್ಲೆಗಳ ರೈತರು ಇದರ ಅನುಷ್ಠಾನಕ್ಕೆ ದನಿ ಎತ್ತಿದರು . ವಿಜಾಪುರದ ೯೭ , ಬಾಗಲಕೋಟದ ೬೭ ಕೆರೆಗಳನ್ನು ತುಂಬಿಸುವುದು ಉದ್ದೇಶ . ಮೊದಲ ಹಂತದಲ್ಲಿ ವಿಜಾಪುರ ಜಿಲ್ಲೆಯ ತಿಕೋಟಾ ಪ್ಯಾಕೇಜ್‌ನ ೧೬ ಕೆರೆಗಳು , ೫ ಬಾಂದಾರಗಳು ಹಾಗೂ ಬಾಗಲಕೋಟ ಜಿಲ್ಲೆಯ ೮ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಕಳೆದ ಸೆ . ೯ರಂದೇ ತಿಕೋಟಾದಲ್ಲಿ ಅಂದಿನ ಮುಖ್ಯಮಂತ್ರಿ ಎಚ್ . ಡಿ . ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಬಿ . ಎಸ್ . ಯಡಿಯೂರಪ್ಪ ಅವರಿಂದ ಚಾಲನೆ ಸಿಗಬೇಕಿತ್ತು . ಇದಕ್ಕೆಂದು ಅದ್ಧೂರಿ ಸಿದ್ಧತೆಯೂ ನಡೆದಿತ್ತು . ಆದರೆ , ರಾಜಕೀಯ ಬೆಳವಣಿಗೆ , ಬರದ ಜಿಲ್ಲೆಯ ರೈತರಿಗೆ ಬರೆ ಹಾಕಿತ್ತು . ಏತನ್ಮಧ್ಯೆ ಟೆಂಡರ್ ಪ್ರಕ್ರಿಯೆ ಸಹ ಪೂರ್ಣಗೊಂಡು , ಬೆಂಗಳೂರಿನ ಎಸ್‌ಪಿಎಂಎಲ್ ಕಂಪನಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಿತ್ತು . ಆದರೆ , ದರ ನಿಗದಿಯಾಗುವಾಗ ಟೆಂಡರ್ ಆದ ಹಣದ ಮೇಲೆ ಶೇ . ೨೬ರಷ್ಟನ್ನು ಹೆಚ್ಚುವರಿಯಾಗಿ ( ಎಸ್ . ಆರ್ . ರೇಟ್‌ಗಿಂತ ) ನೀಡಬೇಕೆಂದು ಕಂಪನಿ ಪಟ್ಟು ಹಿಡಿದಿತ್ತು . ಇದಕ್ಕೊಪ್ಪದ ತಾಂತ್ರಿಕ ಸಲಹೆಗಾರರು ಎಸ್ . ಆರ್ . ( ಷೆಡ್ಯೂಲ್ ರೇಟ್ ) ದರಕ್ಕಿಂತ ಶೆ . ೧೦ರಷ್ಟು ಹಣ ನೀಡುವುದಾಗಿ ಘೋಷಿಸಿದರು . ಪರಿಣಾಮ ಎಸ್‌ಎಂಪಿಎಲ್‌ನವರು ಹಿಂದೆ ಸರಿದರು . ಇದರಿಂದಾಗಿ ಕಂಗಾಲಾದ ರೈತರು ಆಕ್ರೋಶಗೊಂಡಿದ್ದರು . ಆದರೀಗ ೩ನೇ ಬಾರಿ ಟೆಂಡರ್ ನಡೆದು , ಹೈದರಾಬಾದ್‌ನ ಜೆವಿಪಿಆರ್‌ಎಸ್ ಕಂಪನಿಯವರಿಗೆ ೩ ವರ್ಷಗಳ ಕಾಲಮಿತಿಯೊಂದಿಗೆ ಕಾಮಗಾರಿ ವಹಿಸಲಾಗುತ್ತಿದೆ . ೧೦೯ ಕೋಟಿ ರೂ . ಯೋಜನೆ ವೆಚ್ಚ ಆಗಲಿದೆ . ಬಹುಶಃ ನಿಗದಿತ ಅವಯಲ್ಲಿ ಪೂರ್ಣಗೊಂಡರೆ ಅತಿ ಕಡಿಮೆ ವೆಚ್ಚದಲ್ಲಿ ಗರಿಷ್ಠ ನೀರಾವರಿಯಾಗುವ ರಾಷ್ಟ್ರದ ಪ್ರಥಮ ಯೋಜನೆ ಇದೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ . ಅಷ್ಟಕ್ಕೂ ನೀರು ತುಂಬಿಸುವುದು ಹೇಗೆ ? ಪ್ರಶ್ನೆ ಸಹಜ . ಎರಡೂ ಜಿಲ್ಲೆಯ ಕೆರೆಗಳಿಗೆ ಹಿರೇಪಡಸಲಗಿ ಬಳಿ ಕೃಷ್ಣಾ ನದಿಯಿಂದ ನೀರನ್ನು ಲಿಫ್ಟ್ ಮಾಡಲಾಗುತ್ತದೆ . ಒಟ್ಟು ೧ . ೦೯ ಟಿಎಂಸಿ ನೀರನ್ನು ಕೆರೆಗಳಿಗೆ ತುಂಬಿಸಲಾಗುತ್ತದೆ . ಮೊದಲ ಹಂತದಲ್ಲಿ ಕೃಷ್ಣಾ ನದಿಯಿಂದ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದುಹೋಗುವ ೨ . ೩೪ ಕ್ಯೂಸೆಕ್ ನೀರನ್ನು ಜೂನ್ - ಡಿಸೆಂಬರ್ ಅವಯಲ್ಲಿ ಒಟ್ಟು ೨ ಬಾರಿ ಹಿರೇಪಡಸಲಗಿಯಿಂದ ( ರೈಸಿಂಗ್ ಮೇನ್ ) ಕಲಬೀಳಗಿಯವರೆಗೆ ( ಒಟ್ಟು ೧೭ . ೫ ಕಿ . ಮೀ . ದೂರ ) ತರಲಾಗುತ್ತದೆ . ಕಲಬೀಳಗಿಯಲ್ಲಿ ವಿತರಣಾ ಛೇಂಬರ್ ನಿರ್ಮಿಸಿ ೨ ಪೈಪ್‌ಲೈನ್‌ಗಳ ( ನಾಗರಾಳ ಮತ್ತು ಕುಮಟೆ ) ಮೂಲಕ ನೀರು ಸರಬರಾಜು ಮಾಡಲಾಗುತ್ತದೆ . ವಿಜಾಪುರ ಜಿಲ್ಲೆಗೆ ನಾಗರಾಳದಿಂದ ನೀರು ತಂದು ರಾಂಪುರದಲ್ಲಿ ಗುರುತ್ವಾಕರ್ಷಣೆಯ ಮೂಲಕವೇ ಸಂಪ್ ಮಾಡಲಾಗುತ್ತದೆ . ಅಲ್ಲಿಂದ ಬಾಬಾನಗರಕ್ಕೆ ೫ . ೫ ಕಿ . ಮೀ . ವರೆಗೆ ನೀರು ತಂದು , ಅಲ್ಲೆರಡು ವಿತರಣಾ ಛೇಂಬರ್ ನಿರ್ಮಿಸಿ ಕನಮಡಿ , ಲೋಗಾಂವ ಟಕ್ಕಳಕಿ ಮತ್ತಿತರ ಕೆರೆಗಳಿಗೆ ತುಂಬಿಸಲಾಗುತ್ತದೆ . ಇದಲ್ಲದೇ ಬಾಗಲಕೋಟ ಜಿಲ್ಲೆಯ ಕೆರೆಗಳಿಗೆ , ಹಿರೇಪಡಸಲಗಿಯಿಂದ ನಟ್ಕಲ್ ಕೆರೆಗೆ ನೇರವಾಗಿ ನೀರು ತುಂಬಿಕೊಂಡು ಕೊಂಡೊಯ್ಯಲಾಗುತ್ತದೆ . ಕುಮಟೆ ಪೈಪ್‌ಲೈನ್‌ನಿಂದ ಜಿಲ್ಲೆಯ ಉಳಿದ ೬ ಕೆರೆಗಳನ್ನು ತುಂಬಿಸಬಹುದೆಂಬುದು ಈಗಿನ ಚಿಂತನೆ . ಮೊದಲ ಹಂತದಲ್ಲಿ ನೀರು ಲಿಫ್ಟ್ ಮಾಡಲು ೪ ವರ್ಟಿಕಲ್ ಟರ್ಬೈನ್ ಪಂಪ್‌ಗಳು ( ೧ , ೮೦೦ ಎಚ್‌ಪಿ ) ೨೪ ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ . ೨ನೇ ಹಂತದ ನೀರು ಲಿಫ್ಟ್ ಮಾಡಲು ೩ ಸೆಂಟ್ರಿಫ್ಯೂಗಲ್ ಪಂಪ್‌ಗಳನ್ನು ( ೪೦೦ ಎಚ್‌ಪಿ ) ಬಳಸಲಾಗುತ್ತದೆ . ಇಷ್ಟಾಗಿದ್ದೇ ಆದಲ್ಲಿ ಕೆರೆಗಳು ತುಂಬಿ ಅಂತರ್ಜಲ ಮಟ್ಟ ತಂತಾನೇ ವೃದ್ಧಿಸುತ್ತದೆ . ೩ , ೪೨೩ ಹೆಕ್ಟೇರ್ ಪ್ರದೇಶಕ್ಕೆ ನೇರ ನೀರಾವರಿ ಆಗಲಿದೆ . ಪಾತಾಳಕ್ಕಿಳಿದ ಬೋರ್‌ವೆಲ್‌ಗಳು ಮರು ಪೂರಣ ಹೊಂದಲಿವೆ . ಜನ , ಜಾನುವಾರುಗಳಿಗೆ ಕುಡಿಯಲು ಶುದ್ಧ ಹಾಗೂ ರಾಸಾಯನಿಕ ಮುಕ್ತ ನೀರು ಸಿಗಲಿದೆ . ಅವಳಿ ಜಿಲ್ಲೆಯ ತೋಟಗಾರಿಕೆ ಮತ್ತಷ್ಟು ಅಭಿವೃದ್ಧಿಯಾಗಲಿದೆ . ಅದೆಲ್ಲಕ್ಕಿಂತ ಹೆಚ್ಚಾಗಿ ೫೦ ಸಾವಿರ ಜನರಿಗೆ ದಿನಕ್ಕೆ ೮೦ ಲೀಟರ್‌ನಂತೆ ವರ್ಷವಿಡೀ ಕಣ್ಮುಚ್ಚಿಕೊಂಡು ಕುಡಿಯುವ ನೀರು ಕೊಡಬಹುದು . ಪ್ರತಿ ವರ್ಷ ಸರಕಾರ ಕುಡಿಯುವ ನೀರಿಗಾಗಿಯೇ ಕೋಟ್ಯಂತರ ರೂ . ಖರ್ಚು ಮಾಡುತ್ತಿರುವುದು ನಮ್ಮ ಕಣ್ಣಮುಂದೆಯೇ ಇದೆ . ನಮ್ಮ ಎಲ್ಲ ನೀರಾವರಿ ಯೋಜನೆಗಳೂ ವಿಫಲಗೊಂಡಿರುವುದಕ್ಕೆ ಕಾರಣವೇ ಪಕ್ಕಾ ನೀರಿನ ಮೂಲಗಳಿಲ್ಲದಿರುವುದು . ನೆದರ್‌ಲೆಂಡ್ , ಡೆನಿಡಾ , ಜಿ . ಪಂ . ನೆರವಿನ ಕೋಟ್ಯಂತರ ರೂ . ವೆಚ್ಚದ ಯೋಜನೆಗಳು ನೆಲಕಚ್ಚಿದ್ದೂ ಹೀಗಾಗಿಯೇ . ಆದರೆ , ಕೆರೆ ತುಂಬುವ ಯೋಜನೆ ಅತ್ಯಂತ ವೈಜ್ಞಾನಿಕ . ಇದಕ್ಕೆ ಆಧಾರ ಈ ಯೋಜನೆಗೆ ಜಲಮೂಲ ನಿಗದಿಯಾಗಿದೆ . ಅವಳಿ ಜಿಲ್ಲೆಯ ಬಹುತೇಕ ಕುಡಿಯುವ ನೀರಿನ ಯೋಜನೆಯ ಮೂಲಗಳು ಕೆರೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿರುವುದರಿಂದ ಸ್ವಾಭಾವಿಕವಾಗಿಯೇ ಕುಡಿಯುವ ನೀರಿನ ಯೋಜನೆಗಳಿಗೆ ಯೋಗ್ಯ ಮೂಲ ಸಿಕ್ಕಂತಾಗುತ್ತದೆ . ಆರ್ಥಿಕವಾಗಿಯೂ ಇದು ಕಾರ್ಯ ಸಾಧು , ಲಾಭದಾಯಕ . ಒಮ್ಮೆ ಕೆರೆ ತುಂಬಿದರೆ ಈ ವರೆಗೆ ಅವಳಿ ಜಿಲ್ಲೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ , ಉದ್ಯೋಗ ಸೃಜನೆಗಾಗಿ ಮಾಡುತ್ತಿದ್ದ ೫೦ ರಿಂದ ೧೦೦ ಕೋಟಿ ರೂ . ವೆಚ್ಚವನ್ನು ಅರ್ಧಕ್ಕರ್ಧ ಕಡಿತಗೊಳಿಸಬಹುದು . ಕೇವಲ ಮೀನುಗಾರಿಕೆಯಿಂದಲೇ ಪ್ರತಿ ಕೆರೆಯಿಂದ ವಾರ್ಷಿಕ ೧ ಲಕ್ಷ ರೂ . ನಿವ್ವಳ ಆದಾಯ ಲಭಿಸಬಹುದೆಂದೂ ಲೆಕ್ಕ ಹಾಕಲಾಗಿದೆ . ಒಟ್ಟಾರೆ ಯೋಜನೆಗೆ ಖರ್ಚು ಮಾಡಿದ ಮೊತ್ತಕ್ಕಿಂತಲೂ ವಾರ್ಷಿಕ ಎರಡೂವರೆ ಪಟ್ಟು ( ಬಿ . ಸಿ . ರೇಶ್ಯೊ ೨ . ೫ ) ಹೆಚ್ಚು ಆದಾಯ ಬರುತ್ತದೆ . ಇನ್ನಾದರೂ ಆ ಭಾಗದ ಮಂದಿ ರಾಸಾಯನಿಕ ಮುಕ್ತ ನೀರು ಕುಡಿದು ಫ್ಲೋರೋಸಿಸ್‌ನಂಥ ರೋಗಗಳನ್ನು ದೂರವಿಟ್ಟಾರು ಎಂಬ ನಿರೀಕ್ಷೆಗೆ ರೆಕ್ಕೆ ಬಂದಿದೆ . ಕೊನೆಗೂ ರೈತರ ಸಂಕಷ್ಟದ ದಿನಗಳು ದೂರವಾಗುವ ಲಕ್ಷಣಗಳು ಗೋಚರಿಸುತ್ತಿವೆ . ಜಿಲ್ಲೆಯ ಮಣ್ಣು ಹಾಗೂ ಹವಾಗುಣ ಎಲ್ಲ ಬೆಳೆಗಳಿಗೂ ಅತ್ಯುತ್ತಮವಾಗಿದ್ದು . ಇಲ್ಲಿನ ರೈತರಿಗೆ ಬೊಗಸೆ ನೀರು ಕೊಟ್ಟರೆ , ವಿಜಾಪುರ ' ಕರ್ನಾಟಕದ ಕ್ಯಾಲಿಫೋರ್ನಿಯಾ ' ಆಗುವುದರಲ್ಲಿ ಸಂಶಯವಿಲ್ಲ . ಅಷ್ಟಾಗಲಿ . ನೀರಿನ ವಿಚಾರದಲ್ಲಾದರೂ ನಮ್ಮ ನಾಯಕರು ರಾಜಕೀಯ ಲಾಭ ಹುಡುಕುವ ಶುಷ್ಕ ಮನದಿಂದ ಹೊರಬರಲಿ ಎನ್ನೋಣವೇ ? ಜಲ ಕಣ್ಬಿಟ್ಟರೆ ನೆಲ ನಕ್ಕೀತು , ಜಲದ ಕಣ್ಣು ಕಟ್ಟಿದರೆ ಜನ ನೆಲ ನೆಕ್ಕಬೇಕಾದೀತು .
( ರಜನೀಶರ ಅತಿ ಜನಪ್ರಿಯವಾದ ಉಪನ್ಯಾಸ ಮಾಲಿಕೆಯಾದ ' ಸಂಭೋಗದಿಂದ ಸಮಾಧಿಯೆಡೆಗೆ ' ಪುಸ್ತಕವಾಗಿ ಪ್ರಕಟಗೊಂಡು ಹೆಸರು ಮಾಡಿತ್ತು . ಸೆಕ್ಸ್ ಗುರು ಎಂಬ ಅಪಖ್ಯಾತಿಗೆ ಒಳಗಾದ ರಜನೀಶ್ ಸೆಕ್ಸ್ ಹಾಗೂ ಪ್ರೀತಿಯ ಬಗ್ಗೆ ಹೊಂದಿದ್ದ ಆಳವಾದ ತಿಳುವಳಿಕೆ ಈ ಉಪನ್ಯಾಸಗಳಲ್ಲಿ ಕಾಣುತ್ತದೆ . )
ಇತ್ತೀಚೆಗೆ ನಾವುಗಳೆಲ್ಲ ಹೆಚ್ಚು ಬ್ರಾಂಡೆಡ್ ಚಪ್ಪಲಿ / ಶೂ ಹಾಕುವುದನ್ನು ಇಷ್ಟಪಡುತ್ತೇವೆ . ಅದರ ಗುಣಮಟ್ಟಕ್ಕಿಂತಲೂ ಅದರ ಮೇಲಿನ ಹೆಸರೇ ಮುಖ ಬೆಲೆಯನ್ನು ಹೆಚ್ಚಿಸುತ್ತದೆ . ಅವೆಲ್ಲವು ಹೆಚ್ಚು ದಿನ ಬಾಳಿಕೆ ಬರುತ್ತದೆ , ಹಾಗಾಗಿ ನಾವು ಚಪ್ಪಲಿ ಹೂಲಿಯುವವರ ಬಳಿ ಹೋಗುವುದು ಕಡಿಮೆ . ನಾವು ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಆಗಾಗ ಹರಿದ ಚಪ್ಪಲಿಗಳನ್ನು ಊರಿನ ಬಸ್ ನಿಲ್ದಾಣಕ್ಕೆ ಹೋಗಿ ಹೂಲಿಸಿಕೂಂಡು ಬರುವುದೇ ಒಂದು ಕೆಲಸವಾಗಿತ್ತು . ಇತ್ತೀಚಿನ ದಿನಗಳಲ್ಲಿ ಅದು ಬೆಂಗಳೂರಿನಂತಹ ನಗರದಲ್ಲಿ ಹರಿದ ಚಪ್ಪಲಿಯನ್ನು ಬಿಸಾಕಿ ಹೂಸ ಚಪ್ಪಲಿ ಕೂಳ್ಳುವವರೇ ಹೆಚ್ಚು . ನಾವುಗಳು ಇಂತಹವರನ್ನು ಮನದಲ್ಲಿಟ್ಟುಕೂಂಡಾದರು ಇನ್ನು ಮುಂದೆ " ಬ್ರಾಂಡೆಡ್ " ಬಿಟ್ಟು " ಲೋಕಲ್ " ಆಗಬೇಕು ಅನಿಸದಿರದು .
ಇತ್ತೀಚಿನದಲ್ಲ , ಸುಮಾರು ಇಪ್ಪತ್ತು ವರ್ಷದ ಹಿಂದಿನ ಮಾತು . ವಾರಕ್ಕೊಮ್ಮೆ ನಮ್ಮನೆಗೆ ತಪ್ಪದೆ ' ತರಂಗ ' ಬರುತ್ತಿತ್ತು . ಆಗಿನ್ನೂ ಅಂಗಳದಲ್ಲಿ ಮಣ್ಣಾಟ ಆಡಿಕೊಂಡಿದ್ದ ನಮಗೆ , ತರಂಗದಲ್ಲಿ ಬರುತ್ತಿದ್ದ ' ಬಾಲವನ ' ಅತ್ಯಂತ ಪ್ರಿಯವಾಗಿತ್ತು . ಆ ದಿನ ಹೊಸ ತರಂಗ ಬರುತ್ತಿದ್ದಂತೆ ದೊಡ್ಡವರ ಕೈಗೆ ಸಿಗುವ ಮೊದಲೇ ನಾವಿಬ್ಬರು ( ನಾನು , ನನ್ನತ್ತೆ ಮಗಳು ) ಎಳೆದಾಡುತ್ತಿದ್ದೆವು . ನನಗಿಂತ ಅವಳು ಕೊಂಚ ದೊಡ್ಡವಳೂ ಬಲಶಾಲಿಯೂ ಆದ್ದರಿಂದ ಪುಸ್ತಕ ಅವಳ ಕೈಗೆ ( ಹರಿಯದೆ ಇಡಿಯಾಗಿಯೇ ) ಹೋಯಿತು . ಬಾಲವನ ತೆಗೆದ ಅವಳು ' ನಿಮ್ಮಜ್ಜಿ ನಿಂಗೆ ಪತ್ರ ಬರೆದಿದ್ದಾರೆ ನೋಡೆ ' [ . . . ]
ಯುವ ಆಟಗಾರ ವಿರಾಟ್ ಕೊಹ್ಲಿ ಸಹ ಬಹಳ ಹೊತ್ತು ಬ್ಯಾಟಿಂಗ್ ತರಬೇತಿ ನಡೆಸಿದರು . ಆದರೆ ಯುವರಾಜ್ ಸಿಂಗ್ ನೆಟ್ಸ್‌ನಲ್ಲಿ ಕೆಲವು ಸಮಯಗಳನ್ನು ಮಾತ್ರ ಕಳೆದರು .
ರಾಗಿಣಿ ದ್ವಿವೇದಿ | ಜಾಹ್ನವಿ ಠಾಕೂರ್ | ಅಮಲಾ ಪೌಲ್ | ಸೋನಾ | ಇಶಾ ಚಾವ್ಲಾ
ಮಂಗಳೂರು , ಮೇ . 07 : ಸಾರಿಗೆ ಕ್ಷೇತ್ರದಲ್ಲಿ ಆರೋಗ್ಯಕರ ಸ್ಪರ್ಧೆಯ ಮುಖಾಂತರ ಜನರಿಗೆ ಸೇವೆನೀಡುವುದಷ್ಟೆ ತಮ್ಮ ಸರ್ಕಾರದ ಧ್ಯೇಯ ಎಂದು ಸಾರಿಗೆ ಮತ್ತು ಗೃಹ ಸಚಿವ ಆರ್ ಅಶೋಕ್ ಅವರು ನುಡಿದರು . ಅವರಿಂದು ಪುತ್ತೂರಿನಲ್ಲಿ 7ಕೋಟಿ 32ಲಕ್ಷ ರೂ . ಗಳ ಎರಡು ಅಂತಸ್ತುಗಳ ನೂತನ ಬಸ್ ನಿಲ್ದಾಣದ ಶಿಲಾನ್ಯಾಸ ಸಮಾರಂಭವನ್ನು ನೆರವೇರಿಸಿ ಮಾತನಾಡುತ್ತಿದ್ದರು . ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಗುಣಮಟ್ಟ ಮತ್ತು ಸೇವೆಗೆ ಪ್ರಾಧ್ಯಾನ್ಯತೆ ನೀಡಿದ್ದು , 25 , 000 ಹೊಸ ಬಸ್ ಗಳು ಜನರಿಗೆ ಸೇವೆಯನ್ನು ನೀಡುತ್ತಿವೆ ಎಂದರು . ಬಿಸಿರೋಡ್ , ಉಡುಪಿ , ಉಪ್ಪಿನಂಗಡಿ , ಗುಂಡ್ಯ , ಧರ್ಮಸ್ಥಳ , ಸುಳ್ಯಗಳಲ್ಲಿ ಬಸ್ ಸ್ಟ್ಯಾಂಡ್ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ . ಮಂಗಳೂರಿನಲ್ಲಿ ವಿಶ್ರಾಂತಿ ಗೃಹ ನಿರ್ಮಾಣಕ್ಕೆ 65 ಲಕ್ಷ ರೂ . ಗಳ ಟೆಂಡರ್ ಕರೆಯಲಾಗಿದೆ . ಮೈಸೂರಿನಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಪಿಪಿಪಿ ಮಾಡೆಲ್ ನಲ್ಲಿ 7 ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ ಎಂದರು . ಇಂದು ಕೆ ಎಸ್ ಆರ್ ಟಿಸಿ ಯ ಯೋಜನೆಗಳು ಮುಂದಿನ 30 ವರ್ಷಗಳ ಅಗತ್ಯವನ್ನು ಮನದಲ್ಲಿರಿಸಿ ರೂಪಿಸಲಾಗುತ್ತಿದ್ದು , ಖಾಸಗಿಯವರೊಂದಿಗೆ ಆರೋಗ್ಯಕರ ಸ್ಪರ್ಧೆಯನ್ನು ಸರ್ಕಾರಿ ವ್ಯವಸ್ಥೆ ನೀಡುತ್ತಿದೆ ಎಂದರು . ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕರಾದ ಮಲ್ಲಿಕಾಪ್ರಸಾದ್ ಅವರು , ತಮ್ಮ ಅವಧಿಯಲ್ಲಿ ನಡೆಯಬೇಕಾದ ಯೋಜನೆಗಳ ಬಗ್ಗೆ ಸಚಿವರ ಗಮನಸೆಳೆದರು . ಜಿಲ್ಲಾ ಉಸ್ತುವಾರಿ ಸಚಿವರಾದ ಜೆ . ಕೃಷ್ಣ ಪಾಲೇಮಾರ್ , ವಿಧಾನಸಭಾ ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್ , ದ . ಕ . ಜಿ . ಪಂ ಅಧ್ಯಕ್ಷರಾದ ಕೆ . ಟಿ ಶೈಲಜಾ ಭಟ್ , ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲು , ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ . ನಾಗರಾಜ ಶೆಟ್ಟಿ , ಪುತ್ತೂರು ಪುರಸಭೆ ಅಧ್ಯಕ್ಷರಾದ ಕಮಲಾ ಆನಂದ್ , ತಾಲೂಕು ಪಂಚಾಯತ್ ಅಧ್ಯಕ್ಷರಾದ ಶಂಭು ಭಟ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು .
ಇನ್ನೊಮ್ಮೆ ಚಿನ್ನದ ಬೆಲೆಯೇರಿಕೆಯ ನಶೆಯಲ್ಲಿ ಮೈಮರೆಯುವ ಮೊದಲು ಬೆಲೆಯ ಪೂರ್ವಾಪರಗಳನ್ನು ಸರಿಯಾಗಿ ಮನದಟ್ಟು ಮಾಡಿಕೊಳ್ಳಬೇಕು . ಜಾಗತಿಕ ಮಾರುಕಟ್ಟೆಯಲ್ಲಿ ಯಾವ ಕಾರಣಕ್ಕೆ ಚಿನ್ನದ ಬೆಲೆಯೇರುತ್ತದೆ ಮತ್ತು ಯಾವಕಾರಣಕ್ಕೆ ಇಳಿಯುತ್ತದೆ . ಇತ್ಯಾದಿ . ಈಗಲೂ ಅಮೆರಿಕದ ಆರ್ಥಿಕ ಸ್ಥಿತಿಯಲ್ಲಿ ತುಸು ಚೇತರಿಕೆ ಕಂಡರೂ ಅಷ್ಟರ ಮಟ್ಟಿಗೆ ಚಿನ್ನದ ಬೆಲೆ ಇಳಿಯುತ್ತದೆ .
ಪುಟದ ಮೇಲೆಬದಿ - - ಬಲಬದಿ ಸ್ಪ್ಯಾನರ್ ಚಿತ್ರ ಕಾಣಿಸುತ್ತಾ ? ಕ್ಲಿಕ್ ಮಾಡಿ . options ನ ಟ್ಯಾಬ್‌ನಲ್ಲಿ minor options ಕ್ಲಿಕ್ಕಿಸಿ . ಪಾಸ್‌ವರ್ಡ್ ಉಳಿಸದಂತೆ ಸೆಟಿಂಗ್ ಮಾಡಲು ಅವಕಾಶ ಇದೆ . * ಅಶೋಕ್
ಹಾಸಿಗೆಯ ಮೇಲೆ ಬಿದ್ದುಕೊಂಡೇ ಯೋಚಿಸಲು ಶುರುಮಾಡಿದೆ . ಮನಸ್ಸು ಬೇಡವೆಂದರೂ ಹಿಂದೆ ಓಡಿತು . ನಾವು ಚಿಕ್ಕವರಿದ್ದಾಗ ಪ್ರತೀ ಸಲ ಸ್ವಾತಂತ್ರೋತ್ಸವಕ್ಕೂ , ಗಣರಾಜ್ಯ ದಿನದಂದೂ ಅಪ್ಪ ತಪ್ಪದೇ ಭಾಷಣ ಬರೆದುಕೊಡುತ್ತಿದ್ದರು . ಅದನ್ನು ಬಾಯಿಪಾಠ ಮಾಡಿಕೊಂಡು ಹೋಗಿ ನಾವು ಶಾಲೆಯಲ್ಲಿ ಹೇಳುತ್ತಿದ್ದೆವು . ಹೈಸ್ಕೂಲ್ ಗೆ ಬಂದ ಮೇಲೆ ಪ್ರತೀ ವರ್ಷವೂ ಮಾರಿಗುಡಿಯಲ್ಲಿ ಆಗುವ ನವರಾತ್ರಿ ಸ್ಪರ್ಧೆಯಲ್ಲಿ ಖಾಯಂ ಆಗಿ ಅಪ್ಪ ಬರೆದುಕೊಟ್ಟ ಪ್ರಬಂಧವನ್ನು ಬರೆದು ನಾನು ಪ್ರೈಜ್ ಗೆದ್ದಿದ್ದೆ . ಸ್ಕೂಲ್ ಮತ್ತು ಹೈಸ್ಕೂಲಿನಲ್ಲಿ ಆಗುವ ಯಾವುದೇ ತರಹದ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಅಪ್ಪ ನಮ್ಮನ್ನು ಯಾವಾಗಲೂ ಹುರಿದುಂಬಿಸುತ್ತಿದ್ದರು , ಅಲ್ಲದೇ ತಾವು ಜೊತೆಗೆ ಕುಳಿತು ಸಹಾಯಮಾಡುತ್ತಿದ್ದರು . ಅವರೂ ಶಾಲಾ ಶಿಕ್ಷಕರಾಗಿದ್ದುದು ಇವಕ್ಕೆಲ್ಲ ಮೂಲ ಪ್ರೇರಣೆಯಾಗಿದ್ದಿರಬೇಕು , ಆದರೆ ಈಗ ಯೋಚಿಸಿದರೆ ಅವರ ಶೃದ್ಧೆ ಮತ್ತು ಉತ್ಸಾಹ ಬೆರಗು ಹುಟ್ಟಿಸುವಷ್ಟು ಅಸಾಧಾರಣವಾಗಿತ್ತು . ಪ್ರತೀ ವರ್ಷ ನಡೆಯುವ ವಿಜ್ಞಾನ ಮಾದರಿ ನಿರ್ಮಾಣ ಸ್ಪರ್ಧೆಯಲ್ಲಿ ಅವರು " ನೂಕ್ಲಿಯರ್ ರಿಯಾಕ್ಟರ್ ' ಅಥವಾ ' ಗೋಬರ್ ಗ್ಯಾಸ್ " ಮಾಡೆಲ್ ಮಾಡಿಕೊಡುವಾಗ ತೆಗೆದುಕೊಂಡ ಶ್ರಮ , ಉತ್ಸಾಹ , ಅಲ್ಲದೆ ಅವು ಹೇಗೆ ಕೆಲಸಮಾಡುತ್ತವೆ ಎಂಬುದರ ವಿವರಣೆ ಇಂದಿಗೂ ನನ್ನ ಕಣ್ಣ ಮುಂದಿದೆ . ಅವಕ್ಕೆಲ್ಲ ಪ್ರಥಮ ಸ್ಥಾನ ಬಂದಾಗ ನನಗಾದ ಸಂತೋಷ , ಮಾತುಗಳಲ್ಲಿ ಹಿಡಿಸಲಾರದಷ್ಟು ! . ದಿನಪತ್ರಿಕೆಗಳಲ್ಲಿ ಬರುವ ಪದಬಂಧವನ್ನು ಬಿಡಿಸುವಾಗಲೆಲ್ಲ ಅವರು ನನ್ನನ್ನು ಕರೆದು ಹತ್ತಿರ ಕುರಿಸಿಕೊಳ್ಳುತ್ತಿದ್ದರು . ಅಲ್ಲದೆ ಆ ಶಬ್ದಗಳು ಹೇಗೆ ಉದ್ಭವವಾದವು ಎಂಬುದನ್ನೂ ವಿವರಿಸುತ್ತಿದ್ದರು . ಅವರ ಶಾಲಾ ಲೈಬ್ರರಿಯಿಂದ ಹಲವಾರು ಒಳ್ಳೆಯ ಕನ್ನಡ ಪುಸ್ತಕಗಳನ್ನು ತಂದು ಕೊಡುತ್ತಿದ್ದರು . ನಮ್ಮ ರಜಾಕಾಲದ ಬಹುಪಾಲನ್ನು ನಾವು ಅವನ್ನು ಓದಿಕಳೆಯುತ್ತಿದ್ದೆವು . ಹೀಗೆ ನಮ್ಮ ಸರ್ವತೋಮುಖ ಬೆಳವಣಿಗೆಗೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಎಲ್ಲವನ್ನೂ ಅವರು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದರು .
ಶಿವು ಅವರೇ , ಉತ್ತಮ ಚಿತ್ರಗಳು ಮತ್ತು ಸಂಭಾಷಣೆ . ನನ್ನ ಹಳೆ ರೂಮ್ ಜ್ಞಾಪಕ ಬಂತು . . ಧನ್ಯವಾದಗಳು
ಭಾವ ಕಾವ್ಯದ ಜೀವಾಳ ಭಾವ ಕವಿಯ ಅಂತರಾಳದ ಆಸ್ತಿ ಭಾವವೇ ಬದುಕಿಗೆ ಮೆರಗು
ಗೋದಾವರಿಯವರೆ . . . ಭಾಸ ಕವಿಯ ನಾಟಕದ ಪ್ರಜ್ಞೆ ಬೆರಗು ಮೂಡಿಸುತ್ತದೆ . . ಬಹಳ ಆಳವಾಗಿ ವಿಶ್ಲೇಷಿಸಿದ್ದೀರಿ ಭಾಸ ಕವಿಯ ಬಗೆಗೆ ನನಗೇನೂ ಗೊತ್ತಿಲ್ಲವಾಗಿತ್ತು . . . ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು . . .
ಪುರಾಣಗಳ ಪ್ರಕಾರ ಸೂರ್ಯನಿಗೆ ಇಬ್ಬರು ಪತ್ನಿಯರು - ಸಂಜನಾ ಮತ್ತು ಛಾಯಾ . ಅವನ ಮಕ್ಕಳಲ್ಲಿ ಪ್ರಮುಖರೆಂದರೆ , ಮನು , ಯಮ , ಯಮುನಾ , ಕರ್ಣ , ಸುಗ್ರೀವ ಇತ್ಯಾದಿ . ಶ್ರೀ ರಾಮನು ಸೂರ್ಯನ ವಂಶಸ್ತನು .
ಮೊನ್ನೆ ಇದ್ದಕ್ಕಿದ್ದಂತೆ ಅದೇ ಬಿ . ಇ . ಎಲ್ . ನಲ್ಲಿ ಈಗ ಎಂಪ್ಲಾಯಿ ಆಗಿರುವ ಶ್ರೀನಿವಾಸ ಕರೆ ಮಾಡಿದವನು " . . . ನಿನ್ನ ಒಲ್ಡ್ ಫ್ರೆಂಡ್ ಹೋಗಿ ಬಿಟ್ಟರಂತೆ ಕಣೊ . . . " ಎಂದರೆ ಒಮ್ಮೆ ಕ್ಷಣಕ್ಕೆ ಅರಿವಾಗಲಿಲ್ಲ " ಯಾರು ಎಂದೆ . . . ? " " ಅದೇ ಬೊಮ್ಮ ಸಂದ್ರದಲ್ಲಿದ್ದರಲ್ಲ ಅವರು . . . " ಒಹೋ . . ಮುಂದೆ ಮಾತಾಡಲಾಗಲಿಲ್ಲ . . . . ನಾಲ್ಕು ದಿನ ಮೊದಲು ಇಲ್ಲಿ ಗಣಪತಿ ದೇವಸ್ಥಾನದ ಹತ್ತಿರ ಸಿಕ್ಕಿದವರು ನನ್ನ ಬಗ್ಗೆ ವಿಚಾರಿಸಿದ್ದರಂತೆ . ಮೊಬೈಲು ನಂಬರು ಕೊಡು ಎಂದಿದ್ಡಾರೆ . ಇವನು ಆಯಿತು ವಿಚಾರಿಸಿ ಕೊಡುತ್ತೇನೆ ಎಂದು ಎರಡ್ಮೂರು ದಿನವಾದರೂ ನನ್ನನ್ನು ಸಂಪರ್ಕಿಸಿಲ್ಲ . ಮರುದಿನ ಕೂಡಾ ಸಿಕ್ಕಿದಾಗ ನಂಬರು ಇನ್ನು ತೆಗೆದುಕೊಳ್ಳಲಾಗಿಲ್ಲ ಅಂದಿದ್ದಕ್ಕೆ ಮುಖ ಸಣ್ಣದು ಮಾಡಿ ಅವನ ಹತ್ತಿರ ಮಾತಾಡಬೇಕಿತ್ತು . . ಛೇ . . . ಎಂದು ಗೊಣಗಿಕೊಂಡಿದ್ದಾರೆ ಅಷ್ಟೆ . ಮರುದಿನಕ್ಕೆ ಅವರಿಲ್ಲ . ಜಾಲಹಳ್ಳಿಯಲ್ಲಿ ಎಂದಿನಂತೆ ಭೇಏಯಾಗುತ್ತಿದ್ದ ಗಣೇಶ ದೇವಸ್ಥಾನದ ಹತ್ತಿರ ಕಲ್ಲು ಬೆಂಚಿನ ಮೇಲೆ ಕುಳಿತಲ್ಲೇ ಪ್ರಾಣ ಬಿಟ್ಟಿದಾರೆ . . " ಮುಂದಿನ ಮಾತು ಕೇಳಿಸಿಕೊಳ್ಳಲಿಲ್ಲ . ಕೊನೆಯ ಕ್ಷಣದಲ್ಲಿ ಮನಸ್ಸು ಖಾಲಿ ಖಾಲಿಯಾದಂತೆನಿಸಿತು . ಯಾಕೆಂದರೆ ಹಿರಿಯರಾಗಿದ್ದಷ್ಟೂ ನಿರ್ಗಮನದ ಬಾಗಿಲು ತುಂಬ ಹತ್ತಿರಕ್ಕಿರುತ್ತವೆ . ನನಗೆ ಅಂಥ ಆತ್ಮೀಯರ ವಲಯ ದೊಡ್ಡದು .
ನಿಜ ಹೇಳಬೇಕೆಂದರೆ ಕಳೆದೆರಡು ಬಾರಿ ಈ ರಂಗಸ್ಥಳದಲ್ಲಿ ಕಾಣಿಸಿಕೊಂಡಿದ್ದ ವಿಠಲ ಶಾಸ್ತ್ರಿಯವರ ರೋಚಕ ಕಥೆಗಳ ಬಗೆಗೆ ಇನ್ನೂ ಹೇಳುವುದಿತ್ತು . ಕಳೆದ ಬಾರಿಯ ಲೇಖನ ಮುಗಿಸುವ ಹೊತ್ತಿಗೆ ಪುನಃ ವಿಠಲ ಶಾಸ್ತ್ರಿಗಳ ಬಗೆಗೇ ಬರೆಯುವುದೆಂದು ತೀರ್ಮಾನಿಸಿಯೂ ಆಗಿತ್ತು . ಹಾಗಾಗಿ ಅದೇ ಗುಂಗಿನಲ್ಲಿದ್ದ ನನ್ನನ್ನು ಎಚ್ಚರಿಸಿದ್ದು ಮೊನ್ನೆ ಕಳೆದುಹೋದ ದಿನಾಂಕ ಮೇ ೨೭ . ಬರೋಬ್ಬರಿ ಇಪ್ಪತ್ತು ವರ್ಷಗಳ ಹಿಂದೆ ಅದೇ ದಿನ ನಡೆದುಹೋದ ದುರಂತವೊಂದು ಯಕ್ಷಲೋಕಕ್ಕೆ ಮರ್ಮಾಘಾತವನ್ನೇ ನೀಡಿತ್ತೆಂದು ಹೇಳಿದರೆ ಖಂಡಿತಾ ಅತಿಶಯೋಕ್ತಿಯಲ್ಲ . ಹೌದು , ಯಕ್ಷಲೋಕ ಕಂಡ ಅತ್ಯಪೂರ್ವ ಕಂಠಸಿರಿಯ ಭಾಗವತ ಗುಂಡ್ಮಿ ಕಾಳಿಂಗ ನಾವಡರು ಗತಿಸಿಹೋದದ್ದು ೧೯೯೦ರ ಮೇ ೨೭ರಂದು !
ಬೆಂಗಳೂರಿಗೆ ಅಷ್ಟೊಂದು ಮಹತ್ವ ಯಾಕೆ ? ಇದೆಲ್ಲ ಸರಿ , ಆದ್ರೆ ಬೆಂಗಳೂರಲ್ಲಿ ಸಾಹಿತ್ಯ ಸಮ್ಮೇಳನ ಆದ್ರೆ ಅದಕ್ಯಾಕೆ ಅಷ್ಟು ಮಹತ್ವ ಅನ್ನಿಸಬಹುದು . ಬೆಂಗಳೂರು ಅನ್ನುವುದು ಕರ್ನಾಟಕದ ಬೇರೆ ಊರುಗಳಂತಲ್ಲ . ಇಡೀ ಕರ್ನಾಟಕದ , ಕನ್ನಡಿಗರ ಕಲಿಕೆ , ದುಡಿಮೆ , ಬದುಕು ರೂಪಿಸಬೇಕಾದ ವ್ಯವಸ್ಥೆಯಾದ ಸರ್ಕಾರ ಇಲ್ಲೇ ನೆಲೆಗೊಂಡಿರುವುದು . ಕರ್ನಾಟಕದ ಸಾಂಸ್ಕೃತಿಕ ಗುರುತುಗಳಲ್ಲೊಂದಾದ ಕನ್ನಡ ಚಿತ್ರೋದ್ಯಮ ಇಲ್ಲೇ ನೆಲೆಗೊಂಡಿರುವುದು . ಕರ್ನಾಟಕದ ಕಳೆದ 60 ವರ್ಷಗಳ ಇತಿಹಾಸದಲ್ಲಿ ರೂಪುಗೊಂಡ ಹತ್ತು ಹಲವು ನಾಡ ಪರ , ಭಾಷೆ ಪರ ಚಳುವಳಿಗಳಿಗೆ ಹೊಸ ದಿಕ್ಕು ತೋರಿಸಿದ , ಜನಾಭಿಪ್ರಾಯ ರೂಪಿಸುವಲ್ಲಿ ಕೆಲಸ ಮಾಡಿದ ಹತ್ತು ಹಲವು ಕನ್ನಡ ಚಿಂತಕರು , ಸಂಘಟನೆಗಳಿಗೂ ಬೆಂಗಳೂರು ಕೇಂದ್ರ ಸ್ಥಾನ . ಕರ್ನಾಟಕದ ರಾಜಕೀಯ , ಆಡಳಿತ ವ್ಯವಸ್ಥೆಯನ್ನು ಹದ್ದಿನ ಕಣ್ಣಿನಿಂದ ಬೆನ್ನು ಬಿಡದೇ ಕಾಯುತ್ತಿರುವ ಸುದ್ದಿ , ದೃಶ್ಯ ಮಾಧ್ಯಮಗಳಿಗೂ ಬೆಂಗಳೂರೇ ಕೇಂದ್ರ ಸ್ಥಾನ . ಇವೆಲ್ಲದಕ್ಕೂ ಮಿಗಿಲಾಗಿ ಕರ್ನಾಟಕದ ಆರ್ಥಿಕ ವ್ಯವಸ್ಥೆಯನ್ನು ಬಹು ಪಾಲು ನಿಯಂತ್ರಿಸುತ್ತಿರುವುದು ಬೆಂಗಳೂರೆಂಬ ಕೆಂಪೇಗೌಡರ ಊರು . ಕರ್ನಾಟಕದ ಪಾಲಿನ ಹೆಚ್ಚಿನ ಎಲ್ಲ stakeholders ಇರೋ ಬೆಂಗಳೂರಲ್ಲಿ , ಇವರೆಲ್ಲರ ನಡುವೆ ನಡಿತಿರೋ ಈ ಸಮ್ಮೇಳನ ನಿಜಕ್ಕೂ ಮಹತ್ವದ್ದೇ .
ಹುಣಸೆ ಮರಕ್ಕೆ ಮುಪ್ಪಾದರೂ ಹುಳಿ ಮುಪ್ಪೇ ಎಂಬ ಗಾದೆಗೆ ಇಟಲಿಯ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ಸೂಕ್ತ ಉದಾಹರಣೆ . " ಬೆರ್ಲುಸ್ಕೋನಿ ಪ್ರತಿದಿನ 5 ಸಲ ಸೆಕ್ಸ್ ಮಾಡುವಷ್ಟು ಪೌರುಷ ಹೊಂದಿದ್ದಾರೆ " ಎಂದು ಅವರ ಪರ್ಸನಲ್ ಡಾಕ್ಟರ್ ಕ್ಯಾಂಡಿಡ್ ಖಾಸಗಿ ರೆಡಿಯೋವೊಂದಕ್ಕೆ ತಿಳಿಸಿದ್ದಾರೆ . ಸಿಲ್ವಿಯೊ ವಿವಾದಿತ ಪ್ರಧಾನಿ . ಆತನ ಮೇಲೆ ಸಾಕಷ್ಟು ಸೆಕ್ಸ್ ಕ್ಯಾಂಡಲ್ ಕೇಸ್ ಗಳಿವೆ . ಈಗ ಚರ್ಚೆ ನಡೆಯುತ್ತಿರುವುದು ಬುಂಗಾ ಬುಂಗ್ ಎಂಬ ಸೆಕ್ಸ್ ಪಾರ್ಟಿ ಬಗ್ಗೆ . ಈ ಪಾರ್ಟಿಯಲ್ಲಿ ಇಬ್ಬರು ಯುವತಿಯರು ಸಲಿಂಗಕಾಮ . . .
ಉದ್ಯೋಗ ಖಾತ್ರಿ ಕೂಲಿ ಹೆಚ್ಚಳ ಬೀದರ , ಜ . ೧೬ : ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡುವ ಕಾರ್ಮಿಕರ ಕನಿಷ್ಟ ಕೂಲಿ ದರವನ್ನು ನೂರು ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ತಿಳಿಸಿದ್ದಾರೆ . ೨೦೦೯ರ ಎಪ್ರಿಲ್‌ನಿಂದ ಅನ್ವಯವಾಗುವಂತೆ ಕನಿಷ್ಟ ಕೂಲಿ ದರವನ್ನು ಹೆಚ್ಚಿಸಲಾಗಿದೆ . ಆದರೆ ೨೦೦೯ರ ಡಿಸೆಂಬರ್ ೩೧ರ ವರೆಗೆ ಅನುಷ್ಟಾನಗೊಳಿಸಲಾದ ಎಲ್ಲಾ ಕಾಮಗಾರಿಗಳ ಸಂಬಂಧ ಕನಿಷ್ಟ ಕೂಲಿ ದರವನ್ನು ರೂ . ೮೨ಅನ್ವಯಿಸಿ ಅನುಷ್ಟಾನಗೊಳಿಸಲಾಗುವುದು . ಹಾಗೂ ಸದರಿ ಕೂಲಿ ದರವನ್ನು ಪಾವತಿಸಲಾಗುವುದು . ಎಪ್ರಿಲ್ ೨೦೦೯ರಿಂದ ಡಿಸೆಂಬರ್ ೩೧ರವರೆಗೆ ಕೆಲಸ ನಿರ್ವಹಿಸಿರುವ ಎಲ್ಲಾ ನೊಂದಾಯಿತ ಕೂಲಿ ಕಾರ್ಮಿಕರಿಗೆ ನಿರ್ವಹಿಸುವ ಕೆಲಸಕ್ಕೆ ಅನುಗುಣವಾಗಿ ಪರಿಷ್ಕೃತ ಕನಿಷ್ಟ ಕೂಲಿ ದರದಲ್ಲಿನ ವ್ಯತ್ಯಾಸದ ಬಾಕಿ ಮೊತ್ತವನ್ನು ಸರ್ಕಾರದ ನಿರ್ದೇಶನ ಬಂದ ಬಳಿಕ ಪ್ರತ್ಯೇಕವಾಗಿ ಪಾವತಿಸಲಾಗುವುದು . ೨೦೧೦ರ ಜನವರಿ ೧ರಿಂದ ಪ್ರಾರಂಭವಾಗುವ ಎಲ್ಲಾ ಕಾಮಗಾರಿಗಳಿಗೆ ಅನ್ವಯವಾಗುವಂತೆ ಅಂದಾಜು ಪಟ್ಟಿಗಳನ್ನು ತಯಾರಿಸಿ ಅನುಷ್ಟಾನಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ . ಸಮುದ್ರೋತ್ಪನ್ನ ರಫ್ತಿಗೆ ಕ್ಯಾಚ್ ಸರ್ಟಿಫಿಕೆಟ್ ಮಂಗಳೂರು ಜನವರಿ ೧೨ : ( ಕರ್ನಾಟಕ ವಾರ್ತೆ ) - ಕಾನೂನು ಬಾಹಿರ , ಬೇನಾಮಿ ಮತ್ತು ಅನಿರ್ಬಂಧಿತ ಮೀನುಗಾರಿಕೆ ತಡೆಗೆ ಮತ್ತು ಹಿಡಿದ ಮೀನಿಗೆ ನ್ಯಾಯಯುತ ಬೆಲೆ ದೊರಕಿಸಲು ಯರೋಪಿಯನ್ ಯೂನಿಯನ್ ಕ್ಯಾಚ್ ಸರ್ಟಿಫಿಕೆಟ್ ಸ್ಥಿರೀಕರಣ ವ್ಯವಸ್ಥೆಯ ಜಾರಿಗೆ ನಿರ್ಧರಿಸಿದೆ . ಈ ವ್ಯವಸ್ಥೆಯನ್ನು ಜಾರಿಗೆ ತರಲು ಎಲ್ಲಾ ಮೀನುಗಾರಿಕೆ ಬೋಟ್ ಗಳ ಮಾಲೀಕರ ಮತ್ತು ಸಾಗರೋತ್ಪನ್ನ ರಫ್ತುದಾರರ ಸಹಕಾರವನ್ನು ಕೋರಿರುವ ಎಫ್ ಎ ಒ ಮತ್ತು ಇಂಡಿಯನ್ ಒಸಿಯನ್ ಟ್ಯೂನಾ ಕಮಿಷನ್ ನಂತಹ ಪ್ರಾಂತೀಯ ಮೀನುಗಾರಿಕಾ ನಿರ್ವಹಣಾ ಸಂಘಟನೆಗಳು ಈ ವ್ಯವಸ್ಥೆಗೆ ಮುಂದಾಗಿದೆ . ಐರೋಪ್ಯ ಒಕ್ಕೂಟ ರಾಷ್ಟ್ರಗಳಿಗೆ ರಫ್ತಾಗುವ ಮೀನು , ಸಿಗಡಿ , ಕಟಲ್ ಫಿಶ್ ಮುಂತಾದವುಗಳು ನ್ಯಾಯ ಸಮ್ಮತ ( ಸ್ಥಿರೀಕರಿಸಿದ ) ಕ್ಯಾಚ್ ಸರ್ಟಿಫಿಕೇಟ್ ಗಳನ್ನು ಹೊಂದಿರುವ ಅವಶ್ಯಕತೆ ಬಗ್ಗೆ ಯುರೋಪಿಯನ್ ಕಮಿಷನ್ ಹೊಸ ನಿಯಮ ಹೊರತಂದಿದೆ . ಮೀನುಗಾರಿಕೆ ನಡೆಸಿದ ಪ್ರದೇಶ ಮತ್ತು ಬಂದರಿಗೆ ತಲುಪಿದ ಬಗ್ಗೆ ತಿಳಿದುಕೊಳ್ಳಲು ಈ ವ್ಯವಸ್ಥೆ ಸಹಕಾರಿಯಾಗಿದೆ . ೨೦೧೦ನೇ ಇಸವಿಯ ಜನವರಿ ೧ ಮತ್ತು ನಂತರ ಸಮುದ್ರದಿಂದ ಹಿಡಿದು ರಫ್ತು ಮಾಡುವ ಸರಕುಗಳಿಗೆ ಅನ್ವಯವಾಗುತ್ತದೆ . ನೇರವಾಗಿ ಅಥವಾ ಅನ್ಯದೇಶದ ಮೂಲಕ ರಫ್ತು ಮಾಡುವ ಸರಕುಗಳೀಗೆ ಈ ನಿಯಮ ಲಾಗು ಆಗುತ್ತದೆ . ಸಮುದ್ರೋತ್ಪನ್ನವನ್ನು ರಫ್ತು ಮಾಡುವ ಎಲ್ಲ ದೇಶಗಳು ಈ ಅಗತ್ಯತೆಯನ್ನು ಅಳವಡಿಸಿಕೊಳ್ಳಲು ಒಪ್ಪಿಕೊಂಡಿರುತ್ತವೆ ಮತ್ತು ಈ ಬಗ್ಗೆ ಐರೋಪ್ಯ ಒಕ್ಕೂಟ ರಾಷ್ಟ್ರಗಳಿಗೆ ತಿಳಿಸಿರುತ್ತವೆ . ಉದ್ದಿಮೆಯಿಂದ ( ಬೋಟ್ ಮಾಲಿಕರು ಅಥವಾ ರಫ್ತುದಾರರು ) ನೀಡಲ್ಪಡುವ ಕ್ಯಾಚ್ ಸರ್ಟಿಫಿಕೇಟ್ ಗಳು ಸರಕಾರಿ ಪ್ರಾಧಿಕಾರದಿಂದ ಸ್ಥಿರೀಕರಿಸಿ ಮೇಲು ರುಜು ಹೊಂದಿರಬೇಕು . ರಫ್ತು ಮಾಡುವ ರಾಷ್ಟ್ರಗಳು , ಕೆಲವು ವಿಷಯಗಳ ಬಗ್ಗೆ ಆಳವಾಗಿ ಎಚ್ಚರಿಕೆ ವಹಿಸುವ ಬಗ್ಗೆ ಅಗತ್ಯ ಇರುತ್ತದೆ . ಪ್ರತಿ ವರ್ಷ ೨೮೦೦ ಕೋಟಿ ರೂ . ಬೆಲೆಯ ಸಾಗರೋತ್ಪನ್ನಗಳು ಭಾರತದಿಂದ ಐರೋಪ್ಯ ಒಕ್ಕೂಟ ರಾಷ್ಟ್ರಗಳಿಗೆ ರಫ್ತಾಗುತ್ತದೆ . ಯುರೋಪ್ ಒಕ್ಕೂಟ ರಾಷ್ಟ್ರಗಳ ಮಾರುಕಟ್ಟೆ ಪ್ರಾಮ್ಯುಖತೆಯನ್ನು ಪರಿಗಣಿಸಿ ಕ್ಯಾಚ್ ಸರ್ಟಿಫಿಕೆಟ್ ವ್ಯವಸ್ಥೆಯನ್ನು ಜಾರಿಗೊಳಿಸಲು ಭಾರತ ಸರ್ಕಾರ , ಸಾಗರೋತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧಿಕಾರ ನೀಡಿದೆ . ಎಂಪಿಡಾ ( ಮೆರೈನ್ ಪ್ರೊಡಕ್ಟ್ ಎಕ್ಸಪೋರ್ಟ್ ಡೆವಲಪಮೆಂಟ್ ಅಥಾರಿಟಿ ) ಈಗಾಗಲೇ ಬೋಟ್ ಗಳ ಮೂಲಕ ನೇರವಾಗಿ ಅಥವಾ ಮಧ್ಯವರ್ತಿಗಳ ಮೂಲಕ ರಫ್ತುದಾರರಿಗೆ ತಲುಪುವ ಹಿಡುವಳಿಯ ನಿಗಾ ಹಾಗೂ ಕ್ಯಾಚ್ ಸರ್ಟಿಫಿಕೆಟ್ ಗಳ ಸ್ಥಿರೀಕರಣ ಕಾರ್ಯ ಆರಂಭಿಸಿದೆ . ಮೊದಲ ಹಂತವಾಗಿ ಬೋಟ್ ಗಳಿಗೆ ಲಾಗ್ ಬುಕ್ ಹಾಗೂ ಕ್ಯಾಚ್ ಸರ್ಟಿಫಿಕೆಟ್ ಗಳ ನಮೂನೆಯನ್ನು ಪುಕ್ಕಟೆಯಾಗಿ ಒದಗಿಸಲು ನಿಶ್ಚಯಿಸಿದೆ . ಹಿಡುವಳಿಯನ್ನು ನಮೂದಿಸುವ ಕ್ಯಾಚ್ ಸರ್ಟಿಫಿಕೆಟ್ ಗಳನ್ನು ವೇಗವಾಗಿ ಸ್ಥಿರೀಕರಿಸುವ ನಿಟ್ಟಿನಲ್ಲಿ ಗಣಕೀಕರಣದ ವ್ಯವಸ್ಥೆಯನ್ನು ಮಾಡಿವೆ . ವ್ಯವಸ್ಥೆಯ ಅನುಷ್ಠಾನಕ್ಕೆ ಎಲ್ಲ ಬೋಟ್ ಮಾಲೀಕರ ಸಹಕಾರವನ್ನು ಎಂಪಿಡಾ ಬಯಸಿದ್ದು , ಈ ಸಂಬಂಧ ಹೆಚ್ಚಿನ ಮಾಹಿತಿಗೆ ಟೋಲ್ ಫ್ರೀ ಸಂಖ್ಯೆ ೧೮೦೦ - ೪೨೫ - ೧೫೧೫ , ೧೮೦೦ - ೪೨೫ - ೧೬೭೬ , ೧೮೦೦ - ೪೨೫ - ೦೧೬೦ ಸಂಖ್ಯೆಗಳನ್ನು ಸಂಪರ್ಕಿಸಬಹುದು . ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸ್ಥಳ ಪರಿಶೀಲನೆ ಮಡಿಕೇರಿ ಜ . ೧೬ ( ಕರ್ನಾಟಕ ವಾರ್ತೆ ) : - ನಗರದಲ್ಲಿ ನಡೆಯಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಗತ್ಯ ಜಾಗಕ್ಕಾಗಿ ವಿಧಾನಸಭಾಧ್ಯಕ್ಷರಾದ ಕೆ . ಜಿ . ಬೋಪಯ್ಯ ಮತ್ತು ಮಡಿಕೇರಿ ಕ್ಷೇತ್ರದ ಶಾಸಕರಾದ ಅಪ್ಪಚ್ಚುರಂಜನ್ ಅವರು ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು . ಸುದರ್ಶನ ಅತಿಥಿ ಗೃಹಕ್ಕೆ ಹೊಂದಿಕೊಂಡಿರುವ ಇತ್ತೀಚೆಗೆ ಖಾಸಗಿ ಒತ್ತುವರಿದಾರರಿಂದ ತೆರವುಗೊಳಿಸಿದ ೧ ಎಕರೆ ಸರ್ಕಾರಿ ಜಾಗದ ಒಂದು ಭಾಗವನ್ನು ಲೋಕೋಪಯೋಗಿ ಇಲಾಖೆಯ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿರಿಸಿ ಉಳಿದ ಜಾಗವನ್ನು ಸಂಪೂರ್ಣವಾಗಿ ನಗರಸಭೆಗೆ ಪಾರ್ಕ್ ನಿರ್ಮಾಣಕ್ಕೆ ಮೀಸಲಿರಿಸಲು ಕೆ . ಜಿ . ಬೋಪಯ್ಯ ಮತ್ತು ಅಪ್ಪಚ್ಚುರಂಜನ್ ಅವರು ಅಪರ ಜಿಲ್ಲಾಧಿಕಾರಿ ಚಂದ್ರೇಗೌಡ , ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು . ನಗರಸಭೆಯ ಎನ್ . ಎಫ್ . ಸಿ ಅನುದಾನದ ೧ ಕೋಟಿ ರೂ . ಗಳನ್ನು ಈ ಜಾಗದಲ್ಲಿ ಅತ್ಯುತ್ತಮವಾದ ಪಾರ್ಕ್ ನಿರ್ಮಾಣಕ್ಕೆ ಮೀಸಲಿರಿಸುವಂತೆ ಹಾಗೂ ಇದರಲ್ಲಿ ಇರುವ ಮರಗಿಡಗಳನ್ನು ಕಡಿಯದೆ ಮತ್ತು ನೀರಿನ ಝರಿಗಳಿಗೆ ಯಾವುದೇ ದಕ್ಕೆಯಾಗದಂತೆ ಉತ್ತಮವಾಗಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವಂತೆ ನಗರಸಭೆ ಪೌರಾಯುಕ್ತರಾದ ಶ್ರೀಕಾಂತ್ ರಾವ್ ಅವರಿಗೆ ನಿರ್ದೇಶನ ನೀಡಿದರು . ಇದೇ ಜಾಗದ ಪಕ್ಕದಲ್ಲಿರುವ ಅರಣ್ಯ ಇಲಾಖೆ ಸೌದೆ ಡಿಪೋ ನಡೆಸುತ್ತಿರುವ ಜಾಗವು ಸರ್ಕಾರಿ ಪೈಸಾರಿಯಾಗಿದ್ದು , ಡಿಪೋವನ್ನು ಬೇರೆಡೆಗೆ ಸ್ಥಳಾಂತರಿಸಿ ಈ ಸ್ಥಳವನ್ನು ಸುವರ್ಣ ಕನ್ನಡ ಸಮುಚ್ಚಯ ಭವನ ನಿರ್ಮಾಣಕ್ಕೆ ಕಾಯ್ದಿರಿಸುವಂತೆ ವಿಧಾನ ಸಭಾಧ್ಯಕ್ಷರು ಹಾಗೂ ಶಾಸಕರು ಕಂದಾಯ ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು . ಈ ಜಾಗವನ್ನು ಶೀಘ್ರವೇ ಖಾಲಿ ಮಾಡಿಕೊಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು . ಇದಕ್ಕೆ ಮುನ್ನ ಸೆಂಟ್ರಲ್ ವರ್ಕ್ ಶಾಪ್ ಪ್ರದೇಶದಲ್ಲಿ ಸುಮಾರು ಎರಡು ಎಕರೆ ಸರ್ಕಾರಿ ಜಾಗವಿದ್ದು ಇದರಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಕಾಯ್ದಿರಿಸುವಂತೆ ಸೂಚನೆ , ಸಲಹೆ ನೀಡಿದ ಅವರು ಈ ಪ್ರದೇಶದಲ್ಲಿರುವ ಗಿಡಗಂಟೆಗಳನ್ನು ತೆಗೆದು ಸಂಪೂರ್ಣ ಸರ್ವೆ ಕಾರ್ಯ ಕೈಗೊಳ್ಳುವಂತೆ ತಿಳಿಸಿದರು . ಈ ಸ್ಥಳಗಳನ್ನು ಸರ್ಕಾರಿ ಬಳಕೆಗೆ ಕಾಯ್ದಿರಿಸುವ ಜೊತೆಗೆ ಶೀಘ್ರವೇ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು . ನಂತರ ಸುದರ್ಶನ ಅತಿಥಿಗೃಹದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇದ ಜಾರಿ , ಸುಂಟಿ ಕೊಪ್ಪ ಗ್ರಾಮ ಪಂಚಾಯ್ತಿ ಕಸವಿಲೇವಾರಿಗೆ ಜಾಗ ನಿಗಧಿಯಾಗಿರುವ ಬಗ್ಗೆ ಚರ್ಚೆ ನಡೆಸಲಾಯಿತು . ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮನುಮುತ್ತಪ್ಪ ಅಪರ ಜಿಲ್ಲಾಧಿಕಾರಿ ಚಂದ್ರೇಗೌಡ , ಉಪವಿಭಾಗಾಧಿಕಾರಿ ಶಿವಶಂಕರ್ , ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಬಸವರಾಜಪ್ಪ , ಜಿಲ್ಲಾ ಪಂಚಾಯ್ತಿ ಇಂಜಿನಿಯರ್ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಕೇಶವಮೂರ್ತಿ , ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ರವಿಕುಮಾರ್ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸತ್ಯನಾರಾಯಣ್ , ಪೌರಾಯುಕ್ತರಾದ ಶ್ರೀಕಾಂತ್‌ರಾವ್ , ಎ . ಸಿ . ಎಫ್ . ಲಕ್ಷ್ಮಣ್ ಮತ್ತಿತರರು ಹಾಜರಿದ್ದರು . ಜನವರಿ ೨೭ ರಂದು ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ ಮಡಿಕೇರಿ ಜ . ೧೬ ( ಕರ್ನಾಟಕ ವಾರ್ತೆ ) : - ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯು ಜ . ೨೭ ರಂದು ಪೂರ್ವಾಹ್ನ ೧೧ . ೦೦ ಗಂಟೆಗೆ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ವಿ . ಎಂ . ವಿಜಯ ಅವರ ಅಧ್ಯಕ್ಷ್ಷತೆಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ . ಪೋಲಿಯೋ ಯಶಸ್ಸು : ಜಿಲ್ಲಾಧಿಕಾರಿಗಳ ಅಭಿನಂದನೆ
ಬೀಚ್ ಹಾಕಿಯು , ಬೀದಿ ಹಾಕಿಗಿಂತ ವ್ಯತ್ಯಾಸವಾಗಿರುತ್ತದೆ , ಇದು ದಕ್ಷಿಣ ಕ್ಯಾಲಿಫೋರ್ನಿಯಾದ ಸಮುದ್ರದಲ್ಲಿನ ಆಟ ಸಾಮಾನ್ಯ ದೃಶ್ಯವಾಗಿದೆ .
ನಮಸ್ಕಾರ ಸುಪ್ತದೀಪ್ತಿ . ನಾನು ನಿಮ್ಮ ಬ್ಲಾಗ್ ಖಾಯಂ ಓದುಗಳು - ಆದ್ರೂ ಕಮೆಂಟಿಗಳಾಗಿದ್ದು ಇದೇ ಮೊದಲು ಅಂದುಕೊಳ್ತೇನೆ . ಎಷ್ಟು ಚಂದ ಬರೀತೀರ್ರಿ . . ! ಈ ಪ್ರವಾಸ ಪುರವಣಿ ಓದಲಂತೂ ತುದಿಗಾಲ ಮೇಲೆ ನಿಂತಾಯ್ತು . ನೀವು ಮಾಡುತ್ತಿರೋ ಅಡುಗೆ ತಯಾರಿ ಓದುವಾಗ ಇದೆಲ್ಲ ನಮ್ಮನೆ ಕಿಚನ್ನಲ್ಲೇ ನಡೀತಾ ಇದೆಯೇನೋ ಅನ್ನೋಥರ ಇತ್ತು !
ದೂರದ ಊರಿನಲ್ಲಿ ಓದುತ್ತಿದ್ದಾಗ , ಇಲ್ಲಾ ಕೆಲಸ ಮಾಡುತ್ತಿದ್ದಾಗ ಮನೆಗೆ ಅದಷ್ಟು ಬೇಗ ತಲುಪುವ ಹಂಬಲ . . . ಕಣ್ಣಾಲಿಗಳಲ್ಲಿ ನೀರು ತುಂಬಿ , ಹೊರಬರಿಸಲು ಇಷ್ಟಪಡದೆ / ಆಗದೆ ಚಡಪಡಿಸಿದ ಆ ನೆನಪು , ಮಿತ್ರರ ಹಿಂದೆ ಸುತ್ತಲೂ ಹೋದ , ಅವರ ಜೊತೆ ಕಾಲ ಕಳೆದ ಅ ಒಂದೊಂದು ಮಧುರ ಕ್ಷಣ . . . ಅ ಮಧುರ ದಿನದ ಕ್ಷಣ , ನಾವು ಒಬ್ಬ ಅಪರಿಚಿತ ಜೀವದೊಂದಿಗೆ ಬಂಧಿಯಾದದ್ದು , ಮತ್ತು ಅವರೇ ನಮ್ಮ ಜೀವನದ ಎಂದೂ ಬಿಡಿಸದ ಬಾಳಿನ ಬಂಧನವಾದದ್ದು . . . . ಎಲ್ಲಾ ಮಧುರ ನೆನಪೇ ಅಲ್ಲವೆ . . ?
ಅಂದು ರತ್ನಗಂಬಳಿ ತಯರಿಸುವ ಮಗ್ಗಗಳಿಗೆ ಭೇಟಿ ಕೊಟ್ಟೆವು . ಅಲ್ಲಿ ಕುರಿಗಳ ಉಣ್ಣೆಯಿಂದ ತಯಾರಿಸಿದ ನೂಲನ್ನು ಮಗ್ಗಗಳಿಗೆ ಜೋಡಿಸಿ , ಸುಂದರವಾದ ಕಲಾತ್ಮಕವಾದ ರತ್ನಗಂಬಳಿಗಳನ್ನು ನೇಯುತ್ತಾರೆ . ಅಲ್ಲಿಯೂ ಕೂಡ ಕೆಲಸ ಮಾಡುವವರು ಬಹಳಷ್ಟು ಮಂದಿ ಸ್ತ್ರೀಯರು . ಕೆಲವರಂತೂ ಪುಟ್ಟ ಪುಟ್ಟ ಮಕ್ಕಳನ್ನು ತಮ್ಮ ಬೆನ್ನಿಗೆ ಕಟ್ಟಿಕೊಂಡೇ ಕೆಲಸ ಮಾಡುತ್ತಿದ್ದರು . ಈ ಕಾರ್ಮಿಕರಲ್ಲಿ ವಯಸ್ಸಾದವರೂ ಇದ್ದರು . ಅವರ ಪಳಗಿದ ಕೈಗಳು ಬಹಳ ಚುರುಕಾಗಿ ಕೆಲಸ ಮಾಡುತ್ತಿದ್ದುವು . ಅವರ ಮುಖಗಳಲ್ಲಿ ಕಾಣುತ್ತಿದ್ದ ಆಳವಾದ ಗೆರೆಗಳು ಅವರ ಶ್ರಮದಾಯಕೆ ಜೀವನವನ್ನು ಎತ್ತಿ ತೋರಿಸುತ್ತಿದ್ದುವು . ಸಿದ್ಧವಾಗಿದ್ದ ರತ್ನಗಂಬಳಿಗಳನ್ನು ಅಲ್ಲಿ ಮಾರಾಟಕ್ಕೂ ಇಟ್ಟಿದ್ದರು . ಅವುಗಳನ್ನು ಮಾರಾಟ ಮಾಡುವುದರಲ್ಲಿ ಆಸಕ್ತಿಯಿದ್ದರೂ , ಅದರಲ್ಲಿ ಹೆಚ್ಚು ಸಮಯ ಕಳೆಯದೆ ತಮ್ಮ ನೇಯ್ಗೆ ಕೆಲಸದ ಮೇಲೆಯೇ ಹೆಚ್ಚು ಲಕ್ಷ್ಯವನ್ನಿತ್ತಿದ್ದರು .
ಅಲ್ಲ ರೀ ಸಂಪಾದಕರೆ ಮೊದಲ್ನೇ ಪ್ಯಾರದಲ್ಲಿ ಆರೋಪಿಯನ್ನು " ಜೆಪಿ ನಗರದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ . " ಅಂತ ಹೇಳಿ ಕೊನೆ ಸಾಲಿನಲ್ಲಿ " ಪೊಲೀಸರು ಆತನ ಹುಡುಕಾಟದಲ್ಲಿದ್ದಾರೆ . " ಅಂತ ಹೇಳಿದ್ದಿರಲ್ಲ
ಮತ್ತೊಬ್ಬ ಸಚಿವರಂತೂ ಈ ವರ್ಷವೇ ಇನ್ನೂ ಸಿಇಟಿ ಆರಂಭವಾಗಿಲ್ಲ . ಮುಂದಿನ ವರ್ಷದ ಬಗ್ಗೆ ಈಗಲೇ ಗೊಂದಲ ಎಬ್ಬಿಸುತ್ತಿದ್ದಾರೆ . ಅದರಲ್ಲೂ ಅದರ ದಿಢೀರ್ ಪರಿಣಾಮಗಳೇನು ? ದೀರ್ಘಾವಧಿಯ ಪರಿಣಾಮಗಳೇನು ? ಯಾವುದನ್ನೂ ಆಲೋಚಿಸುವುದಿಲ್ಲ . ಹೀಗೆ ಬಹುತೇಕ ಸಚಿವರು , ತಮ್ಮ ಇಲಾಖೆಯ ಅಭಿವೃದ್ಧಿ ಕಾರ್ಯಗಳನ್ನು ಬಿಟ್ಟು ವಕ್ತಾರರಾಗಿದ್ದಾರೆ . ಡಾ . ವಿ . ಎಸ್ . ಆಚಾರ್ಯರಂಥವರು ಮಂಗಳೂರು ಪಬ್ ಪ್ರಕರಣವನ್ನೇ ಇನ್ನೂ ನಾಜೂಕಾಗಿ ನಿಭಾಯಿಸಬಹುದಿತ್ತು . ಅದ್ಯಾವುದೂ ಮಾಡಲಿಲ್ಲ . ಇದಕ್ಕೆ ಕಾರಣವಿಷ್ಟೇ . ಬಿಜೆಪಿ ಮುಖಂಡರಿಗೆ ಅಕಾಲ ವೃದ್ಧಾಪ್ಯ ಬಂದಿದೆ . ತಮ್ಮದೊಂದೇ ಬೃಹತ್ ಪಕ್ಷವೆಂಬ ಭ್ರಮೆಯೂ ಬಂದಿದೆ . ಸುಮ್ಮ ಸುಮ್ಮನೇ ಪ್ರಯೋಗಕ್ಕೆ ತೊಡಗುತ್ತಿದೆ . ನಮಗೆ ಜನರ ಬೆಂಬಲವಿದೆ ಎಂಬ ಹುಚ್ಚು ಭ್ರಮೆಯಿಂದಲೇ ಆಪರೇಷನ್ ಕಮಲಕ್ಕೆ ತೊಡಗಿರುವುದು .
* ಮಧುರ ನಯನ ಮಧುರ ವಚನ ಮಧುರ ಹಸನ - ಮಧುರಾಧಿಪತಿ = = = ಇಂದು ವ್ಯಾಲೆಂಟೈನ್ಸ್ ಡೇ . ಈ ದಿನ ನಾನು ಪದೆ ಪದೆ ಗುನುಗುತಿರುವುದು ಪು . ತಿ . ನ . ಅವರ ಈ ದೈವೀಕವಾದ ರಚನೆ : " ಹೃದಯ ಹೃದಯ ಮಿಲನ ದೊಳು " . ನಮ್ಮೆಲ್ಲರ ಇರುವಿನ ನಡುವೆ ಇರುವ ಇರುಳ ಛಾಯೆಯನ್ನು ನೀಗುವ ತಮೋಘ್ನಕಾರಕ - ಈ ಪ್ರೀತಿ ಎಂದಿದ್ದಾರೆ . ಆಹಾ ! ಎಂಥಾ ಅಮೋಘ ಭಾವನೆ ! ಮಧುರ ಅನುಭಾವಗಳ , ಅನುಭವಗಳ ಮೂಡಿಸುವ ಪ್ರೇಮ , ಜೀವನ್ಮುಖಿಗಳಾಗಲು ಚಿಲುಮೆಯಾಗಿ , ನವೋತ್ಸಾಹವಾಗಿ , ಸತ್ವ ಪ್ರೇರಕವಾಗಿ , " ಮನದರ್ತಿಯ ಪ್ರೇರಣೆ " ಎಂದೆನಿಸುತ್ತದೆ . ಪ್ರೇಮವು ಚೇತನವನ್ನು ಹಸನು ಮಾಡುವ ಕ್ರಿಯೆಯೆಂಬ ಅಧ್ಯಾತ್ಮದ ಮೆರುಗು ಈ ರಚನೆಯಲ್ಲಿದೆ . ನಿಜಕ್ಕೂ ಇದನ್ನು ಬರೆದ ನರಸಿಂಹಾಚಾರ್ಯರೇ ಧನ್ಯರು , ಆಲಿಸಿದ ನಾವೇ ಧನ್ಯರು ! ಇಡೀ ಹಾಡು ವಿಜೃಂಭಣೆಯಿಂದ ರಾರಾಜಿಸುತ್ತದೆ . ಸಾಹಿತ್ಯದಷ್ಟೆ ಸೊಗಸಾಗಿ ಸಂಗೀತವನ್ನು ಸ್ವರಬದ್ಧ ಗೊಳಿಸಿದ್ದಾರೆ ಸಿ . ಅಶ್ವಥ್ ಅವರು . = = = ಸಂಕಲನ : ಭಾವ ಬಿಂದು ಸಾಹಿತ್ಯ : ಪು . ತಿ . ನ . ಸಂಗೀತ : ಸಿ . ಅಶ್ವಥ್ ಗಾಯನ : ಹೆಚ್ . ಕೆ . ನಾರಾಯಣ್ ಮತ್ತು ಎಂ . ಎಸ್ . ಶೀಲ = = = ಹೃದಯ ಹೃದಯ ಮಿಲನ ದೊಳಗೆ ಮಧುರವಹುದು ಧಾತ್ರಿ ಮಧುರ ನಯನ ಮಧುರ ವಚನ ಮಧುರ ಹಸನ ಮೈತ್ರಿ ಇರವಿರವಿನ ನಡುವಣಿರುಳ ಪರಿಹಸುವ ಸರ್ವಳಿ ಅರಿವರ್ಥವ ದಮಿಸುವೂರ್ಜೆ ನರಗೊಲುಮೆಯ ಬಳುವಳಿ ಇನಿಯರೊಸಗೆ ಮೊಗದೊಳೆಸೆವ ತನಿಯಕಾಂತಿ ಏನೆಳೆ ಅನುಕರಿಸುವ ಪರ್ವೋತ್ಸವ ಮನದರ್ತಿಯ ಪ್ರೇರಣೆ ಹೃದಯ ಹೃದಯ ಮಿಡಿಳಿವಾಗೆ ಮಧುರವಹುದು ಚೇತನ ಮಧುರೇಕ್ಷಣ ಮಧುರವಾಣಿ ಮಧುರಸ್ಮಿತ ನೂತನ . = = = ಇಲ್ಲಿ ಕೇಳಿ ಆನಂದಿಸಿ : http : / / www . kannadaaudio . com / Songs / Bhaavageethe / / BhaavaLahari / HrudayaHrudayaMilanadolu . ram = = =
ಆ ಪೈಕಿ ನಾನು ಕಲಿತ ಒಂದು ಪಾಠವೆಂದರೆ , ಪ್ರತಿ ಬಿಸಿಗಾಳಿ ಬಲೂನ್ ( Hot air balloon ) ನಲ್ಲೂ ಇಂಧನವಿರುತ್ತದೆ , ಅದು ಬಲೂನ್ ಒಳಗಿರುವ ಗಾಳಿಯನ್ನು ಬಿಸಿಗೊಳಿಸುತ್ತದೆ . ಗಾಳಿ ಬಿಸಿಯಾಗಿ ಏರಿದಂತೆ , ಬಲೂನೂ ಏರುತ್ತದೆ . ಇಂಧನ ಉರಿಯದೇ ಇದ್ದಾಗ , ಗಾಳಿ ತಣ್ಣಗಾಗುತ್ತದೆ , ಇದರಿಂದ ಆಕಾಶ ದಲ್ಲಿನ ಬಲೂನ್ ನಿಧಾನವಾಗಿ ಕೆಳಗಿಳಿಯಲಾರಂಭಿಸುತ್ತದೆ . ಬಿಸಿಗಾಳಿ ಬಲೂನ್‌ನಲ್ಲಿ ಹಾರುವಾಗ ಪೈಲಟ್ ಆದವನು ಗಾಳಿಯನ್ನು ಒಂದೋ ಬಿಸಿ ಮಾಡಬೇಕು , ಇಲ್ಲವೇ ತಣ್ಣಗೆ ಮಾಡಬೇಕು . ಆಗಲೇ ಅದು ಪೈಲಟ್ ಅಂದುಕೊಂಡ ನಿರ್ದಿಷ್ಟ ಎತ್ತರದಲ್ಲಿ ಹಾರುತ್ತದೆ . ಇದಕ್ಕೆ ತಕ್ಕಂತೆ ಗಾಳಿಯ ದಿಕ್ಕನ್ನು ನೋಡಿಕೊಂಡು ಬಲೂನಿನ ದಿಸೆಯನ್ನು ನಿರ್ಧರಿಸಿ ಮುಂದಕ್ಕೆ ಸಾಗಬೇಕಾಗುತ್ತದೆ .
ಮಂಜುಳಾ ದೇವಿ ಅವರೆ , ಕಾಂಕ್ರೀಟ್ ಕಾಡಿನ ನಡುವೆ ಕತ್ತೆತ್ತಿ ಮುಗಿಲುಗಳನ್ನೇ ನೋಡದ ಈಗಿನ ಎಕ್ಸ್ ಪ್ರೆಸ್ ಯುಗದಲ್ಲೂ ಇಂತಹುದೊಂದು ` ನವೋದಯ ಶೈಲಿ ' ಯ ಕವನ ನೀಡಿದ್ದಕ್ಕೆ ಧನ್ಯವಾದಗಳು !
. . . ಬನ್ನಿ ಮೋಡದ ಜೊತೆ ಗುದ್ದಾಡಬೇಕೇ ? ದೂರದಲ್ಲೆಲ್ಲೋ ಕಾಣುವ ಆಕಾಶವೆಂಬುದನ್ನು ಮುಟ್ಟಬೇಕೆ ? ವಿಶಾಲ ಪಶ್ಚಿಮ ಘಟ್ಟವನ್ನು ಒಂದು ಕೇಂದ್ರ ಬಿಂದುವಾಗಿಟ್ಟುಕೊಂಡು ಸುತ್ತಲೂ ನೋಡಬೇಕೆ ? ಇನ್ನು ಕರ್ನಾಟಕಕ್ಕೇ ಕರೆಂಟುಕೊಡುವುದಕ್ಕಾಗಿ ಸಾವಿರಾರು ಎಕರೆ ಮುಳುಗಡೆ ಮಾಡಿದಂತೆ ವಾರಾಹಿ ಹಿನ್ನೀರಿನ ಕರಾಳ ದೃಶ್ಯ ನೋಡಬೇಕೆ ? ಹಾಗಿದ್ದರೆ ಬನ್ನಿ . . . ನಿಮ್ಮನ್ನು ಕೈ ಬೀಸಿ ಕರೆಯತ್ತಿದೆ ಕುಂದಾದ್ರಿ ಬೆಟ್ಟ . ದೂರದಲ್ಲೋ ಕಾಣುವ ಮೋಡ ಈ ಕುಂದಾದ್ರಿಯ ಮೇಲೆ ನಿಂತರೆ ನಿಮ್ಮ ಮಧ್ಯೆ , ನಿಮ್ಮನ್ನು ಸೀಳಿಕೊಂಡೇ ಹೋಗುತ್ತದೆ . ಅದೊಂದು ಹೊಸ ಅನುಭವ ಕೊಡುವ ಸ್ಥಳ . ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿರುವ ಈ ಕುಂದಾದ್ರಿ ಬೆಟ್ಟ ಚಾರಣಿಗರ ಸ್ವರ್ಗ , ಪ್ರಕೃತಿ ಪ್ರಿಯರ ನೆಚ್ಚಿನ ತಾಣ . ಸಮುದ್ರಮಟ್ಟದಿಂದ ಸುಮಾರು ೪೫೦೦ ಸಾವಿರ ಅಡಿ ಎತ್ತರದಲ್ಲಿರುವ ಇಲ್ಲಿಂದ ಪ್ರಕೃತಿಯನ್ನು ವೀಕ್ಷಿಸುವುದೇ ಹಬ್ಬ . ಇತಿಹಾಸ ಹೇಳುತ್ತದೆ . . . ಈ ಬೆಟ್ಟದ ಮೇಲೆ ಜೈನ ಬಸದಿ ಇದೆ . ಅಲ್ಲಿ ಶ್ರೀ ಪಾರ್ಶ್ವನಾಥರ ಮೂರ್ತಿ ಇದೆ . ಹಾಗೆಯೇ ಜೈನ ಪಂಥದಲ್ಲಿ ಪ್ರಮುಖರೆನಿಸಿಕೊಂಡ , ಸಾಧಕರಾದ ಕುಂದ ಕುಂದಾಚಾರ್ಯರ ಮುಕ್ತಿ ಸ್ಥಳ ಇಲ್ಲಿದೆ . ವಿಶೇಷತೆ . . . ಇಲ್ಲೇ ಸಣ್ಣ ಪುಷ್ಕರಣಿ ಇದ್ದು , ಅಲ್ಲಿ ವರ್ಷದ ೩೬೫ ದಿನವೂ ನೀರು ಇರುವುದು ವಿಶೇಷ . ಇನ್ನೊಂದು ಪುಟ್ಟದಾದ ತಾವರೆಕೆರೆ . ಅಲ್ಲಿ ತಾವರೆ ಹೂವು ಅರಳಿ ನಿಂತಿರುವುದು ಆಶ್ಚರ್ಯ ತರುತ್ತದೆ . ಸೂರ್ಯೋದಯ ಮತ್ತು ಸೂರ್ಯಾಸ್ತ ಇಲ್ಲಿನ ಮತ್ತೊಂದು ವಿಶೇಷ . ಸೂರ್ಯೋದಯದ ಮೊದಲ ಕಿರಣ ಶ್ರೀ ಪಾರ್ಶನಾಥರ ವಿಗ್ರಹದ ಪಾದದ ಮೇಲೆ ಬೀಳಲು ಪ್ರಾರಂಭವಾಗುತ್ತದೆ . ಹಾಗೆಯೇ ಸೂರ್ಯಾಸ್ತ ಕೂಡ ವಿಶೇಷ ಆನಂದಕೊಡುತ್ತದೆ . ಮೋಡ , ಮಂಜು ಅಷ್ಟಾಗಿ ಇಲ್ಲದ ಸಮಯದಲ್ಲಿ ಕಿಲೋಮೀಟರ್ ಗಟ್ಟಲೇ ದೂರದ ಕರಾವಳಿಯ ಸಮುದ್ರ ಕಡಲಲ್ಲಿ ದೊಡ್ಡ ದೊಡ್ಡ ಹಡಗುಗಳು ಹಾದು ಹೋಗುವುದು ಪುಟ್ಟದಾಗಿ ಕಾಣುತ್ತದೆ . ಪ್ರತಿ ವರ್ಷ ಜನವರಿಯಲ್ಲಿ ಇಲ್ಲಿ ಜಾತ್ರೆ ನಡೆಯಲಿದ್ದು , ಉತ್ತರ ಭಾರತದಿಂದ ಸಾವಿರಾರು ಜನರು ಇಲ್ಲಿಗೆ ಬಂದು ಪದ್ಮಾವತಿ , ಪಾರ್ಶ್ವನಾಥ ದೇವರಿಗೆ ಪೂಜೆ ಸಲ್ಲಿಸುತ್ತಾರೆ . ಮೊಲ , ಕಾಡೆಮ್ಮೆ ಸಾಕಷ್ಟು ಕಂಡುಬಂದರೆ , ಹುಲಿ ಮುಂತಾದ ಕ್ರೂರ ಪ್ರಾಣಿ ಈ ಭಾಗದಲ್ಲಿ ಇದೆಯಂತೆ . ಇಲ್ಲಿಗೇ ಸಮೀಪವೇ ಆಗುಂಬೆ , ಜೋಗಿಗುಂಡಿ ಜಲಪಾತವಿದೆ . ೨೯ ಕಿಲೋಮೀಟರ್ ತೆರಳಿದರೆ ಶೃಂಗೇರಿ . ಮಾರ್ಗಸೂಚಿ : ಶಿವಮೊಗ್ಗ - ಉಡುಪಿ ರಸ್ತೆಯಲ್ಲಿ ತೀರ್ಥಹಳ್ಳಿಯಿಂದ ಆಗುಂಬೆ ಕಡೆಗೆ ಹೋಗುವ ರಸ್ತೆಯಲ್ಲಿ ಕುಂದಾದ್ರಿ ಬರುತ್ತದೆ . ಮುಖ್ಯ ರಸ್ತೆಯಿಂದ ನಾಲ್ಕು ಕಿಲೋಮೀಟರ್ ಒಳ ರಸ್ತೆಯ ಮೂಲಕ ಸಾಗಿದರೆ ನಂತರ ನಂತರ ೪ ಕಿಲೋಮೀಟರ್ ಗುಡ್ಡವೇರಬೇಕು . ಇಲ್ಲವಾದರೆ ಖಾಸಗಿ ವಾಹನದಲ್ಲಿ ಗುಡ್ಡದ ಮೇಲೆ ತೆರಳಬಹುದು . ಉತ್ತಮ ರಸ್ತೆ ಇದೆ . ( ಕಂಡೀಷನ್‌ನಲ್ಲಿರುವ ವಾಹನ ಮಾತ್ರ ಗುಡ್ಡ ಹತ್ತಲು ಸಾಧ್ಯ ) .
ಆ ಪುಸ್ತಕ ಗಣಿತದ ಲೆಕ್ಕಗಳ ಫಲಿತಾಂಶವನ್ನೇನೋ ನೀಡುತ್ತಿತ್ತು . ಆದರೆ ಅದರಲ್ಲಿ ಪ್ರೂಫ್‌ಗಳೇ ಇರಲಿಲ್ಲ . ಅಂದರೆ ತರ್ಕ ಸಮೇತ ವಿವರಿಸುವ ಬದಲು ಬರೀ ಫಲಿತಾಂಶಗಳನ್ನಷ್ಟೇ ನೀಡಲಾಗಿತ್ತು . ಹಾಗಾಗಿ ಸ್ವತಃ ಲಾಜಿಕ್ ಹುಡುಕಲು ಹೊರಟ ರಾಮಾನುಜನ್ ಗಣಿತದೊಳಗೇ ಮುಳುಗಿಹೋದರು . ಹಾಗೆ ಗಣಿತದಲ್ಲಿ ಅತಿ ಹೆಚ್ಚು ಅಂಕ ಪಡೆದರೂ ಇತರ ಸಬ್ಜೆಕ್ಟ್‌ಗಳನ್ನು ನಿರ್ಲಕ್ಷಿಸಿದ ಕಾರಣ ಪರೀಕ್ಷೆಯಲ್ಲಿ ಪಲ್ಟಿ ಹೊಡೆದರು . ಮರಳಿ ಯತ್ನ ಮಾಡಿದರೂ ಪಾಸಾಗಲಿಲ್ಲ . ಜತೆಗೆ ಸ್ಕಾಲರ್‌ಶಿಪ್ ನಿಂತುಹೋದ ಕಾರಣ ಓದನ್ನೇ ನಿಲ್ಲಿಸಬೇಕಾಗಿ ಬಂತು . ಈ ನಡುವೆ ಇನ್ನಿಬ್ಬರು ತಮ್ಮಂ ದಿರು ಜನಿಸಿದ ಕಾರಣ ಮನೆಯ ಹಣಕಾಸು ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು . ಫೇಲಾಗಿದ್ದ ಮಗನ ಬಗ್ಗೆ ಸಿಟ್ಟಿಗೆದ್ದ ಅಮ್ಮ - ಅಪ್ಪ ಕನಿಷ್ಠ ಮನೆಪಾಠವನ್ನಾದರೂ ಹೇಳಿಕೊಟ್ಟು ಒಂದಿಷ್ಟು ಸಂಪಾದನೆ ಮಾಡು ಎಂದರು . ಆದರೆ ರಾಮಾನುಜನ್ ಅವರ ಉತ್ಕೃಷ್ಟವಾದ ಮನೆಪಾಠ ಮಕ್ಕಳ ತಲೆಯೊಳಕ್ಕೇ ಹೋಗುತ್ತಿರಲಿಲ್ಲ . ಆಸ್ಟ್ರೇಲಿಯಾದ ಬ್ರೆಟ್ ಲೀಯ ಬೌನ್ಸರ್‌ನಂತೆ ತಲೆ ಮೇಲೇ ಹೋಗುತ್ತಿತ್ತು ! ಮಕ್ಕಳು ಪಾಠಕ್ಕೆ ಬರುವುದನ್ನೇ ನಿಲ್ಲಿಸಿದರು .
ಬೆಳಿಗ್ಗೆ ೭ ಗಂಟೆಗೆಲ್ಲ ಶಿಬಿರದಿಂದ ಹೊರಟು ರಾಜಣ್ಣ , ಚಿನ್ನಯ್ಯ ಮತ್ತು ಎಲ್ಲ ಸಿಬ್ಬಂದಿಗೆ ಟಾಟ ಮಾಡಿ ಮಲ್ಲೇಶ್ವರ ಮಾರ್ಗವಾಗಿ ಕಳಸಕ್ಕೆ ಬಂದು ಅಲ್ಲಿನ ಸಣ್ಣ ಹೋಟೆಲ್ ಒಂದರಲ್ಲಿ ಗಂಟಲಿಗಿಳಿಯದ ಅವನು ಕೊಟ್ಟಿದ್ದ ತಿಂಡಿ ನುಂಗಿ ಹೊರನಾಡಿಗೆ ಬಂದು ಜನರಿಂದ ತುಂಬಿ ತುಳುಕುತ್ತಿದ್ದ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಮೈಲುದ್ದ ನಿಂತಿದ್ದ ಸರಣಿಯಲ್ಲಿ ದರ್ಶನಕ್ಕೆ ಅವಕಾಶವಿಲ್ಲವೆಂದು ತಿಳಿದು ದೂರದಿಂದಲೆ ದೇವಿಗೆ ನಮಸ್ಕರಿಸಿ ಕಳಸಕ್ಕೆ ಬಂದು ಕಳಸೇಶ್ವರನಿಗೆ ನಮಸ್ಕಾರ ಮಾಡಿ ಬಾಳೆಹೊಳೆ ಬಾಳೆಹೊನ್ನೂರು ಮತ್ತು ಆಲ್ದೂರು ಮಾರ್ಗವಾಗಿ ಚಿಕ್ಕಮಗಳೂರಿಗೆ ಬಂದು ಹೊಟ್ಟೆ ಹಸಿವನ್ನು ನೀಗಿಸಿಕೊಂಡು ಹಾಸನದ ಮುಖಾಂತರ ನೆಲಮಂಗಲಕ್ಕೆ ೫ . ೪೫ಕ್ಕೆ ಬಂದರೂ ೮ನೇ ಮೈಲಿಗಲ್ಲಿನ ಸಂಚಾರ ದಟ್ಟಣೆಯ ವರಪ್ರಸಾದದಿಂದ ಬೆಂಗಳೂರಿಗೆ ತಲುಪಿದಾಗ ಸಮಯ ರಾತ್ರಿ ೭ . ೪೫ಭಗವತಿ ಪ್ರದೇಶವನ್ನು ಕೆಲವೊಮ್ಮೆ ಅತಿಯೆನಿಸುವಷ್ಟು ಬಣ್ಣಿಸಿದ್ದೇನೆ ಎಂದು ನಿಮಗೆ ಅನಿಸಬಹುದು ಆದರೆ ಬೆಂಗಳೂರಿನ ಕಾಂಕ್ರೀಟ್ ಕಾಡಿನಲ್ಲಿ ಕುಳಿತು ಅಲ್ಲಿನ ಹಸಿರು ಸೌಂದರ್ಯರಾಶಿಯನ್ನು ನೆನಪಿಸಿಕೊಳ್ಳುತ್ತಿದ್ದರೆ ಅದು ಸ್ವರ್ಗ ಸದೃಶವೆನಿಸದಿರದು . ಅಥವ ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಇರಬಹುದೇನೊ . ನೀವು ಒಮ್ಮೆ ಹೋಗಿಬನ್ನಿ ನಿಮ್ಮ ಅನುಭವ ಹೇಳಿ . ಲೇಖನದ ಬಗ್ಗೆ ಮರೆಯದೆ ನಿಮ್ಮ ಅನಿಸಿಕೆ ತಿಳಿಸಿ .
ಮೋಡದ ಪೊರೆ ಸರಿದಾಗ ಮಬ್ಬುಗತ್ತಲಿನ ಬೆಳಕು ಹೊರಗೆ ಸರಿಸಲಾಗದ ಪೊರೆಯ ಕತ್ತಲಿನ ಥಳಕು ಸದಾ ನನ್ನೊಳಗೆ
ಇನ್ನು ಸೌಂದರ್ಯದ ವಿಷಯಕ್ಕೆ ಬಂದರೂ ನನ್ನ ದೇಹ ನನಗೆ ತುಂಬ ಪ್ರಿಯವಾಗಿತ್ತು . ಕಾಲೇಜ್ ಲೈಫಿನಲ್ಲಿ ಟೀನೇಜ್ ಹುಡುಗಿಯರು ನನ್ನತ್ತ ಮೀನಿಂಗ್ ಫುಲ್ ಆಗಿ ನೋಡುತ್ತಿದ್ದುದರಿಂದ ಒಳಗೊಳಗೇ ಹೆಮ್ಮೆಯಾಗುತ್ತಿತ್ತು . ನಾಟಕ , ಚರ್ಚಾಸ್ಪರ್ಧೆ , ಗ್ರೂಪ್ ಡ್ಯಾನ್ಸ್ , ಇಂಡಿವಿಜುವಲ್ ಡ್ಯಾನ್ಸ್ , ಹಾಡು , ಸ್ಕೇಟಿಂಗ್ , ಟ್ರೆಕ್ಕಿಂಗ್ , ಯೋಗಾಸನ , ಸೈಕ್ಲಿಂಗ್ , ಲಾಠಿ ಅಂತ ಛಪ್ಪನ್ನೈವತ್ತಾರು ಹವ್ಯಾಸಗಳಿಂದ ದೇಹವೆಂಬ ದೇಹವನ್ನು ಯೋಗ ಕಲಶವನ್ನಾಗಿಸಿಕೊಂಡಿದ್ದೆ .
ಸರಕಾರದ ನಿರ್ಧಾರವನ್ನು ಅನುಮೋದಿಸುತ್ತಾ , ಅನೇಕ ಕನ್ನಡಿಗರು ನಾನಾ ಕ್ಷೇತ್ರಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ . ಇಲ್ಲಿನ ಭಾಷೆ , ನೆಲ , ಜನರ ಪ್ರಗತಿಗೆ ಕಾರಣಕರ್ತರಾಗಿದ್ದಾರೆ . ನಾರಾಯಣ ಮೂರ್ತಿಯವರು ದೇಶದ ಆರ್ಥಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ . ಖಂಡಿತವಾಗಿಯೂ ಸಮ್ಮೇಳನದ ಉದ್ಘಾಟನೆಗೆ ಅವರು ಅತ್ಯಂತ ಅರ್ಹರು ಎಂದು ಜೀವಿ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ . ಅವರ ಪತ್ನಿ ಸುಧಾಮೂರ್ತಿ ಉತ್ತಮ ಲೇಖಕಿ . ಅವರು ಕನ್ನಡ ಲೋಕಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ . ನಾರಾಯಣಮೂರ್ತಿ ಅವರಲ್ಲದಿದ್ದರೆ ಮತ್ಯಾರು ? ಎಂದೂ ಅವರು ಖಾರವಾಗಿ ಪ್ರಶ್ನಿಸಿದ್ದಾರೆ .
ನಾನು : ಕುಂಭಕೋಣಂ ನಲ್ಲಿ ಇಬ್ಬಿಬ್ಬರಿಗೆ ಒಂದು ರೂಮ್ ಅಂತ ನಿಗದಿಯಾಗಿತ್ತು . ನಾನು ಅಪರ್ಣ ಒಂದು ರೂಮ್ , ಅಮ್ಮ ಅಣ್ಣ ಇನ್ನೊಂದು ರೂಮ್ . ಇದ್ದ ಎರಡು ಪ್ಲಗ್ ಪಾಯಿಂಟುಗಳಲ್ಲಿ ಒಂದನ್ನು ಕ್ಯಾಮೆರಾದ ಬ್ಯಾಟರಿ ಚಾರ್ಜ್ ಮಾಡಲು , ಮತ್ತೊಂದನ್ನು mosquito repellent ಗೆ ಹಾಕಿದ್ದೆವಾದ್ದರಿಂದ , ನಮ್ಮ ಫೋನುಗಳ ಬ್ಯಾಟರಿ ಚಾರ್ಜ್ ಆಗಲಿಲ್ಲ . ನಾವು ಅಲಾರಂ ಕೂಡಾ ಇಡದೇ , ಅಮ್ಮ ಅಣ್ಣ ಬಂದು ಬಾಗಿಲು ಬಡಿದು ಎಬ್ಬಿಸುವವರೆಗೂ ಏಳೋದು ಬೇಡಾ ಅಂದ ಡಿಸೈಡ್ ಮಾಡಿ ಮಲಗಿದೆವು . Z : ಆಹಾ ! ನೀವ್ ಮೊದಲು ಏಳೋದ್ ಬಿಟ್ಟು . . . . . ನಾನು : ಸೈಲೆನ್ಸ್ ! ಹಿಂದಿನ ದಿನ ಮೂರುವರಗೆ ಎದ್ದಿರ್ಲಿಲ್ವಾ ? ಆವತ್ತು ಐದ್ ಘಂಟೆಯ ವರೆಗೂ ಕಣ್ಣು ಬಿಡಲ್ಲ ಅಂತ ಪ್ರತಿಜ್ಞೆ ಮಾಡಿದ್ದೆ ನಾನಂತೂ ! Z : ಆಹಾ ! ನಾನು : ಹೂಂ ! ಮೊದ್ಲೇ ಚಿದಂಬರಂ ನಲ್ಲಿ disappoint ಆದೆ . ಅದು ತಿರುನಲ್ಲಾರ್ ನಲ್ಲೂ ಮುಂದುವರೆಯಿತು . ನಳ ತೀರ್ಥ , ಬ್ರಹ್ಮದಂಡ ತೀರ್ಥ ಇವೆಲ್ಲಾ ನೋಡ್ಬೇಕಿತ್ತು ನಾನು . ಯಾವ್ದೂ ನೋಡಕ್ಕಾಗ್ಲಿಲ್ಲ . ಆರಾಮದ ನಿದ್ದೆನಾದ್ರೂ ಬೇಡ್ವಾ ? Z : ಬೇಕ್ ಬೇಕು . ನಾನು : ಅದಕ್ಕೆ ಪ್ರತಿಜ್ಞೆ ಮಾಡಿದ್ದು . ಯಥಾ ಪ್ರಕಾರ ಅಮ್ಮ ನಾಲ್ಕುವರೆಗೆ ಎಬ್ಬಿಸಿದರು . ನಾನು ಐದು ಘಂಟೆಗೆ ಎದ್ದೆ . ತಿರುವಣ್ಣಾಮಲೈ ನಲ್ಲಿ ಬಿಸಿನೀರು syringe ಥರ ಬರ್ತಿದ್ರೆ , ಇಲ್ಲಿ ಕುಂಭಕೋಣಮ್ ನಲ್ಲಿ ತಣ್ಣೀರು waterfall ಥರ ಧೋ ಅಂತ ಸುರಿತಿತ್ತು ನಲ್ಲಿಲಿ . Z : ತ್ಚು ತ್ಚು ಥ್ಚು ಥ್ಚು . . . . ನಾನು : ಲೊಚ್ಗುಟ್ಟಿ ಹೊಟ್ಟೆ ಉರ್ಸ್ಬೇಡಾ ಹೋಪ್ಲೆಸ್ಸ್ ಫೆಲ್ಲೋ . . . ಗಡಗಡ ನಡುಗುತ್ತಿದ್ದೆ ನಾನು ! ನಾವೆಲ್ಲಾ ರೆಡಿಯಾಗಿ ಲಗೇಜು ಪ್ಯಾಕ್ ಮಾಡೋ ಅಷ್ಟೊತ್ತಿಗೆ ಆರುವರೆ . ಆಮೇಲೆ ನಾವು ಮ್ಯಾನೇಜರ್ ಅಂಕಲ್ ಹೇಳಿದ ಛತ್ರಕ್ಕೆ ತಿಂಡಿ ತಿನ್ನಲು ಹೋದೆವು . ಅದರ ಎದುರುಗಡೆಯೇ ಇದ್ದಿದ್ದು ಮಹಾ ಮಾಘ ಕೊಳ . Z : ಏನು ವಿಶೇಷ ಆ ಕೊಳದ್ದು ? ನಾನು : ಆ ಕೊಳ ಕುಂಭಕೋಣಂ ನ ಅತಿ ಪುರಾತನ ಮತ್ತು ಪುರಾಣ ಪ್ರಸಿದ್ಧ ಕೊಳ . ಆ ಕೊಳಕ್ಕೆ ಭಾರತದ ಎಲ್ಲ ಪ್ರಸಿದ್ಧ ನದಿಗಳಿಂದ [ ಗಂಗೆ , ಯಮುನೆ , ಗೋದಾವರಿ , ಸರಸ್ವತಿ , ನರ್ಮದಾ , ಸಿಂಧು , ಕಾವೇರಿ , ಕೃಷ್ಣಾ ] ನೀರು ಪ್ರತಿ ವರ್ಷ ಮಾಘಮಾಸದಲ್ಲಿ ಬಂದು ಸೇರತ್ತಂತೆ . ಎಲ್ಲಿಂದ ಬರತ್ತೆ ನೀರು ಅಂತ ಗೊತತಿಲ್ವಂತೆ . ಆದ್ರೂ , ನೀರು ಬರತ್ತೆ . ಆ ಕೊಳದಲ್ಲಿ ಎಲ್ಲಾ ದೇವತೆಗಳೂ ಮಿಂದು ಪುನೀತರಾಗಿದ್ದಾರಂತೆ ! ದೇವತೆಗಳೇನು , ರಾಮಾಯಣ ಮಹಾಕಾವ್ಯದ ಕಥಾನಾಯಕ Mr . Shrirama Chandra ಕೂಡಾ ಲಂಕೆಗೆ ಹೋಗುವ ಮುನ್ನ ಇಲ್ಲಿಗೆ ಬಂದು , ಕೊಳಕ್ಕೆ " ಧೊಪ್ " ಅಂತ ಬಿದ್ದು , zuyk ಅಂತ ಎದ್ದು , ಪಕ್ಕದಲ್ಲೇ ಕಾಶಿ ಇಂದ ಸಾಕ್ಷಾತ್ ವಿಶ್ವನಾಥರು ಅವರು ಬಂದಿದ್ದರಾದ್ದರಿಂದ ಅಲ್ಲೇ ಅವರ ಪೂಜೆ ನೂ ಮಾಡಿ , ನಂತರ ರಾಮೇಶ್ವರದ ಕಡೆಗೆ ಪಾದ ಬೆಳೆಸಿದರಂತೆ . Z : I see . ನೀನು ಹೋದೆಯಾ ಈ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ? ನಾನು : ಎಸ್ . ಅಲ್ಲೇ ಎಂಟು ನದಿಗಳ ಮೂರ್ತಿ ಇರುವ ಒಂದು ದೇವಸ್ಥಾನ ಇದೆ . Ms . ಕಾವೇರಿ ಅವರು center ನಲ್ಲಿ ನಿಂತಿದಾರೆ . unfortunately , we couldn ' t get into ಮಹಾ ಮಾಘ ಕೊಳ . Z : Its ok . ಆಮೇಲೆ ? ನಾನು : ಆಮೇಲೆ ನಾವು Mr . ಸಾರಂಗಪಾಣಿ [ Mr . S ಪಾಣಿ for short ] ಅವರ ದೇವಸ್ಥಾನಕ್ಕೆ ಹೋದ್ವಿ . Z : ಯಾರವರು ? ನಾನು : ವಿಷ್ಣು ಕಣೆ ! ಶ್ರೀಮನ್ನಾರಾಯಣ . ಮಲಗಿದ್ದಾರೆ Mr . S ಪಾಣಿ . ಇವರ ಕಥೆ ಮಾತ್ರಾ . . . . ultimate ಆಗಿದೆ . Z : ಏನ್ ಕಥೆ ? ಹೇಳು ಬೇಗ ! ನಾನು : ಕೇಳಿಸ್ಕೋ . ನಿನಗೆ ಭೃಗು ಮಹರ್ಷಿಗಳ ಕಥೆ ಗೊತ್ತಲ್ಲಾ . . . . ಅದೇ ಕಾಲಲ್ಲಿ ಒಂದು ಕಣ್ಣಿತ್ತು , ವಿಷ್ಣುವಿನ ವಕ್ಷಸ್ಥಳಕ್ಕೆ ಒದ್ದರು . . . ವಿಷ್ಣು ಕಾಲೊತ್ತುವ ನೆಪದಲ್ಲಿ ಕಣ್ಣು ಕಿತ್ತರು . . . ಲಕ್ಷ್ಮೀ ಕೋಪಿಸಿಕೊಂಡು ಹೊರಟೇಬಿಟ್ಟರು . . . . ಅಮೇಲೆ ಪದ್ಮಾವತಿ ನ ಮದುವೆ ಆದ್ರಲ್ಲ . . . Z : ಹಾಂ ಹಾಂ . . . . ನೆನಪಿದೆ . ಅವರಿಗೂ Mr . S . ಪಾಣಿ ಗೂ ಏನ್ ಸಂಬಂಧ ? ನಾನು : ಇದೆ ಇದೆ . ಭೃಗು ಮಹರ್ಷಿಗಳಿಗೆ ಲಕ್ಷ್ಮೀ ಕೋಪಿಸಿಕೊಂಡು ಹೋದಮೇಲೆ ಜ್ಞಾನೋದಯ ಆಯ್ತಂತೆ . ಅದಕ್ಕೆ ಅವರು ವಿಷ್ಣು ನ ಮೂರು ವರ ಕೇಳ್ಕೊತಾರೆ . ೧ . ಅವರಿಗೆ ವಿಷ್ಣುವನ್ನು ಸೇವೆ ಮಾಡುವ ಭಾಗ್ಯ ಸಿಗಬೇಕು . ೨ . ಲಕ್ಷ್ಮೀ ಅವರ ಮಗಳಾಗಿ ಹುಟ್ಟಬೇಕು . ಅವರೇ ವಿಷ್ಣುವಿಗೆ ಲಕ್ಷ್ಮೀಯನ್ನು ಧಾರೆ ಎರೆದು ಕೊಡಬೇಕು . ೩ . ಅವರಿಗೆ ದೇಹದೊಂದಿಗೇ ಮೋಕ್ಷ ಸಿಗಬೇಕು . ವಿಷ್ಣು ಒಪ್ಪಿದರು . ಆಮೇಲೆ ಲಕ್ಷ್ಮೀಯನ್ನು ಹುಡುಕಿಕೊಂಡು ಹೊರಟರು . ವಿಷ್ಣು ಶ್ರೀನಿವಾಸನಾಗಿ ಪದ್ಮಾವತಿಯನ್ನು ಮದುವೆಯಾಗಿ ತಿರುಪತಿಯಲ್ಲಿ ನೆಲೆಸಿದರು . ಲಕ್ಷ್ಮೀ ಕೊಲ್ಲಾಪುರದಲ್ಲಿ ಇದ್ದರು . ವಿಷ್ಣು ಶ್ರೀನಿವಾಸನಾಗಿ ಪದ್ಮಾವತಿಯ ವಿವಾಹವಾಗಿದ್ದನ್ನು Mr . ನಾರದರು ಲಕ್ಷ್ಮೀ ಗೆ ತಿಳಿಸಿದರು . ಮೇಡಂ ಗೆ ಸಿಕ್ಕಾಪಟ್ಟೆ ಕೋಪ ಬಂತು . ಅವರು ತಿರುಪತಿಗೆ ಬರುವ ಮುನ್ನವೇ ನಾರದರು ವೆಂಕಟೇಶ್ವರನಿಗೆ ಲಕ್ಷ್ಮೀ ಸಖತ್ ಕೋಪದಿಂದ ಈ ಕಡೆ ಧಾವಿಸುತ್ತಿದ್ದಾರೆ ಅಂದರು . ಶ್ರೀನಿವಾಸರು ಅಲ್ಲಿ ಪದ್ಮಾವತಿಯ ಹತ್ತಿರ ತಮ್ಮದೊಂದು ರೂಪವನ್ನು ಬಿಟ್ಟು ಕುಂಭಕೋಣಕ್ಕೆ ಓಡಿ ಬಂದು ಪಾತಾಳ ಶ್ರೀನಿವಾಸ ಆದರು . ಈಕಡೆ ಲಕ್ಷ್ಮೀ ತಿರುಪತಿಗೆ ಬಂದು " ಶ್ರೀಕೃಷ್ಣ ನೀ , ನನ್ನ ಶ್ರೀ ರಾಮ ನೀ , ನನ್ನ ಪತಿರಾಯ ನೀನೇನಪ್ಪಾ " ಅಂತ ವೆಂಕಟೇಶ್ವರರಿಗೆ ಹೇಳಿದಾಗ ವೆಂಕಟೇಶ್ವರ ಅವರು " ನಾ ನಾ ನಾ . . . ಇಲ್ಲ ಇಲ್ಲ ಇಲ್ಲ ಇಲ್ಲ ನಾನವನಲ್ಲ " ಅಂದುಬಿಟ್ಟರು . Z : ಬುದ್ಧಿವಂತರು ! ನಾನು : ಹೂಂ . . . ನಮ್ಮ ಮೇಡಮ್ಮೂ ಏನ್ ಕಮ್ಮಿ ಇಲ್ಲ . ಅವರಿಗೆ ಇವರ ರೂಪಾಂತರದ ರಹಸ್ಯ ತಿಳಿಯಿತು . ತಕ್ಷಣವೇ ಅಲ್ಲಿ ಅಲಮೇಲು ಮಂಗಾಪುರದಲ್ಲಿ ಅವರದೊಂದು ರೂಪವನ್ನು ಬಿಟ್ಟು ಇವರೂ ಕುಂಭಕೋಣಕ್ಕೆ ಶ್ರೀನಿವಾಸನನ್ನು ಹುಡುಕುತ್ತಾ ಓಡಿಬಂದರು . ಕುಂಭಕೋಣಕ್ಕೆ ಕಾಲಿಟ್ಟ ತಕ್ಷಣ ಅವರು ಮಗುವಾಗಿ ಹೋದರು . ಹೇಮ ಪುಷ್ಕರಿಣಿ ಎನ್ನುವ ಜಾಗದಲ್ಲಿ ಸಹಸ್ರದಳದ ಕಮಲದಲ್ಲಿ ಮೇಡಂ ಲಕ್ಷ್ಮಿ ಮಗುವಾಗಿ ಮಲಗಿದ್ದರು . ಅಲ್ಲಿಗೆ ಹೇಮ ಮಹರ್ಷಿ ಅನ್ನುವವರು ಬಂದರು . ಅವರು ಬೇರೆ ಯಾರೂ ಅಲ್ಲ , Mr . ಭೃಗು ಮಹರ್ಷಿ ಆಗಿದ್ದರಲ್ಲ . . . . ಅವರೇ ! Z : ವಾಹ್ ವಾಹ್ ! ನಾನು : ಸರಿ ಇವರು ಆ ಮಗುವಿಗೆ ಕಮಲವಲ್ಲಿ ಅಂತ ನಾಮಕರಣ ಮಾಡಿ ಆ ಮಗುವನ್ನು ಸಾಕತೊಡಗಿದರು . ಆ ಮಗುವೂ ಬೆಳೆದು ಪ್ರಾಪ್ತವಯಸ್ಕವಾಯ್ತು . ಬಹಳಾ ಹಿಂದೆ . . . Z : ಎಷ್ಟ್ ಹಿಂದೆ ? ನಾನು : ಸಿಕ್ಕ್ ಸಿಕ್ಕಾಪಟ್ಟೆ ಹಿಂದೆ . . . ವಿಷ್ಣು ಮೂರು ವಿಮಾನಗಳನ್ನು ರಚಿಸಿ , ಒಂದನ್ನು ಬ್ರಹ್ಮನಿಗೆ , ಇನ್ನೊಂದನ್ನು ವೈವಸ್ವತ ಮನುವಿಗೆ ಕೊಟ್ಟು , ಇನ್ನೊಂದನ್ನು ವೈಕುಂಠದಲ್ಲಿಯೇ ಬಿಟ್ಟರು . ವೈವಸ್ವತ ಮನುವಿನಿಂದ ಇಕ್ಷ್ವಾಕುವಿಗೆ ವಂಶಪಾರಂಪರ್ಯವಾಗಿ ಈ ವಿಮಾನ ಬಂತು . ಈ ಇಕ್ಷ್ವಾಕುವಿಗೆ ಬ್ರಹ್ಮನ ಬಳಿ ಇರುವ ವಿಮಾನವೂ ಬೇಕೆಂದು ಆಸೆ ಆಯ್ತು . ಬ್ರಹ್ಮ " take it " ಅಂತ ಧಾರಾಳವಾಗಿ ಕೊಟ್ಟುಬಿಟ್ಟರು . ಆಶ್ಚರ್ಯ ಏನಪ್ಪಾ ಅಂದ್ರೆ ಆ ಎರಡು ವಿಮಾನಗಳು ಫೆವಿಕಾಲ್ ಇಲ್ಲದೆಯೇ ಅಂಟಿಕೊಂಡುಬಿಟ್ಟು ಒಂದೇ ವಿಮಾನ ಆಗೋಯ್ತು ! Z : ಅಯ್ಯಯ್ಯೋ ! ಆಮೇಲೆ ? ನಾನು : ಕಮಲವಲ್ಲಿ ಹೆಸರಿನಲ್ಲಿರುವ ಲಕ್ಷ್ಮೀಯನ್ನು ಮದುವೆಯಾಗಲು ವಿಷ್ಣು ಅವರು ಸಾರಂಗಪಾಣಿಯಾಗಿ ಈ ಅಂಟಿಕೊಂಡಿರೋ ವಿಮಾನದಲ್ಲಿ ಕುಂಭಕೋಣದಲ್ಲಿ ಒಂದು ದಿನ ಹೇಮಪುಷ್ಕರಿಣಿ ಎದುರು ಕಾಣಿಸಿಕೊಂಡರು . ಇದೊಂಥರಾ arranged love marriage . ಹೇಮ ಮಹರ್ಷಿಗಳು full speed ನಲ್ಲಿ ಕನ್ಯಾದಾನ ಮಾಡೇಬಿಟ್ಟರು . ಕಮಲವಲ್ಲಿ ಮತ್ತು ಸಾರಂಗಪಾಣಿಯ ಮದುವೆ ನೂ fast ಆಗಿ ಆಗೇಹೋಯ್ತು ! Z : ವಾಹ್ ವಾಹ್ ! ಏನ್ ಸ್ಪೀಡು . . . ಏನ್ ಕಥೆ ! ನಾನು : ಹೂಂ ಮತ್ತೆ ! ಹಿಂಗಿರ್ಬೇಕು ನೋಡು ಸ್ಪೀಡ್ ಅಂದರೆ ! ಅಷ್ಟು ದೂರ ಪಾಪ ವಿಮಾನ ಹಾರಿಸಿಕೊಂಡು ಬೇಗ ಬೇಗ ಮದುವೆ ಮಾಡ್ಕೊಂಡು ಸುಸ್ತಾಗಿರೋದ್ರಿಂದ ಅವರು ವಿಮಾನದಲ್ಲಿಯೇ ಆದಿಶೇಷನನ್ನು summon ಮಾಡಿ rest ತಗೋತಿದ್ದಾರೆ ಅಂತ ಅನ್ಸತ್ತೆ . ಮೇಡಮ್ ಕಾಲನ್ನು ಒತ್ತುತ್ತಿದ್ದಾರೆ . The whole temple is in the form of a chariot , pulled by elephants . It has brilliant architecture and is quite a big temple . ಇಲ್ಲೊಂದು ವಿಶೇಷ ಇದೆ . usually , ನಾವು ಮೊದಲು ಪುರುಷ ದೇವರನ್ನ ನೋಡಿಕೊಂಡು ಆನಂತರ ಸ್ತ್ರೀ ದೇವರನ್ನು ನೋಡಲು ಹೋಗುತ್ತೇವೆ [ except in shakti kshetras like Chamundi hills ] ಆದರೆ ಇಲ್ಲಿ ಮೊದಲು ಕಮಲವಲ್ಲಿಯವರ ದೇವಸ್ಥಾನಕ್ಕೆ [ chariot ನ ಹೊರಗೆ ] ಹೋಗಿ ದರ್ಶನ ಪಡೆದ ನಂತರವೇ ಸಾರಂಗಪಾಣಿಯ ದರ್ಶನ ಮಾಡುತ್ತೇವೆ . ಸಿಕ್ಕಾಪಟ್ಟೆ ಚೆನ್ನಾಗಿದೆ ದೇವಸ್ಥಾನ . Z : I see ! ನಾನು : ಸಾರಂಗಪಾಣಿ ದೇವಸ್ಥಾನವನ್ನು ನೋಡಿದ ನಂತರ ನಾವು ಆದಿ ಕುಂಭೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿದೆವು . Z : ಕುಂಭಕೋಣಕ್ಕೂ ಕುಂಭೇಶ್ವರಕ್ಕೂ ಏನಾದ್ರೂ ಸಂಬಂಧ ಇದ್ಯಾ ? ನಾನು : ಇದೆ . ಕುಂಭಕೋಣಕ್ಕೆ ಈ ಹೆಸರು ಏಕೆ ಬಂತು ಅನ್ನೋದಕ್ಕೆ ಒಂದು ದೊಡ್ಡ ಕಥೆ ಇದೆ . ಆದಿಯಲ್ಲಿ ಬ್ರಹ್ಮದೇವನು ಸಕಲ ಜೀವಗಳನ್ನು ಸೃಷ್ಟಿಸಲು ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಒಂದು ಕಲಶದಲ್ಲಿ ಇಟ್ಟುಕೊಂಡು ಆಕಾಶದಲ್ಲಿ walking ಹೊರಟರಂತೆ . Z : ವಾಕಿಂಗ್ ಮುಗಿಸಿ ಸೃಷ್ಟಿ ಮಾಡೋಣ . . . ಸಿಕ್ಕಾಪಟ್ಟೆ creativity ಇರತ್ತೆ ಆಗ ಅಂತ ಪ್ಲಾನ್ ಏನಾದ್ರೂ ಇತ್ತಾ ? ನಾನು : ಇರ್ಬಹುದು . ನಾನು ಬ್ರಹ್ಮನ interview ಮಾಡಿಲ್ಲ . ಕೈಗೆ ಸಿಕ್ಕಲಿ ಅವರು ಒಂದು ದಿನ . . . ಕೇಳೇ ಕೇಳ್ತಿನಿ . ಇರ್ಲಿ . . . coming back to ಕಥೆ , ಬ್ರಹ್ಮ ಅವರು ವಾಕಿಂಗ್ ಹೊರಟಾಗ ಕಲಶ slip ಆಗೋಯ್ತಂತೆ ಕೈಯಿಂದ . ಅದು ಮೇಲಿಂದ ಕೆಳಗೆ slow motion ನಲ್ಲಿ ಬೀಳ್ತಿರೋವಾಗ ಈಶ್ವರ ಅವರು ಬಾಣದಿಂದ ಅದನ್ನು ಹೊಡೆದರಂತೆ . ಆಗ ಆ ಸಾಮಾಗ್ರಿಗಳಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಭೂಮಿಯಲ್ಲೆಲ್ಲಾ distribute ಆಯ್ತಂತೆ . ಆ ಕಲಶ ಒಡೆದುಹಗಿ ಕುಂಭಕೋಣದಲ್ಲಿ ಬಿತ್ತಂತೆ ಕಡೆಗೆ . ಈಶ್ವರ ಆ ಬಿದ್ದು ಒಡೆದು ಹೋದ ಕಲಶದ ಚೂರುಗಳೆಲ್ಲಾ ಸೇರಿಸಿ ಲಿಂಗ ರೂಪ ತಾಳಿ ಕುಂಭೇಶ್ವರ ಅಂತ ಹೆಸರಾಗಿ ಅಲ್ಲಿ ನೆಲೆಸಿದ್ದಾರೆ . ಆದಿಯಲ್ಲಿ ಕುಂಭಕೋಣಕ್ಕೆ ಇವರೇ ಮೊದಲು ಬಂದಿದ್ದರಿಂದ ಇವರನ್ನು ಆದಿ ಕುಂಭೇಶ್ವರ ಅಂತ ಕರೆಯುತ್ತಾರೆ . Z : ಲಿಂಗ ಮೂರ್ತಿಯ shape ಹೇಗಿದೆ ? ನಾನು : ಲಾಲ್ ಬಾಗ್ ನಲ್ಲಿ ಪಾಟುಗಳು ಸಿಗತ್ವಲ್ಲ . . . ಕಪ್ಪಗೆ ಪ್ಲಾಸ್ಟಿಕ್ ನಲ್ಲಿ ಇರತ್ತಲ್ಲಾ . . . ಆ ಪಾಟನ್ನ ಶಿಲೆಯಲ್ಲಿ imagine ಮಾಡ್ಕೊ . Z : ಮಾಡ್ಕೊಂಡೆ . ಆಮೇಲೆ ? ನಾನು : ಅದನ್ನ ಉಲ್ಟಾ ಮಾಡು . Z : ಮಾಡಿದೆ . ನಾನು : ಅದೇ ಕುಂಭೇಶ್ವರ ಲಿಂಗ ಮೂರ್ತಿ . Z : ಹೈ ! ಚೆನ್ನಾಗಿರತ್ತೆ ಅಲ್ವಾ ಒಂಥರಾ ? ನಾನು : ಹೂಂ . . . ಸಕತ್ತಾಗಿದೆ ನೋಡಕ್ಕೆ ಮಾತ್ರ ! Z : ಹೌದು . . . ನಾನು : Mrs . ಕುಂಭೇಶ್ವರ ಅವರ ಹೆಸರು ಮಂಗಳ ನಾಯಕಿ ಅಂತ . ಅವ್ರೂ ಚೆನ್ನಾಗಿದ್ದಾರೆ . cute , beautiful and adorable . ಅವರನ್ನೂ ನೋಡಿಕೊಂಡು , ದೇವಸ್ಥಾನದ architecture ನೋಡಿಕೊಂಡು ಅಲ್ಲಿಂದ ಸ್ವಾಮಿ ಮಲೈ ಗೆ ಹೊರಟೆವು . Z : ಸ್ವಾಮಿ ಮಲೈ ಕಥೆ ? ನಾನು : ಇನ್ನೊಂದು ದಿನ ಹೇಳ್ತಿನಿ ! ಅಲ್ಲಿಯವರೆಗೂ line on hold .
ಒಂದು ದೇಶಕ್ಕೆ ಸೂಕ್ತವಾದ ತಾಂತ್ರಿಕತೆ ಆ ದೇಶದ ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲಗಳನ್ನು ಅವಲಂಬಿಸಿರಬೇಕಾಗುತ್ತದೆ . ನಾರ್ವೆಗೆ ಸೂಕ್ತವಾದುದು ಇಂಡಿಯಾಕ್ಕೂ ಸೂಕ್ತವಾಗಲಾರದು . ಇದನ್ನು ಅರ್ನಸ್ಟ್ ಷುಮೇಕರ್ ತನ್ನ Small is Beautiful : Economics as if people mattered ಎಂಬ ಪುಸ್ತಕದಲ್ಲಿ ವಿಶದವಾಗಿ ವಿಶ್ಲೇಷಿಸಿದ್ದಾನೆ .
ಪತ್ನಿಗೆ ಪ್ರೇಯಸಿಯಿಂದ ಥಳಿತ ವಿಟ್ಲ : ನೆರೆಮನೆಯಾಕೆಯೊಂದಿಗೆ ಗೆಳೆತನ ಹೊಂದಿದ್ದ ಗಂಡ ತನ್ನ ಪತ್ನಿಗೆ ಪ್ರೇಯಸಿ ಮೂಲಕ ಥಳಿಸಿದ ಘಟನೆ ವಿಟ್ಲ ಸಮೀಪದ ನೆಕ್ಕರೆಕಾಡು ಎಂಬಲ್ಲಿ ನಡೆದಿದೆ . ನೆಕ್ಕರೆಕಾಡು ನಿವಾಸಿಯೊಬ್ಬರ ಪತ್ನಿ ಬೀಡಿಗೆ ಹೋಗುತ್ತಿದ್ದಾಗ ಕಾರಣವಿಲ್ಲದೇ ಪಕ್ಕದ ಮನೆಯ ಮಹಿಳೆಯೊಬ್ಬಳು ಬೆತ್ತದಿಂದ ಹೊಡೆದು ಹಲ್ಲೆ ನಡೆಸಿದ್ದಾಳೆ ಎಂದು ದೂರಲಾಗಿದೆ . ಇವರಿಬ್ಬರ ಮನೆ ಆಕೆಗೂ ಹಲ್ಲೆಗೊಳಗಾದ ಮಹಿಳೆಯ ಗಂಡನಿಗೂ ಗೆಳೆತನವಿತ್ತು . ಇದನ್ನು ಹೆಂಡತಿ ನಿರಂತರ ವಿರೋಧಿಸುತ್ತಿದ್ದಳು ಎನ್ನಲಾಗಿದೆ . ಹೆಂಡತಿಗೆ ಥಳಿಸಿದ ವಿಚಾರವನ್ನು ಪೊಲೀಸರಿಗೆ ದೂರು ನೀಡದಂತೆ ಪತಿ ಎಚ್ಚರಿಕೆ ನೀಡಿದ್ದು ಸ್ವ - ಸಹಾಯ ಸಂಘದ ಸದಸ್ಯೆಯರು ಸಾರ್ವಜನಿಕ ಶಾಂತಿಭಂಗ ಮಾಡುತ್ತಿರುವ ಈತನ ಬಗ್ಗೆ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ .
ಯಾಕೋ ಭಾರಿ ಮಂಡೆ ಬಿಸಿ ಮಾಡಿಕೊಂಡಿದ್ದ ಅವನು ಒಂದು ದಿನ . ಏನಾಯ್ತು ಇಜಿನ ಸಾಯ್ಬರೇ ಅಂದಿದ್ದಕ್ಕೆ , " ನೋಡೀ , ಹೇಳಿ ಸುಖ ಇಲ್ಲ , ಈ ಸಲ ನಂಗೆ ನೇಜಿ ನೆಡ್ಲಿಕ್ಕೆ ಜನ ಸಿಗುದು ಡೌಟು " ಅಂದ . ಅರೇ , ಇನ್ನು ಅವನ ಭತ್ತದ ಸಸಿಗೆ ಎಂಟು ದಿನವೂ ಆಗಿಲ್ಲ , ಈಗಲೇ ನೇಜಿ ನೆಡುವ ಬಗ್ಗೆ ಯಾಕೆ ಚಿಂತೆ ಅಂದುಕೊಂಡೆ . ಆ ಪುಣ್ಯಾತ್ಮ , ನನ್ನ ಮನಸ್ಸನ್ನ ಓದಿಕೊಂಡವನಂತೆ , ಹೇಗೆ ವರುಷಾ ವರುಷಾ ಕೃಷಿಯ ಸಮಸ್ಯೆ ಜಾಸ್ತಿ ಆಗುತ್ತಿದೆ ಅನ್ನುವುದರ ಬಗೆಗೆ ನನಗೊಂದು ಸಣ್ಣ ಉಪನ್ಯಾಸವನ್ನೇ ನೀಡಿದ .
ಶ್ರೀಲಂಕಾದಲ್ಲಿ ಜೂನ್ 15ರಿಂದ ನಡೆಯಲಿರುವ ಏಷಿಯಾ ಕಪ್ ಪಂದ್ಯಾಟದಲ್ಲಿ ಭಾರತದ ಎಡಗೈ ಆಟಗಾರ ಯುವರಾಜ್ ಸಿಂಗ್ ಅನುಪಸ್ಥಿತಿಯಿಂದ ನಾವು ಅವರನ್ನು ' ಮಿಸ್ ' ಮಾಡಿಕೊಂಡಿರುವುದಾಗಿ ಟೀಮ್ ಇಂಡಿಯಾದ ಕಪ್ತಾನ ಮಹೇಂದ್ರ ಸಿಂಗ್ ಧೋನಿ ತಿಳಿಸಿದ್ದಾರೆ . ತಮ್ಮ ಆಟದಲ್ಲಿ ವೈಫಲ್ಯ ಕಂಡು , ಉತ್ತಮ ಪ್ರದರ್ಶನಕ್ಕಾಗಿ ಹೆಣಗಾಡುತ್ತಿದ್ದ ಯುವರಾಜ್ ಸಿಂಗ್ ಅವರನ್ನು ಶ್ರೀಲಂಕಾದಲ್ಲಿ ನಡೆಯಲಿರುವ ಏಷಿಯಾ ಕಪ್ ತಂಡದಲ್ಲಿ ಅವರನ್ನು ಕೈಬಿಡಲಾಗಿತ್ತು . ಆದರೆ ಸಿಂಗ್ ಅವರ ಗೈರುಹಾಜರಿಗೆ ಬೇಸರ ವ್ಯಕ್ತಪಡಿಸಿರುವ ಧೋನಿ , ಯಾವ ಕಾರಣಕ್ಕೆ ಅವರನ್ನು ತಂಡದಿಂದ ಕೈಬಿಡಲಾಗಿತ್ತು ಎಂಬುದರ ಬಗ್ಗೆ [ . . . ]
ಬಾಲಗಂಚಿಯವರೆ , " ಮಾಡುವುದು ಮಾಡಲೇ ಬೇಕು " ಎಂದು ಸಿದ್ದರಾಮ ಹೇಳುವಾಗ ಅದು ನಮ್ಮ ಕೈಯಲ್ಲಿಲ್ಲ ಎಂದು ಹೇಳುತ್ತಿರುವಂತಿದೆ . ಹೀಗಾಗಿ ಆ experience ಅನ್ನೋದು ಕಟ್ಟಿಟ್ಟ ಬುತ್ತಿಯಾಗಿದ್ದಿರಬಹುದಾದ ಸಂದರ್ಭದಲ್ಲಿ ಅಲ್ಲಿಗಲ್ಲಿಗೆ " ಬಿಟ್ಟುಬಿಡುವುದು " ( ಪ್ರೊ . ಓ ಎಲ್ ಎನ್ ಟಿಪ್ಪಣಿ ಮಾಡಿರುವಂತೆ ) ನೆಮ್ಮದಿಯ ದಾರಿ ಎಂದು ವಚನ ಹೇಳುತ್ತಿರುವಂತಿದೆ , ಅದು ಬಹಳ ನಿಜ ಅನಿಸುತ್ತದೆ , ಕೂಡ : - ) - HPN ನನ್ನ ಬ್ಲಾಗುಗಳು : ಪರಿವೇಶಣ | PariveshaNa
ಅದರಲ್ಲಿ ಸಾಮ್ಯತೆ ಅಂದರೆ ಎರಡೂ ಚಿತ್ರದ ನಾಯಕನಟ ಶಿವರಾಜ್ ಕುಮಾರ್ . ಅದು ಬಿಟ್ಟರೆ ಓಮ್ ಕರುಳು ಕೊಚ್ಚುವ ರೌಡಿಸ್ಮ್ ಕತೆ ಆಗಿದ್ದರೆ , ತವರಿಗೆ ಬಾ ತಂಗಿ ಅಣ್ಣ - ತಂಗಿಯರ ಕರುಳು ಹಿಂಡುವ ಕತೆ ಹೊಂದಿದೆ .
ಇದೊ೦ದು ಮೆದುಳಿಗೆ ಮೇವಿನ ಪ್ರಯತ್ನ ! ಒಟ್ನಲ್ಲಿ ಏನಾದರೊ೦ದು ವಿಭಿನ್ನ ಪ್ರಯತ್ನ ಮಾಡುತ್ತಲೇ ಇರುತ್ತೀರಿ ! ! ನಾನ್ಯಾರು ! ಇಲ್ಲಿಯವರೆಗೂ ಕಣ್ಣಾಡಿಸಿದ್ದೇನೆಯೇ ವಿನ ; ಸರಿಯಾಗಿ ಓದಿರಲಿಲ್ಲ ! ನಗು ಬರುತ್ತಿದೆ … ಹೆ೦ಡತಿ ಒಬ್ಬಳಿದ್ದಾಳೆ … ಸಕ್ಕತ್ ಮಾರಾಯ್ರೇ … ಆಡು ಭಾಷೆಯ ಪದಗಳಾದರೂ , ಬಳಸಬೇಕೆ೦ದಿದ್ದಲ್ಲಿ ಬಳಸಿದರೆ ಮಾತ್ರವೇ ಅದರ ಸೊಗಸು ಹಾಗೂ ಭಾವನೆಯುಕ್ತವಾಗಿರುತ್ತದೆ ಎ೦ಬುದು ಸಾಹಿತ್ಯದ ಸೊಲ್ಲು . ಅದಿಲ್ಲಿ ನಿಜಪಡಿಸಿದ್ದೀರಿ ! ಖುಷಿಯಾಯಿತು . ನಮಸ್ಕಾರಗಳೊ೦ದಿಗೆ , ನಿಮ್ಮವ ನಾವಡ .
ರಾಜ್ಯದ ರಾಜಕೀಯಕ್ಕೆ ಭಾರವಾದವರನ್ನು ರಾಜ್ಯಪಾಲರನ್ನಾಗಿ ಕೂರಿಸುವುದು , ಬೇಕಾದಾಗ ಅವರನ್ನು ಅಲ್ಲಿಂದ ಎತ್ತಿ ರಾಜ್ಯಕ್ಕೆ ಬಿಸಾಕುವುದು - ಇದೆಲ್ಲಾ ಒಂದು ರೀತಿ ಸಂವಿಧಾನವನ್ನೇ ಅಣಕಿಸುವಂತೆ ಎಂದು ಗೊತ್ತಿದ್ದರೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎಲ್ಲ ಪಕ್ಷಗಳೂ ಇದನ್ನೇ ಮಾಡಿದೆ .
' ಹೀಗೆ ಆಗಾಗ ಇಂಥ ಘಟನೆಗಳು ದೇಶದಲ್ಲಿ ನಡೆದರೆ ನಮ್ಮ ನಿಧಾನಿಯವರ ಆರೋಗ್ಯ ಕಟ್ಟುಮಸ್ತಾಗಿರುತ್ತದೆ ಎಂದು ಈ ಮೂಲಕ ತಿಳಿಸಲು ಇಚ್ಚಿಸುತ್ತೇನೆ ' .
ಎಲ್ಲಾ ಜಿಲ್ಲೆ ಕನ್ನಡಿಗರು ಮುಂದೆ ಬಂದು ಬಾಗವಹಿಸಬೇಕು . ಅವರ , ಅವರ , ಜಿಲ್ಲೆ ಕನ್ನಡಿಗರು ಮುಂದೆ ಬಂದರೆ , ಒಳ್ಳೆದಾಗುತ್ತೆ . ಅವರಿಗೂ , ಹೆಮ್ಮೆ ಇರುತ್ತೆ , ನಮ್ಮ ಜಿಲ್ಲೆ ಗೆ ಸಹಾಯ ಮಾಡುತ್ತಿದ್ದೇವೆ ಎಂದು .
ಸರಳತೆ , ಪ್ರಾಮಾಣಿಕತೆ , ನಿಷ್ಠೆ , ಹೊಸತನದ ಅನ್ವೇಷಣೆ ಹೀಂಗಿಪ್ಪಒಳ್ಳೆ ಗುಣಂಗಳ ಮೈಗೂಡಿಸಿಂಡು ಇಪ್ಪ ಈ " ಅಣ್ಣಯ್ಯಂಗೆ " ಮತ್ತೊಂದರಿ ಅಭಿನಂದನೆಗೊ .
' ಒಂದು ವೇಳೆ ಭಾರತ ತಂಡ ವಿಶ್ವಕಪ್ ಕ್ರಿಕೆಟ್ ಗೆದ್ದರೆ ಸಂಪೂರ್ಣ ಬಟ್ಟೆ ಬಿಚ್ಚಿ ಕುಣಿದಾಡುತ್ತೇನೆ ' ಹೀಗಂತ ಪಾಂಡೆ ಪ್ರಾಮಿಸ್ ಮಾಡಿದ್ದಾಳೆ .
" ಪ್ರಪ೦ಚದಲ್ಲಿಯೇ ಯುನಿಟ್ ವಾಲ್ಯೂಮ್‌ನ ಹಾಗು ವಾರ್ಷಿಕ ಆದಾಯದ ಆಧಾರದ ಮೇಲೆ ವೈಯಕ್ತಿಕ ಕ೦ಪ್ಯೂಟರ್ ( " PCs " ) ಗಳ ಮಾರಾಟದಲ್ಲಿ ಮು೦ಚೂಣಿಯಲ್ಲಿರುವ " HPಯ ಪರ್ಸನಲ್ ಸಿಸ್ಟಮ್ಸ್ ಗ್ರೂಪ್ ( PSG ) ತನ್ನ ಹಕ್ಕನ್ನು ಕೇಳಿತು . " [ ೨೬ ] PSG ಯು , ಪಿಸಿ ಗಳ ವ್ಯಾಪಾರ ಹಾಗು ಪರಿಕರಗಳು , ಗ್ರಾಹಕರ ಪಿಸಿಗಳು ಮತ್ತು ಪರಿಕರಗಳು ( ಉದಾ : HP ಪವಿಲಿಯನ್ , ಕಾಮ್ ಪ್ಯಾಕ್ಪ್ರೆಸಾರಿಯೊ , ವೂಡೂ ಪಿಸಿ , ಕೈಬರಹದ ಲೆಕ್ಕಗಳು ( ಉದಾ : iPAQ ಪಾಕೆಟ್ PC ) , ಹಾಗು ಡಿಜಿಟಲ್ " ಸೇವೆ ಹೊ೦ದಿದ " ಮನೋರ೦ಜನೆ ( ಉದಾ : HP ಮೀಡಿಯಸ್ಮಾರ್ಟ್ TVಗಳು , HP ಮೀಡಿಯಸ್ಮಾರ್ಟ್ ಸರ್ವರ್ ಗಳು , HP ಮೀಡಿಯ ವಾಲ್ಟ್ಸ್ , DVD + RW ಡ್ರೈವ್ ಗಳು ) ಗಳ ವ್ಯವಹಾರಗಳನ್ನು ಒಳಗೊ೦ಡಿತ್ತು . HPಯು ನವೆ೦ಬರ್ 2005ರವರೆಗೆ ಆಪಲ್ ಐಪಾಡ್ ಅನ್ನು ಮರು ಮಾರಾಟಮಾಡಿದರು . [ ೨೬ ]
ತಾಜ್ ಮಹಲ್‌ನ ಹೊರಾಂಗಣ ಅಲಂಕಾರ ಮೊಘಲ್ ವಾಸ್ತುಶಿಲ್ಪದಲ್ಲಿರುವ ಉತ್ತಮ ಅಂಶಗಳಿಂದ ಕೂಡಿದೆ . [ ಸಾಕ್ಷ್ಯಾಧಾರ ಬೇಕಾಗಿದೆ ] ಆ ಮೇಲ್ಮೈ ಅಲಂಕಾರಗಳ ಬದಲಾವಣೆಗಳು ಪ್ರಮಾಣಾನುಗುಣವಾಗಿ ನಾಜೂಕುಗೊಳಿಸಲಾಗಿದೆ . ಕಟ್ಟಡದ ಅಲಂಕಾರಿಕ ಅಂಶಗಳನ್ನು ಬಣ್ಣ ಬಳಿಯುವುದು , ಗಾರೆ ಮಾಡುವುದು , ಕಲ್ಲು ಕೆತ್ತನೆ , ಅಥವಾ ಕೆತ್ತನೆಯಿಂದ ಮಾಡಲಾಗಿದೆ . ಮಾನವ ವರ್ಗೀಕರಣಗಳ ವಿರುದ್ಧ ಮುಸ್ಲಿಂ ಧರ್ಮದ ನಿಷೇಧವನ್ನು ಈ ಸಾಲುಗಳಲ್ಲಿ ಬರೆಯಲಾಗಿದ್ದು , ಇಲ್ಲಿ ಚಿತ್ರಿಸಲಾಗಿರುವ ಅಂಶಗಳನ್ನು ಅಲಂಕಾರಿಕ ಅಂಶಗಳು ಸುಂದರ ಬರಹಗಾರಿಕೆ , ಅಮೂರ್ತ ಪ್ರಕಾರಗಳು ಅಥವಾ ಸಸ್ಯಕ ಕಲಾಕೃತಿಗಳಾಗಿ ವಿಂಗಡಿಸಲಾಗಿದೆ .
ವಿಜ್ಞಾನ ಮತ್ತು ಅದರ ಬಳಕೆಯು , ವೈಜ್ಞಾನಿಕ ಮನೋಧರ್ಮವನ್ನು ಪಡೆದು ಕಾರ್ಯಪ್ರವೃತ್ತವಾದರೆ ಬಡತನದ ನಿರ್ಮೂಲನ , ಶೋಷಣೆಯ ನಾಶ ಸಾಧ್ಯ . ಅದು ಪ್ರಗತಿವಿರೋಧೀ ಸಿದ್ಧಾಂತಗಳನ್ನು , ಸ್ವಹಿತಾಸಕ್ತಿಯನ್ನು ದೂರಮಾಡ ಬಲ್ಲದು .
ಇದೆಲ್ಲ ಒಂದು ತೂಕವಾದರೆ , ಸರ್ಕಾರದ ಇಂತಹ ನಿಲುವೊಂದು ಮುಂದಿನ ದಿನಗಳಲ್ಲಿ ಕನ್ನಡ ಸಮಾಜದ ಮೇಲೆ ಮಾಡಬಹುದಾದ ಪರಿಣಾಮ ಎಂತಹುದು ? ಇವತ್ತು ಎಲ್ಲೆಲ್ಲಿ ಕನ್ನಡದ ಬಳಕೆ ಚೆನ್ನಾಗಿ ಆಗುತ್ತಿದೆಯೋ , ಅಲ್ಲೆಲ್ಲ ಒಂದು ಪೀಳಿಗೆಯ ಅವಧಿಯಲ್ಲಿ ಆಗಬಹುದಾದ ಬದಲಾವಣೆಗಳನ್ನು ಊಹಿಸಿದ್ದೀರಾ ? ಇಂಗ್ಲಿಶ್ ಮಾದ್ಯಮ ಶಾಲೆಗಳ ಸಂಖ್ಯೆ ಹೆಚ್ಚಿರುವ ಬೆಂಗಳೂರಿನಲ್ಲಿ ಕನ್ನಡದಲ್ಲಿ ಇಂಗ್ಲಿಶ್ ಬೆರಕೆ , ಕನ್ನಡ ಮಾತನಾಡದಿರುವುದೇ ಪ್ರತಿಷ್ಟೆಯ ಸಂಕೇತ , ಕನ್ನಡದ ಬಗ್ಗೆ ಕೀಳರಿಮೆ ಮುಂತಾದ ಸಮಸ್ಯೆಗಳು ಉಲ್ಬಣಿಸಿವೆ ಅನ್ನುವುದು ಏನನ್ನು ತೋರಿಸುತ್ತಿವೆ ? ಇಡೀ ಕರ್ನಾಟಕಕ್ಕೆ ಇಂಗ್ಲಿಶಿನ ವ್ಯವಸ್ಥೆ ತರುವುದು ಎಂದಿಗೂ ಹಿಂಪಡೆಯಲಾಗದ ( irreversible ) ಬದಲಾವಣೆಯಾಗಲಿದೆ ಅನ್ನುವುದು ಸರ್ಕಾರದ ಅರಿವಿಗೆ ಬಂದಿದೆಯೇ ? ಸಾವಿರಾರು ವರ್ಷಗಳ ಇತಿಹಾಸ , ಹಿರಿಮೆ ಇರುವ ಒಂದು ಜನಜೀವನ ಒಂದೇ ಒಂದು ಪೀಳಿಗೆಯ ಅವಧಿಯಲ್ಲಿ ಹೊಂದಲಿರುವ ಬದಲಾವಣೆ ಎಂತಹುದು ಅನ್ನುವುದರ ಪ್ರಜ್ಞೆ ಸರ್ಕಾರಕ್ಕಿದೆಯೇ ?
ಹಾಯ್ ರಾಜೇಶ್ & ವಿನಯ್ , ಇಬ್ಬರಿಗೂ ಧನ್ಯವಾದಗಳು , ರಾಜೇಶ ಅವರೇ ಜೂನ್ ತಿಂಗಳು ಮುಗಿದರೂ ಮಳೆಯ ಪತ್ತೆಯೇ ಇಲ್ಲ ಎಂದು ಬರೆದಿದ್ದೀರಿ . ಇದನ್ನು ನೆನೆಸಿಕೊಂಡರೆ ಸಂಕಟವಾಗುತ್ತದೆ . ಈ ಸಮಯದಲ್ಲಿ ಹಾಡಲು ಈ ಕವಿತೆಗಿಂತ ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ , ದಿನ ದಿನವು ಕಾದು ಬಾಯಾರಿ ಬೆಂದು ಬೆಂಗದಿರಿ ತಾಪದಲ್ಲಿ ಎಂಬ ಕವಿ ವಾಣಿ ಹೆಚ್ಚು ಸೂಕ್ತವಾಗಿದೆ ಎನ್ನಿಸುತ್ತಿದೆ
ನಲವತ್ತು ಬೆಡ್‌ಗಳು ಇದ್ದ ದೊಡ್ಡ ಕೋಣೆ . ಹೊಲಸು ಗಬ್ಬು ವಾಸನೆಯಿಂದ ತುಂಬಿತ್ತು . ಹಾಸಿಗೆಯ ಮೇಲೆ ನಮ್ಮ ಬೆಡ್‌ಶೀಟ್ ಹಾಕಿ ಮಲಗಿಸಿದೆವು . ತಗಣಿಗಳ ಸೈನ್ಯವೇ ಅಲ್ಲಿತ್ತು . ಅಷ್ಟು ತಗಣಿಗಳ ಪಡೆಯನ್ನು ನಾನೆಂದೂ ಎಲ್ಲಿಯೂ ಕಂಡಿರಲಿಲ್ಲ . ಮಗು ಒದ್ದಡಾತೊಡಗಿತು . ನನಗೊಂದು ಐಡಿಯಾ ತೋಚಿತು . ಕೆಳಗೆ ನೆಲದ ಮೇಲೆ ಚಾದರ ಹಾಸಿ ಮಗುವನ್ನು ಮಲಗಿಸಿದೆವು . ಸುತ್ತಲೂ ನೀರು ಸುರಿದೆವು . ತಗಣೆ ದಾಟಿಬರಲಿಲ್ಲ . ಮಗುವಿನ ಜೊತೆ ನಾನು ಮಲಗಿದೆ , ಕಾಳೆ ನೀರು ಸುರಿಯುತ್ತಿದ್ದರು . ಅವರು ಮಲಗಿದಾಗ ನಾನು ನೀರು ಸುರಿಯುತ್ತಿದ್ದೆ . ಬೆಳಗಾಯಿತು .
ನನ್ನ ಬಳಿ ಉಬುಂಟುವಿನ ಹೊಸ ಆವೃತ್ತಿಯಾದ ' ಡ್ಯಾಪರ್ ' ಇಲ್ಲವಾದ್ದರಿಂದ ಅದರಲ್ಲಿ ಕನ್ನಡ ಕುರಿತ ಕೆಲವು ಸಮಸ್ಯೆಗಳನ್ನು ಟೆಸ್ಟ್ ಮಾಡಿ ನೋಡಲಾಗಿರಲಿಲ್ಲ . ಇಂದು ಹಳೆಯ ಸ್ನೇಹಿತನೊಬ್ಬ ಮಾತಿಗೆ ಸಿಕ್ಕಾಗ " ಅಯ್ಯೋ , ನನ್ನ ಕಂಪ್ಯೂಟರಿನಲ್ಲಿ ಇವತ್ತಿನ ಫ್ರೆಶ್ ಕಾಪಿ install ಮಾಡಿರುವೆ , ಅದರಲ್ಲೇ ಟೆಸ್ಟ್ . . .
ನನಗೆ ಒಂದು " jai kali maa " , " jesus I love u " ಇಂತಹ ಚಿಕ್ಕೋಲೆ ( SMS ) ಗಳನ್ನು ೧೦ ಮಂದಿಗೆ ಕಳುಹಿಸದರೆ , ನಿಮಗೆ ಮೇಲೆ ಇರುವ ದೇವರು " ಸುಖ ಸಂವೃದ್ಧಿ ಶಾಂತಿ . . ಇನ್ನು ಏನು ಬೇಕೋ ಅದು " ಕೊಡುವುದು ಎಂದು ಬಂದಿತ್ತು , ಅದೂ ಈ ಹಬ್ಬದ ದಿನಗಳಲ್ಲಿ .
ಜೀವ ಚೈತನ್ಯ ಕೃಷಿಗೆ ಶುರುವಿಟ್ಟುಕೊಳ್ಳುವ ಹೊತ್ತಿಗೆ ಐದು ವಸಂತಗಳು ಸರಿದು ಹೋಗಿದ್ದವು . ಭಾರತೀಯ ಪರಂಪರಾನುಗತ , ಈ ನೆಲದ ಕೃಷಿ ನಂಬಿಕೆಗಳಿಗೆ ವೈಜ್ಞಾನಿಕ ಆಧಾರಗಳನ್ನು ಕೊಟ್ಟು ಅದರ ಬೇರುಗಳನ್ನು ಬಲಗೊಳಿಸುವ ಕೃಷಿ ಸಾಧ್ಯವಾಗುವುದಾದರೆ ಬಸಿಲ್‌ನ ಸ್ಥಾಪನೆಗೊಂದು ಅರ್ಥ ಬಂದೀತು ಎಂದುಕೊಂಡರಂತೆ ಜೆಸಿ ಪ್ರಭು . ಅದಕ್ಕಾಗಿ ಅವರು ಆರಂಭಿಸಿದ್ದು ಪಂಚಾಂಗ ಆಧಾರಿತ ಕೃಷಿಯನ್ನು . ಹುಣ್ಣಿಮೆಗೆದುರಾಗಿ ಬೀಜಗಳ ಬಿತ್ತನೆ , ಅಮಾವಾಸ್ಯೆ ಮುಂದಿಟ್ಟುಕೊಂಡು ಕೀಟನಾಶಕಗಳ ಸಿಂಪಡಣೆಗಳೇ ಮುಂತಾದ ಗ್ರಾಮೀಣ ಜನಜೀವನದಲ್ಲಿ ಇಂದಿಗೂ ಉಳಿದುಕೊಂಡು ಬಂದಿರುವ ನಂಬಿಕೆಗಳಿಗೆ ಶಾಸ್ತ್ರಾಧಾರದ ಬಲವನ್ನು ತುಂಬಿದರು . ಮಾತ್ರವಲ್ಲ ಅದನ್ನು ಪ್ರಯೋಗಳ ಮೂಲಕ ಸಾಬೀತು ಪಡಿಸಿದರು . ಕಾಸ್ಮಿಕ್ ಶಕ್ತಿಯನ್ನಾಧರಿಸಿದ ಕೃಷಿ ಇಂದಿಗೂ ಬಸಿಲ್‌ನ ಮೂಲಾಧಾರ . ಇಂಥ ಮಳೆ ನಕ್ಷತ್ರದಲ್ಲೇ ಬಿತ್ತನೆ ಮಾಡಬೇಕು . ಇಂಥ ರಾಶಿಯಲ್ಲೇ ಅದಕ್ಕೆ ಬೀಜೋಪಚಾರ ಮಾಡಬೇಕು . ಈ ತಿಥಿಯಂದೇ ನೆಲವನ್ನು ಹದಗೊಳಿಸಬೇಕು . ನಿಗದಿತ ವಾರಗಳಂದೇ ಭೂಮಿಯನ್ನು ಉತ್ತಬೇಕು ಎಂಬುದೂ ಸೇರಿದಂತೆ ' ಕೃಷಿ ಧರ್ಮ ' ಕ್ಕೊಂದು ಹೊಸ ವ್ಯಾಖ್ಯಾನವನ್ನು ಆಧುನಿಕ ಜಗತ್ತಿನಲ್ಲಿ ಕಟ್ಟಿಕೊಡುವ ಪ್ರಯತ್ನ ಆದದ್ದು ವಿಶೇಷ . ಪ್ರತಿಯೊಂದು ಗಿಡಕ್ಕೂ ಅದರದ್ದೇ ಆದ ಪ್ರಾಕೃತಿಕ ಧರ್ಮವನ್ನು ಬೆಸೆಯಲಾಯಿತು . ಹೀಗೆ ಆರಂಭ ವಾದ ಸ್ವಾವಲಂಬಿ , ಸುಸ್ಥಿರ ಕೃಷಿ ಕಾಯಕ ೧೯೯೮ರಿಂದ ೨೦೦೫ರ ಅವಯಲ್ಲಿ ಮಾದರಿಯಾಗಿ ರೂಪುಗೊಂಡಿತು .
ಪ್ರಪಂಚದ ಎಲ್ಲೆಡೆಗಳಲ್ಲಿ ಜನರ ಕಾತರ ಹೆಚ್ಚಿಸಿರುವ ಚಂದ್ರ ಯಾನ - ೧ ಕ್ಕೆ ಪ್ರಮುಖ ಪಾತ್ರ ವಹಿಸಿರುವ ದಕ್ಷಿಣ ಭಾರತದ ಬೆಂಗಳೂರಿನ ಇಸ್ರೋ ನ ಡೈರೆಕ್ಟರ್ ಗಳ ಹೆಸರು ಗಳು ಹೀಗಿವೆ . ಶ್ರೀಯುತ ೧ ಎಸ್ ಕೆ ಶಿವಕುಮಾರ್ [ ಮಂಡ್ಯ ಜಿಲ್ಲೆ ಯ ಶ್ರೀ ರಂಗ ಪಟ್ನ ಕೃಷ್ಣಮೂರ್ತಿ ಶಿವ ಕುಮಾರ್ ೨ ಪ್ರಾಜೆಕ್ಟ್ ಡೈರೆಕ್ಟರ್ ಮ್ಯಲೀಸ್ವಾಮಿ ಅಣ್ಣಾ ದೊರೈ ಲಾಂಚ್ ವೆಹಿಕಲ್ ಡೈರೆಕ್ಟರ್ ಜಾರ್ಜ ಕೊಷೆ . ಈ ೩ ವಿಜ್ಞಾನಿ ಗಳು ಉಪಗ್ರಹ ದ ಚಲನೆ ಯನ್ನು ನಿಯಂತ್ರಿಸುತ್ತಾರೆ . ಶ್ರೀಯುತ ಶಿವ ಕುಮಾರ್ ಅವರು ಕನ್ನಡ ದವರು ಎನ್ನುವ ಅಭಿಮಾನ ಕರ್ನಾಟಕದ ಜನತೆ ಗೆ ಹೆಮ್ಮೆ ತರುವ ವಿಷಯ ವಾಗಿದೆ . ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ವಿಜ್ಞಾನಿ ಗಳ ಪ್ರಯತ್ನ ಕ್ಕೆ ಶುಭ ವನ್ನು ಹಾರೈಸುತ್ತದೆ . ನಾಗೇಶ್ ಪೈ .
ಲೇಖನದಲ್ಲಿ ಬರೆದಂತೆ , ರಸಗೊಬ್ಬರ ಬೇಡಿಕೆ ಅಚಾನಕ್ಕಾಗಿ ಉದ್ಭವಿಸಿದ್ದಲ್ಲ . ಅದು ಪ್ರತಿ ವರ್ಷದ ಬೇಡಿಕೆ . ರಾಜ್ಯದ ಕೃಷಿ ಭೂಮಿಯ ಪ್ರಮಾಣವೇನೂ ಹೆಚ್ಚುವುದಿಲ್ಲವಲ್ಲ ? ಹೀಗಾಗಿ , ರಸಗೊಬ್ಬರದ ಪ್ರಮಾಣದಲ್ಲಿ ದಿಢೀರ್ ಏರಿಳಿತಗಳಾಗುವುದಿಲ್ಲ . ರಾಜ್ಯಪಾಲರ ಆಡಳಿತದ ಅವಧಿಯಲ್ಲೇ ಬೇಡಿಕೆ ಸಲ್ಲಿಸಬೇಕಿತ್ತು . ಅದನ್ನು ಮಾಡದ್ದು ಸಂಬಂಧಿಸಿದ ಅಧಿಕಾರಿಗಳ ತಪ್ಪು .
ಈ ಕ್ರೌರ್ಯ ಮತ್ತೆ ಕಣ್ಣಿಗೆ ಬಿದ್ದಿದ್ದು ಮೂರು ವರುಷಗಳ ನಂತರ . ಬೆಂದಕಾಳೂರಿನ ಪ್ರಸಿದ್ಧ ಕಂಪನಿಯೊಂದರಲ್ಲಿ ಸಾಫ್ಟೇರು ಅಭಿಯಂತರು ಅಂತ ಆಗಿದ್ದ ನಾನು ಕೇರಳಕ್ಕೆ ಗೆಳತಿಯೊಬ್ಬಳ ಮದುವೆಗೆ ಹೋಗಿದ್ದೆ . ಐಲೆಂಡ್ ಎಕ್ಸ್ ಪ್ರೆಸ್ ರೈಲು ಬಂಡಿಯಲ್ಲಿ ಗಚ್ಚಾಗಿಚ್ಚಿ ಜನ ತುಂಬಿದ್ದರು . ಕರುಣಾ ಬರುವದಾಗಿ ಹೇಳಿ ಕೊನೆಘಳಿಗೆಯಲ್ಲಿ ಕೈಕೊಟ್ಟಿದ್ದಳು . ಅನುಮೋಳು ಬೇಜಾರು ಮಾಡಿಕೊಳ್ಳುವ ಬೆದರಿಕೆ ನಿಜವೆನಿಸುವಂತೆ ಹಾಕಿದ್ದರಿಂದ ನಾನು ಹೋಗಲೇ ಬೇಕಾಗಿ ಹೋದೆ . ಹೊಟ್ಟೆ ಕಿಚ್ಚಿಗೆ ಕ್ಯಾನ್ಸಲ್ ಮಾಡಿರದ ಕರುಣಾಳ ಸೀಟನ್ನು ಯಾರಿಗೂ ಕೊಟ್ಟಿರಲಿಲ್ಲ . ಟ್ರೈನು ಹೊರಟು ಎರಡು ಘಂಟೆಯಾದರೂ ನಿದ್ರೆಯೂ ಬಂದಿರಲಿಲ್ಲ . ಸೆಕೆಂಡ್ ಏಸಿ ಕಂಪಾರ್ಟ್ಮೆಂಟಿನ ಬಿಗುಮಾನದ ವಾತಾವರಣದಲ್ಲಿ ನನ್ನ ಸೈಡು ಲೋಯರ್ ಸೀಟಿನಲ್ಲಿ ಕುಳಿತು ಹೊರ ನೋಡುತ್ತಿದ್ದವಳಿಗೆ ಟೀಸಿ ಬಂದು " ಒಬ್ಬರ್ಯಾರೋ ಒಳ್ಳೆಯ ಜನದ ಹಾಗೆ ಕಾಣುತ್ತಾರೆ . ನಿಮ್ಮ ಮೇಲಿನ ಖಾಲಿ ಸೀಟು ಕೊಡಿ " ಅಂದ . ಹಾಳಾಗಿ ಹೋಗಲಿ ಅಂದು ಕೊಳ್ಳುತ್ತ " ಓಕೆ " ಅಂದೆ . ಗಾಜಿನಿಂದ ಹೊರಗಿಣಿಕುತ್ತಿದ್ದವಳಿಗೆ ಬಂದ ವ್ಯಕ್ತಿ ಥ್ಯಾಂಕ್ಸ ಕೂಡ ಹೇಳದೇ ಮೇಲಿನ ಸೀಟಿನಲ್ಲಿ ಬ್ಯಾಗನ್ನು ಎಸೆದು ಟಾಯ್ಲೆಟ್ಟಿನ ಕಡೆ ಹೋದಾಗ ಆಫರನ್ನು ಹಿಂದೆಗೆದುಕೊಳ್ಳುವ ಅನ್ನಿಸಿತ್ತು . ಆದರೆ ಅದೇ ಹಳೆಯ ಹಾಳಾಗಿ ಹೋಗಲಿ ಅಂತ ಅನ್ನಿಸಿ ಸುಮ್ಮನಾದೆ .
ನನ್ನ ಮಾತನ್ನು ಸತ್ಯಂ ಒಪ್ಪಲೇ ಇಲ್ಲ . ಸರಿ , ಈ ವಿಷಯಕ್ಕೆ ನಮ್ಮ ನಮ್ಮಲ್ಲಿ ಜಗಳವೇ ಶುರುವಾಗಿಹೋಯಿತು . ಆ ವೇಳೆಗೆ ಮಧ್ಯೆ ಪ್ರವೇಶಿಸಿದವರು ಗಾಯಕಿ ಬಿ . ಆರ್ . ಛಾಯಾ . ಅವರು , ' ತಾಯಿಯ ಹೊಣೆ ' ಚಿತ್ರಕ್ಕೆ ಹಾಡಲೆಂದು ಮದ್ರಾಸಿಗೆ ಬಂದಿದ್ದರು . ಅವರು ರಿಹರ್ಸಲ್ ಆರಂಭಿಸುವ ಮೊದಲೇ ನಮ್ಮ ಜಗಳ ಶುರುವಾಗಿತ್ತು . ವಿಷಯ ಏನೆಂದು ತುಂಬ ಬೇಗ ಅರ್ಥಮಾಡಿಕೊಂಡ ಛಾಯಾ - ' ಹನುಮಂತಯ್ಯ ' ಎಂಬ ಪದವನ್ನು ತಾಳಕ್ಕೆ ಸರಿಯಾಗಿ ಹೊಂದಿಸಿ ಕೊಂಡು ಹಾಡಬಹುದು ಎಂದು ತೋರಿಸಿಬಿಟ್ಟರು .
ಸರಬ್‌ಜಿತ್ ಸಿಂಗ್‌ಗೆ ಪಾಕಿಸ್ತಾನವು ಗಲ್ಲು ಶಿಕ್ಷೆ ಖಾಯಂ ಮಾಡಿದೆ . ಆತ ತಪ್ಪಿತಸ್ಥನಲ್ಲವೆಂಬ ಅರಿವಿದ್ದೂ ಪಾಕಿಸ್ತಾನ ಈ ರೀತಿ ರಾಕ್ಷಸಿ ವರ್ತನೆಯ ಪುನರಾವರ್ತನೆ ಮಾಡುತ್ತಿದೆ . ಮುಂಬೈ ಬಾಂಬ್ ದಾಳಿ ವಿಷಯದಲ್ಲಿ ಪಾಕಿಸ್ತಾನಕ್ಕೆ ಎಳ್ಳಷ್ಟೂ ಪಶ್ಚಾತ್ತಾಪವಾಗಿಲ್ಲ .
ಮುಂದೆ ದೇಶದ ಎರಡನೇ ಪ್ರಧಾನಿಯಾಗಿ ತನ್ನ ಸರಳತೆ , ಸಜ್ಜನಿಕೆ , ಪಾರದರ್ಶಕತೆ , ನೈತಿಕತೆಯಿಂದಾಗಿ ಗಮನ ಸೆಳೆದ . ಆಯುಬ್ ಖಾನನ ಪಾಕಿಸ್ತಾನದ ಜುಟ್ಟು ಹಿಡಿದು ಬಗ್ಗಿಸಿದ , ಆ ವಾಮನ ಮೂರ್ತಿಯ ಹೆಸರು ' ಲಾಲ್ ಬಹಾದ್ದೂರ್ ಶಾಸ್ತ್ರೀಜಿ ' .
ಮೊನ್ನೆ ಬ್ಲಾಗ್ ಪ್ರಪಂಚದಲ್ಲಿ ವಾಕಿಂಗ್ ಹೋಗಿದ್ದೆ . ಹೀಗೇ ವಿಜ್ಞಾನದ ಮೇಲೆ ಯಾವ ಯಾವ ಬ್ಲಾಗ್‌ಗಳು ಸಿಗಬಹುದು ಎಂದು ಹುಡುಕಾಟ ನಡೆದಿತ್ತು . ಆಗ ಕಣ್ಣಿಗೆ ಬಿತ್ತು ಒಂದು ಸ್ವಾರಸ್ಯಕರವಾದ ಬ್ಲಾಗ್ . ಭೂಮಿ ಬಿಸಿಯೇರುವುದನ್ನು ( Global Warming ) ತಡೆಯಲು ನಾವು ಏನು ಮಾಡಬಹುದು ಎಂದು ಒಂದು ಲೇಖನ . ಈ ಬಗ್ಗೆ ವೈಯಕ್ತಿಕವಾಗಿ ನಾವು ಮಾಡಬಹುದಾದ ಐವತ್ತು ಸುಲಭ , ನಿತ್ಯಕರ್ಮಗಳನ್ನು ಅಲ್ಲಿ ಬರೆಯಲಾಗಿತ್ತು . ನಿಜ . ಅಲ್ಲಿರುವ ಎಲ್ಲ ಅಂಶಗಳೂ ಅಮೆರಿಕನ್ನರು ಪಾಲಿಸಬೇಕಾದ , ಪಾಲಿಸಬಹುದಾದ ವಿಷಯಗಳು . ಆದರೆ ನಾವೂ ನಮ್ಮ ನಿತ್ಯ ಜೀವನದಲ್ಲಿ ಇಂತಹ ಕೆಲವು ವಿಷಯಗಳನ್ನು ಸ್ವಯಂ ಶಿಸ್ತಿನಿಂದ ಅಳವಡಿಸಿಕೊಂಡರೆ ಸಾರ್ವಜನಿಕ ಬದುಕು ಹಸನಾಗಬಹುದಲ್ಲ ಎನ್ನಿಸಿತು . ಗ್ಲೋಬಲ್ ವಾರ್ಮಿಂಗ್‌ನ ಬಿಸಿ , ಸರಕಾರಕ್ಕೆ ತಾಕಿದಷ್ಟು ಜನಸಾಮಾನ್ಯರನ್ನು ತಾಕುತ್ತಿಲ್ಲ ಎನ್ನೋಣ . ಏಕೆಂದರೆ ಇದರ ಬಗ್ಗೆ ತಿಳುವಳಿಕೆ ಹಾಗೂ ಅದರ ನೇರ ಪರಿಣಾಮಗಳು ತಕ್ಷಣಕ್ಕೆ ಗೋಚರವಾಗುವಂತಹುದಲ್ಲ . ಆದರೆ ಬೆಳಗಿನ ಕಸ ಬಿಸಾಡುವ ಕರ್ಮದ ಬಗ್ಗೆ ಕೆಲವು ಶಿಸ್ತು ಬಳಸಬಹುದು ಎನ್ನಿಸುತ್ತದೆ . ಐವತ್ತು ವಿಷಯಗಳು ನನ್ನ ಮನಸ್ಸಿಗೆ ಬರುತ್ತಿಲ್ಲ . ಕೆಲವನ್ನು ಇಲ್ಲಿ ಸೂಚಿಸುತ್ತಿದ್ದೇನೆ . ನಿಮಗೂ ಏನಾದರೂ ಹೊಳೆದರೆ ಕಮೆಂಟ್ ತಿಳಿಸಿ . ಐವತ್ತೋ , ನೂರೋ , ತಡವಿಲ್ಲದೆ ಅಳವಡಿಸಿಕೊಳ್ಳಬಹುದಾದ ವಿಷಯಗಳನ್ನು ಪಟ್ಟಿ ಮಾಡಬಹುದು . ೧ . ಅನ್ನ , ಮುಸುರೆ ಇತ್ಯಾದಿ ಕಸದ ಜೊತೆಗೆ ಪೇಪರು , ಪ್ಲಾಸ್ಟಿಕ್ ಬೆರೆಸುವುದಿಲ್ಲ . ೨ . ಪ್ಲಾಸ್ಟಿಕ್ ವಸ್ತುಗಳನ್ನು ಬೇರೆಯೇ ಕಸದ ಬುಟ್ಟಿಯಲ್ಲಿ ಹಾಕುತ್ತೇನೆ . ೩ . ಪೇಪರ್ ಕಸವನ್ನು ಪ್ರತ್ಯೇಕವಾಗಿಟ್ಟು , ಆಗಾಗ್ಗೆ ಸುಡುತ್ತೇನೆ . ೪ . ದಿನಪತ್ರಿಕೆಗಳನ್ನು ರದ್ದಿಯವರಿಗೆ ನೀಡುವುದು . ೫ . ಅಂಗಡಿಗೆ ಹೋಗುವ ಮುನ್ನ , ಒಂದು ಬಟ್ಟೆಯ ಚೀಲವನ್ನು ಕೊಂಡೊಯ್ಯುತ್ತೇನೆ . ೬ . ಅಂಗಡಿಯವ ಪ್ಲಾಸ್ಟಿಕ್ ಚೀಲ ನೀಡಲು ಬಂದರೆ ನಿರಾಕರಿಸುತ್ತೇನೆ . ೭ . ಮನೆಯಲ್ಲಿ ಗಿಡ ಬೆಳೆಸಿದ್ದರೆ , ಮುಸುರೆ , ತರಕಾರಿಯ ಸಿಪ್ಪೆ ಇತ್ಯಾದಿ ಜೈವಿಕ ಶಿಥಿಲೀಕರಣಗೊಳ್ಳಬಲ್ಲ ಕಸವನ್ನು ಗೊಬ್ಬರವನ್ನಾಗಿ ಬಳಸುತ್ತೇನೆ . ಮೈಸೂರಿನ ಗೋಕುಲಂ ರಸ್ತೆಯಲ್ಲಿ ಶಿವ ಮೆಡಿಕಲ್ಸ್ ಎನ್ನುವ ಅಂಗಡಿಯಲ್ಲಿ ನಾನು ಓದಿದ ನೋಟೀಸು . " ಪ್ಲಾಸ್ಟಿಕ್ ಚೀಲ ಪರಿಸರಕ್ಕೆ ಹಾನಿಕರ . ದಯವಿಟ್ಟು ಪ್ಲಾಸ್ಟಿಕ್ ಚೀಲವನ್ನು ಕೇಳಬೇಡಿ . " ಅಲ್ಲಿ ನೀವು ಔಷಧಿ ಕೊಂಡರೆ , ಪೇಪರ್ ಕವರಿನಲ್ಲಿ ಹಾಕಿ ಕೊಡುತ್ತಾರೆ . ಇದೇ ಕಾಳಜಿ , ಶಿಸ್ತು ನಾವೆಲ್ಲರೂ ಅಳವಡಿಸಿಕೊಂಡರೆ , ಗಾಳಿ ಬಂದಾಗ ಬೀದಿ ಮೂಲೆಯ ಕಸದ ತೊಟ್ಟಿಯಿಂದ ಹಾರಿ ಬರುವ ಪ್ಲಾಸ್ಟಿಕ್ ಚೀಲ ವಸ್ತುಗಳು ಮನೆಯ ಮುಂದೆ ಚಿತ್ತಾರ ಬಿಡಿಸುವುದು ತಪ್ಪುತ್ತದೆ . ಅವನ್ನು ನುಂಗಿ ದನ , ಕರುಗಳ ಹೊಟ್ಟೆ ಬಿಗಿಯುವುದೂ ನಿಲ್ಲುತ್ತದೆ . ಇದು ನನಗೆ ತಿಳಿದ ಪಟ್ಟಿ . ಇನ್ನೂ ಸೇರಿಸಬಹುದು . ವಿದ್ಯುತ್ ಉಳಿತಾಯ . ಹಣದ ಉಳಿತಾಯ . ಸಲಹೆಗಳಿಗೆ ಕೊರತೆ ಇರದು . ಆದರೆ ನಾವು ಅಳವಡಿಸಿಕೊಳ್ಳಬಹುದಾದ ಪ್ರಾಕ್ಟಿಕಲ್ ಉಪಾಯಗಳನ್ನು ದಯವಿಟ್ಟು ತಿಳಿಸಿ .
ಬರ್ಲೆ ಕಾರ್ಯಕ್ರಮದ ನಂತರ ಪ್ರೀಸ್ಲಿಯ ಬೇಡಿಕೆ ಹೆಚ್ಚಾಗಿ , ನ್ಯೂಯಾರ್ಕ್ ನಲ್ಲಿ ರೆಕಾರ್ಡ್ ಮಾಡಲ್ಪಟ್ಟ ಕಾರ್ಯಕ್ರಮವೊಂದನ್ನು NBCಯ ಸ್ಟೀವ್ ಸುಲೀವಾನ್ ಷೋ ದಲ್ಲಿಜುಲೈ ಒಂದರಂದು ಪ್ರಸಾರ ಮಾಡಿತು . ರಾಕ್ ಎಂಡ್ ರೋಲ್ ನ ಅಭಿಮಾನಿಯೇನಲ್ಲದ ಅಲನ್ ಎಲ್ವಿಸ್ ನನ್ನು ಬೋಟೈ ಮತ್ತು ಕಪ್ಪು ಟೈಲ್ ಕೋಟ್ ಧಾರಿಯಾಗಿ ಪರಿಚಯಿಸಿದನು . ಟಾಪ್ ಹ್ಯಾಟ್ ಮತ್ತು ಬೋ ಟೈ ಧರಿಸಿದ ಪ್ರೀಸ್ಲಿಯು ಬ್ಯಾಸೆಟ್ ಹೌಂಡ್ ಗಾಗಿ ಹೌಂಡ್ ಡಾಗ್ ಅನ್ನು ಒಂದು ನಿಮಿಷಕ್ಕೂ ಕಡಿಮೆ ಕಾಲ ಹಾಡಿದನು . ಟೆಲಿವಿಷನ್ ಇತಿಹಾಸಜ್ಞ ಜೇಕ್ ಆಸ್ಟಿನ್ ಪ್ರಕಾರ " ಪ್ರೀಸ್ಲಿಯು ಅನರ್ಹನೂ , ವಿಚಿತ್ರಲಕ್ಷಣದವನೂ ಎಂದು ಅಲನ್ ತಿಳಿದಿದ್ದನು . . . ಪ್ರೀಸ್ಲಿಯು ತನ್ನ ಕಿರಿಕಿರಿಯನ್ನು ತೋರಿಸುವಂತೆ ಪರಿಸ್ಥಿತಿಯನ್ನು ನಿರ್ಮಿಸಿದನು " [ ೮೭ ] ಅಲನ್ ನಂತರ ಪ್ರೀಸ್ಲಿಯ " ವಿಚಿತ್ರ , ಸಣಕಲ , ಹಳ್ಳಿಹುಡುಗನ ಸೆಳೆತ , ಇಂತಹುದೆಂದು ನಿರ್ದಿಷ್ಟವಾಗಿ ಹೇಳಲಾಗದ ಚೆಲುವು , ಮತ್ತು ಅವನ ಆಕರ್ಷಕ ಗುಣವೈಚಿತ್ರ್ಯಗಳು ಕುತೂಹಲಕಾರಿಯಾಗಿದ್ದವು " ಮತ್ತು ಅವನನ್ನು ಆ ಕಾರ್ಯಕ್ರಮದ ' ಕಾಮೆಡಿ ಹೆಣೆಯುವಿಕೆ ' ಗಾಗಿ ಉಪಯೋಗಿಸಿದ್ದೆನೆಂದು ಬರೆದರು . [ ೮೮ ] ಪ್ರೀಸ್ಲು ಈ ಅಲನ್ ಷೋ ತನ್ನ ಜೀವನದ ಅತಿ ಹಾಸ್ಯಾಸ್ಪದವಾದ ಪ್ರದರ್ಶನವೆಂದು ನಂತರದ ದಿನಗಳಲ್ಲಿ ನೆನೆಸಿಕೊಳ್ಳುತ್ತಿದ್ದನು . [ ೮೯ ] ಆಂದು ರಾತ್ರಿ ಅವನು ಹೈ ಗಾರ್ಡ್ ನರ್ ಕಾಲಿಂಗ್ ಎಂಬ ಜನಪ್ರಿಯ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿದನು . ಅವನ ಬಗ್ಗೆ ನಡೆಯುತ್ತಿದ್ದ ಟೀಕೆಗಳಿಂದ ಅವನೇನಾದರೂ ಕಲಿತನೆ ಎಂದು ಕೇಳಿದುದಕ್ಕೆ " ಇಲ್ಲ , ಏಕೆಂದರೆ ನಾನು ಯಾವುದೇ ತಪ್ಪನ್ನು ಮಾಡುತ್ತಿರುವೆನೆಂದು ಅನ್ನಿಸುತ್ತಿಲ್ಲ . . . ನನ್ನದು ಬರಿದೇ ಸಂಗೀತವಾಗಿರುವಾಗ ಜನರ ಮೇಲೆ ದುಷ್ಪರಿಣಾಮ ಬೀರುವುದೆಂದು ನನಗನ್ನಿಸುವುದಿಲ್ಲ . . . ರಾಕ್ ಎಂಡ್ ರೋಲ್ ಸಂಗೀತವು ಯಾರೇ ಆಗಲಿ ಅವರ ಅಪ್ಪ ಅಮ್ಮಂದಿರ ವಿರುದ್ಧ ತಿಉರಗಿಬೀಳಲು ಹೇಗೆ ಪ್ರೇರಕವಾದೀತು " ಎಂದರು . [ ೮೪ ]
೧೯೫೨ , ಜೂನ್ ೧೫ರೊಂದು ಕೊಲಂಬಿಯಾ ವಿಶ್ವವಿದ್ಯಾನಿಲಯವು ಅವರಿಗೆ ಕಾನೂನಿನ ಡಾಕ್ಟರೇಟ್ ( ಎಲ್‌ಎಲ್ . ಡಿ ) ಗೌರವ ಪದವಿ ಪ್ರದಾನ ಮಾಡಿತು . ೧೯೫೩ , ಜನವರಿ ೧೨ರೊಂದು ಉಸ್ಮಾನಿಯಾ ವಿಶ್ವವಿದ್ಯಾನಿಲಯವು ಅವರಿಗೆ ಎಲ್‌ಎಲ್ . ಡಿ ಗೌರವ ಪದವಿ ಕೊಟ್ಟು ಪುರಸ್ಕರಿಸಿತು .
ಏನೋ ಒಂಥರಾ , ಏನೋ ಒನ್ - ಥರಾ , ಈ ಪ್ರೀತಿಯು , ಈ ರೀತಿಯು , ಶುರುವಾದ ಆನಂತರ .
ಈ ಅಂಶಗಳನ್ನು ಕಾಂಗ್ರೆಸ್ ಹೈ ಕಮಾಂಡ್ ಸ್ವಲ್ಪ ಮೊದಲೇ ಅರಿತಿತ್ತು ಎಂಬಂತೆ ಕಾಣಿಸುತ್ತದೆ . ಎಸ್ ಎಂ ಕೃಷ್ಣ ಅವರನ್ನು ರಾಜ್ಯಪಾಲರ ಪದವಿಯಿಂದ ತೆರವುಗೊಳಿಸಿ ಸಕ್ರಿಯ ರಾಜಕಾರಣಕ್ಕೆ ಮರಳಲು ಸೂಚಿಸಿದ್ದೂ ಇದೇ ಕಾರಣಕ್ಕಾಗಿ . ಕೃಷ್ಣ ಸಕ್ರಿಯ ರಾಜಕಾರಣಕ್ಕೆ ಬರುತ್ತಾರೆಂಬುದು ಸ್ಪಷ್ಟವಾದಾಗಲೇ ಮೇ ತಿಂಗಳಿನಲ್ಲಿ ಚುನಾವಣೆ ನಡೆಯುವುದೂ ಖಚಿತವಾಗಿತ್ತು .
ಮಾವನ ಜೊತೆ ಬೆಂಗಳೂರಿನ ಸಣ್ಣ ಮನೆಯಲ್ಲಿ ವಾಸ . ಆಗ ಮಾವನಿಗೆ ಮದುವೆಯಾಗಿರಲಿಲ್ಲ . ಬಂದ ಒಂದು ವಾರ ಫುಲ್ ಖುಷಿ . ಏಲ್ಲಿ ನೋಡಿದರಲ್ಲಿ ಕಾರುಗಳು , ಚಿತ್ರವಿಚಿತ್ರ ಜನಗಳು , ಭಾಷೆ , ಸಂಸ್ಕೃತಿ . . ಒಂದೇ . . ಎರಡೇ . . . . ಆಮೇಲೆ ಮನೆ ಕಡೆ ನೆನಪು ಕಾಡೋಕೆ ಶುರುವಾಯ್ತು . ಓದೋದು ಬೇಡ ಏನೂ ಬೇಡ ಅಂತ ಅನಿಸೋಕೆ ಶುರುವಾಯ್ತು . ಊರಿಗೆ ಹೋದ್ರೆ ಏಲ್ಲ ನಗಾಡ್ತಾರೆ ಅಂತ ಭಯ ನನ್ನನ್ನು ಮನೆಗೆ ಹೋಗೋದನ್ನ ತಡೆಯುತ್ತಿತ್ತು . ಹಾಗಾದ್ರೆ ಏನ್ ಮಾಡೋದು , ನಾನ್ಯಾಕೆ ಓದಬೇಕು , ಮನೆಗೆ ಹೋದ್ರೆ ಏನಾಗತ್ತೆ ಅಂತ ನನ್ನಲ್ಲೆ ದ್ವಂದ್ವ ಶುರುವಾಯ್ತು . ಹೇಳೋಣ ಅಂದ್ರೆ ಯಾರು ಇರ್ಲಿಲ್ಲ . ಯಾರಲ್ಲೂ ಹೇಳೋಕಾಗದೆ ಸುಮ್ನೆ ಕಿಟಕಿಯಿಂದ ಹೊರಗೆ ನೋಡ್ತಾಯಿದ್ದೆ . ಸ್ಕೂಲಿನಲ್ಲಿ ಯಾರ ಹತ್ರನೂ ಈ ವಿಷಯದ ಬಗ್ಗೆ ಜಾಸ್ತಿ ಮಾತಾಡ್ತಯಿರಲಿಲ್ಲ . ಕೊನೆಗೆ ಬೆಂಗಳೂರಿನಲ್ಲಿ ಸಾದ್ಯವಾದಷ್ಟು ದಿನ ಇರೋದು ಅಂತ ಸುಮ್ಮನಾದೆ .
ಮತ್ತು ಆ ಶಾಸನಗಳಲ್ಲಿ ಸ್ವತಃ ಅಶೋಕನೇ ಹೇಳಿಕೊಂಡಿರುವಂತೆ - ಹೆಚ್ಚು ಶ್ರಮವಹಿಸಿ ಅವನು ತನ್ನನ್ನು ತಾನೇ ಧರ್ಮಸುಧಾರಣೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದರಿಂದ - ಜಂಬೂ ದ್ವೀಪದ ಯಾವ ಜನ ಬೌದ್ಧಧರ್ಮದೊಡನೆ ಬೆರೆಯಲಾಗಿರಲಿಲ್ಲವೋ ಅವರೆಲ್ಲಾ ಬೆರೆಯಲು ಸಾಧ್ಯವಾಯಿತೆಂದೂ - ಈ ಧಾರ್ಮಿಕ ಸತ್ಫಲಗಳನ್ನು ಕೇವಲ ಉತ್ತಮ ಸ್ಥಿತಿಯಲ್ಲಿರುವವರೇ ಅಲ್ಲ ಕೆಳಸ್ಥಿತಿಯಲ್ಲಿರುವವರೂ ಪಡೆಯುವಂತಾ ಯಿತೆಂದೂ ಆಶಾದಾಯಕವಾಗಿ ಆ ಅಶೋಕನು ಆಡಿರುವ ಆ ಮಾತಿನಲ್ಲಿ - ಕರ್ನಾಟಕದ ಅಸಂಖ್ಯಾತ ದಲಿತ ವರ್ಗದ ಜನರೂ ಬೌದ್ಧರಾಗಿದ್ದರೆಂಬುದನ್ನು ಸೂಚಿಸುತ್ತದೆ .
ಅದ್ಯಾವ ಕಾರಣಕ್ಕೆ ನಾನು " ನಿಮ್ಮವ " ಎನ್ನುವ ಅಕೌಂಟನ್ನು ೧೯೯೯ರಲ್ಲಿ ತೆರೆದೆನೋ ಗೊತ್ತಿಲ್ಲ , ಇಂಗ್ಲೀಷ್‌ನಲ್ಲಿ Yours ಎಂದು ಬರೆಯೋ ಹಾಗೆ ನಾನು ' ನಿಮ್ಮವ ' ಎಂದು ಬರೆದು ನಿಮ್ಮಿಂದ ಮರೆಯಲ್ಲಿರೋಣ ಎಂದು ಆಲೋಚಿಸಿದ್ದೆ . ಆದರೆ , ನನ್ನ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸುವವರು ' ನಿಮ್ಮವ ' ನನ್ನು " ನಿಮ್ಮವ , ನಿಮ್ಮವನೇ , ನಿಮ್ಮವರೇ , ನಮ್ಮವ , ನಮ್ಮವರೇ , ನಮ್ಮವನೇ . . . " ಇತ್ಯಾದಿ ಸಂಬೋಧನೆಗಳನ್ನು ಉಪಯೋಗಿಸಿ ಕೊಸರಾಡುತ್ತಿದ್ದುದನ್ನು ನೋಡಿ , ಹಾಗೂ " ನಿಮ್ಮವ " ಯಾರವನೂ ಆಗಬೇಕಾದುದಿಲ್ಲ ಎಂಬ ಇಂಗಿತವನ್ನು ಹಲವರು ವ್ಯಕ್ತಪಡಿಸಿದ್ದರಿಂದ " ನಿಮ್ಮವ " ನನ್ನು " ಅಂತರಂಗಿ " ಯಾಗಿ ಬದಲಾಯಿಸಿಕೊಳ್ಳಬೇಕಾಯಿತು . ಎಲ್ಲರೂ ಬ್ಲಾಗುಗಳನ್ನು ತೆರೆದುಕೊಂಡು ಕನ್ನಡ ಜಾಲ ಪ್ರಪಂಚವೆಂಬ ಸಣ್ಣ ಹಳ್ಳಿಯಲ್ಲಿ ತಮ್ಮ - ತಮ್ಮ ಮನೆಗಳನ್ನು ಸ್ಥಾಪಿಸಿಕೊಳ್ಳುತ್ತಿರುವುದನ್ನು ( ಒಂದು ರೀತಿ ಬೆಂಗಳೂರಿನಲ್ಲಿ ನಿವೇಶನವನ್ನು ಖರೀದಿಸಿ ಮನೆ ಕಟ್ಟಿದ ಹಾಗೆ ) ಆವಾಗಾವಾಗ ಮೇಲಿಂದ ಮೇಲೆ ನೋಡುತ್ತಿದ್ದೆನಾದರೂ , ಬ್ಲಾಗು ನನಗಲ್ಲ ಎಂದು ನಿರ್ಲಿಪ್ತತೆಯಿಂದ ಇದ್ದವನಿಗೆ , ನವೆಂಬರ್ ೨೨ರಂದು ಅದು ಏನಾಯಿತೋ ಗೊತ್ತಿಲ್ಲ - ಬ್ಲಾಗ್‌ಪೋಸ್ಟ್‌ನಲ್ಲಿ " ನಿಮ್ಮಾಂತರಂಗ " ಎಂದು ನಾನೂ ಒಂದು ಅಕೌಂಟನ್ನು ಸೃಷ್ಟಿಸಿ , ಒಂದು ಸಾಲನ್ನೂ ಬರೆದು ಬಿಸಾಡಿದೆ - ಆಗ ತುಂಗಾಳ ನೀರನ್ನು ಇನ್ನೂ ಕುಡಿದಿರಲಿಲ್ಲ , ಮಲ್ಲಿಗೆ , ಕೇದಗೆ , ಸಂಪಿಗೆಗಳ ಪರಿಮಳದ ಆಸ್ವಾದನೆಯೂ ಇರಲಿಲ್ಲ . ಚಿಕ್ಕದಾಗಿ , ಚೊಕ್ಕದಾಗಿ ' ನಿಮ್ಮಾಂತರಂಗಕ್ಕೆ ಸ್ವಾಗತ - ನಿಮ್ಮ ಬಹಿರಂಗವನ್ನೂ ತನ್ನಿ ! ' ಎಂದು ಕಂಗ್ಲೀಷಿನಲ್ಲೇ ಬರೆದು ಪ್ರಕಟಿಸಿದ್ದೆ . ಅನಂತರ ಧೀರ್ಘ ನಿದ್ರೆಗೆ ಶರಣುಹೋದ ನಾನು ಎಚ್ಚೆತ್ತಿದ್ದು ನನ್ನ ಸಹೋದ್ಯೋಗಿ , ಮಿತ್ರ ಹಾಗೂ ನಾನು ಓದಿದ ಕಾಲೇಜಿನವನೇ ಆದ . . ಶ ಚುಚ್ಚಿದ ಮೇಲೆಯೇ ! ಅವನು ಯಾವುದೋ ಒಂದು ಬ್ಲಾಗನ್ನು ಇನ್ಸ್ಟಂಟ್ ಮೆಸ್ಸೇಜಿನ ಮೂಲಕ ಕಳಿಸಿ , ಇದನ್ನು ನೋಡು ಎಂದ , ನಾನು ಅದಕ್ಕುತ್ತರವಾಗಿ ನನ್ನದೂ ಒಂದು ಬ್ಲಾಗು ಅಕೌಂಟಿದೆ ನೋಡು ಎಂದು ಕೊಂಡಿ ಕಳಿಸಿದೆ - ಅದರಲ್ಲಿ ಒಂದು ಸಾಲನ್ನು ಬಿಟ್ಟು ಬೇರೇನೂ ಇರಲಿಲ್ಲವೆಂದು ಮೊದಲೇ ಹೇಳಿದ್ದೇನೆ - ಅದನ್ನು ನೋಡಿದ ಈ ಮಿತ್ರ , ತಕ್ಷಣ ಬರೆದ - ' ಏನಯ್ಯಾ , ಒಂದು ಟೆಂಪ್ಲೇಟ್ ಓಪನ್ ಮಾಡಿಟ್ಟುಕೊಂಡು , ದೊಡ್ಡದಾಗಿ ಬ್ಲಾಗು ಅಂತ ಕಳಿಸಿದ್ದೀಯಾ ! ' , ಇಂತಹ ಮಾತುಗಳು ನಿಜವಾಗಲೂ ನನ್ನನ್ನು ಚುಚ್ಚುತ್ತವೆ ಎಂದು ಅವನಿಗೂ ಗೊತ್ತಿರಬೇಕು - ಅದಕ್ಕುತ್ತರವಾಗಿ ನಾನು ಬರೆದೆ ' ಆಗಾಗ್ಗೆ ನೋಡ್ತಾ ಇರು , ಮುಂದೆ ಬರೀತೀನಿ ! ' . ನನ್ನ ಮೇಲಿನ ಮಾತಿನಲ್ಲಿ ನಂಬಿಕೆ ಇರದಿದ್ದುದರಿಂದಲೋ ಏನೋ ಅವನು ಮುಂದೆ ಮತ್ತೊಮ್ಮೆ ನಾನು ಹೇಳುವವರೆಗೆ ನನ್ನ so called ಬ್ಲಾಗನ್ನು ನೋಡುವ ಗೋಜಿಗೇ ಹೋಗಲಿಲ್ಲ ! ಮಾರ್ಚ್ ೧೬ ರಿಂದ ಯಾವಾಗ ಎಷ್ಟು ಸಾಧ್ಯವೋ ಅಷ್ಟನ್ನು ಬರೆದು , ಹೀಗೇ ಏಪ್ರಿಲ್‌ನ ಮಧ್ಯದಲ್ಲಿ ಮತ್ತೆ ಅವನಿಗೆ ಮೆಸ್ಸೇಜ್ ಕಳಿಸಿದೆ - ನನ್ನ ಬ್ಲಾಗನ್ನು ಪುರುಸೊತ್ತು ಇದ್ದಾಗ ನೋಡು ಎಂದು . ಅವನಿಗೆ ಆಶ್ಚರ್ಯವಾಗುವಂತೆ ಎಂಟೊಂಭತ್ತು ಪೋಸ್ಟ್‌ಗಳು ಆಗಲೇ ಪೋಣಿಸಲ್ಪಟ್ಟಿದ್ದವು , ಹಾಗೂ ಪ್ರೊಫ಼ೈಲೂ ಕೂಡ ಅಪ್‌ಡೇಟ್ ಆಗಿತ್ತು . ಅವನು ' ಹೇ , ನಾನು ತಮಾಷೆಗೆ ಹೇಳಿದ್ದನ್ನ ಸೀರಿಯಸ್ಸಾಗೇ ತೆಗೆದುಕೊಂಡು ಚೆನ್ನಾಗೇ ಬರೆದಿದ್ದೀಯಲ್ಲಯ್ಯಾ ! ' ಎಂದ . . . ನಾನು ' ಸುಮ್ನೇ ಚೆನ್ನಾಗಿದೆ ಅಂತ ಹೇಳಬೇಡವೋ . . . ' ಎಂದೆ , ಅವನು ' ಇಲ್ಲಾ , ಸೀರಿಯಸ್ಸಾಗಿ , ಚೆನ್ನಾಗಿದೆ , ನಾನು ಸುಮ್ ಸುಮ್ನೇ ಚೆನ್ನಾಗಿದೆ ಅಂತ ಹೇಳೋಲ್ಲ ' ಎಂದು ಸರ್ಟಿಫಿಕೇಟ್ ಕೊಟ್ಟ . ಆಗಲೇ ನನಗೆ ಸ್ವಲ್ಪ ಧೈರ್ಯ ಬಂದಿದ್ದು . ಈ ಬ್ಲಾಗನ್ನು ಬರೆಯುವಂತೆ ಚುಚ್ಚಿದವನೇ ' ನಿಮ್ಮಾಂತರಂಗ ' ಅನ್ನೋ ಹೆಸರು ಸರಿ ಇಲ್ಲ , ಅದರ ಬದಲಿಗೆ ಬೇರೆ ಏನಾದ್ರೂ ಸಿಕ್ರೆ ನೋಡು ' ಎಂದ , ನಾನು ' ಅಂತರಂಗ ' ಎಂದು ಇಟ್ಟೆ - thank goodness , it was available ! ಹೀಗೆ ' ನಿಮ್ಮಾಂತರಂಗ ' ಇದ್ದದ್ದು ' ಅಂತರಂಗ ' ವಾಯ್ತು , ಅದರ ಬೆನ್ನಿಗೇ ' ನಿಮ್ಮವ ' ನನ್ನೂ ' ಅಂತರಂಗಿ ' ಎಂದು ಬದಲಾಯಿಸುವಂತಾಯ್ತು . " ಅಂತರಂಗಿ " ಯ ಜೊತೆಗೆ ಸ್ಪರ್ಧೆಗೆ ನಿಂತ ಇತರ ಹೆಸರುಗಳಲ್ಲಿ " ಅಪರಂಜಿ , ಜೀವನಪ್ರೇಮಿ , ಅಭ್ಯಾಗತ , ಕಲರವಿ , ಮಲೆನಾಡಿಗ , ಪಯಣಿಗ , ವಿಕಟಕವಿ " , ಎನ್ನುವ ಒಳ್ಳೆಯ ಹೆಸರುಗಳೂ , " ಅಳುಮುಂಜಿ , ಕೊರಕ , ಕೋಡಂಗಿ , ಅಲ್ಪಜ್ಞ , ಅಂತರ್ಮುಖಿ " ಮುಂತಾದ not so ಒಳ್ಳೆಯ ಹೆಸರುಗಳನ್ನೂ ಪರಿಗಣನೆಗೆ ತಂದುಕೊಂಡರೂ ಕೊನೆಯಲ್ಲಿ " ಅಂತರಂಗಿ " ಗೆ ವಿಜಯವಾಯಿತು . ನೀವೂ ಬ್ಲಾಗಿನಾಟದಲ್ಲಿ ಭಾಗಿಗಳೇ ? ಅಂದ್ರೆ ನಿಮಗೂ ಒಂದು ಬ್ಲಾಗೂ ಅಂಥ ಇದೆಯೇ ? ಇಲ್ಲವಾದರೆ ಮತ್ತೇಕೆ ತಡ , ನೀವು ಒಂದನ್ನು ಏಕೆ ಶುರುಮಾಡಬಾರದು ? ನೀವು ಶುರು ಮಾಡಿ ಇನ್ನೂ ಹೆಚ್ಚು ಬರೆಯದಿದ್ದರೆ ನನಗೆ ತಿಳಿಸಿ , ನನಗೆ ಚುಚ್ಚಿದವನನ್ನು ನಿಮ್ಮ ಹಿಂದೆ ಬಿಡುತ್ತೇನೆ , ಆಗ ನೋಡಿ ಏನಾಗುತ್ತೇ ಅಂತ ! ಕೊನೆಯಲ್ಲಿ , ಏಕೆ ಹೀಗೆ " ಅಂತರಂಗಿ " ಯಾಗಿ ಅಡಗಿಕೊಳ್ಳಬೇಕು ಎಂದು ಹಲವಾರು ಬಾರಿ ಅನ್ನಿಸಿದೆ , ಆದರೂ ಇಲ್ಲಿ ನಾನೇನೋ ಬರೆದು ಕೊನೆಗೆ ಜನಗಳು ಎದಿರು ಸಿಕ್ಕರೆ ಕಲ್ಲು ಹೊಡೆಯಬಾರದು ನೋಡಿ , ಅದರಿಂದ ತಪ್ಪಿಸಿಕೊಳ್ಳೋಣವೆಂದು ಈ ಮರೆ ಅಷ್ಟೇ ! ಅಲ್ಲದೇ ಹೀಗೆ ಮರೆಯಲ್ಲಿರೋದರಿಂದ ' ಕ್ಯಾಂಡಿಡ್ ' ಆಗಿ ಇರೋ ವಿಷಯವನ್ನು ಇದ್ದಹಾಗೇ ಬರೆಯಬೇಕು ಎನ್ನಿಸಿದರೂ , ಈ ವರೆಗಿನ ಅನಿಸಿಕೆಗಳ ವಿನಿಮಯದ ಮೂಲಕ ಈ ವರ್ಚುವಲ್ ಪ್ರಪ್ರಂಚದಲ್ಲೇ ಒಂದು ರೀತಿ ಅವಿನಾಭಾವ ಸಂಬಂಧಗಳು ಹುಟ್ಟಿಕೊಳ್ಳೋದರಿಂದ ಒಂದು ಕಡೇ ಸ್ವಾರಸ್ಯಕರವಾಗಿ ಬರೆಯುವುದಕ್ಕೆ ಉತ್ತೇಜನ ಸಿಕ್ಕುವುದೂ , ನನ್ನ ವಿಷಯಗಳಿಗೆ ಹೊರಗಿನವರ ಅಭಿಪ್ರಾಯ ದೊರೆಯುವುದೂ ಅಲ್ಲದೇ , ಮತ್ತೊಂದು ಕಡೇ ಅವೇ ಸಂಬಂಧಗಳು ಬರೆಯುವ ಮುನ್ನ , ಬರೆಯುವಾಗ ವಿಷಯಗಳ ಮೌಲ್ಯಮಾಪಕರಂತೆ ಮನದಲ್ಲಿ ಮೂಡಿ ಬರುವುದು ಒಳ್ಳೆಯದೂ ಹೌದು , ಕೆಟ್ಟದ್ದೂ ಹೌದು . ಆದರೆ ಹೀಗೆ ಬರೆಯುತ್ತಿರುವುದೂ , ಅವುಗಳಿಗೆ ಸ್ವೀಕರಿಸಿದ ಓದುಗರ ಸಂವೇದನೆಗಳೂ ನನಗಂತೂ ಬಹಳ ಒಳ್ಳೆಯದನ್ನೇ ಮಾಡಿವೆ - ಬರೆಯುವ ಪ್ರಕ್ರಿಯೆ ಮನಸ್ಸನ್ನು ಹಗರ ಮಾಡಿದರೆ , ನಂತರದ ಅನಿಸಿಕೆ - ಪ್ರತಿಕ್ರಿಯೆಗಳು ಒಂದು ರೀತಿಯ ಮುದವನ್ನು ನೀಡುತ್ತವೆ - ಆದರೆ , ನನಗೆ ಬರಿ ಎನ್ನುವವರೂ ಯಾರೂ ಇಲ್ಲ , ಅವರಿಗೆ ಓದಿ , ಓದಿ ಪ್ರತಿಕ್ರಿಯಿಸಿ ಎನ್ನುವವರೂ ಯಾರಿಲ್ಲ - ಎಲ್ಲವೂ ಯಾವುದೋ ಒಂದು ' ಇದ್ದರೂ ಇರದ ' ಸಂಬಂಧದ ಪ್ರತೀಕವಾಗಿ ನಡೆದುಹೋಗುತ್ತಿದೆ . ಮೊನ್ನೆ ' ಸಂಜಯ ' ರನ್ನು ಭೇಟಿಯಾದಾಗ ಅವರು ಹೇಳಿದ್ದರು - ' ಮಜಾವಾಣಿಗೆ ಪ್ರತಿದಿನವೂ ( ಪ್ರಪಂಚದ ಯಾವ್ಯಾವುದೋ ಮೂಲೆಗಳಿಂದ ) ಕೊನೇಪಕ್ಷ ಒಂದು ನೂರು ಜನರಾದರೂ ಭೇಟಿಕೊಡುತ್ತಾರೆ ' ಎಂದು , ಹಾಗಿದ್ದ ಮೇಲೆ ಓದುಗರನ್ನು ನಿರಾಸೆಗೊಳಿಸಲು ಯಾರಿಗೆ ತಾನೇ ಮನಸ್ಸು ಬರುತ್ತದೆ ನೀವೇ ಹೇಳಿ . * * * ಆದರೆ ಒಂದಂತೂ ಸತ್ಯ , ಇಲ್ಲಿ ಒಂದು ಸಾಲು ಬರೆಯಬೇಕಾದರೆ ಕೊನೇಪಕ್ಷ ಹತ್ತು ಸಾಲನ್ನಾದರೂ ಓದಬೇಕು ( ಕಟ್ಟಿಕೊಂಡ ಬುತ್ತಿ ಎಷ್ಟು ಹೊತ್ತು ಬಂದೀತು ? ) , ಅದರಿಂದ ನನಗೂ ಸುಖ , ಎಲ್ಲರಿಗೂ ಸುಖ !
ಮೊನ್ನೆ ತಾನೇ ಮನೆಗೆ ಹೋಗಿದ್ದೆ . ಬಸ್ಸಿಂದ ಸಂಕದ ಬಳಿ ಇಳಿದಿದ್ದೇ ಜೋರು ಮಳೆ . ಲಗ್ಗೇಜು , ಬಟ್ಟೆ , ನಾನು ಎಲ್ಲ ಒದ್ದೆ ಮುದ್ದೆ . ಹಾಗೇ ಮನೆಯತ್ತ ಕಾಲು ಹಾಕಿದೆ . ಅದು ಗುಡ್ಡದ ದಾರಿ . ಮಳೆ ಬಂತೆಂದರೆ , ಭೂಮಿಯೊಳಗೆ ಒರತೆಯೆದ್ದು , ನೆಲ ಒದ್ದೆಯಾಗಿರುತ್ತದೆ . ಅಷ್ಟೇ ಅಲ್ಲ , ಅದರ ಮೇಲೆ ಕಾಲಿಟ್ಟರೆ , ಕಾಲು ಹೂತುಹೋಗುತ್ತದೆ . ಮತ್ತೆ ಕಷ್ಟದಿಂದ ಕಾಲನ್ನು ಹೊರತೆಗೆದರೆ , ಚಪ್ಪಲಿ ಮಾಯ . . ಅದ್ಯಾವುದೋ ಮಾಯದಲ್ಲಿ ಅದು ನೆಲದೊಳಕ್ಕೇ ಇಳಿದಿರುತ್ತದೆ . ದಿನವಿಡೀ ಮಣ್ಣೊಳಗೆ ಕೈ ಹಾಕಿದರೂ ಚಪ್ಪಲಿ ಸಿಗುವುದಿಲ್ಲ . ಶಾಲೆಗೆ ಹೋಗುತ್ತಿದ್ದಾಗ , ನಮ್ಮ ಅದೆಷ್ಟೋ ಚಪ್ಪಲಿಗಳು ಇಲ್ಲಿ ಕಳೆದುಹೋಗಿದ್ದವು . ಅದಕ್ಕೇ ಮಳೆಗಾಲ ಮುಗಿಯುವವರೆಗೆ ಅಪ್ಪ ಚಪ್ಪಲಿ ತೆಗೆದುಕೊಡುತ್ತಿರಲಿಲ್ಲ . ಹೀಗೆ ಗಟ್ಟಿನೆಲದ ಮೇಲೇ ಕಾಲಿಡುತ್ತಾ , ಕಲ್ಲಿಂದ ಕಲ್ಲಿಗೆ ಹಾರುತ್ತಾ ಮುಂದೆ ಹೋದರೆ ಅಲ್ಲಿ ತೋಡೊಂದು ( ಹಳ್ಳ ) ಕೆಂಪು ನೀರಿಂದ ತುಂಬಿ ಹರಿಯುತ್ತಿತ್ತು . ಅಲ್ಲಿಯವರೆಗೆ ಹೇಗೋ ಸರ್ಕಸ್ ಮಾಡಿ ಚಪ್ಪಲಿ ಒದ್ದೆಯಾಗದಂತೆ ನಡೆದದ್ದೇ ಬಂತು . ಸರಿ , ಆದದ್ದಾಗಲಿ , ಅಂತ ಚಪ್ಪಲಿಯನ್ನು ಕೈಯಲ್ಲಿ ಹಿಡಿದುಕೊಂಡು ತೋಡುದಾಟಿದೆ . ಮುಂದೆ ಕಾಡುದಾರಿ . ಹಿಂದೆ , ಅಲ್ಲಿ ದಟ್ಟ ಕಾಡಿತ್ತು . ಈಗ ಅದು ರಬ್ಬರ್‌ಕಾಡಾಗಿ ಬದಲಾಗಿದೆ . ದೂರದ ಕೇರಳದಿಂದ ಬಂದ ಕೊಚ್ಚಿ ಕ್ರಿಶ್ಚಿಯನ್ನರು ಇಲ್ಲಿ ಖಾಲಿ ಜಾಗವನ್ನು ಕೊಂಡು ಅಲ್ಲಿ ರಬ್ಬರ್ ಹಾಕುವ ದಂಧೆ ಮಾಡುತ್ತಿದ್ದಾರೆ . ಇದು ಸತತ ಹತ್ತು ಹದಿನೈದು ವರ್ಷಗಳಿಂದ ನಮ್ಮೂರಲ್ಲಿ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ . ದುಪ್ಪಟ್ಟು ಹಣಕೊಟ್ಟು ಆಸ್ತಿ ಖರೀದಿಸುವ ಕಾರಣ ಊರವರಾರೂ ಈ ಬಗ್ಗೆ ಚಕಾರವೆತ್ತಯವುದಿಲ್ಲ . ನಮ್ಮೂರಲ್ಲಿ ನಿಧಾನವಾಗಿ ಭತ್ತದ ಗದ್ದೆಗಳು ಮಾಯವಾಗುತ್ತಿವೆ . ಅಲ್ಲೆಲ್ಲ ಅಡಿಕೆ ಗಿಡಗಳು ತಲೆಯೆತ್ತಿವೆ . ಕಾಡಿದ್ದ ಜಾಗವನ್ನೆಲ್ಲ ರಬ್ಬರ್ ಆಕ್ರಮಿಸಿದೆ . ಹಾಗೇ ಮುಂದೆನಡೆದೆ . . ಅಲ್ಲಿ ಮತ್ತೊಂದು ತೋಡು . ಅವನು ಮೊದಲ ಬಾರಿ ನನ್ನ ಮನೆಗೆ ಬಂದಾಗ ಈ ಹಳ್ಳ ನೋಡಿ , ' ಏಳು ಸಮುದ್ರ ದಾಟಿ ರಾಜಕುಮಾರಿಯನ್ನು ನೋಡಲು ಬಂದ ಹಾಗಾಯಿತು ' ಅಂದಿದ್ದ . ಗೇಟಿನ ಹತ್ತಿರ ಬಂದಾಗ ಡಿಂಗ ( ನಾಯಿ ) ಆ ಮಳೆಯಲ್ಲೂ ಓಡಿ ಬಂದ . ಅಷ್ಟೆತ್ತರ ಹಾರಿ ಕುಣಿದು ನನ್ನ ವೇಲ್ ಎಳೆದುಕೊಂಡೇ ಹೋದ . ಈ ಡಿಂಗ ಪುಟಾಣಿ ಮರಿಯಾಗಿ ಮನೆಗೆ ಬಂದಿದ್ದ . ಆಗ ಅವನಿಗೆ ಬೊಗಳುವ ಹುರುಪು , ಅದೇ ಉತ್ಸಾಹದಲ್ಲಿ ಪಕ್ಕದ ಮನೆ ನಾಯಿಗೂ ಬೊಗಳಲು ಹೋಗಿ ಅದರ ಕೈಯಲ್ಲಿ ಕಚ್ಚಿಸಿಕೊಂಡಿದ್ದ . ಕಾಲು ಮುರಿದೇ ಹೋಯಿತು ಅಂದು ಕೊಂಡಿದ್ದೆವು . ಆದರೆ , ನಿಧಾನಕ್ಕೆ ಚೇತರಿಸಿಕೊಂಡ ಡಿಂಗ ತಿಂಗಳು ಕಳೆಯುವುದರೊಳಗೆ ಜಿಗಿ ಜಿಗಿದು ಓಡತೊಡಗಿದ್ದ . ಈಗ ಮುದುಕನಾಗುತ್ತಾ ಬಂದಿದ್ದಾನೆ , ಹಿಂದಿನ ಉತ್ಸಾಹ ಈಗ ಉಳಿದಿಲ್ಲ . ಆದ್ರೆ ಬಟ್ಟೆ ಎಳೆಯುವ ಕೆಟ್ಟ ಬುದ್ಧಿ ಮಾತ್ರ ಬಿಟ್ಟಿಲ್ಲ . ಮನೆಯೊಳಗೆ ಕಾಲಿಟ್ಟರೆ ಅಡಿಕೆಯ ಮಕ್ಕು ( ಧೂಳು ) . . ಅಮ್ಮ ಪತ್ರೊಡೆಗೆ ಅಕ್ಕಿ ಅರೆಯುತ್ತಿದ್ದಳು . ಅಮ್ಮನ ಮುಖ ನೋಡಿದ್ದೇ ಒಮ್ಮೆ ರಿಫ್ರೆಶ್ ಆದ ಅನುಭವ . ಆದರೂ ಮನೆಗೆ ಬಂದಾಗ ಹಲವು ಬಗೆಯ ನೋವುಗಳು ಒಮ್ಮೆಗೆ ಉದ್ಭವಿಸಿ ಬಿಡುತ್ತವೆ . ಬೇರೇನಕ್ಕೂ ಅಲ್ಲ , ಅಲ್ಲಿ ನೋವು ಇಲ್ಲಿ ನೋವು ಅಂದರೆ ಅಮ್ಮನ ಕಾಳಜಿಯೂ ಜಾಸ್ತಿಯಾಗುತ್ತದೆ . ಅವಳ ಕಣ್ಣಲ್ಲಿ ವಿಚಿತ್ರ ಪ್ರೀತಿ ಇಣುಕುತ್ತದೆ . ಒಂದು ಬಗೆಯ ತುಡಿತ ಮನಸ್ಸನ್ನಾವರಿಸುತ್ತದೆ . ಕಾಲಿಗೆ ತಲೆಗೆ ಎಣ್ಣೆ ತಿಕ್ಕಿ , ಬೇಗ ಗುಣ ಆಗತ್ತೆ , ಅಂದಾಗ ನನಗೆ ಕಳ್ಳ ಖುಷಿ . ' ಇಲ್ಲಿಗೆ ಬಂದ ಕೂಡ್ಲೆ ಎಲ್ಲ ನೋವೂ ಶುರುವಾಗಿ ಬಿಡತ್ತೆ ಅವಳಿಗೆ ' ತಮ್ಮನ ಮೂದಲಿಕೆ . ಅಪ್ಪ ಡೈರಿಗೆ ಹೋದವರು ಇನ್ನೂ ಬಂದಿರಲಿಲ್ಲ . ಅವರು ಬಂದಾಗ ಗಂಟೆ ಒಂಭತ್ತು . ಹಿಂದಿನ ಸೆಕ್ರೆಟರಿ ಡೈರಿಯ ಹಣ ತಿಂದ ಕಾರಣ , ಡೈರಿ ಲೆಕ್ಕ ಅಪ್ಪನ ತಲೆಗೆ ಬಿದ್ದಿತ್ತು . ಮುಗಿಯದ ತೋಟದ ಕೆಲಸದ ನಡುವೆಯೂ ದಾಕ್ಷಿಣ್ಯಕ್ಕೆ ಅಪ್ಪ ಈ ಕೆಲಸ ಒಪ್ಪಿದ್ದರು . ಮನೆಗೆ ಬಂದವರೇ ಸ್ನಾನ ಪೂಜೆ ಮುಗಿಸಿ ಮತ್ತೆ ಲೆಕ್ಕದಲ್ಲಿ ಮುಳುಗಿದ್ದರು . ರಾತ್ರಿ ತುಂಬ ಹೊತ್ತಿನವರೆಗೆ ಲೆಕ್ಕ ಮುಂದುವರಿದಿತ್ತು . ಅದರ ನಡು ನಡುವೆ ನನ್ನೊಡನೆ ಮಾತು . ಒಮ್ಮೆ , ' ನಾನು ಈ ಜಾಗ ಮಾರ್‍ತೀನಿ ' ಅಂದರು . ಈ ಮಾತನ್ನು ಅವರು ಆವಾಗವಾಗ ಹೇಳುತ್ತಿದ್ದ ಕಾರಣ ನಾನು , ' ಹ್ಞುಂ ' ಅಂದು ಸುಮ್ಮನಾದೆ . ಆದರೆ , ಅಪ್ಪ ನಿರ್ಧರಿಸಿದಂತಿತ್ತು . ' ಕಾರ್ಕಳದಲ್ಲಿ ಎಲ್ಲಾದರೂ ಹಿತ್ತಲು ಮನೆ ಇದೆಯಾ ಅಂತ ವಿಚಾರಿಸ್ತಾ ಇದೀನಿ . ಈ ಜಾಗ ಸೇಲಾದ ಕೂಡ್ಲೇ , ಪೇಟೆಯಲ್ಲಿ ಸಣ್ಣ ಮನೆ ಮಾಡಿ , ಜಾಗ ಮಾರಿದ ಹಣದಿಂದ ಬರುವ ಬಡ್ಡಿಯಲ್ಲಿ ಜೀವನ ಮಾಡೋದು . ' ಅಂದರು . ನಮ್ಮದು ಮುನ್ನೂರ ಅರುವತ್ತೈದು ದಿನಗಳೂ ಸಮೃದ್ಧ ನೀರಿರುವ , ಕಾಡು ಪ್ರಾಣಿಗಳ ಕಾಟ ಬಿಟ್ಟರೆ ಅಷ್ಟೇನೂ ತೊಂದರೆ ಇಲ್ಲದ ಜಾಗ . ಆದರೆ ಇಲ್ಲಿ ಗ್ರಾಮಕ್ಕೊಂದರಂತೆ ಗೇರು ಬೀಜ ( ಗೋಡಂಬಿ ) ಕಾರ್ಖಾನೆಗಳು ಎದ್ದಿರುವ ಕಾರಣ ಕೂಲಿಯವರೆಲ್ಲ ಆ ಕೆಲಸಕ್ಕೇ ಹೋಗುತ್ತಿದ್ದಾರೆ . ಅಲ್ಲಿ ಕೂಲಿಯವರಿಗೆ ಅಪ್ಪ ಕೊಡುವಷ್ಟು ಸಂಬಳ ಸಿಗದಿದ್ದರೂ ಅದು ಶ್ರಮ ಬೇಡುವ ಕೆಲಸವಲ್ಲ . ಕೂತು ಗೇರು ಬೀಜದ ಸಿಪ್ಪೆ ತೆಗೆಯುವ ಕೆಲಸ . ಹಾಗಾಗಿ ಇಷ್ಟ ಪಟ್ಟು ಹೋಗುತ್ತಿದ್ದರು . ಇಲ್ಲವಾದರೆ ಅವರು ಕೆಲಸಕ್ಕೆ ಹೋಗುತ್ತಿದ್ದದ್ದು ರಬ್ಬರ್ ತೋಟ ಮಾಡುವ ಕೊಚ್ಚಿ ಕ್ರಿಶ್ಷಿಯನ್ನರ ಮನೆಗೆ . ಯಾಕೆಂದರೆ ಅವರು ಮಾಂಸ , ಹೆಂಡ ಕೊಡ್ತಾರೆ . ನಮ್ಮಪ್ಪ ಬ್ರಾಹ್ಮಣರಾದ ಕಾರಣ ಅದೆಲ್ಲ ಕೊಡಿಸುವುದು ಹೇಗೆ ? ಆದರೂ ಆಗಾಗ ಯಶೋಧಾ ಕೆಲಸಕ್ಕೆ ಬರುತ್ತಿರುತ್ತಾಳೆ . ಗಂಡಾಳಿಗಿಂತ ಏನೂ ಕಡಿಮೆಯಿಲ್ಲದಂತೆ ದುಡಿಯುತ್ತಿದ್ದರೂ ಅವಳಿಗೆ ಮಾತ್ರ ಕಡಿಮೆ ಸಂಬಳ . ಅವಳಿಗಿಂತ ಎಷ್ಟೋ ಕಡಿಮೆ ಕೆಲಸ ಮಾಡುವ ಗಂಡಾಳಿಗೂ ಅವಳಿಗಿಂತ ಹೆಚ್ಚು ಕೂಲಿ . ಅದು ಅವಳ ಗಮನ ಬರುತ್ತಿರಲಿಲ್ಲ ಅಂತಲ್ಲ , ಆದರೂ ಏನೂ ಮಾತಾಡದೇ ಸುಮ್ಮನಾಗುತ್ತಿದ್ದಳು . ಯಶೋದಾ ಮತ್ತು ಅಪ್ಪ ಸೇರಿಕೊಂಡು ಇಡೀ ತೋಟಕ್ಕೆ ಮದ್ದು ಬಿಡುತ್ತಾರೆ . ಹತ್ತಿರತ್ತಿರ ಹತ್ತೆಕರೆ ತೋಟಕ್ಕೆ ಮದ್ದು ಬಿಟ್ಟು ಮುಗಿಸುವಾಗ ಅಪ್ಪ ಹಿಂಡಿ ಹಿಪ್ಪೆಯಾದಂತಾಗುತ್ತಾರೆ . ಇನ್ನು ಅಡಿಕೆ ಕೊಯಿಲಿನ ಸಮಯ ಬಂತೆಂದರೆ ಆ ಕೆಲಸವನ್ನೂ ಅಪ್ಪ , ಯಶೋಧಾ ಸೇರಿಕೊಂಡೇ ಮಾಡುತ್ತಾರೆ . ಅಪ್ಪನ ಪ್ರಾಯವೀಗ ಐವತ್ತೈದರ ಹತ್ತಿರ . ಕೃಷಿಯ ಬಗೆಗೆ ಅವರಿಗೆ ಮೊದಲಿದ್ದ ಆಸಕ್ತಿ ಕುಂದಿ ಹೋಗಿದೆ . ಮನಸ್ಸು ವಿಶ್ರಾಂತಿ ಬಯಸುತ್ತಿದೆ . ಸಹಾಯ ಮಾಡೋಣವೆಂದರೆ ನಾನು ಬೆಂಗಳೂರಿನಲ್ಲಿದ್ದೇನೆ . ಕೆಲಸ ಬಿಟ್ಟು ಬರುತ್ತೇನೆಂದರೆ ಅಪ್ಪ ಕೇಳುವುದಿಲ್ಲ , ' ನೀನು ಇಲ್ಲಿ ಬಂದರೂ ಮಾಡುವುದು ಇಷ್ಟೇ ಇದೆ . ಸುಮ್ಮನೆ ಏನೆಲ್ಲ ತಲೆಗೆ ಹಚ್ಚಿಕೊಳ್ಳಬೇಡ . ನಾವು ಹೇಗೋ ಸುಧಾರಿಸ್ತೇವೆ ' ಅಂತಾರೆ . ತಮ್ಮ ಇನ್ನೂ ಚಿಕ್ಕವನು , ಈಗಷ್ಟೇ ಹತ್ತನೇ ಕ್ಲಾಸು ಮುಗಿಸಿ ಕಾಲೇಜು ಸೇರಿಕೊಂಡಿದ್ದಾನೆ . ಅಪ್ಪನತ್ರ ಅಷ್ಟು ಒಳ್ಳೆ ಜಾಗ ಮಾರಬೇಡ ಅಂತ ಅನ್ನೋಣ ಅನಿಸುತ್ತದೆ . ಆದರೆ , ಅದು ಹೇಗೆ ? ಜಗುಲಿಯ ಕಟ್ಟೆಯೇರಿದರೆ ಕಾಣುವ ಪಶ್ಷಿಮ ಘಟ್ಟದ ಸಾಲು , ತೋಟದ ಪಕ್ಕ ಸಶಬ್ಧವಾಗಿ ಹರಿವ ಸ್ವರ್ಣೆ , ನಮ್ಮ ಬಾಲ್ಯಕ್ಕೆ ಬೆಳವಣಿಗೆಗೆ ಸಾಕ್ಷಿಯಾಗಿ ನಿಲ್ಲುವ ತೋಟ , ಎತ್ತರ ಮಹಡಿಯ ಪುಟ್ಟಮನೆ ಚಿತ್ರ ಕಣ್ಣೆದುರು ಬರುತ್ತದೆ . ಜಾಗ ಮಾರಿದರೆ ಇದೆಲ್ಲ ಬಾಲ್ಯದಂತೆ ಒಂದು ನೆನಪು ಮಾತ್ರ . ಬೆಂಗಳೂರಿನ ಎ . ಸಿ ರೂಮಿನಲ್ಲಿ ಕೂತು ಇದೆಲ್ಲ ಬರೆಯುವ ಹೊತ್ತಿಗೆ ಅಪ್ಪ ದನದ ಕೊಟ್ಟಿಗೆ ಪಕ್ಕದ ಕೋಣೆಯಲ್ಲಿ ಕೂತು ಅಡಿಕೆ ಸುಲಿಯುತ್ತಿರುತ್ತಾರೆ . ಅಡಿಕೆ ಸಿಪ್ಪೆಯ ಮೇಲೆ ಸುತ್ತಿಕೋಂಡು ಮಲಗಿ ಬೆಚ್ಚನೆಯೊಳಗೆ ಸೇರಿ ಹೋಗಿರುತ್ತಾನೆ ಡಿಂಗ .
ಸಸ್ಯಗಳು C ಜೀವಸತ್ವದ ಉತ್ತಮ ಮೂಲಗಳಾಗಿವೆ , ಸಸ್ಯಾಹಾರದಲ್ಲಿ ಇದರ ಪ್ರಮಾಣವು ಈ ಮುಂದೆ ಹೇಳುವವುಗಳನ್ನು ಆಧರಿಸಿರುತ್ತದೆ : ಸಸ್ಯ ಪ್ರಭೇದ , ಮಣ್ಣಿನ ಗುಣ , ಸಸ್ಯ ಬೆಳೆಯುವ ಹವಾಗುಣ , ಇದನ್ನು ಪಡೆಯಲು ತೆಗೆದುಕೊಂಡ ಸಮಯ , ಸಂಗ್ರಹಿಸುವ ರೀತಿ ಹಾಗೂ ತಯಾರು ಮಾಡುವ ವಿಧಾನಗಳು . [ ೧೩೮ ]
ಹಲ್ ಚಿಲಿ = ಹಲ್ಲು ಕಿರಿ , ಹಲ್ಲು ಕಿಸಿಯು
ಖಾಸಗಿ ಜೀವನ . ಅವರವರದ್ದು ಅವರವರಿಗೆ . ಒಬ್ಬೆ ಒಳ್ಳೆ ನಟನಾದರೆ ಅವನ ನಟನೆ ಇಷ್ಟಪಡೋಣ . ಲೇಖಕನ ಲೇಖನ ಇಷ್ಟಪಡೋಣ . ಅವರ ಪ್ರೀಮ , ಕಾಮದ ಖಾಸಗಿ ಜೀವನವನ್ನಲ್ಲ . ಸಾರ್ವಜನಿಕ ಜೀವನದಲ್ಲಿ ಇರುವವರು ಉತ್ತಮ ನಡತೆ , ಆದರ್ಶ ಜೀವನ ನಡೆಸಬೇಕು ಎಂದು ಬಯಸುವುದು ತಪ್ಪಲ್ಲ . ಆದರೆ ಹಾಗೇ ಇರಬೇಕು ಎಂದು ನಿರ್ದೇಶಿಸುವುದು ಸರಿಯಲ್ಲ .
ಮೊನ್ನೆ ವಿಜಯ ಕರ್ನಾಟಕದಲ್ಲಿ ಭೈರಪ್ಪನವರ ಉದ್ದಾನ ಲೇಖನ ಬಂದಿತ್ತಲ್ಲ . ಅದರೊಳಗೆ ಕ್ರಿಶ್ಚಿಯಾನ್ಸನ್ನ ಝಾಡಿಸಿದ್ದಾರಲ್ಲ ಅದು . ಅಲ್ಲ , ಝಾಡಿಸಲಿ ಬಿಡಿ - ಮುಳ್ಳನ್ನು ಮುಳ್ಳಿಂದಲೇ ತೆಗೀಬೇಕು , eye for an eye , ಧರ್ಮಾಂಧತೆಗೆ ಧರ್ಮಾಂಧತೆಯೇ ಮದ್ದು ಅನ್ನೋರಲ್ವ ಇವರು . ಇವರು ಅವರನ್ನ , ಅವರು ಇವರನ್ನ ಝಾಡಿಸಿದರೆ ನಮಗೊಳ್ಳೇದೆ - ಯಾಕಂದರೆ , ಎಲ್ಲಾ ಧರ್ಮದ ದೋಸೇನೂ ತೂತು ಅಂತ ಗೊತ್ತಾಗತ್ತೆ !
ತಲೆಬರಹದಿಂದ ಇಷ್ಟು ಹೆದರಿದಿರಿ ಎಂಬುದು ಜಗಜ್ಜಾಹೀರಾದರೆ ಅಲ್ - ಇಲ್ - ಎಲ್ - ಖೈದಾ ಮಾರ್ಕೆಟಿನಲ್ಲಿ ನಮ್ಮ ಕುಚೇಲನ ರೇಟು ಯಡಿಯೂರಪ್ಪನವರ ಪಿತ್ಥದ ಹಾಗೆ , ಭಾರತದ ಇನ್‌ಫ್ಲೇಷನ್ನಿನ ಹಾಗೆ ಏರುವುದರಲ್ಲಿ ಸಂಶಯವಿಲ್ಲ . ದಯವಿಟ್ಟು ಈ ಗುಟ್ಟನ್ನು ನಿಮ್ಮ ಹೊಟ್ಟೆಯಲ್ಲೇ ಇಟ್ಟುಕೊಂಡಿರಿ .
ಚಿತ್ರ ಹಾಗೂ ಬರಹ : ವೀರೇಶ್ ಹೊಗೆಸೊಪ್ಪಿನವರ್ ' ನಮ್ಮ ಊರು ಬೆಂಗಳೂರು , ಹೊಯ್ . . . . ಆನಂದದ ತವರೂರು . . . . ' ಆದರೆ ಎಲ್ಲಿದೆ ಬೆಂಗಳೂರಿನಲ್ಲಿ ಆನಂದ ? ಟ್ರಾಫಿಕ್ಕು , ಕಳ್ಳತನ , ಸುಲಿಗೆ , ದರೋಡೆ ! ಎಲ್ಲಿ ನೋಡಿದರೂ ಕಾಂಕ್ರೀಟ್ ಕಾಡು . . . ಅಷ್ಟೇ ಅಲ್ಲದೇ ಹಗಲು ದರೋಡೆಗಳು ಬೇರೆ . ಆ ಹಾಡಿನಲ್ಲಿ ವರ್ಣಿಸಿರೊ ಹಾಗೆ ಗಿಡಗಳು , ಮರಗಳು ಯಥೇಚ್ಛವಾಗಿದ್ವು . ಆದರೆ ವಾಹನ ದಟ್ಟಣೆ ಹೆಚ್ಚಾಗುತ್ತಾ ಹೋದಂತೆ ರಸ್ತೆಗಳನ್ನೆಲ್ಲ ಅಗಲ ಮಾಡುತ್ತಾ ಹೋದ್ರು . ಆಗ ವಿಧಿಯೇ ಇಲ್ಲದೇ ಮರಗಳನ್ನು ಕಡೀತಾ ಹೋಗ್ಬೇಕಾಯ್ತು . ಹೀಗೇ ದಿನೇ ದಿನೇ ಮರಗಳನ್ನು ಕಡೀತಾ ಹೋದ್ರು . ನಗರದ ಅಂದನು ಕೆಡ್ತು ಪರಿಸರನೂ ಹಾಳಾಗಿ ಹೋಯ್ತು . ಈ ರೀತಿ ಮರಗಳು ಕಡಿಮೆ ಆಗಿ ಪರಿಸರ ಹಾಳಾಗ್ತಾ ಇದ್ರೆ . ಇನ್ನೊಂದು ಕಡೆ ಈಗಿನ ಹೊಸ ಟ್ರೆಂಡ್ ಆಗಿರೋ ವಿನೈಲ್ ಬ್ಯಾನರ್‌ಗಳು ಬೆಂಗಳೂರನ್ನ ಆಕ್ರಮಿಸಿಕೊಳ್ತಾ ಇವೆ . ಇವು ಕೂಡಾ ಪರಿಸರ ನಾಶ ಮಾಡೊದ್ರಲ್ಲಿ ತಮ್ಮದೊಂದು ಕೊಡುಗೆಯನ್ನೇ ನೀಡುತ್ತಾ ಬಂದಿವೆ . ನಮ್ಮ ಹೆಚ್ಚಿನ ರಾಜಕಾರಣಿಗಳು ವಿನೈಲ್ ಬ್ಯಾನರ್‌ಗಳನ್ನು ಯುಗಾದಿ , ಸಂಕ್ರಾಂತಿ , ಹೊಸ ವರ್ಷ , ಬಕ್ರಿದ್ ಹೀಗೆ ಎಲ್ಲಾ ಹಬ್ಬಗಳ ಪ್ರಯುಕ್ತ ತಮ್ಮ ಕ್ಷೇತ್ರದ ಜನತೆಗೆ ಶುಭಾಶಯಗಳನ್ನು ತಿಳಿಸಲು ಬಳಸ್ತಾ ಇದಾರೆ . ಇದು ಒಂಥರಾ ಆದ್ರೆ ಇದೇ ರಾಜಕಾರಣಿಗಳ ಹೆಸರನ್ನೇ ಬಳಸಿಕೊಂಡು ಪ್ರಚಾರ ಬಯಸುವ ಈ ರಿಯಲ್ ಎಸ್ಟೇಟ್ ಏಜಂಟರುಗಳು , ಕೆಲವೊಂದು ವಿಚಾರಗಳಲ್ಲಿ ರೌಡಿಗಳಾಗಿ ಮಿಂಚಿ ಮುಂದೆ ನಮಗೊಂದು ಸೀಟ್ ಕೊಡಿ ಅಂತ ಮಂತ್ರಿಗಳನ್ನು ಕೇಳೋಕೋಸ್ಕರ ರಾಜಕಾರಣಿಗಳ ಹೆಸರುಗಳು ಮತ್ತು ಅವರ ಚಿತ್ರಗಳನ್ನು ಬಿಂಬಿಸುವ ಬ್ಯಾನರ್‌ಗಳನ್ನು ಚಿತ್ರಿಸಿ ಕೆಳಗಡೆ ತಮ್ಮದೊಂದು ಸಣ್ಣ ಚಿತ್ರ ಹಾಕ್ಕೊಂಡು ತಮ್ಮದೇ ಆದ ಏರಿಯಾಗಳಲ್ಲಿ ರಾರಾಜಿಸುವಂತೆ ಹೋರ್ಡಿಂಗ್‌ಗಳನ್ನು ಹಾಕಿಸ್ತಾರೆ . ಮೊದಲಾದ್ರು ಬಟ್ಟೆಯ ಬ್ಯಾನರ್‌ಗಳು ಬರ್ತಿದ್ವು , ಅವುಗಳು ಸ್ವಲ್ಪ ದಿನ ಮಳೆಲಿ ನೆಂದು ಬಿಸಿಲಲ್ಲಿ ಒಣಗಿದರೆ ಹರಿದು ಹೋಗ್ತಾ ಇದ್ವು . . . ಹಾಗಾಗಿ ಪರಿಸರಕ್ಕೆ ಅಷ್ಟೊಂದು ಹಾನಿಕಾರಕವಾಗಿ ಅನ್ನಿಸ್ತಾ ಇರ್ಲಿಲ್ಲ . ಆದ್ರೆ ಈಗ ಬಂದಿರೋ ವಿನೈಲ್ ಬ್ಯಾನರ್‌ಗಳಂತೂ ಬೇಗ ಹರಿಯೋಲ್ಲ . ಹರಿದರೂ ಅವು ಕೊಳೆತು ಹೋಗೋಲ್ಲ . ಅದ್ರಿಂದಾನೆ ಪರಿಸರಕ್ಕೆ ಹೆಚ್ಚು ಹಾನಿಯಾಗ್ತಿದೆ . ಇದಿಷ್ಟು ಬ್ಯಾನರ್‌ಗಳ ಕತೆ ಆದ್ರೆ . ಬಂಟಿಂಗ್ಸ್‌ಗಳದ್ದು ಅದೇ ಕತೆ . ಚುನಾವಣಾ ಪ್ರಚಾರಕ್ಕಾಗಿ ನಾನಾ ಪಕ್ಷಗಳನ್ನು ಬಿಂಬಿಸುವ ಬಂಟಿಂಗ್ಸ್‌ಗಳು ಕಂಬದಿಂದ ಕಂಬಕ್ಕೆ , ಕಟ್ಟಡಗಳಿಂದ ಕಟ್ಟಡಗಳಿಗೆ ವ್ಯಾಪಿಸಿ ನಗರವೇ ಪ್ಲಾಸ್ಟಿಕ್‌ಮಯವಾಗಿ ಬಿಟ್ಟಿದೆ . ನೀವು ಯೋಚಿಸಬಹುದು ಇಷ್ಟೆಲ್ಲ ಆದ್ರು ನಗರ ಪಾಲಿಕೆಯವರು ಯಾವುದೇ ಕ್ರಮ ತೆಗೆದುಕೊಳ್ಳೊಲ್ವ ಅಂತ . ಈಗ ನಗರಪಾಲಿಕೆಯ ಯಾವುದೇ ಸ್ಥಳದಲ್ಲಿ ಬ್ಯಾನರ್‌ಗಳನ್ನು ಅಥವ ಬಂಟಿಂಗ್ಸ್‌ಗಳನ್ನು ಹಾಕ್ಬೇಕಾದ್ರೆ ಜಂಟಿ ಆಯುಕ್ತರಿಗೊಂದು ಅರ್ಜಿ ಬರೆದು ಸದರಿ ಅರ್ಜಿಯಲ್ಲಿ ಎಷ್ಟು ಬ್ಯಾನರ್ , ಯಾವ ಯಾವ ಸ್ಥಳಗಳಲ್ಲಿ ಬ್ಯಾನರ್‌ಗಳನ್ನು ಹಾಕಬೇಕು ? ಇಂತಹ ವಿವರಗಳನ್ನು ನೀಡಿ ಪರವಾನಗಿಯನ್ನು ಪಡೆದು ನಂತರ ಅವರು ಸೂಚಿಸಿದ ಸ್ಥಳಗಳಲ್ಲಿ ಮಾತ್ರ ಹಾಕತಕ್ಕದ್ದು . ಅಷ್ಟೇ ಅಲ್ಲದೇ ಬಟ್ಟೆಯ ಬ್ಯಾನರ್‌ಗೆ ಪ್ರತಿ ಮೀಟರ್‌ಗೆ 20 ರೂ . ಗಳಂತೆ ಹಾಗೂ ಪ್ಲಾಸ್ಟಿಕ್ ಬ್ಯಾನರ್‌ಗಳಿಗೆ 60 ರೂಪಾಯಿಯಂತೆ ಹಣ ಸಂದಾಯ ಮಾಡಿ , ಪ್ರತಿ ಬ್ಯಾನರ್‌ಗಳ ಮೇಲೂ ನಗರಪಾಲಿಕೆಯ ಮುದ್ರೆ ಒತ್ತಿಸಿ ನಂತರ ಪಾಲಿಕೆಯವರು ಸೂಚಿಸಿದ ಸ್ಥಳದಲ್ಲಿ ಬ್ಯಾನರ್‌ಗಳನ್ನು ಕಟ್ಟಬೇಕಾಗುತ್ತದೆ . ಆದ್ರೆ ಎಷ್ಟು ಜನ ಈ ನಿಯಮಗಳನ್ನು ಪಾಲಿಸ್ತಾ ಇದಾರೋ ತಿಳಿಯುತ್ತಿಲ್ಲ . ಅಕ್ರಮವಾಗಿ ಕಟ್ಟಿದ ಬ್ಯಾನರ್‌ಗಳನ್ನು ನಗರ ಪಾಲಿಕೆಯವರು ಕಿತ್ತಾಕುತ್ತಾರೆ . ಪ್ರಭಾವಶಾಲಿ ಜನರು ಹಾಗು ರಾಜಕಾರಣಿಗಳೇನೋ ಪಾಲಿಕೆಗೆ ಮೋಸ ಮಾಡಿ ಬ್ಯಾನರ್‌ಗಳನ್ನು ಹಾಕ್ತಾರೆ . ಆದ್ರೆ . ಸಣ್ಣ ಪುಟ್ಟ ಸಂಘಸಂಸ್ಥೆಗಳು ಬ್ಯಾನರ್‌ಗಳನ್ನು ಹಾಕಲಾಗದೇ ಗೋಡೆ ಬರಹಗಳ ಮೇಲೆಯೇ ಪ್ರಚಾರ ಮಾಡುತ್ತವೆ . ಕೆಲ ಬರಹಗಳಂತೂ ಎಷ್ಟು ಅರ್ಥ ಪೂರ್ಣವಾಗಿರುತ್ತವೆಂದರೆ ಅಲ್ಲಿ ಬರೆದಿರುವ ಸಾಲುಗಳು ಸಮಾಜದ ಕಣ್ಣು ತೆರೆಸುತ್ತವೆ . ಸ್ಯಾಂಪಲ್ ಓದಿ : ' ಬಾಬಾ ದತ್ತ ಬೇರೆ ಬೇರೆಯಲ್ಲ , ಹಿಂದೂ ಮುಸ್ಲಿಂ ಶತ್ರುಗಳಲ್ಲ , ' ' ವಿಶ್ವದ ಕಾರ್ಮಿಕರೇ ಒಂದಾಗಿ . ' ಈ ವಿನೈಲ್ ಬ್ಯಾನರ್‌ಗಳಿಂದ ಯಾರಿಗೆ ಉಪಯೊಗ ಆಗುತ್ತೋ ಇಲ್ಲವೋ , ಆದ್ರೆ ಸ್ಲಮ್‌ನಲ್ಲಿ ವಾಸಿಸುವ ಜನರಿಗಂತೂ ಇವೇ ಆಶ್ರಯವಾಗಿವೆ . ಎಷ್ಟೋ ಗುಡಿಸಲುಗಳಿಗೆ ಮೇಲ್ಛಾವಣಿಗಳಾಗಿವೆ . ಪರಿಸರಹಾನಿ ತಡೆಗಟ್ಟಲು ನಿಮ್ಮಿಂದ ಅಳಿಲು ಸೇವೆಯನ್ನು ಸಲ್ಲಿಸಬಹುದು . ಅದು ಹೇಗೆ ಅಂತೀರಾ ? ಅಕ್ರಮವಾಗಿ ( ನಗರಪಾಲಿಕೆ ಮುದ್ರೆ ಇರದ ) ಕಟ್ಟಿದ ಬ್ಯಾನರ್‌ಗಳು ಕಂಡು ಬಂದಲ್ಲಿ ಈ ಕೆಳಗಿನ ವಿಳಾಸಕ್ಕೆ ದೂರನ್ನು ನೀಡಬಹುದು . ಬ್ಯಾನರ್ ಕಟ್ಟಲು ಅನುಮತಿ ಪಡೆಯಲು ಹಾಗೂ ದೂರನ್ನು ನೀಡಬೇಕಾದ ವಿಳಾಸ : ಜಂಟಿ ಆಯುಕ್ತರು ದಕ್ಷಿಣ ಬೆಂಗಳೂರು ಮಹಾನಗರ ಪಾಲಿಕೆ 9ನೇ ಅಡ್ಡರಸ್ತೆ , ಜಯನಗರ 2 ನೇ ಹಂತ , ಬೆಂಗಳೂರು - 11 . ದೂರವಾಣಿ : 22975700
ನವೆಂಬರ್ 26 ರಂದು ನಮ್ಮ ಮುಂಬೈ ಮೇಲೆ ನಡೆದ ದಾಳಿಯ ನಂತರ ಪಾಕಿಸ್ತಾನ ಯಾವ ನಖರಾ ತೋರುತ್ತಿದೆಯೋ ಅದೇ ಸೊಕ್ಕನ್ನು 2001 ರಲ್ಲಿ ತಾಲಿಬಾನ್ ಕೂಡ ಪ್ರದರ್ಶಿಸಿತ್ತು . ' ಸಾಕ್ಷ್ಯ ಕೊಡಿ , ನಮ್ಮ ನೆಲದಲ್ಲೇ ವಿಚಾರಣೆ ನಡೆಸುತ್ತೇವೆ ' ಎಂದಿತ್ತು .
ಜೀವನದಲ್ಲಿ ತಾವು ಅನುಭವಿಸಿದ್ದನ್ನೇ ' ಬೇರಡ ' ದಲ್ಲಿ ದಾಖಲಿಸಿದ್ದೇನೆಂದು ಡಾ . ಗಸ್ತಿ ಹೇಳುತ್ತಾರೆ . ತಾವೊಬ್ಬ ಲೇಖಕನೆಂದು ಡಾ . ಗಸ್ತಿಯವರಿಗೆ ಯಾವ ಗರ್ವವೂ ಇಲ್ಲ . ' ನಾನೊಬ್ಬ ಸಾಮಾಜಿಕ ಕಾರ್ಯಕರ್ತ ' ನೆಂದೇ ಅವರು ಹೇಳುತ್ತಾರೆ . ಬೇರಡ ನಮ್ಮ ಸಮಾಜದ ಜನರು ಪಡುತ್ತಿರುವ ಕಷ್ಟ ಕೋಟಲೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸಿತು . ಅದರ ಪರಿಣಾಮವಾಗಿ ಸಾರ್ವಜನಿಕರು ನಮ್ಮ ಬೆನ್ನ ಹಿಂದೆ ನಿಂತರು ' ಎಂದು ಅವರು ಹೇಳುತ್ತಾರೆ . ' ಬೇರಡ ' ಆತ್ಮಕಥೆಯಾಗಿದ್ದರೂ ಅದು ಉಪೇಕ್ಷಿತ ಸಮಾಜದ ಕಥೆಯೆಂದು ವಿಮರ್ಶಕರು ಗುರುತಿಸಿದ್ದಾರೆ .
ಕ್ಷಮಿಸು ಅನಘಾ , ನಂಗೆ ನಿನ್ನ ಹುಟ್ಟಿಸೋದಿಕ್ಕೆ ಧೈರ್ಯವಿರಲಿಲ್ಲ . ತುಂಬ ಇಷ್ಟವಿತ್ತು ಆದರೆ ಮನಸ್ಸಿರಲಿಲ್ಲ . ನನಗೆ ನೀನು ಬೇಕೇಬೇಕಿತ್ತು ಆದರೆ ನನ್ಕೈಲಿ ಸಾಧ್ಯವಿರಲಿಲ್ಲ . ನಿನ್ನ ಸ್ಪಂದನಗಳಿಗೆ ನಾನು ತುಂಬ ವರ್ಷಗಳಿಂದ ಆಸೆಯಿಂದ ಕಾದಿದ್ದಕ್ಕೋ ಏನೋ ಅಥವಾ ನನ್ನ ಕನಸುಗಳೆಲ್ಲಾ ನಿನ್ನ ಬಣ್ಣಗಳಿಂದಲೇ ಮಿರುಗುತ್ತಿದ್ದುದಕ್ಕೋ ಏನೋ , ನೀನು ನಿಜವಾಗಿ ಮೊಳಕೆಯೊಡೆದಾಗ ನಾನು ಅಧೀರಳಾಗಿಬಿಟ್ಟೆ . ಕತ್ತಲ ಕಣಿವೆಯ ಹಾದಿಯಲ್ಲಿದ್ದ ನಾನು ನಿನ್ನ ತುಂಬು ಬೆಳಕಿಗೆ ಹೆದರಿಬಿಟ್ಟೆ . ನಾನು ಜನಕ್ಕೆ ಹೆದರಿರಲಿಲ್ಲ ಅನಘಾ , ನಿನ್ನ ಅಪ್ಪನನ್ನು ಮುತ್ತುವ ಕತ್ತಲೆಗೆ ಹೆದರಿದ್ದೆ . ಅವನಿಲ್ಲದ ಬದುಕು ನನಗೆ ಬೇಕಿರಲೇ ಇಲ್ಲ . ನೀನು ಅಪ್ಪ , ಅಮ್ಮ ಇಬ್ಬರೂ ಇಲ್ಲದ ಇನ್ನೊಂದು ಮಗುವಾಗುವುದನ್ನು ನಾನು ಕಲ್ಪಿಸಲೂ ಅಸಾಧ್ಯವಿತ್ತು . ಬರೀ ಚಿಗುರಾಗಿದ್ದ ನಿನಗೆ ಆಗ ನನ್ನ ಸ್ಪಂದನಗಳಷ್ಟೇ ಗೊತ್ತಾಗುತ್ತಿತ್ತು ಅಲ್ಲವಾ ? " ಛಿ ಕಳ್ಳಿ ' ಎಂದರೆ ಇನ್ನೂ ಮೂಡಿರದಿದ್ದ ನಿನ್ನ ಕಿವಿ _ " ಇನ್ನಷ್ಟು . . ಮತ್ತಷ್ಟು . . ಮಾತಾಡು " ಅಂತ ತೆರೆದುಕೊಳ್ಳುತ್ತಿತ್ತು , ನನ್ನ ಕಣ್ಣೀರು ಧಾರೆಯಾಗಿ " ಪಾಪೂ ಸಾರಿ " ಅಂತ ನಾನು ಹಲುಬುತ್ತಿದ್ದರೆ , ಇನ್ನೂ ಅರಳಿರದಿದ್ದ ನಿನ್ನ ಕಣ್ಣು ಒದ್ದೆಯಾಗುತ್ತಿತ್ತು ಅಲ್ಲವಾ ? ನಂಗೊತ್ತು ಅನಘಾ . . ಸ್ವಲ್ಪೇ ದಿನಗಳೇ ಆಗಿದ್ರೂ ನಾನು ಅಮ್ಮನಾಗಿದ್ದೆ . ಆತಂಕ ಉಸಿರುಗಟ್ಟಿಸಿದ್ದರೂ ಆ ದಿನಗಳಲ್ಲಿ ಅದೇನೋ ಜಾದೂ ಇತ್ತು . ಅಂತಿಂಥದಲ್ಲ . ಆಗ ಬದುಕು ಉರಿದು ಬೂದಿಯಾಗಿಸುವಷ್ಟು ಬೇಸರದ ಉರುವಲಿತ್ತು , ಕುಡಿಯಲು ಕಣ್ಣೀರಿತ್ತು , ತಿನ್ನಕ್ಕೆ ನಿರಾಶೆಯಿತ್ತು , ಮಲಗಲು ತಳಮಳದ ಹಾಸಿಗೆ , ಹೊದೆಯಲು ಸಂಕಟ . ನಡೆದಾಡುತ್ತಿರುವುದು ನನ್ನದಲ್ಲ ಬೇರೆಯಾರದೋಕಾಲು ಎಂಬ ಅಸಡ್ಡಾಳತನವಿತ್ತು . ಈ ಎಲ್ಲದರ ಮಧ್ಯೆಯೂ ಪುಟ್ಟ ಮಕ್ಕಳ ಕುಲುಕುಲು , ಚಿತ್ತಾರದ ಮೋಡ , ಮಿನುಗುವ ನಕ್ಷತ್ರ , ಮಳೆಹನಿಯ ಹಾಡು , ಹಕ್ಕಿಯ ಚಿಲಿಪಿಲಿ , ಬಿಳಿಗಡ್ಡ , ಸುಕ್ಕುಮೋರೆಯ ಅಜ್ಜ ಅಜ್ಜಿಯರ ನಗು ಇದೆಲ್ಲಾ ನೋಡಲು ಸಾಧ್ಯವಾಗಿದ್ದು ನಿನ್ನ ಜಾದೂವಿನಿಂದ , ಎದೆಗೊತ್ತಿಹಿಡಿದು ತಲೆನೇವರಿಸಿದ ನಿನ್ನಪ್ಪನ ಕಣ್ಣಿನಿಂದ ಅನಘಾ . ನಾವಿಬ್ಬರೂ ಈ ಜಾದೂ ನೋಡಿ ಮುದಗೊಂಡಿದ್ದು ನಿನ್ನ ಪ್ರಭಾವಳಿಯಿಂದ . ಅಷ್ಟೇ ಅಲ್ಲ ಅನಘಾ . . . ನಮಗೆ ಬದುಕಬೇಕು ಅನ್ನಿಸಿತ್ತು ! ! ! ನಿನ್ನ ಪುಟ್ಟ ಬೆರಳು ಹಿಡಿದು ಹೆಸರಿರದ ಹಸಿರು ಬಯಲಲ್ಲಿ - ಕಾಲು ಸೋಲುವವರೆಗೆ , ನಿನ್ನಪ್ಪನಿಗೆ ನಿದ್ದೆಗಣ್ಣಾಗುವವರೆಗೆ , ನಿದ್ದೆಯಲ್ಲೂ ನಗುವ ನಿನ್ನ ಕೆನ್ನೆಗಳ ಮೇಲೆ ಚುಕ್ಕಿಗಳ ಬೆಳಕು ಪ್ರತಿಫಲಿಸುವವರೆಗೆ . . . . ನಡೆಯುತ್ತಿರಬೇಕು . . . . ಯಾವಾಗಲೂ ಅನ್ನಿಸಿತ್ತು . ಕನಸು ಚೆಂದವಿತ್ತು ಅನಘಾ ಆದರೆ ವಾಸ್ತವ ಹೆದರಿಕೆ ಹುಟ್ಟಿಸುತ್ತಿತ್ತು . ಒಲೆ ಉರಿಯುವಲ್ಲಿ ಬೀಜಬಿತ್ತಿ ನೀರೆರದದ್ದು ನಂದೇ ತಪ್ಪು ಅನಘಾ , ಈ ನನ್ನ ಮೂರ್ಖತನವನ್ನು ದಯವಿಟ್ಟು ಕ್ಷಮಿಸು . ನಿನ್ನ ಕಳೆದುಕೊಳ್ಳಲೇಬೇಕು ಅಂತ ತೀರ್ಮಾನಿಸಿದ ದಿನ ಅನಘಾ . . . ನಾನು , ನಿನ್ನಪ್ಪ ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ತಮಾಷೆ ಮಾಡಿಕೊಂಡು ನಗುತ್ತಿದ್ದೆವು . ಎಂದೂ ಇಲ್ಲದಷ್ಟು ಮಾತಾಡಿದ್ದೆವು . ಸುಮ್ಮನಿದ್ದರೆ ಎಲ್ಲಿ ಇನ್ಯಾವತ್ತೂ ಮಾತಾಡುವುದಿಲ್ಲವೋ , ನಗದಿದ್ದರೆ ಉಕ್ಕಿಬರಲೆತ್ನಿಸುತ್ತಿರುವ ಅಳುವಿನಲ್ಲಿ ಎಲ್ಲಿ ಕೊಚ್ಚಿ ಹೋಗುತ್ತೀವೋ ಅನ್ನುವ ಹೆದರಿಕೆಯಿಂದ . ನನಗೆ ಬೇಜಾರಾಗಿದೆ ಅಂತ ಅವನಿಗೆ ಗೊತ್ತಿತ್ತು , ಅವನು ಮುದುಡಿಹೋಗಿದ್ದ ಅಂತ ನನಗೆ ಗೊತ್ತಿತ್ತು . ಇಬ್ಬರಿಗೂ ಇದು ಗೊತ್ತಿದ್ದೂ ಗೊತ್ತಿಲ್ಲದ ಹಾಗೇ . . . ಇದ್ದೂ ಇಲ್ಲದ ಹಾಗೆ ಇದ್ದೆವಮ್ಮಾ , ಮಡಿಕೇರಿಯ ಮಂಜು ಹೊದ್ದ ಕಾನು ತುಂಬ ಚಂದವಿತ್ತು . ಜಿಟಿಜಿಟಿ ಹನಿಯುತ್ತಿದ್ದ ಮಳೆಯಂತೂ ಆಕಾಶಕ್ಕೂ ಭೂಮಿಗೂ ಮಧ್ಯೆ ಸಡಗರದ ಪಯಣದ ಮೋಜಲ್ಲಿ ಮುಳುಗಿತ್ತು . ಆದಿನ ಉಂಹೂಂ ರಾತ್ರೆ ಅಥ್ವಾ ಸಂಜೆ ಅಥ್ವಾ ಬೆಳಿಗ್ಗೆಮುಂಚೆ . . . ಇಲ್ಲ ಬಹುಶಃ ಮಧ್ಯಾಹ್ನ . . . . . ಯಾವಾಗ ಮರೀ ನೀನು ಹುಟ್ಟಿದ್ದು ? ಸತ್ಯಕ್ಕೂ ಅನಘಾ ಅದಾಗಿ ತಿಂಗಳಮೇಲೆ ನೀನು ಹುಟ್ಟಿರಬಹುದು ಎಂಬ ಮೊದಲ ಸಂಶಯ ನನಗೆ ಬಂದಾಗ ಮೊದಲು ಉಂಟಾಗಿದ್ದು ಸಂಭ್ರಮ ಅನಘಾ . ಆವತ್ತು ಬೆಳಿಗ್ಗೆ ನಿಧಾನವಾಗಿ ಓಡಾಡಿದೆ , ಹಾಲು ನಾನೇ ಕೇಳಿ ಕುಡಿದೆ . ಹೊಟ್ಟೆ ತುಂಬ ಊಟಮಾಡಿದೆ . ಆಫೀಸಿಗೆ ಜಂಭದಿಂದ ಹೊರಟೆ . ಅಷ್ಠೇ ಅನಘಾ ಅಲ್ಲಿವರೆಗೂ ಅದೆಲ್ಲಿ ಅಡಗಿಕೊಂಡಿತ್ತೋ ನನ್ನ ಹೆದರಿಕೆಯ ಭೇತಾಳ , ಆಮೇಲೆ ಬೆನ್ನು ಬಿಡಲೇ ಇಲ್ಲ . ಇವತ್ತಿಗೂ ಬಿಟ್ಟಿಲ್ಲ ಅನಘಾ , ನಾನು ಹಗುರಾಗಿ ನಿಂತ ಯಾವ ಕ್ಷಣವಿದ್ದರೂ ಬಂದು ತೆಕ್ಕೆಹಾಕಿಕೊಳ್ಳುತ್ತದೆ . ತುಂಬ ವರ್ಷಗಳಿಂದ ನಿನ್ನ ಚೆಂಬೆಳಕಿಗೇ ಕಾದಿದ್ದೆ ಅನಘಾ , ಆದರೆ ನಿನ್ನ ಬೆಳಕಿಗೆ ನಾನು ಮನೆಯಾಗದೇ ಹೋದೆ . ನಾನು ತುಂಬ ಹಂಬಲಿಸಿದ್ದ ನಿನ್ನನ್ನ , ಧೈರ್ಯ ಸಾಲದೇ ಹೊರದಬ್ಬಿದ್ದಕ್ಕೆ ಕ್ಷಮಿಸು ಪುಟ್ಟೀ . . ನನಗೆ ನಿನ್ನ ಮಾತು ಕಿತ್ತುಕೊಳ್ಳುವವರ ಹೆದರಿಕೆಯಿತ್ತು . ನಿನ್ನ ನಗುವನ್ನು ಕಸಿಯುವವರ ಭಯವಿತ್ತು . ನಿನ್ನ ಸಂತಸಗಳಿಗೆ ಕಿಚ್ಚಿಡುವವರ ಅಂಜಿಕೆಯಿತ್ತು . ನಿನ್ನನ್ನೆತ್ತಿ ಲಾಲಿಹಾಡಲು ಕಾಯುತ್ತಿದ್ದ ನಿನ್ನಪ್ಪನ ದನಿಯನ್ನು ಅವರು ಅಡಗಿಸುತ್ತಿದ್ದರು ; ಅವನ ಕಣ್ಣ ಬೆಳಕನ್ನವರು ನಂದಿಸುತ್ತಿದ್ದರು , ನಿನ್ನ ನೋಡಲು ನಂಗೆ ಕಣ್ಣೇ ಇರುತ್ತಿರಲಿಲ್ಲವಲ್ಲಾ ಪುಟ್ಟೀ , ನಿನ್ನ ಬೆರಳನ್ನು ಹಿಡಿಯಹೊರಟ ನನ್ನ ಕೈಯನ್ನವರು ಕಟ್ಟುತ್ತಿದ್ದರು , ನನ್ನ ಅರಿವಿನಾಚೆಯ ಲೋಕದಲ್ಲಿ ನನ್ನ ಕೂಡಿಹಾಕುತ್ತಿದ್ದರು . ನಾನು ಎಂದಿಗೂ ಅಮ್ಮನೇ ಆಗುತ್ತಿರಲಿಲ್ಲ . ನಾನು , ನಿನ್ನಪ್ಪ ತುಂಬ ಬಯಸಿದ ನಿನ್ನನ್ನ , ನಮ್ಮ ಬದುಕಿನ ಬೆಳದಿಂಗಳನ್ನ ನಿನ್ನ ಇರುವಿಕೆಯನ್ನ ನಿಯಂತ್ರಿಸಿದ ಕೈ ನಮ್ಮದಾಗಿರದೇ ಇನ್ಯಾರದ್ದೋ ಆಗಿದ್ದು ತುಂಬ ಅನ್ಯಾಯ ಅನಘಾ . ಯಾರದೋ ನಿಯಂತ್ರಣಕ್ಕೆ ಸಿಕ್ಕಿ ನಿನ್ನ ಕಳೆದುಕೊಂಡಾಗ ನಾವಿಬ್ಬರೂ ಅಸಹಾಯಕ ಭಿಕಾರಿಗಳಾಗಿಬಿಟ್ಟಿದ್ದೆವು . ಅನಘಾ , ನೀನು ಹೋದಾಗಿನಿಂದ ನಮ್ಮನ್ನು ಕವಿದು ನಿಂತ ಕತ್ತಲೆಗೆ ಕೊನೆಯೇ ಇಲ್ವೇನೋ ಅನ್ನಿಸಿದೆ . ಕಗ್ಗತ್ತಲ ಧ್ರುವದಲ್ಲಿ ನಿರಾಶೆಯ ಹಿಮದಲ್ಲಿ ಹೆಪ್ಪುಗಟ್ಟುತ್ತಿದ್ದೀವಿ . ನೀನಿದ್ದ ದಿನಗಳ ಜಾದೂವಿನ ಒಂದೇ ಒಂದು ಅಂಶ ಎಲ್ಲೋ ಮೂಲೆಯಲ್ಲಿ ಅಡಗಿ ಕುಳಿತಿದೆ . ಆಗಾಗ ಕತ್ತಲು ಕವಿದ ಆಕಾಶದಲ್ಲಿ ಫಳ್ಳೆಂದು ಮಿಂಚಿ ಮರೆಯಾಗುತ್ತದೆ . ಪಿಸುನುಡಿಯುತ್ತದೆ . " ಕೃಷ್ಣಪಕ್ಷ ಮುಗಿದ ಕೂಡಲೇ ಅನಘಾ ಬರ್‍ತಾಳೆ " ಅಂತ . ಹೌದಾ ಅನಘಾ ? ಈ ಕೃಷ್ಣಪಕ್ಷ ಮುಗಿಯುತ್ತಾ ? ನಿನ್ನಪ್ಪನಿಗೆ ತುಂಬ ದಿಗಿಲು . " ಇಲ್ಲಿ ಎಷ್ಟು ಕತ್ತಲೇಂದ್ರೆ ಅನಘಾ ಅಕಸ್ಮಾತ್ ಬಂದ್ರೂ ನಾವು ಕಾಣಿಸ್ತೀವಾ " ಅಂತ . ಮರುಗಳಿಗೇಲಿ ಅವನೇ ಸಮಾಧಾನ ಮಾಡಿಕೊಳ್ಳುತ್ತಾನೆ . " ಅವಳು ಬೆಳದಿಂಗಳಲ್ವಾ , ನಮಗಂತೂ ಕಾಣಿಸುತ್ತಾಳೆ " ಅಂತ . ಒಂದು ಬಾರಿ ಸುರಿದ ನಿನ್ನ ಧಾರೆಯನ್ನ ಹಿಡಿದಿಡಲಾಗದ ಅಸಹಾಯಕತೆ ನನ್ನ ಮಂಜುಗಟ್ಟಿಸಿದೆ ಅನಘಾ . ಇಲ್ಲಿ ಬಿಸಿ ಇರುವುದು ಒಂದೇ - ಕಣ್ಣೀರು . ನಿನ್ನ ಅಮ್ಮನಾಗಲಾರದವಳು . ( ಕೊನೆಯ ಮಾತು - ಕ್ಷಮೆಯಿದೆಯೇ ? . . ಇಲ್ದೇ ಇದ್ರೂ ಪರವಾಗಿಲ್ಲ , ಇದೆ ಅಂತ ಹೇಳು ಸಾಕು )
Download XML • Download text