kan-9
kan-9
View options
Tags:
Javascript seems to be turned off, or there was a communication error. Turn on Javascript for more display options.
ನವದೆಹಲಿ ( ಪಿಟಿಐ ) : ಬ್ರಹ್ಮಪುತ್ರ ನದಿಗೆ ಚೀನಾ ನಿರ್ಮಿಸಲಿರುವ ಅಣೆಕಟ್ಟೆಯಿಂದ ರಾಷ್ಟ್ರಕ್ಕೆ ತೊಂದರೆಯಾಗಲಿದೆ ಎಂಬ ಗ್ರಹಿಕೆಗಳನ್ನು ಭಾರತ ಮಂಗಳವಾರ ತಳ್ಳಿಹಾಕಿದೆ . ಈ ಯೋಜನೆ ಬಗ್ಗೆ ತಕ್ಷಣಕ್ಕೆ ಭೀತಿ ಪಡುವಂಥದ್ದೇನೂ ಇಲ್ಲ ಎಂದು ಅದು ಹೇಳಿದೆ . ` ಜಂಗ್ಮುನಲ್ಲಿ ಚೀನಾ ಅಣೆಕಟ್ಟೆ ನಿರ್ಮಿಸುತ್ತಿದೆ ಎಂಬುದು ನಿಜ . ಜಲ ವಿದ್ಯುತ್ ಯೋಜನೆಗಾಗಿ ಹರಿಯುವ ನೀರನ್ನು ಬಳಸುತ್ತಿದ್ದು ಇಲ್ಲಿ ನೀರಿನ ಸಂಗ್ರಹ ಮಾಡುತ್ತಿಲ್ಲ . ಇದು ಭಾರತದ ನದಿ ಹರಿವಿನ ದಿಕ್ಕಿನ ಪ್ರದೇಶಗಳಿಗೆ ಧಕ್ಕೆ ಉಂಟು ಮಾಡುವುದಿಲ್ಲ . ಈ ವಿಷಯವನ್ನು ನಮ್ಮದೇ ಮೂಲಗಳು ಖಚಿತ ಪಡಿಸಿವೆ ಎಂದು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ . ಎಂ . ಕೃಷ್ಣ ಹೇಳಿದ್ದಾರೆ . ವರದಿಗಾರರ ಜತೆ ಮಾತನಾಡುತ್ತಿದ್ದ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿ , ` ಅಣೆಕಟ್ಟೆ ಬಗ್ಗೆ ಭೀತಿ ಪಡುವ ತುರ್ತು ಇಲ್ಲ ~ ಎಂದು ಅವರು ತಿಳಿಸಿದ್ದಾರೆ . ಬ್ರಹ್ಮಪುತ್ರ ನದಿಗೆ ಅಣೆಕಟ್ಟು ನಿರ್ಮಾಣ ಮತ್ತು ಚೀನಾದ ಉತ್ತರ ಭಾಗಕ್ಕೆ ನದಿ ದಿಕ್ಕು ಬದಲಾಯಿಸುವ ಆಲೋಚನೆಗಳ ಕುರಿತ ಇತ್ತೀಚಿನ ವರದಿಗಳು ` ಹೊಸದೇನಲ್ಲ . ಈ ಹಿಂದೆಯೇ ಗೊತ್ತಿರುವ ವಾಸ್ತವಾಂಶಗಳು ~ ಎಂಬುದಾಗಿಯೂ ಅವರು ಪ್ರತಿಕ್ರಿಯಿಸಿದ್ದಾರೆ . ಬ್ರಹ್ಮಪುತ್ರದ ಜಲಾನಯನ ಪ್ರದೇಶ ಬಹುತೇಕ ಭಾಗ ಭಾರತದ ಗಡಿ ವ್ಯಾಪ್ತಿಯಲ್ಲಿದೆ . ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಇದರ ಲಾಭ ಪಡೆದು ನದಿ ನೀರನ್ನು ಬಳಸಿಕೊಳ್ಳಬೇಕಾಗಿದೆ . ಇದು ಬಹಳ ಮುಖ್ಯ ವಿಷಯ ಎಂದಿದ್ದಾರೆ . ಸಾಂಘಿ ಶೃಂಗಸಭೆಯಲ್ಲಿ ಭಾಗವಹಿಸಲು ಕಜಕ್‌ಸ್ತಾನಕ್ಕೆ ಹೊರಟಿದ್ದ ಅವರು ಭಾರತ ಮತ್ತು ಚೀನಾ ನಡುವಣ ದ್ವಿಪಕ್ಷೀಯ ವಿಷಯಗಳು ಅಲ್ಲಿ ಚರ್ಚೆಯಾಗುವುದೇ ಎಂಬುದು ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ . ` ಆದರೂ ಭಾರತವು ಎಲ್ಲಾ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ನಾನು ರಾಷ್ಟ್ರದ ಜನತೆಗೆ ಖಚಿತಪಡಿಸುತ್ತೇನೆ . ನಾನು ಹೇಳಿದಂತೆ ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳು ಬ್ರಹ್ಮಪುತ್ರ ನದಿಯ ಸಂಪೂರ್ಣ ಉಪಯೋಗ ಪಡೆದುಕೊಳ್ಳಬೇಕು ~ ಎಂದು ನುಡಿದಿದ್ದಾರೆ .
ಕಡಬ : ಅನ್ಯ ಧರ್ಮದ ಯುವತಿಯೊಬ್ಬಳ ಜೊತೆ ನಗರದ ಐಸ್ ಕ್ರೀಮ್ ಪಾರ್ಲರ್ ಒಂದಕ್ಕೆ ಐಸ್ ಕ್ರೀಮ್ ಮೆಲ್ಲಲು ಹೋಗಿದ್ದ ಯುವಕನೊಬ್ಬನಿಗೆ ಸಂಘ ಪರಿವಾರದ ಸದಸ್ಯರು ಹಲ್ಲೆ ನಡೆಸಿದ ಘಟನೆ ನಡೆದಿದೆ . ಕಡಬದ ಮಲ್ಲೇಶ್ವರ ಮೂಡೆ ಬಳಿಯ ನಿವಾಸಿ ರಾಮಕುಂಜ ಕಾಲೇಜಿನ ವಿದ್ಯಾರ್ಥಿ ರಯೀಸುದ್ದೀನ್ ಎಂಬಾತ ಸುಳ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿಯುತ್ತಿರುವ ಮಾರ್ದಾಳ ನಿವಾಸಿ ಅನ್ಯಧರ್ಮೀಯ ಯುವತಿಯೋಬ್ಬಳೊಂದಿಗೆ ನಗರದ ಐಸ್ ಕ್ರೀಮ್ ಪಾರ್ಲರಿಗೆ ತೆರಳಿ ಐಸ್ ಕ್ರೀಮ್ ತಿನ್ನುತ್ತಿದ್ದಾಗ ಅಲ್ಲಿಗೆ ದಾಳಿ ನಡೆಸಿದ ಸಂಘ ಪರಿವಾರದ [ . . . ]
ಖಂಡಿತ ಒಳ್ಳೆಯ ನಿರ್ಧಾರವಿದು . ತುಳು ಲಿಪಿಯ ಬಳಕೆ ಪುನಃ ಆರಂಭವಾಗಲಿ , ತುಳುವಿನಲ್ಲೂ ಲಿಖಿತ ಸಾಹಿತ್ಯಗಳು ಮೂಡಿಬರಲಿ ಎಂದು ಆಶಿಸೋಣ . ಯಾವುದೋ ರಾಜ್ಯದ ಭಾಷೆಯನ್ನ ನಮ್ಮ ಮಕ್ಕಳು ಕಲಿಯೋಬದಳು ನಮ್ಮದೇ ನಾಡಿನ ' ತುಳು ' ಭಾಷೆಯನ್ನೂ ಕಲಿಯುವುದು ಒಳ್ಳೆಯದು .
ರಜೆ ಅಂದರೆ ಮುಂಜಾವನ್ನು ಸ್ವಲ್ಪ ಮುಂದೂಡಿ ಮಲಗಿಬಿಡುವುದರಿಂದ , ಏಳಾದರೂ ಏಳಲೇಬೇಕೆನ್ನಿಸಿರಲಿಲ್ಲ , ಬಹಳ ಚಳಿ ಅಲ್ವಾ ಅದಕ್ಕೆ ನನ್ನ ಬಳಿಯಿಂದ ಬಿಡುಗಡೆ ಸಿಗದೇ ಬೆಚ್ಚಗೆ ತಾಚಿ ಮಾಡುತ್ತಿದ್ದಳು ತುಂಟಿ ನನ್ನಾಕೆ ನನ್ನ ಜತೆಗೇ . . . ಹೀಗಿರುವುದನ್ನು ನೋಡಲಾಗದೇ ಹೊಟ್ಟೆಯುರಿದು ವಾಣಿ ( ದೂರವಾಣಿ ) ಕಿರುಚಿಕೊಂಡಳು , " ಇವರಿಗೇನು ಹೆಂಡ್ತಿ ಮಕ್ಳು ಇಲ್ವಾ ಹೊತ್ಕೊಂಡು ಹಾಯಾಗಿ ಮಲಗೋದು ಬಿಟ್ಟು ಹೊತ್ತೇರೊ ಮುಂಚೇನೆ ಕರೆ ಮಾಡಿದಾರೆ " ಅಂತ ಗೊಣಗುತ್ತಲೇ ಫೋನೆತ್ತಿದರೆ , ಹಿನ್ನೆಲೆ ಸಂಗೀತದಂತೆ " ಎಲ್ರೂ ನಿಮ್ಮಂತೆ ಸುಖಜೀವಿಗಳಲ್ಲ ಬಿಡಿ " ಅನ್ನುತ್ತ ಹೆಗಲಿಗೆ ತಲೆಯಾನಿಸಿ ಹುಲ್ಲಿನ ಹೊರೆಗೆ ಹುರಿ ( ಹಗ್ಗ ) ಕಟ್ಟುವರಂತೆ ಬಿಗಿದಪ್ಪಿ ಬಿದ್ದುಕೊಂಡಳು , ಹಾಗಾಗಿ ಎದ್ದೇಳದೇ ಬಿದ್ದಲ್ಲಿಂದಲೇ ಮಾತಾಡತೊಡಗಿದೆ ಅವಳೂ ಕಿವಿಯಾದಳು , ಪರಿಚಯದವರೊಬ್ಬರು ಕರೆ ಮಾಡಿದ್ದರು , " ಮಲಗಿದ್ದಿರಿ ಅಂತ ಕಾಣ್ತದೆ " ಅಂತ ಆಕಡೆಯಿಂದ ಅಂದರೆ , ನಾವು ಹೀಗೆ ಮಲಗಿರುವುದು ಅವರಿಗೆ ಕಾಣ್ತಿದೆಯೋ ಏನೊ ಅನ್ನೊ ಸಂಶಯ ಬಂದು " ಏನು ನಿಮಗೆ ಕಾಣ್ತಿದೆಯೆ " ಅಂದೆ , " ಇಲ್ಲ ಹಾಗೆ ಊಹಿಸಿದೆ " ಅಂದ್ರು , ಹಾಗೋ ಸರಿ ಒಳ್ಳೆದಾಯ್ತು ಅಂದುಕೊಂಡು , ಅದೂ ಇದೂ ಹಾಳು ಮೂಳು ಮಾತಾಡಿದ್ದು ಆಯ್ತು , ಕೊನೆಗೆ " ಮತ್ತೇನು ವಿಶೇಷಾ , ಏನಂತಾರೆ ನಿಮ್ಮಾಕೆ " ಅಂತ ಸಾಂದರ್ಭಿಕವಾಗಿ ಕೇಳಿದರು , " ನನ್ನಾಕೆ ಏನಂತಾರೆ ಐವತ್ತು ಆಯ್ತಲ್ಲ " ಅಂದೆ , ಅಲ್ಲೇ ಮುಖ ತಿರುಗಿಸಿ ಹುಬ್ಬು ಗಂಟಿಕ್ಕಿ , ಹುರಿದು ತಿಂದು ಬಿಡುವಂತೆ ನೋಡಿದಳು , ಮತ್ತಿನ್ನೇನು ಇನ್ನೂ ಮೂವತ್ತೂ ಆಗದವಳಿಗೆ ಐವತ್ತು ಆಯಿತೆಂದರೆ , ಆಕಡೆಯಿಂದ ಅವರೂ " ಐವತ್ತಾ , ಜೋಕ್ ಮಾಡ್ತಿಲ್ಲ ತಾನೆ " ಅಂದ್ರು . ಇಬ್ಬರಿಗೂ ಉತ್ತರಿಸುವಂತೆ " ನನ್ನಾk ಲೇಖನಗಳು ಐವತ್ತು ಆಯ್ತು " , ಅಂದೆ . ಫೋನಿಡುವುದಕ್ಕೂ ಬಿಡದೆ ಇವಳು ಉತ್ಸುಕತೆಯಲ್ಲಿ " ರೀ ಹೌದೇನ್ರಿ " ಅಂತ ಪುಟಿದೆದ್ದು ಕೂತು ಕೈಕುಲುಕಿ ಅಭಿನಂದಿಸಿಯೂಬಿಟ್ಟಳು , ವಾಣಿಯ ಪಕ್ಕ ಸರಿಸಿಟ್ಟು ಮೇಲೆದ್ದು ಕೂತರೆ " ರೀ ಏನಾದ್ರೂ ಹೊಸದು ಮಾಡೋಣ ಐವತ್ತನೇ ಲೇಖನಕ್ಕೆ " ಅಂತ ತಲೆ ಕೆರೆದುಕೊಳ್ಳುತ್ತ ಹೊಸ ಐಡಿಯಾಗಾಗಿ ತಡಕಾಡಿದಳು " ಏನೊ ಒಂದು ಬರೆದರಾಯ್ತು ಬಿಡು " ಅಂತಿದ್ದರೂ ಕೇಳದೇ , " ಈ ದೊಡ್ಡ ದೊಡ್ಡ ಸಾಹಿತಿಗಳಿಗೆ ಐವತ್ತೊ ನೂರೊ ವಯಸ್ಸಾದಾಗ ಪುಟ್ಟ ಸಂದರ್ಶನ ಮಾಡೊದಿಲ್ವೇ ಹಾಗೆ ಸಂದರ್ಶನ ಮಾಡುತ್ತೀನಿ ತಾಳಿ " ಅಂತ ಸಿದ್ಧವಾದಳು , ಸಾಹಿತಿ . . ನೀ ಸಾಯುತಿ ಅಂತ ಸಾಯಿಸ್ತಾಳೆ ಇಂದು ನಿಜವಾಗಲೂ ಅಂತ ಅನಿಸುತ್ತಿತ್ತು . ಅವಳು ಸಂದರ್ಶಕಿಯಾದರೆ , ನಾನು ಉತ್ತರಿಸಲು ಕೂತೆ , " ಒನ್ ಟೂ ತ್ರೀ ಮೈಕ್ ಟೆಸ್ಟಿಂಗ ಮೈಕ್ ಟೆಸ್ಟಿಂಗ್ " ಅಂತ ಪಕ್ಕದಲ್ಲಿದ್ದ ಟಾರ್ಚನ್ನೇ ಮೈಕನಂತೆ ಹಿಡಿದಳು , " ಲೇ ಒಳ್ಳೆ ಚುನಾವಣಾ ರ್‍ಯಾಲಿನಲ್ಲಿ ಭಾಶಣದ ಮೈಕ್ ಟೆಸ್ಟ ಮಾಡಿದ ಹಾಗೆ ಮಾಡ್ತಾ ಇದೀಯಾ , ಸಂದರ್ಶನದಲ್ಲಿ ಎಲ್ಲ ಹಾಗೆ ಮಾಡಲ್ಲ " ಅಂದ್ರೆ , " ಈಗ ಸಂದರ್ಶಕಿ ಯಾರು , ನಾನು . . . ಸುಮ್ನೇ ಕೂತ್ಕೊಳ್ಳಿ " ಅಂತ ಅಬ್ಬರಿಸಿದಳು . " ಈ ದಿನ ನಮ್ಮ ಜತೆ ನನ್ನಾk ಲೇಖನ ಬರೆಯುವ ಲೇಖk , ಗಣk ಅಭಿಯಾಂತ್ರಿk , ಯುವk ನಮ್ಮೊಂದಿಗಿದ್ದಾರೆ , ಅವರ ಬಗ್ಗೆ ಜಾಸ್ತಿ ಏನು ಹೇಳೊದು ಹುಟ್ಟಿನಿಂದ ಹೊಟ್ಟೆ ಹೊರೆಯುವ ಉದ್ಯೋಗದವರೆಗೆ ಅವರ ವೆಬಸೈಟಿನಲ್ಲಿ ಉದ್ದುದ್ದಕ್ಕೆ ಬರೆದುಕೊಂಡಿದ್ದಾರೆ , ಹೊಗಳಿಕೊಂಡಿದ್ದಾರೆ , ಅದೆಲ್ಲಾ ನಂಬೋಕೇ ಹೋಗಬೇಡಿ , ನಂಬಿದರೆ ಕಿವಿಮೇಲೆ ಹೂವ ಏನು ಹೂವಿನ ಕುಂಡವನ್ನೇ ಇಡ್ತಾರೆ , ಅದನ್ನ ಬಿಟ್ಟು ಹೊಸದನ್ನೇನಾದರೂ ಕೇಳೊಣ ಅಂತ ಇಲ್ಲಿ ನಮ್ಮೊಂದಿಗಿದ್ದಾರೆ , ಬನ್ನಿ ಮಾತಾಡೋಣ . . . " ಅಂತ ಚಿಕ್ಕ ಕಿರು ಪರಿಚಯ ನೀಡಿದಳು " ಅಲ್ಲಾ ನೀವು ಏನು ಹೊಗಳ್ತಾ ಇದೀರೊ , ತೆಗಳ್ತಾ ಇದೀರೊ ಏನ್ ಕಥೆ , ರೇಶಿಮೇ ವಸ್ತ್ರದಲ್ಲಿ ಮುಚ್ಚಿ ಚಪ್ಪಲಿಯಲ್ಲಿ ಏಟು ಕೊಟ್ಟಹಾಗಿದೆ " ಅಂದೆ . " ನಾವು ಕೇಳೊ ಪ್ರಶ್ನೆಗಳಿಗೆ ಉತ್ತರ ಕೊಡ್ರಿ , ನಮಗೆ ಹೇಗೆ ಬೇಕೊ ಹಾಗೆ ತಿರುಚಿ ಬರೆದುಕೊಳ್ತೀವಿ " ಅಂತ ಪಕ್ಕಾ ಸಂದರ್ಶನದ ಬಿಸಿ ತಲುಪಿಸಿದಳು , ಹಾಟ್ ಸೀಟ್ ಮೇಲೆ ಕುಳಿತಾಗಿದೆ ಎನೂ ಮಾಡೊಕಾಗಲ್ಲ ಅಂತ ಸುಮ್ಮನಾದೆ . * * * ಸಂದರ್ಶಕಿ : ಕೆಲ ದಿನಗಳ ಹಿಂದೆ , ನಿಮಗೆ ಅಪಘಾತ ಆಗಿತ್ತು ಹೇಗೊ ದೇವರ ದಯೆ ಇಂದು ನಮ್ಮೊಂದಿಗೆ ಕೂತು ಮಾತಾಡುತ್ತಿದ್ದೀರಿ , ಆ ದಿನ ರಸ್ತೇಲಿ ಹಾಗೆ ಬಿದ್ದುಕೊಂಡಿದ್ದರಲ್ಲ ಹೇಗನ್ನಿಸ್ತಾ ಇತ್ತು ನಿಮಗೆ ? ನಾನು : ಬಹಳ ಚೆನ್ನಾಗಿತ್ತು , ಯಾರಾದ್ರೂ ಬಂದು ಹೊದಿಕೆ ಒಂದು ಹೊದಿಸಿ ಒಂದು ತಲೆದಿಂಬು ಕೊಟ್ರೆ ಇನ್ನೂ ಚೆನ್ನಾಗಿರುತ್ತೆ ಅನಿಸ್ತಾ ಇತ್ತು , ರೀ ಎನ್ ಪ್ರಶ್ನೇ ಅಂತಾ ಕೇಳ್ತೀರಾ , ರಸ್ತೆ ನಡುವೆ ಬಿದ್ಕೊಂಡಿದ್ದೆ , ಹಿಂದೆ ಏನಾದ್ರೂ ಕಾರು ಗೀರು ಬಂದ್ರೆ ಏನಾಗಿರಬೇಡ , ಹೇಗನ್ನಿಸುತ್ತೇ ಅಂತೆ , ಅಪಘಾತದ ಆಘಾತದ ಬಗ್ಗೆ ಏನ್ರೀ ಗೊತ್ತು ನಿಮಗೆ , ಒಳ್ಳೆ ನ್ಯೂಜ್ ಚಾನಲ್ಲಿನವರ ಹಾಗೆ ಎಲ್ಲೊ ಅಪಘಾತದಲ್ಲಿ ಸಿಲುಕಿ ಗಾಯ ಅಗಿರುವವರ ಮುಂದೆ ನಿಂತು ' ಹೇಗನಿಸ್ತಾ ಇದೆ ನಿಮಗೆ ಈಗ ' ಅಂತ ಕೇಳಿದ ಹಾಗೆ ಕೇಳ್ತಿದೀರಾ ನಾನು ಹಾಗೆ ಸಿಡುಕಿದ್ದು ನೋಡಿ , ಸಂದರ್ಶಕಿ ಹೆದರಿ , ಇಲ್ಲ ಬಿಡಿ ಆ ವಿಷಯ ಬೇಡ ಅಂತ ಹೊಸ ಬೇರೆ ಏನಾದ್ರೂ ಮಾತಾಡೊಣ ಅಂತ ವಿಷಯ ಬದಲಾಯಿಸಿದಳು . * * * ಸಂ : ನಿಮ್ಮ ಜತೆ ನಿಮ್ಮಾಕೆಯನ್ನೂ ಕರೆತರಬಹುದಿತ್ತಲ್ಲ , ಯಾಕೆ ಬಂದಿಲ್ಲ , ಏನಾದ್ರೂ . . . ? ನಾ : ಅವಳು ತವರುಮನೆಗೆ ಹೋಗಿದಾಳೆ , ಇಲ್ಲಾಂದ್ರೆ ಬಂದಿರ್ತಾ ಇದ್ಲು , ನೀವು ಹೀಗೆ ಪ್ರಶ್ನೆ ಕೇಳಿ ಏನು ಜಗಳ ಇಲ್ದೇ ಇದ್ರೂನೂ , ಏನೊ ಕಥೆ ಹುಟ್ಟಿಸಿ ಬಿರುಕು ಮೂಡಿಸಿಬಿಡ್ತೀರಾ ನಂಗೊತ್ತಿಲ್ವಾ . ಹಾಗಂದು ಅವರಿಗೆ ಸರಿಯಾದ ತಿರುಗೇಟೇ ನೀಡಿದೆ . * * * ಸಂ : ಸರಿ ಸರಿ , ನಿಮ್ಮಾಕೆ ತವರುಮನೆಗೆ ಹೋಗಿದಾರೆ ಒಪ್ಕೋತೀವಿ , ಹಾಗೆ ಒಂದು ದಿನ ನಿಮ್ಮಾಕೆ ನಿಮ್ಮನ್ನ ಬಿಟ್ಟು ಹೊರಟು ಹೋದ್ರೆ ಏನ್ ಮಾಡ್ತೀರಾ ? ಹಾಗಾಗದಿರಲಿ ಅಂತಾನೇ ನಮ್ಮಾಸೆ ಆದರೆ ಹಾಗೆ ಬಿಟ್ಟು ಹೋದರೆ ? ನಾ : ಅವಳೆಲ್ಲಿ ಹೋಗ್ತಾಳೆ ? ಎಲ್ಲೂ ಹೋಗಲ್ಲ ನನ್ನ ಮನಸಲ್ಲಿ ಸದಾ ಇದ್ದೇ ಇರ್ತಾಳೆ , ಹಾಗೊಂದು ವೇಳೆ ಬಿಟ್ಟು ಹೋದರೂ ಹುಚ್ಚನಾಗಿ ನಿಮಗೆ ಇನ್ನೊಂದು ಸುದ್ದಿಯಂತೂ ಆಗಲ್ಲ ಬಿಡಿ , ಅವಳೊಂದು ಕನಸು , ಆ ಕನಸು ಕಮರಲು ಬಿಡುವುದಿಲ್ಲ , ನಾನಿರುವವರೆಗೆ ನನ್ನಾk ನನ್ನೊಂದಿಗೇ . . . * * * ಸಂ : ನೀವು ಅತ್ಯಂತ ಪ್ರೀತಿಸುವ ಹುಡುಗಿ ಯಾರು ? ನಾ : ಹೀಗೆ ಥಟ್ ಅಂತ ಹೇಳಿ ಅಂತ ಕೇಳಿದ್ರೆ ಯಾರು ಅಂತ ಹೇಳೊದು . . . ಆಯ್ಕೆ ಕೊಡ್ರಿ ಆರಿಸೋಕೆ . ಹಾಂ , ಇದಕ್ಕೆ ಆಯ್ಕೆ ಬೇರೆ ಬೇಕಾ ನಿಮಗೆ , ಎಷ್ಟು ಜನರನ್ನ ಪ್ರೀತಿಸ್ತೀರಾ ? ಅಂತ ಕಿವಿ ಹಿಡಿದಳು , " ಲೇ ಲೇ ಬಿಡೆ ನಿನ್ನಲ್ಲದೇ ಇನ್ಯಾರನ್ನೇ ಪ್ರೀತ್ಸೊದು " ಅಂತ ಬಿಡಿಸಿಕೊಂಡೆ . * * * ಸಂ : ನಿಮ್ಮಾಕೆಯನ್ನ ಬಿಟ್ಟರೆ , ಇನ್ನೊಬ್ಬರು ಯಾರನ್ನ ಬಿಟ್ಟಿರೊಕೆ ನಿಮ್ಮಿಂದ ಆಗಲ್ಲ ? ನಾ : ವಾಣಿನಾ . . . ವಾಣಿ ಅಂದ್ರೆ ಬೇರೆ ಯಾರೊ ಹುಡುಗಿ ಅಲ್ಲ ಕಣ್ರೀ , ಮತ್ತೆ ಹೊಸ ಗಾಸಿಪ್ಪು ಏನೂ ಹುಟ್ಟು ಹಾಕಬೇಡಿ , ವಾಣಿ ಅಂದ್ರೆ ದೂರವಾಣಿ , ನನ್ನ ಮೊಬೈಲು , ಅವಳಿಲ್ದೇ ಒಂದು ದಿನ ಕೂಡ ಊಹಿಸಲಾಗಲ್ಲ : ) * * * ಸಂ : ಸಿಟ್ಟು ಜಾಸ್ತಿ ಅಂತೆ ನಿಮಗೆ ? ನಿಮಗೆ ತುಂಬಾ ಸಿಟ್ಟು ಬಂದ ಪ್ರಸಂಗ ಯಾವುದಾದ್ರೂ ನಮ್ಮೊಂದಿಗೆ ಹಂಚಿಕೊಳ್ತೀರಾ ? ನಾ : ಹೂಂ , ಸ್ವಲ್ಪ ಮುಂಗೋಪ , ಈಗೀಗ ಬಹಳ ಕಮ್ಮಿಯಾಗಿದೆ ಆದ್ರೂ ಬಹಳ ಸಿಟ್ಟು ಬಂದದ್ದು ಅಂದ್ರೆ , ಅದೊಂದು ದಿನ ನನ್ನಾk ಊರಿಂದ ವಾಪಾಸು ಬಂದಾಗ ನೀಲವೇಣಿಯಿಂದ nilವೇಣಿ ಆಗಿಬಿಟ್ಟಿದ್ಲು , ಅಲ್ಲಾ ಅಷ್ಟುದ್ದ ಅಂದವಾದ ಕೂದಲು ಯಾಕೆ ಹಾಗೆ ಹೇಳದೇ ಕೇಳದೆ ಕತ್ತರಿಸಿಹಾಕಿದ್ಲು ಅಂತ ತುಂಬಾ ಸಿಟ್ಟು ಬಂದಿತ್ತು , ಮತ್ತೆ ಬರದೇ ಇರುತ್ತಾ ಆ ವೇಣಿಯೊಂದಿಗೆ ಹಲವು ಕೀಟಲೆ ಮಾಡಿದ್ದು ಎಲ್ಲಾ ಅಳಿಸಿ ಹಾಕಿದಂತಾಗಿತ್ತಲ್ಲ . ಈಗ ಮತ್ತೆ ಅವಳು ನೀಲವೇಣಿಯೇ . . . ಹಾಗನ್ನೋದೇ ತಡ , ಖುಷಿಯಾಗಿ ತನ್ನ ಜಡೆ ತುದಿ ಕೂದಲಿನಲ್ಲಿ ಕಚಗುಳಿಯಿಟ್ಟಳು . * * * ಸಂ : ನೀವು ವೃತ್ತಿಯಲ್ಲಿ ಐಟಿ ಉದ್ಯೋಗಿ , ಕೋಡು ಕುಟ್ಟೋದು ಬಿಟ್ಟು ಈ ಕಥೆ ಕವನದ ಗೀಳು ಹೇಗೆ ಬಂತು ? ನಾ : ಹಾಗೆ ನೋಡಿದರೆ ನಾನು ಕಾನನದ codeಕೋಣವೇ ಸರಿ , ಕೋಡ ಬರೆಯುವುದ ಬಿಟ್ಟರೆ ಬೇರೇ ಏನೂ ಜಾಸ್ತಿ ಗೊತ್ತಿಲ್ಲ , ಅದು ವೃತ್ತಿ , ಇನ್ನು ಪ್ರವೃತ್ತಿ ಅಂತ ಒಂದಿರುತ್ತೆ ನೋಡಿ , ಅದೇ ಇದು , ಮನದಲ್ಲಿನ ಹಲವು ವಿಚಿತ್ರ , ಹುಚ್ಚು ಕನಸುಗಳನ್ನು ಬರೆಯುವ ಪ್ರಯತ್ನ . * * * ಸಂ : ಸರಿ ಈ ನನ್ನಾk ಅಂತ ಪಾತ್ರ ಸೃಷ್ಟಿ ಮಾಡಿ ಬರೆಯೋಕೆ ಶುರು ಮಾಡಿದ್ದು ಹೇಗೆ ? ನಾ : ಹಾಗೇ ಸುಮ್ಮನೇ , ಅಂತ ಹೇಳಿದ್ರೆ ಸಿನಿಮಾ ಹೆಸರು ಅಂತೀರಾ , ಆದ್ರೆ ಶುರುವಾಗಿದ್ದೇ ಹಾಗೇ . . . ಒಂದಿನಾ ಸಹುದ್ಯೊಗಿ ಕಳಿಸಿದ ಒಂದು ಈ ಥರದ ರಸನಿಮಿಷಗಳ ಕಥೆ ಓದಿ , ತಲೆಯಲ್ಲಿ ಒಂದು ಐಡಿಯಾ ಬಂತು ನನ್ನಾಕೆ ಅಂತ ಒಬ್ಬಳಿದ್ದಿದ್ದರೆ ಹೇಗೆಲ್ಲ ನಾನಿರುತ್ತಿದ್ದೆ ಅಂತ ಬರೆಯಬೇಕನಿಸಿತು , ಅದನ್ನೇ ಬರೆದೆ . . . ಚೆನ್ನಾಗಿದೆ ಬ್ಲಾಗಗೆ ಹಾಕು ಅಂದ್ರು ಗೆಳೆಯರು . . . ಹಾಕಿದೆ , ಬಹಳ ಜನ ಓದಿ ಬೆಂಬಲಿಸಿದರು , ಹಾಗೆ ಇಲ್ಲೀವರೆಗೆ ಬಂದು ತಲುಪಿಬಿಟ್ಟೆ . * * * ಸಂ : ಮದುವೇನೇ ಆಗಿಲ್ಲ ಅಂತೀರಾ ? ನಿಜಾನಾ ? ನಾ : ಇಲ್ಲ ಇನ್ನೂ ಆಗಿಲ್ಲ , ಇದೊಂಥರಾ ಹುಡುಗಾಟ , ಹುಡುಕಾಟ ಕೂಡ ಇನ್ನೂ ಶುರುವಾಗಿಲ್ಲ , ಇಲ್ಲಿ ಬರುವ ನನ್ನಾk ಒಂದು ಸುಂದರ ಕಲ್ಪನೆ ಮಾತ್ರ . ಇದನ್ನ ಕೇಳಿ , ಅವಳು ಬೇಜಾರಾಗಿ " ಏನಂದ್ರಿ , ನಾನು ಬರೀ ಕಲ್ಪನೆನಾ ? " ಅಂತ ಪೆಚ್ಚುಮೋರೆ ಹಾಕಿದ್ಲು , " ಹ್ಮ್ ಹಾಗಲ್ಲ ಕಣೇ , ವಾಸ್ತವಾಗಲು ಕಾದಿರುವ ಕನಸು ನೀನು , ಒಂದಲ್ಲ ಒಂದು ದಿನ ಈ ಕಲ್ಪನೆ ನನ್ನ ಕಣ್ಣ ಮುಂದೆ ನಿಂತಿರುತ್ತೆ " ಅಂತ ಸಮಾಧಾನಿಸಬೇಕಾಯ್ತು , ಆ ಮಾತಿಗೆ ಪುಳಕಗೊಂಡಳು . * * * ಸಂ : ಅಲ್ಲಾ ಇಷ್ಟೆಲ್ಲ ಬರೆಯೋಕೆ ಯಾವಾಗ ಸಮಯ ಸಿಗುತ್ತೇ ನಿಮಗೆ ? ಯಾವಾಗ ನೋಡಿದ್ರೂ ಬೀಜೀ ಅಂತೀರಾ ಮತ್ತೆ . ನಾ : ವೀಕೆಂಡಿನಲ್ಲಿ ಹಾಗೆ ಸ್ವಲ್ಪ ಸಮಯ ಮಾಡ್ಕೊತೀನಿ , ಬೇರೆ ಎನೂ ಇಲ್ದೇ ಸುಮ್ನೇ ಕೂರೊದಂದ್ರೆ ಸುಮ್ನೇನಾ , ಸಾಧ್ಯ ಆದಾಗಲೆಲ್ಲ ಕಂಡ ಕನಸುಗಳನ್ನೆಲ್ಲ ಪೋಣಿಸಿ ಬರೆದು ಬೀಸಾಕುತ್ತೇನೆ , ಪ್ರತೀ ದಿನ ಪ್ರತೀ ಘಟನೆಯಲ್ಲೂ ನನ್ನಾಕೆ ಇದ್ದಿದ್ದರೆ ಹೇಗಿರುತ್ತಿತ್ತು ಅಂತ ಯೋಚನೆ ಇದ್ದೇ ಇರುತ್ತದೆ , ಅದರಲ್ಲೇ ಯಾವುದೋ ಒಂದು ಹೆಕ್ಕಿ ತೆಗೆದು ಬರೆದರೆ ಒಂದು ಲೇಖನವಾಯ್ತು . * * * ಸಂ : ಈ ನಿಮ್ಮ ಕಲ್ಪನೆಗೆ ಸ್ಪೂರ್ಥಿ ಯಾರು ? ನಾ : ಸ್ಪೂರ್ಥಿನಾ , ಯಾರ್ಯಾರು ಅಂತ ಹೇಳಲಿ , ಬಸ್ಸಿನಲ್ಲಿ ಕಂಡ ಬೆಡಗಿ , ಟ್ರಾಫಿಕ್ ಸಿಗ್ನಲ್ಲಿನಲ್ಲಿ ಸಿಕ್ಕ ಹುಡುಗಿ , ಯಾರದೋ ಕಣ್ಣು , ಯಾರದೊ ನಗು , ಯಾರದೋ ನಡೆ ನುಡಿ , ಮತ್ತಿನ್ಯಾರದೋ ಮೌನ . . . ಹೀಗೆ ಬರೆಯಲು ಸ್ಪೂರ್ಥಿಯಾದವರೊ ಎಷ್ಟೊ ನನಗೇ ಗೊತ್ತಿಲ್ಲ . . . ಧೋ ಅಂತ ಮಳೆ ಸುರಿಯುತ್ತಿದ್ದರೆ ನೀರು ತೊಟ್ಟಿಕ್ಕುವಂತೆ ನೆನೆದಿದ್ದ ಆ ಮಳೆ ಹುಡುಗಿ ಕೂಡ ಸ್ಪೂರ್ಥಿಯೇ . * * * ಸಂ : ಓದುಗರ ಪ್ರತಿಕ್ರಿಯೆ ಹೇಗಿದೆ ? ಪ್ರೇಮ ಪತ್ರ ಎಲ್ಲ ಬಂದಿದೆಯಾ ? : ) ನಾ : ಸಧ್ಯ ಪ್ರೇಮ ಸಂದೇಶ ಯಾವುದೂ ಬಂದಿಲ್ಲ , ಬಂದಿರುವುದೆಲ್ಲ ಸ್ನೇಹ ಸಂದೇಶಗಳೇ , ಅನ್ನೊದೇ ಖುಷಿ , ಬಹಳ ಜನ ಪರಿಚಯವಾಗಿದ್ದಾರೆ , ಸ್ನೇಹಿತರಾಗಿದ್ದಾರೆ , ಹಿತೈಷಿಗಳಾಗಿದ್ದಾರೆ , ಅವರಿಗೆಲ್ಲ ನಾ ಚಿರಋಣಿ . * * * ಸಂ : ನಿಮ್ಮಾಕೆ ಏನಂತಾರೆ ನಿಮ್ಮ ಬಗ್ಗೆ ? ನಾ : ಅವಳ ಮಾತಿನಲ್ಲೇ ಹೇಳೊದಾದ್ರೆ . . . " ಹತ್ತು ಹಲವು ಕಲ್ಪನೆಗಳ ಹುಚ್ಚು ಹುಡುಗ " , ಅಂಥ ಹುಚ್ಚುತನವನ್ನೇ ಮೆಚ್ಚುವ ಹುಚ್ಚಿ ಅವಳು . * * * ಸಂ : ಈ ವಯಸ್ಸಿನಲ್ಲೇ ಇಷ್ಟೆಲ್ಲ ಕನಸುಗಳಾ ? ನಾ : ಅಯ್ಯೋ ಕನಸು ಕಾಣದಿರಲು ನನಗೇನು ವಯಸ್ಸಾಯ್ತಾ ? ಇಷ್ಟಕ್ಕೂ ಕನಸಿಗೂ ವಯಸ್ಸಿಗೂ ಏನು ಸಂಭಂದ . ಈ ವಯಸ್ಸಿನಲ್ಲಿ ಹೀಗೆ ಕನಸುಗಳಿರದೇ ಏನಿರಲು ಸಾಧ್ಯ , ನನ್ನ ಕನಸುಗಳಿಗೆ ಕೊನೆಯುಸಿರುವರೆಗೂ ಕೊನೆಯಿಲ್ಲ . * * * ಸಂ : ಮದುವೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ? ನಾ : ಅಲ್ಲ ನನ್ನ ಈ ಐವತ್ತು ಲೇಖನ ಓದಿದಮೇಲೂ ಮದುವೆ ಯಾಕಾಗಬೇಕು ಅಂತನಿಸಿದರೆ ಆಗಲೇಬೇಡಿ . ಮಾನವ ಸಂಘಜೀವಿ ಕಣ್ರೀ , ಜೀವಕ್ಕೆ ಜೊತೆಯಾಗಿ ಸಂಗಾತಿ ಇರಲಿ ಅಂತಾನೆ ಮದುವೆ ಮಾಡಿದ್ದು . * * * ಸಂ : ಆಯ್ತು ಮದುವೆ ಬಿಡಿ , ಹಾಗಾದ್ರೆ ಪ್ರೀತಿ ಬಗ್ಗೆ ಏನಂತೀರ ? ನಾ : ಪ್ರೀತ್ಸೊದ ತಪ್ಪಾ ? ಮದುವೆ ಆದಮೇಲೂ ಪ್ರೀತಿ ತಾನೆ ಆ ಬಂಧನವನ್ನು ಗಟ್ಟಿಯಾಗಿಡೊದು . ಆದರೆ ಈ ಹದಿಹರೆಯದ ಆಕರ್ಷಣೆಯೇ ಪ್ರೀತಿ ಅಂತಂದುಕೊಳ್ಳೋದು ತಪ್ಪು , ಹಾಗೆ ತಪ್ಪುಗಳಾಗುವುದನ್ನು ನೋಡಿದರೆ ಬೇಜಾರಾಗುತ್ತದೆ . * * * ಸಂ : ಪಾಕಶಾಲೆ ಬಗ್ಗೆ ಬಹಳ ಬರೀತಾ ಇರ್ತೀರಾ ? ಅಡುಗೆ ಮಾಡೊಕೆ ಬರ್ತದಾ ? ನಾ : ನಾನೇನೊ ಮಾಡ್ತೀನಿ ಅಂದ್ರೂ ಅವಳು ಬಿಡಲ್ಲ , ನಳಪಾಕವಂತೂ ಬರಲ್ಲ , ನಾ ಮಾಡಿದ್ದು ನಾ ತಿನ್ನುವ ಮಟ್ಟಿಗಾದರೂ ಚೆನ್ನಾಗಿರುತ್ತದೆ , ಆದ್ರೂ ಏನೇ ಅನ್ನಿ ಉಪ್ಪು ಹೆಚ್ಚಾದರೂ ಅವಳು ಮಾಡಿದ್ದರೆ ಉಪ್ಪುಪ್ಪಿಟ್ಟು ಕೂಡ ರುಚಿಯಾಗಿರುತ್ತದೆ . * * * ಸಂ : ಮೊದಲೆಲ್ಲ ಬರೀ ಹಾಸ್ಯ ಕಥೆ ಇರ್ತಾ ಇತ್ತು , ಲೇಖನದಲ್ಲಿ ಏನೊ ಒಳ್ಳೇ ಒಳ್ಳೇ ಮೆಸೇಜು ಕೊಡ್ತಾ ಇದೀರಲ್ಲ , ಏನು ಸಮಾಜ ಸೇವೆನಾ ? ನಾ : ಹೌದು ಬರೀ ನಗಿಸುವ ನಲಿವಿನ ಲೇಖನಗಳೆ ಬರೆಯುತ್ತಿದ್ದೆ , ಸಮಾಜ ಸೇವೆ ಅಂತೇನೂ ಇಲ್ಲ , ಒಬ್ರು ಇದರ ಜತೆಗೆ ಒಳ್ಳೇ ಮೆಸೇಜು ಕೊಡಿ ಅಂತ ಸಲಹೆ ನೀಡಿದ್ರು ನನಗೂ ಸರಿಯೆನ್ನಿಸಿತು , ಬರೀ ದುಡ್ಡು ದುಡ್ಡು ಅಂತ ಕೆಲ್ಸ ಮಾಡ್ತಾ ಇದ್ರೆ , ಜೀವನದ ಮೌಲ್ಯಗಳ ಅರಿವು ಆಗೋದು ಯಾವಾಗ ? ಅದಕ್ಕೆ ಆ ಮೌಲ್ಯಗಳ ಬಗ್ಗೆ ಬರೆಯತೊಡಗಿದೆ , ತೀರ ಗಂಭೀರವಾಗಿ ಹೇಳಿದ್ರೆ ಯಾರೂ ಓದಲ್ಲ ಅಂತ ಹಾಸ್ಯದೊಂದಿಗೆ ಹಾಗೆ ಒಂದು ಮೆಸೇಜು ಇರ್ತದೆ . * * * ಸಂ : ಇಷ್ಟೆಲ್ಲಾ ಕಷ್ಟಪಟ್ಟು ಇದೆಲ್ಲ ಮಾಡಿ ನಿಮಗೇನು ಲಾಭ ? ನಾ : ಹತ್ತರಲ್ಲಿ ಹನ್ನೊಂದರಂತೆ ಹೀಗೆ ಹುಟ್ಟಿ ಸತ್ತು ಹೋದರೆ ಏನಾಯ್ತು ಹೇಳಿ , ನಾಳೆ ಹೀಗೊಬ್ಬ ಇದ್ದ , ಹೀಗೆ ಬರೀತಾ ಇದ್ದ ಅಂತ ಜನ ನೆನಪಿಡ್ತಾರಲ್ಲ , ಅದೇ ಸಾಕು , ಎಷ್ಟೊ ದಂಪತಿಗಳು ನಿಮ್ಮ ಲೇಖನ ಓದಿ ನಮ್ಮ ಜೀವನ ಸ್ವಲ್ಪ ಸುಧಾರಿಸಿದೆ ಅಂತಾನೋ , ಯಾರೊ ತಮ್ಮ ಭಾವಿ ಜೀವನಕ್ಕೆ ನಿಮ್ಮಿಂದ ಇನ್ನಷ್ಟು ಕನಸುಗಳು ಸಿಕ್ಕಿವೆ ಅಂತಾನೊ ಪತ್ರ ಬರೀತಾರಲ್ಲ ಅದರ ಮುಂದೆ ಇನ್ನಾವ ಲಾಭ ಬೇಕು ಹೇಳಿ , ಆ ತೃಪ್ತಿಯೆ ನನಗೆ ಲಾಭ , ನಾಳೆ ನನ್ನಾಕೆ ಇದನ್ನ ಓದಿ ಕನಸುಗಳು ನನಸಾದ್ರೆ ಅದಕ್ಕಿಂತ ಲಾಭ ಏನಿದೆ . * * * ಸಂ : ಒಂದು ವೇಳೆ ನಿಮಗೆ ಕೋಟಿ ರೂಪಾಯಿ ಲಾಟರಿಯಲ್ಲಿ ಸಿಕ್ರೆ ಏನ್ ಮಾಡ್ತೀರಾ ? ನಾ : ಅಷ್ಟು ದುಡ್ಡಿನಲ್ಲಿ ಚಂದ್ರನಿಂದ ನಲ್ಲಿ ಕನೆಕ್ಷನ ಹಾಕಿಸಲಂತೂ ಆಗಲ್ಲ , ಕೊನೇ ಪಕ್ಷ ಯಾವುದೋ ಕೆರೆಯಿಂದಾದರೂ ಕನೆಕ್ಷನ ಹಾಕಿಸ್ತೀನಿ , ನೀರಿನದು ದೊಡ್ಡ ಪ್ರಾಬ್ಲ್ಂ ಕಣ್ರೀ ನಮಗೆ . " ಅಯ್ಯೋ ನಾನೇನೊ ನಾಲ್ಕು ಜನಕ್ಕೇ ಒಳ್ಳೇದಾಗೊ ಕೆಲಸ ಮಾಡ್ತೀರ ಅಂತ ಕೇಳಿದ್ರೆ ನೀವೇನ್ರಿ " ಅಂತ ಮೂಗು ಮುರಿದಳು , " ಸರಿ ಹಾಗಾದ್ರೆ ಬೋರವೆಲ್ ಕೆಟ್ಟರೆ ಪಕ್ಕದಮನೆ ಪದ್ದುಗೆ ನೀರು ಕೊಟ್ಟರಾಯ್ತು " ಅಂದೆ , " ಪಬ್ಲಿಕಗೆ ಹೆಲ್ಪ ಮಾಡು ಅಂದ್ರೆ ಪದ್ದುಗೆ ಹೆಲ್ಪ ಮಾಡ್ತಾರಂತೆ " ಅಂತ ಬಯ್ದಳು . * * * ಸಂ : ಯಾವ ಬಣ್ಣ ಇಷ್ಟ ನಿಮಗೆ ? ನಾ : ಹಾಗೆ ನೋಡಿದರೆ ಕಾಮನಬಿಲ್ಲಿನಲ್ಲಿ ಕಾಣುವ ಎಲ್ಲ ಬಣ್ಣಗಳೂ ಇಷ್ಟ , ಎಲ್ಲ ಬಣ್ಣ ಸೇರಿದ ಬಿಳಿ ಬಣ್ಣವೂ ಇಷ್ಟ ಅದರಲ್ಲೇ ಬಹಳ ಇಷ್ಟವಾಗುವ ಬಣ್ಣ ತಿಳಿನೀಲಿ ಬಣ್ಣ . * * * ಸಂ : ಬೇಜಾರಾದ್ರೆ , ಬಹಳ ದುಖಃ ಆದ್ರೆ ಏನ್ ಮಾಡ್ತೀರ ? ನಾ : ಅವಳಿದ್ರೆ ಕೀಟಲೆ , ಇಲ್ಲಾಂದ್ರೆ ಒಬ್ಬಂಟಿಯಾಗಿ ಕೂತು ಬಿಡ್ತೀನಿ , ಮನಸ್ಸಿನಲ್ಲಿ ಓಡುವ ಯೋಚನೆಗಳನ್ನು ಬೆಂಬತ್ತಿ ಹಿಡಿಯಲು ಪ್ರಯತ್ನಿಸುತ್ತ , ಕಾಡುವ ನೆನಪುಗಳ ಕೈಯಿಂದ ತಪ್ಪಿಸಿಕೊಳ್ಳುತ್ತ . * * * ಸಂ : ನಿಮಗಿಷ್ಟವಾದ ತಿಂಡಿ ತಿನಿಸು ? ನಾ : ಇಂಥದ್ದೇ ಅಂತೇನೂ ಇಲ್ಲ , ಅಮ್ಮನ ಕೈಯಡುಗೆ ರುಚಿ ಬಿಟ್ಟರೆ , ಅವಳು ಮಾಡುವ ತರ ತರನೆಯ ಹೊಸರುಚಿ ಟೀ ಕೂಡ ನನಗೆ ಇಷ್ಟ , ಅದಕ್ಕೆ ಓದುಗರೊಬ್ಬರು ನಿಮ್ಮ ಲೇಖನಗಳಲ್ಲಿ ಎಣಿಸಲಾಗದಷ್ಟು ಬಾರಿ ಟೀ ಹೀರಿದ್ದೀರಿ ಅಂತ ಬರೆದಿದ್ದರು ! * * * ಸಂ : ಸರಿ , ಟೀ ಅಂತಿದ್ದಂತೆ ನೆನಪಾಯ್ತು , ನಮ್ಮ ಟೀ ಟೈಮ್ ಆಯ್ತು , ಕೊನೆಗೆ ನಿಮಗೇನಾದ್ರೂ ಕೇಳಬೇಕು ಅಂತಿದೆಯಾ ? ನಾ : ಪ್ರಳಯ ಆಗುತ್ತಂತೆ ನಿಜಾನಾ ? ಯಾರಿಗಾದ್ರೂ ಗೊತ್ತಿದ್ರೆ ಹೇಳಿ ಪ್ಲೀಜ್ , ಆಗೊದೇ ಆದ್ರೆ ಎರಡೇ ವರ್ಷದಲ್ಲಿ ಎರಡು ದಶಕದ ಜೀವನ ಜೀವಿಸಿಬಿಡ್ತೀನಿ : ) " ಈ ನಿಮ್ಮ ಪ್ರಳಯ ಆಗುತ್ತೊ ಇಲ್ವೋ ಮಾತಾಡುತ್ತ ಕೂತರೆ ಸಮಯ ಆಗತ್ತೆ ಏಳಿ , ಟೀ ಮಾಡ್ತೀನಿ " ಅಂತ ಎದ್ದು ಹೊರಟಳು , " ಕೇಳಿದ್ದಕ್ಕೆಲ್ಲ ಇಲ್ಲ ಅನ್ನದೇ ಉತ್ತರಿಸಿದೆ , ಕೊನೆಗೆ ಕೇಳು ಅಂದಿದಕ್ಕೆ ಒಂದು ಪ್ರಶ್ನೇ ಕೇಳಿದ್ರೆ ಹೀಗೆ ಉತ್ತರ ಕೊಡೊದಾ " ಅನ್ನುತ್ತ ಪಾಕಶಾಲೆಯೆಡೆಗೆ ನಡೆದರೆ " ರೀ ಹಾಲು ಖಾಲಿ , ಹಾಲಿನಂಗಡಿಯ ಹಾಸಿನಿನಾ ನೊಡ್ಕೊಂಡು ಬರಹೋಗಿ " ಅಂತ ಹಾಲು ತರಲು ಕಳಿಸಿದಳು , ಹಾಸಿನಿ ನೋಡುವ ಹುಮಸ್ಸಿನಲ್ಲಿ ಹೊರಟೆ . . . ಮತ್ತೆ ಸಿಕ್ತೀನಿ . . . ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ , ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ . ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ , ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ ( ಇ - ಅಂಚೆ ) ಹಾಕಿ . . . ನನ್ನ ವಿಳಾಸ pm @ telprabhu . com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ , ಸಂತೊಷ ಇದೋದೇ ಹಂಚೋಕೆ ತಾನೆ . . . ಕಳೆದ ವರ್ಷ ಇದೇ ದಿನವೇ ( 22 Nov 2008 ) ನನ್ನ ಮೊದಲ ನನ್ನಾಕೆ ಲೇಖನ ಬ್ಲಾಗಿಗೆ ಹಾಕಿದ್ದು , ಇಂದೇ ಈ ಲೇಖನದೊಂದಿಗೆ ಒಟ್ಟಿಗೆ ಐವತ್ತು ಲೇಖನಗಳಾಗಿವೆ , ಮೊದಲು ಬರೆದ ಇಪ್ಪತ್ತೈದು ಲೇಖನಗಳ ಬಗ್ಗೆ ಈ ಪತ್ರದಲ್ಲಿ ನೀವು ಓದಿರಬಹುದು , ಮೇಲಿನ ಉತ್ತರಗಳಲ್ಲಿ ಅನುಕ್ರಮವಾಗಿ ಮತ್ತೊಂದಿಷ್ಟು ಲೇಖನಗಳ ಹೆಸರು ಹುದುಗಿಸಿದ್ದೇನೆ , ಆಸಕ್ತಿಯಿದ್ದವರು ಅವನ್ನೂ ಓದಬಹುದು , ಎಲ್ಲ ಲೇಖನಗಳನ್ನೂ ಸೇರಿಸಿ , ನನ್ನಾk + + ಅಂತ ಐವತ್ತು ಲೇಖನಗಳ ಸಂಕಲನ ಕೊಡುತ್ತಿದ್ದೇನೆ , ನನ್ನ ಸೈಟಿನಿಂದ ಡೌನಲೋಡ ಮಾಡಿಕೊಂಡು ಸಮಯ ಸಿಕ್ಕಾಗ ಓದಬಹುದು ಹಾಗೂ ಸ್ನೇಹಿತರಿಗೂ ಹಂಚಬಹುದು , ಆ ಹೆಸರು ಯಾಕೆ ಅಂತೀರಾ , ಮೊದಲೇ ಐಟಿ ಉದ್ಯೋಗಿ , ಈ C ಆದಮೇಲೆ C + + ಅಂತ ಪ್ರೊಗ್ರಾಮಿಂಗ ಭಾಷೆ ಬರಲಿಲ್ಲವೇ ಹಾಗೆ ಇದೂ ಕೂಡ ನನ್ನಾk ನಂತರ ನನ್ನಾk + + . . . : - ) , ಹೀಗೆ ನಿಮ್ಮ ಪ್ರೊತ್ಸಾಹ ಚಿರಕಾಲ ಇರಲಿ ಎಂಬ ಕೋರಿಕೆಯೊಂದಿಗೆ . . . ನನ್ನಾk + + - 50 Posts single PDF document ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http : / / www . google . com / transliterate / indic / Kannadaಬರೆದು ಪೇಸ್ಟ ಮಾಡಬಹುದು
ಶ್ರೀ ಶ್ರೀನಿವಾಸಮೂರ್ತಿಯವರು ಹೇಳುವದು ನಿಜ . ' ಸಂಪದ ' ದಲ್ಲಿ ವಿಚಾರಾತ್ಮಕ ಬರೆಹಗಳು ಪ್ರಕಟವಾಗುತ್ತಿಲ್ಲ . ಪ್ರತಿಕ್ರಿಯೆಗಳಾಗಲೀ ಅವಕ್ಕೆ ಬರೆಹಗಾರರ ಅಥವಾ ಇತರ ಓದುಗರ ಅಭಿಪ್ರಾಯಗಳಾಗಲೀ ಆಳವಾಗಿಲ್ಲವೆನ್ನುವದು ನಿಜ . ಇವು ಅತ್ಯವಶ್ಯ .
ಸೋಮವಾರ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟೊರೊಂಟೊದ ನಿತೀಶ್ ಕೆನಡಾ ಪರ ಬ್ಯಾಟಿಂಗ್ ಆರಂಭಿಸಿದರು . ಮತ್ತೊಂದು ಬದಿಯಲ್ಲಿ ಇವರೊಂದಿಗೆ ಬ್ಯಾಟ್ ಮಾಡಲು ಇಳಿದಿದ್ದ ಜಾನ್ ಡೇವಿಸನ್ ಅವರದ್ದು ಇದಕ್ಕೆ ತದ್ವಿರುದ್ಧ ದಾಖಲೆ . ಪ್ರಸಕ್ತ ವಿಶ್ವಕಪ್ ಕ್ರಿಕೆಟ್‌ನಲ್ಲಿ ಆಡುತ್ತಿರುವ ಅತ್ಯಂತ ಹಿರಿಯ ( 40 ) ಆಟಗಾರ ಎಂಬ ಅಗ್ಗಳಿಕೆ ಇವರದು . ಕುತೂಹಲಕರ ಸಂಗತಿಯೆಂದರೆ ಪಂದ್ಯದಲ್ಲಿ ಇವರಿಬ್ಬರ ಸಾಧನೆ ಹೇಳಿಕೊಳ್ಳುವಂತಹುದಲ್ಲ . ನಿತೀಶ್ 1 ರನ್ ಗಳಿಸಿ ಔಟಾದರೆ ಡೇವಿಸನ್ ಸೊನ್ನೆಗೇ ಔಟಾದರು .
ಕಮಲಾ ಅವರೇ ಎಲ್ಲಿದೆ ಸಮಯ ಇದಕ್ಕೆಲ್ಲಾ ನಮ್ಮ ನಮ್ಮ ಆಸೆಗಳ ಆಣೆ ಕಟ್ಟುಗಳನ್ನು ಕಟ್ಟುವುದರಲ್ಲೇ ಸಮಯ ವ್ಯಯಿಸಿ
ಪ್ರೀತಿಯ ಹರ್ಷ , ನಾಗರೀಕತೆ ಆರಂಬ ಆಗಿದ್ದಕ್ಕು ವಿಜ್ಞಾನವೇ ಕಾರಣವ ? ಇಲ್ಲಿ ವ್ಯಂಗ ಇಲ್ಲ . . ಉತ್ತರಿಸದಿದ್ದರೂ ಏನು ಲೋಪವಿಲ್ಲ . ನಿಮ್ಮ ( ನಮ್ಮ ಎಂದು ಬರೆದು ಬಿಟ್ಟಿದ್ದೆ . ಅದಕ್ಕೆ ಅದನ್ನ ಅಳಿಸಿದೆ : ) ) ವಿಷಯ ಮಂಡನೆಗೆ ನನ್ನದೊಂದು ನಮಸ್ಕಾರ ( ವ್ಯಂಗ್ಯವಿಲ್ಲ )
ಬಾರಾಕಸಿ ಅಂಗಿ ಹಾಕಿಕೊಂಡಿದ್ದ ಸಾಹುಕಾರರು ತಮ್ಮ ಕುದುರೆಯಿಂದ ಇಳಿಯುತ್ತಿದ್ದಂತೆಯೇ ನೆರೆದಿದ್ದವರೆಲ್ಲ ಬಾಗಿ ಗೌರವ ಸೂಚಿಸಿ ನಮಸ್ಕರಿಸಿದರು . ಅದಾದ ಮೇಲೆ ಮುಖ್ಯದ್ವಾರ ದಾಟಿ ಒಳಬರುತ್ತಿದ್ದಂತೆಯೇ ಸುಂದರ ಗೃಹಿಣಿಯೊಬ್ಬಳು ಜೇಳಜಿಯಲ್ಲಿ ಕುಳಿತದ್ದು ಕಂಡು ಅಚ್ಚರಿಯಾಯಿತು . ತಕ್ಷಣ ಮುನೀಮನನ್ನು ಕರೆದು ಕೇಳಿದರೆ ಆ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಹೇಳಿ ಜಾರಿಕೊಂಡ . ಆಗ ಅಲ್ಲಿಯೇ ಇದ್ದ ಬ್ರಾಹ್ಮಣನು ತನ್ನ ತಾಯಿಯ ಅನಾರೋಗ್ಯ ಮತ್ತು ಹಣದ ಅಡಚಣೆಯ ಸಂಗತಿಯನ್ನು ವಿವರಿಸಿದ . ಒತ್ತೆ ಇಡಲು ತನ್ನ ಬಳಿ ಏನೂ ಇಲ್ಲದ್ದರಿಂದ ಹೆಂಡತಿಯನ್ನೇ ಕರೆ ತಂದಿರುವುದಾಗಿ ಹೇಳಿದ . ಅದನ್ನು ಕೇಳಿ ಬೆಕ್ಕಸ ಬೆರಗಾದ ಖೇಣಿ ಸಾಹುಕಾರರು ಮುನೀಮನನ್ನು ಕರೆದು ತರಾಟೆಗೆ ತೆಗೆದುಕೊಂಡರು . ಬಡಬ್ರಾಹ್ಮಣನಿಗೆ ಅಗತ್ಯವಿದ್ದ ಹಣವನ್ನು ಬಡ್ಡಿ ಇಲ್ಲದೇ ನೀಡಿ , ಅದನ್ನು ದಾನದ ಲೆಕ್ಕಕ್ಕೆ ಸೇರಿಸುವಂತೆ ಸೂಚಿಸಿದರು . ನಂತರ ಬಡಬ್ರಾಹ್ಮಣನ ಪತ್ನಿಯ ಬಳಿಗೆ ತೆರಳಿ ತಮ್ಮ ತಲೆ ಇಲ್ಲದ , ಇದ್ದರೂ ಉಪಯೋಗಿಸದ ಮುನೀಮರು ಮಾಡಿದ ತಪ್ಪನ್ನು ಮನ್ನಿಸುವಂತೆ ಮನವಿ ಮಾಡಿದರು . ದೇಶಕ್ಕೇ ದೊಡ್ಡ ದೊರೆಯಂತಿದ್ದ ' ಧಣಿ ' ಯುವ ಗೃಹಿಣಿಯೊಬ್ಬಳ ಮುಂದೆ ಕೈ ಮುಗಿದು ನಿಂತದ್ದು ನೋಡಿ ಆಳು - ಕಾಳುಗಳೆಲ್ಲ ಬೆರಗಾದರು .
ಬದುಕ ಹಾದಿಯಲಿ ಮನದ ತೀರ್ಮಾನಕ್ಕೇ ಪೂರ್ತಿ ಬೆಲೆಕೊಟ್ಟು ನೋಡಿ , ಆಗ ಬುದ್ದಿ ಮನದೊಂದಿಗೆ ಮನವಾಗಿ ಕೆಲಸ ಮಾಡುತ್ತದೆ . ಆಗ ವಿಷಾದದ ಛಾಯೆಯಿಲ್ಲದ ಹೊಸ ಬಾವ ಮೂಡುತ್ತದೆ , ಸಂತಸದ ಹೊಸ ಲೋಕ ಕಾಣುತ್ತದೆ .
ಎಂದಿನಂತೆ ಅಂದೂ ಜೊತೆಯಾಗೇ ಹೊರಟಿದ್ದೆವು . ಸುಬ್ಬಾ ಭಟ್ಟರ ತೋಟದ ಪಕ್ಕದ ದಾರಿ ಕಳೆದು ದಿಣ್ಣೆಯನ್ನು ಏರಿ , ರಸ್ತೆ ಪಕ್ಕದ ಪೇರಳೆ ಮರದಲ್ಲಿ ಕಾಯಿ ಇದೆಯೇ ಎಂದು ದಿಟ್ಟಿಸಿ ನೋಡಿ ಮುಂದಕ್ಕೆ ಶಾಂತಕ್ಕನ ಮನೆಯ ಪಕ್ಕದ ತಿರುವಿಗೆ ತಲುಪಿದ್ದೆವು . ಬಹುಶ : ಅರ್ಧ ದಾರಿ ಕ್ರಮಿಸಿದ್ದೆವೇನೋ , ಇದ್ದಕ್ಕಿದ್ದಂತೆ ನೀನು ಹೊಟ್ಟೆ ನೋವಾಗುತ್ತಿದೆಯೆಂದು ಹೇಳಿ ಅಳುತ್ತಿದ್ದಾಗ , ಮನೆಲೆಕ್ಕ ( Home Work ) ವನ್ನು ಮಾಡದ್ದಕ್ಕಾಗಿ ದೇಸಾಯಿ ಮೇಷ್ಟ್ರ ಬೆತ್ತದ ರುಚಿಯ ಗುಂಗಿನಲ್ಲಿದ್ದ ನಾನು ನಿನ್ನ ನೋಡಿದಾಗ , ಕಿಬ್ಬೊಟ್ಟೆಯ ಕೆಳಗೆ ಕೆಂಪನೆಯ ಚಿತ್ತಾರದಿಂದ ನಿನ್ನ ಬಟ್ಟೆಗಳೆಲ್ಲ ಕಂಗೊಳಿಸಿ , ಬಿಳಿ ಬಣ್ಣದ ಮೇಲೆ ರೌದ್ರತೆಯ ನರ್ತನವಾಡಿದಂತೆ ಅನಿಸಿತ್ತು .
ಈ ಮುಂದಿನ ಕೆಲವು ಚಿತ್ರ ನಿಮಗೆ ನನ್ನ ಕಂಪ್ಯೂಟರ್ ನಲ್ಲಿ ಇದನ್ನು ಹಾಕಿಕೊಂಡಿರುವದನ್ನು ನೋಡಬಹುದು . ಪ್ರತಿ ಮೆನುಗಳು ಕನ್ನಡಕ್ಕೆ ಬದಲಾಗುತ್ತದೆ . ಅಷ್ಟೇ ಅಲ್ಲ ವಿಂಡೋಸ್ ನೋಟ ಪ್ಯಾಡ್ , ಎಕ್ಸ್ ಪ್ಲೋರರ್ , ಮೂವಿ ಮೇಕರ್ , ಕಾಲ್ಕುಲೇಟರ್ ಮತ್ತು ಗೇಮ್ ಗಳು ಹೀಗೆ ಎಲ್ಲವೂ ಕನ್ನಡಕ್ಕೆ ಭಾಷಾಂತರವಾಗುತ್ತದೆ . ನಾನು ಇಂಟರ್ ನೆಟ್ ಎಕ್ಸ್ಪ್ ಪ್ಲೋರರ್ ಹಾಗೂ ವಿಂಡೋಸ್ ಮಿಡಿಯಾ ಪ್ಲೇಯರ್ ಗಳನ್ನು ಅಪ್ ಗ್ರೇಡ್ ಮಾಡಿದ್ದರಿಂದ ಅವು ಆಗಲಿಲ್ಲ . ಬಹುಶಃ ವಿಂಡೋಸ್ ಅಪಡೇಟ್ ಮೂಲಕವೇ ಮಾಡಿದ್ದರೆ ಅವೂ ಆಗುತ್ತಿದ್ದವೇನೋ . ಭಾಷಾಂತರದ ಗುಣಮಟ್ಟ ಅತ್ಯುತ್ತಮ ಎಂದು ನಾನು ಹೇಳಬಲ್ಲೆ . ಅಕಸ್ಮಾತ್ ಎಲ್ಲಿಯಾದರೂ ಲೋಪ ಇದ್ದರೆ ಅದಕ್ಕೆ ನಾವೇ ದೋಷಿಗಳು ( ನಾನು ಸಹ ) . ಅವರಿಗೆ ಬಳಸಿ ಫೀಡ್ ಬ್ಯಾಕ್ ಕೊಟ್ಟಿದ್ದರೆ ಸರಿಪಡಿಸುತ್ತಿದ್ದರು . ನಾವು ಹಾಗೆ ಮಾಡಿಲ್ಲ .
ಸದಭಿರುಚಿಯ ಕನ್ನಡ ಪ್ರೇಕ್ಷಕ ಈ ಗೀತೆ ಮತ್ತು ಇದರ ಸಾಹಿತ್ಯವನ್ನು ಎಂದೂ ಮರೆಯುವುದಿಲ್ಲ . " ನನ್ನದೇ ಸ್ಪಂದನ ನಿನ್ನದೇ ಚೇತನ " , " ಹೆಜ್ಜೆಯ ಭಾವಕ್ಕೆ ಹಂಸವೇ ನಾಚಿದೆ " - ವಿಜಯನಾರಸಿಂಹ ಅವರ ಸಾಹಿತ್ಯ ಅಜರಾಮರ .
ಓದುಗರಿಗೆಲ್ಲ ನಮಸ್ಕಾರ . ನಿಮಗೆಲ್ಲಾ ಗೊತ್ತಿದೆ ನಾನೊಬ್ಬ ಪತ್ರಕರ್ತ . ಕನ್ನಡ ಪತ್ರಿಕೋದ್ಯಮದಲ್ಲಿ ಚಿಕ್ಕ ವಯಸ್ಸಿಗೆ ಅಂಕಣಕಾರನಾದೆ , ಈಗಲೂ ನಮ್ಮ ಪತ್ರಿಕೆಯಲ್ಲಿ ನಾನೇ ಸೀನಿಯರ್ ಅಂಕಣಕಾರ . ನನ್ನ ಅಂಕಣಗಳಲ್ಲಿ ` ನಾನು ' ಎಂಬ ಪದವನ್ನು ನಾನು ಬಳಸುವುದಿಲ್ಲ . ಅಂಕಣ ಬರಹ ವೈಯಕ್ತಿಕವಾಗಿರಬಾರದು ಹಾಗೂ ವ್ಯಕ್ತಿ ನಿಷ್ಟವಾಗಿರಬಾರದು ಎನ್ನುವುದು ನನ್ನ ನಂಬಿಕೆ . ವಸ್ತುನಿಷ್ಟವಾಗಿ ಬರೆಯುವುದರಿಂದಲೇ ನನ್ನ ಅಂಕಣ ಇಷ್ಟು ಜನಪ್ರಿಯವಾಗಲು ಸಾಧ್ಯವಾಗಿರುವುದು .
ಬ್ರೆಜಿಲ್ ಬ್ರೆಜಿಲ್‌ನ ವಾಣಿಜ್ಯ ಉದ್ಯಮಿಗಳು , ಫ್ರೆ೦ಚ್ ಮತ್ತು ಸ್ಪಾನಿಷ್‌ನವರ೦ತೆ , ಸ್ವಲ್ಪ ಮಟ್ಟಿಗೆ ಜಗಳಗ೦ಟ ಪೃವೃತ್ತಿಯವರಾಗಿದ್ದರು . ಅವರು ಎಲ್ಲಾ ಗು೦ಪಿನವರಿಗಿ೦ತ ಎರಡನೆಯ - ಹೆಚ್ಚಿನ ಪ್ರತಿಶತ ಅಪ್ಪಣೆಗಳನ್ನು ಬಳಸಿದರು . ಸರಾಸರಿಯಾಗಿ , ಬ್ರೆಜಿಲಿಯನ್ನರು ಇಲ್ಲ ಶಬ್ದವನ್ನು 47 ಬಾರಿ ಹೇಳಿದರು , ನೀನು ಶಬ್ದವನ್ನು 90 ಬಾರಿ , ಮತ್ತು 30 ನಿಮಿಷದ ಸಮಾಲೋಚನೆಯಲ್ಲಿ ಒಬ್ಬರು ಇನ್ನೊಬ್ಬರ ಭುಜವನ್ನು 5 ಬಾರಿ ಮುಟ್ಟಿದರು . ಮುಖದ ದಿಟ್ಟ ನೋಟವೂ ಕೂಡ ಹೆಚ್ಚಾಗಿತ್ತು .
' ಎನ್‌ಡಬ್ಲುಕೆಆರ್‌ಟಿಸಿ ' ಎಂದು ಕಷ್ಟಪಟ್ಟು ದೀರ್ಘವಾಗಿ ಬರೆಯುವ ಬದಲು ' ವಾಕರಸಾಸಂಸ್ಥೆ ' ಎಂದು ಮುದ್ದಾಗಿ ಬರೆಯಲು ಬರುತ್ತಿರಲಿಲ್ಲವೆ ? ಓದುಗರಿಗೆ ಯಾವುದು ತಟ್ಟನೆ ಅರ್ಥವಾಗುತ್ತದೆ ? ಆಂಗ್ಲವ್ಯಾಮೋಹಿ ವಿಜಯ ಕರ್ನಾಟಕವನ್ನು ` ನವ ಮೆಕಾಲೆ ' ಎಂದು ಬಣ್ಣಿಸಿದರೆ ತಪ್ಪೇನಿದೆ ? ಶಾಲೆಯ ವಿದ್ಯಾರ್ಥಿಗಳು ಈ ಪತ್ರಿಕೆಯನ್ನು ನಿಯತವಾಗಿ ಓದುತ್ತಿದ್ದರೆ , ಇಂಗ್ಲಿಶ್ ಪದಗಳನ್ನೇ ಕನ್ನಡ ಪದಗಳೆಂದು ತಪ್ಪಾಗಿ ಗ್ರಹಿಸುವ ಸಾಧ್ಯತೆ ಇದೆ .
ಭಾರತದ ಮುಖ್ಯವಾಹಿನಿಯ ಜನಪ್ರಿಯ ಚಲನಚಿತ್ರದ ರೀತಿಯಲ್ಲಿಯೇ ಸಮಾನಾಂತರ ಚಲನಚಿತ್ರವೂ ಸಹ ಭಾರತೀಯ ರಂಗಭೂಮಿ ( ನಿರ್ದಿಷ್ಟವಾಗಿ ಹೇಳುವುದಾದರೆ ಸಂಸ್ಕೃತ ನಾಟಕ ) ಮತ್ತು ಭಾರತೀಯ ಸಾಹಿತ್ಯದ ( ನಿರ್ದಿಷ್ಟವಾಗಿ ಹೇಳುವುದಾದರೆ ಬಂಗಾಳಿ ಸಾಹಿತ್ಯದ ) ಒಂದು ಸಂಯೋಜನೆಯಿಂದ ಪ್ರಭಾವಿತಗೊಂಡಿತ್ತು . ಆದರೆ , ವಿದೇಶೀ ಪ್ರಭಾವಗಳ ವಿಷಯಕ್ಕೆ ಬಂದಾಗ ಇದು ಕೊಂಚ ವಿಭಿನ್ನತೆಯನ್ನು ಮೆರೆಯುತ್ತದೆ . ಏಕೆಂದರೆ ಹಾಲಿವುಡ್ ಚಲನಚಿತ್ರಗಳಿಗಿಂತ ಹೆಚ್ಚಾಗಿ ಇದು ಐರೋಪ್ಯ ಚಿತ್ರರಂಗದಿಂದ ( ನಿರ್ದಿಷ್ಟವಾಗಿ ಹೇಳುವುದಾದರೆ ಇಟಲಿಯ ನವಯಥಾರ್ಥತೆ ಮತ್ತು ಫ್ರೆಂಚರ ಕಾವ್ಯಾತ್ಮಕ ಯಥಾರ್ಥತೆಯ ಚಿತ್ರಗಳಿಂದ ) ಹೆಚ್ಚು ಪ್ರಭಾವಿತಗೊಂಡಿದೆ . ಸತ್ಯಜಿತ್ ರೇಯವರು
ಹೌದು ! ನಾನು ಅದೇ ಯಾಮಿನಿ . ವ್ಯಾಸರಾಯ ಬಲ್ಲಾಳರ ` ಬಂಡಾಯ ' ಕಾದಂಬರಿಯ ಪಾತ್ರ . ಆ ಕಾದಂಬರಿ ಓದಿಯೇ ನನ್ನಪ್ಪ ನನಗೆ ಹೆಸರಿಟ್ಟದ್ದು . ಆದರೆ ನಾನು ಆ ಯಾಮಿನಿಯಷ್ಟು ಧೈರ್ಯದವಳಲ್ಲ . ನಾನಿರುವುದು ಮಂಗಳೂರಿನಲ್ಲಿ . ಆದರೆ ನಿರಂತರವಾಗಿ ಬೆಂಗಳೂರು ಮತ್ತು ಚಿಕ್ಕಮಗಳೂರುಗಳ ಮಧ್ಯೆ ಓಡಾಡುತ್ತಿರುತ್ತೇನೆ . ಇದಕ್ಕಿಂತ ಹೆಚ್ಚಿನ ಮಾಹಿತಿ ನೀಡುವುದಕ್ಕೆ ಇದು ವೇದಿಕೆಯಲ್ಲವೇನೋ . . . ?
ನಾನ್ಯಾಕೆ ಬರೆಯುತ್ತೇನೆ ? ಅದೇ ನನ್ನ ಖುಷಿಗೆ , ನನ್ನ ಬರಹದ ತುಡಿತವನ್ನು ಇಲ್ಲಿ ಹಂಚಿಕೊಳ್ಳೋದಕ್ಕೆ . ನನ್ನೊಳಗಿನ ಪುಟ್ಟ ಪುಟ್ಟ ಖುಷಿಯ ಕ್ಷಣಗಳನ್ನು ನಿಮ್ಮ ಜೊತೆ ಹಂಚಿಕೊಳ್ಳೋದಕ್ಕೆ . ಮನದ ಮೂಲೆಯಲ್ಲಿದ್ದ ದುಗುಡ - ದುಮ್ಮಾನಗಳನ್ನು ನಿಮ್ಮ ಜೊತೆ ಹಂಚಿಕೊಂಡು ಮನಸ್ಸು ತಿಳಿಯಾಗಿಸೋದಕ್ಕೆ . ನನ್ನೊಳಗಿನ ಕನಸುಗಳನ್ನು ನಿಮ್ಮ ಜೊತೆ ಹಂಚಿ , ವಿಶ್ ಪಡೆಯೋದಕ್ಕೆ . ಹೌದು . ಹೇಳಲಾಗದ ಮಾತು , ಬಚ್ಚಿಡಲಾಗದ ಭಾವನೆಗಳನ್ನು ಇಲ್ಲಿ ಬಿಚ್ಚಿಡೋದಕ್ಕೆ . ಜಗತ್ತಿನ ಸತ್ಯ - ಮಿಥ್ಯಗಳನ್ನು ಕಂಡು ಕಂಗಳು ನೀರಾದಾಗ ಮನಸ್ಸು ಶುಭ್ರಗೊಳಿಸೋದಕ್ಕೆ ನಾ ಬರೆಯುತ್ತೇನೆ . ಜೀವನ ಪ್ರೀತಿಯಲ್ಲಿ ಮಿಂದು ಮನಸ್ಸು ಖುಷಿಗೊಂಡಾಗ ' ಬದುಕೆಷ್ಟು ಸುಂದರ ' ಅಂತ ಖುಷಿಯಿಂದ ಬರೆದುಬಿಡ್ತೀನಿ . ಅದೇ ಇರೋ ಜೀವನದಲ್ಲಿ ಪುಟ್ಟ ಕಷ್ಟಗಳನ್ನೇ ಸಹಿಸಿಕೊಳ್ಳಲಾಗದೆ ಹೃದಯ ಭಾರವಾದಾಗ ಮತ್ತದೇ ಬೇಸರ . . ಅದೇ ಹಾಡು . . ಅನ್ನೋಕೂ ಈ ಅಕ್ಷರಲೋಕವೇ ಸಾಥ್ ನೀಡೋದು . ತುಂಬಾ ದಿನಗಳಾಯ್ತು . . . ಏನೂ ಬರೆಯಕ್ಕಾಗ್ತಿಲ್ಲ . . . ಬರೆಯಲಿಲ್ಲ . ಒಂದಷ್ಟು ಕೆಲಸ ಹೆಗಲ ಮೇಲೆ ಬಿದ್ದಾಗ , ಒಂದಷ್ಟು ಹೊತ್ತು ವ್ಯರ್ಥ ಮಾತುಗಳಲ್ಲಿ ಕಳೆದುಹೋದಾಗ , ಮನೆಯ ಚಿಂತೆ ಕಾಡತೊಡಗಿದಾಗ . . ಏನೋ ಒಂಥರಾ ಮನಸ್ಸು ಗೊಂದಲಗಳಲ್ಲಿ ಸಿಕ್ಕಾಗ ಬರೆಯಲು ಕುಳೀತರೂ ಬರೆಯಲಕ್ಕಾಗುತ್ತಿಲ್ಲ . ನನ್ನೊಳಗಿನ ಮಾತುಗಳಿಗೆ ಈ ಬ್ಲಾಗ್ ವೇದಿಕೆ ಅಂದ್ರೂ ಆಗ್ತಿಲ್ಲ . ತುಂಬಾ ನನ್ನನ್ನು ನಾನೇ ಬೈದುಕೊಂಡಿದ್ದೆ . ಹೀಯಾಳಿಸಿಕೊಂಡಿದ್ದೆ . ಖಾಲಿ ಪುಟಗಳನ್ನು ರಾಶಿ ಹಾಕೊಂಡು ಏಕಾಂಗಿಯಾಗಿ ಪೆನ್ನು ಹಿಡಿದು ಕುಳಿತರೂ ಕೈಗಳಲ್ಲಿ ಅಕ್ಷರಗಳು ಮೂಡುತ್ತಿಲ್ಲ , ಭಾವನೆಗಳು ಮಾತಾಡುತ್ತವೆ . ಕಣ್ಣುಗಳು ಮಾತಾಡುತ್ತವೆ , ಮೌನಗಳೂ ಮಾತಾಡುತ್ತವೆ . ಕಿವಿ ಇಂಪಾದ ಹಾಡುಗಳತ್ತ ತುಡಿಯುತ್ತದೆ . ಹೃದಯ ಜೀವನಪ್ರೀತಿಯ ಹುಡುಕಾಟದಲ್ಲಿ ಕಳೆಯುತ್ತೆ . ಮನಸ್ಸು ಮಣ್ಣುಗೂಡಿದ ಪ್ರೀತಿಯನ್ನು ನೆನೆಯುತ್ತೆ . ಆದರೆ ಅಕ್ಷರಗಳು ಖಾಲಿ ಪುಟದ ಮೇಲೆ ಬೀಳುತ್ತಿಲ್ಲ . ಕೈಯಲ್ಲಿರುವ ಪೆನ್ನು ಖಾಲಿ ಪುಟದ ಮೇಲೆ ಬಿಂದುವನ್ನಷ್ಟೇ ಇಟ್ಟು ಸುಮ್ಮನಿದ್ದೆ . ಏನೇನೋ ಯೋಚನೆಗಳು . . ಅಮೂರ್ತ ಕಲ್ಪನೆಗಳು . ಸತ್ಯ , ಪ್ರಾಮಾಣಿಕತೆ , ನಿಷ್ಕಲ್ಮಶ ಪ್ರೀತಿ ಯಾಕೋ ಢಾಳಾಗಿ ಕಾಣುತ್ತವೆ . ಪ್ರಾಮಾಣಿಕವಾಗಿ ಕೆಲ್ಸ ಮಾಡಿದ್ರೂ ಬಾಸ್ ಕೈಯಲ್ಲಿ ಬೈಸಿಕೊಳ್ತೀವಿ . ಬದುಕಿನಲ್ಲಿ ಮಾನವೀಯ ಬಾಂಧವ್ಯ , ಜೀವನಪ್ರೀತಿಯ ಕುರಿತು ಮಾತನಾಡೋರು ವೇದಿಕೆ ಮೇಲೆಯಷ್ಟೇ ಗೊಣಗುತ್ತಾರೆ . ಜೀವನ ಅಂದ್ರೆ ನಮ್ಮೂರ ಆಟದ ಮೈದಾನ ಅನ್ನೋರು ಕೆಲವರು , ಇನ್ನು ಕೆಲವರು ಜೀವನನಾ ಸೀರಿಯಸ್ ಆಗಿ ತಕೋಪಾ ಅಂತ ಬೋಧನೆ ಮಾಡ್ತಾರೆ . ಆದರೆ ಬೋಧನೆ ಮಾಡಿದವರಾರು ನಿಜವಾದ ಜೀವನಾನ ಕಂಡೋರಿಲ್ಲ , ಜೀವನದಲ್ಲಿ ಉದ್ದಾರವೂ ಆಗಿಲ್ಲ ! ಇರಲಿ ಏನೇನೋ ಯೋಚನೆಗಳು . . ನೆನಪಾದುವು ಜಿ . ಎಸ್ . ಎಸ್ . ಅವರ ಕವನದ ಸಾಲುಗಳು . . . . . . . ಹೌದು . . ಮತ್ತೆ ನಾನು ಬರೆಯುತ್ತೇನೆ . . ನನ್ನೊಳಗನ್ನು ತೆರೆದಿಡುತ್ತೇನೆ . . ಮುಂದಿನ ಬರಹ ಸದ್ಯದಲ್ಲಿಯೇ ನಿಮ್ಮೆದುರು ಕಾಣಲಿದೆ . ಬರ್ತಾ ಇರಿ . . ಬೆನ್ನುತಟ್ಟುತ್ತಿರಿ . .
೧ . 1970 - ಸಂಸ್ಕಾರ . ನಿರ್ದೇಶನ - ಪಟ್ಟಾಭಿ ರಾಮ ರೆಡ್ಡಿ . ಜ್ಞಾನಪೀಠ ಪ್ರಶಸ್ತಿ ವಿಜೇತ ಯು . ಆರ್ . ಅನಂತ ಮೂರ್ತಿಯವರ ಕಾದಂಬರಿ ಆಧಾರಿತ ಈ ಚಿತ್ರ ಕನ್ನಡಕ್ಕೆ ಮೊಟ್ಟ ಮೊದಲ ಬಾರಿಗೆ ಸ್ವರ್ಣ ಕಮಲ ಪ್ರಶಸ್ತಿಯನ್ನು ತಂದು ಕೊಟ್ಟಿತು .
ಆಗ ಆಕೆಗೆ ಕಂಡ ಕಡೆಯ ಆಶಾಕಿರಣ ಯಾವುದೆಂದು ತಿಳಿದಿದ್ದೀರಿ ? ಆ ಹೊತ್ತಿನಲ್ಲಿ ಆಕೆ ಕರೆ ಮಾಡಿದ್ದು ಯಾರಿಗೆ ಅಂದುಕೊಂಡಿರಿ ?
ಪ್ರೀತಿಯ ಬೆಂಕಿ : ಹರೆಯಕ್ಕೆ ಕಾಲಿಟ್ಟ ಮಧು ಹಾಗೂ ಮನು ಇಬ್ಬರೂ ಪ್ರೀತಿಯಲ್ಲಿ ಜಾರಿ ಬಿದ್ದಿದ್ದರು . ಹಾಗೇ ಬಿದ್ದಿದ್ದರಿಂದಲೇ ಅವಳಿಗೀಗ ಮೂರು ತಿಂಗಳು ತುಂಬಿತ್ತು . ಇದನ್ನು ಮನೆಯವರಲ್ಲಿ ಹೇಳಲೂ ಮಧುಗೆ ಧೈರ್ಯವಿರಲಿಲ್ಲ ; ಅವನಿಗೂ . ಅದೇ ವಿಚಾರದಲ್ಲಿ ಇಬ್ಬರೂ ಮಾತಿಗೆ ಮಾತು ಬೆಳೆಸಿದ್ದರು . ಮಧು ' ಎಲ್ಲ ಮಾಡಿದವನು ನೀನೆ , ಈಗ ಹಿಂಗೆ ಮಾತನಾಡಿದ್ರೆ ಹೆಂಗೆ ? ' ಎಂದಳು . ಅದಕ್ಕವನು ' ಆಗಿದ್ದೆಲ್ಲಾ ನಿನ್ನಿಂದ್ಲೇ ನೀನು ನನ್ನ ಜೀವನದಲ್ಲಿ ಬರದಿದ್ದರೆ ನಾನು ನೆಮ್ಮದಿಯಾಗಿರುತ್ತಿದ್ದೆ ' ಎಂದ . ಮಾರನೇ ದಿನ ಆಕೆ ಎಲ್ಲವನ್ನೂ ಬರೆದಿಟ್ಟು ಲೋಕವನ್ನು ಬಿಟ್ಟು ಹೋದಳು . ಮರುಕ್ಷಣವೇ ಅವರಿಬ್ಬರ ಮನೆಗೂ ಬೆಂಕಿ ಬಿದ್ದಿತ್ತು . ಮನೆ ಮನಗಳೆರಡೂ ಧಗಧಗಿಸಿ ಉರಿಯುತ್ತಿದ್ದವು .
ಆ ಘಟನೆಯ ಕಪ್ಪು ಚುಕ್ಕೆ ಸಾವಿರಾರು ದಿನಗಳವರೆಗೆ ಮುಂದಿನ ನವ ಯುವ ಜನಾಂಗಕ್ಕೆ ಮನಸ್ಸಿನ ಕೊರೆಯುವ ನೋವಿನ ಘಟನೆಯಾಗಿ ನೆಮ್ಮದಿಯಿಂದ ಜೀವಿಸುವುದನ್ನು ಕಾಣದಂತೆ ಮಾಡುತ್ತದೆ .
ಭಕ್ತನು ಹೇಗಿರಬೇಕು ಎಂಬುದರ ಕುರಿತು ಕಾಳವ್ವೆ ನಿಖರವಾಗಿ ಹೇಳಿದ್ದಾಳೆ . ಭಕ್ತ ಶಬ್ದದ ಸಾಂಪ್ರದಾಯಿಕ ಅರ್ಥದ ಬದಲಿಗೆ ಹೊಸ ಅರ್ಥವನ್ನು ಕೊಡುತ್ತಾಳೆ . ಭಕ್ತನ ವ್ಯಕ್ತಿತ್ವ ಕಾಯಕದ ಮೇಲೆ ನಿಂತಿದೆ ಎಂದು ಸೂಚಿಸುತ್ತಾಳೆ . ಆ ಕಾಯಕವು ಸತ್ಯ ಮತ್ತು ಪಾವಿತ್ರ್ಯದ ಮೇಲೆ ನಿಂತಿದೆ ಎಂಬುದರ ಕಡೆಗೆ ಗಮನ ಸೆಳೆಯುತ್ತಾಳೆ . ಆ ಕಾಯಕದಿಂದ ಬಂದುದರ ಬಗ್ಗೆ ಒಲವು ತೋರಿದರೆ ಅದು ಭವದ ಮೂಲವಾಗುತ್ತದೆ ಎಂದು ಎಚ್ಚರಿಸುತ್ತಾಳೆ . ಶರಣ ಸಂಕುಲ ಮತ್ತು ಒಟ್ಟಾರೆ ಜಿವಸಂಕುಲದ ಬಗೆಗಿನ ದಾಸೋಹ ಪ್ರಜ್ಞೆಯಿಂದ ಕಾಯಕದಿಂದ ಬಂದುದನ್ನು ದೇವರು ಕೊಟ್ಟ ಪ್ರಸಾದವಾಗಿ ಸ್ವೀಕರಿಸಿದರೆ ಭವನಾಶವಾಗಿ ನಿತ್ಯಮುಕ್ತಿಯನ್ನು ಸಂಪಾದಿಸುವ ರಹಸ್ಯವನ್ನು ತಿಳಿಸುತ್ತಾಳೆ . ಆ ಮೂಲಕ ವ್ಯಕ್ತಿಯನ್ನು ವಿಮೋಚನೆಗೊಳಿಸಿ ಸಮೂಹವನ್ನು ರಕ್ಷಿಸುವ ದಾಸೋಹಂಭಾವದ ಮಹತ್ವವನ್ನು ಸಾರುತ್ತಾಳೆ .
ಸಂಜೆ ೪ . ೩೦ ರ ಸಮಯ . ಎಂದಿನಂತೆ ಅಂಗಳದಲ್ಲಿದ್ದ ಸಂಪಿಗೆ ಮರದಡಿ ಕುರ್ಚಿಯಲ್ಲಿ ಕುಳಿತು ಇಯರ್ ಫೋನ್ ನಲ್ಲಿ F . M ಆಲಿಸುತ್ತಿದ್ದೆ . ಹೀಗಿರುವಾಗ ಕೆಲವು ನಿಮಿಷಗಳ ಬಳಿಕ ತಣ್ಣನೆ ಗಾಳಿ ಬೀಸಲು ಆರಂಭವಾಯಿತು . ನಮ್ಮ ಮನೆ ಸ್ವಲ್ಪ ಎತ್ತರ ಪ್ರದೇಶದಲ್ಲಿರುವುದರಿಂದ ಗಾಳಿಯ ವೇಗ ಹೆಚ್ಚಾಗೇ ಇತ್ತು . ಆ ತಂಪನೆಯ ಗಾಳಿ ಮೈಗೆ ಸೋಕುತ್ತಿದ್ದಂತೆ ಏನೋ ಮಧುರ ಅನುಭವ … ತಣ್ಣನೆಯ ಗಾಳಿಗೆ ಮೈಯ್ಯೊಡ್ಡಿ ಹಾಡು ಆಲಿಸುತ್ತಾ ಕುಳಿತಿದ್ದವಳಿಗೆ ಬಾನು ಕಪ್ಪಿಟ್ಟದ್ದೇ ಅರಿವಿಗೆ ಬರಲಿಲ್ಲ . ಇದ್ದಕ್ಕಿದ್ದಂತೆ ಪುಟ್ಟ ಮಳೆ ಹನಿಯೊಂದು ಮುತ್ತಿಕ್ಕಿದಂತಾಯಿತು . [ . . . ]
ಯಾವುದೇ ವಸ್ತು ಸಂಗ್ರಹಾಲಯಕ್ಕೆ ಹೋದರೂ ಅಲ್ಲಿ ನೀವು ಕಾಣುವ ಮೊದಲ ಸೂಚನೆ " Dont Touch ' ಆದರೆ ಯುರೋಪಿನ ದೇಶಗಳ ಮ್ಯೂಸಿಯಂಗಳಲ್ಲಿ " Do It Yourself ' ಎಂದಿರುತ್ತದೆ . ಆ ಅಂಥದ್ದೇ ಒಂದು ಮ್ಯೂಸಿಯಂ ಇದೆ ಎಂದು ನನಗೆ ಗೊತ್ತಾದದ್ದು ಮೊನ್ನೆ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದಾಗಲೇ . ಮೊದಲಿಗೆ ನನಗೆ ಆಶ್ಚ , ಅಲ್ಲಿ ಎಲ್ಲಾ ಮ್ಯೂಸಿಯಂಗಳಲ್ಲಿ ಕಾಣುವಂ ಘನಗಂಭೀರ ಮುಖಗಳು ಕಾಣದೇ , ಫನ್‌ವರ್ಲ್ಡ್‌ನಲ್ಲಿರುವಂತೆ ಮಕ್ಕಳ ನಗು , ಕೇಕೆ ಕಂಡಿ . ನೂರಾರು ಮಕ್ಕಳು , ಆ ಬೃಹತ್ ವಿಜ್ಞಾನ , ತಂತ್ರಜ್ಞಾನದ ಎದುರು ಮಕ್ಕಳೇ ಆಗಿರುವ ದೊಡ್ಡ ಬೆರಗಿನಿಂದ ಅಗಲವಾದ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದರು . ' ಅದು ಹೇಗೆ ಹೀಗಾಗತ್ತಪ್ಪ ? ' ಎನ್ನುವ ಮಕ್ಕಳ ಪ್ರಶ್ನೆಗೆ ಅಲ್ಲಿರುವ ವಿವ ಓದಿ ತಿಳಿ ಹೇಳುವ ಪ್ರಯತ್ನದಲ್ಲಿದ್ದರು . ಆದರೆ ಅಲ್ಲಿ ' ಅದನ್ನು ಮುಟ್ಟಬೇ ' , ' ಇದಕ್ಕೆ ಕೈ ತಾಕಿಸಬೇಡಿ ' ಎನ್ನುವವರ್ಯಾರೂ ಇರಲೇ ಇಲ್ಲ . ಮ್ಯೂಸಿಯಂನ ಹೊರಭಾಗದಲ್ಲಿರುವ ವಿಮಾನ , ರಾಕೆಟ್ , ಡೈನೋ ಮಕ್ಕಳನ್ನಾಗಲೇ ಚುಂಬಕದಂತೆ ಸೆಳೆದಿದ್ದವು . ಒಳ ಹೊಕ್ಕೊಡನೆ ಬೃಹತ್ ಡೈನೋಸಾರಸ್ ಕುಟುಂಬದ ಸ್ಪೈನೊ ಘೀಳಿ ಎದುರುಗೊಂಡಿತು . ಅಲ್ಲಿಂದ ಮುಂದೆ ಹೋಗಲೊಪ್ಪದ ಮಕ್ಕಳನ್ನು ಬಲವಂತವಾಗಿ ಮುಂದಿನ ಕೊಠಡಿಗೆ ಕರೆದುಕೊಂಡು ಹೋಗಬೇಕಾಯಿತು . " ಇಂಜಿನ್ ಹಾಲ್ " ನಲ್ಲಿ ವಿವಿಧ ಯಂತ್ರಗಳ ಸರಳ ಉಪಯೋಗಗಳ ಡೆಮೊ ಕುತೂಹಲ ಕೆರಳಿಸು . ಕಬ್ಬಿಣದ ಸರಳುಗಳ ಮಧ್ಯೆ ನಿರಂತರವಾಗಿ ಸುತ್ತುವ , ಎಲ್ಲಿಂದಲೋ ಜಾರಿ ಎಲ್ಲೋ ಹಾರಿ ಬುಟ್ಟಿಯೊಳಗೆ ಬಂದು ಬೀ ಚೆಂಡುಗಳನ್ನು ಕಣ್ಣರಳಿಸಿಕೊಂಡು ನೋಡುತ್ತಿದ್ದರು . ಸಿನಿಮಾಸಕ್ತರಿಗೆ " ಅಪ್ಪು ರಾಜಾ ' ದಲ್ಲಿ ಕಮಲ್ ಹಸನ್ ಕೇವಲ ಒಂ ಚೆಂ ಬಳಸಿ ಕೇಡಿಗನನ್ನು ಕೊಲ್ಲುವ ತಂತ್ರವನ್ನು ನೆನಪಾ ಆಶ್ಚರ್ಯವಿಲ್ಲ . ಇಲ್ಲಿ ಬೇರೆಲ್ಲೂ ನೋಡಲು ಸಿಗದ ರೈಟ್ ಸಹೋದರರು ನಿರ್ಮಿಸಿದ ಮೊದಲ ವಿಮಾನದ ಪ್ರತಿಕೃತಿಯೂ ಇದೆ . ಎರಡನೇ ಅಂತಸ್ತಿನ " ಎಲೆಕ್ಟ್ರೋ ಟೆಕ್ನಿಕ್ ಗ್ಯಾಲೆರಿ " ಯಂತೂ ಅಚ್ಚರಿಗಳ ಸಂತೆ . ತಳವೇ ಇಲ್ಲದ ಬಾವಿ , ಎಲ್ಲೋ ಪಿಸುಗುಟ್ಟಿದರೆ ಇನ್ನೆಲ್ಲೋ ಕಿವಿಗೊಟ್ಟು ಆಲಿಸಬಹುದಾದ ತಂತ್ರ , ದೃಷ್ಟಿ ಭ್ರಮೆ ಹುಟ್ಟಿಸುವ ವಿವಿಧ ಆಟಗಳು , ದೇಹ ತೂಕದ ಜತೆಗೆ ಅದರಲ್ಲಿರುವ ನೀರಿನ ತೂಕವನ್ನೂ ತಿಳಿಸುವ ಯಂತ್ರ , ನಮ್ಮದೇ ಬೆನ್ನನ್ನು ಕಣ್ಣೆದುರು ತೋರಿಸುವ ಕನ್ನಡಿ , ಒಂದೇ ಎರಡೇ . ವಿವಿಧ ಗ್ರಹಗಳ ಮೇಲೆ ನಮ್ಮ ತೂಕ ಎಷ್ಟು ಎಂದು ತೋರಿಸುವ ಯಂತ್ರ ನೋ ಆ ಬ ಕುತೂಹಲ ಹುಟ್ಟಿಸುವುದು ಖಂಡಿತ . ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ವಿವಿಧ ಆಟಗಳ ಮೂಲಕ ಕಂಪ್ಯೂಟರ್ ಹೇಗೆ ಸ್ಪರ್ಶವನ್ನು ಗ ಎಂದು ತೋರಿಸುವುದೂ ಒಳ್ಳೇ ಪ್ರಯೋಗ . ಈಗೆರೆಡು ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ " ಬಾಲ ವಿಜ್ಞಾನ " ವಿಭಾಗದಲ್ಲಿ ಕುಳ್ಳಗಾಗಿ , ದಪ್ಪವಾಗಿ , ಉದ್ದವಾಗಿ ತೋರುವ ಕನ್ನಡಿಗಳು , ನಡೆದರೆ ನುಡಿಯುವ ಪಿಯಾನೊ ಇರುವ ಜಾಗವನ್ನೇ ಮ . ಅಲ್ಲಿರುವ ೩ಈ ಚಿತ್ರಮಂದಿರದಲ್ಲಿ ವಿಶೇಷ ಕನ್ನಡಕ ಧರಿಸಿಕೊಂಡು ಚಿತ್ರ ನೋಡುವಾಗ ಮಕ್ಕಳಿರಲಿ , ದೊಡ್ಡವ ಬೆರಗಾಗುವುವುದು ಅವರ ಕೇಕೆ , ಉದ್ಗಾರದಲ್ಲೇ ಗೊತ್ತಾಗುತ್ತಿತ್ತು . ಸರ್ . ಎಂ . ವಿಶ್ವೇ ಶ್ವರಯ್ಯನವರ ಜನ್ಮಶತಮಾನೋತ್ಸವದ ಅಂಗವಾಗಿ ೧೯೬೨ ಈ ಸಂಗ್ರಹಾಲಯವನ್ನು ಸ್ಥಾಪಿಸಿದ್ದಾದರೂ ಅಪ್‌ಡೇಟ್ ಆಗುತ್ತಿದೆ ಎನ್ನುವುದಕ್ಕೆ ಅಲ್ಲಿ ಸಾಕ್ಷಿಗಳಿದ್ದವು . ಪ್ರತಿ ದಿನ ನೂರಾರು ವೀಕ್ಷಕರಿರುವ , ಪ್ರತಿ ವಸ್ತುವನ್ನೂ ಮುಟ್ಟಿ , ತಟ್ಟಿ ನೋಡುವ ಈ ಸಂಗ್ರಹಾಲಯವನ್ನು ನೋಡಿಕೊಳ್ಳುವುದು ಸಾಮಾನ್ಯದ ಮಾತಲ್ಲ . ಆ ಕೆಲಸವನ್ನು ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಹಾಲಯ ಸೊಸೈಟಿಯು ಅಚ್ಚುಕಟ್ಟಾಗಿ ನಿರ್ವಹಿಸುತ್ತಿ . ಬಹು ಅಂತಸ್ತಿನ ಕಟ್ಟಡದಲ್ಲಿ ಲಿಫ್ಟ್ ಇಲ್ಲ ಎನ್ನುವುದೊಂದು ಕೊರತೆ . ಆದರೂ ಅಲ್ಲಲ್ಲಿ ಕೂರಲು ಕುರ್ಚಿಗಳು , ಸ್ವಚ್ಛ ಶೌಚಾಲಯಗಳೂ ನೋಡುಗರನ್ನು ಹಗುರಾಗಿಸುತ್ತವೆ . ಮೇಲಂತಸ್ತನಲ್ಲಿರುವ ಕ್ಯಾಂಟೀನ್ ಮಾತ್ರ ಕೊಂಚ ದುಬಾರಿಯೇ . ನಮ್ಮೊಂದಿಗೆ ವಿವಿಧ ವಯಸ್ಸಿನ ಮಕ್ಕಳನ್ನು ಕರೆದುಕೊಂಡು , " ಮಕ್ಕಳಿಗೆ ಬೋರ್ ಆಗುತ್ತದೆಯೇನೋ , ಆದರೂ ಇವನ್ನೆಲ್ಲಾ ತಿಳಿದಿರಬೇಕು " ಎಂದು ದೊಡ್ಡವರ ಪೋಸ್ ಕೊಡುತ್ತಾ ಬಂದಿದ್ದ ನಮಗೂ ಇದು ವಿಶಿಷ್ಟ ಅನುಭವ . ವಿವರವಾಗಿ ನೋಡಲು ಇಡೀ ದಿನ ಸಾಲದು . ಭಾನುವಾರವೂ ತೆರೆದಿರುತ್ತದೆ ಎನ್ನುವುದು ಪ್ಲಸ್ ಪಾಯಿಂಟ್ . ನೀವು ನೋಡಿಲ್ಲದಿದ್ದರೆ ಒಮ್ಮೆ ಭೇಟಿ ನೀಡಲೇಬೇಕಾದ ಸ್ಥಳವಿದು . ನಿಮ್ಮೊಡನೆ ಮಕ್ಕಳಿದ್ದರೆ ಬೇಸಿಗೆ ರಜೆ ಮುಗಿಯುವ ಮುನ್ನ ಹೋಗಿಬಂದು ಬಿಡಿ . ರಜೆ ವಾದೀತು . ವಿಳಾಸ : ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ . ಕಸ್ತೂರಬಾ ರಸ್ತೆ . ಬೆಂಗಳೂರು .
" ನಾಣಿ , ಒಂದೊಂದ್ಸರ್ತಿ ಅನ್ನಿಸುತ್ತೆ ನನಗೆ ಹುಚ್ಚೇ ಹಿಡಿದುಬಿಟ್ಟಿದೆ " ಪ್ರತಾಪ್ ಉದ್ವಿಗ್ನನಾಗಿ ಹೇಳಿದ .
" ಹುಡುಗಿಯಲ್ಲಿ ಒಲುಮೆಯ ಕಿಚ್ಚು , ನಿಮ್ಮ ವಿವರಣೆ ಓದಿದ ಮೇಲೆ ಯಾರಿಗಾದರೂ ಬೇಂದ್ರೆಯವರನ್ನ ಓದಬೇಕೆನ್ನುವ ಕಿಚ್ಚು ಶುರುವಾಗುತ್ತೆ " ಬಹುಶಃ ನನ್ನ ತಲೆಮಾರಿನವರಿಗ್ಯಾರಿಗಾದರು ಕವಿತೆಗಳ ಕಡೆ ಒಲವಿದ್ದರೆ , ಬೇಂದ್ರೆಯವರನ್ನ ಆಸ್ವಾದಿಸಬೇಕೆಂದಿದ್ದರೆ ಮೊದಲು " ಸಲ್ಲಾಪ " ಬ್ಲಾಗ್ ಓದು ಮೊದ್ಲು ಅಂತ ಹೇಳ್ಬೇಕು ಅನ್ಸುತ್ತೆ . ಬೇಂದ್ರೆಯವರನ್ನ ಇಷ್ಟು ಚೆನ್ನಾಗಿ , ಎಳೆ ಎಳೆಯಾಗಿ ಬಿಡಿಸಿಕೊಡುವವರು ಇವತ್ತಿನ ಸಾಹಿತ್ಯ ವಲಯದಲ್ಲಿ ಕೂಡ ತುಂಬಾ ಕಡಿಮೆಯೇ ಅಂತ ನನ್ನ ಅನಿಸಿಕೆ . ನಾವಂತೂ ಲಕ್ಕಿ ಫೆಲ್ಲೋಸ್ , ನಮಗೆ ನೀವಿದಿರ . ಕವಿಶ್ರೇಷ್ಠ ಬೇಂದ್ರೆ ಈ ಮುಖೇನ ಇನ್ನು ಹೆಚ್ಚು ಜನಕ್ಕೆ ತಲುಪುವಂತಾಗಲಿ . ನನ್ನ ಇಷ್ಟದ ಕವಿ ಬೇಂದ್ರೆ , ಆದ್ರೆ ನಿಮ್ಮ ವಿಶ್ಲೇಷಣೆಗಳನ್ನ ಓದಿದ ಮೇಲೆ ಅನ್ಸ್ತಾಯಿದೆ ಇಷ್ಟು ವರ್ಷ ನನಗೆ ಅರ್ಥ ಆಗಿದ್ದು ಬರೀ ಮೇಲಿನ ಒಂದು ಪದರು . ಇನ್ನಾದರು ಆಳಕ್ಕಿಳಿಯುವ ಪ್ರಯತ್ನ ಮಾಡ್ತೇನೆ . ಸರ್ , ಯು ಆರ್ ರಿಯಲಿ ವಂಡರ್ಫುಲ್ . ಥ್ಯಾಂಕ್ ಯು
ಬಂಧಿತ ಪಿಎಫ್‌ಐ ಕಾರ್ಯಕರ್ತರನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆವರಣಕ್ಕೆ ಕರೆತಂದು ಅನಂತರ ಬಿಡುಗಡೆ ಮಾಡಲಾಯಿತು . ಪಿಎಫ್‌ಐ ಅಧ್ಯಕ್ಷ ಮಜಮಲ್ ಅಹ್ಮದ್ ಹಾಗೂ ಅನೇಕ ಕಾರ್ಯಕರ್ತರು ಬಂಧನಕ್ಕೆ ಒಳಗಾದರು . ಈ ವೇಳೆ ಮಾತನಾಡಿದ ಸಂಘಟನೆಯ ಮುಖಂಡ ಅಬ್ರಾರ್ , ದೇಶ ಉಳಿಸಿ ಎಂಬ ಘೋಷಣೆಯಡಿ ಧರಣಿಯಲ್ಲಿ ತೊಡಗಿದ್ದ ಕಾರ್ಯಕರ್ತರನ್ನು ಬಂಧಿಸುವ ಮೂಲಕ ಪೊಲೀಸರು ಬಿಜೆಪಿ , ಆರೆಸ್ಸೆಸ್ ಏಜೆಂಟರಂತೆ ವರ್ತಿಸಿದ್ದಾರೆ ಎಂದು ದೂರಿದರು . ಪೊಲೀಸರ ದೌರ್ಜನ್ಯದ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಅಬ್ರಾರ್ ಎಚ್ಚರಿಸಿದ್ದಾರೆ .
ಸುನಕ್ಷತ್ರ , ಅಂತರಿಕ್ಷ , ಸುಷೇಣ , ಅನಿಭಜಿತ್ , ಬೃಹದ್ಭಾನು , ಧರ್ಮಿ , ಕೃತಂಜಯ , ರಣಂಜಯ , ಸಂಜಯ , ಪ್ರಸೇನಜಿತ ( ಬುದ್ಧನ ಸಮಕಾಲೀನ ) , ಕ್ಷುದ್ರಕ , ಕುಲಕ , ಸುರಥ , ಸುಮಿತ್ರ ( ಸೂರ್ಯವಂಶದ ಕೊನೆಯ ಅರಸ . ಈತ ನವ ನಂದರಲ್ಲಿ ಒಬ್ಬನಾಗಿದ್ದ . ಮಹಾಪದ್ಮ ನಂದನಿಂದ ಸೋಲಿಸಲ್ಪಟ್ಟು ಅಯೋಧ್ಯೆಯಿಂದ ರೋಹತಕ್ಕೆ ತೆರಳಿದ . ಈತನ ಮಗ ಕೂರ್ಮ ರೋಹತರ ಮೇಲೆ ಅಧಿಪತ್ಯ ಸ್ಥಾಪಿಸಿದ . )
@ ಸುಮಾ ಮೇಡಂ , ಇನ್ನು ೩ ತಿಂಗಳು ಬಾರೋ ಹಾಗಿಲ್ಲ ಬಿಡಿ ಆದಷ್ಟು ಬೇಗ ಕರೆಸ್ಕೊಬೇಕು ಬ್ಲಾಗ್ ಓದ್ತಾ ಇರಿ
ಎ ) ಕಯ್ಯಾರ ಕಿಇ್ಇಣ್ಣರೈ ಬಿ ) ಸಿ ) ಪ್ರಕಾಶ ರೈ , ಡಿ ) ಗುರುಕಿರಣ
ಒಂದು ಕಾರು ಪ್ರಯಾಣದ ಮಧ್ಯೆ ಒಂದು ಹಳ್ಳಿಯಲ್ಲಿ ಕೆಟ್ಟು ನಿಲ್ಲುತ್ತದೆ . ಕಾರಿನ ಮೇಲೆ ಚೆನ್ನೈ ಸಂಗೀತ ಅಕಾಡೆಮಿ ಎಂಬ ಬೋರ್ಡ್ ಇದೆ . ಅಲ್ಲೊಬ್ಬ ಸಂಗೀತಾಭಿಮಾನಿ . ಅವನು ಈ ಕಾರಿನ ಪ್ರಯಾಣಿಕರಿಗೆ ಎಲ್ಲ ಅನುಕೂಲ ಮಾಡಿಕೊಡುತ್ತಾನೆ . ತಿಂಡಿ , ವಿಶ್ರಾಂಟಿ , ಕಾರು ರಿಪೇರಿ ಇತ್ಯಾದಿ . ಕೊನೆಗೆ ಅವರು ಹೊರಡುವ ವೇಳೆ ಅವರ ಕಿವಿಗೆ ಬೀಳುವಂತೆ ಸಣ್ಣ ದನಿಯಲ್ಲಿ ಸಂಗೀತದ ಸಣ್ಣ ಆಲಾಪ ಮಾಡುತ್ತಾನೆ . ಪ್ರಯಾಣಿಕರು ಅದನ್ನು ಕೇಳಿ ಇವನತ್ತ ಹೊರಳಿ ನಂತರ ತಮ್ಮತಮ್ಮಲ್ಲಿ ಕಣ್ಣೋಟಗಳ ವಿನಿಮಯ ಮಾಡಿಕೊಂಡು ' ನಿಮಗೆ ನಂತರ ಪತ್ರ ಬರೆಯುತ್ತೇವೆ ' ಎಂದು ಹೇಳಿ ಹೊರಡುತ್ತಾರೆ .
ಚಿಲ್ಲರೆ ರಾದ್ಧಾಂತ ಸಂಪದ - Sampada - ಶನಿವಾರ ೦೧ : ೩೦ , ಜುಲೈ ೯ , ೨೦೧೧
ಪನಾಮದ ಹತ್ತಿರದ ಕಾಲುವೆಯೊಂದನ್ನು ನಿರ್ಮಿಸಬೇಕೆಂಬ ವಿಷವನ್ನು 16ನೇ ಶತಮಾನದಷ್ಟು ಹಿಂದೆಯೇ ಪ್ರಸ್ತಾಪಿಸಲಾಗಿತ್ತು . ಕಾಲುವೆಯೊಂದನ್ನು ನಿರ್ಮಿಸುವ ಮೊದಲ ಪ್ರಯತ್ನವು ಫ್ರೆಂಚ್ ಮುಖಂಡತ್ವದಡಿಯಲ್ಲಿ 1880ರಲ್ಲಿ ಆರಂಭವಾಯಿತು . ಆದರೆ ಕಾಯಿಲೆ ( ನಿರ್ದಿಷ್ಟವಾಗಿ ಮಲೇರಿಯಾ ಮತ್ತು ಹಳದಿ ಜ್ವರ ) ಮತ್ತು ಭೂಕುಸಿತಗಳಿಂದಾಗಿ 21 , 900 ಕಾರ್ಮಿಕರು ಸಾವನ್ನಪ್ಪಿದರಿಂದ ಈ ಕಾರ್ಯವನ್ನು ಬಿಟ್ಟುಬಿಡಲಾಯಿತು . ನಂತರ ಅಮೇರಿಕಾ ಸಂಯುಕ್ತ ಸಂಸ್ಥಾನವು ಎರಡನೇ ಬಾರಿ ಪ್ರಯತ್ನಿಸಿತು , ಇದರಿಂದ ಇನ್ನಷ್ಟು 5 , 600 ಮಂದಿ ಮೃತಪಟ್ಟರು . ಆದರೆ ಈ ಪ್ರಯತ್ನವು 1914ರಲ್ಲಿ ಈ ಕಾಲುವೆಯನ್ನು ಸಂಚಾರಕ್ಕೆ ತೆರೆಯುವಲ್ಲಿ ಯಶಸ್ವಿಯಾಯಿತು . ಈ ಕಾಲುವೆ ಮತ್ತು ಅದರ ಸುತ್ತಮುತ್ತಲಿನ ಕಾಲುವೆ ವಲಯದ ನಿಯಂತ್ರಣವನ್ನು 1977ರವರೆಗೆ U . S . ತೆಗೆದುಕೊಂಡಿತು . ಅದರ ನಂತರ ಈ ನಿಯಂತ್ರಣವನ್ನು ಟೋರಿಜೋಸ್ - ಕಾರ್ಟರ್ ಒಪ್ಪಂದಗಳು ಪನಾಮಗೆ ವಹಿಸಿಕೊಟ್ಟವು . 1979ರಿಂದ 1999ರವರೆಗೆ ಈ ಕಾಲುವೆಯು ಜಂಟಿ U . S . - ಪನಾಮ ನಿರ್ವಹಣೆಯಲ್ಲಿತ್ತು . 1999ರ ಡಿಸೆಂಬರ್ 31ರಿಂದ ಈ ಜಲಮಾರ್ಗದ ನಿಯಂತ್ರಣವನ್ನು ಪನಾಮ ಸರ್ಕಾರದ ಒಂದು ನಿಯೋಗ ಪನಾಮ ಕಾಲುವೆ ಮಂಡಳಿಯು ಪಡೆಯಿತು .
ಮರುದಿನ ಸಾಯಂಕಾಲ ಬೀಟೀಎಮ್ ಲೇಔಟಿನಲ್ಲಿದ್ದ ನನ್ನ ಮನೆಯಲ್ಲಿ ಒಬ್ಬಳೇ ಕುಳಿತಿದ್ದೆ . ಕರೆಂಟು ಹೋಗಿದ್ದರೂ ಮೋಂಬತ್ತಿ ಹಚ್ಚಿರಲಿಲ್ಲ . ಸಣ್ಣಗೆ ಯಾವುದೋ ದುರ್ಘಂಧ ರೂಮಿನಲ್ಲಿ ಬರುತ್ತಿದೆ ಎನಿಸತೊಡಗಿತು . ಈ ವಾಸನೆಯ ಅನುಭವದ ಮಧ್ಯೆಯೇ ಕಿಚನ್ನಿನಲ್ಲಿ ಯಾರೋ ಪಿಸುಗುಟ್ಟಿದ ಹಾಗಾಯಿತು . ಸಲ್ಪ ಹೊತ್ತಿನ ನಂತರ ಪುನಹ ಸಣ್ಣ ನಗು ಮತ್ತು ಪಿಸುಗುಡುವಿಕೆ ಕೇಳಿಬಂದವು . ಚಿಕ್ಕ ಮಕ್ಕಳು ತಮ್ಮ ತಮ್ಮಲ್ಲೇ ಪಿಸುಗುಟ್ಟಿಕೊಂಡ ಹಾಗೆ . ನನಗೆ ಬಾಯಿ ಒಣಗಿದಂತಾದರೂ ಕೇಳಿದ್ದು ಹೌದೇ ಅಲ್ಲವೇ ಎಂದು ಖಾತರಿ ಮಾಡಿಕೊಳ್ಳಲು ಹಾಗೇ ಅಲ್ಲಾಡದೇ ಸ್ವಲ್ಪ ಹೊತ್ತು ಕುಳಿತಿದ್ದೆ . ಅಷ್ಟರಲ್ಲಿ ಕರೆಂಟು ಹಾಗೂ ನನ್ನ ರೂಮುಮೇಟು ರಾಧೆ ಇಬ್ಬರೂ ಬಂದಾಯಿತು . ಧೈರ್ಯ ತಂದುಕೊಂಡು ಕಿಚನ್ನಿಗೆ ಹೋಗಿ ನೋಡಿದರೆ ಯಾರೂ ಇರಲಿಲ್ಲ . ಆದರೆ ಕಿಚನ್ನಿನ ಟೇಬಲ್ಲಿನ ಮೂಲೆಯಲ್ಲಿ ಯಾರೋ ಚಹ ಕುಡಿದು ಹೋದ ಮೇಲೆ ಉಳಿಯುವ ವೃತ್ತಾಕಾರದ ಚಹದ ಗ್ಲಾಸಿನ ಕಲೆಯಿತ್ತು . ರಾಧೆಗೆ ಹೇಳಿದರೆ ಅವಳು ಅಳಲೇ ಶುರು ಮಾಡಿದಳು . ನಂತರ ಸಮಾಧಾನ ಮಾಡಿಕೊಂಡು ಮುಖ್ಯಪ್ರಾಣನಿಗೆ ತುಪ್ಪದ ದೀಪ ಹಚ್ಚಿ ಮಲಗಿದೆವು . ನಂತರ ಏನೂ ನಡೆಯಲಿಲ್ಲ .
ಭಾರತೀಯ ಸಂವಿಧಾನದಲ್ಲಿ ೩೫೨ನೇ ವಿಧಿಯಿಂದ ೩೬೦ರವರೆಗಿನ ವಿಧಿಗಳು ತುರ್ತು ಸಂದರ್ಭಗಳನ್ನು ನಿರ್ವಹಿಸುವ ಬಗ್ಗೆ ಮಾತನ್ನಾಡುತ್ತವೆ . ಅದರಲ್ಲೂ ವಿಶೇಷವಾಗಿ ೩೫೬ನೇ ವಿಧಿ ರಾಷ್ಟ್ರಪತಿಗಳಿಗೆ , ಅಂದರೆ ಆ ಮೂಲಕ ಕೇಂದ್ರಸರ್ಕಾರಕ್ಕೆ ರಾಜ್ಯಗಳ ಮೇಲೆ ಪರಮಾಧಿಕಾರ ಸ್ಥಾಪನೆಗೆ ಅವಕಾಶ ಮಾಡಿಕೊಡುತ್ತದೆ . ರಾಜ್ಯವೊಂದರ ಕಾನೂನು ಸುವ್ಯವಸ್ಥೆ ಕುಸಿದಿದ್ದರೆ , ರಾಜ್ಯವು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಆ ರಾಜ್ಯದ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ವರದಿ ಸಲ್ಲಿಸುತ್ತಾರೆ . ಹಾಗೆ ನೀಡಿದ ವರದಿಯ ಆಧಾರದ ಮೇಲೆ ಅಥವಾ ಸ್ವತಃ ತಮಗೇ ಮನವರಿಕೆಯಾದಲ್ಲಿ ರಾಷ್ಟ್ರಪತಿಗಳು ಯಾವುದೇ ರಾಜ್ಯದ ಚುನಾಯಿತ ಸರ್ಕಾರವನ್ನು ಅಂದರೆ ವಿಧಾನಸಭೆಯನ್ನು ಅಮಾನತ್ತಿನಲ್ಲಿಡುವ , ವಜಾ ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ .
ಆಪರೇಷನ್ ಕಮಲ ಮತ್ತು ಮರು ಚುನಾವಣೆ - ೨೦೦೮ ೧ ಭಾರತಿಯ ಜನತಾ ಪಕ್ಷದ ಕಮಲ ಈಗ ಅರಳಿದೆ . ೫ ಸ್ಥಾನಗಳನ್ನು ಗೆದ್ದು ಸದಸ್ಯರ ಸಂಖ್ಯೆ ೧೧೫ ಏರಿಸಿ ತನ್ನ ಸ್ವಂತ ಬಲದಿಂದ ಮುಂದಿನ ೪ . ೫ ವರ್ಷ ಆಡಳಿತ ವನ್ನು ಪೂರ್ಣ ಗೋಳಿಸಲಿದೆ . ಆದರೆ ಪಕ್ಷ ದೊಳಗೆ ಏನೂ ಒಳ ಜಗಳ ವಿಲ್ಲದೆ ಸಂಘಟನೆ ಯಿಂದ ಅಭಿವ್ರದ್ಧಿ ಕಡೆಗೆ ಹೆಚ್ಚು ಗಮನ ಕೊಟ್ಟು ಜನರ ಮೆಚ್ಚುಗೆ ಪಾತ್ರವಾಗಿ ವಿಕಾಸ ದತ್ತ ಸಾಗಬೇಕು . ೨ ಕಾಂಗ್ರೆಸ್ ಪಕ್ಷ ಕೆಲವು ಮುಖಂಡರನ್ನು ತಮ್ಮ ಜೊತೆ ಬಿಟ್ಟು ಅವರಿಗೆ ಪಕ್ಷ ದಲ್ಲಿ ಸೂಕ್ತ ಸ್ಥಾನ ಕೊಡದೆ ಚುನಾವಣೆಯಲ್ಲಿ ಸೋಲನ್ನು ಅನುಭವಿಸ ಬೇಕಾಯಿತು . ಅತ್ಮಾವಲೋಕನ ಮಾಡಿ ಮುಂದಿನ ಲೋಕ ಸಭಾ ಚುನಾವಣೆ ಎದುರಿಸ ಬೇಕಾಗಿದೆ . ಜನತೆ ಕೈ ಬಿಟ್ಟಿದೆ . ೩ ಜನತಾ ದಳದ ತೆನೆ ಹೊತ್ತ ಮಹಿಳೆ ಗೌಡರ ಕುಟುಂಬ ಪ್ರತ್ಹಿಸ್ತೆ ಉಳಿಸಿದೆ . ಶ್ರೀಮತಿ ಅನಿತಾ ಕುಮಾರಸ್ವಾಮಿ ಗೆಲುವು ಗೌಡರ ಮುಖ ದಲ್ಲಿ ಸಂತಸ ತಂದಿದೆ . ಇದು ಆಕಸ್ಮಿಕ ವೋ ಅಥವಾ ಗ್ರಹ ಬಲ ಚೆನ್ನಾಗಿದೆ ಯೋ ಹೇಳಲಾಗದು . ಹಿಂದೆ ಇದೇ ಸನ್ನಿವೇಶದಲ್ಲಿ ಶ್ರೀ ಎಚ್ ಡಿ ದೇವೇ ಗೌಡರು ಭಾರತದ ಪ್ರಧಾನಿ ಹುದ್ದೆ ಯನ್ನು ಅಲಂಕರಿಸಿ ದಕ್ಷಿಣ ಭಾರತದ ಕರ್ನಾಟಕ ದವರು ಎನ್ನುವ ಹೆಮ್ಮೆ ಎಲ್ಲಾ ಕನ್ನಡಿಗರಿಗೆ ಇದೇ . ದಂಪತಿ ಸಮೇತ ರಾಗಿ ವಿಧಾನ ಸಭೆ ಪ್ರವೇಶ ಮಾಡುವ ಮೊದಲನೇ ದಂಪತಿ ಎನ್ನುವ ಖ್ಯಾತಿ ಇವರಿಗೆ ಇದೆ . ರೈತರ ಮನ ವೋಲಿಸುವ ಗ್ರಾಮ ವಾಸ್ತವ್ಯ ದಂಪತಿ ಸಮೇತ ಮಾಡುವುದು ಪಕ್ಷಕ್ಕೆ ಹೆಚ್ಚು ಪ್ರಯೋಜನಕಾರಿ . ಭಯೋತ್ಪಾದಕರ ಕರಾಳ ಛಾಯೆ ಇಂದ ೨೦೦೮ ತುಂಭಾ ನೋವು ಜನತೆಗೆ ತಂದಿದೆ . ವಿದಾಯ ವರ್ಷ ೨೦೦೯ ಭವ್ಯ ಭಾರತದ ಜನತೆಗೆ ಸುಖ : ಶಾಂತಿ : ನೆಮ್ಮದಿ ತರಲಿ ಎಂದು ಎಂದು ಪರಮಾತ್ಮನನ್ನು ಬೇಡುವ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ ನಾಗೇಶ್ ಪೈ ನನ್ನ ಆರ್ಕುಟ್ ಸಮುದಾಯ [ ಕಮ್ಯುನಿಟಿ ] ೧ ನಮ್ಮ ಸುಂದರ ಮೈಸೂರು ೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಹೊಸ ವರ್ಷ ದಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಸದಸ್ಯ ರಾಗಿ ಸುಸ್ವಾಗತ ಶುಭಾಶಯ
ಜಗತ್ತು 2012 - 12 - 21 ಕ್ಕೆ ಅಂತ್ಯ ಅಂತ ಟಿವಿ ( 9 ) ವರದಿ ಮಾಡಿತ್ತು . . . ಅದನ್ನು ನೋಡಿರೋ ನಮ್ಮ ವೀಕ್ಷಕರು ವಿಚಿತ್ರರೀತಿಯಲ್ಲಿ ವರ್ತಿಸಲಾರಂಭಿಸಿದ್ದಾರೆ . . . ಮತ್ತಷ್ಟು ಓದಿ
ಕನ್ನಡದ ಕೊರೆತೆಗಳನ್ನು ನೀಗಿಸಲು ಕನ್ನಡಿಗರೇ ದುಡಿಯಬೇಕೇ ಹೊರತು , ಬೇರೆಯವರು ಬಂದು ನಮ್ಮನ್ನು ಉದ್ದಾರ ಮಾಡುವರು ಎಂದು ಕಾಯೋದು ತಪ್ಪು . ಒಂದು ವೇಳೆ ಉದ್ದಾರ ಮಾಡೋರು ಬರದೇ ಇರ್ದರೆ ?
ನಿಮ್ಮಲ್ಲಿ ಬಹಳಷ್ಟು ಓದುಗರು , ಕಂಪ್ಯೂಟರ್ ಗಳಲ್ಲಿರುವ MS Word program ಬಗ್ಗೆ ತಿಳಿದಿರುತ್ತೀರಿ . ಕಂಪ್ಯೂಟರ್ ನಲ್ಲಿ ಈ ಪ್ರೋಗ್ರಾಮ್ ನ ಬಳಕೆಯನ್ನು ಕಲಿಯುತ್ತಿರುವ ಒಬ್ಬ ವ್ಯಕ್ತಿಯನ್ನು ನೀವು ಗಮನಿಸುತ್ತಿದ್ದೀರಿ ಎಂದುಕೊಳ್ಳೋಣ . ಆ ವ್ಯಕ್ತಿ ಟೈಪ್ ಮಾಡುವಾಗ , ಪ್ರತಿ ಸಾಲಿನಲ್ಲಿ ಎಷ್ಟು ಅಕ್ಷರಗಳನ್ನು ಟೈಪ್ ಮಾಡಬಹುದೆಂದು ಎಣಿಕೆ ಮಾಡಿ , ಅಷ್ಟೇ ಸಂಖ್ಯೆಯ ಅಕ್ಷರಗಳನ್ನು ಟೈಪ್ ಮಾಡಿದ ಬಳಿಕ " ಎಂಟರ್ " ಗುಂಡಿಯನ್ನು ಒತ್ತಿ ಮುಂದಿನ ಸಾಲಿಗೆ ಹೋಗುತ್ತಿರುವುದನ್ನು ನೀವು ಗಮನಿಸಿದಾಗ ನಿಮಗೇನನಿಸಬಹುದು ? MS Word ನಲ್ಲಿ ಟೈಪ್ ಮಾಡುವಾಗ ಅದರ ಅವಶ್ಯಕತೆಯೇ ಇಲ್ಲವೆಂಬುದನ್ನು ತಿಳಿದ ನಿಮಗೆ ಅದು ತಮಾಷೆಯಾಗಿ ಕಾಣಬಹುದು . ಆದರೂ ಆ ವ್ಯಕ್ತಿ ಇನ್ನೂ ಕಲಿಯುವ ಹಂತದಲ್ಲಿದ್ದಾನೆಂಬುದನ್ನು ಗಮನಿಸಿ ಅವನನ್ನು ಹಾಸ್ಯ ಮಾಡದೇ , , ಈ ಪ್ರೋಗ್ರಾಮ್ ನಲ್ಲಿ ಅದರ ಅವಶ್ಯಕತೆಯಿಲ್ಲ ಮತ್ತು ಒಂದು ಸಾಲು ಮುಗಿದ ಬಳಿಕ ಇನ್ನೊಂದು ಸಾಲಿಗೆ ಹೋಗಲು " ಎಂಟರ್ " ಗುಂಡಿಯ ಅವಶ್ಯಕತೆಯೂ ಇಲ್ಲ ಎಂಬುದನ್ನು ಅವನಿಗೆ ತಿಳಿಸಿಕೊಡುತ್ತೀರಿ ಅಲ್ಲವೇ ? ಆದರೆ , ಆ ವ್ಯಕ್ತಿ ತಾನೂ ಆ ರೀತಿ ಮಾಡುವುದಲ್ಲದೇ ಬೇರೆಯವರಿಗೂ ಅದೇ ವಿಧಾನವನ್ನು ಅನುಸರಿಸಲು ಹೇಳುತ್ತಿದ್ದರೆ ನಿಮಗೇನನಿಸಬಹುದು ? ಅದೇ ಬಗೆಯ ಭಾವನೆ ನನ್ನಲ್ಲೂ ಉಂಟಾಯಿತು .
ನಾವು ಜಮ್ಮು - ಕಾಶ್ಮೀರದ ಕೆಲ ಭಾಗಗಳಲ್ಲಿ ಕಳೆದ ಮೂರು ತಿಂಗಳುಗಳಿಂದ ಏನನ್ನು ನೋಡುತ್ತಿದ್ದೇವೆಯೋ ಅದು ಜವಾಹರಿಯ ಇನ್ತೆಫೆದಾ ಆಂದೋಲನದ ಪ್ರಾರಂಬ . ಜಮ್ಮು - ಕಾಶ್ಮೀರದ ಗಲಭೆಯಲ್ಲಿ ಅಲ್ ಕಾಯಿದಾದ ಪಾತ್ರ ಇದೆಯೋ ಇಲ್ಲವೋ ಎಂಬುದು ತಿಳಿದಿಲ್ಲ . ಆದರೆ ಅದರ ಯೋಚನಾ ದಾಟಿ ಮಾತ್ರ ಇಲ್ಲಿ ಕಾರ‍್ಯರೂಪಕ್ಕೆ ಬರುತ್ತಿದೆ . ಜಿಹಾದ್ ಎಂಬ ಸಂಘಟಿತ ಭಯೋತ್ಪಾದನಾ ಮಾದರಿಯನ್ನು ಕೈಬಿಟ್ಟು ನಾಯಕತ್ವವೇ ಇಲ್ಲದ ಬೀದಿ ಹಿಂಸೆಯ ಮೂಲಕ ಗುರಿ ಸಾಧಿಸಿಕೊಳ್ಳುವ ಈ ತಂತ್ರ , ಕಾಶ್ಮೀರದ ಒಂದು ವರ್ಗದ ಯುವಕರ ವರ್ತನೆಯಲ್ಲಿ ಢಾಳಾಗಿ ಅಭಿವ್ಯಕ್ತಗೊಳ್ಳುತ್ತಿದೆ .
ವೈಯಕ್ತಿಕವಾಗಿ ನಿರಶನ ಮುಂದುವರಿಸುತ್ತೇನೆ : ಇದೇ ಸಂದರ್ಭದಲ್ಲಿ ತಮ್ಮ ನಿಲುವು ಖಚಿ ತಪಡಿಸಿದ ಮಾಜಿ ಸಿಎಂ ಕುಮಾರಸ್ವಾಮಿ , ವೈಯಕ್ತಿಕವಾಗಿ ಸತ್ಯಾಗ್ರಹ ಮುಂದುವರಿಸಲು ಬಯಸಿರುವುದಾಗಿ ತಿಳಿಸಿದರು .
ನನಗೆ ಈಗ ಬರೋ ಸಂಬಳದಲ್ಲಿ ನಾನು ಎಲ್ಲ ಖರ್ಚು ತೆಗೆದು ಉಳಿಸೋ ಪ್ರಯತ್ನದಲ್ಲಿ ಸದಾ ಕಾಲ ಸೋಲು ಆಗುತ್ತಿರುವಾಗ , ಬರೋ ಸ್ವಲ್ಪ ಸಂಬಳದಲ್ಲೂ ಶಿವಮೊಗ್ಗದಲ್ಲಿ ಉಳಿಸ ಬಹುದು . . ಅಂತ ಅನ್ನಿಸಿತು .
ಧರ್ಮಾಚರಣೆಯ ವಿಧಿಗಳಲ್ಲಿ ಕೆಲವನ್ನು ನಾವು ಶಾಸ್ತ್ರವೆಂದೂ ಕೆಲವನ್ನು ಸಂಪ್ರದಾಯವೆಂದೂ ವರ್ಗೀಕರಿಸಿದ್ದೇವೆ . ' ಶಾಸ್ತ್ರ , ಸಂಪ್ರದಾಯ ' ಹಾಗೆಂದರೇನು ? ಇಲ್ಲಿ ಪ್ರಸ್ತುತವಾಗುವ " ಆಚರಣಾ ರೂಪದ ಶಾಸ್ತ್ರ " ವು ಮತ , ನಿಯಮ , ನೀತಿ ಸಂಬಂಧಿಯಾದುದರಿಂದ ಇದು " ಧರ್ಮಶಾಸ್ತ್ರ " . ವೇದೋಕ್ತ ಮಂತ್ರಕ್ರಿಯಾವಿಧಿಯ ವ್ಯಾಖ್ಯಾನ ಸಾಧನವೂ , ಧರ್ಮವಿಚಾರದ ಶೋಧವೂ ಆಗಿರುವ " ಪೂರ್ವಮೀಮಾಂಸೆ " ಯನ್ನು ಮತಧರ್ಮೀಯ ಹಾಗೂ ನ್ಯಾಯವಿಷಯಕ ವಿದ್ಯಮಾನ ಪ್ರಸ್ತುತಿಗಾಗಿ ಬಳಸಿಕೊಂಡಿರುವಂಥದು ಧರ್ಮಶಾಸ್ತ್ರ . ಎಂದೇ ಇದರಲ್ಲಿ ನಿತ್ಯವಿಧಿಗಳ ಹಾಗೂ ಚತುರ್ವರ್ಣ ಸಂಬಂಧೀ ಕರ್ತವ್ಯಗಳ ಕಟ್ಟಳೆಗಳನ್ನು ಸಾರುವ " ಆಚಾರ " , ಅಸ್ತಿತ್ವದ ನಿಯಮವನ್ನೂ ದರ್ಮಸಂದೇಹದ ಪರಿಹಾರವನ್ನೂ ಸಾರುವ " ವ್ಯವಹಾರ " ಮತ್ತು ಧರ್ಮೋಲ್ಲಂಘನದ ಸಂದರ್ಭದಲ್ಲಿ ಕೈಕೊಳ್ಳಬೇಕಾದ ಪರಿಹಾರವನ್ನು ಹೇಳುವ " ಪ್ರಾಯಶ್ಚಿತ್ತ " ಇವು ಪ್ರಧಾನ ವಿಷಯಗಳು . ಹೀಗೆ , ಶಾಸ್ತ್ರವೆಂಬುದು ನಮ್ಮ ಜೀವನೋದ್ದೇಶವನ್ನೂ ಜೀವನವನ್ನೂ ಅರ್ಥೈಸಿ ಜೀವನದ ವಿಧಿ - ವಿಧಾನಗಳನ್ನು ರೂಪಿಸುವ ಒಂದು ಪ್ರಜ್ಞೆಯಾದ್ದರಿಂದ , ಕಾಲ , ಪ್ರಕೃತಿ , ಪರಿಸರ , ಸಂಸ್ಕೃತಿ , ನಾಗರಿಕತೆ ಮತ್ತು ಜೀವನಕ್ರಮಗಳ ಮಾರ್ಪಾಟಿಗನುಗುಣವಾಗಿ ಶಾಸ್ತ್ರಾನುಸರಣವೂ ಮಾರ್ಪಾಟು ಹೊಂದುವುದು ತಪ್ಪೇನಲ್ಲ , ಮಾತ್ರವಲ್ಲ , ಅವಶ್ಯ ಕೂಡ . ಇಷ್ಟಕ್ಕೂ ಶಾಸ್ತ್ರವೆಂಬುದು ಮಾನವಪ್ರಣೀತ ವಿಜ್ಞಾನವೇ ಹೊರತು ದೈವಪ್ರಣೀತ ವಿಧಿಯಲ್ಲ . " ಶಾಸ್ತ್ರತೋ ಗುರುತಶ್ಚೈವ ಸ್ವತಶ್ಚೇತಿ ತ್ರಿಸಿದ್ಧಯಃ , ಸರ್ವತ್ರ ಪುರುಷಾರ್ಥಸ್ಯ ನ ದೈವಸ್ಯ ಕದಾಚನ " ಎಂಬ ಯೋಗವಾಸಿಷ್ಠದ ನುಡಿಯಂತೆ , ಶಾಸ್ತ್ರವೆಂಬುದು , ಕಾರ್ಯಸಿದ್ಧಿಯ ವಿಧಗಳಲ್ಲೊಂದಾಗಿದ್ದು , ಪೌರುಷಕ್ಕೆ ಸೇರಿದುದೇ ಹೊರತು ಎಂದಿಗೂ ದೈವಕ್ಕೆ ಸೇರಿದುದಲ್ಲ . ಸಂಪ್ರದಾಯ - - - - - - - - - - - - ಇನ್ನು , " ಸಂಪ್ರದಾಯ " . ಇದು ಪರಂಪರಾಗತ ಪದ್ಧತಿಯಾದ್ದರಿಂದ , ಸಕಾರಣ ರೂಢಿಯಾದ್ದರಿಂದ ಶಾಸ್ತ್ರಪ್ರಭೇದಸಮಾನ . ದೀಕ್ಷಾಬದ್ಧವಾದುದು ಇದು . ವಿವಿಧ ಜನವರ್ಗದ ನಂಬಿಕೆ , ಮನೋಭಾವ , ವಿವಿಧ ಭೂಗುಣ , ಹವಾಗುಣ , ಆಹಾರ ಪದ್ಧತಿ , ಜೀವನಶೈಲಿ , ಇವುಗಳು ಸಂಪ್ರದಾಯಗಳ ವಿಭಿನ್ನ ರೂಪಗಳಿಗೆ ಕಾರಣ . ಇವುಗಳಿಗನುಗುಣವಾಗಿ , ಮತ್ತು , ಕಾಲಮಾನ , ನಾಗರಿಕತೆ , ಸಂಸ್ಕೃತಿ ಮತ್ತು ಜೀವನದೃಷ್ಟಿಗಳು ಮಾರ್ಪಾಟುಹೊಂದುತ್ತ ಸಾಗಿದಂತೆಲ್ಲ ಸಂಪ್ರದಾಯವೂ ತಕ್ಕ ಮಾರ್ಪಾಟಿಗೊಳಗಾಗುವುದು ಸ್ವಾಭಾವಿಕ ಮತ್ತು ಅಪೇಕ್ಷಣೀಯ ಕೂಡ . ಹಾಗಾಗಕೂಡದೆಂದರೆ ಆಗ ಅದು ಮೌಢ್ಯವಾಗುತ್ತದೆ . ಸಂಪ್ರದಾಯವು ಮೌಢ್ಯವಾದಲ್ಲಿ ಸಮಾಜಕ್ಕೆ ಅದಕ್ಕಿಂತ ದೊಡ್ಡ ಅಪಾಯ ಇನ್ನೊಂದಿಲ್ಲ . ಇಂಥ ಅಪಾಯವನ್ನೇ ಇಂದು ನಾವು ಎಲ್ಲೆಲ್ಲೂ ಕಾಣುತ್ತಿದ್ದೇವಷ್ಟೆ . ಸಂಪ್ರದಾಯವು ಗೋತ್ರದಂತೆ ಜನ್ಮದಿಂದ ಬಂದದ್ದಲ್ಲ . ನಾವು ಮಾಡಿಕೊಂಡದ್ದು . ನಾವೇ ಬದಲಾಯಿಸಲೂಬಹುದು . ಸಂದರ್ಭಾನುಸಾರ ಬದಲಾಯಿಸಬೇಕು ಸಹ . ಏಕೆಂದರೆ , ಸಮಾಜಮುಖಿಯಾಗಿರಬೇಕಾದುದು ಸಂಪ್ರದಾಯದ ಉದ್ದೇಶ ಮತ್ತು ಮೂಲ ಗುಣ . ಧರ್ಮ , ಶಾಸ್ತ್ರ , ಸಂಪ್ರದಾಯ , ಇವೆಲ್ಲವೂ ನಂಬಿಕೆಗೆ ಅಧೀನವಾಗಿರುವ ವಿಷಯಗಳು . ನಂಬಿಕೆಯು ನಮ್ಮ ವಿವೇಚನೆಗೆ ಮತ್ತು ನಿಯಂತ್ರಣಕ್ಕೆ ಒಳಪಟ್ಟ ವಿಷಯ .
ಪ್ರಭು , ಎಂಥ ಪೇಚಿಗೆ ತಂದಿಟ್ಟುಬಿಟ್ರಿ ನೀವು . ನನಗೂ ಈ ಪ್ರಶ್ನೆ ಕಾಡುತ್ತಿತ್ತು . ನಿನ್ನೆ ಹಬ್ಬದ ದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಸ್ನಾನ ಹಬ್ಬದ ತಯಾರಿ , ಪೂಜೆ ಇತ್ಯಾದಿಗಳಲ್ಲಿ ನಿರತಳಾಗಿದ್ದ ನನ್ನ ಶ್ರೀಮತಿಗೆ ಇದೇ ಮಾತನ್ನು ಕೇಳಿದೆ . ಒಮ್ಮೆ ಮೇಲಿಂದ ಕೆಳಗೆ ನನ್ನನ್ನು ನೋಡಿ , " ಬನ್ನಿ ಇಲ್ಲಿ ಕೂತ್ಕೊಳ್ಳಿ , ನಾಲ್ಕು ಒಬ್ಬಟ್ಟು ತಟ್ಟಿಕೊಡಿ ಆಮೇಲೆ ಹೇಳ್ತೀನಿ " ಅಂದುಬಿಡಬೇಕೆ . ಆರೆರೆ . . . ಇದ್ಯಾಕೋ ನಾನು ಕೇಳಿದ ಪ್ರಶ್ನೆಗೆ ಉತ್ತರ ಸರಿಯೋಗಲಿಲ್ಲ , ಅದಕ್ಕೆ ಉತ್ತರವೂ ಬೇಕಿಲ್ಲ , ಆಡಿಗೆ ಮನೆ ಸಹವಾಸವೂ ಬೇಕಿಲ್ಲ , ಸುಮ್ಮನೆ ಕ್ಯಾಮೆರಾ ಹಿಡಿದು ಓಡಾಡುವುದೇ ಮೇಲು ಅಂತ ಕ್ಯಾಮೆರಾ ತೆಗೆದುಕೊಂಡು ಹೊರಗೆ ಹೊರಟೆ . ಏನಂತೀರಿ . . . . .
ನಮ್ಮ ದೇಶದಲ್ಲಿ ಈಗ ಭ್ರಷ್ಟಾಚಾರದ ಕೋಲಾಹಲ . ದೇಶವನ್ನು ಹಗಲು ದರೋಡೆ ಮಾಡುತ್ತಿರುವ ರಾಜಕಾರಣಿ - ಉದ್ಯಮಿ ' ನೆಕ್ಸಸ್ ' ಜನರ ಸಹನೆ ಕೆಡಿಸಿದೆ . ಒಮ್ಮೆ ಶ್ರೀಲಂಕಾ ಮೂಲದ ನನ್ನ ಸಹೋದ್ಯೋಗಿ ತನ್ನ ದೇಶದ ಅಧ್ಯಕ್ಷ ಮಹೇಂದ್ರ ರಾಜಪಕ್ಸ ಮತ್ತು ಆತನ ಪರಿವಾದವರ ಮುಗಿಲು ಮುಟ್ಟಿದ ಭ್ರಷ್ಟಾಚಾರ ಯಾವ ರೀತಿ ದೇಶ ಮುಂದವರಿಯಲು ಅನುವು ಮಾಡಿ ಕೊಡುತ್ತಿಲ್ಲ ಮತ್ತು ಅವರುಗಳ ಕಪಿ ಮುಷ್ಠಿಯಲ್ಲಿ ದೇಶ ಯಾವ ರೀತಿ ಸಿಲುಕಿದೆ ಎಂದು ಹೇಳುವಾಗ ನಾನು ಸಂಭ್ರಮದಿಂದ ನಮ್ಮ ದೇಶದಲ್ಲಿ ಈ ರೀತಿಯ ಲಂಚಗುಳಿತನ ಸಾಧ್ಯವಿಲ್ಲ . ಕೆಳಸ್ತರದಲ್ಲಿ ಮಾತ್ರ ಒಂದಿಷ್ಟು ಭ್ರಷ್ಟಾಚಾರ ಇದೆ , ವ್ಯವಸ್ಥೆಯ ಮೇಲ್ಪದರದಲ್ಲಿ ಅದರ ಹಾವಳಿ ಇಲ್ಲ , ನಮ್ಮ ಮಾಧ್ಯಮ , ನ್ಯಾಯಾಲಯಗಳು , ವ್ಯಕ್ತಿ ಎಷ್ಟೇ ದೊಡ್ಡವನಾದರೂ ಅವನನ್ನು ಬಿಡುವುದಿಲ್ಲ , ನಮ್ಮದು ಏಷ್ಯಾ ಉಪಖಂಡದ freest , transparent democracy ಎಂದೆಲ್ಲಾ ಬೀಗುತ್ತಾ ಹೇಳುವಾಗ ಆತನ ಕಣ್ಣುಗಳಲ್ಲಿ ಅಸೂಯೆ ಮಿಶ್ರಿತ ಮೆಚ್ಚುಗೆ ಕಾಣಬಹುದಿತ್ತು . ಆದರೆ ಇತ್ತೀಚೆಗೆ ಒಂದೇ ಸಮನೆ ಹಗರಣಗಳ ಮೇಲೆ ಹಗರಣಗಳು ನಮ್ಮ ಕೊರಳಿಗೆ ಮಾಲೆಯಾಗಿ ನಮ್ಮ ಉಸಿರುಗಟ್ಟಿಸಲು ಶುರುಮಾಡಿದಾಗ ನನಗನ್ನಿಸಿತು ನಾನೆಂಥಾ novice ಎಂದು .
ದಯಮಾಡಿ ನಿಮ್ಮ ಖಾತೆಯೊಂದಿಗೆ ಜೊತೆಯಾದ ಇ - ಮೇಲ್ ವಿಳಾಸವನ್ನು ನಮೋದಿಸಿ . ನಿಮ್ಮ ಬಳಕೆದಾರಹೆಸರನ್ನು ಕಡತದಲ್ಲಿರುವ ಇ - ಮೇಲ್ ವಿಳಾಸಕ್ಕೆ ಇ - ಮೇಲ್ ಮಾಡಲಾಗುವುದು .
ಬೆಂಗಳೂರಿನ ನಂ . 1 ಚಾನೆಲ್ ಎಂದು ಗಂಟೆಗೊಮ್ಮೆ ಅರಚಿಕೊಂಡು , ತಮ್ಮನ್ನು ತಾವೇ ಸಮಾಧಾನಿಸಿಕೊಳ್ಳುವ ಸ್ವಯಂಘೋಷಿತ ನಂ೧ಗಳಿಗೆ ಕೆಳಗೆ ಹೇಳಿದಂತಹ ಕ್ರಿಯೇಟಿವ್ ವಿಷಯಗಳು " ಎಲ್ಲಿ " ಹೊಳೆಯುತ್ತವೆಯೋ ನಂಗಂತೂ ಗೊತ್ತಿಲ್ಲಾ . ಕಾರಣ ಇಷ್ಟೇ ! ಲಾರಿ ಮುಷ್ಕರದ ದಯೆಯಿಂದ ಲೇಟಾಗಿ ಹೋಗುವ ಬಾಗ್ಯಕ್ಕೆ ಖುಷಿ ಪಟ್ಟು ಬೆಳಗ್ಗೆ ಬೆಳಗ್ಗೆ ಎಫ್ . ಎಮ್ಮು ತಿರುವಿದರೆ ' ಬಿಗ್ ಕಾಫಿ ' ಯ ಹರ್ಷ ಚರ್ಚೆಗೆ ಆರಿಸಿಕೊಂಡ ವಿಷಯ " ನೀವು ಯಾರ ಜೊತೆ ' ಮಿಲನ ' ಬಯಸ್ತೀರಾ ? " ಅಂತಾ ! . ಈ ಹರ್ಷ ಎಂಬ ಆರ್ , ಜೆಗೆ ಬೆಳಗ್ಗೆ ಬೆಳಗ್ಗೆ ಕಾಫಿ ಹೊತ್ತಿನಲ್ಲಿ ಇಂತಹ ವಿಷಯ ಯಾಕೆ ಹೊಳೆಯಿತೋ ನಾಕಾಣೆ . ಇಂತಹ ಸ್ವಾರಸ್ಯಕರ ( ? ) ವಿಷಯಕ್ಕೆ ನಮ್ಮ ಬಿಗ್ ಕೇಳುಗ ಮಹಾಶಯರಂತೂ ಜೊಲ್ಲೊರಿಸಿಕೊಳ್ಳುತ್ತಾ ಕೊಟ್ಟ ಉತ್ತರಗಳಂತೂ ಇನ್ನೂ " ಕ್ರಿಯೆಟಿವ್ " ಆಗಿದ್ದುವು . ಒಬ್ಬ ಪುಣ್ಯಾತ್ಮ ತನ್ನ ತನ್ನ ಮಾಜಿ ಪ್ರೇಯಸಿಯೋಂದಿಗೆ ಮಿಲನ ಬೇಕಾದರೆ , ಇನ್ನೊಬ್ಬ ರಸಿಕ ತನ್ನ ' ಅತ್ತೆ ' ಯೊಂದಿಗೆ ಮಿಲನ ಬಯಸ್ತೀನಿ ಅಂತ ಮೇಸೆಜು ಕುಟ್ಟಿದ್ದ , ಅದನ್ನು ಓದಿದ ನಮ್ಮ ಹರ್ಷನಿಗೆ ಭಲೇ ಖುಷಿ . ಒಬ್ಬ ಆಧುನಿಕ ನಾರಿಮಣಿಗೆ ತನ್ನ " ಲವ್ವರ್ " ಜೊತೆ ' ಅದು ' ಬೇಕಂತೆ . . ಇವರ ಭಂಡ ದೈರ್ಯಕ್ಕೆ ಕಂಡು ನಂಗೆ ತುಂಬಾ ಆಶ್ಚರ್ಯ ಆಯ್ತು . . ಇವು ಕೆಲ ಸ್ಯಾಂಪಲ್ಲುಗಳಷ್ಟೆ , ಇನ್ನೂ ಕೇಳಿದರೆ ಕಿವಿ ಹೊಲಸಾದೀತು ಅಂತಾ ' ಹೆಚ್ಚಾಗಿ ಕನ್ನಡ ಹಾಡುಗಳ ' ಚಾನೆಲ್ಲಿಗೆ ವಲಸೆ ಹೋಗಬೇಕಾಯ್ತು . . ಮತ್ತೆ ಅದೆ ದಿನ ಸಂಜೆ , ಅದೇ ಬಿಗ್ ನಲ್ಲಿ " ನೋ ಟೆನ್ಸನ್ " ನಲ್ಲಿ ದೀಪು ಯವುದೋ ಟೀಚರ್ರಿಗೆ ಕರೆ ಮಾಡಿ , ನಿಮ್ಮ ಸ್ಟೂಡೆಂಟ್ ಒಬ್ಬ ನಿಮ್ಮ ಜೊತೆ ಮಲ್ಪೆ ಟೂರಿಗೆ ಹೋಗಿ ಬಂದಾಗಿನಿಂದ ' ಲವ್ ' ಮಾಡುತ್ತಿರುವನೆಂದೂ , ನಾನು ಆ ಹುಡುಗನ ಚಿಕ್ಕಪ್ಪನೆಂದೂ ಕೊಡಬಾರದ " ಟೆನ್ಸನ್ " ಕೊಡತೊಡಗಿದ . ಪಾಪ ಆ ಟೀಚರ್ರು ಕಂಗಾಲು . ಮಾದ್ಯಮಗಳು ಒಂದು ಸಮುದಾಯದ ಅಭಿಪ್ರಾಯ ರೂಪಿಸುತ್ತವೆ ಅಂತಾರೆ , ಆದ್ರೆ ಇವರು ರೂಪಿಸುತ್ತಿರುವ ಅಭಿಪ್ರಾಯಗಳಾದರೂ ಎಂತವು ? . ತೀರಾ ಈ ಮಟ್ಟದ ಕೀಳು ವಿಚಾರಗಳನ್ನು ಚರ್ಚಿಸುವ ಅಥವಾ ಅಂತಹ ಅಡ್ಡ ಹಾದಿಯಿಂದ " ಟೆನ್ಸನ್ " ಕೊಡುವ ದರ್ದಾದರೂ ಏನಿತ್ತು ಅಂತಾ ! . ಕನಿಷ್ಟ ಮಟ್ಟದ ಸಾಮಾಜಿಕ ಜಾವಾಬ್ದಾರಿಗಳು ಇವರಿಗೆ ಬೇಡವೆ ? . ಎನೇ ಆದರೂ ಸಬ್ಯತೆಯ ಎಲ್ಲೆ ದಾಟುವುದು ನಂಗ್ಯಾಕೋ ಸರಿ ಎನಿಸಲಿಲ್ಲಾ . ಅಷ್ಟಕ್ಕೂ ' ಆ ' ತರದ ವಿಷಯಗಳ ಮೂಲಕ ಇವರು ಸಾಧಿಸ ಹೊರಟಿರುವ ಕ್ರಾಂತಿಯಾದರೂ ಏನು ? . ' ಬೇರೆ ' ಎನೋ ಉಪಯೋಗಿಸದೆ ತಲೆ ಉಪಯೋಗಿಸಿ ಯೋಚಿಸಿದರೆ ಚರ್ಚಿಸಲು ಸಾವಿರಾರು ಸಮಸ್ಯೆಗಳಿವೆ , ಸದಭಿರುಚಿಯ ವಿಷಯಗಳಿವೆ . ಎನೋ ಗೊತ್ತಿಲ್ಲಪ್ಪಾ ! ಕ್ರಿಯೇಟಿವಿಟಿ ಸೊಂಟದ ಕೆಳಗೇಯೇ ಹುಟ್ಟಬೇಕಾ ? ದೀಪು , ದೇವರಾಣೆಗೂ ನಾವು " ಆ " ಟೈಪಲ್ಲಪ್ಪಾ ! ! !
: - ) ಮಂಜು , ವರುಣ ಸಂದೇಶ ಕಳಿಸಿ ಮೇಘ ಸಂದೇಶ ಪಡೆಯತ್ತಿದ್ದೀರಿ . ನನ್ನ ಸಂದೇಶಗಳೂ ಅಲ್ಲಿವೆ , ನೋಡಿರಿ .
ಟಿಂಬಕ್ಟುವಿನ ಬಗ್ಗೆ ಬರೆದ ಕಥನಗಳಲ್ಲಿ ಬಹುಶಃ ಅತಿ ಪ್ರಖ್ಯಾತವಾದದ್ದೆಂದರೆ ಲಿಯೋ ಆಫ್ರಿಕಾನಸ್‌ರದ್ದು . ಗ್ರನಡಾದಲ್ಲಿ 1485ರಲ್ಲಿ ಎಲ್ ಹಸನ್ ಬೆನ್ ಮುಹಮ್ಮದ್ ಎಲ್ - ವಾಜ್ಜನ್ - ಎಜ್ - ಝಯ್ಯಟಿ ಎಂಬ ಹೆಸರಿನೊಂದಿಗೆ ಜನಿಸಿದ ಆತ , ಅರಸ ಫರ್ಡಿನೆಂಡ್ ಮತ್ತು ರಾಣಿ ಇಸಾಬೆಲ್ಲಾರ 1492ರ ಸ್ಪೇನ್‌ಅನ್ನು ಪುನಃವಶಪಡಿಕೆಯ ನಂತರ ಆತನ ಪೋಷಕರು ಮತ್ತು ಸಾವಿರಾರು ಇತರೆ ಮಹಮ್ಮದೀಯರೊಂದಿಗೆ ದೇಶಭ್ರಷ್ಟರಾದರು . ಮೊರೊಕ್ಕೋದಲ್ಲಿ ನೆಲೆಯಾಗಿ , ಫೆಸ್‌ನಲ್ಲಿ ಅಧ್ಯಯನ ನಡೆಸಿ ಆತ ತನ್ನ ಚಿಕ್ಕಪ್ಪ / ಮಾವನೊಡನೆ ಉತ್ತರ ಆಫ್ರಿಕಾದುದ್ದಕ್ಕೂ ನಡೆಸಿದ ರಾಜತಾಂತ್ರಿಕ ಕಾರ್ಯಭಾರಗಳಲ್ಲಿ ಪಾಲ್ಗೊಂಡಿದ್ದರು . ಈ ಪರ್ಯಟನೆಯ ಅವಧಿಯಲ್ಲಿ , ಆತ ಟಿಂಬಕ್ಟುವಿಗೆ ಭೇಟಿ ನೀಡಿದ್ದರು . ಯುವಕನಾಗಿದ್ದುದರಿಂದ ಆತನನ್ನು ಕಡಲ್ಗಳ್ಳರು ಸೆರೆಯಾಗಿಸಿ ಅಪವಾದವೆನಿಸುವಂತಹಾ ಸುಶಿಕ್ಷಿತ ಗುಲಾಮನನ್ನಾಗಿ ಪೋಪ್ ಲಿಯೋ Xರಿಗೆ ಕಾಣಿಕೆಯನ್ನಾಗಿ ನೀಡಿದರು , ಆತನನ್ನು ಮುಕ್ತಗೊಳಿಸಿದ ಅವರು " ಜೋಹಾನ್ನಿಸ್ ಲಿಯೋ ಡಿ ಮೆಡಿಸಿ " ಎಂಬ ಹೆಸರಿನಲ್ಲಿ ದೀಕ್ಷಾಸ್ನಾನ ನೀಡಿ ಆತನಿಗೆ ಇಟಾಲಿಯನ್ ಭಾಷೆಯಲ್ಲಿ ಆಫ್ರಿಕಾದ ವಿವರಣಾತ್ಮಕ ಅವಲೋಕನ / ಸಮೀಕ್ಷೆಯನ್ನು ಬರೆಯುವ ಕೆಲಸ ವಹಿಸಿದರು . ಮುಂದಿನ ಅನೇಕ ಶತಮಾನಗಳ ಕಾಲದಲ್ಲಿ ಐರೋಪ್ಯರು ಆ ಖಂಡದ ಬಗ್ಗೆ ಮಾಹಿತಿಗಾಗಿ ಬಹುತೇಕ ಆತನ ಕಥನಗಳನ್ನೇ ಆಧರಿಸಿದ್ದರು . [ ೩೫ ] ಸಾಂಘಾಯ್ ಸಾಮ್ರಾಜ್ಯವು ತನ್ನ ಉಚ್ಛ್ರಾಯದಲ್ಲಿದ್ದಾಗಿನ ಟಿಂಬಕ್ಟು ನಗರದ ಸ್ಥಿತಿಯನ್ನು ವಿವರಿಸಿದ ಅವರ ಪುಸ್ತಕದ ಆಂಗ್ಲ ಆವೃತ್ತಿಯ ಈ ವಿವರಣೆಯನ್ನು ಒಳಗೊಂಡಿದೆ :
ಅನಂತರ ಯಾವದೇ ಇಲೆಕ್ಟ್ರಾನಿಕ್ ಸಾಮಾನುಗಳಿಂದ ಸ್ವಲ್ಪ ದೂರವಿದ್ದೆ . ನನ್ನ ಗೆಳೆಯನು ತನ್ನನ್ನು ತಾನೆ ಆಲ್ಬರ್ಟ್ ಐನ್ಸ್ಟೈನ್ , ತೋಮಸ್ ಅಲ್ವ ಎಡಿಸನ್ ಅಂದು ಕೊಂಡಿದ್ದನೋ ಗೊತ್ತಿಲ್ಲ . ಹೀಗೆ ಒಂದು ದಿವಸ ಗುಜರಿ ಅಂಗಡಿಯಿಂದ ತಂದ Circuit ನ್ನು ಹಚ್ಚಿ ಮನೆಯಲ್ಲಿಯ ಕರೆಂಟ್ ಢಮಾರ್ .
ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ . ಇಡೀ ರಾಜ್ಯ ಅಥವಾ ದೇಶದ ಕುಟುಂಬವೇ ಒಂದಾಗಿ ಒಬ್ಬ ಯಜಮಾನನನ್ನಾಗಿ ಆಯ್ಕೆ ಮಾಡಿ ಕಳುಹಿಸುತ್ತೇವೆ . ನಮ್ಮ ದುರಾದ್ರಷ್ಟವೆಂದರೆ ಅದಾದ ಮೇಲೆ ನಮಗೆ ಅಂತಹ ಯಜಮಾನನ ಮೇಲೆ ಯಾವುದೇ ನಿಯಂತ್ರಣ ಇರುವುದಿಲ್ಲ . ಆಗೆಲ್ಲಾ ನಾವು ನಮ್ಮನ್ನು ದೇವರೇ ಕಾಪಾಡಬೇಕು ಎಂದುಕೊಂಡು ನಿನ್ನ ತಲೆಯ ಮೇಲೆ ಭಾರ ಹಾಕಿ ಸುಮ್ಮನುಳಿಯುತ್ತೇವೆ .
ಏಪ್ರಿಲ್ 10 ಕ್ಕೆ ತೆಗೆದಿದ್ದು ಪಾಲಣ್ಣಾ . ಹೊಳೆ ಹತ್ರ ಹೋದಾಗ ಕ್ಯಾಮರಾ ಇರ್ಲಿಲ್ಲ . ನಮ್ ಕಡೆ ಅಗಲೆ ಒಂದು ರೌಂಡ್ ಮಳೆ ಬಂದಿದೆ . ಹೇಗಿದ್ರೂ ಜೂನ್ ಅಲ್ಲಿ ಮನೆಗೆ ಹೋಗ್ತಿದೀನಿ , ಆವಾಗ ಕುಪ್ಪಳ್ಳಿ , ಶೃಂಗೇರಿಯಾ ಇನ್ನು ಒಳ್ಳೆ ಫೋಟೋ ತೆಕ್ಕೊಂಡು ಬರ್ತೀನಿ .
ಕಳೆದ ವರ್ಷ ವಿಕ್ರಾಂತ ಕರ್ನಾಟಕದ ಸಹಯೋಗದೊಂದಿಗೆ ಈ ಕಥಾಸ್ಪರ್ಧೆ ಪ್ರಾಯೋಜಿಸಿದ್ದೆ . ಇದು ಈ ವರ್ಷವೂ ಮುಂದುವರೆಯುತ್ತಿದೆ . ವಿವರಗಳು ಈ ಕೆಳಗಿನ ಚಿತ್ರದಲ್ಲಿದೆ . ( ಅದನ್ನು ಕ್ಲಿಕ್ ಮಾಡಿದರೆ ಅದು ದೊಡ್ಡದಾಗಿ ತೆರೆದುಕೊಳ್ಳುತ್ತದೆ . ) ಆಸಕ್ತರು ಮತ್ತು ಕತೆಗಾರರು ಗಮನಿಸಬೇಕಾಗಿ ವಿನಂತಿ . ಕಳೆದ ವರ್ಷ ಈ ಪ್ರಯುಕ್ತ ಬರೆದಿದ್ದ ಬ್ಲಾಗ್ ಲೇಖನ ಇಲ್ಲಿದೆ : ಗಾಂಧಿ ಜಯಂತಿ ಕಥಾಸ್ಪರ್ಧೆ - 2008 ಆ ಕಥಾಸ್ಪರ್ಧೆಯಲ್ಲಿ ಗೆದ್ದ ಕತೆಗಳು ಇಲ್ಲಿ ( ವಿಚಾರಮಂಟಪ . ನೆಟ್ ) ಓದಲು ಲಭ್ಯವಿವೆ .
ರಾಜು ಅಂದರೆ ಥಟ್ಟನೆ ನೆನಪಗುವದು ರತ್ನನ ಪದಗಳು . ಎಂತ ವಿಪರ್ಯಾಸ ನೋಡಿ ಅವರು ರತ್ನನ ಪದಗಳ ನಾಯಕನಂತೆ ಕುಡಿಡಿದು ತಮ್ಮ ಅಮುಲ್ಯವಾದ ಕಲಾ ಸೆವೆಯನ್ನು ಮೊಟಕು ಗೊಳಿಸಿದ್ದು ತುಂಬಾ ಶೋಚನೀಯ . . . . . . . .
ವೈದ್ಯಕೀಯ ಸೇವೆಗಳಿಗೆ ಪೂರಕವಾಗಿರುವ ಸೇವೆಗಳು ; ಔಷಧಾಲಯ ಅಥವಾ ಔಷಧಿ ದೊರೆಯುವ ಸ್ಥಳ , ರೋಗ ಪತ್ತೆ ವಿಭಾಗ ಮತ್ತು ವಿಕಿರಣ ವಿಭಾಗ ಮತ್ತು ವೈದ್ಯಕೀಯೇತರ ಅಂದರೆವೈದ್ಯಕೀಯ ದಾಖಲೆಗಳ ವಿಭಾಗಗಳು ಮತ್ತು / ಅಥವಾರೋಗಿಗಳ ಬಿದುಗಡೆ ಕುರಿತ ವಿವರಗಳ ವಿಭಾಗ .
a ಟೆಂಪ್ಲೇಟು : Note labelಮಾನವಶಾಸ್ತ್ರಜ್ಞರಾದ ಲಿಂಡಾ ರಾಬ್ಬೆನ್ ಅವರ ಪ್ರಕಾರ ಅಮ್ನೆಸ್ಟಿ ಎಂಬುದು ಕೇವಲ ಸುಳ್ಳಿನ ಕಂತೆ ಎಂದು ಟೀಕಿಸಿದ್ದಾರೆ . ಇದು " ಸತ್ಯದ ತಿರುಳಿಲ್ಲದ ಸಂಘಟನೆ " ಇದರ ಬಗ್ಗೆ ಪೀಟರ್ ಬೆನೆಸನ್ ನ ಧಾರ್ಮಿಕ ತತ್ವಗಳ ಬಗ್ಗೆ ಲಂಡನ್ ಟ್ಯೂಬ್ 1960 ರ ನವೆಂಬರ್ 19 ರಂದು ಸುದ್ದಿಯೊಂದು ಅವರಿಗೆ ಮಾಹಿತಿ - [ ೫೧ ] ಮಾರ್ಗದರ್ಶನವಾಯಿತು . " ಇತಿಹಾಸಕಾರ ಟಾಮ್ ಬುಚನನ್ ಇದರ ಮೂಲ ಕಥೆಯನ್ನು 1962 ರಲ್ಲಿ ಪೀಟರ್ ಬೆನೆಸನ್ ನ ರೇಡಿಯೊ ಪ್ರಸಾರದ ಸಂದರ್ಭದಲ್ಲಿ ತಿಳಿದುಕೊಂಡನು . ಆಗ 1962 ಮಾರ್ಚ್ 4 ರ BBC ಸುದ್ದಿ ಕಥಾನಕದಲ್ಲಿ ಇದನ್ನು " ಟೋಸ್ಟ್ ಟು ಲಿಬರ್ಟಿ " ಎಂದು ಹೇಳಲಿಲ್ಲ . ಆದರೆ ಬೆನೆಸನ್ ಆತನ ಈ ಸವಾರಿಯೋ 1960 ಡಿಸೆಂಬರ್ 19 ರಂದು ನಡೆಯಿತೆನ್ನುತ್ತಾನೆ . ಬುಚನನ್ ವಾಸ್ ಅನೇಬಲ್ ಟು ಫೈಂಡ್ ದಿ ನಿವ್ಸ್ ಪೇಪರ್ಸ್ ಅರ್ಟಿಕಲ್ಸ್ ಅಬೌಟ್ ದಿ ಪೊರ್ಚ್ ಗೀಸ್ ಸ್ಟುಡೆಂಟ್ಸ್ ಇನ್ ದಿ ಡೇಲಿ ಟೆಲೆಗ್ರಾಫ್ ಫಾರ್ ಐದರ್ ಮಂತ್ . ಬುಚನನ್ ಫೌಂಡ್ ಮೇನಿ ನಿವ್ಸ್ ಸ್ಟೊರೀಸ್ ರಿಪೊರ್ಟಿಂಗ್ ಆನ್ ದಿ ರಿಪ್ರೆಸ್ಸಿವ್ ಪೊರ್ಚಗೀಸ್ ಪಾಲಿಟಿಕಲ್ ಆರೆಸ್ತ್ಸ್ಇನ್ದಿ ಟೈಮ್ಸ್ ಫಾರ್ ನವೆಂಬರ್ 1960 . [ ೫೨ ]
ನಾವು ಕರ್ನಾಟಕದಲ್ಲಿ ಜಾನಪದ ಗೀತೆಗಳ ಕಲಾವಿದರೊಟ್ಟಿಗೆ ಕೆಲಸ ಮಾಡಲು ನಿರ್ಧರಿಸಿದ್ದು ಅದಕ್ಕೆ ಸಂಬಂದಿಸಿದಂತೆ ಕಲಾವಿದರನ್ನು ಸಂಪರ್ಕಿಸಬೇಕಾಗಿದೆ . ದಯವಿಟ್ಟು ನಿಮ್ಮ ಬಳಿ ಜಾನಪದ ಕಲಾವಿದರ ಮಾಹಿತಿ ಇದ್ದರೆ ಹಂಚಿಕೊಳ್ಳಿ . ಕಲಾವಿದರ ಹೆಸರು , ವಿಳಾಸ , ಯಾವ ರೀತಿಯ ಕಲಾವಿದರು ಅಂತ ಸಿಕ್ಕರೆ ಇನ್ನೂ ಉತ್ತಮ ಜೊತೆಗೆ ಸಂಪರ್ಕ ವಿಳಾಸ ಇದ್ದರೆ ನೀಡಿ ಅವರನ್ನು ಬೇಟಿ ಮಾಡಬೇಕಾಗಿದೆ .
೪೮ . ಸೋಕಿಡಾ ಸುಖಂಗಳ ನೇಕವನು ಶಿವಗಿತ್ತು ತಾ ಕಿಂಕರತೆಯ ಕೈಕೊಂಡ ಮನುಜನೇ ಲೋಕಕ್ಕೆ ಶರಣ ಸರ್ವಜ್ಞ
ಹೀಗೆ ಕನ್ನಡ ಮಾಧ್ಯಮ ಎಡವುತ್ತಾ ಇರೋದರ ಒಳಗಿನ ಕಾರಣ ಏನು ಅನ್ನೋ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದ್ರೆ ನಮಗೆ ಸಿಗೋ ಮೊದಲನೇ ಉತ್ತರ ಏನಪ್ಪಾ ಅಂದ್ರೆ ನಮ್ಮ ಶಿಕ್ಷಣ ವ್ಯವಸ್ಥೇಲಿ ಯಾವುದನ್ನ ಕನ್ನಡ ಅಂತ ಕಲಿಸುತ್ತಾ ಇದ್ದಾರೋ ಅದು ಸಾಮಾನ್ಯ ಕನ್ನಡಿಗರಿಗೆ ಬಹಳ ದೂರವಾಗಿದೆ . ಉದಾಹರಣೆಗೆ " ಉಪ್ಪು " ಅಂತ ಹೇಳಿಕೊಡೋ ಬದ್ಲು " ಲವಣ " ಅಂತ ಹೇಳಿಕೊಟ್ಟರೆ ಉಪ್ಪಿನ ಉಪ್ಪುತನವೇ ಆ ಲವಣಕ್ಕೆ ಹೊಸದಾಗಿ ಬರಬೇಕಾಗುತ್ತೆ ! ಹಾಗೇ " ಕೂಡುವುದು , ಕಳೆಯುವುದು " ಅಂತ ಹೇಳಿಕೊಡೋ ಬದಲು " ಸಂಕಲನ , ವ್ಯವಕಲನ " ಅಂತ ಹೇಳಿಕೊಟ್ಟರೆ ನಿಜಕ್ಕೂ ಕೂಡಕ್ಕೆ ಕಳಿಯಕ್ಕೆ ಬರೋ ಮಕ್ಕಳಿಗೇ ಎಷ್ಟು ಕಷ್ಟ ಆಗಬೇಡ ? ! " ಎಲೆ " ಮತ್ತು " ಹಸಿರು " ಎರಡೂ ಗೊತ್ತಿರೋ ಮಕ್ಕಳಿಗೆ " ಎಲೆಹಸಿರು " ಅಂತ ಹೇಳಿಕೊಡದೆ " ಪತ್ರಹರಿತ್ತು " ಅಂತ ಹೇಳಿಕೊಟ್ಟರೆ ಕನ್ನಡ ಮಾಧ್ಯಮ ಮಕ್ಕಳಿಗೆ ಕಷ್ಟ ಅನ್ನಿಸುತ್ತಾ ಇರೋದ್ರಲ್ಲಿ ತಪ್ಪೇನಿದೆ ? ಆಡುನುಡಿಯ ಪದಗಳ್ನ ಬಿಟ್ಟು ಬಹಳ ದೂರ ಹೊರಟುಹೋಗಿರೋ ಶಿಕ್ಷಣ ವ್ಯವಸ್ಥೆ ನಾಡಿನ ಮೂಲೆಮೂಲೆಗಳಲ್ಲಿ ಅಡಗಿಕೊಂಡಿರೋ ಪ್ರತಿಭೇನ ಯಾವ ಸೀಮೆ ಮುಟ್ಟಾತು ?
ಪ್ರೇಮಗಾನ ಪದಲಾಸ್ಯ ಮೃದುಹಾಸ್ಯ ಶೃಂಗಾರ ಭಾವಗಂಗಾ ಸುಂದರ , ಸುಲಲಿತ , ಮಧುರಾ ಮಧುರಾ ಮಧುರಾ | | ೧ | |
ಮೀರತ್ , ಜೂನ್ 22 : ದೇವಸ್ಥಾನದಿಂದ ಮನೆಗೆ ವಾಪಸಾಗುತ್ತಿದ್ದ ಯುವತಿಯನ್ನು ಅಪಹರಿಸಿ , ಅಶ್ಲೀಲ ವೀಡಿಯೊ ತೆಗೆದು ಬೆದರಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ . ಯುವತಿಯು ಜೂನ್ 6ರಂದು ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದಾಗ ಕಾಳಹಾಡಿ ಗ್ರಾಮದ ಬಿಜೇಂದ್ರ ಮತ್ತು ಅನಿಲ್ ಎಂಬುವವರು ಯುವತಿಯನ್ನು ಅಪಹರಿಸಿ , ಬಂಧನದಲ್ಲಿಟ್ಟುಕೊಂಡಿದ್ದರು . ಆಗ ಯುವತಿಯ ಅಶ್ಲೀಲ ವೀಡಿಯೊ ತೆಗೆದುಕೊಂಡರು . ವಿಷಯವನ್ನು ಬಹಿರಂಗಪಡಿಸಿದರೆ ವೀಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಸಿದ್ದರು .
ಈ ಪ್ರಕರಣವನ್ನು ಮಾಧ್ಯಮಗಳು ಅತಿ ರಂಜಿತವಾಗಿ ಲಂಬಿಸಿವೆ . ಅವರಿಬ್ಬರಿಗೂ ಅನ್ಯೆತಿಕ ಸಂಬಂಧವಿತ್ತು ಎಂದು ಬಿತ್ತರಿಸ್ಸಿದ್ದಾರೆ . ಅವರಿಬ್ಬರ ನಡುವೆ ಏನು ಸಂಬಂಧವಿತ್ತೋ ನಮಗೆ ತಿಳಿಯದು . ಆದರೆ ಪುರುಷ ಮನಸ್ಸುಗಳಿಗೆ ಅರ್ಥವಾಗದ ಕೆಲವು ವಿಚಾರಗಳಿರುತ್ತವೆ . ನೀವು ವಿವಾಹಿತರಾಗಿದ್ದರೂ ಮನಸ್ಸು ಮಾಡಿದರೆ ಒಂದು ಹುಡುಗಿಯನ್ನು ಒಲಿಸಿಕೊಳ್ಳಬಹುದು . ಮಕ್ಕಳಿಲ್ಲದ ಪರಸ್ತ್ರೀಯನ್ನೂ ಕಷ್ಟಪಟ್ಟು ತನ್ನವಳಾಗಿಸಿಕೊಳ್ಳಬಹುದು . ಆದರೆ ಒಬ್ಬಳು ತಾಯಿಯನ್ನು ಅಷ್ಟು ಸುಲಭವಾಗಿ ಹಾಸಿಗೆಯೆಡೆಗೆ ಸೆಳೆದುಕೊಳ್ಳಲಾರಿರಿ . ಹಾಗೊಂದು ವೇಳೆ ಆಕೆ ಒಲಿದು ಬಂದರೆ ಅದು ಆಕೆ ಆತನ ಮೇಲೆ ಇಟ್ಟ ಅಚಲ ನಂಬಿಕೆ ಮತ್ತು ವಿಶ್ವಾಸ . ಅದು ಅಕೆಗೆ ಗಂಡನಿಂದ ಸಿಕ್ಕಿರಲಿಕ್ಕಿಲ್ಲ .
ಗೊಂಬೆಗಳಿಗೆ ಆರತಿ ಮಾಡಿ ಮಕ್ಕಳಿಗೆಲ್ಲಾ ಬೊಂಬೆ ಬಾಗಿನ ಕೊಡುತ್ತಾ ಇದ್ದರು . ದೊಡ್ಡವರಿಗೆ ಎಲೆ ಅಡಕೆ ತೆಂಗಿನ ಕಾಯಿ . ನಾವು ರಾಯಬಿಡದಿಯಿಂದ ಹಿಂದಿರುಗುವ ವೇಳೆಗೆ ಆಗಲೇ ಕತ್ತಲಾಗಿರೋದು . ಆ ಒಂದು ದಿನದ ಅನುಭವ ನಮಗೆ ಇಡೀ ಒಂದು ವರ್ಷಕ್ಕೆ ಸಾಕಾಗುತ್ತಾ ಇತ್ತು . ಇರುಪಜ್ಜ ತೀರಿಕೊಂಡು , ರುದ್ರಣ್ಣ ಮನೆಯ ಯಜಮಾನರಾದ ಮೇಲೆ ಮೊದಲಿನ ನಿಗೂಢತೆಯನ್ನ ರಾಯಬಿಡದಿ ಸ್ವಲ್ಪಮಟ್ಟಿಗೆ ಕಳೆದುಕೊಂಡಿತು ಎನ್ನಬಹುದು . ಈಗ ನಾನು ಕಾಲೇಜಲ್ಲಿ ಓದುತ್ತಾ ಇದ್ದೆ . ರುದ್ರಣ್ಣ ಸಾಹಿತ್ಯದ ಹುಚ್ಚರಾಗಿದ್ದುದರಿಂದ ನನ್ನನ್ನು ರಾಯಬಿಡದಿಗೆ ತಾವೇ ಬಂದು ಕರೆದುಕೊಂಡು ಹೋಗೋರು . ಕುಮಾರವ್ಯಾಸಭಾರತ , ಜೈಮಿನೀ ಭಾರತ ನನ್ನಿಂದ ಓದಿಸಿ , ತಪ್ಪು ತಿದ್ದಿ , ಅದ ಹಿಂಗೆ ಬಿಡಿಸಬೇಕು ಕಣಪ್ಪಾ ಅಂತ ಮಾರ್ಗದರ್ಶನ ಮಾಡುತಾ ಇದ್ದರು . ಅವರಿಗೆ ನನ್ನ ಮೇಲೆ ತುಂಬ ಪ್ರೀತಿಯಿತ್ತು . ನಮ್ಮ ಯಂಟೇಶಣ್ಣನ ಹಂಗೆ ಭಾರತ ಬೇರೆ ಹುಡುಗರ ಕೈಯಲ್ಲಿ ಓದಿಸಿ ನೋಡೋಣ ಅಂತ ನನ್ನನ್ನು ಹೊಗಳಿ ಅಟ್ಟಕ್ಕೆ ಏರಿಸುತ್ತಾ ಇದ್ದರು . ಲಕ್ಷ್ಮೀಶನ ಕೆಲವು ಸಮಸ್ಯೆ ಪದ್ಯಗಳನ್ನು ಹೇಗೆ ಬಿಡಿಸಬೇಕು ಅಂತ ನನಗೆ ವಿವರಿಸಿ , ಯಾವನಾದರೂ ತಲೆಹರಟೆ ಮಾಡಿದರೆ ಈ ಪದ್ಯ ಅವನ ಮುಂದೆ ಒಗೀ ಅಷ್ಟೆ ! ಎನ್ನುತ್ತಾ ನನ್ನ ಬೆನ್ನು ಚಪ್ಪರಿಸುತ್ತಾ ಇದ್ದರು !
ಹೀಗೆ ದದ್ದು ಬಿದ್ದು ಹೋದ ಪೇದೆಗಳನ್ನಾಧರಿಸಿದ ವ್ಯವಸ್ಥೆಯಿಂದ ಯಾವ ಸೂಕ್ಷ್ಮ , ನಿಸ್ಪೃಹ , ಕೌಶಲ್ಯಪೂರ್ಣ ಕೆಲಸ ಸಾಧ್ಯ ? ನಮ್ಮ ಗುಪ್ತಚರ ವ್ಯವಸ್ಥೆಯ ಕಾಲಾಳುಗಳೂ ಇವರೇ . ಯಾವುದೇ ಸುಸಂಗತ ರಾಜಕೀಯ ಪರಿಜ್ಞಾನವೇ ಇಲ್ಲದ ಇವರು ಕೊಡುವ ಪ್ರಾಥಮಿಕ ಮಾಹಿತಿಯನ್ನು ಆಧರಿಸಿಯೇ ಗುಪ್ತಚರ ಇಲಾಖೆಯ ಮೇಲಿನ ಹಂತ ಕ್ರಿಯಾಶೀಲವಾಗುವುದು ಎಂದರೆ , ಈ ರಾಷ್ಟ್ರ ಇನ್ನೂ ಇಷ್ಟು ನೆಮ್ಮದಿಯಿಂದಿರುವುದನ್ನು ಪವಾಡವೆಂದೇ ಭಾವಿಸ ಬೇಕಾಗುತ್ತದೆ ! ಈಚೆಗೆ ತೀರ್ಪು ಪ್ರಕಟವಾದ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಅಪರಾಧಿಗಳೆಂದು ( ಆರ್ಡಿಎಕ್ಸ್ ಸಾಗಿಸಿಕೊಡುವುದರಲ್ಲಿ ನೆರವಾಗಿದ್ದಾಕ್ಕಾಗಿ ) ಸಾಬೀತಾದವರಲ್ಲಿ ಪೋಲೀಸರೂ ಸೇರಿದ್ದರು ಎಂದರೆ ಏನು ಹೇಳುವುದು ? ರಾಜಸ್ಥಾನದ ಉನ್ನತ ಪೋಲೀಸ್ ಅಧಿಕಾರಿ ಮೊಹಂತಿ , ವಿದೇಶಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಆಪಾದನೆ ಎದುರಿಸುತ್ತಿದ್ದ ತನ್ನ ಮಗನನ್ನು ವಿಚಾರಣೆಗೆ ಮುನ್ನವೇ ನಕಲಿ ಪಾಸ್ ಪೋರ್ಟ್ ಮೇಲೆ ವಿದೇಶಕ್ಕೆ ಸಾಗಿಸಿದ್ದಾನೆ ಎಂದರೆ ? ಇದಾದ ಮೇಲೂ ಆತ ತನ್ನ ಸ್ಥಾನದಲ್ಲಿ ಮುಂದುವರೆಯಲು ಸಾಧ್ಯ ಎಂದರೆ ? ಸಾರ್ವಜನಿಕ ಒತ್ತಡ ಹೆಚ್ಚಿ ಬಂಧನದ ' ಸಿದ್ಧತೆ ' ಆರಂಭವಾಗುತ್ತಿದ್ದಂತೆ ಆತನೇ ನಾಪತ್ತೆಯಾಗಿದ್ದಾನೆ ಎಂದರೆ ? ಅಪರಾಧಿ ಮಗನನ್ನು ಅಪ್ಪ ರಕ್ಷಿಸಿದರೆ , ಅಪ್ಪನನ್ನು ಸರ್ಕಾರ ರಕ್ಷಿಸುತ್ತದೆ . ಇದೊಂದು ಸಣ್ಣ ಉದಾಹರಣೆಯಷ್ಟೆ . ಕೊಲೆ ಆಪಾದಿತರಿಂದ ಅಪಾರ ಹಣವನ್ನೋ , ಆಸ್ತಿಯನ್ನೋ ಪಡೆದು ಕೊಲೆಗಳನ್ನೇ ಮುಚ್ಚಿಹಾಕಿರುವ ಪೋಲೀಸರೆಷ್ಟಿಲ್ಲ ನಮ್ಮಲ್ಲಿ ? ಬುಡದಿಂದ ತುದಿವರೆಗೂ ರೋಗ ಹಬ್ಬಿಸಿಕೊಂಡಿರುವ ಇಲಾಖೆ ಹೇಗೆ ತನ್ನ ವೃತ್ತಿಶೀಲತೆಯನ್ನು ಕಾಪಾಡಿಕೊಳ್ಳಲು ಸಾಧ್ಯ ? ಹೇಗೆ ದೇಶದ ಆಂತರಿಕ ಭದ್ರತೆಯನ್ನು ಕಾಪಾಡಲು ಸಾಧ್ಯ ? ಈ ಪ್ರಶ್ನೆಯೇಕೆ ನಮ್ಮನ್ನು ಕಾಡುತ್ತಿಲ್ಲ ?
ಪುರುಷ ಸೂಕ್ತವನ್ನು ಸ್ಮ್ಖತಿಕಾರರೆಲ್ಲರೂ ವೈಶಿಷ್ಟ್ಯಪೂರ್ಣ ಗ್ರಂಥವೆಂದು ಪ್ರಶಂಸಿಸಿದ್ದಾರೆ . ಅದರ ವೈಶಿಷ್ಟ್ಯವೇನು ? ಚಾತುರ್ವಣ್ಯಗಳನ್ನು ಆದರ್ಶವೆಂದು ಕರೆಯುವುದೇ ಅದರ ವೈಶಿಷ್ಟ್ಯವಾಗಿದೆ . ಒಂದು ಪಕ್ಷ ಪುರುಷ ಸೂಕ್ತವು ವರ್ಗರಹಿತ ಸಮಾಜವನ್ನು ಸ್ಥಾಪಿಸುವಂತೆ ಬೋಧಿಸಿದ್ದಿದ್ದರೆ ಅದನ್ನು ವೈಶಿಷ್ಟ್ಯವೆಂದು ಭಾವಿಸಬಹುದಾಗಿತ್ತು . ಉತ್ಪಾದನೆಯ ಸಾಧನೆಗಳು ಹೆಚ್ಚಿದಂತೆಲ್ಲಾ ವರ್ಗರಹಿತ ಸಮಾಜದಲ್ಲಿ ಶ್ರಮವಿಭಜನೆ ಅನಿವಾರ್ಯವಾಯಿತು . ಮಾನಸಿಕ ಶ್ರಮಜೀವಿಗಳು ಮತ್ತು ದೈಹಿಕ ಶ್ರಮಜೀವಿಗಳು ಎಂದು ಅವರಲ್ಲಿ ಎರಡು ವರ್ಗ ಉದಿಸಿದವು . ಹೀಗೆ ಅತಿ ಪುರಾತನವಲ್ಲದ ಎಲ್ಲ ಸಮಾಜಗಳಲ್ಲೂ ವರ್ಗಗಳ ಉಗಮ ಸಹಜಕ್ರಿಯೆಯಾಯಿತು . ಒಬ್ಬ ವ್ಯಕ್ತಿ ಮಾನಸಿಕ ಶ್ರಮಜೀವ ಯಾಗುವುದು ಅಥವಾ ದೈಹಿಕ ಶ್ರಮಜೀವಿಯಾಗುವುದು ಅವನ ಪ್ರವೃತ್ತಿಯನ್ನು ಅವಲಂಬಿಸಿರುತಿತ್ತು . ವ್ಯಕ್ತಿಯ ವೈಯಕ್ತಿಕ ಪ್ರವೃತ್ತಿಯನ್ನು ಆಧರಿಸಿದ್ದ ವರ್ಗ ಚಲನಾತ್ಮಕವಾಗಿತ್ತು ; ಆನುವಂಶಿಕವಾಗಿರಲಿಲ್ಲ . ಪುರುಷ ಸೂಕ್ತ ಮತ್ತು ಅದನ್ನನುಸರಿಸಿದ ಧರ್ಮಸೂತ್ರಗಳು ಚಲನಾತ್ಮಕವಾಗಿದ್ದ ವರ್ಗವನ್ನು ನಿಶ್ಚಲಗೊಳಿಸಿ ಜಾತುರ್ವಣ್ಯಗಳನ್ನು ಜಾತಿಗಳನ್ನಾಗಿ ಮಾಡಿದವು .
ಒಹ್ ಕೃಷಿಕರಿಗಾಗಿ ಒಂದು ಬ್ಲಾಗ್ . . ಹೀಗೆ ಒಳ್ಳೊಳ್ಳೆ ಲೇಖನ ಮಾಹಿತಿಗಳು ಮೂಡಿ ಬರಲಿ . . . ಇಡಿಯ ರೈತಾಪಿ ಬ್ಲಾಗ್ ಬಳಗಕ್ಕೆ ಹಾರ್ಧಿಕ ಸುಸ್ವಾಗತ . . . ಗುರುಗಳೆ ತುಂಬಾ ಒಳ್ಳೆಯ ಮಾಹಿತಿ ಒದಗಿಸಿದ್ದೀರಿ . . . ಬ್ಲಾಗ್ ಲೋಕಕ್ಕೆ ಸ್ವಾಗತ . . ಅಂದ ಹಾಗೆ ಅದೇನು ನೊಂದಾಯಿತ ( ಗಿ . ಅ ) ? ? ಗಿ . ಅ ಎಂದರೇನು ಎಂದು ಎಲ್ಲಿಯೂ ಮಾಹಿತಿಯಿಲ್ಲ . . . ( ಬಳಕೆ ತಿಳುವಳಿಕೆ ನೀಡುವವರೆ ಹೀಗೆ ಮಾಡಿದರೆ ನಮ್ಮ ಗತಿ ; - ) ) ಗೊತ್ತಾಗಲಿಲ್ಲ . . ದಯವಿಟ್ಟು ತಿಳಿಸಿ . . ಸಾಲ ಸೌಲಭ್ಯವನ್ನು ಯಾವ ಆದಾರದ ಮೇಲೆ ನೀಡುತ್ತಾರೆ ಮತ್ತು ಎಷ್ಟು ವಿಮಾ ಕಂತುಗಳು ದೊರೆಯುತ್ತವೆ ರೈತನಿಗೆ ಸಾಲ ಮರುಪಾವತಿಗೆ ? ರಾಸಿನ ವಿಮೆಯ ಮೊಬಲಗನ್ನು ಯಾವ ಆಧಾರದ ಮೇಲೆ ನಿರ್ಧರಿಸುತ್ತಾರೆ ಹಾಗು ಪ್ರೀಮಿಯಂ ಪ್ರತಿ ತಿಂಗಳು ಪಾವತಿ ಮಾಡಬೇಕಾಗುತ್ತದೆಯೆ ಹೇಗೆ ? ( ಕಾಲು ಮುರಿದುಕೊಳ್ಳುವುದು , ಕೆಚ್ಚಲು ಬಾವಿನಿಂದ ಹಾಲು ಬಾರದಿರುವುದು , ಗರ್ಭ ಧರಿಸದೇ ಜೀವನ ಪೂರ್ತಿ ಬರಡಾಗುವುದು ಇತ್ಯಾದಿ ಜಾನುವಾರುಗಳ ಶುಶ್ರೂಷೆಗೆ ರಾಸಿಗೆ ವಿಮೆಯಿದ್ದು ಪ್ರಯೋಜನವಾಗುವುದಿಲ್ಲ . . . ಆರೋಗ್ಯವಾಗಿದ್ದೇ 12ವರ್ಷದೊಳಗೆ ರಾಸು ಸ್ವಾಭಾವಿಕವಾಗಿ ಹಾಗು ರೈತ ಅದನ್ನು ಅತ್ಯಂತ ಕಾಳಜಿಯಿಂದ ಸಾಕಿದ್ದೇನೆ ಎನ್ನುವ ಪುರಾವೆಯೊಂದಿಗೆ ಜೀವ ವಿಮೆಯ ಫಲಾನುಭವಿಯಾಗುವಂತ ವಿಮಾ ಕಂಪನಿಗಳ ಚಾಣಾಕ್ಯ ತಲೆಯನ್ನು ಮೆಚ್ಚಲೇ ಬೇಕು ! ರೈತನ ಕಿವಿಗೆ ಓಲೆ ಹಾಕ್ಯಳಕ್ಕ ಅಥವಾ ಜಾನುವಾರಿಗೊಂದೆ ಹಾಕಿರೆ ಸಾಕಾ ! ರಾಸುಗಳಿಗೆ ಮಾಡಿಸುವ ಜೀವ ವಿಮೆಯ ಬಗ್ಗೆ ಗೊತ್ತೇ ಇರದ ಅನೇಕ ಮಾಹಿತಿಯನ್ನು ಒದಗಿಸಿದ್ದೀರಿ . . ಇನ್ನೂ ಹೀಗೆ ಅನೇಕ ಮಾಹಿತಿ ಹೊತ್ತ ಲೇಖನಗಳು ಮೂಡಿ ಬರಲಿ . . ಕೊನೆಯ ಮಾತು ನಿನ್ನ ಹೆಸರಿನ ಬ್ಲಾಗ್ ( www . mavemsa . blogspot . com ) ಮಾಡಿ ಕೊಟ್ನಲ ಅದು ಖಾಲಿ ಹೋಡಿತಾ ಇದ್ದು . . ಅದರಲ್ಲು ಯಾವ್ದಾರು ಲೇಖನ ಬರಿಯಪಾ ನೀನು . .
ಯಾರು ಯಾವುದಕ್ಕೆ ಆಜ್ಞೆ ಹೊರಡಿಸಿದ್ದಾರೆ ? ಕೇರಳದಲ್ಲಿ ಕೈ ಕತ್ತಿರಿಸಲು ಆಜ್ಞೆ ಹೊರಡಿಸಿದ ಹಾಗೆ ? ಭೂ ತಾಯಿಯನ್ನು ಮಾತೆ ಎಂದು ಪೂಜಿಸುವಾಗ ಪಿತೃ ಯಾರು ಎಂದೂ ರೈತ ಯಾವತ್ತೂ ಕೇಳುವುದಿಲ್ಲ .
ಫಿನ್ಲೆಂಡ್ ಒಂಟಿ ದೇಶ . ವರ್ಷಕ್ಕೆ ಹತ್ತು ತಿಂಗಳು ಕತ್ತಲು . ಪ್ರತಿ ದಿನ ಏನಿಲ್ಲವೆಂದರೂ ಎರಡು ಮೂರು ಗಂಟೆ ಕಾಲ ಸೂರ್ಯನ ದರ್ಶನ . ಮಾಡಲು ಕೆಲಸವಿಲ್ಲದಿದ್ದರೂ ಇರಲು ಮನೆ , ತೊಡಲು ಬೆಚ್ಚನೆ ವಸ್ತ್ರ , ತಿಂಗಳ ಖರ್ಚಿಗೆ ಹಣ - ಇವಿಷ್ಟನ್ನೂ ಕೊಡುವ ಫಿನ್ನಿಶ್ ಸರ್ಕಾರ , ಇಷ್ಟಕ್ಕೆ ತನ್ನ ಪ್ರಜೆಗಳ ಅವಶ್ಯಕತೆ ಫಿನಿಶ್ ಆಯಿತೆಂದು ಭಾವಿಸುತ್ತದೆ . ಆದರೆ ಮನುಷ್ಯನ ಅವಶ್ಯಕತೆಗಳು ಪ್ರಾರಂಭವಾಗುವುದೇ ಹೊಟ್ಟೆ ಬಟ್ಟೆ ತುಂಬಿದ ಮೇಲಲ್ಲವೆ ? ಇಲ್ಲದಿದ್ದರೆ , ಇಷ್ಟೆಲ್ಲ ಇದ್ದಾಗಲೂ ಇಡೀ ದೇಶದ ಶೇಕಡ ಮೂವತ್ತರಷ್ಟು ಜನರು 1960ರಲ್ಲಿ ಒಮ್ಮೆಲೆ ದೇಶ ಬಿಟ್ಟು ಹೋಗಿದ್ದೇಕೆ ಹೇಳಿ ?
ಚಾಲಕರು ವಾಹನ ಚಲಿಸುವಾಗ ಯಾರೂ ಮಾತನಾಡಿಸಬಾರದು . ಏನಿದರ ಅರ್ಥ ? ಇವರಿಗೆ ಚಲಾಯಿಸು ಎಂಬ ಕ್ರಿಯಾಪದ ಗೊತ್ತಿಲ್ವಾ ?
ಇರ್ಲಿ ಬಿಡಿ , ಪರ್ವಾಗಿಲ್ಲ ! ಮತ್ತೇನು ವಿಶೇಷ ? ದೋಸೆ - ಕಾಫಿ ಎಲ್ಲಾ ಬಿಟ್ಬಿಟ್ರಾ ? ಈಗೆಲ್ಲಾ ಮೀನು - ಮಾಂಸ ಅಂತ ತಿರುಗಾಡ್ತಾ ಇರೋ ಹಾಗಿದೆ ? ಅಂತ ಬೂಸ್ಟರ್ ಡೋಸ್ ಚುಚ್ಚಿದೆ .
ಆದರೂ ನನಗೆ ಚಕ್ರಸುಳಿಯೊಳಗೆ ಸಿಲುಕಿದಂತೆ ಉಂಟುಮಾಡುವ ಮಾಯದ ಗಾಯದಂತೆ ಎದೆಯೊಳಗೇ ಉಳಿದುಹೋಗುವ ಭಾಸ ಒಂದೇ ಪ್ರಶ್ನೆಯದ್ದು
ನಿಮ್ಮ ಇಚ್ಛೆಯ ವಿಭಜನಾ ಕ್ರಮವನ್ನು ಆಯ್ಕೆ ಮಾಡಲು ಸಂವಾದ ಚೌಕದಲ್ಲಿ ಅವುಗಳ ವಿವರಗಳ ಎಡ ಪಕ್ಕದಲ್ಲಿನ ರೇಡಿಯೊ ಗುಂಡಿಯನ್ನು ಕ್ಲಿಕ್ ಮಾಡಿ .
ತಮ್ಮ ನಾಡು , ನುಡಿಯ ಬೆಲೆ ಅರಿಯದವರು , ಅದನ್ನು ಗೌರವಿಸಿದವರು ಎಲ್ಲೇ ಹೋದರೂ ಪ್ರಾಯೋಗಿಕವಾಗಿ ಬದುಕಿ ತಮ್ಮ - ತಮ್ಮ ಬೇಳೆ ಕಾಳುಗಳನ್ನು ಬೇಯಿಸಿಕೊಳ್ಳುತ್ತಾರೆಯೇ ವಿನಾ ಬೇರೇನನ್ನು ತಾನೇ ಮಾಡಿಯಾರು ?
ಇರಲಿ , ಹುಟ್ಟದ ಮಗುವಿಗೆ ಹೆಸರು ಹುಡುಕುವ ಅನುಭವ ಹೇಗಿರುತ್ತೆ ಎಂಬುದನ್ನು ಇಲ್ಲಿ ನಿಮ್ಮ ಬಳಿ ಹಂಚಿಕೊಂಡೆ , ಅಷ್ಟೆ . ಇಂಥ ವಿಷಯಗಳನ್ನೆಲ್ಲ ಸಖತ್ತಾಗಿ ಎಂಜಾಯ್ ಮಾಡಬೇಕು . ಅದೇ ಜೀವನದ ಖುಷಿಯ ಕ್ಷಣಗಳು , ಅಲ್ಲವೇ ?
ಡಾ | ಸತ್ಯನಾರಾಯಣ ಆಚಾರ್ಯ , ತರ್ಕಪ್ರಾಧ್ಯಾಪಕರು ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ , ಬೆಂಗಳೂರು .
ಅನೇಕ ರೀತಿಯ ಮೆಕ್ಕೆ ಜೋಳಗಳನ್ನು ಆಹಾರವಾಗಿ ಉಪಯೋಗಿಸಲಾಗುತ್ತದೆ . ಪ್ರತಿಯೊಂದು ಹೊಂದಿರುವ ಪಿಷ್ಟದ ಆಧಾರದಲ್ಲಿ ವಿವಿಧ ಉಪಜಾತಿಗಳಾಗಿ ವಿಂಗಡಿಸಲಾಗುತ್ತದೆ :
ಪುರಂದರ ದಾಸರು ಬರ್ದಿರೋದೆಲ್ಲ ಕನ್ನಡದಲ್ಲಿ . ಓದಿದ್ರೆ , ನನಗೆ ಅರ್ಥವಾಗೋದೇನೂ ಕಷ್ಟವಿಲ್ಲ . ಅಲ್ದೆ , ಅವ್ರೇನೂ ಸರ್ಗದ ಮೇಲೆ ಸರ್ಗ ಕವಿತೆ ಹೊಸೆದಂತ ಕಾಳಿದಾಸನ ಹಾಗೆ ದೊಡ್ಡ ದೊಡ್ಡ ಕಾವ್ಯಗಳನ್ನೂ ಬರೆದಿಲ್ಲ . ಅದು ಬಿಡಿ ಕುಮಾರವ್ಯಾಸ ಹರಿಹರ ರಾಘವಾಂಕ ರತ್ನಾಕರವರ್ಣಿಯರ ಹಾಗೆ ಸಾಂಗತ್ಯ ರಗಳೆ ಷಟ್ಪದಿಯ ಗೊಡವೆಗೂ ಅವರು ಹೋಗಿಲ್ಲ . ಏನಿದ್ರೂ ಅವರು ಬರೆದಿರೋದು ಸಣ್ಣ ಸಣ್ಣ ಹಾಡುಗಳು . ಒಂದು ಓದಿದ್ಮೇಲೆ ಇನ್ನೊಂದು ಇದನ್ನೇ ಓದ್ಬೇಕು ಅನ್ನೋದಕ್ಕೆ ಅಲ್ಯಾವ ಕಥೇನೂ ಇರೋದಿಲ್ಲ . ಅಲ್ದೆ ಸರಿಸುಮಾರು ಅರ್ಥವಾಗ್ದಿರೋ ಪದಗಳೂ ಅಲ್ಲೊಂದು ಇಲ್ಲೊಂದು ಹೊರತು ನಾನೇನೂ ಪಕ್ದಲ್ಲಿ ನಿಘಂಟು ಇಟ್ಕೊಂಡು ಕೂರ್ಬೇಕಾಗಿಲ್ಲ . ಇದೇಕಾರಣಕ್ಕೆ ಆದಾದಾಗ ಒಂದೊಂದು ಹೊಸ ಹಾಡನ್ನ ಓದಿ ನೋಡೋದು ಅಂದ್ರೆ ನನಗಂತೂ ಬಹಳ ಹಿಡಿಸುತ್ತೆ . ಮುಂದೆ ಓದಿ »
ಆದರೆ ಬದುಕಿನಲ್ಲಿ ಉತ್ತರಕ್ಕಿಂತ ಪ್ರಶ್ನೆಯೇ ಮುಖ್ಯ . ಏಕೆಂದರೆ ಪ್ರಶ್ನೆಗಳೇ ಹುಟ್ಟದಿದ್ದರೆ ಬದುಕು ಬರಡಾಗುತ್ತದೆ . ನಿಂತ ನೀರಾಗುತ್ತದೆ . ಬರಡಲ್ಲಿ ಬೆಳೆ ಅಸಾಧ್ಯ . ನಿಂತ ನೀರಿಗೆ ಕೊಳೆಯುವ ಭಯ .
ಮಳೆಬಿಲ್ಲೊಂದು ವಾಸ್ತವವಾಗಿ ಆಕಾಶದಲ್ಲಿನ ನಿರ್ದಿಷ್ಟ ತಾಣವೊಂದರಲ್ಲಿ ಸಂಭವಿಸುವುದಿಲ್ಲ . ವೀಕ್ಷಕನ ತಾಣ ಮತ್ತು ಸೂರ್ಯನ ಸ್ಥಾನದ ಮೇಲೆ ಇದರ ಸ್ಪಷ್ಟ ಸ್ಥಾನವು ಅವಲಂಬಿಸಿರುತ್ತದೆ . ಎಲ್ಲಾ ಮಳೆಹನಿಗಳು ಒಂದೇ ರೀತಿಯಲ್ಲಿ ಸೂರ್ಯನ ಬೆಳಕನ್ನು ವಕ್ರೀಕರಿಸುತ್ತವೆ ಮತ್ತು ಪ್ರತಿಫಲಿಸುತ್ತವೆಯಾದರೂ , ಕೆಲವೊಂದು ಮಳೆಹನಿಗಳಿಂದ ಬರುವ ಬೆಳಕು ಮಾತ್ರವೇ ವೀಕ್ಷಕನ ಕಣ್ಣನ್ನು ತಲುಪುತ್ತದೆ . ಆ ವೀಕ್ಷಕನಿಗೆ ಸಂಬಂಧಿಸಿದಂತೆ ಈ ಬೆಳಕೇ ಮಳೆಬಿಲ್ಲನ್ನು ರೂಪಿಸುತ್ತದೆ . ಆಕಾಶದಲ್ಲಿನ ಮಳೆಬಿಲ್ಲೊಂದರ ಸ್ಥಾನವು ಯಾವಾಗಲೂ ವೀಕ್ಷಕನಿಗೆ ಸಂಬಂಧಿಸಿದಂತೆ ಸೂರ್ಯನ ವಿರುದ್ಧ ದಿಕ್ಕಿನಲ್ಲಿಯೇ ಇರುತ್ತದೆ , ಮತ್ತು ಅದರ ಒಳಭಾಗವು ಹೊರಭಾಗಕ್ಕಿಂತ ಯಾವಾಗಲೂ ಕೊಂಚಮಟ್ಟಿಗೆ ಉಜ್ವಲವಾಗಿರುತ್ತದೆ . ವೀಕ್ಷಕನ ತಲೆಯ ನೆರಳಿನ ಮೇಲೆ ಅಥವಾ ಹೆಚ್ಚು ನಿಖರವಾಗಿ ಹೇಳುವುದಾದರೆ ಸೂರ್ಯನಿಗೆ ವಿರುದ್ಧವಾಗಿರುವ ತಾಣದಲ್ಲಿ ( ಇದು ಹಗಲುವೇಳೆಯಲ್ಲಿ ದಿಗಂತದ ಕೆಳಗೆ ಇರುತ್ತದೆ ) ಚಾಪವು ಕೇಂದ್ರೀಕರಿಸಲ್ಪಟ್ಟಿರುತ್ತದೆ , ಮತ್ತು ವೀಕ್ಷಕನ ತಲೆ ಹಾಗೂ ಅದರ ನೆರಳಿನ ನಡುವಿನ ರೇಖೆಗೆ 40 - 42 ° ಯಷ್ಟಿರುವ ಕೋನವೊಂದರಲ್ಲಿ ಅದು ಕಾಣಿಸುತ್ತದೆ . ಇದರ ಪರಿಣಾಮವಾಗಿ , ಒಂದು ವೇಳೆ ಸೂರ್ಯನು 42 ° ಗಿಂತ ಎತ್ತರದಲ್ಲಿದ್ದರೆ , ಆಗ ಮಳೆಬಿಲ್ಲು ದಿಗಂತದ ಕೆಳಗೆ ಇರುತ್ತದೆ ಮತ್ತು ಸಾಮಾನ್ಯವಾಗಿ ಅದನ್ನು ಕಾಣಲಾಗುವುದಿಲ್ಲ ; ಏಕೆಂದರೆ , ಈ ವಿದ್ಯಮಾನಕ್ಕೆ ಕೊಡುಗೆಯಾಗಿ ನೀಡಲು ವಾಡಿಕೆಯಾಗಿ ಸಾಕಷ್ಟಿರಬೇಕಾದ ಮಳೆಹನಿಗಳು ದಿಗಂತ ( ಅಂದರೆ ಕಣ್ಣಿನ ಎತ್ತರ ) ಮತ್ತು ನೆಲದ ನಡುವೆ ಇರುವುದಿಲ್ಲ . ಇಲ್ಲಿ ವಿನಾಯಿತಿಗಳಿಗೂ ಅವಕಾಶವಿದೆ ; ವೀಕ್ಷಕನು ನೆಲಕ್ಕಿಂತ ಮೇಲಿನ ಎತ್ತರದಲ್ಲಿದ್ದಾಗ , ಉದಾಹರಣೆಗೆ ವಿಮಾನವೊಂದರಲ್ಲಿದ್ದಾಗ ( ಮೇಲೆ ನೀಡಿರುವ ನಿದರ್ಶನವನ್ನು ನೋಡಿ ) , ಪರ್ವತವೊಂದರ ತುದಿಯ ಮೇಲೆ , ಅಥವಾ ಜಲಪಾತವೊಂದರ ಮೇಲಿದ್ದಾಗ ಇದಕ್ಕೆ ಅಪವಾದವಾಗಿರುವ ನಿದರ್ಶನಗಳು ಸಂಭವಿಸುತ್ತವೆ .
ಬಾಕ್ಸರ್ ಅಥವಾ ಔಟ್ - ಫೈಟರ್ ಬ್ರ್ಯಾವ್ಲರ್‌ನ ವಿರುದ್ಧ ಹೆಚ್ಚಾಗಿ ಯಶಸ್ಸು ಕಾಣುತ್ತಾರೆ . ಬ್ರ್ಯಾವ್ಲರ್‌ನ ಕಡಿಮೆ ವೇಗವು ( ಕೈ ಮತ್ತು ಕಾಲುಗಳೆರಡೂ ) ಮತ್ತು ಕಳಪೆ ಮಟ್ಟದ ತಂತ್ರವು ವೇಗದ ಔಟ್ - ಫೈಟರ್ ಆತನನ್ನು ಸುಲಭವಾಗಿ ಹೊಡೆದುರುಳಿಸುವಂತೆ ಮಾಡುತ್ತವೆ . ಬ್ರ್ಯಾವ್ಲರ್ ಕಾದಾಟವನ್ನು ಮುಕ್ತಾಯಗೊಳಿಸಲು ಕೇವಲ ಒಂದು ಉತ್ತಮ ಹೊಡೆತವನ್ನು ನೀಡಬೇಕಾಗಿರುವುದರಿಂದ , ಔಟ್ - ಫೈಟರ್‌ನ ಮುಖ್ಯ ಕೆಲಸವೆಂದರೆ ಎಚ್ಚರವಾಗಿರುವುದು . ಔಟ್ - ಫೈಟರ್ ಅಂತಹ ಪ್ರಬಲ ಹೊಡೆತಗಳನ್ನು ತಪ್ಪಿಸಿಕೊಳ್ಳಲು ಸಮರ್ಥನಾದರೆ , ಅವನು ವೇಗವಾಗಿ ಗುದ್ದುಗಳನ್ನು ನೀಡಿ ಬ್ರ್ಯಾವ್ಲರ್‌ನನ್ನು ಹೊಡೆದುರುಳಿಸಬಹುದು . ಅವನು ಸಾಕಷ್ಟು ಯಶಸ್ಸಾಗಿದ್ದರೂ , ನಂತರದ ಸುತ್ತುಗಳಲ್ಲಿ ನೌಕ್ಔಟ್ಅನ್ನು ಸಾಧಿಸುವ ಪ್ರಯತ್ನದಲ್ಲಿ ಹೆಚ್ಚುವರಿ ಬಲವನ್ನು ಬಳಸಬೇಕಾಗಬಹುದು . ಮಹಮ್ಮದ್ ಅಲಿ ಮೊದಲಾದ ಹೆಚ್ಚಿನ ಪ್ರಾಚೀನ ಬಾಕ್ಸರ್‌ಗಳು ಸ್ಲಗ್ಗರ್‌ಗಳ ವಿರುದ್ಧ ಅತ್ಯುತ್ತಮ ಯಶಸ್ಸು ಗಳಿಸಿದ್ದಾರೆ .
ಮಂಗಳೂರಿನಲ್ಲಿರುವ ಕುದ್ರೆಮಖ ಅಯನ್ ಓರ್ ಕಂಪನಿ ಲಿಮಿಟೆಡ್ ಮಂಗಳೂರಿನ ಅರ್ಥ ವ್ಯವಸ್ಥೆಯಲ್ಲಿ ವ್ಯಾವಸಾಯಿಕ ಸಂಸ್ಕರಣೆ ಹಾಗೂ ಬಂದರು ಸಂಬಂಧಿತ ಚಟುವಟಿಕೆಗಳು ಪ್ರಮುಖ ಸ್ಥಾನಗಳನ್ನು ಪಡೆದಿವೆ [ ೧೮ ] . ನವ ಮಂಗಳೂರು ಬಂದರು ಭಾರತದ ೯ನೇ ಅತಿ ದೊಡ್ಡ ಸರಕು ನಿರ್ವಹಣಾ ಬಂದರಾಗಿದೆ . ಇದು ಭಾರತದ ೭೫ ಪ್ರತಿಶತ ಕಾಫಿ ಮತ್ತು ಗೋಡಂಬಿ ರಫ್ತನ್ನು ನಿರ್ವಹಿಸುತ್ತದೆ . ಮಂಗಳೂರು ಹಂಚುಗಳು ಭಾರತದಾದ್ಯಂತ ಪ್ರಸಿದ್ಧವಾಗಿದ್ದು ಈಗಲೂ ನಗರದಲ್ಲಿ ತುಂಬಾ ಬಳಕೆಯಲ್ಲಿದೆ . ಮಂಗಳೂರು , ವಾಹನಗಳ ' ಲೀಫ್ ಸ್ಪ್ರಿಂಗ್ ' ಉದ್ಯಮದ ತವರು . ' ದ ಕೆನರಾ ವರ್ಕ್ ಶೋಪ್ಸ್ ಲಿಮಿಟೆಡ್ ' ಮತ್ತು ' ಲ್ಯಾಮಿನ ಸಸ್ಪೆನ್ಶನ್ ಪ್ರೊಡಕ್ಟ್ಸ್ ಲಿಮಿಟೆಡ್ ' ಗಳು ಚಿರಪರಿಚಿತ ಲೀಫ್ ಸ್ಪ್ರಿಂಗ್ ಉದ್ಯಮಗಳು . ಬೈಕಂಪಾಡಿ ಮತ್ತು ಯೆಯ್ಯಾಡಿ ಕೈಗಾರಿಕಾ ವಲಯಗಳು ಹಲವು ಸಣ್ಣ ಕೈಗಾರಿಕೆಗಳಿಗೆ ಮನೆಯಾಗಿದೆ . ನಗರವು ಆಗ್ನೇಯ ಏಷ್ಯಾದಿಂದ ಮರಮುಟ್ಟುಗಳನ್ನು ಆಮದು ಮಾಡುತ್ತಿದ್ದು , ಇದನ್ನು ಪೀಠೋಪಕರಣಗಳ ತಯಾರಿಕೆಗೆ ಬಳಸಲಾಗುತ್ತದೆ . ನಗರವು ದಕ್ಷಿಣ ಭಾರತಕ್ಕೆ ಮರಮುಟ್ಟುಗಳ ಪ್ರಮುಖ ಪ್ರವೇಶ ದ್ವಾರವೂ ಆಗಿದೆ . ಬೀಡಿ ತಯಾರಿಕೆ ಇಲ್ಲಿನ ಪ್ರಮುಖ ಗೃಹ ಕೈಗಾರಿಕೆ . ' ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್ ' , ' ಕುದ್ರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್ ' , ' ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ' , ' ಬಿ . ಎ . ಎಸ್ . ಎಫ್ ' , ' ಇ . ಎಲ್ . ಎಫ್ ಗ್ಯಾಸ್ ' ಇಲ್ಲಿನ ಪ್ರಮುಖ ಉದ್ದಿಮೆಗಳಲ್ಲಿ ಕೆಲವು . ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಾದ ಇನ್ಫೋಸಿಸ್ , ವಿಪ್ರೊ , ' ಎಂಫಾಸಿಸ್ ಬಿ . ಪಿ . ಒ ' ಹಾಗೂ ' ಫರ್ಸ್ಟ್ ಅಮೇರಿಕನ್ ಕೋರ್ಪೋರೇಷನ್ ' ಗಳು ನಗರದಲ್ಲಿ ಕೆಲಸವನ್ನು ಆರಂಭಿಸಿವೆ . [ ೧೯ ] ಮೂರು ಮೀಸಲು ಮಾಹಿತಿ ತಂತ್ರಜ್ಞಾನ ಪಾರ್ಕ್ ಗಳು ನಗರಕ್ಕೆ ಕಾಲಿಡುತ್ತಿದ್ದು , ಇವುಗಳಲ್ಲಿ ಎರಡು ಈಗಾಗಲೆ ನಿರ್ಮಾಣದ ಹಂತದಲ್ಲಿವೆ . ಗಂಜಿಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ ' ರಫ್ತು ಉತ್ತೇಜನ ಕೈಗಾರಿಕಾ ವಲಯ ' ಮೊದಲನೆಯದಾದರೆ , ಎರಡನೆಯದು ಮಂಗಳೂರು ವಿಶ್ವವಿದ್ಯಾನಿಲಯದ ಸಮೀಪದಲ್ಲಿ ನಿರ್ಮಿತವಾಗುತ್ತಿರುವ ' ಮಾಹಿತಿ ತಂತ್ರಜ್ಞಾನ ವಿಷೇಶ ಆರ್ಥಿಕ ವಲಯ ' . [ ೨೦ ] ಗಂಜಿಮಠದಲ್ಲಿ ಮೂರನೇ ' ಮಾಹಿತಿ ತಂತ್ರಜ್ಞಾನ ವಿಷೇಶ ಆರ್ಥಿಕ ವಲಯ ' ದ ನಿರ್ಮಾಣವನ್ನು ಪ್ರಸ್ಥಾಪಿಸಲಾಗಿದೆ . [ ೨೧ ] ಬಿ . ಎ . ಗ್ರೂಪ್ ನವರಿಂದ ೨೦ ಲಕ್ಷ ಚದರ ಫೀಟ್ ಗಳ ' ಮಾಹಿತಿ ತಂತ್ರಜ್ಞಾನ ವಿಷೇಶ ಆರ್ಥಿಕ ವಲಯ ' ವು ತುಂಬೆಯಲ್ಲಿ ನಿರ್ಮಾಣ ಹಂತದಲ್ಲಿದೆ . [ ೨೨ ] ತೈಲ ಮತ್ತು ಪ್ರಾಕೃತಿಕ ಅನಿಲ ನಿಗಮವು ( ಒ . ಎನ್ . ಜಿ . ಸಿ ) ' ಮಂಗಳೂರು ವಿಷೇಶ ಆರ್ಥಿಕ ವಲಯ ' ದಲ್ಲಿ ೧೫ ಮಿಲಿಯನ್ ಟನ್ನಿನ ಹೊಸ ಸಂಸ್ಕರಣಾಗಾರ , ಪೆಟ್ರೋಕೆಮಿಕಲ್ ಸ್ಥಾವರ ಹಾಗೂ ಶಕ್ತಿ ಮತ್ತು ಎಲ್ . ಎನ್ . ಜಿ ಸ್ಥಾವರಗಳ ಮೇಲೆ ೩೫ , ೦೦೦ ಕೋಟಿ ರೂಪಾಯಿಗಳ ಬಂಡವಾಳ ಹೂಡುವ ಬಗ್ಗೆ ಯೋಜನೆ ರೂಪಿಸಿದೆ . ಇದು ದೇಶದ ಪ್ರಥಮ ' ಪೆಟ್ರೋಲಿಯಮ್ , ಕೆಮಿಕಲ್ಸ್ , ಪೆಟ್ರೋಕೆಮಿಕಲ್ಸ್ ಇನ್ವೆಸ್ಟ್ ಮೆಂಟ್ ರೀಜನ್ ' ( PCPIR ) ಆಗಲಿದೆ . ಇಂತಹ ಇತರ ಪಿ . ಸಿ . ಪಿ . ಐ . ಆರ್ . ಗಳು ಪಶ್ಚಿಮ ಬಂಗಾಳದ ನಯಚಾರ್ ನಲ್ಲಿ , ಹರಿಯಾಣದ ಪಾಣಿಪತ್ ನಲ್ಲಿ ಹಾಗೂ ಆಂಧ್ರ ಪ್ರದೇಶದ ಅಚ್ಯುತಪುರಂನಲ್ಲಿವೆ . ' ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಮ್ ರಿಸರ್ವ್ಸ್ ಲಿಮಿಟೆಡ್ ' ಎಂಬ ' ಆಯಿಲ್ ಇಂಡಸ್ಟ್ರಿ ಡೆವಲಪ್ಮೆಂಟ್ ಬೋರ್ಡ್ ' ನ ವಿಷೇಶ ಘಟಕವು ಮಂಗಳೂರು ಹಾಗೂ ಭಾರತದ ಇತರ ಎರಡು ಸ್ಥಳಗಳಲ್ಲಿ ' ಕಚ್ಚಾತೈಲ ಸಂಗ್ರಹಣಾ ಸ್ಥಾವರ ' ಗಳನ್ನು ನಿರ್ಮಿಸಲು ನಿಶ್ಚಯಿಸಿದೆ . [ ೨೩ ] [ ೨೪ ] ಯೋಜಿತ , ವಾರ್ಷಿಕ ೫ ಮಿಲಿಯನ್ ಮೆಟ್ರಿಕ್ ಟನ್ನು ( ಎಮ್ . ಎಮ್ . ಟಿ . ಪಿ . ಎ ) ಸಂಗ್ರಹಣೆಯಲ್ಲಿ ೧ . ೫ ಎಮ್ . ಎಮ್ . ಟಿ . ಪಿ . ಎ ಮಂಗಳೂರಿನಲ್ಲಿಯೂ , [ ೨೫ ] ೧ . ೦ ಎಮ್ . ಎಮ್ . ಟಿ . ಪಿ . ಎ ವಿಶಾಖಪಟ್ಟಣದಲ್ಲಿಯೂ ಹಾಗೂ ೨ . ೫ ಎಮ್ . ಎಮ್ . ಟಿ . ಪಿ . ಎ ಮಂಗಳೂರಿನ ಸಮೀಪದ ಪಡೂರಿನಲ್ಲಿಯೂ ನಿರ್ವಹಿಸಲಾಗುತ್ತದೆ . ' ಇಂಡಿಯಾ ಟುಡೆ ' ಯ ಅಂತರಾಷ್ಟ್ರೀಯ ಸಂಪುಟದ ಅನುಸಾರ ಮಂಗಳೂರು ( ಕೊಚ್ಚಿಯ ನಂತರ ) ದಕ್ಷಿಣ ಭಾರತದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಾನ್ - ಮೆಟ್ರೊ ( ಮೆಟ್ರೋವಲ್ಲದ ) ನಗರವಾಗಿದೆ .
ಬ್ಯಾರಕ್ ಒಬಾಮಾ ರಾಜ್ಯದ 10 ಚುನಾಯಕರ ಮತವನ್ನು 2008ರಲ್ಲಿ ಪಡೆದು 61 . 9 % ಮತವನ್ನು ಪಡೆದಂತಾಯಿತು ಮತ್ತು ಜಾನ್ ಮ್ಯಾಕ್‌ಕೇನ್ಸ್ 36 . 5 % ರಷ್ಟು ಪಡೆದರು . ಮೇರಿಲ್ಯಾಂಡ್‌ನ ಇಬ್ಬರು U . S . ಸೆನೇಟರುಗಳು ಮತ್ತು ಕಾಂಗ್ರೆಸ್‌ನ ಎಂಟು ಪ್ರನಿಧಿಗಳಲ್ಲಿ ಏಳು ಜನರು ಡೆಮಾಕ್ರೆಟ್ ಪಕ್ಷಕ್ಕೆ ಸೇರಿದವರು ಮತ್ತು ರಾಜ್ಯದ ಸೆನೇಟ್‌ನಲ್ಲಿ ಹಾಗೂ ಹೌಸ್ ಆಫ್ ಡೆಲಿಗೇಟ್ಸ್‌ನಲ್ಲಿ ಡೆಮಾಕ್ರೆಟ್‌ಗಳು ಸೂಪರ್‌ಮೆಜಾರಿಟೀಸ್ ಗಳಾಗಿದ್ದಾರೆ . ಹಿಂದಿನ ಗವರ್ನರ್ ರಾಬರ್ಟ್ ಎಲ್ರಿಚ್ ನಲವತ್ತು ವರ್ಷಗಳಲ್ಲಿ ಮೊದಲ ಬಾರಿಗೆ ರಿಪಬ್ಲಿಕನ್ ಅಭ್ಯರ್ಥಿಯಾಗಿ ಚುನಾಯಿತರಾದರು , ಒಂದು ಅವಧಿಯ ನಂತರ ಡೆಮಾಕ್ರೆಟ್ ನ ಅಭ್ಯರ್ಥಿ ಬಾಳ್ಟಿಮೋರ್‌ನ ಮೇಯರ್ ಮಾರ್ಟಿನ್ ಜೆ . ಓ ಮ್ಯಾಲೀಯ್ ಗೆ ಸೋತರು .
ಇವತ್ತು ಇಲ್ಲಿ ಬರುವಾಗ ಮುರಳೀಧರ ಅವರು ಈ ಚಿತ್ರ ಕೊಟ್ಟರು . ಇದು ಗಾಂಧೀಜಿ 1934ರಲ್ಲಿ ಗಾಂಧೀಜಿ ಉದ್ಯಾವರದಲ್ಲಿ ಬಂದಾಗ ದೋಣಿಯಿಂದ ಇಳಿಯುವ ಚಿತ್ರ . ಮೊನ್ನೆ ತೀರ್ಥಹಳ್ಳಿಗೆ ಹೋದೆ . ಅಲ್ಲಿ ನನ್ನ ಸ್ನೇಹಿತ ಗಂಗಾಧರ ಅಂತ ಇದ್ದಾರೆ . ಅವರು ರಿಸರ್ಚ್ ಮಾಡುತ್ತಾ ಇದ್ದಾರೆ . ಗಾಂಧಿ ತೀರ್ಥಹಳ್ಳಿಗೆ ಬಂದಾಗಿನ ಪ್ಯಾಂಫ್ಲೆಟ್ ಹುಡುಕಿದ್ದಾರೆ . ತೀರ್ಥಹಳ್ಳಿು ಮಹಾನಾಗರಿಕರು ಹಾಕಿದ ಪ್ಯಾಂಫ್ಲೆಟ್ . ಅದರಲ್ಲಿ ಏನಿದೆ ಅಂದರೆ ' ಗಾಂಧೀಜಿ ಬರ್ತಾರೆ ಇಷ್ಟು ಹೊತ್ತಿಗೆ - ಯಾರೂ ಮಹಾತ್ಮಾ ಗಾಂಧೀಕಿ ಜೈ ಅಂತ ಕೂಗಬಾರದು . ಅವರನ್ನು ಮುತ್ತಿಗೆ ಹಾಕಬಾರದು . ಅವರ ಕೈ ಕುಲುಕಬಾರದು . ಅವರಿಗೆ ವಯಸ್ಸಾಗಿದೆ . ಸುಸ್ತಾಗುತ್ತದೆ . ಮತ್ತು ಜೈಕಾರ ಹಾಕಿದರೆ ಇಷ್ಟವಾಗುವುದಿಲ್ಲ ' . ಜೊತೆಗೇ ಗಾಂಧಿಗೆ ತೀರ್ಥಹಳ್ಳಿು ಜನರು ಕೊಟ್ಟ ಒಂದು ಅಹವಾಲೂ ಇದೆ . ಅದರ ಪ್ರಾಮಾಣಿಕತೆ ನನಗೆ ಇಷ್ಟವಾಯಿತು . ` ` ನಾವು ಸ್ವಲ್ಪ ಖಾದಿ ಮಾಡಿದ್ದೇವೆ . ಅದಕ್ಕೆ ದುಡ್ಡು ಕಲೆಕ್ಟ್ ಮಾಡಿದ್ದೇವೆ . ಆದರೆ ಅಸ್ಪಶ್ಯತಾ ನಿವಾರಣೆುಲ್ಲಿ ಏನೂ ಮಾಡಲಾಗಲಿಲ್ಲ . ನೀವು ಕ್ಷಮಿಸಬೇಕು . ' ' ಈ ಕಾಲದಲ್ಲಿ ಹೀಗೆ ಯಾರೂ ಸತ್ಯವನ್ನು ಬರೆದುಕೊಳ್ಳುವುದಿಲ್ಲ .
ನಮ್ಮ ಎಲ್ಲಾ ಸಾಮಾಜಿಕ ಚರ್ಚೆಗಳಲ್ಲಿ ಕೋಮುವಾದ , ಅಲ್ಪ ಸಂಖ್ಯಾತರ ಓಲೈಕೆ , ದಿಕ್ಕಿಲ್ಲದ ವಿಚಾರವಾದ , ಹಿಪಾಕ್ರಸಿಗಳು ತುಂಬಿ ಹೋಗಿವೆ . ಈ ಸಂದರ್ಭದಲ್ಲಿ ನಿಮ್ಮ ನೇರ ಅನಿಸಿಕೆಗಳಿಂದ ಕೂಡಿದ ಸಂಪಾದಕೀಯ ಮನಮುಟ್ಟುವಂತಿತ್ತು . ಹಿಂಸೆಗೆ , ಕ್ರೌರ್ಯಕ್ಕೆ ಯಾವ ಧರ್ಮವೂ ಇಲ್ಲ . ಬಣ್ಣವೂ ಇಲ್ಲ . ಅದನ್ನೆದುರಿಸಲು ಸರಕಾರಕ್ಕೂ ಯಾವ ಧರ್ಮ , ಜಾತಿಯ ಮುಖವಾಡವಿರಬಾರದು . ಈ ಸರಳ ಸತ್ಯವನ್ನು ನಮ್ಮ ರಾಜಕಾರಣಿಗಳು ಅದೆಂದು ಅರ್ಥ ಮಾಡಿಕೊಳ್ಳುತ್ತಾರೋ .
VTU ಸೈಟ್ ನಲ್ಲಿ ಯಾರೋ ಕೊಂಗ ಬರಿದಿರೋದು . ಅವರ ಭಾಷೆಯೇಲ್ಲಿ " ಶ " ಇಲ್ಲ . ಎಲ್ಲ ಕಡೆ " ಸ " ಉಪಯೋಗ ಮಾಡ್ತಾರೆ . ಇವ್ರಿಗೆ ಏನ್ ಬಂದಿದೆ ಅದನ್ನ ಸರಿ ಮಾಡೋಕೆ . ಇವ್ರಿಗೆ ಹೇಳಿ ಇದನ್ನ ಸೇರಿ ಮಾಡ್ಸ್ ಬೇಕು - ಪ್ರಶಾಂತ್
1738ರಲ್ಲಿ ನೆಹೆಮಯ್ಯ ' ರ ಪುತ್ರ ವಿಲಿಯಂ ಚಾಂಪಿಯನ್ ಪ್ರಥಮ ಔದ್ಯಮಿಕ ಮಟ್ಟದ ಜಿನುಗುವಿಕೆಯ ಡಿಸ್ಟಿಲೇಷನ್ ಪೆರ್ ಡೆಸ್ಸೆನ್‌ಕಮ್ ಅಥವಾ ' ದ ಇಂಗ್ಲಿಷ್ ಪ್ರೋಸೆಸ್ ' ಎಂದು ಹೆಸರಾದ ಲೋಹಕಾಂತೀಯ ಸತು / ಸತುವುವಿನ ಜಿನುಗುವಿಕೆಯ ಹಕ್ಕುಸ್ವಾಮ್ಯ ಪಡೆದರು . [ ೮೭ ] ಈ ಸ್ಥಳೀಯ ಸತು / ಸತುವುವನ್ನು ಸ್ಪೆಲ್ಟರಿಂಗ್‌ನಲ್ಲಿ ಬಳಸಲಾಗುತ್ತಿತ್ತು ಹಾಗೂ ಇದು ಹಿತ್ತಾಳೆಯಲ್ಲಿನ ಸತು / ಸತುವುವಿನ ಅಂಶದ ಬಗ್ಗೆ ಹಾಗೂ ಸಿಮೆಂಟೀಕರಣದ ಮೂಲಕ ಅಸಾಧ್ಯ ಇಲ್ಲವೇ ಕಷ್ಟಸಾಧ್ಯವೆನಿಸಿದ ವೈಜ್ಞಾನಿಕ ಉಪಕರಣಗಳು , ಗಡಿಯಾರಗಳು , ಹಿತ್ತಾಳೆ ಗುಂಡಿಗಳು ಹಾಗೂ ವೇಷಭೂಷಣ ಆಭರಣಗಳ ತಯಾರಿಕೆಯಲ್ಲಿ ಬಳಸಬಹುದಾದ ಅಧಿಕ ಸತು / ಸತುವು ಹೊಂದಿರುವ ತಾಮ್ರ ಮಿಶ್ರಲೋಹಗಳ ತಯಾರಿಕೆಯಲ್ಲಿ ಅಧಿಕ ನಿಯಂತ್ರಣ ಪಡೆಯುವಂತೆ ಮಾಡಿತ್ತು . [ ೮೮ ] ಆದಾಗ್ಯೂ ಚಾಂಪಿಯನ್ ಅಲ್ಪ ಪ್ರಮಾಣದ ಸತು / ಸತುವು ಹೊಂದಿರುವ ಹಿತ್ತಾಳೆಯನ್ನು [ ೮೮ ] ತಯಾರಿಸಲು ಅಗ್ಗದ ಸತುವಿನ ಕಾರ್ಬೋನೇಟ್ ಸಿಮೆಂಟೀಕರಣ ವಿಧಾನವನ್ನೇ ಮುಂದುವರೆಸಿದರಲ್ಲದೇ ಜೇನುನೊಣದ ಗೂಡಿನ ಆಕೃತಿಯ ಸಿಮೆಂಟೀಕರಣ ಮೂಸೆಗಳ ಪುರಾತತ್ವಶಾಸ್ತ್ರೀಯ ಉಳಿಕೆಗಳು ವಾರ್ಮ್ಲೆಯಲ್ಲಿನ ಅವರ ಕಾರ್ಯಪ್ರದೇಶದಲ್ಲಿ ಪತ್ತೆಯಾಗಿವೆ . [ ೮೯ ] 18ನೇ ಶತಮಾನದ ಅಂತಿಮ ಭಾಗದ ಮಧ್ಯದಲ್ಲಿ ಅಗ್ಗದ ಸತು / ಸತುವುವಿನ ಜಿನುಗುವಿಕೆಯ ಬೆಲ್ಜಿಯಂನ ಜಾನ್ - ಜಾಕ್ವಿಸ್ - ಡೋನಿಯ ಸಮತಲೀಯ ಮೂಸೆಗಳು ಜನಪ್ರಿಯಗೊಂಡು ಹಾಗೂ ಸತು / ಸತುವುವಿನ [ ೯೦ ] ಮೇಲಿನ ತೆರಿಗೆಗಳು ಜೊತೆಗೆ ಕಿಲುಬುನಿರೋಧಕ ಅಧಿಕ ಸತು / ಸತುವುವಿನಂಶದ ಮಿಶ್ರಲೋಹಗಳ ಬೇಡಿಕೆ ಹೆಚ್ಚಿದ್ದು ಸ್ಪೆಲ್ಟರಿಂಗ್‌ನ ಜನಪ್ರಿಯತೆ ಹೆಚ್ಚಲು ಕಾರಣವಾಯಿತಲ್ಲದೇ ಇದರ ಪರಿಣಾಮವಾಗಿ ಸಿಮೆಂಟೀಕರಣವನ್ನು 19ನೇ ಶತಮಾನದ ಮಧ್ಯಧ ಹೊತ್ತಿಗೆ ಬಹುಮಟ್ಟಿಗೆ ತ್ಯಜಿಸಲಾಗಿತ್ತು . [ ೯೧ ]
ಮೇರಿಲ್ಯಾಂಡ್‌ನ ಭಾಗಗಳನ್ನು ವಿವಿಧ ಅಧಿಕೃತ ಮತ್ತು ಅನಧಿಕೃತ ಭೌಗೋಳಿಕ ಪ್ರದೇಶಗಳಿಗೆ ಸೇರಿಸಲಾಗಿದೆ . ಉದಾಹರಣೆಗೆ , ದೆಲ್ಮಾರ್ವಾ ಪೆನಿನ್‌ಸುಲ್ಲಾವು ಮೇರಿಲ್ಯಾಂಡ್‌ನ ಪೂರ್ವದ ಕಡಲತೀರಕ್ಕಿರುತ್ತದೆ , ಸಮಗ್ರ ದೆಲಾವೇರ್‌ನ ರಾಜ್ಯ ಮತ್ತು ಈಸ್ಟರ್ನ್ ಶೋರ್ ಆಫ್ ವರ್ಜಿನಿಯಾ ಎಂದಾಗುವ ಎರಡು ಪ್ರಾಂತಗಳು , ಮೇರಿಲ್ಯಾಂಡ್‌ನ ಪಶ್ಚಿಮ ತೀರದ ಪ್ರಾಂತಗಳನ್ನು ಅಪ್ಪಾಲಾಚಿಯಾದ ಭಾಗವೆಂದು ಪರಿಗಣಿಸಲಾಗಿದೆ . ಕರಾವಳಿ ಭೂಮಿಯ ಪೀಡ್ಮಾಂಟ್ ದಕ್ಷಿಣಕ್ಕೆ ಬಾಲ್ಟಿಮೋರ್ - ವಾಷಿಂಗ್ಟನ್ ಕಾರಿಡಾರ್‌ನ ಅನೇಕ ಸ್ಥಳವು ಇದೆ [ ೧೧ ] ಆದಾಗ್ಯೂ ಅದು ಎರಡು ಗಡಿಗಳ ನಡುವೆ ಸವಾರಿ ಮಾಡಿದಂತೆ ಇದೆ .
ಹಿಂದೆ ಚಿತ್ರದಲ್ಲಿ ಧ್ವನಿ ಬಳಕೆಯ ಕುರಿತಾಗಿ ಬರೆದಿದ್ದೆ . ಇತ್ತೀಚೆಗೆ ಧ್ವನಿಯಲ್ಲಿ ಪ್ರಯೋಗಗಳನ್ನು ಮಾಡುತ್ತಿರುವವರ ಬಗ್ಗೆ ಅಂತರ್ಜಾಲದಲ್ಲಿ ಹುಡುಕುತ್ತಿರಬೇಕಾದರೆ , ಒಂದು ಕುತೂಹಲಕಾರೀ ಪ್ರಯೋಗದ ಕುರಿತಾಗಿ ತಿಳಿದು ಬಂತು . eepeepeepep ಎಂಬ ಒಂದು ವೆಬ್ ಸೈಟ್ ಇದೆ . ( ಅದನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ ) ದಿನ ನಿತ್ಯ ಕೇಳಿಬರುವ ಅನೇಕ ಬಗೆಯ ಅಲಾರಾಂ ಧ್ವನಿಗಳನ್ನೇ ಬಳಸಿಕೊಂಡು ಸಂಗೀತ ಸಂಯೋಜನೆ ಮಾಡಿರುವ … Continue reading →
ಕಳೆದ 1955ರಲ್ಲಿ , ಕಾರ್ಡಿಫ್ ನ್ನು ರಾಜಧಾನಿ ಯೆಂದು ಘೋಷಿಸಲಾಯಿತು , ಜೊತೆಗೆ 1999ರಲ್ಲಿ ನ್ಯಾಷನಲ್ ಅಸೆಂಬ್ಲಿ ಫಾರ್ ವೇಲ್ಸ್ ನ ಸ್ಥಾಪನೆಯಾಯಿತು . ಇದು ಹಸ್ತಾಂತರಗೊಂಡ ವಿಷಯಗಳ ಬಗ್ಗೆ ಜವಾಬ್ದಾರಿಯನ್ನು ವಹಿಸುತ್ತದೆ .
ನನ್ನ ಈ ಹೆದರಿಕೆಗೆ ದಿನಮಾನಗಳು ಬೆದರೋ ಹಕ್ಕಿಗಳು , ಅಳುವ ಹೃದಯಗಳು ದಿಕ್ಕಿಲ್ಲದೆ ಅದುರುವ ಹಣೆಗೆರೆಗಳು ಕಾರಣ ಎಂಬ ಮಾತಿದೆ . ನಿಜವಿರಬಹುದು .
ಖೇತಾನ್ ಲಿಮಿಟೆಡ್ ನಲ್ಲಿ 70 ಷೇರುಗಳು ಶಿಕಾರಿಪುರ ಅರ್ಬನ್ ಬ್ಯಾಂಕ್ 100 ಷೇರುಗಳು
ಅಷ್ಟಕ್ಕೂ ನಮ್ಮ ನಾಯಕರಿಗಂತೂ ಪಾಕಿಸ್ತಾನಕ್ಕೆ ಬಾಯಿಮಾತಿನಲ್ಲಿ ಎಚ್ಚರಿಕೆ ಕೊಡುವ ತಾಕತ್ತೇ ಇಲ್ಲ , ಬಾಂಗ್ಲಾದೇಶದಂತಹ ಮುಷ್ಟಿ ಗಾತ್ರದ ದೇಶ ಎಷ್ಟೆಲ್ಲಾ ಉಪದ್ರವ ಕೊಟ್ಟರೂ ಒಂದು ಗಟ್ಟಿ ಹೇಳಿಕೆ ಕೊಡುವ ಧೈರ್ಯ ತೋರುವುದಿಲ್ಲ . ಕೆಲವೊಮ್ಮೆ ' ಆರ್ ಯಾ ಪಾರ್ ' , ' ಆಪರೇಶನ್ ಪರಾಕ್ರಮ್ ' ಎನ್ನುತ್ತಾ ಗಡಿಯಲ್ಲಿ ತಿಂಗಳುಗಟ್ಟಲೆ ಸೇನೆಯನ್ನು ನಿಯೋಜನೆ ಮಾಡಿದರೂ ಪಾಕಿಸ್ತಾನದ ಮೇಲೆ ದಾಳಿ ಮಾಡುವ ಎದೆಗಾರಿಕೆ ತೋರುವುದಿಲ್ಲ . ಇಂತಹವರನ್ನು ನಂಬಿಕೊಂಡು ಕುಳಿತು ಕೊಳ್ಳುವುದಕ್ಕಿಂತ ಅಮೆರಿಕದ ಮೇಲೆ ವಿಶ್ವಾಸವಿಡುವುದೇ ಒಳಿತು ಅಲ್ಲವೆ ? !
4 . ಮಾಧವ ವಿಧ್ಯಾರಣ್ಯ . . ನನಗೆ ವಿಧ್ಯಾರಣ್ಯ ಎಂದಷ್ಟೇ ಪರಿಚತ . ಬಿಡಿಸಿದ್ದಕ್ಕೆ ಥ್ಯಾಂಕ್ಸ್ .
ಅಲ್ಪ ಹಾಗೂ ಪೂರ್ಣವಿರಾಮಗಳೆಂದರೆ , ರಸ್ತೆ ಬದಿಯಲ್ಲಿರುವ ಸೂಚನಾ ಫಲಕಗಳಿದ್ದಂತೆ . ಅವುಗಳಿಲ್ಲದ ರಸ್ತೆಗಳನ್ನು ಕಲ್ಪಿಸಿಕೊಳ್ಳಿ . ಅಪಘಾತ ಗ್ಯಾರಂಟಿ . ಹಾಗೆಯೇ ಈ ಸಂಕೇತಾಕ್ಷರಗಳಿಲ್ಲದಿದ್ದರೂ ಓದುವಾಗ , ಓದಿದ್ದನ್ನು ಅರ್ಥೈಸಿಕೊಳ್ಳುವಾಗ ನಾವು ಎಡವುವುದು , ಮುಗ್ಗರಿಸುವುದು ನಿಶ್ಚಿತ .
' ಬ ' ನ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿತು . ' ಫ ' ನ ಸಾವಿನಿಂದಾಗಿ ಆತ ದಿನವೂ ಕುಳಿತುಕೊಳ್ಳುತ್ತಿದ್ದ ಕಿಟಕಿಯ ಬಳಿಯ ಜಾಗ ಈಗ ಖಾಲಿಯಾಗಿತ್ತು . ಈತನ ಮನಸ್ಸೂ ಕೂಡ . ' ಬ ' ತನ್ನ ಆರೋಗ್ಯ ಸ್ವಲ್ಪ ಸುಧಾರಣೆಯಾದ ನಂತರ ಆ ನರ್ಸ್ ಬಳಿ ಕೇಳಿದ - ತಾನು ' ಫ ' ಕುಳಿತುಕೊಳ್ಳುತ್ತಿದ್ದ ಜಾಗದಲ್ಲಿ ಸ್ವಲ್ಪ ಕಾಲ ಕುಳಿತುಕೊಳ್ಳಬಹುದೇ ? ಎಂದು . ಇದರಿಂದ ಸಂತಸಗೊಂಡ ಆಕೆ ಅದಕ್ಕೆ ಬೇಕಾದ ಏರ್ಪಾಟನ್ನು ಮಾಡಿ , ಕಿಟಕಿಯ ಹತ್ತಿರ ತಂದು ' ಬ ' ನನ್ನು ಏಕಾಂಗಿಯಾಗಿ ಬಿಟ್ಟು ಹೊರಟುಹೋದಳು .
ಕನ್ನಡ ಪತ್ರಿಕೆಗಳಿಗೇನು ಬರ ? ! ! ಪ್ರಜಾವಾಣಿ , ಕನ್ನಡ ಪ್ರಭ , ವಿಜಯ ಕರ್ನಾಟಕ , ಉದಯವಾಣಿ , ಸಂಯುಕ್ತ ಕರ್ನಾಟಕ , ಸಂಜೆವಾಣಿ , ಟೈಂಸ್ ಆಫ್ ಇಂಡಿಯಾ ಇತ್ಯಾದಿ ದಿನ ಪತ್ರಿಕೆಗಳು . ಸುಧಾ , ತರಂಗ , ಮಯೂರ , ತುಷಾರ ಇತ್ಯಾದಿ ನಿಯತಕಾಲಿಕೆಗಳು ಇವೆ . ಸುದ್ದಿಗಳನ್ನು ಅವರದ್ದೇ ಆದ ಶೈಲಿಯಲ್ಲಿ ಕೊಡುವದರಲ್ಲಿ ಎಲ್ಲರದ್ದೂ ಎತ್ತಿದ ಕೈ .
ಆತ್ಮೀಯ ಅ೦ತೂ ನಾನೂ ದುಬೈ ಡೆಸರ್ಟ್ ಸಾಫಾರಿ ಮಾಡಿ ಬ೦ದೆ . ಶೈಲಿ ಸೂಪರ್ ನಕ್ಕು ನಕ್ಕು ಸಾಕಾಯ್ತು ಹರಿ
ನಾವುಗಳು ಅತಿ ಮುಂದುವರೆಯುತ್ತ ಸಾಮಾನ್ಯವಾಗಿ ಅತಿ ಚಿಕ್ಕ ಚಿಕ್ಕ ವಿಷಯಗಳನ್ನು ಬಿಟ್ಟು ಕೊಡುತ್ತಾ , ಹೋಗುತ್ತಾ ನಗಣ್ಯಗೊಳಿಸುತ್ತಿರುವುದು ಮುಂದೊಂದು ದಿನ ಈ ನಮ್ಮ ಗಟ್ಟಿ ಕೌಟಂಬಿಕ ಬೇರನ್ನೇ ಅಲ್ಲಾಡಿಸುವ ದಿನಗಳು ಬರುವ ಮುನ್ಸೊಚನೆಯಾಗಿದೆ . ಹಾಗೆಯೇ ಕಾದಂಬರಿಯಲ್ಲಿ ಬರುವ ಇತ್ತೀಚಿನ ನವ ತರಣ / ತರುಣಿ ಜನಾಂಗ ನಮ್ಮ ಇಂದಿನ ಸ್ಥಿತಿಯ ಬಗ್ಗೆ ಅರಿವುಗೊಂಡು ಅದಕ್ಕಾಗಿ ನಮ್ಮ ಹಳ್ಳಿಯ ಕುಟುಂಬ ಮತ್ತು ಸಂಬಂಧಗಳ ವ್ಯವಸ್ಥೆಯನ್ನು ನೋಡಿ ಅದರ ನವೀಕರಣಕ್ಕೆ ಮತ್ತು ರಕ್ಷಣೆಗೆ ಮುಂದಾಗುತ್ತಿರುವುದು ಆಶದಾಯಕವಾದ ವಿಷಯ .
ಒಟ್ಟಾರೆ , " ಗಾಳಿಪಟ " ಪ್ರಯೋಗಾತ್ಮಕ , ಮನೋರಂಜನಾತ್ಮಕ ಚಿತ್ರ . ಕೊಟ್ಟ ದುಡ್ಡಿಗೆ ಮೋಸವಿಲ್ಲದ ಚಿತ್ರ . ಎರಡು ಗಂಟೆಗಳ ಕಾಲ ಕಣ್ಮನ ತಣಿಸುವ ದ್ರುಶ್ಯಗಳಿಂದ , ಹಾಸ್ಯದಿಂದ ನಿಮ್ಮ ನಿರೀಕ್ಷೆ ಹುಸಿ ಮಾಡುವುದಿಲ್ಲ .
ಒಂದ್ನಿಮಿಷ ಸುಮ್ಮನೆ ಕಣ್ಮುಚ್ಚಿಕೊಳ್ಳಿ , , ನಿಮಗೂ ಕೇಳಿಸುತ್ತದೆ , ಪರಿಮಳವೂ ಬರುತ್ತದೆ . . ಹಾಂ ನೋಡಿ ಈಗ ನಿಮ್ಮ ಮುಖದಲ್ಲು ಅರಳಿ ನಿಂತಿದೆ . .
ಫೋಕ್ಸ್ ವ್ಯಾಗನ್ ವೆಂಟೊ ರಸ್ತೆಗಿಳಿದು ಕೇವಲ ಎಂಟು ತಿಂಗಳು ಕಳೆದಿರುವುದಷ್ಟೇ . ಕಳೆದ ಹಲವು ವರ್ಷಗಳಿಂದ ರಸ್ತೆಯಲ್ಲಿ ಮಿಂಚುತ್ತಿದ್ದ ಹೋಂಡಾ ಸಿಟಿಯನ್ನು ಓವರ್ ಟೆಕ್ ಮಾಡಿ ವೆಂಟೊ ಮುಂದಡಿಯಿಟ್ಟಿದೆ . ಕಳೆದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಫೋಕ್ಸ್ ವ್ಯಾಗನ್ ಕಂಪನಿಯು ಸುಮಾರು 6 , 839 ವೆಂಟೊ ಕಾರುಗಳನ್ನು ಮಾರಾಟ ಮಾಡಿದೆ . ಆದರೆ ಇದೇ ಅವಧಿಯಲ್ಲಿ ಹೋಂಡಾ ಸಿಟಿ ಕೇವಲ 4 , 315
ದೇವಕಿಗೆ ಹಾಗೆಲ್ಲಾ ಹೇಳಿದರೆ ಅರ್ಥವಾಗುವುದಿಲ್ಲ ವಾಸು . . . ಹೇಳಲಾಗದೆ ತಕ್ಕಡಿಯಲ್ಲಿ ತೂಗಿದ ಮಾತುಗಳು ಮೌನ ಬೆಳದಿಂಗಳಾಗಿ ಅವಳ ಕೆನ್ನೆ , ಮುಂಗುರುಳು ಸವರುವವರೆಗೆ . . ಅದರ ಘಾಡತೆ ಅವಳಿಗೆ ತಟ್ಟುವುದಿಲ್ಲ . . . ; )
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಭೂಮಿಯ ಕೊರತೆ ಇದ್ದು , ರಾಜ್ಯದ ಹೆಬ್ಬಾಗಿಲಿನಂತಿರುವ ತುಮಕೂರು ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿಗೆ ವಿಫುಲ ಅವಕಾಶ ಇರುವುದನ್ನು ಮನಗಂಡು ಜಿಲ್ಲಾಡಳಿತ , ಜಿಲ್ಲಾ ಕೈಗಾರಿಕಾ ಕೇಂದ್ರ , ಕೆ . ಐ . ಎ . ಡಿ . ಬಿ ಮತ್ತು ಕೆ . ಎಸ್ . ಎಸ್ . ಐ . ಡಿ . ಸಿ ಇಲಾಖೆಗಳು ಸುಮಾರು ೬೦೦೦ ಎಕರೆ ಪ್ರದೇಶವನ್ನು ಕೈಗಾರಿಕಾ ವಲಯವನ್ನಾಗಿ ಘೋಶಿಸಲು ಮುಂದಾಗಿರುವ ಕ್ರಮವನ್ನು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಸ್ವಾಗತಿಸಿದ್ದಾರೆ . ತುಮಕೂರು ಜಿಲ್ಲೆಯ ನಿರುದ್ಯೋಗಿಗಳು ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗಬೇಕಿದೆ . ಜಿಲ್ಲಾಡಳಿತ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ಸ್ವಯಂ ಉದ್ಯೋಗ ಕೈಗೊಳ್ಳುವವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಸಮರೋಪಾದಿಯಲ್ಲಿ ಒದಗಿಸಬೇಕಿದೆ . ಆದರೆ ಜಿಲ್ಲೆಯ ನಿರುದ್ಯೋಗಿಗಳು ಕೈಗಾರಿಕೆಗಳನ್ನು ಸ್ಥಾಪಿಸಲು ಮುನ್ನುಗದೆ ಇರುವುದು ವಿಪರ್ಯಾಸ ಎಂದಿದ್ದಾರೆ . ಈಗಲಾದರೂ ನಿರುದ್ಯೋಗಿಗಳು ಸದುಪಯೋಗ ಪಡಿಸಿಕೊಳ್ಳಲು ಫೋರಂ ಕರೆ ನೀಡಿದೆ . ತುಮಕೂರು ತಾಲೂಕಿನ ವಸಂತನರಸಾಪುರದ ೧ ನೇ ಹಂತದಲ್ಲಿ ೭೮೨ . ೨೨ ಎಕರೆ , ೨ ನೇ ಹಂತದಲ್ಲಿ ಸುಮಾರು ೨೭೫೦ ಎಕರೆ , ಶಿರಾ ತಾಲೂಕು ಭುವನಹಳ್ಳಿಯಲ್ಲಿ ೧೦೦೦ ಎಕರೆ , ತಿಪಟೂರು ತಾಲೂಕು ಮಾದೀಹಳ್ಳಿಯಲ್ಲಿ ೨೧೧ . ೩೫ ಎಕರೆ , ಕುಣಿಗಲ್ ನ ೩ ನೇ ಹಂತದಲ್ಲಿ ೫೦೦ ಎಕರೆ ಮತ್ತು ಗುಬ್ಬಿ ತಾಲೂಕು ಬಿದರೆಹಳ್ಳ ಕಾವಲ್ ನಲ್ಲಿ ೮೬೩ . ೧೨ ಎಕರೆ ಭೂಮಿ ಸೇರಿದಂತೆ ಒಟ್ಟು ೬೧೦೭ ಎಕರೆ ಭೂಮಿಯನ್ನು ಕೈಗಾರಿಕಾ ವಲಯವನ್ನಾಗಿ ಘೋಶಿಸಿರುವುದರಿಂದ ಶೀಘ್ರವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲು ಆಗ್ರಹ ಪಡಿಸಿದ್ದಾರೆ . ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಕೈಗಾರಿಕಾ ಅಭಿವೃದ್ಧಿಗೆ ಲಾಭಿ ನಡೆಸಬೇಕಿದೆ . ವಿಶೇಷವಾಗಿ ಜಿಲ್ಲೆಯ ಸಂಸತ್ ಸದಸ್ಯರುಗಳಾದ ಜಿ . ಎಸ್ . ಬಸವರಾಜ್ , ಹೆಚ್ . ಡಿ . ಕುಮಾರಸ್ವಾಮಿ ಮತ್ತು ಜನಾರ್ಧನಸ್ವಾಮಿಯವರು ಒಗ್ಗಟ್ಟಾಗಿ ಶ್ರಮಿಸಿ ಕೇಂದ್ರ ಸರ್ಕಾರ ಸ್ವಾಮ್ಯದ ಬೃಹತ್ ಯೋಜನೆಗಳನ್ನು ಜಾರಿಗೊಳಿಸಲು ಒತ್ತಾಯಿಸಿದ್ದಾರೆ . ಜಿಲ್ಲಾಡಳಿತ ರಾಷ್ಟ್ರದ ಮತ್ತು ಅನಿವಾಸಿ ಭಾರತೀಯ ಕೈಗಾರಿಕೋದ್ಯಮಗಳನ್ನು ಆಹ್ವಾನಿಸಿ ಬೃಹತ್ ಯೋಜನೆಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಲು ಬೃಹತ್ ಆಂದೋಲನವನ್ನೇ ಕೈಗೊಳ್ಳಬೇಕಾಗಿದೆ . ಜಿಲ್ಲಾ ಉಸ್ತುವಾರಿ ಸಚಿವ ಎಸ್ . ಸುರೇಶ್ ಕುಮಾರ್ , ರೇಷ್ಮೆ ಮತ್ತು ಸಣ್ಣ ಕೈಗಾರಿಕಾ ಸಚಿವ ವೆಂಕಟರಮಣಪ್ಪ , ಜಿಲ್ಲಾಧಿಕಾರಿ ಡಾ | | ಸಿ . ಸೋಮಶೇಖರ್ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಪರಮೇಶ್ವರಪ್ಪನವರು ಪಾತ್ರ ಮಹತ್ತರವಾಗಿದೆ ಎಂದಿದ್ದಾರೆ .
ಹೇಳಿ ಕೇಳಿ ರವಿ ಬೆಳೆಗೆರೆ ಹೇಳಿ ಕೇಳಿ ಅನ್ನೋ ಅವರ ಹಾಯ್ ಬೆಂಗಳೂರು ಪತ್ರಿಕೆಯ ಅಂಕಣದಲ್ಲಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿ ಉತ್ತರಿಸಿ ಏನೇ ಪ್ರಶ್ನೆ ಕೇಳಿದರು ತಟ್ಟನೆ ಉತ್ತರಿಸಿ ಬಿಡುತ್ತಾರೇನೋ ರವಿ . . ಉತ್ತಮ ಪ್ರಶ್ನೆಗಳು . . ಅದರೂ ಸಿಗರೇಟಿನ ಬಗ್ಗೆಯೇ ಜಾಸ್ತಿ ಕೇಳಿದ್ದೀರಿ ಯಾಕೆ ಅಂತ ಗೊತ್ತಾಗಲಿಲ್ಲ ? ಕೇಳಿ ಅಂಕಣ ಓದಿದಷ್ಟೇ ಕುಷಿ ಆಯಿತು
ವಾರಕ್ಕೆ ಎರಡು ಅಥವಾ ಮೂರು ಸಲ ಮಾಡಿಕೊಂಡು , ಪಕ್ಕದವರನ್ನು ಅಸೂಯೆಗೊಳಿಸಿ .
ಭಾಗಿಯಾಗಿದ್ದವರು ಹಳದಿ ಅಂಟಿನ ಬಲೆಗೆ ಸ್ಥಳಿಯ ಪರ್ಯಾಯವನ್ನು ಕಂಡುಕೊಂಡರು . ತೆಂಗಿನ ಕರಟ ವನ್ನು ಸಂಗ್ರಹಿಸಿ ಹಳದಿಬಣ್ಣ ಬಳಿದರು . ಹೊರ ಮೈಗೆ ಹರಳೆಣ್ಣೆ ಹಚ್ಚಿದರು . ಇದರಿಂದ ಕೀಟಗಳನ್ನು ಹಿಡಿಯುವದು ಸಾಧ್ಯವಾಯಿತು . ಹರಳೆಣ್ಣೆಯನ್ನು ಪ್ರತಿ 3 - 4 ದಿನಗಳಿಗೆ ಒಮ್ಮೆ ಹಚ್ಚುವುದರಿಂದ ಕೀಟಗಳನ್ನು ಪರಿಣಾಮಕಾರಿಯಾಗಿ ಹಿಡಿಯಬಹುದಾಗಿತ್ತು .
ಅದಕ್ಕೆ ಸುಬ್ಬ ಈಗಿನ್ನ ಮದುವೇ ಆಗಿದೆ , ಇನ್ನು ಫ್ಲ್ಯೆಟ ಸಹಿತ ಬುಕ್ ಮಾಡಿಲ್ಲ ಎಂದ .
ಈ ವರ್ಷ ರಾಜ್ಯದ ಸುಮಾರು ೮೦೦ಕ್ಕೂ ಮಿಕ್ಕಿ ಹಜ್ ಯಾತ್ರಾರ್ಥಿಗಳು ಹೆಚ್ಚುವರಿ ಖೋಟಾದಲ್ಲಿ ಆಯ್ಕೆ ಗೊಂಡು ಹಜ್ ಕರ್ಮವನ್ನು ನಿರ್ವ ಹಿಸಲು ಬೇಕಾಗುವ ಪ್ರಯಾಣ ವೆಚ್ಚ ವನ್ನು ಪಾವತಿಸಿ ಇನ್ನೇನು ಪ್ರಯಾಣ ಕ್ಕಾಗಿ ವಿಮಾನ ದಿನಾಂಕದ ನಿರೀಕ್ಷೆ ಯಲ್ಲಿರುವಾಗ ಇವರ ಪೈಕಿ ಸುಮಾರು ೪೦೦ಕ್ಕೂ ಮಿಕ್ಕಿ ಹಜ್ ಯಾತ್ರಿಕರ ಪ್ರಯಾಣವು ಕೊನೆಕ್ಷಣದಲ್ಲಿ ರದ್ದು ಗೊಂಡು ತೀವ್ರ ನಿರಾಶೆ ಅನುಭವಿ ಸುವಂತಾಗಿದೆ ಎಂದು ದ . ಕ . ಜಿಲ್ಲಾಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ವಕ್ತಾರ ನ್ಯಾಯವಾದಿ ಸಾಲ್ಮರ ನೂರುದ್ದೀನ್ ತಿಳಿಸಿದ್ದಾರೆ .
ಅಬ್ಬಾ . . ಕಾಲು ನೀಡಿಕೊಂಡು ಆರಾಮ ಸಂಪದ ಓದುತ್ತಿದ್ದೆ . ಈಗ ಕುರ್ಚಿ ಮೇಲೆ ಕಾಲು ಮಡಚಿ ಕುಳಿತುಕೊಳ್ಳುವ ಹಾಗೆ ಮಾಡಿದಿರಿ . . - ಗಣೇಶ .
ಸಹಜ . ಆತ ಪೊಲೀಸ್ ಆಗಿರಲಿ ಎಂದೇ ಬಯಸುತ್ತೇವೆ . ಎಲ್ಲದಕ್ಕೂ ಉತ್ತರ ಅಲ್ಲಿಯೇ ಇದೆ . ಎಷ್ಟೇ ಕೆಟ್ಟವರಿರಲಿ , ಪೊಲೀಸರಿಗೆ ಕಾನೂನಿನ ತಡೆಯಿರುತ್ತದೆ . ಆತನನ್ನು ನಿಯಂತ್ರಿಸುವುದು ಕಷ್ಟವಲ್ಲ . ಆದರೆ ಕಾನೂನೇ ಇಲ್ಲದ ಗೂಂಡಾಗಳು ಹಾಗಲ್ಲ . ದುರತವೆಂದರೆ ಅಂಥವರು ಈಗ ಖಾದಿ ಧರಿಸಿ , ನಮ್ಮನ್ನೇ ಆಳುವಂತಾಗಿದ್ದಾರೆ !
ಭಾರತ , ಆಫ್ರಿಕಾದವರು ಮಾತ್ರವೇಕೆ ಹಾಸ್ಯಪ್ರe ಇರುವ ಯಾರು ತಾನೇ ಬುಷ್ ಅವರನ್ನು ಇಷ್ಟಪಡುವುದಿಲ್ಲ ನೀವೇ ಹೇಳಿ ? !
ಅಷ್ಟವಿಧ ನಾಯಿಕೆಯರ ಪೈಕಿ ಸ್ಥಿತಿ - ಸಂದರ್ಭಾನುಸಾರ ವರ್ಗೀಕರಿಸಿದರೆ ಮೊದಲನೆಯವಳೇ - ಪ್ರೋಷಿತ ಪತಿಕಾ . ತನ್ನ ಪತಿ ಅಥವಾ ಪ್ರಿಯನು ಕಾರ್ಯಾರ್ಥವಾಗಿ ದೂರದೂರಿಗೆ ಹೋಗಿರುವಾಗ ಅಥವಾ ದೂರದೇಶಕ್ಕೆ ಪ್ರಯಾಣಸನ್ನದ್ಧವಾಗಿರುವಾಗ ಅವನ ವಿಯೋಗಕ್ಕಾಗಿ ವ್ಯಥೆಪಡುವವಳು . ಪ್ರಿಯನ ಹಾದಿ ಕಾಯುತ್ತಾ ಕುಳಿತುಕೊಳ್ಳುವುದು , ಎಂದಿಗೆ ಬರುವನು ಎಂಬ ನಿರೀಕ್ಷೆಯಲ್ಲಿ ದಿನಗಣನೆ , ಶಕುನ ನೋಡುವುದು , ಆತನ ಕಷ್ಟ - ಇಷ್ಟಗಳ ಬಗೆಗೆ ಯೋಚನೆಗಳು , ನಿದ್ರೆ ಇಲ್ಲದಿರುವುದು , ದುಃಸ್ವಪ್ನಗಳು , ಅನಾಸಕ್ತಿ , ನಿಂತ ಕಡೆ ನಿಲ್ಲದಿರುವುದು , ಏನೂ ತೋಚದಂತಾಗಿರುವುದು , ದಿನ ಮುಗಿದು ಕತ್ತಲಾವರಿಸಿದಾಗ ಭಾರವಾದ ಹೆಜ್ಜೆಯಿಂದ ತನ ಕೆಲಸಗಳನ್ನು ಬೇಕೂ ಬೇಡದಂತೆ ಮಾಡುವುದು ಇತ್ಯಾದಿ ಸಂದರ್ಭಗಳು ಈಕೆಯ ಅವಸ್ಥೆಗಳು .
ಹೆಚ್ಚಿನ ಓದು : ಬೆಂಗಳೂರಲ್ಲಿ ಲಿನಕ್ಸ್ ಹಬ್ಬ : ನೀವೂ ಬನ್ನಿ ! ಬೆಂಗಳೂರಿನಲ್ಲಿ ಲಿನಕ್ಸ್ ಹಬ್ಬ - ಏನೇನಿದೆ ?
ಕತ್ತಲೆಯಲ್ಲಿ ವಿದ್ಯುತ್ ಇಲ್ಲದಿದ್ದಾಗ ಎಮರ್ಜೆನ್ಸಿ ಲ್ಯಾಂಪ್‌ಗಳು ಹಲವಾರು ಉಪಯೋಗಿಸಿದ್ದಿದೆ . ಹಲವಾರು ಬಾರಿ ವಿವಿಧ ಕಳಪೆ ಎಮರ್ಜೆನ್ಸಿ ಲ್ಯಾಂಪ್‌ಗಳನ್ನು ಒಳ್ಳಯವೆಂದು ಅಂಗಡಿಯವ ಹೇಳಿದ್ದರಿಂದ ಅವುಗಳನ್ನು ಕೊಂಡು ಕೈ ಸುಟ್ಟುಕೊಂಡದ್ದಿದೆ . ಒಂದೊಮ್ಮೆ ಬಿ . ಪಿ . ಎಲ್ ಕಂಪನಿಯ ಎಮರ್ಜನ್ಸಿ ಲ್ಯಾಂಪ್ ಕೊಂಡು ಅದು ಒಂದು ವರ್ಷ ವ್ಯಾರಂಟಿ ಮುಗಿದ ಕೂಡಲೇ ಕೆಟ್ಟಿದ್ದರಿಂದ ಅದೇ ಕಂಪನಿಯ ಕಛೇರಿಗೆ ಹಿಂದಿರುಗಿಸಿದ್ದು ಇದೆ . ಇತ್ತೀಚೆಗೆ ಸೌರ ದೀಪವೊಂದು ಕೊಂಡುಕೊಳ್ಳಬೇಕೆಂಬ ಹಂಬಲ ಹೆಚ್ಚಿದ್ದರಿಂದ ಅದರ ಹುಡುಕಾಟಕ್ಕೆ ಮುಂದಾದೆ .
ರಾಮಾಯಣ ಮತ್ತು ಮಹಾಭಾರತದಂತ ಕೃತಿಗಳ ವಿಶೇಷತೆ ಅಂದರೆ ಇದೇ ಅಲ್ವಾಅ . . ಅ ಕತೆಗಳನ್ನು ಎಷ್ಟು ಸಲ ಹೇಳಿದರೂ ಹೇಗೆ ಹೇಳಿದರೂ ಮತ್ತೆ ಅದನ್ನ ಇನ್ನೂ ಬೇರೆ ವಿಧವಾಗಿ ಹೇಳೋಕೆ ಸಾಧ್ಯವಿರುತ್ತೆ . . ನಿಜ . . ಕೆಲವೊಂದು stereotype images ಬಹುಷಃ ಎಂದೂ ಬದಲಾಗೊಲ್ಲ ಅನಿಸುತ್ತೆ
ಒಂದೊಮ್ಮೆ ಈ ಕವನದ ಅಳಲು ಅರ್ಥವಾಗದಿದ್ದರೆ , ಅವನು / ಅವಳು , ಅದಾಗುತ್ತದೆ . ಇಲ್ಲಿಯವರೆವಿಗು ಎಷ್ಟು ಚಳುವಳಿಗಳು ನಡೆದವೋ ? ಎಷ್ಟೇ ನಡೆದರು , ಇನ್ನು ಚಳುವಳಿಯ ಅಗತ್ಯ ಇದ್ದೇ ಇದೆ . ಈ ಸ್ತಿತಿ ಬದಲಾಗಬೇಕಾದರೆ , ಪ್ರತಿ ಒಬ್ಬ ಕನ್ನಡಿಗನ ಮನದಲ್ಲು ಕೀಳಿರಮೆ ಅಳಿಸಿ , ಕನ್ನಡದ ದೀಪ ಹಚ್ಚಬೇಕು . ೫೦ ವಸಂತಗಳಾದರೇನಂತೆ , ಈಗಲಾದರು ಅಥವ ಈಗಲೆ , ಹಚ್ಚುವ ಕನ್ನಡದ ದೀಪ . ಭೂತ ಜಗತ್ತಿನಿಂದ , ಕನ್ನಡ ನಿತ್ಯೋತ್ಸವ ಹಾರೈಸುತ . ಭೂತ
ಫುಟ್ಬಾಲ್ ಆಟಗಾರನಾಗಿ , ಬಿಬಿಸಿಗೆ ಕ್ರೀಡೆಗೆ ಸಂಬಂಧಿಸಿದ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದ ಸುದ್ದಿವಾಚಕನಾಗಿದ್ದ ಡೇವಿಡ್ ಒಂದು ದಿನ ತನಗೆ ' ಜ್ಞಾನೋದಯ ' ದ ರೀತಿಯ ಅನುಭವವಾಗಿದೆ . ಈ ಜಗತ್ತಿನ ಪವಿತ್ರಾತ್ಮಗಳು ನನ್ನೊಂದಿಗೆ ಸಂವಾದಿಸುತ್ತಿವೆ . ಅವು ನನಗೆ ಮನುಕುಲವನ್ನು ಮುಂದೊದಗಲಿರುವ ಅವಘಡದಿಂದ ಪಾರು ಮಾಡಲು ನಿರ್ದೇಶಿಸುತ್ತಿವೆ . ಈ ಭೂಮಿಯನ್ನು ಉಳಿಸುವುದಕ್ಕಾಗಿ ನಾನು ' ಸತ್ಯ ' ವನ್ನು ಜನರೆಡೆಗೆ ತೆಗೆದುಕೊಂಡು ಹೋಗಬೇಕು . ನಾನೊಬ್ಬನೇ ಅಲ್ಲ , ಪ್ರತಿಯೊಬ್ಬರೂ ಸಹ ದೇವರ ಮಕ್ಕಳು ಎಂದು ಹೇಳಲು ಶುರು ಮಾಡಿದ . ಪಾಸಿಟಿವ್ ಆಲೋಚನೆ , ಪಾಸಿಟಿವ್ ವರ್ತನೆಗಳಿಂದ ಈ ಭೂಮಿಯಲ್ಲಿರುವ ಪಾಸಿಟಿವಿಟಿಯನ್ನು ಹೆಚ್ಚಿಸುವ ಮೂಲಕ ನಾವು ಭೂಮಿಯನ್ನು ಉಳಿಸಬಹುದು ಎಂದು ಟಿವಿ ಶೋಗಳ ಸಂದರ್ಶನಗಳಲ್ಲಿ ಹೇಳಿಕೊಳ್ಳಲು ಶುರು ಮಾಡಿದ .
ಹಲವಾರು ವಿವಾದಗಳಿಂದ ಭಾರೀ ಸುದ್ದಿ ಮಾಡಿದ ಸರದಾರ್ ಸರೋವರ ಯೋಜನೆ ಗೊತ್ತೇ ಇದೆ . ಇದೂ ಸಹ ಅದೇ ಅಣೆಕಟ್ಟೆಯಿಂದ ನೀರು ಪೂರೈಸುವ ಯೋಜನೆಯೇ . ಆದರೆ ಇಲ್ಲಿ ಯಾವುದೇ ವಿವಾದ ಇಲ್ಲ . ನರ್ಮದಾ - ಮಾಹಿ ನದಿಗಳಿಂದ ಕುಡಿಯುವ ನೀರು ತೆಗೆದುಕೊಂಡು ಹೋಗಲಾಗಿದೆ .
ಹ್ಹ , ಹ್ಹ , ನಿಮ್ಮ ಜಾಗದಲ್ಲಿ ನಾನಿದ್ದಿದ್ದರೆ ನನಗೂ ಹಾಗೇ ಅನ್ನಿಸುತ್ತಿತ್ತು . ಖಂಡಿತವಾಗಿಯೂ ನಿಸರ್ಗಪ್ರಿಯರು ತಮ್ಮ ಜೀವನಾವಧಿಯಲ್ಲಿ ಒಮ್ಮೆಯಾದರೂ ನೋಡಿಬರುವಂತಹ ತಾಣ ಅದು .
ನಿಜವಾಗಿ ಸಹಾಯಮಾಡುವುದು , ತೆಗೆದುಕೊೞುವುದು ಮನುಷ್ಯ - ಮನುಷ್ಯರ ನಡುವಿನ ಸಂಬಂಧಗಳನ್ನು ಗಟ್ಟಿಯಾಗಿ ಬೆಸೆಯುತ್ತದೆ .
" ಸುಳ್ಳಾರೋಪಗಳು ( ಪಾಶ್ಚಾತ್ಯ ಆರೋಪಗಳು ) ಈ ತರ ಈ ವ್ಯಕ್ತಿಯ ( ಮುಹಮ್ಮದ್ ) ಸುತ್ತ ರಾಶಿ ಬಿದ್ದಿರುವುದು ನಾವು ನಮ್ಮಲ್ಲೇ ನಾಚಿಕೆ ಪಡಬೇಕಾದ ಸಂಗತಿ " ಒಂದು ಮೌನ ಮಹಾತ್ಮ , ಸಿದ್ಧಿಸಿ ಪಡೆಯಲು ಸಾಧ್ಯವಲ್ಲದ್ದು , ಅದು ಜಗತ್ತನ್ನು ಬೆಳಗಿಸುತ್ತದೆ , ಜಗತ್ತಿನ ನಿರ್ಮಾತನು ಆದೇಶವನ್ನು ನೀಡಿದ್ದನು ತಾನೆ " Thomas Carlyle ' Heroes and Hero Worship and the Heroic in History , ' ಎಂಬ ಕೃತಿಯಲ್ಲಿ 1840
ಪ್ರತೀ ಕ್ಷಣ ಈಗ ನೀನಲ್ಲಿ ಏನು ಮಾಡುತ್ತಿರಬಹುದು ಅಂತ ಇನ್ನು ಊಹಿಸುತ್ತಾ ಇರಲ್ಲ . ದೇವರೆದುರು ನನ್ನ ಪ್ರಾರ್ಥನೆಯ ಜೋಳಿಗೆ ಬಿಚ್ಚುವಾಗ ನಿನ್ನ ಮೇಲಿನ ಕೋರಿಕೆಗೆ ಕೊನೆಯ ಸ್ಥಾನ . ಬಟ್ಟೆ ಅಂಗಡಿಯಲ್ಲಿನ ಬೊಂಬೆಗುಡಿಸಿದ ಡ್ರೆಸ್ಸು ನಿನಗೆ ಹೇಗೆ ಕಾಣಬಹುದು ಎಂದಿನ್ನು ಕಲ್ಪಿಸಿಕೊಳ್ಳುವುದಿಲ್ಲ . ನಿನ್ನ ಹೆಸರಿಟ್ಟುಕೊಂಡ ಅಂಗಡಿಯ ಮುಂದೆ ನಿಂತು ನಿನ್ನ ನೆನೆಸಿಕೊಳ್ಳುತ್ತಾ ಇನ್ನು ಮೈಮರೆಯೋದಿಲ್ಲ . ರಸ್ತೆ ತಿರುವಿನಲ್ಲಿ ನಿನ್ನನೊಮ್ಮೆ ಭೇಟಿ ಮಾಡಿದ ನೆನಪುಗಳನ್ನಿನ್ನು ಎಂದಿಗೂ ನೇವರಿಸೋಲ್ಲ . ನಿನ್ನ ನೆನಪುಗಳನ್ನು ತೀವ್ರವಾಗಿ ತರಿಸುವ ಭಾವಗೀತೆಗಳನ್ನಿನ್ನು ಗುನುಗುನಿಸಲ್ಲ . ದಿಂಬಿಗಿನ್ನು ಬೇರೆ ನಾಮಕರಣ ; ನಿನ್ನ ಹೆಸರಲ್ಲ !
ದೇವಾಲಯದಿಂದ ಹೊರ ಬರುವಷ್ಟರಲ್ಲಿ ಮಳೆ ಶುರುವಾಗಿದ್ದರಿಂದ ನಾವು ಅಲ್ಲಿಯ ದುರ್ಗಾಂಬ ಲಾಡ್ಜ್ ನಲ್ಲಿ ಉಳಿದು , ಬೆಳಿಗ್ಗೆ ಎದ್ದು ಶೃಂಗೇರಿಗೆ ಹೊರಟೆವು . ಶಂಕರಾಚಾರ್ಯರು ಕಾಶ್ಮೀರದಲ್ಲಿದ್ದಾಗ ಮಂಡನ ಮಿಶ್ರ ಮತ್ತು ಅವರ ಪತ್ನಿಯಾದ ಉಭಯ ಭಾರತಿಯನ್ನು ವಿದ್ವಾಂಸ ಚರ್ಚೆಯಲ್ಲಿ ಸೋಲಿಸಿ , ಸರ್ವಜನ ಪೀಠ ಅಲಂಕರಿಸಿದ ನಂತರ ಶೃಂಗೇರಿಗೆ ಬಂದು , ಶಾರದಾ ಪೀಠವನ್ನು ಶ್ರೀ ಚಕ್ರದ ಮೇಲೆ ಸ್ಥಾಪಿಸಿದರು . ಮಂಡನ ಮಿಶ್ರರನ್ನು ಶಾರದಾ ಪೀಠದ ಪ್ರಥಮ ಗುರುವೆಂದು ಸಾರಿ ಸುರೇಶಾಚಾರ್ಯನೆಂಬ ಹೆಸರಿನಿಂದ ಪೀಠವನ್ನು ನಡೆಸಲು ಅಪ್ಪಣೆ ಕೊಟ್ಟರು ಮತ್ತು ಉಭಯ ಭಾರತಿಯು ಗ್ನಾನ ದೇವಿಯಾಗಿದ್ದು , ಶಾರದೆಯ ರೂಪದಲ್ಲಿ ನೆಲೆಸುವಂತೆ ನುಡಿದರು . ಇಲ್ಲಿ ಬಸಿರು ಕಪ್ಪೆ ಹೆಬ್ಬಾವಿನ ಆಶ್ರಯದಲ್ಲಿರುವುದು ಕಂಡು , ಇದೇ ಸರಿಯಾದ ಸ್ಥಳವೆಂದು , ಶಾರದಾಂಬೆಯ ಪ್ರತಿಷ್ಟಾಪನೆ ಮಾಡಿದರು .
ಈಗಿನ ಸೌತ್ ವೇಲ್ಸ್ ಎಂದು ಕರೆಯಲ್ಪಡುವ ಪ್ರದೇಶದಲ್ಲಿ ಸುತ್ತಲೂ ರೋಮನ್ ಕೋಟೆಗಳ ಒಂದು ಸಾಲನ್ನು ಸ್ಥಾಪಿಸಿಲಾಗಿತ್ತು . ಇದು ಪಶ್ಚಿಮಕ್ಕೆ ಕಾರ್ಮರ್ಥೆನ್ ( ಕೇರ್ಫಿರ್ಡಿನ್ ; ಲ್ಯಾಟಿನ್ : Maridunum ) ವರೆಗೂ ವ್ಯಾಪಿಸಿದೆ , ಹಾಗು ಕಾರ್ಮಾರ್ಥೆನ್ ಶೈರ್ ನ ಡೊಲೌಕೊತಿಯಲ್ಲಿ ಚಿನ್ನದ ಗಣಿಗಾರಿಕೆ ಮಾಡಲಾಗುತ್ತಿತ್ತು . ರೋಮನ್ನರು ಪಶ್ಚಿಮದಾಚೆಗೂ ಸಾಗಿದ್ದರು ಎಂಬುದಕ್ಕೆ ಪುರಾವೆಗಳಿದೆ . ಅವರು ರೋಮನ್ ಸೈನ್ಯದ ಕೋಟೆಯನ್ನು ಕಾಯೇರ್ಲೆಯೋನ್ ನಲ್ಲಿ ಕಟ್ಟಿಸಿದ್ದರು . ಇದರಲ್ಲಿ ಭವ್ಯವಾದ ವರ್ತುಲ ರಂಗಸ್ಥಳ ವನ್ನು ಇಂದಿಗೂ ಬ್ರಿಟನ್‌ನಲ್ಲಿ ಸಂರಕ್ಷಿಸಲಾಗಿದೆ .
ಮಹಾರುದ್ರಪ್ಪ ಅವರನ್ನು ಜನ ಮರೆತಿಲ್ಲ ಎನ್ನುವುದಕ್ಕೆ ಅವರ ಹೆಸರಿನಲ್ಲಿ ಇರುವ ಕತೆಗಳು ಒಂದೆಡೆಯಾದರೆ ಮತ್ತೊಂದೆಡೆಯಲ್ಲಿ ಮಹಾರುದ್ರಪ್ಪ ಅವರ ಹೆಸರಿನಲ್ಲಿ ' ಖಾಂಡ ' ಪ್ರಮುಖವಾದದ್ದು .
ವರ್ಣಮಾಲೆಯಯೊಂದರ ಅಕ್ಷರಗಳಿಗೆ ಸಂಖ್ಯಾತ್ಮಕ ಮೌಲ್ಯಗಳನ್ನು ನಿಗದಿ ಮಾಡುವ ಅನೇಕ ಸಂಖ್ಯಾಭವಿಷ್ಯಶಾಸ್ತ್ರ ಪದ್ಧತಿಗಳಿವೆ . ಉದಾಹರಣೆಗಳಲ್ಲಿ ಅರೇಬಿಕ್‌ನಲ್ಲಿನ ಅಬ್ಜದ್ ಅಂಕಿಗಳು , ಯೆಹೂದಿ ಅಂಕಿಗಳು , ಅರ್ಮೇನಿಯಾದ ಅಂಕಿಗಳು , ಮತ್ತು ಗ್ರೀಕ್ ಅಂಕಿಗಳು ಸೇರಿವೆ . ಅಕ್ಷರಗಳ ಸಂಖ್ಯಾತ್ಮಕ ಮೌಲ್ಯಗಳು , ಹಾಗೂ ಒಂದೇ ರೀತಿಯ ಮೌಲ್ಯವನ್ನು ಹೊಂದಿರುವ ಅಕ್ಷರಗಳ ನಡುವಿನ ಸಂಬಂಧಗಳ ಆಧಾರದ ಮೇಲೆ ಅವುಗಳಿಗೆ ಅತೀಂದ್ರಿಯ ಅರ್ಥವನ್ನು ನಿಗದಿಪಡಿಸುವ ಯೆಹೂದಿ ಸಂಪ್ರದಾಯದಲ್ಲಿರುವ ಅಭ್ಯಾಸವನ್ನು ಜೆಮೆಟ್ರಿಯಾ ಎನ್ನುತ್ತಾರೆ .
' ಬೀಟಲ್ಸ್ ' ಎನ್ನುವ ಮ್ಯೂಸಿಕ್ ಬ್ಯಾಂಡಿನ ' ಪ್ಲೀಸ್ ಮಿ | | ಪೋಸ್ಟ್ ಮ್ಯಾನ್ ' ಹಾಡನ್ನು ಹೇಳುತ್ತಿದ್ದೆ . ಈ ಹಾಡು ಕೇಳುತ್ತಿರುವುದು ಮೊದಲ ಬಾರಿಯೇನಲ್ಲ ಆದರೂ ಕಾಡುತ್ತಿದ್ದ ಒಂಟಿತನದ ಪರಿಣಾಮವೋ ಏನೋ ಊರಿನ ಪೋಸ್ಟ್ ಮ್ಯಾನಿನ ನೆನಪಾಯಿತು . ನನ್ನ ಒಂಟಿತನಕ್ಕೂ ಅವರಿಗೂ ಯಾವುದೇ ಸಂಬಂಧವಿರದಿದ್ದರೂ . . .
ಸಂಸದನಾಗಿ , ಮಂತ್ರಿಯಾಗಿ ನಿಷ್ಕ್ರಿಯರಾಗಿದ್ದ ಅಂಬರೀಶ್‌ಗೆ ಕೊಡುವುದಕ್ಕೆ ಕಾಂಗ್ರೆಸ್ ಬಳಿ ಏನೂ ಬಾಕಿ ಉಳಿದಿಲ್ಲ . ಅವರಿಗೆ ವಿಧಾನಸಭಾ ಚುನಾವಣೆಗೂ ಟಿಕೆಟ್ ನೀಡಲಾಗಿತ್ತು . ಅಲ್ಲಿ ಸೋತ ಅವರಿಗೆ ಮತ್ತೆ ಟಿಕೆಟ್ ಕೊಡಲು ಹೊರಟರೆ ಅವರದ್ದು ನೂರೆಂಟು ಷರತ್ತುಗಳು . ಕಾಂಗ್ರೆಸ್ ಅದಕ್ಕೂ ಒಪ್ಪಿಗೆ ನೀಡಿದೆ . ಎಸ್ . ಎಂ . ಕೃಷ್ಣ ಬೆಂಗಳೂರು ದಕ್ಷಿಣದಿಂದ ಚುನಾವಣೆಗೆ ನಿಂತು ಇಡೀ ಚುನಾವಣಾ ವಾತಾವರಣದಲ್ಲೊಂದು ಲವಲವಿಕೆಗೆ ಕಾರಣರಾಗುತ್ತಾರೆಂದು ಕಾಂಗ್ರೆಸ್ ಕಾರ್ಯಕರ್ತರು ನಂಬಿದ್ದರು . ಆದರೆ ಕೃಷ್ಣ ನೀಡಿದ್ದೂ ಕೂಡಾ ` ಪಿಳ್ಳೆನೆವ ' ವೇ . ರಾಜ್ಯಸಭೆಯಲ್ಲಿ ಕಾಂಗ್ರೆಸ್ಸಿಗರ ಸಂಖ್ಯೆ ಕಡಿಮೆಯಾಗುತ್ತದೆ ಎಂಬುದು ಅವರ ಸಬೂಬು .
50ರ ಆಸುಪಾಸಿನಲ್ಲಿರುವ ಮುನಿಯಾಲರ ಅಲೆಮಾರಿ ಬದುಕು ಮಾತ್ರ ನಿಂತಿಲ್ಲ . ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವ ಸ್ವಭಾವದ ಅವರು ಮಾನಸ ಸರೋವರ , ಕೈಲಾಸ ಪರ್ವತ , ಸಿಕ್ಕಿಂ , ಲಕ್ಷದ್ವೀಪ , ಚಂದ್ರಕಣಿ ಪಾಸ್ ಹೀಗೆ ಎಲ್ಲೆಂದರಲ್ಲಿ ಅಲೆದಾಡುತ್ತಿರುತ್ತಾರೆ . ಮತ್ತು ಅದನ್ನು ಅಷ್ಟೇ ಅಂದವಾಗಿ ಅಕ್ಷರರೂಪಕ್ಕಿಳಿಸಿ ಸಾಹಿತ್ಯಾಸಕ್ತರಿಗೆ ಉಣಬಡಿಸುತ್ತಾರೆ . ವಿಜ್ಞಾನದ ಬಗ್ಗೆ , ಮಕ್ಕಳ ಸಾಹಿತ್ಯದ ಬಗ್ಗೆ ಪ್ರತಿಯೊಂದು ವಿಷಯದ ಕುರಿತು ಮಾತನಾಡುತ್ತಾರೆ . ಇದೀಗ ಇತ್ತೀಚೆಗೆ ಸಿಕ್ಕಿಂ ರಾಜ್ಯಕ್ಕೆ ಭೇಟಿ ನೀಡಿರುವುದಾಗಿ ಹೇಳಿದ್ದ ಅವರು ಅಲ್ಲಿನ ಜನಾಂಗವೊಂದರ ಕುರಿತು ಮಾಹಿತಿ ಕಲೆ ಹಾಕಿರುವುದಾಗಿ ತಿಳಿಸಿದ್ದರು . ಜೀವವಿದ್ದರೂ ಸದಾ ಕಾಲ ಒಂದಲ್ಲ ಒಂದು ಬಗೆಯ ಅಶಾಂತಿಯಿಂದ ತೊಳಲಾಡುವವರಿಗೆ ಅನಂತ ಪ್ರಕೃತಿಯ ಮಡಿಲಲ್ಲಿ ನೆಮ್ಮದಿ ಸಿಗುವ ಸಾಧ್ಯತೆ ಇದ್ದರೆ ಅದು ಹಿಮಾಲಯ ಎಂದೆನ್ನುವ ಮುನಿಯಾಲರ ಹಿಮಾಲಯ ಚಾರಣದ ಅದ್ಭುತ ಕಥನವೇ ಚಂದ್ರಕಣಿ ಪಾಸ್ . ಅದೇ ರೀತಿ ದಟ್ಟವಾದ ಮಂಜು ಮುಸುಕಿದ ಕಣಿವೆಗಳಲ್ಲಿ ರಕ್ತ ಹೆಪ್ಪುಗಟ್ಟಿಸುವ ಚಳಿಗಾಳಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಎತ್ತರದ ಶಿಖರವೇರಿದ ರೋಮಾಂಚನ ವಿವರ ಅವರ ಮಂಜು ಮುಸುಕಿದ ಕಣಿವೆಗಳ ರೋಮಾಂಚಕಾರಿ ವಿವರಗಳು ಈ ಪುಸ್ತಕದಲ್ಲಿ ಲಭ್ಯ . ನೀವು ಯಾವುದೇ ಊರಿಗೆ ಪ್ರವಾಸ , ಚಾರಣ ಹೋಗಬೇಕಿದ್ದರೂ ಅವರಲ್ಲಿ ಸುಲಭವಾದ ಉಪಾ ಯ ಮತ್ತು ಸಲಹೆಗಳನ್ನು ಸೂಚಿಸಬಲ್ಲರು . ಅಂತಹ ಸ್ಥಳಗಳನ್ನು ನೋಡಬೇಕೆಂಬ ಕುತೂಹಲ ಇದ್ದರೂ ಕೂಡ ನೀವು ಅವರನ್ನು ಸಂಪರ್ಕಿಸಿದರೂ ( 9448869963 ) ಸಾಕು . ಮುಂದೆ ನಿಮಗೆ ಬೇಕಾದ ಎಲ್ಲ ಮಾಹಿತಿಗಳು ಲಭ್ಯವಾಗುತ್ತವೆ . ಈಗ ಹೇಳಿ ಇಂತಹ ವ್ಯಕ್ತಿತ್ವ ಬೋರು ಹಿಡಿಸುತ್ತದೆಯಾ ಅಂತ . . . . . .
ಶ್ರೀ ರಮಾನಂದ ಜೀ , ಶ್ರೀ ರಾಮನಯನದಾಸ ಜೀ ಮತ್ತು ಪತಂಜಲಿ ಯೋಗಾಶ್ರಮದ ಶ್ರೀ ನಯನ ಜೀ ಇವರು ವೇದಿಕೆಯನ್ನು ಅಲಂಕರಿಸಿದ್ದರು . ಯಾತ್ರಾ ಪ್ರಮುಖರಾದ ಶ್ರೀ ಮನೋಜ್ ವರ್ಮಾ ಅವರು ಯಾತ್ರೆಯ ಉದ್ದೇಶ ಮತ್ತು ಗೋವಿನ ಹಿರಿಮೆಯನ್ನು ಸಭೆಗೆ ವಿವರಿಸಿದರು .
ಬಸವರಾಜು ತನ್ನ ಪುಟ್ಟ ಕ್ಯಾಮರಾದಲ್ಲಿ ಅದರ ಚಿತ್ರ ತೆಗೆದು ಕೊಂಡ .
ನಾನು ಐದೋ ಆರೋ ಕ್ಲಾಸಿನಲ್ಲಿದ್ದೆ . ನನ್ನ ಗೆಳೆಯನ ಮನೆಗೆ ಹೋದಾಗ ಅವನಣ್ಣ ಇತ್ತ ಸಂಯುಕ್ತ ಕರ್ನಾಟಕದಂತೆಯೂ ಅಲ್ಲದ , ಅತ್ತ ಸುಧಾದಂತೆಯೂ ಅಲ್ಲದ ಮಾಸಲು ಹಾಳೆಯ ಪತ್ರಿಕೆಯೊಂದನ್ನು ಓದುತ್ತ ಕುಳಿತಿದ್ದ . ಅದೇನೆಂದು ಕೇಳಿದ್ದಕ್ಕೆ " ಲಂಕೇಶ್ ಪತ್ರಿಕೆ " ಅಂದ . ನನ್ನ ಮೊದಲ ಉದ್ಗಾರ , " ಲಂಕೇಶಾ ? ಅಂದ್ರ ರಾವಣನ ಪತ್ರಿಕೆಯಾ ? " ಎಂದೆ . ಅದಕ್ಕೆ ಆತ ನಕ್ಕು , " ಅಲ್ಲಲೇ , ಅದು ಪತ್ರಿಕಾ ನಡೆಸವನ ಹೆಸರು " ಎಂದ . " ನಾ ಓದಲ್ಯಾ ? " ಅಂತ ಕೇಳಿದ್ದಕ್ಕೆ , " ಇದು ನಿನಗ ಅರ್ಥ ಆಗೂದಿಲ್ಲ " ಎಂದ . ನನಗೆ ಚೆನ್ನಾಗಿ ಕನ್ನಡ ಓದಲು ಬರುತ್ತದೆ , ಅಲ್ಲದೇ ಪ್ರತಿವಾರ ಸುಧಾದಲ್ಲಿ ಫ್ಯಾಂಟಮ್ ಅಲ್ಲದೇ ಮುಖಪುಟದ ಲೇಖನವನ್ನೂ ಓದುತ್ತೇನೆ , ತಿಂಗಳು ತಿಂಗಳು ಚಂದಮಾಮಾನನ್ನು ಎರೆಡೆರೆಡು ಸಲ ಒಂದೂ ಪುಟ ಬಿಡದೇ ಓದುತ್ತೇನೆ , ನನಗೆ ಅರ್ಥವಾಗುವುದಿಲ್ಲವಾ ? ಹಾಗೆ ಶುರುವಾಯಿತು ನನ್ನ ಮತ್ತು ಲಂಕೇಶ್ ಪತ್ರಿಕೆ ಸಂಬಂಧ . ಪ್ರತಿವಾರವೂ ನನ್ನ ಗೆಳೆಯನ ಮನೆಗೆ ಹೋಗಿ ಲಂಕೇಶ್ ಓದಲು ಶುರುಮಾಡಿದೆ . ಕಣ್ಣಮುಚ್ಚಾಲೆ ಮತ್ತು ಅದರಡಿಯಲ್ಲಿರುವ ತುಂಟಾಟವನ್ನು ಕದ್ದು ಓದುತ್ತಿದ್ದೆ . ಹಿಂದಿನ ಸಿನೆಮಾ ಪುಟಗಳನ್ನು ಒಂದಕ್ಷರವೂ ಬಿಡದೇ ಓದುತ್ತಿದ್ದೆ . ಬಾಕಿ ಯಾವುದೂ ಅರ್ಥವಾಗುತ್ತಿರಲಿಲ್ಲ . ನನ್ನ ಗೆಳೆಯನ ಅಣ್ಣ ಓದಲು ಹುಬ್ಬಳ್ಳಿಗೆ ಹೋದ , ಆಗ ನಾನು ಎಂಟನೇ ಕ್ಲಾಸಿನಲ್ಲಿರಬೇಕು . ಲಂಕೇಶ್ ನಿಂತುಹೋಯಿತು ನನಗೆ . ಮನೆಯಲ್ಲಿ ಕೇಳಿದರೆ , " ಆ ಪತ್ರಿಕೆ ಮನೀಗೆ ಬರೂದು ಬ್ಯಾಡ , ಅದರಾಗೇನಿರತದ ಹೊಲಸು , ಬರೇ ರಾಜಕೀಯ " ಎಂದರು ನನ್ನಪ್ಪ . ಊರಿನ ಒಂದೇ ಒಂದು ಪ್ರೈವೇಟ್ ಸರ್ಕ್ಯುಲೇಟಿಂಗ್ ಲೈಬ್ರರಿಯಲ್ಲಿ ಮನೆಯಲ್ಲಿ ಏನೋ ಪೂಸಿ ಹೊಡೆದು ಮೆಂಬರ್ ಆದೆ , ಅಮರ ಚಿತ್ರಕತೆ ಓದಬೇಕು ಎಂದು . ಲಂಕೇಶ್ ವಾರದಲ್ಲಿ ಒಂದು ದಿನ ಮನೆಗೆ ಬರತೊಡಗಿದ , ಅದೂ ನನ್ನಪ್ಪನಿಗೆ ಕಾಣದಂತೆ ಅವರಿಲ್ಲದಾಗ ಓದಿ ಮುಚ್ಚಿಡುತ್ತಿದ್ದೆ . ನಿಧಾನವಾಗಿ ಸಿನೆಮಾ ಪುಟಗಳ ಆಚೆಗಿನ ಬರಹಗಳು ಅರ್ಥವಾಗತೊಡಗಿದವು . ತುಂಟಾಟ , ನೀಲುಗಳು ಮತ್ತು ಆ ನೀಲುಗಳ ಜೊತೆಯಿರುವ ಚಿತ್ರಗಳು ಆ ವಯಸ್ಸಿಗೆ ಮನಸ್ಸಿನಲ್ಲಿ ಕಿಚ್ಚೆಬ್ಬಿಸುತ್ತಿದ್ದವು . ನಿಮ್ಮಿ ಹೆಚ್ಚು ಕಡಿಮೆ ನನ್ನ ಕನಸಿನ ಕನ್ಯೆಯಾದಳು . ವಾರವಾರವೂ ನಿಮ್ಮಿ ಪತ್ರ ಓದಲು ಕಾಯುತ್ತಿದ್ದೆ , ಆಕೆ ಈ ವಾರ ಏನು ಮಾಡಿದಳು , ಆಕೆಯ ಪ್ರಿಯಕರ ಆಕೆಗೆ ಏನು ಮಾಡಿದ ಎಂದು ತಿಳಿದುಕೊಳ್ಳಲು . ಟೀಕೆ ಟಿಪ್ಪಣೆಯಲ್ಲಿ ಚಡ್ಡಿಗಳು , ಕಾಂಗ್ರೆಸ್ , ಸಮಾಜವಾದ ಓದುತ್ತ ರಾಜಕೀಯ ದೂರದ ಬೆಂಗಳೂರಿನಲ್ಲಿಲ್ಲ , ಬದಲಿಗೆ ನನ್ನ ಮನೆ ಬಾಗಿಲಲ್ಲೇ ಇದೆ ಎಂದು ಅರ್ಥವಾಗತೊಡಗಿತು . ಬರೀ ಕನ್ನಡ ಪುಸ್ತಕದ ಹಿಂದಿನ ಪುಟಗಳಲ್ಲಿ ಅವಿತಿದ್ದ ಬೇಂದ್ರೆ ಅಡಿಗರು ಹೊರಬರತೊಡಗಿದರು . ಯಂಡಮೂರೀ ವೀರೇಂದ್ರನಾಥನೇ ಜಗತ್ತಿನ ಶ್ರೇಷ್ಟ ಕತೆಗಾರ ಅಂದು ಕೊಂಡಿದ್ದವನಿಗೆ ಚಿತ್ತಾಲ , ಕಾರಂತ , ಮಾಸ್ತಿ , ದೇಸಾಯಿ , ವ್ಯಾಸರಾಯರನ್ನು ತೋರಿಸಿದರು . ನನ್ನ ಲೋಕದ ಅರಿವಿಗೂ ಮೀರಿದ ಬೋದಿಲೇರ್ , ಕಾಪ್ಕಾ ಕಾಮೂರನ್ನು ನಮ್ಮ ಅಕ್ಕಪಕ್ಕದ ಮನೆಯವರೇನೋ ಅನಿಸುವಂತೆ ಬರೆದರು . ಪಿಯುಸಿ ಮುಗಿದು ಮೆಡಿಕಲ್ ಸಿಕ್ಕು ಹುಬ್ಬಳ್ಳಿಗೆ ಬಂದ ಮೇಲೆ ಲಂಕೇಶ್ ಚಾಚೂ ತಪ್ಪದೇ ಪ್ರತಿವಾರ ನನ್ನ ರೂಮಿನಲ್ಲಿ ಹಾಜರ್ . ಅವರು ಬರೆದ ಕವಿಗಳ , ಕತೆಗಾರರ , ಕಾದಂಬರಿಕಾರರ ಪುಸ್ತಕಗಳನ್ನು ತಂದು ಓದಿದ್ದೇ ಓದಿದ್ದು , ಅಧೇಗೆ ಮೆಡಿಕಲ್ ಪಾಸಾದೆನೋ ಯಾರಿಗೆ ಗೊತ್ತು ? ಪಿಜಿ ಮಾಡಲು ಮೈಸೂರಿಗೆ ಬರುವ ಹೊತ್ತಿಗೆ ಲಂಕೇಶ್ ಪತ್ರಿಕೆ ತುಂಬೆಲ್ಲ ಅವರ ಕಾಯಿಲೆಗಳ ವರಾತ , ಎಣ್ಣೆ ಕುಡಿದು ಗಳಗಳ ಗಂಟಲಲ್ಲಿ ಬಾಯಾಡಿಸಿದರೆ ಕತ್ತು ನೋವು ಕಡಿಮೆಯಾಗುತ್ತೆ ಎಂಬ ಟಿಪ್ಪಣೆ . ಜೊತೆಯಲಿ ರವಿಯ " ಹಾಯ್ " ನ ಭರಾಟೆ ಬೇರೆ . ರವಿಯ ಹೊಸ ಭಾಷೆ , ಖಾಸ್ ಬಾತ್ , ಹಲೋ , ಜೋಗಿಯವರ " ರವಿ ಕಾಣದ್ದು " ಲಂಕೇಶ್ ಪತ್ರಿಕೆಯನ್ನು ಕೆಲಕಾಲ ಮರೆಸಿದ್ದು ಸುಳ್ಳಲ್ಲ . ಲಂಕೇಶ್ ಹೋದರು , ಲಂಕೇಶ್ ಪತ್ರಿಕೆಯ ಮೇಲಿನ ಒಲವೂ ಹೋಯಿತು . ಲಂಕೇಶ್ ಇಲ್ಲದೇ ಅದು ಬರೀ " ಪತ್ರಿಕೆ " ಆಗಿತ್ತು . ಈಗ ಅವರು ಪತ್ರಿಕೆಯಲ್ಲಿ ಬರೆದಿರುವ " ಟೀಕೆ ಟಿಪ್ಪಣೆ " ಪುಸ್ತಕಗಳು , " ನೀಲು ಕಾವ್ಯ " ಓದುತ್ತ ಹೊಸ ಅರ್ಥಗಳನ್ನು ಹುಡುಕುತ್ತಿದ್ದೇನೆ . ಬಹುಷಃ ಈ ನೀಲು ಲಂಕೇಶ್ ಪತಿಕೆ ನನ್ನ ಮೇಲೆ ಮಾಡಿದ ಪರಿಣಾಮವನ್ನು ಒಟ್ಟುಮಾಡುತ್ತೋ ಏನೋ ? " ಮೋಕ್ಷವೆಂದರೆ ಎಲ್ಲ ಸುಖದುಃಖಗಳಿಂದ ಬಿಡುಗಡೆ ಎಂದು ಪಂಡಿತರು ಹೇಳಿದ್ದು ಕೇಳಿದೊಡನೆ ಮೋಕ್ಶದಿಂದ ತಪ್ಪಿಸಿಕೊಳ್ಲಲು ಆತ ಪಾಪಗಳನ್ನು ಮಾಡಲು ಓಡಿದ
ಬಲ್ಲವರಾರು ಇಂದು ನಾಳೆಗಳ ಕಳೆದು ಹೋದ ನಷತ್ರಗಳ ಕಾರ್ಮುಗಿಲಿನಲಿ ತಡಕುತ್ತಾ , ನಿರೀಷೆಗಳ ಅರಸುತ್ತಾ . ಹೊಸ ವರುಷಕ್ಕೆ ಮುನ್ನುಡಿಯ ಬರೆಯುತ್ತಾ .
ಸ್ವೀಯಾ ಅಂದರೆ ಪತಿಗೆ ನಿಷ್ಠಳಾದ ಪತ್ನಿ . ಪರಕೀಯಳು ಪತಿಯ ಹೊರತಾಗಿಯೂ ಇನ್ನೊಬ್ಬರಲ್ಲಿ ಅನುರಾಗ ಹೊಂದಿರುವವಳು , ಸಾಮಾನ್ಯೆಯು ವೇಶ್ಯೆಯೇ ಆಗಿರುತ್ತಾಳೆ . ಇಷ್ಟೇ ಅಲ್ಲದೆ ಅಷ್ಠವಿಧ ನಾಯಿಕೆಯರು ಮುಗ್ಧಾ , ಮಧ್ಯಾ ಮತ್ತು ಪ್ರಗಲ್ಭ ಸ್ಥಿತಿಯ ಪೈಕಿ ಯಾವುದಾದರೂ ಒಂದು ವರ್ಗಕ್ಕೆ ಸೇರಿರುವುದೂ ಇದೆ . ಮುಗ್ಧಾ ನಾಯಿಕೆಯು ಮುಗ್ಧೆ , ಬಾಲ್ಯ ಯೌವನಗಳ ಸಂಧಿಕಾಲದಲ್ಲಿರುವವಳು . ಲಜ್ಜೆಯ ವರ್ತನೆ , ಅನುರಾಗದ ಕುರಿತಾಗಿ ಅಷ್ಟೇನೂ ಅರಿವಿಲ್ಲದ ಮೃದು ಸ್ವಭಾವದವಳಾಗಿರುತ್ತಾಳೆ . ಆಕೆಗೆ ಎಲ್ಲವೂ ಹೊಸತು , ಮೊದಲು . ಮಧ್ಯಾ ನಾಯಿಕೆಯು ಮುಗ್ಧಾಳಿಗಿಂತ ಕೊಂಚ ಹೆಚ್ಚಾದ ಅರಿವಿರುವ ಯೌವನಾವಸ್ಥೆ ವ್ಯಾಪಿಸಿರುವವಳು . ಹೆಚ್ಚು ಲಜ್ಜೆ ಮತ್ತು ಕಾಮವಿಕಾರವುಳ್ಳ ಈಕೆಯದ್ದು ಚಾತುರ್ಯಭರಿತ ವರ್ತನೆ . ಪ್ರಗಲ್ಭೆಗೆ ಕಾಮಾಸಕ್ತಿ ಹೆಚ್ಚು , ರತಿಕ್ರೀಡೆಗಳಲ್ಲಿ ಪ್ರವೀಣಳು . ಲಜ್ಜೆ ಅತೀಕಡಿಮೆ .
ಹಾಗದರೇ ಈ ಶ್ಲೋಕಗಳು ಬಂದದ್ದು ಹೇಗೆ ? ಇವುಗಳು ಅಸಂಬದ್ಧ ಸೇರ್ಪಡೆಯೆ ಅಥವಾ ಮೇಲೆ ತಿಳಿಸಿದ ರೀತಿ ಸರಿಯಿಲ್ಲವೆ ?
ಅವನಿಂದ ನೂರಾಅರವವತ್ನಾಲ್ಕಕ್ಕೂ ಹೆಚ್ಚು ಮನೆಯ ದೀಪಗಳು ನಂದಿದವು . ಅವನ ಯೋಚನೆಗಳು ಕ್ರೌರ್ಯದ ಪರಮಾವಧಿಯವು ಮತ್ತು ನೀಚ ಉದ್ದೇಶಗಳು . ಇದರ ಬಗ್ಗೆ ಯಾವುದೇ ಧರ್ಮ , ಜಾತಿ , ರಾಷ್ಟ್ರೀಯತೆಯನ್ನು ಮೀರಿ ಎಲ್ಲರ ಅಭಿಪ್ರಾಯವೂ ಒಂದೇ . ಆದರೆ ಅದೇ ಅವನಿಂದ ನಾಡಿನ ಎಲ್ಲ ಮಾಧ್ಯಮಗಳ ಮಾರಾಟ ಮತ್ತು ಮೌಲ್ಯವರ್ಧನೆ ಆಗುತ್ತಿರುವುದು ಅಸಹ್ಯದ ಪರಮಾವಧಿ ಎಂಬುದು ನನ್ನ ಅನಿಸಿಕೆ . ಅವನು ಈಗ ಕಟಕಟೆಯಲ್ಲಿದ್ದಾನೆ . ಅವನ ಮೇಲೆ ಸರ್ಕಾರ ಇಷ್ಟು ಖರ್ಚು ಮಾಡಿದೆ ಅಷ್ಟು ಖರ್ಚು ಮಾಡಿದೆ , ಇಟ್ಟುಕೊಳ್ಳುವುದೇಕೆ , ಕಲ್ಲು ಹೊಡೆದೋ ಗುಂಡು ಹೊಡೆದೋ ಕೊಂದುಬಿಡಬೇಕು ಎಂದು ಆವೇಶದಲ್ಲಿ ಯೋಚಿಸುವ ಮುನ್ನ ಹುತಾತ್ಮ ಮೇ . ಸಂದೀಪ್ ಉನ್ನಿ ಕೃಷ್ಣನ್ ಅವರ ಅಪ್ಪ ನೀಡಿದ ಉತ್ತರವನ್ನು ದಯವಿಟ್ಟು ಓದಿ ಮನನ ಮಾಡಿಕೊಳ್ಳಿ . ಈ ನರಹಂತಕನ ಮುಖ ನೋಡಬೇಕೂನಿಸುತ್ತಾ ನಿಮಗೆ ಅಂತ ನಮ್ಮ ಮಾಧ್ಯಮ ಪ್ರತಿನಿಧಿ ಶಿಖಾಮಣಿ ಮಾಡಿದ ಪ್ರಶ್ನೆಗೆ ಅವರು ಹೇಳಿದ್ದಿಷ್ಟು -
ಮಸ್ಕತ್ ಕನ್ನಡಿಗರಿಗೆ ಸಿ . ಅಶ್ವಥ್ , ಎಂ . ಡಿ ಪಲ್ಲವಿ , ರವಿ ಮುರೂರ್ ತ್ರಯರ ಸಂಗೀತ ಸಮಾರಂಭ - ಸ್ವರ ಸಂಗಮ - ದ ಯಶಸ್ವೀ ಪ್ರದರ್ಶನ .
ಮಕ್ಕಳ ಶಿಕ್ಷಣದ ಹಕ್ಕು ಕಾಯಿದೆ 2009 ನ್ನು ಅನುಷ್ಠಾನಗೊಳಿಸಲು 2011 ರ ಇದೇ ಜುಲೈ 5 ರ ಮಂಗಳವಾರದಂದು ರಾಜ್ಯದಾದ್ಯಂತ ಗ್ರಾಮ ಪಂಚಾಯತ್ ಚುನಾಯಿ ತ ಪ್ರತಿನಿಧಿಗಳು ಸೇರಿದಂತೆ more . . .
ಸುಮಾರು ಕಾಲು ಶತಮಾನದ ಹಿಂದೆ . ಕಾಲೇಜಲ್ಲಿ ಓದುತ್ತಿದ್ದ ನಾನೊಂದು ಕಥೆ ಬರೆದಿದ್ದೆ . ಅದರ ಹೆಸರು ' ಹಾಲು ಕುಡಿದ ಹುಡುಗಾ ' ಅದನ್ನು ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಗೆ ಕಳಿಸಿದ್ದೆ . ಅದನ್ನು ಓದಿದ ಅಲ್ಲಿ ಉಪಸಂಪಾದಕಿ ತರುಣಿಯೊಬ್ಬರು ' ಛಿ ! ಪೋಲಿ ಕಥೆ ! ' ಎಂದು ಕಾಲು ಪಾಲು ಓದಿ ಕಸದ ಬುಟ್ಟಿಗೆ ಬಿಸಾಕಿದ್ದಳಂತೆ . ಆಗಿನ ಸಾಪ್ತಾಹಿಕ ಸಂಪಾದಕರು , ' ಅಯ್ಯೋ ಅದು ಪೋಲಿ ಕಥೆಯಲ್ಲಮ್ಮ . ಒಂಥರಾ ಭಾಗವತದ ಥರಾ ಇದೆ . ಎಲ್ಲಿ ಕೊಡು ' ಎಂದು ಅದನ್ನು ಕಸದ ಬುಟ್ಟಿಯಿಂದ ಎತ್ತಿಸಿದ್ದರಂತೆ . ಆಮೇಲೆ ಆ ಕಥೆಗೆ ಮೊದಲ ಬಹುಮಾನವೂ ಬಂದು , ನನ್ನ ಪ್ರೊಫೆಸರಿಗೆ ಸಮಾಧಾನಕರ ಬಹುಮಾನವೂ ಬಂದು ಮೈಯೆಲ್ಲಾ ರೋಮಾಂಚನದ ಮುಳ್ಳುಗಳೆದ್ದು ಕುಣಿದಾಡಿದ್ದು ನೆನಪಾಗುತ್ತಿದೆ .
ಸಹೋದ್ಯೋಗಿ ಗಣೇಶ ಐತಾಳ ಸಿ ಏ ಐ ಐ ಬಿ ಫಾರ್ಮ್ ಅನ್ನು ತಂದು , ಊಟದ ಸಮಯದಲ್ಲಿ ಎಲ್ಲರಿಗೂ ಕೊಟ್ಟು ತಕ್ಷಣ ತುಂಬಿಕೊಡುವಂತೆ ಹೇಳಿದ್ದ . ಅವನು ಅಂದು ಮಾಡಿದ ಒಳ್ಳೆಯ ಕೆಲಸ , ಆ ತಕ್ಷಣ ಯಾರಿಗೂ ಗೊತ್ತಾಗದಿದ್ದರೂ ಈಗ ಎಲ್ಲರೂ ಸಂತೋಷ ಪಡುವಂತಾಗಿದೆ . ಏಕೆ ಗೊತ್ತೇ ? ಆಗಿನ್ನೂ ಓದು ಮುಗಿಸಿ ಬಂದಿದ್ದ ನಮ್ಮಗಳಿಗೆ ಸಿ ಏ ಐ ಐ ಬಿ ಪರೀಕ್ಷೆ ಬರೆಯಲು ಕಷ್ಟ ಆಗಲಿಲ್ಲ . ಆ ಪರೀಕ್ಷೆಯನ್ನು ಪಾಸು ಮಾಡಿದುದರಿಂದ ಎಕ್ಸ್‍ಟ್ರಾ ಇನ್‍ಕ್ರಿಮೆಂಟ್ ಬಂದಿತು ಮತ್ತು ಮುಂದೆ ಪ್ರಮೋಷನ್ ಪರೀಕ್ಷೆ ಬರೆಯಲೂ ಅನುಕೂಲವಾಯಿತು .
ಈ ಪರಿಯ ಸೊಬಗಿರುವ ಗೋದಿ ನಾಗರವನ್ನು ರಕ್ಷಿಸಿ , ಊಟ ನೀಡಿ ಉಪಚರಿಸಿದ ತಂಡ ಇನ್ನೆರಡು ದಿನಗಳಲ್ಲಿ ಅದು ಚೇತರಿಸಿಕೊಳ್ಳುವ ಭರವಸೆ ನೀಡಿದ್ದಾರೆ . ಸದ್ಯ ಕೃಷಿ ವಿಶ್ವ ವಿದ್ಯಾಲಯದ ಪಶು ಚಿಕಿತ್ಸಾಲಯದ ಪಂಜರವೊಂದರಲ್ಲಿ ಬಂಧಿಯಾಗಿ ಅದು ಚಿಕಿತ್ಸೆಗೆ ಸ್ಪಂದಿಸುತ್ತಿದೆ . ಶನಿವಾರದ ವೇಳೆಗೆ ಗಾಯ ಮಾಯಲಿದ್ದು , ಪ್ರೊ . ಗಂಗಾಧರ ಕಲ್ಲೂರ್ ಮಿತ್ರ ಸುರೇಶ ಅವರೊಂದಿಗೆ , ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಅದನ್ನು ಬಿಡುಗಡೆಗೊಳಿಸಲಿದ್ದಾರೆ . ಮಾನವೀಯತೆ ಮೆರೆದ ಈ ಪರಿಸರ ಮಿತ್ರರಿಗೆ ಅಭಿನಂದನೆಗಳು .
ಸಮರಸ ಹಾಸ್ಯ ಅಂಕಣದಲ್ಲಿ ಸಂಪಾದಕರು , ಪರೀಕ್ಷೆಗೆ ಮುಂಚೆ ಪ್ರಶ್ನೆ ಪತ್ರಿಕೆ ಬಯಲಾಗದೆ ಇರುವುದಕ್ಕೆ ಏನು ಮಾಡಬೇಕೆಂಬ ಚರ್ಚೆ ಇಲ್ಲಿದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೆಶ್ನೆಪತ್ರಿಕೆ ಪರೀಕ್ಷೆಗೆ ಮುಂಚಿತವೇ ಬಯಲಾದ ಘಟನೆಯನ್ನು ವಿಷ್ಲೇಶಿಸಲು ಸಮರಸ ಟೀವಿ ಯಲ್ಲಿ ವಿಶೇಷ ಚರ್ಚೆಯನ್ನು ಏರ್ಪಡಿಸಿದ್ದೆವು . ಚರ್ಚೆಯಲ್ಲಿ ಭಾಗವಹಿಸಿದ್ದ ( ನ ) ಗಣ್ಯರು ( ಕು ) ಖ್ಯಾತ ರಾಜಕಾರಿಣಿ ಢಾ . ಕು . ಶಾ ಕುಮಾರ್ , ( ಕು ) ಖ್ಯಾತ ಚಿಂತಕ ಜೋ . ಕೆ . ಗೋ ರಾವ್ , ( ಅ ) ಸಂಸ್ಕೃತ ಪಂಡಿತ ನಾನೆ ಆಚಾರ್ಯ , ಜ್ಯೋತಿಷಿ ಸೋಮಾರಿಯಾಜಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಘನವೆತ್ತ ವಿದ್ಯಾರ್ಥಿಗಳು . ಪ್ರಶ್ನೆ ಪತ್ರಿಕೆ ಬಯಲಾಗುವುದನ್ನು ತಡೆಯುವುದು ಹೇಗೆ ಎಂಬ ಪ್ರಶ್ನೆಯನ್ನು ಸಮರಸ ಟೀವಿಯವರು ನಾನೆ ಅಚಾರ್ಯ ರವರಿಗೆ ಕೇಳಿದಾಗ , ನಾನೆ ಆಚಾರ್ಯರವರು , ನೋಡಿ ಈಗಿನ ಶಿಕ್ಷಣ ಪದ್ಧತಿ ಇದೆಯೆಲ್ಲಾ ಇದು ಶೂನ್ಯ . ನಾವು ೧೦೦೦ - ಒಂದರ ಮುಂದೆ ಮೂರು ಶೂನ್ಯ ವರ್ಷ ಹಿಂದೆ ಹೋಗಿ ನೋಡಬೇಕು . ಆಗಿನ ಗುರು - ಕುಲ ಪದ್ಧತಿಗೆ ಈಗಿನ ಶಿಕ್ಷಣ ಪದ್ಧತಿ ಸಾಟಿಯಿಲ್ಲ . ಆಗ ವಿದ್ಯಾರ್ಥಿಗಳು ಮರಳಿನ ಮೇಲೆ ತಿದ್ದಿ ವಿದ್ಯೆ ಕಲಿಯುತ್ತಿದ್ದರು . ಇಂತಹ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಎಲ್ಲಿ ? ಅದು ಬಯಲಾಗುವುದು ಎಲ್ಲಿ ? ಇಂದು ನಾವು ಆ ಮರಳಿನ ಮೇಲೆ ತಿದ್ದುವ ಶಿಕ್ಷಣಕ್ಕೆ ಮರಳಿ ಹೋಗಬೇಕೆಂದರು . ಹೀಗೆಂದ ಕ್ಷಣ ಘನವೆತ್ತ ವಿದ್ಯಾರ್ಥಿಗಳು ತಮ್ಮ ಮುಂದೆ ಕುಳಿತವರ ಬೆನ್ನು ತಟ್ಟಿ ನಾನೆ ಆಚಾರ್ಯರ ಮಾತುಗಳನ್ನು ಸಮರ್ಥಿಸಿದ್ದು ವಿಶೇಷ . ಮುಂದೆ ಓದಿ . . .
ಸಾಯ್ಬ್ರ್ - ಅರೆ ಚಲೋ ಚಲೋ . . ಓಗು … ಓಗು …
ನನ್ನ ಅಭಿಪ್ರಾಯ ಅಂದ್ರೆ ನಿಜ ಹೇಳೋದೇ ಅಲ್ವೇ ? ಹಾಗಾದರೆ ದಿಢೀರನೆ ಇಲ್ಲಿ ಭೇಟಿಕೊಡಲು ಕಾರಣ ಹೇಳಿಬಿಡ್ತೀನಿ . ವಿಸ್ಮಯನಗರಿ ಪ್ರವೇಶಮಾಡಿಸಿದವರು ಬೆಂಗಳೂರಿನ ನನ್ನ ಮಿತ್ರ ಪ್ರಸನ್ನ . ಅದು ಒಳ್ಳೆಯ ಕಾಲಕ್ಕೆ ಉಪಯೋಗಕ್ಕೆ ಬಂತು . ಸಂಪದದ ಆಧುನೀಕರಣ ಕಾಮಗಾರಿ ನಡೀತಾ ಇದೆ . ಈಗ ಸುಮ್ಮನೆ ಕೂರೋ ಬದಲು ಇಲ್ಲಿ ಬಂದೆ . ಇಲ್ಲಿ ಜಾಂಡಾ ಊರೋ ಪರಿಸ್ಥಿತಿ ನಿರ್ಮಾಣ ವಾದರೆ ಉಳಿದು ಬಿಡುವ ಲೆಕ್ಕಾಚಾರ . ಸಂಪದದಂತೆ ಇಲ್ಲೂ ಸನ್ಮಿತ್ರರು ಕಾಲು ಕೆರೆದುಕೊಂಡು ಬಂದರೆ ಶಿವಾ ಅಂತಾ ಸುಮ್ಮನಿರುವ ಅಭಿಪ್ರಾಯವೂ ಇದೆ . ಇಷ್ಟು ನನ್ನ ವಿಚಾರ . ಅರರೆ ನನ್ನ ವಿಚಾರ ನಿಮಗೆಲ್ಲಿ ಹೇಳಿದ್ದೀನಿ . ಮುಂದೆ ಹೇಳಬೇಕಷ್ಟೆ . ನೋಡೋಣಾ , ನಮ್ಮಂತ ಹಳ್ಳೀ ಹೈದರ ವಿಚಾರ ನಿಮಗೆ ಹಿಡಿಸುತ್ತಾ ಅಂತಾ ! ಒಂದು ವಿಚಾರ ಅಂತೂ ನಿಮಗೆ ತಿಳಿದಿರಲಿ . ನಂದು ಬುದ್ಧಿ ಕೆಲಸ ಕಡಿಮೆ . ಭಾವನೆಯೇ ಹೆಚ್ಚು .
ದೊಡ್ಡಮ್ಮ ಇದನ್ನೆಲ್ಲಾ ನೋಡುತ್ತಾ , ಸುರುಬುರು ಮಾಡುತ್ತಾ , ಇಷ್ಟರವರೆಗೂ ಸುಮ್ಮನೇ ಕುಳಿತಿದ್ದವರು , " ಅಯ್ಯೋ … . ನನ್ನ ವಿಧಿಯೇ . ಮಗಳ ಬಾಯಲ್ಲಿ ಇಂತಹ ಮಾತು ಕೇಳುವ ಕರ್ಮ ನನ್ನ ಹಣೆಯಲ್ಲಿ ಬರೆದಿತ್ತು . " ಎಂದು ತಲೆ ಚಚ್ಚಿಕೊಂಡು ಅಳತೊಡಗಿದರು . ನಡುರಾತ್ರಿಯಲ್ಲಿ ದೊಡ್ಡಮ್ಮನ ಅಳು ಪುಟ್ಟಿಯಲ್ಲಿ ಭಯ ಹುಟ್ಟಿಸಿತು . ತನ್ನಿಂದ ದೂರದಲ್ಲಿ , ಕಂಬವೊಂದರ ಬದಿಗೆ ಅಸಹಾಯಕತೆಯಿಂದ ಎಲ್ಲವನ್ನೂ ದಿಟ್ಟಿಸುತ್ತಾ ನೋವುಣ್ಣುತ್ತಿದ್ದ ಅಮ್ಮನ ಬಳಿ ಓಡಿಹೋಗಲೇ ಎಂದೊಮ್ಮೆ ಯೋಚಿಸಿದಳು . ಅಮ್ಮನಿಂದ ಅನತಿದೂರದಲ್ಲೇ ಕುಳಿತಿದ್ದ ಕಠಿಣ ಮುಖಭಾವದ ಅಪ್ಪನನ್ನು ನೋಡಿ ಪುಟ್ಟಿಗೆ ಧೈರ್ಯವಾಗಲಿಲ್ಲ . ನಿಂತಲ್ಲೇ ನಿಂತು ಕಾಲು ನೋವಾದಂತಾಗಿ ಅಲ್ಲೇ ಮಂಡಿಯೂರಿ ಕುಳಿತುಕೊಂಡಳು .
c . ಈ ರೀತಿ , ಸಕ್ಕರೆ ಮೂತ್ರದಲ್ಲಿ ಹೋಗಲಾರಂಭಿಸಿದಾಗ ಆ ವ್ಯಕ್ತಿ ವಿಸರ್ಜಿಸುವ ಮೂತ್ರದ ಪ್ರಮಾಣವೂ ಹೆಚ್ಚಾಗುತ್ತದೆ . ಮೂತ್ರದಲ್ಲಿ ಹೊರಬೀಳುವ ಸಕ್ಕರೆಯ ಪ್ರತಿ ಅಂಶಕ್ಕೂ ಒಂದು ನಿಗದಿತ ಪ್ರಮಾಣದಲ್ಲಿ ನೀರಿನ ಅಂಶವೂ ಹೊರಬೀಳಲೇಬೇಕಾದುದು ಒಂದು ಭೌತಿಕ ನಿಯಮ . ಹೀಗಾಗಿ , ಮೂತ್ರದಲ್ಲಿ ವಿಸರ್ಜನೆಯಾಗುವ ಸಕ್ಕರೆಯ ಪ್ರಮಾಣ ಹೆಚ್ಚಿದಂತೆಲ್ಲಾ , ಆ ವ್ಯಕ್ತಿ ವಿಸರ್ಜಿಸುವ ಮೂತ್ರದ ಪ್ರಮಾಣವೂ ಹೆಚ್ಚಾಗುತ್ತದೆ . ಒಬ್ಬ ಆರೋಗ್ಯವಂತೆ ವಯಸ್ಕ ವ್ಯಕ್ತಿ ದಿನವೊಂದಕ್ಕೆ , ವಿಸರ್ಜಿಸುವ ಮೂತ್ರದ ಪ್ರಮಾಣ , ೧ . ೫ ರಿಂದ್ ೨ . ೫ ಲೀಟರ್ ಇರುತ್ತದೆ . ಮಧುಮೇಹಿಗಳಲ್ಲಿ ಇದು ಹೆಚ್ಚಾಗಿ ೫ . ೦ ಲೀಟರ್ ಗಳವರೆಗೂ ಹೆಚ್ಚಬಹುದು . ಮೂತ್ರಕೋಶದಲ್ಲಿ ( urinary bladder ) ಸಂಗ್ರಹಿಸಿಟ್ಟುಕೊಳ್ಳಬಹುದಾದ ಮೂತ್ರದ ಒಂದು ಮಿತಿಯಿರುವುದರಿಂದ , ಮಧುಮೇಹಿಗಳು ಹಲವಾರು ಸಲ ಮೂತ್ರ ವಿಸರ್ಜನೆ ಮಾಡಬೇಕಾಗಿ ಬರುತ್ತದೆ . ಅದಕ್ಕಾಗಿ ಮಧುಮೇಹಕ್ಕೆ ಬಹುಮೂತ್ರದ ಕಾಯಿಲೆ ಎಂದು ಕೂಡ ಕರೆಯುತ್ತಾರೆ .
೨೦೦೪ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ನೀತಿಗಳೂ ಎನ್‌ಡಿಎ ಸರ್ಕಾರದ ನೀತಿಗಳಿಂದ ಭಿನ್ನವಾಗಿರಲಿಲ್ಲ . ಜಾಗತೀಕರಣ ಪ್ರಕ್ರಿಯೆಯನ್ನು ಇನ್ನೂ ತೀವ್ರವಾಗಿಸುವ ನಿಟ್ಟಿನಲ್ಲಿ ಸಾಮಾನ್ಯ ಜನತೆಯ ಜನಜೀವನವನ್ನು ಬಲಿಕೊಟ್ಟ ಯುಪಿಎ ನೀತಿಗಳು ಸಾಮಾಜಿಕ ಕ್ಷೆಭೆಗೆ ಪೂರಕವಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ . ಕಂಧಮಾಲ್ , ನಂದಿಗ್ರಾಮ , ಕಳಿಂಗನಗರ , ಮಂಗಳೂರು ಮುಂತಾದೆಡೆಗಳಲ್ಲಿ ನಡೆದ ಜನವಿರೋಧಿ ಕೋಮುವಾದಿ ಕೃತ್ಯಗಳನ್ನು ಅರ್ಥೈಸುವುದರಲ್ಲಿ ವಿಫಲವಾದ ಕಾಂಗ್ರೆಸ್ ಸರ್ಕಾರ ಭಯೋತ್ಪಾದನೆಯನ್ನು ನಿಯಂತ್ರಿಸುವುದರಲ್ಲೂ ವಿಫಲವಾಗಿರುವುದು ಅಲ್ಲಗಳೆಯಲಾಗದ ಸತ್ಯ . ಈ ಸಂದರ್ಭದಲ್ಲಿ ಘೋಷಿತವಾಗಿರುವ ಚುನಾವಣೆಗಳು ಭಾಜಪ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ತಮ್ಮ ರಾಷ್ಟ್ರೀಯ ಅಸ್ಮಿತೆಗಳನ್ನು ಉಳಿಸಿಕೊಳ್ಳಲು ಬಹುತೇಕ ಕಡೆಯ ಅವಕಾಶವಾಗಿದೆ . ಆದರೆ ನವ ಉದಾರವಾದಿ ನೀತಿಗಳನ್ನು ಅನುಸರಿಸುವುದರಲ್ಲಿ ಒಂದೇ ಮಾರ್ಗವನ್ನು ಅನುಸರಿಸುವ ಎರಡೂ ಪಕ್ಷಗಳ ನಡುವೆ ಭಿನ್ನತೆ ಏನಾದರೂ ಇರುವುದಾದಲ್ಲಿ ಸಾಮಾಜಿಕ ಸ್ತರದಲ್ಲಿ ಮಾತ್ರ ಕಾಣಬಹುದಾಗಿದೆ . ಹಾಗಾಗಿಯೇ ಭಾಜಪ ತನ್ನ ಹಿಂದುತ್ವ ರಾಜಕೀಯದ ಪುನರಾವರ್ತನೆಗೆ ಯತ್ನಿಸುತ್ತಿದೆ .
ಜಲನಯನ , ಅಂತಃಪುರದ ಆಮಿಷಗಳಿಗೆ ಬಲಿಯಾಗದವರಾರು ? ಆದರೂ ಸಹ ಕವಿಗಳಿಗೆ , ಪಂಡಿತರಿಗೆ ರಾಜಾಶ್ರಯ ಅವಶ್ಯವಿದೆ . ಒಟ್ಟಿನಲ್ಲಿ ಜಗನ್ನಾಥ ಪಂಡಿತನದು ಒಂದು ರಂಗೀನ ಬದುಕು !
ತುಂಬಾ ಉತ್ತಮ ಹಾಗೂ ಉಪಯುಕ್ತ ಮಾಹಿತಿಯುಳ್ಳ ಲೇಖನ ರಾಕೇಶ್ . . . ನಮ್ಮ ಮುಂದಿನ ಪೀಳಿಗೆಗೆ ನಾವು ಈ ತರಹದ ಬರಹಗಳನ್ನು ಕಾಯ್ದಿಟ್ಟು ತೋರಿಸಿ ಕತೆ ಹೇಳಲೇಬೇಕು , ಇಲ್ಲದಿದ್ದರೆ ಸತ್ಯ ಹೀಗೇ ಮುಚ್ಚಿಯೇ ಹೋಗತ್ತೆ . . . ಧನ್ಯವಾದಗಳು . . . .
ನಳಿನಿ ವೃತ್ತಿಯಾರಂಭಿಸಿದ ಮೊದಲ ದಿನವೇ ಕಾನೂನು ಮತ್ತು ಸಮಾಜದ ದ್ವಿಮುಖ ಧೋರಣೆಯ ಅನುಭವವೂ ಆಯಿತು . ಬೆಳಿಗ್ಗೆ ಗೆಸ್ಟ್ ಹೌಸ್‌ನಿಂದ ರೋಸ್ ಚೇಚಿ ಮತ್ತು ನಳಿನಿ ಹೊರಟಾಗ ಬಂದ ಪೊಲೀಸರು ಇಬ್ಬರನ್ನೂ ಬಂಧಿಸಿ ಠಾಣೆಗೆ ಕರೆದೊಯ್ದರು . ಎಲ್ಲ ಪೊಲೀಸ್ ಠಾಣೆಗಳಂತೆ ಅಲ್ಲಿಯೂ ಥಳಿತ ಆರಂಭವಾಯಿತು . ನಳಿನಿ ನೋವು ತಡೆಯಲಾರದೆ ` ರಾತ್ರಿ ಮಲಗಲು ಪೊಲೀಸರಿಗೆ ನಾವೇ ಬೇಕು . ಹಗಲು ಹೊಡೆಯುವುದಕ್ಕೂ ನಾವೇ . . . ' ಎಂದು ಕಿರುಚಿದರೆ ಪೆಟ್ಟಿನ ತೀಕ್ಷ್ಣತೆ ಹೆಚ್ಚಿತೇ ಹೊರತು ಬೇರೇನೂ ಸಂಭವಿಸಲಿಲ್ಲ . ಈ ಘಟನೆಯಿಂದಾಗಿ ನಳಿನಿಯನ್ನು ಊರವರು ಬಹಿಷ್ಕರಿಸಿಬಿಟ್ಟರು . ಮತ್ತೆ ಮನೆಗೆ ಹಿಂದಿರುಗಲಾಗದೆ , ಇರಲೊಂದು ಮನೆಯೂ ಇಲ್ಲದೆ ಲೈಂಗಿಕ ವೃತ್ತಿಯನ್ನು ಮುಂದುವರಿಸುವ ಅನಿವಾರ್ಯತೆ ಸೃಷ್ಟಿಯಾಯಿತು . ರೋಸ್‌ಚೇಚಿಯೊಂದಿಗೆ ಮನೆ ಮಾಡುವುದರೊಂದಿಗೆ ವೃತ್ತಿಯಲ್ಲೊಂದು ಸ್ಥಾನವನ್ನೂ ದೊರಕಿಸಿಕೊಂಡಾಗ ಸಂಪಾದನೆ ಹೆಚ್ಚಿತು . ಅತ್ತೆಗೆ ಗುಟ್ಟಿನಲ್ಲಿ ಹಣ ಕಳುಹಿಸಿ ಮಕ್ಕಳನ್ನು ಸಾಕುವುದಕ್ಕೂ ಸಾಧ್ಯವಾಯಿತು .
ಈ ದೂರು ದಾಖಲಾದ ನಂತರ ಕದ್ರಿ ಪೊಲೀಸರು ಕಂಡ ಕಂಡ ನಾಯಿಯನ್ನೆಲ್ಲ ಪರೀಕ್ಷಿಸಿ ನೋಡುತ್ತಿದ್ದಾರೆ . ಕೆಲವು ಬಾರಿ ಬಾಲ ಎತ್ತಿ ! ? ಎರಡು ವರ್ಷ ಕಳೆದರೂ ನಾಯಿ ಪತ್ತೆಯಾಗಿಲ್ಲ . ಪೊಲೀಸ್ ಇಲಾಖೆಯಲ್ಲಿ ಅಪರಾಧ ಪತ್ತೆ ದಳ , ರೌಡಿ ನಿಗ್ರಹ ದಳ , ಬಾಂಬ್ ಪತ್ತೆ ದಳ ಹೀಗೆ ಬೇರೆ ಬೇರೆ ದಳಗಳಿವೆ . ಶ್ವಾನ ದಳವೂ ಇದೆ . ಆದರೆ ಶ್ವಾನ ಪತ್ತೆ ದಳ ಎಂಬುದು ಇನ್ನೂ ರಚನೆಯಾಗಿಲ್ಲ . ಕದ್ರಿ ಪೊಲೀಸರಿಗೆ ಬೇಕಾದಷ್ಟು ಕೆಲಸಗಳಿವೆ . ಅದರಿಂದಾಗಿ ನಾಯಿಯ ವಾಸನೆ ಹಿಡಿದು ಹೊಗಲು ಸಾಧ್ಯವಾಗಿಲ್ಲ . ನಾಯಿ ಪತ್ತೆ ದಳ ಎಂಬುದೊಂದು ಇದ್ದರೆ ಅದಕ್ಕೆ ಈ ಪ್ರಕರಣ ವಹಿಸಿಕೊಟ್ಟು ಸುಮ್ಮನಾಗಬಹುದಿತ್ತು . ನಾಯಿ ಪತ್ತೆ ದಳ ಇಲ್ಲದ ಕಾರಣ ಕಳವಾದ ನಾಯಿ ಪತ್ತೆ ಅಸಾಧ್ಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ . ಆದರೂ ಶ್ವಾನ ದಳದ ( ಅಂದರೆ ಹೆಣ್ಣು ನಾಯಿಯ ) ಸಹಾಯ ಬಳಸಿಕೊಂಡು ಕಳವಾಗಿರುವ ಅಥವಾ ನಾಪತ್ತೆಯಾಗಿರುವ ಮಂಗಳೂರಿನ ಏಕೈಕ ಗಂಡು ಬಾಕ್ಸರ್ ನಾಯಿಯನ್ನು ಹುಡುಕಲು ಪೊಲೀಸರು ತಂತ್ರ ರೂಪಿಸುವ ಸಾಧ್ಯತೆಗಳಿವೆ . ಈ ಬಗ್ಗೆ ಪೊಲೀಸರು ಕಾನೂನು ಸಲಹೆ ಕೇಳಲು ತೀರ್ಮಾನಿಸಿದ್ದಾರಂತೆ !
ಜುಲೈನಿಂದ ಸೆಪ್ಟೆಂಬರ್ ನಡುವಿನ ಅವಧಿಯು ಆಂಧ್ರ ಪ್ರದೇಶದಲ್ಲಿ ಸಮೃಧ್ಧ ಮಳೆಯಾಗುವ ಕಾಲ . ಹಾಗಾಗಿ ಈ ತಿಂಗಳುಗಳ ಅವಧಿಯಲ್ಲಿ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗುತ್ತದೆ . ಆಂಧ್ರ ಪ್ರದೇಶದಲ್ಲಿ ಬೀಳುವ ಒಟ್ಟು ಮಳೆಯ ಮೂರನೇ ಒಂದು ಭಾಗವನ್ನು ಈಶಾನ್ಯ ಮಳೆ ಮಾರುತಗಳು ಹೊತ್ತು ತರುತ್ತವೆ . ಕೆಲವು ವೇಳೆ ಅಕ್ಟೋಬರ್ ತಿಂಗಳ ಆಸುಪಾಸಿನಲ್ಲಿ ಚಳಿಗಾಲವು ರಾಜ್ಯವನ್ನು ಪ್ರವೇಶಿಸುತ್ತದೆ . ಅಕ್ಟೋಬರ್ , ನವೆಂಬರ್ , ಡಿಸೆಂಬರ್ , ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಆಂಧ್ರ ಪ್ರದೇಶದಲ್ಲಿ ಚಳಿಗಾಲವಿರುತ್ತದೆ . ರಾಜ್ಯವು ಗಣನೀಯ ಪ್ರಮಾಣದ ಉದ್ದದ ಕರಾವಳಿ ಪ್ರದೇಶವನ್ನು ಹೊಂದಿರುವುದರಿಂದ ಇಲ್ಲಿ ಚಳಿಗಾಲದಲ್ಲಿ ಹೆಚ್ಚಿನ ಚಳಿ ಇರುವುದಿಲ್ಲ . ಚಳಿಗಾಲದಲ್ಲಿ ಇಲ್ಲಿನ ಉಷ್ಣಾಂಶವು ಸಾಮಾನ್ಯಾಗಿ ೧೩ ° Cನಿಂದ ೩೦ ° Cವರೆಗೆ ಇರುತ್ತದೆ .
" ಸ್ವಾಮೀ ತುಂಬಾ ಒಳ್ಳೆ ಕೆಲಸ ಮಾಡಿದಿರಿ . ಇನ್ನು ನಮ್ಮಲ್ಲಿ ಅರ್ಜಂಟಿಗೆ ಕಾಡು ನೋಡಬೇಕೆಂಬವರನ್ನು ನಿಮ್ಮ ಅಭಯಾರಣ್ಯಕ್ಕೆ ತರಬಹುದಲ್ಲಾ " ಟೂರ್ ಕಂಡಕ್ಟರ್ ಒಬ್ಬರ ಪ್ರಾಮಾಣಿಕ ಮಾತು . " ಅಶೋಕಣ್ಣಾ ಇನ್ನು ನಮ್ಮ ಧ್ಯಾನ ಬಳಗದ ಸತ್ಸಂಗಗಳು ನಿಮ್ಮ ಔಷಧೀಯ ತರುಲತೆಗಳ ನೆರಳಲ್ಲಿ " ಎಂದರೊಬ್ಬರು ಅಧ್ಯಾತ್ಮ ಜೀವಿ . " ಹೌದಯ್ಯಾ ಅಲ್ಲೇನೇನು ಪ್ರಾಣಿ ಬಿಟ್ಟಿದ್ದೀರಿ ? " ಜನ್ಮದಲ್ಲೊಮ್ಮೆ ಯಾವುದೋ ವನಧಾಮಕ್ಕೆ ಕಾರಿನಲ್ಲಿ ಹೋಗಿ ಬಂದವರ ಪ್ರಶ್ನೆ . " ನಿನ್ನ ಜಮೀನಿನಲ್ಲಿ ಈ ವರ್ಷ ಅಡಿಕೆ ಎಷ್ಟಾದೀತು " ಸಮೀಪದ ಕೃಷಿಕ ಬಂಧು ಒಬ್ಬರ ಕುಹಕವಿಲ್ಲದ ಕುತೂಹಲ . " ಸ್ವಲ್ಪ ನಿಮ್ಮ ಅಭಯಾರಣ್ಯದ ದಾರಿ ಹೇಳಿ . ವಾರಾಂತ್ಯದಲ್ಲೊಮ್ಮೆ ನಮ್ಮ ಶಾಲಾ ಮಕ್ಕಳನ್ನು ಪಿಕ್ನಿಕ್ ಮಾಡಿಸ್ತೇನೆ " ಮುಖ್ಯೋಪಾಧ್ಯಾಯ ಉವಾಚ . ( ನಮ್ಮಗ ) ಅಭಯ ಅವನ ಆರೇಳು ಸಹಪಾಠಿಗಳನ್ನು ಹೀಗೇ ಒಮ್ಮೆ ಅಭಯಾರಣ್ಯಕ್ಕೆ ಒಯ್ದಿದ್ದ . ಮೃಗಜಲದ ( ಗೊತ್ತಲ್ಲಾ , ಇದು ನಮ್ಮ ಬಾವಿಯ ಹೆಸರು ! ) ಕಟ್ಟೆಯಿಂದ ಇಣುಕಿ , ನಲ್ವತ್ತಡಿ ಆಳದ ನೀರು ಮೇಲೆ ತರುವ ಬಗ್ಗೆ ಒಬ್ಬ ನಾಗರಿಕಳಿಗೆ ಗಂಭೀರ ಸಮಸ್ಯೆ ಎದುರಾಯ್ತು . ಅಭಯ ರಾಟೆ , ಹಗ್ಗ ತೋರಿಸಿ " ವ್ಯಕ್ತಿಯೊಬ್ಬರ ಸೊಂಟಕ್ಕೆ ಹಗ್ಗ ಬಿಗಿದು ಇಳಿಸ್ತೇವೆ . ಅವರು ಜೊತೆಗೊಯ್ದ ಕ್ಯಾನಿನಲ್ಲಿ ನೀರು ತುಂಬಿಕೊಂಡ ಮೇಲೆ ಎಳೀತೇವೆ " ಎಂದ . ಮುಗ್ದೆ ಥಟ್ಟಂಥ " I will go this time " ಎಂದದ್ದೇ ಹಗ್ಗ ಬಿಗಿಸಿಕೊಳ್ಳಲು ಗಂಭೀರವಾಗಿ ತಯಾರಾಗಿಬಿಟ್ಟಳಲ್ಲಾ ! ಒಮ್ಮೆ ಮಂಗಳೂರಿನಿಂದ ಸುಮಾರು ಮೂವತ್ತು ಕಿಮೀ ದೂರದ ನಂದಿಕೂರಿನಲ್ಲಿದ್ದ ಬಂಡೆಗಳಲ್ಲಿ ಶಿಲಾರೋಹಣಕ್ಕೆ ಆಸಕ್ತರ ಹಿಂಡನ್ನು ( ಅವರವರ ದ್ವಿಚಕ್ರ ವಾಹನಗಳಲ್ಲಿ ) ಕರೆದೊಯ್ದಿದ್ದೆ . ಜೊತೆಗೊಟ್ಟಿದ್ದ ತರುಣ ಡಾಕ್ಟರ್ ಒಬ್ಬರು " ಫ಼ಸ್ಟ್ ಟೈಮ್ ನಾನಿಷ್ಟು ಲಾಂಗ್ ಸ್ಕೂಟರ್ ಓಡಿಸಿದ್ದು " ಎಂದು ಸಂತೋಷದಲ್ಲಿ ಬೀಗಿದ್ದರು . ಹೀಗೆ ಪಟ್ಟಿಬೆಳೆಸಿ ನಿಮಗೆ ಪುಡಾರಿ ಭಾಷಣ ನೆನಪಾಗುವ ಮೊದಲು ಸ್ಪಷ್ಟಪಡಿಸುತ್ತೇನೆ . ನಾಗರಿಕತೆ ನಮ್ಮಲ್ಲೆಷ್ಟು ಪಾರಿಸರಿಕ , ಪ್ರಾಕೃತಿಕ ಬಿಡಿ , ಸಾಮಾನ್ಯಜ್ಞಾನದ್ದೂ ಅರಿವಿನ ಕೊರತೆಯನ್ನು ಉಂಟುಮಾಡಿದೆ ಎಂದು ಕಾಣುತ್ತಲೇ ಇತ್ತು . ಅದನ್ನು ಸ್ವಲ್ಪಾದರೂ ತುಂಬಿಕೊಡುವಂತೆ , ಮನುಷ್ಯ ಪ್ರಯತ್ನಕ್ಕೆಷ್ಟು ಸಾಧ್ಯತೆಗಳಿವೆ ಎನ್ನುವುದನ್ನು ಆಯ್ದ ಕೆಲವು ತರುಣರಿಗಾದರೂ ನಮ್ಮ ಮಿತಿಯಲ್ಲಿ ಮಾಡಿಕೊಡಬೇಕೆಂದು ಒಮ್ಮೆ ನಮಗೆ ( ದೇವಕಿ , ಅಭಯ ಸೇರಿ ) ಅನ್ನಿಸಿತು . ( ಪ್ರಕೃತಿ ಪ್ರತಿಯೊಬ್ಬರಲ್ಲಡಗಿಸಿದ ಹನುಮಂತತ್ವಕ್ಕೊಂದು ಜಾಂಬವ ಸನ್ನೆಗೋಲಿಕ್ಕುವ ಪ್ರಯತ್ನ ! )
ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆಯವರ ಎಂ ಎನ್ ಎಸ್ ಕಾರ್ಯಕರ್ತರು , ಸಮಾಜವಾದಿ ಶಾಸಕನ ಮೇಲೆ ಹಲ್ಲೆ ನಡೆಸಿದ್ದು , ಆ ಸಮಾಜವಾದಿ ಶಾಸಕ ಮರಾಠಿಯನ್ನು ಧಿಕ್ಕರಿಸಿ ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೇ ತನ್ನ ಜೀವನದ ಮಹತ್ಕಾರ್ಯ ಎಂಬಂತೆ ಆಡಿದ್ದು , ಶಿವಸೇನೆ ಕಾರ್ಯಕರ್ತರು ಐ ಬಿ ಎನ್ ಕಛೇರಿಯ ಮೇಲೆ ಹಲ್ಲೆ ನಡೆಸಿದ್ದು , ಭಾಳಾ ಠಾಕ್ರೆ ಅದ್ಯಾವುದೋ ಕೆಲವೇ ಮರಾಠಿಗರು ಓದುವ ಸಾಮ್ನಾ ಎಂಬ ಪತ್ರಿಕೆಯಲ್ಲಿ ಗೀಚಿದ್ದೆಲ್ಲಾ ಯಾವುದೋ ದೊಡ್ಡ ಸುದ್ದಿಯೆಂಬಂತೆ ಎಲ್ಲಾ ತಲೆ ಕೆಟ್ಟ ರಾಷ್ಟ್ರೀಯ ವಾಹಿನಿಗಳಲ್ಲಿ ಚರ್ಚಿಸುವುದು ಒಂದು ಆತಂಕಕಾರಿ ಬೆಳವಣಿಗೆಯೇ ಎನ್ನಬಹುದು . ಆತಂಕಕಾರಿ ಏಕೆಂದರೆ ಒಂದು ನಿಟ್ಟಿನಲ್ಲಿ ಇದು ನಮ್ಮದೇ ದೇಶದ ಪ್ರಜೆಗಳ ನಡುವೆ ದ್ವೇಷವನ್ನು ಬಿತ್ತುತ್ತಿದ್ದರೆ , ಮಾತೃಭಾಷೆಯ ಮೇಲೆ ನಿಜವಾದ ಅಭಿಮಾನವುಳ್ಳವರನ್ನು ಅನುಮಾನಿಸುವ , ಅವಮಾನಿಸುವ ಪ್ರಸಂಗ ಬಂದೊದಗುತ್ತಿರುವುದು ಒಂದು ದುರಂತವೇ !
ಮಾನವನ ಬದುಕು ಜನನ - ಮರಣಗಳ ನಡುವೆ ಸಾಗುವ ಸಂಕಷ್ಟಗಳ ಅಕ್ಷಯ ಪಾತ್ರೆ . ಸದಾ ಕಾಡುವ ನಮ್ಮ ಕಷ್ಟಗಳಿಗೆ ಬೆಳಕಾಗಿ ಕಾಣುವುದು ಜೋತಿಷ್ಯ ಶಾಸ್ತ್ರ . ನಿಮ್ಮ ಬದುಕಿನ ಭವ್ಯ ಭವಿಷ್ಯಯದ ಕನಸು ನನಸು ಮಾಡಲು ಬಹುಜನರ ಒತ್ತಾಯದ ಮೇರೆಗೆ ಬೆಂಗಳೂರಿನಲ್ಲೇ ವಾಸವಾಗಿದ್ದಾರೆ ಶ್ರೀ … … … … ಜ್ಯೋತಿಷಿ . ನಿಮ್ಮ ಸಮಸ್ಯೆಗೆ ಪರಿಹಾರ ಸಿಗದೆ ನೊಂದಿದ್ದರೆ ಯಾವುದೇ ಕಠಿಣ ಸಮಸ್ಯೆಗಳಿಗೆ ಅತೀಶೀಘ್ರ ಪರಿಹಾರ ಮಾಡಿಕೊಡುತ್ತಾರೆ . ನಿಮ್ಮ ಸಮಸ್ಯೆಗಳಾದ ವಿದ್ಯೆ , ನಿರುದ್ಯೋಗ , ವ್ಯಾಪರದಲ್ಲಿ ನಷ್ಟ , ವಿವಾಹ ವಿಳಂಬ , ಸಂತಾನ ಹೀನತೆ , ಸ್ತ್ರೀ - ಪುರುಷ ವಶೀಕರಣ , ಪ್ರೇಮ ವೈಫಲ್ಯ , ಪತಿ - ಪತ್ನಿ ಅಶಾಂತಿ , ಅನಾರೋಗ್ಯ , ಕುಟುಂಬ ಸಮಸ್ಯೆ , ಶತ್ರು ಕಾಟ , ಜಾಗದ ವ್ಯಾಜ್ಯೆ , ಬಿಜನೆಸ್ , ವಿದೇಶ ಪ್ರಯಾಣ , ಸಾಲಬಾಧೆ , ಶತ್ರು ಬಾಧೆ , ದಾಂಪತ್ಯ , ಲೈಂಗಿಕ ಸುಖ , ಮನಃಶಾಂತಿ , ಕೋರ್ಟ್ ಕೇಸ್ , ಮಾಟಮಂತ್ರ , ದುಷ್ಟ ಶಕ್ತಿ , ಗುಪ್ತ ಸಮಸ್ಯೆ ಸೇರಿದಂತೆ ನಿಮ್ಮ ಎಲ್ಲಾ ತೊಂದರೆಗಳಿಗೂ ಕೇರಳದ ಶಾಸ್ತ್ರೀಯ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ .
ಊಂ ಕನಣ್ಣ . . . ನೀ ಯೋಳಿದ್ದು ಭಾಳಾ ಸತ್ವಾ ಕನಣ್ಣ . ಗಾಂಧಿ ಮ್ಯಾಗೆ ಗೋಡ್ಸೆ ಬರ್ದುದ್ನ ಕಣ್ಮುಸಿಕಂಡು ನಂಬ್ ಬ್ಯಾಕಣ್ಣ . ಓದಕ್ಕೆ ಬರಕ್ಕೆ ಬರೋ ವಟ್ಟೆಗೆ ಅನ್ನಾ ತಿನ್ನೋರೆಲ್ಲ ಮೊದ್ಲು ಮಾಡ್ಬೇಕಾಗಿರೋ ಕೆಲ್ಸ ಕಣಣ್ಣ ಅದು .
ಆತ್ಮೀಯರಾದ ರಾಘವೇಂದ್ರನಾವಡರೆ ವಿವಾಹೇಚ್ಛು ಶಬ್ದ ನನಗೆ ತಿಳಿದಮಟ್ಟಿಗೆ ಹೆಚ್ಚು ಪ್ರಯೋಗವಾಗಿದೆ , ಅದನ್ನೇ ಬಳಸಿದ್ದೇನೆ . ಆ ಪ್ರಯೋಗ ತಪ್ಪು ಸರಿ ಎಂಬ ಬಗ್ಗೆ ವ್ಯಾಕರಣ ಬಲ್ಲವರು ತಿಳಿಸಿದರೆ ತಿದ್ದಿಕೊಳ್ಳಬಹುದು . ತಮ್ಮ ಆಸಕ್ತಿ ಅಭಿಮಾನಗಳಿಗೆ ಧನ್ಯವಾದಗಳು
ವ್ಯಾಪಾರ - ಆಧಾರಿತ , ಆದರೆ ತೈಲ - ಅವಲಂಬಿತ , ಆರ್ಥಿಕತೆಯಿಂದ ಸೇವೆಗಳು ಹಾಗೂ ಪ್ರವಾಸೋದ್ಯಮ ಅಭಿಮುಖವಾಗಿಸುವ ಸರ್ಕಾರದ ನಿರ್ಧಾರವು ಸ್ಥಿರಾಸ್ತಿ ಉದ್ಯಮದ ಮೌಲ್ಯವನ್ನು ಹೆಚ್ಚಿಸಿದುದರ ಪರಿಣಾಮವಾಗಿ ೨೦೦೪ - ೨೦೦೬ರ ಸಾಲಿನಿಂದಾದ ಸ್ಥಿರಾಸ್ತಿಗಳ ಬೆಲೆ ಏರಿಕೆಗೆ ಕಾರಣವಾಗಿದೆ . ದುಬೈನ ಸ್ಥಿರಾಸ್ತಿ ಮಾರುಕಟ್ಟೆಯ ದೀರ್ಘಕಾಲೀನ ಮೌಲ್ಯಾಂಕನವು ಇಳಿಕೆಯನ್ನು ತೋರಿಸಿವೆ , ಹೇಗಾದರೂ ಕೆಲ ಸ್ಥಿರಾಸ್ತಿಗಳು ೨೦೦೧ರಿಂದ ನವೆಂಬರ್ ೨೦೦೮ರವರೆಗೆ ತಮ್ಮ ಮೌಲ್ಯದ ೬೪ % ರಷ್ಟು ಇಳಿಕೆಯನ್ನು ಕಂಡವು . [ ೬೭ ] ಬೃಹತ್ ಪ್ರಮಾಣದ ಸ್ಥಿರಾಸ್ತಿ ಅಭಿವೃದ್ಧಿ ಯೋಜನೆಗಳಿಂದಾಗಿ ಎಮಿರೇಟ್ಸ್ ಟವರ್ಸ್ , ಬುರ್ಜ್ ದುಬೈ , ಪಾಮ್ ಐಲೆಂಡ್ಸ್ ಮತ್ತು ವಿಶ್ವದ ಎರಡನೇ ಅತಿ ಎತ್ತರದ ಹಾಗೂ ಅತ್ಯಂತ ದುಬಾರಿ ಹೋಟೆಲ್ ಬುರ್ಜ್ ಅಲ್ ಅರಬ್‌ನಂತಹಾ , ವಿಶ್ವದಲ್ಲೇ ಅತಿ ಎತ್ತರದ ಗಗನಚುಂಬಿ ಕಟ್ಟಡಗಳ ಹಾಗೂ ಅತಿ ದೊಡ್ಡ ನಿರ್ಮಾಣ ಯೋಜನೆಗಳಿಗೆ ಕಾರಣವಾಯಿತು . [ ೬೮ ]
ನಿಜ ಎಲ್ಲಿಯವರೆಗೆ ಪ್ರಾಮಾಣಿಕತೆಯಿಂದ ವರ್ತಿಸುವದಿಲ್ಲವೋ ಅಲ್ಲಿಯವರೆಗೆ ಒಂದಲ್ಲ ಒಂದು ರೀತಿಯಲ್ಲಿ ಮೋಸ ಹೋಗುವದು ತಪ್ಪದು .
೨೬ . ಸಹಿ ಮಾಡಿರುವ ಎಲ್ಲಾ ಒಂಡಂಬಡಿಕೆಗಳನ್ನು ನಿಗದಿ ಕಾಲಮಿತಿಯೊಳಗೇ ಅನುಷ್ಠಾನಗೊಳ್ಳಲು ಅಗತ್ಯವಿರುವ ಅಂಶಗಳ ಸ್ಪಷ್ಟ ಚಿತ್ರಣ ನಮಗಿದೆ .
ಮತ್ತೆ ' ಕಾಲ ' ದ ಪಾತ್ರ . ವಾಸಂತಿ ಮೈಸೂರಿಗೆ ಹೋಗೋ ದಿನ ಬಂದೇ ಬಿಟ್ಟಿತು . ನನ್ನ ಮೂಕರೋಧನೆ , ಮಡುವಾಗಿ ಹರಿಯೋ ಹೊತ್ತು ಕೂಡ ಇದೇ ಆಗಿತ್ತು . ಭಾರವಾದ ಹೆಜ್ಜೆಗಳೊಂದಿಗೆ ಬಸ್ ನಿಲ್ದಾಣಕ್ಕೆ ಹೋಗಿದ್ದೆ . ಬೇಕಾಗಿದ್ದ ಬಸ್ಸುಗಳು ಬೇಕಾದಷ್ಟಿದ್ದರೂ , ಹತ್ತುವ ಮನಸ್ಸು ಅವಳಿಗಿರಲಿಲ್ಲ . ಒಂದೆರಡು ಘಂಟೆಗಳ ಕಾಲ ಮತ್ತೆ ಮೌನದ ಭರಾಟೆ ನಡೆಯಿತು . ಕೊನೆಗೆ ಅವಳೇ ಏನೋ ನಿರ್ಧಾರಕ್ಕೆ ಬಂದವಳ ಹಾಗೆ , ಆ ಮೌನವನ್ನು ಮುರಿದಳು .
ಎಫ್ . ಎಸ್ . ಎಫ್ . ದಾನಗಳನ್ನು ಸ್ವೀಕರಿಸುತ್ತದೆ ಆದರೆ ಅದರ ಗಳಿಕೆಯ ಬಹುಪಾಲು ಸ್ವತಂತ್ರ ತಂತ್ರಾಂಶಗಳ ಮಾರಾಟದಿಂದಲೇ ಬರುತ್ತಿತ್ತು . ಹಾಗೂ ಅದಕ್ಕೆ ಸಂಬಂಧಪಟ್ಟ ಸೇವೆಗಳಿಂದಲೂ ಕೂಡ ಬರುತ್ತಿತ್ತು . ಇಂದು ಎಫ್ . ಎಸ್ . ಎಫ್ . ಮೂಲ ಸಂಕೇತಗಳ ದ್ವಿಸಂಖ್ಯಾ ರೂಪದ ತಂತ್ರಾಂಶವಿರುವ ದೃಗ್ಬಿಲ್ಲೆ ಮತ್ತು ತುಂಬಾ ಅಚ್ಚುಕಟ್ಟಾಗಿ ಮುಂದ್ರಣಗೊಂಡಿರುವ ಕೈಪಿಡಿಗಳನ್ನು ( ಎಲ್ಲವು ಬದಲಾಯಿಸುವ ಮತ್ತು ಮರುವಿತರಣೆ ಮಾಡುವ ಸ್ವಾತಂತ್ರ್ಯವಿರುವ ) ಮಾರುತ್ತಿದ್ದೆ . ಇದಲ್ಲದೆ ಸಮೃದ್ಧವಾದ ವಿತರಣೆಗಳನ್ನು ( ಎಲ್ಲಾ ಸ್ವತಂತ್ರ ತಂತ್ರಾಂಶಗಳ ಸಂಕಲನವನ್ನು ಬಳಕೆದಾರರ ಯಂತ್ರಾಂಶದ ವೇದಿಕೆಗನುಸಾರವಾಗಿ ಪಡೆಯುವಂತೆ ಅನುವಾದಿಸಿ ಜೋಡಿಸಿರುವ ) ಮಾರುತ್ತದೆ .
ಏಕದಿನ ವಿಶ್ವಕಪ್ ಬಳಿಕ ವೆಟ್ಟೋರಿ ನಾಯಕತ್ವಕ್ಕೆ ಗುಡ್‌ಬೈ 6 months ago ಸತತ ಸೋಲಿನಿಂದ ಬೆಸತ್ತಿರುವ ನ್ಯೂಜಿಲೆಂಡ್ ತಂಡದ ನಾಯಕ ಡ್ಯಾನಿಯಲ್ ವಿಟ್ಟೋರಿ ಕೊನೆಗೂ ತಮ್ಮ ನಾಯಕತ್ವ ತ್ಯಜಿಸಲು ಮುಂದಾಗಿದ್ದಾರೆ . ಮುಂಬರುವ ಏಕದಿನ ವಿಶ್ವಕಪ್ ಬಳಿಕ ನಾಯಕತ್ವಕ್ಕೆ ಗುಡ್‌ಬೈ ಹೇಳುವುದಾಗಿ . . .
ಪ್ರಭು ಸರ್ , ಪ್ರತಿಯೊಬ್ಬ ಅಳಿಯಂದಿರು ತಿಳ್ಕೊಬೇಕದ್ದ್ದು ಹೇಳಿದಿರಿ . . ನೈಸ್ ಅರ್ಟಿಕಲ್ ಎಲ್ಲರೂ ಇಂತಹ ಸೂಕ್ಷ್ಮತೆ ಅರಿತರೆ ಸಂಬಂದಗಳು ಎಷ್ಟು ಚೆನ್ನಾಗಿರತ್ತೆ ಅಲ್ವ : ) ಎಲ್ಲ ಅತ್ತೆಯಂದಿರಿಗೂ ನಿಮ್ಮಂತಹ ಅಳಿಯ ಸಿಗಲಿ . . . . " ಇಲ್ಲಿ ಸ್ಟಾರ್ಟ್ಇಂಗ್ ನಲ್ಲೇ ಪದ್ದು " . . : D
ಶೈಲೇಂದ್ರ ಸಾಮ್ರಾಜ್ಯ - ಈ ರಾಜವಂಶವು ಕ್ರಿ . ಶಕ ೮ನೇ ಶತಮಾನದಲ್ಲಿ ತಲೆಯೆತ್ತಿತು . ಜಾವಾದ್ವೀಪದ ಮಧ್ಯದ ಪ್ರದೇಶವು ಈ ರಾಜರ ಕಾರ್ಯಸ್ಥಾನ , ರಾಜ್ಯದ ಕೇಂದ್ರ ಬಿಂದುವಾಗಿತ್ತು . ಈ ಸಾಮ್ರಾಜ್ಯವು ಸುಮಾತ್ರಾ , ಬಾಲಿ , ಬೋರ್ನಿಯೋ ಮತ್ತು ಮಲಯಾ ದ್ವೀಪಗಳಲ್ಲಿ ಆವರಿಸಿತ್ತು . ಈ ಸಾಮ್ರಾಜ್ಯದ ವಿವರಗಳು ಅಲ್ಲಿ ದೊರಕಿದ ಪ್ರಾದೇಶಿಕ ಲಿಖಿತ ಬರಹಗಳು , ಶಿಲಾಶಾಸನಗಳಿಂದ ಕಂಡು ಬರುತ್ತವೆ . ಆಗಿನ ಕಾಲದಲ್ಲಿ ಸಮುದ್ರ ಯಾನ ಮಾಡುತ್ತಿದ್ದ ಅರಬ್ಬೀ ವರ್ತಕರ ಬರಹಗಳಲ್ಲೂ ಇದರ ಮೇಲೆ ಉಲ್ಲೇಖಿಸಿದ್ದಾರೆ . ಈ ವಂಶದವರೆಲ್ಲರೂ ಬೌದ್ಧಧರ್ಮದ ಅನುಯಾಯಿಗಳು . ಇವರು ಅತ್ಯಂತ ಹೆಚ್ಚಿನ ಅಧಿಕಾರವನ್ನು ಹೊಂದಿದ್ದದವನನ್ನು ಮಹಾರಾಜ ಎಂದು ಕರೆಯುತ್ತಿದ್ದರು , ಮತ್ತು ಮಹಾರಾಜನ ಅಧಿಕಾರ , ಪ್ರಭಾವ ಅಪರಿಮಿತವಾಗಿದ್ದವು , ಅವನು ಎಲ್ಲರಿಗಿಂತಲೂ ಉನ್ನತ ಸ್ಥಾನದಲ್ಲಿದ್ದನು . ಇವನ ಕೆಳಗಿದ್ದ ನೌಕಾ ಪಡೆಯು ಅಗಾಗ ನೆರೆಯ ಲ್ಲಿದ್ದ ಕಂಭುಜ , ಚಂಪಾ ದೇಶಗಳ ಮೇಲೆ ಧಾಳಿಯಿಡುತ್ತಿದ್ದವು . ಈ ಮಹಾರಾಜ ಎಂದೆನಿಸಿಕೊಂಡವನು ದಿನಾ ಒಂದು ಚಿನ್ನದ ಇಟ್ಟಿಗೆಯನ್ನು ಸರೋವರಕ್ಕೆಸೆಯುತ್ತಿದ್ದನೆಂಬ ವರ್ಣನೆಯಿದೆ . ಚೀನಾ ಮತ್ತು ಭಾರತ ದೇಶದ ರಾಜರು , ಅಧಿಕಾರಿಗಳು ಇವರ ಮಹಾರಾಜನನ್ನು ಭಯ - ಭಕ್ತಿ ಗೌರವಗಳಿಂದ ಕಾಣುತ್ತಿದ್ದರು . ಈ ರಾಜರು ಭಾರತ ಮತ್ತು ಚೀನಾ ದೇಶಗಳೊಡನೆ ನಿಕಟ ರಾಜಕೀಯ ಸಂಬಂಧ ಮತ್ತು ಸಂಪರ್ಕವನ್ನಿಟ್ಟುಕೊಂಡಿದ್ದರು . ಪಾಲ ರಾಜರು ಬಂಗಾಳವನ್ನಾಳುತ್ತಿದ್ದಾಗ ಈ ರಾಜ್ಯದಲ್ಲಿ ಬೌದ್ಧ ಧರ್ಮದ ಪ್ರವೇಶವಾಯಿತು . ಪಾಲರಾಜರು ಸ್ವತಃ ಬೌದ್ಧ ಧರ್ಮಾವಲಂಬಿಗಳಾದುದರಿಂದ ಧರ್ಮಪ್ರಚಾರಕ್ಕೆ ಪ್ರೋತ್ಸಾಹವನ್ನಿತ್ತರು . ಶೈಲೇಂದ್ರ ರಾಜನಾಗಿದ್ದ ಬಾಲಪುತ್ರದೇವ ತನ್ನ ರಾಯಭಾರಿಯನ್ನು ಪಾಲರಾಜ ದೇವಪಾಲನ ಆಸ್ಥಾನಕ್ಕೆ ಕಳುಹಿಸಿದ್ದನು . ಆಗಿನ ಕಾಲದಲ್ಲಿ ಬಂಗಾಳ ಪ್ರಾಂತ್ಯವು ಮಹಾಯಾನ ಪಂಥದ ಕೇಂದ್ರಸ್ಥಾನವಾಗಿತ್ತು ಮತ್ತು ಇದರ ಪ್ರಭಾವು ಬಹಳ ದೂರದ ವರೆಗೆ ಶೈಲೇಂದ್ರ ಸಾಮ್ರಾಜ್ಯದ ವರೆಗೂ ಹಬ್ಬಿತ್ತು . ಕುಮಾರಘೋಷನೆಂಬ ಬೌದ್ಧ ಸನ್ಯಾಸಿ ಬಂಗಾಳದಿಂದ ಹೋಗಿ , ಶೈಲೇಂದ್ರ ರಾಜನಿಗೆ ಸಲಹಾಗಾರನಾಗಿ ನೇಮಿಸಲ್ಪಟ್ಟನು .
ದು ಸಂಜೆ 6 ಗಂಟೆಯ ಸಮಯ . ದೂರದಿಂದ ಚೆಂಡೆಯ ನಿನಾದ ಒಂದೇ ಸಮನೆ ಕಿವಿಗೆ ಅಪ್ಪಳಿಸುತ್ತಿದೆ . ಊರವರು " ಓಹ್ ! ಆಟ ಶುರುವಾಯ್ತು " ಎಂದು ಚಾಪೆಯನ್ನೋ ಕಂಬಳಿಯನ್ನೋ ಗಂಟು ಕಟ್ಟಿಕೊಂಡು ಪುಟ್ಟ ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಆಟದ ಬಯಲಿನತ್ತ ನಡೆಯತೊಡಗುತ್ತಾರೆ . ಯಕ್ಷಗಾನದ ಪರಿಭಾಷೆಯಲ್ಲಿ ಇದನ್ನು " ಕೇಳಿ ಬಡಿಯುವುದು " ಎನ್ನುತ್ತಾರೆ . ಯಕ್ಷಗಾನದ ಆದಿಯಲ್ಲಿ ಇಂದಿನಂತೆ ಪ್ರಚಾರದ ಸೌಲಭ್ಯ ಇಲ್ಲವಾಗಿತ್ತಷ್ಟೆ . ಇಂತಿರುವಾಗ ಜನರಿಗೆ ಆಟ ಇದೆ ಎಂಬುದನ್ನು ತಿಳಿಯಪಡಿಸುವುದು ಹೇಗೆ ? ಅದಕ್ಕಾಗಿಯೇ ಆರಂಭವಾದದ್ದು " ಕೇಳಿ ಬಡಿಯುವುದು . " ಚೆಂಡೆ ವಾದಕರು ಸರಿಯಾಗಿ 6 ಗಂಟೆಯ ಹೊತ್ತಿಗೆ ಚೆಂಡೆ ಬಡಿಯಲು ಆರಂಭಿಸುತ್ತಾರೆ . ಈ ವಾದನ ಹತ್ತು - ಹದಿನೈದಿ ನಿಮಿಷ ಮುಂದುವರಿಯುತ್ತದೆ . ಚೆಂಡೆಯ ಉರುಳಿಕೆ ಕೇಳಿ ಬರುವ ದಿಕ್ಕಿನತ್ತ ಜನರು ಹೊರಡುವವರೆಗೆ . . . . . ಇಂದಿನ ಕಾಲದಲ್ಲಿ ಸಾಕಷ್ಟು ಪ್ರಚಾರ ಸೌಲಭ್ಯ ಇರುವುದರಿಂದ ಕೇಳಿ ಬಡಿಯುವ ಅಗತ್ಯ ಇಲ್ಲವಾದರೂ ಸಂಪ್ರದಾಯದಂತೆ ಇಂದಿಗೂ ಮುಂದುವರಿದಿದೆ .
ನಿಮ್ಮ ಲೇಖನ ಓದಿದಾಗ , ಹಿ೦ದೆ ಓದಿದ , ಕುವೆ೦ಪುರವರ , ಸಾಹಿತ್ಯದ ಜೊತೆಗೆ , ಜಿ . ವಿ . ಅಯ್ಯರ್ರವರ , ಚಲನಚಿತ್ರಗಳ ಅನುಭವವು ಮತ್ತೊಮ್ಮೆ ಆಯಿತು . ಆಪೋಕ್ಯಾಲಿಪ್ಟೊ ಚಿತ್ರವನ್ನು ಚೆನ್ನಾಗಿ ವಿಮರ್ಶಿಸಿದ್ದೀರಿ . ಧನ್ಯವಾದಗಳು . ನಿಮ್ಮವ - ಅನ೦ತ .
ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು , ಇನ್ನು ಕೆಲವರಿಗೆ ಹೂವು . ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು . ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು ! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ .
ಮೊದಲ ಮುನ್ನೆಚ್ಚರಿಕೆ ಸಮೀಪದಲ್ಲಿರುವ ಪ್ರಾಣಿಗಳಿಂದ ಬರುತ್ತದೆ . ಅನೇಕ ಪ್ರಾಣಿಗಳು ಅಪಾಯವನ್ನು ಗ್ರಹಿಸಿ , ನೀರು ಸಮೀಪಿಸುವುದಕ್ಕೆ ಮುನ್ನವೇ ಎತ್ತರದ ಪ್ರದೇಶಗಳಿಗೆ ಪಲಾಯನ ಮಾಡುತ್ತವೆ . ಯುರೋಪಿನಲ್ಲಿ ಸಂಭವಿಸಿದ ಅಂತಹ ಘಟನೆಗಳಲ್ಲಿ ಮೊದಲು ದಾಖಲಿತವಾಗಿರುವುದು ಲಿಸ್ಬನ್ ಕಂಪನ . ಇಂತಹುದೇ ಘಟನೆ ಶ್ರೀಲಂಕದಲ್ಲೂ ೨೦೦೪ರಲ್ಲಿ ಸಂಭವಿಸಿದ ಹಿಂದೂಮಹಾಸಾಗರದ ಭೂಕಂಪ ದಲ್ಲಿ ನಡೆದಿರುವುದನ್ನು ಗುರುತಿಸಲಾಗಿದೆ . ( [ ೨ ] ) ಪ್ರಾಣಿಗಳಿಗೆ ಸುನಾಮಿ ದಡಕ್ಕೆ ಅಪ್ಪಳಿಸುವ ನಿಮಿಷ ಅಥವಾ ಘಂಟೆಗಳ ಮುಂಚೆ ಭೂಕಂಪನದ ಶಬ್ದವೇಗ ( subsonic - ಶಬ್ದವೇಗಕ್ಕಿಂತ ಕಡಿಮೆ ) ವನ್ನು ( Rayleigh waves ) ಗ್ರಹಿಸುವ ಸಾಮರ್ಥ್ಯವಿದೆಯೆಂದು ಕೆಲವು ವಿಜ್ಞಾನಿಗಳು ಊಹಿಸುತ್ತಾರೆ . ( Kenneally , [ ೩ ] ) .
ಮಂಗಳೂರಿನಿಂದ ನನ್ನ ಬ್ಲಾಗಿನ ಕೊನೆಯ ಪೋಸ್ಟ್ " ಬಯಸದೆ ಬಂದ ಭಾಗ್ಯ ' ! ಅಂಥದ್ದೇ ಭಾಗ್ಯ ನನ್ನನ್ನು ಅಲ್ಲಿಂ ' ದಿಲ್ಲಿ ' ಗೆ ತಂದು ನಿಲ್ಲಿಸಿದೆ . ಅವಕಾಶ ಬಾಗಿಲು ತಟ್ಟಿದಾಗ ಬಿಡಬಾರದು ಅಂತಾರೆ . ಆದರೆ ಅವಕಾಶಕ್ಕೆ ಬಾಗಿಲು ತಟ್ಟುವ ಅವಕಾಶವನ್ನೂ ನಾನು ಕೊಡಲಿಲ್ಲ . ಯಾಕೆಂದರೆ ಬಾಗಿಲು ತೆರೆದೇ ಇತ್ತು ! !
ಬಹುಶ : ಎರಡನೆಯವ ಮೊದಲನೆಯವನ ತ೦ದೆ . ಈ ದೃಶ್ಯ ಖ೦ಡಿತ ಒ೦ದು ತೆರನಾದ ಜಾಹಿರಾತು . ನನಗೆ ತಿಳಿಯದೇ ಹೋದದ್ದು ಒ೦ದೇ . ಜಾಹಿರಾತು ಗರ್ಭನಿರೋಧಕದ ಬಗ್ಗೆಯೇ ? ಫಿನ್ನಿಶ್ - ನೋಕಿಯ ಮೊಬೈಲು ಬಳಸುವುದು ಲೈ೦ಗಿಕ ಕ್ರಿಯೆಯ೦ತೆ ಎ೦ದರ್ಥವೆ ? ಕಲಾವಿದ ದ೦ಪತಿಗಳ ಮುರುಕಲು ಫಿನ್ನಿಶ್ ವಿವರಣೆಯಿ೦ದಾಗಿ ಆ ಜಾಹೀರಾತು ನನಗೆ ಬೆಳದಿ೦ಗಳ ಬಾಲೆಯಾಗೇ ಉಳಿದುಕೊ೦ಡುಬಿಟ್ಟಿತು !
ಒಟ್ಟ್ಟಿನಲ್ಲಿ ನಾನು ನೋಡಿದ ಪರಮ ದರಿದ್ರ ಸಿನೆಮಾಗಳಲ್ಲಿ ಇದೂ ಒಂದು . ಕನ್ನಡ ಚಿತ್ರಗಳಿಗೆ ಎಲ್ಲರೂ ಬಯ್ಯೋದು ಸರಿ ಅನ್ನಿಸಿಬಿಡುತ್ತದೆ ಒಮ್ಮೊಮ್ಮೆ .
ನಿನ್ನೆ ರಾತ್ರಿ ಒಂದು ಗಂಟೆಯ ತನಕ ಕೂತು ಭಾಮಿನಿ ಷಟ್ಪದಿ ಓದಿ ನೇ ಮಲಗಿದ್ದು ನಾನು .
ಗುಹಾ ಬಗ್ಗೆ ಕೇಳಿದ್ದೆ , ಬರಹಗಾರರಿಗೂ ಮಾನ್ಯತೆ ಸಿಕ್ಕೋದು ಅಪರೂಪ . ಜತೆಗೆ ಬರೆದದ್ದಕ್ಕೆ ಅವರಿಗೆ ಹೇರಳ " ಧನ್ - ಯತೆ " ಯೂ ಸಿಗ್ತಿರೋದು ವಿಷೇಷ .
ಭಾರತೀಯ ಕ೦ದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಪುಷ್ಕರ್ ಭಟ್ನಾಗರ್ ಈ ಸಾಫ್ಟ್ ವೇರ್ ಅನ್ನು ಯು . ಎಸ್ . ನಿ೦ದ ಪಡೆದುಕೊ೦ಡರು . ಇದನ್ನು ಸೂರ್ಯಗ್ರಹಣ , ಚ೦ದ್ರಗ್ರಹಣ ಹಾಗೂ ಭೂಮಿಯಿ೦ದ ಇತರೆ ಗ್ರಹಗಳಿರುವ ದೂರವನ್ನು ಲೆಕ್ಕ ಹಾಕಲು ಬಳಸುತ್ತಿದ್ದರು . ಭಟ್ನಾಗರ್ ಅವರು ಅದರಲ್ಲಿ ಮಹರ್ಷಿ ವಾಲ್ಮೀಕಿ ಬರೆದಿರುವ ಎಲ್ಲಾ ಗ್ರಹಗಳ ಮಾಹಿತಿಗಳನ್ನು ಆಯಾ ದಿನಗಳಿಗೆ ಸ೦ಬ೦ಧಿಸಿದ೦ತೆ ನೀಡಲಾಗಿ , ಅದರಿ೦ದ ಮಹತ್ತರವಾದ ಹಾಗೂ ಉತ್ತಮ ಫಲಿತಾ೦ಶವನ್ನು ಪಡೆದರು . ಬಹುತೇಕವಾಗಿ ಶ್ರೀ ರಾಮನ ಜನನದಿ೦ದ ಹಾಗೂ ಅವನು ವನವಾಸವನ್ನು ಪೂರೈಸಿ ಅಯೋಧ್ಯೆಗೆ ಮರಳಿ ಬರುವವರೆಗಿನ ಎಲ್ಲಾ ಮಾಹಿತಿಗಳನ್ನು ಆ೦ಗ್ಲ ವಾರ್ಷಿಕ ದಿನಾ೦ಕದ೦ತೆ ಪಡೆದರು . Read more …
ಇಂಗ್ಲಿಷ್ ಲೇಖಕ ಸಾಮರ್‌ಸೆಟ್ ಮಾಮ್ ಬರೆದ ಕತೆಯಿದು . ಲಂಡನ್‌ನ ಸೇಂಟ್‌ಪೀಟರ್‍ಸ್ ಚರ್ಚ್‌ನಲ್ಲಿ ಒಬ್ಬ ಕೆಲಸಗಾರನಿದ್ದ . ಚರ್ಚನ್ನು ಸ್ವಚ್ಛ ಹಾಗೂ ಅಂದಚೆಂದವಾಗಿ ಇಡುವುದು ಅವನ ಕೆಲಸ , ಜವಾಬ್ದಾರಿ . ಆತ ತನ್ನ ಹೊಣೆಗಾರಿಕೆಯನ್ನು ಅಚ್ಚುಕಟ್ಟಾಗಿಯೇ ನಿಭಾಯಿಸುತ್ತಿದ್ದ . ಅದೇ ಚರ್ಚ್‌ನಲ್ಲಿ ತರಲೆ ಪಾದ್ರಿಯೊಬ್ಬನಿದ್ದ . ಅವನು ಎಲ್ಲದರಲ್ಲೂ ತಪ್ಪು ಹುಡುಕುವ ಕಿರು ' ಕುಳ ' . ಒಂದು ದಿನ ಈ ಕೆಲಸಗಾರನನ್ನು ಕಿತ್ತುಹಾಕಿದ . ಅದಕ್ಕೆ ಪಾದ್ರಿ ನೀಡಿದ ಕಾರಣ - ಆ ಕೆಲಸಗಾರನಿಗೆ ಓದಲು , ಬರೆಯಲು ಬರೊಲ್ಲ ಅಂತ .
ಜೇಮ್ಸ್ ಮತ್ತು ಲಿಂಡಾ ದು ಬ್ರೇಕ್ ಅಯ್ತು ಅಂತ ಅನ್ಸುತ್ತೆ , ಲಿಂಡಾ ಮತ್ತೆ orkut ನಲ್ಲಿ ಸಿಂಗಲ್ ಅಂತ ಹಾಕಿದ್ದಾಳೆ , ನೋಡು ಅಂತ ವಿನ್ಸಿ , messanger ನಲ್ಲಿ breaking news ಕಳಿಸಿದ್ದು ನೋಡಿ ಸಣ್ಣದಾಗಿ ತುಟಿ ಅಂಚಿನಲ್ಲಿ ನಕ್ಕು " sure our agent will drop at your place exactly at the appointed time " ಅಂತ ಹೇಳಿ phone disconnect ಮಾಡಿದಳು .
ಮೊನ್ನೆ ಚುನಾವಣೆಯಲ್ಲಿ ಯೂ ಪಿ ಏ ಅನಿರೀಕ್ಷಿತ ಜಯಭೇರಿ ಹೊಡೆದ್ದದ್ದು ಎನ್ ಡಿ ಏ ಹಿಂಬಾಲಕರಿಗೆ ಸಹಿಸಲಾಗದ ನಿರಾಶೆ ಮತ್ತು ಕಳವಳ ಅಪೇಕ್ಷಿತ ರೀತಿಯಲ್ಲೆ ಉಂಟಾಗಿದೆ . ನನ್ನ ಸ್ನೇಹಿತರ ಗುಂಪಿನಿಂದ ಕೇಳಿಬಂದದ್ದರ ಸಾರಂಶ ಇದು . " ಅಂತೂ ನಮ್ಮ ದೇಶದ ಜನರಿಗೆ ಯಾವಾಗ್ ಬುದ್ದಿ ಬರುತ್ತೋ ಆ ದೇವ್ರಿಗೆ ಗೊತ್ತು . . .
ನಮ್ಮ ಮನೆಯಲ್ಲಿ ಒಂದು ಚಿಕ್ಕ ಅಕ್ವೇರಿಯಂ , ಅದರಲ್ಲಿ ೨೦೦೩ ರಿಂದ ನೆಲೆ ನಿಂತಿದ್ದ ಒರ್ಯಾಂಡಾ ( oranda ) ಜಾತಿಯ ಗೋಲ್ಡ್ ಫಿಶ್ ಮೊನ್ನೆ ಸತ್ತು ಹೋಯಿತು . ಒಂದು ಸಾಕು ಪ್ರಾಣಿಯ ಕುರಿತು , ಅದರ ನೆಲೆಗೆ ಹೊಂದಿಕೊಂಡ ನಮ್ಮ ನಡವಳಿಕೆಗಳ ಕುರಿತು ಈ ಲೇಖನ .
ಈ ಹಿನ್ನೆಲೆಯಲ್ಲಿ , ರೈಲು ಯಾನದ ಕಥೆಗೆ ಮತ್ತಷ್ಟು ಮಹತ್ವಬರುವುದು ಸ್ವಾಭಾವಿಕ ! ಈ ಚಾರಿತ್ರ್ಯಿಕ ರೈಲಿನ ಒಂದು ಬೋಗಿಯಲ್ಲಿ ನಮ್ಮಬೊಂಬಾಯಿನ ಹಿರಿಯ ಭಾರತೀಯರಾಗಿದ್ದ ಜಗನ್ನಾಥ್ ಶಂಕರ್ ಶೇಠ್ ಪ್ರಯಾಣಿಸದ್ದರಂತೆ . ತಮ್ಮ ಆತ್ಮ ಕಥೆಯಲ್ಲಿ ಅದನ್ನು ದಾಖಲಿಸಿದ್ದಾರೆ . ಓಹ್ ! ಅದೊಂದು ಸುಂದರ ಪ್ರಯಾಣ !
ತುಡುವೆ ಜೇನಿನಲ್ಲಿ ಮತ್ತು ಕಡ್ಡಿ / ಕೋಲು ಜೇನಿನಲ್ಲಿ ದಿನವೊಂದಕ್ಕೆ ಇಡುವ ಮೊಟ್ಟೆಗಳ ಸಂಖ್ಯೆಯು ಕ್ರಮವಾಗಿ 550 ರಿಂದ 1000 ಹಾಗೂ 325 ರಿಂದ 365 ರಷ್ಟು ಇರುತ್ತದೆ .
two tyred ? too tired ? ನಿಮ್ಮ ಗೆಳೆಯ ನಿಮ್ಮನ್ನು ಎದುರಾದಾಗ ನಿಮ್ಮ ಹೊಟ್ಟೆಯ ಮೇಲೆ ಪ್ರೀತಿಪೂರ್ವಕವಾಗಿ ಹೊಡೆದು ಮಾತಾನಾಡಿಸುತ್ತಿದ್ದಾನೆಯೆ ? ( ಬೆನ್ನಿನ ಮೇಲೆ ಬೀಳಬೇಕಾದ ಆ ಗುದ್ದು ಹೊಟ್ಟೆಯ ಕಡೆಗೆ ಜಾರಿದೆಯೆ ? ) ಸ್ವಲ್ಪ ದೂರ ನಡೆದರೆ ' ಉಸ್ಸಪ್ಪ ' ಎನ್ನುವಂತಾಗಿದೆಯೆ ? ಬಗ್ಗುವುದು , ವ್ಯಾಮಮಗಳು ಇವುಗಳನ್ನೆಲ್ಲಾ ಜಗತ್ತಿನಿಂದ ಬಹಿಷ್ಕರಿಸಬೇಕೆನ್ನಿಸುತಿದೆಯೆ ? ನಿಮ್ಮ ಕೆಳ ಉಡುಪುಗಳು ಬಿಗಿಯಾದವೆ ? ಸೊಂಟ ಪಟ್ಟಿಯ ಅವಶ್ಯಕತೆ ಇಲ್ಲದಾಯಿತೆ ? ನೆಲದ ಮೇಲೆ ಸರಳ ಪದ್ಮಾಸನ ಹಾಕಿ ಕೂತು ಊಟ ಮಾಡುವುದ್ದಕ್ಕಾಗುತ್ತಿಲ್ಲವೆ ? ಎಚ್ಚರಿಕೆಯೆ ಘಂಟೆ / ತೂಗುಕತ್ತಿ ನಿಮ್ಮ ನೆತ್ತಿಯ ಮೇಲೆ ನೇತಾಡುತ್ತಿದೆ ! ಒಂದು ಕಾಲವಿತ್ತು , ಹೊಟ್ಟೆ ಮುಂದೆ ಇರುವವರು ಅತೀವ ಗೌರವವನ್ನು ಸಂಪಾದಿಸುತ್ತಿದರು . ( ಅದು ಸದೃಢ ಆರ್ಥಿಕತೆಯ ಸಂಕೇತವಾಗಿತ್ತು . ) ಕಾಲ ಬದಲಾದಂತೆ , ಜಾಗತೀಕರಣದ ತಂಪು ಪಸರಿಸಿದಂತೆ ಬಹುತೇಕ ಜನರ ಆರ್ಥಿಕ ಸಮಸ್ಯೆಗಳು ಕಡಿಮೆಯಾಗುತ್ತಾ ಬಂದತೆ , ಹೊಟ್ಟೆ ಸಂಪಾದಿಸುತ್ತಿದ್ದ ಗೌರವ ಕಡಿಮೆಯಾಗುತ್ತಾ ಹೋಗಿ , ಇಂದು ಹೊಟ್ಟೆ ಬೆಳೆಸಿಕೊಂಡವರು ಒಂದು ರೀತಿಯ ಅಸಹನೀಯ ( ಅಸಹನೀಯ ಎಂದರೆ ಸ್ವಲ್ಪ ಅತಿರೇಕವಾಗಬಹುದು , ಹಾಸ್ಯಸ್ಪದ ಎನ್ನಬಹುದು ) ರೀತಿಯಲ್ಲಿ ನೋಡಲ್ಪಡುತ್ತಿದ್ದಾರೆ . ಹೊಟ್ಟೆ ಬೆಳೆಸಿಕೊಳ್ಳಲು ಹಲವಾರು ಕಾರಣಗಳಿವೆ . ಆಲಸ್ಯತನ , ಆರೋಗ್ಯದ ಬಗೆಗಿನ ಉದಾಸೀನತೆ , ಹೊಟ್ಟೆಬಾಕತನ , ಜೀವನದಲ್ಲಿನ ಉಡಾಫೆತನ ( ಇರುವಷ್ಟು ದಿನ ಚೆನ್ನಾಗಿ ತಿಂದು ಉಂಡು ಮಲಗಿ ಹಾಯಾಗಿ ಕಾಲ ಕಳೆಯಬೇಕೆನ್ನುವ ಮಾನಸಿಕ ಅವಸ್ಥೆ ! ) ಇತ್ಯಾದಿಗಳು . ಹಿಂದೆ ಆರೋಗ್ಯದ ಬಗ್ಗೆ ಬಹಳ ಕಾಳಜಿ ಇರಲಿಲ್ಲ . ಕಾಳಜಿ ಇದ್ದದ್ದಿಲ್ಲ ಎನ್ನುವದಕ್ಕಾಗದಿದ್ದರೂ , ಆಗಿನ ಬಡತನದಲ್ಲಿ ದುಡ್ಡು , ಹೆಸರು ಗಳನ್ನು ಸಂಪಾದಿಸುವುದೇ ಮೇಲಾಗಿತ್ತು . ( ಇಂದು ಹೇರಳವಾಗಿ ದುಡ್ಡಿದ್ದವರಿಗೆ , ಇದು ಇಲ್ಲ ಎಂದೇನಿಲ್ಲ ) . ಇದಕ್ಕೆ ಅವಶ್ಯಕವಾದ ಕಷ್ಟ ಪಡಬೇಕಾಗಿದ್ದದರಿಂದ ( ಬಹಳಷ್ಟು ಸಮಯ ದೈಹಿಕವಾಗಿಯೇ ಕಷ್ಟ ಪಡಬೇಕಾಗಿತ್ತು ) , ದೈಹಿಕವಾಗಿ ಸಂಬಂಧಿಸಿದ ಅನಾರೋಗ್ಯ ( ನಿರ್ಧಿಷ್ಟವಾಗಿ ಹೇಳಬೇಕಾದರೆ ಬೊಜ್ಜಿಗೆ ಸಂಭಂದಿಸಿದ ತೊಂದರೆಗಳು ) ಕಡಿಮೆಯಿದ್ದವು . ಈಗ ಕಾಲ ಚಕ್ರ ವೈಙ್ನಾನಿಕ ಪ್ರಗತಿಯತ್ತ ತಿರುಗಿದೆ . ಓಡಾಡಲು ಮೋಟಾರು ವಾಹನಗಳಿವೆ . ದೈಹಿಕವಾಗಿ ಮಾಡುತ್ತಿದ್ದ ಬಹುತೇಕ ಕೆಲಸಗಳನ್ನು ಯಂತ್ರಗಳು ಕಸಿದುಕೊಂಡಿವೆ . ಆದುದರಿಂದು ಇಂದು ಹಣ ಹೆಸರು ಇತ್ಯಾದಿಗಳನ್ನು ಗಳಿಸಲು ದೈಹಿಕ ಶ್ರಮಕ್ಕಿಂತ ಹೆಚ್ಚಾಗಿ ಬೇಕಾಗಿರುವುದು ಮಾನಸಿಕ ಶ್ರಮ ಮತ್ತು ಸಮಯ ಉಳಿತಾಯ ! ಇದಕ್ಕೆ ಪೂರಕವಾಗಿ ಬಹಳಷ್ಟು ಜನ ಈ ಬೊಜ್ಜಿಗೆ ದಾಸರಾಗಿ , ಬೊಜ್ಜಿಗೆ ಸಂಭಂದಿಸಿದ ಹೃದಯ , ಮೂತ್ರಪಿಂಡ , ಸಕ್ಕರೆ ಖಾಯಿಲೆ , ರಕ್ತದೊತ್ತಡ ಮುಂತಾದವುಗಳಿಗೆ ಬಲಿಯಾಗುತ್ತಿರುವು ದುರದೃಷ್ಟಕರ ! ಸ್ವಲ್ಪ ಮಾಸಿಕ ಜಾಗೃತಿ , ದೈಹಿಕ ವ್ಯಾಮಗಳಿಂದ ಈ ಖಾಯಿಲೆಗಳನ್ನು ತಡೆಗಟ್ಟಬಹುದು , ಇಲ್ಲವೆ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ? ಕೇಳಿ ಓದಿ ತಿಳಿದು ಆಚರಿಸಿದ ಕೆಲವೊಂದು ಸಲಹೆಗಳು ! ೧ ) ಮೊದಲನೆಯ ಸಲಹೆ ಹೆತ್ತವರಿಗೆ ! ಮಕ್ಕಳು ಓದಿ ಓದಿ ಬೆಳೆದು ನಿಮ್ಮ ನಂಟರು ಮತ್ತು ನೆರೆ ಹೊರೆಯ ಮಕ್ಕಳಿಗಿಂತ ಜಾಸ್ತಿ ಅಂಕ ತೆಗೆದರೆ ಕೋಡೇನೂ ಮೂಡುವುದಿಲ್ಲ . ಅಂದರೆ ಚೆನ್ನಾಗಿ ಓದಬಾರದೆಂದಲ್ಲ ! , ತಂದೆ ತಾಯಿಗಳ ಮೌಢ್ಯಕ್ಕೆ ಮಕ್ಕಳು ಬಲಿಯಾಗುವುದು ಬೇಡ ! ಸುಮ್ಮನೆ ನೆರೆಯವರಿಗೆ ಹೋಲಿಕೆ ಮಾಡಿ ಮಕ್ಕಳ ಮೇಲೆ ಅನಾವಶ್ಯಕ ಒತ್ತಡವನ್ನು ಎಂದೂ ತರಬಾರದು . ಯಾರೇ ಆದರೂ ನೆನಪಿನಲ್ಲಿಡಿ , ಮಕ್ಕಳು ಮೊದಲು ಚೆನ್ನಾಗಿ ಆಟವಾಡಬೇಕು . ಮಕ್ಕಳಿಗೆ ಆಟಕ್ಕಿಂತ ಒಳ್ಳೆಯ ವ್ಯಾಯಾಮವಿಲ್ಲ ! ಚೆನ್ನಾಗಿ ಆಟವಾಡಿದ ಮೇಲೆ ಎರಡನೆಯ ಪ್ರಾಮುಖ್ಯತೆ ಓದುವುದು ! ೨ ) ೨೫ - ೩೦ ವರ್ಷಗಳಾದ ನಂತರ ನಿಯತವಾಗಿ ವ್ಯಾಯಾಮ ಅವಶ್ಯಕ ! ೨೦ - ೨೫ ವಯೋಮಿತಿಯವರೂ ಕೂಡ ವ್ಯಾಯಾಮ ಮಾಡಲೇಬೇಕು ಇಂದಿನ ದಿನಗಳಲ್ಲಿ ! ೩ ) ೧ / ೨ ದಿಂದ ೧ ಘಂಟೆ ವ್ಯಾಮಕ್ಕಾಗಿ ಮೀಸಲಿಡುವುದು ಒಳ್ಳೆಯದು . ಓಡುವುದು , ವೇಗವಾಗಿ ನಡೆಯುವುದು ಸರಳ ಮತ್ತು ಪರಿಣಾಮಕಾರಿ ವ್ಯಾಯಾಮಗಳು . ಯೋಗಾಸನ , ವ್ಯಾಯಾಮ ಶಾಲೆಗಳೂ ಕೂಡ ಒಳ್ಳೆಯವೆ . ಇವಲ್ಲದೆ ಬಹಳ ಹೊತ್ತು ಕುಣಿಯುವುದು , ಆಟವಾಡುವುದು ( ಕಾಲ್ಚೆಂಡು - Foot Ball , ಚೀಲಚೆಂಡು - Basket ball , - ಕನ್ನಡ ಅನುವಾದಗಳು ಅಸಮರ್ಪಕ ಎನ್ನಿಸಬಹುದು ಕ್ಷಮಿಸಿ ) ಕೂಡ ದೈಹಿಕ ವ್ಯಾಯಾಮಗಳೇ . ಜಾಗೃತರಾಗೋಣ ! ನಮ್ಮ ಕಾರ್ಯನಿರತ ಒತ್ತಡದ ಜೀವನದಲ್ಲಿ ಬೊಜ್ಜಿಗೆ ಬಲಿಯಾಗಿ , ಅನಾರೋಗ್ಯಕ್ಕೆ ಗುರಿಯಾಗಿ ಮುಂದಿನ ಪೀಳಿಗೆಗೆ ಹೊರೆಯಾಗುವುದು ಒಳಿತಲ್ಲ . ಆರೋಗ್ಯ ಉಳಿದೆಲ್ಲಕ್ಕಿಂತಾ ಮಹತ್ವವಾದದ್ದು ಎಂಬುದನ್ನು ಮನದಟ್ಟು ಮಾಡಿಕೊಳ್ಳೋಣ ! ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗೋಣ . ಆರೋಗ್ಯವೇ ಭಾಗ್ಯ ಎಂಬ ಗಾದೆಯನ್ನು ಆಚರಿಸೋಣ . ದಾಸರು ಅಂದು ಹೇಳಿದ್ದು " ಎಲ್ಲರು ಮಾಡುವದು ಹೊಟ್ಟೆಗಾಗಿ , ಗೇಣು ಬಟ್ಟೆಗಾಗಿ " ಇಂದು ಅಪ್ರಸ್ತುತವಾಯಿತೇನೋ , " ಎಲ್ಲರು ಮಾಡಬೇಕಾಗಿರುವುದು ಹೊಟ್ಟೆ ಕರಗಿಸುವುದಕ್ಕಾಗಿ ( ಆರೋಗ್ಯಕ್ಕಾಗಿ ) ! " ಎಂದೆನಿಸುತ್ತಿದೆ ! ನೀವೇನೆನ್ನುತ್ತೀರಾ ?
೧ . ಮೈಸೂರಿನ ಮಹಾರಾಜಾ ಹೈಸ್ಕೂಲಿನಲ್ಲಿ ಉಪಾಧ್ಯಾಯವೃತ್ತಿ - ೧೯೨೫ - ೧೯೨೭ ೨ . ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕ - ೧೯೨೭ - ೧೯೪೦ ೩ . ಶಿವಮೊಗ್ಗದ ಇಂಟರ್ಮೀಡಿಯೆಟ್ ಕಾಲೇಜಿನಲ್ಲಿ ಉಪಪ್ರಾಧ್ಯಾಪಕ - ೧೯೪೦ - ೧೯೪೩ .
ಬಹುದಿನಗಳಿಂದ ಮೈಮರೆವೆಯಿಂದ ಮೆತ್ತಿಕೊಂಡಿರುವ ಕೊಳೆಯನ್ನು ಕೊಚ್ಚಲು ಇಂಥಾ ಇತಿಹಾಸದ ಕಥೆಗಳು ಪ್ರೇರಣೆ ನೀಡುತ್ತವೆ . ಅದರಲ್ಲೂ ಕನ್ನಡಿಗರಲ್ಲಿ ಕನ್ನಡತನದ ಜಾಗೃತಿ ಮೂಡಿಸಿದ ಮಹತ್ಕಾರ್ಯ ಡಾ . ರಾಜಕುಮಾರ್ ಅವ್ರಿಂದ ಆಗಿದೆ . ರಾಜ್ ಏನ್ ಮಾಡಿದಾರೆ ? ಏನ್ ಮಾಡಿದಾರೆ ? ಅನ್ನೋರ್ಗೆಲ್ಲಾ ಉತ್ತರ " ಕನ್ನಡಿಗರ ಕಣಕಣದಲ್ಲಿ ಸ್ವಾಭಿಮಾನ , ನಾಡಭಿಮಾನ , ನುಡಿಯಭಿಮಾನ ತುಂಬಿ ಎದೆಯಲ್ಲಿ ಕೆಚ್ಚು ತುಂಬಿದ್ದಾರೆ " ಅನ್ನೋದೇ ಆಗಿದೆ ಗುರು !
ಕಾಂಗ್ರೆಸ್ ಸಕ್ರಿಯ ರಾಜಕೀಯದಿಂದ ನಿವೃತ್ತರಾದ ಮೇಲೆ , ರಾಜಾಜಿ , ನೆಹರೂ ಹಾಗೂ ಕಾಂಗ್ರೆಸ್ಸಿನ ಕಟು ಟೀಕಾಕಾರರಾದರು . 1950ರ ದಶಕದಲ್ಲಿ ಸ್ವತಂತ್ರ ಪಕ್ಷ ಸ್ಥಾಪಕರಲ್ಲಿ ಒಬ್ಬರಾದ ಅವರು , ನೆಹರೂರ ಸಮಾಜವಾದೀ ಧೋರಣೆಯು ಜನಪ್ರಯವಾಗಿದ್ದರೂ , ಲೈಸೆನ್ಸ್ ಪರ್ಮಿಟ್ ರಾಜ್ಯವನ್ನೂ ಹಾಗೂ ಅದರಿಂದ ಉಂಟಾಗುವ ಭ್ರಷ್ಟಾಚಾರ ಹಾಗೂ ದೇಶದ ಪ್ರಗತಿಯ ಧಕ್ಕೆಯನ್ನೂ ವಿರೋಧಿಸಿದರು . ತಮ್ಮ ಪತ್ರಿಕೆ ಸ್ವರಾಜ್ಯದಲ್ಲಿ ಅವರು ಹೀಗೆ ಬರೆಯುತ್ತಾರೆ : " ಕೈಗಾರಿಕಾ ರಂಗದಲ್ಲಿ ಪೈಪೋಟಿಯನ್ನು ಪ್ರೋತ್ಸಾಹಿಸುವುದೂ , ಹೆಚ್ಚಿನ ಉತ್ಪತ್ತಿಗೆ ಕುಮ್ಮಕ್ಕು ಕೊಡುವುದೂ ಸರ್ಕಾರಿ ಹಾಗೂ ಖಾಸಗೀ ಹಿತಾಸಕ್ತಿ ಗಳೆರಡಕ್ಕೂ ಒಳ್ಳೆಯದು . ಸರ್ಕಾರಿ ಅಧಿಕಾರಿಗಳಿಗೂ , ಮಂತ್ರಿಗಳಿಗೂ ಪರವಾನಗಿಗಳಿಗಾಗಿ ಡೊಗ್ಗು ಸಲಾಮು ಹೊಡೆಯುವ ಅಗತ್ಯವಿರದ , ಪ್ರತಿಭೆ ಹಾಗೂ ಪರಿಶ್ರಮದಿಂದ ಕೆಲಸ ಮಾಡುವ , ಹಾಗೂ ಈ ಪ್ರಯತ್ನಗಳ ಫಲಾಫಲಗಳ ನಿಷ್ಕರ್ಷೆ ಭಾರತ ಹಾಗೂ ಭಾರತದ ಹೊರಗಿನ ಮುಕ್ತ ಮಾರುಕಟ್ಟೆಯಲ್ಲಿ ಆಗುವಂಥಾ ವಾತಾವರಣದ ಭಾರತ ನನಗೆ ಬೇಕಾಗಿದೆ … . ಸರಕಾರಿ ಕಾರುಭಾರಿನ ಅದಕ್ಷತೆಗಳು ಹೋಗಿ ಖಾಸಗೀ ಒಡೆತನದ ಪೈಪೋಟಿಯ ಆರ್ಥಿಕ ಪಧ್ಧತಿ ನನಗೆ ಬೇಕು . … ಭ್ರಷ್ಟ ಲೈಸೆನ್ಸ್ ಪರ್ಮಿಟ್ ರಾಜ್ಯ ನಿರ್ಮೂಲವಾಗಬೇಕು … . ಸರಕಾರೀ ಕಾನೂನುಗಳು , ನೀತಿಗಳನ್ನು ಜಾರಿಗೆ ತರುವ ಹೊಣೆಹೊತ್ತ ಅಧಿಕಾರಿಗಳು ಆಡಳಿತ ಪಕ್ಷದ ನಾಯಕರ ಒತ್ತಡಗಳಿಂದ ಹೊರಬಂದು , ತಮ್ಮ ಮೊದಲಿನ ನಿರ್ಭೀತ ನಡವಳಿಕೆಗಳಿಗೆ ಮರಳಬೇಕಾಗಿದೆ … . ಎಲ್ಲಾ ನಾಗರೀಕರಿಗೂ ಸಮಾನ ಅವಕಾಶಗಳು ಸಿಗಬೇಕಾಗಿದೆ . ಲೈಸೆನ್ಸ್ ಪರ್ಮಿಟ್ ರಾಜ್ಯ ಖಾಸಗೀ ಏಕಸ್ವಾಮ್ಯಗಳನ್ನು ಸೃಷ್ಟಿಸಕೂಡದು … . ದೊಡ್ಡ ಕೈಗಾರಿಕೆಗಳ ಹಣಸಂಪತ್ತು ರಾಜಕೀಯಕ್ಕೆ ಪ್ರವೇಶ ಮಾಡಕೂಡದು … . ಭಾರತದಲ್ಲಿ ಜನರ ನಡವಳಿಕೆಗಳು ಧರ್ಮದಿಂದ ಪ್ರಭಾವಿತವಾಗಬೇಕೇ ವಿನಹ ದುರಾಸೆಯಿಂದ ಅಲ್ಲ "
ಅದಕ್ಕೆ ಸರಿಯಾಗಿ , ಕೆರೆಯಂಗಳಕ್ಕೆ ಸದ್ದಿಲ್ಲದೆ ಇಳಿದ ಏಳೆಂಟು ಜಿಂಕೆಗಳಿದ್ದ ಗುಂಪು ಮತ್ತಷ್ಟು ಕುತೂಹಲ ಮೂಡಿಸಿತು . ಆ ಗುಂಪಲ್ಲಿ ಎರಡು ಹೋರಿಗಳಿದ್ದು , ಉದ್ದನೆ ಕೊಂಬುಗಳಿದ್ದವು . ಕೊಂಬಿನ ಹರೆಗಳನ್ನು ಬಳುಕಿಸುತ್ತಾ ಅವು ಮುಂದಾಳುಗಳಾಗಿ ನಡೆಯುತ್ತಿದ್ದರೆ , ಹಿಂದೆ ಮೂರು ಬೋಳಿ ( ಹೆಣ್ಣು ಜಿಂಕೆ ) ಗಳು ಹಿಂಬಾಲಿಸುತ್ತಿದ್ದವು . ಅವುಗಳಿಗೂ - ಹಂದಿಗಳಿಗೂ ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳಿದ್ದಂತೆ ಇರಲಿಲ್ಲ . ತಮ್ಮ ಪಾಡಿಗೆ ತಾವು ಬಂದು ನೀರು ಕುಡಿದು , ತಲೆ ಎತ್ತಿ ಒಮ್ಮೆ ಆಚೀಚೆ ಹಂದಿ ಹಿಂಡುಗಳ ಗಲಾಟೆಯನ್ನು ನೋಡಿ , ಗರುಕೆ ಹುಲ್ಲನ್ನು ನಿರ್ಭಯವಾಗಿ ಮೇಯತೊಡಗಿದವು . ಜಿಂಕೆಗಳ ಗುಂಪು ನಮ್ಮ ನೇರವಾಗಿ ಎದುರಿಗೇ ಮೇಯುತ್ತಿದ್ದವು , ಎಷ್ಟು ಸಮೀಪದಲ್ಲಿದ್ದವೆಂದರೆ , ಬೆಳದಿಂಗಳಲ್ಲಿ ಅವುಗಳ ಮೈಮೇಲಿನ ಚುಕ್ಕಿಗಳು ಸ್ಪಷ್ಟವಾಗಿ ಕಾಣುತ್ತಿದ್ದವು . ನನಗೋ ಜಿಂಕೆಗಳ ಕಂಡಿದ್ದೇ ಖುಷಿ . ಆದರೆ , ಅಣ್ಣನ ಬಂದೂಕು ಈಗ ಹಂದಿಯ ಕಡೆಯಿಂದ ಜಿಂಕೆಯೆಡೆಗೆ ತಿರುಗಿತ್ತು . ಆದರೆ , ಜಿಂಕೆಗಳು ಇದ್ದಕ್ಕಿಂತ ಒಮ್ಮೆ ಬೆದರಿ ಚದುರಿದವು . ನಮ್ಮನ್ನು ಗಮಿಸಿಬಿಟ್ಟಿರಬೇಕು ಎಂದು ನಾವಂದುಕೊಂಡು ಅಯ್ಯೋ ಇನ್ನು ಮುಗೀತು , ಇವು ಓಡುತ್ತವೆ , ಇವನ್ನು ಕಂಡು ಹಂದಿಗಳೂ ಓಡುತ್ತವೆ … ಇವತ್ತು ಬರಿ ಜಾಗರಣೆ ಅಷ್ಟೇ ಎಂದು ಅಣ್ಣಗೆ ಚಿಂತೆ . ನನಗೋ ಇನ್ನಷ್ಟು ಹೊತ್ತು ಇವುಗಳ ಆಟ ನೋವುವುದೂ ಮಿಸ್ ಆಯ್ತಲ್ಲ ಅಂತ ಬೇಸರ . ಥೂ … ಮಾರಾಯ … ಎಂದುಕೊಂಡು ಮತ್ತೆ ಮೌನ … ಅಷ್ಟ್ರರಲ್ಲಿ ಜಿಂಕೆಗಳು ನಮ್ಮತ್ತ ನೋಡದೆ , ಕಾಡಿನ ತುದಿ ಕಡೆ ನೋಡುತ್ತಾ ಬೆದರಿದಂತೆ ಕಂಡವು . ಹಾಗೇ ಜಿಂಕೆಗಳು ಬೆದರಿದಾಗ ಹೊಮ್ಮಿಸುವ ಎಚ್ಚರಿಕೆಯ ಸದ್ದನ್ನೂ ಹೊಮ್ಮಿಸಿದವು . ಅತ್ತ ಕಡೆ ಯಾವ ಪ್ರಾಣಿಯೂ ಕಾಣದೇ ಇದ್ದರೂ , ಯಾವುದೋ ಪ್ರಾಣಿ ದರಗೆಲೆಗಳ ಮೇಲೆ ಹೆಜ್ಜೆ ಹಾಕುತ್ತಿದ್ದ ಸದ್ದು ಕ್ಷೀಣವಾಗಿ ಕೇಳಿತು . ಅಣ್ಣ ಅದು ಯಾವುದಾದರೂ ಹುಲಿಯೋ - ಚಿರತೆಯೋ ಇರಬಹುದು , ಇಷ್ಟೊಂದು ಪ್ರಾಣಿಗಳು ಕೆರೆಯಂಗಳದಲ್ಲಿ ನಿತ್ಯ ನೆರೆಯುವ ಸೂಚನೆ ತಿಳಿದ ಅದು ಬೇಟೆಗೆ ಹೊಂಚುತ್ತಿರಬಹುದು ಎಂದುಕೊಂಡು ಮತ್ತಷ್ಟು ಚುರುಕಾದ . ಇದು ನಿರ್ಣಾಯಕ , ಈಗ ಬಿಟ್ಟರೆ , ಆ ಪ್ರಾಣಿ ಏನಾದರೂ ಈ ಯಾವುದಾದರೂ ಪ್ರಾಣಿಯ ಮೇಲೆ ದಾಳಿ ಮಾಡಿದರೆ ಅಲ್ಲಿಗೆ ಎಲ್ಲವೂ ಮುಗಿದಂತೆ , ಕೈಬೀಸಿಕೊಂಡು ಮನೆಗೆ ಹೋಗುವುದಷ್ಟೇ ಉಳಿಯುತ್ತದೆ ಎಂದುಕೊಂಡ ಆತ , ನನ್ನನ್ನೊಮ್ಮೆ ಕೇಳಿದ ; " ನೋಡು , ಈಗ ಬಿಟ್ಟರೆ ಆಗಲ್ಲ , ದೊಡ್ಡದು ಸಣ್ಣದು ಅಂತ ಕಾಯೋಕಾಗಲ್ಲ , ಯಾವುದು ಹತ್ತಿರ ಸಿಕ್ಕುತ್ತೋ ಅದಕ್ಕೆ ಹೊಡೀತೀನಿ . . " ಆಯ್ತ ಎಂದ .
ಇಲ್ಲ ಸಾರ್ . ಅಷ್ಟಕ್ಕೆ ಮನೆ ಬಿಟ್ಟಾಕಿ , ಅದು ನನ್ನ ೨ ತಿಂಗಳ ಬಾಡಿಗೆ . ಆ ರಿಪೋರ್ಟ್ ಬರೆದಿರೋದು ಡೆಟ್ರಾಯ್ಟ್ ನಗರದ ಬಗ್ಗೆ . ಅಲ್ಲಿ ಮುಂಚೆ ಕಾರ್ ಕಂಪನಿಗಳಿದ್ದವು , ಈಗ ಎಲ್ಲ ಚೈನಾಗೆ ಕೆಲ್ಸಗಳು ಹೋಗಿರೋದ್ರಿಂದ ಅಲ್ಲಿ ಎಕಾನಮಿ ಅಂತ ಏನೂ ಉಳ್ದಿಲ್ಲ . ಅಲ್ಲಿನ working class ( ಕಾರ್ಖಾನೆಗಳಲ್ಲಿ ಹಾಗೂ ಇತರ ಮೈ ಬಗ್ಗಿಸಿ ಕೆಲ್ಸ ಮಾಡುವವರು ) ದಿಕ್ಕಾಪಾಲಾಗಿದೆ . ಅಲ್ಲಿನ suburbಗಳಲ್ಲಿ ಅಷ್ಟಕ್ಕೆ ಮನೆ ಸಿಕ್ಕರೂ ಸಿಗಬಹುದು . ಆದ್ರೆ ಅಲ್ಲಿ ಇದ್ದು ಕೆಲಸ ಇಲ್ಲದೆ ಆ ಮನೆಯ ತಿಂಗಳ ಬಿಲ್ ಹೇಗೆ ಕಟ್ತೀರಾ ಅಂತ ; )
ಇದು ನಿನ್ನ ಹಾಡು ಇದು ನಿನ್ನ ಬದುಕು ನಿನ್ನ ಬದುಕಿನ ಅರ್ಥವನು ನೀನೆ ಹುಡುಕು
ಚರಿತ್ರೆಯ ಒಂದು ಕಾಲಘಟ್ಟದ ಜನರ ಬದುಕನ್ನು ವಿಧಿ ರೂಪಿಸುತ್ತದೋ , ವಿಧಿಯೊಡನೆ ಸೆಣಸುತ್ತಾ ತಮ್ಮ ಬದುಕನ್ನು ಅವರು ರೂಪಿಸುಕೊಳ್ಳುತ್ತಾರೋ , ಅಥವಾ ಆ ಸೆಣಸಾಟದ ಪ್ರಕ್ರಿಯೆಯಲ್ಲಿ ಚರಿತ್ರೆಯ ಹಲವಾರು ವಿದ್ಯಮಾನಗಳು ಒಂದು ಜನಸಮೂಹದ ಭವಿಷ್ಯವನ್ನು ರೂಪಿಸುತ್ತದೋ ಎಂಬೆಲ್ಲಾ ಪ್ರಶ್ನೆಗಳ ವಿಚಿತ್ರ ವರ್ತುಲದಲ್ಲಿ ನಮ್ಮನ್ನು ಚಿಂತನೆಗೆ ತೊಡಗಿಸುವ ಅಮೂಲ್ಯವಾದ ಕೃತಿ ' Sea of Poppies '
ಸಂಶೋಧನೆಯ ಕೆಲಸವನ್ನು ಇಡಿಯಾಗಿ ಮತ್ತು ಬಿಡಿಯಾಗಿ ಅನೇಕ ವಿವಿಗಳು ಮಾಡಿವೆ , ಮಾಡುತ್ತಿವೆ . ಮಂಗಳೂರು ವಿವಿಯ ಕನ್ನಡ ವಿಭಾಗ ಮತ್ತು ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರ ಪೂರ್ಣಪ್ರಮಾಣದವು . ಇತ್ತೀಚಿಗೆ ಕುಪ್ಪಮಿನ ದ್ರಾವಿಡ ವಿವಿ ಯು ಪ್ರತ್ಯೇಕ ತುಳು ವಿಭಾಗ ಆರಂಭಿಸಿರುವುದು ತಂಬಾ ಮುಖ್ಯವಾದುದು . ಅಣ್ಣಾಮಲೈ , ಮದ್ರಾಸು , ಕಾಸರಗೋಡು , ಪೂನ , ಹೈದರಾಬಾದ್ , ಮತ್ತು ಹೊರ ದೇಶಗಳ ವಿವಿಗಳಲ್ಲಿ ತುಳು ಕುರಿತ ಸಂಶೋಧನೆಗಳು ನಡೆದಿವೆ . ಅವು ಬಹುತೇಕ ವ್ಯಕ್ತಿಗಳ ಮಟ್ಟದವು .
ನಮ್ಮ ಕನ್ನಡತೆ , ಕನ್ನಡ ಸಂಸ್ಕೃತಿಯನ್ನು ತಮಗೆ ಗೊತ್ತಿಲ್ಲದೇ ಅನ್ಯ ಸಂಸ್ಕೃತಿಗಳ ಕೆಳಗೆ ಇಡಲು ಹೊರಟಿದ್ದಾರೋ ಅಂತ ಅನಿಸಿದೆ .
ನೀವು ಲಕ್ಕಿ ಅನಿಲ್ . . ಹುಟ್ಟು ಹಬ್ಬಕ್ಕೆ ರಜಾ ಹಾಕಿ ಮನೆಯಲ್ಲಿ ಅಪ್ಪ ಅಮ್ಮನೊಂದಿಗೆ ಕಳೆದಿರಲ್ಲಾ . . . ನನ್ನ ಈ ಬಾರಿಯ ಹುಟ್ಟುಹಬ್ಬ ಬಾರೀ ಬೋರು . ಆಫೀಸಿನಲ್ಲಿ ನೈಟ್ ಶಿಫ್ಟ್ ಬೇರೆ . ಫ್ರೆಂಡ್ಸ್ ಯಾರೂ ಜೊತೆಗಿಲ್ಲ . ಎರಡು ವರ್ಷಗಳ ಹಿಂದೆ ನಾನು ಕಾಲೇಜಿನಲ್ಲಿದ್ದಾಗ ಅದೆಷ್ಟು ಮಜಾ ಮಾಡ್ತಾ ಇದ್ದೆವು ಗೊತ್ತಾ . ಕೇಕ್ ಕತ್ತರಿಸುವುದು , ಮುಖಕ್ಕೆ ಕೇಕ್ ಹಿಡಿದು ಮೆತ್ತುತ್ತಿದ್ದ ಫ್ರೆಂಡ್ಸ್ . . . ಟ್ರೀಟ್ ಕೊಡಿಸ್ಬೇಕು ಎಂದು ಸತಾಯಿಸುವ ಫ್ರೆಂಡ್ಸ್ . ಮನೆಯಲ್ಲಿ ಬೇರೆ . . . ನನ್ನ ಫೇವ್್ರಿಟ್ ಸೇಮಿಗೆ ಪಾಯಸ . . ವಾವ್ ! ಎಲ್ಲಾ ಮಿಸ್ ಮಾಡಿಕೊಂಡಿರುತ್ತೇನೆ . . ಆ ಕಾಲೇಜು ದಿನಗಳೇ ಅಷ್ಟು ಸುಂದರವಾಗಿದ್ದವು . . . : (
ಹಾಗಂತ ಕೆಟ್ಟ ಜಾಹೀರಾತುಗಳೇ ಇಲ್ಲವೆಂದಲ್ಲ . ಲೇಯ್ಸ್ ಚಿಪ್ಸ್‌ನ ಬಾಯಿ ಕಳೆದು ಆ . . . ಎಂದರಚುವ ಹೊಸ ಜಾಹೀರಾತು ಸ್ವಲ್ಪವೂ ಚೆನ್ನಾಗಿಲ್ಲ . ಅವರ ಮುಸುಡಿಗಳನ್ನು ನೋಡಿದರೆ ಲೇಯ್ಸ್ ಬಿಡಿ ಜನ ಬೇರೆ ಯಾವ ಚಿಪ್ಸೂ ತಿನ್ನದಂತಾಗಿದೆ . ಒಳ್ಳೆಯ ಜಾಹೀರಾತುಗಳು ಇಂತಹ ಕೆಟ್ಟ ಜಾಹೀರಾತುಗಳನ್ನು ಮರೆಸಿ ಮನಸ್ಸಿಗೆ ಮುದ ನೀಡುತ್ತವೆ . ಅದೇ ಸಂತೋಷ .
ಹತ್ತು ವರ್ಷಗಳಿಂದ ಪರಿಸರ ಹೋರಾಟದಲ್ಲಿ ಸಕ್ರಿಯರಾಗಿರುವ ಬಿದಿರು ಸಂಗೀತ ತಂಡ ದೇಶದ ವಿವಿಧೆಡೆ ಸಂಗೀತ ಕಾರ್ಯಕ್ರಮ ನೀಡಿದೆ . ಕೇರಳದ ' ಅಥಿರಪಲ್ಲಿ ಉಳಿಸಿ ' ದಕ್ಷಿಣ ಭಾರತದ ಪಶ್ಚಿಮ ಘಟ್ಟ ಉಳಿಸಿ ಹೋರಾಟ ಸೇರಿದಂತೆ ಹಲವು ಪರಿಸರ ಚಳವಳಿಗಳಲ್ಲಿ ಅವರು ಭಾಗವಹಿಸಿದ್ದಾರೆ . ಹೋರಾಟದ ಕಾರ್ಯಕ್ರಮಗಳಲ್ಲಿ ಉಚಿತವಾಗಿ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಸಂಭಾವನೆ ಪಡೆಯುವ ಉನ್ನಿಕೃಷ್ಣ ' ಎರಡು ಹೊತ್ತಿನ ಊಟಕ್ಕೆ ಹಣ ಸಿಕ್ಕರೆ ಸಾಕು . ಸಂಗೀತದಿಂದ ದುಡ್ಡು ಮಾಡುವ ಅಗತ್ಯ ಇಲ್ಲ ' ಎನ್ನುತ್ತಾರೆ .
ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಮೀರಾ ಜಾಸ್ಮಿನ್ ಚಿತ್ರರಂಗಕ್ಕೆ ವಿದಾಯ !
ಆದರು ಏನೋ ಗೊತ್ತಿರಬಹುದೆಂದು . . . . ಈ ಸಲ ಬೇರೆ ಹೆಸರು ಹೇಳಬೇಕೆಂದು ಒಬಾಮ ಎಂದರು . .
ಈ ದೃಷ್ಟಿಯಲ್ಲಿ ಅವಲೋಕನ ಮಾಡಿದರೆ ಇಲಾ ನೀರ್‌ರವರ ಅಧ್ಯಯನದ ಮಹಾರ್ ಚಳ ವಳಿಯ ವಿಶ್ಲೇಷಣೆ ದಲಿತರ ರಾಜಕೀಯ ಹೋರಾಟವನ್ನು ಇತಿಹಾಸಕ್ಕೆ ಸೇರಿಸಿದ ಅತ್ಯಂತ ಪ್ರಮುಖ ದಾಖಲೆಯಾಗಿ ಪರಿವರ್ತನೆ ಗೊಳ್ಳುತ್ತದೆ . 1979ರಲ್ಲಿ ಪ್ರಕಟವಾದ ಜೆ . ಆರ್ . ಕಾಂಬ್ಳೆ ಯವರ ' ರೈಸ್ ಎಂಡ್ ಎವ್ಯಾಕನಿಂಗ್ ಆಫ್ ಡಿಪ್ರೆಸ್‌ಡ್ ಕ್ಲಾಸಸ್ ಇನ್ ಇಂಡಿಯಾ ' ಅರ್ಥಪೂರ್ಣವಾದ ಸಂಶೋಧನಾ ಕೃತಿ . ದಲಿತರು , ದುರ್ಬಲ ವರ್ಗದವರನ್ನು ಉದ್ದೇಶಿಸಿ ಮಾಡಿದ ವಿಶಿಷ್ಟವಾದ ಇತಿಹಾಸ ರಚನೆಯಾಗಿದೆ .
ಹೌದು ಕಣೆ ಬಂಗಾರಿ . ಏನು ಮಾತಾಡಿದ್ರೂ , ಏನು ಬರಿಯೋಕೆ ಕೂತರೂ ಬರಿ ನಿಂದೆ ಧ್ಯಾನ . ಮತ್ತು ಬರಿ ನಿಂದೆ ನೆನಪು ಅಷ್ಟೇ . ನೀನು ಯಾಕೆ ಈ ಪರಿ ನನ್ನ , . . .
ಬಿಜೆಪಿಗಿದ್ದ ಶಿಸ್ತಿನ ಪಕ್ಷವೆಂಬ ಹೆಗ್ಗಳಿಕೆ ಅದು ಅಧಿಕಾರಕ್ಕೆ ಬರುವ ಮೊದಲೇ ಕಾಣೆಯಾಗಿತ್ತು . ಅದಕ್ಕಿರುವ ಕಾರಣಗಳನ್ನು ಪಟ್ಟಿ ಮಾಡುವುದಕ್ಕೆ ಮತ್ತೊಂದು ದೊಡ್ಡ ಲೇಖನದ ಅಗತ್ಯವಿದೆ . ವೈ ಸಂಪಂಗಿ ಪ್ರಕರಣದಲ್ಲಿ ಬಿಜೆಪಿಯೊಳಗಿನ ಅಶಿಸ್ತು ಮತ್ತೊಮ್ಮೆ ಕಾಣಿಸಿಕೊಂಡಿತು . ಲೋಕಾಯುಕ್ತರು ವೈ ಸಂಪಂಗಿಯನ್ನು ಬಂಧಿಸಿ ಕರೆದೊಯ್ದ ನಂತರ ಬಿಜೆಪಿಯ ಶಾಸಕರ ಗುಂಪೊಂದು ಲೋಕಾಯುಕ್ತರ ಕಚೇರಿಗೆ ನುಗ್ಗಿತು . ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಹೇಳಿದಂತೆ ` ಲೋಕಾಯುಕ್ತ ಕಚೇರಿಗೆ ಕಾಯ್ದೆಯಲ್ಲಿ ಒಂದು ಪೊಲೀಸ್ ಠಾಣೆಗೆ ಇರುವ ಸ್ಥಾನವಿದೆ . ಈ ಕಚೇರಿ ಸಂದರ್ಶಿಸುವವರು ಸಂದರ್ಶಕರ ಪುಸ್ತಕದಲ್ಲಿ ತಮ್ಮ ಹೆಸರು , ಸಂದರ್ಶನದ ಕಾರಣಗಳನ್ನು ಬರೆಯಬೇಕು . ಈ ಔಪಚಾರಿಕತೆಯನ್ನು ಪಾಲಿಸಿದವರ ಮೇಲೆ ನಾವು ಅತಿಕ್ರಮ ಪ್ರವೇಶದ ಕೇಸು ದಾಖಲಿಸಬಹುದು ' .
ಪಡುಬಿದ್ರಿ : ಇಲ್ಲಿಯ ಪಾಣೆಬೆಟ್ಟು ಎಂಬಲ್ಲಿಂದ ಯುವತಿಯೋರ್ವಳು ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದು , ಮನೆಯವರು ಅಪಹರಣದ ಶಂಕೆ ವ್ಯಕ್ತಪಡಿಸಿ ಪಡಿಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ . ಮಂಗಳೂರು ಸೂಟರ್‌ಪೇಟೆಯ ಗಣೇಶ್ ಎಂಬವರ ಮಗಳು ವೈಶಾಲಿ ವಾರದ ಹಿಂದೆ ಪಡುಬಿದ್ರಿ ಪಾಣೆಬೆಟ್ಟುವಿನಲ್ಲಿರುವ ತನ್ನ ಚಿಕ್ಕಮ್ಮಳ ಮನೆಗೆ ಹೋಗಿದ್ದು , ಜೂ . ೨೮ರಂದು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು . ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಯುವತಿಯ ಚಿಕ್ಕಮ್ಮ ಪುಷ್ಪಲತಾ , ಸೂಟರ್‌ಪೇಟೆಯವನೇ ಆದ ವಿವೇಕಾನಂದ ಎಂಬ ಯುವಕ ಆಕೆಯನ್ನು ಅಪಹರಿಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ .
ಇಂದಿನ ಆಧುನಿಕ ಮಹಿಳೆ ಅದೇ ಜನಪದ ಮಹಿಳೆಯೇ . ಆಕೆಯ ಹೊರಜಗತ್ತಿನಲ್ಲಾಗಲಿ , ಒಳಪ್ರಪಂಚದಲ್ಲಾಗಲಿ ಅಂತಹ ದೊಡ್ಡ ವ್ಯತ್ಯಾಸವೇನೂ ಆದ ಹಾಗಿಲ್ಲ . ಅಂದು ಆಕೆ ತನ್ನ ದುಃಖ ದುಮ್ಮಾನಗಳನ್ನು , ಸುಖ - ಸಂತೋಷವನ್ನು ದೇವರೊಡನೆ ಅಥವಾ ಪ್ರಕೃತಿಯೊಡನೆ ತೋಡಿಕೊಳ್ಳುತ್ತಿದ್ದಳು ; ಸಖಿಯರೊಡನೆ ಹಂಚಿಕೊಳ್ಳುತ್ತಿದ್ದಳು . ಆಕೆಯದು ಪುಟ್ಟ ಕ್ಯಾನ್ವಾಸ್ . ಆದರೆ ಆಧುನಿಕ ಮಹಿಳೆಯ ಜಗತ್ತು ವಿಸ್ತಾರವಾದುದು . ಲಿಂಗಬೇಧವಿಲ್ಲದ ಜಗತ್ತೊಂದನ್ನು ಕಟ್ಟಿಕೊಳ್ಳುವ , ಸೃಷ್ಟಿಸಿಕೊಳ್ಳುವ ಎಲ್ಲ ಅವಕಾಶಗಳು ಆಕೆಗಿದೆ . ಆದರೂ ಆಕೆ ಒಂಟಿಯೇ . ಆಕಾಶದತ್ತ ಮುಖ ಮಾಡಿದವಳೇ . ಹಾಗಾಗಿ ಒಳಜಗತ್ತಿನಲ್ಲಿ ಇಬ್ಬರ ಭಾವವೂ ಒಂದೇ .
ಓ ಮನಸೇ . . ನೀನೇಕೆ ಹೀಗೆ . . . ನೀವು ಹೇಳಿದ ಹಾಗೆ ಅವನ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸ ಬಹುದಿತ್ತು . . ಅಮೇರಿಕಕ್ಕೆ ಹೋದ ಮೇಲೆ ಅಲ್ಲಿ ಇವಳನ್ನು ಕೇಳುವರ್ಯಾರು ? ಅಪರಿಚಿಅತ ಜಾಗ . . . ಜನ . . ಅಲ್ಲಿ ತಾನು . . ತನ್ನ ಗಂಡ ತನ್ನ ಸಂಸಾರ . . ಸಾಕಲ್ಲವೆ ಹೊಸ ಬದುಕು ಶುರುಮಾಡಲು . . ತನ್ನ ಅತೀತವನ್ನು ಸಮಾಧಿ ಮಾಡಲು . . . ಕಥೆಯನ್ನು ಇಷ್ಟಪಟ್ಟು . . ಚಂದದ ಪ್ರತಿಕ್ರಿಯೆಗಾಗಿ ಧನ್ಯವಾದಗಳು . . ಜೈ ಹೋ !
( ಈ ಶಬ್ದದ ಮೂಲದ ಬಗ್ಗೆ ಸಾಕಷ್ಟು ಹುಡುಕಿದೆ . ಆದರೆ ಖಚಿತವಾದ ಮಾಹಿತಿ ಸಿಗಲಿಲ್ಲ . ಬಿಲಾಸ್ ಅನ್ನುವುದು ವಿಲಾಸ ಅನ್ನುವ ಪದದಿಂದ ಬಂದಿರಬಹುದೇ ಅನ್ನುವುದು ನನ್ನ ಊಹೆ ಮಾತ್ರ . ಯಾರಿಗಾದರೂ ಗೊತ್ತಿದ್ದರೆ ತಿಳಿಸಿ )
ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ . ಬಹುಶಃ ನಾನು ಅವರ ಇತ್ತೀಚೆಗಿನ ಕೃತಿಗಳನ್ನು ಮೊದಲು ಓದಿದ್ದರಿಂದಲೋ ಏನೋ ನನ್ನಲ್ಲಿ ಈ ಭಾವ ಮೂಡಿರಲು ಸಾಧ್ಯ . ಆದರೂ ಭೈರಪ್ಪನವರ ಬಗೆಗೆ ಬರೆಯುವ ಮುನ್ನ ಅವರ ಕೃತಿಗಳನ್ನು ಆಸ್ವಾದಿಸಿಯೇ ನಾನು ಈ ಅಭಿಪ್ರಾಯಕ್ಕೆ ಬರಲು ಸಾಧ್ಯವಾಯಿತೆಂದು ನನ್ನ ಧೃಡವಾದ ನಂಬಿಕೆ . .
ಗೆಳೆಯರೆ , ಆಕೃತಿ ಪುಸ್ತಕ ಮಳಿಗೆ ರಾಜಾಜಿನಗರದಲ್ಲಿ , ಡಾ | ಜಿ . ಕೃಷ್ಣಪ್ಪ ಅವರಿಂದ ವರಕವಿ ಬೇಂದ್ರೆಯವರ ನಾಕುತಂತಿ ಕವನದ ಮೇಲೆ ಒಂದು ಉಪನ್ಯಾಸ ಹಾಗೂ ಬೇಂದ್ರೆಯವರ ಇತರ ಕವನಗಳ ಮೇಲೆ ಚರ್ಚೆ ದಿನ : 27 / 02 / 2011 ಭಾನುವಾರ ಸಮಯ : 10 : 30 ರಿಂದ 12 : 30 ವಿಳಾಸ : ಆಕೃತಿ ಪುಸ್ತಕ ಮಳಿಗೆ ನಂ : 31 / 1 , 12 ನೇ ಮುಖ್ಯರಸ್ತೆ , 3 ನೇ ಬ್ಲಾಕ್ , ರಾಜಾಜಿನಗರ , ಬೆಂಗಳೂರು - 560010 ಹತ್ತಿರದ ಗುರುತು : ಇ ಎಸ್ ಐ ಆಸ್ಪತ್ರೆ ಹತ್ತಿರ ದಾರಿ ತಪ್ಪಿದರೆ ಕರೆ ಮಾಡಿ : 9886694580 ಬನ್ನಿ ಭಾಗವಹಿಸಿ . . ಚರ್ಚಿಸಿ . . . ನಿಮ್ಮ ಗೆಳೆಯರನ್ನೂ ಕರೆತನ್ನಿ . . .
ಆ ದಿನಗಳಲ್ಲಿ ಲೈಂಗಿಕ ವೃತ್ತಿ ಈಗಿನಂತಿರಲಿಲ್ಲ . ಗಿರಾಕಿಗಳಿಗೆ ಸಿಕ್ಕಾಪಟ್ಟೆ ಭಯ . ಜತೆಗೆ ಅಳೆತೆ ಮೀರಿದ ಆತಂಕ . ನಾನು ಹಾಗೂ ಇತ್ತಿರವಮ್ಮನ ಮನೆಗೆ ಬರುತ್ತಿದ್ದವರನ್ನು ಸಾಮಾನ್ಯವಾಗಿ ಮೂರು ಗುಂಪುಗಳನ್ನಾಗಿ ವಿಂಗಡಿಸಲಾಗುತ್ತಿತ್ತು . ಅದರಲ್ಲಿ ಪರವಾಗಿಲ್ಲ ಎನ್ನುವಷ್ಟು ಧನವಂತರಾದ ಯುವಕರನ್ನು ಮಾತ್ರ ನನ್ನ ಬಳಿಗೆ ಕಳುಹಿಸುತ್ತಿದ್ದರು . ಗದ್ದಲವೆಬ್ಬಿಸುವ ಮುದುಕರನ್ನು ತಂಗಮಣಿ ಮತ್ತು ಕಲ್ಯಾಣಿ ನಿರ್ವಹಿಸುತ್ತಿದ್ದರು . ದೊಡ್ಡ ದೊಡ್ಡ ಕುಟುಂಬಗಳ ತಲೆತಿರುಕ ಯುವಕರನ್ನು ಕುಟ್ಟಿತಂಗಮಣಿ ಸಂಬಾಳಿಸುತ್ತಿದ್ದಳು . ಆಗೆಲ್ಲಾ ದಿನಕ್ಕೆ ಒಬ್ಬಿಬ್ಬರನ್ನು ಸುಧಾರಿಸಿದರೇ ಅದೇ ಹೆಚ್ಚು . ಎಲ್ಲ ಮುಗಿದರೂ ದೇಹಕ್ಕೊಂದು ಇರುವೆ ಕಚ್ಚಿದಾಗಿನ ಸುಸ್ತೂ ಇರುತ್ತಿರಲಿಲ್ಲ .
ಒಂದು ಕಡೆ ಬ್ಲಾಗಿನ ಹೂಳೆತ್ತುವ ಕಾರ್ಯ ಭರದಿಂದ ಸಾಗಿದೆ . ಇನ್ನೆಲ್ಲೋ ಕೆಸರೆರೆಚಾಟ ಮುಂದುವರೆದೇ ಇದೆ . ಮತ್ತೆಲ್ಲೋ ಬ್ಲಾಗಿಗರು ಬಾಗಿಲು ಮುಚ್ಚುತ್ತಿದ್ದಾರೆ . ನಾನು ನನ್ನ ಪಾಡಿಗೆ ಬಾಲ್ಕನಿಯಲ್ಲಿ ಕುಳಿತು ಕೆನೆ ಕಾಫಿ ಹೀರೋಣ ಅಂದ್ರೆ ನೀನ್ಯಾಕೆ ದೂರ ಅಂತ ನಂಗೂ ಒಂದು ತಲೆಬಿಸಿ ಸುತ್ತಿಕೊಂಡಿದೆ . ನಾನು ನಾನೇನಾ ? ಅಥವಾ ನಾನು ಅವಳಾ ? ಇಲ್ಲಾ , ಅವಳೇ ನಾನಾ ? ಫುಲ್ ತಲೆಬಿಸಿ . ನಂಗೂ ಹೇಳಿ ಹೇಳಿ ಸಾಕಾಯ್ತು .
ಈ ಟಿವಿ ಕನ್ನಡ ವಾಹಿನಿಯ ಮುಖ್ಯಸ್ಥರಲ್ಲೊಬ್ಬರಾಗಿರುವ ಶ್ರೀ ಚಂದ್ರಶೇಖರ್ ಅವರದ್ದು ಕವಿ ಮನಸ್ಸು . ಪ್ರಾಯಶ : ಕವಿತೆ , ಕವನಗಳ ಬಗ್ಗೆ ಅವರು ಬ್ಲಾಗಿಸಿದಷ್ಟು ಮತ್ತೆ ಯಾರಾದರೂ ಬ್ಲಾಗಿಸಿರುವುದು ನನಗೆ ಗೊತ್ತಿಲ್ಲ . ಇತ್ತೀಚೆಗೆ ಅವರ ಮೊದಲ ಕವನ ಸಂಕಲನ " ಮುಸ್ಸಂಜೆಯ ಮುಖಾಮುಖಿ " ಬೆಂಗಳೂರಿನ ಯವನಿಕಾದಲ್ಲಿ ನಡೆಯಿತು . ಖ್ಯಾತ ಸಾಹಿತಿ ಹಾಗು ನಾಟಕಕಾರರಾದ ಡಾ . ಎಚ್ . ಎಸ್ . ವೆಂಕಟೇಶಮೂರ್ತಿಯವರು ಪುಸ್ತಕ ಬಿಡುಗಡೆ ಮಾಡಿದರು . ಮುಖ್ಯ ಅತಿಥಿಗಳಾಗಿ ಪ್ರೊ . ಬರಗೂರು ರಾಮಚಂದ್ರಪ್ಪ , ಖ್ಯಾತ ಚಿಂತಕರು ಹಾಗು ಚಲನಚಿತ್ರ ನಿರ್ದೇಶಕರು , ವಿಶೇಷ ಅತಿಥಿಗಳಾಗಿ ಡಾ . ನಟರಾಜ್ ಹುಳಿಯಾರ್ ಹಾಗೂ ಇತರರು ಆಗಮಿಸಿದ್ದರು . ಕಾರ್ಯಕ್ರಮದ ಕೆಲ ಫೋಟೋಗಳು , ಪುಸ್ತಕದ ಮುಖಪುಟ , ಹಾಗೂ ಎರಡು ಸ್ಯಾಂಪಲ್ ಕವನಗಳು ಇಲ್ಲಿವೆ . ಹೆಚ್ಚಿನ ಕವನಗಳಿಗೆ ಅವರ ಬ್ಲಾಗ್ http : / / www . koogu . blogspot . com / ಇಲ್ಲಿಗೆ ಭೇಟಿ ನೀಡಬಹುದು . ಅನಂತ ಮೌನ ಈ ಅನಂತ ಮೌನ ಚಿಂತನ , ಮಂಥನ ಚಿರಯೌವನ . ಬಿರುಗಾಳಿಗೆ ಮೈಯೊಡ್ಡಿ ಭೋರ್ಗರೆವ ಅಲೆಗಳ ಮೇಲೆ ರುದ್ರನರ್ತನ . ಕಾಲಗರ್ಭದ ಮಿತಿ ಭಾವ , ಬಂಧು ಸಿಂಧೂರ ಸೌಂಧರ್ಯ ನಿಸರ್ಗ ಚಿತ್ತದ ಜೊತೆ ಸರಸ . ಈ ಹಾದಿಯಲ್ಲೆಲ್ಲಾ ಕಲ್ಲು , ಮುಳ್ಳು ಸಾಲು ಮರಗಳ ನೆರಳು . ಪಾಪಿಷ್ಟ , ಕೋಪಿಷ್ಟ ಸಾಧು , ಸಂತ ಇಳೆಗೆ ಎಲ್ಲವೂ ಮೀಸಲು . ನೀರವ ಮೌನ ಒಮ್ಮೆಗೇ ಬಿರುಗಾಳಿಯ ಆಕ್ರಂದನ ಮತ್ತದೇ ಮೌನ . ಕವಿಗೂ ಉಂಟು ಒಂದು ಸ್ಧಾನ ಮೋಡ ತಡೆದು ಮಳೆ ಸುರಿಸಿದ ಬೆಟ್ಟಕ್ಕೆ ನೀರಿನ ಅಭಾವ . ಬೆಟ್ಟದಿಳಿಜಾರಿನಲಿ ನೀರು ನಿಲ್ಲಲು ಸಾಧ್ಯವೆ ? ತಡೆಗೋಡೆ ವಿರಳ . ಕೆಳಗೆಲ್ಲೋ ಕಟ್ಚಲೂ ಬಹುದೊಂದು ಅಣೆಕಟ್ಟು ಅದಕ್ಕೇನು ಲಾಭ ? ಆದರೂ ಅದಕ್ಕೆ ನಿಶ್ಚಿಂತೆ ಇಲ್ಲ ಕಿಂಚಿತ್ತು ಹಸಿರಿನ ಕೊರತೆ . ಕುಡಿಯಲು ನೀರು ಉರಿಬಿಸಿಲಿಗೆ ನೆರಳು ಕಲ್ಲುಗುಂಡುಗಳಡಿ ಬೀಸುವ ತಂಗಾಳಿ . ಇಲ್ಲಿ ಜಾರುವ ಕವಿಗೂ ಉಂಟು ಒಂದು ಸ್ಧಾನ .
ಪ್ರಿಯ ' ಅಪಾರ ' , ಪುಸ್ತಕಗಳಿಗೆ ನೀವು ರೂಪಿಸಿರುವ ರಕ್ಷಾಕವಚಗಳು ಹೊಸತನದಿಂದ ಕೂಡಿದ್ದು ಸೊಗಸಾಗಿವೆ , ಎಂದು ನಾನಿಲ್ಲಿ ಬರೆದರೆ ಅವುಗಳ ಕಲಾತ್ಮಕತೆಯ ಎದುರು ನನ್ನ ಅನ್ನಿಸಿಕೆ ಎಷ್ಟೊಂದು ನೀರಸವಾಗಿ ತೋರುತ್ತಿದೆಯಲ್ಲವೇ ? ಸುಮ್ಮನೇ ಅಭಿನಂದನೆಗಳನ್ನು ತಿಳಿಸಿಬಿಟ್ಟರೆ ಕ್ಷೇಮವೇನೋ !
ರೀ ಮಹಮ್ಮದ್ , ಏ ನಿನ್ ಅಪ್ಪನ್ ಗುಜರಿ ದುಖಾನ್ ಎಲ್ಲಿದೆ , ಕಲಾಸಿಪಾಳ್ಯ ಮಸೀದಿ ಪಕ್ಕದಾಗೆ ಐತೆ . ಬೆಂಗಳೂರೆಲ್ಲಾ ಗುಡಿಸಿ ಗುಂಡಾಂತರ ಮಾಡಿದೀವಿ . ಅದಕ್ಕೆ ಇಲ್ಲಿ ಬಂದಿದೀನಿ . ನಿಮಗೂ ಕಾಸು ಆಯ್ತದೆ . ಹಂಗೇ ನಮಗೂ ಆಯ್ತದೆ , ಏನು . ಕಾಸು ಅಂದ ಮಹಮ್ಮದ್ . ಯಡಿಯೂರಪ್ಪನ ಮನೆ ಪಕ್ಕಾ ನಮದ್ಊಕೆ ಘರ್ ಐತೆ ಅಂದ ಮಹಮ್ಮದ್ . ಅಯ್ಯೋ ನಿನ್ ಮಕ್ಕೆ ನಾಟಿ ಕೋಳಿ ಹಾಫ್ ಬಾಯ್ಲಡ್ ಆಮ್ಲೇಟ್ ಹುಯ್ಯಾ . ನಮಗೂ ಹೇಳ್ ಕೊಡಲಾ ಬಿಸಿನೆಸ್ ಅಂದಾ ಸುಬ್ಬ .
ಗುಂಡು ಹಾರಿಸಿದಾಕೆ ಅವನ ಹೆಂಡತಿ . ಅವಳಿಗೆ ಗಂಡ ವೀರನೆಂದು ಒಪ್ಪಿಕೊಳ್ಳಲಾಗುತ್ತಿಲ್ಲ . ಹುಲಿಯನ್ನು ಸಾಯಿಸಿದ ನಂತರದ , ತಾನು ಸಾಯುವ ಮೊದಲಿನ ಒಂದೇ ಒಂದು ಕ್ಷಣ ಅವನ ಬದುಕಿನ ಅತ್ಯಂತ ರೋಚಕ ಗಳಿಗೆ . ಅವನು ಪ್ರೇಮಿಯೆದುರು ಗೆದ್ದಿದ್ದಾನೆ . ಹೆಂಡತಿಯ ಅಭಿಪ್ರಾಯ , ಭಾವನೆ ಸುಳ್ಳಾಗುವಂತೆ ಮಾಡಿದ್ದಾನೆ . ಅವಳ ಕಣ್ಣ ಮನೆ ಮಾಡಿರುವ ದಿಗ್ಬ್ರಮೆಯನ್ನು ಅವನು ತಿರುಗಿ ನೋಡಬೇಕು ಅನ್ನುವಷ್ಟರಲ್ಲಿ ಅವನು ಸಾಯುತ್ತಾನೆ .
ಆದರೆ ಆ ನಂತರದ ದಿನಗಳಲ್ಲೂ ಪೊಲೀಸರ ಆಕ್ರಮಣ ನಿಲ್ಲಲಿಲ್ಲ . ಏಪ್ರಿಲ್ ೧೧ರಂದು ಮಧುಪುರ ಗ್ರಾಮದೊಳಗೆ ನುಗ್ಗಿದ ಪೊಲೀಸರನ್ನು ಗ್ರಾಮದ ಮಹಿಳೆಯರೇ ಬಿಲ್ಲು ಬಾಣಗಳನ್ನು ಹೊತ್ತು ತಡೆಗಟ್ಟಿದ್ದರು . ಗ್ರಾಮದಲ್ಲಿ ನುಗ್ಗಲು ಯತ್ನಿಸಿದ ಪೊಲೀಸರನ್ನು ಅಟ್ಟಿಸಿಕೊಂಡು ಹೋದ ಮಹಿಳೆಯರು ಕೂಡಲೇ ಪ್ರತಿಭಟನಾ ಮೆರವಣಿಗೆಯನ್ನೂ ನಡೆಸಿದ್ದರು . ಪ್ರತಿಭಟನೆಗೆ ಹೆದರಿ ಪೊಲೀಸರು ಹಿಮ್ಮೆಟ್ಟಬೇಕಾಯಿತು . ಅಕ್ಕ ಪಕ್ಕದ ಗ್ರಾಮಗಳಿಗೆ ಪೊಲೀಸರು ಬರುವ ಸೂಚನೆ ನೀಡಲು ನಗಾರಿಗಳನ್ನು ಬಳಸಿ ಪ್ರಚಾರ ಮಾಡಲಾಯಿತು . ಈ ಘಟನೆಯ ನಂತರದ ಕೆಲವೇ ಗಂಟೆಗಳೊಳಗೆ ಸಾವಿರಾರು ಆದಿವಾಸಿಗಳು ಮಧುಪುರದಲ್ಲಿ ಜಮಾಯಿಸಿದ್ದರು . ಗ್ರಾಮಗಳ ಇಡೀ ಜನತೆ ಈ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದವು . ಈ ರ್‍ಯಾಲಿಯ ಸಂದರ್ಭದಲ್ಲಿ ಪ್ರತಿಭಟನಾ ನಿರತ ಜನರ ಮೇಲೆ ಸಿಪಿಎಂ ಕಾರ್ಯಕರ್ತರು ಆಕ್ರಮಣ ಮಾಡಿದ ಪರಿಣಾಮ ಆದಿವಾಸಿಗಳು ತಮ್ಮ ಬಿಲ್ಲು ಬಾಣಗಳನ್ನು ಬಳಸಿ ಪ್ರತ್ಯಾಕ್ರಮಣ ಆರಂಭಿಸಿದ್ದರು . ಈ ಪ್ರಕರಣ ಸಂಜೆಯ ವೇಳೆಗೆ ರಾಜಧಾನಿ ಕೊಲ್ಕತ್ತಾ ತಲುಪಿತ್ತು . ಈ ಘಟನೆಗಳು ಲಾಲ್‌ಘಡದ ಆದಿವಾಸಿ ಜನಗಳ ಹೋರಾಟದ ಮನೋಭಾವ ಮತ್ತು ದೃಢ ನಿರ್ಧಾರಕ್ಕೆ ನಿದರ್ಶನವಷ್ಟೆ .
ನನ್ನ ಖಾತೆಯಲ್ಲಿ ನನ್ನ ಹೆಸರು ಆಂಗ್ಲದಲ್ಲಿ ಬರೆಯಲಾಗಿದೆ , ಅದನ್ನು ಕನ್ನಡದಲ್ಲಿ ಬರೆಯಲಿಚ್ಚಿಸುತ್ತೇನೆ , ತಿದ್ದುವ ಪದ್ದತಿಯನ್ನು ತಿಳಿಸಿ .
ಇವತ್ತು ಕಮರ್ಶಿಯಲ್ ರಸ್ತೆಯಲ್ಲಿ ಹಲವಾರು ಕಡೆ ಇ೦ಗ್ಲೀಷ್ , ಹಿ೦ದಿಯಲ್ಲಿ ಬೋರ್ಡ್ ಗಳನ್ನು ನೋಡಿದೆ . ಇವರು ಸುಮ್ಮನೆ ಕಾನೂನು ಮಾಡುತ್ತಾರೆ . ಅನುಷ್ಟಾನದ ಪ್ರಶ್ನೆ ಬ೦ದಾಗ ಪಲಾಯನ ಮಾಡುತ್ತಾರೆ .
ನಿನಗೇಳೊ ಎಷ್ಟೊ ವಿಷಯಗಳನ್ನು ಡೈರಿಯಲ್ಲಿ ಬರೆದಿಡ್ತೀನಿ . ಮೈಕ್ರೊಸಾಪ್ಟ್ ವರ್ಡ್ನಲ್ಲಿ Key Board ನೋಡ್ದೆ , ಟೈಪ್ ಮಾಡೋದ್ ಕಲ್ತಿದ್ದೀನಿ !
* ಈಗೀಗ ಶಾಲಾ ಮಕ್ಕಳನ್ನು ಯಾಕೆ ಶಾಲೆಗೆ ಹೋಗುತ್ತೀರಿ ಎಂದರೆ ಊಟ ಮಾಡಲು ಎನ್ನುತ್ತಾರಲ್ಲ ? ಪುಣ್ಯ . ಊಟ ಮಾಡಿ ನಿದ್ರಿಸಲು ಅನ್ನುತ್ತಿಲ್ಲ . * ಕಂಡುಹಿಡಿಯಬೇಕಾದ್ದನ್ನೆಲ್ಲ ಕಂಡುಹಿಡಿದಾಯಿತು . ನಾನೇನು ಕಂಡುಹಿಡಿಯಲಿ ? ಏನನ್ನು ಕಂಡುಹಿಡಿಯಬೇಕು ಎಂಬುದನ್ನು ! * ಇಂದಿನ ಮಕ್ಕಳು ಮುಂದಿನ ಪ್ರಜೆಗಳು . ಇಂದಿನ ಯುವಕರು ಮುಂದಿನ . . . ? ಮುದುಕರು ! ! * ಚಿತ್ರರಂಗದ ನಟ - ನಟಿಯರು ರಾಜಕೀಯ ಪ್ರವೇಶಿಸಿದರೆ ರಾಜಕಾರಣಿಗಳು ಏನು ಮಾಡಬೇಕು ? ಚಿತ್ರದಲ್ಲಿ ಅಜ್ಜ - ಅಜ್ಜಿ ಪಾರ್ಟ್ ಮಾಡಬೇಕು . * ಮರದಿಂದ ಮರಕ್ಕೆ ಹಾರುವ ಕೋತಿಗೂ ಪಕ್ಷದಿಂದ ಪಕ್ಷದಿಂದ ಪಕ್ಷಕ್ಕೆ ಹಾರುವ ರಾಜಕಾರಣಿಗಳಿಗೂ ವತ್ಯಾಸ ಏನು ? ಬಾಲ ಮಾತ್ರ ! * ಅಂದ್ಹಾಗೆ ನಿನ್ನ ಲವ್ ಸ್ಟೋರಿ ಎಲ್ಲೀವರೆಗೆ ಬಂದಿದೆ ? ತುಟಿವರೆಗೆ ! * ಪ್ರತೀಕ್ಷಾ ಹಿಂದಿನ ಕಾಲದಲ್ಲಿ ಪತಿಯೇ ಪರದೈವ ಅಂತಿದ್ರು . ಈ ಕಾಲದಲ್ಲಿ ? ಪರಪತಿಯೇ ದೈವ ಅನ್ನೋಣವೇ ? * ಪಕ್ಕದ ಮನೆಯ ಹುಡುಗ ಆಂಟಿಯ ಜತೆ ಪರಾರಿಯಾಗಿದ್ದಾನೆ ಮುಂದೇನಾಗಬಹುದು ? ಹೆಚ್ಚೆಂದರೆ ಮಕ್ಕಳಾಗಬಹುದು ! * ಪ್ರೇಮಿಗಳು ಲಿಂಬೆ ರಸ ಕುಡಿಯಬಾರದು ಅನ್ನುತ್ತಾರಲ್ಲ ? " ಹಾಲಿ ' ನಂಥ ಪ್ರೇಮದಲ್ಲಿ ಹುಳಿ ಹಿಂಡುವುದು ಬೇಡ ಅಂತ . * ಇಂದಿನ ಕಂಪ್ಯೂಟರ್ ಯುಗದಲ್ಲಿ ಕಂಪ್ಯೂಟರ್ ಕಲಿ . ಮುಂದೆ ? ಗಲಿಬಿಲಿ ! * ೫೦ ವರ್ಷದ ಹಿಂದಿನ ರಾಜಕಾರಣಿಗಳಿಗೂ ಈಗಿನ ರಾಜಕಾರಣಿಗಳಿಗೂ ಇರುವ ವತ್ಯಾಸ ಏನು ? ಆಗ ಯುವಕರಾಗಿದ್ದರು . ಈಗ ಮುದುಕರಾಗಿದ್ದಾರೆ ! * ಗುಲಾಬಿ ಪ್ರೀತಿಯ ಸಂಕೇತವಾದರೆ ಮಲ್ಲಿಗೆ ಯಾವುದರ ಸಂಕೇತ ? ಮಲ್ಲಿಗೆ ಎಲ್ಲಿಗೆ ಹೋಗೋಣ ಎಂಬುದರ ಸಂಕೇತ ! * ಕವಿದ ಕತ್ತಲು ಮುದುಡಿದ ಪ್ರೀತಿಯ ಸಂಕೇತವೇ ? ಛೆ ! ಛೆ ! ಅದು ಪವರ್ ಕಟ್ ಸಂಕೇತ ! ! * ಹಾಲಿನ ಮತ್ತು ಅಲ್ಕೋಹಾಲಿನ ಜಾಹೀರಾತಿಗೆ ಉಪೇಂದ್ರನೇ ಬೇಕು . ಯಾಕೆ ? ಯಾಕಂದ್ರೆ " ಉಪ್ಪಿ ' ಗಿಂತ ರುಚಿ ಬೇರೆ ಇಲ್ಲ . * ನಿಮ್ಮನ್ನು ವೀರಪ್ಪನ್ ಅಪಹರಿಸಿದ್ದರೆ ನೀವು ಏನು ಮಾಡುತ್ತೀರಿ ? " ನನ್ನಪ್ಪನ್ ಬಿಟ್ಟು ವೀರಪ್ಪನ್ ಜತೆ ' ಅಂತ ಕವನ ಸಂಕಲನ ಬರೀತೀನಿ . * ಆಶ್ವಾಸನೆಗೆ ಕೊನೆ ಯಾವಾಗ ? ಆ " ಶ್ವಾಸ ' ನಿಂತಾಗ * ರಾಜಕೀಯಕ್ಕೆ ಸೇರಿದ ವ್ಯಕ್ತಿಗಳಿಗೆ ಹೊಟ್ಟೆ ಉಬ್ಬಲು ಕಾರಣವೇನು ? ತಿಂದ ದುಡ್ಡು ಕರಗದೇ ಇರುವುದು . * ಈಗಿನ ಹುಡುಗಿಯರು ಕೂದನ್ನು ಬಾಬ್‌ಕಟ್ ಮಾಡಲು ಕಾರಣ ? ಕೂದಲನ್ನಷ್ಟೇ ಅಲ್ಲ ಬಟ್ಟೆಯನ್ನೂ ಗಿಡ್ಡ ಮಾಡಿದ್ದಾರೆ .
೮ . ೨೧ - ೦೯ - ೨೦೦೭ , ಶುಕ್ರವಾರದಂದು , ಸಾಯಂಕಾಲ , ೬ - ರಿಂದ ೭ ಗಂಟೆಗೆ ಅರಿಶಿನ - ಕುಂಕುಮದ ಕಾರ್ಯಕ್ರಮ , ಅಸೋಸಿಯೇಶನ್ ನ ಮಹಿಳಾಸದಸ್ಯೆಯರಿಂದ . ೭ ಗಂಟೆಯಿಂದ ೯ ರವರೆಗೆ , ಶ್ರೀಮತಿ ವೀಣಾ ಶಾಸ್ತ್ರೀ ಮತ್ತು ವೃಂದದವರಿಂದ , ಕರ್ನಾಟಕಶೈಲಿಯ ಸಂಗೀತ ಕಛೇರಿ ಇತ್ತು .
ಹೌದಂತೆ . ಈಗ ನಿಮ್ಮ ಎರಡನೆ ಪ್ರತಿಕ್ರಿಯೆ ಓದಿ ನಿರಾಳ ಅನಿಸ್ತಿದೆ . . . ಉಫ್ಫ್ಫ್ . . ಕನ್ಫ್ಯೂಸ್ ಮಾಡ್ಕೊಂಡ ಎಲ್ರೂ ನಿಮ್ಮ ಪ್ರತಿಕ್ರಿಯೆ ನೋಡ್ಲಿ ಅಂತ ಬಯಸ್ತೀನಿ . ನನ್ನ ಟೆನ್ಶನ್ ಕಳೆಯುತ್ತೆ . ಥ್ಯಾಂಕ್ಸ್ . : - )
ಸಾಧುಂಗೆ ಸಾಧು , ಮಾಧುರ್ಯಂಗೆ ಮಾಧುರ್ಯನ್ , ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್ , ಮಾಧವೀತನ್ ಪೆರನಲ್ಲ . . ಈಗಾಗ್ಲೆ ಕನ್ನಡಿಗರಸಹನ ಶೀಲತೆ ಜಗತ್ತಿಗೆಲ್ಲಾ ಜನಜನಿತವಾಗಿದ್ದು ಬೆಂಗಳೂರು ವಲಸಿಗರ ಸ್ವರ್ಗವಾಗಿದೆ . ಬಾಧಿಪ್ಪಕಲಿಗೆ ಕಲಿಯುಗ ವಿಪರೀತನ್ ಅಗಲೇ ಬೇಕಾಗಿದೆ ಸ್ವಾಮಿ . ನಮ್ಮ ಹಕ್ಕುಗಳಿಗಾಗಿ ಎಲ್ಲ ರೀತಿಯ ಹೋರಾಟವೂ ಬೇಕು . ಇಷ್ಟಕ್ಕೂ ಕನ್ನದಿಗರ ಎಲ್ಲ ಹಿತಗಳನ್ನು ಬಲಿಕೊಟ್ಟಾದರೂ ಈ ದೇಶದ ಹಿತ ಕಾಪಾಡಬೇಕು ಅನ್ನೋದು ಸರೀನಾ ? ಔಷಧಿ ಕಹಿಯಾದ್ರೂ ಬೇಕಾಗುತ್ತಲ್ವಾ ? ಹಾವಿನ ವಿಷಾನೂ ಹಿತವಾದ್ರೆ ಮದ್ದು . ಹಾಗೆ ಇಂತಹ ಕ್ರಿಟಿಕ್ಸೂ ಕೂಡಾ . ಬರೀ ಸಾಹಿತ್ಯ ಹಿರಿಮೆ ಬಗ್ಗೆ ಕೊಚ್ಕೊಳ್ಲೋದು ಅತಿಯಾದ ಸಿಹಿ ವಿಷದಂತೆ ಗುರೂ . . . ಮುಕುಂದ
ಹೋಗೊ ಮಾರಾಯ , ಕಂಪ್ಯೂಟರ್ ತಗೋಳ್ಲಿಕ್ಕೆ ಅಷ್ಟು ಖರ್ಚು ಮಾಡಿ ಮತ್ತೆ ತಂತ್ರಾಂಶಕ್ಕೂ ಖರ್ಚು ಮಾಡು ಅಂತೀಯಾ ? ಎಲ್ಲಿಂದ ತರೋದು ಅದಕ್ಕೆ ರೊಕ್ಕಾ ? ಮೊದಲು ಕಲಿತುಕೊಂಡು ಯಾವ್ದಾದ್ರೂ ಕೆಲಸ ಸಿಕ್ಮೇಲೆ ನೋಡನ , ಏನೋ ಒಂದ್ ಚಿಕ್ಕ ಕೆಲ್ಸ ಮಾಡ್ಕೋತಿದೀನಿ ಹೊಟ್ಟೇ ಪಾಡು ಎಲ್ಲಿಂದ ನಾನು ದುಡ್ಡು ಕೊಟ್ಟು ಅವನ್ನೇಲ್ಲಾ ಕೊಳ್ಳೋದು ಜಾಗ ಖಾಲಿ ಮಾಡು ಅಂತೀರಾ ? ನನ್ನ ಬಾಯಿ ಮುಚ್ಚಿಸ ಬಹುದು ಮುಂದೆ ಸಿಕ್ಕಾಕೊಂಡಾಗ ಏನ್ಮಾಡ್ತೀರಿ ? ಅದಿರಲಿ ನಿಮ್ಮ ಕೆಲ್ಸ ನಿಮ್ಮ ಅಂತರಾಳಕ್ಕೆ ಚಿನ್ನಿದೆ ಅನ್ನಿಸ್ತಿದೆಯಾ ? ನ್ಯಾಯಯುತವಾಗಿ ಬೆಲ ಕೊಟ್ಟು ಕೊಳ್ಳೋ ವಸ್ತುವನ್ನ ಕದ್ದು ಉಪಯೋಗಿಸ್ತಿರೋದು ನಿಮಗೆ ಸಂತೃಪ್ತಿ ನೀಡ್ತಿದೆಯೆ ?
ಅಳೋದು ನಿನ್ನ ವೀಕ್‌ನೆಸ್ ! ಎಂದು ಬೈಯಬಹುದು , ಆದ್ರೆ ಅಳೋದ್ರಲ್ಲೂ ಒಂಥರಾ ಖುಷಿಯಿದೆ . ಅಂದು ಸ್ಕೂಲಿಗೆ ಹೋಗಲ್ಲ ಎಂದು ಅಮ್ಮನ ಸೆರಗು ಹಿಡಿದು ರಚ್ಚೆ ಹಿಡಿದಾಗ ಅಮ್ಮ ಉದ್ದ ಕೋಲಿನಲ್ಲಿ ಹೊಡೆದು ಶಾಲೆಗೆ ಕಳಿಸಿದ್ದು ನೆನಪಾಗುತ್ತೆ . ಕ್ಲಾಸಿನಲ್ಲಿ ನನ್ನ ಊದಿಕೊಂಡ ಮುಖ ನೋಡಿ ಮುಖ ಏಕೆ ಹೀಗಿದೆ ಎಂದಾಗ ಕಣ್ಣಿಗೆ ಕಸ ಬಿದ್ದಿದೆ ಎಂದು ಹಸಿ ಹಸಿ ಸುಳ್ಳು ಹೇಳಿದ್ದೆ . ಟೀಚರ್ ಬಳಿ ಹೇಳದಿದ್ರೂ ಅತ್ತು ಅತ್ತು ಸಮಾಧಾನ ಮಾಡಿಕೊಂಡಿದ್ದೆ . ಅಮ್ಮ ನೀಡಿದ ಬೆತ್ತದ ರುಚಿನೂ ಮರೆತೇ ಹೋಗಿತ್ತು . ಹೌದು , ಅಳೋದ್ರಲ್ಲಿ ನಗುವಿಗಿಂತಲೂ ಹೆಚ್ಚಿನ ಸುಖ ಇದೆ . ಥೂ ! ಅಳ್ತೀಯಾ ಎಂದು ಎಲ್ರೂ ನಮ್ಮ ಮೇಲೆ ರೇಗಬಹುದು . ಆದರೆ , ಅಳು ನನ್ನ ಶಕ್ತಿ , ಅಳು ನನಗೆ ಮತ್ತೆ ನಗುವಾಗುವ ಚೈತನ್ಯ , ಅಳು ನನ್ನೆಲ್ಲಾ ನೋವುಗಳನ್ನು ಮರೆಯೋಕಿರುವ ದಾರಿ . ಅಳು ಯಾವ ಹೆಣ್ಣಿನ ವೀಕ್ ನೆಸ್ ಕೂಡ ಅಲ್ಲ , ಹೆಣ್ಣಲ್ಲದೆ ಗಂಡು ಅಳೋಕ್ಕಾಗುತ್ತಾ ? ಅಳು ಹೆಣ್ಣಿನ ಹುಟ್ಟು ಶಕ್ತಿ ಎಂದು ಹೇಳೋದು ನಂಗೆ ಹೆಮ್ಮೆನೇ . ನಾನು ಅಮ್ಮನ ಮನೆಯಿಂದ ಗಂಡನ ಮನೆಗೆ ಬರುವಾಗ ಅತ್ತಿದ್ದೆ . ಅದು ಅಮ್ಮನ ಜೊತೆಗೆ , ಮನೆ ಜೊತೆಗೆ ಆಕೆ ಕಟ್ಟಿಕೊಂಡ ಅನನ್ಯ ಬಾಂಧವ್ಯ . ಗಂಡನೆದುರು ಗಳಗಳನೆ ಅಳಬಹುದು , ಅದು ಹೆಣ್ಣಿನ ವೀಕ್‌ನೆಸ್ ಅಲ್ಲ , ಗಂಡನ ಮೇಲಿನ ಪ್ರೀತಿ . ಮಕ್ಕಳು ತಪ್ಪು ಮಾಡಿದಾಗ ಕಣ್ಣೀರು ಒರೆಸುತ್ತಾ ಬುದ್ಧಿ ಹೇಳೋ ಅಮ್ಮ , ತನ್ನ ಗಂಡ ತಪ್ಪು ಮಾಡಿದಾಗಲೂ ಅಳುತ್ತಲೇ ಅವನೆದೆಯಲ್ಲಿ ಆಸರೆ ಪಡೆಯೋ ಪತ್ನಿ , ಅದು ಅವಳ ವೀಕ್ ನೆಸ್ ಅಲ್ಲ . ತನ್ನವರಲ್ಲದವರ ಎದುರು ಹೆಣ್ಣೊಬ್ಬಳು ಎಂದೂ ಅಳಲಾರಳು . ಅಳೋದ್ರ ಹಿಂದೆ ನೋವು , ಕಾಳಜಿ , ಪ್ರೀತಿ , ವಿಶ್ವಾಸ ಎಲ್ಲನೂ ಇರುತ್ತೆ . ಕಳೆದುಕೊಂಡ ಅಜ್ಜ - ಅಜ್ಜಿಯ ನೆನಪು ಅಳು ತರಿಸಿಲ್ವಾ ? ಎಲ್ಲೋ ಮರೆಯಾದ ಗೆಳತಿ ಅಥವಾ ಗೆಳೆಯನ ನೆನಪು ಕಾಡಿದಾಗ ಕಂಗಳು ಹನಿಗೂಡೋಲ್ವಾ ? ತವರು ಮನೆಯ ನೆನಪಾದಾಗ ಗಂಡನ ಮಡಿಲಲ್ಲಿ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿಲ್ವಾ ? ಈ ಅಳು ಕೂಡ ಬರೋದು ಎದುರಿಗೆ ನಮ್ಮ ಅಳುವನ್ನೂ ಸ್ವೀಕರಿಸುವವರು ಇದ್ದಾರೆ ಎಂದಾಗ ಮಾತ್ರ . ಕಣ್ಣಿರಿನ ಬೆಲೆ ತಿಳಿಯೋರು ನಮ್ಮೆದುರು ಇದ್ದಾಗ ಮಾತ್ರ . ಅದು ವೀಕ್ ನೆಸ್ ಅಲ್ಲ . ಪ್ರೀತಿ , ಸ್ನೇಹ , ಅನನ್ಯ ಬಾಂಧವ್ಯದ ಬೆಸುಗೆಯೊಂದಿದ್ದಲ್ಲಿ ಅಳು ಬರುತ್ತೆ . ಅದು ಯಾವ ಹೆಣ್ಣಿನ ವೀಕ್‌ನೆಸ್ ಅಲ್ಲ , ಅಳು ತನ್ನೊಳಗೆ ಪರಿಹಾರ ಕಂಡುಕೊಳ್ಳುವ ಪರಿ ಅಷ್ಟೇ . ಪ್ರಕಟ : ( http : / / hosadigantha . in / epaper . php ? date = 06 - 03 - 2010 & name = 06 - 03 - 2010 - 21 )
ನಿಜ ನಿಮ್ಮ ಮಾತು ಒಪ್ಪಿದೆ . ಆದರೆ ಕಾರ್ಟರನ ಉದ್ದೇಶ ಸೂಡಾನ್ ಸ್ಥಿತಿಯನ್ನು ವಿಶ್ವಕ್ಕೆ ಮುಟ್ಟಿಸುವುದಾಗಲೀ , ಪ್ರಚಾರ ಪಡೆಯುವುದಾಗಲೀ ಇದ್ದಿರಲಿಕ್ಕಿಲ್ಲ ಎಂದು ನನ್ನ ಭಾವನೆ , ಆ ಕ್ಷಣದಲ್ಲಿ ಅವನು ಕೇವಲ ಛಾಯಾಗ್ರಾಹಕನಾಗಿ ಸೆರೆ ಹಿಡಿದ ಚಿತ್ರವದು ನಂತರ ಅದರ ಸ್ವರೂಪವೇ ಬದಲಾಗಿ , ಚರ್ಚೆಯ ವಿಷಯವಾಗಿ ಕಾರ್ಟರನನ್ನು ಕರುಣೆ ಇಲ್ಲದವನು , ಅಮಾನವೀಯ ಎಂದು ಜರಿಯಲಾಯಿತು .
ಮಲೇರಿಯಾದ ವಿರುದ್ಧ ರೋಗನಿರೋಧಕ ಔಷಧಿಯಾಗಿ ಕ್ವಿನೈನ್‌ನ ಬಳಕೆಯು 17ನೆಯ ಶತಮಾನದಲ್ಲಿ ಆರಂಭವಾಯಿತು . ಇಪ್ಪತ್ತನೆಯ ಶತಮಾನದಲ್ಲಿ ಇನ್ನಷ್ಟು ಪರಿಣಾಮಕಾರಿಯಾದ ಕ್ವಿನಾಕ್ರಿನ್ , ಕ್ಲೋರೊಕ್ವಿನ್ ಮತ್ತು ಪ್ರೈಮಕ್ವಿನ್‌ನಂತಹ ಪರ್ಯಾಯ ಔಷಧಗಳ ಅಭಿವೃದ್ಧಿಯು ಕ್ವಿನೈನ್ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿತು . ಕ್ಲೋರೊಕ್ವಿನ್ ನಿರೋಧಕ ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ್ , ಮತ್ತು ಮಲೇರಿಯಾ ತೀವ್ರಗೊಂಡು ಮಿದುಳಿನ ಹಂತಕ್ಕೆ ತಲುಪಿದಾಗ ಚಿಕಿತ್ಸೆಗಾಗಿ ಕ್ವಿನೈನ್ ಅನ್ನು ಇಂದು ಬಳಸಲಾಗುತ್ತಿದೆ . ಆದರೆ ಇದನ್ನು ಸಾಮಾನ್ಯವಾಗಿ ರೋಗನಿರೋಧಕ ಚಿಕಿತ್ಸೆಗೆ ಬಳಸಲಾಗುತ್ತಿಲ್ಲ . ಅತಿಯಾದ ಕ್ವಿನೈನ್ ಬಳಕೆಯಿಂದ ಮಲೇರಿಯಾದಂತೆ ಇರುವ ಇತರ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತಿರುವುದನ್ನು 18ನೆಯ ಶತಮಾನದ ಅಂತ್ಯದಲ್ಲಿ ಸ್ಯಾಮ್ಯುಯೆಲ್ ಹಾನೆಮನ್ನ್ ಗಮನಿಸಿದರು . ಹೀಗೆ ಈ ಬೆಳವಣಿಗೆ ಸದೃಶಗಳ ನಿಯಮ ಮತ್ತು ಹೋಮಿಯೋಪತಿಯನ್ನು ಅಭಿವೃದ್ಧಿಪಡಿಸಲು ಅವರನ್ನು ಪ್ರೇರೇಪಿಸಿತು .
ಅಂದು ರಾತ್ರಿ ಮೋನಪ್ಪ ಇಬ್ಬರು ಪೇದೆಗಳನ್ನು ಕರೆದುಕೊಂಡು ಊರಿಗೆ ಬಂದ . ಆದರೆ ಆ ಇಬ್ಬರು ಪೇದೆಗಳು ಪೂಜಾರ ಓಣಿಯಲ್ಲಿ ಕಾಲಿಡಲು ಹೆದರಿದರು . ಆವತ್ತು ರಾತ್ರಿ ಮೋನಪ್ಪನ ಹಿತ್ತಲಲ್ಲಿ ಸ್ವಲ್ಪ ಧೈರ್ಯವಂತ ಮುಸ್ಲಿಮರು ಪೇದೆಗಳ ರಕ್ಷಣೆಯಲ್ಲಿ ಸಭೆ ಸೇರಿದರು . ಇದು ಅವರ ದೇವರಿಗೆ ಧರ್ಮಕ್ಕೆ ಆದ ಅವಮಾನವಾಗಿದ್ದರಿಂದ ಅವರಿಗೆ ನಿಜಕ್ಕೂ ಸಿಟ್ಟು ಬಂದಿತ್ತು . ಪೇದೆಗಳು ಮುಸ್ಲಿಂರಿಗಾದ ಅನ್ಯಾಯವನ್ನು ಬರೆದುಕೊಂಡರು . ರಾತ್ರಿ ದಾರಿಯಲ್ಲಿ ಅನಾಥವಾಗಿ ಬಿದ್ದಿದ್ದ ಡೋಲಿಯ ಪಕ್ಕದಲ್ಲಿ ಮಲಗಿ ವಿಶ್ರಾಂತಿ ಪಡೆದರು .
೬೩ . ಇಷ್ಟಲಿಂಗದಿ ಮನವ ನೆಟ್ಟನೆಯ ನಿಲಿಸದಲೆ ಕಷ್ಟಭ್ರಮೆಗಳಲಿ ಮುಳುಗಿದನು ಕರ್ಮದಾ ಬಟ್ಟೆಗೆ ಹೋಹ ಸರ್ವಜ್ಞ
ರಾಷ್ಟ್ರೀಯ , ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ಕೇಂದ್ರವೆಂದು ಜೋಗ ಹೆಸರು ಮಾಡಿದ್ದರೂ , ನಿರೀಕ್ಷೆಗೂ ಮೀರಿ ಜನ ಬಂದಾಗ ಅಲ್ಲಿವ ವ್ಯವಸ್ಥೆ ಮಗುಚಿ ಬೀಳುತ್ತದೆ . ನಮ್ಮ ವ್ಯವಸ್ಥೆಗಳೇ ಹಾಗೆ . ಅಲ್ಲಿ ಮುಂದಾಲೊಚನೆಯಿಲ್ಲ . ಸಿನಿಮಾದ ಪರಿಣಾಮ ಜೋಗಕ್ಕೆ ಇಷ್ಟು ಪ್ರಮಾಣದ ಜನ ಬರಬಹುದು ಎಂಬುದನ್ನು ಮೊದಲೇ ಜಿಲ್ಲಾಡಳಿತ ಗ್ರಹಿಸಿದ್ದರೆ ಬಹುಶಃ ಈ ಜಾಮ್ ಆಗುತ್ತಿರಲಿಲ್ಲ . ಜೋಗಕ್ಕೆ ಒಂದು ಬದಿಯಿಂದ ಬಂದು ಇನ್ನೊಂದು ಬದಿಯಿಂದ ಹೋಗಲು ವ್ಯವಸ್ಥೆ ಮಾಡುತ್ತಿದ್ದರೆ , ವಾಹನಗಳ ಪಾರ್ಕಿಂಗ್‌ಗೆ ತುಂಬ ಸ್ಥಳ ಕಲ್ಪಿಸುತ್ತಿದ್ದರೆ ಇಂತಹ ಅವ್ಯವಸ್ಥೆ ತಪ್ಪಿಸಬಹುದಿತ್ತು . ಆದರೂ ಹೀಗೆ ಜೋಗದತ್ತ ಜನ ಧುಮುಕಿ ಬರಲು ಮುಂಗಾರು ಮಳೆ ಸಿನಿಮಾ ಕಾರಣ ಎಂಬುದು ಸತ್ಯ . ಜೋಗದ ವೈಭವವನ್ನು ಜನರಿಗೆ ತೆರೆದು ತೋರಿಸಿದ್ದಕ್ಕೆ ಯೋಗರಾಜ್ ಭಟ್ ಅವರಿಗೆ ಥ್ಯಾಂಕ್ಸ್ ಹೇಳಲೇ ಬೇಕು .
ಈ ವಿಷಯದಲ್ಲಿ ನನಗೆ ಬುದ್ಧ , ಸ್ವಾಮಿ ವಿವೇಕಾನಂದ , ಮಹಾತ್ಮ ಗಾಂಧೀಜಿಯವರಂತಹ ಮಹಾನ್ ಆಧ್ಯಾತ್ಮವಾದಿಗಳ ನೆನಪು ಬರುತ್ತದೆ . ಅವರ ಜೀವನಗಳು ತೆರೆದಿಟ್ಟ ಪುಸ್ತಕಗಳು , ಅವರ ನೆಲೆ ' ತೆರೆದ ಮನಗಳು ' . ಸ್ವಾಮಿ ವಿವೇಕಾನಂದರ ಕೊಠಡಿಗೆ ಯಾರೇ ಹೋಗಬಹುದಿತ್ತು , ಗಾಂಧೀಜಿಯವರ ಶಿಬಿರವು ಗಾಜಿನಂತೆ ಪಾರದರ್ಶಕವಾಗಿದ್ದು , ಸಾರ್ವಜನಿಕ ಪ್ರದೇಶದಂತೆ ಇತ್ತು . ಭಗವಾನ್ ಬುದ್ಧನ ವಾಸಸ್ಥಳಕ್ಕೆ ಆಕಾಶವೇ ಚಾವಣಿಯಾಗಿತ್ತು . ಅವರುಗಳ ಸರಳವಾದ , ಕಟ್ಟುನಿಟ್ಟಾದ ಬದುಕನ್ನು ಪಾಲಿಸಿದರು . ಯಾರೇ ಯಾವ ಪ್ರಶ್ನೆಯನ್ನೂ ಕೇಳಿದರೂ ಅವರು ಉತ್ತರಿಸಿದರು . ತಮ್ಮನ್ನು ಅಂಧವಾಗಿ ಅನುಕರಿಸಬೇಡಿರೆಂದು ಅವರುಗಳು ಎಲ್ಲರನ್ನೂ ಕೇಳಿಕೊಂಡರು . ಅವರ ಎಲ್ಲ ಹೇಳಿಕೆಗಳೂ ವೈಜ್ಞಾನಿಕ ದೃಷ್ಟಿಕೋಣವನ್ನು ಹೊಂದಿದ್ದವು . ಗಾಂಧೀಜಿಯವರು ತಮ್ಮ ಆತ್ಮ ಚರಿತ್ರೆಯನ್ನು ' ಸತ್ಯದ ಶೋಧನೆ ' ಎಂದೇ ಕರೆದಿದ್ದಾರೆ . ತಿರುವಣ್ಣಾ ಮಲೈನ ರಮಣ ಮಹರ್ಷಿಗಳು ಕೂಡ ಶ್ರೇಷ್ಠ ವ್ಯಕ್ತಿಯಾಗಿದ್ದು , ನಮ್ಮ ಗೌರವಕ್ಕೆ ಪಾತ್ರರಾಗಿದ್ದಾರೆ . ಅಂತಿಮ ಸತ್ಯವನ್ನು ಕಂಡುಕೊಳ್ಳುವಲ್ಲಿ ಅವರೆಲ್ಲಾ ವಿನಯ ಮತ್ತು ವೈಚಾರಿಕತೆಯನ್ನು ವ್ಯಕ್ತಪಡಿಸಿದರು .
ನಮ್ಮ ಆಚಾರಗಳು , ಅಂದರೆ ಒಳ್ಳೆಯ ನಡವಳಿಕೆಗಳು ನಮಗೆ ಸ್ವರ್ಗದ ಸುಖವನ್ನು ಕೊಡುತ್ತವೆ . ನಮ್ಮ ಅನಾಚಾರಗಳು , ಅಂದರೆ ಕೆಟ್ಟ ನಡವಳಿಕೆಗಳು ನರಕದ ದುಃಖವನ್ನು ಸೃಷ್ಟಿಸುತ್ತವೆ . ಅಂತೆಯೆ ಬಸವಣ್ಣನವರು " ಆಚಾರವೇ ಸ್ವರ್ಗ , ಅನಾಚಾರವೇ ನರಕ " ಎಂದು ತಿಳಿಸಿದ್ದಾರೆ .
> > ಕ್ಲಿಷ್ಟಕರವಾದ Symptoms ಇರುವ ಸಮಸ್ಯೆಗಳಿಗೆ ಸರಳ ವೈದ್ಯ ಲಭ್ಯವಿದೆ . ಹೆಚ್ಚಿನ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದಿಲ್ಲ . ( ನನ್ನ ತಾಯಿಯವರಿಗೆ ಆಯುರ್ವೇದ ಔಷಧಿ ಮೂಲಕ ಗರ್ಭಕೋಶದ ಕಲ್ಲಿನ ಸಮಸ್ಯೆ ಪರಿಹಾರವಾಗಿತ್ತು . ಶಸ್ತ್ರಚಿಕಿತ್ಸೆಯ ಅಗತ್ಯವೇ ಬೀಳಲಿಲ್ಲ ) < < ಇದೂ ಹೇಳಿಕೆಯೇ . ಯಾವೆಲ್ಲ ಕ್ಲಿಷ್ಟಕರ ರೋಗಗಳನ್ನು ಶಸ್ತ್ರಚಿಕಿತ್ಸೆಯಿಲ್ಲದೆಯೇ ಗುಣ ಪಡಿಸಬಹುದೆನ್ನುವುದನ್ನು ವಿವರವಾಗಿ ಹೇಳಿದರೆ ಒಳ್ಳೆಯದು . ಗರ್ಭಕೋಶದ ಕಲ್ಲು ಎಂಬುದಿಲ್ಲ , ಗರ್ಭಕೋಶದ ಫೈಬ್ರಾಯ್ಡ್ ಆಗಿರಬಹುದು , ಅದರಲ್ಲಿ ಕ್ಯಾಲ್ಸಿಯಂ ತುಂಬಿದ್ದಿರಬಹುದು . ಕೆಲವರಲ್ಲಿ ಅದು ಯಾವುದೇ ಚಿಕಿತ್ಸೆಯಿಲ್ಲದೆಯೇ ಕಿರಿದಾಗುವುದಿದೆ .
ವಿಶ್ಣುವರ್ಧನಗೆ ಸಣ್ಣದಾಗಿ ಚುಚ್ಚಿದರೆ ನಿನಗೆ ನೋವಾಗುತ್ತದೆ . ಯಾರು ಅಂಧಾಭಿಮಾನಿ ? ನಾನಾ ನೀನಾ ರಾಜು ಮೈಸೂರ್ ?
ಬೆಂಗಳೂರು , ಏ . 20 : ರಾಜಸ್ತಾನ್ ರಾಯಲ್ಸ್ ವಿರುದ್ಧದ ಪಂದ್ಯ ಮಳೆಗೆ ಆಹುತಿಯಾಗಿದ್ದಕ್ಕೆ ನಿಟ್ಟುಸಿರು ಬಿಟ್ಟ ಮಲ್ಯ ಪಡೆಗೆ ಒಂದು ಅಂಕ ಲಭಿಸಿದೆ . ಇದರ ಜೊತೆಗೆ ಗಾಯಾಳು ವೇಗಿ ಡಿರ್ಕ್ ನ್ಯಾನ್ಸ್ , ಮನೆಗೆ ಹೊರಟ ದಿಲ್ಷನ್ ಗೆ ಬದಲಿ ಅಟಗಾರರನ್ನು ಹುಡುಕತೊಡಗಿದೆ . ಮಲ್ಯ , ಜೆನ್ನಿಂಗ್ಸ್ , ಕುಂಬ್ಳೆ ಹಾಗೂ ಮಲ್ಯರ ಪುತ್ರ ಸಿದ್ದಾರ್ಥ್ ಎಲ್ಲ ಒಂದು ಸುತ್ತು ಚರ್ಚೆ ನಡೆಸಿ , ವಿಂಡೀಸ್
ನಮಸ್ಕಾರ , ವರ್ಚುವಲ್ ಬಾಕ್ಸ್ ಎಂಬ ಒಂದು ತಂತ್ರಾಂಶ ಬಳಸಿ ಕೂಡ ವಿಂಡೋಸ್ ಒಳಗಿಂದ ಲಿನಕ್ಸ್ ಉಪಯೋಗಿಸಬಹುದು . ನಾನು ಸುಮಾರು ೧ ತಿಂಗಳಿಂದ ಅದನ್ನು ಉಪಯೋಗಿಸುತ್ತಾ ಇದ್ದೇನೆ .
ನನಗೆ ಕೆಳಗಿನ ಸಾಲುಗಳು " ತಿಳಿಯಹೇಳುವೆ ಕೃಷ್ಣಕಥೆಯನು , ಇಳೆಯ ಜಾಣರು ಮೆಚ್ಚುವಂತಿರೆ ನೆಲೆಗೆ ಪಂಚಮಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ . " ತುಂಬಾ ಹಿಡಿಸಿವೆ ಅವರೊಬ್ಬ ಸರ್ವಕಾಲೀನ ಶ್ರೇಷ್ಠ ಕವಿ
ನಂತರ ಶ್ರೀ ಕೆ . ಪಿ . ಪೂರ್‍ಣಚಂದ್ರತೇಜಸ್ವಿಯವರ ಜುಗಾರಿ ಕ್ರಾಸ್ ಓದಿದೆ . ನಾಲ್ಕು ರಸ್ತೆ ಕೂಡುವಲ್ಲಿ ೨೪ ಗಂಟೆಗಳಲ್ಲಿ ನಡೆವ ಘಟನೆಗಳ ಬಗ್ಗೆ ಇದೆ . ಸಾಹಿತ್ಯಕ ಮೌಲ್ಯಗಳೇನೋ ಇರಬಹುದು ( ನಾನು ಅದನ್ನು ಅರಿಯೆ ) . ಆದರೆ ಒಂದು ಥ್ರಿಲ್ಲರ್ ಆಗಿ ಶ್ರೇಷ್ಠವಾಗಿದೆ . ಒಂದು ಹಳ್ಳಿಯ ಸಾಂಸ್ಕೃತಿಕ ಆರ್ಥಿಕ ಅವಸಾನ , ಊರಿಗೆ ಫೋನು ಬರುವದರಿಂದ ಊರಿನಲ್ಲಿ ಆಗುವ ಬದಲಾವಣೆಗಳು , ಏನೇನೋ ಚಟುವಟಿಕೆಗಳು , ಅದನ್ನು ಯಾರೋ ಎಲ್ಲಿಂದಲೋ ನಿಯಂತ್ರಿಸುವವರು ( ' ದೂರದಿಂದಲೇ ಜೀವ ಹಿಂಡುತಿದೆ ಕಾಣದೊಂದು ಹಸ್ತ ' ) ಹೀಗೇ ಅನೇಕ ಆಯಾಮಗಳನ್ನೊಳಗೊಂಡಿದೆ . ನಿಗೂಢಮಯ ಸುಂದರ ನಿಸರ್ಗ , ಅನಿರೀಕ್ಷಿತ ಘಟನೆಗಳು , ಹಳೆಯ ಕಾವ್ಯದಲ್ಲಿ ರಹಸ್ಯ ಹೀಗೆ ಇನ್ನೂ ಏನೇನೋ , ಕಾದಂಬರಿ ಚಿಕ್ಕದಾಗಿದ್ದರೂ ಅದ್ಭುತವಾಗಿದೆ . ಎಲ್ಲರೂ ಓದತಕ್ಕುದಾಗಿದೆ .
" ಆದರೆ ಇಷ್ಟು ರುಚಿಯಾದ ಕೋಡುಬಳೆ ತಿಂದ ಮೇಲೆ ಬರುವ ಕೊಬ್ಬಿಗೇನು ಸಲಹೆ ? "
ಅರಮನೆ ಕಾದಂಬರಿಯಲ್ಲಿ ಮನ್ರೋ ಎಂಬ ಜಿಲ್ಲಾಧಿಕಾರಿಯ ನಿಜ ವ್ಯಕ್ತಿತ್ವದ ಸುತ್ತಲೂ ತಮ್ಮ ಕಲ್ಪನಾ ಲಹರಿಯನ್ನು ಹರಿಬಿಟ್ಟು ಬ್ರಿಟಿಶ್ ಆಳ್ವಿಕೆಯ ಕಾಲದ ಬಳ್ಳಾರಿ ಪ್ರದೇಶದ ಒಟ್ಟು ಜೀವನವನ್ನು ಹಾಸ್ಯ , ವಿಡಂಬನೆ , ವಿಷಾದ , ಸಂಭ್ರಮಗಳೊಡನೆ ಚಿತ್ರಿಸಿದ್ದಾರೆ . ಸಾಹಿತ್ಯದ ಓದಿಗೆ ಬೇಕಾದ ಸಮಾಧಾನದೊಂದಿಗೆ ಓದಿದರೆ ಇದು ಕನ್ನಡದ ಒಂದು ಮುಖ್ಯ ಕಾದಂಬರಿ ಎಂದು ಮನದಟ್ಟಾಗುತ್ತದೆ .
ಸಾಮಾಜಿಕ ವ್ಯವಸ್ಥೆಯ ಲೋಪದಿಂದ ಸೂಕ್ತ ವಾತಾವರಣದ ಕೊರತೆಯಿಂದ ಅಂತಹ ಕೋಟಿಗಟ್ಟಲೆ ಮಾನವಸಂಪನ್ಮೂಲಗಳು ವ್ಯರ್ಥವಾಗಿ ಹೋಗುತ್ತಿವೆ . ಇದೂ ಒಂದು ರೀತಿಯ ' Brain Drain ' . ಭಾರತದ ಆರ್ಥಿಕ ವ್ಯವಸ್ಥೆ ಸಬಲಗೊಳ್ಳಬೇಕಾದರೆ ಎಲ್ಲಾ ಮಾನವ ಸಂಪನ್ಮೂಲಗಳು ಸಬಲವಾಗಿರಬೇಕು . ಬೆರಳೆಣಿಕೆ ಮಂದಿಯಿಂದ ಅಭಿವೃದ್ಧಿ ಸಾಧಿಸಲಾಗದು . ಕೆಳ ಸ್ತರದಲ್ಲಿರುವ ಮಂದಿ ಮೇಲೆ ಬರಲು ಸೂಕ್ತ ವಾತಾವರಣ ಮತ್ತು ಅವಕಾಶಗಳಿರಬೇಕು . ಹಾಗೂ ಅಂತಹ ಅಗಾಧ ಮಾನವ ಸಂಪತ್ತುಗಳನ್ನು ಸೂಕ್ತವಾಗಿ ಬಳಸಿಕೊಳ್ಳುವಂತಹ ಆರ್ಥಿಕ ಅಭಿವೃದ್ಧಿ ವ್ಯವಸ್ಥೆ ರಚಿತವಾಗಬೇಕು .
ಆರೋಪಿಗಳು ಎಸಗಿದ ಕೃತ್ಯದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ನಿನ್ನೆ ಬೆಳಿಗ್ಗೆ ಇಬ್ಬರನ್ನು ಉಚ್ಚಿಲ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರುತಿ ಕಾರಿನಲ್ಲಿ ಸಾಗುತ್ತಿದ್ದಾಗ ಬಂಧಿಸಿದ್ದರು . ಕಾರ್ಯಾಚರಣೆಯನ್ನು ಕಾರ್ಕಳ ಡಿವೈಎಸ್ಪಿ ಸಂತೋಷ್ ಕುಮಾರ್ ಮಾರ್ಗದರ್ಶನದಲ್ಲಿ ಕಾಪು ಸರ್ಕಲ್ ಇನ್‌ಸ್ಪೆಕ್ಟರ್ ಚೆಲುವರಾಜು , ಪಡುಬಿದ್ರೆ ಎಸ್‌ಐ ಮಹದೇವ ಶೆಟ್ಟಿ ಮತ್ತು ಸಿಬ್ಬಂದಿ ಮೋಹನ್ ಕೋತ್ವಾಲ್ , ಬಾಲಕೃಷ್ಣ , ಸುರೇಶ್ , ಶ್ರೀಧರ್ ಮತ್ತು ಮಹಿಳಾ ಪೇದೆ ಮಮತಾ ಶೆಟ್ಟಿ ನಡೆಸಿದ್ದರು .
ಇಂದು ನೀವು ಇವರ ನಿಜ ಬಣ್ಣ ಬಯಲು ಮಾಡಿದ್ದೀರಿ . ಇದನ್ನು ಕನ್ನಡಪ್ರಭದಲ್ಲಿ ಪ್ರಕಟಿಸಿ ಬಹುಸಂಖ್ಯೆಯಲ್ಲಿ ಕನ್ನಡಿಗರನ್ನು ತಲುಪುವಂತೆ ಮಾಡುವಲ್ಲಿ ನೀವು ಸಫಲರಾಗಿದ್ದೀರಿ .
ಬೆಂಗಳೂರು : ತಮ್ಮದೇ ಕುಟುಂಬದ ಆಸ್ತಿ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಶನಿವಾರ ಬೆಳಿಗ್ಗೆ ಸಾವಿರಾರು ಜೆಡಿಎಸ್ ಕಾರ್ಯಕರ್ತರೊಂದಿಗೆ ಕುಮಾರಸ್ವಾಮಿ ಅವರು ಪಕ್ಷದ ಕಚೇರಿಯಿಂದ ಫ್ರೀಡಂ ಪಾರ್ಕ್ ಗೆ ಕಾಲ್ನಡಿಗೆಯಲ್ಲಿ ಬಂದರು . ಆ ಸಂಧರ್ಭದಲ್ಲಿ ಮಾತಾನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮದೇ ಕುಟುಂಬದ ಆಸ್ತಿ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಇಡೀ ರಾಜ್ಯದಲ್ಲಿ ಇದೇ ಮೊದಲು ಎಂದು ಸುದ್ದಿಗಾರರಿಗೆ ತಿಳಿಸಿದರು . ಉಪವಾಸ ಆರಂಭಿಸಿದ ಕುಮಾರಸ್ವಾಮಿ ಪುಸ್ತಕಗಳನ್ನೂ ಓದುವುದರೊಂದಿಗೆ ಸಮಯ ಕಳೆಯುತ್ತಿದ್ದಾರೆ ಎಂದು ಮಾಧ್ಯಮಗಳು [ . . . ]
ನನಗಿಷ್ಟವಾದವುಗಳು . . ಇದು ರಚನೆಯಲ್ಲಿ ಸ್ವಂತದಲ್ಲದಿದ್ದರೂ ಸ್ವಂತಕ್ಕೆ ಹತ್ತಿರವಾದದ್ದು . . ವಿಶಾಲ ಬದುಕಿನ ತೀರದಲ್ಲಿ ಮರಳೋ ಮರಳು . . ಕಾಲಿಟ್ಟರೆ ತಂಪಾಗುವ ಹುಗಿಯುವ ಉಸುಕಿನಲ್ಲಿ ಹೆಜ್ಜೆ ಹಾಕುವಾಗ ಜೊತೆಯಾದ ಕಾಲು . . ಸಾಲದ ಸಾಲು
ಮನೆ ಮಾಡಿ , ಹೊಸ ಕೆಲಸ ಹಿಡಿದ ಮೇಲೆ ನಿಜವಾದ ಸಮಸ್ಯೆಗಳು ಶುರುವಾದವು . ಅವಳಿಗೆ ನಿಜಕ್ಕೂ ಪ್ರಪಂಚ ಜ್ನಾನವೇ ಇರಲಿಲ್ಲ . ಅವಳಿಗೆ ಮದುವೆಯಾಗಿದೆ , ಅಲ್ಲಿಗೆ ಕೆಲವೊಂದು ಜವಾಬ್ದಾರಿಗಳಿರುತ್ತವೆ ಅನ್ನುವುದನ್ನು ನಾನು ಪದೇ ಪದೇ ನೆನಪಿಸಿಬೇಕಾಯಿತು . ಬಟ್ಟೆಗಳನೆಲ್ಲಾ ಚೆಲ್ಲಾಪಿಲ್ಲಿಯಾಗಿ ಎಲ್ಲಿ ಬೇಕೆಂದರಲ್ಲಿ ಬೀಸಾಡುತ್ತಿದ್ದಳು . ಅಪ್ಪಿ ತಪ್ಪಿ ನಾನೊಮ್ಮೆ ಆಕ್ಷೇಪಿಸಿದರೇ , ನನ್ನ ಮೇಲೇ ರೇಗುತ್ತಿದ್ದಳು ಇಲ್ಲವೇ ಅಳಲು ಶುರು ಮಾಡಿ ಬಿಡುತ್ತಿದ್ದಳು . ಒಂದು ಕಾಫಿ ಮಾಡಲೂ ಬರುತ್ತಿರಲಿಲ್ಲ . ಬೆಳಿಗ್ಗೆ ನಾನೇ ಕಾಫಿ ಮಾಡಿ ಅವಳನ್ನು ಎಬ್ಬಿಸಬೇಕಾಗಿತ್ತು . ನನಗೆ ಗೊತ್ತಿದ್ದ ಅಲ್ಪ ಸ್ವಲ್ಪ ಅಡುಗೆಯನ್ನೇ ಕಲಿಸಬೇಕಾಯಿತು . ಅವಳೇ ನಿಯಮಗಳನ್ನು ಮಾಡುತ್ತಿದ್ದಳು , ಅವಳೇ ಅದನ್ನು ಮುರಿಯುತ್ತಿದ್ದಳು . ನನ್ನ ಬಗ್ಗೆ ಅಷ್ಟೊಂದೇನೂ ಕಾಳಜಿ ತೋರುತ್ತಿರಲಿಲ್ಲ . ಹೇಳದೇ ಕೇಳದೇ ಒಮ್ಮೊಮ್ಮೆ ಅಮ್ಮನ ಮನೆಗೆ ಹೋಗಿಬಿಡುತ್ತಿದ್ದಳು , ನನಗೊಂದು ಫೋನ್ ಕೂಡ ಮಾಡದೇ . ಮರುದಿನ ನಾನೇ ಅವಳನ್ನು ಕರೆದುಕೊಂಡು ಬರಬೇಕಾಗಿತ್ತು .
ಇಂದು ಸ್ವಾತಂತ್ರ್ಯ , ಹಕ್ಕುಗಳಿಗಿಂತ ಮಹಿಳೆಯರ ಪಾಲಿಗೆ ಬೇರೆಯದೆ ತೆರನಾದ ಸಮಸ್ಯೆಗಳು ಆವರಿಸಿಕೊಂಡು ಬಿಟ್ಟಿದೆ ಎನ್ನು ವುದಕ್ಕೆ ನಾಗರಿಕ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನೇ ಗಮನಿಸಿದರೆ ಸಾಕು , ಹೆಚ್ಚಿಗೆ ಏನು ಹೇಳಬೇಕಾದ ಅವಶ್ಯಕತೆ ಇಲ್ಲ . .
ಪ್ರತ್ಯಕ್ಷ ನೋಡಿದಾಗ ಹೇಗೋ ಕಾಣೆ ಆದರೆ ಈ ಪೋಟೋಗಳಲ್ಲಿ ಮಾತ್ರ ಇವುಗಳು ನನಗೆ ಕೇಕ್ ಗಳ ರೀತಿ ಕಾಣದೇ ಕಲಾಕೃತಿಗಳ ರೀತಿ ಕಾಣುತ್ತಿವೆ . ಬಾಯಲ್ಲಿ ನೀರೂರಿಸಿದ್ದಕ್ಕಿಂತ , ಕಣ್ಣಲ್ಲಿ ಆಹ್ಲಾದಕತೆ ಮೂಡಿಸಿದ್ದೇ ಜಾಸ್ತಿ .
ಸತ್ಯವತಿ : ಸಾಮಾನ್ಯ ಸಂದರ್ಭಗಳಲ್ಲಿ ನಿನ್ನ ಮಾತು ಸರಿ ಮಗಳೆ , ಆದರೆ ಬಾಳು ಅಷ್ಟೊಂದು ಸರಳೀಕರಿಸಲು ಸಾಧ್ಯವಲ್ಲದ ಒಂದು ತೊಡಕೆನಿಸಿರುವುದರಿಂದ , ಇನ್ನೊಂದು ಜೀವ ಅಥವಾ ದೇಹದ ಮೇಲೆ ನಮ್ಮ ನಿರ್ಧಾರ ಮಾತ್ರ ಸರಿ ಎಂಬ ತೀರ್ಮಾನ ಸಹ ಅತಿಯೇ ಆಗುತ್ತದೆ . ಕಳೆದ ಹದಿನೆಂಟು ವರ್ಷಗಳಿಂದ ಮಗನಾಗಿ ಹತ್ತಿರದಿಂದ ನೋಡುತ್ತಿದ್ದೇನೆ , ಭೀಷ್ಮನ ಬಾಳು ನನಗೇ ಒಂದು ಅಚ್ಚರಿ . ಪ್ರತಿ ದಿನದಲ್ಲಿ ತಾನಾಡುವ ಪ್ರತಿ ಮಾತಿಗೆ ಬದ್ದನಾಗಿರುವುದು ಒಂದು ತಪಸ್ಸೆನ್ನುವ ರೀತಿಯಲ್ಲಿ ಅವನು ನಡೆದುಕೊಳ್ಳುತ್ತ ಬರುತ್ತಿದ್ದಾನೆ . ಅನೇಕ ಸಾರಿ ನಾನೇ " ಮಗನೆ , ನೀನು ಹಳೆಯದನ್ನು ಮರೆತುಬಿಡು , ಮದುವೆಯಾಗಿ ಕುರು ಸಾಮ್ರಾಜ್ಯದ ಅರಸನಾಗಿ ನಿನ್ನ ಕರ್ತವ್ಯವನ್ನು ನಿರ್ವಹಿಸು , , ಎಂದು ಅವನಲ್ಲಿ ಬೇಡಿದ್ದೇನೆ , ಆದರೆ ಅವನ ಕಠೋರ ನಿಯಮಗಳಿಂದ ಅವನು ಹಿಂದೆ ಸರಿದಿದ್ದೇ ಇಲ್ಲ ; ಯಾವ ಪ್ರಲೋಭನೆಗಳೂ ಅವನನ್ನು ಕಿಂಚಿತ್ತೂ ವಿಚಲಿತನಾಗುವಂತೆ ಅವನನ್ನು ಬೆರಗುಗೊಳಿಸುವುದಿಲ್ಲ .
ಬೆಂಗಳೂರು , ಜೂ . 5 : ವಿಶ್ವದಾದ್ಯಂತ ಎಲ್ಲರ ಗಮನ ಸೆಳೆದಿದ್ದು ನಗರದ ಆರ್ಟ್ ಆಫ್ ಲಿವಿಂಗ್ ಆಶ್ರಮದ ಬಳಿ ಹಾರಿಸಿದ್ದ ಗುಂಡಿನ ಹಿಂದಿನ ರಹಸ್ಯವನ್ನು ಬೇಧಿಸುವಲ್ಲಿ ಕೊನೆಗೂ more . . .
ಗ೦ಡುಮಕ್ಕಳು ತ೦ಗುಳನ್ನ ತಿನ್ನಬಾರದು ಎ೦ದು , ತಾನೂ ತಿ೦ದು , ಹೆಣ್ಣುಮಕ್ಕಳಿಗೂ ಕಲಿಸುವುದು ಅಮ್ಮ . ಅಪ್ಪನಲ್ಲ . ಸ೦ಬ೦ದಗಳಲ್ಲಿ
ಸಾಹಿತ್ಯ ಪ್ರಕಾರಗಳಲ್ಲೆಲ್ಲ ಹೆಚ್ಚು ಮಂದಿಗೆ ಇಷ್ಟವಾಗೊದು ' ಕವನ ' , ಅದರ ಲಯ ರೂಪಕಗಳಲಿ ಅಡಗಿರುವ ಕನಸುಗಳು ಅದಕೆ ಭಾವದ ಸ್ಪರ್ಶ ಮನವ ಮುದಗೊಳಿಸುವುದು . ಬದುಕಿನ ಪ್ರತಿ ಆಯಾಮಗಳನ್ನ ಕೆಲವೇ ಬಿಡಿ ಅಕ್ಷರಗಳಲಿ ಪೊಣಿಸಿ ಹೇಳುವ ತಾಕತ್ತು ಕವನಗಳಿಗಿದೆ ಅಂದರೆ ತಪ್ಪಾಗಲಾರದು . ನಾನು ಈ ಮೊದಲು ಸಂಗ್ರಹಿಸಿದ ನಾಡಿನ ಸುಪ್ರಸಿದ್ದ ಕವಿಗಳ ಕವನಗಳನ್ನ ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತಿದ್ದೆನೆ . ಒಲವಿನ ಕವಿ ಕೆ ಎಸ್ ನ ಅವರ ಕವನಗಳಿಂದ ಜಯಂತ ಕಾಯ್ಕಿಣಿವರೆಗಿನ ಕವನಗಳು ಇಲ್ಲಿವೆ .
ಸಕ್ಕರೆಯ ಬಿಳಿಚಿಸುವಿಕೆಯ ಪ್ರಕ್ರಿಯೆಗಾಗಿ , ಸಕ್ಕರೆ ಸಂಸ್ಕರಿಸುವ ಉದ್ಯಮವು ಅನೇಕವೇಳೆ ಮೂಳೆಯ ಇದ್ದಿಲನ್ನು ( ಕ್ಯಾಲ್ಸಿನ್‌ಯುಕ್ತ ಪ್ರಾಣಿ ಮೂಳೆಗಳು ) ಬಳಸುತ್ತದೆ . [ ೨೧ ] [ ೨೨ ] U . S . ನಲ್ಲಿ ಉತ್ಪಾದಿಸಲ್ಪಡುವ ಸಕ್ಕರೆಯ ಪೈಕಿ ಸುಮಾರು 25 % ನಷ್ಟು ಭಾಗವನ್ನು , ಮೂಳೆಯ ಇದ್ದಿಲನ್ನು ಒಂದು ಶೋಧಕದ ರೀತಿಯಲ್ಲಿ ಬಳಸುವ ಮೂಲಕ ಸಂಸ್ಕರಿಸಲಾಗುತ್ತದೆ ; ಬಾಕಿ ಉಳಿದ ಭಾಗವನ್ನು ಪಟುಗೊಳಿಸಿದ ಇಂಗಾಲದೊಂದಿಗೆ ಸಂಸ್ಕರಿಸಲಾಗುತ್ತದೆ . ಸಂಪೂರ್ಣಗೊಳಿಸಿದ ಸಕ್ಕರೆಯಲ್ಲಿ ಮೂಳೆಯ ಇದ್ದಿಲು ಉಳಿದುಕೊಳ್ಳುವಂತೆ ಕಾಣುವುದಿಲ್ಲವಾದ್ದರಿಂದ , ಇದರ ಮೂಲಕ ಶೋಧಿಸಲ್ಪಟ್ಟ ಸಕ್ಕರೆಯನ್ನು ಪಾರ್ವೆ / ಕೋಷರ್ ಎಂಬುದಾಗಿ ಯೆಹೂದಿಗಳ ಧಾರ್ಮಿಕ ನಾಯಕರು ಪರಿಗಣಿಸುತ್ತಾರೆ . [ ೨೨ ]
ಈ ಬಾರಿಯ ಒಂದು ತಿಂಗಳ ಭಾರತ ಪ್ರವಾಸದಲ್ಲಿ ಅಪೂರ್ವ ಅನುಭವಗಳು ನನ್ನ ನೆನಪಿನ ಬುಟ್ಟಿಯನ್ನು ಸೇರಿವೆ . ಮೊದಲನೆಯದಾಗಿ ಪ್ರೊ | ಉದ್ಯಾವರ ಮಾಧವ ಆಚಾರ್ಯ ವಿರಚಿತ " ಶಕುಂತ ಕೂಜನ " ರಂಗ ಕೃತಿ ಗುರು ಡಾ | ವಸುಂಧರಾ ದೊರೆಸ್ವಾಮಿಯವರಿಂದ ನೃತ್ಯ ಪ್ರಸ್ತುತಿಯಾದದ್ದನ್ನು ಕಂಡದ್ದು . ಎರಡನೆಯದಾಗಿ ಹಿರಿಯ ದಾರ್ಶನಿಕ ಕವಿ ಪು . ತಿ . ನ . ಅವರ ಕೃತಿ " ಕುಚೇಲ ಕೃಷ್ಣ " ದ ರಂಗಾಂತರಕ್ಕೆ ಪ್ರೊ | ಆಚಾರ್ಯರ ನಿರ್ದೇಶನದಲ್ಲಿ ನೃತ್ಯ ಸಂಯೋಜನೆ ಮಾಡಿದ್ದು . ಕಳೆದ ೨೪ ವರ್ಷಗಳಿಂದ ಹಿರಿಯ ನೃತ್ಯ ಗುರು ಡಾ | ವಸುಂಧರಾ ದೊರೆಸ್ವಾಮಿ ಅವರ ನೇತೃತ್ವದಲ್ಲಿ [ . . . ]
ಬೆಲ್‌ಫಾಸ್ಟ್ ಪಟ್ಟಣವು ಮುನ್ಸಿಪಾಲ್ ಸರಕಾರದ ಒಂದು ಪುರಸಭಾಧ್ಯಕ್ಷ ಪದವಿಯ ಒಂದು ವಿಧವನ್ನು ಹೊಂದಿದೆ . 51 ಪುರಸಭಾ ಸದಸ್ಯರುಗಳಿಂದ ಆಯ್ಕೆಯಾಗಲ್ಪಟ್ಟ ಲಾರ್ಡ್ ಮೇಯರ್ , ಡೆಪ್ಯುಟಿ ಲಾರ್ಡ್ ಮೇಯರ್ ಮತ್ತು ಹೈ ಶೆರಿಫ್ ಇವರುಗಳು ನಗರದ ಅಧಿಕಾರಿಗಳಾಗಿದ್ದರು . ಡೇನಿಯಲ್ ಡಿಕ್ಸನ್ ಇವರು 1892ರಲ್ಲಿ ಆಯ್ಕೆ ಹೊಂದಿದ ಬೆಲ್‌ಫಾಸ್ಟ್‌ನ ಮೊದಲ ಲೋರ್ಡ್ ಮೆಯರ್ ಆಗಿದ್ದರು . [ ೨೧ ] ಜೂನ್ 2009ರ ವರೆಗೆ , ಬೆಲ್‌ಫಾಸ್ಟ್‌ನ ಲಾರ್ಡ್ ಮೆಯರ್ ಅಲೈಯನ್ಸ್ ರಾಜಕಾರಣಿ , ನಯೋಮಿ ಲೊಂಗ್ ಆಗಿದ್ದರು , ಅವರು ಪಟ್ಟಣದ ಏಕಮಾತ್ರ ಎರಡನೆಯ ಮಹಿಳಾ ಲಾರ್ಡ್ ಮೆಯರ್ ಆಗಿದ್ದರು . ಅವರ ಕರ್ತವ್ಯವು ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸುವುದು , ನಗರಕ್ಕೆ ಬರುವ ಪ್ರಮುಖ ಸಂದರ್ಶಕರನ್ನು ಆದರಿಸುವುದು , ಮತ್ತು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ನಗರವನ್ನು ಪ್ರತಿನಿಧಿಸುವುದು ಹಾಗೂ ಅದನ್ನು ಬೆಂಬಲಿಸುವುದು ಮುಂತಾದವುಗಳನ್ನು ಒಳಗೊಂಡಿತ್ತು . [ ೨೧ ] ಲೊಂಗ್ ಸಿನ್ ಫಿನ್ ಲಾರ್ಡ್ ಮೇಯರ್ , ಟಾಮ್ ಹಾರ್ಟ್ಲಿಗೆ ಪರ್ಯಾಯವಾಗಿ ಆ ಸ್ಥಾನವನ್ನು ಆಕ್ರಮಿಸಿದರು .
ದಯವಿಟ್ಟು ನೀವು ದುಡ್ಡುಮಾಡೋದಕ್ಕೆ ರಾಜಕೀಯ ಸೇರಬೇಡಿ … ಯಾಕಂದರೆ ದುಡ್ಡು ಮಾಡೋದಕ್ಕೆ ನಾನಾ ದಾರಿಗಳಿವೆ . ನಿಮ್ಮ ಮಕ್ಕಳಿಗೆ ಚೆನ್ನಾಗಿ ಜೀವನ ಮಾಡಲು ಕಲಿಸೋ ಶಕ್ತಿ ಇಲ್ಲಾ ಅಂದರೆ ಮಕ್ಕಳನ್ನ ಹಡಿಯಬೇಡಿ ಯಾಕಂದರೆ ನೀವು ಮಾಡೋ ಎಲ್ಲ ತಪ್ಪುಗಳು ನಿಮ್ಮ ಮಕ್ಕಳಿಗೊಸ್ಕರನೆ . ಇನ್ನು ಉಳಿದ ಸಲಹೆಗಳನ್ನ ಈ ಕೆಳಗಿನ ಗೆಳೆಯರು ಕೊಡ್ತಾರೆ ಕೇಳಿ
ಈ ಎಲ್ಲ ಸಂದೇಶ ಸುಧೆಗಳನ್ನು ಹೊತ್ತು ಭಾರತದ ಮೂಲೆ - ಮಧ್ಯಗಳಲ್ಲಿ ಸಾಗಲಿರುವ ' ವಿಶ್ವ ಮಂಗಲ ಗೋ ಗ್ರಾಮ ಯಾತ್ರೆ ' ಅನಿವಾರ್ಯವಲ್ಲವೇ ? ಒಮ್ಮೆಯಾದರೂ ಯೋಚಿಸಿ .
ನಿಮ್ಮ ಕಣ್ಣೆದುರು ಕೂಡ ಈಗ ಪುಟ್ಟ ಹುಡುಗಿಯರ , ಯುವತಿಯರ , ಹೆಂಗಸರ , ಅಜ್ಜಿಯಂದಿರ ಉಡುಪುಗಳು ಕುಣಿಯುತ್ತಿವೆಯೆಂದು ನಾನು ಸರಿಯಾಗಿಯೇ ಊಹಿಸುತ್ತಿದ್ದೇನೆ .
ಈ ತೆರನಾದ ಆಟಗಳು ಮತ್ತು ಇತರ ಆಟಗಳು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದ್ದವು ಮತ್ತು ಸಂಬಂಧಿಸಿದ ಕ್ರೀಡಾ ಸಂಸ್ಥೆಗಳಲ್ಲಿ ಆರಿಸಿ ಬಂದ ಅಧಿಕಾರಿಗಳು ಹೆಚ್ಚಿನ ಶ್ರಮವಹಿಸಿದ್ದು ಈ ಆಟಗಳ ಮೇಲೆ ಪ್ರಭಾವ ಬೀರಿದ್ದಲ್ಲದೆ , ಕ್ರಮೇಣವಾಗಿ ಫುಟ್‌ಬಾಲ್ ಮೇಲೆಯೂ ಪರಿಣಾಮ ಬೀರಿತು . ಆದಾಗ್ಯೂ , ಆಧುನಿಕ ಫುಟ್‌ಬಾಲ್ ನಿಯಮಾವಳಿಗಳ ಪ್ರಮುಖ ಮೂಲವು ಪಾಶ್ಚಿಮಾತ್ಯ ಯುರೋಪ್ , ಅದರಲ್ಲೂ ವಿಶೇಷವಾಗಿ ಇಂಗ್ಲೆಂಡ್‌ನಲ್ಲಿ ಕಂಡುಬರುತ್ತದೆ .
ಇಲ್ಲಿ ಮೇಲುನೋಟಕ್ಕೆ ಈ ಶ್ಲೋಕದ ಅರ್ಥ ಸರಳವಾಗಿ ಕಾಣುತ್ತದೆ . ನಾವು ಈ ಹಿಂದೆ ತಿಳಿದಂತೆ ಪರಿಶುದ್ಧವಾದ ಆತ್ಮಸ್ವರೂಪವು ಸರ್ವಗತವು . ಅಂದರೆ ಈ ದೇಶದಲ್ಲಿ ಇಲ್ಲವೆಂದಾಗಲೀ , ಈ ಕಾಲದಲ್ಲಿ ಇಲ್ಲವೆಂದಾಗಲೀ , ಈ ವಸ್ತುವಿನಲ್ಲಿ ಇಲ್ಲವೆಂದಾಗಲೀ ಹೇಳಲಾಗದು . ಆದ್ದರಿಂದ ಅದು ನಮ್ಮಲ್ಲಿಯೂ ಇದೆ ಮತ್ತು ನಮ್ಮ ಹೊರಗೂ ಇದೆ ಎಂಬ ವಿಷಯವನ್ನು ಗ್ರಹಿಸುವುದು ಸುಲಭ . ಹಾಗೆಯೇ ಅದು ಎಲ್ಲೆಲ್ಲಿಯೂ ಇರುವುದರಿಂದ ನಮ್ಮ ಬಳಿಯಲ್ಲಿಯೂ ಮತ್ತೆ ನಮ್ಮಿಂದ ದೂರದಲ್ಲಿಯೂ ಇರುವುದೆಂಬ ಮಾತು ಒಪ್ಪುವಂತಹುದು . ಕೊನೆಯ ವಿಷಯ ಆತ್ಮವು ಚಲಿಸುತ್ತಲೂ ಇದೆ ಮತ್ತು ನಿಶ್ಚಲವಾಗಿಯೂ ಇದೆ ಎನ್ನುವುದು - ಅದು ಚರಾಚರ ವಸ್ತುಗಳೆಲ್ಲದರಲ್ಲೂ ಇರುವುದರಿಂದ ಪ್ರಾಣಿ ಪಕ್ಷಿಗಳಲ್ಲಿ ಚಲನದ ಸ್ಥಿತಿಯಲ್ಲೂ ಮತ್ತು ಸ್ಥಿರವಾದ ಮರ , ಗಿಡ , ಬೆಟ್ಟಗುಡ್ಡಗಳಲ್ಲಿ ಚಲನೆ ಇಲ್ಲದ ಸ್ಥಿತಿಯಲ್ಲಿ ಇರುವುದೆಂದು ಊಹಿಸಬಹುದು . ಆದರೆ ಶ್ರೀಕೃಷ್ಣನ " … ಅದನ್ನು ಅರಿಯುವುದು ಸುಲಭವಲ್ಲ … " ಎನ್ನುವ ಮಾತು ನಮ್ಮನ್ನು ಇನ್ನೂ ಆಳವಾಗಿ ವಿಚಾರ ಮಾಡಲು ಪ್ರೇರೇಪಿಸುತ್ತದೆ . ಈ ಶ್ಲೋಕದಲ್ಲಿ ಇನ್ನೂ ಹೆಚ್ಚಿನ ಅರ್ಥವಿರಬಹುದೆಂಬ ಶಂಕೆಯನ್ನು ಮೂಡಿಸುತ್ತದೆ . ಈ ಶ್ಲೋಕದ ಅರ್ಥದ ಬಗ್ಗೆ ಆಳವಾಗಿ ಯೋಚಿಸಿದಾಗ ನನಗೆ ಬೇರೆಲ್ಲೋ ಓದಿದ ವಿಷಯಗಳು ಈ ಶ್ಲೋಕಕ್ಕೆ ಹೊಸ ಅರ್ಥವನ್ನು ಕೊಡುವುದರಲ್ಲಿ ನೆರವಾಯಿತು . ಅದನ್ನೇ ಇಲ್ಲಿ ವಿವರಿಸಲು ಪ್ರಯತ್ನಿಸಿದ್ದೇನೆ
Download XML • Download text