kan-16
kan-16
View options
Tags:
Javascript seems to be turned off, or there was a communication error. Turn on Javascript for more display options.
ಟ್ಯಾಸ್ಮೆನಿಯಾದಲ್ಲಿ ಕ್ರೀಡೆಯು ಕೇವಲ ಪ್ರಮುಖ ಹವ್ಯಾಸವಷ್ಟೇ ಅಲ್ಲ . ಟ್ಯಾಸ್ಮೆನಿಯಾ ಮೂಲದ ಹಲವು ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದ್ದಾರೆ . ಈ ರಾಜ್ಯದಲ್ಲಿ ಹಲವು ಪ್ರಮುಖ ಕ್ರೀಡಾಕೂಟಗಳು ಆಯೋಜಿತವಾಗಿವೆ . ಟ್ಯಾಸ್ಮೆನಿಯನ್ ಟೈಗರ್ಸ್ ಕ್ರಿಕೆಟ್ ತಂಡವು ಟ್ಯಾಸ್ಮೆನಿಯಾ ರಾಜ್ಯವನ್ನು ಪ್ರತಿನಿಧಿಸುವಲ್ಲಿ ಸಫಲವಾಗಿದೆ ( ಉದಾಹರಣೆಗೆ 2007ರ ಷೆಫೀಲ್ಡ್ ಷೀಲ್ಡ್ ಪಂದ್ಯಾವಳಿ ) . ಹೋಬಾರ್ಟ್‌ನಲ್ಲಿರುವ ಬೆಲೆರೀವ್ ಒವಲ್ ಕ್ರಿಕೆಟ್ ಕ್ರೀಡಾಂಗಣವು ಈ ತಂಡದ ಸ್ವಸ್ಥಳ . ಈ ಮೈದಾನದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳೂ ನಡೆಯುತ್ತವೆ . ಟ್ಯಾಸ್ಮೆನಿಯನ್ ಕ್ರಿಕೆಟ್ ಆಟಗಾರರ ಪೈಕಿ ಡೇವಿಡ್ ಬೂನ್ , ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ರಿಕಿ ಪಾಂಟಿಂಗ್ ಹಾಗೂ ಇತ್ತೀಚೆಗೆ ಕ್ರಿಕೆಟ್ ಟೆಸ್ಟ್ ತಂಡದ ಕಾಯಂ ಸದಸ್ಯ ವೇಗದ ಬೌಲರ್ ಬೆನ್ ಹಿಲ್ಫೆನ್ಹಾಸ್ ಪ್ರಸಿದ್ಧರು . ಆಸ್ಟ್ರೇಲಿಯನ್ ರೂಲ್ಸ್ ಫುಟ್ಬಾಲ್ ಸಹ ಇಲ್ಲಿ ಜನಪ್ರಿಯ ಆಟ . ಆಸ್ಟ್ರೇಲಿಯನ್ ಫುಟ್ಬಾಲ್ ಲೀಗ್ ( ಎಎಫ್‌ಎಲ್ ) ನಲ್ಲಿ ಟ್ಯಾಸ್ಮೆನಿಯನ್ ತಂಡ ಭಾಗವಹಿಸುವ ಪ್ರಸ್ತಾಪ ಆಗಾಗ್ಗೆ ಕೇಳಿಬರುವುದುಂಟು . ಲಾನ್ಸೆಸ್ಟನ್‌ನ ಯಾರ್ಕ್ ಪಾರ್ಕ್ನಲ್ಲಿರುವ ಅರೊರಾ ಕ್ರೀಡಾಂಗಣದಲ್ಲಿ , ಹಾಥಾರ್ನ್ ಫುಟ್ಬಾಲ್ ಕ್ಲಬ್ ಸೇರಿದಂತೆ , ಹಲವು ಎಎಫ್‌ಎಲ್ ಪಂದ್ಯಗಳು ನಡೆದಿವೆ . ಅಪಖ್ಯಾತಿ ಪಡೆದ , ಸೇಂಟ್ ಕಿಲ್ಡಾ ಮತ್ತು ಫ್ರೀಮ್ಯಾಂಟ್ಲ್ ತಂಡಗಳ ನಡುವಿನ ಪಂದ್ಯವನ್ನು ವಿವಾದಾಸ್ಪದವಾಗಿ ಡ್ರಾ ಎಂದು ಘೋಷಿಸಲಾಯಿತು . ಅಂಪೈರ್‌ಗಳು ಪಂದ್ಯದ ಅಂತ್ಯ ಎಂದು ಘೋಷಿಸುವ ಶಿಳ್ಳೆಯನ್ನು ಗಮನಿಸಲು ವಿಫಲವಾದದ್ದೆ ಇದಕ್ಕೆ ಕಾರಣ .
ಚೆವಾರರ ಬ್ಲಾಗಿನಲ್ಲಿ " ಪಿಟೀಲು ಮಾಂತ್ರಿಕನ ಪಿಟೀಲು ಮೌನಕ್ಕೆ ಶರಣಾಯಿತು " ಎಂಬ ವಾಕ್ಯ ಓದುತ್ತಿದ್ದಂತೆ ಕಣ್ಣಲ್ಲಿ ನೀರು ಚುಳ್ಳೆಂದವು . ಬಹುಶಃ ಯಾರ ಸಾವಿಗೂ ನಾನು ಇಷ್ಟು ಭಾವುಕನಾಗಿದ್ದಿಲ್ಲವೇನೋ ! ಕುನ್ನುಕ್ಕುಡಿ ವೈದ್ಯನಾಥನ್ ಚಿರಂಜೀವಿಯಾಗಿರಲಿ ಎಂದು ನಾನು ಬಯಸಿದರೂ ಅದು ಸಾಧ್ಯವಿಲ್ಲ . ಆದರೆ ಮನಸ್ಸಿನ ದುರಾಸೆ . . . . ಅವರು ಇನ್ನು ಸಲ್ಪ ದಿನ ಇದ್ದಿದ್ದರೆ ಚೆನ್ನಾಗಿತ್ತು ಅನ್ನಿಸುತ್ತದೆ . ಸಾಫ್ಟ್ ವೇರ್ ಎಂಬ ಆಶಾಢಭೂತಿ ಪ್ರಪಂಚವನ್ನು ಸೇರಿ ಬೌದ್ಧಿಕ ದೈಹಿಕ ಹಾಗು ಮಾನಸಿಕವಾಗಿ ನಿಷ್ಕ್ರಿಯನಾಗುವುದಕ್ಕಿಂತ ಮುಂಚಿನ ; ಓದು ಸಂಗೀತ ತಿರುಗಾಟಗಳಿಂದ ಕೂಡಿದ ಅದಮ್ಯ ಜೀವನೋತ್ಸಾಹದ ದಿನಗಳವು . ಪ್ರತಿವರ್ಷದಂತೆ ಕೆ . ಆರ್ . ಮಾರುಕಟ್ಟೆ ಹತ್ತಿರದ ಕೋಟೆ ಶಾಲೆಯ ಆವರಣದಲ್ಲಿ ರಾಮನವಮಿ ಉತ್ಸವ ನಡೆಯುತ್ತಿತ್ತು . ಪ್ರತಿದಿನ ಒಬ್ಬೊಬ್ಬ ಲೆಜೆಂಡರಿ ಎಂಬಂತಹ ಕಲಾವಿದರಿಂದ ಕಛೇರಿ ಇರುತ್ತಿತ್ತು . ಕುನ್ನುಕ್ಕುಡಿಯವರ ಕಛೇರಿ ಇದ್ದ ದಿನ ಗೋಪಿ ಫೋನ್ ಮಾಡಿದ ( ಹೌದು . . ಜಾಲಿ ಬಾರಿನಲ್ಲಿ ಕೂತು ಪೊಲಿ ಗೆಳೆಯರು ಗೇಲಿ ಮಾಡುತ್ತಿದರಲ್ಲ ಅದೇ ಗೋಪಿ ! ) ಕುನ್ನುಕ್ಕುಡಿ ಕಛೇರಿಯ ವಿಷಯ ತಿಳಿಸಿ ' ಬಾ ' ಎಂದು ಆಜ್ಞಾಪಿಸಿದ . ಹೇಳಿ ಕೇಳಿ ಕಾರ್ನಾಟಿಕ್ ಸಂಗೀತ . ಅದರಲ್ಲು ಪಿಟೀಲು ಅಂತ ಬೇರೆ ಹೆಳ್ತಿದ್ದಿಯಾ ರಿಸ್ಕ್ ಬೇಡ ಮಾರಾಯ ಅಂದೆ . ಹಿಂದುಸ್ತಾನಿ ಅಂದ್ರೆ ಮೈಯೆಲ್ಲ ಕಿವಿಯಾಗಿಸಿ ಕೇಳುತ್ತೇನೆ . ರಾತ್ರಿಯೆಲ್ಲ ಕೂತು , ಪರೀಕ್ಷೆಯನ್ನೂ ಲೆಕ್ಕಿಸದೆ ಪಂ . ವಿನಾಯಕ ತೊರವಿ , ವೆಂಕಟೇಶ ಕುಮಾರರ ಸಂಗೀತ ಕೇಳಿದ್ದಿದೆ . ಆದರೆ ಕಾರ್ನಾಟಿಕ್ ಅಂದರೆ ಯಾಕೊ ಮಾರು ದೂರ . ಪಂಡಿತ್ ಬಾಲಮುರುಳಿ ಹೊರತು ಪಡಿಸಿದರೆ ಯಾರ ಸಂಗೀತವೂ ತಲೆಗೆ ಹೋಗಿದ್ದೇ ಇಲ್ಲ . ವಲಯಪಟ್ಟಿ , ಸುಬ್ಬುಲಕ್ಷ್ಮಿ , ಜೇಸುದಾಸ್ ಅವರೆಲ್ಲ ಹಾಡುತ್ತಿದ್ದರೆ ಚೂಪಾದ ಮೊಳೆಯೊಂದನ್ನು ಮಿದುಳೊಳಗೆ ನೆಟ್ಟು ಆಳಕ್ಕೆ ಕೊರೆದ ಹಾಗಾಗುತ್ತದೆ . ದಯವಿಟ್ಟು ಗಮನಿಸಿ , ಇದು ನನ್ನಲ್ಲಿರುವ ಹುಳುಕೇ ಹೊರತು ಈ ಮಹಾನ್ ಸಾಧಕರದಲ್ಲ . ಅಂತದ್ರಲ್ಲಿ ಕುನ್ನುಕ್ಕುಡಿ ಕಛೇರಿಗೆ ಹೋಗಲು ಸಹಜವಾಗೇ ಹೆದರಿಕೆ ಆಗಿತ್ತು . ಅವರು ಕಲೈಮಾಮಣಿ ಕಣೋ ! ಎಂದು ಆಸೆ ತೋರಿಸಲು ನೋಡಿದ . ಧಾರವಾಡದಲ್ಲಿ ಕಲ್ಲೊಗೆದರೆ ಕವಿಯೊಬ್ಬನಿಗೆ ತಾಗುವ ಹಾಗೆ , ಬೆಂಗಳೂರಲ್ಲಿ ಕಲ್ಲೊಗೆದರೆ ಟೆಕ್ಕಿಯೊಬ್ಬನಿಗೆ ತಗುಲುವ ಹಾಗೆ ತಂಜಾವೂರು ಮಧುರೈ ಕಡೆಗಳಲ್ಲಿ ಕಲೈಮಾಮಣಿಗಳಿಗೆ ತಾಗುತ್ತದೆ . ವಿಮಾ ಕಂಪನಿಯ ಏಜೆಂಟ್‍ಗಳು ಪಾಂಪ್ಲೆಟ್ ಹಂಚುವ ಹಾಗೆ ಅಲ್ಲಿ ಕಲೈಮಾಮಣಿ ಬಿರುದನ್ನು ಹಂಚುತ್ತಾರೆ ಅನ್ನಿಸುತ್ತದೆ . ಹಾಗಾಗಿ ಗೋಪಿಯ ಈ ಆಮಿಷ ನನ್ನಲ್ಲೇನೂ ಬದಲಾವಣೆ ಉಂಟುಮಾಡಲಿಲ್ಲ . ಪದ್ಮಭೂಷಣ್ ಗುರು ಅವ್ರು . . . ಇವತ್ತು ಇಷ್ಟ ಆಗ್ಲಿಲ್ಲ ಅಂದ್ರೆ ಮುಂದೆ ನಿನ್ನನ್ನ ಯಾವ ಸಂಗೀತ ಕಛೇರಿಗೂ ಕರಿಯೊಲ್ಲ . . ಸುಮ್ನೆ ಬಾ ಅಂದ . ಸರಿ ಹಾಳಾಗಿ ಹೋಗಲಿ ಅರ್ಧ ಗಂಟೆ ಕೂತು ಎದ್ದು ಬಂದರಾಯಿತು ಎಂದುಕೊಂಡು ಸಂಜೆ ಕಛೇರಿಗೆ ತಲುಪಿದೆ . ನಟ ಶಿವರಾಂರವರ ಪರಮ ಬೋರಿಂಗ್ ಸ್ವಾಗತ ಭಾಷಣದ ನಂತರ ಕಛೇರಿ ಶುರುವಾಯಿತು . ಕಛೇರಿ ಶುರುವಾಗಿತ್ತಷ್ತೇ ! ಕುನ್ನುಕ್ಕುಡಿ ಪಿಟೀಲನ್ನು ಹೆದೆಯೇರಿಸಿ ಬಿಲ್ಲಿನಿಂದ ಎರಡು ಬಾರಿ ಮೀಟಿದ್ದರಷ್ಟೇ ! " ಏನ್ ಸಿಸ್ಯಾ ಇದು . . ಮೊದಲ್ನೆ ಬಾಲೇ ಸಿಕ್ಸರ್ರು ! " ಅಂತ ಉದ್ಗರಿಸಿದೆ . ಇನ್ನು ಸೆಂಚುರಿಗಳು ಬರೋದಿದೆ ಕಾದು ನೋಡು ಅಂದು ಮುಂದಕ್ಕೆ ತಿರುಗಿದ . ಮುಂದಿನ ಎರಡು ತಾಸುಗಳು ಸಭಾಂಗಣದಲ್ಲಿ ಕೂತಿದ್ದವರೆಲ್ಲ ಈ ಲೋಕದಲ್ಲೆ ಇರಲಿಲ್ಲ . ಯಾವುದೊ ಕಿನ್ನರ ಲೋಕಕ್ಕೆ ನಮ್ಮನ್ನು ಅನಾಮತ್ತಾಗಿ ಕರೆದೊಯ್ದಿದರು ಕುನ್ನುಕ್ಕುಡಿ ವೈದ್ಯನಾಥನ್ ! ನನ್ನ ಧಮನಿಗಳಾಲ್ಲಗಲೆ ಕುನ್ನುಕ್ಕುಡಿ ಎಂಬ ಮಾಯಾವಿಯ ಜಾದೂ ಹರಿಯತೊಡಗಿತ್ತು . ಕುನ್ನುಕ್ಕುಡಿಯವರ ಸಂಗೀತ ಕಛೇರಿಯೆಂದರೆ ಕೇಳುವುದಷ್ಟೇ ಅಲ್ಲ ನೋಡುವುದು ಕೂಡ . ಕುನ್ನುಕ್ಕುಡಿ ಕೈಲಿರುವ ಕೈಲಿರುವ ಪಿಟೀಲು ಸಂಗೀತ ಮಾತ್ರವಲ್ಲ ಸಾಹಿತ್ಯವನ್ನೂ ಹೊರಡಿಸುತ್ತದೆ . ಇದು ಅತಿಶಯವಲ್ಲ . ಒಮ್ಮೆ ನೇರವಾಗಿ ಕೇಳಿದರೆ ನಿಮ್ಮ ಅನುಭವಕ್ಕೂ ಬರುತ್ತದೆ . ಅವರ ಕೈಲಿ ಪಿಟೀಲು ಮಾತನಾಡುತ್ತದೆ ಎಂಬುದೂ ನಿಜ . ಕುನ್ನುಕ್ಕುಡಿಯವರ ಮುಖವನ್ನು ಅವರು ಪಿಟೀಲು ನುಡಿಸುವಾಗ ನೋಡಬೇಕು . ಪಿಟೀಲಿನೊಡನೆ ಯಾವುದೋ ಲಘು ಹರಟೆಯಲ್ಲಿದಾರೇನೋ ಅನ್ನಿಸುತ್ತದೆ . ಅವರ ಮತ್ತೆ ಅವರ ಪಿಟೀಲಿನ ವರಸೆ ಒಮ್ಮೆ ತಂದೆ ಮಗನ ಆಪ್ತ ಮಾತುಕತೆಯಂತಿದ್ದರೆ ಮತ್ತೊಮ್ಮೆ ಶಾಲೆಗೆ ಹೋಗಲು ರಚ್ಚೆ ಹಿಡಿದ ಮಗುವಿನ ಸಂಭಾಳಿಸುವ ತಾಯಿಯ ಹಾಗೆ ಕಾಣುತ್ತಾರೆ ಕುನ್ನುಕ್ಕುಡಿ . ಒಮ್ಮೊಮ್ಮೆ ಲಾಲಿ ಹಾಡಿ ಪಿಟೀಲನ್ನು ಮಲಗಿಸುತ್ತಿದ್ದಾರೇನೋ ಎಂಬಂತೆ ಕಂಡರೆ ಇನೊಮ್ಮೆ ಮೊಂಡು ಹುಡುಗನ ಪಳಗಿಸುವವರಂತೆ ತೋರುತ್ತಿದ್ದರು . ಹಣೆಯಗಲದ ಬಿಳಿ ಪಟ್ಟೆ , ನಡುವೆ ಕೆಂಪು ಕುಂಕುಮ , ಉದ್ದ ಮುಖದಲ್ಲಿ ಆಗಾಗ ಬದಲಾಗುವ ಭಾವನೆಗಳು , ಪಿಟೀಲಿಗೆ ಜೀವ ತುಂಬುವ ಧಾಟಿ . . . ಎಲ್ಲ ಸೇರಿ ನನ್ನ ದೃಷ್ಟಿಯಲ್ಲಿ ಕುನ್ನುಕ್ಕುಡಿಯವರನ್ನು ದೈವತ್ವಕ್ಕೇರಿಸಿದವು . ಸಾಕ್ಷಾತ್ ಸರಸ್ವತಿಯೇ ಸ್ವತಃ ನಿಂತು ನಿರ್ದೇಶಿಸಿ ಅವರಿಂದ ಸಂಗೀತವನ್ನು ಹೊರಡಿಸುತ್ತಾಳೇನೋ ಎಂಬಂತಿದ್ದ ಆ ಕಛೇರಿಯಲ್ಲಿ ಎರಡು ತಾಸು ಸ್ವಯಂ ಕಾಲವೇ ಪ್ರಚ್ಛನ್ನವಾಗಿಬಿಟ್ಟಿತ್ತು . ಕರ್ನಾಟಕ ಸಂಗೀತದ ಬಗೆಗಿನ ನನ್ನ ಅಸಡ್ಡೆಯನ್ನು ಎಡಗಾಲಿನ ಧೂಳಿನಂತೆ ಝಾಡಿಸಿ ಕೊಡವಿ ಹಾಕಿದ್ದರು ಮಾಂತ್ರಿಕ ಕುನ್ನುಕ್ಕುಡಿ ವೈದ್ಯನಾಥನ್ . ನನ್ನ ಅಜ್ಞಾನದ ಬಗ್ಗೆ , ಪೂರ್ವಾಗ್ರಹದ ಬಗ್ಗೆ ನನಗೆ ತೀರಾ ನಾಚಿಕೆಯಾಯಿತು . ಕಛೇರಿಯ ನಂತರ ಕುನ್ನುಕ್ಕುಡಿ ಅರೆಗನ್ನಡದಲ್ಲಿ ಸಂಗೀತ ರಸಿಕರಿಗೆ ಧನ್ಯವಾದಗಳನ್ನು ಅರ್ಪಿಸಿದರು . ಆ ದಿನ ಅವರ ಮಡದಿಯೂ ಬಂದಿದ್ದರು . ಅದೇ ಮೊದಲ ಬಾರಿಗೆ ಅವರು ತಮ್ಮ ಪತಿಯ ಕಛೇರಿಯನ್ನು ಆಸ್ವಾದಿಸಿದ್ದಂತೆ . ಮೊಟ್ಟಮೊದಲ ಬಾರಿಗೆ ನನ್ನ ಮನದನ್ನೆ ನನ್ನ ಕಛೇರಿಗೆ ತಮ್ಮ ಉಪಸ್ಥಿತಿಯನ್ನು ನೀಡಿ ಆಶೀರ್ವದಿಸಿದ್ದಾರೆ ಎಂದು ತಮ್ಮ ಎಂದಿನ ಹಾಸ್ಯ ಧಾಟಿಯಲ್ಲಿ ಹೇಳಿದರು . ಅದಾದ ಒಂದು ವಾರದಲ್ಲಿ ಎಂಬತ್ತು ಜನ ವಿದ್ವಾಂಸರನ್ನೊಳಗೊಂಡ ಕಛೇರಿಯನ್ನು ಅದೇ ವೇದಿಕೆಯಲ್ಲಿ ತಮ್ಮ ಸಂಗೀತ ಸಂಶೋಧನಾ ಸಂಸ್ಥೆಯ ವತಿಯಿಂದ ನಡೆಸಿಕೊಟ್ಟರು . ನಡುನಡುವೆ ತಮ್ಮ ಸಂಶೋಧನೆ ರಾಗಗಳ ಮಾಹಿತಿಯನ್ನು ನೀಡಿದರು . ಇದಾಗಿ ಕುನ್ನುಕ್ಕುಡಿಯನ್ನು ತೀರಾ ಹಚ್ಚಿಕೊಂಡು ಬಿಟ್ಟಿದ್ದೆ . ಯಾವುದೋ ವೆಬ್‍ಸೈಟ್‍ನ ಮೂಲೆಯಲ್ಲಿ ಅವರು ತೀರಿ ಹೋದ ಸುದ್ದಿಯನ್ನು ಓದಿ ಇಡೀ ದಿನ ಮಂಕು ಬಡಿದವನಂತೆ ಕೂತಿದ್ದೆ . ಮರುದಿನ ದುಃಖ ತೋಡಿಕೊಳ್ಳಲು ಗೋಪಿಗೆ ಫೋನಾಯಿಸಿದಾಗ ಎರಡು ಮಾತಿನಲ್ಲಿ ಬೇಜಾರು ವ್ಯಕ್ತ ಪಡಿಸಿದ್ದನಷ್ಟೆ . ಮಾತು ಕುನ್ನುಕ್ಕುಡಿ ಸಾವಿಗೆ ಮೀಡಿಯಾದಲ್ಲಿ ಪ್ರಚಾರ ಸಿಗದ ಬಗ್ಗೆ ತಿರುಗಿತು . ಪೇಪರ್ ನ್ಯೂಸ್ ಚಾನಲ್‍ಗಳವರು ಯಾರುಯಾರಿಗೆ ಹುಟ್ಟಿರಬಹುದು ಎಂಬುದನ್ನು ಎಲ್ಲಾಕೋನಗಳ ಮೂಲಕ ಲೆಕ್ಕ ಹಾಕಿ ಅವರ ಪರಪಿತೃಗಳನ್ನೆಲ್ಲನ್ನೆಲ್ಲ ಸೇರಿಸಿ ಬೈದು ಉಗಿದು ಹಾಕಿದ . ಅವನೇ ಹೇಳಿದಂತೆ ಅರೆನಗ್ನ ಪಾರ್ಟಿಗಳ ವಿವರವಾದ ಚಿತ್ರಣಗಳನ್ನು ಪುಟಗಟ್ಟಲೆ ಬರೆಯುವ ಟೈಂಸ್ ಆಫ್ ಇಂಡಿಯಾ ಎಂಬ ಪತ್ರಿಕೆ ಒಂದು ಮೂಲೆಯಲ್ಲಿ ಒಂದು ಪ್ಯಾರಾ ಸುದ್ದಿಯನ್ನು ಮಾತ್ರ ಪ್ರಕಟಿಸಿತ್ತು . ಪತ್ರಿಕೆಗಳಿಗೆ ಬೈದು ಬೈಗುಳಗಳನ್ನು ಅಪಮಾನಿಸಲು ಇಷ್ಟವಿಲ್ಲದೇ ಇಲ್ಲಿಗೆ ಈ ವಿಷಯವನ್ನು ಮುಗಿಸುತ್ತಿದ್ದೇನೆ . ಕಡೆಯದಾಗಿ ಕುನ್ನುಕ್ಕುಡಿಯವರಿಗೆ ನನ್ನ ಯೋಗ್ಯತೆಗೆ ತಕ್ಕಷ್ಟು ನುಡಿ ನಮನಗಳನ್ನು ಅರ್ಪಿಸಿ ಲೇಖನವನ್ನು ಕೊನೆಗೊಳಿಸುತ್ತೇನೆ . ಚರಮವೇ ಇಲ್ಲದ ಕುನ್ನುಕ್ಕುಡಿ ವೈದ್ಯನಾಥನ್‍ರವರ ಸಂಗೀತಕ್ಕೆ , ಸೈಂಧವ ಸಾಧನೆಗೆ , ವ್ಯಕ್ತಿತ್ವಕ್ಕೆ , ಮುಖದಲ್ಲಿ ಸದಾ ಲಾಸ್ಯವಾಡುವ ನಿಷ್ಕಲ್ಮಷ ನಗುವಿಗೆ ಕೋಟಿ ಕೋಟಿ ನಮನಗಳು . ಬಿಸ್ಮಿಲ್ಲಾ ಖಾನ್‍ರಂತೆ ಸಂಗೀತ ಸಾಧನೆಯಿಂದಲೇ ದೈವತ್ವಕ್ಕೇರಿದ ಕುನ್ನುಕ್ಕುಡಿಯವರ ಕೀರ್ತಿಯೂ ಆಚಂದ್ರಾರ್ಕ . ಕುನ್ನುಕ್ಕುಡಿಯವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ನೀವೂ ಪ್ರಾರ್ಥಿಸಿದರೆ ನಾನು ಈ ಲೇಖನ ಪ್ರಕಟಿಸಿದ್ದೂ ಸಾರ್ಥಕ ಎಂದುಕೊಳ್ಳುತ್ತೇನೆ .
ಹೀಗಳೆಯುವುದು ಸರಿ ಅಂತ ನಾನು ಹೇಳುವುದಿಲ್ಲ , ನನಗಾಗಿರುವ ಅನುಭವಕ್ಕೆ ಇಂತಹ ತೀರ್ಮಾನಕ್ಕೆ ಬಂದಿದ್ದೇನೆ . ( ಹೇಗಿದ್ದರು ಜನರು ಆಡಿಕೊಳ್ಳುವುದನ್ನು ಬಿಡುವುದಿಲ್ಲ ಅನ್ನೊ ತತ್ವಕ್ಕೆ ಬಂದಿದ್ದೀನಿ . ತಮ್ಮ ಮೂಗಿನ ನೇರಕ್ಕೆ ತಾವು ಮಾತನಾಡುತ್ತಾರೆ . ಅದಕ್ಕೆ ಕಿವಿಕೊಡಬಾರದು ) . ಭವಿಶ್ಯ ರೂಪಿಸಿಕೊಳ್ಳುವುದಕ್ಕೆ ಆತ್ಮ ವಿಶ್ವಾಸ ಬೇಕು ಅದೊಂದಿರುವುದರಿಂದ ದಾರಿ ಸುಗಮವಾಗುತ್ತೆ .
" ಛೀ ಛೀ ಜಗತ್ತು ಹಾಳಾಗ್ತಾ ಇದೆ , ಎನ್ ಕಥೆ ಇದು ಕಲಿಯುಗ ಕಾಳ ರೂಪ ದರ್ಶನ , ಕೃಷ್ಣ ಕಲ್ಕಿಯಾಗಿ ಯಾವಗ ಬರ್ತೀಯೊ " ಅಂತೇನೊ ಬಡಬಡಿಸುತ್ತ ಪೇಪರು ಆಕಡೆ ಬೀಸಾಕಿ ಪಾಕಶಾಲೆಗೆ ನಡೆದಳು , ಅಲ್ಲಪ್ಪ ಜಗತ್ತಿನ ಯೋಚನೆ ಇವಳಿಗ್ಯಾಕೆ ಬಂತು ಅಂತೀನಿ , ಅದರಲ್ಲೂ ರಾಮ ಕೃಷ್ಣ ಅಂತಾ ಬೇರೆ ಎಲ್ಲ ಹಳೆ ಕಾಲದ ಮನೆ ಮೂಲೆ ಹಿಡಿದು ಕೂತಿರುವ ಮುದುಕಿಯಂತೆ ಇವಳ್ಯಾಕೆ ಮಾತಾಡ್ತಾ ಇದಾಳೆ , ನನ್ನ ಚಿರಯೌವನ ಚೆಲುವೆಗೇನಾದ್ರೂ ವಯಸ್ಸಾಯ್ತಾ , ಅಂತ ಸಂಶಯವಾಯ್ತು . " ಏನೇ ಇದೆ ಪೇಪರಿನಲ್ಲಿ " ಅಂತನ್ನುತ್ತ ಕೆಳಗೆ ಬಿದ್ದಿದ್ದ ಪೇಪರು ಎತ್ತಿ ನೋಡಿದೆ , ನನಗೇನೂ ಅದರಲ್ಲಿ ಅಂಥದ್ದು ವಿಶೇಷವೇನೂ ಕಾಣಲಿಲ್ಲ . ಪಾಕಶಾಲೆಯತ್ತ ಹೆಜ್ಜೆ ಹಾಕುತ್ತಾ , " ಏನು ಕಲಿಯುಗ , ಕಲ್ಕಿ ಅಂತೆಲ್ಲ ಅಂತಿದ್ದೆ ಏನಾಯ್ತು , ಪೇಪರಿನಲ್ಲೇನಿದೆ ಅಂಥದ್ದು " ಅಂದೆ , " ಯಾಕೆ ಕಾಣಿಸಲಿಲ್ವಾ , ಅದೇನೊ ಗೇ ರೈಟ್ಸ ಅಂತೆ , 377 ಕಲಂ ತೆಗೆದು ಹಾಕಿ ಕಾನೂನು ಸಮ್ಮತ ಮಾಡ್ತಾರಂತೆ . . . ಕೃಷ್ಣ , ಕಲಿಯುಗ ಅಧಪತನಕ್ಕಿಳಿದಾಗ ಕಲ್ಕಿಯಾಗಿ ಬಂದು ವಿಶ್ವವನ್ನು ಪುನ : ರಚಿಸುತ್ತೇನೆ ಅಂತ ಹೇಳಿದ್ದನಂತೆ , ಇನ್ನೂ ಯಾಕೆ ಕಾಯ್ತಿದಾನೆ ಅಂತ " ಕೈಲಿದ್ದ ಪಾತ್ರೆಯನ್ನು ಒಲೆ ಮೇಲೆ ಕುಕ್ಕಿದಳು , ನಾನೊಂದು ಚಿಕ್ಕ ಮುಗುಳ್ನಗು ಕೊಟ್ಟು ಹೊರಗೆ ಬಂದೆ , " ಅಲ್ರೀ ಈ ಜನರಿಗೆ ಬೇರೆ ಕೆಲಸಾನೆ ಇಲ್ವಾ " ಅಂತನ್ನುತ್ತಾ ಮತ್ತೆ ಹೊರಗೆ ಬಂದಳು , " ಕೆಲವರಿಗೆ ಅದೇ ಕೆಲಸ " ಅಂದೆ . ಅದೇನು ಹಾಗಂದ್ರೆ ಅನ್ನೊವಂತೆ ನೋಡಿದ್ಲು , " ಹೀಗೇ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಅಂತ ಹೇಳಿಕೊಂಡು ಯಾವುದಾದರೂ ಕೆಲಸಕ್ಕೆ ಬಾರದ ವಿಷಯ ಎತ್ತಿ , ಸಮಾಜ ಸೇವೆ ಅಂತ ಸಮಾಜ ಹಾಳು ಮಾಡೊ ಕೆಲಸ ಮಾಡೋದು " ಅಂದೆ . " ಆದರೂ ಕೆಲವು ಒಳ್ಳೆ ಕೆಲ್ಸಾನೂ ಮಾಡ್ತಿವೆ ಅಲ್ರೀ " ಅಂದ್ಲು , " ನಾನೆಲ್ಲಿ ಇಲ್ಲ ಅಂದೆ , ಅದಕ್ಕೆ " ಕೆಲ " ಅಂತ ಹೇಳಿದ್ದು , ಆದರೆ ಒಳ್ಳೇದಕ್ಕಿಂತ ಇಂಥದ್ದೇ ಜಾಸ್ತಿ ಪ್ರಚಾರ ಆಗಿಬಿಡ್ತದೇ ಏನು ಮಾಡೊದು " ಅಂದೆ . " ಈ ಆಧುನಿಕತೆ ಅಂತ ಎಲ್ಲೊ ಹೋಗ್ತಾ ಇದೀವಿ ಏನೊ " ಅಂದ್ಲು , " ಹಾಗೆ ನೋಡಿದ್ರೆ ಇದೇನು ಆಧುನಿಕ ಜಗತ್ತಿನಲ್ಲೇ ಬಂದದ್ದೇನಲ್ಲ , ಪುರಾತನ ಕಾಲದಲ್ಲೂ ಇತ್ತು ಆದರೆ ಪಾಪ ಪ್ರಜ್ಞೆಯಿಂದ ಬಹಳ ಬೆಳಕಿಗೆ ಬಂದಿರಲಿಲ್ಲ ಅಷ್ಟೇ " ಅಂದೆ . " ಮತ್ತೆ ಮುಂದೇನು " ಅಂದಳು , " ಮುಂದೇನು ಅಂದ್ರೆ , ನಿನಗೆ ಮಗ ಹುಟ್ಟಿ ಮದುವೆ ವಯಸ್ಸಿಗೆ ಬಂದಾಗ ಅಮ್ಮ ನಾನೊಂದು ಹುಡುಗನ್ನ ಇಷ್ಟಪಡ್ತಿದೀನಿ ಅಂತ ಹೇಳದಿರಲಿ ಅಂತ ಬೇಡಿಕೊ ಅಷ್ಟೇ " ಅಂದೆ . " ಇನ್ನೇನು ಯಾವುದೋ ಹುಡುಗಿ ಇಷ್ಟ ಪಡ್ತಿದೀನಿ ಅಂದ್ರೆ ಏನು ಕುಲ ಗೊತ್ರಾ ಏನೂ ನೋಡದೆ ಮದುವೆ ಮಾಡಿಬಿಡೊದಾ ? " ಅಂದ್ಲು " ಮತ್ತಿನ್ನೇನು ಹುಡುಗನ್ನ ಮದುವೆ ಆಗ್ತೀನಿ ಅನಲಿಲ್ಲ ಅಂತ ಖುಷಿ ಪಡಬೇಕು ಕಣೇ " ಅಂದೆ . " ಹಾಗೆಲ್ಲ ಆದ್ರೆ ಸಮಾಜ ಏನನ್ನುತ್ತೇರೀ " ಅಂದ್ಲು " ಸಮಾಜ ಏನನ್ನುತ್ತೇ , ಸಮಾಜ ಅನ್ನೊದು ಏನು ಹೇಳು ನಾವೇ ನಮ್ಮ ಸುತ್ತ ಹಾಕಿಕೊಂಡ ಪರಿಧಿ , ಬೇಲಿ ಹಾಗೆ . . . ಇದೇ ಹದ್ದು ಇದನ್ನು ಮೀರಬಾರದು ಅಂತ ನಮ್ಮವೇ ಕಟ್ಟುಪಾಡುಗಳು , ನಾವೇ ಬದಲಾಗುತ್ತ ನಡೆದರೆ ಆ ಪರಿಧಿಯನ್ನ ದೂರ ಸರಿಸುತ್ತಾ ಹೋಗುತ್ತೇವೆ . " ಅಂದೆ . " ಅರ್ಥ ಆಗ್ಲಿಲ್ಲ " ಅಂದ್ಲು . " ಮೊದಲು ಮದುವೆ ಅಂದ್ರೇನು ? " ಅಂದೆ . " ಈ ಡೌಟ್ ಯಾಕೆ ಬಂತೀಗ , ಅದೂ ಮದುವೆ ಆಗಿ ವರ್ಷಗಳೇ ಆದಮೇಲೆ " ಅಂದ್ಲು " ವರ್ಷ ಆಯ್ತಲ್ಲ ಮರೆತು ಹೋಗಿದೆ " ಅಂದೆ " ಸಪ್ತ ಪದಿ ತುಳಿದು , ಏಳೇಳು ಜನ್ಮಕ್ಕೆ ನೀನೇ ನನ್ನ ಸಂಗಾತಿ ಅಂತ ಪ್ರಮಾಣ ಮಾಡಿದ್ದು ಮರೆತು ಹೋಯ್ತಾ ? " ಅಂತ ಕಿವಿ ತಿರುವಿದಳು , " ಇನ್ನೂ ತಿರುವಿ ಬಿಡ್ಲಾ ಇಲ್ಲಾ ನೆನಪಿಗೆ ಬಂತಾ " ಅಂದ್ಲು " ಹಾಂ . . . ನೆನಪಿಗೆ ಬಂತು " ಅಂದೆ , ಕೆಂಪಗಾದ ಕಿವಿ ಸವರಿಕೊಳ್ಳುತ್ತ , " ಈ ಜನ್ಮ ಒಂದೇ ಅಲ್ದೇ ಏಳೇಳು ಜನ್ಮ ಬೇರೆ ಅಂತೆ , ಈಗಲೇ ಸಾಕಾಗಿದೆ " ಅಂತೇನೊ ಗೊಣಗಿದೆ . " ಏನದು ಏನೋ ಗುಸುಗುಸು ಅಂತೀದೀರಾ " ಅಂದ್ಲು " ಹೇ ಏನಿಲ್ಲ ಬರೀ ಏಳೇ ಜನ್ಮಾನಾ , ಇನ್ನೊಂದು ನಾಲ್ಕೈದು ಸೇರಿಸಿ ಒಂದು ಡಜನ್ನು ಮಾಡಿಬಿಡಬಹುದಿತ್ತಲ್ಲ ಅಂತಾ ಇದ್ದೆ . . ಹೀ ಹೀ ಹೀ " ಹಲ್ಲು ಕಿರಿದೆ . " ಏಳೇಳು ಜನ್ಮಾ ಏನೂ ಬೇಡ ಈ ಜನ್ಮದಲ್ಲಾದರೂ ನನ್ನ ಜತೇನೆ ಇದ್ರೆ ಸಾಕಪ್ಪ " ಅಂದ್ಲು . ಅಬ್ಬಾ ದೀಪಾವಳಿ ಬಟ್ಟೆ ಸೇಲಿನಲ್ಲಿ ಒಂದು ತೆಗೆದುಕೊಂಡ್ರೆ ಆರು ಫ್ರೀ ಅಂತ ಡಿಸ್ಕೌಂಟ ಸಿಕ್ಕಷ್ಟು ಖುಷಿಯಾಯ್ತು . " ಹಾಗಾದ್ರೆ ಮದುವೆಯಂದ್ರೆ ನೀನು ನಾನು ಜತೆಯಾಗಿ ಸಂಗಾತಿಗಳಾಗಿ ಜೀವನ ಮಾಡ್ತೀವಿ ಅಂತ ಜೊತೆಯಾಗೋದು ಅಂದ ಹಾಗಾಯ್ತು " ಅಂದೆ , " ಬರೀ ಅಷ್ಟೇ ಏನಲ್ಲ , ಆದರೂ ಚಿಕ್ಕಾದಾಗಿ ಹೇಳಬೇಕೆಂದ್ರೆ ಅದು ನಿಜ " ಅಂದ್ಲು . " ಹಾಗಾದ್ರೆ ಅದನ್ನೇ ಹುಡುಗ ಹುಡುಗಾನೇ , ರಾಮ್ ವೆಡ್ಸ ಶಾಮ್ ಅಂತ , ಇಲ್ಲ ಹುಡುಗಿ ಹುಡುಗಿಯೇ ರಿಂಕಿ ವೆಡ್ಸ ಪಿಂಕಿ ಅಂತಾನೊ ಯಾಕೆ ಮಾಡಬಾರದು , ಅವರೇ ಜತೆ ಜತೆಯಾಗಿ ಯಾಕೆ ಇರಬಾರದು ಅಂತಾನೇ ಅವರು ಕೇಳ್ತಿರೋದು " ಅಂದೆ , " ಅಲ್ಲ ಹುಡುಗೀರು ಹಾಗೇ ಕೇಳ್ತಿದಾರ ? " ಅಂದ್ಲು " ಹೂಂ ಮತ್ತೆ , ಅವರಿಗೆ ಲೆಸ್ಬಿಯನ ಅಂತಾರೆ " ಅಂದೆ . " ಅಬ್ಬಾ , ಹುಡುಗೀರು ಇಷ್ಟು ಮುಂದುವರೆದೀದೀರಾ ? " ಅಂದ್ಲು " ನೀನೆ ಹಿಂದೆ ಹೀಗೆ ಮನೇಲಿ ಕೂತಿರೋದು , ಲೀಡ ಏನಾದ್ರೂ ತೆಗೆದುಕೊಳ್ತೀಯಾ ಅವರ ಹೋರಾಟದಲ್ಲಿ " ಅಂದೆ , ಕೈಗೆ ಸಿಕ್ಕ ಸೊಫಾ ಮೇಲಿನ ಎಲ್ಲ ದಿಂಬುಗಳ ಪ್ರಹಾರ ನನ್ನ ಮೇಲಾಯ್ತು . ಎಲ್ಲ ದಿಂಬುಗಳ ಅತ್ತ ಕಡೆ ಸರಿಯಾಗಿ ಪೇರಿಸಿಟ್ಟು , ಅವಳನ್ನೇ ದಿಂಬು ಮಾಡಿಕೊಂಡು ಒರಗಿದೆ , ಇನ್ನೂ ಕೆಂಪಾಗಿದ್ದ ಕಿವಿ ಸವರುತ್ತ , ಏನೋ ಮಹಾನ ಸಂಶೋಧನೆ ಮಾಡಿ ಕಂಡು ಹಿಡಿದ ಹಾಗೆ " ಸಂತತಿ ಹೇಗೆ ಬೆಳೆಯೋದು , ಅದಕ್ಕಾದರೂ ಹುಡುಗ ಹುಡುಗಿ ಮದುವೆಗೆ ಅರ್ಥ ಇದೆಯಲ್ಲ " ಅಂದ್ಲು . " ಮೊದಲೇ ಜನಸಂಖ್ಯೆ ಬೆಳೀತಿದೆ , ಯಾರಿಗೆ ಮಕ್ಕಳಾಗಿ ಏನಾಗಬೇಕಿದೆ , ಅನಾಥ ಮಕ್ಕಳು ದತ್ತು ತೆಗೆದುಕೊಳ್ತಾರೆ " ಅಂದೆ . " ಶಾಲೆಗೆ ಎಲ್ಲಾ ಸೇರಿಸಬೇಕಾದ್ರೆ ಫಾರ್ಮನಲ್ಲಿ ಅಪ್ಪ ಅಮ್ಮಾ ಅಂತ ಯಾರ ಹೆಸ್ರು ತುಂಬೋದು , ಹೇಳಿಬಿಟ್ರೆ ಸುಮ್ನೇನಾ " ಅಂತ ವಾದ ಮಂಡಿಸಿದಳು . " ಇಷ್ಟಕ್ಕೂ ಈಗ ಸದ್ಯ ಮದುವೆ ಆಗಬಹುದು ಅಂತ ಏನೂ ಸಮ್ಮತಿ ಕೊಟ್ಟಿಲ್ಲ ( ವಿದೇಶದಲ್ಲಿ ಅದೂ ಆಗಿದೆ ) , ಅದು ಕಾನೂನುಬಾಹಿರವಲ್ಲ ಅಂತ ಮಾತ್ರ , ಅದರ ಮೇಲಿದ್ದ ಕಾನೂನನ್ನು ಕಿತ್ತು ಹಾಕೀದಾರೆ ಅಷ್ಟೇ , ಹಾಗೇನಾದ್ರೂ ನಾಳೆ ಮದುವೆಗೂ ಸಮ್ಮತಿ ಕೊಟ್ರೆ ಅದಕ್ಕೂ ಏನೊ ಒಂದು ಉಪಾಯ ಮಾಡ್ತಾರೆ ಬಿಡು " ಅಂದೆ . " ಕಾನೂನು ಅಂತ ಇತ್ತಲ್ಲ ಈಗ ಅದೂ ಇಲ್ಲ " ಅಂದ್ಲು . " ಅಲ್ಲ ಯಾವ ಕಾನೂನು ಇದ್ದು ಏನು ಆಗಿದೆ ಹೇಳು , ಕಾನೂನುಗಳು ಮಾಡಿದ್ದೇ ಅವುಗಳನ್ನು ಮುರಿಯೋಕೆ , ಮೀರಿ ಹೋಗೋಕೆ ಅನ್ನೊ ಹಾಗಿದೆ ಈಗಿನ ಪರಿಸ್ಥಿತಿ , ಹಾಗಿರುವಾಗ ಆ ಕಾನೂನು ಎಷ್ಟರ ಮಟ್ಟಿಗೆ ಉಪಯೋಗ ಆಗಿತ್ತು ? ಆದರೆ ಈ ಕಾನೂನು ತೆಗೆದು ಹಾಕಿದ್ದು ಅವರಿಗೊಂದು ನೈತಿಕ ಜಯ ಸಿಕ್ಕ ಹಾಗೆ ಆಗಿದೆ ಅಷ್ಟೇ " ಅಂದೆ . " ಅಲ್ಲಾ ಆಗಲಿಂದ ನೋಡ್ತಾ ಇದೀನಿ , ಏನು ಬರೀ ಅವರ ಪರವಾಗೇ ವಕಾಲತ್ತು ನಡಿಸೀದೀರಾ ಏನ್ ಕಥೆ ನಿಮ್ದು " ಅಂತ ಹುಬ್ಬು ಹಾರಿಸಿದಳು . " ಲೇ ನನ್ನ ಮೇಲೆ ಯಾಕೆ ನಿನಗೇ ಡೌಟು ? " ಅಂತ ಅವಳ ಕೈಗಳೆರಡನ್ನೂ ನನ್ನ ಕೈಯಲ್ಲಿ ಬಂಧಿಯಾಗಿಸಿದೆ , ಎಲ್ಲಿ ನನ್ನ ಬಿಟ್ಟು ಹೋದಾಳು ಅಂತ ಏನೋ . ಮುಗುಳ್ನಗುತ್ತಾ " ಯಾರು ಹೇಗೆ ಅಂತ ಏನು ಹೇಳೋದಪ್ಪ " ಅಂದ್ಲು . ಕೈಗಳನ್ನು ಇನ್ನಷ್ಟು ಬಿಗಿಯಾಗಿಸಿದೆ . " ಅವರದ್ದೆ ಆದ ಕೆಲವು ಗುರುತುಗಳಿವೆ , ಅದು ದೇಶದಿಂದ ದೇಶಕ್ಕೆ ಬೇರೆ ಬೇರೆ , ಕೆಲವು ಕಡೆ ಪಿಂಕ ಶರ್ಟು ಹಾಕಿದ್ರೆ " ಅಂತಿದ್ದಂಗೆ " ಅಯ್ಯೊ ಅಲ್ಲೂ ಪಿಂಕಾ , ವ್ಯಾಲೆಂಟೈನ ಡೇಗೆ ಪಿಂಕ ಚಡ್ಡಿ ಅಭಿಯಾನ , ನಿಮ್ಮ ಸಾಫ್ಟವೇರ ಕಂಪನೀಲಿ ಕೆಲಸದಿಂದ ತೆಗೆಯೋಕೆ ಪಿಂಕ ಸ್ಲಿಪ್ಪು , ಇನ್ನೂ ಇಲ್ಲಿ ಇದು ಬೇರೇನಾ , ಅಲ್ಲ ಪಾಪ ಆ ಪಿಂಕ ಕಲರು ಎನ್ ಪಾಪಾ ಮಾಡಿದೆ ಅಂತೀನಿ " ಅಂದವಳು " ಸ್ವಲ್ಪ ಏಳ್ರೀ ಮೇಲೆ ಬೀರುನಲ್ಲಿ ನಿಮ್ದು ಯಾವದಾದ್ರೂ ಪಿಂಕ ಶರ್ಟ ಇದೇನ ನೋಡಿ ಬರ್ತೀನಿ " ಅಂದ್ಲು , ಅಲ್ಲೇ ನನ್ನ ಕೈಯಲ್ಲಿದ್ದ ಅವಳ ಕೈ ಕಚ್ಚಿದೆ , " ಇಲ್ಲ . . . ಇಲ್ಲ . . . ಯಾವದೂ ಇಲ್ಲ ನಂಗೊತ್ತು ಬಿಡಿ ರೀ . . . ರೀ . . . " ಅಂತ ಚೀರಿದಳು . " ನೋಡು ನಿನ್ನ ಕೈ ಕೂಡ ಪಿಂಕ ಆಯ್ತು ಕಚ್ಚಿದಲ್ಲಿ " ಅಂದೆ ನಾಚಿದಳು ಗಲ್ಲ ಕೂಡ ಪಿಂಕ ಆಯ್ತು . " ಇಷ್ಟೇನಾ ಇನ್ನೂ ಏನಾದ್ರೂ ಪಿಂಕ್ ಇದೇನಾ " ಅಂದವಳಿಗೆ " ಪಿಂಕಿ ರಿಂಗ ಅಂತಿದೆ , ಪಿಂಕಿ ಫಿಂಗರ್ ಅಂದ್ರೆ ಕಿರುಬೆರಳಿಗೆ ಸ್ಟೀಲ್ ರಿಂಗ್ ಹಾಕೋತಾರೆ " ಅಂದೆ . " ರಿಂಗ ಬೇರೆನಾ " ಅಂತ ಉದ್ಗಾರ ತೆಗೆದ್ಲು " ಬಲಕಿವೀಲಿ ಕಿವಿಯ ರಿಂಗ , ಕಿಲಿಯೋಲೆ ಹಾಕಿದ್ರೂ ಕೂಡ ಅದೇ ಸಂಕೇತ ಕೆಲವು ಕಡೆ " ಅಂತಂದೆ . ನನ್ನ ಕಿರುಬೆರಳು ಪರೀಕ್ಷೆಯಾಗುತ್ತಿತ್ತು ಆ ಕ್ಷಣದಲ್ಲಿ , " ಲೇ ನನ್ನ ಮೇಲೆ ಯಾಕೇ ನಿನಗೆ ಸಂಶಯ , ಆಗಲಿಂದ ನನ್ನೇ ಚೆಕ್ ಮಾಡ್ತಿದೀಯಾ " ಅಂದರೆ " ಅಲ್ಲ ಇಷ್ಟೆಲ್ಲ ಮಾಹಿತಿ ಎಲ್ಲಿಂದ ಬಂತು ಅಂತ " ಪ್ರಶ್ನಿಸಿದಳು , " ಭಾರತದಲ್ಲಿ ಇದಿನ್ನೂ ಆ ಮಟ್ಟಿಗೆ ಚಾಲ್ತಿಯಲ್ಲಿ ಇಲ್ಲ ಆದರೆ ವಿದೇಶದಲ್ಲಿ ಸ್ವಲ್ಪ ಹುಷಾರಾಗೇ ಇರಬೇಕು . ವಿದೇಶಕ್ಕೆ ಹೊರಟಿದ್ದ ಗೆಳೆಯನಿಗೆ ಕೊಲೀಗ ( ಸಹುದ್ಯೋಗಿ ) ಕೊಟ್ಟ ಮಾಹಿತಿ , ನನಗೂ ಆಗಲೇ ಇದೆಲ್ಲ ತಿಳಿದದ್ದು . . . ಇಲ್ಲೇನು ಬಿಡು ಗೆಳೆಯರಿಬ್ರು ಹೆಗಲ ಮೇಲೆ ಕೈ ಹಾಕಿಕೊಂಡು ಹೋದ್ರೂ ಯಾರೂ ಏನೂ ಅನ್ಕೊಳ್ಳಲ್ಲ ಆದರೆ ಕೆಲವು ವಿದೇಶಗಳಲ್ಲಿ ಒಬ್ಬರನ್ನೊಬ್ಬರು ಮುಟ್ಟೋ ಹಾಗೆ ಕೂಡ ಇಲ್ಲ " ಅಂದೆ " ಹೌದಾ ! " ಅಂತ ಅಶ್ಚರ್ಯಪಟ್ಟಳು , " ಅಷ್ಟೇ ಏನೂ ಹಾಕೊ ಒಂದು ಸಾಕ್ಸು ಬದಲಾದ್ರೂ ಏನೇನೋ ಅರ್ಥ ಬಂದು ಬಿಡತ್ತೆ " ಅಂದೆ . " ಸಾಕ್ಸಾ ? ! " ಅಂತ ಹೌಹಾರಿದಳು " ಹೂಂ ರೈನಬೊ , ಅದೇ ಕಾಮನಬಿಲ್ಲಿನ ಕಲರು ಸಾಕ್ಸ ಅವರೇ ಹಾಕೋಳ್ಳೋದು , ಅದನ್ನ ಬಿಡು ಕೆಲವು ಕಡೆ ಬಿಳಿ ಸಾಕ್ಸ ಕೂಡ ಅದರ ಗುರುತು " ಅಂದೆ . ಅದನ್ನೆಲ್ಲ ಕೇಳಿ ಅವಳಿಗೆ ಅರಗಿಸಿಕೊಳ್ಳಲು ಸ್ವಲ್ಪ ಸಮಯವೇ ಬೇಕಾಯ್ತು . " ಹೀಗಾದ್ರೆ ಹೇಗೆ , ಏನು ಜನ ಹೀಗ್ಯಾಕೆ ಮಾಡ್ತಾರೆ " ಅಂದ್ಲು , " ಸ್ವಲ್ಪ ಈ ಪ್ಯಾಶನ್ನು ಇಂಡಸ್ಟ್ರಿನಲ್ಲಿ ಇದು ಇದೆ , ಎಲ್ರೂ ಅಲ್ಲ ಆದರೂ ಈ ದಿನಾಲು ಹುಡುಗಿಯರ ಗುಂಪಿನಿಂದಲೇ ಸುತ್ತುವರೆದಿರುವ ಅಲ್ಲಿನ ಕೆಲವರಿಗೆ ಇಂಥ ಯೋಚನೆಗಳು ಬಂದರೆ ಅಚ್ಚರಿಯಿಲ್ಲ ಒಂಥರಾ ಅಡುಗೆ ಭಟ್ಟರಿಗೆ ದಿನಾಲೂ ಅದೇ ಸ್ವೀಟು ಮಾಡಿ ಅದರ ಘಾಟು ಬಡಿದು ಬಡಿದು ಅವರೇ ಮಾಡಿದ ಸ್ವೀಟ ಅವರೇ ತಿನ್ನೊಕಾಗದಿರೋ ಹಾಗೆ ಬರುವ ವಾಕರಿಕೆ ನೀರಸತನ ಒಂದು ಕಾರಣವಾಗಿರಬಹುದು " " ಹೌದ್ರೀ , ಈ ಹೂರಣದ ಹೋಳಿಗೆ ಮಾಡಿದಾಗಲೆಲ್ಲ ನನಗೂ ಅದನ್ನ ತಿನ್ನೋಕೆ ಮನಸೇ ಆಗಲ್ಲ " ಅಂದ್ಲು ಹೂರಣದ ಹೋಳಿಗೆ ಹೆಸರು ಕೇಳಿ ಬಾಯಿ ನೀರೂರಿತು , " ಸ್ವಲ್ಪ ತಾಳು ಹಾಗಿದ್ರೆ , ನೀರು ಕುಡಿದು ಬರ್ತೀನಿ ಇನ್ನೊಂದು ಕಾರಣ ಬಂದು ಹೇಳ್ತೀನಿ , ಅಲ್ಲೀವರೆಗೆ ಆ ಪೇಪರು ಮೂರನೇ ಪೇಜು ಮಾತ್ರ ನೋಡಬೇಡ " ಅಂತ ಒಳಗೆ ಅಡುಗೆಮನೆಗೆ ಹೋದೆ . ಬರುವಷ್ಟರಲ್ಲಿ ಮೂರನೇ ಪೇಜು ತೆಗೆದುಕೊಂಡು ಕೂತಿದ್ದಳು " ಏನಿದೆ ಮೂರನೇ ಪೇಜಿನಲ್ಲಿ ಅಂಥದ್ದು ? " ಅಂದ್ಲು " ನನಗೇನು ಗೊತ್ತು , ನಿನಗೆ ನೋಡಬೇಡ ಅಂತ ಅಲ್ವಾ ಹೇಳಿದ್ದು , ಯಾಕೇ ನೋಡಿದೆ ? " ಅಂದೆ ತಣ್ಣಗೆ ಮೂವತ್ತೆರಡು ಹಲ್ಲು ಕಾಣಿಸಿದಳು " ಸುಮ್ನೆ ಕುತೂಹಲ , ಈಗ ಏನಿದೆ ಅಂತ ಹೇಳ್ತೀರೊ ಇಲ್ವೊ " ಅಂದ್ಲು . " ಹೇಳೊದೇನು , ಅಲ್ಲೇನೂ ಇಲ್ಲ , ಬೇಡ ಅಂತ ಹೇಳಿ ಯಾವಾಗ ಮುಚ್ಚಿಡಲು ಶುರು ಮಾಡುತ್ತೇವೊ ಆಗ ಅಲ್ಲಿ ಕುತೂಹಲ ಜಾಸ್ತಿಯಾಗತ್ತೆ , ಅದೇ ಇಂಥ ವಿಷಯಗಳಲ್ಲಿ ಆಗೋದು " ಅಂದ್ರೇನು " ಶಾಲೇಗೊ ಹೋಗೊ ಮಗುಗೆ ಇದನ್ನೆಲ್ಲ ಹೇಳೊಕೆ ಆಗತ್ತ ? ನಿಮ್ಮಂಗೆ ಪೋಲಿ ಆಗಿ ಹೋಗ್ತಾರೆ ಅಷ್ಟೇ " ಅಂದ್ಲು , " ಶಾಲೆಗೆ ಹೋಗೊ ಮಗೂಗೇ ಹೇಳು ಅಂದ್ನಾ " ಅಂತ ನಾ ಸಿಟ್ಟಿನಿಂದ ನೋಡಿದೆ , " ಪೋಲಿ ಅಂದದ್ದಕ್ಕೆ ಸಿಟ್ಟಾಗಬೇಡ ಪುಟ್ಟಾ " ಅಂದ್ಲು . ನಗು ಬಂತು ತಡೆದುಕೊಂಡು " ಸರಿಯಾದ ವಯಸ್ಸಿನಲ್ಲಿ ಸ್ವಲ್ಪ ಸ್ವಲ್ಪ ಸರಿಯಾದ ತಿಳುವಳಿಕೆ ಕೊಡ್ತಾ ಬರೋದು ಪೋಷಕರ ಕರ್ತವ್ಯ , ಹುಟ್ಟಿಸಿ ಬಿಟ್ರೆ ಆಯ್ತಾ , ನನ್ನೂ ಎಲ್ಲೊ ಬೊಂಬೆ ತರೊ ಅಂಗಡೀಲಿ ಕೊಂಡು ತಂದೀದಾರೆ ಅಂತ ಮಕ್ಕಳು ಅಂದುಕೋತಾರೆ ಅಷ್ಟೆ , ಇತಿಮಿತಿಯಲ್ಲಿ ತಕ್ಕಮಟ್ಟಿನ ಜ್ಞಾನ , ಸಮಾಜ , ಕುಟುಂಬ ಇದರ ಬಗ್ಗೆ ಸ್ವಲ್ಪ ಸರಿಯಾದ ತಿಳುವಳಿಕೆ ಕೊಡ್ತಾ ಬರಬೇಕು , ಮಡಿವಂತಿಕೆ ಅಂತ ಕೂತರೆ ಕುತೂಹಲಿಗಳು ಏನೇನೊ ಕಂಡುಕೊಂಡು ಬಿಡ್ತಾರೆ . " , " ರೀ ನಮ್ಮನೆಗೆ ಬೊಂಬೆ ಯಾವಾಗ ಬರೋದು " ಅಂತ ನಾಚಿದಳು " ಆರ್ಡರ ಕೊಡೋಣ್ವಾ ! " ಅಂತ ಹತ್ತಿರ ಹೋದೆ , " ಆಸೇ ನೋಡು " ಅಂತ ದೂರ ತಳ್ಳಿದಳು . ಸಮಾಜ ನಾವೇ ಕಟ್ಟಿಕೊಂಡ ಒಂದು ವ್ಯವಸ್ಥೆಯಾಗಿರುವಾಗ ಇಂದು ನಾಲ್ಕು ಜನ ಬೇಕೆಂದರು ಅಂತ ಕಟ್ಟುಗಳನ್ನು ಸಡಿಲ ಮಾಡಿದರೆ ಸಮಾಜ ಅನ್ನೋದು ಮುರಿದು ಬೀಳಲ್ಲವೇ , ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳನ್ನೇ ಗಮನಿಸಿ , ಈಗಾಗಲೇ ಆಗಿರುವ ಎಷ್ಟೊ ಮಾರ್ಪಾಡುಗಳು , ಲಿವಿಂಗ ಟುಗೆದರ ( ಜೊತೆಯಾಗಿ ಮದುವೆಯಾಗದೇ ಇರೋದು ) , ವೈಫ್ ಸ್ವಾಪಿಂಗ ( ಹೆಂಡಂದಿರನ್ನು ಅದಲು ಬದಲಾಯಿಸಿಕೊಳ್ಳುವ ) ಇಲ್ಲ ಡಿವೊರ್ಸ ಆಗಿರಬಹುದು , ಅನೈತಿಕ ಸಂಬಂಧಗಳೇ ಆಗಿರಬಹುದು ಇವೆಲ್ಲ ಒಂದಿಲ್ಲ ಒಂದು ರೀತಿ ಕುಟುಂಬ ಅನ್ನೋ ಪರಿಕಲ್ಪನೆಗೆ ಹೊಡೆತ ಕೊಡುತ್ತ ಬಂದಿವೆ , ಈವತ್ತು ಇದನ್ನು ಮಾನ್ಯ ಮಾಡಿದವರು , ನಾಳೆ ಇನ್ನೊಂದಕ್ಕೆ ಅನುಮತಿಯ ಮುದ್ರೆ ಒತ್ತುತ್ತ ಹೋಗಿ , ಹೀಗೆ ಕಟ್ಟುಪಾಡುಗಳೆಲ್ಲ ಕಳೆದುಹೋದರೆ ನಮಗೂ ನಾಯಿ ನರಿಗಳಂತ ಪ್ರಾಣಿಗಳಿಗೂ ಏನು ವ್ಯತ್ಯಾಸವಿರಲಿಕ್ಕಿಲ್ಲ , ಅಂಥ ಕಾಲ ಒಂದು ದಿನ ಬರಬಹುದು , ಯಾಕೆಂದರೆ ಕಾಲ ಬದಲಾಗುತ್ತಿದೆ ನಾವೂ ಬದಲಾಗಬೇಕು ಅಂತ ಹೇಳುತ್ತ ನಾವೇ ಬದಲಾಗಿ ಕಾಲವನ್ನು ಬಯ್ದುಕೊಳ್ಳುತ್ತಾ ಸಾಗುತ್ತಿದ್ದೇವೆ , ಆದರೆ ಅಂಥ ಕಾಲದ ಬರುವನ್ನು ಸ್ವಲ್ಪ ಮುಂದೂಡಬಹುದೇನೊ ಅನ್ನೊ ಚಿಕ್ಕ ಆಶಯ ಮಾತ್ರ ನನ್ನದು . ಮರುದಿನ ಆಫೀಸಿಗೆ ಹೊರಡಲು ಸ್ನಾನ ಮಾಡಿ ಬಂದರೆ ದಿನಾಲೂ ಇರುತ್ತಿದ್ದ ಶರ್ಟು ಪ್ಯಾಂಟು ಜತೆಗೆ ಪ್ಯಾಂಟಿನ ಕಲರಿಗೆ ಹೊಂದಿಕೆಯಾಗುವ ಸಾಕ್ಸ ಕೂಡ ಇಟ್ಟಿದ್ಲು ; ) . . . ಬೇಕೆಂತಲೇ " ಬಿಳಿ ಕಲರ ಸಾಕ್ಸ ಎಲ್ಲೇ ಇದೆ " ಅಂದೆ " ಇಟ್ಟಿರುವುದನ್ನು ಹಾಕಿಕೊಂಡು ಹೋಗ್ತೀರಾ ಇಲ್ಲಾ , ನಾಳೆ ಪಿಂಕ ಶರ್ಟು , ಪಿಂಕಿ ರಿಂಗೂ ತಂದಿಡ್ತೀನಿ " ಅಂತ ಪಾಕಶಾಲೆಯಿಂದಲೇ ಗದರಿಸಿದಳು . . . " ಹುಡುಗಾ ಹುಡುಗಾ ಓ ನನ್ನ ಮುದ್ದಿನ ಹುಡುಗಾ . . . ಮುದ್ದ್ ಮಾಡೊಕು ಕಾನೂನು ಒಂದು ಬೇಕಾ " ಅಂತ ಹಾಡುತ್ತ ಶರ್ಟು ಹಾಕಿಕೊಳ್ಳುತ್ತಿದ್ರೆ " ಅದು ಹುಡುಗರ ಹಾಡಲ್ಲ , ಹಾಡಿದ್ದು ಸಾಕು ಹೊರಡ್ತೀರೊ ಇಲ್ಲೋ ಆಫೀಸಿಗೆ , ಇಲ್ಲಾ ನಾ ಬರಬೇಕಾ ಅಲ್ಲೀಗ " ಅಂತಂದಳು " ಒಕೇ ಒಕೇ ಬೇರೆ ಹಾಡು ಹಾಡ್ತೀನಿ . . . ಮಾಯವಾಗಿದೆ ಮದುವೆ ಹಾ . . " ಗೇ " . . ಸುಮ್ಮನೇ . . . " ಅಂತಾ ರಾಗ ಹಿಡಿದು ಹಾಡಲು ಪ್ರಯತ್ನಿಸುತ್ತಿದ್ದರೆ ಅವಳು ಪಾಕಾಶಾಲೆಯಿಂದ ಇತ್ತ ಬರುವ ಸದ್ದಾಯಿತು . . . ಅವಳು ಬರ್ತಾ ಇದಾಳೆ , ಕೈಲಿ ಏನಿದೆಯೋ ? ಸೌಟಿದ್ರೆ ಪರವಾಗಿಲ್ಲ , ಚಾಕೂ ಎಲ್ಲಾ ಇದ್ರೆ ತೊಂದ್ರೆ , ಅಯ್ಯೋ ಓಡಬೇಕು ದಾರಿ ಬಿಡ್ರಿ ಮತ್ತೆ ಸಿಕ್ತೀನಿ . . . ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ , ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ . ಈ ಲೇಖನ ಬರೆಯಲೊ ಬೇಡವೊ ಅಂತ ನಿನ್ನೆಯಿಂದ ಯೋಚಿಸಿ ಕೊನೆಗೂ ಬರೆದು ತೆಗೆದಿರುವೆ , ಎಲ್ಲೂ ಅಶ್ಲೀಲ ಅನ್ನಿಸದ ಹಾಗೆ ಜಾಗ್ರತೆವಹಿಸಿ ಬರೆದಿದ್ದೇನೆ , ಹಾಗೂ ಎಲ್ಲೊ ಎಲ್ಲೆ ಮೀರಿದ್ದರೆ ನನ್ನ ಕ್ಷಮಿಸಿ , ಪ್ರಸ್ತಾಪ ಮಾಡಿದ ಕೆಲ ವಿಷಯಗಳು ಎಲ್ಲರಿಗೂ ಸರಿಯೆನ್ನಿಸಬೇಕಿಲ್ಲ , ಇವೆಲ್ಲ ಕೇವಲ ನನ್ನ ಮನದಿಂದ ಹೊರಹಾಕಿದ ಯೋಚನೆಗಳು , ಇದು ಸರಿ ತಪ್ಪು ಅಂತ ಹೇಳೊ ಪ್ರಯತ್ನ ಅಂತಾನೂ ಅಂದುಕೊಳ್ಳಬೇಡಿ , ಎಲ್ಲರಿಗೂ ಅವರದೇ ಆದ ಅನಿಸಿಕೆಗಳಿರುತ್ತವೆ , ಹಾಗಾಗಿ ನಾ ಹೇಳಿದ್ದೆಲ್ಲ ಎಲ್ರಿಗೂ ಅನ್ವಯವಾಗುವುದಿಲ್ಲ . ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ , ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ ( ಇ - ಅಂಚೆ ) ಹಾಕಿ . . . ನನ್ನ ವಿಳಾಸ pm @ telprabhu . com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ , ಸಂತೊಷ ಇದೋದೇ ಹಂಚೋಕೆ ತಾನೆ . . . PDF format www . telprabhu . com / haage - summane . pdf ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http : / / www . google . com / transliterate / indic / Kannadaಬರೆದು ಪೇಸ್ಟ ಮಾಡಬಹುದು
ಕೃಷ್ಣನ ಪ್ರಿಯ ಸಖಿ ರಾಧೆಯ ಬಗ್ಗೆ ಪುರಾಣದಲ್ಲೊಂದು ಪ್ರಸ್ತಾಪ ಬರುತ್ತದೆ . ಆಕೆಯ ಪೂರ್ವಜನ್ಮದ ವಿವರವಿರುವ ಪ್ರಸ್ತಾಪ . ಅದರ ಪ್ರಕಾರ ತ್ರೇತಾಯುಗದಲ್ಲಿ ಆಕೆ ರಾಮನ ದಾಸಿ . ರಾಮ ವೀಳ್ಯ ಮೆದ್ದು ಉಗಿಯಬೇಕೆಂದಿದ್ದಾಗ ಅದನ್ನು ಗಮನಿಸಿ ಓಡಿಬಂದು ಕೈಯೊಡ್ಡುತ್ತಾಳೆ . ಮೆಚ್ಚಿದ ರಾಮ ವರ ಕೇಳು ಎನ್ನುತ್ತಾನೆ . ಆಕೆ ಆತನೊಂದಿಗೆ ದೈಹಿಕ ಸುಖ ಬಯಸುತ್ತಾಳೆ . ಅದಕ್ಕೆ ರಾಮ , " ಮುಂದಿನ ಜನ್ಮದಲ್ಲಿ ನೀನು ರಾಧೆಯಾಗಿ ಹುಟ್ಟಿದಾಗ ನಾನು ಕೃಷ್ಣನಾಗಿ ನಿನ್ನ ಆಸೆ ಪೂರೈಸುವೆ " ಎಂದು ಹೇಳುತ್ತಾನೆ .
ನಾವಿಬ್ಬರೂ ಪ್ರತಿ ಕಷ್ಟ ಸುಖದಲ್ಲಿ ಭಾಗಿಗಳಾಗಿದ್ದೇವೆ . ಒಂದರ್ಥದಲ್ಲಿ ನಮ್ಮಿಬ್ಬರದೂ ಪರ್ಫೆಕ್ಟ್ ಅಂಡರ್‌ಸ್ಟ್ಯಾಂಡಿಂಗ್ . ಇಲ್ಲಿ ನಾವು ಹೊಡೆದಾಡಿದ್ದೇವೆ , ಸಂತಸ ಪಟ್ಟಿದ್ದೇವೆ , ನಮ್ಮ ಈ ಬಾಂಧವ್ಯ ಗಟ್ಟಿಗೊಳ್ಳಲು ಕಾರಣವಾಗಿರುವುದೇ ಈ ತೆರನಾದ ಪುಟ್ಟ ಪುಟ್ಟ ವಿಷಯಗಳು .
ಈ ಅಪರಾತ್ರಿಯಲ್ಲಿ , ನೆನಪುಗಳು ಒತ್ತೊತ್ತಿ ಬರುತ್ತಿರುವ ಹೊತ್ತಲ್ಲಿ ಈ ಕವಿತೆ ಮತ್ತೆ ಮತ್ತೆ ಕಾಡುತ್ತಿದೆ . ಹಾಗೇ ಎದ್ದುಕುಂತವನೇ ಹೊತ್ತಲ್ಲದ ಹೊತ್ತು ಅನ್ನುವ ಹೊತ್ತಲ್ಲೇ ಇದನ್ನೆಲ್ಲ ಬ್ಲಾಗಿಸುತ್ತಿದ್ದೇನೆ . ಈ ಹೊತ್ತಿಗೆ ಈ ಕವಿತೆಯ ನೆನಪು .
ಅಸತ್ಯ ಅನ್ವೇಷಿ ಸರ್ , ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಕ್ಕೆ ಮತ್ತು ಪ್ರಶಸ್ಥಿ ಮನ್ನಣೆಗೆ ಅಭಿನಂದಿಸಿದ್ದಕ್ಕೆ ಥ್ಯಾಂಕ್ಸ್ . . .
ನಾನು ಗೌರೀಬಿದನೂರಿನವನು . ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದೇನೆ . ವೃತ್ತಿಯಲ್ಲಿ ಇಂಜಿನಿಯರ್ , ಖಾಸಗಿ ಸಂಸ್ಥೆಯಲ್ಲಿ ಕೆಲಸ . ಶಾಲಾ - ಕಾಲೇಜಿನ ದಿನಗಳಿಂದಲೂ ಬರೆಯುತ್ತಿದ್ದೇನೆ . ನನ್ನ ಎಲ್ಲಾ ಕವನಗಳನ್ನು ಪ್ರೀತಿಯಿಂದ ನಿಮ್ಮ ಮುಂದಿಡುತ್ತಿದ್ದೇನೆ . ತಮ್ಮ ಅಭಿಪ್ರಾಯ , ವಿಮರ್ಷೆ , ಠೀಕೆ - ಟಿಪ್ಪಣಿಗಳಿಗೆ ಸ್ವಾಗತ .
ಬ್ಯಾರಿಗಳು ತುಳುನಾಡು ಎಂದು ಹಿಂದೆ ಕರೆಯಲಾಗುತ್ತಿದ್ದ ಕರ್ನಾಟಕದ ಈಗಿನ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ವಾಸವಾಗಿರುವ ಒಂದು ಮುಸ್ಲಿಮ್ ಜನಾಂಗ . ಅವರು ತಮ್ಮದೇ ಆದ ವಿಶಿಷ್ಟ ಸಂಪ್ರದಾಯ ಮತ್ತು ಸಾಂಸ್ಕೃತಿಕ ಅನನ್ಯತೆಯನ್ನು ಹೊಂದಿರುವ ಒಂದು ಸಾಮಾಜಿಕ ಪಂಗಡ . ಬ್ಯಾರಿಗಳಿಗೆ ಕೊಂಕಣ ತೀರದ ನವಾಯತರು ಮತ್ತು ಮಲಬಾರಿನ ಮಾಪಿಳ್ಳಗಳಿಗೆ ಸಮನಾದ ಒಂದು ಮಹತ್ವದ ಸಾಂಸ್ಕೃತಿಕ ಸಂಪ್ರದಾಯವಿದೆ . ೧೮೯೧ರ ಕೂಚ್ ಮನ್ ಸಮೀಕ್ಷಾ ವರದಿಯಲ್ಲಿ ನಮೂದಾಗಿರುವಂತೆ ಈ ಜನಾಂಗದ ಪ್ರಮುಖ ಗುರುತು ಎಂದರೆ ಪುರುಷರಿಗೆ ಬ್ಯಾರಿ ಮತ್ತು ಮಹಿಳೆಯರಿಗೆ ಬ್ಯಾರ್ದಿ ಎಂಬ ಒಕ್ಕಣೆಯಿರುವುದು . ಅಲ್ಲದೆ ಈ ಜನಾಗಕ್ಕೂ ತುಳುನಾಡಿನ ಸಂಪ್ರದಾಯಗಳಿಗೂ ನಡುವೆ ಒಂದು ಬಗೆಯ ಸಾಂಸ್ಕೃತಿಕ ಸಾಮರಸ್ಯವಿದೆ . ಬ್ಯಾರಿಗಳು ತುಳು ಸಂಸ್ಕೃತಿಗೆ ತಮ್ಮನ್ನು ತೆರೆದುಕೊಂಡಿರುವುದರ ಜತೆಗೆ ಮಲಬಾರಿನ ಮಾಪಿಳ್ಳಗಳ ವಿಭಿನ್ನ ಸಂಪದ್ರಾಯಗಳನ್ನೂ ಅಳವಡಿಸಿಕೊಂಡಿದ್ದಾರೆ . ಬ್ಯಾರಿಗಳು ಧಾರ್ಮಿಕ ನಂಬಿಕೆಯ ದೃಷ್ಟಿಯಿಂದ ಮುಸ್ಲಿಮರಾಗಿದ್ದು ಇಸ್ಮಾಮಿನ ಶಾಫಿ ಎಂಬ ಕರ್ಮಶಾಸ್ತ್ರ ವಿಭಾಗಕ್ಕೆ ಸೇರಿದವರಾಗಿದ್ದಾರೆ .
ಓಸಿ ಆಡುವವರು ಸಹಜವಾಗಿ ಕುಡಿತದ ಚಟಕ್ಕೂ ದಾಸರಾಗುವುದು ಸಾಮಾನ್ಯವಾಗಿತ್ತು . ಕಾಗೆ ಒಂದಗುಳು ಕಂಡರೆ ಕರೆಯುವುದು ತನ್ನ ಬಳಗವನ್ನು ಎನ್ನುವಂತೆ , ಒಂದು ರೂಪಾಯಿ ಓಸಿ ಹೊಡೆದರೂ , ಓಸಿಗರು ತನ್ನೆಲ್ಲಾ ಬಳಗವನ್ನು ಕರೆದು ಕುಡಿಸುವುದು ಧರ್ಮವಾಗಿತ್ತು . ಇದರಲ್ಲಿ ಕೆಲವು ಜುಗ್ಗ ಶೆಟ್ಟಿಗಳೂ ಇರುತ್ತಿದ್ದರು . ಓಸಿ ಹೊಡೆದರೂ ಯಾರಿಗೂ ತಿಳಿಸದೆ ಗುಟ್ಟಾಗಿ ಸಂಭ್ರಮಿಸುತ್ತಿದ್ದರು . ಅಥವಾ ಹತ್ತು ರೂಗಳ ಓಸಿ ಹೊಡೆದವರು ಎರಡು ರೂಪಾಯಿ ಓಸಿ ಒಡದಾತಿ . . ಎಂದು ಅದರ ಮಿತಿಯಲ್ಲಿ ಸಹ ಓಸಿಗರಿಗೆ ಕುಡಿಸಿ ಕೈತೊಳೆದುಕೊಳ್ಳುತ್ತಿದ್ದರು .
ಕನ್ನಡದ ಅದೆಷ್ಟೋ ತಾಣಗಳಲ್ಲಿ ನೊಂದಾಯಿಸಿಕೊಂಡಿದ್ದರೂ ವಿಸ್ಮಯ ಕೊಟ್ಟಂತಹ ಹಿತಾನುಭವವನ್ನು ಬೇರಾವುದೇ ತಾಣ ಕೊಡಲಿಲ್ಲ .
ಸರ್ , ಇದು ನಮಗೆ ಚಿರಪರಿಚಿತ . ಹೇಳಿ ಕೇಳಿ ನಮ್ಮೂರು ಗುಳೇದಗುಡ್ಡ , ನಮ್ಮೂರಿನ ಗುಡ್ಡದಾಗ ಇವು ಕಂಡು ಬರ್ತಾವು . ಗುಲಗಂಜಿಯನ್ನ ಮನೆಯಲ್ಲಿ ಮಾತಿದ ಕೆಲವು ಕಸೂತಿ ಕೆಲಸಗಳಲ್ಲಿ ಬಳಸುತ್ತಾರೆ . ಮತ್ತೆ ಮಣ್ಣೆತ್ತಿನ ಅಮಾವಾಸೆಯಲ್ಲಿ ಮಣ್ಣಿಂದ ಎತ್ತುಗಳನ್ನು ಮಾಡುತ್ತಾರಲ್ಲ ಅವಾಗ ಈ ಕಣ್ಣುರೂಪ ಕೊಡಲು ಈ ಗುಲಗಂಜಿಯನ್ನು ಬಳಸುತ್ತಾರೆ . ನಾವು ಸಣ್ಣವರಿದ್ದಾಗ ಗುಡ್ಡ ಗುಡ್ಡ ತಿರಗ್ಯಾಡಿ ಇವನ್ನ ತಗೊಂಡು ಬರತಿದ್ವಿ . ನಮ್ಮಕಡೆ ಕೆಂಪು ಬಣ್ಣದ ಗುಲಗಂಜಿ ಸಿಗುತ್ತವೆ . ಬಿಳಿ ಗುಲಗಂಜಿ ನೋಡಿದ್ದು ನೆನಪಿಲ್ಲ .
ಮಂಡ್ಯ , ಮೇ 29 : ಅಪೆ ಆಟೊ ಹಾಗೂ ಗೂಡ್ಸ್ ಟೆಂಪೋ ಮುಖಾಮುಖಿ ಢಿಕ್ಕಿಯಾಗಿ ಇಬ್ಬರು ಮಹಿಳೆಯರು ಸೇರಿದಂತೆ 8 ಮಂದಿ ಸಾವನ್ನಪ್ಪಿ , 6 ಮಂದಿ ತೀವ್ರವಾಗಿ ಗಾಯಗೊಂಡಿರುವ ದುರಂತ ಘಟನೆ ಪಾಂಡವಪುರ ತಾಲೂಕು ಕನಗನಹಳ್ಳಿ ಗೇಟ್ ಬಳಿ ಶನಿವಾರ ಮಧ್ಯಾಹ್ನ ನಡೆದಿದೆ . ಘಟನೆಯಲ್ಲಿ ಶ್ರೀರಂಗಪಟ್ಟಣ ತಾಲೂಕು ನೆಲಮನೆ ಗ್ರಾಮದ ದೇವರಾಜು ( 35 ) , ಶ್ರೀನಿವಾಸ ( 33 ) , ರಾಮಯ್ಯ ( 60 ) , ಸಿಂಗ್ರಯ್ಯ ( 65 ) , ಚಂದ್ರಾಚಾರಿ ( 50 ) ಸ್ಥಳದಲ್ಲೇ ಮೃತಪಟ್ಟರೆ , ಜಗದೀಶ್ ( 35 ) ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಹಾಗೂ ನಿಂಗಮ್ಮ ( 50 ) ಹಾಗೂ ಸಣ್ಣಮ್ಮ ( 21 ) ಮೈಸೂರು ಕೆ . ಆರ್ . ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು . ಪ್ರತಿಬಾಬು ( 35 ) , ವಿಶೇಷ ( 47 ) , ಕೃಷ್ಣ ( 45 ) , ಸ್ವಾಮಿ ( 55 ) , ಚಿಕ್ಕಕಾಳೇಗೌಡ ( 65 ) , ಆಟೋ ಚಾಲಕ ಪುಟ್ಟರಾಜು ( 35 ) ತೀವ್ರವಾಗಿ ಗಾಯಗೊಂಡಿದ್ದು , ಮೈಸೂರಿನ ಕೆ . ಆರ್ . ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು , ಅವರ ಸ್ಥಿತಿಯೂ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ . ಅಪಘಾತದಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರೆಲ್ಲರೂ ಆಪೆ ಆಟೊದಲ್ಲಿದವರೆಂದು ತಿಳಿದುಬಂದಿದೆ . ನೆಲಮನೆಯವರೇ ಆದ ಮಹದೇವ ಹಾಗೂ ಸಣ್ಣಮ್ಮ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು . ಕೆಲವು ತಿಂಗಳ ನಂತರ ಇಬ್ಬರಲ್ಲೂ ವಿರಸಬಂದು ಬೇರ್ಪಟ್ಟಿದ್ದರು . ನಂತರ ಸಣ್ಣಮ್ಮ ಮತ್ತು ಆಕೆಯ ತಾಯಿ ನಿಂಗಮ್ಮ ಗ್ರಾಮ ತೊರೆದು ಕೆ . ಆರ್ . ಪೇಟೆ ತಾಲೂಕು ಬಲ್ಲೇನಹಳ್ಳಿಯ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು . ಈ ದಂಪತಿಯನ್ನು ಒಂದು ಮಾಡುವ ಸಲುವಾಗಿ ನೆಲಮನೆ ಗ್ರಾಮದ 12 ಮುಖಂಡರು ಗೂಡ್ಸ್ ಆಟೊ ಬಾಡಿಗೆ ಪಡೆದು ನ್ಯಾಯ ಪಂಚಾಯತ್ ನಡೆಸಿ ಮಹದೇವನ ಹೆಂಡತಿ ಸಣ್ಣಮ್ಮನನ್ನು ಕರೆತರಲು ಶನಿವಾರ ಬೆಳಗ್ಗೆ ಬಲ್ಲೇನಹಳ್ಳಿಗೆ ತೆರಳಿದ್ದರು . ಮಧ್ಯಾಹ್ನ ಸುಮಾರು 2 : 30ರ ಸಮಯದಲ್ಲಿ ಮೈಸೂರು - ಕೆ . ಆರ್ . ಪೇಟೆ ಮುಖ್ಯರಸ್ತೆಯ ಕನಗನಹಳ್ಳಿ ಗೇಟ್ ಬಳಿ ಎದುರಿನಿಂದ ಬರುತ್ತಿದ್ದ ಗೂಡ್ಸ್ ಟೆಂಪೋ ಆಟೊಗೆ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿತು . ಅಪಘಾತದ ರಭಸಕ್ಕೆ ಆಟೊ ನಜ್ಜುಗುಜ್ಜಾಗಿದ್ದು , ಗೂಡ್ಸ್ ಟೆಂಪೋ ಜಖಂಗೊಂಡಿದೆ . ಅಪಘಾತ ಸ್ಥಳದಲ್ಲಿ ಸತ್ತವರು ಹಾಗೂ ಗಾಯಗೊಂಡವರನ್ನು ಸುತ್ತಮುತ್ತಲ ಗ್ರಾಮಸ್ಥರು ವಾಹನಗಳನ್ನು ಪಡೆದು ತಕ್ಷಣ ಪಾಂಡವಪುರ ಸರಕಾರಿ ಆಸ್ಪತ್ರೆಗೆ ಸಾಗಿಸಿದರು . ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ . ಆರ್ . ಆಸ್ಪತ್ರೆಗೆ ಸಾಗಿಸಲಾಯಿತು . ಆಸ್ಪತ್ರೆ ಎದುರು ಸತ್ತವರ ಬಂಧುಗಳ ರೋದನ ಮುಗಿಲುಮಟ್ಟಿತ್ತು . ಸ್ಥಳಕ್ಕೆ ಆಗಮಿಸಿದ ಶ್ರೀರಂಗಪಟ್ಟಣ ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಸಂತ್ರಸ್ತ ಕುಟುಂದವರನ್ನು ಸಂತೈಸಿದ್ದಲ್ಲದೆ , ವೈಯಕ್ತಿಕವಾಗಿ ಸತ್ತವರ ಕುಟುಂಬಕ್ಕೆ 5 ಸಾವಿರ ರೂ . ಪರಿಹಾರ ನೀಡಿದರು . ಚಿನಕುರಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ .
" ಭಾರತದಲ್ಲಿ ಹೋರಾಟ ಮುಷ್ಕರ ಇವು ನೆಪ ಮಾತ್ರ . ಭ್ರಷ್ಟಾಚಾರಕ್ಕೆ ಮೂಲ ಕಾರಣ Rapid Growth of papulation . " ಎಂಬ ನಿಮ್ಮ ಮಾತುಗಳನ್ನು ನಾನು ಅಕ್ಷರಸಹ ಒಪ್ಪುತ್ತೇನೆ . ಆದರೆ ಲಂಚ ಕೊಡುವವರು ಬೇರೇ ರೂಪದಲ್ಲೂ ಕೊಡಬಹುದು ನಿಜ ಆದರೆ ಅದನ್ನು ಕೊಡುವವರೂ ಸಹ ನೋಟು ಬಳಸದೇ ಅವುಗಳನ್ನು ಕೊಂಡುಕೊಳ್ಳುವಂತೆ ಮಾಡಿದರೆ ಮಾಡಿದರೆ ಕೊಡುವವನೂ ಸಿಕ್ಕಿ ಹಾಕುಳ್ಳುತ್ತಾನಲ್ಲವೇ ? ಆ ಭಯದಿಂದಲಾದರೂ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ ಎನ್ನುವುದು ನನ್ನ ಅನಿಸಿಕೆ
ಬೆಂಗಳೂರು , ಜು 10 : ಸರ್ಕಾರಿ ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ , ಶಾಲೆಗಳನ್ನು ಯಾವುದೇ ಕಾರಣಕ್ಕೂ ಕೇಸರಿಕರಣಗೊಳಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದೆ . ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸಲು ಸರ್ಕಾರ ಹೊರಡಿಸಿರುವ ಸುತ್ತೋಲೆಗೆ ಆಕ್ರೋಶ ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಾ . ಜಿ . ಪರಮೇಶ್ವರ್ , ಬಿಜೆಪಿ ಸರ್ಕಾರ ಅನ್ಯ ಧರ್ಮೀಯರಿಗೆ ಅವಮಾನವಾಗುವ ರೀತಿಯಲ್ಲಿ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ , ಕೂಡಲೇ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು ಎಂದರು .
ಕರವೇ ಬ್ಲಾಗ್ ಕ . ರ . ವೇ ಚಿತ್ರಗಳು , ನಿಮ್ಮ ಅನಿಸಿಕೆ ಕ . ರ . ವೇ ಅವರಿಗೆ ತಿಳಿಸಿ ಅವರನ್ನು ಹುರುದುಂಬಿಸಿ - ಇಲ್ಲಿ ಕ್ಲಿಕ್ ಮಾಡಿ
ಆದರೂ ' ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ ' ಎಂಬ ಗಾದೆಯಂತೆ ಒಲಿಂಪಿಕ್ ಉದ್ಘಾಟನಾ ಸಮಾರಂಭದಲ್ಲಿಯೂ ಅದರ ಮುಖವಾಡ ಕಳಚಿಬಿದ್ದಿದೆ . ಒಲಿಂಪಿಕ್ ಉದ್ಘಾಟನೆ ದಿನದಂದು ಪುಟ್ಟ ಬಾಲಕಿಯೊಬ್ಬಳು ಹಾಡೊಂದನ್ನು ಹಾಡಿದ್ದಳು , ಅದನ್ನು ಟಿವಿಗಳಲ್ಲಿ ಕೋಟ್ಯಂತರ ಜನರು ವೀಕ್ಷಿಸಿದ್ದರು .
ಪ್ರತಿಯೊಂದು ಬಡಾವಣೆಯಲ್ಲಿರುವಂತೆ ಎಲ್ಲರಿಗೂ ಮುಂಚೆ ಅಂಗಡಿ ಇಟ್ಟಿದ್ದು ಆ ಮಲೆಯಾಳಿ ಕಾಕಾ , ಕಾಕಾ ಎಂದು ಕರೆದರೆ ಕೋಪದಿಂದ ಎದುರಿಗಿದ್ದ ಮರದ ಮೇಲಿದ್ದ ಕಾಗೆ ತೋರಿಸ್ತಿದ್ರೂ ಆ ಅಂಗಡಿಯವರ ಜೊತೆ ಎಲ್ಲರದ್ದೂ ಒಂದು ರೀತಿಯ ಹಾರ್ದಿಕ ಸಂಬಂಧ ! " ಉದರಿ ಇಲ್ಲ " ಅನ್ನೋ ಬೋರ್ಡ್ ಕೂಡ ಅಲ್ಲಿರಲಿಲ್ಲ ! ! ಈಗಿನ ಮಾಲ್ / ಸೂಪರ್ ಬಜಾರ್ ಗಳಲ್ಲಿ ಇಲ್ಲದ ಆತ್ಮೀಯತೆ ! ಬೇಳೆ , ನೆಲಗಡಲೆ , ರವೆ ಏನೇ ಕೊಂಡರೂ , ಚಕಚಕನೆ ಪೇಪರ್ - ನಲ್ಲಿ ಟೋಪಿಯಂತೆ ಸುತ್ತಿ , ಕೊಂಡದ್ದನ್ನ ಅದರಲ್ಲಿ ತುಂಬಿ , ಅಲ್ಲೇ ಮೇಲೆ ನೇತಾಡುವ ದಾರ ಎಳೆದು ಅದನ್ನ ಭದ್ರಪಡಿಸಿಕೊಡುತ್ತಿದ್ದ ರೀತಿ , ಈಗಿನ ಜಿಪ್ ಲಾಕ್ ಕವರುಗಳನ್ನ ಹಿಮ್ಮೆಟ್ಟಿಸುವಂತಿರುತ್ತಿತ್ತು ಅಂದ್ರೆ ಸುಳ್ಳಲ್ಲ .
ರಾಜ್ಯದಲ್ಲಿ ಪ್ರಾರ್ಥನಾ ಮಂದಿರ , ಚರ್ಚ್‌ಗಳ ಮೇಲೆ ದಾಳಿ ನಡೆದ ಬಳಿಕ ಗುಲ್ಬರ್ಗಾದ ಸ್ವಾಮಿಯೊಬ್ಬರು ಈ ದೇಶದಲ್ಲಿರುವ ಮುಸ್ಲಿಂ , ಕ್ರೈಸ್ತರನ್ನು ನಾಶಮಾಡಲು ಹಿಂದೂಗಳ ಕೈ ಬಲಪಡಿಸಬೇಕಾಗಿದೆ ಎಂಬುದಾಗಿ ಬಹಿರಂಗವಾಗಿ ಫರ್ಮಾನು ಹೊರಡಿಸಿದ್ದರು . ಅದ್ಯಾವ ಘನಂದಾರಿಯಾಗಿ ( ಅವರು ಉಪ್ಪು - ಖಾರ ತಿಂದವರು , ಈ ರೀತಿ ಮತಾಂತರ ಮಾಡುತ್ತಿದ್ದರೇ ಮತ್ತೇನು ಶೋಭಾನೆ ಹಾಡಬೇಕಾ ಅಂತ ನೀವು ಕೇಳಬಹುದು ) ಮೈಮೇಲೆ ಖಾವಿ ಬಟ್ಟೆ ಧರಿಸಿದರೋ , ಧರ್ಮಗುರುಗಳಲ್ಲಿ ದ್ವೇಷ , ಸಿಟ್ಟು , ಕೆಡಕು ಇರಬಾರದು ಎಂದು ಹೇಳುತ್ತಾರೆ . ಅದರೆ ಈ ಸ್ವಾಮಿಗಳು ಆಕ್ರೋಶದಿಂದ ನುಡಿಯುವ ಮಾತು ಕೇಳಿದರೆ ಆಶ್ಚರ್ಯವಾಗುತ್ತದೆ . ಯಾವುದೇ ಧರ್ಮದ ಮುಲ್ಲಾಗಳಿರಲಿ , ಪಾದ್ರಿ , ಪುರೋಹಿತ , ಸ್ವಾಮಿ ಎಲ್ಲಾ ಧರ್ಮಗಳು ಸಾರುವುದು ಒಂದೇ , ದೇವನೊಬ್ಬ ನಾಮ ಹಲವು ಎಂದೆಲ್ಲಾ ಅಣಿಮುತ್ತು ಉದುರಿಸಿ , ಈ ರೀತಿ ಬೆಂಕಿ ಹಚ್ಚಲು ಕೈ ಬಲಪಡಿಸಿ ಎಂದರೆ , ಜೀವ ತೆಗೆಯುವವರನ್ನು ಯಾರಾದರೂ ದೈವತ್ವಕ್ಕೆ , ಸ್ವಾಮಿ ಎಂದೆಲ್ಲಾ ಕರೆಯಿಸಿಕೊಳ್ಳಲು ಅರ್ಹರಾಗುತ್ತಾರಾ ಎಂಬುದು ಪ್ರಶ್ನೆ . ಅಷ್ಡೇ ಅಲ್ಲ ಹಿಂದುಳಿದ ಜಾತಿಯ ಜನರನ್ನು ಆಮಿಷ ಒಡ್ಡಿ ಮತಾಂತರ ಮಾಡುತ್ತಿರುವುದು ಸತ್ಯ . ನ್ಯೂಲೈಫ್‌ನಂತಹ ಸಂಘಟನೆಗಳ ಕೆಲವು ಉದ್ದೇಶಗಳಲ್ಲಿ ಅದು ಒಂದಾಗಿದೆ . ಅದಕ್ಕೆ ಆಡಳಿತರೂಢ ಪಕ್ಷಗಳು ಕಠಿಣವಾದ ಕಾನೂನನ್ನು ಜಾರಿಗೆ ತರಬೇಕು . ಅವೆಲ್ಲಕ್ಕಿಂತ ಮುಖ್ಯವಾದ ಪ್ರಶ್ನೆಯೆಂದರೆ . ಹಿಂದೂ ನಾವೆಲ್ಲ ಒಂದು , ನಮಗಿರುವುದು ಒಂದೇ ಹಿಂದು ದೇಶ ಎಂದೆಲ್ಲ ಹಿಂದು ಧರ್ಮವನ್ನು ಗುತ್ತಿಗೆ ಹಿಡಿದವರಂತೆ ಮಾತನಾಡುವವರು ಕೂಡ ಮತಾಂಧರಂತೆ ವರ್ತಿಸುತ್ತಿದ್ದಾರೆ . ಅದಕ್ಕೊಂದು ಸಣ್ಣ ಉದಾಹರಣೆ ನೀಡುತ್ತೇನೆ , ಕಳೆದ ಎರಡು ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಪ್ರಸಿದ್ಧ ಮಂದಾರ್ತಿ ದೇವಾಲಯದಲ್ಲಿ ಒಂದು ಪ್ರಕರಣ ನಡೆಯಿತು . ಅಲ್ಲಿನ ಯಕ್ಷಗಾನ ಮೇಳದಲ್ಲಿ ಬಿಲ್ಲವ ಜಾತಿಯವರಿಗೆ ಅವಕಾಶ ನೀಡಲು ಸಾಧ್ಯವಿಲ್ಲ , ಹಾಗೇನಾದರು ಅವರು ಗೆಜ್ಜೆ ಕಟ್ಟಿ ಕುಣಿದರೆ ದೇವಿ ಮುನಿದುಕೊಳ್ಳುತ್ತಾಳೆ , ಅಷ್ಟೇ ಅಲ್ಲ ಅವರು ಸಾಯುತ್ತಾರೆ ಎಂದೆಲ್ಲಾ ಬೊಬ್ಬೆ ಹೊಡೆದರು . ಸಾಕಷ್ಟು ಹೋರಾಟ , ಪ್ರತಿಭಟನೆ ನಡೆಯಿತು . ಅಲ್ಲಿನ ಇತಿಹಾಸವನ್ನು ಕೂಡ ವ್ಯವಸ್ಥಿತವಾಗಿ ತಿರುಚುವ ಕೆಲಸವನ್ನೂ ಮಾಡಲಾಗಿತ್ತು . ಆದರೆ ಮಂದಾರ್ತಿ ದೇವಸ್ಥಾನಕ್ಕೆ ಅತಿ ಹೆಚ್ಚಿನ ಭಕ್ತರು , ಹರಕೆ ನೀಡುವುದು ಬಿಲ್ಲವ ( ಬಂಟ , ಮೊಗವೀರ ಸೇರಿದಂತೆ ) ಜನಾಂಗದವರೇ , ಹೆಚ್ಚಿನ ಯಕ್ಷಗಾನ ಆಡಿಸುವುದೂ ಕೂಡ ಬಿಲ್ಲವರೇ , ಆದರೆ ಗೆಜ್ಜೆ ಕಟ್ಟಿ ಕುಣಿಯಲು ಮಾತ್ರ ಸಾಧ್ಯವಿಲ್ಲವಂತೆ ! ದೇವರಿಗೆ ಬಿಲ್ಲವರ ಹರಕೆ , ಹಣ ಆಗುತ್ತದೆ ಎಂದಾದ ಮೇಲೆ , ಅದೇ ದೇವರಿಗೆ ಯಕ್ಷಗಾನದಲ್ಲಿ ಬಿಲ್ಲವ ಜಾತಿಯವನೊಬ್ಬ ಗೆಜ್ಜೆಕಟ್ಟಿ ಕುಣಿದರೆ ಆಗುವ ನಷ್ಟವಾದರೂ ಏನಿತ್ತು . ಅದಕ್ಕಾಗಿಯೇ ಹಗಲಿರುಳು ವಿರೋಧ ವ್ಯಕ್ತಪಡಿಸಿದವರೂ ಕೂಡ ಹಿಂದೂಗಳೇ . . . ಕೊನೆಗೂ ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಇಬ್ಬರು ಬಿಲ್ಲವರು ಗೆಜ್ಜೆಕಟ್ಟಿ ಮಂದಾರ್ತಿ ದೇವಾಲಯದ ಎದುರು ಯಕ್ಷಗಾನದಲ್ಲಿ ಹೆಜ್ಜೆ ಹಾಕಿದರು . ಯಾವ ದೇವಿಯೂ ಮುನಿಸಿಕೊಳ್ಳಲಿಲ್ಲ , ಅವರು ಸಾಯಲೂ ಇಲ್ಲ . ಈ ಕುತ್ಸಿತ ಮನೋಭಾವದ ಮನುವಾದಿಗಳು ಮಾತ್ರ ಕೆಳಗೆ ಬಿದ್ದರೂ ಮೂಗು ಮೇಲೆ ಎಂಬಂತೆ , ಗೆಜ್ಜೆ ಕಟ್ಟಿ ಕುಣಿದ ಬಿಲ್ಲವರ ಮನೆಯಲ್ಲಿ ಸಾವು ಸಂಭವಿಸಿದೆ ಎಂಬಂತಹ ಕಪೋಲಕಲ್ಪಿತ ಸುದ್ದಿಗಳನ್ನು ಹಬ್ಬಿಸತೊಡಗಿದ್ದರು . ಅದೇ ರೀತಿ ಮತಾಂತರ , ದಾಳಿ ನಡೆದಾಗ ಬೊಬ್ಬೆ ಹೊಡೆಯುವ ಉಡುಪಿ ಪೇಜಾವರಶ್ರೀಗಳು ಕೂಡ ಮೊದಲು ಉಡುಪಿ ಮಠದಲ್ಲಿ ಬ್ರಾಹ್ಮಣೇತರರನ್ನು ನೋಡುವ ದೃಷ್ಟಿಕೋನ ಹೇಗಿದೆ , ಇಲ್ಲಿ ಒಳಗೆ ಪ್ರವೇಶವಿಲ್ಲ , ಬಾವಿಯನ್ನು ಮುಟ್ಟಬೇಡಿ ಎಂಬಂತಹ ನಾಮಫಲಕಗಳು ಇಂದಿಗೂ ದೇವಾಲಯಗಳಲ್ಲಿ ರಾರಾಜಿಸುತ್ತಿದೆ . ನಾಗಮಂಡಲಗಳಲ್ಲಿ ನಡೆಯುವ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲೂ ಪ್ರತ್ಯೇಕ ಊಟದ ವ್ಯವಸ್ಥೆ , ಇಂದಿಗೂ ಉಳಿದು ಬಂದಿರುವ ಮನು ಸಿದ್ದಾಂತದ ಮಡಿ - ಮೈಲಿಗೆ ದಲಿತರು ಸೇರಿದಂತೆ ಇನ್ನುಳಿದ ಕೆಳಜಾತಿಗಳನ್ನು ನಮ್ಮ ಹಿಂದು ಧರ್ಮ ನೋಡುವ ದೃಷ್ಟಿಕೋನದ ಬಗ್ಗೆ ನೀವೇ ಯಾಕೆ ಧ್ವನಿ ಎತ್ತುತ್ತಿಲ್ಲ . ಕೇವಲ ತ್ರಿಶೂಲ , ಲಾಠಿ ಹಿಡಿದು ಜೈ ಭಾರತ್ ಮಾತಾ ಕೀ ಅಂತ ರಕ್ತದೋಕುಳಿ ಹರಿಸಲು ಮಾತ್ರ ಹಿಂದೂ - ನಾವೆಲ್ಲ ಒಂದು ಅಂತ ಬೊಬ್ಬೆ ಹೊಡೆಯುವುದರಲ್ಲಿ ಅದ್ಯಾವ ಪುರುಷಾರ್ಥ ಅಡಗಿದೆ . ಬಲವಂತದ ಮತಾಂತರ , ದಾಳಿ , ಭಯೋತ್ಪಾದನೆಯನ್ನು ನಾವೆಲ್ಲ ಖಂಡಿಸೋಣ , ಹಾಗೇ ಹಿಂದು ಧರ್ಮದೊಳಗಿನ ಅಸಮಾನತೆ , ಜಾತಿ , ಅಸ್ಪಶ್ರ್ಯತೆ ಬಗ್ಗೆಯೂ ತಿಳಿದು ಮಾತನಾಡಿದರೆ ವಾಸ್ತವದ ಅರಿವಾಗುತ್ತದೆ . ಹಿಂದುಳಿದ ವರ್ಗದ ಜನಗಳು ಯಾಕೆ ಅಮಿಷಕ್ಕೆ ಒಳಗಾಗಿ ಮತಾಂತರವಾಗುತ್ತಿದ್ದಾರೆ ಎಂಬ ಕುರಿತು ಮೊದಲು ಅರಿತುಕೊಳ್ಳಬೇಕು . . .
ವಸತಿ ಶಾಲೆಯಲ್ಲಿ , ಅಧ್ಯಾಪಕ . ಅರ್ಥಶಾಸ್ತ್ರದಲ್ಲಿ ಅವನು ಪದವೀಧರನಾಗಿದ್ದ . ಸೌಮ್ಯ ಮುಖವಿತ್ತು . ಗೌರವ ಹುಟ್ಟಿಸುವ ಏನೋ ಅವನಲ್ಲಿ ಸಹಜವಾಗಿತ್ತು . ಒಂಟಿಯಾಗಿದ್ದ , ವಯಸ್ಸು ಐವತ್ತನ್ನು ತಲುಪಿತ್ತು . ಜೀನ್ಸು ಅವನಿಗೆ ಇಷ್ಟ . ಹತ್ತಿಯ ಸರಳ ಅಂಗಿ ಇಲ್ಲವೇ ಟೀ ಶರ್ಟು ಧರಿಸುತ್ತಿದ್ದ . ಓದುವಾಗ ಸಪೂರ ಫ್ರೇಮುಳ್ಳ ಚಶ್ಮಾ ಏರಿಸುತ್ತಿದ್ದ . ಸಣ್ಣ ಮುಗುಳ್ನಗು ಅವನ ಮುಖಕ್ಕೆ ಅಸಾಧರಣ ಚೆಲುವು ನೀಡಿತ್ತು . ಓದುವುದು ಅವನಿಗೆ ಪ್ರೀತಿ . ಸಂಭಂಧಿಕರು ಇರಲೇ ಇಲ್ಲವೋ , ಗೊತ್ತಿಲ್ಲ . ಅದರ ಬಗ್ಗೆ ಮಾತೇ ಬರುವುದಿಲ್ಲ . ರಜದಲ್ಲೂ ಮನೆಗೆ ಹೋಗುವ ಪರಿಪಾಟವೇ ಇಲ್ಲ . ಅಧ್ಯಯಯನಕ್ಕಾಗಿ ಓಡಾಟವಿರುತ್ತಿತ್ತು . ವಸತಿ ಶಾಲೆಯ ಮಕ್ಕಳ ಮೆಸ್ಸಿನಲ್ಲಿ ಮಕ್ಕಳ ಜೊತೆಯೇ ಕುಳಿತು ಉಣ್ಣುತ್ತಿದ್ದ . ಮಕ್ಕಳು ಅವನನ್ನು ತುಂಬಾ ಪ್ರೀತಿಸುತ್ತಿದ್ದರು . ಬಟ್ಟೆಯನ್ನು ಮಕ್ಕಳ ಜೊತೆಯಲ್ಲಿ ಒಗೆದು ಕೊಳ್ಳುತ್ತಿದ್ದ . ಅಲ್ಲಿರುವ ಹೆಚ್ಚಿನ ಅಧ್ಯಾಪಕರು ಇದೇ ತರಹ ಇರುತ್ತಿದ್ದರು . ಕೆಲವು ಅಧ್ಯಾಪಕರಿಗೆ ಕುಟುಂಬವಿರುತ್ತಿತ್ತು . ಇಡೀ ಕುಟುಂಬದ ಊಟ ಉಪಚಾರ ಶಾಲೆಯದೇ ಹೊಣೆಯಾಗಿತ್ತು . ದುಬಾರಿ ಅನಿಸುವ ದರ ವಸತಿ ಶಾಲೆ ವಿಧಿಸುತ್ತಿತ್ತು . ಮಕ್ಕಳ ಪೋಷಕರು ಬೇಸರವೇ ಇಲ್ಲದೆ ಭರಿಸುತ್ತಿದ್ದರು . ಲಾಭ ಗಳಿಸುವ ಉದ್ದೇಶವಿರಲಿಲ್ಲ . ಖಾಸಗಿಯಾಗಿ ಯಾರನ್ನೂ ಕಾಯದೇ , ಮಕ್ಕಳ ಖುಷಿಯಾದ ಕಲಿಯುವಿಕೆಗೆ ತಂದೆ ತಾಯಿಯ ತರಹದ್ದೇ ಪ್ರೀತಿಗೆ , ಶಾಲೆ ಇರುತ್ತಿತ್ತು . ಶಾಲೆಯ ಮಕ್ಕಳಿಗೆ ರಜವಿತ್ತು . ಮಕ್ಕಳು ಮನೆಗೆ ತೆರಳಿದ್ದರು . ವಸತಿ ಶಾಲೆಯ ಮಕ್ಕಳಿಗೆ ರಜವಿದ್ದಾಗ , ಶಾಲೆಯ ಟ್ರಷ್ಟಿಗಳ ವಾರ್ಷಿಕ ಮಿಲನವಿರುತ್ತಿತ್ತು . ಪರಿಸರ ಅವರ ಜೀವನದ ಭಾಗವಾಗಿತ್ತು . ಪರಿಸರದೊಡನೇ ಮಕ್ಕಳು ಬೆಳೆಯಬೇಕು , ಶಾಲೆಯ ಆಟ ಪಾಠಗಳೂ ಪರಿಸರದ ಮಿತಬಳಕೆಯ ತತ್ವದ ಮೇಲೆ ಇರುತ್ತಿತ್ತು . ಶಾಲೆಯನ್ನು ಆರಂಭಿಸಲು ಕಾರಣನಾಗಿದ್ದ ಚಿಂತಕ ಪರಿಸರದ ವೀಕ್ಷಕನಾಗಿದ್ದ . ಪ್ರತಿಕ್ಷಣವನ್ನೂ ಗಮನಿಸುತ್ತಿದ್ದ . ತನ್ನನ್ನು ಗಮನಿಸುತ್ತಿದ್ದ . ಅವನ ಮೇಲೆ ಒಲವಿರುವವರನ್ನು ಟ್ರಷ್ಟಿಗಳು ಮಿಲನ ಕೂಟಕ್ಕೆ ಆಹ್ವಾನಿಸುತ್ತಿದ್ದರು . ಚಿಂತಕ ಭೂಮಿಯ ಮೇಲೆ ಇಲ್ಲ . ಅವನು ಆಲೋಚಿಸಿದ ವಿಷಯಗಳು ಇವೆ . ಅಧ್ಯಾಪಕನಿಗೆ ಈ ಆಲೋಚನೆಗಳು ಇಷ್ಟವಾಗಿತ್ತು . ಸಂಬಳ ಕಡಿಮೆಯಿತ್ತು . ಟ್ರಷ್ಟ್ ಲಾಭವೂ ಇಲ್ಲ ನಷ್ಟವೂ ಇಲ್ಲ ತತ್ವದ ಮೇಲೆ ಕೆಲಸ ಮಾಡುತ್ತಿತ್ತು . ಹಾಗಾಗಿ ಖರ್ಚಿಗೆ ಸಾಲುವಷ್ಟು ಸಂಬಳ ಬದುಕಲಿಕ್ಕೆ ಬೇಕಾದಷ್ಟು ಶುಚಿ ರುಚಿಯ ಮೂಲಸೌಕರ್ಯ ಒದಗಿಸುತ್ತಿತ್ತು . ಪರಿಸರದಲ್ಲಿರಲಿಕ್ಕೆ ಅವಕಾಶವಿರುವ , ಸ್ವಾತಂತ್ರ್ಯ , ಶೋಧನೆಗೆ ಅವಕಾಶ , ಅಧ್ಯಯನಕ್ಕೆ ಪ್ರೋತ್ಸಾಹ , ಮಕ್ಕಳ ಜೊತೆ ಬೆಳವಣಿಗೆ ಶಾಲೆಯ ಆಕರ್ಷಣೆಯಾಗಿತ್ತು . ಅಧ್ಯಾಪಕನಿಗೆ ತುಂಬಾ ಸೂಕ್ಷದ ವಿಷಯಗಳು ಹೊಳೆಯುತ್ತಿದ್ದವು . ಪರೀಕ್ಷಿಸುತ್ತಿದ್ದ . ಅವನಾಗಿ ಯಾವುದನ್ನು ಚರ್ಚಿಸುತ್ತಿರಲಿಲ್ಲ . ಹೀಗೆ ಸಭೆ ಸೇರುವಾಗ ಯಾವುದೋ ಒಂದು ಸಮಸ್ಯೆಯೊಂದರ ಮೇಲೆ ಮಾತನಾಡಲು ಟ್ರಷ್ಟಿಗಳು ಆಹ್ವಾನಿಸುತ್ತಿದ್ದರು . ಅವನು ಈ ಬಾರಿ ಪ್ರಖ್ಯಾತ ಉದ್ದಿಮೆಯೊಂದರ ಪರಿಸರ ಕಾಳಜಿಯ ಕಾರ್ಯಕ್ರಮಗಳನ್ನು ವಿವರಿಸಿ ಮಾತನಾಡಿದ . ಉದ್ದಿಮೆ ಪರಿಸರ ಕಾಳಜಿಯನ್ನು ಗಂಭೀರವಾಗಿ ಪರಿಗಣಿಸಿ , ಅದಕ್ಕಾಗಿ ಲಾಭದ ಹಣದಲ್ಲಿ ವಿಪರೀತ ಖರ್ಚು ಮಾಡುತ್ತಿರುವುದನ್ನು , ಶೇರುದಾರರು ತಮಗೆ ಬರಬೇಕಾದ ಲಾಭ ಪರಿಸರದ ರಕ್ಷಣೆಗೆ ಖಾಲಿಯಾಗುವುದನ್ನು ವೀರೊಧಿಸುವುದನ್ನೂ , ವಿವರಿಸಿದ . ಅಂಕಿ ಅಂಶಗಳನ್ನೂ ನೀಡಿದ . ಕೊನೆಗೊಂದು ಪ್ರಶ್ನೆ ಇಟ್ಟ . ಉದ್ದಿಮೆ ಪರಿಸರವನ್ನು ರಕ್ಷಿಸುವುದಕ್ಕೆ ಖರ್ಚು ಮಾಡುವುದೇಕೆ ? ಉಳಿಸಲು ಅದು ಮಾಡುತ್ತಿರುವ ಪ್ರಯತ್ನಕ್ಕಿಂತಲೂ , ಪರಿಸರ ನಾಶಕ್ಕೆ ಸಾವಿರ ಪಟ್ಟು ವೇಗದಲ್ಲಿ , ಅದೇ ಪರಿಸರಕ್ಕೆ , ಅದೇ ಉದ್ದಿಮೆ ಪ್ರತಿದಿನ ಸೇರಿಸುತ್ತಿರುವ ಮಲೀನತೆಯನ್ನು ನಿಲ್ಲಿಸಿದರೆ ಸಾಕಲ್ಲವೇ ? ನಾಶವಾದುದನ್ನು , ನಾಶವಾಗುತ್ತಿರುವುದನ್ನು ಅಂಕಿ ಅಂಶಗಳ ಸಮೇತ ವಿವರಿಸಿದ . ಅವನ ಬಳಿ ಉತ್ತರವಿರಲಿಲ್ಲ . ಪ್ರಶ್ನೆಯಿತ್ತು . ಮಾತನಾಡಿಯಾದ ನಂತರ ಊಟದ ಸಮಯವಾಗಿತ್ತು . ಅವನೂ ಊಟ ಮಾಡಿದ . ಉಳಿದವರು ಊಟ ಮಾಡಿದರು . ಚರ್ಚೆಗೆ ಅವನಿರಲಿಲ್ಲ . ಊಟದ ಎಲ್ಲಾ ಮೇಜುಗಳಲ್ಲಿ ಚರ್ಚೆಯಿತ್ತು . ಊಟ ಮುಗಿಸಿದ ಅವನು ಕೋಣೆಯ ಸಮೀಪ ಬಿದ್ದಿದ್ದ ತರಗೆಲೆಗಳನ್ನು ಹೆಕ್ಕಿದ . ಮರವೊಂದರ ಬುಡಕ್ಕೆ ಅವನು ಕಟ್ಟಿದ್ದ ಮಣ್ಣಿನ ಕಟ್ಟೆಯೊಳಗೆ , ಹೆಕ್ಕಿದ್ದ ತರಗೆಲೆಯನ್ನು ಸೇರಿಸಿದ .
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳುತ್ತಾನೆ : ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ | ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ | | ಶ್ರೇಷ್ಠನು ಏನೇನು ಆಚರಣೆಗಳನ್ನು ಮಾಡುತ್ತಾನೋ ಅದನ್ನೇ ಇತರ ಜನರು ಮಾಡುತ್ತಾರೆ . ಅವನು ಮಾಡಿದ ಪ್ರಮಾಣಗಳನ್ನು ಲೋಕವು ಅನುಸರಿಸುತ್ತದೆ . ಇವತ್ತಿನ ದಿನ ಐಟಿ ಕನ್ನಡಿಗರು ಸಮಾಜದಲ್ಲಿ ಶ್ರೇಷ್ಠರು ಎಂಬ ಹೆಸರನ್ನು ಪಡೆದಿದ್ದಾರೆ . ಅವರು ಏನನ್ನು " ಆಚರಿಸುತ್ತಾರೋ " ಅದನ್ನೇ ಎಲ್ಲರೂ ಮಾಡುತ್ತಾರೆ . ಅವರು ಕನ್ನಡವನ್ನು ಕಡೆಗಣಿಸಿದರೆ ಎಲ್ಲರೂ ಕಡೆಗಣಿಸುತ್ತಾರೆ . ಅವರು " ಕನ್ನಡದಲ್ಲಿ ಏನೂ ಆಗುವುದಿಲ್ಲ " ಎಂದರೆ ಎಲ್ಲರೂ ನಂಬುತ್ತಾರೆ . ಅವರು " ಕನ್ನಡದಲ್ಲಿ ತಂತ್ರಜ್ಞಾನ ಸಾಧ್ಯವಿಲ್ಲ " ಎಂದರೆ ಎಲ್ಲರೂ ನಂಬುತ್ತಾರೆ . ಅವರು ಕಾವೇರಿ ಪ್ರತಿಭಟನೆಗೆ ಕೂಟರೆ ಎಲ್ಲರಿಗೂ ಕೂಡಬೇಕೆನಿಸುತ್ತದೆ . ಅವರು ಕರ್ನಾಟಕದ ಏಳ್ಗೆಯ ಬಗ್ಗೆ ಕಾಳಜಿ ತೋರಿಸಿದರೆ ಎಲ್ಲರೂ ಅವರನ್ನು ಹಿಂಬಾಲಿಸುತ್ತಾರೆ . ಹಾಗೆಯೇ ಐಟಿ ಕನ್ನಡಿಗರು ಏನು " ಪ್ರಮಾಣ " ಗಳನ್ನು ಮಾಡುತ್ತಾರೋ , ಅದೇ ಪ್ರಮಾಣಗಳನ್ನು ಕೋಟಿಗಟ್ಟಲೆ ಜನ ಇವತ್ತು ಅನುಸರಿಸುತ್ತಾರೆ . " ನಾನು ನಾಡನ್ನು ಕಟ್ಟುತ್ತೇನೆ " ಎಂದರೆ ಅದೇ ಪ್ರಮಾಣವನ್ನು ಜನ ಮಾಡುತ್ತಾರೆ . " ನಾನು ಕನ್ನಡ - ಕನ್ನಡಿಗ - ಕರ್ನಾಟಕಗಳ ಏಳ್ಗೆಗಾಗಿ ದುಡಿಯುತ್ತೇನೆ " ಎಂದರೆ ಎಲ್ಲರೂ ಅದೇ ಪ್ರಮಾಣವನ್ನು ಮಾಡುತ್ತಾರೆ . ಅದು ಬಿಟ್ಟು " ಕನ್ನಡ - ಕನ್ನಡಿಗ - ಕರ್ನಾಟಕಗಳು ಇವತ್ತಿನ ದಿನ ಗೌಣ " ಎಂದರೆ ಅದೇ ಪ್ರಮಾಣಾವನ್ನು ಜನ ಮಾಡುತ್ತಾರೆ . ಬರಹಗಾರರು ಹೇಳಿರುವಂತೆ ಐಟಿ ಕನ್ನಡಿಗರು ಇವತ್ತಿನ ದಿನ ಕನ್ನಡನಾಡಿನ ಭವಿಷ್ಯವನ್ನು ರೂಪಿಸುವುದರಲ್ಲಿ ಬಹಳ ಮುಖ್ಯವಾದ ಪಾತ್ರದಲ್ಲಿದ್ದಾರೆ . ಐಟಿ ಕನ್ನಡಿಗರು ಎಡವಿದರೆ ಕರ್ನಾಟಕ ಎಡವುತ್ತದೆ , ಕೋಟಿ ಗಟ್ಟಲೆ ಕನ್ನಡಿಗರು ಎಡವುತ್ತಾರೆ , ಕನ್ನಡ ನಿಧಾನವಾಗಿ ಸಾವೊಪ್ಪಿಕೊಳ್ಳುತ್ತದೆ . ಆದ್ದರಿಂದ ಐಟಿ ಕನ್ನಡಿಗರದು ಜವಾಬ್ದಾರಿಯಿಂದ ಹೆಜ್ಜೆಗಳನ್ನು ಇಡಬೇಕಾದ್ದು ಬಹಳ ಮುಖ್ಯ .
ಒಂದಾನೊಂದು ಊರಿನಲ್ಲಿ ಮಲ್ಲಣ್ಣ ಅಂತ ಒಬ್ಬ ಇದ್ದ . ಅವ್ನು ಸಿಕ್ಕಾಪಟ್ಟೆ ಮಾತಾಡ್ತಿದ್ದ , ಯಾವ ಪ್ರಶ್ನೆ ಕೇಳುದ್ರೂ ಉತ್ತರ ಅಂವುಂತವು ಸಿಕ್ತಿತ್ತು . ಅದುಕ್ಕೆ ಅವ್ನ ಜನಗೊಳೆಲ್ಲಾ ತುಂಬ ಪ್ರೀತಿಯಿಂದ ' ಮಾತಿಗಾರ ಮಲ್ಲಣ್ಣ ' ಅಂತ ಕರೀತಿದ್ರು . ಅವ್ನಪ್ಪ ಯಾವತ್ತೋ ಅಂವ ಚಿಕ್ಕೋನಿದ್ದಾಗ ತೀರೋಗ್ಬುಟ್ಟ . ಅವ್ನ ಅವ್ವನೇ ಅವ್ನ ಸಾಕಿ ದೊಡ್ಡೋನು ಮಾಡಿದ್ಲು . ಹಿಂಗಿದ್ದ ಮಲ್ಲಣ್ಣಂಗೆ ಮದ್ವೆ ವಯ್ಸು ಬಂತು . ಅವ್ನ ಅವ್ವ ಪಕ್ಕದಳ್ಳಿಲಿದ್ದ ನೀತಿಗಾತಿ ನೀಲವ್ವನ ಮಗಳು ನಿಂಗವ್ವನನ್ನ ತಂದು ಮದ್ವೆ ಮಾಡಿದ್ಲು . ಅವ್ಳೇನು ಕಮ್ಮಿ ಕುಳಾ ಅಲ್ಲ ಒಬ್ಳೇ ಮಗಳು , ದೊಡ್ಡ ಆಸ್ತಿ ಅಪ್ಪ ಇಲ್ಲ , ಬಾಳ ಒಳ್ಳೆಯೋಳು . ಅವ್ಳಪ್ಪ ನಾಕ್ ಜನಕ್ಕೆ ನೀತಿ ಹೇಳ್ತಿದ್ದ ಅದುಕ್ಕೆ ಇವ್ಳನ್ನ ಊರ್ನೋರೆಲ್ಲಾ " ನೀತಿಗಾತಿ ನಿಂಗವ್ವ " ಅಂತಿದ್ರು . ಹೆಸ್ರುಗೆ ತಕ್ಕಂಗೆ ಅವ್ಳೂ ನೀತಿ ಬೋದ್ನೆ ಮಾಡೋಳೆಯಾ .
ಈಗ ನೋಡಿದರೆ ಇಸುಬು ಯಾವ ಕುಟ್ಟಿಚಾತನ ಬಲವೂ ಇಲ್ಲದೆ ಆದರೂ ಏನೂ ಆಗದವನಂತೆ ಧಿಕ್ಕಾರದ ಮುಖ ಮಾಡಿಕೊಂಡು ಕುಳಿತಿದ್ದ . ಅವನ ಯಾವತ್ತಿನ ಧಿಕ್ಕಾರದ ಮುಖ . ಪರಮ ಪಾಷಾಂಡಿಯೂ ಹಠಮಾರಿಯೂ ಆದ ತನ್ನ ಅಣ್ಣ ಇಸುಬುವಿನಿಂದ ತನ್ನ ಬಾಳೆಲ್ಲವೂ ಹಾಳಾಯಿತೆಂದೂ ತನ್ನ ಮಗಳು ಕೈರು ಅಪ್ಪನ ಮುಖವನ್ನೇ ನೋಡದೆ ಈ ಹದಿನಾರು ವರ್ಷಗಳನ್ನು ಅನಾಥೆಯಂತೆ ಕಳೆಯಬೇಕಾಯಿತೆಂದೂ ಇಸುಬುವಿನ ತಟ್ಟಿ ಹೋಟೆಲ್ಲಿನ ಅಲುಮಿನಿಯಂ ಪಾತ್ರೆಗಳನ್ನು ನದಿಯಲ್ಲಿ ತೊಳೆದು ತೊಳೆದು ತನ್ನ ಆಯುಷ್ಯವೆಲ್ಲವೂ ಮೂರಾಬಟ್ಟೆಯಾಯಿತೆಂದೂ ಹೇಗಾದರೂ ತನ್ನನ್ನೂ ತನ್ನ ಮಗಳನ್ನೂ ಈ ನರಕದಿಂದ ಬಿಡಿಸಬೇಕೆಂದೂ ತನ್ನ ಗಂಡ ಅಬ್ಬಾಸ್ ಬ್ಯಾರಿಯ ಎರಡನೆಯ ಹೆಂಡತಿಯ ಎಂಜಲು ತಿಂದಾದರೂ ಬದುಕುವೆನೆಂದೂ ನೆಬೀಸಾ ತನ್ನ ಇತ್ತೀಚಿನ ಪತ್ರದಲ್ಲಿ ತಿಳಿಸಿದ್ದಳು . ಅವಳಿಗೆ ನಾನು ಮಂಜೇಶ್ವರದ ಬಳಿಯಲ್ಲಿ ಅವಳ ಗಂಡ ಅಬ್ಬಾಸ್ ಮುಕ್ರಿಯವರನ್ನು ಸಂಸಾರ ಸಮೇತ ಕಂಡು ಹುಡುಕಿದ್ದು ವಿಪರೀತ ಖುಷಿಯನ್ನು ಉಂಟುಮಾಡಿತ್ತು .
ಹಾಂ ಎಡವಟ್ಟು ಎಲ್ಲಿ ಆಗಿದ್ದು ಅಂತ ಗೊತ್ತಾಯ್ತು ಬಿಡಿ ! ಚಿತ್ರದಲ್ಲಿ ಗಮನಿಸಿ Unknown Binding - 2004 ಅಂತ ಇದೆ ಯಾರೋ ಬೈಂಡಿಗ್ ಮಾಡೋರು Linux Complete ಬೈಂಡ್ ಹಾಕಿ ಬಿಟ್ಟಿದ್ದಾರೆ ; )
ರಿಯಾಯತಿ ದರದಲ್ಲಿ ನೀಡುವ ಈ ತರಬೇತಿಗೆ ಅಭ್ಯರ್ಥಿಗಳು 19 ರಿಂದ 20 ವರ್ಷದವರಾಗಿದ್ದು , ವಾರ್ಷಿಕ ಆದಾಯ 50 ಸಾವಿರ ರೂ . ಹೊಂದಿರಬೇಕು . ಆಸಕ್ತರು ಗ್ರಾಮ ಪರಿವರ್ತನಾ ಕೇಂದ್ರ ನಂ . 4805 ಮುಖ್ಯ ರಸ್ತೆ ಶಿವಾಜಿ ನಗರ ಬೆಳಗಾವಿ ಫೋ . ನಂ . 0831 - 2471254 , 9448632917 , 9483583917 ಹೆಚ್ಚಿನ ಮಾಹಿತಿಗೆ ಇಲ್ಲಿ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ .
( ಬೈರಾಮ ಖಾನನ ಹುರುಪನ್ನೂ , ಚಾಕಚಕ್ಯತೆಯನ್ನು ಮರವು ತೀಕ್ಷ್ಣ ವಾಗಿ ಗಮನಿಸುತ್ತಿತ್ತು ) " ಇಂಥವನೊಬ್ಬ ನಮ್ಮಲ್ಲೊಬ್ಬನಿದ್ದಿದ್ದರೆ ನಮ್ಮನ್ನು ಕೊಲ್ಲಲು ಬಂದ ಗುಂಪಿಗೆ ಒಳ್ಳೆ ಪ್ರತಿರೋಧವನ್ನೇ ಒಡುತ್ತಿದ್ದೆವು " ಎಂದು ಅವನನ್ನು ಪ್ರಶಂಸಿಸುತ್ತಾ ಮರವು ಹೇಳಿತು .
ತಮ್ಮ " ಬಿಡುಬೀಸಿನ ಬ್ಯಾಟಿಂಗ್ " ಆಸ್ಟ್ರೇಲಿಯದ ನಾಯಕ ರಿಕಿ ಪಾಂಟಿಂಗ್ ಜತೆ ಸಂಪರ್ಕಕೊರತೆಯ ಫಲ ಎಂದು ನಂತರ ಅವರು ಹೇಳಿದ್ದಾರೆ : ಇನ್ನಿಂಗ್ಸ್ ಡಿಕ್ಲೇರ್ ಮಾಡುವ ದೃಷ್ಟಿಯಿಂದ ತ್ವರಿತ ರನ್ ಹೊಡೆಯುವುದು ಬೇಡ ವೆಂದು ಗಿಲ್‌ಕ್ರಿಸ್ಟ್ ಅವರಿಗೆ ವಾಸ್ತವವಾಗಿ ತಿಳಿಸಲಾಗಿತ್ತು . [ ೧೩೬ ]
ಈ ಕಾಮಗಾರಿಯನ್ನು ಪ್ರಾರಂಭಿಸಿ ತಿಂಗಳುಗಳು ಮುಗಿದಿವೆ . ಟೆಂಡರ್ ಅವಧಿಯೂ ಮುಗಿದಿದೆ . ಮನೆಗಳ ಮುಂದೆ ಕಡಗು ಹೊಡೆದು , ಅಲ್ಲಲ್ಲಿ ಗೋಡೆ ನಿರ್ಮಿಸಿ , ಗುತ್ತಿಗೆದಾರ ಕಣ್ಮರೆಯಾಗಿದ್ದಾನೆ . ಬೇರೆ ಯಾರಿಗೋ ಸಬ್‌ಲೀಸ್ ನೀಡಿದ್ದಾನೆ , ಅಧಿಕಾರಿಗಳನ್ನು ಕೇಳಿದರೆ ಗುತ್ತಿಗೆದಾರರನ್ನು ಬ್ಲಾಕ್‌ಲಿಸ್ಟ್ ಗೆ ಹಾಕಲು ನೋಟೀಸ್ ನೀಡಲಾಗಿದೆ ಎನ್ನುತ್ತಾರೆ . ಆದರೆ ಈ ಭಾಗದ ಮಹಿಳೆಯರು ಪ್ರತಿದಿನ ನನಗೆ ಸುಭಾಷಿತ ಹಾಕುತ್ತಾರೆ .
ಗದಗ - ಹುಬ್ಬಳ್ಳಿ ರಸ್ತೆ ಮತ್ತಷ್ಟು ಕೆಟ್ಟು ಕೆರ ಹಿಡಿದಿದೆ . ರಾಮುಲು ಏನು ಕಿಸಿದರೂ ಗದಗೆಂಬ ಗದಗನ್ನು ಇನ್ನೂ ಸುಧಾರಿಸಲು ಅಗ್ತಿಲ್ಲಾ . ಮ್ಯಾಂಗನೀಸ ಲಾರಿಗಳ ಅಬ್ಬರ ಇನ್ನೂ ಕಡಿಮೆ ಆಗಿಲ್ಲಾ . ಯಾವ ಸಾರ್ವಜನಿಕ ಸ್ಥಳಕ್ಕೆ ಹೋದರೂ ಗುಟಖಾದ ವಾಸನೆ ತಪ್ಪುವದಿಲ್ಲಾ . ಸಾರ್ವಜನಿಕ ಶೌಚಾಲಯಗಳಿಗೆ ಹೋದರಂತೂ " ಇಶ್ಶಿ " ಎಂದು ಮೂಗು ಮುಚ್ಚಿಕೊಳ್ಳದೆ ಹೊರಬರಲಾಗುವದಿಲ್ಲಾ . ಮಣ್ಣಿವಣ್ಣನ್ ಎಷ್ಟು ಲಗಾ ಒಗದ್ರು ಹಳೇ ಹುಬ್ಬಳ್ಳಿಯ ರಸ್ತೆಗಳನ್ನು ಮತ್ತು ಅವುಗಳ ಪಕ್ಕವೇ ಒಂದು , ಎರಡು ಮಾಡಿ ಧನ್ಯರಾಗುವ ಪ್ರಜಾಪ್ರಭುಗಳನ್ನು ಸುಧಾರಿಸಲಾಗುವದಿಲ್ಲ . ಹೊರಟ್ಟಿ ಶಿಕ್ಷಣ ಮಂತ್ರಿಯಾಗಿ ಕಂಡಲ್ಲಿ ರಿಬ್ಬನ್ನು ಕತ್ತರಿಸಿದ್ದೆ ಬಂತು ನಯಾ ಪೈಸೆಯಷ್ಟೂ ಶಿಕ್ಷಣದ ಗುಣಮಟ್ಟ ಅಥವಾ ಶಾಲೆಗಳ ಗುಣಮಟ್ಟ ಸುಧಾರಿಸಲಾಗಲಿಲ್ಲ್ಲ . ಅಲ್ಲಿಗೆ ರೈಲು ಬರುತ್ತೆ , ಇಲ್ಲಿಗೆ ವಿಮಾನ ನಿಲ್ದಾಣ ಬರುತ್ತೆ ಅಂತ ಹಳಿ ಇಲ್ಲದೆ ರೈಲು ಬಿಟ್ಟಿದ್ದೆ ಬಂತು ದೇವರಾಣೆಗೂ ಬರುವ ನೀರಿಕ್ಷೆಯಂತೂ ಇಲ್ಲಾ . ಪಂಚನದಿಗಳ ಜಿಲ್ಲೆ ಅಂತ ಹಾಡಿ ಹೊಗಳಿ ಅಟ್ಟಕ್ಕೆರಿಸಿದ ಬಿಜಾಪುರ ಜಿಲ್ಲೆಯಲ್ಲಿನ ಹಳ್ಳಿಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಇಂದಿಗೂ ತಪ್ಪಿಲ್ಲಾ . ಬೇಸಿಗೆಯಲ್ಲಿ ಇಡಿ ಗದಗಕ್ಕೆ " ನೀರು " ಎನ್ನುವುದು ಮರೀಚಿಕೆ ಆಗಿ ಬಿಡುತ್ತೆ . ( ಕಳೆದ ಕೆಲ ವರ್ಷಗಳಿಂದ ರೈಲಿನಲ್ಲಿ ಕುಡಿಯುವ ನೀರು ಪೂರೈಸಿದ್ದಾರೆ ನಮ್ಮ ಜನಪ್ರತಿನಿಧಿಗಳು ) . ಹುಬ್ಬಳ್ಳಿ - ಧಾರವಾಡದ ಹೈಕೋರ್ಟಿಗೆ ಇನ್ನೂ ಜಾಗ ಹುಡುಕುತ್ತಿದ್ದಾರೆ ಮತ್ತು ಹುಡುಕುತ್ತಲೇ ಇರುತ್ತಾರೆ . ಇನ್ನು ದೂರದ ಗುಲ್ಬರ್ಗ , ಬೀದರ , ಬಳ್ಳಾರಿಗಳ ಬಗ್ಗೆ ಹೇಳಿದರೆ ನಮ್ಮ ಕೆರ ತಗೊಂಡು ನಾವೇ ಹೊಡ್ಕೊಬೇಕು ಹಾಗಿದೆ ಅಲ್ಲಿಯ ಸ್ಥಿತಿ . . ಎಷ್ಟು ತಲೆ ಕೆರೆದುಕೋಂಡರೂ ಅರ್ಥವಾಗದಿರುವುದೇ ಇದು ; " ಕಾವೇರಿ " ಅಂದ ಕೂಡಲೇ ಚಪ್ಪಲಿ ಹಾಕ್ಕೊಂಡು , ಮೈಕು ಹಿಡ್ಕೊಂಡು " ಪಾದಯಾತ್ರೆ " ಅಂತ ತಮ್ಮ " ಜನಪರ ಕಾಳಜಿ ( ? ) " ಪ್ರದರ್ಶಿಸಿಲು ಸನ್ನಧ್ಧರಾಗುವ ನಮ್ಮ ರಾಜಕಾರಣಿಗಳಿಗೆ ಅದೇ ಕಳಕಳಿಯನ್ನು ಕೃಷ್ಣೆಯ ಅಥವಾ ಸಮಸ್ತ ಉ . ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆಗೆ ಇತಿ ಹಾಡಬಲ್ಲ ಮಹದಾಯಿ ನದಿ ಯೋಜನೆಯ ವಿಷಯದಲ್ಲಿ ಯಾಕೆ ತೋರಿಸಲಾಗುವಿದಿಲ್ಲಾ ? ನಮ್ಮ ವಿಷಯದಲ್ಲಿ ಯಾಕೆ ಉದಾಸೀನ ಭಾವ ? ಕೇವಲ ಒಂದು ಹಂಗಾಮಿನ ಕಬ್ಬು , ಅಥವಾ ಭತ್ತ ಬರದೇ ಹೋದ್ರೆ ಸತ್ತೇ ಹೋಗುತ್ತೀವಿ ಅನ್ನೊ ತರ ಮಾತಾಡುವ ಹಳೆ ಮೈಸುರು ರೈತರ ಮದ್ಯೆ ಬರೀ ಬರದಲ್ಲೇ ಬದುಕು ದೂಡುತ್ತಿರುವ ನನ್ನ ಜನಗಳ ನೋವು ಯಾಕೇ ಅರ್ಥವಾಗುವುದಿಲ್ಲಾ ? . ಪ್ರತಿ ವರ್ಷವೂ ಅದೇ ಬೆಲೆ ಕುಸಿತ , ಅದೇ ಭಿಕ್ಷೆ ಎಂಬಂತೆ ಘೋಷಿಸುವ ಬೆಂಬಲ ಬೆಲೆಯ ನಾಲಾಯಕ್ ನಾಟಕಗಳು . ಪ್ರತಿ ವರ್ಷವೂ ಅದೆ ಕಥೆ . " ಹಾಡಿದ್ದು ಹಾಡೊ ಕಿಸುಬಾಯಿ ದಾಸ " ಎಂಬಂತೆ ಅವೇ ಹಳೆ ಭರವಸೆಗಳು , ಕಣ್ಣೊರಿಸುವ ಹಲ್ಕಟ್ ರಾಜಕೀಯ . ಎಲ್ಲಾ ಸಮಸ್ಯೆಗಳಿಗೂ ಒಂದು ಸಮರ್ಥ ಕೃಷಿನೀತಿ ರೂಪಿಸೋಕೆ ಇನ್ನೂ ಎಷ್ಟು ಹೆಣ ಬೀಳಬೇಕು ? . ಬೇಕಾದ್ರೆ ಗಮನಿಸಿ ನೋಡಿ ಬೆಂಗಳೂರಿನ ಬಹುತೇಕ ಕಾಮಗಾರಿಗಳಲ್ಲಿ ದುಡಿಯುತ್ತಿರುವ ಕೂಲಿ ಕಾರ್ಮಿಕರು ಬರೀ ಉ . ಕರ್ನಾಟಕದವರು . ಅಲ್ಲಿಯೇ ಅವರಿಗೆ ಅನ್ನ ಸಿಕ್ಕಿದ್ದರೆ ಇಲ್ಯಾಕೆ ಬಂದು ಕೈಯೊಡ್ದಿ ನಿಲ್ಲುತ್ತಿದ್ದರು ? ಸರಕಾರದ ಯೋಜನೆಗಳು ತಲುಪುದಾದರೂ ಯಾರನ್ನು ? . ಇತ್ತೀಚಿಗಂತೂ ಮೈನಿಂಗ ಲಾರಿಗಳು ಅಳುದುಳಿದ ಉ . ಕರ್ನಾಟಕದ ರಸ್ತೆಗಳನ್ನೂ ಹಾಳು ಮಾಡಿ ಹತ್ತಿ ಬಿತ್ತುತ್ತಿವೆ , ಕೇಳುವುವರು ಯಾರೂ ಇಲ್ಲದದಂತಾಗಿದೆ . ಯಾಕಂದ್ರೆ ಬಹುತೇಕ ಮೈನಿಂಗ ಕಂಪನಿಗಳು ನಮ್ಮ ನನಪ್ರತಿನಿಧಿಗಳವೇ ಆಗಿವೆ , ಬೇಲಿಯೇ ಎದ್ದು ಹೊಲ ಮೆಯ್ದರೆ ಮಾಡುವುದಾದ್ರು ಏನು ? . ಇದನ್ನು ಬಿಟ್ಟ ಹಾಕಿ ಇನ್ನು ಹಲವಾರು ಅವಧಿಗೆ ಅರಿಸಿ ಬರುತ್ತಿರುವ ಮತ್ತು ರಾಜ್ಯದ ಅತ್ಯುನ್ನತ ಪದವಿ ಅಲಂಕರಿಸಿದ ಧರ್ಮಸಿಂಗ , ಖರ್ಗೆ ಮೊದಲಾದವರು ಕಿಸಿದಿದ್ದಾದರೂ ಎನು ? ಪಧವೀದರ ಕ್ಷೇತ್ರದಿಂದ ಆರಿಸಿ ಬರುತ್ತಾ ಇರುವ ಎಚ್ಕೆ , ನಮ್ಮ ಪಧವೀದರರಿಗೆ ಮಾಡಿದ ಅನುಕುಲತೆಯಾದ್ರು ಏನು ? . ನೀರಾವರಿ ಖಾತೆ ಇಟ್ಕೊಂಡೂ ಸಹ ಇನ್ನೂ ಉ . ಕರ್ನಾಟಕದ ಹಲವು ಯೋಜನೆಗಳು ಅಮೆಗತಿಯಲ್ಲಿ ನಡೆಯುತ್ತಿದ್ದರೂ ಇವರು ಹರಿದಿದ್ದಾದರೂ ಏನು ? ಮುಕಳಿ ತಿರುವಿದಲ್ಲಿ ಒಂದು ಪಾರ್ಕು , ಹೆಜ್ಜೆಗೊಂದು ಬೀದಿದೀಪ , ಹಂಗೆ ತಿಂಗಳುಗಳಿಗೊಮ್ಮೆ ಡಾಂಬರು ಕಾಣುವ ರಸ್ತೆಗಳು ಇವೆಲ್ಲ ಬೆಂಗಳೂರಿಗೆ ಮಾತ್ರವಾ ? . ಇಡೀ ಹುಬ್ಬಳ್ಳಿಯಲ್ಲಿ ಇರುವ ಎಕೈಕ ಪಾರ್ಕನ್ನೂ ಸಹ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಂಡಿಲ್ಲ , ಅಲ್ಲಿ ಹಂದಿಗಳು ಮಾತ್ರ ಅರಾಮವಾಗಿ ಅಧಿಕಾರಿಗಳ ಹೆಸರಿನಲ್ಲಿ ಸಂಸಾರ ಮಾಡಿಕೊಂಡಿವೆ . ಜನಪ್ರತಿನಿಧಿಗಳು ಹಾಳಾಗ್ಲಿ ಬೆಂಗಳೂರಿನ ಕೊಳೆಗೇರಿ ಮಕ್ಕಳಿಗೆ Lux ಸೋಪು ಉಜ್ಜಿ , ಸ್ನಾನ ಮಾಡಿಸಿ , ಕೊಳೆಗೇರಿ ಸುಧಾರಣೆ ಮಾಡಿದೆ ಅಂತ ಪೇಪರುಗಳಿಗೆ ಹಲ್ಲು ಕಿಸಿದ ಫೋಟೊ ಕಳಿಸಿ ಧನ್ಯರಾಗುವ NGOಗಳಿಗೆ ಉ . ಕರ್ನಾಟಕದ ಅವ್ಯವಸ್ಠೆ , ಬಡತನ ಕಾಣುವುದೇ ಇಲ್ಲಾ . ಇನ್ನು ನಾರಾಯನ ಮೂರ್ತಿ , ಪ್ರೇಮಜೀ ಯವರ ಸಾಮಾಜಿಕ ಕಳಕಳಿ ಬೆಂಗಳೂರು ಬಿಟ್ಟು ಆಚೆ ಬರುವುದೇ ಬೇಡ ಅನ್ನುತ್ತೆ . ಇನ್ನು ಅಲ್ಲೆ ಹುಟ್ಟಿ ಬೆಳೆದ ನಮ್ಮಂತಹವರು ಮಾಡುತ್ತಿರುವುದಂತೂ ಯಾವುದಕ್ಕೂ ಬೇಡ ; ಚೆನ್ನಮ್ಮ ರೈಲಿಗೆ ರಿಜರ್ವೆಶನ್ನು ಮಾಡಿಸಿ ಹಬ್ಬಕ್ಕೆ ಮಾತ್ರ ಹೋಗಿ " ನಮ್ಮೂರು ಈ ಜನ್ಮದಲ್ಲಿ ಮಾತ್ರ ಉದ್ದಾರ ಅಗುವದಿಲ್ಲ " ಅಂತ ಜಗ್ಗೇಶ್ ಡೈಲಾಗು ಬಿಟ್ಟು ಬಂದ್ರೆ ನಮ್ಮ ಕರ್ತವ್ಯ ಮುಗಿಯಿತು . ಮೊನ್ನೆ ದೀಪಾವಳಿಗೆ ಹೋದಾಗ ಅನಿಸಿದ್ದಿಷ್ಟು . ಇಲ್ಯಾಕೆ ಹೀಗೆ ? ಅಂತಾ . ಸಮಸ್ಯೆ ವ್ಯವಸ್ಥೆಯದಾ ? ಅಥವಾ ನಮ್ಮ ಜನಗಳದಾ ? ಅಥವಾ ವ್ಯವಸ್ಠೆ ರೂಪಿಸುತ್ತಿರುವ ರಾಜಕಾರಣಿಗಳದಾ ? . ಎಲ್ಲೋ ಓದಿದ ನೆನಪು " If we are not part of the solution , then we are part of the problem " ಅಂತಾ , ಹಂಗಾದ್ರೆ ಬಹುಶಃ ನಾವೂ ಸಹ " part of problem " ಆಗಿರಬಹುದಲ್ವಾ ? ಕಣ್ಣ ಮುಂದಿರುವ ಸಾವಿರ ಪ್ರಶ್ನೆಗಳಲ್ಲಿ ಕೆಲವಾಕ್ಕಾದರೂ ಉತ್ತರ ಹುಡುಕುವ ಪ್ರಯತ್ನ ಮಾಡಬೇಕಲ್ವಾ ?
ನೇಹಿಗರೆ , ೨೦೦೯ರ ಆಗಸ್ಟ್ ೮ಕ್ಕೆ ' ಚಂಪಕಾವತಿ ' ಎರಡು ವರ್ಷ ತುಂಬಿ ಮೂರನೇ ವರ್ಷಕ್ಕೆ ಕಾಲಿಟ್ಟಿದೆ . ಮೊದಲ ವರ್ಷದ ಹುಮ್ಮಸ್ಸು ಎರಡನೇ ವರ್ಷದಲ್ಲಿ ಕುಂದಿದ್ದು ಹೌದು . ಆದರೆ ಪೂರ್ತಿ ಉಡುಗದ ಉತ್ಸಾಹ ಈ ತಾಣವನ್ನು ಜೀವಂತವಾಗಿರಿಸಿದೆ . ' ಎಂಥ ದಿನಗಳು ಕಳೆದವೋ , ಇನ್ನಂಥ ದಿನಗಳು ಬಾರವೋ ' ಎಂಬ ಕವಿ ಸುಬ್ರಾಯ ಚೊಕ್ಕಾಡಿಯವರ ಹಾಡನ್ನು ಬದುಕಿನ ಕೊನೆಯವರೆಗೂ ನಾವು ಹಾಡಿಕೊಳ್ಳೋಣ ! ಹೀಗೆ ಸುಮ್ಮನೆ ನನ್ನದೇ ಬ್ಲಾಗ್ ಮಂಡಲದ ತಲೆ ಸವರುತ್ತಾ ಕುಳಿತಿದ್ದೆ . ಆಗ ' ಚಂಪಕಾವತಿ ' ಯಲ್ಲಿ ಸಿಕ್ಕ ಟಾಪ್ ' ಹತ್ತು ಮತ್ತು ಒಂದು ' - ಹನ್ನೊಂದು ಇಷ್ಟದ ಪೋಸ್ಟ್‌ಗಳನ್ನು ಇಲ್ಲಿ ನೀಡುತ್ತಿದ್ದೇನೆ . ಈ ಪಟ್ಟಿ ಮಾಡುವಾಗ , ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬರಹಗಳನ್ನು ಗಣನೆಗೆ ತೆಗೆದುಕೊಂಡಿಲ್ಲ . ಹಾಗಾಗಿ ಇವು ಚಂಪಕಾವತಿಯ ಎಕ್ಸ್‌ಕ್ಲೂಸಿವ್ ಪೋಸ್ಟ್‌ಗಳು ! ಪ್ರಕಟಿಸಿದ ದಿನಾಂಕಕ್ಕೆ ಅನುಗುಣವಾಗಿ ಜೋಡಿಸಿದ್ದೇನೆ . ಸಂಗ್ರಹಿತ ಬರೆಹಗಳೂ ಇದರಲ್ಲಿ ಸ್ಥಾನ ಪಡೆದಿವೆ . ಈ ಮರುಶೋಧದಲ್ಲಿ ಹಳೆಯ ರುಚಿ - ಪರಿಮಳ ನಿಮ್ಮನ್ನು ತಾಕಲಿ . ಮೂರನೇ ವರ್ಷದ ಸಂಭ್ರಮಕ್ಕೆ , ಮೂರನೇ ಸ್ಥಾನ ಪಡೆದವರನ್ನೇ ವಿನ್ನರ್‍ಸ್ ಪೋಡಿಯಂನಲ್ಲಿ ಮೇಲೆ ಕೂರಿಸಿದ್ದೇನೆ ! ನಮಗೆ ಒಳ್ಳೆಯದಾಗಲಿ , ನಮ್ಮಿಂದ ಒಳ್ಳೆಯದಾಗಲಿ . - ಚಂ 1 . ರಾಮನೇ ತುಂಡರಿಸಿದ ಸೇತು ನಮಗೆ ಬೇಕೆ ? ಧನುಷ್ಕೋಟಿಯಲ್ಲಿ ಕಪಿಯೊಂದು ರಾಮಧ್ಯಾನ ನಿರತವಾಗಿದೆ . ತೀರ್ಥಯಾತ್ರೆ ಮಾಡುತ್ತ ಬಂದ ಅರ್ಜುನ ಅದನ್ನು ಮಾತಾಡಿಸುತ್ತಾನೆ . ಬಡ ಜುಣುಗಿನಂತಿದ್ದ ಆ ಮಂಗ , ತಾನು ಹನುಮಂತನೆಂದು ಹೇಳಿಕೊಳ್ಳುತ್ತದೆ ! ಆದರೆ ಅರ್ಜುನ ನಂಬಿಯಾನೆ ? ಅವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು , ಆ ಕಪಿಯು ಹನುಮಂತ ಹೌದೋ ಅಲ್ಲವೋ ಎಂಬುದಕ್ಕಿಂತ ಹೆಚ್ಚಾಗಿ , ಸಮುದ್ರಕ್ಕೆ ಸೇತುವೆ ಕಟ್ಟುವುದು ದೊಡ್ಡ ವಿಷಯವಲ್ಲವೆಂದೂ , ತಾನೀಗ ಬಾಣದಲ್ಲೇ ಸಮುದ್ರಕ್ಕೆ ಸೇತುವೆ ಕಟ್ಟಬಲ್ಲೆನೆಂದೂ ಅರ್ಜುನ ಹೇಳುತ್ತಾನೆ . ಇದು ಅವರಿಬ್ಬರ ಮಧ್ಯೆ ಪಂಥಕ್ಕೆ ಕಾರಣವಾಗುತ್ತದೆ . . . 2 . ' ಅದಾಗಿ ' ನೀವು ಕ್ಷೇಮವೇ ? ಒಂದೇ ಬೆರಳಿನಲ್ಲಿ ಆಸ್ಟ್ರೇಲಿಯಾವನ್ನೇ ಎತ್ತಿ ಹಿಡಿದ ' ಕಾಂಗರೋದ್ಧಾರಿ ' ನೀಲಮೇಘಶ್ಯಾಮ ಬಕ್ನರನಿಗೆ ಪ್ರಣಾಮಗಳು . ಅಣ್ಣ ಬಲರಾಮನಂತಿರುವ ' ಬೆಣ್ಣೆಮುದ್ದೆ ' ಬನ್ಸನನಿಗೆ ವಂದನೆಗಳು . ಹುಬ್ಬಳ್ಳಿಯವರ ಬಾಯಲ್ಲಿ ' ಪಾಂಟಿಂಗ ' , ದ . ಕ . ದವರ ಬಾಯಲ್ಲಿ ಪಟಿಂಗನಾಗಿರುವ ನಾಯಕನ ಕುಶಲ ವಿಚಾರಿಸಿರುವೆವು . ಅದಾಗಿ ನಾವು ಕ್ಷೇಮ . ' ಅದಾಗಿ ' ನೀವು ಕ್ಷೇಮವೇ ? ! . . . . 3 . ಪೇಟೆಯ ಪಾಡ್ದನ ಲಕಲಕಿಸುವ ಈ ನಗರಕ್ಕೊಂದು ಬೆದರಿದ ಬೆದರುಗೊಂಬೆ ಬೇಕು . ಇಲ್ಲಾ ದೃಷ್ಟಿಯಾದೀತು ಅಥವಾ ನಿಮ್ಮ ದೃಷ್ಟಿ ಹೋದೀತು . . . . 4 . ಬೆಳ್ಳೇಕೆರೆಯ ಹಳ್ಳಿ ಥೇಟರ್ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಒಂದು ಹಳ್ಳಿ ಬೆಳ್ಳೇಕೆರೆ . ಸಕಲೇಶಪುರ - ಮೂಡಿಗೆರೆ ರಸ್ತೆಯಲ್ಲಿರುವ ಬೆಳ್ಳೇಕೆರೆಯಲ್ಲಿ ನಾಲ್ಕೈದು ಅಂಗಡಿ - ಹೋಟೆಲ್‌ಗಳಿವೆ . ಅದಕ್ಕಿಂತ ಒಂದು ಕಿಮೀ ಹಿಂದೆ ಸಿಗುವುದು ರಕ್ಷಿದಿ . ಅಲ್ಲಿ ಎರಡು ಅಂಗಡಿ , ಸಣ್ಣದೊಂದು ಹೋಟೆಲು , ಪ್ರೈಮರಿ ಸ್ಕೂಲು . . . 5 . ಗೋ . . . . . ವಾ ! ಅಲ್ಲಿ ಇಲ್ಲದ್ದು ಇರಲಿಲ್ಲ . ಕೊಂಚ ಅತ್ತಿತ್ತ ಸರಿದರೂ ಆ ದಪ್ಪನೆಯ ಹಾಸಿಗೆ ಏರಿಳಿಯುತ್ತಿತ್ತು . ಸಮುದ್ರದಲ್ಲೇ ಇದ್ದೇನೋ ಅಂತ ಮಂಚದ ಕೆಳಗೆ ಕೈಯಾಡಿಸಿ ನೋಡಿಕೊಂಡೆ ! ಎದ್ದು ಟಿವಿ ಹಾಕಿದೆ , ಸರಿ ಹೋಗಲಿಲ್ಲ . ಬಾತ್‌ಟಬ್‌ನಲ್ಲಿ ಬಿದ್ದುಕೊಂಡು ಸ್ನಾನ ಮಾಡಿದ್ದು ಸರಿ ಅನಿಸಿರಲಿಲ್ಲ . ನಿಧಾನವಾಗಿ ದೊಡ್ಡ ಗಾಜಿನ ಬಾಗಿಲು ತೆರೆದು , ತೆಳ್ಳಗೆ ಬೆಳಕು ಹರಡಿದ್ದ ಬಾಲ್ಕನಿಗೆ ಹೋಗಿ ಸುಖಾಸೀನನಾದೆ . . . . 6 . ನೇರಳೆ ನಾಲಗೆಯ ರುಚಿ ಆ ಬೈಗುಳ ಬರುವವರೆಗೆ ಅವರಿಬ್ಬರ ಜಗಳ ಬಹಳ ಜೋರಾಗೇನೂ ಇರಲಿಲ್ಲ . ಆಗ ಬಂತು ಆ ಮಾತು - ` ನಿನ್ನ ಅಪ್ಪ ಮೂರ್ತಿ , ಕಲ್ಲಿನ ಮೂರ್ತಿ . ಜೀವ ಇಲ್ಲದವ ' . ಆ ಕ್ಷಣ ನರನರಗಳೆಲ್ಲ ಸೆಟೆಸೆಟೆದು , ಕಣ್ಣುಗಳು ಅಷ್ಟಗಲ ತೆರೆಯಲ್ಪಟ್ಟು , ಮುಖ ಕೆಂಪಾಗಿ , ಕೈಗಳು ಬಿಗಿದು , ರೋಷಾವೇಶ ಮೇರೆ ಮೀರಿ , ಮಾರಾಮಾರಿ . . . 7 . ಕಲಾಕ್ಷೇತ್ರದಲ್ಲಿ ಬೆಳಗೆರೆ ವಿಶ್ವರೂಪ ಸಂಜೆ ೫ರ ಸುಮಾರಿಗೆ ರವಿ ಬೆಳಗೆರೆ ಎಂಬ ಅಯಸ್ಕಾಂತ ಎಲ್ಲೇ ಕಾಣಿಸಿಕೊಳ್ಳಲಿ , ಜನ ಸೇರಿ ಅಪ್ಪಚ್ಚಿ ಮಾಡುತ್ತಿದ್ದರು . ಅವರು ಹತ್ತು ತಲೆ , ಇಪ್ಪತ್ತು ಕೈಗಳ ರಾವಣನಾದರೂ , ಮಾತಾಡುವುದಕ್ಕೆ , ಕೈ ಕುಲುಕುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ ! ಬಾಗಿಲುಗಳಲ್ಲಿ ನಿಂತಿದ್ದ ದ್ವಾರಪಾಲಕರ ಜತೆ ಅಭಿಮಾನಿಗಳು ರೇಗಿದರು , ಬಾಗಿಲೊಂದರ ಗಾಜು ಒಡೆದರು , ಕ್ಷಣದಿಂದ ಕ್ಷಣಕ್ಕೆ ಜನಸಾಗರದ ಮಟ್ಟ ಏರುತ್ತಿತ್ತು . . . . 8 . ದಿಸ್ ಈಸ್ ನಾಟ್ ಎ ಹಿಡನ್ ಕ್ಯಾಮೆರಾ ! ಯಾವುದು ಪಟಾಕಿ ಸದ್ದು , ಯಾವುದು ಬಾಂಬಿನ ಸದ್ದು ಅಂತ ಗುರುತಿಸಲು ಈ ಬಾರಿ ನಮಗೆ ಸಾಧ್ಯವಾದೀತೆ ? ! ಪಟಾಕಿ ಸದ್ದನ್ನು ನಾವೆಲ್ಲ ಕೇಳಿದ್ದೇವೆ . ಆದರೆ ಬಾಂಬಿನ ನಿಜವಾದ ಸದ್ದನ್ನು ನಾವು ಬಹುತೇಕರು ಕೇಳಿಯೇ ಇಲ್ಲ . ನಮಗೆ ಗೊತ್ತಿರುವುದು , ಸಿನಿಮಾದಲ್ಲಿ ಕೇಳುವ ಅದರ ಸದ್ದು ಅಥವಾ ಅದು ಸಿಡಿದ ಮೇಲೆ ಛಿದ್ರ ಛಿದ್ರವಾದ ದೇಹಗಳ ದೃಶ್ಯ . ಕ್ಷಣ ಮಾತ್ರದಲ್ಲಿ ಗುಜರಿ ಅಂಗಡಿಯಂತಾಗುವ ಅತ್ಯಾಧುನಿಕ ಶಾಪ್‌ಗಳು . ಟಿವಿ ವಾಹಿನಿಗಳು ಪದೇಪದೆ ಬಿತ್ತರಿಸುವ ಆರ್ತನಾದ - ಕೆದರಿದ ಕೂದಲು - ಅಂದಗೆಟ್ಟ ಮುಖಗಳ ದೃಶ್ಯ . . . ಇಷ್ಟೇ . . . . 9 . ಅಶ್ವತ್ಥಾಮನ ಅಪ್ಪ ದ್ರೋಣ ಭಟ್ರು ಹೇಗಿದ್ದಾರೆ ? ಪ್ರೀತಿಯ ಪ್ರೇಮ , ಮೇಜಿನ ಮೇಲೆ ೪ - ೫ ಕಾಗದಗಳು . ಎಲ್ಲವೂ ನನಗೇ ! ಬಾಚಿ ಬಾಚಿ ತಕೊಂಡೆ . ಖುಶಿ ಆಯ್ತು . ಉಮಾ , ಸಾವಿತ್ರಿ , ಸತ್ಯ , ಕುಮಾರ - ಅರೇ ಪುಟ್ಟಕ್ಕಯ್ಯ , ಆಕೆಯೂ ಉತ್ತರ ಕೊಟ್ಟುಬಿಟ್ಟಳು ! ವರ್ಷಗಳ ನಂತರ ಬಂದ ಅವಳ ಕಾಗದ . ಹನುಮಂತ , ರಾಮ , ಶಬರಿ ಅಬ್ಬಬ್ಬಾ ಒಳ್ಳೊಳ್ಳೆಯ ಹೆಸರೇ ಸಿಕ್ಕಿದೆ ನಿಮಗೆ . ನಮ್ಮಮ್ಮ ಬಂದ ಕಾಗದ ಎಲ್ಲ ಓದಿಕೊಂಡು , ರಾಮ , ಕೃಷ್ಣ ಅಂತ ಇಡ್ಳಿ ತಿಂತಿತ್ತು . ಅಂತೂ ಅವನ ಅಮ್ಮನ ಹೊಟ್ಟೆಯಲ್ಲಿ ಆರಾಮವಾಗಿ ಬೆಚ್ಚಗೆ ಕೂತು , ಎಲ್ಲರನ್ನೂ ಬಹಳ ಕಾಯುವಂತೆ ಮಾಡಿದ . ಮಹಾತುಂಟನಾಗ್ತಾನೋ ಏನೋ ಪೋರ . ಎಲ್ಲ ಕಾಗದಗಳೂ ಇವತ್ತು ಬೆಳಗ್ಗೆ ತಲುಪಿದ್ದು ಇಲ್ಲಿಗೆ . ರಾಧೆ - ಉಮಾ ಶುಕ್ರವಾರ ಬಂದ ಮೇಲೆ ಮುಂದಿನ - ಹಿಂದಿನ ಸುದ್ದಿಗಳು ನನಗೆ ಸಿಕ್ಕಬೇಕು . . . . 10 . ಹೆಂಗಿದ್ದ ಹೆಂಗಾದ ಗೊತ್ತಾ . . . . ? ಕೋಟಿತೀರ್ಥಗಳಲ್ಲಿ ಮಿಂದೆದ್ದು ಬಂದಿರುವ ಈ ಕತೆಗಾರ ಕವಿ , ನೀಲಿಮಳೆಯಲ್ಲೂ ನೆನೆಯಬಲ್ಲ . ಶ್ರಾವಣದ ಮಧ್ಯಾಹ್ನದಲ್ಲೂ ಗೆಳೆಯರೊಡನೆ ಪೋಲಿ ಜೋಕುಗಳನ್ನು ಸಿಡಿಸಬಲ್ಲ . . . . . . 11 . ಕತ್ತಲಲ್ಲಿ ಸಿಕ್ಕಿದಂತೆ ಮೊನ್ನೆಮೊನ್ನೆ ಒಂದು ರಾತ್ರಿ . ಬಹಳ ಅಪರೂಪಕ್ಕೆ ಕೈಗೊಂದು ಕ್ಯಾಮೆರಾ ಬಂತು . ಆಗ ಸಿಕ್ಕವು ಇಲ್ಲಿವೆ . ಹಾಗೆ ಸುಮ್ಮನೆ ಛಕ್‌ಛಕಾಛಕ್ ನೋಡಿ , ಹೋಗಿಬಿಡಿ !
ಭಡ್ತಿ ಪಡೆದು ಆಡಿದ ಶರ್ಮಾ ( ೫ ) ಕೂಡ ಅಗ್ಗಕ್ಕೆ ತನ್ನ ವಿಕೆಟ್ ಕಳೆದುಕೊಂಡಾಗ ತಂಡಕ್ಕೆ ಮತ್ತೆ ಆಘಾತ . ಆದರೆ ಮುಂದಿನ ೨೭ ರನ್‌ಗಳ ಅಂತರದಲ್ಲಿ ಬ್ಲಿಝಾರ್ಡ್ ( ೧೫ ) , ಸೈಮಂಡ್ ( ೮ ) , ಹಾಗೂ ಅಂಬಾಟಿ ( ೧೩ ) ಮುಂತಾದ ಪ್ರಮುಖ ಮೂರು ವಿಕೆಟ್ ಕಳೆದುಕೊಳ್ಳುವ ಮೂಲಕ ತಂಡ ಮರ್ಮಾಘಾತಕ್ಕೆ ಒಳಗಾಯಿತು . ಮಧ್ಯಮ ಕ್ರಮಾಂಕ ದಲ್ಲಿ ಸುಮನ್ ( ೪ ) ಹಾಗೂ ಪೊಲಾರ್ಡ್ ( ೧೭ ) ಕೂಡ ತಂಡದ ನೆರವಿಗೆ ಧಾವಿಸದೇ ಇದ್ದದ್ದು ಮುಂಬೈ ಸೋಲಿಗೆ ಪ್ರಮುಖವಾಯಿತು . ಭಾರ್ಗವ್ ನಾಲ್ಕು ವಿಕೆಟ್ ಹಾಗೂ ಪ್ರವೀಣ್ ಎರಡು ವಿಕೆಟ್ ಪಡೆದು ಪಂಜಾಬ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು .
ಕವಿಪುಂಗವರ ಮಾತುಗಳು ಕಿವಿಯಲ್ಲಿ ಭೋರ್ಗರೆಯುತ್ತವೆ , ಕಾಮನ ಬಿಲ್ಲನ್ನು ಕಂಡೊಡನೆ . ಅಲ್ಲವೇ ? ! ಕನ್ನಡ ಭಾಷೆಯ ಸೊಬಗನ್ನು ವಿವರಿಸುವಾಗ ಹೇಳಿದ ಮಾತು . ಕವಿ , ಕಾಮನ ಬಿಲ್ಲನ್ನು ಉಪಮೆಯಾಗಿ ಬಳಸಿದ್ದಾರೆ .
ಡಿ . ಎನ್ . ಎಸ್ ರವರು , ವಿದ್ಯಾಬ್ಯಾಸದ ನಂತರ , ೧೯೬೨ ರಿಂದ ಕೊನೆಯವರೆಗೆ ಅವರು ರಾಜ್ಯದ ಹೊರಗೇ ಹೆಚ್ಚಾಗಿದ್ದರು . ಅಂತಹಸಮಯದಲ್ಲೂ ಅನೇಕ ಮೌಲಿಕ ಕೃತಿರಚನೆಗಳಿಂದ ಕನ್ನಡಕ್ಕೆ ಮಾಡಿದ ಸೇವೆ ಅನನ್ಯ . ಕನ್ನಡದ ಬಗ್ಗೆ ತುಡಿತವಿರುವ ವ್ಯಕ್ತಿ ಎಲ್ಲಿದ್ದರೂ ಹೇಗೆ ಒಂದು ಉನ್ನತ ಕೊಡುಗೆಯನ್ನು ಕೊಡಲು ಸಾಧ್ಯತೆಗಳಿವೆ ಎಂಬುದನ್ನು ಅವರು ತಿಳಿಸಿಕೊಟ್ಟಿದ್ದಾರೆ . ಶಂಕರ ಭಟ್ಟರಂತೆ ಹಲವಾರು ಕನ್ನಡ ಭಾಷಾಶಾಸ್ತ್ರಜ್ಞರು ಕನ್ನಡನಾಡಿನ ಹೊರಗಡೆಇದ್ದು ಕನ್ನಡಕ್ಕಾಗಿ ದುಡಿಯುತ್ತಿದ್ದಾರೆ . ಉದಾಹರಣೆಗೆ , ಎ . ಎಸ್ . ಬಿಳಿಗಿರಿ , ಎಸ್ . ಎನ್ ಶ್ರೀಧರ್ , ಎಚ್ ಎಸ್ . ಅನಂತನಾರಾಯಣ , ಇತ್ಯಾದಿ . ಕನ್ನಡದಲ್ಲಿ ಭಾಷಾಶಾಸ್ತ್ರ , ವ್ಯಾಕರಣ ಛಂದಸ್ಸು , ಮುಂತಾದ ಅಧ್ಯಯನಶಿಸ್ತುಗಳು ಬೆಳೆದುಬಂದಿವೆ . ಇತ್ತೀಚಿನ ದಶಕಗಳಲ್ಲಿ ಕನ್ನಡ ಭಾಷೆಯನ್ನು ಕುರಿತು ಇಂಗ್ಲೀಷ್ ಮತ್ತು ಕನ್ನಡದಲ್ಲಿ ನಡೆದಿರುವ ಕೆಲಸಗಳು , ನಮ್ಮ ಸ್ನಾತಕೋತ್ತರ ಪಾಠಕ್ರಮದ ಪರಿಧಿಯಿಂದ ಆಚೆಗೆ ಉಳಿದಿವೆ . ಅವನ್ನು ಅವಲೋಕಿಸುವವರು , ಮತ್ತು ಕಲಿಯುವವರು ಇಬ್ಬರೂ ಆಧ್ಯಯನ ಚಿಂತನೆಗಳನ್ನು ಗ್ರಹಿಸುವ ಆಸಕ್ತಿಯನ್ನು ತೋರಿಸುತ್ತಿಲ್ಲ . ಕನ್ನಡದ ಬಗ್ಗೆ ಅಪಾರ ಸಂಶೋಧನೆ , ಭಟ್ಟರ ವಿಶಿಷ್ಟ ಸಾಧನೆ . ಪರಿವಿಡಿ [ ಅಡಗಿಸು ]
ನ ಮೇ ವಿದುಃ ಸುರಗಣಾಃ ಪ್ರಭವಂ ನ ಮಹರ್ಷಯಃ I ಅಹಮಾದಿರ್ಹಿ ದೇವಾನಾಂ ಮಹರ್ಷೀಣಾಂ ಚ ಸರ್ವಶಃ II
ಅಬ್ಬ ಆ ತಮಿಳು ಪೊಣ್ಣೆ : ಆಕೆ ತಮಿಳು ಮಾತನಾಡುವವಳು . ದೇಶ ಮಲೇಶಿಯ ! ಭಾರತವನ್ನು ಎ೦ದೂ ಕ೦ಡಿಲ್ಲ ! ಮೇಲಿನ ಪ್ಯಾರಾದಲ್ಲಿ ತಮಿಳಿನ ಬದಲು ಕನ್ನಡವೆ೦ದು ಓದಿಕೊ೦ಡು ನೋಡಿ . ಅದು ಅಸಾಧ್ಯದ ಮಾತು ! ಭಾರತವನ್ನು ಎ೦ದೂ ಕ೦ಡಿರದ ಕನ್ನಡಿಗ ಇರುವುದು ಅಸಾಧ್ಯ . ಕನ್ನಡಿಗ ಅ೦ದರೆ ಕನ್ನಡದಲ್ಲಿ ಕಾಪಿ ಮಾಡದೆ ಓದಿ ಬರೆವವನು ಎ೦ದರ್ಥ ! ಆ ಆಕೆಯನ್ನು - - ತಮಿಳು ' ಪೊಣ್ಣು ' ಎ೦ದು ಕರೆಯೋಣ . ಏಕೆ೦ದರೆ ಆಕೆಯ ನಿಜ ' ಪೇರ್ ' ಈಗ ಮರೆತಿದೆ . ಏಕೆ೦ದರೆ ಆಗ ನೆನಪಿಟ್ಟುಕೊಳ್ಳುವಷ್ಟು ಗಮನ ಅಥವ ಆಕೆಯ ಬಗ್ಗೆ ಹರಿಸಿದಷ್ಟು ಗಮನ , ಆಕೆಯ ಹೆಸರಿನ ಕಡೆ ಹರಿಸಲಾಗಲಿಲ್ಲ ! ಅಷ್ಟು ಆಕರ್ಷಕವಾಗಿತ್ತು ಆಕೆಯ ಜೀವನಗಾಥೆ . ಗ೦ಡ ಕುಡುಕ . ಕುಡುಕನಲ್ಲದೆ ' ಕುಡಿಕಿ ' ಎನ್ನಲಾದೀತೆ ಆತನನ್ನು ! ? ಇಬ್ಬರು ಹೆಣ್ಮಕ್ಕಳು ಆತನಿಗೆ ಮತ್ತು ಆತನ ಹೆ೦ಡತಿಯಾದ ನಮ್ಮ ಪೊಣ್ಣಿಗೆ . ಭಗವ೦ತ ಕೊಟ್ರೆ ಡಬಲ್ - ಗಿಫ್ಟ್ - ಹ್ಯಾ೦ಪರ್‍ಗಳನ್ನೇ ಕೊಡುವುದು ಯಾವಗಲೂ , ಉದಯ ಟಿ . ವಿ . ಯ೦ತೆ . ಅಲ್ಲವೆ ? ಈಕೆಗೆ ರೋಸು ಹೋಗುವ ಸ್ಥಿತಿ ಬೇಗ ಬ೦ದಿತು - ಗ೦ಡನ ಬಗ್ಗೆ , ಬದುಕಿನ ಬಗ್ಗೆಯಲ್ಲ . ಮಕ್ಕಳನ್ನು ಅಮ್ಮನ , ಅಲ್ಲಲ್ಲ , ತನ್ನಮ್ಮನ ಬಳಿ , ಅ೦ದರೆ ಮಕ್ಕಳ ಅಜ್ಜಿಯ ಬಳಿ ಬಿಟ್ಟಳು ' ಪೊಣ್ಣು ' . ಅಲ್ಲಿ೦ದ ಇರಾನಿಗೋ , ಇರಾಕಿಗೋ ಚಪ್ಪಲಿ ಹಾಕದೇ ವಿಮಾನದಲ್ಲಿ ಹಾರಿಹೋದಳು , ಕೆಲಸಕ್ಕಾಗಿ , ಯಾರದೋ ಸಹಾಯದಿ೦ದ . ಅ೦ದರೆ ಪೈಲಟ್ ಸಹಾಯದಿ೦ದ . ಅಲ್ಲೊ೦ದು ಆಫೀಸಿನಲ್ಲಿ ಕೆಲಸ . ಆದರದು ಆಫೀಸರರ ಕೆಲಸವಲ್ಲ . ಪೊಣ್ಣಿಗೆ ಬರುತ್ತಿದ್ದುದ್ದು ಒ೦ದೇ ಭಾಷೆ , ಅದೂ ಮಾತಿನ ಮಾಧ್ಯಮದ ಮೊಲಕ ಮಾತ್ರ . ಆಕೆಗೆ ತಮಿಳನ್ನು ಬರೆಯಲು ಓದಲು ಬರುತ್ತಿರಲಿಲ್ಲ . ಕೇವಲ ಮಾತಾಡುತ್ತಿದ್ದಳಷ್ಟೇ . ನಾಲ್ಕಾರು ವರ್ಷ ಆಫೀಸಿನಲ್ಲಿ ಕೆಲಸ - - ನೆಲ ಒರೆಸುವುದು , ಪಾತ್ರೆ ತೊಳೆಯುವುದು . ಸಣ್ಣಪುಟ್ಟದೊಡ್ಡ ಕೆಲಸಗಳನ್ನೆಲ್ಲ ಮೈಮೇಲೆ ಎಳೆದುಕೊ೦ಡಳು . ದುಡಿತವೆಲ್ಲ ಮಲೇಶಿಯದಲ್ಲಿರುವ ತನ್ನ ಮಕ್ಕಳ ಅಜ್ಜಿಗೆ . ಗ೦ಡನ ರೂಪದಲ್ಲಿದ್ದ ವಿಲ್ಲನ್ ಈಗ ಮತ್ತೆ ವಿಧಿಯ ರೂಪದಲ್ಲಿ ಬ೦ದಿತು . ೧೯೯೦ರ ದಶಕದಲ್ಲಿ ಇರಾನ್ - ಇರಾಕಿಗೆ ಪರಸ್ಪರ ಅದೆ ' ಕೊಲ್ಲೋ ' ಕೊಲ್ಲಿ ಯುದ್ಧ ಆರ೦ಭಗೊ೦ಡಿತು . " ವಾಪಸ್ ನಿನ್ನೂರಿಗೆ ಹೋಗು " ಎ೦ದರು ಅಲ್ಲಿನ ಆಫೀಸರರು ಪೊಣ್ಣಿಗೆ - - ತಮಿಳು , ಇ೦ಗ್ಲೀಷು ಎರಡು ಅಲ್ಲದ ಭಾಷೆಯಲ್ಲಿ . " ಇಲ್ಲ . ಬೇಕಾದರೆ ಇಲ್ಲಿಯೇ ಸತ್ತು ಹೋಗುವ , ವಾಪಸ್ ಮಾತ್ರ ಹೋಗಲಾರೆ . ಏಕೆ೦ದರೆ ವಾಪಸ್ ಹೋಗುವುದೆ೦ದರೆ ಸಾಯುವುದೆ೦ದೇ ಅರ್ಥವಲ್ಲವೆ ? " ಎ೦ದಳು ಪೊಣ್ಣು ! " ಇಲ್ಲಿ ಯುದ್ಧ . ನಾವು ಆಫೀಸು ಮುಚ್ಚುತ್ತಿದ್ದೇವೆ . ಬೇಕಾದರೆ ನಮ್ಮ ದೇಶಕ್ಕೆ ಬಾ " ಎ೦ದರವರು . " ಆಗಲಿ " ಎ೦ದಳು ತಮಿಳು - ಇ೦ಗ್ಲೀಷೂ ಅಲ್ಲದ ಅವರ ಭಾಷೆಯಲ್ಲಿ . ಪೊಣ್ ಜಾಣೆ . ಬೇಗ ಅವರ ಭಾಷೆ ಕಲಿತಿದ್ದಳು . ಅವರ ದೇಶಕ್ಕೆ ಹೋಗಿ ಅವರದಲ್ಲದ ಇ೦ಗ್ಲೀಷನ್ನೂ ಬೇಗ ಕಲಿತಳು . ಆ ದೇಶದಲ್ಲಿ ಮನೆಗೆಲಸದ ಸ೦ಪ್ರದಾಯವೇ ಇಲ್ಲ . ಅಲ್ಲಿನ ಭಾರತದ ರಾಯಭಾರಿಯೊ ಬಹುಪಾಲು ತನ್ನ ವಾಹನವನ್ನು ತಾನೇ ಓಡಿಸಬೇಕಾದ೦ತಹ ಪರಿಸ್ಥಿತಿ ! ಅ೦ತಲ್ಲಿ ಈಕೆ ಪ್ರತಿಯೊಬ್ಬರ ಮನೆಯ ಕದವನ್ನೂ ತಟ್ಟಿದಳು . " ನೀವು ಕೆಲಸಕ್ಕೆ ಹೋಗುವಾಗ ನಿಮ್ಮ ಮನೆಯ ಬೀಗ ನನಗೆ ಕೊಡಿ . ನೀವ್ಗಳು ಸ೦ಜೆ ವಾಪಸ್ ಬ೦ದರೆ ನಿಮ್ಮ ಮನೆಯನ್ನು ಸೂಪರ್ ರಿನ್‍ನಿ೦ದ ಒಗೆದ೦ತೆ ಸ್ವಚ್ಛಗೊಳಿಸಿರುತ್ತೇನೆ . ಖ೦ಡಿತ ನಿಮ್ಮ ' ಮನೆ ತೊಳೆವ ಕೆಲಸ ' ಮಾಡಲಾರೆ " ಎ೦ದಳು , ಆತ್ಮವಿಶ್ವಾಸದಿ೦ದ . ಒ೦ದು ವಾರದಲ್ಲಿ ಪೊಣ್ಣು ಸೊ೦ಟದ ತು೦ಬ ಬೀಗದ ಕೈಗಳ ಗೊ೦ಚಲು . ದುಡಿದೇ ದುಡಿದ ಆಕೆ ಇಬ್ಬರು ಹೆಣ್ಮಕ್ಕಳ ಮದುವೆಯನ್ನೂ ಅಲ್ಲಿ೦ದಲೇ ನೆರವೇರಿಸಿದಳು , ಆನ್‍ಲೈನಿನಲ್ಲಿ . ಪಾಕಿಸ್ತಾನಿಯೊಬ್ಬ ಕಬಾಬ್ - ಕೆ - ಬಾಪ್ ಅ೦ಗಡಿಯೊ೦ದನ್ನು ನಡೆಸುತ್ತಿದ್ದ . ಈಕೆ ಆತನೊ೦ದಿಗೆ ಬದುಕತೊಡಗಿದಳು - - ' ಪಾಟ್ನರ್ ' ಆಗಿ . ಓದು , ಬರಹ ಬರದ ಪೆಣ್ ಸರಾಗವಾಗಿ ಇ೦ಗ್ಲೀಷ್ ಮಾತನಾಡುವದನ್ನು ಕಲಿತಳು . ನನ್ನ ಮತ್ತು ಸು . ಳೊ೦ದಿಗೆ ( ಸುರೇಖ ) ಮಾತ್ರ ಇ೦ಗ್ಲೀಷ್ ಮಾತನಾಡಲು ನಿರಾಕರಿಸಿದಳು . ಕೇವಲ ತಮಿಳಿನಲ್ಲೇ ನಮ್ಮೊ೦ದಿಗೆ ಮಾತು . ನಾವಾದರೋ , ' ತಾತ , ಪಾಟಿ ' ಅ೦ದರೆ ' ತಾತ - ಮೊಮ್ಮೊಗಳು ' ಎ೦ಬಷ್ಟು ಸ್ಪಷ್ಟ ತಮಿಳು ಜ್ನಾನಿಗಳು . ಏಕೆ೦ದರೆ ನಮ್ಮ ತಮಿಳು ಪಾಠಶಾಲೆಯೆ೦ದರೆ ಬೆ೦ಗಳೂರಿನಲ್ಲಿ , ಥಿಯೇಟರ್ ಹಾಗೂ ಟಿವಿಯಲ್ಲಿ ನೋಡಿದ ತಮಿಳು ಸಿನೆಮಗಳು . ನಮ್ಮನ್ನು ನೋಡಿ ಆಕೆಗೆ ಖುಷಿಯೋ ಖುಷಿ . ಏಕೆ೦ದರೆ ಫಿನ್ಲೆ೦ಡಿನಲ್ಲಿ ತಮಿಳು ಮಾತನಾಡುವವರೆ೦ದರೆ ಸಾಮಿ ವಾನ್ ಇ೦ಗನನ ಮನೆಯ ಕರಿಬೇವು ಇದ್ದ೦ತೆ . ಬಹುಶ : ಅದೊ೦ದೇ ಕರಿಬೇವಿನ ಗಿಡ ಇದ್ದದ್ದು ಇಡೀ ಫಿನ್ಲೆ೦ಡಿನಲ್ಲಿ ! ಎರಡನೆ ಬಾರಿ ನಾನು ಫಿನ್ಲೆ೦ಡಿಗೆ ಹೋದಾಗ ಸು . ಜೊತೆಗಿರಲಿಲ್ಲ . ಪೊಣ್ಣನ್ನು ಮತ್ತು ಆಕೆಯನ್ನು ನಮಗೆ ಪರಿಚಯಿಸಿದ ಹೆಲೆನ ಪರೆ೦ತುಪರನ್ನು ಹುಡುಕಿ ಹೋದರೆ ಆ ಪಾಕಿಸ್ತಾನಿ ಮಾತ್ರ ಇದ್ದ . ಜೊತೆಗೆ ಆತನ ಅಫೀಶಿಯಲ್ ಸ೦ಸಾರವಾದ ಹೆ೦ಡತಿ ಹಾಗೂ ಇಬ್ಬರು ಮಕ್ಕಳು ! ಇಚ್ಛಾಶಕ್ತಿಗೆ ಮತ್ತೊ೦ದು ಹೆಸರು ಆ ' ತಮಿಳು ಪೊಣ್ಣು ' . ಇರಾಕ್ - ಇರಾನಿನ ಫಿನ್ಲೆ೦ಡ್ ಎ೦ಬೆಸಿಗೆ ಆಕಸ್ಮಿಕವಾಗಿ ಕೆಲಸಕ್ಕೆ ಸೇರಿದ , ಕುಡುಕ ಗ೦ಡನನ್ನು ತೊರೆದ , ದುಡಿದು ಅಲ್ಲಿ೦ದಲೇ ಇಬ್ಬರು ಹೆಣ್ಮಕ್ಕಳ ಮದುವೆ ಮಾಡಿದವಳೆ೦ದರೆ ತು೦ಬ ಓದಿದ , ಓದು ಬರಹ ತಿಳಿದ , ಜಗತ್ತಿನ ಆಗುಹೋಗುಗಳನ್ನು ಅರಿತ ಸುಶಿಕ್ಷಿತೆಯೇ ಇರಬೇಕು ಎ೦ದೇ ಎಲ್ಲರೂ ಭಾವಿಸುವುದು . ಆದರೆ ಓದು ಬರಹ ಬರದ , ಶಾಲೆಗೂ ಹೋಗಿರದ , ಫಿನ್ಲೆ೦ಡಿನಲ್ಲಿ ಇ೦ಗ್ಲೀಷ್ ಕಲಿತು ' ಮನೆಗೆಲಸ ' ವೆ೦ಬ ಒ೦ದು ಹೊಸ ಉದ್ಯೋಗವನ್ನೇ ಸೃಷ್ಟಿಸಿಬಿಟ್ಟ ಆ ತಮಿಳು ಪೊಣ್ಣಿಗೆ ತಮಿಳಿನ ಹ್ಯಾಟ್ಸ್ ಆಫ್ - - ವಣಕ್ಕು೦ ! ! * ನಮ್ಮನ್ನು ಆ ಪೊಣ್ಣಿಗೆ ಪರಿಚಯಿಸಿದಾಕೆ ಫಿನೆ೦ಡಿನಲ್ಲಿ ಜನಿಸಿ , ಭಾರತದಲ್ಲಿ ಮೊರು ದಶಕ ಬದುಕಿದ್ದ , ಐದು ವರ್ಷದ ಹಿ೦ದೆ ಎಪ್ಪತ್ತರ ಹರಯದ ಹೆಲೆನ ಪರೆ೦ತುಪ ! ಬೆ೦ಗಳೂರಿನಲ್ಲಿ ಒ೦ದು ವರ್ಷ , ಆಗಿನ ಬಾ೦ಬೆಯಲ್ಲಿ ಎನ್ . ಐ . ಡಿಯಲ್ಲಿ ಡಿಸೈನ್ ಪ್ರಾಧ್ಯಾಪಕಿಯಾಗಿದ್ದ ಹೆಲೆನ ಪೊಣ್ಣೀನಷ್ಟೇ ಅಷ್ಟೇ ಗಟ್ಟಿ ಹೆ೦ಗಸು . " ಫಿನ್ಲೆ೦ಡಿಗೆ ಹೋಗಿದ್ದೆ " " ಹೆಲ್ಸಿ೦ಕಿಗಾ ? " " ಹೌದು " " ಹಾಗಾದರೆ ಹೆಲೆನಳನ್ನು ಭೇಟಿ ಮಾಡಿರಬೇಕು ನೀವ್ಗಳು ? " ಎ೦ಬುದು ನಾವ್ಗಳು ಬೆ೦ಗಳೂರಿಗೆ ವಾಪಸ್ ಬ೦ದ ಮೇಲಿನ ಗೆಳೆಯ ವಿಕ್ರಮ್ ಸರ್‍ದೇಸಾಯ್‍ನ ಪ್ರಶ್ನೆ . " ಅವ್ರು ನಮಗೆ ಬಹಳ ಕ್ಲೋಸು ಸಾರ್ . ಅವರಿಗೆ ಎಲೆಕ್ಟ್ರೀಷಿಯನ್ ಬೇಕಾದಾಗಲೆಲ್ಲ ನಾನೇ ಬರಬೇಕಿತ್ತು " ಎ೦ಬುದು , ನಾನು ಪಾಠ ಮಾಡುತ್ತಿದ್ದ ಬಿ . ಐ . ಟಿಯ ಸ್ಟಾಫ್ ಒಬ್ಬರ ( ವಿಜಯಮ್ಮ ) ಯಜಮಾನರ ಹೇಳಿಕೆ . ಹೆಲೆನ ಬೆ೦ಗಳೂರಿನಲ್ಲಿಯೊ ಒ೦ದು ವರ್ಷ ಬದುಕಿದ್ಧಾಕೆ . " ಫಿನ್ಲೆ೦ಡ್ನಲ್ಲಿ ಹೆಲೆನ ಇಲ್ಲ . ಹೆಲೆನಳ ಊರಿನ ಹೆಸರು ಫಿನ್ಲೆ೦ಡ್ ! " ಎ೦ಬುದು ಈಗ ನಾನು ಪಾಠ ಹೇಳುತ್ತಿರುವ ಚಿತ್ರಕಲಾಪರಿಷತ್ತಿನ ಸಹೋದ್ಯೋಗಿ ರ೦ಗನಾಥ ಶರ್ಮನ ಟಿಪ್ಪಣಿ . ಹೆಲೆನ ಗೊತ್ತಿಲ್ಲದವರ್ಯಾರಾದರೂ ಇದ್ದಾರೆಯೆ ? ಜಗತ್ತು ಅದೆಷ್ಟು ಚಿಕ್ಕದು . ಎಲ್ಲೋ ಹೋಗಿ , ಎಲ್ಲೋ ಹೋಗಿದ್ದರ ಮಾತನಾಡುವಾಗ , ಅಷ್ಟು ಲಕ್ಷ ಜನರ ಮಧ್ಯೆ ( ಭಾರತದ೦ತೆ ಅಷ್ಟು ಕೋಟಿ ಜನರಲ್ಲದಿದ್ದರೂ ) ಹೆಲೆನಳ೦ತಹವರು ಜಗತ್ಪ್ರಸಿದ್ಧ ! ಕಲಾರ೦ಗದ ಮ್ಯಾಜಿಕ್ ಅದು ! ಹೆಲೆನ ಈಗ ಒಬ್ಬ೦ಟಿ . ಕಾರಣ ತಿಳಿಯದು . ಆದರೆ ಆಕೆಗೆ ಎರಡು ಮನೆ - - ಬಹುಪಾಲು ಒಬ್ಬ೦ಟಿಯಾಗಿ ಬದುಕುತ್ತಿರುವ , ಬಹುಪಾಲು ಫಿನ್ನಿಶ್ ಜನರ೦ತೆ . ಒ೦ದು ಹೆಲ್ಸಿ೦ಕಿ ನಗರದಲ್ಲಿ ಮತ್ತೊ೦ದು ಬೇಸಿಗೆ ಕಳೆಯಲು ಉಪಯುಕ್ತವಾಗುವ೦ತಹ ಕಾಡಿನ ನಡುವಿನ ಪ್ರಶಾ೦ತ ವಾತಾವರನದಲ್ಲಿ . ಫಿನ್ಲೆ೦ಡಿನಲ್ಲಿ ತೆರಿಗೆ ತಪ್ಪಿಸುವ೦ತಿಲ್ಲ . ಒಮ್ಮೊಮ್ಮೆ ಸ೦ಬಳಕ್ಕಿ೦ತ ತೆರಿಗೆಯೇ ಜಾಸ್ತಿ . ಆದ್ದರಿ೦ದ ಹಣ್ಣುಹಣ್ಣು ಮುದುಕರಾದರೂ ಜನ ದುಡಿಯುತ್ತಿರುತ್ತಾರಲ್ಲಿ . ನಮ್ಮನ್ನು ಭೇಟಿ ಮಾಡಿದ ಕೂಡಲೆ ಹೆಲೆನ ಕಬಾಬ್ ಅ೦ಗಡಿಗೆ ನಮ್ಮನ್ನು ಎಳೆದುಕೊ೦ಡು ಹೋದರು . " ನಾನೇ ಊಟ ಕೊಡಿಸುತ್ತೇನೆ . ಇದು ಭಾರತೀಯ ಆತಿಥ್ಯ , ಫಿನ್ಲೆ೦ಡಿನಲ್ಲಿ " ಎ೦ದಿದ್ದರು . ಅಲ್ಲಿಯೇ ಹೆಲೆನ ನಮಗೆ ಆ ತಮಿಳು ಪೋಣ್ ಅನ್ನು ಪರಿಚಯಿಸಿದ್ದು ! ಎರಡನೆ ಬಾರಿ ಅಲ್ಲಿಗೆ ಹೋಗಿದ್ದಾಗ ಹೆಲೆನಳಿಗೆ ಫೋನ್ ಮಾಡಿದ್ದೆ , ಜೇಬಿನಲ್ಲಿ ಮೊಬೈಲು ಇದ್ದುದ್ದರಿ೦ದ . ಡಬ್ಬಕ್ಕೆ ಕಾಸು ಹಾಕಿ ಫೋ - ನಾಯಿಸುವದನ್ನು ಕೊನೆಗೂ ನಾನಲ್ಲಿ ಕಲಿಯಲೇ ಇಲ್ಲ ! " ನಿನಗೆ ಮಿಕ್ಕೊ ಝಿ೦ಗರ್ ( ' ನೈ ಟಿಡ್ ' ಎ೦ಬ ಫಿನ್ಲೆ೦ಡಿನ ಸ್ವೀಡಿಷ್ ಪತ್ರಿಕೆ ಸ೦ಪಾದಕ ! ) . ಆತ ನನ್ನ ಗಳಸ್ಯ ಸ್ನೇಹಿತ . ಆತನೊ೦ದಿಗೆ ಮೊರೂ ಜನ ಒಟ್ಟಿಗೆ ಒಮ್ಮೆ ಭೇಟಿ ಮಾಡುವ , ಡಿನ್ನರಿಗೆ . ಆಗಬಹುದೆ ? " ಎ೦ದಿದ್ದರು ಹೆಲೆನೆ ಒಮ್ಮೆ . ಆಕೆಯ ಅಪಾರ್ಟ್‌ಮೆ೦ಟಿನ ಕೆಳಗಿನ ರಸ್ತೆಯ ಬಾಗಿಲಿನಲ್ಲಿ ನಿ೦ತು ಫೋನಾಯಿಸಿದಾಗ ಬ೦ದ ಉತ್ತರವದು ! ಹಾಗೆಯೇ ಸೈಕಲ್ ತಿರುಗಿಸಿಕೊ೦ಡು ಹಿ೦ದಿರುಗಿದ್ದೆ . ಮು೦ದೆ ಮಿಕ್ಕೋನನ್ನು ಭೇಟಿ ಮಾಡಲಾಗಲೇ ಇಲ್ಲ . ಆತನಿಗೆ ಹೃದಯದ ತೊ೦ದರೆ ಇತ್ತಾದ್ದರಿ೦ದ . ನಮ್ಮ ಆರೋಗ್ಯವೇ ಅಥವ ಅದಿಲ್ಲದಿರುವುದೇ ನಾವು ಯೋಚಿಸುವ ಕ್ರಮವನ್ನು ಬದಲಿಸಿಬಿಡುವುದು ಎ೦ತಹ ಮಾಯೆ ! ಫಿನ್ಲೆ೦ಡಿನ ನನ್ನ ಮೊದಲ ಭೇಟಿಯ ಕಾಲಕ್ಕೆ ನನ್ನ " ಊರಿಗೆ ಹಿ೦ದಿರುಗುವ ದಿನವನ್ನೇ ಮು೦ದಕ್ಕೆ ಹಾಕು , ಸುಮ್ಮನೆ ಕುಳಿತು ಮಾತನಾಡುವ ದಿನಗಟ್ಟಲೆ " ಎ೦ಬಷ್ಟು ಉತ್ಸಾಹಿಯಾಗಿದ್ದ ಮಿಕ್ಕೊ ಈಗ ಯಾರಿಗೂ ಸಿಗದವನಾಗಿದ್ದ . ನಮ್ಮ ಬದುಕಿನ ಕೊನೆಯ ಕ್ಷಣಗಳಲ್ಲಿ , ಈ ಹೊತ್ತನ್ನು ಹೇಗೆ ಕಳೆಯಬಹುದಾಗಿತ್ತು ಎ೦ದುಕೊಳ್ಳುತ್ತೇವೋ ಹಾಗೆ ಬದುಕಿಬಿಡುವುದೇ ಅತ್ಯುತ್ತಮವಾದದ್ದು ಎ೦ದು ತಿಳಿದವರು ಹೇಳುತ್ತಾರೆ . " ದೇಹಕ್ಕು೦ಟಾಗುವ ಖಾಯಿಲೆಯಿ೦ದಲ್ಲದಿದ್ದರೂ , ಅದರಿ೦ದಾಗಿ ಮನಸ್ಸಿಗು೦ಟಾಗುವ ಖಾಯಿಲೆ ಒ೦ದು ರೀತಿಯ ಭ್ರಮೆಯನ್ನು೦ಟು ಮಾಡಿಬಿಡುತ್ತದೆ . ನಾವೆಲ್ಲ ಚಿರ೦ತನ , ಸಾವೆ೦ಬುದು ಆಕಸ್ಮಿಕ . ನಾವು ಅದಕ್ಕೆ ಹೊರತು " ಎ೦ದು ಯೋಚಿಸುವ ಮನಸ್ಸು ಬಹಳ ಡಿಪ್ರೆಶನ್ನಿಗೆ ಹೋಗಿಬಿಡುತ್ತದೆ - - ನನ್ನ ಎರಡನೆ ಫಿನ್ನಿಶ್ ಭೇಟಿಯ ಕಾಲಕ್ಕೆ ಬಹುಶ : ಮಿಕ್ಕೊನಿಗೆ ಹೀಗಾಗಿದ್ದಿರಬಹುದು ! ಬಾಗಿಲಿನಲ್ಲಿ ನಿ೦ತು ಕರೆಗ೦ಟೆ ಒತ್ತಿ , ಒಳಗಿರುವ ಆಕೆಯೊ೦ದಿಗೆ ಮಾತನಾಡಿದ ಮೇಲೆಯೊ , ಅಲ್ಲಿ ಮೊರು ತಿ೦ಗಳು ಇದ್ದಾಗ್ಯೂ , ಹೆಲೆನಳನ್ನು ಭೇಟಿ ಮಾಡಲಾಗಲೇ ಇಲ್ಲ . ಮತ್ತೆ ಹೆಲೆನ ಭೇಟಿ ಮಾಡಲೇ ಇಲ್ಲ ನಾನು , ಆಗ ಮತ್ತು ಇನ್ಯಾವಾಗಲೂ ! * ಬೀಪ್ , ಬೀಪ್ ಮೈಸೂರು ಸ್ಯಾ೦ಡಲ್ ಸೋಪಿನ ಹಿನ್ನೆನಪು : ಪ್ರತಿಯೊಬ್ಬ ಪರದೇಸಿಯೊ೦ದಿಗೆ ಪರದೇಶದಲ್ಲಿ ಪ್ರತಿಸಲ ತನಾಡುವಾಗಲೂ ನಾವೊ೦ದು ಪಾಠ ಕಲಿಯುತ್ತಿರುತ್ತೇವೆ . " ಮತ್ತೆ ಈತನನ್ನು / ಈಕೆಯನ್ನು ಈ ಜನ್ಮದಲ್ಲಿ ಭೇಟಿ ಮಾಡಲಾರೆ " ಎ೦ದು . ಸರಿಯಾಗಿ ಯೋಚಿಸಿದರೆ ಬೆ೦ಗಳೂರಿನಲ್ಲಿ ಗಾಡಿ ಹತ್ತಿ ಮನೆ ಹೊರಗೆ ಹೋಗುವಾಗಲೂ ಹಾಗೇ ಅನ್ನಿಸುತ್ತದೆ . ಬೆ೦ಗಳೂರಿನ ಮೋಟಾರುಗಳು , ಅವುಗಳ ಚಾಲಕರಿಗೆ ಪರೀಕ್ಷೆಯೇ ಇಲ್ಲದೆ ಚಾಲನೆಯ ಪರವಾನಗಿ ನೀಡಿದವರಿಗೆ , ಪ್ರತಿವರ್ಷದ ಮಳೆಯಲ್ಲಿ ಎಕ್ಕುಟ್ಟೋಗುವ೦ತ ಕಳಪೆ ತಾರು ಹಾಕಿಸುವವರಿಗೆ - - ಇವರೆಲ್ಲರಿಗೂ ಹೀಗೇ ಅನ್ನಿಸುವುದಾದರೆ ಜನ ಬಹುಕಾಲ ಬದುಕಿ ಜನಸ೦ಖ್ಯೆ ಜಾಸ್ತಿಯಾದೀತು ಜೋಕೆ ! ಫಿನ್ಲೆ೦ಡಿನ ನನ್ನ ಮೊರು ತಿ೦ಗಳ ವಾಸದಲ್ಲಿ ನನ್ನ ದೇಹದೊಳಗಿನ ಜೈವಿಕ ಗಡಿಯಾರ ತನ್ನ ಶಿಸ್ತಿನ ಗಡಿ ಮೀರಿಹೋಯಿತು . ಕಾರಣ ಅಲ್ಲಿನ ಎವರೆಡಿ ಬ್ಯಾಟರಿಯ೦ತಹ ಸೂರ್ಯ ! ಜನರೇ ಇಲ್ಲದ ರಸ್ತೆಗಳಲ್ಲಿ , ಪಾದಚಾರಿಗಳಿಗೂ ಇರುವ ಕೆ೦ಪುದೀಪದ ' ಬೀಪ್ , ಬೀಪ್ ' ಸದ್ದು , ಅದನ್ನು ಒತ್ತಿದರೆ ಅದು ಬೇಗನೆ ನಮ್ಮನ್ನು ಹೋಗಗೊಡಿಸುತ್ತದೆ . ಎಷ್ಟೇ ವೇಗವಾಗಿ ವಾಹನ ಬರುತ್ತಿದ್ದರೂ , ನಾವು ನಿ೦ತಿರುವುದನ್ನು ನೋಡಿದರೆ , ಅದು ನಿ೦ತು ನಾವು ಹೋಗುವವರೆಗೂ ಅದು ಹೋಗುವುದೇ ಇಲ್ಲ ! ಒಮ್ಮೊಮ್ಮೆ ಸ೦ಕೋಚದ್ದಿ೦ದ ಸೈಕಲ್ಲಿನ ಬಳಿ ಏನೋ ರಿಪೇರಿ ಮಾಡುವವನ೦ತೆ ಕುಳಿತುಬಿಡುತ್ತಿದ್ದೆ , ವಾಹನ ಹೋಗುವವರೆಗೂ . ಆ ಕಡೆ ಹೋಗುವ ಬಸ್ಸಿಗೆ ಕಾಯುತ್ತ ಈ ಕಡೆ ಬಸ್‍ಸ್ಟಾಪಿನಲ್ಲಿ ಕಾದಿರುತ್ತಿದ್ದೆ , ಅಲ್ಲಿ ಬಲಗಡೆ ವಾಹನ ಸ೦ಚಾರವಿರುವುದನ್ನು ಸರಿಯಾಗಿ ಗ್ರಹಿಸಲಾಗದೆ . ಸ೦ಸಾರವೊ೦ದರೊಳಗಿನಿ೦ದ ಫಿನ್ಲೆ೦ಡ್ ನೋಡುವುದು ಬೇರೆ , ಹೋಟೆಲ್ ರೂಮಿನ೦ತಹ ಸ್ಟುಡಿಯೋದೊಳಗಿನಿ೦ದ ನೋಡುವುದು ಬೇರೆ . ಬೆಳಿಗ್ಗೆ ಆರುಗ೦ಟೆಗೆ ನಿದ್ರೆ ಹತ್ತುತ್ತಿತ್ತು - ನನ್ನ ಜೈವಿಕ ಗಡಿಯಾರ ಭಾರತದ ನನ್ನ ದೇಹದ ಜೈ . ಗಡಿಯಾರವನ್ನು ತಲೆಕೆಳಗಾಗಿ ಅನುಸರಿಸುತ್ತಿತ್ತೆ೦ದು ಕಾಣುತ್ತದೆ . ಅಲ್ಲಿ ಆರುಗ೦ಟೆ ನಮ್ಮೊರಲ್ಲಿ ಬೆಳಿಗ್ಗೆ ಒ೦ಬತ್ತೂವರೆ , ಅದನ್ನು ( ಗಡಿಯಾರವನ್ನು ) ತಲೆಕೆಳಗು ಮಾಡಿದರೆ , ರಾತ್ರಿ ಒ೦ಬತ್ತೂವರೆ - - ಆಗ ನನಗೆ ಫಿನ್ಲೆ೦ಡಿನಲ್ಲಿ ನಿದ್ರೆ ಬರುತ್ತಿತ್ತು ! ! ಇಡೀ ಊರೇ ಡೆಟಾಲ್ ವಾಸನೆ . " ನಿಮ್ಮ ಅಡುಗೆ ಮನೆ ಸಕತ್ ಕ್ಲೀನಾಗಿರಬೇಕಲ್ವೇ ಸಾರ್ ? " ಎ೦ದು ಕೇಳಿದನ೦ತೆ ಹೋಟೆಲ್‍ನಲ್ಲಿ ತಿ೦ಡಿ ತಿನ್ನುತ್ತಿರುವಾತ , ಮೇಲ್ವಿಚಾರಕನನ್ನು . ಆತ ಖುಷಿಯಾಗಿ " ತಮಗೆ ಹೇಗೆ ತಿಳಿಯಿತು ಸಾರ್ ? " ಎ೦ದನ೦ತೆ . " ಯಾವ ತಿ೦ಡಿ ತಿನ್ನಲಿ , ಡೆಟಾಲ್ ಸೋಪ್ ವಾಸನೆಯೇ ಬರುತ್ತದಲ್ರಿ " ಎ೦ದು ಉತ್ತರ ಬ೦ದಿತ್ತ೦ತೆ . ಹಾಗಾಯಿತು ನನ್ನ ಫಿನ್ನಿಶ್ ನೆನಪು . ಎಲ್ಲಿ ಬೀಪ್ ಬೀಪ್ ಕೇಳಿದರೂ , ಡೆಟಾಲ್ ವಾಸನೆ ಬ೦ದರೂ ಫಿನ್ಲೆ೦ಡಿನ ರಸ್ತೆ , ನೀಟಾದ ಮನೆ , ಆಫೀಸುಗಳ ಒಳಾ೦ಗಣ ನೆನಪಾಗುತ್ತಿತ್ತು . ಆದ್ದರಿ೦ದ ಒ೦ದು ಉಪಾಯ ಹೂಡಿದ್ದೆ . ಅಲ್ಲಿಗೆ ಒ೦ದೈದಾರು ಮೈಸೂರು ಸ್ಯಾ೦ಡಲ್ ಸೋಪು ತೆಗೆದುಕೊ೦ಡು ಹೋಗಿದ್ದೆ . ಅದನ್ನು ಸ್ನಾನದ ಸಮಯಕ್ಕೆ ಮೈಗೆ ಹಚ್ಚಿಕೊ೦ಡಾಗಲೆಲ್ಲ ನನ್ನೂರಿನ ನೆನಪು ! ತೊ೦ದರೆ ಇದ್ದದ್ದು ಯಾವಾಗೆ೦ದರೆ ಒಮ್ಮೊಮ್ಮೊ , ರಜಾದಿನಗಳಲ್ಲಿ ನನ್ನೂರು ತು೦ಬ ನೆನಪಾಗಿಬಿಟ್ಟರೆ ಮತ್ತೆ ಮತ್ತೆ ಸೋಪು ಹಚ್ಚಿ ಸ್ನಾನ ಮಾಡಬೇಕಾಗುತ್ತಿತ್ತು ! ಅದಕ್ಕೊ೦ದು ಉಪಾಯ ಮಾಡಿದೆ . ಊರು ತು೦ಬ ನೆನಪಾದಾಗ ಮೈ . ಸ್ಯಾ೦ . ಸೋಪಿನಿ೦ದ ಸ್ನಾನ , ಸ್ವಲ್ಪ ನೆನಪಾದಾಗ ಅದನ್ನು ನನ್ನ ಮೊಗಿನ ಹತ್ತಿರ ಹಿಡಿಯುತ್ತಿದ್ದೆ . ಅದರಿ೦ದ ಸ್ನಾನ ಮಾಡಿದಾಗ ಊರಿನ ಓಣಿ ಓಣಿಯೊ ನೆನಪಾಗುತ್ತಿತ್ತು . ಕೇವಲ ವಾಸನೆ ನೋಡಿದಾಗ ನನ್ನ ರೂಮು ಮಾತ್ರ ನೆನಪಾಗುತ್ತಿತ್ತು ! ! * ಊರು ತು೦ಬಾ ಇಟ್ಟಿಗೆಯಾಕಾರದ ಕಲ್ಲು ಚಪ್ಪಡಿಯ೦ತಹ ರಸ್ತೆಗಳು . ನಮ್ಮ ರಾಜಕಾರಣಿಗಳು ರಸ್ತೆ ಕಾಮಗಾರಿಗಳಲ್ಲಿ ' ನೈಸಾಗಿ ' ಕಾಸು ಮಾಡುವಾಸೆಯಿ೦ದ ಅಲ್ಲೇನಾದರೂ ಕಾ೦ಟ್ರಾಕ್ಟ್ ತೆಗೆದುಕೊ೦ಡಿದ್ದರೆ ಆ ಕಲ್ಲಿನಲ್ಲೇ ತಲೆ ತಲೆ ಚಚ್ಚಿಕೊಳ್ಳಬೇಕಾಗುತ್ತದೆ . ಸುಮಾರು ಹತ್ತಿಪ್ಪತ್ತು ವರ್ಷಕಾಲ ಬಾಳಿಕೆ ಬರುವ೦ತಹದ್ದು . ಗಾಡಿಗಳು ಲೈಟಾಗಿ ಬ್ರೇಕ್ ಹಾಕಿದರೂ ಯಾವುದೋ ಗಾಡಿ ಮತ್ಯಾವುದಕ್ಕೋ ಗುದ್ದಿತೆ೦ಬ ಭೀತಿ ವೀಕ್ಷಕರಲ್ಲಿ . ಅದೊ೦ತರಾ ಕಟ್ಟೆಚ್ಚರ ! " ನಿಮಗೆ ಪ್ರತಿ ಗಾಡಿ ಗೇರ್ ಬದಲಿಸಿದಾಗಲೂ ಆಕ್ಸಿಡೆ೦ಟ್ ಆದ೦ತೆ ಸದ್ದಾಗಿ , ತಲೆ ಕೆಡುವುದಿಲ್ಲವೆ ? " ಎ೦ದು ಕೇಳಿದ್ದೆ ಗೆಳೆಯ ಸಕ್ಕರಿ ವಯಕ್ಕರನ್ನು . " ಹಾಗಲ್ಲ . ಊರಿಗೆ ಹೊಸಬರಾದ್ದರಿ೦ದ ಹಾಗೆ ಕೇಳುತ್ತದೆ . ಕ್ರಮೇಣ ಅದು ಕ್ಷೀಣಿಸುತ್ತದೆ " ಎ೦ದಿದ್ದರವರು . " ಅರ್ಥವಾಗಲಿಲ್ಲ " " ಕ್ರಮೇಣ ನಿಮ್ಮ ಕಿವಿಯ ತಮ್ಮಟೆ ತಮಟೆ ಬಾರಿಸುವುದನ್ನು ಕಡಿಮೆ ಮಾಡುತ್ತದೆ " ಎ೦ದಿದ್ದರು . ಮಧ್ಯರಾತ್ರಿಯಲ್ಲಿ ಹೆ೦ಗಸರು , ಹುಡುಗಿಯರು - - ಅಲ್ಲಲ್ಲ ಹೆ೦ಗಸೊಬ್ಬಳು , ಹುಡುಗಿಯೊಬ್ಬಳು , ಒಬ್ಬರಾದ ಮೇಲೆ ಒಬ್ಬರ೦ತೆ ' ಧೈರ್ಯವಾಗಿ ' ಅಲ್ಲಿ ಓಡಾಡುವ೦ತೆಯೇ ಇಲ್ಲ ! ಏಕೆ೦ದರೆ ಹಾಗೆ ಓಡಾಡಲು ಧೈರ್ಯದ ಅವಶ್ಯಕಥೆಯೇ ಇಲ್ಲ . ಧರ್ಮವೆ೦ಬ ಹೊಟ್ಟೆಹಸಿವಿನ ತ೦ತ್ರ : ಹೆಣ್ಣೊಬ್ಬಳು ಅಲ್ಲಿ ಮಧ್ಯರಾತ್ರಿಯಲ್ಲೂ ' ಸಹಜವಾಗಿ ' ಓಡಾಡುವುದನ್ನು ಎಲ್ಲರೂ ನೋಡಬಹುದು ! ಒಮ್ಮೆ ಹಾಗೆ ಒಬ್ಬ೦ಟಿಯಾಗಿ ಓಡಾಡುತ್ತಿದ್ದ ಇಬ್ಬರು ಹೆ೦ಗಸರನ್ನು ನೋಡಿದೆ , ಎರಡು ಗ೦ಟೆ ರಾತ್ರಿಯಲ್ಲಿ . ಹತ್ತಿರ ಹೋದರೆ ಅವರುಗಳು ಹೆ೦ಗಸರಲ್ಲ . ಆ ಫಿನ್ನಿಶ್ ಹುಡುಗಿಯರು - ಇಬ್ಬರೂ ಸೀರೆ ಉಟ್ಟಿದ್ದರು ! ಪಕ್ಕ ಹರೇ ರಾಮ ಹರೇ ಕೃಷ್ಣ ಯೊನಿಫಾರ್ಮ ! ಹಲೋ ಹೇಳಿದೆ . ಇಬ್ಬರೂ ಫಿನ್ನಿಶ್ ಆದ್ದರಿ೦ದ ಸ೦ಕೋಚಿಸಿ , ಹರೇಕೃಷ್ಣ ಪ೦ಥದವರಾದ್ದರಿ೦ದ ಧೈರ್ಯವಾಗಿ ನಮಸ್ತೆ ಮಾಡಿದರು . ಗಮನಿಸಿ : ನಾನು , ಭಾರತೀಯ , ಕೃಷ್ಣನ ಕುಲದವನಲ್ಲದಿದ್ದರೂ ( ಅ೦ದರೆ ಸೆರೆಮನೆವಾಸಿ ಎ೦ದು ) " ಹಲೋ " ಹೇಳುತ್ತಿದ್ದರೆ , ಈ ಫಿನ್ನಿಶ್ ಜನ " ನಮಸ್ತೆ " ಎನ್ನುತ್ತಿದ್ದರು ! ಹಿ೦ದಿನ ದಿನದ ಘಟನೆ ನೆನಪಾಯಿತು ನನಗೆ . ಯಾರೋ ಬಾಗಿಲು ತಟ್ಟಿದ್ದರು . ಕದ ತೆಗೆದೆ . ಎದುರಿಗೆ ಮಿಸ್ಟರ್ ಹರೇರಾಮ ಹರೇಕೃಷ್ಣ ! " ಏನು ? " " ನೀನು ಭಾರತೀಯನಲ್ಲವೆ ? " " ಯಾಕೆ ನಾನು ಶ್ರೀಕೃಷ್ಣನ ಕಲರ್ ಟೋನ್ ಮತ್ತು ಫೀಚರ್ ಇರುವುದು ತಿಳಿಯದೆ ? " ಎ೦ದೆ . " ಪ್ರಸಾದ ತೆಗೆದುಕೋ . ಇಪ್ಪತ್ತು ಯೊರೋ ಬೆಲೆ " ಎ೦ದ ಗಮನಿಸಿ : ಮುನ್ನೂರು ಸ್ಟುಡಿಯೋಗಳಿರುವ ಕೆಬಲ್ - ಫ್ಯಾಕ್ಟರಿಯಲ್ಲಿ , ಐದನೇ ಮಹಡಿಯ ಅರವತ್ತು ಸ್ಟುಡಿಯೋಗಳಲ್ಲಿ ಇರುವ ಒಬ್ಬನೇ ಭಾರತೀಯನ ಬಳಿಗೆ , ಭಾರತದ ಧರ್ಮದ ಫಿನ್ನಿಶ್ ಪ್ರಚಾರಕ ಪ್ರಸಾದವನ್ನು ಮಾರಲು ಬ೦ದುನಿ೦ತಿದ್ದಾನೆ . ಎಲ್ಲಾ ಕೃಷ್ಣಲೀಲೆ ಎ೦ದುಕೊ೦ಡೆ ! " ಪ್ರಸಾದದ ಅರ್ಥವೆ೦ದರೆ ಅದನ್ನು ಮಾರಬಾರದೆ೦ದು " ಎ೦ದೆ . " ನಿನಗೆ ಊಟ ಬೇಕಾದರೆ ನಮ್ಮ ಟೆ೦ಪಲ್ಲಿಗೆ ಬಾ . ಅಲ್ಲಿ ಬಿಟ್ಟಿ ಊಟ " ಎ೦ದ . " ಎ೦ಟ್ರಿ ಫೀ ಎಷ್ಟು ? " ಎ೦ದು ಆತನ ಕೈ ಕುಲುಕಲು ಮು೦ದೆ ಚಾಚಿದೆ . " ಹಾಗೇನಿಲ್ಲ . ನನ್ನ ಹೆಸರು ಸ್ವಾಮಿ ಗೋವಿ೦ದ " ಎ೦ದು ಕೈ ಮುಗಿದ ! " ನಿನ್ನ ಹೆಸರು ಮಿಕ್ಕೋ ಅಥವ ಪೆಕ್ಕ ಇರಬೇಕು " " ಅದು ಪೂರ್ವಾಶ್ರಮದ್ದು " ಎ೦ದು ಆಹ್ವಾನ ನೀಡಿ ಹೊರಟುಹೋದ . ಆತನ ಟೆ೦ಪಲ್ ಭಾರತೀಯ ನಿರುದ್ಯೋಗಿಗಳಿಗೆ ಅನ್ನಪೂರ್ಣೇಶ್ವರಿ . ಹೊರಗಿನಿ೦ದ ಅದೊ೦ದು ಅಪಾರ್ಟ್‌ಮೆ೦ಟೆ ಅಷ್ಟೇ . ಒ೦ದೇ ತೊಡಕೆ೦ದರೆ ಎಷ್ಟೇ ಹಸಿವಿದ್ದರೂ ಕೃಷ್ಣ ಭಜನೆ ಮಾಡಬೇಕು , ಒ೦ದರ್ಧ ಗ೦ಟೆ ಕಾಲ - - ಗ೦ಟಲಿನ ಊಟದ ಕೊಳವೆ ತಿನ್ನುವ ಕ್ರಿಯೆಗೆ ಅಣಿಯಾಗಲೆ೦ದು . " ಇದನ್ನೇ ಫೋರ್ - ಪ್ಲೇ ಅನ್ನುವುದು " ಎ೦ದು ಹೇಳಿ ಭಕ್ತ - ಗೆಳೆಯ ಗುರುಬಸುವಲುವಿನ ಉಸಿರುಗಟ್ಟುವ೦ತೆ ಮಾಡಿದ್ದೆ . " ಶಾ೦ತ೦ , ಪಾಪ೦ " ಎ೦ದಿದ್ದ . " ರಾಮಭಕ್ತ ಗಾ೦ಧಿ ಸಹ ಮಸಾಲೆ ಊಟ ಮತ್ತು ಲೈ೦ಗಿಕತೆಯನ್ನು ಒ೦ದೇ ಎ೦ಬ೦ತೆ ಪರಿಗಣಿಸಿರುವುದು ಗೊತ್ತಿಲ್ಲವೆ ? " ಎ೦ದೆ . ( ಓದಿ : ಸುಧೀರ್ ಕಾಕರ್ ಅವರ ಲೇಖನ " ಗಾ೦ಧಿ ಮತ್ತು ಹೆ೦ಗಸು " ) ಗುರುಬಸುವಲು ಹತಾಶನಾಗಿ " ಗೋವಿ೦ದ ಗೋವಿ೦ದ " ಎ೦ದ . ಸ್ವಾಮಿ ಗೋವಿ೦ದ ತಿರುಗಿ ನೋಡಿದ . ನಾನು ಇಡೀ ಪ್ರಕರಣವನ್ನು ಬಿಡಿಸಿ ಹೇಳಿದೆ . " ಊಟಕ್ಕೆ ಮು೦ಚಿನ ಭಜನೆಯನ್ನು ಕನ್ನಡದಲ್ಲಿ ' ಫೋರ್‍ಪ್ಲೇ ' ಅ೦ತಲೂ , ಪ್ರಸಾದ - ಊಟದ ನ೦ತರದ ಭಜನೆಯನ್ನು ' ಆಫ್ಟರ್‍ಪ್ಲೇ ' ಅ೦ತಲೂ ಕರೆಯುತ್ತೇವೆ " ಎ೦ದೆ . ತೆಲುಗ ಗುರುಬಸುವಲು ಹಠಕ್ಕೆ ಬಿದ್ದ , " ಆ ನಿರ್ಧಿಷ್ಟ ಕನ್ನಡ ಪದಗಳೇನು ಹೇಳು . ನನಗೂ ಕನ್ನಡ ತಿಳಿಯುತ್ತೆ " ಎ೦ದ . " ಪೂರ್ವ - ಭೋಜನ - ' ಕೂಟ ' ಮತ್ತು ' ಉತ್ತರ - ಭೋಜನ - ಕೂಟ " ಎ೦ದೆ ಬಹಳ ಕಾನ್ಫಿಡೆನ್ಸಿನಿ೦ದ . ಗುರುಬಸವಲು ತೆಲುಗಿನಲ್ಲೇ ಬಯ್ದುಬಿಟ್ಟ . " ನೂವು ಇ೦ಕೊಕ್ಟ್ ಸಾರಿ ಇಕ್ಕಡಿಕೇಮನಾ ವಸ್ತೇ ಎಕ್ಕಡ ತೀಸ್ಕೊ೦ಡ್ ತೊ೦ತಾನ್ " ಅ೦ತ ( ಟ್ರಾನ್ಸ್‍ಕ್ರಿಪ್ಶನ್ ನನ್ನದು ) . " ಕನ್ನಡದ ಶ್ರೀಕೃಷ್ಣನ ಮ೦ತ್ರಗಳ ಬಗ್ಗೆ ಗಹನವಾದ ವೈಚಾರಿಕ , ಸಾ೦ಸ್ಕೃತಿಕ ಚಿ೦ತನೆ ನಡೆಸುತ್ತಿದ್ದೇವೆ " ಎ೦ದು ಹೇಳಿದೆ ಸ್ವಾಮಿ ಗೋವಿ೦ದನಿಗೆ . " ಗೋವಿ೦ದಾ , ಗೋವಿ೦ದ " ಎ೦ದ ಗುರುಬಸುವಲು , ಊಟದ ಮು೦ಚಿನ ' ಫೋರ್‍ಪ್ಲೇ ' ಯನ್ನು ಅಭ್ಯಸಿಸುವವನ೦ತೆ ! * ಹೆಲ್ಸಿ೦ಕಿಯಲ್ಲಿ ಯಾವ ಮೊಲೆಗೇ ಹೋಗಿ ಅಲ್ಲೊ೦ದು ಸದ್ದು ನಿರ೦ತರ . ಸಮುದ್ರವಿದ್ದರೂ ಅದು ನಾಟಿ ಸಮುದ್ರವಲ್ಲ , ಕಟ್ಟಿಹಾಕಲಾಗಿರುವ೦ತಹದ್ದು . ಸೈಲೆ೦ಟ್ - ಸಮುದ್ರ ! ಕೊಕ್ಕರೆಗಳು ಮಾತ್ರ ಯಾವಾಗಲೂ ಇರುತ್ತವೆ , ಸದ್ದು ಮಾಡುತ್ತವೆ . ನಮ್ಮಲ್ಲಿನ ಮೈಸೂರು ಸ್ಯಾ೦ಡಲ್ ಸೋಪಿನ ಕೆಲಸ , ಅ೦ದರೆ ಬಾಲ್ಯವನ್ನು ನೆನಪಿಸುವುದನ್ನು ಆ ಕೊಕ್ಕರೆಗಳು ಮಾಡುತ್ತವೆ ! ಫಿನ್ಲೆ೦ಡಿನ ಉತ್ತರ ಭಾಗವ೦ತೂ ಆದಿಮಾನವರ ಕಾಲದಲ್ಲಿ ಮನುಷ್ಯರ ಅಥವ ಅವರಿಲ್ಲದ ಪರಿಸ್ಥಿತಿ ಹೇಗಿತ್ತು ಎ೦ದು ನೈಜವಾಗಿ ಒ೦ದು ಮ್ಯೊಸಿಯ೦ ನಿರ್ಮಿಸಿದ೦ತಿದೆ . ಐವತ್ತು ಜನ ಮೊರು ತಿ೦ಗಳಲ್ಲಿ ನೂರು ಕಿಲೋಮೀಟರು ರೈಲ್ವೇ ಹಳಿ ಹಾಕುವುದೆ೦ದರೇನು ಸಾಮಾನ್ಯವೆ ? ಆದರೆ ಒ೦ದ೦ತೂ ನಿಜ . ಜನ , ಅಲ್ಲಿನ ಜನ , ಅಲ್ಲಿರುವ ಬದಲು ಇನ್ನೆಲ್ಲಿಗೋ ಹೋಗಲುದ್ಯುಕ್ತವಾಗಿರುತ್ತಾರೆ . ಲ೦ಡನ್ , ಪ್ಯಾರಿಸ್ , ನ್ಯೂಯಾರ್ಕ್‍ಗೆ ' ಹೋಗುವ ' ತವಕದಲ್ಲೇ ಇರುತ್ತಾರೆ . ಅವರಲ್ಲಿ೦ದ ವಾಪಸ್ ಸಾಗಹಾಕುತ್ತಾರೆ . ಮತ್ತೆ ಇವರು ತವರು ಮನೆಯ ನೆನಪಾದ ಹೊಸವಧುವಿನ೦ತೆ ಹೆ೦ಗಸು - ಗ೦ಡಸರೆಲ್ಲ ಹೋಗುತ್ತಲೇ ಇರುತ್ತಾರೆ . ನಲ್ವತ್ತು ವರ್ಷದ ಹಿ೦ದೆ ದೇಶದ ನಲ್ವತ್ತು ಶೇಕಡ ಜನಸಮುದಾಯ ಇಡೀ ದೇಶವನ್ನೇ ತೊರೆದು ವಲಸೆ ಹೋದದ್ದನ್ನು ಎಲ್ಲಾದರೂ ಯಾವಾಗಾದರೂ ಕೇಳಿದ್ದಿರ ? ಫಿನ್ನಿಶ್ ದೇಶದ ಇತಿಹಾಸವನ್ನು ಕೇಳಿದರೆ ಅ೦ತಹ ವಿಷಯ ನಿಮಗೆ ಕೇಳಿಸುತ್ತದೆ ! - - ಎಚ್ . ಎ . ಅನಿಲ್ ಕುಮಾರ್
ಪುತ್ತೂರು : ಪುತ್ತೂರು ತಾಲೂಕಿನ ಕಾಣಿಯೂರು ಸಮೀಪ ಅಪರಿಚಿತ ಯುವಕನೋರ್ವ ರೈಲಿ ನಡಿಗೆ ಬಿದ್ದು ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ .
ಸೆಪ್ಟೋನ್‌ನ ನೆರೆಯ ಪೌರಗ್ರಾಮವಾದ ಲಿವರ್‌ಪೂಲ್‌ನ ಉತ್ತರಕ್ಕಿರುವ ಐನ್‌ಟ್ರೀ ರೇಸ್‌ಕೋರ್ಸ್ ಸ್ಥಳವು ಪ್ರಸಿದ್ದ ಕುದುರೆ ಓಟದ ಪಂದ್ಯ , ಗ್ರಾಂಡ್ ನ್ಯಾಶನಲ್ ಪಂದ್ಯಗಳಿಗೆ ತಾಯ್ನೆಲವಾಗಿದೆ . ಇದು ಪ್ರತಿ ವರ್ಷ ಎಪ್ರಿಲ್ ತಿಂಗಳಿನಲ್ಲಿ ನಡೆಯುವ ಪ್ರಸಿದ್ದ ಅಂತರಾಷ್ಟ್ರೀಯ ಕುದುರೆ ಓಟದ ಪಂದ್ಯ ಸ್ಥಳವಾಗಿರುತ್ತದೆ . ಕುದುರೆ ರೇಸಿಗೆ ಹೊರತಾಗಿ , 1950 ಮತ್ತು 1960ರ ಬ್ರಿಟಿಷ್ ಗ್ರಾಂಡ್ ಪ್ರಿಕ್ಸ್ ಒಳಗೊಂಡು , ವಾಹನಗಳ ರೇಸು ( ಓಟದ ಪಂದ್ಯ ) ಕೂಡಾ ಆಯೋಜನೆಗೊಂಡಿರುತ್ತದೆ .
ಅಕ್ಕರ ಕಡಮೆ ಇದೆ ಅಂದ್ರೆ ಅದು ಕ್ಲಾಸಿಕಲ್ ಅಲ್ಲ ಅಂದ್‌ರೆ ಲ್ಯಾಟಿನ್ ಗ್ರೀಕ್ಗಳ ಕತೆ ಏನು ? ಅಕ್ಕರಗಳು ಎಶ್ಟು ಯಾವುವು ಇರಬೇಕು ಅನ್ನೋದು ಆ ಆ ನುಡಿಗಳ ಉಲಿಕೆphonology ತೀರ್ಮಾನ ಮಾಡ್ತದೆ . . ಕನ್ನಡದ ಉಲಿಕೆಯಂತ ಕನ್ನಡಕ್ಕೆ ೨೮ ಅಕ್ಕರಗಳು ಸಾಕು . . ಆದರೆ ಸಂಸ್ಕೃತ ಅಕ್ಷರಮಾಲೆಯ ಅನುಕರಣೆಯಾಗಿ ನಮ್ಮ ಕನ್ನಡದ ಅಕ್ಷರಮಾಲೆ ಇರುವುದರಿಂದ ಅದರಲ್ಲಿ ಮಹಾಪ್ರಾಣಗಳು ಮುಂತಾದವು ಉಲಿಕೆಗೆ ಹೆಚ್ಚುವರಿಯಾಗಿವೆ . . ಆದರೆ . . ಇದು ಯಾವುದು ಕ್ಲಾಸಿಕಲ್ ನುಡಿ ಅನ್ನೋದಕ್ಕೆ ಗುಣಗಳಲ್ಲ . . . ನಮ್ಮ ಕೇಂದ್ರ ಸರಕಾರ ಇಟ್ಟಿರುವ ಮೂರು ಗುಣಗಳೂ ೧ ) ಹಳಮೆ ೨ ) ತನ್ನದೇ ಆದ ಹುಟ್ಟು ಬೆಳವಣಿಗೆ ೩ ) ತನ್ನದೇ ಆ ಸಾಹಿತ್ಯ ಶಯ್ಲಿ ? ಹೀಗೇನೋ . . . ಇವೆಲ್ಲ ಕನ್ನಡಕ್ಕೆ ಇದೆ . . .
ನಾನು ಇವತ್ತು ಮೇಲ್ ನಲ್ಲಿ ತಿಳಿಸಿದ ಕೆಲವು ಸಲಹೆಗಳಾದ ನನ್ನ ವಿಸ್ಮಯದಲ್ಲಿ " ನನ್ನ ಲೆಖನಗಳು " ಸೆಕ್ಶನ್ ಕಾಣುವ ಬಗ್ಗೆ ಗಮನ ಕೊಡಿ . . ಇನ್ನೊಂದು ಸಲಹೆ . . . " ನನ್ನ ವಿಸ್ಮಯ " ದಲ್ಲಿ ನಾನು ಬರೆದ ವಿಶಯಗಳು ಬಿಟ್ಟು ಉಳಿದವು ನಮಗೆ ಅಥವಾ ನಮ್ಮ ಸ್ನೇಹಿತರಿಗೆ ಕಾಣಿಸಬಾರದು . . . ಈಗ ನಾನು ಬರೆಯದ ಕಾಲಮ್ ಖಾಲಿ ಖಾಲಿ ಯಾಗಿ ಕಾಣಿಸುತ್ತದೆ , , ಅದರ ಬದಲು ನಾನು ಬರೆದ ವಿಶಯನಗಳು ಮಾತ್ರ ಕಾಣಿಸಿದರೆ ಅದು ಚೆನ್ನಾಗಿ ಕಾಣಿಸುತ್ತದೆ . . . ಮುಂದೆ ಏನಾದರೂ ತೊಂದರೆ ಕಾಣಿಸಿಕೊಂಡರೆ ಮತ್ತೆ ನಿಮ್ಮ ತಲೆಯನ್ನು ತಿನ್ನುತ್ತೇನೆ . ದಯವಿಟ್ಟು ಸಹಿಸಿಕೊಳ್ಳಿ [ / quote ]
ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿನ ತಮ್ಮ ವೃತ್ತಿಜೀವನದಲ್ಲಿ , CEO ಹಾಗೂ ಮುಖ್ಯ ಸಾಫ್ಟ್‌ವೇರ್ ವಿನ್ಯಾಸಕನಂತಹ ಉನ್ನತ ಸ್ಥಾನಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ . ಅಲ್ಲದೆ ಕಂಪನಿಯ ಸಾಮಾನ್ಯ ಸ್ಟಾಕ್‌ನ ಪೈಕಿ ಶೇ 8ಕ್ಕಿಂತ ಹೆಚ್ಚಿನ ಷೇರುಗಳನ್ನು ಹೊಂದಿರುವ ಮೈಕ್ರೋಸಾಫ್ಟ್‌ನ ಅತಿಡೊಡ್ಡ ಏಕವ್ಯಕ್ತಿ ಷೇರುದಾರರೆನಿಸಿಕೊಂಡಿದ್ದಾರೆ . [ ೫ ] ಹಲವಾರು ಪುಸ್ತಕಗಳಿಗೆ ಅವರು ಲೇಖಕ ಇಲ್ಲವೇ ಸಹ - ಲೇಖಕರಾಗಿದ್ದಾರೆ .
ಮನಸ್ವಿನಿ , ಇದೇನು ಒಗಟು ? ಹೇಗೆ ಬಿಡಿಸೋದು ? ನಿಮ್ಮೂರಲ್ಲಿ ನೀರು ಕಡಿಮೆಯಾದರೆ , ಕಣ್ಣೀರು ಬರಿಸೋ ಕವನಗಳನ್ನು ಹಾಕಿದ್ರಾಯ್ತು ಅಂತ ನಿರ್ಧಾರ ಮಾಡಿದ್ದೇಕೆ ?
` . . . ಮೂಲಗಳ ಪ್ರಕಾರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಯ ಮತಗಳ ಮೇಲೆ ಕಣ್ಣು ಹಾಕಿರುವ ಸರ್ಕಾರ ಅದೇ ಜನಾಂಗಕ್ಕೆ ಸೇರಿದ ಅಧಿಕಾರಿ . . . . ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳದಿರಲು ನಿರ್ಧರಿಸಿದೆ '
ಆಶ್ಚರ್ಯವೆಂದರೆ ಇದ್ದಕ್ಕಿದ್ದಂತೆ ಹ್ಯಾಟ್‌ನೊಳಕ್ಕೆ ನಾಣ್ಯಗಳು ಬೀಳಲಾರಂಭಿಸುತ್ತವೆ . ಸದಾ ಅದೇ ದಾರಿಯಲ್ಲಿ ಸಾಗುತ್ತಿದ್ದರೂ ಅದುವರೆಗೆ ಎಂದೂ ಸಹಾಯ ಮಾಡದ ದಾರಿಹೋಕರೂ ಚಿಲ್ಲರೆ ಹಾಕಲಾರಂಭಿಸುತ್ತಾರೆ ! ಒಂದೆಡೆ ಹುಡುಗನ ಸಂತಸಕ್ಕೆ ಪಾರವೇ ಇಲ್ಲ . ಇನ್ನೊಂದೆಡೆ ಕುತೂಹಲ . ಒಮ್ಮಿಂದೊಮ್ಮೆಲೆ ಇಂತಹ ಬದಲಾವಣೆ ಹೇಗೆ ಎಂಬ ಪ್ರಶ್ನೆ . ಹೀಗೆ ಚಿಂತಿಸುತ್ತಿರುವಾಗಲೇ ಸಮಯ ಉರುಳಿ ಸಂಜೆಯಾಗುತ್ತದೆ . ಇನ್ನೇನು ಮನೆಯತ್ತ ತೆರಳಬೇಕು . ಅಷ್ಟರಲ್ಲಿ ಹೆಜ್ಜೆ ಸಪ್ಪಳ ಕೇಳಲಾರಂಭಿಸುತ್ತದೆ . ಅದು ಬೆಳಗ್ಗೆ ಬೋರ್ಡ್ ಹಿಂಬದಿ ಮೇಲೆ ಏನನ್ನೋ ಬರೆದು ತಿರುಗಿಸಿಟ್ಟ ವ್ಯಕ್ತಿಯದ್ದೇ ಎಂಬುದು ಹುಡುಗನಿಗೆ ಗೊತ್ತಾಗುತ್ತದೆ . " ಬೆಳಗ್ಗೆ ಬೋರ್ಡ್ ಬದಲಿಸಿದ್ದು ನೀವೇ ಅಲ್ಲವೆ ? " ಎಂದು ಪ್ರಶ್ನಿಸುತ್ತಾನೆ . ' ಹೌದು " ಎಂಬ ಉತ್ತರ ಬರುತ್ತದೆ . ಹಾಗಂತ ಆ ಹುಡುಗ ಸುಮ್ಮನಾಗುವುದಿಲ್ಲ . ' ಅದರ ಮೇಲೆ ನೀವು ಬರೆದಿದ್ದಾದರೂ ಏನು ? " ಎಂದು ಮರು ಪ್ರಶ್ನೆ ಹಾಕುತ್ತಾನೆ . ' I only wrote the truth . " ಎಂದು ಉತ್ತರಿಸುತ್ತಾನೆ ಆ ಅಧಿಕಾರಿ . ' ನಾನು ಕುರುಡ , ದಯವಿಟ್ಟು ಸಹಾಯ ಮಾಡಿ " ಅಂತ ನಾನು ಬರೆದಿದ್ದೂ ಸತ್ಯವನ್ನೇ ಅಲ್ಲವೆ ? ಎಂದು ಹುಡುಗ ಮತ್ತೆ ಪ್ರಶ್ನಿಸುತ್ತಾನೆ . ಅದಕ್ಕೆ , " ನೀನು ಬರೆದಿದ್ದೂ ಸತ್ಯವೇ . ಆದರೆ ಆ ಸತ್ಯವನ್ನು ನಾನು ಸ್ವಲ್ಪ ಭಿನ್ನವಾಗಿ ಬರೆದೆನಷ್ಟೇ " ಎನ್ನುತ್ತಾನೆ ಅಧಿಕಾರಿ .
ಟಿಪಾಯ್ ಮೇಲೆ ಲಕೋಟೆಯೊಂದಿರುತ್ತೆ ಅದರಲ್ಲಿ ವಾಣಿಯ ಎಂಗೇಜ್ ಮೆಂಟ್ ರಿಂಗ್ ಇರುತ್ತೆ .
ಫೈರ್ ಫಾಕ್ಸ್ ಬ್ರೌಸರ್ ಅನ್ನು WYSIWYG editor ಆಗಿ ಬಳಸುವುದು ಹೇಗೆ ?
ನೀವಿದನ್ನು ಇಷ್ಟು ಬೇಗ ಬರೆಯುತ್ತೀರಿ ಅಂದುಕೊಂಡಿರಲಿಲ್ಲ . ಈ ಮುಂದಿನದನ್ನು ಮೊದಲೇ ನಿಮ್ಮ ಗಮನಕ್ಕೆ ತರಬೇಕೆಂದಿದ್ದೆ .
" ರೀ ಇಲ್ಲಿ ನೋಡ್ರಿ ಕಂಪನಿಗಳೂ ಕೆಲಸಗಾರರಿಗೆ ಲವ್ ಲೆಟರ ಕೊಡ್ತಿವೆ , ಪಿಂಕ್ ಸ್ಲಿಪ್ ಅಂತೆ " ಅಂತ ಚೀರಿದ್ಲು , ಕುಡಿಯುತ್ತಿದ್ದ ನೀರು ಗಂಟಲಿನಲ್ಲೇ ಸಿಕ್ಕಿಕೊಂಡು ಕೆಮ್ಮುತ್ತ ಹೊರಗೋಡಿ ಬಂದೆ . . . " ಲೇ ಎನೇ ಹೇಳ್ತಿದೀಯಾ " ಅಂದ್ರೆ " ಅದೇ ಪಿಂಕ್ ಚಡ್ಡಿ ಅಂತ ಇಷ್ಟು ದಿನಾ ಅದೇನೊ ಲವರ್ಸ್ ಡೇ ವಿರುಧ್ಧ ಮಾಡಿದರಲ್ಲ ಹಾಗೆ ಪಿಂಕ್ ಸ್ಲಿಪ್ ಅಂತ ಎನೋ ಮಾಡ್ತಿದಾರ್ರೀ " ಅಂದ್ಲು . " ಹೂಂ ಪ್ರೀತಿಯಿಂದ ಮನೆಗೆ ಹೋಗಿ ಅಂತ ಹೇಳ್ತಿದಾರೆ " ಅಂದೆ " ಒಹ್ ರಜೇನಾ , ನಿಮಗೂ ಸಿಗುತ್ತಾ " ಅಂದ್ಲು " ಹೂಂ ಅದೊಂಥರಾ ಪರಮನಂಟ್ ರಜೆ " ಅಂದೆ . ಕೈಲಿದ್ದ ಪತ್ರಿಕೆ ಅಲ್ಲೇ ಬೀಸಾಡಿ ಹತ್ತಿರ ಬಂದು ಕೂತು " ಎನ್ರೀ ಇದು , ನನಗೊಂದೂ ಅರ್ಥ ಆಗ್ತಿಲ್ಲ " ಅಂದ್ಲು . " ಎನ್ ಮಾಡೋದು ಕೆಲ್ಸ ಇಲ್ಲ ಮನೆಗೆ ಹೊಗಿ ಅಂತ ಹೊರದಬ್ಬತಾ ಇದಾರೆ , ಅದೇ ಪಿಂಕ ಸ್ಲಿಪ್ಪು ಅಂದೆ " " ಹಾಳಾದೋರಿಗೆ , ಕಲರು ಪಿಂಕೇ ಬೇಕಿತ್ತಾ , ರೆಡ್ಡು ಸ್ಲಿಪ್ಪು ಅನ್ನೊಕೇನಾಗಿತ್ತು " ಅಂತ ಬೈಕೊಂಡು ಒಳಗೆ ಹೋದವಳು ಮತ್ತೆ ಬಂದ್ಲು , " ಅಂದ ಹಾಗೆ ಕಂಪನಿಗಳಿಗೆ ಇಷ್ಟೊಂದು ಪ್ರೀತಿ ಯಾಕೆ ಬಂತು ' ಅಂತ ಅಂದಿದ್ದಕ್ಕೆ " ಅದೊಂದು ದೊಡ್ಡ ಕಥೆ ಬಿಡು " ಅಂದ್ರೆ " ಒಹ್ ಕಥೇನಾ , ರೀ ಹೇಳ್ರಿ ಅದನ್ನ ಪ್ಲೀಜ " ಅಂಥ ಗೋಗರೆದಳು . " ಮುಂದೆ ಎನ್ ಕಥೆ ಅಂತ ನಾ ಕೂತಿದ್ದರೆ ಇವಳದೊಂದು ಕಥೆಯಾಯ್ತು " ಅಂತ ಬೈದಿದ್ದಕ್ಕೆ ಮುನಿಸಿಕೊಂಡು ಕೂತ್ಲು . ಇನ್ನು ಹೇಳದಿದ್ರೆ ಅಷ್ಟೇ ಇವಳು ಪಟ್ಟು ಸಡಲಿಸಲೊಳ್ಳಲು ಅಂತ " ಆಯ್ತು ಹೇಳ್ತೀನಿ ಕೇಳು " ಅಂತಿದ್ದಂಗೆ ಮಗ್ಗಲು ಬಂದು ಮಗುವಿನಂತೆ ಕೂತು ಕೂತಹಲಭರಿತ ಕಣ್ಣುಗಳನ್ನು ನನ್ನೆಡೆಗೆ ನೆಟ್ಟಳು . " ಒಂದಾನೊಂದು ಕಾಲದಲ್ಲಿ . . . " ಶುರುವಿಟ್ಟುಕೊಳ್ಳುತ್ತಿದ್ದಂತೆ " ರೀ ಕೆಲಸದ ಕಥೆ ಹೇಳು ಅಂದ್ರೆ ಇದೇನ್ರಿ ಅಡಗೂಲಜ್ಜಿ ಕಥೆ ಹೇಳ್ತಿದೀರಾ " ಅಂತ ಬಾಯಿ ಬಿಟ್ಲು . " ನಾ ಹೇಳಲ್ಲ ಹೋಗೇ , ನಡುನಡುವೆ ಬಾಯಿ ಹಾಕ್ತಿಯಾ ನೀನು , ಕಥೆ ಅಂದ್ರೆ ಒಂದಾನೊಂದು ಕಾಲದಲ್ಲೇ ಶುರುವಾಗೊದು " ಅಂತ ಸಿಡುಕಿದೆ . " ಪ್ಲೀಜ್ ಪ್ಲೀಜ ಹೇಳಿ " ಅಂತ ಕೊರಳಿಗೆ ಜೋತು ಬಿದ್ಲು . ಹೀಗೊಮ್ಮೆ ಸಿಟ್ಟಿನಿಂದ ನೋಡಿದೆ . . . " ಒಕೇ , ಒಕೇ , ನಡುವೆ ಮಾತಾಡಲ್ಲ , ಆಮೇಲೆ ಮಾತಾಡ್ತೀನಿ , " ಅಂತ ಬಾಯಿ ಮೇಲೆ ಬಟ್ಟಿಟ್ಟುಕೊಂಡು ಕೂತ್ಲು . ಅದೊಂದು ಹಳ್ಳಿಯೂರು , ಹಸು ಕರುಗಳು ಹಾಯಾಗಿ ಒಡಾಡಿಕೊಂಡಿದ್ದವು , ಹಸಿರು ಮೇಯಲು ಅಷ್ಟಕ್ಕಷ್ಟೇ ಇತ್ತು , ಮಳೆ ಬಂದರೆ ಜೊಳ ರಾಗಿ ಬೆಳೆದರೆ ಹೆಚ್ಚು , ಊಟ ಒಪ್ಪತ್ತು ಆದರೂ ಚೆನ್ನಾಗಿತ್ತು . ಅದೊಂದು ದಿನ ಹಸಿರು ಕಾನನದೂರಿನಿಂದ ಕೆಲವರು ಬಂದರು , ಇಲ್ಲಿನ ಹಸು ಕರುಗಳು ಚೆನ್ನಾಗಿವೆ , ಚೆನ್ನಾಗಿ ತಿನಿಸಿದರೆ ಹಾಲು ಹೆಚ್ಚು ಕೊಡುತ್ತವೆ , ಅಂದರು . ನಮ್ಮಲ್ಲಿ ಹಸಿರಿದೆ ಹಸುಗಳಿಲ್ಲ , ನಿಮ್ಮ ಹಸುಗಳಿಗೆ ನಾವು ಹಸಿರು ಹುಲ್ಲು ಕೊಡುತ್ತೇವೆ ನಮಗೆ ನಿಮಗೆ ಹಾಲು ಹಂಚಿಕೊಳ್ಳೋಣ ಅಂದರು . ಹಸುಗಳಿಗೂ ಹುಲ್ಲಿನ ಬಗ್ಗೆ ಕೇಳಿ ಬಾಯಲ್ಲಿ ನೀರೂರಿತು , ಒಣ ದಂಟು ಸೊಪ್ಪು ತಿಂದ ದನಗಳು ಹಸಿರು ಹುಲ್ಲು ತಿನ್ನಲು ತುದಿಗಾಲಿನ ಮೇಲೆ ನಿಂತವು . ಒಂದು ದೊಡ್ಡಿ ( ದನದಮನೆ , ದನ ಕರು ಕಟ್ಟುವ ಜಾಗ ) ಶುರುವಾಯಿತು , ಹಸಿರು ಕಾನನದೂರಿನಿಂದ ಹುಲ್ಲು ಬಂತು , ಹುಲ್ಲಿನೊಂದಿಗೆ ಎರಡು ಹಸುಗಳೂ ಬಂದವು . ಅವು ಹುಚ್ಚೆದ್ದು ಹುಲ್ಲು ತಿನ್ನುತ್ತಿದ್ದವು ಹಂಡೆಗಟ್ಟಲೆ ಹಾಲು ಕರೆಯುತ್ತಿದ್ದವು . ಅವನ್ನು ನೋಡಿ ಹಳ್ಳಿಯೂರಿನ ಹಸುಗಳು ಅವ್ವಾಕ್ಕಾದವು . ಹೆದರಿದ ಕೆಲವು ಹಸುಗಳು ದೊಡ್ಡಿ ಸೇರಲಿಲ್ಲ , ಕೆಲವು ಹಸಿರು ಹುಲ್ಲಿನಾಸೆಗೆ ಸೇರಿದವು . ಹಳ್ಳಿಯೂರಿನ ಹಸುಗಳಿಗೆ ಒಂದಿಷ್ಟು ಹುಲ್ಲು ಹಾಕಿದರು ಮೊದಮೊದಲು ಕಡಿಮೆ ಹಾಲು ಕರೆದರೂ , ಬರಬರುತ್ತಿದ್ದಂತೆ ಪೈಪೊಟಿಯಲ್ಲಿ ಹಾಲು ಕರೆಯತೊಡಗಿದವು . ಹಸಿರು ಕಾನನದೂರಿನವರು ಖುಶಿಯಾದರು ಕಡಿಮೆ ಹುಲ್ಲಿಗೆ ಹೆಚ್ಚು ಹಾಲು ಕರೆಯುವ ಹಸುಗಳಿಗೆ ಮೆಲ್ಲನೆ ಮೈ ಸವರಿ ಮತ್ತಷ್ಟು ಹುಲ್ಲು ಸುರಿದರು . ಅವರೆಷ್ಟು ಸುರಿದರೂ ಅದು ಹಸಿರು ಕಾನನದೂರಿನ ಹಸುಗಳಿಗಿಂತ ಕಡಿಮೆಯೇ . ಹಳ್ಳಿಯೂರಿನ ಹಸುಗಳು ಮತ್ತಷ್ಟು ಖುಶಿಯಾಗಿ ಹಾಲು ಕರೆದವು , ಹಸಿರು ಕಾನನದೂರಿನ ಹಸುಗಳು ಎರಡೇ ಎರಡು ಹೊತ್ತು ಸರಿಯಾಗಿ ಹಾಲು ಕರೆದರೆ , ಹಳ್ಳಿಯೂರಿನ ಹಸುಗಳು ಹಗಲು ರಾತ್ರಿಯೆನ್ನದೆ ಹಾಲು ಕರೆದವು . ಅವರು ಮತ್ತಷ್ಟು ಖುಶಿಯಾಗೆ ಒಮ್ಮೊಮ್ಮೆ ಹುಲ್ಲಿನೊಂದಿಗೆ ಧಾನ್ಯವನ್ನೂ ಹಾಕಿದರು ಅದರ ರುಚಿ ಹಚ್ಚಿಸಿದರು , ಧಾನ್ಯ ಬೇರೆ ಸಿಗುತ್ತದೆಂದು ಗೊತ್ತಾಗಿ ಹಸುಗಳು ಮತ್ತಷ್ಟು ಕರೆದವು . ಹಸಿರು ಹುಲ್ಲು , ಧಾನ್ಯ ತಿಂದು ತಿಂದು ದೊಡ್ಡಿಯ ಹಸುಗಳು ದಷ್ಟಪುಷ್ಟವಾದವು , ಅವುಗಳ ನೋಡಿ ಮತ್ತಷ್ಟು ಹಸುಗಳು ದೊಡ್ಡಿ ಸೇರಲು ಬಂದವು , ಹೀಗೇ ಒಂದಿದ್ದ ದೊಡ್ಡಿ ಹತ್ತು ಹದಿನೈದು ದೊಡ್ಡಿಗಳಾದವು . ದೊಡ್ಡಿ ಸೇರುವ ಹಸುಗಳೂ ಹೆಚ್ಚಾದವು , ಹಸುಗಳಿಗೆ ದೊಡ್ಡಿ ಸೇರಲು ಮಾನದಂಡಗಳು ಜಾರಿಗೆ ಬಂದವು ಇಂತಿಷ್ಟು ಹಾಲು ಕರೆದರೆ ಮಾತ್ರ ಸೇರಿ ಅಂತ ಹೇಳಲಾಯ್ತು , ಹಸುಗಳು ಹಾಲು ಕರೆಯುವ ತರಬೇತಿ ಪಡೆಯತೊಡಗಿದವು , ಅದನ್ನು ಕಲಿಸುವ ಹಲವು ತರಬೇತಿ ಸಂಸ್ಥೆಗಳು ತಲೆಯೆತ್ತಿದವು . ಮಾಲೀಕರು ತಮ್ಮ ತಮ್ಮ ಹಸುಗಳನ್ನು ಅಲ್ಲಿ ಸೇರಿಸಿದರು , ಕಡಿಮೆ ಹುಲ್ಲು ತಿಂದು ಹೆಚ್ಚು ಹಾಲು ಕರೆಯುವ ಹಸುಗಳು ತಯ್ಯಾರಾದವು . ಹಸುಗಳು ಹೆಚ್ಚು ಹುಲ್ಲು ಕೊಡುವ ದೊಡ್ಡಿಗೆ ಸೇರತೊಡಗಿದವು , ದೊಡ್ಡಿಗಳು ಪೈಪೊಟಿಗಿಳಿದು ನಾ ಹೆಚ್ಚು ನೀ ಹೆಚ್ಚು ಅಂತ ಹುಲ್ಲು ಕೊಡತೊಡಗಿದರು . ಹಸುಗಳೂ ದೊಡ್ಡಿಯಿಂದ ದೊಡ್ಡಿಗೆ ಜಿಗಿದಾಡಿದವು . ಹಸು ಹಿಡಿದು ಕೊಡುವ ಕಮೀಷನ್ನು ಏಜೆಂಟ್ರು ತಯ್ಯಾರಾದರು , ಹೆಚ್ಚು ಹಾಲು ಕರೆಯುವ ಹಸುಗಳನ್ನು ಹಿಡಿದು ತಂದು ದೊಡ್ಡಿಗೆ ದೂಡಿದರು . ಹಸುಗಳನ್ನು ಹುಲ್ಲುಗಾವಲಿಗೆ , ಹುಲ್ಲುಗಾವಲಿನಿಂದ ದೊಡ್ಡಿಗೆ ಸಾಗಿಸಲು ಗಾಡಿಗಳು ಬಂದವು , ಹಸು ಸಾಗಿಸುವ ಗಾಡಿಗಳ ಮಾಡಿ ಕೆಲವರು ಜೀವನ ಮಾಡಿದರು . ಹಸುಗಳನ್ನು ಅಲಂಕರಿಸಲು ಅಂಗಡಿಗಳು ಬಂದವು , ಅವುಗಳು ಕೋಡುಗಳಿಗೆ ಬಣ್ಣ ಬಳಿದದ್ದೇನು , ಬಾಲದ ಕೂದಲು ಕತ್ತರಿಸಿದ್ದೇನು , ಬಲು ಅಂದದಿ ಅವು ಬಳಕುತ್ತ ನಡೆದದ್ದೇನು . ಹಸುಗಳ ಹಾಲಿನ ಡೇರಿಗಳನ್ನು ಕೆಲವರು ತೆರೆದು ಲಾಭ ಮಾಡಿಕೊಂಡರೆ , ಕೆಲವರು ಹಾಲು ಕರೆದು ಬೇಸತ್ತ ಹಸುಗಳಿಗೆ ಸ್ವಚ್ಛಂದವಾಗಿ ತಿರುಗಾಡಲು ಪಾರ್ಕು ಕಟ್ಟಿದರು . ದೊಡ್ಡಿಯವರೂ ಹಸುಗಳನ್ನು ತಿಂಗಳು ಎರಡು ತಿಂಗಳಿಗೊಮ್ಮೆ ಇಂಥ ಪಾರ್ಕುಗಳಿಗೆ ಕರೆದೊಯ್ದರು . ಹಿರಿ ಹಿರಿ ಹಿಗ್ಗಿದ ಹಸುಗಳು ಇನ್ನಷ್ಟು ಹಾಲು ಕರೆದವು . ಹಸುವಿಗೆ ಆರೋಗ್ಯ ಸರಿಯಿಲ್ಲದಿರೆ ನೋಡುವ ಡಾಕ್ಟರುಗಳು , ಗೆಜ್ಜೆ ಗಂಟೆ ಮಾರುವ ಅಂಗಡಿಗಳು , ಕಾಲಿಗೆ ನಾಲು ಬಡೆಯುವ ಜನರು , ಅವುಗಳಿಗೆ ಕುಡಿಯಲು ನೀರು ಸರಬರಾಜು ಮಾಡಲು ಟ್ಯಾಂಕರುಗಳು , ಕುಣಿಕೆ , ಕಟ್ಟುವ ಹಗ್ಗಗಳ ತಯ್ಯಾರಿಸುವವರು , ಕೊನೆಕೊನೆಗೆ ಅವು ಹಾಕಿದ ಸಗಣಿಯ ಬೆರಣಿ ತಟ್ಟಿ ಲಾಭ ಮಾಡಿಕೊಂಡರು . ಹೀಗೆ ಬೇರೆಯೂರಿಂದ ಮತ್ತಷ್ಟು ಹಸುಗಳು ಬಂದವು , ಆ ಹಸುಗಳು ತಂಗಲು ಇನ್ನಷ್ಟು ದೊಡ್ಡಿಗಳಿಗೆ ಜಾಗ ಮಾರಾಟವಾದವು . ಒಟ್ಟಿನಲ್ಲಿ ಹಸುಗಳ ಹಾಲಿನ ಕ್ರಾಂತಿಯಾಯಿತು , ಸರಕಾರ ಹಾಲಿನ ಮೇಲೆ ಸುಂಕ ಹೇರಿ ತೃಪ್ತಿಪಟ್ಟಿತು , ಕೆಲ ಪೇಪರು , ಪತ್ರಿಕೆಗಳು ಹಸುಗಳನ್ನು ಕೊಂಡಾಡಿದವು . ನಮ್ಮ ಹಸು ಇಷ್ಟು ಹುಲ್ಲು ತಿನ್ನುತ್ತದೆ , ನಮ್ಮದು ಇಷ್ಟು ಹೊರೆ ತಿನ್ನುತ್ತದೆ , ನಮ್ಮದು ಹತ್ತು ಲೀಟರು ಹಾಲು ಕರೆಯುತ್ತದೆ , ಒಹ್ ನಿಮ್ಮದು ಆರೇ ಲೀಟರಾ . . . ಅನ್ನೊ ಮಾತುಗಳು ಹೆಚ್ಚಾದವು ಹಸುಗಳು ಹೆಮ್ಮೆಯಿಂದ ಹಿರಿ ಹಿಗ್ಗಿದವು , ಗೂಳಿಯಂತೆ ಹೂಂಕರಿಸಿದವು , ದೊಡ್ಡಿ ಸೇರದ ಹಸುಗಳ ಮುಂದೆ ಹೊಟ್ಟೆಕಿಚ್ಚುಪಡುವಂತೆ ಒಡಾಡಿದವು . ಕೆಲವು ಹಸುಗಳನ್ನು ಆರಿಸಿ ಹಸಿರು ಕಾನನದೂರಿಗೆ ಕಳಿಸಲಾಯಿತು , ಹಸಿರು ಕಾನನದಲ್ಲಿ ಸುತ್ತಿ ಕೆಲವು ಮರಳಿ ಬಂದರೆ ಕೆಲವು ಅಲ್ಲೇ ಯಾವುದೊ ದೊಡ್ಡಿ ಸೇರ್‍ಇ ಸೆಟಲ್ಲು ಆದವು . ಅಲ್ಲಿ ಹೋಗಿ ಬಂದ ಹಸುಗಳು ಇಲ್ಲಿನ ಹಸುಗಳಿಗೆ ಅದರ ವರ್ಣನೆ ಮಾಡಿದ್ದೇ ಮಾಡಿದ್ದು , ಅಷ್ಟೊಂದು ಝರಿಗಳಿಗೆ , ಜಲಪಾತಗಳಿವೆ ಅಲ್ಲಿ , ಜುಳು ಜುಳು ಹರಿವ ಸ್ಪಟಿಕದಂತೆ ಶುಧ್ದ ನೀರಿನ ಹರಿವುಗಳಿವೆ , ಹಸಿರು ತುಂಬಿ ತುಳುಕುತ್ತಿದೆ , ಹಸಿರು ಬಿಡಿ ಹೂವು ಪುಷ್ಪಗಳ ಬನಗಳಿವೆ , ಬಣ್ಣ ಬಣ್ಣದ ಕಾಮನ ಬಿಲ್ಲು ಕಾಣುತ್ತೆ ಅಂತನ್ನುವ ಹಲವು ಬಣ್ಣದ ಕಥೆಗಳ ಹೇಳಿದವು . ಹಸುಗಳ ಕಣ್ಣ ತುಂಬ ಹಸಿರು ಕಾನನದೂರಿನ ಕನಸುಗಳೆ ತುಂಬಿಕೊಂಡವು . ಹಸುಗಳಿಗೆ ಕಾನನದೂರಿಗೆ ಹೋಗಲು ಕಾನೂನುಗಳದವು , ದೊಡ್ಡಿ ಮಾಲೀಕರು ತಮ್ಮತಮ್ಮ ಹೆಚ್ಚು ಹಾಲು ಕರೆಯುವ ಹಸುಗಳನ್ನು ಸುತ್ತಾಡಿಸಿಕೊಂಡು ಬಂದರು . ಹಳ್ಳಿಯೂರಿನಿಂದ , ಹಸಿರು ಕಾನನದೂರಿಗೆ ದೊಡ್ಡ ದೊಡ್ಡ ಪೈಪುಗಳನ್ನು ಹಾಕಿದರು , ಇಲ್ಲಿ ಹಾಲು ಕರೆದರೆ ಅಲ್ಲಿ ಬೀಳುವಂತೆ ವ್ಯವಸ್ಥೆ ಮಾಡಿದರು . ಅಲ್ಲಿ ಕುಳಿತೆ ಇಲ್ಲಿನ ಹಸುಗಳ ಹಾಲು ಕರೆಯುವಂತೆ ವ್ಯವಸ್ಥೆಗಳಾದವು . ಹಾಲು ಕರೆಯುವ ಮಶೀನುಗಳು ಬಂದವು , ಹುಲ್ಲು ಕತ್ತರಿಸಲು , ಹಂಚಲು , ಎಲ್ಲ ಮಶೀನುಗಳು ಹಸಿರು ಕಾನನದೂರಿನಿಂದ ಬಂದವು . ಎಲ್ಲರೂ ಹಾಲು ಕರೆದರೇ ಹೊರತು ಯಾರೂ ಹುಲ್ಲುಗಾವಲು ಬೆಳೆಸಲಿಲ್ಲ , ಹಾಲು ಕರೆಯುವ ಮಶೀನು ತಂದರೇ ಹೊರತು ತಯಾರಿಸಲಿಲ್ಲ . . . ಹೇಗೊ ಇದ್ದ ಹಳ್ಳಿಯೂರು ಹೇಗೊ ಬದಲಾಗಿ ಹೋಯಿತು . ಹುಲ್ಲು ಬಂದು ಬೀಳುವುದು , ಹಸುಗಳು ಕರೆದ ಹಾಲು ಅಲ್ಲಿಗೆ ಹೋಗುವುದು , ಅಲ್ಲಿಂದ ಮತ್ತೆ ಹಾಲಿನ ಹಲವು ಉತ್ಪನ್ನಗಳಾಗಿ , ಮೊಸರು , ಮಜ್ಜಿಗೆ , ಬೆಣ್ಣೆ ತುಪ್ಪ ಬಂದವು , ಇಲ್ಲೂ ತಯ್ಯಾರಾದವು , ಖೋವ , ಪೇಡೆ , ಕುಂದಾ , ಹಲ್ವಾ , ಹಾಲಿನ ಪುಡಿ , ಕೆನೆ , ಕುಲ್ಫಿಗಳು ಒಂದೊ ಎರಡೊ ಸಾಕಷ್ಟು ಬಂದವು , ಎಲ್ಲರೂ ತಿಂದರು ತೃಪ್ತಿಪಟ್ಟರು . ಬೇಡಿಕೆ ಹೆಚ್ಚಾಯಿತು ಹಸುಗಳು ಹಾಲು ಹೆಚ್ಚು ಹೆಚ್ಚು ಕರೆಯಬೇಕಾಯಿತು , ಹಾಲು ಹಿಂಡಿ ಹೀರಿ ಹಿಪ್ಪೆಯಂತಾದವು , ಬೇರೆ ಗತ್ಯಂತರವಿಲ್ಲದೆ ಒತ್ತಡದಲ್ಲಿ ಹಾಲು ಹಿಂಡಿ , ಹಾಲಿನೊಟ್ಟಿಗೆ ರಕ್ತ ಹಿಂಡಿದವು . ಹಳೆಯ ಹಸುಗಳನ್ನು ಕಸಾಯಿಖಾನೆಗೆ ದೂಡಲಾಯಿತು . ಮತ್ತೆ ಹೊಸ ಹಸುಗಳು ಅಲ್ಲಿ ತುಂಬಿಕೊಂಡವು . ಹೊಸ ಹಸುಗಳೂ ಹುರುಪಿನಿಂದ ಹಾಲು ಕರೆದವು ಕುಣಿದು ಕುಪ್ಪಳಿಸಿದವು , ಜಂಬದಿಂದ ಜಿಗಿದಾಡಿದವು , ಹಸುಗಳ ಹಾರಾಟ ಹೆಚ್ಚಾಯಿತೆಂದು ಹಲವರು ತಗಾದೆ ತೆಗೆದರು , ಹೀಯಾಳಿಸಿದರು , ಹೀಗಳೆದರು , ಕೆಲ ಪತ್ರಿಕೆಗಳೂ ಬರೆದವು ಜರಿದವು . ಹಸಿರು ಕಾನನದೂರಿನಲ್ಲೂ ಹಳ್ಳಿಯೂರಿನ ಹಸುಗಳು ಜಾಸ್ತಿಯಾದವೆಂದೂ , ನಮ್ಮ ಹಸುಗಳಿಗೆ ಹುಲ್ಲಿಲ್ಲ ಅಂತ ಕೂಗು ಕೇಳಿಬಂದವು . ಹೀಗೇ ಎಲ್ಲ ಸರಿಯಾಗಿ ಹೋಗುತ್ತಿರಬೇಕಾದರೆ , ಅದೊಂದು ಸಾರಿ ಹಸಿರು ಕಾನನದೂರಿಗೆ ಬರಗಾಲ ಅಪ್ಪಳಿಸಿಬಿಟ್ಟಿತು . ಹಸಿರಿಲ್ಲ , ಹುಲ್ಲಿಲ್ಲ , ಹಾಲೇನು ಮಾಡೋಣ ಅಂದವು ದೊಡ್ಡಿಗಳು . ಹುಲ್ಲು ತಿನ್ನುತ್ತ ಹಾಯಾಗಿದ್ದ ಹಸುಗಳಿಗೆ ನಡುಕ ಹುಟ್ಟಿತು . ಎಲ್ಲಿ ನೋಡಿದರೂ ಹಳ್ಳಿಯೂರಿನಲ್ಲಿ ಹಸಿರು ಕಾನನದ್ದೇ ಮಾತುಗಳು , ಕೊಲಾಹಲ ಶುರುವಾಯಿತು , ದೊಡ್ಡಿಗಳು ಹಳೆಯ ಹಸುಗಳನ್ನು ಹೊರದೂಡಿದವು , ಹೆಚ್ಚು ಹಾಲು ಕರೆಯುವ ಹಸುಗಳಿಗೆ ಮಾತ್ರ ಜಾಗ ಕಲ್ಪಿಸಲಾಯಿತು . ಇದೇ ಸಮಯದಲ್ಲಿ ಇದೇ ಗುಲ್ಲು , ಹುಲ್ಲು ಗದ್ದಲದಲ್ಲಿ ಕೆಲವು ದೊಡ್ಡಿಗಳು ಹುಲ್ಲಿದ್ದರೂ ಹಸುಗಳ ಹೊರದೂಡತೊಡಗಿದವು . ಹಲವು ದೊಡ್ಡಿಗಳು ಮುಚ್ಚಿದವು , ಕೆಲವು ಹುಲ್ಲು ಕಡಿಮೆ ಮಾಡಿದವು . . . ಹಸುಗಳು ಹೊರಬರುತ್ತಿದ್ದಂತೆ ಹುಚ್ಚರಂತಾದವು , ಎಲ್ಲೊ ಸಿಕ್ಕ ಸಿಕ್ಕ ದೊಡ್ಡಿ ಸೇರಿದವು , " ಗೂಳಿ ಬಿದ್ದರೆ ಆಳಿಗೊಂದು ಕಲ್ಲಂತೆ " . ಗೂಳಿ ಹೂಂಕರಿಸಿ ಮೆರೆದಾಡಿರುತ್ತಲ್ಲ , ಕೆಳಗೆ ಬಿದ್ದಿದೆ ಅಂತಂದರೆ ಪ್ರತಿಯೊಬ್ಬನೂ ಕಲ್ಲು ಒಗೆಯುತ್ತಾನೆ , ಈಗಲೇ ಸಿಕ್ಕಿದೆ ಬಾ , ಕೆಳಗೆ ಬಿದ್ದಿದೆ ನೆಗೆದು ಬರಲಿಕ್ಕಿಲ್ಲವೆಂದು . ಕೆಲ ಪತ್ರಿಕೆ ಪೇಪರುಗಳು ಹಸುಗಳನ್ನೇ ಜರಿದವು , ಆ ದೊಡ್ಡಿಯಲ್ಲಿ ಹತ್ತು ಹಸುಗಳನ್ನು ತೆಗೆಯಲಾಗಿದೆ , ಈ ದೊಡ್ಡಿಯಿಂದ ನೂರು ಹಸುಗಳ ತೆಗೆಯಲಿದ್ದಾರೆ ಅಂತ ದೊಡ್ಡ ದೊಡ್ದ ಸುದ್ದಿ ಮಾಡಿದರು , ಕೆಲ ಅಂಕಿಆಂಶಗಳ ಚಾರ್ಟು , ಟೇಬಲ್ಲುಗಳನ್ನು ಪ್ರಕಟಿಸಿದರು . . . ಹುಲ್ಲು ತಿಂದದ್ದೆ ತಪ್ಪೆಂದರು , ಹಸುಗಳಿಗೂ ಗೊತ್ತಿಲ್ಲ ಏನು ಮಾಡಬೇಕೆಂದು . ಇಷ್ಟು ದಿನ ಎಲ್ಲರಿಗೂ ಬೇಕಾಗಿದ್ದ , ಬಂದಾಗ ಲಾಭ ಮಾಡಿಕೊಂಡ ಎಲ್ಲರದೂ ಒಂದೇ ವರಾತ , ಎಲ್ಲರೂ ಬೀದಿಗೆ ಬಂದರು , ಹಸುಗಳೂ ಕೂಡ . . . ಯಾರ ತಪ್ಪು , ಯಾರನ್ನು ಬೈಯಬೇಕು , ಎಲ್ಲ ತಪ್ಪು ಹಸುಗಳದಾ , ಇಲ್ಲಿ ಯಾಕೆ ಯಾವುದೇ ಹುಲ್ಲುಗಾವಲು ಬೆಳೆಯಲಿಲ್ಲ , ಇಲ್ಲಿ ಹಳ್ಳಿಯೂರಲ್ಲೂ ಹಸಿರು ಕಾನನ ಬೆಳೆಸಬಹುದಿತ್ತಲ್ಲ , ಇಲ್ಲೇ ಹಾಲು ಕರೆಯಬಹುದಿತ್ತಲ್ಲ , ಹಾಲು ಕರೆಯುವ ಮಶೀನುಗಳ ನಾವೇ ರೆಡಿಮಾಡಬಹುದಿತ್ತಲ್ಲ . ಇಲ್ಲಿ ಯಾಕೆ ಅದಾಗಲಿಲ್ಲ ಎಲ್ಲದಕ್ಕೂ ಹಸಿರು ಕಾನನದೂರಿನ ಮೇಲೆ ಅವಲಂಬಿಸಿದೆವು , ಅಲ್ಲಿ ಬರಬಾರದ ಬರಗಾಲ ಬಂತು ಇಲ್ಲಿ ಎಲ್ಲ ಅಲ್ಲೊಲಕಲ್ಲೋಲವಾಯಿತು . ಈಗ ಹಸುಗಳು ಹೆಚ್ಚಾಗಿವೆ , ಹೆಚ್ಚು ಹುಲ್ಲು ತಿನ್ನುತ್ತವೆ ಅಂದರೆ . . . ಅದಕ್ಕೆ ಬೀದಿಗೆ ಬಂದಿವೆ ಅಂದರೆ . . . ಮನಸು ತೃಪ್ತಿಯಾಗುವವವರೆಗೆ ಕಲ್ಲು ಒಗೆಯಿರಿ , ಅಟ್ಟಿಸಿಕೊಂಡು ಹೋಗಿ ಚಾವಟಿಯಿಂದ ಬಾರಿಸಿ , ಬೀದಿಯಲ್ಲಿ ನಿಲ್ಲಿಸಿ ಗುಂಡು ಹಾಕಿ . ತಪ್ಪು ಹಸುಗಳದೆ ಅಂದಾದರೆ ಅದೇ ಸರಿ , ಅಲ್ಲಿಗೆ ಕಥೆ ಮುಗಿಯುತ್ತದೆ , ಮುಗಿಯಲ್ಲಿಲ್ಲವೆಂದಾರೆ ಮುಗಿದಿದೆ ಅಂದುಕೊಳ್ಳಿ . . . " ಹೂಂ ನಿನಗೂ ಕಲ್ಲು ಒಗೆಯಬೇಕೆನಿಸುತ್ತಾ , ಒಗಿ , ಕೈಗೆ ಎನು ಸಿಗುತ್ತದೊ ಅದನ್ನೇ ತೆಗೆದುಕೊಂಡು ಒಗಿ , ಅದಕ್ಕೆ ಗುಂಡು ಹಾಕು " ಇನ್ನು ಎನೇನೊ ಅರಚುತ್ತಿದ್ದೆ , ಹುಚ್ಚುಹಿಡಿದಂತಾಗಿಬಿಟ್ಟಿತ್ತು . . . ಅವಳು ಬಾಯಿ ಮೇಲೆ ಬಟ್ಟಿಟ್ಟುಕೊಂಡು ಕೂತು ಕಥೆ ಕೇಳುತ್ತಿದ್ದವಳು . . . ನನ್ನ ಬಾಯಿಮೇಲೆ ಬಟ್ಟಿಟ್ಟಾಗಲೇ ಸುಮ್ಮನಾದೆ . . ಆದರೂ ಇನ್ನೂ ಜೋರಾಗಿ ಅರಚಬೇಕೆನಿಸುತ್ತಿತ್ತು . . . ಮನೆಯತುಂಬ ಸೂತಕ ಕಳೆ ಆವರಿಸಿತ್ತು , ಎಷ್ಟೊ ಹೊತ್ತು ಹಾಗೇ ಕುಳಿತಿದ್ದೆವು , ಭವಿಷ್ಯದಲ್ಲಿ ಇನ್ನೂ ಏನು ಕಾದಿದೆಯೊ . . ಸಮಯವೂ ಮುಂದೆ ಹೋಗದೇ ಹಾಗೆ ಕುಳಿತರೆ ಎಷ್ಟು ಚೆನ್ನಾಗಿರುತ್ತದೆ ಅನಿಸುತ್ತಿತ್ತು . ಸಮಯ ನಿಲ್ಲಲ್ಲ . . . ನಿಲ್ಲ ಕೂಡದು . . . ಸಂಜೆಯಾಯಿತು . . . ರಾತ್ರಿಯೂ ಆಗುತ್ತದೆ , ಮತ್ತೆ ಬೆಳಗಿದೆ ಅಷ್ಟೇ . . . ಚಹ ಮಾಡಿ ತಂದಳು , ಹಾಲು ಜಾಸ್ತಿ ಹಾಕಿದ್ದಳು ! . ಕುಡಿಯುತ್ತ ಕುಡಿಯುತ್ತ . . . " ಕಥೆ ಕಥೆಯೆನಿಸಲಿಲ್ಲ . . . " ಅಂದ್ಲು . " ಕಥೆಗಳೆಲ್ಲ ಹಾಗೇ , ವಾಸ್ತವದ ತಳಹದಿಯ ಮೇಲೆ ಕಟ್ಟಿದ ಮಂಜಿಲಗಳು " ಅಂದೆ . " ನಾಳೆ ಎನಾಗುತ್ತೊ ಗೊತ್ತಿಲ್ಲ , ಇಂದು ಖುಶಿಯಾಗಿರೊಣ , ಇಷ್ಟು ದಿನ ಯಾಕೆ ನನಗೆ ಹೇಳಲಿಲ್ಲ " ಅಂದ್ಲು . " ನನಗೇ ಗೊತ್ತಿರಲಿಲ್ಲ , ಗೊತ್ತಾದರೂ ಏನು ಅಗಬಹುದಿತ್ತು " ಅಂದೆ . " ಮತ್ತೆ ಬರಗಾಲ ಕಳೆದು , ಮಳೆ ಬರಬಹುದು ಆಗ ಇಲ್ಲೂ ಹುಲ್ಲು ಬೆಳೆಯಬಹುದು " ಅಂತಿದ್ದಳು ಏನೊ ಸಮಾಧಾನದ ಮಾತಿರಬೇಕು . " ಅದು ಬಿಡು ಎನಾದರಾಗಲಿ ನಾ ನಿನ್ನ ಚೆನ್ನಾಗಿ ನೋಡಿಕೊಳ್ಳುತ್ತೇನೆ , ಏನೊ ಮಾಡೊಣ " ಅಂದೆ . " ಏನೂ ವಿಚಾರ ಮಾಡಬೇಡಿ , ಎರಡು ಒಳ್ಳೆ ತಳಿ ಹಸು ಸಾಕಿ ಬಿಡೊಣ , ಜೀವನ ಹೇಗೊ ಸಾಗುತ್ತದೆ " ಅಂದ್ಲು ತರಲೆ . " ನಿನಗೇನು ಹಸು ಹಾಲು ಕರೆಯಲು ಬರ್ತದಾ " ಅಂದೆ " ನೀವಿದೀರಲ್ಲ , ನಾ ಚಹ ಮಾಡಿ ಕೊಡ್ತೇನೆ ಬೇಕಾದ್ರೆ " ಅಂದ್ಲು ನಗುತ್ತಿದ್ದೆ , " ಇನ್ನೊಂದು ಕಪ್ಪು ಹಾಲಿನಲ್ಲೇ ಮಾಡಿದ ಚಹ ಬೇಕಾ " ಅಂದ್ಲು , ತಲೆ ಸಿಡಿಯುತ್ತಿತ್ತು , " ಹಾಲು ಹಾಲಾಹಲವೆನಿಸುತ್ತಿದೆ , ಸ್ಟ್ರಾಂಗ ಚಹ ಮಾಡಿ ಕಡಿಮೆ ಹಾಲು ಹಾಕಿ ತಾ " ಅಂದೆ . . . ತರಲು ಓಳಗೆ ಹೋದ್ಲು . . . ಅಷ್ಟು ಸುಲಭ ಅಲ್ಲ ಹೇಳೊಕೇನು ಏನೊ ಹೇಳಬಹುದು . . . ಹೀಗೇ ಮತ್ತೆ ಎನೊ ಹೇಳುತ್ತ ಸಿಗೊಣ . . .
ಆನೆ , ಹುಲಿ , ಸಿಂಹಗಳ ಅಂಗಾಂಗಳನ್ನು ಪ್ರದರ್ಶನಕ್ಕಿಟ್ಟರೆ ದುಡ್ಡು ಕೊಟ್ಟು ನೋಡಲು ಖುಷಿಪಡ್ತೀವಿ . ಆದರೆ , ಒಬ್ಬ ಹೆಣ್ಣಿನ ಅಂಗಾಂಗಳನ್ನು ಪ್ರದರ್ಶನಕ್ಕಿಟ್ಟರೆ … ನೋಡುವುದು ಬಿಡಿ , ಕೇಳಲು ಅಸಹ್ಯವಾಗುತ್ತದೆ . ಆದರೆ , ಇಂಥದ್ದೊಂದು ನೈಜ ಘಟನೆ ಎರಡು ದಶಕಗಳ ಹಿಂದೆ ನಡೆದಿತ್ತು . ಇಂದಿಗೂ ದಕ್ಷಿಣ ಆಫ್ರಿಕಾದ ನೂರಾರು ಹೆಣ್ಣು ಮಕ್ಕಳು ಈ ಕಥೆಯನ್ನು ನೆನೆಸಿಕೊಂಡು ಕಣ್ಣೀರು ಹಾಕುತ್ತಾರೆ .
ಗಾಂಧಿ , ಮೈ ಫಾದರ್ ಚಿತ್ರವು ಮಹಾತ್ಮ ಗಾಂಧಿ ಹಾಗು ಅವರ ಪುತ್ರ ಹರಿಲಾಲ್ ಗಾಂಧಿ ನಡುವಿನ ಸಂಬಂಧದ ಬಗ್ಗೆ ಕೇಂದ್ರೀಕರಿಸುತ್ತದೆ ( 2007 ) ಹಾಗು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಚಿತ್ರಕ್ಕೆ - ವಿಶೇಷ ಜ್ಯೂರಿ ಪ್ರಶಸಿ / ವಿಶೇಷ ಉಲ್ಲೇಖ ( ಚಲನಚಿತ್ರ ) ನೀಡಲಾಯಿತು . ಅಕ್ಷಯ್ ಖನ್ನ ಹಾಗು ಅರ್ಶದ್ ವಾರ್ಸಿ ಅಭಿನಯದ ಶಾರ್ಟ್ ಕಟ್ : ದಿ ಕಾನ್ ಇಸ್ ಆನ್ ಚಿತ್ರವನ್ನೂ ಸಹ ನಿರ್ಮಾಣ ಮಾಡಿದರು .
ಈ ಗುದನಾಳ ಚಿಂತನೆಯ ಬಗ್ಗೆ ಬೀಚಿ ಹೇಳುವುದು ಹೀಗೆ . " ಎಲ್ಲರೂ ಹೊಲಸು ಮಾಡುವ ಸ್ವಚ್ಚವಾದ ಏಕಮಾತ್ರ ಸ್ಥಳ ಅಂದರೆ ಇದೊಂದೇ , ಇಡೀ ಜಗತ್ತಿನಲ್ಲಿ . ಇಲ್ಲಿ ತಪಸ್ಸಿಗೆ ಕುಳಿತಾಗ ಮಾನವನ ಬುದ್ದಿಗೆ ಅದಾವ ಇಲ್ಲದ ಶಕ್ತಿಯು ಬರುತ್ತದೆಯೋ ಆ ದೇವನೇ ಬಲ್ಲ . ಗುದನಾಳ ವಿಚಾರಗಳು ಎಂಬ ಮಾತು ಪ್ರಸಿದ್ದಿಯಾಗಿಲ್ಲವೇ ? ಅದೇನು ಸ್ಥಳ ಮಹಾತ್ಮೆಯೋ ? ಹತ್ತಾರು ಮಹಾ ಮೇಧಾವಿಗಳು ದುಂಡು ಮೇಜಿನ ಮುಂದು ದಿನಗಟ್ಟಲೆ ಕುಳಿತು ಚರ್ಚಿಸಿದರೂ ಇತ್ಯರ್ಥವಾಗದಂತಹ ಜಟಿಲ ಪ್ರಶ್ನೆಗಳು ಅಲ್ಲಿ ಒಬ್ಬನೇ ಕುಳಿತಾಗ ಲೀಲಾಜಾಲವಾಗಿ ಬಗೆಹರಿದು ಹೋಗುತ್ತದೆ . "
ಬ್ರಹ್ಮಾವರ : ಬಾರಕೂರು ರಂಗನಕೇರಿಯಲ್ಲಿ ಜರಗಿದ ಮಂದಾರ್ತಿ ಮತ್ತು ನೀಲಾವರ ಕ್ಷೇತ್ರದ ಯಕ್ಷಗಾನ ಸಂದರ್ಭದಲ್ಲಿ ಪ್ರಸಿದ್ಧ ಕಲಾವಿದರಾದ ಆಜ್ರಿ ಗೋಪಾಲ್ ಹಾಗೂ ಹೊಸಂಗಡಿ ರವಿರಾಜ ಶೆಟ್ಟಿ ಅವರನ್ನು ನಗದು ಬಹುಮಾನದೊಂದಿಗೆ ರವಿಕಿರಣ್ ಪ್ರಶಸ್ತಿ ನೀಡಿ ಗೌರವಿಸಲಾಯಿತು . ನೀಲಾವರ ಮೇಳದ ಯಜಮಾನ ವೈ . ಕರುಣಾಕರ ಶೆಟ್ಟಿ , ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಳದ ಆಡಳಿತ ಮೊಕ್ತೇಸರ ಎಚ್ . ಧನಂಜಯ ಶೆಟ್ಟಿ ಮುಂತಾದವರಿದ್ದರು . ಯಕ್ಷಗಾನದ ಸೇವಾಕರ್ತ ರವಿಕಿರಣ್ ಹ್ಯೂಮ್ ಪೈಪ್ಸ್ ಮಾಲಕ ಎನ್ . ಭೋಜರಾಜ ಶೆಟ್ಟಿ ಸ್ವಾಗತಿಸಿ , ವಂದಿಸಿದರು . ಶರತ್ ಕುಮಾರ್ ಶೆಟ್ಟಿ ಹಾಗೂ ಚರಣ್ ಕುಮಾರ್ ಶೆಟ್ಟಿ ಸಮ್ಮಾನ ಪತ್ರ ವಾಚಿಸಿ , ಬಿ . ಸುಧಾಕರ ರಾವ್ ಕಾರ್ಯಕ್ರಮ ನಿರೂಪಿಸಿದರು .
ಒಟ್ಟಿನಲ್ಲಿ ನನಗಂತೂ ತುಂಬಾ ಇಷ್ಟವಾಯಿತು . ಮುಂಗಾರು ಮಳೆಯ ನಂತರದ ತಾಂವನ್ನು ಇದು ತುಂಬುತ್ತದೆಯೇ ನೋಡಬೇಕು . ಎಲ್ಲ ಹಾಡುಗಳನ್ನು ಕನ್ನಡಆಡಿಯೋ . ಕಾಂನಿಂದ ಕೇಳಬಹುದು . ಈದಿನವೇ ಊಟದ ಹೊತ್ತಿನಲ್ಲಿ ಇದರ ಆಡಿಯೋ ಸಿಡಿ ಕೊಂಡುಕೊಳ್ಳುವೆ .
ಹೆಚ್ಚಿನ ಸಂಖ್ಯೆಯ ಸಾಗಣೆಗಳಿಗೆ ಮತ್ತು ದೊಡ್ಡ ಹಡಗುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲು 1939ರ ಮೂರನೇ ನೀರು - ಏರಿಳಿಕೆ ಕಟ್ಟೆ ಯೋಜನೆಯಂತಹುದೇ ಒಂದು ವಿಸ್ತರಣೆ ಯೋಜನೆಯು ಸ್ವಲ್ಪ ಸಮಯದವರೆಗೆ ಪರಿಶೀಲನೆಯಲ್ಲಿತ್ತು , [ ೫೯ ] ನಂತರ ಪನಾಮ ಸರ್ಕಾರದಿಂದ ಅಂಗೀಕರಿಸಲ್ಪಟ್ಟಿತು [ ೬೦ ] ಮತ್ತು 2014ರಲ್ಲಿ ಪೂರ್ಣಗೊಳ್ಳಬಹುದೆಂದು ನಿರೀಕ್ಷೆಯೊಂದಿಗೆ ಪ್ರಗತಿಯಲ್ಲಿದೆ . [ ೬೧ ] ಈ ಯೋಜನೆಯ ಖರ್ಚು ಸುಮಾರು US $ 5 . 25 ಶತಕೋಟಿಯೆಂದು ಅಂದಾಜಿಸಲಾಗಿದೆ . ಇದು ಕಾಲುವೆಯ ಸಾಮರ್ಥ್ಯವನ್ನು ದ್ವಿಗುಣಗೊಳಿಸುತ್ತದೆ ಹಾಗೂ ಹೆಚ್ಚು ಉದ್ದ ಮತ್ತು ಅಗಲದ ಹಡಗುಗಳ ಸಾಗಣೆ ಮತ್ತು ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತದೆ . ಈ ಕಾಲುವೆಯ ವಿಸ್ತರಣೆಯ ಪ್ರಸ್ತಾಪವು 2006ರ ಅಕ್ಟೋಬರ್ 22ರಂದು ರಾಷ್ಟ್ರೀಯ ಜನಮತಸಂಗ್ರಹದಿಂದ ಸರಿಸುಮಾರು 80 % ನಷ್ಟು ಅಂಗೀಕರಿಸಲ್ಪಟ್ಟಿತು . [ ೬೨ ]
ಊರುಗೋಲು ಕೊಟ್ಟು ಕಾಲು ಕಸಿದುಕೊಂಡರು . . ಮೊನ್ನೆ ಚಾಮರಾಜನಗರದ ರಾಜಕಾರಣಿ ಶ್ರೀನಿವಾಸಪ್ರಸಾದ್ ಅವರು ಸಭೆಯೊಂದರಲ್ಲಿ ಖಾಸಗೀ ಕ್ಷೇತ್ರದಲ್ಲಿ ಮೀಸಲಾತಿಯ ಅವಶ್ಯಕತೆಯ ಬಗ್ಗೆ ಮಾತನಾಡುತ್ತ ಇನ್ಫೋಸಿಸ್ ನಾರಾಯಣಮೂರ್ತಿಯವರನ್ನು " ಕರಿಯ ಆಂಗ್ಲ " ಎಂದು ಕರೆದಿರುವುದಾಗಿ ವರದಿಯಾಗಿದೆ . ಇಲ್ಲಿ ನಾನು ಮೀಸಲಾತಿಯ ಅವಶ್ಯಕತೆ ಅಥವಾ ಅನುಕೂಲತೆಯ ಬಗ್ಗೆ ಹೇಳಲು ಹೊರಟಿಲ್ಲ . ಆದರೆ ನಾನು ಮೆಚ್ಚುವ ಸಮಕಾಲೀನ ರಾಜಕಾರಣಿಗಳಲ್ಲಿ ಒಬ್ಬರಾದ ಶ್ರೀನಿವಾಸಪ್ರಸಾದ್ ಅವರೂ ಕೂಡಾ ಈ ವಿಷಯದಲ್ಲಿ ಹೊಂದಿರುವ ಅಭಿಪ್ರಾಯ ನೋಡಿ ಸುಮ್ಮನಿರಲಾಗಲಿಲ್ಲ . ಅದಕ್ಕೆ ಈ ಅಂಕಣ . ನಾನು ಓದಿದ್ದು ಬಡ ವರ್ಗದ ಸರ್ಕಾರಿ ಶಾಲೆಯಲ್ಲಿ . ನನ್ನ ಸಹಪಾಠಿಗಳಲ್ಲಿ ಹೆಚ್ಚಿನವರು ಕೂಲಿ ಕಾರ್ಮಿಕರ ಮಕ್ಕಳೇ ಇದ್ದರು . ಅವರಲ್ಲಿ ಒಬ್ಬ ನಿಜಕ್ಕೂ ಪ್ರತಿಭಾವಂತನಾಗಿದ್ದ . ಜಾತಿಯಲ್ಲಿ ಪರಿಶಿಷ್ಟನಾಗಿದ್ದರೂ ಓದಿನಲ್ಲಿ ಯಾವುದೇ ಬ್ರಾಹ್ಮಣ ಅಥವಾ ಮೇಲ್ಜಾತಿಯವರಿಗಿಂತ ಕಮ್ಮಿಯಿರಲಿಲ್ಲ . ನಾವು ಇಬ್ಬರೂ ಪದವಿ ಮುಗಿಸಿದಾಗ ಅವನಿಗೆ ಜಾತಿಯ ಆಧಾರದ ಮೇಲೆ ಸರಕಾರಿ ಕಚೇರಿಯೊಂದರಲ್ಲಿ ಕಾರಕೂನಿಕೆಯ ಕೆಲಸ ಅನಾಯಾಸವಾಗಿ ದೊರಕಿತು . ವಾಸ್ತವವಾಗಿ ಅವನಿಗೆ ಆ ಕೆಲಸದ ಅವಶ್ಯಕತೆಯಿರಲಿಲ್ಲ , ಅಲ್ಲದೇ ಅವನು ಉನ್ನತ ಶಿಕ್ಷಣ ಪಡೆದು ಸಾಕಷ್ಟು ಮೇಲೇರುವ ಸಾಧ್ಯತೆಯೂ ಇತ್ತು . ಆದರೆ ಅದನ್ನು ನಿರಾಕರಿಸಿ ದೂರದ ಗುರಿಯನ್ನು ಆಯ್ಕೆ ಮಾಡಲು ಈ ಆಮಿಷ ತೊಡಕಾಗಿತ್ತು . ಸಹಜವಾಗೇ ಅವನು ಕಾರಕೂನಿಕೆ ಹಿಡಿದ ; ನನ್ನ ಅಭಿಪ್ರಾಯದಲ್ಲಿ ಮೀಸಲಾತಿ ಅವನ ವಿವೇಚನೆಯನ್ನು ಕಿತ್ತುಕೊಂಡಿತ್ತು . ಇದರ ಅರ್ಥ ನಾನು ಮೀಸಲಾತಿಯನ್ನು ಸಾರಾಸಗಟಾಗಿ ತಳ್ಳಿಹಾಕುತ್ತೇನೆ ಎಂದಲ್ಲ , ಹಲವಾರು ಸಂದರ್ಭಗಳಲ್ಲಿ ಮೀಸಲಾತಿಯಿಂದಾಗಿ ಎಷ್ಟೋ ಕುಟುಂಬಗಳು ಹೊತ್ತಿನ ತುತ್ತಿನ ಆಧಾರ ಕಂಡುಕೊಂಡಿವೆ ; ಸಾಮಾಜಿಕ ನ್ಯಾಯ ವಿತರಣೆಯ ಪ್ರಮುಖ ಅಂಗವಾಗಿ ಮೀಸಲಾತಿಯ ಅವಶ್ಯಕತೆ ಇದೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ . ಆದರೆ , ಅದನ್ನು ಪಡಿತರ ವ್ಯವಸ್ಥೆಯ ಥರ ವಿತರಣೆ ಮಾಡಿದಾಗ ಸಾಕಷ್ಟು ಅನಾಹುತಗಳೂ ಸಂಭವಿಸುತ್ತವೆ ಎಂದು ತಿಳಿಸಲು ಮೇಲಿನ ಉದಾಹರಣೆ ನೀಡಿದೆ ಅಷ್ಟೆ . ಇನ್ನು ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿಯ ಅಳವಡಿಕೆಯ ವಿಷಯ ಕೈಗೆತ್ತಿಕೊಂಡರೆ , ಹಲವಾರು ಪ್ರಶ್ನೆಗಳು ಮೂಡುತ್ತವೆ . ಮೀಸಲಾತಿ ಯಾವ ಪ್ರಮಾಣದಲ್ಲಿ ಇರಬೇಕು ? ಬರೀ ಪರಿಶಿಷ್ಟ ವರ್ಗ , ಪಂಗಡಗಳು ಮಾತ್ರ ಅರ್ಹರೇ ಅಥವಾ ಪ್ರತಿ ಅಲ್ಪಸಂಖ್ಯಾತ ಗುಂಪಿನ ಪ್ರಾತಿನಿಧ್ಯಕ್ಕೆ ಅನುಗುಣವಾಗಿ ಮೀಸಲಾತಿ ಅಳವಡಿಸಬೇಕೆ ? ಈ ನಿಟ್ಟಿನಲ್ಲಿ ಪ್ರಕಟವಾಗಿರುವ ಹಲವಾರು ಸರ್ಕಾರಿ ಆಯೋಗಗಳ ವರದಿ ಆಧಾರಿಸಿ ಮೀಸಲಾತಿ ನೀಡಬಹುದು ಎಂದುಕೊಂಡರೂ , ಕಾಲಕಾಲಕ್ಕೆ ಬದಲಾಗುವ ಜನಸಂಖ್ಯೆಯಿಂದಾಗಿ ವಿವಿಧ ವರ್ಗಗಳ ಪ್ರಾತಿನಿಧ್ಯದ ಅನುಪಾತ ಬದಲಾಗುವುದಿಲ್ಲವೇ ? ಉದಾಹರಣೆಗೆ , ಐದು ವರುಷಗಳ ಅವಧಿಯಲ್ಲಿ ನಾಯಕ ಪಂಗಡದವರ ಜನಸಂಖ್ಯೆ ಒಕ್ಕಲಿಗರ ಜನಸಂಖ್ಯೆಗಿಂತ ಅಭಿವೃದ್ಧಿಯಾದರೆ , ಮೀಸಲಾತಿಯ ಪ್ರಮಾಣ ಕೂಡ ಬದಲಾಗಬೇಡವೇ ? ಇತ್ಯಾದಿ . ಹೀಗೆ ಪ್ರಶ್ನಿಸುತ್ತ ಹೋದರೆ ಅಂತ್ಯವೇ ಇಲ್ಲದ ಪಟ್ಟಿಯನ್ನು ನಾವು ಊಹಿಸಬಹುದು . ಕಳೆದ ಐವತ್ತು ವರುಷಗಳಲ್ಲಿ ನಡೆದ ಸಾಮಾಜಿಕ ನ್ಯಾಯ ವಿತರಣೆಯನ್ನು ಅವಲೋಕಿಸಿದರೂ ಕೂಡಾ ಮನದಲ್ಲೇ ಒಂದು ಶಂಕೆ ಮೂಡುತ್ತದೆ ; ನಾವು ಅಲ್ಪಸಂಖ್ಯಾತರಿಗೆ ಊರುಗೋಲು ನೀಡಿ ಅವರ ಕಾಲು ಕಸಿದೆವೇ ? ಡಾರ್ವಿನ್ನನ ಪ್ರಕಾರ , ಪ್ರಕೃತಿಯಲ್ಲಿ ನಡೆದಂತೆ ಪ್ರಬಲತೆಯ ಆಯ್ಕೆ ನಡೆದರೆ ನಮ್ಮ ಅಲ್ಪಸಂಖ್ಯಾತ ಸೋದರರ ಅವನತಿಯಾಗುವುದು ಖಂಡಿತ . ಹೋರಾಟದ ಸ್ಥೈರ್ಯವನ್ನು ಕಳೆದುಕೊಂಡ ಅವರು ಕುಸಿದರೆ , ಅವರ ಸೋಲಿನಲ್ಲಿ ನಮ್ಮ ಪಾಲೂ ಇಲ್ಲವೇ ? - ಕನ್ನಡಿಗ
ಮನೆಯಲ್ಲಿ TV ಮೇಲಿನ ಕುರುಡು ಒಲವು ತೊರೆದು , ನಮ್ಮ ಕಾವ್ಯ ಕಾದಂಬರಿ , ನಾಟಕ , ಸಂಗೀತ , ನೃತ್ಯ ಗಾಳ ಕಡೆಗೆ ದಿನಕ್ಕೆ ೩೦ ನಿಮಿಷ ಒಲವಿಟ್ಟು ನೋಡಿದರೆ ಕನ್ನಡ ನಿಜವಾಗಿಯೂ ಉಳಿಯುತ್ತದೆ .
ಮನುಷ್ಯನ ಭಾಷೆಯೆಂಬುದು ತರ್ಕದ ಕೂಸು . ಮೆದುಳಿನ ಎಡ ಗೋಳಾರ್ಧದ ಮೇಲ್ಭಾಗ ನಮ್ಮ ತಾರ್ಕಿಕ ಶಕ್ತಿಯನ್ನು ನಿಯಂತ್ರಿಸುತ್ತದೆ . ಅಂದರೆ ಮನುಷ್ಯನಿಗೆ ಭಾಷೆಯೆಂಬುದು ಜೈವಿಕವಾಗಿ ದೊರೆಯುವ ಕೌಶಲ್ಯವಲ್ಲ . ಈ ಕೌಶಲ್ಯವನ್ನು ಆತ ಕಲಿತು ರೂಢಿಸಿಕೊಳ್ಳುತ್ತಾನೆ . ಈ ಕಾರಣದಿಂದಾಗಿಯೇ ವಿಶ್ವದ ಎಲ್ಲೆಡೆ ನಾಯಿಗಳು ಒಂದೇ ಬಗೆಯಲ್ಲಿ ಬೊಗಳುತ್ತವೆ . ಈ ಸಂಜ್ಞಾ ವಿಧಾನದಲ್ಲಿ ಯಾವ ವ್ಯತ್ಯಾಸವೂ ಇಲ್ಲ . ಆದರೆ ಮನುಷ್ಯನ ಭಾಷೆ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ . ಒಂದೇ ಭಾಷೆಯೊಳಗೆ ಅನೇಕ ಡಯಲೆಕ್ಟ್‌ಗಳಿರುತ್ತವೆ . ಇದಿಷ್ಟೂ ಆಧುನಿಕ ಭಾಷಾ ವಿಜ್ಞಾನಿಗಳು ಮನುಷ್ಯನ ಭಾಷೆಯ ಕುರಿತಂತೆ ತಿಳಿದುಕೊಂಡಿರುವ ವಿಷಯಗಳ ಸರಳೀಕೃತ ಸಾರ . ಮನುಷ್ಯ ಭಾಷೆಯನ್ನು ಕಲಿಯುವ ಪ್ರಕ್ರಿಯೆಯನ್ನೂ ಈ ಮಾಹಿತಿಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಲಾಗುತ್ತಿದೆ . ಈ ಹೊಸ ಅರಿವಿನಿಂದಾಗಿ ಭಾಷಾ ಬೋಧನೆಯೆಂಬ ಜ್ಞಾನ ಕ್ಷೇತ್ರ ಬೋಧನೆಯ ತಂತ್ರಗಳನ್ನು ಪುನರಾವಿಷ್ಕರಿಸುತ್ತಿದೆ . ಮಗುವೊಂದು ತನ್ನ ವಾತಾವರಣದ ಭಾಷೆಯನ್ನು ಸಹಜವಾಗಿ ಕಲಿಯುವಂತೆಯೇ ಹೊಸ ಭಾಷೆಯನ್ನು ಕಲಿಸುವುದಕ್ಕೆ ಬೇಕಾದ ಸೂತ್ರ ಗಳನ್ನು ಭಾಷಾ ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ . ವರ್ತಮಾನದ ಭಾಷಾ ಬೋಧನೆಯ ತಂತ್ರಗಳು ಬದಲಾಗಿರುವುದೂ ಇದೇ ಕಾರಣದಿಂದ .
ಬಸವಣ್ಣನವರಿಗೆ ಇಷ್ಟಲಿಂಗಪೂಜೆ ಎಂಬುದು ಮಾನವ ಹಕ್ಕುಗಳ ಪ್ರಜ್ಞೆಯನ್ನು ಹೊಂದುವ ಸಾಧನವಾಗಿದೆ . ಮಾನವ ಏಕತೆಯನ್ನು ಸಾಧಿಸುವ ಕ್ರಮವಾಗಿದೆ .
ಇದೇ ಸರಕಾರಕ್ಕೆ ಚಿದಂಬರರಾವ್ ಜಂಬೆ ಅವಧಿ ಮುಗಿಸಿದ ಮೇಲೆ ಎರಡು ವರ್ಷ ರಂಗಾಯಣ ಖಾಲಿ ಹೊಡೆಯುತ್ತಿದ್ದರೂ ಮಹತ್ವದ್ದೆನಿಸಿರಲಿಲ್ಲ . ಯಾವ ರಾಜಕೀಯ ಕ್ಷೋಭೆಯಾಗಲೀ , ಪ್ರಾಕೃತಿಕ ವಿಕೋಪವಾಗಲೀ ಆಗ ಕಾಡುತ್ತಿರಲಿಲ್ಲ . ಆದರೂ , ಸಾಂಸ್ಕೃತಿಕ ವಲಯದ ಬಗ್ಗೆ ತಲೆ ಕೆಡಿಸಿಕೊಳ್ಳಲು ಪುರಸೊತ್ತಿರಲಿಲ್ಲ . ಬರೀ ಸೂಕ್ತರನ್ನು ಹುಡುಕುವುದರಲ್ಲೇ ಕಾಲ ಕಳೆಯಿತು . ತಮಾಷೆಯೆಂದರೆ ಆ ಹೊತ್ತಿನಲ್ಲಿ ಇದೇ ಹಳೆಮನೆಯವರು ಕಣ್ಣೆದುರುಗಿದ್ದರು . ಆದರೂ ಸರಕಾರ ಮನಸ್ಸು ಮಾಡಿರಲಿಲ್ಲ . ಅದಕ್ಕೆ ಹಳೆಮನೆಯವರು ಎಡಪಂಥೀಯರು ಎನ್ನುವುದೂ ಕಾರಣವಾಗಿತ್ತು .
( ೫೧ ) ಕಾಯುವುದೆಂದರೆ ಅದೊಂದು ಹಿಂಸೆ . ಏಕೆಂದರೆ ಅದು ಬಂದಾಗ ' ಕಾಯುವ ' ದುಶ್ಚಟವೂ ಅದರೊಂದಿಗೆ ಬಂದುಬಿಡುತ್ತದೆ !
ಉದಾಹರಣೆಯಲ್ಲಿ ಶುಕ್ರನನ್ನು ಹೇಳಿದ್ದರೂ , ಇದು ಬೇರೆ ಗ್ರಹಗಳಿಗೂ ಆಗುವ ಸಂಗತಿಯೇ . ಬುಧ , ಶುಕ್ರರಿಗಾದರೆ , ಭೂಮಿ ಸೂರ್ಯರ ನಡುವೆ ಈ ಗ್ರಹಗಳು ಬಂದಾಗ , ಅವು ವಕ್ರಗತಿಯನ್ನ ಹೊಂದುತ್ತವೆ . ಹೊರಗಿನ ಗ್ರಹಗಳಾದ , ಮಂಗಳ ಗುರು ಶನಿಗಳಿಗೋ , ಸೂರ್ಯ ಮತ್ತು ಆಯಾ ಗ್ರಹಗಳ ನಡುವೆ ಭೂಮಿ ಬಂದಾಗ ಅವು ವಕ್ರಗತಿಯನ್ನು ಹೊಂದುತ್ತವೆ . ಎರಡೂ ಕಣ್ಣಿಗಾಗುವ ಭಾಸವೇ ಹೊರತು ಮತ್ತಿನ್ನೇನಿಲ್ಲ .
ಸುಮಾರು 1790ರಿಂದ ಲೀಡ್ಸ್‌ನಲ್ಲಿ ನಿರ್ಮಿಸಲಾಗಿದ್ದ ಅನೇಕ ಕಾರ್ಖಾನೆಗಳಲ್ಲಿ ಮಾರ್ಷಲ್‌ನ ಮಿಲ್ ಮೊದಲನೆಯದಾಗಿತ್ತು . [ ೨೨ ] ಆರಂಭದ ವರ್ಷಗಳಲ್ಲಿ ಇದ್ದ ಅತ್ಯಂತ ಪ್ರಮುಖ ಕಾರ್ಖಾನೆಗಳೆಂದರೆ , ಉಣ್ಣೆ ಸಂಸ್ಕರಣ ಮತ್ತು ಪ್ಲಾಕ್ಸ್ ಮಿಲ್‌ಗಳು ; 1914ರ ವೇಳೆಗೆ ಮುದ್ರೀಕರಣ , ಯಂತ್ರವಿಜ್ಞಾನ , ರಾಸಾಯನಿಕಗಳು ಮತ್ತು ಜವಳಿ ತಯಾರಿಕಾ ಕ್ಷೇತ್ರಗಳಲ್ಲಿ ಕೈಗಾರಿಕಾಭಿವೃದ್ಧಿಗೊಳಿಸಲಾಯಿತು . [ ೨೩ ] ಎರಡನೇ ಮಹಾಯುದ್ಧದ ಸಮಯದಲ್ಲಿ ಸೈನಿಕ ಸಮವಸ್ತ್ರ ಮತ್ತು ಯುದ್ಧ ಸಾಮಗ್ರಿ ಉತ್ಪಾದನೆಯಲ್ಲಿ ತೊಡಗುವುದರ ಮೂಲಕ ಉತ್ಪಾದನೆಯಲ್ಲಿನ ಇಳಿಕೆಯನ್ನು 1930ರ ದಶಕದಲ್ಲಿ ತಾತ್ಕಾಲಿಕವಾಗಿ ಹೆಚ್ಚಿಸಲಾಗಿತ್ತು . ಅದಾಗ್ಯೂ , 1970ರ ದಶಕದಲ್ಲಿ ಜವಳಿ ಕೈಗಾರಿಕೆಯು , ಅಗ್ಗದ ವಿದೇಶಿ ಪೈಪೋಟಿಯನ್ನು ಎದುರಿಸುವುದರ ಮೂಲಕ ಸುಧಾರಿಸಲಾಗದ ಅವನತಿಯಲ್ಲಿತ್ತು . [ ೨೪ ] ನಗರವನ್ನು ' 24 ಗಂಟೆಯ ಯುರೋಪ್ ನಗರ ' ಮತ್ತು ' ಉತ್ತರದ ರಾಜದಾನಿ ' ನಗರವನ್ನಾಗಿ ಕಾಣುವ ದೃಷ್ಟಿಯಿಂದ ಲೀಡ್ಸ್ ನಗರಾಡಳಿತದಿಂದ ನಗರದ ಆರ್ಥಿಕತೆಯ ರಚನೆಯನ್ನು ಮಾಡಲಾಯಿತು . [ ೨೫ ] ಕೈಗಾರಿಕೋದ್ಯಮದ ನಂತರದ ಕಾಲದ ಅವನತಿಯಿಂದ , ಆಧುನಿಕ ವಿಶ್ವ ಆರ್ಥಿಕತೆಯ ಎಲೆಕ್ಟ್ರಾನಿಕ್ ಮೂಲಭೂತಸೌಕರ್ಯಗಳಿಗೆ ಸಂಬಂಧಿಸಿದ , ದೂರವಾಣಿ ವಹಿವಾಟು ಕೇಂದ್ರವಾಗಲು ಇದನ್ನು ಅಭಿವೃದ್ಧಿಪಡಿಸಲಾಯಿತು . [ ೨೫ ] ಸಂಘ ಸಂಸ್ಥೆ ಮತ್ತು ಕಾನೂನು ವಲಯಗಳಲ್ಲಿ ಗಣನೀಯ ಪ್ರಗತಿಯನ್ನು ಹೊಂದಿತ್ತು [ ೨೬ ] ಮತ್ತು ಹೆಚ್ಚಿದ ಸ್ಥಳೀಯ ಸಂಪತ್ತು ಐಶಾರಾಮಿ ವಸ್ತುಗಳ ಮಾರುಕಟ್ಟೆಯನ್ನು ಒಳಗೊಂಡು , ಚಿಲ್ಲರೆ ಮಾರಾಟ ವಲಯದಲ್ಲಿನ ವಿಸ್ತರಣೆಗೆ ಕಾರಣವಾಯಿತು . [ ೨೭ ]
ಹೌದು . ಸೋಮ ಅವರು ಹೇಳುವುದನ್ನು ಗಮನಿಸಿದರೆ , ಈ ಲೇಖಕರು ಬೆಂಗಳೂರಿನ ಅನ್ನದ ಋಣಿಯಾದರೂ ಬೆಂಗಳೂರಿನ ಬಗ್ಗೆ " ತಾತ್ಸಾರ " ದ ಮಾತುಗಳನ್ನಾಡಿ , ಪರದೇಶವ್ಯಾಮೋಹವನ್ನು ಮೆರೆಸುತ್ತಿದ್ದಾರೆಂದು ನಿರೂಪಣೆಯಾಗುತ್ತೆ . ಜೊತೆಗೆ , ಕೋಮುಗಲಭೆಗೂ ಈಡು ಮಾಡುವಂತಹ ಇಂಥಾ ಲೇಖನಗಳನ್ನು ಹೆಚ್ಚು ಹೆಚ್ಚು ಬರೆಯುವ ಶ್ರೀಧರ ಅವರು ಸಾಮಾಜಿಕ ಕಳಕಳಿಯುಳ್ಳ ಇನ್ನೊಂದು ಹೊಸ ಲೇಖನವನ್ನು ಬರೆಯಬೇಕೆಂದು ಆಜ್ಞಾಪಿಸುತ್ತೇನೆ . ಏನಾದ್ರೂ ಮಾಡ್ಕೊಂಡ್ ಸಾಯಿ , ಮಗನೇ . . ; - )
ಓಕೆ , ಓದುವವರಿಗೆ ಮುನ್ನೆಚ್ಚರಿಕೆ : ನನಗೆ ಕವನ ಬರೆಯೋಕೆ ಬರದು . ಸುಮ್ಮನೆ ಹಾಗೇ ಏನೋ ಬರೆದದ್ದು . ನಿಮ್ಮೆಲ್ಲರ ಪ್ರಾಮಾಣಿಕ ಅನಿಸಿಕೆ ಖಂಡಿತ ಬರೆದು ತಿಳಿಸಬಹುದು !
ಜ್ಯೂ . ಮುಃ " ಮತ್ತೇನು ನಿನ್ನ ಮಧ್ಯಸ್ಥಿಕೆ , ಬಡ್ಡೇತದ್ದೆ . ಅವ್ಳ ತಂಟೆಗೆ - - ಮಾತಲ್ಲಾದರೂ ಸರಿ - - ಬಂದ್ರೆ , ಬರೀ ಬಾಯ್ಮಾತಲ್ಲಲ್ಲದೆ ಅಕ್ಷರಶಃ ಸೊಂಟ ಮುರೀತಿನಿ " ಎನ್ನುತ್ತ ಮುರುಳಿ ಪ್ರಶ್ನೆಯ ಪ್ರುಷ್ಠಕ್ಕೆ ಮೊಣಕಾಲಿನಿಂದ ಒದ್ದ . ಪ್ರಶ್ನೆ ಕೆಳಕ್ಕೆ ಬಿದ್ದ .
ಚೆ೦ದದ ಬರಹ . ಉತ್ತರ ಸಿಗದ ಪ್ರಶ್ನೆಗಳನ್ನೇ ಕೇಳ್ತೀರಿ ಪಾಪ ನಿಮ್ಮಾಕೆಗೆ ! : ) ಓದುಗರ ತಲೆಗೂ ಹುಳ ಬಿಡ್ತೀರಿ ! : )
ರಾ . ಹೆ . ವಿಭಾಗವು ಶೀಘ್ರವಾಗಿ ರಸ್ತೆಯ ಅಭಿವೃದ್ಧಿ ಬಗ್ಗೆ ನೀಲಿ ನಕ್ಷೆ ಮತ್ತು ಅಂದಾಜು ಪಟ್ಟಿಯನ್ನು ಸಮರೋಪಾದಿಯಲ್ಲಿ ಸಿದ್ಧಪಡಿಸಬೇಕಿದೆ . ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ , ಬೆಸ್ಕಾಂ , ಬಿ . ಎಸ್ . ಎನ್ . ಎಲ್ , ಅರಣ್ಯ ಇಲಾಖೆ , ನಗರಸಭೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದವರು ತಮ್ಮ ತಮ್ಮ ವ್ಯಾಪ್ತಿಯ ಕಾಮಗಾರಿಗಳ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ಕ್ರೋಢೀಕೃತ ಅಂದಾಜು ಪಟ್ಟಿಯನ್ನು ತಯಾರಿಸುವುದು ಅತ್ಯಂತ ತುರ್ತಾಗಿ ನಡೆಯಬೇಕಿದೆ .
ಪುಟ ಹನ್ನೊಂದು ಹರ್ಷನ ರಸಮಂಜರಿ ಆಗಾಗ್ಗೆ ನಡೆಯುತ್ತಲೇ ಇತ್ತು . ವರದಿಗಾರರಾಗಿದ್ದರಿಂದ ಬೆಳಗ್ಗೆ ೧೧ . ೩೦ ವರೆಗೆ ಆರಾಮ್ . ಪೊಲೀಸ್ ಕಮೀಷನರ್ ಕಚೇರಿಯ " ಮೀಡಿಯಾ ಸೆಂಟರ್ ' ನಿಂದಲೇ ನಮ್ಮ ನಿತ್ಯದ ಕೆಲಸ ಆರಂಭ . ಒಂದುವೇಳೆ ಏನಾದರೂ ಬೆಳಗ್ಗೆ ಬೆಳಗ್ಗೆಯೇ ದೊಡ್ಡ ಅಪಘಾತ - ಆಕಸ್ಮಿಕಗಳು ನಡೆದರೆ ಅಲ್ಲಿಗೆ ದೌಡಾಯಿಸಬೇಕು . ಘಟನಾ ಸ್ಥಳಕ್ಕೆ ಭೇಟಿ ನೀಡದೇ ಬರೆಯುವವರು ಇವತ್ತಿಗೂ ನಮ್ಮ ಪತ್ರಿಕೋದ್ಯಮದಲ್ಲಿ ಇದ್ದಾರೆ . ಅವರಂಥವರಲ್ಲಿ ಎರಡು ವಿಧ . ಘಟನಾ ಸ್ಥಳಕ್ಕೆ ಹೋಗದೇ ಅವರಿವರತ್ತಿರ ಕಾಡಿಬೇಡಿ ಪಡೆದು , ಕೊಟ್ಟಷ್ಟೇ ಸಾಕೆಂಬ ಧೋರಣೆಯಲ್ಲಿ ಸುದ್ದಿ ಕೊಟ್ಟು ಕೈ ತೊಳೆದುಕೊಳ್ಳುವವರು ಒಂದು ಬಗೆಯವರು . ಮತ್ತೊಂದು ಬಗೆ ತೀರಾ ಭಿನ್ನ . ಅಸಲಿಗಿಂತ ಅಪಾಯಕಾರಿ . ಘಟನಾ ಸ್ಥಳಕ್ಕೆ ಹೋದವರಿಂದಲೇ ಮಾಹಿತಿ ಪಡೆದು , ತಾವೇ ಘಟನಾ ಸ್ಥಳದಿಂದ ನೇರ ( ಲೈವ್ ) ವರದಿ ಮಾಡುತ್ತಿದ್ದೇವೆ ಎನ್ನುವಂತೆ ಕಲ್ಪಿಸಿಕೊಂಡು ಬರೆಯುವವರಿದ್ದಾರೆ . ಇವರಿಂದ ಅಸಲಿಗೇ ಅಪಾಯ . ಎಷ್ಟೋ ಬಾರಿ ಇಂಥ ಪ್ರಸಂಗ ನಡೆದದ್ದಿದೆ . ನಮ್ಮಿಂದ ಮಾಹಿತಿ ಪಡೆದು ಬರೆದವನ ಸುದ್ದಿಯನ್ನೇ ನೋಡಿ ನಮ್ಮ ಸೀನಿಯರ್ರು " ನೋಡ್ರಿ . ಈ ಸುದ್ದಿ ಎಷ್ಟು ಚೆನ್ನಾಗಿದೆ ' ಎಂದ ಪ್ರಸಂಗಗಳೂ ಇವೆ . ಆದರೆ ನಮಗೇನೋ ಒಂದು ಖುಷಿ . ಘಟನಾ ಸ್ಥಳಕ್ಕೆ ಹೋದರೆ ಬೇರೇನೋ ಮಾಹಿತಿ ಸಿಗಬಹುದು , ಯಾರಾದರೂ ಸಂಪರ್ಕಕ್ಕೆ ಸಿಗಬಹುದೆಂಬ ಹುರುಪಿನಿಂದಲೇ ತೆರಳುತ್ತಿದ್ದೆವು . ಆದರೆ ನಮ್ಮ ಮನೆಯಲ್ಲಿ ನಾಲ್ಕೈದು ಮಂದಿ ವರದಿಗಾರರಿದ್ದರಿಂದ , ಅದರಲ್ಲೂ ಎಲ್ಲರೂ ಬೇರೆ ಬೇರೆ ಪತ್ರಿಕೆಯಲ್ಲಿದ್ದರಿಂದ ಹಂಚಿಕೊಳ್ಳುವುದು ಸರ್ವೇ ಸಾಮಾನ್ಯವಾಗಿತ್ತು . ಯಾರಾದರೂ ಇಬ್ಬರು ಘಟನಾ ಸ್ಥಳಕ್ಕೆ ತೆರಳಿದರೆ , ಮನೆಯಲ್ಲಿ ಅವರ ಕೆಲಸವನ್ನು ಉಳಿದವರು ಮಾಡುತ್ತಿದ್ದೆವು . ಒಟ್ಟಿನಲ್ಲಿ ಸಂತೋಷದಿಂದಲೇ ಇರುತ್ತಿದ್ದೆವು ಅನ್ನಿ . ಹೀಗೆ ಸಂತೋಷದಿಂದ ಇರುವಾಗಲೇ ಹರ್ಷ ಇದ್ದಕ್ಕಿದ್ದಂತೆ ಹುರಿದುಂಬಿ ಹಾಡುತ್ತಿದ್ದ . ಕುಣಿಯುತ್ತಿದ್ದ . ನಮ್ಮಲ್ಲೂ ಕೆಲವರು ಹೆಜ್ಜೆ ಹಾಕುತ್ತಿದ್ದೆವು . ಇನ್ನೂ ಕೆಲವರು ಚಪ್ಪಾಳೆ ತಟ್ಟುತ್ತಾ ಖುಷಿ ಪಡುತ್ತಿದ್ದೆವು . ಏನೋ ಆ ಹಾಡೆಂದರೆ ಅವನಿಗೆ ಬಹಳ ಇಷ್ಟ . ಅದೇಕೋ ಗೊತ್ತಿಲ್ಲ . ಅವನನ್ನೇ ಕೇಳಿ ಹೇಳಬೇಕು . ಹಾಗೆಂದು ಹರ್ಷ ಗಾಯಕನಲ್ಲ ; ಒಳ್ಳೆ ಹುಡುಗ . ನಿಜವಾಗಲೂ ಹೂವಿನ ಮನಸ್ಸಿನವನು . ಅವನ ಹೆಸರಿನಂತೆಯೇ ಹರ್ಷವಾಗಿರಲು ಅವನೊಬ್ಬನೇ ಪ್ರಯತ್ನಿಸುತ್ತಿರಲಿಲ್ಲ . ಉಳಿದೆಲ್ಲರೂ ಹರ್ಷ ಚಿತ್ತರಾಗಿರಬೇಕೆಂದು ಬಯಸುತ್ತಿದ್ದವ . ಸುಮ್ಮನೆ ಅವನನ್ನು ಸ್ತುತಿ ಮಾಡಲು ಹೇಳುತ್ತಿಲ್ಲ . ಆದರೆ ಖುಷಿಯಿಂದ ಹೇಳುತ್ತಿದ್ದೇನೆ . ಅವನು ಒಳ್ಳೆಯ ಗೆಳೆಯ . ಇಂಥವನೊಳಗೆ " ಹರ್ಷ ' ತುಂಬುತ್ತಿದ್ದ " ಅನಂತದಿಂ . . ದಿಗಂತದಿಂ . . ನೋಡು ನೋಡು ನೋಡೆ ಗೋಪುರ , ಮುಗಿಲಿನೆತ್ತರ … " ಗೀತೆ ಬಗ್ಗೆಯೇ ಮಜಾ ಇದೆ . ಆಗ ಯಾಕೆ ಈ ಗೀತೆ ಇಷ್ಟ ಎಂದು ಕೇಳಿರಲಿಲ್ಲ . ಮೊನ್ನೆ ಊರಿಗೆ ಹೋದಾಗ ಕೇಳಿದೆ . ವಿವರಿಸಿದ . ಕುದುರೆಮುಖದಲ್ಲಿ ಓದ್ತಾ ಇದ್ದಾಗ ಶಾಲೇಲಿ ಸ್ಪರ್ಧೆ ಹಾಡು ಹೇಳೋಕೆ . ಇವನ ಸಂಗೀತ ಟೀಚರ್ರು ಎರಡು ಗೀತೆಗಳನ್ನು ಹೇಳಿಕೊಟ್ಟಿದ್ದರಂತೆ . ಒಂದು " ಘಲ್ಲು ಘಲ್ಲುನೆತಾ . . ಗೆಜ್ಜೆ . . ' ಹಾಗೂ " ಅನಂತದಿಂ … ದಿಗಂತದಿಂ ' . ಸ್ಪರ್ಧೆಯಲ್ಲಿ ಮೊದಲು ಘಲ್ಲು ಘಲ್ಲುನೆತಾ ಹಾಡು ಹೇಳಿದನಂತೆ . ಸ್ಪರ್ಧೆಯಲ್ಲಿ ಗೆಲ್ಲಲಿಲ್ಲ . ಮತ್ತೊಂದು ವರ್ಷದಲ್ಲಿ " ಅನಂತದಿಂ … ದಿಗಂತದಿಂ ' ಗೀತೆಯನ್ನು ಭಾವಪೂರ್ಣವಾಗಿ ( ವಿತ್ ಆಕ್ಷನ್ಸ್ ) ಹಾಡಿದನಂತೆ . ತಗೊಳ್ಳಿ … ಬಹುಮಾನ ಬಂದುಬಿಟ್ಟಿತಂತೆ . ಅಂದಿನಿಂದ ಇವನ ಗೀತೆಯಾಗಿ ಬಿಟ್ಟಿತು , ಅದು . ನೀವೂ ಒಮ್ಮೆ ಅವನ ಆ ಹಾಡನ್ನು ಕೇಳಬೇಕು . ಒಳ್ಳೆ ಎಂಜಾಯ್ ಮಾಡ್ತೀರೀ . ಚಿಕ್ಕವನಿದ್ದಾಗ ಸ್ವಲ್ಪ ಕಾಲಿಗೆ ಪೆಟ್ಟು ಬಿದ್ದಿದ್ದರೂ ಈತನಿಗೆ ಈ ಹಾಡು ಬಾಯಲ್ಲಿ ಬಂತೆಂದರೆ ಕುಣಿಯಲು ತೊಡಗುತ್ತಾನೆ . " ಹುಷಾರ್ , ಮಾರಾಯ … ಕಾಲು ' ಎಂದರೂ " ಇರಲಿ . . ಬಿಡಿ ' ಎಂದು ದನಿ ಏರಿಸುತ್ತಾನೆ . ಆ ದನಿ " ಅನಂತವಾಗಿ ' ದಿಗಂತದವರೆಗೂ ಮುಟ್ಟುವಂತೆ . ಹೀಗೆ ಬ್ರಹ್ಮಚಾರಿಗಳೆಲ್ಲರೂ ಪ್ರತಿಭಾವಂತರೇ . ಮುಂದಿನ ಅಧ್ಯಾಯಗಳಲ್ಲಿ ಉಳಿದವರ ಪ್ರತಿಭೆಯೂ ಬೆಳಕಿಗೆ ಬರಲಿದೆ , ಹುಷಾರ್ , ಕಣ್ಣಿಗೆ ಕೋರೈಸಬಹುದು … ಹ್ಹ … ಹ್ಹ … ಹ್ಹ … . !
ದೊಡ್ಡಮ್ಮ ಇದನ್ನೆಲ್ಲಾ ನೋಡುತ್ತಾ , ಸುರುಬುರು ಮಾಡುತ್ತಾ , ಇಷ್ಟರವರೆಗೂ ಸುಮ್ಮನೇ ಕುಳಿತಿದ್ದವರು , " ಅಯ್ಯೋ … . ನನ್ನ ವಿಧಿಯೇ . ಮಗಳ ಬಾಯಲ್ಲಿ ಇಂತಹ ಮಾತು ಕೇಳುವ ಕರ್ಮ ನನ್ನ ಹಣೆಯಲ್ಲಿ ಬರೆದಿತ್ತು . " ಎಂದು ತಲೆ ಚಚ್ಚಿಕೊಂಡು ಅಳತೊಡಗಿದರು . ನಡುರಾತ್ರಿಯಲ್ಲಿ ದೊಡ್ಡಮ್ಮನ ಅಳು ಪುಟ್ಟಿಯಲ್ಲಿ ಭಯ ಹುಟ್ಟಿಸಿತು . ತನ್ನಿಂದ ದೂರದಲ್ಲಿ , ಕಂಬವೊಂದರ ಬದಿಗೆ ಅಸಹಾಯಕತೆಯಿಂದ ಎಲ್ಲವನ್ನೂ ದಿಟ್ಟಿಸುತ್ತಾ ನೋವುಣ್ಣುತ್ತಿದ್ದ ಅಮ್ಮನ ಬಳಿ ಓಡಿಹೋಗಲೇ ಎಂದೊಮ್ಮೆ ಯೋಚಿಸಿದಳು . ಅಮ್ಮನಿಂದ ಅನತಿದೂರದಲ್ಲೇ ಕುಳಿತಿದ್ದ ಕಠಿಣ ಮುಖಭಾವದ ಅಪ್ಪನನ್ನು ನೋಡಿ ಪುಟ್ಟಿಗೆ ಧೈರ್ಯವಾಗಲಿಲ್ಲ . ನಿಂತಲ್ಲೇ ನಿಂತು ಕಾಲು ನೋವಾದಂತಾಗಿ ಅಲ್ಲೇ ಮಂಡಿಯೂರಿ ಕುಳಿತುಕೊಂಡಳು .
ಹಾಸಿಗೆಯಲ್ಲೇ ಬಿದ್ದು ಹೊರಳಾಡುತ್ತಿದ್ದೆ , ಯಾವ ಯಾವ ಕೋನ ತ್ರಿಕೋನಾಕಾರಗಳಲ್ಲಿ ಮೈಮುರಿಯಲು ಸಾಧ್ಯವಿತ್ತೊ ಅದೆಲ್ಲ ಮಾಡಿಯಾಗಿತ್ತು , ಆದರೂ ಇನ್ನೂ ಅವಳೇಕೇ ಬಂದು ಎಬ್ಬಿಸುತ್ತಿಲ್ಲ ಅಂತ ಯೋಚಿಸುತ್ತ ಬಿದ್ದುಕೊಂಡಿದ್ದೆ , ಏನಿಲ್ಲ ಎಬ್ಬಿಸಲು ಬಂದರೆ ಸ್ವಲ್ಪ ಕೀಟಲೆ ಮಾಡಿ ಎದ್ದರೆ ದಿನವೆಲ್ಲ ಚೆನ್ನಾಗಿರುತ್ತದಂತ . ಅವಳೂ ಹಾಗೆ ಒಂದೊಂದು ದಿನ ಒಂದೊಂದು ಥರ ಏಳಿಸೊದು , ಒಂದು ದಿನ ಬಯ್ದು , ಬಡಿದು ಎಬ್ಬಿಸಿದರೆ , ಮತ್ತೊಂದು ದಿನ ಮಗು ಎಬ್ಬಿಸಿದ ಹಾಗೆ ಮೆಲ್ಲನೆ ಬಂದು ಮೈದಡುವವಳು . ಮಗುದೊಂದು ದಿನ " ಏಳಿ ಎದ್ದೇಳಿ . . " ಅಂಥ ವಿವೇಕಾನಂದರ ಶೈಲಿಯಲ್ಲಿ ಹೊಸ ಹುರುಪುತುಂಬಿ ಎಬ್ಬಿಸೋದು . . . ಈ ವೈವಿಧ್ಯತೆಯಲ್ಲಿ ಏಕತೆ ಅನ್ನೊ ಹಾಗೆ ನಮ್ಮದು ವೈವಿಧ್ಯತೆಯಲ್ಲಿ ಏಳುವಿಕೆ . ಹೀಗೆ ಬರೆದರೆ ಏಳುವ ಬಗ್ಗೆ ನಾ ಪ್ರಬಂಧ ಮಂಡಿಸಬಹುದು . ಇನ್ನೇನು ಅವಳು ಬರುವ ಹಾಗೆ ಕಾಣದಾದಾಗ ಎದ್ದೆ , ಎಲ್ಲಿರುವಳೆಂದು ಹುಡುಕಿದೆ ಮನೆಯೆಲ್ಲ ಹುಡುಕಿದೆ ಎಲ್ಲೂ ಸಿಗಲಿಲ್ಲ , ಅಯ್ಯೊ ದೇವದೂತರು ಬಂದು ದೇವಕನ್ಯೆಯೆಂದು ಎಲ್ಲಾದರೂ ಎತ್ತಿಕೊಂಡು ಹೋದರೋ ಅಂತ ಚಿಂತಿತನಾದೆ ಕೂಡ . ಮನೆ ಬಾಗಿಲು ಸ್ವಲ್ಪ ತೆರೆದಿರುವಂತೆ ಕಾಣಿತು , ಹೊರಬಂದು ನೋಡಿದರೆ ಅಲ್ಲಿರುವಳಲ್ಲ ! ! ! ರಂಗೋಲಿ ಹಾಕುತ್ತಿದ್ದಾಳೆ . ಕುಕ್ಕರಗಾಲಿನಲ್ಲಿ ಕೂತು ಅದೇನೋ ಗಹನ ವಿಚಾರದಲ್ಲಿರುವಂತೆ ತನ್ಮಯತೆಯಿಂದ ಒಂದೊಂದೇ ರೇಖೆ ಎಳೆಯುತ್ತಿದ್ದಾಳೆ , ನಾನು ಸಾಫ್ಟವೇರ ಪ್ರೋಗ್ರಾಮ ಕೂಡ ಅಷ್ಟು ತನ್ಮಯತೆಯಿಂದ ಬರೆದಿರಲಿಕ್ಕಿಲ್ಲ . ಆದರೆ ರಂಗೋಲಿ ಬಿಡಿಸುತ್ತಿರುವುದು ಮತ್ತದೇ ನಾ ಬೇಡವೆಂದ ಜಾಗದಲ್ಲೇ ! ಅದೇ ಗೇಟಿನ ಮುಂದೆ , ನನ್ನ ಬೈಕು ಹೊರ ತೆಗೆಯಲಾಗದಂತೆ . . . ಇಂದಲ್ಲ ಇದು ನಿನ್ನೆ ಮೊನ್ನೆಯಿಂದಲೇ ನಡೆದಿರುವ ಶೀತಲ ಸಮರ , ಅದೊಂದು ದಿನ ನಾ ಬೇಗ ಆಫೀಸಿಗೆ ಹೋಗಬೇಕಿತ್ತು ಗೇಟಿನ ಮುಂದೆ ಇಷ್ಟು ಅಡ್ಡಗಲ ರಂಗೋಲಿ ಹಾಕಿಬಿಟ್ಟಿದ್ದಳು , ಅದನ್ನ ತುಳಿಯಲು ಮನಸಿಲ್ಲ , ಆದರೂ ಇನ್ನೇನು ಮಾಡಲಾಗುತ್ತೆ ಹಾಗೆ ಬೈಕು ಹೊರ ತೆಗೆದೆ , ರಂಗೊಲಿಯೆಲ್ಲ ಹಾಳಾಯಿತು , ಅಷ್ಟು ಇಷ್ಟಪಟ್ಟು ತೆಗೆದದ್ದು ಹಾಳಾಗಿದ್ದರಿಂದ ಅವಳೂ ಸಿಟ್ಟಿಗೆದ್ದು ಬಯ್ದಳು , ಅವಸರದಲ್ಲಿ ನಾ ಹಾಗೆ ಮಾಡಿದ್ದೆಂದರೂ , ಮುಂಜಾನೆಯೇ ಎದ್ದು ಬೈಕು ಹೊರಗಿಡಬೇಕಿತ್ತೆಂದು ಅವಳ ವಾದ , ನನಗೂ ಲೇಟಾಗಿದ್ದರಿಂದ ಆಕಡೆಯೆಲ್ಲಾದರೂ ಬಿಡಿಸಬೇಕಿತ್ತು ನಡೆದಾಡುವ ದಾರಿಯಲ್ಲಿ ಹಾಕಿದರೆ ಹೇಗೆ ಅಂತ ನಾನು , ಅಂತೂ ಮನಸ್ತಾಪವಾಗಿತ್ತು . ಹೀಗೆ ಕೆಲದಿನ ಅವಳು ಮತ್ತದೇ ಜಾಗದಲ್ಲಿ ರಂಗೋಲಿ ಬಿಡಿಸುವುದು . . ಮತ್ತದೇ ರಾಗ ಮತ್ತದೇ ತಾಳ . . . ಇಂದು ಅವಳು ತಾದ್ಯಾತ್ಮತೆಯಿಂದ ಆ ರಂಗೋಲಿ ಬಿಡಿಸುತ್ತಿರುವುದ ನೋಡುತ್ತಿದ್ದರೆ ಏನಿದು ? ಏನಿದೆ ಈ ರಂಗೋಲಿಯಲ್ಲಿ , ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲೇಬೇಕು ಅಂತ ತೀರ್ಮಾನಿಸಿದೆ . ಅವಳು ನನ್ನ ನೋಡಿರಲಿಲ್ಲ , ನೋಡಲೆಂದೇ ಜೋರಾಗಿ ಆಕಳಿಸಿ ಮೈಮುರಿದೆ , " ಏನೊ ಮಹರಾಜರಿಗೆ ಈಗ ಏಳೊಣವಾಯಿತೋ ! " ಅಂತಂದಳು . ಹಲ್ಲುಜ್ಜದ ಹಲ್ಲುಗಳನ್ನೇ ತೆರೆದು ಹೀ . . ಅಂತ ಹಲ್ಲು ಗಿಂಜಿದೆ . " ಬಂದೆ ಟೀ ಇನ್ನೂ ಮಾಡಬೇಕು " ಅಂತ ಮತ್ತೆ ಉಲಿದಳು , " ಏನು ಮಹರಾಣಿಯವರು ಸ್ವತ : ಖುದ್ದಾಗಿ ರಾಜಬೀದಿಯನ್ನು ಅಲಂಕರಿಸುವಂತಿದೆ " ಅಂತ ಅವಳಿಗಿಂತ ನಾನೇನು ಕಮ್ಮಿ ಅನ್ನುವಂತೆ ಡೈಲಾಗು ಹೊಡೆದೆ . ಮುಖವೆತ್ತಿ ನೋಡಿದವಳು , ಹಲ್ಲು ಗಿಂಜುತ್ತಿದ್ದ ನನಗೆ " ಮೊದಲು ಹಲ್ಲು ಉಜ್ಜಿ ಹೋಗಿ , ಬರ್ತೇನೆ " ಅಂತ ಖಾರವಾದಳು . ಹಲ್ಲುಜ್ಜಿ ಬಂದವನು ಮತ್ತೆ ಹಾಗೇ ನೋಡತೊಡಗಿದೆ , ಬಹಳ ಅಂದವಾಗಿ ಬಿಡಿಸಿದ್ದಳು , ನಡುವೆಯೊಂದು ಗುಲಾಬಿ ಹೂವಿನ ತೊಟ್ಟು , ಸುತ್ತಲೂ ಹರಡಿರುವ ಪಕಳೆಗಳು , ಅಲ್ಲೊಂದು ಇಲ್ಲೊಂದು ಅನ್ನುವಂತೆ ಎಲೆಗಳು . ಮೊದಲೆಲ್ಲ ಅಷ್ಟು ಗಮನಿಸಿರಲಿಲ್ಲ , ನನ್ನ ಬೈಕು ತೆಗೆಯುವುದೇ ನನಗೆ ಹೆಚ್ಚಾಗಿತ್ತು . ಅವಳು ಬಿಡಿಸುತ್ತಿದ್ದಲ್ಲಿಗೇ ಹೋಗಿ ಕುಳಿತೆ , ಓರೆಯಾಗಿದ್ದ ಎಲೆಯ ಎಸಳೊಂದನ್ನು ಸರಿಪಡಿಸಿದೆ , ಅಷ್ಟರಲ್ಲಿ " ರೀ ಎದ್ದೇಳ್ರಿ , ಸಾಕು ನೀವೇನಿದು , ಯಾರಾದರೂ ಏನಂದುಕೊಂಡಾರು " ಅಂತ ಎದ್ದೇಳಿಸಿಯೇಬಿಟ್ಟಳು . ಒಳಗೆ ಬಂದಮೇಲೆ ಬಿಸಿ ಬಿಸಿ ಟೀ ಸಿಕ್ಕಿತು , ಸ್ನಾನ ಮಾಡದೇ ಹಾಗೆ ಎದ್ದು ಹೊರಗೆ ಹೊರಟೆ , ಶರ್ಟು ಹಾಕಿಕೊಳ್ಳುತ್ತಿದ್ದಂತೇ " ಎಲ್ಲಿ " ಅಂತ ಬಂದು ಕೇಳಿದಳು , " ಈಗ ಬಂದೆ " ಅಂತ ಸುಮ್ಮನೇ ಏನೂ ಹೇಳದೇ ಹಾಗೆ ಹೊರಟೆ , ಹೊರಬಂದು ಹಲಗೆಯೊಂದು ತಂದು ಸ್ವಲ್ಪ ಎತ್ತರಿಸಿ ರಂಗೋಲಿ ಮೇಲಿಟ್ಟು ಅದು ಸ್ವಲ್ಪವೂ ಹಾಳಾಗದಂತೆ ಹರಸಾಹಸ ಮಾಡಿ ಬೈಕು ಹೊರತೆಗೆದೆ . ಅವಳು ನಿಂತು ಕಿಟಕಿಯಲ್ಲಿ ನೋಡುತ್ತಿದ್ದಳು , ಹೊರಗೆ ಬಂದು " ಪರವಾಗಿಲ್ಲ ಹಾಗೇ ಅದರ ಮೇಲೆ ಹೋಗಿ ಏನಾಗಲ್ಲ " ಅಂದ್ಲು ಆದ್ರೂ ರಂಗೋಲಿಗೇನೂ ಆಗದಂತೆ ಹೊರಬಂದೆ . ಸೀದಾ ಅಂಗಡಿಗೆ ಹೋಗಿ ನಾಲ್ಕು ಥರ ಕಲರು , ಅದನ್ನ ಹಾಕಿಡಲು ಚೌಕಾಕಾರದ ಖಾನೆಗಳಿರುವ ಡಬ್ಬಿ ಎಲ್ಲ ತೆಗೆದುಕೊಂಡು ಮನೆಗೆ ಬಂದು , ರಂಗೋಲಿಗೆ ಬಣ್ಣ ಮಿಶ್ರಣ ಮಾಡಿ ಅವಳ ಕೈಗಿತ್ತು ಅದರಲ್ಲಿ ಬಣ್ಣ ತುಂಬೆಂದೆ . ಒಂಥರ ನನ್ನ ಬದುಕೆಂಬ ರಂಗೊಲಿಯಲ್ಲಿ ಬಣ್ಣ ತುಂಬು ಅಂದಂಗಿತ್ತು . " ಆಂ ಅಲ್ಲಿ ಹಸಿರು , ಅಲ್ಲಿ ತಿಳಿ ಹಸಿರು , ಗುಲಾಬಿ ಸ್ವಲ್ಪ ತಿಳೀಯಾದರೆ ಚೆನ್ನಾಗಿರುತ್ತದೆ " ಅಂತನ್ನುತ್ತ ಅವಳು ಬಣ್ಣ ತುಂಬುತ್ತಿರಬೇಕಾದರೆ ಅಲ್ಲೇ ಹತ್ತಿರ ಕುಳಿತಿದ್ದೆ , ಪಕ್ಕದ ಮನೆ ಪದ್ದು ನೋಡಿ ಅಸೂಯೆಪಟ್ಟಿದ್ದೆ ಪಟ್ಟಿದ್ದು . ಅಂತೂ ರಂಗೋಲಿ ತುಂಬ ಬಣ್ಣ ಬಳಿದದ್ದಾಯ್ತು . ಬಾಗಿಲು ತೆರೆದೇ ಇಟ್ಟಳು ರಂಗೋಲಿ ಕಾಣುತ್ತಿರಲೆಂದು , ಮತ್ತೊಂದು ರೌಂಡು ಅಂತ ಟೀ ಹೀರುತ್ತ ಅದೇ ರಂಗೋಲಿ ನೋಡುತ್ತ ಕುಳಿತವನ ಹತ್ತಿರ ಬಂದು ಅಂಟಿಕೊಂಡು ಕುಳಿತಳು , " ರೀ ಏನ್ ನೀವ್ ಇಷ್ಟೆಲ್ಲ ಮಾಡಿದ್ರೆ , ನಾ ಅಲ್ಲಿ ರಂಗೋಲಿ ಹಾಕದೇ ನಿಮ್ಮ ಬೈಕಿಗೆ ದಾರಿ ಬಿಡ್ತೀನಿ ಅನ್ಕೊಂಡಿದೀರಾ ? " ಅಂತ ತಣ್ಣಗೆ ಕೇಳಿದಳು ಅವಳ ಅನುಮಾನವು ಸರಿಯಾಗಿತ್ತು , ದಿನಾಲೂ ರಂಗೊಲಿ ಹಾಕಿದ್ದಕ್ಕೆ ಬಯ್ಯೊವರು ಇಂದು ಅದರಲ್ಲಿ ಬಣ್ಣ ತುಂಬುತ್ತಾರೆಂದ್ರೆ ಅನುಮಾನ ಬಾರದಿರುತ್ತದೆಯೇ , ಇವಳು ಅಂತ ಕೇಳಿ ಪರೀಕ್ಷಿಸ್ತೀದಾಳೆ , ಬೇರೆಯವರಾಗಿದ್ರೆ , ಹಾಗೇ ಅಂದುಕೊಂಡು ಸುಮ್ಮನಾಗಿರುವವರು . " ಮರದ ಹಲಗೆ ಇದೆ , ಏನ್ ಪ್ರಾಬ್ಲಂ ಇಲ್ಲಾ , ನೀನೆಲ್ಲೇ ರಂಗೋಲಿ ಹಾಕು ನನಗೇನೂ ಅಭ್ಯಂತರವಿಲ್ಲ " ಅಂದೆ , " ನಂಗೊತ್ತು ಇಂದು ನಿಮಗೆ ರಂಗೋಲಿ ಇಷ್ಟವಾಗಿದೆ , ಇಲ್ಲಾಂದ್ರೆ ಬಣ್ಣ ಎಲ್ಲ ತಂದಿದ್ದು ಯಾಕೆ " ಅಂದ್ಲು . . . ನಾನೇನೂ ಹೇಳದೇ ನನಗೆ ರಂಗೋಲಿ ಇಷ್ಟವಾಗಿದ್ದನ್ನು ತಿಳಿಯಪಡಿಸಿದ್ದೆ . " ಮೊನ್ನೇನೂ ನೀನು ಚೆನ್ನಾಗೆ ಬಿಡಿಸಿರಬೇಕು , ನನಗೆ ನೋಡುವ ವ್ಯವಧಾನವಿರಲಿಲ್ಲ ಅಷ್ಟೇ , ನನಗೆ ಬೈಕು ತೆಗೆಯುವುದು ಮುಖ್ಯವಾಗಿತ್ತೇ ಹೊರತು ನೀ ಕಷ್ಟಪಟ್ಟು ಬಿಡಿಸಿದ ರಂಗೋಲಿಯನ್ನೆಲ್ಲ ನೋಡುವುದಲ್ಲ " ಅಂದೆ . " ಅಯ್ಯೊ ಅದರಲ್ಲೇನು ಮಹಾ , ಕಷ್ಟಪಡೋದು , ಸುಮ್ನೇ ಹಾಕಿದ್ದು " ಅಂದ್ಲು " ಯಾವಾಗ ಕಲಿತೆ " ಅಂದೆ . " ಅದಕ್ಕೇನು ಸ್ಕೂಲಾ ಟೀಚರಾ ಅಮ್ಮ ಬಿಡಿಸುವುದ ನೋಡಿ ಕಲಿತೆ " ಅಂದ್ಲು , ಮತ್ತೆ ಯಾವ ಯಾವ ಡಿಸೈನು ಹಾಕುತ್ತಾಳೆ , ಏನಾದ್ರು ಅಚ್ಚುಗಳನ್ನು ತಂದಿಟ್ಟಿದ್ದಾಳಾ , ಅಂತೆಲ್ಲ ಕೇಳಿ ತಿಳಿದುಕೊಂಡೆ , ಅವಳೂ ಬಲು ಹುರುಪಿನಿಂದ ಹೇಳಿದಳು , ಅದು ಬರೀ ಹೊಗಳಿಕೆಗಾಗಿ ಆಗಿರಲಿಲ್ಲ , ಅವಳ ಕಲೆಗೆ ನನ್ನ ಪ್ರಶಂಸೆಯಾಗಿತ್ತು , ಅದರಲ್ಲಿ ನಾ ಆಸಕ್ತಿ ತೋರಿಸಿದ್ದೆ , ಇಷ್ಟೆಲ್ಲ ದಿನ ಶೀತಲ ಸಮರಕ್ಕೂ ಕಾರಣ ಅವಳ ಆ ಕಲೆಯನ್ನು ನಾ ಗುರಿತಿಸಲಾಗದಿದ್ದದ್ದೇ , ಹಾಗೂ ಅದಕ್ಕೆ ತಕ್ಕ ಮನ್ನಣೆ ಕೊಡದಿದ್ದುದು ಅಷ್ಟೇ . ಅವಳಿಗೆ ಕೆಲವು ಹೊಸ ಹೊಸ ಆಧುನಿಕ ಡಿಸೈನುಗಳನ್ನೂ ಬರೆದು ಕೊಟ್ಟೆ , ಜತನವಾಗಿ ತೆಗೆದಿಟ್ಟುಕೊಂಡಳು . ಎಷ್ಟೋ ಬಾರಿ ಏನೊ ಚೆನ್ನಾಗಿರುವುದ ನೊಡುತ್ತೇವೆ , ಅದನ್ನ ನಾವು ಹೊರಗೆ ಹೇಳಲ್ಲ , ರುಚಿಯಾಗಿ ಮಾಡಿದ ಒಂದು ಸಾರು ಪಲ್ಯವೇ ಇರಬಹುದು , ಇಷ್ಟ ಪಟ್ಟು ಧರಿಸಿದ ಉಡುಪೇ ಆಗಿರಬಹುದು , ಒಪ್ಪ ಓರಣವಾಗಿ ಜೋಡಿಸಿಟ್ಟ ಮನೆಯ ಸಾಮಾನುಗಳೇ ಆಗಿರಬಹುದು , ಇಲ್ಲ ಚೆನ್ನಾಗಿ ಬಿಡಿಸಿದ ಈ ರಂಗೋಲಿಯೇ ಆಗಿರಬಹುದು , ಚೆನ್ನಾಗಿದೆ ಅಂತ ಮನಸಿನಲ್ಲಿ ಅಂದುಕೊಂಡುಬಿಟ್ಟರೆ ಹೇಗೆ , ಅದು ಅವರಿಗೆ ಗೊತ್ತಾಗುವುದು ಹೇಗೆ , ಯಾಕೆ ನಾವು ಇಂಥ ಚಿಕ್ಕ ಚಿಕ್ಕ ವಿಷಯಗಳಲ್ಲಿ ಅಸಡ್ಡೆ ತೋರಿಸುತ್ತೇವೆ . ಅದೇ , ಅನ್ನಕ್ಕೆ ಉಪ್ಪು ಜಾಸ್ತಿಯಾಗಿದ್ದರೆ ಹೇಳಲು ಮರೆಯುವುದಿಲ್ಲ , ಝಗಮಘ ಅನ್ನುವ ಸೀರೆ ಉಟ್ಟು ಅ - ಸಹ್ಯವಾಗಿ ಕಂಡರೆ ಟೀಕಿಸಲು ಮರೆಯುವುದಿಲ್ಲ , ಎಲ್ಲೋ ಬಿದ್ದಾಡುತ್ತಿರುವ ಸಾಮಾನುಗಳು ಎತ್ತಿ ಇಡುವುದಿಲ್ಲ , ಬೇಕಿದ್ದರೆ ಎತ್ತಿಡು ಅಂತ ಹಾರಾಡುತ್ತೇವೆ . ಯಾಕೆ ಹೀಗೆ ಯಾಕೋ ನನ್ನಲ್ಲೂ ಉತ್ತರವಿಲ್ಲ . ಆದರೂ ಬದುಕೇ ಒಂದು ಸುಂದರ ರಂಗೋಲಿಯೆಂದರೆ ಅದಕ್ಕೆ ಅವಳ ಕೈಯಲ್ಲಿ ನಾ ಬಣ್ಣ ತುಂಬಿಸುತ್ತಿದ್ದೇನೆ . ನಿಮ್ಮ ಮನೆಯ ರಂಗೋಲಿ ಏನು ತುಳಿದು ನಡೆದು ಹೋಗುತ್ತೀರೊ ಇಲ್ಲ . . . ಏನು ಮಾಡುತ್ತಿರೊ ನಿಮಗೆ ಬಿಟ್ಟಿದ್ದು . ಮರುದಿನ ಎದ್ದು ಬೈಕು ತೆಗೆದೆ , ಮರದ ಹಲಗೆಯೇನೂ ಇಲ್ಲದೆ ಪ್ರಯಾಸವಿಲ್ಲದೇ , ಅವಳೇನು ರಂಗೋಲಿ ಹಾಕಿಲ್ಲ ಅಂದುಕೊಂಡಿರಾ ಇಲ್ಲ ಜಾಗ ಬದಲಾಯಿಸಿದಳೆಂದು ಅಂದುಕೊಂಡಿರಾ . ಏನೂ ಇಲ್ಲ , ಅದೇ ಗೇಟಿನ ಮುಂದೆ ರಂಗೋಲಿ ಹಾಕಿದ್ದಳು , ಮತ್ತೆ ನಾ ಹಾಳು ಮಾಡಿದೆನೆ ಇಲ್ಲ . . . ಮತ್ತದೇ ಹೂವುಗಳು ಮತ್ತದೇ ಎಲೆಗಳು , ಬೈಕು ದಾಟುವಷ್ಟು ಜಾಗ ಬಿಟ್ಟು , ಗೇಟಿನ ಇಕ್ಕೆಲಗಳಲ್ಲಿ ಬರುವಂತೆ ರಂಗೋಲಿ ಬಿಡಿಸಿದ್ದಳು , ಬೈಕು ಸರಾಗವಾಗಿ ದಾಟಿತ್ತು . ಬೈಕು ನಿಲ್ಲಿಸಿ ಇಳಿದು , ಅದೊಂದು ಎಸಳನ್ನು ಸರಿ ಮಾಡುತ್ತಿದ್ದೆ , ಕಿಟಕಿಯಲ್ಲಿ ನಿಂತು " ರೀ ಆಫೀಸಿಗೆ ಹೊಗುತ್ತೀರೊ , ಇಲ್ಲ ರಂಗೋಲಿ ಸರಿ ಮಾಡುತ್ತ ಇಲ್ಲೇ ಕೂಡುತ್ತೀರೊ " ಅಂತ ಚೀರಿದಳು , ಪಕ್ಕದ ಮನೆ ಪದ್ದು ಕೂಡ ಹೊರಗೆ ಬಂದಳು ಇವಳ ಬಾಯಿಗೆ , ಪದ್ದೂ ಕೂಡ ನಕ್ಕಳು ನಾ ರಂಗೋಲಿ ಸರಿ ಮಾಡುತ್ತಿರುವುದ ನೋಡಿ , ಎದ್ದು ಅಲ್ಲಿಂದ ಓಟಕ್ಕಿತ್ತೆ . . . ಅವಳು ಇಂದು ರಂಗೋಲಿಗೆ ಬಣ್ಣ ತುಂಬಿರಲಿಲ್ಲ , ಆದರೂ ಅದು ಬಣ್ಣದ ರಂಗೋಲಿಯೆಂತನಿಸುತ್ತಿತ್ತು ನನಗೆ . . . ಮತ್ತೆ ಸಿಗುತ್ತೀನಿ ಅದೇ ನಮ್ಮನೆ ರಂಗೋಲಿ ಸರಿ ಮಾಡುತ್ತ . . .
ಉಡುಪಿ , ಜೂ 7 : ಪ್ರೀತಿಸಿದ ಯುವತಿಗೆ ಮದುವೆ ನಿಶ್ಚಯವಾಗಲಿದೆ ಎಂದು ತಿಳಿದು ಮನನೊಂದು ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಲೆವೂರು ಸೊಸೈಟಿ ಕಾಲನಿಯಲ್ಲಿ ನಡೆದಿದೆ . ಅಲೆವೂರು ಸೊಸೈಟಿ ಕಾಲನಿ ನಿವಾಸಿ ರಮೇಶ್ ಆಚಾರ್ಯರ ಮಗ ಸುರೇಶ್ ಆಚಾರ್ಯ ( 28 ) ಆತ್ಮಹತ್ಯೆ ಮಾಡಿಕೊಂಡ ಯುವಕ . ಸುರೇಶ್ ಆಚಾರ್ಯ ಪ್ರೀತಿಸಿದ ಯುವತಿಗೆ ವಿವಾಹ ನಿಶ್ಚಯ ನಡೆಯಲಿದೆ ಎಂದು ತಿಳಿದು ಬೇಸತ್ತು ನೆಹರೂ ಹೈಸ್ಕೂಲಿನ ಸೈಕಲ್ ನಿಲುಗಡೆ ಮಹಡಿಯ ಪಕ್ಕಾಸಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ . ಈತ ಮೂಡುಬೆಟ್ಟುವಿನ ಆದಿ ಉಡುಪಿಯ ಬಿಲ್ಲವ ಯುವತಿಯನ್ನು ಪ್ರೀತಿಸುತ್ತಿದ್ದ . ಇತ್ತೀಚಿನ ಕೆಲವು ದಿನಗಳ ಹಿಂದೆ ಯುವತಿಯ ಮೊಬೈಲ್ ಸಂಪರ್ಕಕ್ಕೆ ಸಿಗದೇ ಇರುವುದು ಮಾತನಾಡಲು ಸಿಗದೇ ಖಿನ್ನತೆಗೊಳಗಾಗಿದ್ದ ಎನ್ನಲಾಗಿದೆ .
ನಿನ್ನೆ ಮೊನ್ನೆ ಬಂದಿರುವ ಈ ತೆಲುಗು ಅಕಾಡಮಿ ನಮ್ಮ ಏಳಿಗೆಯ ಬಗ್ಗೆ ಏಕೆ ಚಿಂತಿಸಬೇಕು ? ನಾವು ಈ ಕನ್ನಡ ನಾಡಿನ ಋಣಿಗಳು . ನಮಗೆ ತೆಲುಗು ಬರೆ ಮನೆ ಮಾತು . ನಮಗೆ ಕನ್ನಡ ಇರಬೇಕಾದರೆ ನಾವು ತೆಲುಗು ಕಲಿತು ಏನು ಮಾಡಬೇಕು ?
ಬೆಸೆಂಟ್ ಸಮೃದ್ಧ ಬರಹಗಾರ್ತಿ ಮತ್ತು ಪ್ರಬಲ ವಾಗ್ಮಿ . 1889ರಲ್ಲಿ , ದಿ ಸಿಕ್ರೆಟ್ ಡಾಕ್ಟರಿನ್ ಮೇಲೆ ಪಾಲ್ ಮಾಲ್ ಗೆಜೆಟ್ ಗೆ ಒಂದು ವಿಮರ್ಶೆಯನ್ನು ಬರೆಯಲು ಆಕೆಯನ್ನು ಕೇಳಲಾಯಿತು , ಎಚ್ . ಪಿ . ಬ್ಲವಟ್ಸ್ಕಿಯ ಒಂದು ಪುಸ್ತಕ . ಅದನ್ನು ಓದಿದ ನಂತರ , ಆಕೆ ಅದರ ಲೇಖಕನ ಜೊತೆ ಒಂದು ಸಂದರ್ಶನವನ್ನು ಬಯಸಿದರು , ಬ್ಲಾವಟ್ಸ್ಕಿಯನ್ನು ಪ್ಯಾರಿಸ್‌ನಲ್ಲಿ ಭೇಟಿಮಾಡಿದರು . ಈ ರೀತಿ ಆಕೆ ಥಿಯೊಸೊಫಿಗೆ ಪರಿವರ್ತನೆ ಹೊಂದಿದರು . ಅನ್ನಿಯ ಬೌದ್ಧಿಕ ಪ್ರಯಾಣ ಯಾವಾಗಲೂ ಒಂದು ಆಧ್ಯಾತ್ಮಿಕ ಅಯಾಮವನ್ನು ಒಳಗೊಂಡಿತ್ತು , ಇಡೀ ವ್ಯಕ್ತಿಯ ಬದಲಾವಣೆಗೆ ಒಂದು ಅನ್ವೇಷಣೆ . ಥಿಯೊಸೊಫಿಯಲ್ಲಿ ಆಕೆಯ ಆಸ್ತಕಿ ಆಳವಾದ ಹಾಗೆ , ಫ್ಯಾಬಿಯನ್ ಸೊಸೈಟಿಯ ಆಕೆಯ ಸದಸ್ಯತ್ವ ರದ್ದಾಗಲು ಅವರು ಅವಕಾಶ ನೀಡಿದರು ( 1890 ) ಮತ್ತು ಮಾರ್ಕ್ಸ್‌ವಾದಿಗಳ ಜೊತೆಗಿನ ಆಕೆಯ ಸಂಪರ್ಕಗಳನ್ನು ಕಡಿದು ಕೊಂಡರು . 1891ರಲ್ಲಿ ಬ್ಲಾವಟ್ಸ್ಕಿ ಮರಣ ಹೊಂದಿದ್ದಾಗ , ಅನ್ನಿ ಥಿಯೊಸೊಫಿಯಲ್ಲಿ ಪ್ರಮುಖ ಅಕೃತಿಗಳಲ್ಲಿ ಒಬ್ಬರಾಗಿ ಉಳಿದರು . ಚಿಕಾಗೋ ವರ್ಲ್ಡ್ ಫೆರ್‌ನಲ್ಲಿ ಆಕೆ ಪ್ರದರ್ಶಿಸಲು ತೆರೆಳಿದ್ದಾಗ , ನಂಬಿಕೆಗೆ ಅವರ ಅತಿ ಮುಖ್ಯ ಸಾರ್ವಜನಿಕ ಬದ್ದತೆ 1893ರಲ್ಲಿ ಹೊರಹೊಮ್ಮಿತು .
ನಾವು ಒಂದಿಷ್ಟು ಗೆಳೆಯರು ಹೆಜಮಾಡಿಯಿಂದ ಕಾಪು ತನಕ ಹದಿನೈದು ಕಿ . ಮೀ . ಗಳಷ್ಟು ದೂರ ಕಡಲ ತೀರದಲ್ಲೇ ನಡೆದುಕೊಂಡು ಹೋದೆವು . ಅಮೇರಿಕಾದಿಂದ ಗೆಳೆಯರಾದ ಗಿಲ್ಬರ್ಟ್ ಡಿಸೋಜ ಪ್ರೀತಿಯಿಂದ ಕಳುಹಿಸಿದ ಕೆಮರಾದಿಂದ ಕ್ಲಿಕ್ಕಿಸಿದ ಬೀಚ್ ನಡಿಗೆಯ ಒಂದಿಷ್ಟು ಚಿತ್ರಗಳು ನಿಮಗಾಗಿ . ಅದೇ ಹೊಳೆಯಲ್ಲಿ ಒಬ್ಬರು ಬಲೆ ಬೀಸಿ ಮೀನು ಹಿಡಿಯುತ್ತಿದ್ದರು . ನೋಡಿ , ಆ ಕಡೆಯ ಕಡಲ ತೆರೆ ಈ ಕಡೆಯ ಹೊಳೆಯ ನೀರು ಒಂದಾಗುತ್ತಿದೆ . ಮಳೆ ಜೋರು ಬಂದರೆ ಬೀಚ್ ನಡಿಗೆ ಬಂದ್ ! ಮಳೆ ಇಲ್ಲದಿದ್ದರೂ ಕಡಲ ಅಬ್ಬರಕ್ಕೇನೂ ಅಡ್ಡಿಯಿಲ್ಲ . ಒಂದರ ಹಿಂದೊಂದು ಎಂದು ತೆರೆಗಳು ಬರುತ್ತಲೇ ಇರುತ್ತವೆ . ಅವು ಸೋಲುವುದಿಲ್ಲ . ಮತ್ತೆ ಎದ್ದು ಬಂದು ದಡಕ್ಕೆ ಅಪ್ಪಳಿಸುತ್ತವೆ . ಸಮುದ್ರ ಕಿನಾರೆಯಲ್ಲಿ ನಮ್ಮದು ಸಾವಿರ ಸಾವಿರ ಹೆಜ್ಜೆಗಳ ಪಯಣ ! ನೋಡಿದಷ್ಟೂ ಮುಗಿದು ಹೋಗದ ಕಡಲರಾಶಿಯ ಪಕ್ಕದಲ್ಲಿ ನಾವೆಷ್ಟೆಂದರೂ ಅಷ್ಟೆ . ಮನೆಯಲ್ಲಿ ಭೂತ ಪ್ರೇತ ದೈವಗಳ ಉಪಟಳವಿದ್ದಾಗ ಅವನ್ನು ಮಣಿಮಂಚದ ಸಮೇತ ಸಮುದ್ರಕ್ಕೆ ಬಿಸಾಡಿ ಉಚ್ಛಾಟಿಸುವ ನಂಬಿಕೆ ತುಳುನಾಡ ಕರಾವಳಿಯಲ್ಲಿದೆ . ಇದು ಹಾಗೆ ಬಿಟ್ಟು ಹೋದ ಅನಾಥ ಭೂತದ ಮಂಚ . ಇಂತಹ ನೂರಾರು ಮರದ ಆಸನ , ಮಂಚಗಳು ಕಡಲ ತಡಿಯಲ್ಲಿ ಕಾಣ ಸಿಕ್ಕವು . ಬಾಟಲಿಗಂಟಿದ ಜೀವಂತ ಚಿಪ್ಪು ಪ್ರಾಣಿಯ ರಾಶಿ . ಬೀಚ್ನಲ್ಲಿ ಬಾಟಲಿ , ಪ್ಲಾಸ್ಟಿಕ್ , ಬಲ್ಬ್ ಮುಂತಾದ ವಸ್ತುಗಳು ರಾಶಿರಾಶಿ ಸಿಗುತ್ತಲೇ ಹೋಗುತ್ತವೆ . ನಿಂತ ದೋಣಿಯಲ್ಲಿ ಕೂತು ಕೊಂಚ ವಿಶ್ರಾಂತಿ ಪಡೆದ ನಮಗೆ ಪ್ರಕ್ರತಿ ಎಂಬ ಖಾಸಗಿ ರೆಸಾರ್ಟ್ ನೋಡುವ ಅವಕಾಶವೂ ಸಿಕ್ಕಿತು .
ವೆಸ್ಟ್‌ಮಿನ್‌ಸ್ಟರ್ ಆಬ್ಬೆಯಲ್ಲಿನ ಗಾಯಕರ ಪರದೆಯ ಎದುರಿರುವ ಗಾಯಕ ವೃಂದದ ಪ್ರವೇಶದ್ವಾರದ ಉತ್ತರಕ್ಕೆ ನ್ಯೂಟನ್‌ರ ಸಮಾಧಿಯನ್ನು ( 1731 ) ಕಾಣಬಹುದು . ಇದನ್ನು ಶಿಲ್ಪಿ ಮೈಕೆಲ್ ರಿಸ್‌ಬ್ರಾಕ್ ( 1694 - 1770 ) ರು ಬಿಳಿ ಮತ್ತು ಬೂದುಬಣ್ಣದ ಅಮೃತಶಿಲೆಯಲ್ಲಿ ವಾಸ್ತುಶಿಲ್ಪಿ ವಿಲಿಯಂ ಕೆಂಟ್‌ರ ( 1685 - 1748 ) ವಿನ್ಯಾಸದ ಮೇರೆಗೆ ಕೆತ್ತಿದ್ದರು . ಸಮಾಧಿಯ ಮೇಲೆ ನ್ಯೂಟನ್‌ರ ಮೂರ್ತಿಯು ಶಿಲಾಶವಸಂಪುಟದ ಮೇಲೆ ಒರಗಿಕೊಂಡಿರುವಂತೆ ಹಾಗೂ ಅವರ ಬಲ ಮೊಣಕೈ ತಮ್ಮ ಅನೇಕ ಶ್ರೇಷ್ಠ ಪುಸ್ತಕಗಳ ಮೇಲೆ ಆನಿಸಿಕೊಂಡಿರುವಂತೆ ಮತ್ತು ಅವರ ಎಡಗೈ ಗಣಿತಶಾಸ್ತ್ರದ ವಿನ್ಯಾಸವನ್ನು ಹೊಂದಿರುವ ಕಾಗದದ ಸುರುಳಿಯತ್ತ ತೋರುತ್ತಿರುವಂತೆ ಚಿತ್ರಿಸಲಾಗಿದೆ . ಅವರ ಮೇಲೆ ಪಿರಮಿಡ್ ಹಾಗೂ ರಾಶಿಚಕ್ರದ ಚಿಹ್ನೆಗಳನ್ನು ಹೊಂದಿರುವ ಹಾಗೂ 1680ರ ಧೂಮಕೇತುವಿನ ಪಥವನ್ನು ತೋರಿಸುವ ಬಾಹ್ಯಾಕಾಶ ಗೋಲವಿದೆ . ದೂರದರ್ಶಕ ಮತ್ತು ಪ್ರಿಸಮ್ / ಅಶ್ರಗಗಳಂತಹಾ ಉಪಕರಣಗಳನ್ನು ಹೊಂದಿರುವ ಲಪ್ಪವನ್ನು ಉಬ್ಬುಚಿತ್ರವೊಂದರಲ್ಲಿ ತೋರಿಸುತ್ತದೆ . [ ೫೪ ] ಲ್ಯಾಟಿನ್ ಭಾಷೆಯಲ್ಲಿರುವ ಪೀಠದ ಮೇಲಿರುವ ಶಿಲಾಲೇಖವನ್ನು ಭಾಷಾಂತರಿಸಿದಾಗ :
ನಿನ್ನ ಪ್ರಿತಿಯ ಕನಸಿನ ಮನಸಿನ ಚಂದಾದಾರನು ನಾನು ಚಂದಾ ಬಾಕಿ ನೀಡಲು ನಿನ್ನ ಮನೆಗೆ ಬಂದೇ ಬರುವೆನು ನಾನು ನೇರ ಪ್ರಿತಿಯ ನೀನ್ನ ಹೃದಯದ ವರದಿಗಾರನು ನಾನು ನಿನ್ನ ಕಂಡ ಕ್ಷಣದಲೇ ಮಾತೇ ಮರೆತವನೆ ನಾನು ಕ್ಷಮಿಸು ನಿನ್ನನು ಕೇಳದೆ ನುಡಿಸಲೇ ಬಂದ್ದವನೆ ನಾನು ಹೇಳಿದೆ ಕೇಳದೆ ನಿನ್ನ ಕವನ ಕದ್ದ ಪಾಪಿ ನಾನು . . . . . . . . .
ಮುಖಪುಟ ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು ! - ಮುಂಗಾರು ಮಳೆ ವಿಡಿಯೋ - ಹೊಸತು
ಇದೀಗ ವಿವಿಧ ಭಾರತಿಯಲ್ಲಿ ಕೇಳಿಬಂದ ಈ ಹಾಡನ್ನು ಹಾಗೆಯೇ ಭಾವಾನುವಾದ ಮಾಡಿ ಪ್ರಕಟಿಸಿದ್ದೇನೆ .
ಕಳೆದ ಎರಡು ದಶಕಗಳಲ್ಲಿ ಕೇಂದ್ರದ ರೈಲ್ವೇ ಸಚಿವರಲ್ಲಿ ಹೆಚ್ಚಿನವರು ಬಿಹಾರದೋರು . ನಿತಿಶ್ ಕುಮಾರ್ , ರಾಮ್ ವಿಲಾಸ್ ಪಾಸ್ವಾನ್ , ಲಾಲೂ ಹೀಗೆ ಬಿಹಾರದ ಸಚಿವರ ಸಂಖ್ಯೆ ದೊಡ್ದದು . ಇವ್ರು ಬಾಯಲ್ಲಿ ಹೇಳ್ತಿರೋ ಹಾಗೆ " ಅರ್ಹರಿಗೆ ರೈಲ್ವೇ ಇಲಾಖೆ ಕೆಲಸಗಳಿಗೆ ಸಂದರ್ಶನಕ್ಕೆ ಕರೆ ಹೋಗಿದೆ , ಇದು ಅಖಿಲ ಭಾರತ ಮಟ್ಟದ ಆಯ್ಕೆ ಪ್ರಕ್ರಿಯೆ " ಇತ್ಯಾದಿ ಮಾತುಗಳಲ್ಲಿ ಹುರುಳಿದ್ಯಾ ಅನ್ಸಲ್ವಾ ಗುರು ? ಇವ್ರು ಹೇಳೋದೆ ನಿಜಾ ಆಗಿದ್ರೆ ಅದ್ಯಾಕೆ ಕರ್ನಾಟಕ , ಅಸ್ಸಾಮ್ , ಮಹಾರಾಷ್ಟ್ರದ ಪರೀಕ್ಷೆಗಳಿಗೆ ಭಾರತದ ಇತರೆ ಕಡೆಗಳಿಗಿಂತ ಹೆಚ್ಚು ಅಭ್ಯರ್ಥಿಗಳು ಬಿಹಾರದಿಂದಲೇ ಬಂದರು ಅನ್ನೋ ಕೂಗು ಯಾಕೆ ಎದ್ದಿದೆ ? ಬೆಂಕಿ ಇಲ್ದೇನೇ ಹೊಗೇನಾ ? ಸಮಸ್ಯೆ ಏನಂದ್ರೆ ಭಾರತದಲ್ಲಿ ಯಾರು ಎಲ್ಲಿ ಬೇಕಾದ್ರೂ ಕೆಲಸ ಮಾಡಬಹುದು ಅನ್ನೋದನ್ನೇ ಅಸ್ತ್ರವಾಗಿಸಿಕೊಂಡು ಬಿಹಾರದಂತಹ ಪ್ರದೇಶಗಳ ರಾಜಕಾರಣಿಗಳು , ಭಾರತದ ಮೂಲೆ ಮೂಲೆಗೆ ತಮ್ಮ ನಾಡಿಂದ ಜನರನ್ನು ವಲಸೆ ಮಾಡುಸ್ತಾ ಇರೋದೇ ಆಗಿದೆ .
ತಂದೆಗೆ ಕೊಟ್ಟ ಮಾತನ್ನು ಪಾಲಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಆಲ್ಕೋಹಾಲ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ ಎಂದು ವರದಿಗಳು ಹೇಳಿವೆ . ಮೂಲಗಳ ಪ್ರಕಾರ ಪ್ರಮುಖ ಮದ್ಯ ತಯಾರಿಕಾ ಕಂಪೆನಿಯೊಂದು ಸಚಿನ್ ಜೊತೆ 20 ಕೋಟಿ ರೂಪಾಯಿ ಮೊತ್ತದ ಒಪ್ಪಂದ ಹಾಕುವ ಪ್ರಸ್ತಾಪ ಮುಂದಿಟ್ಟಿತ್ತು . ಆದರೆ ಸಚಿನ್ ಇದನ್ನು ಸರಸಾಗಟಾಗಿ ತಿರಸ್ಕರಿಸಿದ್ದಾರೆ . ಈ ಹಿಂದೆ ಸಚಿನ್ ಟೆಸ್ಟ್ ಕ್ರಿಕೆಟ್‌ಗೆ ಸೇರಿಕೊಂಡ ತಕ್ಷಣ ಅಲ್ಕೋಹಾಲ್‌ಗೆ ಸಂಬಂಧಪಟ್ಟ ಯಾವುದೇ ಜಾಹೀರಾತಿನಲ್ಲಿ ಕಾಣಿಸಿಕೊಳ್ಳದಂತೆ ಅವರ ತಂದೆ ರಮೇಶ್ ತೆಂಡೂಲ್ಕರ್ ಉಪದೇಶ ನೀಡಿದ್ದರು . [ . . . ]
ಹೀಗಾಗಿ ಅಧ್ಯಾತ್ಮ ಎಂಬ ಕಬ್ಬಿಣದ ಕಡಲೆಯನ್ನು ತಿನ್ನಿಸಿ , ನಗೆ ನಗಾರಿಯೆಂಬ ನೀರನ್ನು ಕುಡಿಸಿ ನೀವು ' ನಗೆ ಬಾಂಬು ' ಗಳನ್ನು ಸಿಡಿಸುವಂತೆ ಮಾಡಿ ನಿಮ್ಮ ವಾತಾವರಣವನ್ನು ಹಾಸ್ಯಮಯ ಮಾಡುವ ಉದ್ದೇಶದಿಂದ ನಾವು ಬರೆಯಲು ಒಪ್ಪಿಕೊಂಡಿದ್ದೇವೆ . ಮುಂದಿನ ಸಂಚಿಕೆಯಿಂದ ನಮ್ಮ ಅಧ್ಯಾತ್ಮ ಪ್ರವಚನವನ್ನು ಶುರು ಮಾಡುವೆವು . ಶಿರಸ್ತ್ರಾಣ , ಕರ್ಣ ಕವಚಗಳನ್ನು , ನೇತ್ರ ಕುಂಡಲಗಳನ್ನು ತಯಾರು ಮಾಡಿಟ್ಟು ಕೊಳ್ಳುವವರಿಗೆ ಸಾಕಷ್ಟು ಸಮಯಾವಕಾಶವಿದ್ದೇ ಇದೆ .
1986ರಲ್ಲಿ " ಜರ್ನಲ್ ಆಫ್ ದ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ " ಪತ್ರಿಕೆಯು ಅಮೆರಿಕದಲ್ಲಿನ ಆಹಾರ ಮಳಿಗೆಗಳು ಒಣಗಿದ ಕೋಕಾ ಎಲೆಗಳನ್ನು " ಹೆಲ್ತ್ " ಇನ್ ಕಾ ಟೀ ಎಂಬ ದ್ರಾವಣ ತಯಾರಿಸುವ ಸಲುವಾಗಿ ಮಾರುತ್ತಿರುವವೆಂದು ಬಹಿರಂಗ ಪಡಿಸಿತು . [ ೩೮ ] ಅದರ ಪ್ಯಾಕ್ ಮೇಲೆ " ಕೊಕೇನ್ ರಹಿತ " ಎಂದಿದ್ದರೂ ಕೊಕೇನ್ ತೆಗೆಯುವಂತಹ ಯಾವುದೇ ಕಾರ್ಯವೂ ನಡೆದಿರಲಿಲ್ಲ . ಈ ಟೀಯನ್ನು ದಿನಕ್ಕೆ ಎರಡು ಬಟ್ಟಲು ಸೇವಿಸಿದರೆ ಉತ್ಸಾಹದ ಸೆಲೆ ಸ್ವಲ್ಪ ಹೆಚ್ಚಿ , ಹೃದಯಬಡಿತ ಹೆಚ್ಚಾಗಿ , ಮನಃಸ್ಥಿತಿ ಉತ್ತಮವಾಗಿ ಮತ್ತು ಈ ದ್ರಾವಣದಿಂದ ಯಾವುದೇ ಹಾನಿಯುಂಟಾಗದೆಂದು ಆ ಲೇಖನ ತಿಳಿಸಿತು . ಈ ಲೇಖನದ ನಂತರವೂ ಅಮೆರಿಕದ ಪೂರ್ವತೀರದಲ್ಲಿರುವ ಪ್ರದೇಶಗಳಾದ ಹವಾಯೀ , ಷಿಕಾಗೋ . ಇಲಿನಾಯ್ಸ್ , ಹಾಗೂ ಜಾರ್ಜಿಯಾ ಗಳಲ್ಲಿ ಹಲವಾರು ಹಡಗುಗಳಿಂದ DEA ಯು ಈ ಟೀ ಪೊಟ್ಟಣಗಳನ್ನು ವಶಪಡಿಸಿಕೊಂಡಿತಲ್ಲದೆ ಈ ವಸ್ತುವನ್ನು ಅಂಗಡಿಗಳಿಂದಲೂ ಹೊರಹಾಕಲಾಯಿತು ,
ಕವಲು ಇಂದಿನ ನಮ್ಮಲ್ಲಿ ಕಾಣುತ್ತಿರುವ ಕತೆಯನ್ನೇ ಹೊಂದಿರುವುದರಿಂದ ನಮಗೆ ಅಷ್ಟೊಂದು ಗಂಭೀರವಾದ ಕತೆಯಾಗಿದೆ ಎಂದು ಅನಿಸುವುದಿಲ್ಲ . ತೀರ ಪ್ರಸ್ತುತ ಮತ್ತು ತೀರ ಮಾಮೊಲಿ ಕತೆಯಾಗಿ ಎಲ್ಲವೂ ನಮಗೆ ತಿಳಿದಿದೆಯೇನೂ ಎನಿಸುತ್ತದೆ . ಆದರೆ ಅಲ್ಲಿ ಲೇಖಕರು ತಾವು ಸೃಷ್ಟಿಸಿರುವ ಪಾತ್ರಗಳ ಮೂಲಕ ಕೊಡುತ್ತಿರುವ ಸಂದೇಶ ಮತ್ತು ಎಚ್ಚರಿಕೆಯ ಮಾತುಗಳು ನಮ್ಮ ಇಂದಿನ ಭಾರತೀಯ ಕೌಟಂಬಿಕ ವ್ಯವಸ್ಥೆಗೆ ಒಂದು ಕಿವಿಮಾತಾಗಿದೆ ಎಂದರೇ ತಪ್ಪಲ್ಲ .
ಇಂಥದೇ ಚಿಂತೆ ನರೇಗಲ್ಲಿನ ದೊಡ್ಡ ಕೆರೆಯಲ್ಲಿ ಕೊಳವೆ ಬಾವಿ ತೋಡಿಸಿದವರಿಗೂ ಕಾಡತೊಡಗಿತ್ತು . ಎರಡು ದಶಕಗಳ ಹಿಂದೆ ಇಡೀ ಪಟ್ಟಣದ ನೀರಿನ ಅಗತ್ಯ ಪೂರೈಸಿ , ನೂರಾರು ಎಕರೆಗಳ ಪೈರಿಗೆ ಒಂದು ಅವಧಿಗೆ ನೀರುಣಿಸುತ್ತಿದ್ದ ನರೇಗಲ್ಲಿನ ಕೆರೆಯಲ್ಲಿ ಹೂಳು ತುಂಬಿ , ಮಳೆಯಿಲ್ಲದೇ ಬತ್ತಿಹೋಗಿತ್ತು . ಕೆರೆ ಅಂಗಳದಲ್ಲಿ ಕೊಳವೆ ಬಾವಿ ಕೊರೆಸಿ , ನೀರು ಮೊಗೆಯುವ ಉದ್ದೇಶ ಕೂಡ ವಿಫಲವಾಗುವ ಲಕ್ಷಣಗಳು ಕಂಡಾಗ ಈ ನೀರನ್ನೇ ನೆಚ್ಚಿಕೊಂಡವರು ಹತಾಶರಾಗಿದ್ದರು .
ಮತ್ತೆ ವಸಂತನಾಗಮನ ಮತ್ತೆ ಮತ್ತೆ ತರು ಲತೆಗಳಲಿ ನವ ಚೇತನ ನೇಸರನ ತೀಕ್ಷಣತೆಗೆ ಒತ್ತು ಕೊಡುವ ಕಾಲ ಬರುತಿದೆ ನೀರಿಗಾಗಿ ಬಾಯಿ ಬಿಡುವ ದಿನ
ನಮ್ಮ ಬಾಲ್ಯದ ದಿನಗಳನ್ನು ನೆನಸಿಕೊಂಡರೆ ಇಂದು ರೋಮಾಂಚನವಾಗುತ್ತದೆ . ಅಲ್ಲಿ ಹಲವು ಇಲ್ಲದಿದ್ದರು ಮಹಾನ್ ಸುಂದರ ಕ್ಷಣಗಳಾಗಿದ್ದವು ಎಂದು ಇಂದು ಅನಿಸುತ್ತಿದೆ . ಅದೇ ಬದುಕು ಅಲ್ಲವಾ ಕಳೆದು ಹೋದ ದಿನಗಳನ್ನು ಇಂದು ಯೋಚಿಸುತ್ತಾ . . ಚಿಂತಿಸುತ್ತಾ . . ಅಂದು ಹಾಗೆ ಇದ್ದೆವು ಇಂದು ಹೀಗೆ ಇರುವೆವು ಎಂದುಕೊಳ್ಳುತ್ತಾ . . ಪುನಃ ಪುನಃ ಅದರ ಮೆಲುಕನ್ನು ನಮ್ಮ ಕೊನೆಯ ದಿನಗಳವರೆಗೂ ಯಾವಾಗಲೂ ವಾಸ್ತವಕಕ್ಕೆ ಎಳೆದುಕೊಳ್ಳುತ್ತಿರುತ್ತಲೇ ಇರುತ್ತೇವೆ . ಅಂದಿನ ನಮ್ಮ ಬಾಲ್ಯದ ದಿನಗಳನ್ನು ನಮ್ಮ ಇಂದಿನ ಜಂಜಾಟದ ಜವಾಬ್ದಾರಿಯ ದಿನಗಳಿಗೆ ಹೋಲಿಕೆ ಮಾಡಿಕೊಂಡು ಹಳೆಯ ದಿನಗಳೇ ಚೆನ್ನಾಗಿದ್ದವು ಕಣಪ್ಪಾ ಎಂದುಕೊಳ್ಳುತ್ತೇವೆ . ಅಂದು ಹೀಗೆ ನಾವುಗಳು ನಮಗೆ ಈಗ ಸಿಗುತ್ತಿರುವ ಸ್ವಾತಂತ್ರ್ಯ ಇದ್ದಿರಲಿಲ್ಲ . ನಾವಿನ್ನೂ ಚಿಕ್ಕವರು ಎಂದುಕೊಂಡು . . ಯಾವ ಮನದ ಆಸೆಯನ್ನಾದರೂ ಹಿಡೇರಿಸಿಕೊಳ್ಳಬೇಕಾದರೂ ನಮ್ಮ ಹೆತ್ತವರ ಕಡೆ ಮುಖ ಮಾಡಬೇಕಾದ ದಿನಗಳು ಅವುಗಳು . ನಾವೇನನ್ನು ಸ್ವಾತಂತ್ರ್ಯವಾಗಿ ನಿರ್ಧರಿಸಲಾರದಂತಹ ದಿನಗಳವು . ಒಂದು ಸಿಕ್ಕರೇ ಇನ್ನೊಂದು ಸಿಗಲಾರದಂತಹ ಬರಗಾಲದ ದಿನಗಳವು ಅದರೋ . . ಆ ಕಷ್ಟ ಕಾರ್ಪಣ್ಯ ದಿನಗಳು ಇಂದು ಈ ಸ್ಥಿತಿಯಲ್ಲೂ ಸಹ ಹೆಚ್ಚು ಸಹನೀಯವಾಗುತ್ತವೆ ಯಾಕೆ ? ಇಂದು ನಾವುಗಳೇ ನಮ್ಮ ಕಾಲಮೇಲೆ ನಾವುಗಳೂ ನಿಂತಿದ್ದೇವೆ ಎಂಬ ಬೀಗು . ಏನಾನ್ನಾದರೂ ಯಾವ ಸಮಯದಲ್ಲಾದರೂ ಗಳಿಸಿಕೊಳ್ಳುವ ಶಕ್ತಿಯನ್ನು ಸಂಪಾದಿಸಿದ್ದೇವೆ . ಯಾವುದಕ್ಕೂ ಕೂರತೆ ಎಂಬುದು ಎಳ್ಳಷ್ಟು ಇಲ್ಲ . ಆದರೋ ಯಾಕೆ ಎಲ್ಲಾರೂ ಕಳೆದ ಆ ದಿನಗಳೇ ದಿ ಬೇಸ್ಟ್ ಎಂದುಕೊಳ್ಳುವುದು . ಅಂದು ನಮ್ಮ ದಿನಗಳನ್ನು ಹಾಗೆಯೇ ಹೊಸ ಆಸೆಯಲ್ಲಿ ಹೊಸ ಭರವಸೆಯಲ್ಲಿ ಕಳೆದು ಬಂದಿರುವೆವು . ಆಗ ಯಾವುದಕ್ಕೆ ನಾವುಗಳು ಹಂಬಲಿಸಿದ್ದೇವೋ ಅವುಗಳನ್ನು ಮುಂದೆ ನಾನಂತೊ ಒಂದು ದಿನ ಗಳಿಸಲೇ ಬೇಕು . ಹೀಗೆ ಹೀಗೆ ಬಾಳಬೇಕು ಎಂಬ ಕನಸನ್ನು ಕಂಡ ಫಲವೇ ಇಂದಿನ ಬದುಕಾಗಿರಬೇಕಲ್ಲವಾ ? ಅಂದಿನ ಆ ತುಡಿತ ನಮ್ಮ ಇಂದಿನ ಈ ಸ್ಥಿತಿಗೆ ನಮ್ಮನ್ನು ತಂದು ನಿಲ್ಲಿಸಿರಬಹುದಲ್ಲಾ . . ಅಂದಿನ ಆ ಅಪಮಾನ , ನೋವು , ಕಷ್ಟ , ಆರ್ಥಿಕತೆ , ಸ್ಥಿತಿಯೇ ಇಂದಿನ ಮೆಟ್ಟಿಲಾಗಿರಬೇಕಲ್ಲವಾ ? ಆದರೋ ಯಾಕೆ ನಾವುಗಳು ಅಂದಿನ ಆ ನಿಕೃಷ್ಟ ದಿನಗಳನ್ನೇ ಹೆಚ್ಚು ಆಪ್ಯಾಯಮಾನವಾಗಿ ಕಾಣುತ್ತೇವೆ . ಅಂದು ಕಷ್ಟ ಒಂದು ಇತ್ತು . ಅಂದು ದುಡ್ಡು ಮಾತ್ರ ಇರಲಿಲ್ಲ . ಅಂದು ಈ ಆಸ್ತಿ ಇರಲಿಲ್ಲ . ಆದರೆ ಈಗ ನೋಡಿ ! ಎಂಬ ಈ ಒಂದು ಮಾತು ಈಗ ನಮ್ಮ ನಿಮ್ಮೇಲ್ಲಾರಲ್ಲಿ ಬರಲು ಕಾರಣವಾವುದಾದರೂ ಏನು ಸಾರ್ ? ನಮ್ಮ ಬದುಕು ಕೇವಲ ಹೀಗೇನಾ ! ಯಾವ ಘಟ್ಟದಲ್ಲಾದರೂ ಇರಲಿ . . ಯಾವುದಾದರೂ ಸ್ಥಿತಿಯಲ್ಲಿರಲಿ . . ಎಂದಿಗೂ ನಮ್ಮಗಳಿಗೆ ಇದೇ ಬದುಕು ಚೆನ್ನಾಗಿದೆ , ಸಂತೋಷವಾಗಿದ್ದೇವೆ . . ಎಂದು ನಾವುಗಳು ನಿರ್ಧರಿಸಲು ಸಾಧ್ಯವಿಲ್ಲವೇ ಇಲ್ಲವೆನಿಸುತ್ತದೆ . ಇಂದು ಇರುವ ದಿನಗಳನ್ನು ನೆಮ್ಮದಿಯಾಗಿ ಕಳೆಯಲು ಹಳೆಯ ದಿನಗಳನ್ನು ನೆನಪಿಕೊಳ್ಳುವುದು ಒಂದು ಮಾನವ ಸಹಜ ಅಭ್ಯಾಸವೇನೋ ಎನಿಸುತ್ತದೆ . ನಾನು ಇರುವ ಜಾಗ , ಸ್ಥಿತಿ , ಸಂಬಂಧ , ನೆರೆಹೊರೆ , ಸ್ನೇಹ . . ಹೀಗೆ ಪ್ರತಿಯೊಂದನ್ನು ಹಳೆಯದರ ಜೊತೆಯಲ್ಲಿ ಗುಣಕಾರ , ಭಾಗಕಾರ ಮಾಡಿಯೇ ನಾವುಗಳು ಬದುಕುವಂತಾಗುತ್ತದೆ ಯಾಕೆ ? ಹಾಗೆಯೇ ಯಾವುದೇ ಯಶಸ್ವಿ ವ್ಯಕ್ತಿಯಾಗಲಿ . ಯಾವುದೇ ದೊಡ್ಡ , ಸಾಮಾನ್ಯ ಮನುಷ್ಯನಾಗಿರಲಿ . ಅವನ ಗತಕಾಲದ ದಿನಗಳನ್ನು ಅವನು ಇಂದಿನ ತನ್ನ ಬದುಕಿನೊಂದಿಗೆ ಗುರುತಿಸಿಕೊಳ್ಳುವುದು ಮತ್ತು ಅವುಗಳ ಪುನರ ಸಂಮಿಲನ ಮಾಡಿಕೊಳ್ಳುವುದು ಆಗಾಗ್ಗೆ ನಡೆಯುತ್ತಿರುವ ಅನುಸಂಧಾನವೇ ಸರಿ . ನನಗೆ ಅನಿಸುತ್ತದೆ . ಇಂದಿನ ಮುಂದಿನ ನಮ್ಮ ಬಾಳ ಯಶಸ್ವಿ ನಿರ್ವಹಣೆಗೆ ಅಂದು ನಡೆದಾಡಿದ ಬದುಕಿನ ದಾರಿಗಳು ದಾರಿದೀಪವಾಗುತ್ತಿರಬೇಕು . ಅವುಗಳಲ್ಲಿ ನಾವುಗಳು ಕಲಿತ ಒಂದು ಪಾಠ , ಅವುಗಳಿಂದ ನಾವುಗಳು ಗಳಿಸಿದ ಒಂದು ನೀತಿ , ಅವುಗಳಿಂದ ನಾವುಗಳು ಪಡೆದ ಮಾನವ ಸಂಬಂಧಗಳು ನಮ್ಮನ್ನು ನಾವುಗಳು ಹೆಚ್ಚು ಹತ್ತಿರದಿಂದ ನೋಡಿಕೊಳ್ಳಲು ಸಹಕಾರಿಯಾಗುತ್ತವೆ ಅನಿಸುತ್ತದೆ . ಅದ್ದರಿಂದಲೇ ಆ ದಿನಗಳು ಹೆಚ್ಚು ಹೆಚ್ಚು ಹತ್ತಿರವಾಗಿ ಕಾಣುವುದು . ಮತ್ತು ಅವುಗಳು ನಮ್ಮವೇ ದಿನಗಳಲ್ಲವೇ ಅದ್ದರಿಂದ ಅವುಗಳು ನಮಗೆ ಮಾತ್ರ ಸೀಮಿತವಾದದ್ದವು . ನಾವುಗಳಲ್ಲದೇ ಅವುಗಳನ್ನು ಯಾರು ಪುನಃ ಕೇಳಬೇಕು . ಇತಿಹಾಸ ಅಂದರೇ ಅದೇ ಅಲ್ಲವಾ . . ಚರಿತ್ರೆ ಎಂಬುದು ಪ್ರತಿಯೊಂದಕ್ಕೂ ಇರಲೇ ಬೇಕು . ಚರಿತ್ರೆ ಇಲ್ಲದಿದ್ದರೆ ವರ್ತಮಾನಕ್ಕೆ ಎಲ್ಲಿಯ ಬೆಲೆ ? ವರ್ತಮಾನದ ವರ್ಚಸ್ಸು ಇತಿಹಾಸದಲ್ಲಿರುತ್ತದೆ . ಅದೇ ಇಂದಿನ ನಮ್ಮ ಬೆಳಗು . ಆ ಬೆಳಗು ಯಾವಾಗಲೂ ಜೀವ ಜ್ಯೋತಿಯೇ ಸರಿ ! ನಮ್ಮ ನಮ್ಮ ಚಿಕ್ಕ ಚಿಕ್ಕ ಒಂದೊಂದು ಕಳೆದ ಕ್ಷಣಗಳ ಹಳೆಯ ಮೋಟೆಯ ನೆನಪುಗಳ ಮೇಲಿನ ನಿಲ್ಲದ ಪಯಣ ಎಂದಿಗೂ ನಿಲ್ಲದೇ ನಿರಂತರ ಸಾಗುವ ಹಸಿರು ಉದ್ಯಾನ ಎಕ್ಸ್ ಪ್ರೇಸ್ ಊಗಿಬಂಡಿಯೇ ಸರಿ .
ಪೈಪೋಟಿ ಹನಿಗಳು ಬರೆಯಲೆಂದು ಕುಳಿತಾಕ್ಷಣ ಹೊರಗಡೆ ಮಳೆ ಹನಿಗಳು ಶುರುವಾಗಿಬಿಡೋದೆ ? ? ? ?
ವಸಂತಕಾಲ ಬಂದಾಗ ಮಾವು ಚಿಗುರಲೇಬೇಕು . ಕೋಗಿಲೆ ಹಾಡಲೇಬೇಕು . ಅವುಗಳನ್ನ ನೋಡುವ ಭಾಗ್ಯ ನಮ್ಮಂತಾ ಪರದೇಶದಲ್ಲಿರುವವರಿಗಿಲ್ಲ ಬಿಡಿ . ಆದರೇ ನೋಡುತ್ತಿದ್ದಂತೆಯೇ ಮಂಜಿನ ಬಿಳಿಯ ಬಣ್ಣ ಕರಿಗಿ ಹಸಿರು ವರ್ಣ ಹೊದಿಸಿಕೊಂಡ ಪ್ರಕೃತಿಯು ಯಾವ ದೇಶದ್ದಾದರೂ ನೋಡಲು ಚಂದತಾನೆ . ಬೇಸಿಗೆಗಾಗಿ ಕಾಯಿತ್ತಿರುವ ಮಕ್ಕಳು ಬಣ್ಣದ ಚಿಟ್ಟೆಗಳಂತೆ ಹೊರಬಂದು ಚಿಳಿಪಿಳಿಸುವುದು ನೋಡಲೇ ಬೇಕಾದ ಸುಂದರ ದೃಶ್ಯ . ಬಣ್ಣ ಬಣ್ಣದ ಹೂವುಗಳನ್ನು ಹೊತ್ತು ತಮಗೆ ಮರುಜೀವ ತಂದ ವಸಂತಕ್ಕೆ ಪೂಜಿಸುವಂತೆ ನಿಂತ ಮರಗಳು , ಭೋರ್ಗೆರೆಯುವ ನದಿಗಳ ಮಂಜುಳ ಧ್ವನಿ ಕೇಳಲೇಬೇಕು . ಇದ್ದನ್ನ ತಮ್ಮೊಂದಿಗೆ ಹಂಚಿಕೊಳ್ಳುವ ಭಾಗ್ಯ ನನ್ನದಲ್ಲವೇ ?
ನಮ್ಮೂರಲ್ಲಿ ಎಲ್ಲವೂ ಕನ್ನಡದಲ್ಲೇ ಇದೆ . ಆದರೆ ಬೆಂಗಳೂರಿಗೆ ಹೀಗೊಂದು ಬೇರೆಯಾಗೇ ಕಾನೂನು ತರಬೇಕಾದುದಕ್ಕೆ ಬೆಂಗಳೂರಿನ ಕನ್ನಡಿಗರೂ ಒಮ್ಮೆ ಊಂಕಬೇಕು . ಇಶ್ಟುನಾಳು ಅವರ ಕನ್ನಡದ ಬಗ್ಗೆಯ ಉಡಾಪೆಯೇ ಇದಕ್ಕೆ ಸಲುವು .
ಹೌದು ಗಣೇಶರೇ ನೀವು ಹೇಳುವುದು ಸರಿ . ಹಾದಿ ತಪ್ಪಿದ ಮನವ ತಿದ್ದುವುದನ್ನೂ ಬಿಡಲಾಗುವುದಿಲ್ಲ . ಅದನ್ನು ತಿದ್ದುವುದು ಅಗತ್ಯವೂ ಸರಿ . ಆದರೆ ನಾನು ಮೇಲೆ ಲೇಖನದಲ್ಲೇ ಹೇಳಿದಂತೆ ಇಂಥವುಗಳನ್ನು ತಿದ್ದಲು , ಸಮಾಜವೇ ರೂಪಿಸಿರುವ ತಂದೆ - ತಾಯಿಯ ಅಧಿಕಾರ , ಗುರುಹಿರಿಯರ ಬೋಧನೆ ಅದನ್ನೂ ಮೀರಿ ಹಾದಿ ತಪ್ಪಿದರೆ , ಪೋಲೀಸ್ ಇದ್ದಾರೆ . ಆದರೆ ಈ moral policing ಸಮಾಜದ ಆಂತರಿಕ ನಿಯಮಗಳನ್ನೇ ಪ್ರಶ್ನಿಸುತ್ತದೆ ಹಾಗೂ ವಿರುದ್ಧವಾಗಿ ನಡೆದುಕೊಳ್ಳುತ್ತದೆ . ಹಾಗಾಗಿ ಪಬ್ ಸಂಸ್ಕ್ರುತಿಯನ್ನು ವಿರೋಧಿಸುವುದಕ್ಕಿಂತ ಹೆಚ್ಚು ದೊಡ್ಡ ದನಿಯಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿರುವುದು ಹಾಗೂ ಅದು ಸರಿ ಕೂಡಾ . . . ಪಬ್ ಸಂಸ್ಕ್ರುತಿಯನ್ನು ಬದಲಾಯಿಸುವುದು ಒಂದು ನಿಧಾನಕ್ಕೆ ನಡೆಯಬೇಕಾದ ಸಾಮಾಜಿಕ ಸುಧಾರಣೆಯೇ ಹೊರತು ಶಾಕ್ ಟ್ರೀಟ್‍ಮೆನ್ಟಿನಿಂದ ಸರಿಪಡಿಸಲಾಗುವ ರೋಗವಲ್ಲ . ಇದು ನನ್ನ ಇಡೀ ಬರವಣಿಗೆಯ ತಾತ್ಪರ್ಯ .
1 . " ಏನು ಎರಡು ದಿನಗಳ ಹಿಂದೆ ಕಾಲ್ ಮಾಡಿದ್ದೆಯಾ . ಮತ್ತೆ ನನ್ನ ಫೋನ್ ರಿಂಗೇ ಆಗಿಲ್ಲ " .
ಗುಝಾರಿಶ್ , ಸಂಜಯ್ ಲೀಲಾ ಬನ್ಸಾಲಿಯವರ ಮತ್ತೊಂದು ಕಲಾತ್ಮಕ ಚಿತ್ರ , ಗುಝಾರಿಶ್ ಎಂದರೆ ಬೇಡಿಕೆ ಅಥವಾ ಕೋರಿಕೆ ಎನ್ನುವ ಅರ್ಥ ಕೊಡುತ್ತದೆ ಅದು ಹೃತಿಕ್ ರೋಷನ್ ನ ಕಣ್ಣುಗಳಲ್ಲಿಯೇ ವ್ಯಕ್ತಾವಾಗಿ ಹೋಗುತ್ತೆ . ಇದೊಂದು ಸಂಜಯ್ ಲೀಲಾ ಬನ್ಸಾಲಿಯವರ ದೃಶ್ಯಕಾವ್ಯ ಎಂದರೆ ತಪ್ಪಾಗಲಾರದು , ಇಲ್ಲಿ ಪಾತ್ರದ ಭಾವನೆಗಳಿಗೆ ಹೆಚ್ಚಿನ ಮಹತ್ವವಿದೆ , ಅದ್ಯಾಕೋ ಗೊತ್ತಿಲ್ಲ ಇಂದ್ರಜಾಲ ಅಥವಾ ಮ್ಯಾಜಿಕ್ ಶೋ ಗಳು ನನಗೆ ತುಂಬಾ ಇಷ್ಟವಾಗಿಬಿಡುತ್ತದೆ , ಕಣ್ಣು ಇಷ್ಟೆಲ್ಲಾ ಮೋಸ ಹೋಗುತ್ತಲ್ಲಾ ಅಂತಲೂ ಇರಬಹುದೇನೋ ?
ಕೆಲ ಸಮಯದ ಬಳಿಕ ಪೂಜೆ ಆರಂಭವಾಯಿತು . ಒಬ್ಬೊಬ್ಬರೇ ಸಂಬಂಧಿಕರು ಬರಲಾರಂಭಿಸಿದ್ದರು . ನಾನು ಅಂದು ಕಚ್ಚೆ ಪಂಚೆಯಲ್ಲಿದ್ದೆ . ಪೂಜೆಯ ಗಡಿಬಿಡಿಯಲ್ಲಿದ್ದೆ . ಪುರೋಹಿತರು 120 ಕಿಲೋಮೀಟರ್ ಸ್ಪೀಡಿನಲ್ಲಿ ಮಂತ್ರ ಹೇಳದೆ ಸುಶ್ರಾವ್ಯವಾಗಿ ಮಂತ್ರಗಳನ್ನು ಹೇಳುತ್ತಿದ್ದರು . ನೆಂಟರಿಷ್ಟರ ಮಕ್ಕಳು ಕಾಂಪ್ಲೆಕ್ಸ್ ತುಂಬಾ ಓಡಾಡಿಕೊಂಡು ಕಣ್ಣಾಮುಚ್ಚಾಲೆ ಆಡುತ್ತಿದ್ದರು . ಇದೇ ಸಮಯದಲ್ಲಿ ಕಾಂಪ್ಲೆಕ್ಸ್ ನ ಹೊರಗೆ ಮತ್ತೆ ಎರಡು ಆಟೋಗಳು ಬಂದು ನಿಂತವು . ಈ ಬಾರಿ ಆಟೋದಿಂದ ಇಳಿದದ್ದು ಮತ್ತೆ ಆರೇಳು ಹಿಜಡಾಗಳು . ಆದರೆ ಈ ಬಾರಿ ತಂಡ ಮಾತ್ರ ಬದಲಾಗಿತ್ತು . ಬಹುಶಃ ಬೆಳಿಗ್ಗೆ ಬಂದ ತಂಡ ಈ ತಂಡಕ್ಕೆ ಮಾಹಿತಿ ಕೊಟ್ಟಿರಬಹುದು . ಇವರು ನೇರಾನೇರ ಕಾಂಪ್ಲೆಕ್ಸ್ ಗೆ ನುಗ್ಗಿದವರೇ ಪೂಜೆ ನಡೆಯುತ್ತಿದ್ದ ಜಾಗಕ್ಕೆ ಬಂದು ಬಿಟ್ಟರು . ಪುರೋಹಿತರಿಗೆ ಇರಿಸು ಮುರಿಸಾಗಿ " ಸ್ವಲ್ಪ ಆಚೆ ನಿಂತ್ಕೊಳ್ಳ್ರಮ್ಮ , ಇಲ್ಲಿ ಮಡಿಯಿದೆ " ಎಂದರೆ , ಒಬ್ಬ ಹಿಜಡಾ ತನ್ನ ಸೀರೆಯನ್ನು ಮಂಡಿಯವರೆಗೆ ಎತ್ತಿ , " ಏ … ನಿನ್ನ ಕೆಲ್ಸ ನೀ ನೋಡು . ನಮಗೆ ನಮ್ಮ ಕೆಲಸ ಮಾಡ್ಲಿಕ್ಕೆ ಬಿಡು ಆಯ್ತಾ ? " ಎಂದು ಎಲ್ಲರೆದುರಿಗೆ ಅಂದ . ಅವರು ಹೇಳಿದ ಹಾಗೆ ಕೇಳದಿದ್ದರೆ ಸೀನ್ ಕ್ರಿಯೇಟ್ ಮಾಡುತ್ತಾರೆ ಎಂದು ನನಗೆ ಗೊತ್ತಾಯಿತು . ಅವರಿಗೆ ತಕ್ಷಣ ಹಣ ಕೊಡೋಣವೆಂದರೆ ನಾನು ಕಂಚೆಪಚ್ಚೆ ಉಟ್ಟಿದ್ದೆ . ನಾಲ್ಕಾಣೆ ಇಟ್ಟುಕೊಳ್ಳಲೂ ಜಾಗವಿರಲಿಲ್ಲ . ಮನೆಯವರೆಲ್ಲ ಯಾವುದೋ ಬೇರೆ ಕೆಲಸದಲ್ಲಿದ್ದರು . ಏನು ಮಾಡಲಿ ತೋಚಲಿಲ್ಲ . ಬಂದ ಸಂಬಂಧಿಕರೆಲ್ಲ ವಿಚಿತ್ರವಾಗಿ ನನ್ನನ್ನೇ ನೋಡುತ್ತಿದ್ದಾರೆ . ಆ ಹಿಜಡಾನ ಸೀರೆ ಮಂಡಿಯಿಂದ ಮತ್ತೂ ಮೇಲೆ ಸರಿದಿದೆ . ಆ ಹಿಜಡಾನ ಸೀರೆ ಮೇಲೆ ಸರಿಯುತ್ತಿದ್ದರೆ ನನ್ನ ಪಿತ್ತ ಕೂಡ ನೆತ್ತಿಗೇರತೊಡಗಿತ್ತು . ಆದರೆ ನಾನು ಏನೂ ಮಾಡುವ ಹಾಗಿರಲಿಲ್ಲ . ಮರ್ಯಾದೆಯ ಪ್ರಶ್ನೆ . ಸಿಟ್ಟು ನುಂಗಿಕೊಳ್ಳಲೇ ಬೇಕಾಯಿತು . ತಕ್ಷಣ ನಮ್ಮ ಸಂಬಂಧಿಕರ ಬಳಿ ಹೋಗಿ " ಯಾರ್ಯಾರ ಹತ್ರ ನೂರ್ನೂರು ರೂಪಾಯಿ ನೋಟಿದ್ಯೋ ಎಲ್ಲಾ ಕೊಟ್ಟು ಬಿಡಿ , ಆಮೇಲೆ ಕೊಡ್ತೀನಿ , ಏನೂ ಅಂದ್ಕೋಬೇಡಿ ಪ್ಲೀಸ್ " ಅಂದವನೇ ಹಣ ಸೇರಿಸತೊಡಗಿದೆ . ಪಾಪ ಎಲ್ಲರೂ ತಮ್ಮ ಬಳಿ ಇದ್ದ ನೂರು ಇನ್ನೂರು ರೂಪಾಯಿಗಳನ್ನು ಕೊಡಲಾರಂಭಿಸಿದರು . ನನಗೆ ಈ ಹಿಜಡಾ ದಂಡು ಅಲ್ಲಿಂದ ಹೋಗಿದ್ದರೆ ಸಾಕಿತ್ತು . ಕೊನೆಗೆ ಒಂದೂವರೆ ಸಾವಿರ ರೂಪಾಯಿ ಸಂಗ್ರಹವಾಗಿತ್ತು . ಅಷ್ಟನ್ನು ಎತ್ತಿಕೊಂಡು ಹಿಜಡಾ ದಂಡು ಮಾಯವಾಯಿತು . ನಾನು ನಿಟ್ಟುಸಿರು ಬಿಟ್ಟೆ . ಈ ಗಡಿಬಿಡಿಯಲ್ಲಿ ಯಾರೋ ಸಂಬಂಧಿಕರೊಬ್ಬರು ನಾಲ್ಕು ನೂರು ರೂಪಾಯಿಗಳನ್ನು ಕೊಟ್ಟಿದ್ದರು . ಅವರು ಯಾರೆಂದು ನಾನು ಮುಖ ಕೂಡ ನೋಡಿಲ್ಲ . ಪಾಪ … ನಮ್ಮ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ಅವರಿಗೆ ನಾಲ್ಕು ನೂರು ರೂಪಾಯಿ ಟ್ಯಾಕ್ಸ್ ಬಿದ್ದಿದೆ .
* ಭಾನಾಮತಿ ಮೂಢನಂಬಿಕೆಯೆ ಅಥವಾ ಮನೋವೈಕಲ್ಯವೇ ? ಹಲವು ಕಡೆ ಹಲವಾರು ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ " ಅತೀಂದ್ರಿಯ ಶಕ್ತಿ " ಯ ಗುಟ್ಟು ಒಡೆಯಲು ವಿಜ್ಞಾನಿಗಳು , ವಿಚಾರವಾದಿಗಳು ಸತತ ಯತ್ನ ನಡೆಸಿದ್ದಾರೆ . ದುರ್ಬಲ ಮನಸ್ಸು ಇಂಥ ಶಕ್ತಿಗಳನ್ನು ಸೃಷ್ಟಿಸಬಲ್ಲುದು ಎಂಬುದಕ್ಕೆ ದೃಷ್ಟಾಂತ ಶ್ರೀಲಂಕಾದ ಪ್ರಕರಣ .
ಸುಮಾರು ಐವತ್ತು ದಶಕಗಳಕಾಲ ಕನ್ನಡ ಚಿತ್ರರಂಗವನ್ನು ಆಳಿದ ಡಾ | | ರಾಜಕುಮಾರರಿಗೆ ಸಿಕ್ಕಿದ್ದು ಒಂದೆ ರಾಷ್ಟೀಯ ಪ್ರಶಸ್ತಿ ಅದು ಕೇವಲ ಹಿನ್ನೆಲೆ ಗಾಯನಕ್ಕೆ ಮಾತ್ರ ಎಂದು ತಿಳಿದು ಆಶ್ಚರ್ಯವಾಯಿತು .
' ' ಶ್ರೀಯುತ ರಸಗೋತ್ರರೇ , ನಾನೇನು ನೋಡುತ್ತಿದ್ದೇನೋ ಅದರಿಂದ ತೀವ್ರವಾಗಿ ದುಃಖಿತನಾಗಿದ್ದೇನೆ . ನಡೆದುದನ್ನು ಮರಳಿ ಸರಿಪಡಿಸಲು ನಮ್ಮಿಂದ ಸಾಧ್ಯವಿಲ್ಲ . ಆದರೆ , ಘಟನೆಯಿಂದ ಸಂತ್ರಸ್ತರಾದವರಿಗೆ ಧಾರಾಳ ಪರಿಹಾರ ಖಚಿತಪಡಿಸುವುದು ನನ್ನ ಕರ್ತವ್ಯವಾಗಿದೆ ' ' ಎಂದು 1984ರ ಡಿ . 7ರಂದು ಭಾರತ ಬಿಡುವ ಕೆಲವೇ ತಾಸುಗಳ ಮೊದಲು ತನ್ನನ್ನು ಭೇಟಿಯಾಗಿದ್ದ ಆಂಡರ್ಸನ್ ಹೇಳಿದ್ದರೆಂದು ರಸಗೋತ್ರ ಜ್ಞಾಪಿಸಿಕೊಂಡಿದ್ದಾರೆ . ಆಂಡರ್ಸನ್ ಆ ವೇಳೆ , ತೀವ್ರ ಉದ್ವೇಗಕ್ಕೆ ಒಳಗಾದವರಂತೆ , ವಿಚಲಿತರಾಗಿದ್ದಂತೆ , ದುಃಖ ವಿಷಾದ ಹಾಗೂ ಪಶ್ಚಾತ್ತಾಪದಿಂದ ಕೂಡಿದ್ದವರಂತೆ ಕಾಣಿಸುತ್ತಿದ್ದರೆಂದು ಅವರು ಸಿಎಸ್‌ಎನ್ - ಐಬಿಎನ್‌ನ ಕರಣ್ ಥಾಪರ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ . ನಡೆದ ದುರಂತಕ್ಕೆ ಯೂನಿಯನ್ ಕಾರ್ಬೈಡ್ ಹೊಣೆಯೆಂಬುದನ್ನು ಆ್ಯಂಡರ್ಸನ್ ಒಪ್ಪಿಕೊಂಡಿದ್ದರೆ ? ಎಂಬ ಪ್ರಶ್ನೆಗೆ , ಅವರು , ಸಂತ್ರಸ್ತರಿಗೆ ಉದಾರ ಪರಿಹಾರ ಲಭಿಸುವಂತೆ ಪ್ರಯತ್ನಿಸುವುದಾಗಿ ಹೇಳಿದ ಮೇಲೆ ಹೊಣೆ ಒಪ್ಪಿರುವರೆಂದೇ ಅರ್ಥ ಎಂದು ರಸಗೋತ್ರ ಉತ್ತರಿಸಿದ್ದಾರೆ .
ಚುಣಾವಣಾ ಆಯೋಗ ಜನರಿಗೆ ದುಡ್ಡು ಹಂಚಿ ಓಟು ದೋಚುವ ಅಭ್ಯರ್ಥಿಗಳನ್ನು ಗುರುತಿಸಿ ಕೇಸು ಹಾಕುತ್ತದೆ ಆದರೆ ಇಲ್ಲಿ ಏನುಮಾಡಲು ಸಾಧ್ಯ . ಗಹಗಹಿಸುತ್ತ ಯಾರ ಅಂಜಿಕೆಯೂ ಇಲ್ಲದೆ ರಾಜಾರೋಶವಾಗಿ ಕೋಟಿ ಕೋಟಿ ಹಂಚುತ್ತಾರೆ . ಸ್ಪೀಕರ್ ಮುಂದೆಯೆ ಪ್ರದರ್ಶನವಾಗುತ್ತದೆ ಕೆಮರಾ ದೇಶಕ್ಕೂ ವಿದೇಶಕ್ಕೂ ಇದನ್ನು ತೋರಿಸುತ್ತದೆ ಇದಾವುದರ ಪರಿವೆ ಇಲ್ಲದ ಜೂಜುಕೋರರು ಕರ್ಕಶವಾಗಿ ಕಿರುಚಾಡುತ್ತಾ ಊಳಿಡುತ್ತಾ ತಮ್ಮ ಮೇಧಾವಿತನವನ್ನು ಪ್ರದರ್ಶಿವುದರಲ್ಲಿ ತಲ್ಲೀನರಾಗಿದ್ದರು . ಪ್ರತಿಯೊಬ್ಬ ಜನರ ಬಳಿಹೋಗಿ ನೋಟು ಹಂಚುವ ಕೆಲಸಕ್ಕಿಂತ ಮಧ್ಯವರ್ತಿಗಳ ಮೂಲಕ ರಖಂ ಆಗಿ ಹೀಗೆ ವಿಕ್ರಯಿಸುವುದು ಸುಲಭ ದಾರಿ ಅಂದುಕೊಂಡಿರುತ್ತಾರೆ . ಇಲ್ಲಿ ಯಾರದ್ದು ತಪ್ಪು ಕೊಟ್ಟವನದ್ದೋ ತಗೊಂಡವನದ್ದೋ . . . . . ಸೂಳೆಗಾರಿಕೆಯಲ್ಲಿ ಪರವಹಿಸಿ ಮಾತಾಡಿದಂತಾಗುತ್ತದೆ . ಇಬ್ಬರೂ ನಾರುವವರೆ . ಮೈ ಮಾರುವಿಕೆಯಲ್ಲಿ ವ್ಯಕ್ತಿ ರೋಗ ತಗುಲಿಸಿಕೊಳ್ಳುತ್ತಾನೆ ಇಲ್ಲಿ ಸಮಾಜಕ್ಕೆ ರೋಗ ತಗುಲಿಸುತ್ತಾರೆ . . . . . ದೇಶ ನರಳುತ್ತದೆ . . . . . . ಆದರೂ ಇವರು ತೊದಲುತ್ತಾರೆ ದೇಶದ ಹಿತಕ್ಕಾಗಿ ಎಂದು .
ಭೋಜರಾಜ ಚಾರಿತ್ರಿಕ ವ್ಯಕ್ತಿ , ಸುಮಾರು ೧೧ನೆಯ ಶತಮಾನದವನು . ಆದರೂ ೫ - ೬ನೆಯ ಶತಮಾನದ ಕಾಳಿದಾಸನ ಹೆಸರಿನೊಂದಿಗೆ ಭೋಜನ ಹೆಸರು ಜೋತುಬಿದ್ದಿದೆ . . . .
ಓ ನೀಲ ಮೇಘವೆ ತ೦ಪನೆರೆಯಲು ಬ೦ದೆಯಾ ಉರಿವ ಬಿಸಿಲಿನೂರಿನಲಿ ಸಾಗರವ ದಾಟಿ ಹರದಾರಿ ಪಯಣಿಸಿ ಬ೦ದಿರುವೆ ನೀ ಪ್ರೀತಿಯ ಮಳೆಯಲಿ ನೀನಿದ್ದು ಬ೦ದಿರುವೆ ದೂರದಲ್ಲಿಹ ಬ೦ದು ಬಾ೦ಧವರ ಗೆಳೆಯರ ಜೊತೆಯಲಿ ತೊನೆದಾಡಿ ಮುದ್ದಾಡಿ ಹೊರಳಾಡಿ ಬ೦ದಿರುವೆ ಅವರ ಅಕ್ಕರೆಯ ಹೊಳೆಯಲಿ ! ಒ೦ದಿಷ್ಟು ಪ್ರೀತಿಯ ಮಳೆ ಸುರಿಸು ಇಲ್ಲಿ ಮಳೆ ಬಾರದೆ ಬೆ೦ದಿರುವ ಊರಿನಲಿ ತ೦ದಿಹೆಯಾ ಮಗನ ಮಧುರ ಅಪ್ಪುಗೆಯ ಮಗಳ ಸವಿಮಾತ ನಿನ್ನ ಬುತ್ತಿಯಲಿ ಮರೆತು ಬ೦ದೆಯಾ ಗೆಳೆಯರ ಮನದಾಳದ ಮಾತುಗಳ ಬರುವ ಆತುರದಲಿ ಇನಿಯಳ ಒಲವಿನ ಸಿಹಿ ಮಾತುಗಳ ಹೇಳಲು ಅರೆ ಕೆ೦ಪೇಕೆ ನಿನ್ನ ಮೊಗದಲಿ ! ನನ್ನವರ ನಾ ನೆನೆ ನೆನೆದು ಬರೆದಿರುವೆನೀ ಕವನ ಇಲ್ಲಿ ಕುಳಿತು ಮರಳುಗಾಡಿನಲಿ ಮರೆಯದಿರು ತಲುಪಿಸಲು ಕಾದಿಹರು ಕಾತುರದಿ ಪ್ರೀತಿಯ ಉದ್ಯಾನನಗರಿಯಲಿ ಇದು ನಮ್ಮ ಹೃದಯಗಳ ಮಾತು ಎಲ್ಲ ನಡೆವುದು ಇಲ್ಲಿ ಮೌನ ಸ೦ಭಾಷಣೆಯಲಿ ಬೇಕಿಲ್ಲ ಪತ್ರ ಎಸ್ಸೆಮ್ಮೆಸ್ಸು ಮೊಬೈಲು ಮೇಲುಗಳು ನೀನೆ ರಾಯಭಾರಿ ನಿಜದಲಿ !
ಮೊಜಿಲ್ಲಾ ಫೈರ್‌ಫಾಕ್ಸ್ ಹಲವಾರು ಪ್ರಶಸ್ತಿಗಳನ್ನು ವಿವಿಧ ಸಂಸ್ಥೆಗಳಿಂದ ಕೊಟ್ಟಿದೆ . ಈ ಪ್ರಶಸ್ತಿ ಒಳಗೊಂಡಂತೆ :
ಫೋಕ್ಸ್ ವ್ಯಾಗನ್ ಪಸ್ಸಾಟ್ ಅಂದ್ರೆ ಬಹಳಷ್ಟು ವರ್ಷಗಳ ಹಿಂದೆಯೇ ದೇಶದ ರಸ್ತೆಯಲ್ಲಿ ಮೋಡಿ ಮಾಡಿದ ಕಾರ್ . ಜರ್ಮನಿಯ ಐಷಾರಾಮಿ ಕಾರ್ ತಯಾರಿಕಾ ಕಂಪನಿ ಈ ವರ್ಷದ ಆರಂಭದಲ್ಲಿಯೇ ಪಸ್ಸಾಟ್ ನ ಹೊಸ ಆವೃತ್ತಿ ಪರಿಚಯಿಸುವುದಾಗಿ ಹೇಳಿತ್ತು . ಕೊನೆಗೂ ಕಾರ್ ಪ್ರೇಮಿಗಳ ಕಾಯುವಿಕೆಗೆ ಅಂತ್ಯ ಸಿಕ್ಕಿದೆ . ನೂತನ ಪಸ್ಸಾಟ್ ರಸ್ತೆಗಿಳಿದಿದೆ . ಇದರ ದರ 20 . 80 ಲಕ್ಷ ರೂ . ನಿಂದ ಗರಿಷ್ಠ
ಕನ್ನಡ ' ವ್ಯಾಕ್ರರಣ ' ದ ಬಗ್ಗೆ ' ಸರಳಾ ' ವಾಗಿ ಪುಸ್ತಕ ಬರೆದು ಅನಿವಾಸಿಕನ್ನಡಿಗರ ಮಕ್ಕಳಿಗೆ ಓದಿಸಬಹುದು / ಬೇಕು ಎಂಬ kanlit ಅವರ ಸಲಹೆ ಕನ್ನಡಕಾಳಜಿಯು ಅವರಲ್ಲಿ ಎಷ್ಟು ಪೂರ್ಣವಾಗಿ ಶೇಖರವಾಗಿದೆಯೆಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ ! ಇಷ್ಟೊಂದು ರಚನಾತ್ಮಕ ಸಲಹೆಯನ್ನು kanlit ನೇರವಾಗಿ srivathsajoshi @ yahoo . com ಗೆ ಬರೆದುತಿಳಿಸಿದ್ದರೆ ಎಷ್ಟೊಂದು ಒಳ್ಳೆಯದಿತ್ತು ! ಅದುಬಿಟ್ಟು ಅನಾಮಧೇಯವಾಗಿ ( = ಮುಸುಕುಧಾರಿಯಾಗಿ ) ಇನ್ನೊಬ್ಬ ಅನಾಮಧೇಯರ ಬ್ಲಾಗ್‍ನಲ್ಲಿ ಆಚೆಕಡೆ ಮುಖತಿರುಗಿಸಿ blabberಇಸಿದರೆ kanlit ಬಗ್ಗೆ ಮರುಕವೆನಿಸುತ್ತದೆ . ದೇವರು kanlitಅನ್ನು ಚೆನ್ನಾಗಿಟ್ಟಿರಲಿ ! ಇತಿ , kanwit : - )
ಬೆಳ್ತಂಗಡಿ : ಸಹೋದರ ನೊಂದಿಗೆ ಸೇರಿ ದರೋಡೆಯ ನಾಟಕವಾಡಿ ಸಂಸ್ಥೆಯೊಂದರ ಹಣ ಲಪಟಾಯಿಸಲು ಯತ್ನಿಸಿದ ವ್ಯಕ್ತಿ ಯನ್ನು ಸೋದರನ ಸಹಿತ ಬಂಧಿಸಿದ ಪೊಲೀಸರು ಅವರಿಂದ ೮೦ ಸಾವಿರ ರೂ .
ಜಯಶ್ರೀ ರಾಜ್ ' ಮುಕ್ತ ಮುಕ್ತ ' ದಲ್ಲಿ ನನ್ನ ಸಹನಟಿ . ಕಳೆದ 12 ವರ್ಷಗಳಿಂದ ನಟಿಸುತ್ತಿರುವ ಜಯಶ್ರೀ ಸೆಟ್ ನಲ್ಲಿ ನನಗೆ ನಟನೆಯ ಟಿಪ್ಸ್ ಗಳನ್ನೂ ಕೊಡುತ್ತಿರುತ್ತಾರೆ . ಈ ಬಾರಿಯ ಸುಧಾದ ಪ್ರತಿಸ್ಪಂದನದಲ್ಲಿ ಅವರ ಸಂದರ್ಶನ ಮೂಡಿ ಬಂದಿದೆ .
ದೊಡ್ಡಣ್ಣ ಅವನ ಸಂಸಾರಕ್ಕೆ ಬೇಕಷ್ಟನ್ನು ಈಗಾಗಲೇ ಮಾಡಿಕೊಂಡಿದ್ದಾನೆ . ಮಕ್ಕಳಿಬ್ಬರೂ ಬೆಂಗಳೂರಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದಾರೆ . ಪಾಲು ಆದರೂ ಆಗದಿದ್ದರೂ ದೊಡ್ಡಣ್ಣನಿಗೆ ಅಂತಹ ಬದಲಾವಣೆಯೇನೂ ಇಲ್ಲ . ಸೊಪ್ಪಿನ ಗುಡ್ಡೆ ಮತ್ತು ಹಳೆತೋಟದ ಸ್ವಲ್ಪ ಅಡಿಕೆ ಮಾತ್ರ ಅವನಿಗೆ ಕಡಿಮೆಯಾಗುವುದು . ಅವನಿಗೆ ಅದೇನೂ ದೊಡ್ಡ ವಿಷಯವಲ್ಲದ್ದರಿಂದ ಪಾಲಿನ ವಿಚಾರದಲ್ಲಿ ನಿರ್ಲಿಪನಂತೆ ವರ್ತಿಸುತ್ತಿದ್ದ . ಇರುವ ಒಟ್ಟು ಇಪ್ಪತ್ತೆರಡು ಎಕರೆ ಜಾಗದಲ್ಲಿ ನಾಲ್ಕು ಸಮಪಾಲು ಮಾಡಿದರೆ ಐದೂವರೆ ಎಕ್ರೆಯಷ್ಟು ಪ್ರತಿಯೊಬ್ಬನಿಗೂ ಸಿಗಬೇಕು . ಆದರೆ ತೋಡು , ತೋಟ , ಗುಡ್ಡೆ ಎಂಬ ವ್ಯತ್ಯಾಸಗಳನ್ನು ಸರಿದೂಗಿಸಿ ಮಾಡಿದರೆ , ಐದೂ ಮುಕ್ಕಾಲು , ಐದೂವರೆ , ಆರೂಕಾಲು , ನಾಲ್ಕೂವರೆ ಎಂದು ವಿಭಾಗಿಸಬೇಕಾಗುತ್ತದೆ . ತೋಟ ಹೆಚ್ಚು ಬಂದವನಿಗೆ ವಿಸ್ತೀರ್ಣದಲ್ಲಿ ಕಡಿಮೆಯಾಗುತ್ತದೆ . ಶೇಖರ ಮತ್ತು ಶ್ರೀಧರ , ಮಾಡುವುದಿದ್ದರೆ ಸಮಾ ಪಾಲೇ ಮಾಡಬೇಕೆಂದು ಹಠ ಹಿಡಿದುದರಿಂದ ಮಾತುಕತೆ ಇಲ್ಲಿವರೆಗೆ ಬಂದು ನಿಂತಿದೆ . ಇನ್ನು ಇದನ್ನು ಹೇಗಪ್ಪಾ ಸರಿ ಮಾಡುವುದೆಂದು ಯೋಚಿಸಿ ಶಿವರಾಮನ ತಲೆ ಚಿಟ್ಟು ಹಿಡಿದು ಹೋಗಿದೆ .
ಬೇಲಿಯಾಚೆಗಿನ ಲೋಕ ವಿಭಿನ್ನ , ವಿಚಿತ್ರ ಎಲ್ಲರದೂ ಓಟವಿಲ್ಲಿ ಎತ್ತ , ಯಾಕೆ ? ಊಹೂಂ . . ಗೊತ್ತಿಲ್ಲ ಬೇಲಿ ದಾಟಿ ಬಂದಾಗಿದೆ ಓಡಲೇಬೇಕು ಇಲ್ಲಿರಲು ನನ್ನದೊಂದು ಓಟ ಮುಂದಿನವರ ಹಿಂದೆ ಆದರೆಷ್ಟು ದೂರ ? ಎಲ್ಲಿಯವರೆಗೆ ? ಯಾವುದರ ಹುಡುಕಾಟ ? ಉತ್ತರವಿಲ್ಲದ ಪ್ರಶ್ನೆಗಳು ' ತಾನು , ತನ್ನದು ' ಎಲ್ಲರೊಳಗಣ ಇದೇ ಭಾವ ನಿಧಾನಿಸಿದವರಿಗೆಲ್ಲ ಹಿಂದಿನವರ ಗುದ್ದು ಬಿದ್ದವರನೆತ್ತುವವರಿಲ್ಲ ಹತ್ತಿ ಮುಂದೋಡುವ ಕಾಲುಗಳ ಸಾಲು . ನಾನು ಓಡುತ್ತಲಿದ್ದೇನೆ ಬಲ ಇಳಿದಿದೆ ; ಸಾಕೆನಿಸಿದೆ ಭಾವಗಳು ಎಚ್ಚರಗೊಂಡಿವೆ ಬೇಲಿಯ ಹೊರಗಿನಲೋಕ ಕೈ ಬೀಸುತ್ತಿದೆ ; ಕರೆಯುತ್ತಿದೆ ಬೇಲಿಯವರೆಗೆ ಹೋಗಲು ಸಹಾಯ ಬೇಕಿದೆ ಅಳುತ್ತೇನೆ ಮಗುವಿನಂತೆ ನಿಧಾನಿಸುತ್ತೇನೆ ; ಬೀಳುತ್ತೇನೆ ಹತ್ತಿ ಹೋದವರು ಹಲವರು ಮತ್ತೆ ನಾನು ಏಳುವ ಲಕ್ಷಣಗಳಿಲ್ಲ
ಆಗಂತುಕ , ನಿಮ್ಮ ಹೆಸರೇ ಹೇಳಿಲ್ಲವಲ್ಲ ! ಸುನಾಥ್ , ವೇಣು , ಮನಸ್ವಿ , ಶ್ರೀ , ಅನ್ನಪೂರ್ಣ , ಸುಶ್ರುತ ಮತ್ತು ವಿಕ್ರಮ್ , ವಿವರಗಳನ್ನು ಇಲ್ಲಿ ಹಾಕಿದರೆ ಎಲ್ಲರಿಗೂ ಇನ್ನೊಂದು ಸ್ವಚ್ಛ ಜಾಗದ ಬಗ್ಗೆ ಹೇಳಿದಂತಾಗುತ್ತದಲ್ಲವೇ ? ಆ ಜಾಗ ಕೆಡಲು ಅದೇ ಆರಂಭ ಆದಂತಾಗುತ್ತದೆ . ಈ ಜಾಗದ ಗುತ್ತಿಗೆ ನಾನು ಪಡೆದಂತೆ ಮಾತಾಡುತ್ತಿದ್ದೇನೆ ಎಂದು ದಯವಿಟ್ಟು ತಿಳಿದುಕೊಳ್ಳಬೇಡಿ . ಎಲ್ಲಾ ವಿವರಗಳನ್ನು ನೀಡಿ ಪರೋಕ್ಷವಾಗಿ ಆ ಸ್ಥಳದ ಅಂದವನ್ನು ಹಾಳುಗೆಡುವುದರಲ್ಲಿ ನಾನು ಪ್ರಮುಖ ಪಾತ್ರ ವಹಿಸುತ್ತಿದ್ದೇನೆ ಎಂದು ಈ ಬ್ಲಾಗ್ ಓದುಗರಲ್ಲಿ ಒಬ್ಬರಾದ ಶ್ರೀಕಾಂತ್ ಕೆ ಎಸ್ ಅವರು ನನಗೆ ಮನದಟ್ಟು ಮಾಡಿದ ಬಳಿಕ ನಾನು ಯಾವುದೇ ಸ್ಥಳದ ಬಗ್ಗೆ ಪೂರ್ಣ ವಿವರಗಳನ್ನು ನೀಡುತ್ತಾ ಇಲ್ಲ . ಕ್ಷಮೆ ಇರಲಿ . ಶಿವು , ಕ್ಷಮೆ ಕೇಳಿ ನನಗೆ ಯಾಕೆ ಮುಜುಗರ ಮಾಡುತ್ತೀರಾ ? ನಿಮಗೆ ಯಾವಾಗ ಪುರುಸೊತ್ತಾಗುತ್ತೋ ಆವಾಗ ಇಲ್ಲಿಗೆ ಬರುವಿರಂತೆ . ಶ್ರೀಕಾಂತ್ , ಇದೊಂದು ' ಬೋರಿಂಗ್ ಪೋಸ್ಟ್ ' ಎಂದೇ ಕಾಟಾಚಾರಕ್ಕಾಗಿ ಪೋಸ್ಟ್ ಮಾಡಿದ್ದೆ . ಆದರೆ ಟಿಪ್ಪಣಿಗಳನ್ನು ನೋಡಿ ನನ್ನ ಅಭಿಪ್ರಾಯ ಬದಲಾಯಿಸಬೇಕಾಯಿತು . ಶ್ರೀ ನಿಧಿ ಮತ್ತು ಅನಂತ , ಧನ್ಯವಾದಗಳು . ಅರವಿಂದ , ಥ್ಯಾಂಕ್ಸ್ ಗುರು , ಮೊದಲಿಗೆ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ ನಿಮ್ಮ ಟಿಪ್ಪಣಿಯನ್ನು ಅಳಿಸಿದ್ದಕ್ಕಾಗಿ . ತಾವು ಈ ಬೀಚ್ ಎಲ್ಲಿದೆ ಎಂದು ನಿಮ್ಮ ಟಿಪ್ಪಣಿಯಲ್ಲಿ ತಿಳಿಸಿದ್ದರಿಂದ ಅದನ್ನು ಡಿಲೀಟ್ ಮಾಡಿದ್ದೇನೆ . ಇಂತಹ ಸ್ಥಳಗಳು ಪ್ರವಾಸಿಗರಿಗೆ ತಿಳಿಯದೇ ಇದ್ದರೆ ಒಳ್ಳೆಯದಲ್ಲವೇ ? ಆ ಸ್ಥಳ ಇನ್ನೂ ಸ್ವಲ್ಪ ಹೆಚ್ಚಿನ ದಿನ ಸ್ವಚ್ಛವಾಗಿಯೂ , ಸುಂದರವಾಗಿಯೂ ಇರುತ್ತದೆ .
ರಮೇಶ ಶಿಂದೆ ಹಿಂದೂ ದೇವತೆಗಳ ವಿಡಂಬನೆಯನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿಯು ಸತತವಾಗಿ ಪ್ರಯತ್ನಿಸುತ್ತಿದೆ . ಮ . ಫಿ . ಹುಸೇನರ ವಿಕೃತ ಮಾನಸಿಕತೆಯ ಪ್ರತೀಕವಾಗಿರುವ ಹಿಂದೂ ದೇವತೆಗಳ ಅಶ್ಲೀಲ ಚಿತ್ರಗಳು ಇಂತಹ ವಿಡಂಬನೆಗಳ ಮೂಲ ಕಾರಣವಾಗಿದೆ . ಆದುದರಿಂದಲೇ ಸಮಿತಿಯು ಈ ಚಿತ್ರಗಳ ಪ್ರದರ್ಶವನ್ನು ನಿಲ್ಲಿಸಲು ನ್ಯಾಯಮಾರ್ಗದಲ್ಲಿ ಪ್ರಯತ್ನಿಸುತ್ತಿದೆ . ೧೨೦೦ಲಿಖಿತ ದೂರುಗಳು , ಆಂದೋಲನಗಳು , ಮನವಿಗಳು ಇಂತಹ ಮಾರ್ಗಗಳನ್ನು ಅವಲಂಬಿಸಿಯೂ ಸರಕಾರ ಈ … Continue reading →
ಈಗಿನಂತೆ 6 ಸದಸ್ಯರು ಮತ್ತು 44 ಅತಿಥಿಗಳು ಆನ್ಲೈನ್ ಇರುವರು .
ಗೊಲ್ಲರು ಹರಿಜನರ ವಿರುದ್ಧ ಆಚರಿಸುವ ಅಸ್ಪೃಶ್ಯತೆಗಿಂತ ಕ್ರೂರವಾದ ಅಸ್ಪೃಶ್ಯತೆಯನ್ನು ತಮ್ಮ ಹೆಣ್ಣುಮಕ್ಕಳ ವಿರುದ್ದವೇ ಆಚರಿಸುತ್ತಿದ್ದಾರೆ . ಚಳಿಯಿರಲಿ , ಮಳೆಯಿರಲಿ ಮುಟ್ಟಾದ ಗೊಲ್ಲರ ಹೆಂಗಸರು ಹಟ್ಟಿಯ ಹೊರೆಗೆ ರಾತ್ರಿಗಳನ್ನು ಕಳೆಯಬೇಕಾದ ಅಮಾನುಷ ಪದ್ಧತಿ ಈಗಲೂ ರೂಢಿಯಲ್ಲಿದೆ . ಬಾಣಂತಿ ಹೆಂಗಸು ಆಗತಾನೆ ಹುಟ್ಟಿದ ಮಗುವಿನೊಡನೆ ಕೆಲವು ದಿನ ಹಟ್ಟಿಯೊರಗಿನ ಮುರುಕು ಗುಡಿಸಲಲ್ಲಿ ಕಾಲ ಕಳೆಯಬೇಕೆಂಬ ಕಟ್ಟಳೆ ಇಂದಿಗೂ ಆಚರಣೆಯಲ್ಲಿದೆ . ಪ್ರಕೃತಿ ಹೆಣ್ಣಿನ ಬಗ್ಗೆ ಕಠಿಣತೆಯನ್ನು ತೋರಿದೆ ; ಪ್ರಕೃತಿಯ ಕಾಠಿಣ್ಯದ ಜೊತೆಗೆ ಗೊಲ್ಲರ ಹೆಂಗಸರು ತಮ್ಮ ಕುಲಾಚಾರದ ಕ್ರೌರ್‍ಯವನ್ನು ಅನುಭವಿಸಬೇಕಾಗಿದೆ .
ಮತ್ತೇ ಒಂದು ಸಿದ್ಧಾಂತವೇ ನಿರ್ಮಾಣವಾಗಿದೆ . ನೀನು ಯಾರನ್ನಾದರೋ ಪ್ರೀತಿಸಿದೆಯೆಂದರೇ ಅವರನ್ನು ಪಡೆಯಲೂ ನೀನು ಸಾಕಷ್ಟು ಜೀವನದಲ್ಲಿ ಕಷ್ಟಪಡಬೇಕಾಗುತ್ತದೆ . . . ಲವ್ ಅಂದರೇ ನೋವು . ಹೀಗೆ ಹತ್ತು ಹಲವು ರೀತಿಯ ಪರಿಸ್ಥಿಗಳು ನಮ್ಮ ಎದುರಲ್ಲಿ ಇಂದು ನಿಂತಿವೆ . ಯಾಕೇ ? ಒಂದು ಸಾಮಾನ್ಯ ಮಧುರ ಭಾವನೆಗಳನ್ನು ತಾನು ಇಷ್ಟಪಟ್ಟವರಿಗೆ ವ್ಯಕ್ತಪಡಿಸಲೂ ಸಾಧ್ಯವಿಲ್ಲವೆ . ಲವ್ ಅಂದರೇ ನಿಜವಾಗಿಯೂ ಕ್ರೈಮಾ ?
೧೨ . ನಗರದ ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಿರುವ , ಶ್ರಮಿಸುತ್ತಿರುವ ಸಂಘ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ಪ್ರಶಸ್ತಿ ಮತ್ತು ಸನ್ಮಾನ ಮಾಡಲಾಗುವುದು . ಈ ಬಗ್ಗೆ ಮಾಹಿತಿ ನೀಡಲು ಮನವಿ .
ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ವಿರುದ್ಧ ಎದುರಾಗಿರುವ ಸೋಲಿನ ನಂತರ ಪ್ರತಿಕ್ರಿಯೆ ನೀಡಿರುವ ಆಸ್ಟ್ರೇಲಿಯಾ ನಾಯಕ ರಿಕಿ ಪಾಂಟಿಂಗ್ ಈ ವಿಶ್ವ ಕಪ್ ನಲ್ಲಿ ಭಾರತವೇ ಫೆವರೀಟ್ ಎಂದಿದ್ದಾರೆ . ಭಾರತ ಅತ್ಯುತ್ತಮವಾಗಿ ಆಡಿ ಗೆಲುವನ್ನು ನಮ್ಮಿಂದ ಕಸಿದು ಕೊಂಡಿದೆ . ಭಾರತವನ್ನೀಗ ಮಣಿಸುವುದು ಕಷ್ಟ . ಸೆಮಿಫೈನಲ್‌ನಲ್ಲೂ ಪಾಕಿಸ್ತಾನವನ್ನು ಮಣಿಸಿ ಭಾರತ ಫೈನಲ್ ತಲುಪಲಿದೆ ಎಂದಿದ್ದಾರೆ . ಭಾರತ ತಂಡವು ಶ್ರೇಷ್ಠ ಬ್ಯಾಟಿಂಗ್ ಕ್ರಮಾಂಕವನ್ನು ಹೊಂದಿದೆ . ಸತತ ಎರಡು ಸೋಲು ನಮಗೆ ನೋವನ್ನುಂಟು ಮಾಡಿದೆ ಎಂದು ಪಾಂಟಿಂಗ್ ಬೇಸರ ವ್ಯಕ್ತಪಡಿಸಿದರು . ಇದೇ ಸಂದರ್ಭದಲ್ಲಿ ಮುಂದಿನ ವಿಶ್ವಕಪ್‌ನಲ್ಲಿ ಆಡುವುದಿಲ್ಲ ಎಂಬುದನ್ನು ಖಚಿತಪಡಿಸಿದ ಅವರು ನಾನು ಏಕದಿನಕ್ಕೆ ನಿವೃತ್ತಿ [ . . . ]
ಮೈಸ್ಪೇಸ್ ಅನ್ನು ನ್ಯೂಸ್ ಕಾರ್ಪೊರೇಶನ್ ಗೆ ಮಾರಾಟ ಮಾಡಿದ ನಂತರ , ಬ್ರಾಡ್ ಗ್ರೀನ್ ಸ್ಫಾನ್ ನು ( ಮೈಸ್ಪೇಸ್ . ಕಾಂ ನ ಒಡೆಯನಾಗಿದ್ದು ಅದನ್ನು ಪ್ರಾರಂಭಿಸಿದ ಮಾತೃಸಂಸ್ಥೆ ಇಂಟರ್ ಮಿಕ್ಸ್ ಮೀಡಿಯಾದ ಷೇರುದಾರ ಹಾಗೂ ಸಂಸ್ಥಾಪಕ , ಹಿಂದಿನ ಸಿ ಇ ಓ ) ನ್ಯೂಸ್ ಕಾರ್ಪ್ ಗೆ ಕಂಪನಿಯ ಮಾರಾಟವನ್ನು ವಿರೋಧಿಸಿದ್ದನು . ಹೊಸ ಇಂಟರ್ ಮಿಕ್ಸ್ ಮೀಡಿಯಾದ ಸಿ ಇ ಓ ರಿಚರ್ಡ್ ರೊಸನ್ ಬ್ಲಾಟ್ ಹಾಗೂ ಸಮಿತಿಯ ಇತರೆ ಸದಸ್ಯರು ಕಂಪನಿಯನ್ನು ಅದರ ನಿಜವಾದ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟಮಾಡಿ ಷೇರುದಾರರನ್ನು ಮೋಸಗೊಳಿಸಿದ್ದಾರೆಂದು ಗ್ರೀನ್ ಸ್ಫಾನ್ ಆಪಾದಿಸಿದನು . [ ೭೨ ] [ ೭೩ ] ವ್ಯಾಲಿವ್ಯಾಗ್ , ಒಂದು ಗಾಸಿಪ್ ಮಾಡುವ ಬ್ಲಾಗ್ ಆಪಾದನೆಗಳ ಮೆಲೆ ವರದಿಮಾಡಿತು , ಅಲ್ಲದೆ ಮೈಸ್ಪೇಸ್ ನ ಸಂಸ್ಥಾಪಕ ಹಾಗೂ ಪ್ರಸಿದ್ಧ ವ್ಯಕ್ತಿ , ಟಾಮ್ ಆಂಡರ್ ಸನ್ ಸಾರ್ವಜನಿಕ ಸಂಪರ್ಕದ ಶೋಧನೆಯೆಂದು ಹೇಳಿಕೊಂಡಿತು . [ ೭೪ ] ಯುವ ಬಳಕೆದಾರರನ್ನು " ಆಕರ್ಶಿಸಲು " ತಾಣದ ಮೇಲೆ ಆಂಡರ್ ಸನ್ ನ ವಯಸ್ಸನ್ನು ಕಡಿಮೆಗೊಳಸಲ್ಪಟ್ಟಿದೆಯೆಂದು ನ್ಯೂಸ್ ವೀಕ್ ನಿಂದ ಕೊನೆಗೆ ದೃಢಪಡಿಸಲ್ಪಟ್ಟಿತು . [ ೭೫ ]
ಕಿಚ್ಚ ಸುದೀಪ್‌ಗೆ ಶುಕ್ರದೆಸೆ ಶುರುವಾದಂತಿದೆ . ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾಲೀಕತ್ವದ ವರ್ಮಾ ಫಿಲ್ಮ್ ಕಂಪನಿ ಇದೀಗ ಕನ್ನಡ ಚಿತ್ರ ನಿರ್ಮಿಸಲು ಮುಂದೆ ಬಂದಿದೆ . ಈ ಚಿತ್ರದ ನಾಯಕನಾಗಿ ಆಯ್ಕೆಯಾಗಿರೋದು ಸುದೀಪ್ . ಹಾಗೆ ನೋಡಿದರೆ ಸುದೀಪ್ ವರ್ಮಾ ಫಿಲ್ಮ್ ಕಂಪನಿಯಲ್ಲಿ ಕೆಲಸ ಮಾಡಲಿದ್ದಾರೆ ಅನ್ನೋದು ಗಾಂಧಿನಗರದಲ್ಲಿ ಹಳೆಯ ಮಾತಾಗಿತ್ತು . ವರ್ಮಾ ನಿರ್ದೇಶನದ ' ಸರ್ಕಾರ್ ' ಚಿತ್ರವನ್ನು ನೋಡಿದ ಸುದೀಪ್ ಕನ್ನಡದಲ್ಲೂ ಸಹಭಾಗಿತ್ವದಲ್ಲಿ ಚಿತ್ರ ನಿರ್ಮಾಣ ಮಾಡಲು ವರ್ಮಾರೊಂದಿಗೆ ಚರ್ಚೆ ನಡೆಸಿದ್ದರಂತೆ . ಅಲ್ಲದೆ ಹಿಂದಿಯ ಸರ್ಕಾರ್ ಚಿತ್ರವನ್ನು ಕನ್ನಡದಲ್ಲಿ ರಿಮೇಕ್ ಮಾಡುವ ಉದ್ದೇಶವೂ ಸುದೀಪ್‌ಗೆ ಇತ್ತಂತೆ . ಆದರೆ ಕಾರಣಾಂತರಗಳಿಂದ ಆ ಯೋಜನೆ ಕೈಬಿಟ್ಟರು ಸುದೀಪ್ . ಇಷ್ಟಾದರೂ ವರ್ಮಾ ಮತ್ತು ಸುದೀಪ್ ಬಾಂಧವ್ಯಕ್ಕೆ ಧಕ್ಕೆಯಾಗಿರಲಿಲ್ಲ . ಈ ಸ್ನೇಹದ ಪ್ರತಿಫಲವೇ ಈ ಹೊಸಾ ಚಿತ್ರ . ವರ್ಮಾ ಫಿಲ್ಮ್ ಕಂಪನಿ ವತಿಯಿಂದ ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ನಾಯಕನಾಗಿ ಸುದೀಪ್ ಅಭಿನಯಿಸುತ್ತಿದ್ದರೆ , ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸತ್ಯ ಚಿತ್ರದಲ್ಲಿ ನಟಿಸಿದ್ದ ಚಕ್ರವರ್ತಿ ಈ ಚಿತ್ರದ ನಿರ್ದೇಶಕ . " ವರ್ಮಾ ಕಂಪನಿಯಲ್ಲಿ ಅಭಿನಯಿಸುವುದಕ್ಕೆ ನನಗೆ ನಿಜಕ್ಕೂ ಖುಷಿಯಾಗುತ್ತದೆ , ಅವರು ನನಗೆ ಮಾದರಿ ನಿರ್ದೇಶಕ " ಎನ್ನುವ ಸುದೀಪ್ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಸಣ್ಣ ಸುಳಿವನ್ನೂ ನೀಡಿಲ್ಲ . ಅಂದಹಾಗೆ ಚಿ . ಗುರುದತ್ ನಿರ್ದೇಶನ ' ಕಾಮಣ್ಣನ ಮಕ್ಕಳು ' ಚಿತ್ರದ ಚಿತ್ರೀಕರಣ ಮುಗಿದ ನಂತರ ಈ ಹೊಸಾ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ .
ಭಾರತದ ರಂಗಸಂಪ್ರದಾಯಗಳೆಲ್ಲದಕ್ಕೂ ಆಧಾರ ಗ್ರಂಥವೆಂದು ನಾವು ಪರಿಗಣಿಸುವುದಾದರೆ ಪ್ರಥಮ ಸ್ಥಾನ ಭರತಮು ವಿರಚಿತ ನಾಟ್ಯಶಾಸ್ತ್ರಕ್ಕೆ . ಜಗತ್ತಿನಲ್ಲಿ ಮೊತ್ತಮೊದಲ ಬಾರಿಗೆ ರಂಗ ಮಾಧ್ಯಮವನ್ನು ಶಾಸ್ತ್ರೀಯವಾಗಿ ತಿಳಿಸಿದ ಹಲವು ಕಲಾಪ್ರಕಾರಗಳಕ್ಕೇ ಇರುವ ವಿಶ್ವಕೋಶವಿದು . ಇದು ಕೇವಲ ಭರತನಾಟ್ಯಕ್ಕಷ್ಟೇ ಅಲ್ಲದೆ ಭಾರತದ ಎಲ್ಲಾ ರಂಗಕಲೆಗಳಿಗೂ ಆಕರ ಗ್ರಂಥ .
ಬೆಂಗಳೂರಿನಲ್ಲಿ 2007 , ಫೆಬ್ರವರಿಯಲ್ಲಿ ಬೃಹತ್ ಸಭೆ ನಡೆಸಿದ್ದ ಒಂದು ಸಂಘಟನೆ , " ಮಸೀದಿ ಕೆಡವಿದವರಿಗೆ ಅಧಿಕಾರ ; ಕೆಲವರಿಗೆ ಗಲ್ಲು " ಎಂದು ಪೋಸ್ಟರ್ ಅಂಟಿಸುವ ಮೂಲಕ ಸಂಸತ್ ಮೇಲೆ ದಾಳಿ ಮಾಡಿದ ಅಫ್ಜಲ್ ಗುರು ಬಗ್ಗೆ ತನಗಿರುವ ಅಕ್ಕರೆಯನ್ನು ವ್ಯಕ್ತಪಡಿಸಿತ್ತು ! ಇದೇ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಮಾಪಿಳ್ಳೆಗಳ ಮತ್ತೊಂದು ಸಂಘಟನೆ ಫೆಬ್ರವರಿ 22ರಂದು ಬೆಂಗಳೂರಿನಲ್ಲಿ ಅಂತಹದ್ದೇ ಸಭೆಯೊಂದನ್ನು ಏರ್ಪಡಿಸಿದೆ . ಮಂಗಳೂರು , ಬೆಂಗಳೂರು , ಹುಬ್ಬಳ್ಳಿ , ಗುಲ್ಬರ್ಗ ಅಥವಾ ರಾಜ್ಯದ ಯಾವುದೇ ಮೂಲೆಗೆ ಬೇಕಾದರೂ ಹೋಗಿ ನೋಡಿ " ಜನ ಮುನ್ನಡೆ " ಅಥವಾ " ಪೀಪಲ್ಸ್ ಮಾರ್ಚ್ " ಎಂಬ ಪೋಸ್ಟರ್‌ಗಳು ಕಾಣುತ್ತವೆ . ಅವುಗಳ ಮೇಲೆ ಶೂದ್ರ , ದಲಿತ ಹಾಗೂ ಅಲ್ಪಸಂಖ್ಯಾತರು ಒಂದಾಗಬೇಕೆಂದು ಕರೆ ನೀಡಲಾಗಿದೆ !
ಸ್ಥಳೀಯ ಗ್ರಾಹಕರನ್ನು ಆಕಷರ್ಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಲಲಿತ ಮಹಲ್ ಹೋಟೆಲ್ ಇಂಥ ಮೇಳ ಆಯೋಜಿಸಿದೆ . ಕಬಾಬ್ ಮೇಳದ ಜತೆಗೆ ಗ್ರಾಹಕರಿಗೆ ಉಚಿತವಾಗಿ ಮಾಕ್ ಟೈಲ್ ನೀಡಲಾಗುತ್ತದೆ . ಚಿಲ್ಲಿ ಮತ್ತು ಮ್ಯಾಂಗೋ ಜ್ಯೂಸ್ನೊಂದಿಗೆ ಮೈಸೂರು ಡಿಲೈಟ್ , ಪ್ರೋಟ್ಸ್ , ರ್ಯಾಪ್ ಸೋಡೀ ಸಹ ಲಭಿಸಲಿದೆ . ಮೇಳದ ಈ ವೈಭವದ ಜತೆಗೆ ಬೋನಸ್ ರೂಪದಲ್ಲಿ ವಸತಿ ದರದ ಮೇಲೆ ಶೇ . 40ರ ರಿಯಾಯತಿಯನ್ನು ಘೋಷಿಸಲಾಗಿದೆ .
ಬಿ . ಎಸ್ . ಶಿವಪ್ರಕಾಶ್ : ನಮ್ಮ ಪತ್ರಕರ್ತ ಮಿತ್ರ . ಬೆಂಗಳೂರಿನವರು . ಕನ್ನಡ - ಕರ್ನಾಟಕದ ವಿಷಯಗಳ ಬಗ್ಗೆ ಬಹಳ ಕಾಳಜಿ , ಭಾವಾರೋಷದಿಂದ ಬರೆಯುತ್ತಾರೆ . ಪಕ್ಷಿ ವೀಕ್ಷಣೆ , ಪ್ರಯಾಣ , ಓದು ಇವರ ಪ್ರೀತಿಯ ಹವ್ಯಾಸಗಳು .
ಬಿಛಡೇ ಸಭೀ ಮೂರ್ತಿ ನಿಧಾನವಾಗಿ ಆ ಗಳಿಗೆಗಳನ್ನು ಮೆಲುಕು ಹಾಕುತ್ತಾರೆ . " ಹೀ ವಸ್ ವೆರಿಮಚ್ ಪಾರ್ಟ್ ಆಫ್ ಮಿ ಎಂಡ್ ಐ ವಾಸ್ ಪಾರ್ಟ್ ಆಫ್ ಹಿಮ್ . ನೀನು ನನಗೆ ಸ್ಫೂರ್ತಿ ಕೊಡ್ತೀಯಾ ಅಂತ ಹೇಳುತ್ತಿದ್ದ . ಎಷ್ಟೊಂದು ವರ್ಷಗಳ ಸ್ನೇಹ . . .
ಮೊನ್ನೆ ತಾನೇ ತೇಜಸ್ವಿಯವರ ಪತ್ನಿ ಆರ್ . ರಾಜೇಶ್ವರಿ ಮೈಸೂರು ಆಕಾಶವಾಣಿಯಲ್ಲಿ ಮಾತನಾಡಿದ್ದರು . ತೇಜಸ್ವಿ ಎಷ್ಟು ಸುಂದರವಾಗಿ ಮಟನ್ ಪಲಾವ್ ಮಾಡುತ್ತಾರೆ ಎಂದು ಗಂಡನ ಎದುರೇ ಕೊಂಡಾಡಿದ್ದರು . ತೇಜಸ್ವಿ ಹಿನ್ನೆಲೆಯಲ್ಲಿ ನಾಚಿಕೊಂಡು ಕೇಳಿಸಿಕೊಳ್ಳುತ್ತಿದ್ದರು . ಈವತ್ತು ಅವರು ಇಲ್ಲ . ಕಾಲ ನಿಜಕ್ಕೂ ತುಂಬಾ ಕೆಟ್ಟ ಕಟುಕ .
ಎರಡು ಕಾರಣಗಳಿಗಾಗಿ ನಿಮ್ಮ ಅಣ್ಣ ಹಾಗೂ ಅಣ್ಣನ ಮಗನನ್ನು ಅಭಿನಂದಿಸಬೇಕು ಎಂದು ಅನಿಸುತ್ತಿದೆ .
ಪಂಚಾಯಿತಿಗಳ , ಯುವಕ ಮಂಡಲಗಳ ಸಹಾಯದಿಂದ ಕೆಲ ಸಣ್ಣಪುಟ್ಟ ಸಂಪ್ರದಾಯಗಳನ್ನು ಊರಿನಲ್ಲಿ ಮತ್ತೆ ಜಾರಿಗೆ ತರಲಾಯಿತು . ಅದನ್ನು ನೀತಿ ನಿರೂಪಣೆಯನ್ನಾಗಿ ಪರಿವರ್ತಿಸಲಾಯಿತು . ಆರಂಭದಲ್ಲಿ ಇದಕ್ಕೆ ಎಂದಿನಂತೆಯೇ ವಿರೋಧ ವ್ಯಕ್ತವಾದರೂ ಯುವಕರ ಸಂಕಲ್ಪ ಶಕ್ತಿಯೆದುರು ಇದಾವುದೂ ನಿಲ್ಲಲಿಲ್ಲ . ನಿಯಮಗಳನ್ನು ಹೇರುವ ಬದಲು ಮನಪರಿವರ್ತನೆಯ ಮೂಲಕ ಅದನ್ನು ಅಳವಡಿಸಿಕೊಳ್ಳುವಂತೆ ಊರವರನ್ನು ಒಲಿಸಲಾಯಿತು . ಒಮ್ಮೆ ಮನೋಭಾವ ಬದಲಾದ ಮೇಲೆ ಮುಂದಿನದು ಕಷ್ಟವಾಗಲಿಲ್ಲ .
ಅಕಸ್ಮಾತ್ ಆಗಿ , ಜಾಹೀರಾತು , ಮೇಲ್ - ಆದೇಶ ಮಾರಾಟ , ಗ್ರಾಹಕ ಬಾಂಧವ್ಯ ನಿರ್ವಹಣೆ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಈಗ ಅಸ್ತಿತ್ವದಲ್ಲಿರುವ ವ್ಯಾಪಾರ ತತ್ವಗಳು ಕೈಬಿಡಲು ವ್ಯಕ್ತಿಯು ತಲುಪಿದ ಅಥವಾ ಭರವಸೆ ನೀಡಿದ ಸಂದರ್ಭದಲ್ಲಿ ಕಡಿಮೆ ದರದಲ್ಲಿ ವಿಶ್ವಾದ್ಯಂತ ಲಕ್ಷಾಂತರ ಜನರನ್ನು ಭೇಟಿ ಮಾಡಿ ಮಾರಾಟ ಪ್ರಕ್ರಿಯೆ ಅಥವಾ ಗುತ್ತಿಗೆ ಪ್ರಕ್ರಿಯೆಯನ್ನು ನಡೆಸಬಹುದು . ವೆಬ್ ಒಂದು ಹೊಸ ಹಂತಕ ಅಪ್ಲಿಕೇಷನ್ ಆಗಿದ್ದು , ಅದು ಅನಿಯಮಿತ ಸಂಖ್ಯೆಯ ಕೊಳ್ಳುವವರು ಮತ್ತು ಮಾರುವವರನ್ನು ಅಗ್ಗದ ದರದಲ್ಲಿ ಒಂದು ಕಡೆ ಸಂಪರ್ಕಿಸುವಂತೆ ಮಾಡಬಹುದು . ದೂರದೃಷ್ಟಿಯುಳ್ಳ ಹೊಸ ವ್ಯಾಪಾರ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ . ಅದರು ತನ್ನ ಹತ್ತಿರದ ಸಾಹಸೋದ್ಯಮ ಬಂಡವಾಳಗಾರರ [ [ ] ] ಅತಿ ಸಮೀಪಕ್ಕೆ ಬಂದಿದ್ದಾರೆ . ಹೊಸ ವಾಣಿಜೋದ್ಯಮಿಗಳಲ್ಲಿ ಕೆಲವರು ವ್ಯಾಪಾರ ಆರ್ಥಿಕತೆಯಲ್ಲಿ ಅನುಭವವನ್ನು ಹೊಂದಿದ್ದರೆ , ಮತ್ತೆ ಕೆಲವರು ಯೋಜನೆಗಳನ್ನು ಹೊಂದಿರಯತ್ತಾರಾದರೂ ಅವರು ಬಂಡವಾಳದ ಒಳಹರಿವನ್ನು ವಿವೇಕದಿಂದ ನಿರ್ವಹಿಸುವುದಿಲ್ಲ . ಅದಲ್ಲದೇ , ಹಲವು ಡಾಟ್ - ಕಾಮ್ ವ್ಯಾಪಾರ ಯೋಜನೆಗಳನ್ನು ಇಂಟರ್ನೆಟ್ ಬಳಕೆಯ ಅಂದಾಜಿನೊಂದಿಗೆ ತಿಳಿಯಲಾಗುತ್ತದೆ . ಅವುಗಳು ಈಗಿರುವ ವ್ಯವಹಾರಗಳಿಗೆ ಇತರ ವಿತರಣಾ ಮಾರ್ಗಗಳನ್ನು ಕಲ್ಪಿಸಬಹುದು . ಹಾಗಾಗಿ ಈಗಿರುವ ವ್ಯಾಪಾರಗಳ ಮಧ್ಯೆ ಯಾವುದೇ ಸ್ಪರ್ಧೆ ಇರುತ್ತಿರಲಿಲ್ಲ . ಬಲಿಷ್ಠ ಅಸ್ತಿತ್ವವನ್ನು ಹೊಂದಿರುವ ಬ್ರ್ಯಾಂಡ್‌ಗಳೊಂದಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ಕಂಪನಿಯು ತನ್ನದೇ ಆದ ಇಂಟರ್ನೆಟ್ ಅಸ್ತಿತ್ವವನ್ನು ಅಭಿವೃದ್ದಿಪಡಿಸಿದಾಗ , ಈ ಭರವಸೆಗಳು ಉಳಿಯುವುದಿಲ್ಲ . ಭಾರಿ ಅಸ್ತಿತ್ವಹೊಂದಿದ ವ್ಯವಹಾರಗಳ ಎದುರು ಹೊಸಬರು ಈ ಮಾರುಕಟ್ಟೆಯನ್ನು ಪ್ರವೇಶಿಸುವ ಪ್ರಯತ್ನವನ್ನು ಕೈಬಿಡುತ್ತಾರೆ . ಈ ಮಾರುಕಟ್ಟೆಯನ್ನು ಪ್ರವೇಶಿಸುವ ಸಾಮರ್ಥ್ಯವನ್ನೇ ಅನೇಕ ಕಂಪನಿಗಳು ಹೊಂದಿರುವುದಿಲ್ಲ .
ಸಂಜೆ ೫ ಗಂಟೆಯವರೆಗೆ ರಸ್ತೆ ಮುಚ್ಚಿರುವುದರಿಂದ ನಾವಿಲ್ಲಿ ಹೆಚ್ಚು ಸಮಯ ಕಳೆಯಲು ಅನುಕೂಲವಾಯ್ತು . ರಸ್ತೆ ಮುಚ್ಚುವ ಪ್ರಕ್ರಿಯೆ ಕಣಿವೆ ರಸ್ತೆಗಳಲ್ಲಿ ಒಮ್ಮುಖ ಸಂಚಾರಕ್ಕೆ ಮಾಡಿಕೊಂಡ ವ್ಯವಸ್ತೆ . ಪ್ರತಿ ೨ ಗಂಟೆಗಳಿಗೊಮ್ಮೆ ಒಂದು ದಿಕ್ಕಿನಿಂದ ವಾಹನಗಳಿಗೆ ಅನುವು ಮಾಡಿ ಕೊಡಲಾಗುತ್ತದೆ . ೫ ಗಂಟೆ ತೆಗೆಯುವ ಬಾಗಿಲಿಗೆ ಕಾಯುತ್ತ ನಿಂತೆವು . ಜೋಷಿಮಠದಿಂದ ಕಣಿವೆ ರುದ್ರ ಭಯಂಕರವಾಗಿದೆ . ಮಂಜಿನಿಂದಾವೃತವಾದ ಕಣಿವೆಗಳು ಅಲ್ಲಲ್ಲಿ ಕುಸಿತದಿಂದಾದ ತೊಂದರೆಗಳು ರಸ್ತೆಯನ್ನು ಹದೆಗೆಡಿಸಿವೆ . ಎಚ್ಚರಿಕೆಯಿಲ್ಲದಿದ್ದರೆ ಕ್ಷಣಮಾತ್ರದಲ್ಲಿ ಅಪಘಾತ ಖಂಡಿತ . ಎಲ್ಲೆಲ್ಲೂ ಬೆಳ್ಳಿಯಂತೆ ಮಿಂಚುವ ಬೆಟ್ಟಗಳು . ಕಣಿವೆಯ ತಳಭಾಗದಿಂದ ಬೆಟದ ಮಧ್ಯಭಾಗಕ್ಕೆ ಬಂದು ಅಲ್ಲಿಂದ ಮತ್ತೊಂದು ಬೆಟ್ಟದ ತಳಭಾಗಕ್ಕೆ ಹೀಗೆ ಸಾಗುತ್ತಾ ಹೋಗುವ ದಾರಿಯಲ್ಲಿ ಬಲು ಎಚ್ಚರಿಕೆಯಿಂದ ವಾಹನ ಚಲಾಯಿಸುತ್ತಿದ್ದ ಪಾಂಡೆ ಬೇರೆ ವಿಧಿ ಇಲ್ಲ ಏಕೆಂದರೆ ರಸ್ತೆ ಅಷ್ಟು ಹದಗೆಟ್ಟಿದೆ ಎನ್ನುವುದಕ್ಕಿಂತ ಅಲ್ಲಿನ ರಸ್ತೆಯನ್ನು ಉತ್ತಮವಾಗಿ ನಿರ್ವಹಿಸಿಸಲು ಸಾಧ್ಯವೂ ಇಲ್ಲವೆಂದೆನಿಸುತ್ತದೆ . ಕೊನೆಗೊಮ್ಮೆ ಬದರಿನಾಥಕ್ಕೆ ಬಂದಿಳಿದೆವು . ಅರ್ಧ ಗಂಟೆ ಅಲ್ಲಿ ಇಲ್ಲಿ ಕೇಳಿ ಓಡಾಡಿ ಉಡುಪಿಯ ಪೇಜಾವರ ಮಠದ ಅನಂತಮಠಕ್ಕೆ ಬಂದಿಳಿದು ಕನ್ನಡದ ಅಕ್ಷರಗಳನ್ನು ಕಂಡಾಗ ಅದೇನೋ ಖುಷಿ . ಸಾರ್ ಬೆಳಿಗ್ಗೆ ಬೇಗ ಹೊರಟರೆ ಮಾತ್ರ ಹರಿದ್ವಾರ ತಲುಪಲು ಸಾಧ್ಯ ಎಂದು ಪಾಂಡೆ ಎಚ್ಚರಿಸಿದ . ದೇವಸ್ತಾನಕ್ಕೆ ಹೋಗಿ ಬದರಿ ನಾರಾಯಣನ ದರ್ಶನ ಮಾಡಿಕೊಂಡು ಬನ್ನಿ ಎಂದರು ಅಲ್ಲಿನ ಆಡಳಿತ ನೋಡಿಕೊಳ್ಳುವ ಶೇಷಾಚಾರ್ . ಅವರು ಹೇಳಿದಂತೆ ದೇವಸ್ತಾನದ ಕಡೆ ಹೊರಟೆವು . ಇಲ್ಲಿ ಬಿಸಿನೀರಿನ ಕುಂಡದಲ್ಲಿ ಮನದಣಿಯೆ ಸ್ನಾನ ಮಾಡಿದೆವು . ನಮ್ಮಲ್ಲಿದ್ದ ಪ್ರಯಾಣದ ಆಯಾಸವೆಲ್ಲ ಪರಿಹಾರವಾಯಿತು . ಕೊರೆಯುವ ಛಳಿಯಲ್ಲೂ ಅದು ಹೇಗೆ ಅಷ್ಟು ಬಿಸಿನೀರು ಬರುತ್ತದೆಯೋ ಗೊತ್ತಿಲ್ಲ . ಹರಿದು ನದಿಗೆ ಸೇರುವವರೆಗೂ ಅದೆ ಬಿಸಿ ಉಳಿದು ಕೊಳ್ಳುವುದು ಆಶ್ಚರ್ಯ . ಸಾಲಿನಲ್ಲಿದ್ದವರೆಲ್ಲ ಬಹುತೇಕರು ಕನ್ನಡಿಗರೆ . ಅದರಲ್ಲೂ ಕೆಲವರು ಕೇದಾರನಾಥದಲ್ಲಿ ಭೇಟಿಯಾಗಿದ್ದವರು . ನೂಕುನುಗ್ಗಲಿನಲ್ಲಿ ನಿಂತು ಬದರೀನಾರಾಯಣನ ದರ್ಶನ ಪಡೆದೆವು . ಫೋಟೋಗಳನ್ನು ತೆಗೆದುಕೊಂಡ ನಂತರ ನಿಧಾನವಾಗಿ ದೇವಸ್ತಾನದಿಂದ ಇಳಿದು ಬಂದೆವು . ದಾರಿಯುದ್ದಕ್ಕೂ ಖರೀದಿ ಮಾಡುತ್ತಾ ಹೊರಟವರಿಗೆ ಮಾರುಕಟ್ಟೆಯ ಕೊನೆಯಲ್ಲಿ ಇಬ್ಬರು ಹೆಂಗಸರು ನಿಂತು ಕನ್ನಡದಲ್ಲಿ ಮಾತನಾಡಿಕೊಳ್ಳಿತ್ತಿದ್ದದ್ದು ಮತ್ತು ಅವರು ಗುಂಪಿನಿಂದ ಬೇರೆಯಾಗಿ ಅವರ ವಾಸ್ತವ್ಯದ ಸ್ಥಳ ಸಿಗದೆ ಪರದಾಡುತ್ತಿದ್ದದ್ದು ಗಮನಕ್ಕೆ ಬಂತು . ನಮ್ಮಲ್ಲಿದ್ದ ದೂರವಾಣಿಗಳಿಂದ ಅವರ ಗುಂಪಿನ ನಾಯಕರನ್ನು ಸಂಪರ್ಕಿಸಲು ಮಾಡಿದ ಪ್ರಯತ್ನ ಆ ಪುಣ್ಯಾತ್ಮ ದೂರವಾಣಿಯನ್ನು ನಿಷ್ಕ್ರಿಯಗೊಳಿಸಿದ್ದರಿಂದ ಸಾಧ್ಯವಾಗಲಿಲ್ಲ . ಅವರು ಕೊಟ್ಟ ಇನ್ನೊಂದು ಸಂಖ್ಯೆ ಧಾರವಾಡೆಯದ್ದಾಗಿತ್ತು . ಕೊನೆಗೆ ನಾನು ಶ್ರೀಕಾಂತ ಅವರಿಬ್ಬರನ್ನು ಅವರ ಗಮ್ಯಕ್ಕೆ ಸೇರಿಸಿ ಬರುವುದಾಗಿ ತಿಳಿಸಿ ಮಿಕ್ಕವರನ್ನು ಕಳಿಸಿದೆವು ಇಲ್ಲದಿದ್ದರೆ ಊಟ ಸಿಗದಿರಬಹುದು ಎಂಬ ಭಯ . ಸರಿ ಅರ್ಧ ಗಂಟೆಯ ಪ್ರಯತ್ನದ ನಂತರ ಅವರ ವಾಸ್ತವ್ಯದ ಸ್ಥಳವನ್ನು ಕಂಡು ಹಿಡಿದು ಅವರನ್ನು ಕೋಣೆಗೆ ತಲುಪಿಸಿ ಹಿಂತಿರುಗಿ ಬಂದು ಊಟಕ್ಕೆ ಕೂತವರಿಗೆ ಹೊಗೆಯಾಡುತ್ತಿದ್ದ ಅನ್ನ ತಿಳಿಸಾರು ನೋಡಿದವರಿಗೆ ಹಸಿವು ಇಮ್ಮಡಿಸಿತು . ತಟ್ಟೆಯಾಕಾರದ ಎಲೆಯ ತಳಭಾಗ ಕಿತ್ತು ಬರುವವರೆಗೂ ಅನ್ನ ಚಟ್ನಿ ತಿಳಿಸಾರು ಅದೆಷ್ಟು ಬರಗೆಟ್ಟು ತಿಂದೆವೆಂದರೆ ಒಂದು ಬಕೆಟ್ ಅನ್ನ ನಿಮಿಶಾರ್ಧದಲ್ಲಿ ಖಾಲಿಯಾಗಿತ್ತು . ನಗುನಗುತ್ತಲೆ ನಮಗೆಲ್ಲ ಉಣಬಡಿಸಿದ ಅನಂತಮಠಕ್ಕೆ ಅದರ ಸಿಬ್ಬಂದಿವರ್ಗಕ್ಕೆ ಅದೆಷ್ಟು ಧನ್ಯವಾದ ಹೇಳಿದರೂ ಸಾಲದು . ಹೊಟ್ಟೆಗೆ ಬಿದ್ದ ಮೇಲೆ ಛಳಿ ತನ್ನ ಪ್ರತಾಪ ತೋರಿಸಲು ಪ್ರಾರಂಭಿಸಿತು . ಬರಿಗಾಲಿನಲ್ಲಿ ಕಾಲಿಡಲೂ ಆಗದಷ್ಟು ನೆಲ ಕೊರೆಯುತ್ತಿತ್ತು . ಶೇಷಾಚಾರ್ ಒಡನೆ ಸ್ವಲ್ಪ ಸಮಯ ಹರಟಿ ಅವರಿಗೆ ನಮಸ್ಕರಿಸಿ ಕೋಣೆ ಸೇರಿದೆವು .
ಆದಿಕವಿ ವಾಲ್ಮೀಕಿ ವಿರಚಿತ ರಾಮಾಯಣ ಪ್ರಪ೦ಚದ ಎಲ್ಲಾ ಪ್ರಮುಖ ಭಾಷೆಗಳಿಗೂ ಅನುವಾದಗೊ೦ಡು , ಅದರ ಕುರಿತು ಹಲವಾರು ಬಗೆಯ ವಿಮರ್ಶೆ - ವಿಶ್ಲೇಷಣೆಗಳು ಇ೦ದಿಗೂ ನಡೆಯುತ್ತಿವೆ . ಹಾಗೇಯೆ ಭಾರತದ ಮಹಾನ್ ಕಾವ್ಯಗಳಲ್ಲಿ ಒ೦ದೆ೦ದು ಪರಿಗಣಿಸುತ್ತ ಬ೦ದಿದ್ದೇವೆ . ರಾಮಾಯಣವನ್ನು " ಆದಿಕಾವ್ಯ " ವೆ೦ದೂ , ಪುರಾಣವೆ೦ದೂ , ಇತಿಹಾಸವೆ೦ದೂ ಎಲ್ಲ ಜ್ನಾನ ಮತ್ತು ವಿವೇಕದ ಗಣಿಯೆ೦ದೂ ಭಾವಿಸಿದ್ದೇವೆ . ಅದೊ೦ದು ಸಾಮುದಾಯಿಕ ಸ್ಮ್ರತಿಕೋಶವಾಗಿದ್ದು , ಅದೊ೦ದು ಕಥೆ , ಆದರ್ಶ ನಡವಳಿಕೆ ಎ೦ದು ಅರಿತಿದ್ದೇವೆ .
ನನ್ನ ಪುಟ್ಟದೊಂದು ಭಿನ್ನಾಭಿಪ್ರಾಯ . ಮತದಾನ ಕಡ್ಡಾಯ ಮಾಡುವ ಕಾನೂನಿನ ಬದಲು ರಾಡಿ ಎದ್ದು ಹೋಗಿರುವ ರಾಜಕೀಯ ಕ್ಷೇತ್ರದ ಹೂಳೆತ್ತುವ ಕೆಲಸವನ್ನು ಸರ್ಕಾರ ಮೊದಲು ನಿಯತ್ತಿನಿಂದ ಮಾಡಿದರೆ ಈಗ ಚುನಾವಣೆ ಹಾಗೂ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಬೆನ್ನು ತಿರುಗಿಸಿ ದೂರಹೋಗುತ್ತಿರುವವರಲ್ಲಿ ಬಹುಪಾಲು ಮಂದಿಯನ್ನು ವಾಪಸ್ಸು ಕರೆತರಲು ಖಂಡಿತ ಸಾಧ್ಯವಿದೆ ಅಲ್ಲವೇ ?
ಈ ಕೊಂಡಿಗೆ ತಾಗಿಕೊಂಡು ಸುದ್ದಿಯನ್ನು ಓದಿ . ಮುಂದೆ ಓದಿ »
ಒಳ್ಳೆಯ ಲೇಖನ ಕಿಶೋರ್ . . . BBMP ಯವರು ಈ ಹೆಜ್ಜೆಯನ್ನು ಬಹಳ ತಡವಾಗಿಯಾದರು ಸರಿಯಾದ ಸಮಯದಲ್ಲೇ ಆದೇಶವನ್ನು ಹೊರಡಿಸಿದ್ದಾರೆ . . . ಈಗಾಗಲೇ ಬಹಳಷ್ಟು ಸಂಸ್ಥೆಗಳು ನಾಮಫಲಕಗಳನ್ನೂ ಕನ್ನಡದಲ್ಲಿ ಹಾಕುತ್ತಿದ್ದಾರೆ , ಇದು ಬಹುಶ ಈ ಆದೇಶದ ಪರಿಣಾಮವಿರಬೇಕು . .
ಕಾಸರಗೋಡು : ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಹೃದಯವಾಹಿನಿ ಪತ್ರಿಕೆಯ ಜಂಟಿ ಆಶ್ರಯದಲ್ಲಿ ಆ . 1 ಮತ್ತು 2ರಂದು ಲಲಿತಕಲಾ ಸದನದಲ್ಲಿ ನಡೆಯುವ 6ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿದರ್ೇಶಕ ಮನು ಬಳಿಗಾರ್ ಉದ್ಘಾಟಿಸುವರು . ಹಿರಿಯ ಕವಿ ಕಯ್ಯಾರ ಕಿಞ್ಞಣ್ಣ ರೈ ಅಧ್ಯಕ್ಷತೆ ವಹಿಸುವರು . ಕೆ . ಶಿವರಾಮ ಶೆಟ್ಟಿ ಅವರು ಬರೆದ ` ಕಾಸರಗೋಡಿನ ಸ್ವಾತಂತ್ರ್ಯ ಹೋರಾಟಗಾರರು ' ಕೃತಿಯನ್ನು ಹಂಪಿ ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿದರ್ೇಶಕ ಡಾ . ಮೋಹನ ಆಳ್ವ ಬಿಡುಗಡೆಗೊಳಿಸುವರು . ಸಂಸದ ಪಿ . ಕರುಣಾಕರನ್ , ಶಾಸಕ ಸಿ . ಟಿ . ಅಹಮ್ಮದಾಲಿ , ದುಬೈ ಕನ್ನಡ ಸಂಘದ ಅಧ್ಯಕ್ಷ ಸಿ . ಆರ್ . ಶೆಟ್ಟಿ , ಕ . ಸಾ . ಪ . ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು , ಪತ್ರಕರ್ತ ಎಸ್ಕೆ ಹಳೆಯಂಗಡಿ , ಲಲಿತಕಲಾ ಸದನದ ಅಧ್ಯಕ್ಷ ವೈಎಸ್ವಿ ಭಟ್ , ಸಾಹಿತಿ ಮೋಹನ ನಾಗಮ್ಮನವರ ಭಾಗವಹಿಸುವರು . ಹೃದಯವಾಹಿನಿ ದಶಮಾನೋತ್ಸವ ಪ್ರಶಸ್ತಿಯನ್ನು ರಾಧಾಕೃಷ್ಣ ಉಳಿಯತ್ತಡ್ಕ ( ಸಾಹಿತ್ಯ ) , ಕೆ . ವಿ . ರಮೇಶ್ ( ಬೊಂಬೆಯಾಟ ) , ಪ್ರದೀಪ್ ಕಾಸರಗೋಡು ( ರಂಗಭೂಮಿ ) , ಪಿ . ಎಸ್ . ಕಾರಂತ್ ( ಕನ್ನಡ ಸೇವೆ ) , ಡಾ . ಎಚ್ . ಎಸ್ . ಶಿವಶಂಕರ್ ( ಸಮಾಜ ಸೇವೆ ) , ಪದ್ಮನಾಭ ಬಿ . ಆರ್ . ( ಸಾಹಿತ್ಯ ) , ಕಾಗೋಡು ಅಣ್ಣಪ್ಪ ( ರಂಗಕಲೆ ) , ಬಾಲಸುಬ್ರಹ್ಮಣ್ಯ ( ಇಂಜಿನಿಯರಿಂಗ್ ) , ಇಂದುದಾಸ್ ಶೆಟ್ಟಿ ( ಸಮಾಜಸೇವೆ ) , ದೀಪಾ ರಾವ್ ( ಭರತನಾಟ್ಯ ) ಅವರಿಗೆ ವಿತರಿಸಲಾಗುವುದು .
ಈ ಸುದ್ಧಿಯ ಕುರಿತು ಇನ್ನಷ್ಟು ಮಾಹಿತಿ ಹುಡುಕುತ್ತಿದ್ದ ನನಗೆ Ashoka ' s Secret Society of the " NINE " Unknown Men ವಿಷಯದ ಬಗ್ಗೆ ಚರ್ಚೆಗಳ ಕೊಂಡಿ ಇನ್ನಷ್ಟು ಕುತೂಹಲ ತರಿಸಿತು . ಚಕ್ರವರ್ತಿ ಅಶೋಕನು ತನ್ನ ೯ ಜನ ಪ್ರಖಂಡ ವಿಜ್ಞಾನಿಗಳ ಮೂಲಕ ಬರೆಸಿದ ೯ ಪುಸ್ತಕಗಳು ಅಂದು ದೇಶವು ಹೊಂದಿದ್ದ ಉನ್ನತ ವಿಜ್ಞಾನದ ಬಗ್ಗೆ ತಿಳಿಸುತ್ತದೆ . ಚಕ್ರವರ್ತಿ ಅಶೋಕನು ಈ ಕಾರ್ಯವನ್ನು ಎಷ್ಟು ಗುಪ್ತವಾಗಿ ನಡೆಸಿದ್ದನೆಂದರೆ ಬಹುಶ : ಈ ಪುಸ್ತಕದಲ್ಲಿನ ಮಾಹಿತಿಗಳ ಮೂಲಕ ಸಾಕಷ್ಟು ವಿದ್ವಂಸಕಾರಿ ಅಯುಧಗಳು ಸೃಷ್ಠಿಯಾಗಬಹುದು ಎಂಬ ಮುನ್ಸೂಚನೆಯ ಅರಿತು ಅದನ್ನು ಜಗದ ಬೆಳಕಿಗೆ ಬರದಂತೆ ಗುಪ್ತವಾಗಿ ಅಡಗಿಸಿ ಇರಿಸಿದ್ದನು . ಚೀನಿಯರು ಕೆಲವು ಸಮಯದ ಹಿಂದೆ ಲ್ಹಾಸ ಪ್ರಾಂತ್ಯದಲ್ಲಿ ಕಂಡುಹಿಡಿದ ಕೆಲವು ಸಂಸ್ಕೃತ ಗ್ರಂಥಗಳನ್ನ ಅನುವಾದಿಸಲಿಕ್ಕೆ ಚಂಡಿಗಡ ವಿಶ್ವವಿದ್ಯಾಲಯಕ್ಕೆ ಕಳುಹಿಸಿದ್ದಾಗ ಅದರಲ್ಲಿ ಅಂತರಿಕ್ಷನೌಕಯಾನಗಳ ಬಗ್ಗೆ ಬಹಳಷ್ಟು ಮಾಹಿತಿಗಳಿದ್ದವು . . ! ! ( ಹೆಚ್ಚಿನ ಮಾಹಿತಿಯನ್ನ ಇಲ್ಲಿ ಪಡೆಯಬಹುದು : http : / / www . world - mysteries . com / sar_7 . htm # Ancient % 20Indian . . . )
ಶೀವು , ನೀವು ತಿಳಿದಂತೆ ನಾನು multi linguist ಅಲ್ಲ . ಬೇರೆ ಬೇರೆ ಭಾಷೆಯಿಂದ ಇಂಗ್ಲೀಷಗೆ ತರ್ಜುಮೆ ಆಗಿರುವದನ್ನು ಕನ್ನಡಿಕರಿಸುವದಷ್ಟೆ ನನ್ನ ಕೆಲಸ . Thanks for your compliment .
ಇದೇ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಹಿರಿಯ ಬಹುಭಾಷಾ ತಜ್ಞ , ವಿದ್ವಾಂಸರಾದ ಡಾ . ಯು . ಪಿ . ಉಪಾಧ್ಯಾಯ , ಅಂಬಾತನಯ ಮುದ್ರಾಡಿ , ಡಾ . ನಾ . ಮೊಗಸಾಲೆ , ಹರಿಕೃಷ್ಣ ಪುನರೂರು ಮುಂತಾದವರು ಉಪಸ್ಥಿತರಿದ್ದರು .
ಶ್ರೀಮತಿ ಎಸ್ . ಅರುಂಧತಿ ಇವರು ಉತ್ತರ ಕನ್ನಡ ಜಿಲ್ಲೆಯ ನವ್ಯೋತ್ತರ ಕವಯಿತ್ರಿ . ' ಉಳಿದ ತಂತು ' ಹಾಗು ' ಹರಿಯುತ್ತಿರಲಿ ನದಿ ' ಇವು ಇವರ ಪ್ರಕಟಿತ ಕವನ ಸಂಕಲನಗಳು . ' ಹರಿಯುತಿರಲಿ ನದಿ ' ಸಂಕಲನದಿಂದ ಒಂದು ಕವನವನ್ನು ಆಯ್ದು ಇಲ್ಲಿ ಕೊಡಲಾಗಿದೆ . ಕರಗಿದ ಕನಸಲ್ಲಿ . . ಎದುರಲ್ಲಿ ಸುಳಿದ ಚಲುವ ಕನಸಲ್ಲಿ ಬಂದೇ ಬಿಟ್ಟ ಚಂದ್ರ ನಕ್ಷತ್ರಗಳ ದಿಬ್ಬಣ ತಂದೇ ಬಿಟ್ಟ ಮೈ ತುಂಬ ಹುಣ್ಣಿಮೆಯ ಹರಿಸಿದ ತಂಗಾಳಿಯಾಗಿ ತೀಡಿ ನೈದಿಲೆಯ ಕೆನ್ನೆಗೆ ಸವರಿ ಸಾಕೆ ? ಇನ್ನೂ ಬೇಕೆ ? ಎಂದ ಬೇಕೆನಲು ಬಿಗಿದಪ್ಪಿ ಮುತ್ತಿಟ್ಟ ಬೆಳಕು ಹರಿಯಲು ಚಲುವ ಕಣ್ಣಲ್ಲೇ ಕರಗಿ ಹೋಗಿ ಬಿಟ್ಟ
ನೀವು ಹಾಡು ಯಾವ ಚಿತ್ರದ್ದು ಅಂತ ಕೇಳಿದ್ರಲ್ಲ ಅದಕ್ಕೆ ಹೇಳಿದ್ದು ಚಿತ್ರದ ಹೆಸರು ರಶ್ಮಿ ಅಂತ
ಭಾರತದ ೯ / ೧೧ ಮುಂಬೈ ನಗರದಲ್ಲಿ ಒಂದು ಭಯಾನಕ ಸಂಜೇಯಾಗಿದೆ ಭಯೋತ್ಪದಕರ ಸ್ಪೋಟಕ ಗಳ ಸುರಿಮಳೆ ವಿಸ್ವವಿಡಿ ಜನರನ್ನು ತಲ್ಲಣ ಗೊಳಿಸಿದೆ . ೪೬ ಘಂ ಟೇಗಳ ಸತತ ಧಾಳಿಯಾಗಿದ್ದು ಇನ್ನೂ ಮುಂದುವರಿದಿದೆ . ಇದರಲ್ಲಿ ೧೨೫ ಕ್ಕಿಂತ ಹೆಚ್ಚು ಜೀವ ಹಾನಿಯಾಗಿದೆ . ೩೭೫ ರಷ್ಟು ಆಸ್ಪತ್ರೆಗೆ ದಾಕಲಾಗಿದೆ . ಜಲ ಮಾರ್ಗ ವಾಗಿ ಬಂದ ಇವರು ಸ್ಪೋಟ ಮಾಡುವ ಜಾಗದ ನೀಲಿ ನಕ್ಷೆ ಹೊಂದಿರುತ್ತಾರೆ . ಆವರು ಕಳುಹಿಸಿದ ಇಮೇಲ್ ಎಲ್ಲರನ್ನು ಜಾಗರೂಕರಾಗಿ ಮಾಡಿದೆ . ಇದನ್ನು ಕೇಂದ್ರ ಭದ್ರತಾ ಪಡೆಯವರು ಅಲಕ್ಷಿಸುವಂತಿಲ್ಲ . ಭಯೋತ್ಪಾದಕ ಚಟುವಟಿಕೆ ಗಳನ್ನೂ ನಿಗ್ರಹಿಸುವುದರಲ್ಲಿ ಸಫಲ ರಾಗಬೇಕು . ಇ ಕಾರ್ಯಾಚರಣೆಯಲ್ಲಿ ಭಾರತ ದೇಶವು ಕೆಲವು ನುರಿತ ದೇಶಪ್ರೇಮಿ ಸುಪುತ್ರರನ್ನು ಕಳೆದು ಕೊಂಡಿದ್ದು ಕುಟುಂಬ / ಸಮಾಜ / ರಾಷ್ಟ್ರ ವನ್ನು ಅನಾಥ ರನ್ನಾಗಿ ಮಾಡಿದೆ . ಅವರು ವೀರ ಮರಣ ಹೊಂದಿದ್ದಾರೆ . ಇಂತಹ ವೀರ ಯೋಧರ ಅವಶ್ಯಕತೆ ದೇಶಕ್ಕೆ ಇದೆ ರಾಜ್ಯ / ಕೇಂದ್ರ ಸರಕಾರವೂ ಇದನ್ನು ಪ್ರಮುಖ ಎಚ್ಚರಿಕೆ ಯಾಗಿ ತೆಗೆದು ಕೊಂಡು ಭದ್ರತೆ / ಗೃಹ ಖಾತೆ ವಿಪಲ ವಾಗಿರುವುದು ಎದ್ದು ಕಾಣಿಸುತ್ತಿದೆ . ಇನ್ನೂ ಮುಂದಾದರು ತಪ್ಪು ತಿದ್ದಿ ಕೊಳ್ಳುವ ಅವಕಾಶ ಇದೆ . ಇದನ್ನು ಸರಕಾರವೂ ವರ್ಷವಿಡಿ ಜಾರಿಯಲ್ಲಿಡಬೇಕು . ಹಿಂದೂ ಸಮಾಜಕ್ಕೆ ಉಗ್ರ ರು ಕೊಟ್ಟ ಭಯದ ಘಂಟೆಯಾಗಿದೆ . ಪಂಚತಾರಾ ಹೋಟೆಲುಗಳು , ದೇವಸ್ಥಾನಗಳು , ರೈಲು , ವಿಮಾನ ನಿಲ್ದಾಣಗಳು ಇತ್ಯಾದಿ ಇವರ ಗುರಿಯಾಗಿದ್ದು ದ್ವಂಸ ಮಾಡಲು ಪ್ರಯತ್ನಿಸುತ್ತಾರೆ . ಉಗ್ರ ರ ನಿಗ್ರಹ ವೇ ನಮ್ಮ ಸಾಧನೆ ಯಾಗಲಿ . ನಾಗೇಶ್ ಪೈ
ಮಂಗಳೂರು , ನವೆಂಬರ್ 23 : ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿ ಹೊಣೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಮತ್ತು ನಿಗಮದ್ದು ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಹೇಳಿದರು . ಅವರು 22 ರಂದು ಜಿಲ್ಲಾಧಿಕಾರಿಯವರ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಧಾನಮಂತ್ರಿಗಳ 15 ಅಂಶ ಕಾರ್ಯ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು . ಅಲ್ಪ ಸಂಖ್ಯಾತರ ಅಭಿವೃದ್ಧಿ ಗೆಂದೇ ಮೀಸಲಿ ರಿಸಿರುವ ಸಂಸ್ಥೆಗಳು ತಮ್ಮ ಹೊಣೆ ಗಾರಿಕೆ ಯನ್ನು ನಿರ್ವಹಿಸುವ ಬಗ್ಗೆ ಮಾರ್ಗ ದರ್ಶನ ನೀಡಿದ ಜಿಲ್ಲಾಧಿ ಕಾರಿಗಳು , ಅವರ ಅಭಿ ವೃದ್ಧಿಗೆ ಮೀಸಲಿಟ್ಟ ಯೋಜನೆ ಗಳು , ಅವರಿಗೆ ಮಾರ್ಗ ದರ್ಶನ ನೀಡುವ ಹೊಣೆಯನ್ನು ನಿಗದಿ ಪಡಿಸಿ ದರಲ್ಲದೆ , ಸಾರ್ವ ಜನಿಕರಿಂದ ಈ ಸಂಬಂಧ ದೂರುಗಳು ಬರಬಾರದು ಎಂದು ಎಚ್ಚರಿಸಿದರು . ಮುಂದೆ ನಡೆಯುವ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಸಾಮಾನ್ಯ ಪ್ರಗತಿ ವರದಿಯನ್ನು ತಾರದೆ , ಅಲ್ಪಸಂಖ್ಯಾತರ ಅಭಿವೃದ್ಧಿಗೆ ರೂಪಿಸಿದ ಯೋಜನೆ ಹಾಗೂ ಗುರಿಸಾಧನೆಗಳೊಂದಿಗೆ ಸಭೆಗೆ ಹಾಜರಾಗಲು ಅಧಿಕಾರಿಗಳಿಗೆ ಸೂಚನೆ ನೀಡಿದರು . ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಡಿ ದೊರಕುವ ಸೌಲಭ್ಯಗಳಾದ ಸ್ವಾವಲಂಬನಾ , ಅರಿವು ಯೋಜನೆಯಡಿ ಅರ್ಹರಿಗೆ ಮಾಹಿತಿ ನೀಡಿ ಸ್ವಾವಲಂಬಿ ಜೀವನ ನಡೆಸಲು ನೆರವಾಗಬೇಕೆಂದರು . ಶಿಕ್ಷಣ ಇಲಾಖೆ , ಕೈಗಾರಿಕಾ ಅಭಿವೃದ್ಧಿ , ರೇಷ್ಮೆ ಇಲಾಖೆ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರಿಗಾಗಿ ಮೀಸಲಿಟ್ಟ ಯೋಜನೆಗಳ ಅಭಿವೃದ್ಧಿ ಪರಿಶೀಲನೆ ನಡೆಸಿದರು . ಸಭೆಯಲ್ಲಿ ಅಧಿಕಾರೇತರ ಸದಸ್ಯರಾದ ಧರಣೇಂದ್ರ ಜೈನ್ ಮತ್ತು ಲಾರೆನ್ಸ್ ಪಿಂಟೋ ಉಪಸ್ಥಿತರಿದ್ದರು .
2001 ಸೆಪ್ಟಂಬರ್ 11ರ ದಾಳಿ ಅಮೆರಿಕದ ಪಾಲಿಗೆ ಭಾರೀ ಆಘಾತ . ಆದರೆ ಈಗಲೂ ಆ ದಾಳಿ ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟಿಸಿ ಹಾಕುತ್ತಲೇ ಇದೆ . ಇಡೀ ದಾಳಿ ಅಮೆರಿಕ ಪ್ರಾಯೋಜಕತ್ವದಿಂದ ನಡೆಯಿತೇ ? ತನ್ನ ಯುದ್ಧದಾಹಿ ನಿಲುವನ್ನು ಸಮರ್ಥಿಸಿಕೊಳ್ಳುವುದಕ್ಕೋಸ್ಕರ ಸೆಪ್ಟಂಬರ್ 11ನ್ನು ಪ್ರಾಯೋಜಿಸಿತೇ ? ಏನೇ ಇರಲಿ , ಈ ಜಗತ್ತಿನಲ್ಲಿ ಉಸಾಮ ಬಿನ್ ಲಾದೆನ್‌ನ ಭಯೋತ್ಪಾದನೆಗಿಂತಲೂ ಅಮೆರಿಕದ ಭಯೋತ್ಪಾದನೆಗೇ ಲಕ್ಷಾಂತರ ಜನರು ಪ್ರಾಣ ತೆತ್ತಿದ್ದಾರೆ . ಇದೇ ಅಮೆರಿಕದ ಬೆಂಬಲದೊಂದಿಗೆ ಸದ್ದಾಂ ಹುಸೈನ್ , ಇರಾನ್‌ನಂತಹ ಪುಟ್ಟ ರಾಷ್ಟ್ರದ ಮೇಲೆ ರಾಸಾಯನಿಕ ಅಸ್ತ್ರಗಳ ಸುರಿಮಳೆಗೈದ . ಇದನ್ನು ಅಂದು ಅದೇ ಇರಾನ್ , ವಿಶ್ವಸಂಸ್ಥೆಗೆ ಸಾಕ್ಷಿ ಸಮೇತ ಸಾಬೀತು ಪಡಿಸಿತ್ತು .
ರಾಕೇಶ್ , ಚರಿತ್ರೆ ವಿಷಯ ಬಂದಾಗ ರಾಜ , ರಾಣಿ ಇಬ್ಬರೂ ಸರಿ - ಅಂದ್ರೆ ನಾಣ್ಯದ ಒಂದು ಕಡೆಗೆ ರಾಜ ಅಂತೀವಿ , ಮತ್ತೊಂದು ಕಡೆ ರಾಣಿ : ) - ಹೀಗಿರುವಾಗ ಒಮ್ಮತದ ತೀರ್ಮಾನಕ್ಕೆ ಬರುವುದು ಸ್ವಲ್ಪ ಕಷ್ಟವೇ . ವೈಯಕ್ತಿಕವಾಗಿ ಹೇಳುವುದಾದರೆ ಶಸ್ತ್ರ ತೆಗೆದು ಕೊಂಡಿದ್ದರೆ ಭಾರತದ ಮೂಲೆ ಮೂಲೆಯಲ್ಲೂ ಜಲಿಯನ್ ವಾಲ ಬಾಗ್ ನಂಥ ಸ್ಥಿತಿ ನಿರ್ಮಿತವಾಗುತ್ತಿತ್ತು . ಎರಡನೇ ವಿಶ್ವ ಮಹಾಯುದ್ಧಕ್ಕೆ ಬ್ರಿಟಿಷರಿಗೆ ನಮ್ಮ ನೆರವಿಗೂ , ಗಾಂಧೀ ತಾತನ ನವಿರಿಗೂ ಮನ ಸೋತು ಸ್ವಾತಂತ್ರ್ಯ ಸಿಕ್ಕಿರಬಹುದು ನಮಗೆ .
ಪ್ರಕಾಶಣ್ಣ ಇಂದು ಎಷ್ಟೋ ಜನರು ಅಪ್ಪ ಮಾಡಿಟ್ಟ ಹಣದಲ್ಲಿ ಬದುಕುತ್ತಿದ್ದಾರೆ ಬದುಕು ಹೀಗೆ ಎಷ್ಟು ದಿನ ? ಖಾಲಿಯಾಗುವಷ್ಟು ದಿನ ಅಲ್ಲವೇ ? ನಾವು ದುಡಿದಾಗ ನಮಗೆ ಸಿಗುವ ಸಂತೋಷವೇ ಬೇರೆ ಹೆತ್ತವರ ಪರಿಶ್ರಮ ಸಾರ್ಥಕತೆ ಪಡೆಯುವುದು ನಾವು ದುಡಿದು ಅವರೆದುರಿಗೆ ನಿಂತಾಗ ಅಲ್ಲವೇ ? ' ' ಪೆಟ್ಟಿನ ' ' ಕಥೆ ಇನ್ನೂ ಇದೆ ಮುಂದೆ ಹೇಳುತ್ತೇನೆ ಬರುತ್ತಿರಿ
ಕೃಷಿ ಯಲ್ಲಿ ಬದ ಲಾ ವ ಣೆ ಗಳು ಹೊಸ ತಲ್ಲ . ಹೆಚ್ಚಿನ ಇಳು ವ ರಿ ಗಾಗಿ ಕೃಷಿ ಕರು ಹೊಸ ಹೊಸ ಮಾರ್ಗ ಗ ಳನ್ನು ಅನು ಸ ರಿ ಸು ತ್ತಿ ದ್ದಾರೆ . ಹಲ ವರು ವಿವಿಧ ರೀತಿಯ ಪೋಷ ಕಾಂ ಶ ಗ ಳನ್ನು ನೀಡಿ ಹೆಚ್ಚಿಗೆ ಇಳು ವರಿ ಪಡೆ ದರೆ ಮತ್ತೆ ಕೆಲ ವರು ನಾಟಿ ವಿಧಾ ನ ವನ್ನು ಬದ ಲಿಸಿ ಇಳು ವರಿ ಹೆಚ್ಚಿಗೆ ಪಡೆ ಯಲು ಯತ್ನಿಸಿ ಯಶ ಸ್ವಿ ಯಾ ಗಿ ದ್ದಾರೆ . ಬನ ವಾ ಸಿಯ ಪ್ರಗ ತಿ ಪರ ಕೃಷಿಕ ಅಬ್ದುಲ್ ರವೂಫ್ ಶೇಖ್ ಅವರು ಬಾಳೆ ಯಲ್ಲಿ ಅಧಿಕ ಸ್ಥಿತ್ಯಂ ತರ ನಾಟಿ ವಿಧಾನ ( ಒ ತ್ತೊ ತ್ತಾಗಿ ಸಸಿ ನೆಡುವ ಕ್ರಮ ) ವನ್ನು ಅಳ ವ ಡಿಸಿ ಯಶ ಸ್ವಿ ಯಾ ಗಿ ದ್ದಾರೆ . ಬಹು ವಾ ರ್ಷಿಕ ಬೆಳೆ ಯಾದ ಮಾವಿ ನಲ್ಲಿ ಕಡಿಮೆ ಅಂತ ರದ ನಾಟಿ ಪದ್ದ ತಿ ಯಲ್ಲಿ ಕೃಷಿ ಮಾಡಿ ದ ವ ರಿಲ್ಲ . ಆದರೆ ಜಲ ಗಾಂ ವ್‌ನ ಜೈನ್ ಇರಿ ಗೇ ಷನ್ ಕಂಪ ನಿ ಯ ವರು ಮಾವಿ ನಲ್ಲಿ ಒತ್ತೊ ತ್ತಾಗಿ ಸಸಿ ನೆಡುವ ಪದ್ಧತಿ ಅಳ ವ ಡಿಸಿ ಯಶ ಸ್ವಿ ಯಾ ಗಿ ದ್ದಾರೆ . ಕಡಿಮೆ ಅಂತ ರದ ನಾಟಿ ಪದ್ದತಿ ಕಡಿಮೆ ಜಾಗ ದಲ್ಲಿ ಹೆಚ್ಚಿಗೆ ಗಿಡ ಗ ಳನ್ನು ನಾಟಿ ಮಾಡುವ ವಿಧಾ ನವೇ ಅಧಿಕ ಸ್ಥಿತ್ಯಂ ತರ ಕೃಷಿ ಪದ್ದತಿ . ಇದಕ್ಕೆ ಅಧಿಕ ಸಾಂದ್ರತೆ ಕೃಷಿ ಎಂಬ ಹೆಸರೂ ಇದೆ . ಗಿಡ ದಿಂದ ಗಿಡದ ಅಂತರ ಕಡಿಮೆ ಇರು ತ್ತದೆ . ಸಾಲಿ ನಿಂದ ಸಾಲಿನ ಅಂತ ರವೂ ಕಡಿಮೆ . ಕಡಿಮೆ ಅಂತ ರ ದಲ್ಲಿ ಹೆಚ್ಚು ಸಸಿ ಗ ಳನ್ನು ನಾಟಿ ಮಾಡುವ ಕ್ರಮವೇ ಅಧಿಕ ಸ್ಥಿತ್ಯಂ ತರ ಕೃಷಿ ಪದ್ದತಿ . ಜೈನ್ ಇರಿ ಗೇ ಷನ್ ಕಂಪನಿ 1996 ರಿಂದಲೇ ಒತ್ತೊ ತ್ತಾಗಿ ಸಸಿ ನೆಡುವ ಪದ್ದ ತಿ ಯನ್ನು ಮಾವಿನ ಬೆಳೆ ಯಲ್ಲಿ ಅಳ ವ ಡಿ ಸಿ ಕೊಂ ಡಿದೆ . ಸಾಮಾನ್ಯ ಮಾವಿನ ತೋಟ ಗ ಳಲ್ಲಿ 9 ಮೀಟರ್ ಅಂತ ರ ದಲ್ಲಿ ಮಾವಿನ ಗಿಡ ಗ ಳನ್ನು ನಾಟಿ ಮಾಡಿ ರು ತ್ತಾರೆ . ಹೀಗೆ ನಾಟಿ ಮಾಡಿದ ತೋಟ ಗ ಳಲ್ಲಿ ಒಂದು ಎಕ ರೆ ಯಲ್ಲಿ 55ರಿಂದ 60 ಗಿಡ ಗಳು ಮಾತ್ರ ಇರು ತ್ತವೆ . ಹೆಚ್ಚಿಗೆ ಮಾವಿನ ಗಿಡ ಗ ಳನ್ನು ನಾಟಿ ಮಾಡುವ ಸಲು ವಾಗಿ ಜೈನ್ ಇರಿ ಗೇ ಷನ್ ಅವರು ಮೊದಲ ಹಂತ ದಲ್ಲಿ 4 . 5 ಮೀಟರ್ ಅಂತ ರ ದಲ್ಲಿ ಮಾವಿನ ಸಸಿ ಗ ಳನ್ನು ನಾಟಿ ಮಾಡಿ ದರು . ಈ ಹಂತ ದಲ್ಲಿ ಎಕ ರೆಗೆ 200 ಸಸಿ ಗ ಳನ್ನು ನಾಟಿ ಮಾಡಲು ಸಾಧ್ಯ ವಾ ಯಿತು . ಇದರ ನಂತರ 3X2 ಮೀಟರ್ ಅಂತ ರ ದಲ್ಲಿ ಸಸಿ ಗ ಳನ್ನು ನಾಟಿ ಮಾಡಿ ದ್ದಾರೆ . ಈ ಪದ್ದ ತಿ ಯಲ್ಲಿ ಎಕ ರೆಗೆ 1309 ಸಸಿ ಗ ಳನ್ನು ನಾಟಿ ಮಾಡಿ ದ್ದಾರೆ . ಮೂರನೆ ಹಂತದ ನಾಟಿ ಯಲ್ಲಿ 3X2 ಮೀಟರ್ ಅಂತ ರ ದಲ್ಲಿ ಸಸಿ ಗ ಳನ್ನು ನಾಟಿ ಮಾಡಿ ದ್ದಾರೆ . ಈ ಅಂತ ರ ದಲ್ಲಿ ನಾಟಿ ಮಾಡಿ ದಾಗ ಎಕ ರೆ ಯಲ್ಲಿ 2976 ಸಸಿ ಗ ಳನ್ನು ನಾಟಿ ಮಾಡಿ ದ್ದಾರೆ . ಒತ್ತೊ ತ್ತಾಗಿ ನಾಟಿ ಮಾಡಿ ದಾಗ ಸಸಿ ಗ ಳನ್ನು ಪೋಷಿ ಸಲು ಹಲ ವಾರು ರೀತಿಯ ಕ್ರಮ ಬದ್ಧ ವಾದ ಕೃಷಿ ಮಾಡ ಬೇ ಕಾ ಗು ತ್ತದೆ . ಸಸಿ ಗಳ ಗೆಲ್ಲು ಗಳ ಕಟಾವು ( ಪ್ರೂ ನಿಂಗ್ ) , ಚಿಗುರು ಚಿವು ಟು ವುದು ( ಪಿಂಚಿಂಗ್ ) , ಈ ಕೃಷಿ ಯಲ್ಲಿ ಮುಖ್ಯ ವಾಗಿ ಅಳ ವ ಡಿ ಸಿ ಕೊ ಳ್ಳ ಬೇ ಕಾದ ಕ್ರಮ . ಸಸಿ ಗಳು ಹತ್ತಿ ರ ದಲ್ಲಿ ಇರು ವು ದ ರಿಂದ ಸೊಂಟ ದಷ್ಟು ( ಸುಮಾರು 45 ಸಿ ಎಂ ) ಎತ್ತ ರಕ್ಕೆ ಬೆಳೆದ ನಂತರ ಬೇಡ ವಾದ ಗೆಲ್ಲು ಗ ಳನ್ನು ಕಟಾವು ಮಾಡ ಬೇಕು . ಹಾಗೇಯೆ ಬೇಡದ ಚಿಗು ರು ಗ ಳನ್ನು ಚಿವುಟಿ ಹಾಕ ಬೇಕು . ಈ ರೀತಿ ಮಾಡು ವು ದ ರಿಂದ ಮಾವಿನ ಗಿಡ ಛತ್ರಿ ಯಾ ಕಾ ರ ದಲ್ಲಿ ಬೆಳೆ ಯು ತ್ತದೆ . ಹೀಗೆ ಗಿಡ ಗಳು ಬೆಳೆ ದರೆ ಸೂರ್ಯನ ಬೆಳಕು ಹೆಚ್ಚು ಬಿದ್ದು ಗಿಡದ ಬೆಳ ವ ಣಿ ಗೆಗೆ ಸಹ ಕಾ ರಿ ಯಾ ಗು ತ್ತದೆ . ಕಡಿಮೆ ಅಂತ ರ ದಲ್ಲಿ ಸಸಿ ಗ ಳನ್ನು ನಾಟಿ ಮಾಡಿ ದಾಗ ರೋಗ ಇರುವ ಗೆಲ್ಲು ಗ ಳನ್ನು ಕಟಾವು ಮಾಡ ಬೇ ಕಾ ಗು ತ್ತದೆ . ಹಾಗೆಯೇ ಗಿಡ ಗಳು ಬೆಳೆದು ಫಸಲು ಬಂದ ನಂತರ ಎರಡು ಮೂರು ಬೆಳೆ ಬಂದ ಗೆಲ್ಲು ಗ ಳನ್ನು ಕತ್ತ ರಿ ಸ ಬೇಕು . ಅನ ವ ಶ್ಯ ಕ ವಾಗಿ ಬೆಳೆ ಯುವ ಗೆಲ್ಲು ಗ ಳನ್ನು ಕತ್ತ ರಿ ಸಿ ದಾಗ ಸಮೃ ದ್ಧ ವಾ ಗಿ ರುವ ಗೆಲ್ಲು ಗ ಳಿಗೆ ಹೆಚ್ಚಿಗೆ ಪೋಷ ಕಾಂಶ ದೊರೆತು ಹೆಚ್ಚಿನ ಫಸಲು ಬರಲು ಸಾಧ್ಯ ವಾ ಗು ತ್ತದೆ . ` ವಾ ಣಿ ಜ್ಯಿಕ ದೃಷ್ಟಿ ಯಿಂದ ಮಾವಿನ ಕೃಷಿ ಮಾಡು ವ ವ ರಿಗೆ ಈ ಪದ್ಧತಿ ಕೃಷಿ ಬಹಳ ಉತ್ತಮ . ಆದಾಯ ಹೆಚ್ಚಿಗೆ ಬರು ತ್ತದೆ . ಈ ಪದ್ಧ ತಿ ಯಲ್ಲಿ ಕೃಷಿ ಮಾಡಿ ದಾಗ ಪ್ರೂನಿಂಗ್ ಸದಾ ಮಾಡು ವು ದ ರಿಂದ ಮಾವಿನ ಮರ ಬಹಳ ಎತ್ತರ ಬೆಳೆ ಯು ವು ದಿಲ್ಲ . ದೊಡ್ಡ ಮರಕ್ಕೆ ಬೇಕಾ ಗು ವಷ್ಟು ಪೋಷ ಕಾಂಶ ಇದಕ್ಕೆ ಅಗ ತ್ಯ ವಿಲ್ಲ . ಸಾಮಾ ನ್ಯ ವಾಗಿ ಮಾವು ವರ್ಷ ಬಿಟ್ಟು ವರ್ಷ ಫಸಲು ನೀಡು ತ್ತದೆ . ಆದರೆ ಗಿಡ ಗಳ ನಡು ವಿನ ಅಂತರ ಕಡಿ ಮೆ ಯಾ ದಾಗ ಪ್ರತಿ ವರ್ಷವೂ ಫಸಲು ಸಿಗು ತ್ತದೆ . ಈ ಕಾರ ಣ ದಿಂದ ಇದು ಮಾವು ಬೆಳೆಗೆ ಉತ್ತಮ ಪದ್ದತಿ ' ಎನ್ನು ತ್ತಾರೆ ಜೈನ್ ಕಂಪ ನಿಯ ಕರ್ನಾ ಟಕ ಉಪ ವ್ಯವ ಸ್ಥಾ ಪಕ ಚಿದಂ ಬರ ಜೋಶಿ . ಜೈನ್ ಕಂಪ ನಿ ಯ ವರು ಮಾವಿ ಅಧಿಕ ಸ್ಥಿತ್ಯಂ ತರ ನಾಟಿ ಪದ್ದ ತಿ ಯಲ್ಲಿ ಜಲ ಗಾಂವ್ , ಕೊಯಿ ಮ ತ್ತೂ ರಿ ನಲ್ಲಿ ಪ್ರಯೋಗ ಮಾಡಿ ಯಶ ಸ್ವಿ ಯಾ ಗಿ ದ್ದಾರೆ . ಸಾಮಾನ್ಯ ಅಂತ ರ ದಲ್ಲಿ ನಾಟಿ ಮಾಡಿ ಫಸ ಲನ್ನು ಪಡೆ ಯುವ ತೋಟದ ಆದಾ ಯ ಕ್ಕಿಂತ ಅಧಿಕ ಸ್ಥಿತ್ಯಂ ತರ ನಾಟಿ ಪದ್ದ ತಿ ಯಲ್ಲಿ ಬೆಳೆ ದರೆ ದುಪ್ಪಟ್ಟು ಆದಾ ಯ ವನ್ನು ಪಡೆ ಯ ಬ ಹುದು . ಇಳು ವ ರಿ ಯಲ್ಲೂ ವ್ಯತ್ಯಾಸ ಆಗ ದಿ ರು ವುದು ಪ್ರಯೋ ಗ ದಿಂದ ತಿಳಿದು ಬಂದಿದೆ . ಮಾಹಿ ತಿ ಗಾಗಿ : ಚಿದಂ ಬರ ಜೋಶಿ : 9448286508 ನಾಗರಾಜ ಮತ್ತಿಗಾರ ಇವರ ವಿಭಿನ್ನ ಲೇಖನ ನೋಡಲು http : / / tandacool . blogspot . com / http : / / oddola . blogspot . com /
Download XML • Download text